Motivational story | ನಾವು ಜೀವನದಲ್ಲಿ ಖುಷಿಯಾಗಿ ಇರಬೇಕು ಎಂದರೆ ಎಷ್ಟು ಜನ ಗೆಳೆಯರು ಬೇಕು? - Vistara News

ಪ್ರಮುಖ ಸುದ್ದಿ

Motivational story | ನಾವು ಜೀವನದಲ್ಲಿ ಖುಷಿಯಾಗಿ ಇರಬೇಕು ಎಂದರೆ ಎಷ್ಟು ಜನ ಗೆಳೆಯರು ಬೇಕು?

Motivational story | ಫ್ರೆಂಡ್ಸ್‌ ಮಾಡ್ಕೊಳ್ಳೋದು ಕೆಲವರಿಗೆ ಸುಲಭ, ಕೆಲವರಿಗೆ ಕಷ್ಟ. ಹಾಗಿದ್ದರೆ ನಮಗೆ ಎಂಥ ಫ್ರೆಂಡ್ಸ್‌ ಬೇಕು ಅಂತ ನೋಡೋಣ ಈ ಕಥೆಯಲ್ಲಿ.

VISTARANEWS.COM


on

Children in tree
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ – motivational story
ಅದೊಂದು ಶಾಲೆ. ಶಿಕ್ಷಕ ವಿಶ್ವನಾಥ್ ಮಕ್ಕಳನ್ನು ತುಂಬ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಅದೊಂದು ದಿನ ವಿದ್ಯಾರ್ಥಿಯೊಬ್ಬ ಒಂದು ಪ್ರಶ್ನೆಯನ್ನು ಕೇಳಿದ: ನಾವು ಖುಷಿಯಾಗಿರಬೇಕಾದರೆ ಎಷ್ಟು ಜನ ಗೆಳೆಯರು ಬೇಕು ಸರ್?

ಆಗ ವಿಶ್ವನಾಥ್ ಹೇಳಿದರು: ಅದನ್ನು ಇಂತಿಷ್ಟೇ ಅಂತ ಹೇಳುವುದಕ್ಕೆ ಆಗುವುದಿಲ್ಲ. ಎಷ್ಟು ಬೇಕು ಎನ್ನುವುದನ್ನು ನೀನೇ ತೀರ್ಮಾನ ಮಾಡಬೇಕಾಗುತ್ತದೆ.

ಸ್ವಲ್ಪ ಹೊತ್ತಿನ ಬಳಿಕ ವಿಶ್ವನಾಥ್ ಎಲ್ಲ ಮಕ್ಕಳನ್ನು ಕರೆದುಕೊಂಡು ಒಂದು ಹಣ್ಣಿನ ಮರಗಳ ತೋಟಕ್ಕೆ ಹೋದರು. ಅಲ್ಲೊಂದು ಎತ್ತರಕ್ಕೆ ಬೆಳೆದ ಮಾವಿನ ಮರವಿತ್ತು.
ವಿಶ್ವನಾಥ್ ಪ್ರಶ್ನೆ ಕೇಳಿದ ಹುಡುಗನನ್ನು ಕರೆದು ಹೇಳಿದರು: ನೀನೀಗ ಇದರಿಂದ ಒಂದು ಮಾವಿನ ಹಣ್ಣನ್ನು ಕಿತ್ತು ತರಬೇಕು ತರ್ತೀಯಾ?

ಆಗ ವಿದ್ಯಾರ್ಥಿ ಹೇಳಿದ: ಸರ್ ಮಾವಿನ ಹಣ್ಣು ತುಂಬ ಮೇಲೆ ಇದೆ. ಅಲ್ಲಿಗೆ ಹೋಗಿ ಕಿತ್ತು ತರುವುದು ಹೇಗೆ? ಗೆಲ್ಲುಗಳು ಕೂಡಾ ಇಲ್ಲ.
ಆಗ ಶಿಕ್ಷಕರು ಹೇಳಿದರು: ನೀನ್ಯಾಕೆ ನಿನ್ನ ಸ್ನೇಹಿತರ ಸಹಾಯವನ್ನು ಪಡೆಯಬಾರದು.
ವಿದ್ಯಾರ್ಥಿ, ಓ ಹೌದಲ್ವಾ ಅಂತ ಒಬ್ಬ ಗೆಳೆಯನನ್ನು ಕರೆದು ಸಹಾಯ ಕೇಳಿದ. ಅವರಿಬ್ಬರೂ ಒಬ್ಬರ ಮೇಲೊಬ್ಬರು ನಿಂತರೂ ಮಾವಿನ ಹಣ್ಣು ಸಿಗಲಿಲ್ಲ. ಆಗ ಇನ್ನೂ ಕೆಲವರನ್ನು ಕರೆದ. ಅವರು ಪಿರಾಮಿಡ್‍ನ ಹಾಗೆ ನಿಂತು ಮೇಲೇರಿದರು. ಆಗಲೂ ಸಿಗಲಿಲ್ಲ.

ಇನ್ನಷ್ಟು ಗೆಳೆಯರ ಸಹಾಯ ಕೇಳಿದ ಹುಡುಗ. ಮತ್ತಷ್ಟು ಜನ ಬಂದರು. ಕೊನೆಗೆ ಒಬ್ಬರ ಮೇಲೊಬ್ಬರು ನಿಂತು ಕೊನೆಗೆ ಮಾವಿನ ಹಣ್ಣು ಕೀಳಲು ಸಾಧ್ಯವಾಯಿತು.
ಹಣ್ಣನ್ನು ತಂದು ಕೊಟ್ಟ ಬಾಲಕನಲ್ಲಿ ಶಿಕ್ಷಕರು ಕೇಳಿದರು: ಈಗ ನಿನಗೆ ಏನು ಅರ್ಥವಾಯಿತು?

ಹುಡುಗ ಹೇಳಿದ: ಬದುಕಿನಲ್ಲಿ ತುಂಬ ಜನ ಫ್ರೆಂಡ್ಸ್ ಇರಬೇಕು. ಆಗ ಯಾವುದೇ ಸಮಸ್ಯೆ ಎದುರಾದರೂ ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಅದನ್ನು ಸುಲಭದಲ್ಲಿ ಪರಿಹಾರ ಮಾಡಬಹುದು.

ವಿಶ್ವನಾಥ್ ಹೇಳಿದರು: ಶಹಬ್ಬಾಶ್.. ಒಳ್ಳೆಯ ನೀತಿಯನ್ನೇ ಕಲಿತಿದ್ದಿ.
ಆದರೆ, ಇನ್ನೊಂದು ವಿಷಯವನ್ನೂ ನೀನು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ, ಬದುಕಿನಲ್ಲಿ ತುಂಬ ಜನ ಫ್ರೆಂಡ್ಸ್ ಇರಬೇಕು ಅನ್ನುವುದು ನಿಜ. ಇಲ್ಲಿ ಕೂಡಾ ನೀನು ತುಂಬ ಜನರನ್ನು ಫ್ರೆಂಡ್ ಮಾಡಿಕೊಂಡು ಮಾವಿನ ಹಣ್ಣನ್ನು ಕೀಳಲು ಸಾಧ್ಯವಾಗಿದ್ದು ನಿಜ. ಆದರೂ ಇನ್ನೊಮ್ಮೆ ಯೋಚನೆ ಮಾಡು, ನೀನು ಇಷ್ಟೆಲ್ಲ ಕಷ್ಟಪಟ್ಟು ಮಾವಿನ ಹಣ್ಣು ಕೀಳುವ ಬದಲು, ಅಕ್ಕಪಕ್ಕದಲ್ಲೆಲ್ಲಾದರೂ ಏಣಿ ಇದೆಯೇನೋ ನೋಡುವ ಅಂತ ಹೇಳುವ ಒಬ್ಬ ಗೆಳೆಯ ಸಿಕ್ಕಿದ್ದರೆ ನಿನ್ನ ಕೆಲಸ ಇನ್ನೂ ಸುಲಭ ಆಗುತ್ತಿತ್ತು ಅಲ್ವಾ?
ಅಥವಾ ಒಂದು ಕಲ್ಲನ್ನು ಬೀಸಿ ಒಗೆಯೋಣ, ಬೀಳುತ್ತಾ ನೋಡೋಣ ಅಂತ ಹೇಳುವ ಕ್ರೇಜಿ ಗೆಳೆಯ ಇದ್ದಿದ್ದರೂ ಚೆನ್ನಾಗಿತ್ತು ಅಂತ ನಿನಗೆ ಅನಿಸ್ತಾ ಇಲ್ವಾ?

ಹುಡುಗ ತಲೆದೂಗುತ್ತಾ ಹೇಳಿದ: ಹೌದು ಸರ್ ನಾನು ಹಾಗೆ ಯೋಚನೆ ಮಾಡಲಿಲ್ಲ. ತುಂಬ ಜನ ಫ್ರೆಂಡ್ಸ್ ಇದ್ದರೆ ಒಳ್ಳೆಯದು ಅಂತಷ್ಟೇ ಯೋಚನೆ ಮಾಡಿದೆ. ತುಂಬ ಕಷ್ಟದ ಕೆಲಸವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುವಂತೆ ಸ್ಮಾರ್ಟ್ ಸಲಹೆ ಕೊಡುವ ಒಬ್ಬ ಒಳ್ಳೆಯ ಬೆಸ್ಟ್ ಫ್ರೆಂಡ್ ಇದ್ರೂ ಸಾಕು ಅನಿಸ್ತಾ ಇದೆ. ಅಥವಾ ನೀನು ಹತ್ತು ನಾನು ಹಿಡ್ಕೊತೀನಿ ಅಂತ ಹೇಳುವ ಗೆಳೆಯನಾದರೂ ಬೇಕು ಅನಿಸ್ತಾ ಇದೆ.

ಇದನ್ನೂ ಓದಿ | Motivational story | ಆ ಜೋಡಿ ಅಷ್ಟೊಂದು ಅನ್ಯೋನ್ಯವಾಗಿ ಇರುವುದು ಹೇಗೆಂಬ ಪ್ರಶ್ನೆಗೆ ಉತ್ತರ ಸಿಕ್ಕಿತು! ಅದು very simple!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Viral Video: ವಾಕಿಂಗ್ ಮಾಡಿದರೆ ದೇಹದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.ನಗರದ ಮಂದಿ ವಾಕಿಂಗ್‌ಗೆ ತಾವು ಪ್ರೀತಿಯಿಂದ ಸಾಕಿದ ನಾಯಿಯನ್ನು ಕೂಡ ಕರೆದುಕೊಂಡು ಹೋಗುವುದು ನಾವು ಕಂಡಿರುತ್ತೇವೆ. ಇಂತಹ ಸಾಕು ಪ್ರಾಣಿಯ ಜೊತೆ ಎಲ್ಲರೂ ವಾಕಿಂಗ್ ಹೋಗುತ್ತಾರೆ. ಆದರೆ ದುಬೈನ ಈ ಬೆಡಗಿ ಮಾತ್ರ ಮನುಷ್ಯರು ಬೆಚ್ಚಿಬೀಳುವ ಹುಲಿಯ ಜೊತೆ ಪಾರ್ಕ್‌ನಲ್ಲಿ ವಾಕಿಂಗ್ ಮಾಡಿದರೆ ನೋಡಿದವರ ಎದೆ ಝಲ್ ಎನ್ನದೆ ಇರುತ್ತಾ ಹೇಳಿ!

VISTARANEWS.COM


on

Viral Video
Koo

ಹುಲಿ ಎಂದರೆ ಎಲ್ಲರೂ ಭಯಭೀತರಾಗುತ್ತಾರೆ. ಯಾಕೆಂದರೆ ಹುಲಿ ತನ್ನ ಆಹಾರಕ್ಕಾಗಿ ಪ್ರಾಣಿಗಳು ಮಾತ್ರವಲ್ಲ ಮನುಷ್ಯರನ್ನೂ ಕೊಂದು ತಿನ್ನುತ್ತದೆ. ಹಾಗಾಗಿ ಹುಲಿಯನ್ನು ಎದುರು ನೋಡುವುದು ಬೇಡ ದೂರದಲ್ಲಿ ಅದರ ಗರ್ಜನೆ ಕೇಳಿದರೂ ಸಾಕು ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಾರೆ. ಅಂತಹದರಲ್ಲಿ ದುಬೈನಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗಾಗಿ ಹುಲಿಯೊಂದಿಗೆ ನಡೆದುಕೊಂಡು ಬಂದರೆ ಅಲ್ಲಿದ್ದವರ ಪರಿಸ್ಥಿತಿ ಹೇಗಿರಬೇಡ ಹೇಳಿ. ಈ ಮಹಿಳೆ ಹುಲಿ ಜೊತೆ ನಡೆದುಕೊಂಡು ಬರುವ ದೃಶ್ಯ ಎಲ್ಲರಲ್ಲೂ ಭಯವನ್ನು ಹುಟ್ಟಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ (Viral Video) ಆಗಿದೆ.

ನಾಯಿ ಕುತ್ತಿಗೆಗೆ ಚೈನ್‌ ಕಟ್ಟಿಕೊಂಡು ವಾಕಿಂಗ್‌ಗೆ ಹೋಗುವವರು ನಿಮಗೆ ರಸ್ತೆಯಲ್ಲಿ ನೂರಾರು ಜನರು ಸಿಗುತ್ತಾರೆ. ಆದರೆ ದುಬೈಯಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗೆ ಬರುವಾಗ ಕಾಡಿನಲ್ಲಿರಬೇಕಾದ ಹುಲಿಯನ್ನು ತನ್ನ ಜೊತೆ ಕರೆದುಕೊಂಡು ಬಂದರೆ ಹೇಗಿರಬೇಡ ಹೇಳಿ. ಹುಲಿಯ ಕುತ್ತಿಗೆಗೆ ಸರಪಳಿಯನ್ನು ಕಟ್ಟಿ ನಾಯಿಯಂತೆ ಕರೆದುಕೊಂಡು ಬರುತ್ತಿರುವ ಈಕೆಯ ಧೈರ್ಯ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. ಹುಲಿಯ ಜೊತೆ ವಾಕಿಂಗ್‌ಗೆ ಹೋಗುವುದನ್ನು ವಿಡಿಯೊ ಮಾಡಿ “ ನನ್ನ ಮುದ್ದಿನ ಹುಲಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದೇನೆ “ ಎಂದು ಶೀರ್ಷಿಕೆ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.

ಇವಳ್ಯಾರು ಎಂಬ ಕುತೂಹಲ ನಿಮಗೂ ಆಗಿರಬಹುದು ಅಲ್ವಾ…?ಈಕೆ ಇನ್ ಸ್ಟಾಗ್ರಾಂ, ಟಿಕ್ ಟಾಕ್ ಮತ್ತು ಯೂಟ್ಯೂಬ್ ನಲ್ಲಿ ಜಪ್ರಿಯರಾಗಿದ್ದ ನಾಡಿಯಾ ಖಾರ್ ಎನ್ನಲಾಗಿದೆ. ಈಕೆ ಫ್ಯಾಷನ್ ವಿಷಯಕ್ಕೆ ಹೆಸರುವಾಸಿಯಾಗಿದ್ದಾಳೆ. ಆಗಾಗ ಐಷರಾಮಿ ಕಾರುಗಳು, ವ್ಲಾಗ್ ಗಳು ಮತ್ತು ಕಿರು ವಿಡಿಯೊಗಳನ್ನು ಪ್ರದರ್ಶಿಸುತ್ತಿರುತ್ತಾಳೆ. ಇದೀಗ ಅವಳು ದುಬೈನಲ್ಲಿ ಹುಲಿಯ ಜೊತೆಗೆ ನಡೆದುಕೊಂಡು ಬರುತ್ತಿರುವ ವಿಡಿಯೊ ಪೋಸ್ಟ್ ಮಾಡಿದ್ದಾಳೆ. ವಿಡಿಯೊದಲ್ಲಿ ಅವಳು ಮೃಗಾಲಯದ ಒಳಗೆ ಮತ್ತು ದುಬೈನ ಸಾರ್ವಜನಿಕ ಉದ್ಯಾನವನದಲ್ಲಿ ಹುಲಿಯೊಂದಿಗೆ ನಡೆಯುತ್ತಿರುವ ವಿಡಿಯೊ ವೈರಲ್ ಆಗಿದೆ. ಇದಕ್ಕೆ 6 ಮಿಲಿಯನ್ ವೀಕ್ಷಣೆ ಮತ್ತು 100000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಹಾಗೇ ಈ ವಿಡಿಯೊಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿದ್ದು, ಕೆಲವರು ಹುಲಿಯನ್ನು ನಾಯಿಯಂತೆ ಸಾಕಿಕೊಂಡಿರುವುದಕ್ಕೆ ಆಕೆಯ ಕೃತ್ಯವನ್ನು ಟೀಕಿಸಿದರೆ, ಕೆಲವರು ಅದನ್ನು ಕಂಡು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು “ಪ್ರಾಣಿಗಳ ಕ್ರೌರ್ಯವನ್ನು ಕ್ಷಮಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ದುಬೈಯಲ್ಲಿ ಕ್ರೂರ ಪ್ರಾಣಿಗಳನ್ನು ಸಾಕು ಪ್ರಾಣಿಗಳಂತೆ ಸಾಕುತ್ತಾರೆ. ಇಲ್ಲಿ ಹುಲಿ, ಸಿಂಹ, ಕರಡಿಗಳಂತಹ ನರಭಕ್ಷಕ ಪ್ರಾಣಿಗಳನ್ನು ಪಳಗಿಸಿ ಖಾಸಗಿ ಮೃಗಾಲಯದಲ್ಲಿ ಸಾಕುತ್ತಾರೆ. ಅದರ ಜೊತೆಗೆ ಕೋತಿ ಮತ್ತು ಜಿರಾಫೆಗಳಂತಹ ಪ್ರಾಣಿಗಳಿಗೂ ವಸತಿ ನೀಡುತ್ತಾರೆ. ಇದು ಅವರಿಗೆ ಪ್ರಾಣಿಗಳ ಮೇಲಿದ್ದ ಕಾಳಜಿಯನ್ನು ತೋರಿಸುತ್ತದೆ.

ಈಗ ಸೋಷಿಯಲ್‌ ಮೀಡಿಯಾದ್ದೇ ಹವಾ. ತಿಂದಿದ್ದು, ಕುಡಿದಿದ್ದು, ಹೆತ್ತಿದ್ದು ಎಲ್ಲವನ್ನೂ ಇದರಲ್ಲಿ ಹಾಕುತ್ತಾರೆ. ಆ ದೇಶದಲ್ಲಿ ಬೆಡಗಿಯೊಬ್ಬಳು ಹಸಿ ಹಾವನ್ನೇ ತಟ್ಟೆಯಲ್ಲಿಟ್ಟುಕೊಂಡು ತಿಂದರೆ, ಮತ್ತೊಬ್ಬಳು ಹರೆಯದ ಹುಡುಗಿ ಅಜ್ಜನನ್ನೇ ಪ್ರೀತಿಸಿ ಮದುವೆಯಾದಳು. ಈಗ ಲೈಕ್ಸ್‌, ಕಾಮೆಂಟ್‌ಗಳಿಗಾಗಿ ಏನು ಬೇಕಾದರೂ ಮಾಡುವುದಕ್ಕೆ ಸೈ ಅನ್ನುವ ಹಂತದಲ್ಲಿ ನಾವಿದ್ದೇವೆ.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೆಲೆಯೇರಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದ, ಬೆಲೆಯೇರಿಕೆ ವಿರುದ್ಧ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್‌ ಈಗ ರಾಜ್ಯ ಸರ್ಕಾರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ. ಮೊದಲೇ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಬಳಲುತ್ತಿರುವ ರಾಜ್ಯದ ಜನರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ.

VISTARANEWS.COM


on

Siddaramaiah
Koo

ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್‌, ಮನೆಗಳಲ್ಲಿ 200 ಯೂನಿಟ್‌ಗಳವರೆಗೆ ವಿದ್ಯುತ್‌ ಫ್ರೀ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರವು (Karnataka Government), ಅವುಗಳನ್ನು ಯಶಸ್ವಿಯಾಗಿಯೂ ಜಾರಿಗೆ ತಂದಿದೆ. ಯಶಸ್ವಿ ಜಾರಿಯಿಂದ ದೇಶಾದ್ಯಂತ ಖ್ಯಾತಿಯನ್ನೂ ಗಳಿಸಿದೆ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ನೇರವಾಗಿ ಜನರ ಜೇಬಿಗೆ ಕೈ ಹಾಕಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ (Petrol, Diesel Price Hike) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಈಗ ತೀವ್ರ ಚರ್ಚೆ, ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ, ಅವುಗಳನ್ನು ಸಮರ್ಪಕವಾಗಿ ಜಾರಿಗೂ ತಂದ, ಬಡವರಿಗೆ ಅನುಕೂಲ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಸರ್ಕಾರವು ಮೊದಲಿಗೆ ಮದ್ಯದ ಬೆಲೆಯನ್ನು ಏರಿಕೆ ಮಾಡಿತು. ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಿ ಸಂಪನ್ಮೂಲವನ್ನು ಕ್ರೋಡೀಕರಣ ಮಾಡಿತು. ಒಂದೇ ವರ್ಷದಲ್ಲಿ ಎರಡೆರಡು ಬಾರಿ ಮದ್ಯದ ಬೆಲೆಯೇರಿಕೆ ಮಾಡಿತು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವು ಈಗಾಗಲೇ ಮುದ್ರಾಂಕ ಶುಲ್ಕಗಳನ್ನು ಏರಿಸಿದೆ. ದತ್ತು ಸ್ವೀಕಾರ ಪ್ರಮಾಣಪತ್ರ, ಅಫಿಡವಿಟ್‌, ಆಸ್ತಿ ಪರಭಾರೆ, ಪವರ್‌ ಆಫ್‌ ಅಟಾರ್ನಿ ಸೇರಿ ಯಾವುದೇ ದಾಖಲೆಯನ್ನು ಪಡೆಯಲು ನಿಗದಿಪಡಿಸಿದ್ದ ಶುಲ್ಕವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ಇದು ಕೂಡ ಸಂಪನ್ಮೂಲ ಕ್ರೋಡೀಕರಣದ ಭಾಗವೇ ಆಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಅದರ ಬೆಲೆ ಹೆಚ್ಚಿಸಿದರೂ ತೊಂದರೆ ಇಲ್ಲ ಎಂದು ಜನ ಸುಮ್ಮನಾದರು. ಮುದ್ರಾಂಕ ಶುಲ್ಕವು ದಿನನಿತ್ಯದ ಖರ್ಚು-ವೆಚ್ಚ ಅಲ್ಲದ ಕಾರಣ, ಅದರ ಬೆಲೆಯೇರಿಕೆಯನ್ನೂ ಜನ ಮನ್ನಿಸಿದರು. ಆದರೆ, ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿರುವುದು ಅಕ್ಷಮ್ಯವಾಗಿದೆ.

ಪೆಟ್ರೋಲ್‌ ಬೆಲೆಯನ್ನು ಒಂದು ಲೀಟರ್‌ಗೆ 3 ರೂ. ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 3.5 ರೂ. ಏರಿಕೆ ಮಾಡಿರುವುದು ಜನರ ಮೇಲೆ ನೇರವಾಗಿ, ನಿತ್ಯವೂ ಪರಿಣಾಮ ಬೀರುತ್ತದೆ. ಈಗಾಗಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇ ಜಾಸ್ತಿಯೇ ಇದ್ದ ಕಾರಣ ಮತ್ತೆ ಏರಿಕೆ ಮಾಡಿರುವುದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಸಾಗಣೆ ವೆಚ್ಚ ಜಾಸ್ತಿಯಾಗುತ್ತದೆ. ಇದು ಅಗತ್ಯವಸ್ತುಗಳ ಬೆಲೆಯೇರಿಕೆಗೂ ಕಾರಣವಾಗುತ್ತದೆ. ಸಕಲ ರೀತಿಯಲ್ಲೂ ಜನರ ಜೇಬಿಗೆ ಭಾರವಾಗುತ್ತದೆ. ಪ್ರತಿದಿನವೂ ಬಡವರ ಹಣಕ್ಕೆ ಕತ್ತರಿ ಬೀಳುತ್ತದೆ. ಅಲ್ಲಿಗೆ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಪಡೆದುಕೊಂಡಂತೆ ಆಗುತ್ತದೆ. ಆಗ ಗ್ಯಾರಂಟಿಗಳ ಆಶಯವೇ ಮಣ್ಣುಪಾಲಾದಂತಾಗುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದಾಗ, ಅಡುಗೆ ಅನಿಲ ಸಿಲಿಂಡರ್‌ ಬೆಲೆಯೂ ಜಾಸ್ತಿ ಮಾಡಿದಾಗ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ‘ಬೆಲೆಯೇರಿಕೆ’ ಅಸ್ತ್ರವನ್ನೇ ಬಳಸಿದೆ. ಹೀಗಿರುವಾಗ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದರೆ ಹೇಗೆ? “ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಲ್ಲ, ಅದಕ್ಕಾಗಿ ಬೆಲೆಯೇರಿಕೆ ಮಾಡಿದ್ದೇವೆ” ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಹೇಳಿರುವುದು ಯಾವ ರೀತಿಯಲ್ಲಿ ಸಮಂಜಸ? ಸಿದ್ದರಾಮಯ್ಯನವರೇ, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಇದರಿಂದ ನಿಮ್ಮ ಸರ್ಕಾರಕ್ಕೆ ಹೆಸರೂ ಬಂದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಕರ್ನಾಟಕದಲ್ಲಿ ನೀವು ನಿರೀಕ್ಷಿಸಿದಷ್ಟು ಸೀಟುಗಳು ಕಾಂಗ್ರೆಸ್‌ಗೆ ಬರದಿರುವ ಹೊತ್ತಿನಲ್ಲಿ ರಾಜ್ಯದ ಜನರ ಮೇಲೆ ಬೆಲೆಯೇರಿಕೆ ಅಸ್ತ್ರವನ್ನು ಬಳಸುತ್ತಿರುವುದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತಹ ವರ್ತನೆಯೇ? ಖಂಡಿತವಾಗಿಯೂ ಇದು ಜನ ವಿರೋಧಿ ಕ್ರಮ.

ಇದನ್ನೂ ಓದಿ: Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Continue Reading

ಆರೋಗ್ಯ

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

ಗರ್ಭಿಣಿಯರು ಕೆಲಸ ಮಾಡುತ್ತಿದ್ದರೆ ಮೈ ಹಗುರ ಇರುತ್ತದೆಂಬುದು ಪರಂಪರಾಗತ ತಿಳಿವಳಿಕೆ. ಇದಕ್ಕೆ ಅನುಗುಣವಾಗಿ, ಗರ್ಭಾವಸ್ಥೆಯಲ್ಲಿ ಕೆಲವು ಯೋಗಾಸನ ಮತ್ತು ಉಸಿರಾಟದ ತಂತ್ರಗಳನ್ನು (International Yoga Day 2024) ಮಾಡಬಹುದು. ಪ್ರಿನೇಟಲ್‌ ಯೋಗದ ಬಗ್ಗೆ ಕುತೂಹಲವಿದ್ದರೆ, ಇಲ್ಲಿದೆ ಮಾಹಿತಿ.

VISTARANEWS.COM


on

International Yoga Day 2024
Koo

ಮಗುವಿನ ನಿರೀಕ್ಷೆಯಲ್ಲಿದ್ದೀರೇ? ಅಭಿನಂದನೆಗಳು! ಕೌತುಕ, ತಳಮಳ, ಹೆದರಿಕೆ, ನಿರೀಕ್ಷೆ, ಆಯಾಸ- ಏನೇನೆಲ್ಲ ಆಗುತ್ತಿರಬೇಕಲ್ಲವೇ ಈಗ. ಜೀವದೊಳಗೆ ಜೀವವಿರುವ ಅನುಭವವೇ ವರ್ಣನೆಗೆ ನಿಲುಕದ್ದು. ಈ ನವಮಾಸಗಳು ಮಹಿಳೆಯರ ಬದುಕಿನ ಮಹತ್ವದ ಹಂತಗಳು. ಇವು ಆಯಾ ಮಹಿಳೆಯ ಬದುಕಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೇ ನಿರೀಕ್ಷೆಯ ಮಾಸಗಳು. ಈ ದಿನಗಳಲ್ಲಿ ಆಕೆಯ ಆರೋಗ್ಯ ಸ್ಥಿರವಾಗಿ ಇರಬೇಡವೇ? ಆರೋಗ್ಯವೆಂದರೆ ದೇಹಾರೋಗ್ಯ ಮಾತ್ರವೇ ಅಲ್ಲ, ಮಾನಸಿಕ, ಭಾವನಾತ್ಮಕ ಸ್ಥಿತಿಗಳೂ ಸುದೃಢವಾಗಿ ಇರಬೇಕು. ಈ ಹಂತದಲ್ಲಿ ನೆರವಾಗುವುದು ಗರ್ಭಿಣಿಯರಿಗಾಗಿಯೇ ಇರುವ ಪ್ರೀನೇಟಲ್‌ ಯೋಗ. ಮೊದಲಿಗೆ ಯೋಗ ಮಾಡುವುದು ಆಯಾ ಗರ್ಭಿಣಿಯ ಆರೋಗ್ಯಕ್ಕೆ ಸೂಕ್ತವೇ ಎಂಬುದನ್ನು ವೈದ್ಯರಲ್ಲಿ ದೃಢಪಡಿಸಿಕೊಳ್ಳಬೇಕು. ಆನಂತರ ಅನುಭವಿ ಯೋಗ (International Yoga Day 2024) ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸರಿಯಾದ ಮಾರ್ಗ.

International Yoga Day 2024

ಏನು ಪ್ರಯೋಜನ?

  • ಗರ್ಭಿಣಿಯ ಆರೋಗ್ಯ ಸ್ಥಿರವಾಗಿದೆ ಎಂದಾದರೆ, ಒಂದಿಲ್ಲೊಂದು ವ್ಯಾಯಾಮ ಈ ದಿನಗಳಲ್ಲಿ ಬೇಕು. ಅದರಲ್ಲೂ ಯೋಗವನ್ನೇ ಅಭ್ಯಾಸ ಮಾಡುವುದರಿಂದ ಹಲವು ರೀತಿಯ ಲಾಭಗಳಿವೆ.
  • ಮೊದಲಿಗೆ, ಶರೀರ ಬಿಗಿಯದಂತೆ ಹಗುರವಾಗಿ ಇರಿಸಿಕೊಳ್ಳಬಹುದು. ಹೆರಿಗೆಯ ಸಂದರ್ಭದಲ್ಲಿ ಇದು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
  • ಪ್ರಾಣಾಯಾಮ, ಧ್ಯಾನದ ಜೊತೆಗೆ ಯೋಗವನ್ನು ಅಭ್ಯಾಸ ಮಾಡಿದಾಗ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು, ಉದ್ವೇಗವನ್ನು ದೂರ ಮಾಡಲು ಸಾಧ್ಯ. ಅದರಲ್ಲೂ ದೀರ್ಘ ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಹೆರಿಗೆಯ ಸಮಯದಲ್ಲಿ ಅನುಕೂಲ ಹೆಚ್ಚು.
  • ಯೋಗಾಭ್ಯಾಸದಿಂದ ಬೆಳಗಿನ ತಳಮಳಗಳು, ಕಾಲಿನ ಸೆಳೆತ, ಪಾದಗಳು ಊದಿಕೊಳ್ಳುವುದು, ಕೀಲಿನಲ್ಲಿ ನೋವು, ಮಲಬದ್ಧತೆ ಮುಂತಾದ ಆರೋಗ್ಯದ ಕಿರಿಕಿರಗಳನ್ನು ನಿಭಾಯಿಸುವುದು ಕಷ್ಟವಾಗುವುದಿಲ್ಲ
  • ಗರ್ಭಾವಸ್ಥೆಯಲ್ಲಿ ಯೋಗಾಭ್ಯಾಸ ಮಾಡುವುದರಿಂದ ಹೆರಿಗೆಯ ನಂತರ ಶರೀರ ಬೇಗ ಮೊದಲಿನ ಸ್ಥಿತಿಗೆ ಬರುತ್ತದೆ.

ಯಾವ ಆಸನಗಳನ್ನು ಮಾಡಬಹುದು?

ಮೊದಲಿನ ಮೂರು ತಿಂಗಳು ನಿಂತು ಮಾಡುವ ಆಸನಗಳು ಬೇಕಾಗುತ್ತವೆ. ಇದರಿಂದ ಕಾಲುಗಳ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಭಂಗಿಗಳು ಗರ್ಭಿಣಿಯರಿಗೆ ಸೂಕ್ತವಲ್ಲ. ತಿರುಗುವ ಆಸನಗಳು ಶರೀರದ ಮೇಲಿನ ಭಾಗಗಳಿಗೇ ಹೊರತು ಕಿಬ್ಬೊಟ್ಟೆ ಮತ್ತು ಕಟಿಯ ಭಾಗಕ್ಕಲ್ಲ. ತಲೆಕೆಳಗು ಮಾಡುವ ಆಸನಗಳು ಸಹ ಗರ್ಭಿಣಿಯರಿಗೆ ಸಲ್ಲದು.

Beautiful pregnant woman doing prenatal yoga on nature outdoors.

ಯಾವುದು ಸೂಕ್ತ?

ವಜ್ರಾಸನ, ತಾಡಾಸನ, ಕೋನಾಸನ, ಬದ್ಧಕೋನಾಸನ, ವೀರಭದ್ರಾಸನ, ಮಾರ್ಜರಿಯಾಸನ, ಶವಾಸನ, ಯೋಗನಿದ್ರೆ ಮುಂತಾದವು ಗರ್ಭಿಣಿಯರಿಗೆ ಹಿತವಾದ ಭಂಗಿಗಳು.

ಯಾವುದು ಬೇಡ?

ನೌಕಾಸನ, ಚಕ್ರಾಸನ, ಅರ್ಧಮತ್ಸೇಂದ್ರಾನಸ, ಭುಜಂಗಾಸನ, ವಿಪರೀತ ಶಲಭಾಸನ, ಹಲಾಸನ, ಧನುರಾಸನ ಮುಂತಾದ ಕಟಿ, ಹೊಟ್ಟೆ, ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಯಾವ ಆಸನಗಳೂ ಸೂಕ್ತವಲ್ಲ.

Pranayama Yoga Poses For Bright And Glowing Skin

ಪ್ರಾಣಾಯಾಮ

ದೀರ್ಘ ಉಸಿರಾಟದಿಂದಲೂ ಬಹಳಷ್ಟು ಪ್ರಯೋಜನವಿದೆ ಭಾವೀ ತಾಯಂದಿರಿಗೆ. ಕಡೆಯ ಮೂರು ತಿಂಗಳುಗಳಲ್ಲಿ ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಯೋಜನ ಕಾಣಬಹುದು. ಆದರೆ ಭಸ್ತ್ರಿಕಾ, ಕಪಾಲಭಾತಿಯಂಥ ಉಸಿರಾಟದ ಕ್ರಮಗಳನ್ನು ಈ ದಿನಗಳಲ್ಲಿ ಮಾಡದಿದ್ದರೆ ಒಳಿತು. ಬದಲಿಗೆ, ನಾಡಿಶೋಧನ ಮತ್ತು ಭ್ರಾಮರಿಯಂಥ ಪ್ರಾಣಾಯಾಮ, ಧ್ಯಾನ ಮುಂತಾದವು ಗರ್ಭಿಣಿಯರಿಗೆ ಸೂಕ್ತವಾದದ್ದು.

Pregnant young women doing prenatal yoga

ಎಚ್ಚರಿಕೆ ಬೇಕು

  • ಪ್ರೀನೇಟಲ್‌ ಯೋಗವನ್ನು ಅನುಭವಿಯಾದ ಮಾರ್ಗದರ್ಶಕರ ನೆರವಿನಿಂದಲೇ ಮಾಡುವುದು ಸರಿಯಾದ ಕ್ರಮ. ಜೊತೆಗೆ ಕೆಲವು ಎಚ್ಚರಿಕೆಗಳೂ ಬೇಕಾಗುತ್ತವೆ.
  • ಮೊದಲ ಮೂರು ತಿಂಗಳು ನಿಂತು ಮಾಡುವ ಆಸನಗಳು ಸೂಕ್ತ. ಇದರಿಂದ ಕಾಲುಗಳನ್ನು ಬಲಪಡಿಸಬಹುದು, ರಕ್ತ ಪರಿಚಲನೆ ಹೆಚ್ಚಿಸಬಹುದು ಮತ್ತು ಕಾಲು ಸೆಳೆತ ಕಡಿಮೆಯಾಗಬಹುದು
  • ಗರ್ಭಾವಸ್ಥೆಯ ನಡುವಿನ ಮೂರು ತಿಂಗಳಲ್ಲಿ ಆಯಾಸವಾಗದೆ ಎಷ್ಟು ಆಸನಗಳು ಸಾಧ್ಯವೋ ಅಷ್ಟೇ ಮಾಡಿ. ಆಸನಗಳಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಬೇಡಿ, ಬೇಗ ಮುಗಿಸಿ.
  • ಕಡೆಯ ಮೂರು ತಿಂಗಳಲ್ಲಿ ಆಸನಗಳಿಗಿಂತ ಧ್ಯಾನ ಮತ್ತು ಪ್ರಾಣಾಯಾಮದತ್ತ ಗಮನ ನೀಡಿ. ಉಸಿರಾಟವನ್ನು ಬಲಪಡಿಸಿಕೊಂಡು, ದೇಹಕ್ಕೆ ಹೆಚ್ಚಿನ ಆಮ್ಲಜನಕ ಒದಗಿಸುವುದು ಕಡೆಯ ದಿನಗಳಲ್ಲಿ ಅಗತ್ಯವಾಗುತ್ತದೆ.

ಇದನ್ನೂ ಓದಿ: International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

Continue Reading

ಭವಿಷ್ಯ

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಕುಟುಂಬ ಸದಸ್ಯರಿಂದ ಸಿಗಲಿದೆ ಬೆಂಬಲ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ದಶಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಭಾನುವಾರವೂ ತುಲಾ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮಿಥುನ ರಾಶಿಯವರು ಸ್ನೇಹಿತರ ಮೂಲಕ ದೊರಕುವ ಮಾರ್ಗದರ್ಶನ ನಿಮ್ಮ ಆರೋಗ್ಯವನ್ನು ಸುಧಾರಿಸಲು ನಿಮ್ಮನ್ನು ಉತ್ತೇಜಿಸುತ್ತದೆ. ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು. ನಿಮ್ಮ ಜತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿ ಆಗಬಹುದು. ಕಟಕ ರಾಶಿಯವರು ಬಿಡುವಿಲ್ಲದ ಕೆಲಸದಿಂದ ಒತ್ತಡ ಇರಲಿದೆ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಮನಸ್ಸಿಗೆ ನೋವುಂಟು ಆಗಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (16-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ದಶಮಿ 28:43 ವಾರ: ಭಾನುವಾರ
ನಕ್ಷತ್ರ: ಹಸ್ತಾ 11:11 ಯೋಗ: ವರಿಯಾನ 21:01
ಕರಣ: ತೈತುಲ 15:40 ದಿನದ ವಿಶೇಷ: ಫಾದರ್ಸ್‌ ಡೇ

ಸೂರ್ಯೋದಯ : 05:54   ಸೂರ್ಯಾಸ್ತ : 06:47

ರಾಹುಕಾಲ: ಬೆಳಗ್ಗೆ 05:10 ರಿಂದ 06:47
ಗುಳಿಕಕಾಲ: ಮಧ್ಯಾಹ್ನ 03:34 ರಿಂದ 05:10
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 01:57

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಸಮಸ್ಯೆಗಳಿಗೆ ತಕ್ಕ ಪರಿಹಾರವೂ ಇಂದು ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಉದ್ಯೋಗಿಗಳಿಗೆ ಪ್ರೋತ್ಸಾಹವೂ ಸೇರಿದಂತೆ ಅನೇಕ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ವಿವಿಧ ಮೂಲಗಳಿಂದ ಆರ್ಥಿಕವಾಗಿ ಲಾಭ ಸಿಗಲಿದೆ. ಸಂಗಾತಿಯೊಂದಿಗೆ ವಿನಾ ಕಾರಣ ವಾದಕ್ಕೆ ಇಳಿಯುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಸ್ನೇಹಿತರ ಮೂಲಕ ದೊರಕುವ ಮಾರ್ಗದರ್ಶನ ನಿಮ್ಮ ಆರೋಗ್ಯವನ್ನು ಸುಧಾರಿಸಲು ನಿಮ್ಮನ್ನು ಉತ್ತೇಜಿಸುತ್ತದೆ. ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು. ನಿಮ್ಮ ಜತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿ ಆಗಬಹುದು. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕಟಕ:ಬಿಡುವಿಲ್ಲದ ಕೆಲಸದಿಂದ ಒತ್ತಡ ಇರಲಿದೆ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಮನಸ್ಸಿಗೆ ನೋವುಂಟು ಆಗಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಸಿಂಹ:ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ. ಬಹುದಿನಗಳ ಕನಸು ನನಸಾಗುವ ಸಮಯವಿದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಸಂತೋಷದಿಂದ ಇದ್ದು, ಇತರರಿಗೆ ಸಂತಸ ಹಂಚಿಕೊಳ್ಳಲು ಹವಣಿಸುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆತುರದ ಭರದಲ್ಲಿ ಇತರರನ್ನು ಟೀಕೆ ಮಾಡುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋಯಿಸುವುದು ಬೇಡ, ಆಲೋಚಿಸಿ ಮಾತನಾಡಿ. ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ, ಇದರಿಂದ ಮನಸ್ಸು ಘಾಸಿಯಾಗುವುದು. ಆಧ್ಯಾತ್ಮದ ಹಾದಿ ದಾರಿ ತೋರಿತು. ಗುರು ದತ್ತಾತ್ರೇಯನನ್ನು ಆರಾಧಿಸಿ. ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ :ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಸಮಯ ನೀಡುವಿರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಭೂಮಿ, ಆಸ್ತಿ ಖರೀದಿಗಾಗಿ ಆಲೋಚನೆ ಮಾಡುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ದೀರ್ಘಕಾಲದ ಪ್ರಯಾಣ ಕೈಗೊಳ್ಳುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹೊಸ ಕೆಲಸಗಳಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು. ಮುಂಗೋಪದಿಂದ ನಷ್ಟ ಸಾಧ್ಯತೆ ಇದೆ. ಸ್ನೇಹಿತರ ಸಲಹೆ ಸಹಕಾರ ಸಿಗುವುದು. ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಆಲಸ್ಯದಿಂದ ಕಾರ್ಯ ಹಾನಿಯಾಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸೃಜನಾತ್ಮಕವಾಗಿ ಕೆಲಸ ಮಾಡಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹೊಸ ಅವಕಾಶಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಹಿಂದೆ ಟೀಕೆಗಳನ್ನು ಮಾಡುವ ಜನರಿಂದ ದೂರ ಇರಿ. ದಿನ ಮಟ್ಟಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇದೆ. ಸಂಗಾತಿಯ ಸ್ವಾರ್ಥದಿಂದ ಕುಟುಂಬದ ವಾತಾವರಣದಲ್ಲಿ ವ್ಯತ್ಯಾಸವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Viral Video
Latest2 mins ago

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Health Tips
Latest6 mins ago

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Temple Bell
ಧಾರ್ಮಿಕ10 mins ago

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

Morning Nutrition
ಆರೋಗ್ಯ13 mins ago

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

Karnataka Weather Forecast
ಮಳೆ43 mins ago

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Siddaramaiah
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

International Yoga Day 2024
ಆರೋಗ್ಯ1 hour ago

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

Dina Bhavishya
ಭವಿಷ್ಯ2 hours ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಕುಟುಂಬ ಸದಸ್ಯರಿಂದ ಸಿಗಲಿದೆ ಬೆಂಬಲ

Teachers Transfer
ಪ್ರಮುಖ ಸುದ್ದಿ8 hours ago

Teachers Transfer: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

T20 World Cup 2024
T20 ವಿಶ್ವಕಪ್9 hours ago

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ17 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌