IND VS NZ | ರಿಷಭ್​ ಪಂತ್​ ಮ್ಯಾಚ್​ ವಿನ್ನಿಂಗ್​ ಆಟಗಾರ; ಧವನ್ ಹೀಗೆ ಹೇಳಿದ್ದು ಏಕೆ? - Vistara News

ಕ್ರಿಕೆಟ್

IND VS NZ | ರಿಷಭ್​ ಪಂತ್​ ಮ್ಯಾಚ್​ ವಿನ್ನಿಂಗ್​ ಆಟಗಾರ; ಧವನ್ ಹೀಗೆ ಹೇಳಿದ್ದು ಏಕೆ?

ರಿಷಭ್​ ಪಂತ್​ ಮ್ಯಾಚ್​ ವಿನ್ನರ್​​ ಆದ ಕಾರಣ ಅವರು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂದು ಶಿಖರ್​ ಧವನ್ ಹೇಳಿದ್ದಾರೆ.

VISTARANEWS.COM


on

pant vs dhawan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ರೇಸ್ಟ್​ಚರ್ಚ್​: ಸತತ ಬ್ಯಾಟಿಂಗ್​ ವೈಫಲ್ಯದ ಹೊರತಾಗಿಯೂ ರಿಷಭ್ ಪಂತ್‌ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಕುರಿತು ಮಾತನಾಡಿದ ಶಿಖರ್​ ಧವನ್​, ಪಂತ್​ ಓರ್ವ ಮ್ಯಾಚ್ ವಿನ್ನರ್​​ ಆದ್ದರಿಂದ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡಿತು. ಈ ಬಳಿಕ ಮಾತನಾಡಿದ ಶಿಖರ್​ ಧವನ್​ ಅವರು ರಿಷಭ್ ಪಂತ್ ಮ್ಯಾಚ್ ವಿನ್ನರ್ ಆಗಿದ್ದು, ಸಂಜು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಕುರಿತು ಆಕ್ರೋಶ ವ್ಯಕ್ತವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಕಳಪೆ ಫಾರ್ಮ್‌ನಿಂದಾಗಿ ಕಠಿಣ ಸಮಯ ಎದುರಿಸುತ್ತಿರುವ ಪಂತ್​ಗೆ ಬೆಂಬಲಿಸಬೇಕಾಗುತ್ತದೆ. ಸಂಜು ನಿಸ್ಸಂಶಯವಾಗಿಯೂ ಅವಕಾಶ ಸಿಕ್ಕಾಗಲೆಲ್ಲಾ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಅವಕಾಶಕ್ಕಾಗಿ ಕಾಯಬೇಕಾಗಿದೆ. ಏಕೆಂದರೆ ಪಂತ್ ಕೂಡ ಮ್ಯಾಚ್ ವಿನ್ನರ್ ಆಗಿದ್ದು, ಕಠಿಣ ಸಮಯದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ | IND VS AUS | ಹಾಕಿ ಟೆಸ್ಟ್​; ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸಿದ ಟೀಮ್​ ಇಂಡಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Sunil Narine: ಬಿರುಸಿನ ಬ್ಯಾಟಿಂಗ್​ ನಡೆಸಿದ ನರೈನ್​ ಕೇವಲ 39 ಎಸೆತಗಳಿಂದ 6 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್ ಸಿಡಿಸಿ 81 ರನ್​ ಚಚ್ಚಿದರು. ಈ 7 ಸಿಕ್ಸರ್​ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

VISTARANEWS.COM


on

Sunil Narine
Koo

ಲಕ್ನೋ: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಕೆಕೆಆರ್(Kolkata Knight Riders)​ ತಂಡದ ಎಡಗೈ ಆಟಗಾರ ಸುನೀಲ್​ ನರೈನ್(Sunil Narine)​ ಲಕ್ನೋ(Lucknow Super Giants) ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್​ ಬಾರಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದ ಐಪಿಎಲ್​ನ 54ನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ನರೈನ್​ ಕೇವಲ 39 ಎಸೆತಗಳಿಂದ 6 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್ ಸಿಡಿಸಿ 81 ರನ್​ ಚಚ್ಚಿದರು. ಈ 7 ಸಿಕ್ಸರ್​ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಹೆನ್ರಿಚ್​ ಕ್ಲಾಸೆನ್​(31 ಸಿಕ್ಸರ್​) ಅಗ್ರಸ್ಥಾನದಲ್ಲಿದ್ದರು. ಇದೀಗ ನರೈನ್​ 32 ಸಿಕ್ಸರ್​ಗಳೊಂದಿಗೆ ಕ್ಲಾಸೆನ್​ ಅವರನ್ನು ಹಿಂದಿಕ್ಕಿದ್ದಾರೆ.

​ಇಂದು ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಕ್ಲಾಸೆನ್​ 2 ಸಿಕ್ಸರ್​ ಸಿಡಿಸಿದರೆ ಮತ್ತೆ ತಮ್ಮ ಅಗ್ರಸ್ಥಾನವನ್ನು ವಶಪಡಿಸಿಕೊಳ್ಳಲಿದ್ದಾರೆ. ಸದ್ಯ ನರೈನ್​ ಮತ್ತು ಕ್ಲಾಸೆನ್​ ಮಧ್ಯೆ ಸಿಕ್ಸರ್​ ಪೈಪೋಟಿ ಏರ್ಪಟ್ಟಿದೆ. 28 ಸಿಕ್ಸರ್​ ಬಾರಿಸಿರುವ ಅಭಿಷೇಕ್​ ಶರ್ಮ ಮೂರನೇ ಸ್ಥಾನದಲ್ಲಿದ್ದಾರೆ. ಶಿವಂ ದುಬೆ(26 ಸಿಕ್ಸರ್​) ನಾಲ್ಕನೇ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

ಅಗ್ರಸ್ಥಾನಕ್ಕೆ ಜಿಗಿದ ಕೆಕೆಆರ್​


ಇದೇ ಮೊದಲ ಬಾರಿಗೆ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ದಾಖಲಾದ ಬೃಹತ್​ ಮೊತ್ತದ ಮೇಲಾಟದಲ್ಲಿ ಕೆಕೆಆರ್​ ತಂಡ ಲಕ್ನೋ ವಿರುದ್ಧ 98 ರನ್​ಗಳ ಬೃಹತ್​ ಜಯ ಸಾಧಿಸಿತು. ಜತೆಗೆ ಅಂಕಪಟ್ಟಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ತುತ್ತಾಯಿತು.

Continue Reading

ಕ್ರೀಡೆ

IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

IPL 2024 Points Table: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಗೆಲುವು ಸಾಧಿಸಿದ ಕೆಕೆಆರ್​ 16 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನಿಯಾಗಿದ್ದ ರಾಜಸ್ಥಾನ್​ 2ನೇ ಸ್ಥಾನಕ್ಕೆ ಕುಸಿದಿದೆ.

VISTARANEWS.COM


on

IPL 2024 Points Table
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಪ್ಲೇ ಆಫ್​ ಟಿಕೆಟ್​ ಪಡೆಯಲು ಎಲ್ಲ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಭಾನುವಾರ ನಡೆದ ಡಬಲ್​ ಹೆಡರ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಕೆಕೆಆರ್​ ಭರ್ಜರಿ ಗೆಲುವು ಸಾಧಿಸಿವೆ. ಉಭಯ ತಂಡಗಳ ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಭಾರೀ ಬದಲಾವಣೆ ಸಂಭವಿಸಿದೆ.

ನಂ.1 ಸ್ಥಾನಕ್ಕೇರಿದ ಕೆಕೆಆರ್​


ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಗೆಲುವು ಸಾಧಿಸಿದ ಕೆಕೆಆರ್​ 16 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನಿಯಾಗಿದ್ದ ರಾಜಸ್ಥಾನ್​ 2ನೇ ಸ್ಥಾನಕ್ಕೆ ಕುಸಿದಿದೆ. ಉಭಯ ತಂಡಗಳಿಗೂ 16 ಅಂಕ ಇದ್ದರೂ ಕೆಕೆಆರ್​ ರನ್​ ರೇಟ್​ ಉತ್ತಮವಾಗಿದೆ. ಹೀಗಾಗಿ ಮೊದಲ ಸ್ಥಾನ ಪಡೆದಿದೆ. ಸೋಲು ಕಂಡ ಲಕ್ನೋ 5ನೇ ಸ್ಥಾನಕ್ಕೆ ಜಾರಿದೆ. ಪಂಜಾಬ್​ ವಿರುದ್ಧ 28 ರನ್​​ ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್​ ಚೆನ್ನೈ 5ರಿಂದ 3ನೇ ಸ್ಥಾನಕ್ಕೇರಿದೆ. ಪಂಜಾಬ್​ 8ನೇ ಸ್ಥಾನದಲ್ಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​108216 (+0.622)
ಚೆನ್ನೈ​​116514 (+0.700)
ಹೈದರಾಬಾದ್​106512 (+0.072)
ಲಕ್ನೋ​116512 (-0.371)
ಡೆಲ್ಲಿ115610 (-0.442)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಗುಜರಾತ್​11478 (-1.320)
ಮುಂಬೈ11386 (-0.356)

ಪಂಜಾಬ್​ಗೆ ಸೋಲು


ದಿನದ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಚೆನ್ನೈ ವಿರುದ್ಧ ಸೋಲು ಕಂಡಿತು. ಸಾಧಾರಣ ಮೊತ್ತವನ್ನು ಕೂಡ ಬೆನ್ನಟ್ಟಲಾಗದೆ 28 ರನ್​ಗಳ ಸೋಲಿಗೆ ತುತ್ತಾಯಿತು. ಈ ಸೋಲಿನಿಂದ ತಂಡದ ಪ್ಲೇ ಆಫ್​ ಹಾದಿ ಮತ್ತಷ್ಟು ಕಠಿಣವಾಗಿದೆ. ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ


ರಾತ್ರಿಯ ಪಂದ್ಯದಲ್ಲಿ ಕೆಕೆಆರ್​ ತಂಡ ಲಕ್ನೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿತು.  ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

Continue Reading

ಪ್ರಮುಖ ಸುದ್ದಿ

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

IPL 2024: ಐಪಿಎಲ್​​ನ ಕನ್ಕಷನ್ ಬದಲಿ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಯುಧ್ವೀರ್ ಎರಡನೇ ಆಟಗಾರರಾದರು. ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ವಿಷ್ಣು ವಿನೋದ್ ಈ ಪಟ್ಟಿಯಲ್ಲಿ ಮೊದಲಿಗರು. ಐಪಿಎಲ್ 2023 ರ ಎರಡನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಬದಲಿಗೆ ವಿನೋದ್ ಆಡಿದ್ದರು.

VISTARANEWS.COM


on

IPL 2024
Koo

ಲಖನೌ : ಐಪಿಎಲ್​ 2024ನೇ (IPL 2024) ಆವೃತ್ತಿಯ ಮೊದಲ ಕನ್​ಕಷನ್​​ (ಗಾಯಗೊಂಡ ಆಟಗಾರನಿಗೆ ಬದಲಿ) ಆಟಗಾರ ಎಂಬ ಖ್ಯಾತಿಗೆ ಯದ್ವೀರ್​ ಸಿಂಗ್ (Yudhvir Singh) ಪಾತ್ರರಾಗಿದ್ದಾರೆ. ಎಲ್ಎಸ್​ಜಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯದಲ್ಲಿ, ಲಕ್ನೊ ಪರ ಅವರು ಆಡಲು ಇಳಿದರು. ಲಕ್ನೊ ವೇಗಿ ಮೊಹ್ಸಿನ್ ಖಾನ್ ಥರ್ಡ್​ ಮ್ಯಾನ್​ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುವಾಗ ತಲೆಗೆ ಗಾಯವಾಗಿತ್ತು. ಚಿಕಿತ್ಸೆಗಾಗಿ ಮೈದಾನವನ್ನು ತೊರೆಯಬೇಕಾಯಿತು. ಹೀಗಾಗಿ ಯಧ್ವೀರ್ ಸಿಂಗ್​ ಆಡಲು ಬರಬೇಕಾಯಿತು.

ಮೊಹ್ಸಿನ್ ಖಾನ್ ತಲೆಗೆ ಪೆಟ್ಟು ಬಿದ್ದ ನಂತರ ನೆಲದ ಮೇಲೆ ಮಲಗಿ ಹೆಣಗಾಡುತ್ತಿರುವುದು ಕಂಡುಬಂತು. ನರೈನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೊಹ್ಸಿನ್​ ಖಾನ್ ಚೆಂಡನ್ನು ಹಿಡಿಯಲು ಓಡಿದ್ದರು. ಆದರೆ ದುರದೃಷ್ಟವಶಾತ್ ಅವರ ತಲೆ ಮೊದಲು ನೆಲಕ್ಕೆ ಅಪ್ಪಳಿಸಿತ್ತು. ಪರಿಣಾಮವಾಗಿ 16 ನೇ ಓವರ್ ಪ್ರಾರಂಭವಾಗುವ ಮೊದಲು ಮೊಹ್ಸಿನ್ ಖಾನ್ ಬದಲಿಗೆ ಯುಧ್ವೀರ್ ಸಿಂಗ್ ಅವರನ್ನು ಕನ್ಕಷನ್ ಬದಲಿಯಾಗಿ ಕಳುಹಿಸಲಾಯಿತು.

ಯುಧ್ವೀರ್ ಸಿಂಗ್ ಚರಕ್ ಐಪಿಎಲ್ 2024 ರ ಮೊದಲ ಕನ್ಕಷನ್ ಬದಲಿ ಆಟಗಾರರಾದರು. ಇದು ಮಾತ್ರವಲ್ಲ, ಅವರು ತಮ್ಮ ಮೊದಲ ಓವರ್​​ನಲ್ಲಿ ಕೆಕೆಆರ್​​ನ ಆಂಗ್ರಿಶ್ ರಘುವಂಶಿ ಅವರನ್ನು ತಮ್ಮ ಮೊದಲ ಓವರ್​ನಲ್ಲಿ ಔಟ್ ಮಾಡಿದರು.

ಐಪಿಎಲ್​​ನ ಕನ್ಕಷನ್ ಬದಲಿ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಯುಧ್ವೀರ್ ಎರಡನೇ ಆಟಗಾರರಾದರು. ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ವಿಷ್ಣು ವಿನೋದ್ ಈ ಪಟ್ಟಿಯಲ್ಲಿ ಮೊದಲಿಗರು. ಐಪಿಎಲ್ 2023 ರ ಎರಡನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಬದಲಿಗೆ ವಿನೋದ್ ಆಡಿದ್ದರು.

ಕಂಕಷನ್ ಬದಲಿ ಆಟಗಾರರ ವಿವರ

ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ವಿಷ್ಣು ವಿನೋದ್
ಮೊಹ್ಸಿನ್ ಖಾನ್ ಲಕ್ನೋ ಸೂಪರ್ ಜೈಂಟ್ಸ್: ಯುಧ್ವೀರ್ ಸಿಂಗ್

ಪಂದ್ಯದಲ್ಲಿ ಏನಾಯಿತು?

ಲಖನೌ: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 54ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಬೃಹತ್​ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕಗಳನ್ನು ಸಂಪಾದಿಸಿರುವ ಶ್ರೇಯಸ್​ ಅಯ್ಯರ್ ನೇತೃತ್ವದ ಕೋಲ್ಕೊತಾ ಬಳಗ ಪ್ಲೇಆಫ್​ ಹಂತಕ್ಕೆ ಬಹುತೇಕ ತೇರ್ಗಡೆ ಗೊಂಡಿದೆ. ಇದೇ ವೇಳೆ 11 ಪಂದ್ಯಗಳಲ್ಲಿ 5ನೇ ಸೋಲಿಗೆ ಒಳಗಾಗಿದ್ದು 12 ಅಂಕಗಳ ಸಮೇತ ಐದನೇ ಸ್ಥಾನದಲ್ಲಿ ಉಳಿದಿದೆ.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಇಲ್ಲಿನ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

Continue Reading

ಕ್ರೀಡೆ

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

IPL 2024: ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

VISTARANEWS.COM


on

IPL 2024
Koo

ಲಖನೌ: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 54ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಬೃಹತ್​ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕಗಳನ್ನು ಸಂಪಾದಿಸಿರುವ ಶ್ರೇಯಸ್​ ಅಯ್ಯರ್ ನೇತೃತ್ವದ ಕೋಲ್ಕೊತಾ ಬಳಗ ಪ್ಲೇಆಫ್​ ಹಂತಕ್ಕೆ ಬಹುತೇಕ ತೇರ್ಗಡೆ ಗೊಂಡಿದೆ. ಇದೇ ವೇಳೆ 11 ಪಂದ್ಯಗಳಲ್ಲಿ 5ನೇ ಸೋಲಿಗೆ ಒಳಗಾಗಿದ್ದು 12 ಅಂಕಗಳ ಸಮೇತ ಐದನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಬ್ಯಾಟಿಂಗ್​ಗೆ ಆಹ್ವಾನ ಪಡೆದ ಕೆಕೆಆರ್ ತಂಡ ಅದ್ಭುತ್ ಪ್ರದರ್ಶನ ನೀಡಿತು. ಸುನೀಲ್​ ನರೈನ್​ (39 ಎಸೆತ 81 ರನ್​) ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ಅತ್ಯುತ್ತಮ ಆರಂಭ ಪಡೆಯಿತು. ಫಿಲ್​ ಸಾಲ್ಟ್​ ಕೂಡ 14 ಎಸೆತಕ್ಕೆ 32 ರನ್ ಬಾರಿಸಿ ಮಿಂಚಿದರು. ಈ ಜೋಡಿ ಮೊದಲ ವಿಕೆಟ್​ಗೆ 61 ರನ್ ಬಾರಿಸಿತು. ನಂತರ ಅಂಗ್​ಕ್ರಿಶ್​ ರಘವಂಶಿ 32 ರನ್ ಬಾರಿಸಿದರೆ ರಸೆಲ್ 12 ರನ್​ಗೆ ಔಟಾದರು. ರಿಂಕು ಸಿಂಗ್ ವೈಫಲ್ಯ ಅನುಭವಿಸಿ 16 ರನ್​ಗೆ ಸೀಮಿತಗೊಂಡರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್​2 23 ರನ್​ ಹಾಗೂ ರಮಣ್​ದೀಪ್​ ಸಿಂಗ್ 6 ಎಸೆತಕ್ಕೆ 25 ರನ್ ಬಾರಿಸಿ ದೊಡ್ಡ ಮೊತ್ತ ಬಾರಿಸಲು ನೆರವಾದರು. ಲಕ್ನೊ ಪರ ನವೀನ್ ಉಲ್ ಹಕ್​ 3 ವಿಕೆಟ್ ಪಡೆದರು.

ಬ್ಯಾಟಿಂಗ್ ವೈಫಲ್ಯ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡ ಕೆಕೆಆರ್​ ಬೌಲರ್​ಗಳ ನಿಖರ ಎಸೆತಗಳಿಗೆ ಹಾಗೂ ಫೀಲ್ಡಿಂಗ್​ಗೆ ಬಲಿಯಾದರು. ಅರ್ಶಿನ್​ ಕುಲ್ಕರ್ಣಿ 9 ರನ್​ಗೆ ಸೀಮಿತಗೊಂಡರೆ ರಾಹುಲ್​ 21 ರನ್​ ಬಾರಿಸಿದರು. ಮಾರ್ಕಸ್​ ಸ್ಟೊಯ್ನಿಸ್​ 36 ರನ್​ ಗೆ ಔಟಾದಾಗ ಲಕ್ನೊ ಆಸೆ ಕರಗಿತು. ದೀಪಕ್ ಹೂಡ 6 ರನ್​ಗೆ ಸೀಮಿತಗೊಂಡರೆ ಪೂರನ್​ 10 ರನ್, ಬದೋನಿ 15 ರನ್​ ಹಾಗೂ ಆಸ್ಟನ್​ ಟರ್ನರ್​ 16 ರನ್ ಕೊಡುಗೆ ಕೊಟ್ಟರು. ಆದರೆ, ದೊಡ್ಡ ಮೊತ್ತದ ಸನಿಹಕ್ಕೆ ಹೋಗಲೂ ಸಾಧ್ಯವಾಗಲಿಲ್ಲ.

ಕೆಕೆಆರ್ ಬೌಲಿಂಗ್​ನಲ್ಲಿ ಹರ್ಷಿತ್​ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದರೆ ಆ್ಯಂಡ್ರೆ ರಸೆಲ್​ 2 ವಿಕೆಟ್​ ಉರುಳಿಸಿದರು.

Continue Reading
Advertisement
Prajwal Revanna Case
ಕರ್ನಾಟಕ11 mins ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ21 mins ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Ranjani Raghavan Starrer Sathyam Kannada Movie Gets UA Certificate
ಸ್ಯಾಂಡಲ್ ವುಡ್28 mins ago

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Terrorist Attack
ದೇಶ32 mins ago

Terrorist attack: ʼಮಗನ ಬರ್ತ್‌ ಡೇ ಪಾರ್ಟಿಗೆ ಪ್ಲ್ಯಾನ್‌ ಮಾಡಿದ್ದ, ಆದರೆ ಈಗ…ʼ ಕಣ್ಣೀರಿಟ್ಟ ಹುತಾತ್ಮ ಯೋಧನ ಕುಟುಂಬ

Samantha Ruth Prabhu Fake Viral Nude Pic
ಟಾಲಿವುಡ್48 mins ago

Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

Dr.Nagareddy Patil
ಕರ್ನಾಟಕ48 mins ago

Dr.Nagareddy Patil: ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

IPL 2024 Points Table
ಕ್ರೀಡೆ49 mins ago

IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Terrorist attack
ದೇಶ2 hours ago

Terrorist Attack: “ಉಗ್ರರ ದಾಳಿ ಬಿಜೆಪಿ ಚುನಾವಣಾ ಪೂರ್ವ ಸ್ಟಂಟ್‌”; ನಾಲಿಗೆ ಹರಿಬಿಟ್ಟ ಪ್ರತಿಪಕ್ಷದ ಇಬ್ಬರು ನಾಯಕರು

Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

Cooking Oils
ಆರೋಗ್ಯ2 hours ago

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ14 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ15 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ15 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌