ವಿಸ್ತಾರ ಸಂಪಾದಕೀಯ: ಬೀದಿ ನಾಯಿಗಳಿಗೆ ಅಮಾಯಕ ಮಕ್ಕಳ ಬಲಿ, ಈ ಸಾವಿಗೆ ಯಾರು ಹೊಣೆ? - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಬೀದಿ ನಾಯಿಗಳಿಗೆ ಅಮಾಯಕ ಮಕ್ಕಳ ಬಲಿ, ಈ ಸಾವಿಗೆ ಯಾರು ಹೊಣೆ?

ಈ ಅನಾಹುತಕ್ಕೆ ಸ್ಥಳೀಯ ಆಡಳಿತಗಳ ಬೇಜವಾಬ್ದಾರಿಯೇ ಮೂಲ ಕಾರಣ. ಬೀದಿಗಳ ಅಸ್ವಚ್ಛತೆ ಮಾತ್ರವಲ್ಲ, ಬೀದಿ ನಾಯಿಗಳನ್ನು ನಿಯಂತ್ರಿಸಲೂ ಇವು ವಿಫಲವಾಗಿವೆ. ಇನ್ನಾದರು ಸರ್ಕಾರ ಬೀದಿ ನಾಯಿಗಳಿಂದ ಆಗುತ್ತಿರುವ ಸಾವು ತಪ್ಪಿಸುವತ್ತ ಗಂಭೀರ ಕ್ರಮ ಕೈಗೊಳ್ಳಲಿ.

VISTARANEWS.COM


on

ಸಂಪಾದಕೀಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಬಳಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆಟವಾಡಲು ಹೊರಬಂದಿದ್ದ ಬಾಲಕನ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಶಿವಮೊಗ್ಗ ತಾಲೂಕಿನ ಪುರಲೆ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಇಂಥ ಪ್ರಕರಣಗಳು ಹೊಸತೇನಲ್ಲ. ಬೆಂಗಳೂರಿನಲ್ಲೂ ಹಲವು ಬಾರಿ ಬೀದಿ ನಾಯಿಗಳ ದಾಳಿಯಾಗಿದೆ. ಮಕ್ಕಳು ಸತ್ತೇ ಹೋದ ಉದಾಹರಣೆಗಳೂ ಇವೆ. ಹೆಚ್ಚಾಗಿ ಇವು ನಿರ್ಬಲರಾದ ಮಕ್ಕಳ ಮೇಲೇ ದಾಳಿ ಮಾಡುತ್ತವೆ. ಹಿಂಡು ಹಿಂಡಾಗಿ ಇವು ಬೇಟೆಯಾಡುವಂತೆ ಎರಗಿದಾಗ ಎದುರಿಸಲು ಮಕ್ಕಳಿಂದ ಸಾಧ್ಯವಿಲ್ಲ. ಮಕ್ಕಳೇನು, ದೊಡ್ಡವರ ಮೇಲೆ ಇವು ದಾಳಿ ಮಾಡಿ ಗಾಯಗೊಳಿಸಿದ ನಿದರ್ಶನಗಳು ಸಾಕಷ್ಟಿವೆ. ಇವೆಲ್ಲ ಗಂಭೀರ ಹಾಗೂ ಆತಂಕಕಾರಿ ಸಂಗತಿ.

ನಾಯಿಗಳ ಮೂಲ ಪ್ರವೃತ್ತಿಯೇ ಬೇಟೆ. ಮನುಷ್ಯ ಅವುಗಳನ್ನು ಮನೆಗೆ ತಂದು ಸಾಕಿಕೊಳ್ಳುತ್ತಾನಷ್ಟೆ. ಸಾಕುನಾಯಿಗಳನ್ನು ನಾನಾ ತರಬೇತಿಗಳ ಮೂಲಕ ಪಳಗಿಸಿ ಅವುಗಳ ಬೇಟೆಯ ಗುಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗುತ್ತದೆ. ಇಷ್ಟಾಗಿಯೂ ಸಾಕು ನಾಯಿಗಳು ದಾಳಿ ಮಾಡಿದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇನ್ನು ಬೀದಿ ನಾಯಿಗಳು ತಮ್ಮನ್ನು ನೋಡಿ ಗಾಬರಿಯಿಂದ ಓಡುವ ಮಕ್ಕಳನ್ನು ಬೇಟೆಯೆಂದೇ ತಿಳಿದು ಬೆನ್ನಟ್ಟುತ್ತವೆ. ಹಾಗಾದರೆ ಪರಿಹಾರವೇನು? ಬೀದಿನಾಯಿಗಳ ಸಂಖ್ಯೆ ಹೆಚ್ಚಾದಾಗ ಅವುಗಳನ್ನು ಕೊಲ್ಲುವ ಒಂದು ಪದ್ಧತಿ ಜಾರಿಯಲ್ಲಿತ್ತು. ಇದು ಮಾನವೀಯವಲ್ಲ ಎಂಬ ಅರಿವು ಮೂಡಿದ ಬಳಿಕ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳ ಸಂಖ್ಯೆ ತಾನಾಗಿ ಕಡಿಮೆಯಾಗುವಂತೆ ಮಾಡುವ ಪದ್ಧತಿಯನ್ನು ರೂಢಿಸಲಾಯಿತು. ಇದನ್ನು ಸ್ಥಳೀಯಾಡಳಿತಗಳು ಮಾಡಬೇಕು. ಆದರೆ ಮಾಡುತ್ತಿವೆಯೇ? ಮಾಡುತ್ತಿದ್ದರೆ, ಅವುಗಳು ಇಷ್ಟೊಂದು ಸಂಖ್ಯೆಯಲ್ಲಿ ಹೆಚ್ಚಲು ಹಾಗೂ ಮನುಷ್ಯರ ಮೇಲೇ ದಾಳಿ ಮಾಡುವಷ್ಟು ಸೊಕ್ಕಿಕೊಳ್ಳಲು ಕಾರಣವೇನು? ಬೀದಿ ನಾಯಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದರಷ್ಟೇ ಮನುಷ್ಯರ ಮೇಲೆ ದಾಳಿ ಮಾಡುವ ಧೈರ್ಯ ಅವುಗಳಿಗೆ ಬರಲು ಸಾಧ್ಯ. ಅವುಗಳ ಸಂಖ್ಯೆ ಮಿತಿ ಮೀರಿದೆ ಎನ್ನಲು ಇವು ನಿದರ್ಶನ.

ಸ್ಥಳೀಯ ಆಡಳಿತ ಬೀದಿನಾಯಿಗಳನ್ನು ನಿಯಂತ್ರಿಸಲು ವಿಫಲವಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಇವುಗಳಿಗೆ ಸೂಕ್ತ ಚಿಕಿತ್ಸೆ, ಸಂತಾನಹರಣ ಶಸ್ತ್ರಚಿಕಿತ್ಸೆ ಸಿಗುತ್ತಿಲ್ಲ. ನಾಯಿಗಳ ಸಂತಾನ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಒಂದಷ್ಟು ಪ್ರಮಾಣದ ಹಣವನ್ನು ಮೀಸಲಿಡಲಾಗುತ್ತದೆ. ಆದರೆ ಇದು ಹೇಗೆ ವಿನಿಯೋಗವಾಗಿದೆ ಎಂಬುದರ ಲೆಕ್ಕ ಇದ್ದಂತಿಲ್ಲ. ಇದು ಸರಿಯಾಗಿ ವಿನಿಯೋಗವಾಗಿದ್ದರೆ ನಾಯಿಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಹಾಗಾಗಿಲ್ಲ. ಬೆಂಗಳೂರೂ ಸೇರಿದಂತೆ ರಾಜ್ಯದ ನಗರದ ಬೀದಿಗಳು ತಿಪ್ಪೆಗುಂಡಿಗಳಾಗಿರುತ್ತವೆ; ಇವೇ ನಾಯಿಗಳ ಉದರಪೋಷಣೆಗೆ ಸೂಕ್ತ ತಾಣಗಳಾಗಿವೆ. ಮಾಂಸದ ಅಂಗಡಿಗಳು ಅಳಿದುಳಿದ ಮಾಂಸ- ಮೂಳೆಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಎಸೆದುಬಿಡುವುದೂ ನಾಯಿಗಳು ಕೊಬ್ಬಲು ಕಾರಣ. ನಗರಸಭೆ, ಪಾಲಿಕೆಗಳು ಮಾಂಸದಂಗಡಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿಲ್ಲ. ಇದೀಗ ಅಮಾಯಕ ಮಕ್ಕಳ ಸಾವಿಗೆ ಯಾರು ಹೊಣೆ ಹೊರಬೇಕು? ಸ್ಥಳೀಯಾಡಳಿತ ಅಥವಾ ಸರ್ಕಾರವೇ ಇದರ ತಪ್ಪಿತಸ್ಥ. ಪರಿಹಾರ ನೀಡಲು, ಬೀದಿಗಳಲ್ಲಿ ನಾಯಿ ಸಂಖ್ಯೆ ನಿಯಂತ್ರಿಸಲು ಸರ್ಕಾರ ಬದ್ಧವಾಗಬೇಕು.

ಬೀದಿ ನಾಯಿಗಳನ್ನು ಆಹಾರ ಹಾಕಿ ಸಾಕುವವರು ದೊಡ್ಡಸಂಖ್ಯೆಯಲ್ಲಿ ಇದ್ದಾರೆ. ಪ್ರಾಣಿ ಪ್ರೀತಿ ತಪ್ಪಲ್ಲ. ಆದರೆ ಅವುಗಳ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಲೂ ಇವರು ಜವಾಬ್ದಾರರಾಗಬೇಕಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಒಂದು ತೀರ್ಪನ್ನು ಇಲ್ಲಿ ಸ್ಮರಿಸಬಹುದು. ಕೇರಳದಲ್ಲಿ ಹೆಚ್ಚಿರುವ ಬೀದಿನಾಯಿಗಳ ಹಾವಳಿ ಕುರಿತು ಸಲ್ಲಿಸಲಾದ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ, ಇವುಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿತ್ತು. ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಅವಶ್ಯಕ ಎಂದಿತ್ತು. ಬೀದಿ ನಾಯಿಗಳು ಕಚ್ಚಿದರೆ, ಶ್ವಾನಗಳಿಗೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನೂ ಬೀದಿ ನಾಯಿಗಳಿಗೆ ಆಹಾರ ಒದಗಿಸುವವರು ಭರಿಸಬೇಕು. ಜತೆಗೆ ಶ್ವಾನಗಳಿಗೆ ಲಸಿಕೆ ಹಾಕಿಸುವ ಜವಾಬ್ದಾರಿಯನ್ನೂ ಅವರೇ ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಕಾಳಜಿಯನ್ನೂ ಮಾಡಬೇಕು. ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಹೇಳಿತ್ತು. ಇದನ್ನೂ ಗಮನಿಸಬೇಕು.

ಬೀದಿ ನಾಯಿಗಳ ಬಗ್ಗೆ ಮಹಾತ್ಮ ಗಾಂಧಿಯವರು ಹೇಳಿದ್ದ ಒಂದು ಮಾತನ್ನೂ ಇಲ್ಲಿ ಸ್ಮರಿಸಬಹುದು. 1926ರಲ್ಲಿ “ಯಂಗ್‌ ಇಂಡಿಯಾʼ ಪತ್ರಿಕೆಯಲ್ಲಿ ಮಹಾತ್ಮರು ಬರೆದಿದ್ದ ಒಂದು ಲೇಖನದಲ್ಲಿ, ʼʼಮಾಲಿಕನಿಲ್ಲದ ಬೀದಿ ನಾಯಿ ಸಮಾಜದ ಪಾಲಿಗೆ ಸಮಸ್ಯೆ. ಅವುಗಳನ್ನು ಬೀದಿಯಲ್ಲಿ ತಿರಗಾಡಲು ಬಿಡಬಾರದು. ಅವುಗಳನ್ನು ಸಾಕಲು ಪಿಂಜರಾಪೋಲ್‌ಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದಾದರೆ, ಅವುಗಳನ್ನು ಕೊಲ್ಲದೇ ಬೇರೆ ವಿಧಿಯಿಲ್ಲʼʼ ಎಂದಿದ್ದರು. 2015ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮುಂದೆ ಬಂದ ಒಂದು ಪ್ರಕರಣದಲ್ಲಿ ಗಾಂಧೀಜಿಯ ಈ ಲೇಖನವನ್ನು ಉಲ್ಲೇಖಿಸಲಾಗಿತ್ತು. ಅಹಿಂಸೆಯ ಮಹಾಮಾದರಿ ಎಂದೇ ಪರಿಗಣಿತರಾದ ಗಾಂಧೀಜಿಯೇ ಈ ಮಾತುಗಳನ್ನು ಆಡಿದ್ದಾರೆಂದರೆ, ಬೀದಿ ನಾಯಿಗಳ ಹಾವಳಿಯನ್ನು ಅವರೂ ಸಮಾಜಕ್ಕೊಂದು ಸಮಸ್ಯೆ ಎಂದು ಪರಿಗಣಿಸಿದ್ದರೆಂದು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲದರ ಹಿನ್ನೆಲೆಯಲ್ಲಿ, ಇಂದು ನಾವು ಬೀದಿ ನಾಯಿಗಳನ್ನು ಕೊಲ್ಲುವುದಲ್ಲವಾದರೂ, ಸಂತಾನಶಕ್ತಿಹರಣ ಮಾಡುವ, ನಿಯಂತ್ರಿಸುವ ಕಾರ್ಯವನ್ನಾದರೂ ಕಟ್ಟುನಿಟ್ಟಾಗಿ ಮಾಡಬೇಕಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಸರಿಯಲ್ಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

LKG, UKG: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ; ಇಲ್ಲಿದೆ ಹೊಸ ಅಪ್‌ಡೇಟ್

LKG, UKG: ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ಆಗಿದೆ. ಯುಕೆಜಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಹಾಗೆಯೇ, ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ 8 ವರ್ಷ ಇರಬೇಕಾಗುತ್ತದೆ.

VISTARANEWS.COM


on

LKG UKG
Koo

ಬೆಂಗಳೂರು: ಮಕ್ಕಳನ್ನು ಎಲ್‌ಕೆಜಿ, ಯುಕೆಜಿ (LKG, UKG) ಹಾಗೂ ಒಂದನೇ ತರಗತಿಗೆ ದಾಖಲಿಸಲು ರಾಜ್ಯ ಸರ್ಕಾರವು (Karnataka Government) ಈಗಾಗಲೇ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ. ಆದರೆ, ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸದ ರಾಜ್ಯ ಸರ್ಕಾರವೀಗ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ. ಅದರಂತೆ, 2023-24ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿಗೆ ದಾಖಲಿಸುವ ಮಕ್ಕಳ ಗರಿಷ್ಠ ವಯೋಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಹೀಗಿದೆ ಪರಿಷ್ಕರಿಸಿದ ವಯೋಮಿತಿ

ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ಆಗಿದೆ. ಯುಕೆಜಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಹಾಗೆಯೇ, ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ 8 ವರ್ಷ ಇರಬೇಕಾಗುತ್ತದೆ. ಎಲ್‌ಕೆಜಿಗೆ 2023-24, ಯುಕೆಜಿಗೆ 2024-25 ಹಾಗೂ ಒಂದನೇ ತರಗತಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ಹೊಸ ಆದೇಶವು ಅನ್ವಯವಾಗಲಿದೆ. ಡ್ರಾಪ್‌ಔಟ್‌ ಆಗುವ ಮಕ್ಕಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರವು ಹೊಸ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೀಗಿದೆ…

ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಹೀಗಾಗಿ ಈ ಶೈಕ್ಷಣಿಕ ಸಾಲಿನಿಂದಲೇ ಎಲ್‌ಕೆಜಿ ತರಗತಿಗೆ ದಾಖಲು ಮಾಡಿಕೊಳ್ಳಲು ಜೂನ್‌ 01ನೇ ತಾರೀಖಿಗೆ ಅನ್ವಯವಾಗುವಂತೆ ನಾಲ್ಕು (4) ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಕಳೆದ ವರ್ಷ ಅಂದರೆ 2022 ಜುಲೈ 26ರಂದು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ತುಂಬಿರಲೇಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತಾದರೂ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಇದನ್ನು 2025-26 ನೇ ಸಾಲಿನ ಶೈಕ್ಷಣಿಕ (Education News) ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದೆ.

ಹೊಸ ನಿಯಮದಂತೆ 2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ನಿಮ್ಮ ಮಗುವನ್ನು ಸೇರಿಸಿಬೇಕೆಂದರೆ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ 2025-26ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು ಕಡ್ಡಾಯ. ಹಾಗಾಗಿ, ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗ ನಿಮ್ಮ ಮಗು ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣಗೊಳಿಸಿರಬೇಕು. ಇಲ್ಲದೇ ಇದ್ದಲ್ಲಿ ಎಲ್‌ಕೆಜಿ ಅಥವಾ ಯುಕೆಜಿಯಲ್ಲಿಯೇ ಮಗು ಒಂದು ವರ್ಷ ಹೆಚ್ಚಾಗಿ ಉಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾಗಿದೆ.

ಇದನ್ನೂ ಓದಿ: LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Continue Reading

ದೇಶ

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Ramniwas Rawat: ರಾಜಭವನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಮ್‌ನಿವಾಸ್‌ ಅವರಿಗೆ ರಾಜ್ಯಪಾಲ ಮಂಗುಭಾಯಿ ಸಿ ಪಟೇಲ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ರಾಮ್‌ನಿವಾಸ್‌ ರಾವತ್‌ ಅವರು ರಾಜ್ಯ ಕೆ ಮಂತ್ರಿ ಎಂದು ಹೇಳುವ ಬದಲು ರಾಜ್ಯ ಮಂತ್ರಿ (ಸಹಾಯಕ ಸಚಿವ) ಎಂದು ಹೇಳಿದರು. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಎರಡನೇ ಬಾರಿ ಬಿಜೆಪಿ ಶಾಸಕ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

VISTARANEWS.COM


on

Ramniwas Rawat
Koo

ಭೋಪಾಲ್‌: ನಾವು ಮಾತನಾಡುವಾಗ, ಬರೆಯುವಾಗ ಬಳಸುವ ಒಂದು ಪದವು ಎಷ್ಟು ಪರಿಣಾಮ ಬೀರುತ್ತದೆಯೋ, ಬಳಸಬೇಕಾದ ಜಾಗದಲ್ಲಿ ಇನ್ನೊಂದು ಪದ ಬಳಸದಿದ್ದರೂ ಅದು ಕೂಡ ಬೇರೊಂದು ಪರಿಣಾಮವನ್ನೇ ಬೀರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದ (Madhya Pradesh Cabinet) ನೂತನ ಸಚಿವರಾಗಿ ಬಿಜೆಪಿಯ ರಾಮ್‌ನಿವಾಸ್‌ ರಾವತ್‌ (Ramniwas Rawat) ಅವರು ಪ್ರಮಾಣವಚನ ಸ್ವೀಕರಿಸುವಾಗ ಒಂದು ಪದವನ್ನು ಬಳಸದ ಕಾರಣ 15 ನಿಮಿಷಗಳಲ್ಲಿಯೇ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮೋಹನ್‌ ಯಾದವ್‌ ಅವರು ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಇದಾದ ಐದು ತಿಂಗಳ ಬಳಿಕ ಅವರು ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್‌ನಲ್ಲಿದ್ದ ರಾಮ್‌ನಿವಾಸ್‌ ರಾವತ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಸೋಮವಾರ (ಜುಲೈ 8) ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವಾಗ ಅವರು ಒಂದು ಪದವನ್ನು ಉಚ್ಚರಣೆ ಮಾಡದ ಕಾರಣ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅವರು ಬಳಸದ ಆ ಒಂದು ಪದ ಯಾವುದು?

ರಾಜಭವನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಮ್‌ನಿವಾಸ್‌ ಅವರಿಗೆ ರಾಜ್ಯಪಾಲ ಮಂಗುಭಾಯಿ ಸಿ ಪಟೇಲ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ರಾಮ್‌ನಿವಾಸ್‌ ರಾವತ್‌ ಅವರು ರಾಜ್ಯ ಕೆ ಮಂತ್ರಿ ಎಂದು ಹೇಳುವ ಬದಲು ರಾಜ್ಯ ಮಂತ್ರಿ (ಸಹಾಯಕ ಸಚಿವ) ಎಂದು ಹೇಳಿದರು. ಸಹಾಯಕ ಸಚಿವ ಎಂಬುದಾಗಿ ಅವರು ಹೇಳುತ್ತಲೇ ಕಾರ್ಯಕ್ರಮದಲ್ಲಿ ಗೊಂದಲವಾಯಿತು. ಪತ್ರಕರ್ತರು ಕೂಡ ಈ ಕುರಿತು ನಾಯಕರ ಗಮನಕ್ಕೆ ತಂದರು.

ರಾಜ್ಯ ಕೆ ಮಂತ್ರಿ ಎಂಬುದಾಗಿ ಹೇಳುವ ಬದಲು ರಾಜ್ಯ ಮಂತ್ರಿ ಎಂದು ಹೇಳಿರುವುದು ಗಮನಕ್ಕೆ ಬಂದ 15 ನಿಮಿಷದಲ್ಲಿಯೇ ರಾಮ್‌ನಿವಾಸ್‌ ರಾವತ್‌ ಅವರು ಎರಡನೇ ಬಾರಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಂದೇ ಒಂದು ಪದವನ್ನು ಬಳಸದ ಕಾರಣ ರಾಜಭವನದಲ್ಲಿ ಇಷ್ಟೆಲ್ಲ ಗೊಂದಲ ಉಂಟಾಯಿತು. ರಾಮ್‌ನಿವಾಸ್‌ ರಾವತ್‌ ಅವರ ಸೇರ್ಪಡೆಯೊಂದಿಗೆ ಮಧ್ಯಪ್ರದೇಶ ಸಚಿವರ ಸಂಖ್ಯೆ 32ಕ್ಕೆ ಏರಿಕೆಯಾಯಿತು. Words

ಇದನ್ನೂ ಓದಿ: Hemant Soren: 5 ತಿಂಗಳ ಜೈಲುವಾಸದ ಬಳಿಕ ಮತ್ತೆ ಜಾರ್ಖಂಡ್‌ ಸಿಎಂ ಆಗಿ ಹೇಮಂತ್‌ ಸೊರೆನ್‌ ಪ್ರಮಾಣವಚನ!

Continue Reading

ಕ್ರೀಡೆ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

Paris Olympics 2024: ವೈಯಕ್ತಿಕ ಕಾರಣ ನೀಡಿ 2 ತಿಂಗಳ ಹಿಂದೆ ಮೇರಿ ಕೋಮ್ ಅವರು ಷೆಫ್ ಡಿ ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಈ ಸ್ಥಾನಕ್ಕೆ 2012 ಲಂಡನ್​ ಒಲಿಂಪಿಕ್ಸ್​ ಟೂರ್ನಿಯಲ್ಲಿ 10 ಮೀ. ಏರ್​ ರೈಫಲ್​ ಸ್ಫರ್ದೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಗಗನ್​ ನಾರಂಗ್​ ಅವರನ್ನು ಆಯ್ಕೆ ಮಾಡಲಾಗಿದೆ

VISTARANEWS.COM


on

Paris Olympics 2024
Koo

ನವದೆಹಲಿ: ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಸ್ಟಾರ್​ ಶಟ್ಲರ್​, ಪಿ.ವಿ.ಸಿಂಧು(PV Sindhu) ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್(Sharath Kamal) ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್(Paris Olympics 2024) ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಮಾಜಿ ಒಲಿಂಪಿಕ್​ ಪದಕ ವಿಜೇತ ಶೂಟರ್​ ಗಗನ್​ ನಾರಂಗ್​ ಅವರನ್ನು ತಂಡದ ಷೆಫ್ ಡಿ ಮಿಷನ್ ಆಗಿ ಸೋಮವಾರ ನೇಮಿಸಲಾಗಿದೆ.

ವೈಯಕ್ತಿಕ ಕಾರಣ ನೀಡಿ 2 ತಿಂಗಳ ಹಿಂದೆ ಮೇರಿ ಕೋಮ್ ಅವರು ಷೆಫ್ ಡಿ ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಈ ಸ್ಥಾನಕ್ಕೆ 2012 ಲಂಡನ್​ ಒಲಿಂಪಿಕ್ಸ್​ ಟೂರ್ನಿಯಲ್ಲಿ 10 ಮೀ. ಏರ್​ ರೈಫಲ್​ ಸ್ಫರ್ದೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಗಗನ್​ ನಾರಂಗ್​ ಅವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ನಾರಂಗ್ ಉಪ ಸಿಡಿಎಂ ಸ್ಥಾನ ಹೊಂದಿದ್ದರು. ಬಡ್ತಿ ನೀಡುವ ಮೂಲಕ ಷೆಫ್ ಡಿ ಮಿಷನ್ ನೀಡಲಾಗಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷೆ ಪಿಟಿ ಉಷಾ ಈ ವಿಚಾರವನ್ನು ಅಧಿಕೃತ ಪ್ರಕಟನೆ ಮೂಲಕ ತಿಳಿಸಿದ್ದಾರೆ.

“ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳೆಯಾಗಿರುವ ಸಿಂಧು ಅವರು ಆರಂಭಿಕ ಸಮಾರಂಭದಲ್ಲಿ ಶರತ್ ಕಮಲ್ ಅವರೊಂದಿಗೆ ಮಹಿಳಾ ಧ್ವಜಧಾರಿಯಾಗಿ ಘೋಷಿಸಲು ಸಂತೋಷಪಡುತ್ತೇನೆ. ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಲು ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ನನಗೆ ವಿಶ್ವಾಸವಿದೆ”ಎಂದು ಪಿಟಿ ಉಷಾ ಹೇಳಿದ್ದಾರೆ.

ಇದನ್ನೂ ಓದಿ Paris Olympics 2024: ಸರ್ಕಾರಿ, ಖಾಸಗಿ ವಲಯದ ಪಾಲುದಾರಿಕೆಯಿಂದ ಕ್ರೀಡೆಗಳ ಭವಿಷ್ಯ ನಿರ್ಧಾರ: ಪಾರ್ಥ್ ಜಿಂದಾಲ್

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 30 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

Continue Reading

ದೇಶ

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Union Budget 2024: ಬಜೆಟ್‌ಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ನೌಕರರಿಗೆ ತೆರಿಗೆ ವಿನಾಯಿತಿ, ಬಡವರು, ಮಧ್ಯಮ ವರ್ಗದವರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗೆಯೇ, ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗಳ ಸಂಖ್ಯೆ ಹಾಗೂ ವಿಮಾ ಮೊತ್ತವನ್ನು 10 ಲಕ್ಷ ರೂ.ಗೆ ಏರಿಸುವ ಕುರಿತು ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರು ಕೇಂದ್ರ ಸರ್ಕಾರಕ್ಕೆ ಪ್ರಮುಖ 7 ಬೇಡಿಕೆಗಳನ್ನು ಇಟ್ಟಿದ್ದಾರೆ.

VISTARANEWS.COM


on

Union Budget 2024
Koo

ನವದೆಹಲಿ: ದೇಶದ ಜನ ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಕೇಂದ್ರ ಬಜೆಟ್‌ಗೆ (Union Budget 2024) ದಿನಾಂಕ ನಿಗದಿಯಾಗಿದೆ. ಜುಲೈ 22ರಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ (Union Budget Session) ನಡೆಯಲಿದ್ದು, ಜುಲೈ 23ರಂದು ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ದಾಖಲೆಯ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರ ಒಕ್ಕೂಟವು (Government Union) 8ನೇ ವೇತನ ಆಯೋಗ ಜಾರಿ ಸೇರಿ ಕೇಂದ್ರ ಸರ್ಕಾರಕ್ಕೆ 7 ಬೇಡಿಕೆಗಳನ್ನು ಇಟ್ಟಿದ್ದಾರೆ. ಸಂಪುಟ ಕಾರ್ಯದರ್ಶಿಗೆ ನೌಕರರ ಒಕ್ಕೂಟವು 7 ಬೇಡಿಕೆಗಳನ್ನು ಸಲ್ಲಿಸಿದ್ದು, ಅವುಗಳ ಕುರಿತ ಮಾಹಿತಿ ಇಲ್ಲಿದೆ.

ನೌಕರರ 7 ಬೇಡಿಕೆಗಳು

  1. ಕೂಡಲೇ 8ನೇ ವೇತನ ಆಯೋಗ ಜಾರಿಗೊಳಿಸಬೇಕು
  2. ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು
  3. ಕೇಂದ್ರ ನೌಕರರಿಗೆ ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆ ನೀಡಬೇಕು
  4. ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಇರುವ ಶೇ.5ರಷ್ಟು ಗರಿಷ್ಠ ಮಿತಿ ತೆಗೆದು, ನಿಧನರಾದ ಎಲ್ಲ ನೌಕರರ ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು
  5. ಕೇಂದ್ರ ಸರ್ಕಾರದ ಎಲ್ಲ ಬಾಕಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಬೇಕು
  6. ಸಂಘಟನೆಗಳ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ದೃಢಪಡಿಸುವುದು
  7. ಒಕ್ಕೂಟಗಳಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವುದು
Reservation in outsourcing

ಆಯುಷ್ಮಾನ್‌ ಭಾರತ್‌ ವಿಮಾ ಮೊತ್ತ ದ್ವಿಗುಣ?

ದೇಶದ ಸುಮಾರು 50 ಕೋಟಿ ಬಡವರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು, 70 ವರ್ಷ ದಾಟಿದ ಎಲ್ಲರಿಗೂ ಆಯುಷ್ಮಾನ್‌ ಭಾರತ್‌ ಯೋಜನೆಯ ಸೌಲಭ್ಯವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಜತೆಗೆ, ವಿಮಾ ಮೊತ್ತವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿಕೆ ಮಾಡುವ ಕುರಿತು ಕೂಡ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,076 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಲಿದೆ ಎಂದು ತಿಳಿದುಬಂದಿದೆ.

ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ, ಗ್ರಾಮೀಣಾಭಿವೃದ್ಧಿಗೆ ಒತ್ತು-ಅರ್ಥಶಾಸ್ತ್ರಜ್ಞರು ಹೇಳೋದೇನು?

Continue Reading
Advertisement
LKG UKG
ಪ್ರಮುಖ ಸುದ್ದಿ11 mins ago

LKG, UKG: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ; ಇಲ್ಲಿದೆ ಹೊಸ ಅಪ್‌ಡೇಟ್

IND vs SL
ಕ್ರೀಡೆ31 mins ago

IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್​-ಕೊಹ್ಲಿಗೆ ವಿಶ್ರಾಂತಿ

Ramniwas Rawat
ದೇಶ1 hour ago

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Paris Olympics 2024
ಕ್ರೀಡೆ2 hours ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

MLA Satish Sail visited the flood affected areas of Karwar taluk
ಉತ್ತರ ಕನ್ನಡ2 hours ago

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Union Budget 2024
ದೇಶ2 hours ago

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Dengue Cases
ಕರ್ನಾಟಕ2 hours ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ2 hours ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Channappa Gowda Mosambi elected as new District President of Akhila bharata Veerashaiva Mahasabha
ಯಾದಗಿರಿ3 hours ago

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Maharashtra Rain
Latest3 hours ago

Maharashtra Rain: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ರಾಯಗಢ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರಾಣ ಸಂಕಟ; ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ6 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ8 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ11 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು12 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌