Sabarimala News | ಜೀವರಾಶಿಗಳ ಒಳಿತಿಗಾಗಿ ಅಯ್ಯಪ್ಪಸ್ವಾಮಿ ಭಕ್ತನ ವಿಶೇಷ ವ್ರತ; ವೈಷ್ಣೋದೇವಿ ಮಂದಿರದಿಂದ ಶಬರಿಮಲೆಗೆ ಪಾದಯಾತ್ರೆ - Vistara News

ಉತ್ತರ ಕನ್ನಡ

Sabarimala News | ಜೀವರಾಶಿಗಳ ಒಳಿತಿಗಾಗಿ ಅಯ್ಯಪ್ಪಸ್ವಾಮಿ ಭಕ್ತನ ವಿಶೇಷ ವ್ರತ; ವೈಷ್ಣೋದೇವಿ ಮಂದಿರದಿಂದ ಶಬರಿಮಲೆಗೆ ಪಾದಯಾತ್ರೆ

ಮಂಗಳೂರಿನ ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದಿಂದ ಕೇರಳದ ಶಬರಿಮಲೆಗೆ ಪಾದಯಾತ್ರೆ ನಡೆಸಿದ್ದಾರೆ.

VISTARANEWS.COM


on

ಅಯ್ಯಪ್ಪಸ್ವಾಮಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಲ್ಲಾಪುರ: ಕೇರಳದ ಪುಣ್ಯ ಕ್ಷೇತ್ರವಾಗಿರುವ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೋಗುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬರು ಅಯ್ಯಪ್ಪ ಭಕ್ತರು ಮಂಗಳೂರಿನಿಂದ ವೈಷ್ಣೋದೇವಿಗೆ ಹೋಗಿ ಅಲ್ಲಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಪ್ರಯಾಣಿಸುತ್ತಿದ್ದಾರೆ. ಮಂಗಳೂರಿನ ಮಂಗಳೂರಿನ ಪ್ರಭಾತ್ ಕುಮಾರ್ ಕರಿಯಪ್ಪ ಎಂಬವರೇ ಈ ಶ್ರದ್ಧಾಳು ಭಕ್ತ.

ಕಳೆದ ಆರು ವರ್ಷದಿಂದ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳುವ ಅವರು ಈ ಬಾರಿ ಜಮ್ಮು-ಕಾಶ್ಮೀರದಿಂದ ಪಾದಯಾತ್ರೆಯಲ್ಲಿ ಸಾಗುತ್ತಿರುವುದು ವಿಶೇಷವಾಗಿದೆ. ಕಳೆದ ಆ. 24ರಂದು ಮಂಗಳೂರಿನಲ್ಲಿ ಮಾಲಾಧಾರಣೆ ಮಾಡಿ, ಆ.28 ರಂದು ವಿಮಾನದ ಮೂಲಕ ಜಮ್ಮು ಕಾಶ್ಮೀರ ಪ್ರಯಾಣ ಬೆಳೆಸಿದ್ದರು ಪ್ರಭಾತ್‌ ಕುಮಾರ್‌. ಅಲ್ಲಿ ಮಾತಾ ವೈಷ್ಣೋದೇವಿಯ ದರ್ಶನ ಮಾಡಿ ಆ. 31ರಂದು ಇರುಮುಡಿ ಕಟ್ಟಿಕೊಂಡು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಈವರೆಗೆ 96 ದಿನಗಳ ಪಾದಯಾತ್ರೆ ಮಾಡುತ್ತ ಸುಮಾರು 3,200ಕಿ.ಮೀ ಕ್ರಮಿಸಿ, ಗುರುವಾರ ಯಲ್ಲಾಪುರ ಪಟ್ಟಣಕ್ಕೆ ಬಂದು ತಲುಪಿದ್ದಾರೆ.

ಅಯ್ಯಪ್ಪಸ್ವಾಮಿ

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾತ್‌ ಕುಮಾರ್‌, ಭೂ ಮಂಡಲದ ಸಕಲ ಜೀವರಾಶಿಗಳ ಸುಖ-ಶಾಂತಿಗಾಗಿ ಶಬರಿಮಲೆ ಯಾತ್ರೆ ಮಾಡುತ್ತಿದ್ದೇನೆ. ಈ ಹಿಂದೆ ಐದು ಬಾರಿ ನಾನಾ ಪುಣ್ಯಕ್ಷೇತ್ರಗಳಿಂದ ಪಾದ ಯಾತ್ರೆ ಆರಂಭ ಮಾಡಿ ಶಬರಿಮಲೆಗೆ ತೆರಳಿದ್ದು, ಈ ಬಾರಿ ದೂರದ ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದಿಂದ ಶಬರಿಮಲೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದೇನೆ. ಮಂಗಳೂರಿನ ಶಿವಪದವು ಪಂಚಮುಖಿ ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಚರಣ್ ಮಹಾರಾಜರ ಮಾರ್ಗದರ್ಶನದಲ್ಲಿ ಈ ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿದರು.

ಪ್ರತಿ ನಿತ್ಯ 30 ಕಿ.ಮೀ ಯಾತ್ರೆ
ಮಂಗಳೂರು, ಕಾಸರಗೋಡು ಮಾರ್ಗವಾಗಿ ಸುಮಾರು 4000ಕಿ.ಮೀ ಗಳನ್ನು ಕ್ರಮಿಸಿ ಜ.10ರಂದು ಶಬರಿಮಲೆ ತಲುಪಿ ಮಣಿಕಂಠನ ದರ್ಶನ ಪಡೆಯುವ ಮೂಲಕ ಪಾದಯಾತ್ರೆ ಸಂಪನ್ನವಾಗಲಿದೆ ಎಂದರು. ಪ್ರತಿ ನಿತ್ಯ 25 ರಿಂದ 30 ಕಿ.ಮೀ ಸಾಗುವ ಈ ಯಾತ್ರೆ ಕಷ್ಟಕರವಾಗಿದ್ದರು, ಒಂದು ರೀತಿಯ ಮನಃಶಾಂತಿಯನ್ನು ನೀಡಿದೆ. ದಾರಿಯುದ್ದಕ್ಕೂ ಜನರ ಸಹಾಯ, ಕಾಣದ ಕೈಗಳಿಂದ ದಾನ ಪಡೆಯುತ್ತ ಸಾಗುತ್ತಿರುವ ಪಾದಯಾತ್ರೆಯನ್ನು ಜೀವನದಲ್ಲಿ ಮರೆಯಲು ಅಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ | ಕೃಷ್ಣ ಮಠದಲ್ಲಿ ಪರ್ಯಾಯಕ್ಕೆ ಬಾಳೆ ಮುಹೂರ್ತ; ಶಿಷ್ಯನ‌ ಜತೆಯಾಗಿ ಪರ್ಯಾಯ ಮಾಡುವೆ ಎಂದ ಪುತ್ತಿಗೆ ಶ್ರೀ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka Weather Forecast : ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿಯೊಂದಿಗೆ (Heavy Rain) ಮಳೆಯಾಗಲಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಹೈ ಅಲರ್ಟ್‌ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ಕರ್ನಾಟಕ ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕವಾದ ಮಧ್ಯಮದಿಂದ ಭಾರಿ ಮಳೆಯಾಗುವ (Rain News) ನಿರೀಕ್ಷೆಯಿದೆ. ಪ್ರತ್ಯೇಕದಿಂದ ಚದುರಿದ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಅತ್ಯಂತ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಇನ್ನೂ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿಯೊಂದಿಗೆ (Heavy Rain) ಮಳೆಯಾಗಲಿದೆ.

ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾದರೆ, ಉತ್ತರ ಒಳನಾಡಿನ ಬೆಳಗಾವಿ ಮತ್ತು ಗದಗದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸಾಧಾರಣದಿಂದ ಶುರುವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ರಾಜಧಾನಿ ಬೆಂಗಳೂರಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಸುಮಾರು 31 ಮತ್ತು 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

9 ಜಿಲ್ಲೆಗಳಿಗೆ ಹೈ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗುವುದರ ಜತೆಗೆ ಗಾಳಿ ವೇಗವು 30-40 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಕೊಡಗು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ ಮತ್ತು ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ . ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Health Tips: ನಮ್ಮ ದೇಹಕ್ಕೆ ಪ್ರೊಟೀನ್‌ ಪುಷ್ಟಿ ನೀಡಲು ಯಾವ ಮೊಳಕೆ ಕಾಳುಗಳು ಸೂಕ್ತ?

ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌!

ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌! (Dogs Monsoon Fashion) ಅರರೆ., ಇದೇನಿದು ಶ್ವಾನಗಳಿಗೂ ಮಳೆಗಾಲದ ಫ್ಯಾಷನ್‌ ಎಂದು ಹುಬ್ಬೇರಿಸಬಹುದು. ಹೌದು, ಇದೀಗ ಶ್ವಾನಗಳ ಮಾನ್ಸೂನ್‌ ಡ್ರೆಸ್‌ ಹಾಗೂ ರೈನ್‌ಕೋಟ್‌, ಮತ್ತಿತರೇ ಆಕ್ಸೆಸರೀಸ್‌ ಪೆಟ್‌ ಲೋಕದಲ್ಲಿ ಕಾಲಿಟ್ಟಿವೆ. ಆಯಾ ಜಾತಿಯ ಮುದ್ದು ಶ್ವಾನಗಳಿಗೆ ಹೊಂದುವಂತಹ, ನಾನಾ ವೆರೈಟಿ ಮಾನ್ಸೂನ್‌ ಡ್ರೆಸ್‌ಗಳು ಹಾಗೂ ವಾಟರ್‌ಪ್ರೂಫ್‌ ರೈನ್‌ಕೋಟ್‌ಗಳು ನಾಯಿಮರಿಗಳನ್ನು ಅಲಂಕರಿಸುತ್ತಿವೆ.

Dogs Monsoon Fashion

ಮುದ್ದು ಶ್ವಾನಗಳಿಗೂ ಮಾನ್ಸೂನ್‌ ಫ್ಯಾಷನ್‌

“ಇಂದು ಕಾಲ ಬದಲಾಗಿದೆ. ಮನೆಯಲ್ಲಿ ಮುದ್ದು ಶ್ವಾನಗಳಿಗೂ ಮಕ್ಕಳ ಸ್ಥಾನ ಮಾನ ದೊರಕಿದೆ. ಪ್ರತಿಯೊಬ್ಬರು ಅವರು ಸಾಕಿದ ನಾಯಿಮರಿಗಳನ್ನು ಯಾವ ಮಟ್ಟಿಗೆ ಇಷ್ಟ ಪಡುತ್ತಾರೆಂದರೇ, ಅವಕ್ಕೆ ಇತ್ತೀಚೆಗೆ ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಕೂಡ ಮಾಡುತ್ತಾರೆ. ಇನ್ನು, ಹಿರಿಯರು ಕಿರಿಯರೆನ್ನದೇ ಎಲ್ಲರೂ ವಾಕಿಂಗ್‌ ಹಾಗೂ ಜಾಕಿಂಗ್‌ ಸಮಯದಲ್ಲೂ ಶ್ವಾನಗಳನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಪೆಟ್‌ ಲೋಕದಲ್ಲೂ ನಾನಾ ಬಗೆಯ ಆಕ್ಸೆಸರೀಸ್‌ಗಳು ಹಾಗೂ ಉಡುಗೆಗಳು ಬಂದಿವೆ. ಆಯಾ ಸೀಸನ್‌ಗೆ ಮ್ಯಾಚ್‌ ಆಗುವಂತೆ ದೊರಕುತ್ತಿವೆ. ಅವುಗಳಲ್ಲಿ ಇದೀಗ ಮಾನ್ಸೂನ್‌ ಸೀಸನ್‌ಗೆ ಹೊಂದುವಂತಹ ಫ್ಯಾಷನ್‌ ಉಡುಗೆ ಹಾಗೂ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ” ಎನ್ನುತ್ತಾರೆ ಪೆಟ್‌ ಸ್ಪಾನ ಸ್ಟೈಲಿಂಗ್‌ ಎಕ್ಸ್‌ಫರ್ಟ್ ಜಾಕಿ. ಅವರ ಪ್ರಕಾರ, ಶ್ವಾನಗಳು ಇದೀಗ ಸ್ಟೈಲಿಶ್‌ ಆಗಿ ಕಾಣಿಸಲು ಈ ಆಕ್ಸೆಸರೀಸ್‌ಗಳು ಸಹಕರಿಸುತ್ತಿವೆಯಂತೆ.

Dogs Monsoon Fashion

ಮಾನ್ಸೂನ್‌ಗೆ ಮ್ಯಾಚಿಂಗ್‌

ಶ್ವಾನಗಳಿಗೆ ಬಂದಿರುವ ಕಲರ್‌ಫುಲ್‌ ಉಡುಗೆ ಹಾಗೂ ರೈನ್‌ಕೋಟ್‌ ಮತ್ತು ಅವುಗಳ ಕಾಲಿನ ಪಾದಗಳಿಗೆ ಹಾಕಬಹುದಾದ ಪೆಟ್‌ ವೆಲ್ಲೈಸ್‌, ರೈನ್‌ ಬೂಟ್ಸ್ ಹಾಗೂ ಟವೆಲ್‌ ಮತ್ತು ವೈಪ್ಸ್ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

Dogs Monsoon Fashion

ಕಲರ್‌ಫುಲ್‌ ಡಾಗ್ಗಿ ರೈನ್‌ ಕೋಟ್ಸ್

ಪಿರಿ ಪಿರಿ ಸಣ್ಣ ಮಳೆಯಲ್ಲೂ ಡಾಗ್ಗಿಯಿಲ್ಲದೇ ವಾಕ್‌ ಮಾಡಲಾಗುವುದಿಲ್ಲ ಎನ್ನುವ ಶ್ವಾನಗಳ ಪೋಷಕರು, ಈ ಮಾನ್ಸೂನ್‌ ಡಾಗ್‌ ರೈನ್‌ಕೋಟ್ಸ್‌ಗಳ ಖರೀದಿ ಮಾಡತೊಡಗಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಸಿಂಥಟಿಕ್‌, ಪಾಲಿಸ್ಟರ್‌ ಸೇರಿದಂತೆ ವಾಟರ್‌ ಪ್ರೂಫ್‌ ಫ್ಯಾಬ್ರಿಕ್‌ನಲ್ಲಿ ಇವು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ.

Dogs Monsoon Fashion

ಪೆಟ್ಸ್ ರೈನ್‌ ಬೂಟ್ಸ್

ನಾಯಿ ಮರಿಗಳಿಗೆ ರಸ್ತೆಯ ಹಾಗೂ ನೆಲದ ಕೊಚ್ಚೆ, ಕೆಸರು ಹತ್ತದಂತೆ ಕಾಪಾಡಬಹುದಾದ ಪುಟ್ಟ ಪುಟ್ಟ ರೈನ್‌ ಬೂಟ್ಸ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಪೆಟ್‌ ಶಾಪ್‌ಗಳಿಗೆ ಬಂದಿವೆ. ಇನ್ನು, ಡಾಗ್‌ ಟವೆಲ್ಸ್ ಹಾಗೂ ವೈಪ್ಸ್ ಸೇರಿದಂತೆ, ಬೋ ಹಾಗೂ ಬೆಲ್ಟ್‌ಗಳು ಕೂಡ ಪೆಟ್‌ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ವೀಕೆಂಡ್‌ ಪ್ರಿಯರೇ ಎಚ್ಚರ; ಭಾನುವಾರ ಸುರಿಯಲಿದೆ ಮಳೆ ಧಾರಾಕಾರ

Karnataka Weather Forecast : ಜೂನ್‌ 23ಕ್ಕೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Rain News) ನೀಡಿದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಜೂನ್‌ 26ರವರೆಗೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಭಾನುವಾರದಂದು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಮನಗರ, ತುಮಕೂರು, ವಿಜಯನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್‌, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಕೆಲವು ಸ್ಥಳದಲ್ಲಿ ಗುಡುಗು ಸಹಿತ ಭಾರಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ.

ಬೆಂಗಳೂರಿಗೆ ಲಘು ಮಳೆ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕನಿಷ್ಟ ತಾಪಮಾನ 21 ಹಾಗೂ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇದನ್ನೂ ಓದಿ:

ಮಳೆ ಬಂದರೆ ಸವಾರರಿಗೆ ಆತಂಕ

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಮಳೆ ಬಂದರೆ ಸಾಕು ಸವಾರರು ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಣಗಿದ ಮರಗಳು ಬೀಳುವ ಆತಂಕದಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.

ಗಾಳಿ ಮಳೆಯಿಂದಾಗಿ ಆನೇಕ ಕಡೆ ಮರಗಳು ಧರೆಗುರುಳಿದ್ದವು. ಸಾಕಷ್ಟು ಕಡೆ ಅನಾಹುತಗಳು ಸಂಭವಿಸಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಒಣಗಿದ ಮರಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿವೆ. ಹೆಬ್ಬಗೋಡಿ ನಗರಸಭೆ ಮತ್ತು ಬೊಮ್ಮಸಂದ್ರ ಕೈಗಾರಿಕಾ ಸಂಘಕ್ಕೆ ಒಳಪಡುವ ಈ ರಸ್ತೆಯಲ್ಲಿ ಎಂಟಿಆರ್‌, ಸಾಯಿ ವಿಶ್ರಾಂ ಹೋಟೆಲ್ ಮತ್ತು ಡೆಲ್ಟಾ ಕಂಪನಿ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳಿವೆ.

ನಿತ್ಯ ಸಾವಿರಾರು ಸಂಖ್ಯೆಯ ಕಾರ್ಮಿಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯುದ್ದಕ್ಕೂ ಒಣಗಿದ ಮರಗಳು ಮತ್ತು ಕೊಂಬೆಗಳು ಬೀಳುವ ಆತಂಕದಿಂದಾಗಿ ವಾಹನ ಸವಾರರು, ಪಾದಚಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕಳದೆರಡು ವರ್ಷಗಳ ಹಿಂದೆ ರಸ್ತೆಯಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡಿದ್ದರು. ಇಷ್ಟಾದರೂ ತಲೆಕೇಡಿಸಿಕೊಳ್ಳದ ಅಧಿಕಾರಿಗಳು, ಒಣಗಿದ ಮರಗಳನ್ನು ತೆರವು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿಕ್ಷಣ

2nd PUC Exam 3: ಸೋಮವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ-3 ಶುರು; ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಉಚಿತ

2nd PUC Exam 3: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ (Free Bus) ಪರೀಕ್ಷಾ ಕೇಂದ್ರಕ್ಕೆ ತೆರಳಬಹುದಾಗಿದೆ. ಈ ಸಂಬಂಧ ನಿಗಮವು ಆದೇಶ ಹೊರಡಿಸಿದೆ.

VISTARANEWS.COM


on

By

2nd Puc Exam 3
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಜೂನ್‌ 24ರಿಂದ ಜುಲೈ 5ರವರೆಗೆ ದ್ವಿತೀಯ ಪಿಯುಸಿ (2nd PUC Exam 3) 3ನೇ ಪೂರಕ ಪರೀಕ್ಷೆಯು (Education News) ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಂದು ಸರಕಾರಿ ಬಸ್‌ನಲ್ಲಿ ಉಚಿತವಾಗಿ (Free Bus) ಪ್ರಯಾಣಿಸಲು ಕೆಎಸ್‌ಆರ್‌ಟಿಸಿ (KSRTC) ನಿಗಮ ಅನುಮತಿಸಿದೆ.

ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿಯೂ ಬೇರೆ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿದೆ. ಹೀಗಾಗಿ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿನಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಓಡಾಡಲು ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ (2nd PUC Exam 2023) ಅನುವು ಮಾಡಿಕೊಡಲಾಗಿದೆ.

ಪರೀಕ್ಷೆ ನಡೆಯುವ ದಿನದಂದು ವಿದ್ಯಾರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ತೋರಿಸಿ ಪ್ರಯಾಣಿಸಬಹುದಾಗಿದೆ. ನಿಗಮದ ನಗರ ಹಾಗೂ ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಬಸ್‌ಗಳು ತಾವು ಹೋಗುವ ಮಾರ್ಗದಲ್ಲಿ ಪರೀಕ್ಷಾ ಕೇಂದ್ರ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಕೋರಿಕೆ ನಿಲುಗಡೆ ನೀಡಲು ಸೂಚಿಸಿದೆ.

ಈ ಸಂಬಂಧ ನಿಗಮದ ಎಲ್ಲ ಚಾಲಕ/ನಿರ್ವಾಹಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ: Accident News : ಕಂಟಕವಾದ ಕಾರ ಹುಣ್ಣಿಮೆ ಕರಿ ದಿನ; ಎತ್ತು ಬೆದರಿಸಲು ಹೋಗಿ ಮುಗ್ಗರಿಸಿ ಬಿದ್ದ ಜನ್ರು

ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ ಹೀಗಿದೆ

ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಒಟ್ಟು 75, 995 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಕಲಾ ವಿಭಾಗದಿಂದ 30, 811 ಹಾಗೂ ವಿಜ್ಞಾನ ವಿಭಾಗದಲ್ಲಿ 19,783, ವಾಣಿಜ್ಯ ವಿಭಾಗದಿಂದ 25,401 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ರಾಜ್ಯಾದ್ಯಂತ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನೂ ಸಿಸಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ವಿಚಕ್ಷಣದಳಗಳನ್ನು ರಚಿಸಲಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಹಾಗೂ ಮಧ್ಯಾಹ್ನ 2:15ರಿಂದ 4:30 ಪರೀಕ್ಷೆಯ ಸಮಯವಾಗಿದೆ. ಯಾವ್ಯಾವ ದಿನ ಯಾವ ವಿಷಯಕ್ಕೆ ಪರೀಕ್ಷೆ ನಡೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.

ದಿನಾಂಕ- ವಿಷಯ
ಜೂನ್‌ 24- ಕನ್ನಡ, ಅರೇಬಿಕ್
ಜೂನ್‌ 25- ಇಂಗ್ಲೀಷ್‌
ಜೂನ್‌ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಜೂನ್‌ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಜೂನ್‌ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಜೂನ್‌ 29 – ಇತಿಹಾಸ, ಭೌತಶಾಸ್ತ್ರ
ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
ಜುಲೈ 4- ಹಿಂದಿ
ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ,ರೀಟೈಲ್‌, ಆಟೋ ಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather :‌ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ 8 ಜಿಲ್ಲೆಗಳಲ್ಲಿ ರಣಮಳೆ ಫಿಕ್ಸ್!

Karnataka Weather Forecast : ಇಂದು ಕರಾವಳಿ, ಮಲೆನಾಡು ಸುತ್ತಮುತ್ತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಹೀಗಾಗಿ ಹಲವು ಜಿಲ್ಲೆಗಳಿಗೆ ರೆಡ್‌, ಆರೆಂಜ್‌, ಯೆಲ್ಲೋ ಅಲರ್ಟ್‌ ನೀಡಲಾಗಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ಜೂ.22ರಂದು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ನಿರೀಕ್ಷೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ (Karnataka Weather Forecast) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಪ್ರತ್ಯೇಕವಾಗಿ ಸಾಕಷ್ಟು ವ್ಯಾಪಕವಾದ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಮಧ್ಯಮ ಮಳೆಯಾಗುವ ನಿರೀಕ್ಷೆಯಿದ್ದು, ಬೆಳಗಾವಿಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇನ್ನೂ ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಪ್ರತ್ಯೇಕವಾಗಿ ಚದುರಿದ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಹಗುರ ಮಳೆ

ಬೆಂಗಳೂರು ಸುತ್ತಮುತ್ತ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಈ ಜಿಲ್ಲೆಗಳಿಗೆ ರೆಡ್‌, ಆರೆಂಜ್‌, ಯೆಲ್ಲೋ ಅಲರ್ಟ್‌

ಗುಡುಗು, ಮಿಂಚು ಸಹಿತ ಭಾರೀ ಮಳೆಯೊಂದಿಗೆ ಗಾಳಿಯು 30-40 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಐಎಂಡಿ ರೆಡ್ ಹಾಗೂ ಆರೆಂಜ್‌ ಅಲರ್ಟ್ ಘೋಷಿಸಿದೆ. ಬೆಳಗಾವಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕರಾವಳಿಯಲ್ಲಿ ಬಿರುಗಾಳಿ ಬೀಸುವ ಕಾರಣಕ್ಕೆ ಜೂನ್‌ 24ರವರೆಗೆ ಮೀನುಗಾರಿಕೆಗೆ ಹೋಗದಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Lokayukta Raid : ಹಲಸಿನ ಮರ ತೆರವಿಗೂ ಕೊಡಬೇಕು ಗರಿ ಗರಿ ನೋಟು; ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಲಂಚಕೋರರು

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಸೀಬೆಕಾಯಿಗೆ ಸಾಮಾನ್ಯವಾಗಿ ಎರಡು ಋತುಗಳಿವೆ. ಅಂದರೆ ವರ್ಷಕ್ಕೆರಡು ಬಾರಿ ಇದು ದೊರೆಯುತ್ತದೆ. ಮಕ್ಕಳಿಂದ ವೃದ್ಧರಾದಿಯಾಗಿ ಕರೆದು ಕೊಟ್ಟರೂ, ಸೀಬೆಯನ್ನು ಕದ್ದು ತಿನ್ನುವುದೇ ಪ್ರಿಯವಾದ್ದರಿಂದ ಹೀಗೆ ಒಂದಕ್ಕಿಂತ ಹೆಚ್ಚಿನ ಬೆಳೆಗಳನ್ನು ಸೃಷ್ಟಿಯೇ ನೀಡಿರಬಹುದು ಇದಕ್ಕೆ. ಎಳೆ ಮಿಡಿ, ಕಾಯಿ, ಹಣ್ಣು ಮುಂತಾದ ಯಾವುದೇ ಭೇದವಿಲ್ಲದೆ ಇದನ್ನು ಖಾಲಿ ಮಾಡುವವರಿದ್ದಾರೆ. ಬಾಯಿ ರುಚಿಗಷ್ಟೇ ಇದನ್ನು ತಿನ್ನುವುದಲ್ಲ, ಸೀಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ (Benefits Of Eating Guava) ಪ್ರಯೋಜನಗಳಿವೆ.

Crop woman with halves of guava

ಸತ್ವಗಳು

ಇದರಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ಬಿಳಿ ಪೇರಲೆ, ಹಳದಿ ಬಣ್ಣದ್ದು, ಕೆಂಪು ಬಣ್ಣದ್ದು- ಹೀಗೆ ಯಾವುದೇ ಆದರೂ ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ.

guava fruits

ವಿಟಮಿನ್‌ ಸಿ

ಒಂದು ದೊಡ್ಡ ಸೀಬೆ ಹಣ್ಣಿನಲ್ಲಿ ಎರಡು ಕಿತ್ತಳೆ ಹಣ್ಣುಗಳಲ್ಲಿ ಇರುವಷ್ಟು ಸಿ ಜೀವಸತ್ವ ಇದೆಯೆಂಬುದು ಗೊತ್ತೇ? ಇದರಿಂದ ರೋಗ ನಿರೋಧಕ ಶಕ್ತಿ ಬಲವಾಗುವುದಲ್ಲದೆ, ಕಬ್ಬಿಣದ ಅಂಶ ದೇಹದೊಳಗೆ ಚೆನ್ನಾಗಿ ಹೀರಲ್ಪಡುತ್ತದೆ. ಮಾತ್ರವಲ್ಲ, ಕೊಲಾಜಿನ್‌ ಉತ್ಪಾದನೆ ಹೆಚ್ಚಾಗಿ, ಕೂದಲು ಮತ್ತು ಚರ್ಮದ ಆರೋಗ್ಯವೂ ಸುಧಾರಿಸುತ್ತದೆ.

heart attack and Diabetes control

ಮಧುಮೇಹಿಗಳಿಗೆ ಸೂಕ್ತ

ಇದು ಹಣ್ಣಾದಾಗ ರುಚಿ ಸಿಹಿಯೇ ಇದ್ದರೂ, ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಪೇರಲೆಯ ಎಲೆಯ ಕಷಾಯಗಳನ್ನು ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಳಸುವ ಪದ್ಧತಿ ಪರಂಪರಾಗತ ಔಷಧಕ್ರಮದಲ್ಲಿ ಇದೆ. ನಾರಿನಂಶ ಹೇರಳವಾಗಿ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಜೊತೆಗೆ, ಗ್ಲೂಕೋಸ್‌ ಅಂಶ ದಿಢೀರನೆ ರಕ್ತ ಸೇರದಂತೆ ತಡೆಯುವ ಗುಣವಿದೆ ಇದಕ್ಕೆ.

fresh guava fruit

ಕ್ಯಾಲರಿ ಕಡಿಮೆ

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.

Guava smoothie

ಸೀಬೆ ಸ್ಮೂದಿ

ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ.

ಸೀಬೆ ಸಲಾಡ್

ತೂಕ ಇಳಿಸುವವರಿಗೆ ಸಲಾಡ್‌ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್‌, ಹಣ್ಣುಗಳ ಸಲಾಡ್‌ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Empty Stomach Foods
ಆರೋಗ್ಯ30 mins ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ60 mins ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ1 hour ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ2 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ2 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ7 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

T20 world cup 2024
ಪ್ರಮುಖ ಸುದ್ದಿ8 hours ago

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

Mangalya chain was stolen by pretending to be a police in Shira
ಕರ್ನಾಟಕ8 hours ago

Theft Case: ಶಿರಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಕಳವು!

Union Minister Pralhad Joshi statement
ಕರ್ನಾಟಕ8 hours ago

Pralhad Joshi: ಕೇವಲ ಶೇ.0.1 ಮತ ಗಳಿಕೆ ಹೆಚ್ವಿದ್ದಕ್ಕೇ ಕಾಂಗ್ರೆಸ್ ಗೆದ್ದ ಭ್ರಮೆಯಲ್ಲಿದೆ; ಪ್ರಲ್ಹಾದ್ ಜೋಶಿ ಗೇಲಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌