Tallest Person | ವಿಶ್ವದ ಅತ್ಯಂತ ಎತ್ತರದ ವ್ಯಕ್ತಿಯ ಚಿತ್ರ ಪ್ರಕಟಿಸಿದ ಗಿನ್ನೆಸ್‌, ಎಷ್ಟು ಅಡಿ ಇದ್ದರು ಗೊತ್ತೇ? - Vistara News

ವಿದೇಶ

Tallest Person | ವಿಶ್ವದ ಅತ್ಯಂತ ಎತ್ತರದ ವ್ಯಕ್ತಿಯ ಚಿತ್ರ ಪ್ರಕಟಿಸಿದ ಗಿನ್ನೆಸ್‌, ಎಷ್ಟು ಅಡಿ ಇದ್ದರು ಗೊತ್ತೇ?

ವಿಶ್ವದ ಅತ್ಯಂತ ಎತ್ತರದ ವ್ಯಕ್ತಿಯೆಂಬ (Tallest Person) ದಾಖಲೆ ಹೊಂದಿದ್ದ ಅಮೆರಿಕದ ವ್ಯಕ್ತಿಯ ಬಣ್ಣದ ಚಿತ್ರವನ್ನು ಗಿನ್ನೆಸ್‌ ವಿಶ್ವದಾಖಲೆ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

VISTARANEWS.COM


on

tallest person
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌ : ಎತ್ತರದ ದೇಹ ಉಳ್ಳವರು (Tallest Person) ಎಲ್ಲೇ ಹೋದರೂ ಗಮನ ಸೆಳೆಯುತ್ತಾರೆ. ಅದರಲ್ಲೂ ಮಿತಿಗಿಂತ ಜಾಸ್ತಿ ಎತ್ತರ ಇದ್ದರೆ ಇನ್ನಷ್ಟು ಜಾಸ್ತಿ ಮಾತನಾಡುತ್ತಾರೆ. ಅಂತೆಯೇ ಎಂಟು ದಶಕಗಳ ಹಿಂದೆ ಅಮೆರಿಕದಲ್ಲಿ ಅತ್ಯಂತ ಎತ್ತರದ ವ್ಯಕ್ತಿಯೊಬ್ಬರು ಇದ್ದರು. ಅವರು ಈಗ ಇಲ್ಲವಾದರೂ ಗಿನ್ನೆಸ್‌ ವಿಶ್ವ ದಾಖಲೆಯಲ್ಲಿ ಅವರ ಹೆಸರನ್ನು ಅಳಿಸಿ ಹಾಕಲು ಯಾರಿಗೂ ಸಾಧ್ಯವಾಗಿಲ್ಲ. ಕಪ್ಪು- ಬಿಳುಪು ಫೊಟೋಗ್ರಫಿಯ ಕಾಲದ ಅವರ ಚಿತ್ರವನ್ನು ಗಿನ್ನೆಸ್‌ ವಿಶ್ವ ದಾಖಲೆಯು ತನ್ನ ಟ್ವಿಟರ್‌ ಹ್ಯಾಂಡ್‌ನಲ್ಲಿ ಬಣ್ಣದೊಂದಿಗೆ ಪ್ರಕಟಿಸಿದೆ.

ಈ ದಾಖಲೆ ವೀರ ಎತ್ತರದ ವ್ಯಕ್ತಿಯ ಹೆಸರು ರಾಬರ್ಡ್ ವಾಡ್ಲೊ. ೧೯೩೫ರಲ್ಲಿ ತೆಗೆದ ಅವರ ಚಿತ್ರವನ್ನು ಗಿನ್ನೆಸ್‌ ವಿಶ್ವ ದಾಖಲೆ ಪ್ರಕಟಿಸಿದೆ. ರಾಬರ್ಟ್‌ಗೆ “ದಿ ಜಯಂಟ್‌ ಆಫ್‌ ಇಲ್ಲಿನಾಯಿಸ್‌’ ಎಂಬ ಹೆಸರೂ ಇತ್ತು. ಗಿನ್ನೆಸ್‌ ವಿಶ್ವ ದಾಖಲೆಯ ಪ್ರಕಾರ ೧೯೫೫ರಿಂದ ಅವರು ಎತ್ತರದ ವ್ಯಕ್ತಿಯೆಂಬ ದಾಖಲೆಯನ್ನು ಹೊಂದಿದ್ದಾರೆ.

ರಾಬರ್ಟ್‌ ವಾಡ್ಲೊ ಅವರನ್ನು ೧೯೪೦ರ ಜೂನ್‌ ೨೭ರಂದು ಅಳೆಯಲಾಗಿತ್ತು. ಈ ವೇಳೆ ಅವರು ೨.೭೨ ಮೀಟರ್‌ (೮ ಮೀಟರ್‌ ೧೧ ಇಂಚು) ಇದ್ದರು. ರಾಬರ್ಟ್‌ ಅವರು ಸಾಮಾನ್ಯ ಎತ್ತರದ ಪೋಷಕರಿಗೆ ಜನಿಸಿದ್ದರು. ಹುಟ್ಟುತ್ತಲೇ ೩.೮ ಕೆ.ಜಿ ತೂಕವಿದ್ದ ಅವರು ೫ ವರ್ಷಗಳಾದಾಗ ೫.೪ ಇಂಚಿನಷ್ಟು ಎತ್ತರಕ್ಕೆ ಬೆಳೆದಿದ್ದರು. ಈ ವೇಳೆಯೇ ಅವರು ದೊಡ್ಡವರ ಬಟ್ಟೆಯನ್ನು ಧರಿಸಬೇಕಾಗಿತ್ತು.

ರಾಬರ್ಟ್‌ ಅವರು ತಮಗೆ ೨೨ ವರ್ಷವಿದ್ದಾಗಲೇ ಮೃತಪಟ್ಟಿದ್ದರು. ಅವರ ಬಲಗಾಲಿನ ಮಂಡಿ ನೋವಿಗಾಗಿ ಅಳವಡಿಸಲಾಗಿದ್ದ ಬ್ರೇಸ್‌ನಿಂದ ಉಂಟಾಗಿದ್ದ ಗುಳ್ಳೆಗಳು ಉಲ್ಬಣಗೊಂಡು ೧೯೪೦ರ ಜುಲೈ ೧೫ರಂದು ನಿಧನ ಹೊಂದಿದ್ದರು.

ರಾಬರ್ಟ್‌ ಅವರ ಸ್ಮರಣಾರ್ಥವಾಗಿ ಅವರ ಗಾತ್ರದ ಪ್ರತಿಮೆಯನ್ನು 1986 ರಲ್ಲಿ ಆಲ್ಟನ್ ಮ್ಯೂಸಿಯಂ ಆಫ್ ಹಿಸ್ಟರಿ ಆಂಡ್ ಆರ್ಟ್ ಮುಂಭಾಗದಲ್ಲಿರುವ ಆಲ್ಟನ್‌ನ ಕಾಲೇಜ್ ಅವೆನ್ಯೂದಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ | Longest Kiss | 58 ಗಂಟೆ, 35 ನಿಮಿಷ, 58 ಸೆಕೆಂಡ್‌ ಸತತ ಚುಂಬನ, ಈಗ ಗಿನ್ನೆಸ್‌ ದಾಖಲೆಗೆ ಭಾಜನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

UK Election: ಇಂಗ್ಲೆಂಡ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್‌ ಪಕ್ಷ; ಭಾರತದ ಮೇಲೇನು ಪರಿಣಾಮ?

UK Election: ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ.

VISTARANEWS.COM


on

UK Election
Koo

ಲಂಡನ್‌: ಜಗತ್ತಿನ ಗಮನ ಸೆಳೆದಿದ್ದ ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆ(UK Election)ಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷೆಯಂತೆಯೇ ಈ ಬಾರಿ ಕನ್ಸರ್ವೇಟಿವ್‌ ಪಕ್ಷದ, ಭಾರತದ ಮೂಲದ ರಿಷಿ ಸುನಕ್‌ (Rishi Sunak) ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಲೇಬರ್‌ ಪಕ್ಷ (Labour Party) ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಇದೀಗ ಕೀರ್‌ ಸ್ಟಾರ್ಮರ್‌ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ಲೇಬರ್ ಪಕ್ಷವು ಎಡಪಂಥೀಯ ನಿಲುವು ಹೊಂದಿದ್ದು ಸಹಜವಾಗಿಯೇ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಸುಮಾರು 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷವು ಭಾರತದ ಜತೆ ಬ್ರಿಟನ್‌ನ ಸಂಬಂಧ ವೃದ್ಧಿಸುವತ್ತ ಪ್ರಯತ್ನ ನಡೆಸಿತ್ತು.

ಕೀರ್‌ ಸ್ಟಾರ್ಮರ್‌ ನಿಲುವೇನು?

ಬ್ರೆಕ್ಸಿಟ್ ಅನ್ನು ಕಾರ್ಯರೂಪಕ್ಕೆ ತರುವುದಾಗಿ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಹತ್ವಾಕಾಂಕ್ಷೆಯ ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಈಗಾಗಲೇ ಪಕ್ಷ ತಿಳಿಸಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದ (FTA), ತಂತ್ರಜ್ಞಾನ, ಭದ್ರತೆ, ಶಿಕ್ಷಣ ಮತ್ತು ಹವಾಮಾನ ಬದಲಾವಣೆ ಮುಂತಾದ ಅಂಶಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಅವರು ಆಸಕ್ತಿ ಹೊಂದಿದ್ದಾರೆ.

ಲೇಬರ್‌ ಪಕ್ಷದ ಪ್ರಣಾಳಿಕೆಯು ವ್ಯಾಪಾರ ಒಪ್ಪಂದಕ್ಕೆ ಒತ್ತು ನೀಡುವ ಮೂಲಕ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸುವ ವಿಚಾರವನ್ನು ಒಳಗೊಂಡಿತ್ತು. ಇಂಗ್ಲೆಂಡ್‌ನಲ್ಲಿರುವ ಭಾರತೀಯ ವಲಸಿಗರೊಂದಿಗಿನ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದ ಭಾಗವಾಗಿ ಸ್ಟಾರ್ಮರ್ ಪ್ರಚಾರದ ಸಮಯದಲ್ಲಿ ಹಿಂದೂಫೋಬಿಯಾವನ್ನು ಖಂಡಿಸಿದ್ದರು. ಜತೆಗೆ ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಮನವೊಲಿಕೆಗೆ ಮುಂದಾಗಿದ್ದರು.

ಆದಾಗ್ಯೂ ಸ್ಟಾರ್ಮರ್‌ ಅವರ ಮಹತ್ವಾಕಾಂಕ್ಷೆಯ ವಿದೇಶಾಂಗ ನೀತಿಯ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಸವಾಲುಗಳಿವೆ. ವಿಶೇಷವಾಗಿ ವಲಸೆ ನೀತಿಗಳು ಮತ್ತು ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

ಕಾಶ್ಮೀರದ ಬಗ್ಗೆ ನಿಲುವು

ಈ ಹಿಂದೆ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತದ ಪ್ರತಿಪಾದನೆಗೆ ವಿರುದ್ಧವಾದ ನಿಲುವನ್ನು ಲೇಬರ್ ಪಕ್ಷ ಹೊಂದಿತ್ತು. ಕಾಶ್ಮೀರ ವಿಷಯದಲ್ಲಿನ ಅದರ ಧೋರಣೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ 2020ರಲ್ಲಿ ಲೇಬರ್ ಪಕ್ಷದ ನಾಯಕತ್ವ ವಹಿಸಿದ ಸ್ಟಾರ್ಮರ್, ಭಾರತದ ವಿಚಾರದಲ್ಲಿ ತಮ್ಮ ಪಕ್ಷ ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದ್ದರು. ಭಾರತೀಯ ಸಮುದಾಯದ ಜತೆಗಿನ ಸಭೆಗಳಲ್ಲಿ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಸ್ಟಾರ್ಮರ್ ಅವರು ‘ಕಾಶ್ಮೀರವು ಒಂದು ಆಂತರಿಕ ವಿಚಾರ’ ಮತ್ತು ಭಾರತ ಹಾಗೂ ಪಾಕಿಸ್ತಾನಗಳು ಅದನ್ನು ಬಗೆಹರಿಸಿಕೊಳ್ಳಲಿವೆ ಎಂದು ಹೇಳಿ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಸುಮಾರು ಒಂದೂವರೆ ದಶಕಗಳ ಕನ್ಸರ್ವೇಟಿವ್‌ ಪಕ್ಷದ ಅಧಿಕಾರ ಕೊನೆಗೊಳಿಸಿ ಲೇಬರ್‌ ಪಕ್ಷ ಸರ್ಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಯಾವ ರೀತಿ ಸಂಬಂಭ ಕಾಯ್ದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Continue Reading

ವಿದೇಶ

UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

UK Elections: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದೆ. ವಿಶೇಷ ಎಂದರೆ ದಾಖಲೆಯ 28 ಭಾರತೀಯ ಮೂಲದವರು ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಸಿಖ್‌ ಸಮುದಾಯದವರು ಸಿಂಹಪಾಲು ಹೊಂದಿದ್ದಾರೆ. ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ 28 ಭಾರತೀಯ ಪೈಕಿ 12 ಮಂದಿ ಸಿಖ್‌ ಸಮುದಾಯದವರು, 6 ಮಂದಿ ಮಹಿಳೆಯರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಸಿಖ್‌ ಸಂಸದರು ಲೇಬರ್‌ ಪಕ್ಷದವರು.

VISTARANEWS.COM


on

UK Election
ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ ಲೇಬರ್ ಪಕ್ಷದ ಸಂಸದರಾದ ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್ಜೀತ್ ಸಿಂಗ್ ಧೇಸಿ.
Koo

ಲಂಡನ್: ಬ್ರಿಟನ್‌ ಸಂಸತ್‌ ಚುನಾವಣೆ (UK Election)ಯಲ್ಲಿ ಲೇಬರ್‌ ಪಕ್ಷವು (Labour Party) ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ದಾಖಲೆಯ 28 ಭಾರತೀಯ ಮೂಲದವರು ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಸಿಖ್‌ ಸಮುದಾಯದವರು ಸಿಂಹಪಾಲು ಹೊಂದಿದ್ದಾರೆ.

ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ 28 ಭಾರತೀಯ ಪೈಕಿ 12 ಮಂದಿ ಸಿಖ್‌ ಸಮುದಾಯದವರು, 6 ಮಂದಿ ಮಹಿಳೆಯರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಸಿಖ್‌ ಸಂಸದರು ಲೇಬರ್‌ ಪಕ್ಷದವರು. ಈ ಪೈಕಿ 9 ಮಂದಿ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಇನ್ನು ಇಬ್ಬರು ಸತತ ಮೂರನೇ ಬಾರಿಗೆ ಆಯ್ಕೆಯಾದರೆ, ಒಬ್ಬರು ಎರಡನೇ ಬಾರಿಗೆ ಸಂಸತ್‌ ಪ್ರವೇಶಿಸುತ್ತಿದ್ದಾರೆ.

ಬ್ರಿಟಿಷ್ ಸಿಖ್ ಸಂಸದರಾದ ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್ಜೀತ್ ಸಿಂಗ್ ಧೇಸಿ ಕ್ರಮವಾಗಿ ಬರ್ಮಿಂಗ್ಹ್ಯಾಮ್ ಎಡ್ಜ್ಬಾಸ್ಟನ್ (Birmingham Edgbaston) ಮತ್ತು ಸ್ಲೌ (Slough)ನಲ್ಲಿ ಮೂರನೇ ಬಾರಿ ಗೆದ್ದಿದ್ದಾರೆ. ನಾಡಿಯಾ ವಿಟ್ಟೋಮ್ ಸತತ ಎರಡನೇ ಬಾರಿಗೆ ನಾಟಿಂಗ್ಹ್ಯಾಮ್ ಪೂರ್ವ (Nottingham East)ದಿಂದ ಗೆದ್ದಿದ್ದಾರೆ. ವಿಟ್ಟೋಮ್ ಅವರು 2019ರಲ್ಲಿ ಮೊದಲ ಬಾರಿಗೆ ಆಯ್ಕೆಯಾದಾಗ ಸಂಸತ್ತಿನ ಅತ್ಯಂತ ಕಿರಿಯ ಸಂಸದರಾಗಿದ್ದರು (23 ವರ್ಷ).

ಕಿರಿತ್ ಅಹ್ಲುವಾಲಿಯಾ ಎಂದೂ ಕರೆಯಲ್ಪಡುವ ಕಿರಿತ್ ಎಂಟ್ವಿಸ್ಟಲ್ ಅವರು ಬೋಲ್ಟನ್ ಈಶಾನ್ಯ (Bolton North East)ದಿಂದ ಸಂಸದರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋನಿಯಾ ಕುಮಾರ್ ಕೂಡ ಡಡ್ಲಿ (Dudley) ಕ್ಷೇತ್ರದ ಮೊದಲ ಮಹಿಳಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಹಡ್ಡರ್ಸ್ಫೀಲ್ಡ್ (Huddersfield) ಕ್ಷೇತ್ರದಿಂದ ಹರ್ಪ್ರೀತ್ ಕೌರ್ ಉಪ್ಪಲ್ ಗೆದ್ದು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದಾರೆ.

ಕೆನಡಾದ ಬಳಿಕ ಇದೀಗ ಇಂಗ್ಲೆಂಡ್‌ ಸಂಸತ್ತು ಕೂಡ ದಾಖಲೆಯ ಪ್ರಮಾಣದ ಸಿಖ್‌ ಸಂಸದರನ್ನು ಹೊಂದಿದಂತಾಗಿದೆ. ಕೆನಡಾದಲ್ಲಿ 18 ಸಿಖ್ ಸಂಸದರಿದ್ದಾರೆ. ನಿರ್ಗಮಿತ ಪ್ರಧಾನಿ ರಿಷಿ ಸುನಕ್, ಮಾಜಿ ಗೃಹ ಕಾರ್ಯದರ್ಶಿಗಳಾದ ಸುಯೆಲ್ಲಾ ಬ್ರೇವರ್ಮನ್ ಮತ್ತು ಪ್ರೀತಿ ಪಟೇಲ್ ಹಾಗೂ ಗೋವಾ ಮೂಲದ ಕ್ಲೇರ್ ಕುಟಿನ್ಹೊ ಗೆದ್ದ ಇತರ ಪ್ರಮುಖ ಬ್ರಿಟಿಷ್ ಭಾರತೀಯರು.

ಇದನ್ನೂ ಓದಿ: UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

ಮೋದಿ ಅಭಿನಂದನೆ

ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್‌ ಸ್ಟಾರ್ಮರ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್‌ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್‌ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Continue Reading

Latest

Branded Company: ಬ್ರಾಂಡೆಡ್‌ ಬ್ಯಾಗ್‌ ಕಂಪನಿಗಳ ಲೂಟಿ; ಸಾವಿರಕ್ಕೆ ಖರೀದಿಸಿ ಲಕ್ಷಕ್ಕೆ ಸೇಲ್‌!

Branded Company: ಮಿಲನ್‌ನಲ್ಲಿ ಐಷಾರಾಮಿ ಬ್ಯಾಗ್‌ಗಳನ್ನು ಮಾರಾಟ ಮಾಡುವ ಎಲ್‌ವಿಎಂಹೆಚ್‌ ಡಿಯಾರ್ ಬ್ರ್ಯಾಂಡ್ ಕಂಪೆನಿಯ ಮೇಲೆ ಇಟಲಿ ಪೊಲೀಸರು ದಾಳಿ ನಡೆಸಿದ್ದಾರೆ. ಡಿಯಾರ್ ಪೂರೈಕೆದಾರರಿಂದ ಪ್ರತಿ ಬ್ಯಾಗ್‌ಗೆ ಸುಮಾರು 4,700 ರೂ.ಪಾವತಿಸಿ ನಂತರ ಅದನ್ನು ತನ್ನ ಅಂಗಡಿಗಳಲ್ಲಿ 2.34 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಅದೇರೀತಿ ಇನ್ನೊಂದು ಬ್ರ್ಯಾಂಡ್ ಕಂಪೆನಿ ಅರ್ಮಾನಿ ಕೂಡ ಬ್ಯಾಗ್‌ಗಳನ್ನು ಪೂರೈಕೆದಾರರಿಂದ 8400 ರೂ.ಗಳಿಗೆ ಖರೀದಿಸಿ ತನ್ನ ಅಂಗಡಿಗಳಲ್ಲಿ 1.6ಲಕ್ಷ ರೂ. ಗೆ ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

VISTARANEWS.COM


on

Koo

ಗ್ರಾಹಕರು ಬ್ರ್ಯಾಂಡೆಡ್ ವಸ್ತುಗಳಿಗೆ ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಾರೆ. ಯಾಕೆಂದರೆ ಅದರ ಗುಣಮಟ್ಟ, ವಿನ್ಯಾಸ ಉತ್ತಮವಾಗಿರುತ್ತದೆ ಮತ್ತು ಅದು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹಾಗೂ ಅದನ್ನು ಪ್ರತಿಷ್ಠಿತ ಕಂಪನಿಗಳು ತಯಾರಿಸಿರುತ್ತಾರೆ ಎಂಬ ಕಾರಣಕ್ಕಾಗಿ ಅದಕ್ಕೆ ಎಷ್ಟೇ ಬೆಲೆಯಿದ್ದರೂ ಕೂಡ ಅದನ್ನು ಖರೀದಿಸುತ್ತಾರೆ. ಗ್ರಾಹಕರ ಈ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಬ್ರ್ಯಾಂಡೆಡ್ ಕಂಪೆನಿಗಳು (Branded Company) ಇದೀಗ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟಮಾಡುತ್ತಿರುವುದಾಗಿ ತಿಳಿದುಬಂದಿದೆ.

ಮಿಲನ್‌ನಲ್ಲಿ ಐಷಾರಾಮಿ ಬ್ಯಾಗ್‌ಗಳನ್ನು ಮಾರಾಟ ಮಾಡುವ ಎಲ್‌ವಿಎಂಹೆಚ್‌ನ ಡಿಯಾರ್ ಬ್ರ್ಯಾಂಡ್ ಕಂಪೆನಿಯ ಮೇಲೆ ಇಟಲಿ ಪೊಲೀಸರು ದಾಳಿ ನಡೆಸಿದ್ದಾರೆ. ಡಿಯಾರ್ ಪೂರೈಕೆದಾರರಿಂದ ಪ್ರತಿ ಬ್ಯಾಗ್‌ಗೆ ಸುಮಾರು 4,700 ರೂ. ಪಾವತಿಸಿ ನಂತರ ಅದನ್ನು ತನ್ನ ಅಂಗಡಿಗಳಲ್ಲಿ 2.34 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಅದೇರೀತಿ ಇನ್ನೊಂದು ಬ್ರ್ಯಾಂಡ್ ಕಂಪೆನಿ ಅರ್ಮಾನಿ ಕೂಡ ಬ್ಯಾಗ್‌ಗಳನ್ನು ಪೂರೈಕೆದಾರರಿಂದ 8400 ರೂ.ಗಳಿಗೆ ಖರೀದಿಸಿ ತನ್ನ ಅಂಗಡಿಗಳಲ್ಲಿ 1.6ಲಕ್ಷ ರೂ. ಗೆ ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಈ ವೆಚ್ಚಗಳು ಲೇದರ್ ವಸ್ತುಗಳ ವೆಚ್ಚದ ಜೊತೆಗೆ ಅದರ ವಿನ್ಯಾಸ, ವಿತರಣೆ ಮತ್ತು ಮಾರ್ಕೆಟಿಂಗ್ ಗಳಿಗೆ ಸೇರಿಸಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರು ಪಾವತಿಸಿದಂತಾಗಿದೆ. ಇಂತಹ ಬ್ರ್ಯಾಂಡೆಡ್ ಕಂಪೆನಿಗಳ ಬಗ್ಗೆ ತೀವ್ರ ಟೀಕೆಗೆ ಕಾರಣವಾಗಿದೆ. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಕುರಿತು ಕಂಪೆನಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Branded Company

ಅಲ್ಲದೇ ಕಂಪೆನಿಗಳು ಈ ಆರೋಪದ ಜೊತೆಗೆ ಅವರ ಕಂಪೆನಿಯಲ್ಲಿ ಕೆಲಸ ಮಾಡುವಂತಹ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ ಮತ್ತು ಸರಿಯಾದ ದಾಖಲೆಗಳಿಲ್ಲದೇ ಕೆಲಸಗಾರರನ್ನು ನೇಮಿಸಿಕೊಂಡ ಆರೋಪವನ್ನು ಎದುರಿಸುತ್ತಿದೆ. ಈ ತನಿಖೆಯ ವೇಳೆ ಕಂಪೆನಿಯಲ್ಲಿ ಇಬ್ಬರು ಅಕ್ರಮ ವಲಸಿಗರು ಮತ್ತು 7 ಉದ್ಯೋಗಿಗಳಿಗೆ ಸರಿಯಾದ ದಾಖಲೆಗಳಿಲ್ಲ ಎಂಬುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ ಎನ್ನಲಾಗಿದೆ.

Branded Company

ಇಟಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಇಲ್ಲಿನ ಕಾರ್ಮಿಕರು ನೈರ್ಮಲ್ಯ ಸಮಸ್ಯೆಯಿಂದ ಅನಾರೋಗ್ಯಕ್ಕೊಳಗಾಗಿರುವುದಾಗಿ ತಿಳಿದುಬಂದಿದೆ. ಉತ್ಪಾದನಾ ಯಂತ್ರಗಳಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದಿರುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹಾಗೇ ಇಲ್ಲಿನ ಕಾರ್ಮಿಕರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲ ಹಾಗೂ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9 ಗಂಟೆಯವರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

ಈ ಬಗ್ಗೆ ಡಿಯಾರ್ ಕಂಪೆನಿ ಯಾವುದೇ ಪ್ರತಿಕ್ರಿಯ ನೀಡಿಲ್ಲ. ಆದರೆ ಅರ್ಮಾನಿ ಕಂಪೆನಿ ಈ ದುರುಪಯೋಗವನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ ಮತ್ತು ಈ ಬಗ್ಗೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

Continue Reading

ವಿದೇಶ

Akshata Murty: ರಿಷಿ ಸುನಕ್‌ ವಿದಾಯ ಭಾಷಣದ ವೇಳೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ ಬೆಲೆ ಎಷ್ಟು? ಬ್ರಿಟನ್‌‌ನಲ್ಲಿ ಇದೇ ದೊಡ್ಡ ಚರ್ಚೆ!

Akshata Murty: ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ (Rishi Sunak) ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬಳಿಕ ದೇಶದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ, ಅವರ ಹಿಂದೆ ನಿಂತಿದ್ದ ಪತ್ನಿ ಅಕ್ಷತಾ ಮೂರ್ತಿ ಅವರು ಧರಿಸಿದ್ದ ಡ್ರೆಸ್‌ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

Akshata Murty
Koo

ಲಂಡನ್:‌ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯ (Britain Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟುವ ಮೂಲಕ ಸರ್ಕಾರ ರಚಿಸಿದೆ. ಇನ್ನು ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ (Rishi Sunak) ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ರಾಜೀನಾಮೆ ನೀಡಿ, ವಿದಾಯದ ಭಾಷಣ ಮಾಡುವಾಗ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಅವರು ಧರಿಸಿದ್ದ ಡ್ರೆಸ್‌ ಹಾಗೂ ಅದರ ಮೌಲ್ಯದ ಕುರಿತು ಭಾರಿ ಚರ್ಚೆ ಶುರುವಾಗಿದೆ.

ಚುನಾವಣೆಯಲ್ಲಿ ಹಿನ್ನಡೆಯಾಗುತ್ತಲೇ ದೇಶದ ಜನರನ್ನು ಉದ್ದೇಶಿಸಿ ರಿಷಿ ಸುನಕ್‌ ಮಾತನಾಡಿದರು. “ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಅವರು ಹೇಳಿದರು. ಇದೇ ವೇಳೆ, ಅವರ ಹಿಂದೆ ಅಕ್ಷತಾ ಮೂರ್ತಿ ಅವರು ನಿಂತಿದ್ದರು. ಅಷ್ಟೇ ಅಲ್ಲ, ಅಕ್ಷತಾ ಮೂರ್ತಿ ಅವರು ಧರಿಸಿದ್ದ, ಇಂಡಿಯನ್‌ ಲೇಬಲ್‌ನ ಡ್ರೆಸ್‌ ಕುರಿತು ಭಾರಿ ಚರ್ಚೆಯಾಗುತ್ತಿದೆ. ಬ್ರಿಟನ್‌ ರಾಷ್ಟ್ರಧ್ವಜದಲ್ಲಿರುವ ನೀಲಿ, ಕೆಂಪು ಹಾಗೂ ವೈಟ್‌ ಪಟ್ಟಿಗಳು ಇರುವ, ಹೈ ನೆಕ್ಡ್‌ ಆಗಿರುವ ಡ್ರೆಸ್‌ಅನ್ನು ಅಕ್ಷತಾ ಮೂರ್ತಿ ಧರಿಸಿದ್ದು, ಇದರ ಬೆಲೆ 42 ಸಾವಿರ ರೂ. ಇದೆ ಎಂದು ತಿಳಿದುಬಂದಿದೆ.

ಬ್ರಿಟನ್‌ ಪ್ರಧಾನಿಯಾಗಿ ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌ ಆಯ್ಕೆಯಾಗಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ದೇಶದ ಜನರ ಸೇವೆ ಮಾಡುವುದೇ ನಮಗೆ ಭಾಗ್ಯವಾಗಿದೆ. ನೀವು ಲೇಬರ್‌ ಪಕ್ಷಕ್ಕೆ ಮತ ಹಾಕಿದ್ದೀರೋ, ಬಿಟ್ಟಿದ್ದೀರೋ ಅದು ಬೇಕಾಗಿಲ್ಲ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ. ರಾಜಕೀಯ ಎಂದರೆ ಉತ್ತಮ ಆಡಳಿತ ನೀಡುವುದು, ರಾಜಕೀಯವನ್ನು ಸಕಾರಾತ್ಮಕ ಸಂಗತಿಗಾಗಿ ಬಳಸಿಕೊಳ್ಳುತ್ತೇವೆ. ಮತಗಳನ್ನು ನೀಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಕೀರ್‌ ಸ್ಟಾರ್ಮರ್‌ ಅವರು ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತವನ್ನೂ ಹೊಗಳಿದ್ದು ವಿಶೇಷವಾಗಿತ್ತು.

ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್‌ ಸ್ಟಾರ್ಮರ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್‌ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್‌ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

Continue Reading
Advertisement
Anant Ambani wedding
ಕ್ರೀಡೆ7 mins ago

Anant Ambani wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರದಲ್ಲಿ ಪಾಲ್ಗೊಂಡ ಧೋನಿ, ಪಾಂಡ್ಯ ಬ್ರದರ್ಸ್​, ಇಶಾನ್​ ಕಿಶನ್​

dengue fever death bangalore
ಕ್ರೈಂ19 mins ago

Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

UK Election
ವಿದೇಶ32 mins ago

UK Election: ಇಂಗ್ಲೆಂಡ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್‌ ಪಕ್ಷ; ಭಾರತದ ಮೇಲೇನು ಪರಿಣಾಮ?

Heart Attack
ಕ್ರೀಡೆ41 mins ago

Heart Attack: ಚೆಸ್​ ಆಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಗ್ರ್ಯಾಂಡ್‌ಮಾಸ್ಟರ್

Janhvi Kapoor Stuns In Peacock Lehenga
ಬಾಲಿವುಡ್41 mins ago

Janhvi Kapoor: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ನವಿಲಂತೆ ಕಂಗೊಳಿಸಿದ ಜಾಹ್ನವಿ ಕಪೂರ್!

death by shock in pg
ಕ್ರೈಂ44 mins ago

Death by Shock: ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ಹೊಡೆದು ವಿದ್ಯಾರ್ಥಿ ಸಾವು

Deepika Padukone heads to Anant Ambani Radhika Merchant sangeet in a saree
ಬಾಲಿವುಡ್1 hour ago

Deepika Padukone: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ಸೀರೆಯಲ್ಲಿ ಮಿಂಚಿದ್ದು ಹೀಗೆ!

illegal relationship chitradurga
ಕ್ರೈಂ1 hour ago

Illegal Relationship: ಪರ ಸ್ತ್ರೀಯೊಂದಿಗೆ ಲಾಡ್ಜಿಗೆ ಬಂದು ಪರಲೋಕ ಸೇರಿದ!

Hardik Pandya
ಕ್ರೀಡೆ1 hour ago

Hardik Pandya: ನತಾಶಾ ಜತೆ ವಿಚ್ಛೇದನ ಖಚಿತ; ಸುಳಿವು ನೀಡಿದ ಹಾರ್ದಿಕ್​ ಪಾಂಡ್ಯ ಪೋಸ್ಟ್​!

UK Election
ವಿದೇಶ1 hour ago

UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ4 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ16 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ18 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ19 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ21 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ22 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು23 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು24 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌