Fifa World Cup | ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಅರ್ಜೆಂಟೀನಾ - Vistara News

ಫಿಫಾ ವಿಶ್ವ ಕಪ್

Fifa World Cup | ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಅರ್ಜೆಂಟೀನಾ

ಫಿಫಾ ವಿಶ್ವಕಪ್​ನ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ತಂಡ​ ನೆದರ್ಲೆಂಡ್ಸ್​​ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ ಮಣಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

VISTARANEWS.COM


on

lionel messi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲುಸೈಲ್​ (ಕತಾರ್​): ಫುಟ್ಬಾಲ್ ಪ್ರೇಮಿಗಳನ್ನು ತುದಿಗಾಗಲ್ಲಿ ನಿಲ್ಲಿಸಿದ ಶುಕ್ರವಾರದ ಫಿಫಾ ವಿಶ್ವ ಕಪ್​ನ ಎರಡು ಕ್ವಾರ್ಟರ್​ ಫೈನಲ್​​ ಪಂದ್ಯಗಳು ಪೆನಾಲ್ಟಿ ಶೂಟೌಟ್​ ಮೂಲಕ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ಬಲಿಷ್ಠ ಬ್ರೆಜಿಲ್​ ತಂಡದ ವಿರುದ್ಧ ಕ್ರೊವೇಶಿಯ ಗೆಲುವು ಸಾಧಿಸಿದರೆ ಬಳಿಕದ ಪಂದ್ಯದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ನೆದರ್ಲೆಂಡ್ಸ್​ ವಿರುದ್ಧ ಗೆದ್ದು ಸೆಮಿಫೈನಲ್​ಗೆ ಲಗ್ಗೆ ಇಟ್ಟಿತು.

ಲೂಸೈಲ್​ ಸ್ಟೇಡಿಯಂನಲ್ಲಿ ಶುಕ್ರವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ 4-3 ಗೋಲ್​ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಅರ್ಜೆಂಟೀನಾ ಹಾಗೂ ಲಿಯೊನೆಲ್​ ಮೆಸ್ಸಿ ವಿಶ್ವ ಕಪ್ ಕನಸು ಜೀವಂತವಾಗಿ ಉಳಿದಿದೆ.

ಪಂದ್ಯದ ಬಹುತೇಕ ಸಮಯದ ವರೆಗೆ ಅರ್ಜೆಂಟೀನಾ 2-0 ಗೋಲುಗಳಿಂದ ಮುಂದಿತ್ತು ಹಾಗೂ ಸೆಮಿಫೈನಲ್‍ಗೆ ಸುಲಭವಾಗಿ ಪ್ರವೇಶ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ನೆದರ್ಲೆಂಡ್ಸ್​​ನ ಬದಲಿ ಆಟಗಾರ ವೂಟ್ ವೆಗೋಸ್ಟ್ ಮತ್ತು ಬರ್ಗ್ವಿಜ್​​ ಕೊನೆಕ್ಷಣದಲ್ಲಿ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಂತೆ ಮಾಡಿದರು. 30 ನಿಮಿಷಗಳ ಹೆಚ್ಚಿನ ಅವಧಿಯ ಬಳಿಕವೂ 2-2 ಸಮಬಲ ಮುಂದುವರಿಯಿತು. ಇದರಿಂದಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.

ಅಂತಿಮವಾಗಿ ಪೆನಾಲ್ಟಿ ಶೂಟೌಟ್​ನಲ್ಲಿ ಅರ್ಜೆಂಟೀನಾ 4-3 ಅಂತರದಿಂದ ಗೆಲುವು ಸಾಧಿಸಿತು. ಮುಂದಿನ ಸೆಮಿಫೈನಲ್​ ಕಾದಾಟದಲ್ಲಿ ಮೆಸ್ಸಿ ಪಡೆ ಕಳೆದ ಬಾರಿಯ ರನ್ನರ್ ಅಪ್ ಕ್ರೊವೇಶಿಯ ವಿರುದ್ಧ ಬುಧವಾರ ಸೆಣಸಲಿದೆ.

ಇದನ್ನೂ ಓದಿ | FIFA World Cup | ಬ್ರೆಜಿಲ್‌ಗೆ ಆಘಾತ ನೀಡಿದ ಕ್ರೊಯೇಷ್ಯಾ; ಸೆಮಿಫೈನಲ್ಸ್‌ಗೆ ಪ್ರವೇಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

2034ರ ಫಿಫಾ ವಿಶ್ವಕಪ್‌ಗೆ ಭಾರತ ಸಹ ಆತಿಥ್ಯ?; ಸೌದಿ ಫೆಡರೇಶನ್​ನ ಸ್ಪಷ್ಟನೆ ಏನು?

2034ರಲ್ಲಿ ನಡೆಯುವ ಫಿಫಾ ವಿಶ್ವಕಪ್‌(FIFA World Cup 2034) ಟೂರ್ನಿಯ ಸಹ ಆತಿಥ್ಯವನ್ನು ಭಾರತವೂ ವಹಿಸಲಿದೆ ಎನ್ನುವ ಊಹಾಪೋಹಗಳಿಗೆ ಸ್ಪಷ್ಟನೆಯೊಂದು ಸಿಕ್ಕಿದೆ.

VISTARANEWS.COM


on

2034 FIFA World Cup
Koo

ದುಬೈ: 2034ರಲ್ಲಿ ನಡೆಯುವ ಪ್ರತಿಷ್ಠಿತ ಫಿಫಾ ವಿಶ್ವಕಪ್‌ನ(FIFA World Cup 2034) ಕೆಲವು ಪಂದ್ಯಗಳಿಗೆ ಭಾರತ ಕೂಡ ಆತಿಥ್ಯ(FIFA World Cup 2034 In India) ವಹಿಸಲಿದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಸೌದಿ ಅರೇಬಿಯಾದ ಫುಟ್‌ಬಾಲ್ ಫೆಡರೇಶನ್(Saudi Arabian Football Federation) ಅಧ್ಯಕ್ಷ ಯಾಸರ್ ಅಲ್ ಮಿಸೆಹಲ್(Yasser Al Misehal) ಸ್ಪಷ್ಟನೆ ನೀಡಿದ್ದಾರೆ.

ಒಟ್ಟು 48 ತಂಡಗಳು ಭಾಗಿಯಾಗುವ 2034ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಈ ಪೈಕಿ ಕನಿಷ್ಠ 10 ಪಂದ್ಯಗಳು ಭಾರತದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಿದೆ. ಸೌದಿಯು ಒಂದೇ ದೇಶವಾಗಿ ಈ ಟೂರ್ನಿಯ ಆತಿಥ್ಯವಹಿಸಲಿದೆ ಎಂದು ಯಾಸರ್ ಅಲ್ ಮಿಸೆಹಲ್ ತಿಳಿಸಿದ್ದಾರೆ.

ಇದನ್ನೂ ಓದಿ ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

ನವೆಂಬರ್ 9ರಂದು ನಡೆದಿದ್ದ ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು 2034ರ ವಿಶ್ವಕಪ್‌ಗೆ ಸಹ ಆತಿಥ್ಯ ವಹಿಸಲು ಭಾರತ ಯೋಚಿಸಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆಯ ಬಳಿಕ ಭಾರತ ಕೂಡ 2034ರ ವಿಶ್ವಕಪ್​ಗೆ ಸಹ ಆತಿಥ್ಯವಹಿಸಿಕೊಳ್ಳಲಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಅಲ್ಲದೆ ಕೆಲ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿಗಳು ಕೂಡ ಪ್ರಕಟಗೊಂಡಿದ್ದವು. ಆದರೆ ಈಗ ಎಲ್ಲ ಅನುಮಾನಕ್ಕೆ ತೆರೆ ಬಿದ್ದಿದೆ.

ಟೂರ್ನಿಗೆ ಸೌದಿ ಅರೇಬಿಯಾ ಏಕಮಾತ್ರ ರಾಷ್ಟ್ರವಾಗಿ ಆತಿಥ್ಯ ವಹಿಸುತ್ತದೆ. ನಮ್ಮಲ್ಲಿ ಬಹಳಷ್ಟು ನಗರಗಳು ಮತ್ತು ಹಲವು ಕ್ರೀಡಾಂಗಣಗಳಿವೆ. ನಮ್ಮ ಯೋಜನೆ ಟೂರ್ನಿಗೆ ಏಕೈಕ ಆತಿಥೇಯ ರಾಷ್ಟ್ರ ಆಗುವುದು” ಎಂದು ಅಲ್ ಮಿಸೆಹಲ್ ಹೇಳುವ ಮೂಲಕ ಭಾರತಕ್ಕೆ ಸಹ ಆತಿಥ್ಯದ ಅವಕಾಶ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಟೂರ್ನಿಯ ಪಂದ್ಯವನ್ನು ನಿರೀಕ್ಷೆ ಮಾಡಿದ್ದ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

2026ರ ಫಿಫಾ ಫುಟ್ಬಾಲ್​ ವಿಶ್ವಕಪ್​ನಲ್ಲಿ ಮಹತ್ವದ ಬದಲಾವಣೆ

2026ರಲ್ಲಿ ಅಮೆರಿಕದಲ್ಲಿ(USA) ನಡೆಯಲಿರುವ ಫಿಫಾ ವಿಶ್ವ ಕಪ್​ ಫುಟ್ಬಾಲ್​ ಟೂರ್ನಿಯಲ್ಲಿ(FIFA World Cup 2026) ಮಹತ್ವದ ಬದಲಾವಣೆ ಮಾಡಲಾಗಿದೆ. 2022ರಲ್ಲಿ ಕತಾರ್​ನಲ್ಲಿ ನಡೆದ ಕೂಟದಲ್ಲಿ 32 ತಂಡಗಳು ಪಾಲ್ಗೊಂಡಿದ್ದವು ಆದರೆ ಈ ಬಾರಿ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಲಾಗಿದೆ ಫಿಫಾ ಈಗಾಗಲೇ ತಿಳಿಸಿದೆ.

2022ರ ಫಿಫಾ ವಿಶ್ವಕಪ್​ಗೆ​ ಅಮೆರಿಕ, ಕೆನಡಾ(Canada) ಮತ್ತು ಮೆಕ್ಸಿಕೋ(Mexico) ದೇಶಗಳು ಆತಿಥ್ಯ ವಹಿಸಿಕೊಳ್ಳಲಿವೆ. ಈ ಟೂರ್ನಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿರುವ ವಿವಾರವನ್ನು ಮಂಗಳವಾರ ಫಿಫಾ ಕೌನ್ಸಿಲ್ ತಿಳಿಸಿದೆ. ಹೊಸ ನಿಯಮದಂತೆ ಈ ಹಿಂದೆ ಇದ್ದ 16 ತಂಡಗಳ ಮೂರು ಗುಂಪನ್ನು 12 ತಂಡದ ನಾಲ್ಕು ಗುಂಪಾಗಿ ವಿಭಾಗಿಸಲಾಗಿದೆ. ಕತಾರ್​ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿಸಲಾಗಿತ್ತು. ಇದೀಗ ಹೊಸ ಬದಲಾವಣೆಯ ಪ್ರಕಾರ 104 ಪಂದ್ಯಗಳು ನಡೆಯಲಿವೆ.

ಪರಿಷ್ಕೃತ ಸ್ಪರ್ಧೆಯ ರಚನೆಯು ಹಲವು ದೇಶಗಳಿಗೆ ವಿಶ್ವಕಪ್ ಆಡುವ ಕನಸು ನನಸಾಗಿಸಲು ಸಹಾಯ ಮಾಡಲಿದೆ ಎಂದು ಫಿಫಾ ಕೌನ್ಸಿಲ್ ತಿಳಿಸಿದೆ. ಈ ಟೂರ್ನಿಯ ಪಂದ್ಯಗಳು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಪ್ರಮುಖ 16 ನಗರಗಳಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಗೆ ಮೂರು ತಂಡಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿದೆ.

Continue Reading

ಕ್ರೀಡೆ

ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

ಅರ್ಜೆಂಟೀನಾ(Argentina) ತಂಡ ಫಿಫಾ ​ವಿಶ್ವಕಪ್ ಅರ್ಹತಾ ಸುತ್ತಿನ(FIFA World Cup qualifiers) ಪಂದ್ಯದಲ್ಲಿ ಉರುಗ್ವೆ(ARG vs URU) ವಿರುದ್ಧ 2-0 ಗೋಲುಗಳ ಹೀನಾಯ ಸೋಲು ಕಂಡಿದೆ.

VISTARANEWS.COM


on

Uruguay hands Argentina
Koo

ಕತಾರ್​: ಫಿಫಾ ವಿಶ್ವಕಪ್‌ ಚಾಂಪಿಯನ್​ ಲಿಯೋನೆಲ್‌ ಮೆಸ್ಸಿ(Lionel Messi) ಸಾರಥ್ಯದ ಅರ್ಜೆಂಟೀನಾ(Argentina) ತಂಡ ಫಿಫಾ ​ವಿಶ್ವಕಪ್ ಅರ್ಹತಾ ಸುತ್ತಿನ(FIFA World Cup qualifiers) ಪಂದ್ಯದಲ್ಲಿ ಉರುಗ್ವೆ(ARG vs URU) ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಅಜೇಯವಾಗಿ ಮುನ್ನಡೆಯುತ್ತಿದ್ದ ಮೆಸ್ಸಿ ಪಡೆಗೆಯ ಓಟಕ್ಕೆ ಉರುಗ್ವೆ ಬ್ರೇಕ್​ ಹಾಕಿದೆ.

ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ ವಿರುದ್ಧ 2-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲು ಕಂಡಿದೆ. ಗುರುವಾರ ನಡೆದಿದ್ದ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಆಟವಾಡಿದ ಉರುಗ್ವೆ ಮೇಲುಗೈ ಸಾಧಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಉರುಗ್ವೆ ಗೋಲಿನ ಖಾತೆಯನ್ನು ತೆರೆಯಿತು. ಬಳಿಕ 42ನೇ ನಿಮಿಷದಲ್ಲಿ ಮಟಿಯಾಸ್ ವಿನಾ ಮತ್ತೊಂದು ಗೋಲು ಬಾರಿಸಿ ಮುನ್ನಡೆ ತಂದು ಕೊಟ್ಟರು. ಬಳಿಕ ರಕ್ಷಣಾತ್ಮಕ ಆಟವಾಡಿದ ಉರುಗ್ವೆ ಯಾವುದೇ ಹಂತದಲ್ಲಿಯೂ ಅರ್ಜೆಂಟೀನಾಗೆ ಗೋಲಿನ ಅವಕಾಶವನ್ನೇ ನೀಡಲಿಲ್ಲ.

ಸೌದಿ ವಿರುದ್ಧ ಸೋಲು ಕಂಡಿದ್ದ ಅರ್ಜೆಂಟೀನಾ

ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ಆಡಿದ ಲೀಗ್​ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲು ಕಂಡಿತ್ತು. ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ ತಂಡಕ್ಕೆ ಭಾರಿ ಉಡುಗೊರೆ ನೀಡಿ ಗೌರವಿಸಲಾಗಿತ್ತು. ಆದರೆ ಈ ಪಂದ್ಯದ ಸೋಲಿನ ಬಳಿಕ ಮೆಸ್ಸಿ ಪಡೆ ಆಡಿದ ಎಲ್ಲ ಪಂದ್ಯವನ್ನು ಗೆದ್ದು ಕಪ್​ ಎತ್ತಿ ಸಂಭ್ರಮಿಸಿತ್ತು.

ಉರುಗ್ವೆ ವಿರುದ್ಧ ಸೋಲು ಕಂಡರೂ, ಮೆಸ್ಸಿ ಬಳಗ ಅಗ್ರಸ್ಥಾನದಲ್ಲೇ ಮುಂದುವರಿದಿದೆ. 10 ತಂಡಗಳ ದಕ್ಷಿಣ ಅಮೆರಿಕದ ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಐದು ಪಂದ್ಯಗಳಿಂದ 12 ಅಂಕಗಳನ್ನು ಪಡೆದಿದೆ. ಉರುಗ್ವೆ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

2026ರ ಫಿಫಾ ವಿಶ್ವಕಪ್ ಪಂದ್ಯಾವಳಿ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಮೂರು ದೇಶಗಳು ಜಂಟಿ ಆತಿಥ್ಯ ವಹಿಸಿದೆ. ಟೂರ್ನಿ ಅರ್ಹಾತಾ ಸುತ್ತು ನಡೆಯುತ್ತಿದೆ. ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಭಾಗವಹಿಸಲಿವೆ. ಹೀಗಾಗಿ ದಕ್ಷಿಣ ಅಮೆರಿಕ ಅರ್ಹತಾ ಪಂದ್ಯಾವಳಿಯಲ್ಲಿ ಅಗ್ರ ಆರು ತಂಡಗಳು ನೇರವಾಗಿ ಟೂರ್ನಿಗೆ ಪ್ರವೇಶ ಪಡೆಯುತ್ತವೆ.

ಪಂದ್ಯ ಗೆದ್ದ ಭಾರತ

ಭಾರತ ತಂಡವೂ ಕೂಡ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡುತ್ತಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ ಕುವೈತ್​ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದೆ. ಪಂದ್ಯದ ಕೊನೆಯ 75ನೇ ನಿಮಿಷದಲ್ಲಿ ಭಾರತದ ಪರ ಮನ್ವಿರ್​ ಸಿಂಗ್ ಗೋಲು ದಾಖಲಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

Continue Reading

ಕ್ರೀಡೆ

Fifa Ranking: ಉತ್ತಮ ಪ್ರಗತಿ ಸಾಧಿಸಿದ ಭಾರತೀಯ ಫುಟ್ಬಾಲ್​ ತಂಡ

2018ರ ಬಳಿಕ ಮೊದಲ ಬಾರಿ ಭಾರತೀಯ ಫುಟ್ಬಾಲ್​ ತಂಡ ಫಿಫಾ ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿದೆ.

VISTARANEWS.COM


on

indian football team
Koo

ನವದೆಹಲಿ: ಉತ್ತಮ ಪ್ರಗತಿಯಲ್ಲಿರುವ ಭಾರತೀಯ ಫುಟ್ಬಾಲ್​ ತಂಡ(indian football team) 2018ರ ಬಳಿಕ ಮೊದಲ ಬಾರಿ ಫಿಫಾ ಶ್ರೇಯಾಂಕದಲ್ಲಿ(Fifa Ranking) ಅಗ್ರ 100ರೊಳಗೆ ಸ್ಥಾನ ಪಡೆದಿದೆ. ಸ್ಯಾಫ್​ ಪುಟ್ಬಾಲ್​ ಟೂರ್ನಿಯಲ್ಲಿ ಗೆದ್ದ ಕಾರಣದಿಂದ ಭಾರತ ತಂಡ ಈ ಪ್ರಗತಿ ಸಾಧಿಸಿದೆ. ಫಿಫಾ ಚಾಂಪಿಯನ್​ ಲಿಯೋನಲ್ ಮೆಸ್ಸಿ (lionel messi)ಸಾರಥ್ಯದ ಅರ್ಜೆಂಟೀನಾ(Argentina) ತಂಡ ನಂ.1 ಸ್ಥಾನದಲ್ಲಿ ಮುಂದುವರಿದಿದೆ.

ಭಾರತದ ಖಾತೆಯಲ್ಲಿ ಸದ್ಯ 1,208.69 ಅಂಕಗಳಿವೆ. ಭಾರತದ ಶ್ರೇಷ್ಠ ಶ್ರೇಯಾಂಕ 94 ಇದನ್ನು 1966ರಲ್ಲಿ ಸಾಧಿಸಿತ್ತು. ಈ ಮುನ್ನ 2017, 2018ರಲ್ಲಿ 96ನೇ ಸ್ಥಾನಕ್ಕೇರಿತ್ತು. 1993ರಲ್ಲಿ 99ನೇ ಸ್ಥಾನದಲ್ಲಿತ್ತು. ಸ್ಯಾಫ್​ ಟೂರ್ನಿಗೂ ಮುನ್ನ ಭಾರತ 101ರಿಂದ 100ನೇ ಸ್ಥಾನಕ್ಕೇರಿತ್ತು. ಫಿಫಾ ವಿಶ್ವ ಚಾಂಪಿಯನ್​ ಅರ್ಜೆಂಟೀನಾ ನಂ.1 ಸ್ಥಾನದಲ್ಲಿದ್ದರೆ ಫ್ರಾನ್ಸ್​, ಬ್ರೆಜಿಲ್​,ಇಂಗ್ಲೆಂಡ್​ ಮತ್ತು ಬೆಲ್ಜಿಂಯಂ ಕ್ರಮವಾಗಿ ಆಬಳಿಕದ ಸ್ಥಾನದಲ್ಲಿದೆ.ಏಷ್ಯಾ ತಂಡಗಳ ಪೈಕಿ ಜಪಾನ್​ 20ನೇ ಸ್ಥಾನದಲ್ಲಿದೆ.

ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದಕ್ಕೆ ಸಂತಸ ವ್ಯಕ್ತಪಡಿಸಿರುವ ಭಾರತ ತಂಡದ ಕೋಚ್​ ಐಗರ್‌ ಸ್ಟಿಮಾಕ್‌, ಮುಂದಿನ ಕೆಲವು ಪ್ರಮುಖ ಪಂದ್ಯಗಳಲ್ಲಿಯೂ ಶ್ರೇಷ್ಠ ನಿರ್ವಹಣೆ ಕಾಯ್ದುಕೊಂಡು 100 ಒಳಗಡೆ ಶ್ರೇಯಾಂಕವನ್ನು ಉಳಿಸಿಕೊಳ್ಳಬೇಕಿದೆ. ಶ್ರೇಯಾಂಕ ಪ್ರಗತಿಯ ಸುದ್ದಿ ಕೇಳಿ ಖುಷಿಯಾಗಿದೆ” ಎಂದರು.

ಇದನ್ನೂ ಓದಿ SAFF Championship : 9ನೇ ಬಾರಿ ಸ್ಯಾಫ್​​ ಟ್ರೋಫಿ ಮುಡಿಗೇರಿಸಿಕೊಂಡ ಭಾರತ ಫುಟ್ಬಾಲ್​ ತಂಡ

ಏಷ್ಯನ್ ಗೇಮ್ಸ್​ಗೆ ಅರ್ಹತೆ ಪಡೆಯುವಲ್ಲಿ ವಿಫಲ

ಭಾರತೀಯ ಫುಟ್ಬಾಲ್​ ತಂಡ(Indian Football Team) ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್​(Asian Games) ಕ್ರೀಡಾಕೂಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮತ್ತು ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಶನ್‍ಗಳಿಗೆ(NSFS) ಕಳುಹಿಸಲಾದ ಪತ್ರದಲ್ಲಿ ಕ್ರೀಡಾ ಸಚಿವಾಲಯವು ಟೀಮ್ ಈವೆಂಟ್‍ಗಳಿಗೆ, ಏಷ್ಯಾದ ಭಾಗವಹಿಸುವ ದೇಶಗಳಲ್ಲಿ ಎಂಟನೇ ಸ್ಥಾನವನ್ನು ಗಳಿಸಿದ ಕ್ರೀಡೆಗಳು ಮಾತ್ರ ಭಾಗವಹಿಸಬಹುದಾಗಿದೆ. ಜತೆಗೆ ಕಳೆದ ಒಂದು ವರ್ಷವನ್ನು ಪರಿಗಣಿಸಬೇಕು.

ಏಷ್ಯಾದ ಅಗ್ರ-8ರ ತಂಡಗಳ ಸಮೀಪದಲ್ಲಿ ಭಾರತ ಎಲ್ಲಿಯೂ ಇಲ್ಲ. ಪ್ರಸ್ತುತ ಭಾರತ ಏಷ್ಯನ್ ಫುಟ್ಬಾಲ್ ಒಕ್ಕೂಟದ ಅಡಿಯಲ್ಲಿ ಬರುವ ದೇಶಗಳ ಶ್ರೇಯಾಂಕದಲ್ಲಿ 18ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ತಂಡಕ್ಕೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡುವುದಾಗಿ ಎಐಎಫ್‍ಎಫ್(AIFF ) ಹೇಳಿಕೊಂಡಿದೆ.

Continue Reading

ಕ್ರೀಡೆ

Ziva Dhoni | ಎಂ.ಎಸ್​. ಧೋನಿ ಮಗಳು ಜೀವಾ ಸಿಂಗ್​ಗೆ ಉಡುಗೊರೆ ನೀಡಿದ ಲಿಯೋನೆಲ್​ ಮೆಸ್ಸಿ

ಫಿಫಾ ವಿಶ್ವ ಕಪ್​ ಚಾಂಪಿಯನ್​ ಲಿಯೋನೆಲ್​ ಮೆಸ್ಸಿ ಅವರು ತನ್ನ ಅಪ್ಪಟ ಅಭಿಮಾನಿ ಎಂ.ಎಸ್​ ಧೋನಿ ಅವರ ಮಗಳು ಜೀವಾ ಸಿಂಗ್​ಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

VISTARANEWS.COM


on

ziva dhoni
Koo

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ಅವರ ಮಗಳು ಜೀವಾ ಸಿಂಗ್​ಗೆ(Ziva Dhoni) ಫಿಫಾ ಚಾಂಪಿಯನ್​ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಮೆಸ್ಸಿ ತಾವು ಕತಾರ್​ ಫಿಫಾ ವಿಶ್ವ ಕಪ್​ ವೇಳೆ ಧರಿಸಿದ ಅರ್ಜೆಂಟೀನಾ ಜೆರ್ಸಿಗೆ “ಪಾರಾ ಜೀವಾ” ಎಂದು ಬರೆದು ಸಹಿ ಹಾಕಿ ಗಿಫ್ಟ್‌ ನೀಡಿದ್ದಾರೆ. ಇದೀಗ ಮೆಸ್ಸಿಯ ಈ ಉಡುಗೊರೆಯ ಜೆರ್ಸಿಯನ್ನು ಹಾಕಿದ ಫೋಟೊವನ್ನು ಜೀವಾ ಸಿಂಗ್​ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ “ತಂದೆಯಂತೆ ಮಗಳು” ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಫೋಟೊವನ್ನು ಕಂಡ ಧೋನಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಧೋನಿಯಂತೆ ಮಗಳಿಗೂ ಫುಟ್ಬಾಲ್ ಎಂದರೆ ಬಲು ಅಚ್ಚುಮೆಚ್ಚು. ಅದರಲ್ಲೂ ಅರ್ಜೆಂಟೀನಾ ತಂಡದ ಲಿಯೋನೆಲ್​ ಮೆಸ್ಸಿ ಎಂದರೆ ಅಪಾರ ಪ್ರೀತಿ. ಮೆಸ್ಸಿಯ ಅಪ್ಪಟ ಅಭಿಮಾನಿಯಾದ ಜೀವಾ ಸಿಂಗ್​ಗೆ ಇದೀಗ ಅತ್ಯಮೂಲ್ಯ ಉಡುಗೊರೆ ಸಿಕ್ಕಿದ್ದು ಇನ್ನಿಲ್ಲದ ಖುಷಿ ನೀಡಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕತಾರ್​ ಫಿಫಾ ಫುಟ್ಬಾಲ್ ವಿಶ್ವ ಕಪ್‌ ನೋಡಲು ಧೋನಿ ಕತಾರ್‌ಗೆ ತೆರಳಿದ್ದರು. ಈ ವೇಳೆ ಮೆಸ್ಸಿಯಿಂದ ಜೀವಾ ಈ ವಿಶೇಷ ಉಡುಗೊರೆ ಪಡೆದಿದ್ದಾರೆ.

ಇದನ್ನೂ ಓದಿ | Fifa World Cup | ಅರ್ಜೆಂಟೀನಾದ ಕರೆನ್ಸಿಯಲ್ಲಿ ಫುಟ್ಬಾಲ್​ ತಾರೆ ಲಿಯೋನೆಲ್​ ಮೆಸ್ಸಿಯ ಫೋಟೊ!

Continue Reading
Advertisement
Prajwal Revanna Case
ಕರ್ನಾಟಕ4 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Mobile
ದೇಶ4 hours ago

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿ 15 ವರ್ಷದ ಅಕ್ಕನನ್ನೇ ಗರ್ಭಿಣಿ ಮಾಡಿದ 13 ವರ್ಷದ ಬಾಲಕ!

Army Officer
Lok Sabha Election 20245 hours ago

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Congress Guarantee
ಪ್ರಮುಖ ಸುದ್ದಿ5 hours ago

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

Malaysia Masters
ಕ್ರೀಡೆ5 hours ago

Malaysia Masters: ವಿಶ್ರಾಂತಿ ಬಳಿಕ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಿಂಧು

Rahul Gandhi
ದೇಶ5 hours ago

Rahul Gandhi: ರಾಯ್‌ಬರೇಲಿಯಲ್ಲಿ ಜನ ಜೈ ಶ್ರೀರಾಮ್‌ ಎನ್ನುತ್ತಲೇ ಕಾಲ್ಕಿತ್ತ ರಾಹುಲ್‌ ಗಾಂಧಿ! Video ಇದೆ

MS Dhoni Bike Riding
ಕ್ರೀಡೆ6 hours ago

MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

Self Harming
ಕರ್ನಾಟಕ6 hours ago

Self Harming: ಟಿಸಿ ಕೊಟ್ಟಿಲ್ಲವೆಂದು ಬೇಸರಗೊಂಡು ವಿದ್ಯಾರ್ಥಿ ಆತ್ಮಹತ್ಯೆ

AAP Funds
ದೇಶ7 hours ago

AAP Funds: ನಿಯಮ ಉಲ್ಲಂಘಿಸಿ ಬೇರೆ ದೇಶಗಳಿಂದ ಆಪ್‌ 7 ಕೋಟಿ ರೂ. ದೇಣಿಗೆ ಸ್ವೀಕಾರ; ಇ.ಡಿ ಸ್ಫೋಟಕ ಮಾಹಿತಿ!

Karnataka weather Forecast
ಕರ್ನಾಟಕ7 hours ago

Coastal Weather: ದಕ್ಷಿಣ ಕನ್ನಡ, ಉಡುಪಿಯಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌