Fifa World Cup | ಕ್ರೊವೇಶಿಯ ವಿರುದ್ಧ ಸೋತು ಫಿಫಾ ಟೂರ್ನಿಯಿಂದ ಹೊರ ಬಿದ್ದ ಬೇಸರದಲ್ಲಿ ಕಣ್ಣೀರು ಸುರಿಸಿದ ನೇಮರ್​ - Vistara News

ಕ್ರೀಡೆ

Fifa World Cup | ಕ್ರೊವೇಶಿಯ ವಿರುದ್ಧ ಸೋತು ಫಿಫಾ ಟೂರ್ನಿಯಿಂದ ಹೊರ ಬಿದ್ದ ಬೇಸರದಲ್ಲಿ ಕಣ್ಣೀರು ಸುರಿಸಿದ ನೇಮರ್​

ಫಿಫಾ ವಿಶ್ವ ಕಪ್​ನ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಕ್ರೊವೇಶಿಯ ವಿರುದ್ಧ ಆಘಾತಕಾರಿ ಸೋಲು ಕಂಡ ದುಃಖದಲ್ಲಿ ನೇಮರ್​ ಮೈದಾನದಲ್ಲೇ ಕಣ್ಣೀರು ಸುರಿಸಿದ್ದಾರೆ.

VISTARANEWS.COM


on

neymar fifa world cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್(Fifa World Cup)​ನ ಶುಕ್ರವಾರದ ಕ್ವಾರ್ಟರ್​ ಫೈನಲ್​ನಲ್ಲಿ ಬಲಿಷ್ಠ ಬ್ರೆಜಿಲ್​​ ತಂಡ ಕೊವೇಶಿಯ ವಿರುದ್ಧ ಅಚ್ಚರಿಯ ಸೋಲು ಕಂಡು ವಿಶ್ವ ಕಪ್​ ಅಭಿಯಾನವನ್ನು ಅಂತ್ಯಗೊಳಿಸಿದೆ. ಈ ಸೋಲಿನ ಆಘಾತದಿಂದ ತಂಡದ ನಾಯಕ ನೇಮರ್​ ಮೈದಾನದಲ್ಲೇ ಕಣ್ಣೀರು ಸುರಿಸಿದ್ದಾರೆ.

ಈ ಪಂದ್ಯದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟವಾಡಿದ ಕಾರಣ ನಿಗದಿತ ಸಮಯದಲ್ಲಿ ಗೋಲು ಬರಲಿಲ್ಲ. ನೇಮರ್ ಅವರು ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸಿದಾಗ ಬ್ರೆಜಿಲ್​ ಸೆಮಿಫೈನಲ್‌ಗೆ ತಲುಪುವ ವಿಶ್ವಾಸದಲ್ಲಿತ್ತು. ಆದರೆ ಬ್ರೂನೋ ಪೆಟ್‌ಕೋವಿಕ್ ಗೋಲು ಗಳಿಸಿ ಕ್ರೊಯೇಶಿಯ 1-1ರಿಂದ ಸಮಬಲ ಸಾಧಿಸಲು ಕಾರಣರಾದರು. ಆಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ತನ್ನ ಕರಾಮತ್ತು ತೋರಿದ ಕ್ರೊಯೇಶಿಯ ತಂಡ ಬ್ರೆಜಿಲ್ ತಂಡವನ್ನು​ 4-2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.

ಈ ಸೋಲಿನೊಂದಿಗೆ ಬ್ರೆಜಿಲ್​ 6ನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ಕನಸು ಭಗ್ನಗೊಂಡಿತು. ಈ ಆಘಾತಕಾರಿ ಸೋಲಿನ ಬಳಿಕ ಕತಾರ್​ ವಿಶ್ವ ಕಪ್‌ನಲ್ಲಿ ತಮ್ಮನ್ನು ಬೆಂಬಲಿಸಲು ಭಾರೀ ಸಂಖ್ಯೆಯಲ್ಲಿ ಬಂದಿದ್ದ ಬ್ರೆಜಿಲ್​ ಅಭಿಮಾನಿಗಳಿಗೆ ಗುಡ್ ಬೈ ಹೇಳುವಾಗ ದುಃಖ ತಡೆಯಲಾರದೆ ನೇಮರ್​ ಮೈದಾನದಲ್ಲಿ ಕುಳಿತು ಕಣ್ಣೀರಿಟ್ಟರು. ಸಹ ಆಟಗಾರರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ನೇಮರ್​ ತಮ್ಮ ಅಳುವನ್ನು ನಿಯಂತ್ರಸಲು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ | Fifa World Cup | ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಅರ್ಜೆಂಟೀನಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

French Open Final 2024: ಶನಿವಾರ ನಡೆದ ಈ ಫೈನಲ್​ ಪಂದ್ಯದಲ್ಲಿ ಸ್ವಿಯಾಟೆಕ್​ ಅವರ ಆಕ್ರಮಣಕಾರಿ ಆಟದ ಮುಂದೆ ಪಾವೊಲಿನಿ ಸಂಪೂರ್ಣವಾಗಿ ಮಂಕಾದರು. ಯಾವ ಹಂತದಲ್ಲಿಯೂ ಕೂಡ ಪೈಪೋಟಿ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತು.

VISTARANEWS.COM


on

French Open Final 2024
Koo

ಪ್ಯಾರಿಸ್‌: ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌(Iga Swiatek) ಅವರು ಫ್ರೆಂಚ್‌ ಓಪನ್‌(French Open Final 2024) ಟೂರ್ನಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಶನಿವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಜಾಸ್ಮಿನ್​ ಪಾವೊಲಿನಿ(Jasmine Paolini) ವಿರುದ್ಧ ಅಧಿಕಾರಯು ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆವೇ ಅಂಗಣದ ಕೂಟದಲ್ಲಿ 4ನೇ ಹಾಗೂ ಹ್ಯಾಟ್ರಿಕ್​ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಒಟ್ಟಾರೆಯಾಗಿ ಇದು ಸ್ವಿಯಾಟೆಕ್​ಗೆ 5ನೇ ಗ್ರ್ಯಾನ್‌ ಸ್ಲಾಮ್‌ ಕಿರೀಟ. ಒಂದು ಟ್ರೋಫಿ ಯುಎಸ್​ ಓಪನ್​ನಲ್ಲಿ ಒಲಿದಿತ್ತು.

ಶನಿವಾರ ನಡೆದ ಈ ಫೈನಲ್​ ಪಂದ್ಯದಲ್ಲಿ ಸ್ವಿಯಾಟೆಕ್​ ಅವರ ಆಕ್ರಮಣಕಾರಿ ಆಟದ ಮುಂದೆ ಪಾವೊಲಿನಿ ಸಂಪೂರ್ಣವಾಗಿ ಮಂಕಾದರು. ಯಾವ ಹಂತದಲ್ಲಿಯೂ ಕೂಡ ಪೈಪೋಟಿ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತು.

ಸ್ವಿಯಾಟೆಕ್‌ ರೋಲ್ಯಾಂಡ್​ ಗ್ಯಾರಸ್​ನಲ್ಲಿ ಸತತ 21 ಪಂದ್ಯಗಳ ಅಜೇಯ ಓಟ ಮುಂದುವರಿಸಿ ಪಾರಮ್ಯ ಮೆರದರು. 28 ವರ್ಷದ ಪಾವೊಲಿನಿ ಇದೇ ಮೊದಲ ಬಾರಿಗೆ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿವ ನಿರೀಕ್ಷೆಯಲ್ಲಿದ್ದರು. ಆದರೆ ಇದಕ್ಕೆ ಸ್ವಿಯಾಟೆಕ್​ ಅನವು ಮಾಡಿಕೊಳ್ಳಲಿಲ್ಲ.

ಸ್ವಿಯಾಟೆಕ್ ಮೂರು ವರ್ಷಗಳ ಕಾಲ ಪಂದ್ಯಾವಳಿಯನ್ನು ಗೆದ್ದ ಮೂರನೇ ಆಟಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ ಹೆನಿನ್, 2005-07ರಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದರು. ಮೋನಿಕಾ ಸೆಲೆಸ್ 1990 ರ ದಶಕದ ಆರಂಭದಲ್ಲಿ ಈ ಸಾಧನೆಯನ್ನು ಮಾಡಿದ್ದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

ಅಲ್ಕರಾಜ್‌-ಜ್ವರೇವ್ ಫೈನಲ್​ ಫೈಟ್​​


ನಾಳೆ ನಡೆಯುವ ಪುರುಷರ ಸಿಂಗಲ್ಸ್​ ಫೈನಲ್​ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಕಾರ್ಲೋಸ್‌ ಅಲ್ಕರಾಜ್‌ ಮತ್ತು ನಾಲ್ಕನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.

ಅಲ್ಕರಾಜ್​ಗೆ ಇದು ಚೊಚ್ಚಲ ಫ್ರೆಂಚ್​ ಓಪನ್​ ಫೈನಲ್​ ಪಂದ್ಯವಾಗಿದೆ. 14 ಬಾರಿಯ ಚಾಂಪಿಯನ್​ ರಫೆಲ್​ ನಡಾಲ್​ ಮತ್ತು ಸರ್ಬಿಯಾದ ನೊವಾಕ್​ ಜೋಕೊವಿಕ್​ ಗಾಯದಿಂದಾಗಿ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಅಲ್ಕರಾಜ್ ಪ್ರಶಸ್ತಿ ಗೆಲ್ಲುವ ಫೇವರಿಟ್​ ಎನಿಸಿಕೊಂಡಿದ್ದರು. ಇದೀಗ ನಾಳೆ ನಡೆಯುವ ಫೈನಲ್​ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.

ಶುಕ್ರವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಅಲ್ಕರಾಜ್ ಐದು ಸೆಟ್​ಗಳ 4 ಗಂಟೆಗಳ ಕಾಲ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಆಸ್ಟ್ರೇಲಿಯನ್​ ಚಾಂಪಿಯನ್​ ಇಟಲಿಯ ಜನ್ನಕ್​ ಸಿನ್ನರ್​ ಅವರನ್ನು 2-6, 6-3,3-6,6-4, 6-3 ಸೇಟ್​ಗಳ ಗೆಲುವು ಸಾಧಿಸಿದ್ದರು.

Continue Reading

ಕ್ರೀಡೆ

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

IND vs PAK:ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರಿಕೆಟ್​ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ. ಪಂದ್ಯಕ್ಕೆ(IND vs PAK match Weather Reports) ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.

ಮಳೆ ಭೀತಿ


ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ಭಾನುವಾರ ನ್ಯೂಯಾರ್ಕ್​ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಸುಮಾರಿಗೆ ಶೇ. 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

ಪಂದ್ಯದ ಪ್ರಸಾರ


ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಇದನ್ನೂ ಓದಿ IND vs PAK: ಬಾಬರ್‌ ಪಡೆಯನ್ನು ಬೆಂಡೆತ್ತಲಿ ರೋಹಿತ್​ ಸಾರಥ್ಯದ ಟೀಮ್​ ಇಂಡಿಯಾ

ಮುಖಾಮುಖಿ


ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

ಪಿಚ್​ ರಿಪೋರ್ಟ್​


ನಾಸ್ಸೌ ಕ್ರಿಕೆಟ್​ ಸ್ಟೇಡಿಯಂನ ಪಿಚ್​ನಲ್ಲಿ ಹಲವು ಬಿರುಕು ಇರುವುದರಿಂದ ಇದು ಬೌಲರ್​ಗಳಿಗೆ ಯೋಗ್ಯವಾಗಿದೆ. ಆದರೆ ಬ್ಯಾಟರ್​ಗಳು ರನ್​ ಗಳಿಸಲು ಪರದಾಡುವ ಜತೆಗೆ ಗಾಯಗೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ. ಇಲ್ಲಿ ಇದುವರೆಗೆ ನಡೆದ ಎಲ್ಲ ಪಂದ್ಯಗಳು ಕೂಡ ಕನಿಷ್ಠ ಮೊತ್ತದ ಪಂದ್ಯಗಳಾಗಿವೆ. ಪಿಚ್​ ಬಗ್ಗೆ ಈಗಾಗಲೇ ಹಲವು ತಂಡಗಳ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.

ಸಂಭ್ಯಾವ್ಯ ತಂಡಗಳು


ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕೀಪರ್​), ಉಸ್ಮಾನ್ ಖಾನ್, ಫಖರ್ ಜಮಾನ್, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಹಾರಿಸ್ ರೌಫ್.

Continue Reading

ಕ್ರೀಡೆ

IND vs PAK: ಬಾಬರ್‌ ಪಡೆಯನ್ನು ಬೆಂಡೆತ್ತಲಿ ರೋಹಿತ್​ ಸಾರಥ್ಯದ ಟೀಮ್​ ಇಂಡಿಯಾ

IND vs PAK: ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರೀಡಾ ಲೋಕವೇ ನ್ಯೂಯಾರ್ಕ್​ನತ್ತ ಮುಖ ಮಾಡಿ ಸೂಪರ್‌ ಸಂಡೆಯ ಕ್ಷಣಗಣನೆಯಲ್ಲಿ ತೊಡಗಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆಯನ್ನು ಮೀರಿವೆ. ಇದಕ್ಕೆಲ್ಲ ಒಂದೇ ಕಾರಣ, ಭಾರತ- ಪಾಕಿಸ್ತಾನ(IND vs PAK) ನಡುವಿನ ಟಿ20 ವಿಶ್ವಕಪ್‌ ಪಂದ್ಯ(T20 World Cup 2024).

ಭಾನುವಾರ ರಾತ್ರಿ ನಡೆಯುವ ‘ಎ’ ವಿಭಾಗದ ಪಂದ್ಯದಲ್ಲಿ ಬುದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂದ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಜೋಶ್‌ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ರೋಹಿತ್​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಒತ್ತಡವೂ ಇದೆ. ಗೆದ್ದರಷ್ಟೇ ಮುಂದಿನ ಹಂತಕ್ಕೇರಬಹುದು. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಹೆಚ್ಚು.

ಭಾರತ ಬಲಿಷ್ಠ ಆದರೆ…


ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ. ಏಕದಿನ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಅಜೇಯವಾಗಿದ್ದರೂ ಕೂಡ, ಟಿ20ಯಲ್ಲಿ ಅಜೇಯವಲ್ಲ. ಭಾರತದ ಆತಿಥ್ಯದಲ್ಲೇ ದುಬೈನಲ್ಲಿ 2021ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. 2022ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಟಿ20ಯಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಪೈಪೋಟಿ ನೀಡುತ್ತಿದೆ. ಹೀಗಾಗಿ ಎಚ್ಚರದಿಂದ ಆಡಬೇಕು.

ಇದನ್ನೂ ಓದಿ IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜು; ಯಾವುದು ಈ ದಾಖಲೆ?

ಬುಮ್ರಾ ಮೇಲೆ ತಂಡ ಅವಲಂಬಿತ


ವೇಗಿ ಮೊಹಮ್ಮದ್​ ಶಮಿ ಗೈರಿನಲ್ಲಿ ಜಸ್​ಪ್ರೀತ್​ ಬುಮ್ರಾ ಬೌಲಿಂಗ್‌ ಮೇಲೆ ಇಡೀ ತಂಡ ಅವಲಂಬಿತವಾಗಿದೆ! ಹಾಗಾಗಿ ಬುಮ್ರಾ ಬೌಲಿಂಗ್‌ನಲ್ಲಿ ಪೂರ್ಣ ಭಾರವನ್ನು ಹೊರಲೇಬೇಕಾಗಿದೆ. ಅವರಿಗೆ ವೇಗಿ ಸಿರಾಜ್​, ಅರ್ಶ್‌ದೀಪ್‌ ಸಿಂಗ್‌, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಸ್ಪಿನ್ನರ್‌ಗಳಾದ ಜಡೇಜಾ​, ಅಕ್ಷರ್​ ನೆರವು ನೀಡಬೇಕಾಗಿದೆ. ಇವರೆಲ್ಲ ಒಂದಾಗಿ ತಮ್ಮ ಬೌಲಿಂಗ್‌ ಸಾಮರ್ಥ್ಯವನ್ನು ತೋರಿದರೆ ಭಾರತದ ಅಶ್ವಮೇಧವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕೊಹ್ಲಿ ಮೇಲೆ ನಂಬಿಕೆ


ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಒಂದು ರನ್​ಗೆ ಸೀಮಿತರಾದರೂ ಕೂಡ ಪಾಕ್‌ ವಿರುದ್ಧ ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಈ ನಿಟಿನಲ್ಲಿ ಕೊಹ್ಲಿ ಬ್ಯಾಟಿಂಗ್‌ ಅಬ್ಬರ ಇಲ್ಲೂ ನಿರೀಕ್ಷಿಸಬಹುದು. ಟಿ20 ನಂ.1 ಬ್ಯಾಟರ್​ ಸೂರ್ಯಕುಮಾರ್​ ಬ್ಯಾಟ್​ ಮಂಕಾದಂತೆ ಕಾಣುತ್ತಿದೆ. ಈ ಬಾರಿಯ ಐಪಿಎಲ್​ನಲ್ಲಿಯೂ ಒಂದೆರಡು ಪಂದ್ಯಗಳನ್ನು ಬಿಟ್ಟರೆ ಬಹುತೇಕ ಪಂದ್ಯಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರು ಬ್ಯಾಟಿಂಗ್​ ಫಾರ್ಮ್​ಗೆ ಮರಳುವ ಅನಿವಾರ್ಯತೆ ಇದೆ. ಉಳಿದಂತೆ ಯಾವುದೇ ಸಮಸ್ಯೆಗಳಿಲ್ಲ.

ಪಾಕ್‌ ತಂಡವೂ ಬಲಿಷ್ಠ


ಭಾರತ ತಂಡದಂತೆ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗಲ್ಲಿ ವೈವಿಧ್ಯಮಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌, ನಾಯಕ ಬಾಬರ್‌ ಅಜಂ, ಇಫ್ತಿಕರ್​, ಫಕಾರ್​ ಜಮಾನ್​ ಬಲವಾದರೆ ಅತ್ತ ಬೌಲಿಂಗ್‌ನಲ್ಲಿ ಶಾಹೀನ್‌ ಅಫ್ರಿದಿ, ಶದಾಬ್‌, ಆಮೀರ್​, ರವೂಫ್‌ ಮತ್ತು ನಶೀಮ್​ ಶಾ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಅದರಲ್ಲೂ ಹೊಸ ಚೆಂಡಿನಲ್ಲಿ ಅಫ್ರಿದಿ ಬೆಂಕಿ ಎಸೆತಗಳನ್ನು ಎಸೆಯುವುದರಲ್ಲಿ ಎತ್ತಿದ ಕೈ.

Continue Reading

ಕ್ರೀಡೆ

IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜು; ಯಾವುದು ಈ ದಾಖಲೆ?

IND vs PAK: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸದಾ ಉತ್ತಮ ಬ್ಯಾಟಿಂಗ್​ ನಡೆಸುವ ಕೊಹ್ಲಿ ನಾಳಿನ ಪಂದ್ಯದಲ್ಲೂ ಪ್ರಚಂಡ ಬ್ಯಾಟಿಂಗ್​ ನಡೆಸುವ ವಿಶ್ವಾಸದಲ್ಲಿದ್ದಾರೆ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಪಾಕಿಸ್ತಾನ(IND vs PAK) ವಿರುದ್ಧ ನಾಳೆ(ಭಾನುವಾರ, ಜೂ.9) ನಡೆಯುವ ಟಿ20 ವಿಶ್ವಕಪ್(T20 World Cup) ಪಂದ್ಯದಲ್ಲಿ​ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(Virat Kohli) ವಿಶ್ವ ದಾಖಲೆಯೊಂದನ್ನು ಬರೆಯುವ ನಿರೀಕ್ಷೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 9 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಹೆಸರಿನಲ್ಲಿದೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 103* ಬೌಂಡರಿ ಬಾರಿಸಿದ್ದಾರೆ. ಕಳೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲೇ ಕೊಹ್ಲಿಗೆ ಈ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಕೊಹ್ಲಿ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದ್ದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸದಾ ಉತ್ತಮ ಬ್ಯಾಟಿಂಗ್​ ನಡೆಸುವ ಕೊಹ್ಲಿ ಈ ಮೈಲುಗಲ್ಲನ್ನು ಪಾಕ್​ ವಿರುದ್ಧವೇ ಮಾಡಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ನಂಬಿಕೆ. 2022ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಆರಂಭಿಕ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕೊಹ್ಲಿ ಅಸಾಮಾನ್ಯ ಬ್ಯಾಟಿಂಗ್​ ನಡೆಸಿ ಅಜೇಯ 82 ರನ್​ ಬಾರಿಸಿ ಪಾಕ್​ಗೆ ಸೋಲಿನ ರುಚಿ ತೋರಿಸಿದ್ದರು. ಅವರ ಅಂದಿನ ಬ್ಯಾಟಿಂಗ್​ ಗತವೈಭವ ಮತ್ತೆ ಮರುಕಳಿಸಲಿ ಎನ್ನುವುದು ಅಭಿಮಾನಿಗಳ ಆಶಯ.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

ಟ20 ವಿಶ್ವಕಪ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್​ಗಳು

ಆಟಗಾರದೇಶಇನಿಂಗ್ಸ್​ಬೌಂಡರಿ
ಮಹೇಲಾ ಜಯವರ್ಧನೆಶ್ರೀಲಂಕಾ31111
ವಿರಾಟ್ ಕೊಹ್ಲಿಭಾರತ27103*
ತಿಲಕರತ್ನೆ ದಿಲ್ಶನ್ಶ್ರೀಲಂಕಾ35101
ರೋಹಿತ್​ ಶರ್ಮಭಾರತ3695*
ಡೇವಿಡ್​ ವಾರ್ನರ್​ಆಸ್ಟ್ರೇಲಿಯಾ3492
ಕ್ರಿಸ್​ ಗೇಲ್​ವೆಸ್ಟ್​ ಇಂಡೀಸ್​3178
ಜಾಸ್​ ಬಟ್ಲರ್​ಇಂಗ್ಲೆಂಡ್​2769*
ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್​2569*
ಬ್ರೆಂಡನ್ ಮೆಕಲಮ್ನ್ಯೂಜಿಲ್ಯಾಂಡ್2567
ಕುಮಾರ್ ಸಂಗಕ್ಕಾರಶ್ರೀಲಂಕಾ3163

ಪಂದ್ಯಕ್ಕೆ 4 ಹಂತದ ಭದ್ರತೆ


ಈ ಪಂದ್ಯಕ್ಕೆ ಉಗ್ರರ ದಾಳಿಯ ಭೀತಿ(india vs pak terror threat) ಇರುವ ಕಾರಣದಿಂದ ಸ್ಟೇಡಿಯಂಗೆ 4 ಹಂತದ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಕಳೆದ ವಾರ ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯ ನಡೆಯುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ಗೆ ನ್ಯೂಯಾರ್ಕ್​ ಪೊಲೀಸರಿಂದ ಮತ್ತು ಮಿಲಿಟರಿ ಪಡೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Continue Reading
Advertisement
Karnataka police
ಕರ್ನಾಟಕ1 hour ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ1 hour ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ2 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ2 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

IND vs PAK
ಕ್ರೀಡೆ2 hours ago

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

World Environment Day Celebration at Kittur Rani Chennamma Residential School
ದಾವಣಗೆರೆ2 hours ago

Davanagere News: ತರಗನಹಳ್ಳಿಯ ಚನ್ನಮ್ಮ ವಸತಿ ಶಾಲೆಯಲ್ಲಿ ಪರಿಸರ ದಿನಾಚರಣೆ

Physical Abuse
ಕರ್ನಾಟಕ2 hours ago

Physical Abuse: 34 ವರ್ಷದ ವಿಚ್ಛೇದಿತ ಮಹಿಳೆ ಜತೆ 25ರ ಯುವಕನ ಲವ್ವಿ ಡವ್ವಿ; ಗರ್ಭಿಣಿ ಮಾಡಿ ಪರಾರಿ!

World Environment Day Celebration at Kamaruru Government higher Primary School
ಶಿವಮೊಗ್ಗ2 hours ago

World Environment Day: ಚಂದ್ರಗುತ್ತಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

Youth Congress National General Secretary Raksha Ramaiah latest statement
ಚಿಕ್ಕಬಳ್ಳಾಪುರ2 hours ago

Raksha Ramaiah: ಚಿಕ್ಕಬಳ್ಳಾಪುರದಲ್ಲಿ ನಾನಾ ಕಾರಣಗಳಿಂದ ಮತಗಳನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ: ರಕ್ಷಾ ರಾಮಯ್ಯ

Narendra Modi
ದೇಶ3 hours ago

ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌