FIFA World Cup | ರೊನಾಲ್ಡೊ ನಾಯಕತ್ವದ ಪೋರ್ಚುಗಲ್​ ಮಣಿಸಿದ ಮೊರಾಕ್ಕೊ ಸೆಮೀಸ್​ಗೆ - Vistara News

ಕ್ರೀಡೆ

FIFA World Cup | ರೊನಾಲ್ಡೊ ನಾಯಕತ್ವದ ಪೋರ್ಚುಗಲ್​ ಮಣಿಸಿದ ಮೊರಾಕ್ಕೊ ಸೆಮೀಸ್​ಗೆ

ಪೋರ್ಚುಗಲ್​ ತಂಡವನ್ನು 1-0 ಗೋಲ್​ಗಳಿಂದ ಸೋಲಿಸಿದ ಮೊರಾಕ್ಕೊ ತಂಡ ಫಿಫಾ ವಿಶ್ವ ಕಪ್​ನ (FIFA World Cup) ಉಪಾಂತ್ಯಕ್ಕೆ ಎಂಟ್ರಿ ಪಡೆದಿದೆ.

VISTARANEWS.COM


on

FIFA World Cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್​ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳ ಸರಣಿ ಮುಂದುವರಿದಿದೆ. ಶುಕ್ರವಾರ ವಿಶ್ವದ ನಂಬರ್​ ಒನ್​ ತಂಡ ಬ್ರೆಜಿಲ್​ ತಂಡವನ್ನು ಕ್ರೊಯೇಷ್ಯಾ ತಂಡ ಮಣಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿದ್ದರೆ, ಶನಿವಾರ ಮತ್ತೊಂದು ಬಲಿಷ್ಠ ತಂಡ ಪೋರ್ಚುಗಲ್​ಗೆ ಮೊರಾಕ್ಕೊ ತಂಡ ಆಘಾತ ನೀಡಿ ಸೆಮಿ ಫೈನಲ್ಸ್​ಗೆ ಪ್ರವೇಶ ಪಡೆದುಕೊಂಡಿದೆ.

ಇಲ್ಲಿನ ತುಮಾಮಾ ಸ್ಟೇಡಿಯಮ್​ನಲ್ಲಿ ಶನಿವಾರ ಸಂಜೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಮೊರಾಕ್ಕೊ ತಂಡ 1-0 ಗೋಲ್​ಗಳಿಂದ ಜಯ ಸಾಧಿಸಿತು. ಈ ಮೂಲಕ ಮೊರಾಕ್ಕೊ ಬಳಗ ಫಿಫಾ ವಿಶ್ವ ಕಪ್​ನ ಸೆಮಿ ಫೈನಲ್​ ಹಂತಕ್ಕೇರಿದ ಮೊದಲ ಆಫ್ರಿಕನ್​ ದೇಶ ಎಂಬ ದಾಖಲೆ ಬರೆಯಿತು.

ಯೂಸುಫ್​ ಎನ್​ ನೆಸ್​ರೀಸ್​ 42ನೇ ನಿಮಿಷದಲ್ಲಿ ಬಾರಿಸಿದ ಗೋಲ್​, ಉತ್ತರ ಆಫ್ರಿಕಾದ ದೇಶಕ್ಕೆ ವಿಶ್ವ ಕಪ್​ನ ಉಪಾಂತ್ಯಕ್ಕೆ ಪ್ರವೇಶಿಸಲು ಸಾಕಾಯಿತು. ಪೋರ್ಚುಗಲ್​ ತಂಡ ಆರಂಭದಲ್ಲಿ ತನ್ನ ಸ್ಟಾರ್ ಆಟಗಾರ ರೊನಾಲ್ಡೊ ಅವರನ್ನು ಬೆಂಚು ಕಾಯುವಂತೆ ಮಾಡಿತು. ಆದರೆ, ಪ್ರಥಮಾರ್ಧ ಮುಕ್ತಾಯದ ವೇಳೆಗೆ 0-1 ಹಿನ್ನಡೆ ಹೊಂದಿದ ಕಾರಣ ಅವರನ್ನು ಕಣಕ್ಕೆ ಇಳಿಸಿತು. ಆದರೆ, ಮೊರಾಕ್ಕೊ ತಂಡದ ಆಟಗಾರರು ರೊನಾಲ್ಡೊ ಎಂಟ್ರಿಯಿಂದ ಎದುರಾಳಿ ತಂಡಕ್ಕೆ ಲಾಭವಾಗದಂತೆ ನೋಡಿಕೊಂಡರು.

ಮೊರಾಕ್ಕೊ ತಂಡ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್​ ಹಾಗೂ ಫ್ರಾನ್ಸ್​ ತಂಡಗಳ ನಡುವಿನ ಹಣಾಹಣಿಯ ವಿಜೇತರನ್ನು ಎದುರಿಸಲಿದೆ.

ಮೊರಾಕ್ಕೊ ತಂಡದ ಜಯವನ್ನು ಆಫ್ರಿಕಾ ಮತ್ತು ಅರೇಬಿಕ್ ಮಾತನಾಡುವ ಮಧ್ಯಪ್ರಾಚ್ಯದ ದೇಶಗಳಲ್ಲಿ ಜೋರಾಗಿ ಸಂಭ್ರಮಿಸಲಾಯಿತು. ಮೊರಾಕ್ಕೊ ತಂಡ ಹಾಲಿ ಆವೃತ್ತಿಯ ವಿಶ್ವ ಕಪ್​ನಲ್ಲಿ ಬೆಲ್ಜಿಯಮ್​ ಹಾಗೂ ಸ್ಪೇನ್​ ತಂಡವನ್ನು ಮಣಿಸಿ ಮೆಚ್ಚುಗೆ ಪಡೆದಿತ್ತು. ಆದರೆ, ಪೋರ್ಚುಗಲ್​ ವಿರುದ್ಧದ ಗೆಲುವು ಅವರಿಗೆ ಅವಿಸ್ಮರಣೀಯ ಎನಿಸಲಿದೆ.

ಇದನ್ನೂ ಓದಿ | Fifa World Cup| ಆಪರೇಷನ್ ಥಿಯೇಟರ್‌ನಲ್ಲೇ ಫಿಫಾ ವಿಶ್ವ ಕಪ್​ ಪಂದ್ಯ ವೀಕ್ಷಿಸಿದ ರೋಗಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Thailand Open 2024: ಇಂದಿನಿಂದ ಥಾಯ್ಲೆಂಡ್‌ ಓಪನ್‌ ಟೂರ್ನಿ; ಚಿರಾಗ್‌-ಸಾತ್ವಿಕ್‌ ಜೋಡಿ ಮೇಲೆ ಪದಕ ಭರವಸೆ

Thailand Open 2024: ಸಿಂಧು ಅನುಪಸ್ಥಿತಿಯಲ್ಲಿ, ಅಶ್ಮಿತಾ ಚಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಮಾಳವಿಕಾ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯುಯೆ ಮತ್ತು ಆಕರ್ಷಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಾಡಲಿದ್ದಾರೆ.

VISTARANEWS.COM


on

Thailand Open
Koo

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌(Thailand Open 2024) ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿ ಇಂದು(ಮಂಗಳವಾರ) ಆರಂಭಗೊಳ್ಳಲಿದ್ದು ಲಕ್ಷ್ಯ ಸೇನ್‌ ಮತ್ತು ಪಿ.ವಿ. ಸಿಂಧು(PV Sindhu) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಭಾರತದ ಸ್ಟಾರ್‌ ಶಟ್ಲರ್‌ಗಳಾದ, ಅಗ್ರ ಶ್ರೇಯಾಂಕದ ಚಿರಾಗ್‌ ಶೆಟ್ಟಿ(Chirag Shetty)-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy) ಜೋಡಿ ಮೇಲೆ ಪದಕ ಭರವಸೆ ಇರಿಸಲಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌, ಕಿರಣ್‌ ಜಾರ್ಜ್‌, ಸತೀಶ್‌ ಕುಮಾರ್‌ ಸೆಣಸಲಿದ್ದಾರೆ. ಚಿರಾಗ್​ ಮತ್ತು ಸಾತ್ವಿಕ್‌ ಮಲೇಷ್ಯಾದ ನೂರ್‌ ಮೊಹಮ್ಮದ್‌ ಅಝ್ರೀನ್‌ ಅಯೂಬ್‌ ಅಝ್ರೀನ್‌-ಟಾನ್‌ ವೀ ಕಿಯೋಂಗ್‌ ವಿರುದ್ಧ ಆಡಲಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ಥಾಮಸ್‌ ಕಪ್‌ನಲ್ಲಿ ಭಾರತೀಯ ಜೋಡಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗಿದ್ದರು. ಇದೀಗ ಥಾಯ್ಲೆಂಡ್‌ ಟೂರ್ನಿಯಲ್ಲಿ ತಮ್ಮ ಹಿಂದಿನ ಲಯಕ್ಕೆ ಮರಳಿ ಇದೇ ಜುಲೈನಲ್ಲಿ ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್​(Paris Olympics) ಟೂರ್ನಿಗೆ ಸಿದ್ದಗೊಳ್ಳಬೇಕಿದೆ. ಒಲಿಂಪಿಕ್​ಗೆ ಅರ್ಹತೆ ಪಡೆದ ಶಟ್ಲರ್​ಗಳಿಗೆ ಈ ಟೂರ್ನಿ ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಲು ಒಳ್ಳೆಯ ಅವಕಾಶವಾಗಿದೆ.

ಸಿಂಧು ಅನುಪಸ್ಥಿತಿಯಲ್ಲಿ, ಅಶ್ಮಿತಾ ಚಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಮಾಳವಿಕಾ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯುಯೆ ಮತ್ತು ಆಕರ್ಷಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಾಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ, ಪ್ಯಾರಿಸ್ ಗೇಮ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ನಾಲ್ಕನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಕೂಡ ಕಣದಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದ ಕಾರಣ ಈ ಜೋಡಿ ಎರಡನೇ ಸುತ್ತಿನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ India Open 2024 Final: ಇಂಡಿಯಾ ಓಪನ್​ ಫೈನಲ್​ನಲ್ಲಿ ಚಿರಾಗ್‌-ಸಾತ್ವಿಕ್‌ ಜೋಡಿಗೆ ಸೋಲು

ಪ್ಯಾರಿಸ್​ ಒಲಿಂಪಿಕ್ಸ್​ಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಇರುವ ಕಾರಣದಿಂದ ಅವರು ಕಠಿಣ ಅಭ್ಯಾಸದ ಮೊರೆ ಹೋಗಿರುವ ಕಾರಣ ಅವಳಿ ಒಪಿಂಪಿಕ್​ ಪದಕ ವಿಜೇತೆ ಸಿಂಧು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪ್ರತಿಷ್ಠಿತ ಉಬರ್‌ ಕಪ್‌(Uber Cup) ಟೂರ್ನಿಯಿಂದಲೂ ಸಿಂಧು ಹೊರಗುಳಿದಿದ್ದರು. ಸಿಂಧು ಟೋಕಿಯೊ ಒಲಿಂಪಿಕ್ಸ್​ ಬಳಿಕ ಆಡಿದ ಎಲ್ಲ ಪ್ರಮುಖ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಾಣುತ್ತಲೇ ಬಂದಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷಗಳಲ್ಲಿ ನಡೆದ ಟೂರ್ನಿಗಳಲ್ಲಿ ದ್ವಿತೀಯ ಹಂತಕ್ಕೆ ಏರಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. 

40 ವರ್ಷದ ಹಫೀಜ್ ಅವರ ಬಳಿ ಸಿಂಧು ಕೆಲ ತಿಂಗಳುಗಳ ಹಿಂದೆಯೇ ತರಬೇತಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಸಿಂಧು ಅವರು ಹಫೀಜ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಂತಾಗಲಿ ಎನ್ನುವುದು ಸಿಂಧು ಅಭಿಮಾನಿಗಳ ಆಶಯವಾಗಿದೆ.

Continue Reading

ಕ್ರೀಡೆ

Federation Cup: ಫೆಡರೇಷನ್ ಕಪ್‌ ಫೈನಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ನೀರಜ್ ಚೋಪ್ರಾ

Federation Cup: 26 ವರ್ಷದ ನೀರಜ್ ಜೂನ್​ 18ರಂದು ಫಿನ್​ಲ್ಯಾಂಡ್​ನ ಪಾವೊ ನುರ್ಮಿ ಗೇಮ್ಸ್​ನಲ್ಲೂ ಸ್ಪರ್ಧಿಸಲಿದ್ದಾರೆ. ಈ ಟೂರ್ನಿಯಲ್ಲಿ 90 ಮೀ. ಗಡಿ ದಾಟಲು ಅವರು ಪಣ ತೊಟ್ಟಿದ್ದಾರೆ.

VISTARANEWS.COM


on

Federation Cup
Koo

ಭುವನೇಶ್ವರ: ಮೂರು ವರ್ಷದ ಬಳಿಕ ತವರಿನಲ್ಲಿ ನಡೆಯುವ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕೆ ಇಳಿಯಲು ಸಜ್ಜಾದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಮತ್ತು ಕಿಶೋರ್ ಜೇನಾ(Kishore Jena) ಅವರು ಈ ಟೂರ್ನಿಯಲ್ಲಿ ನೇರವಾಗಿ ಫೈನಲ್‌ ಪ್ರವೇಶ ಪಡೆದಿದ್ದಾರೆ. ಇಂದು ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದ್ದು ಬುಧವಾರ ಫೈನಲ್‌ ನಡೆಯಲಿದೆ.

ನೀರಜ್​ ಚೋಪ್ರಾ ಮತ್ತು ಜೇನಾ ಈಗಾಗಲೇ ಹಲವು ಬಾರಿ ಅರ್ಹತಾ ಮಟ್ಟ (75 ಮೀಟರ್‌) ದಾಟಿರುವುದರಿಂದ ಉಭಯ ಜಾವೆಲಿನ್​ ಪಟುಗಳಿಗೆ ನೇರವಾಗಿ ಫೈನಲ್‌ಗೆ ಅರ್ಹತೆ ನೀಡಲಾಯಿತು. ನಾಳೆ ಇವರಿಬ್ಬರು ಫೈನಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವಾರ ನಡೆದ ಡೈಮಂಡ್‌ ಲೀಗ್‌ನ ದೋಹಾ ಲೆಗ್‌ನಲ್ಲಿ ಚೋಪ್ರಾ 88.36 ಮೀ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದಿದ್ದರು. ಏಷ್ಯನ್ ಕ್ರೀಡಾಕೂಟದ ಬೆಳ್ಳಿ ವಿಜೇತ ಜೇನಾ ಈ ಬಾರಿ ಡೈಮಂಡ್‌ ಲೀಗ್‌ಗೆ ಚೊಚ್ಚಲ ಪ್ರವೇಶ ಮಾಡಿ, 76.31 ಮೀ ದೂರ ಎಸೆದಿದ್ದರು.

ಕರ್ನಾಟಕದ ಡಿ.ಪಿ. ಮನು ಕೂಡ ಫೆಡರೇಷನ್ ಕಪ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮನು ಆರನೇ ಸ್ಥಾನ ಪಡೆದಿದ್ದರು.

26 ವರ್ಷದ ನೀರಜ್ ಜೂನ್​ 18ರಂದು ಫಿನ್​ಲ್ಯಾಂಡ್​ನ ಪಾವೊ ನುರ್ಮಿ ಗೇಮ್ಸ್​ನಲ್ಲೂ ಸ್ಪರ್ಧಿಸಲಿದ್ದಾರೆ. ಈ ಟೂರ್ನಿಯಲ್ಲಿ 90 ಮೀ. ಗಡಿ ದಾಟಲು ಅವರು ಪಣ ತೊಟ್ಟಿದ್ದಾರೆ.

ಇದನ್ನೂ ಓದಿ Neeraj Chopra: ಪ್ಯಾರಿಸ್​ ಒಲಿಂಪಿಕ್ಸ್​ಗೆ ಮುನ್ನ 90 ಮೀಟರ್​ ಗಡಿ ದಾಟುವೆ; ನೀರಜ್​ ಚೋಪ್ರಾ ವಿಶ್ವಾಸ

ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್‌ ಈ ಬಾರಿಯೂ ಚಿನ್ನ ಗೆಲ್ಲಲಿ ಎನ್ನುವುದು ಶತ ಕೋಟಿ ಭಾರತೀಯರ ಆಶಯ ಮತ್ತು ಹಾರೈಕೆಯಾಗಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Continue Reading

ಕ್ರೀಡೆ

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದುಗೊಂಡು ತಲಾ 1 ಅಂಕ ಲಭಿಸಿದರೂ ಡೆಲ್ಲಿಗೆ ಪ್ಲೇ ಆಫ್​ ಅವಕಾಶ ಸಿಗುವುದಿಲ್ಲ.

VISTARANEWS.COM


on

IPL 2024 Points Table
Koo

ಅಹಮದಾಬಾದ್​: ಕೆಕೆಆರ್​ ವಿರುದ್ಧದ ಸೋಮವಾರದ ಐಪಿಎಲ್(IPL 2024)​ ಪಂದ್ಯ ರದ್ದು ಗೊಂಡ ಕಾರಣ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್​ ತಂಡ ಈ ಬಾರಿಯ ಟೂರ್ನಿಯಿಂದ ಅಧಿಕೃತವಾಗಿ(IPL 2024 Points Table) ಹೊರಬಿದ್ದಿದೆ. ಸತತವಾಗಿ 2 ಬಾರಿ ಫೈನಲ್​ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಗುಜರಾತ್​ಈ ಬಾರಿ ಲೀಗ್​ನಿಂದಲೇ ಹೊರಬಿದ್ದಿದೆ. ಸದ್ಯ ಗುಜರಾತ್​ ಸೇರಿ ಒಟ್ಟು ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಉಳಿದ 2 ತಂಡಗಳೆಂದರೆ ಪಂಜಾಬ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​.

ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದುಗೊಂಡು ತಲಾ 1 ಅಂಕ ಲಭಿಸಿದರೂ ಡೆಲ್ಲಿಗೆ ಪ್ಲೇ ಆಫ್​ ಅವಕಾಶ ಸಿಗುವುದಿಲ್ಲ.

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಆರ್​ಸಿಬಿ136712 (+0.387)
ಡೆಲ್ಲಿ136712 (-0.482)
ಲಕ್ನೋ126612 (-0.769)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)

ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಇದನ್ನೂ ಓದಿ IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

ಗುಜರಾತ್​ಗೆ ನಿರಾಶಾದಾಯಕ ಅಭಿಯಾನ

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

IPL 2024: ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್​​ ತಂಡ ತೊರೆದಿದ್ದಾರೆ. ಈ ಬೆಳವಣಿಗೆಯ 2008 ರ ಚಾಂಪಿಯನ್ಸ್​ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಬಟ್ಲರ್ 39.88ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ. ಅವರ ಒಂದು ಶತಕವು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲಿಸಲು ರಾಯಲ್ಸ್​ಗೆ ಸಹಾಯ ಮಾಡಿದೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ (IPL 2024) ಇಂಗ್ಲೆಂಡ್ ಕ್ರಿಕೆಟಿಗರು ವಿದಾಯ ಹೇಳಲು ಪ್ರಾರಂಭಿಸಿದ್ದಾರೆ. ಮೇ 22ರಿಂದ ಆರಂಭವಾಗಲಿರುವ 4 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್​ ತಂಡ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ತಯಾರಿ ನಡೆಸಲು ಇಂಗ್ಲಿಷ್ ಕ್ರಿಕೆಟಿಗರು ಐಪಿಎಲ್ ಅನ್ನು ಬೇಗನೆ ತೊರೆಯುತ್ತಾರೆ ಎಂದು ಈ ಹಿಂದೆ ತಿಳಿದುಬಂದಿತ್ತು. ಇದೀಗ ಅವರೆಲ್ಲರೂ ಹೊರಟಿದ್ದಾರೆ.

ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್​​ ತಂಡ ತೊರೆದಿದ್ದಾರೆ. ಈ ಬೆಳವಣಿಗೆಯ 2008 ರ ಚಾಂಪಿಯನ್ಸ್​ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಬಟ್ಲರ್ 39.88ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ. ಅವರ ಒಂದು ಶತಕವು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲಿಸಲು ರಾಯಲ್ಸ್​ಗೆ ಸಹಾಯ ಮಾಡಿದೆ.

ರಾಯಲ್ಸ್ ‘ಎಕ್ಸ್’ ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಬಟ್ಲರ್ ತಂಡವನ್ನು ತೊರೆಯುತ್ತಿರುವುದು ಕಂಡುಬಂದಿದೆ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ, ಜೋಸ್ ಭಾಯ್!” ಎಂದು ಬರೆಯಲಾಗಿದೆ. ಬಟ್ಲರ್ ಅನುಪಸ್ಥಿತಿಯಲ್ಲಿ, ರಾಜಸ್ಥಾನ್ ತಂಡವು ​ 190 ಟಿ 20 ಪಂದ್ಯಗಳಲ್ಲಿ 1 ಶತಕ ಮತ್ತು 34 ಅರ್ಧಶತಕಗಳೊಂದಿಗೆ 4734 ರನ್ ಗಳಿಸಿರುವ ಟಾಮ್ ಕೊಹ್ಲರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.

ರಾಯಲ್ಸ್ ಇನ್ನೂ ಪ್ಲೇಆಫ್​ನಲ್ಲಿ ತನ್ನ ಸ್ಥಾನ ಕಾಯ್ದಿರಿಸಿಲ್ಲ. ಸಂಜು ಸ್ಯಾಮ್ಸನ್ ಪಡೆ ಆಡಿರುವ ಮೊದಲ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋತಿದೆ.

ಆರ್​ಸಿಬಿ ತೊರೆದ ಜಾಕ್ಸ್, ಟಾಪ್ಲೆ


ಆಟಗಾರರು ಬಿಟ್ಟು ಹೋಗುತ್ತಿರುವ ಮತ್ತೊಂದು ತಂಡ ಆರ್​ಸಿಬಿ. ಇಲ್ಲಿನ ಇಬ್ಬರು ಇಂಗ್ಲಿಷ್ ತಾರೆಯರು ಹೊರಗುಳಿದಿದ್ದಾರೆ. 12 ಅಂಕಗಳು ಮತ್ತು +0.387 ನೆಟ್ ರನ್ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಚಾಲೆಂಜರ್ಸ್ ಪ್ಲೇ ಆಫ್​ಗೆ ಪ್ರವೇಶಿಸಲು ಬಹಳ ದೂರವಿಲ್ಲ.

ಇದನ್ನೂ ಓದಿ: IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಋತುರಾಜ್ ಗಾಯಕ್ವಾಡ್ ಅವರ ಸಿಎಸ್​ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ವಿಲ್ ಜಾಕ್ಸ್ ಮತ್ತು ರೀಸ್ ಟಾಪ್ಲೆ ಅವರ ಸೇವೆ ಲಭ್ಯವಿರುವುದಿಲ್ಲ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್​ಸಿಬಿ ಸತತ 5 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ.

ಲಿಯಾಮ್ ಲಿವಿಂಗ್​ಸ್ಟನ್​ ಕೂಡ ನಿರ್ಗಮಿಸಿದ್ದಾರೆ. ಆದರೂ ಪಿಬಿಕೆಎಸ್ ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿರುವುದರಿಂದ ಇದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.

Continue Reading
Advertisement
Job Alert
ಉದ್ಯೋಗ6 mins ago

Job Alert: ಎಎಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Narendra Modi
ದೇಶ14 mins ago

Narendra Modi: “ಗಂಗಾಮಾತೆ ನನ್ನನ್ನು ದತ್ತು ಪಡೆದಿದ್ದಾಳೆ”-ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ

HD Deve gowda prajwal revanna case
ಪ್ರಮುಖ ಸುದ್ದಿ22 mins ago

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

Thailand Open
ಕ್ರೀಡೆ48 mins ago

Thailand Open 2024: ಇಂದಿನಿಂದ ಥಾಯ್ಲೆಂಡ್‌ ಓಪನ್‌ ಟೂರ್ನಿ; ಚಿರಾಗ್‌-ಸಾತ್ವಿಕ್‌ ಜೋಡಿ ಮೇಲೆ ಪದಕ ಭರವಸೆ

US Sanction
ವಿದೇಶ53 mins ago

US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Prajwal Revanna Case Devaraje Gowda
ಕ್ರೈಂ1 hour ago

Prajwal Revanna Case: ವಕೀಲ ದೇವರಾಜೇಗೌಡ ಇಂದು ಪೊಲೀಸ್‌ ಕಸ್ಟಡಿಗೆ

Federation Cup
ಕ್ರೀಡೆ1 hour ago

Federation Cup: ಫೆಡರೇಷನ್ ಕಪ್‌ ಫೈನಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ನೀರಜ್ ಚೋಪ್ರಾ

Israel-Hamas Conflict
ವಿದೇಶ1 hour ago

Israel-Hamas Conflict: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

IPL 2024 Points Table
ಕ್ರೀಡೆ2 hours ago

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

jayanagar murder case
ಕ್ರೈಂ2 hours ago

Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ16 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ16 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ16 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ17 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ17 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ23 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌