Viral Video |ಕೋಳಿ ಪುಕ್ಕದ ಕೆಳಗೆ ಜಾರಿ ಬೆಚ್ಚಗೆ ಕುಳಿತ ನಾಯಿಮರಿ; ಸಂಗಾತಿ ಬಳಿ ಬಂದು ಏನನ್ನೋ ಕೇಳಿದ ಹುಂಜ! - Vistara News

ವೈರಲ್ ನ್ಯೂಸ್

Viral Video |ಕೋಳಿ ಪುಕ್ಕದ ಕೆಳಗೆ ಜಾರಿ ಬೆಚ್ಚಗೆ ಕುಳಿತ ನಾಯಿಮರಿ; ಸಂಗಾತಿ ಬಳಿ ಬಂದು ಏನನ್ನೋ ಕೇಳಿದ ಹುಂಜ!

ಕೋಳಿ ಬಳಿ ಬಂದ ನಾಯಿಮರಿಗಳನ್ನು ನೋಡಿ ಹುಂಜ ಸಿಕ್ಕಾಪಟೆ ಗೊಂದಲಕ್ಕೀಡಾಗಿದೆಯೇನೋ ಎಂಬಂತಿದೆ ಈ ವಿಡಿಯೊ. ದೃಶ್ಯ ನೋಡಿದ ನೆಟ್ಟಿಗರು ತುಂಬ ಮೆಚ್ಚಿಕೊಂಡಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಸು ನಾಯಿಮರಿಗಳಿಗೆ ಹಾಲುಣಿಸಿದ, ಬೆಕ್ಕಿನ ಮರಿಗಳಿಗೆ ಶ್ವಾನ ಮೊಲೆ ಹಾಲು ಕೊಟ್ಟ ವಿಡಿಯೊಗಳು, ಎರಡು ಬೇರೆಬೇರೆ ಪ್ರಭೇದದ ಪ್ರಾಣಿಗಳ ಅತ್ಯಮೂಲ್ಯ ಸ್ನೇಹ ತೋರಿಸುವ ಕ್ಯೂಟ್ ವಿಡಿಯೊಗಳನ್ನೆಲ್ಲ ನಾವು ಆಗಾಗ ಸೋಷಿಯಲ್​ ಮೀಡಿಯಾಗಳಲ್ಲಿ ನೋಡುತ್ತಿರುತ್ತೇವೆ. ಈ ಮೂಕ ಪ್ರಾಣಿ-ಪಕ್ಷಿಗಳ ನಡುವಿನ ಸೌಹಾರ್ದತೆ, ಪರಸ್ಪರ ಸಹಾಯ ಮಾಡಿಕೊಳ್ಳುವ ರೀತಿ ನೋಡಿದರೆ ಸಹಜವಾಗಿಯೇ ಅಚ್ಚರಿಯಾಗುತ್ತದೆ. ಈಗಿಲ್ಲಿ ಒಂದು ವಿಡಿಯೊ ಇದೆ ನೋಡಿ. ಈ ಮುದ್ದಾದ ಕಥೆಯಲ್ಲಿ ಬರುವ ಪಾತ್ರಗಳು ಒಂದು ಕೋಳಿ, ಒಂದು ಹುಂಜ, ಅವುಗಳ ಪುಟಾಣಿ ಮರಿಗಳು ಮತ್ತು ಎರಡು ನಾಯಿಮರಿಗಳು!

ಇಲ್ಲಿ ಕೋಳಿ ಒಂದು ಮರದ ಬುಟ್ಟಿಯಲ್ಲಿ ಕುಳಿತಿದೆ. ಅದರ ಪುಕ್ಕಗಳಡಿಯಲ್ಲಿ ಕುಳಿತ ಮರಿಗಳು ಹಾಲುಣ್ಣುತ್ತಿವೆ. ಅಲ್ಲೇ ಬೆಚ್ಚಗೆ ಆಟವಾಡುತ್ತಿವೆ. ಆದರೆ ನೀವಿಲ್ಲಿ ಕೋಳಿ ಪುಕ್ಕಗಳ ಅಡಿಯಲ್ಲಿ ಬಿಳಿ ಬಣ್ಣದ ನಾಯಿ ಮರಿಯೊಂದನ್ನೂ ನೋಡಬಹುದು. ಆ ಮುದ್ದಾದ ನಾಯಿಮರಿ ಅದೆಷ್ಟು ಜೋರಾಗಿದೆ ಎಂದರೆ, ಅಲ್ಲಿರುವ ಕೋಳಿಮರಿಗಳನ್ನೇ ಓಡಿಸಿ, ತಾನು ಇನ್ನಷ್ಟು-ಮತ್ತಷ್ಟು ಆ ದೊಡ್ಡ ಕೋಳಿಯ ಮಗ್ಗುಲಿಗೆ ಜಾರುತ್ತದೆ. ಹಾಗೇ ಇನ್ನೊಂದು ನಾಯಿಮರಿ ಬುಟ್ಟಿಯ ಸಮೀಪವೇ ಇದೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ಬಿಳಿ ಬಣ್ಣದ, ಕೆಂಪು ಜುಟ್ಟಿನ ಹುಂಜ ತನ್ನ ಸಂಗಾತಿ ಕೋಳಿ ಮುಖದ ಎದುರೇ ಬಂದು ತನ್ನ ಕೊಕ್ಕನ್ನು ಕುಣಿಸುತ್ತದೆ. ‘ಈ ಎರಡು ಮರಿಗಳು ಯಾರು?-ಇವು ನಮ್ಮ ಮರಿಗಳು ಅಲ್ಲವಲ್ಲ, ಯಾವವು ಇವು?!’ ಎಂದು ಹುಂಜ ತನ್ನ ಪತ್ನಿ ಕೋಳಿ ಬಳಿ ಕೇಳಿತ್ತಿದೆಯೆನೋ ಎಂಬಂತಿದೆ ಅದರ ಹಾವಭಾವ.

41,800ಕ್ಕೂ ಹೆಚ್ಚು ಲೈಕ್ಸ್​ ಪಡೆದ ವಿಡಿಯೊ ಸಖತ್​ ವೈರಲ್ ಆಗುತ್ತಿದೆ. ನೆಟ್ಟಿಗರು ಕೋಳಿಯ ವಾತ್ಸಲ್ಯ, ಹುಂಜದ ಅಚ್ಚರಿ, ಗೊಂದಲವನ್ನು ಮೆಚ್ಚಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kerala Floods : ಬಾನೆಟ್​ ಎತ್ತರಕ್ಕೆ ತುಂಬಿದ್ದ ಪ್ರವಾಹದ ನೀರಿನಲ್ಲಿ ಸಾಗಿ ಕುಟುಂಬವೊಂದನ್ನು ರಕ್ಷಿಸಿದ ಮಹೀಂದ್ರಾ ಬೊಲೆರೊ! video ಇದೆ

Kerala Floods :

VISTARANEWS.COM


on

Kerala Floods
Koo

ಬೆಂಗಳೂರು: ಕೇರಳದಲ್ಲಿ ಮಳೆಯಿಂದ ಎಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ. ವಯನಾಡಲ್ಲಿ ಗುಡ್ಡ ಕುಸಿತ ಸಂಭವಿಸಿ ನೂರಾರು ಜೀವಗಳು ಮಣ್ಣು ಪಾಲಾದರೆ, ಇನ್ನೂ ಹಲವು ಕಡೆಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿವೆ. ಪ್ರವಾಹ ಮತ್ತು ಗುಡ್ಡ ಕುಸಿತದಿಂದಾಗಿ ಕೇರಳದ ಜನರ ಜೀವನವೇ ಅಸ್ತವ್ಯಸ್ತಗೊಂಡಿದೆ. ಏತನ್ಮಧ್ಯೆ, ಪ್ರವಾಹ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿರುವವರನ್ನು ರಕ್ಷಿಸುವ ಹಲವಾರು ಸಾಹಸಗಾಥೆಗಳು ಕೇಳಿ ಬರುತ್ತಿವೆ. ಅಂತೆಯೇ ಇಲ್ಲ ಮಲಪ್ಪುರಂನಲ್ಲಿ ಬಾನೆಟ್ ಎತ್ತರಕ್ಕೆ ತುಂಬಿದ್ದ ನೀರಿನ ನಡುವೆ ಮಹೀಂದ್ರಾ ಬೊಲೆರೊ ಕಾರೊಂದು ಸಾಗಿ ಕುಟುಂಬವನ್ನು ರಕ್ಷಿಸಿದ ಪ್ರಸಂಗ ನಡೆದಿದೆ. ಇಲ್ಲಿ ಮಹೀಂದ್ರಾ ಬೊಲೆರೊ ಕಾರಿನ ಸಾಮರ್ಥ್ಯ ಹಾಗೂ ಚಾಲಕನ ಸಾಹಕ್ಕೆ ಶಹಬ್ಬಾಸ್​ ದೊರಕಿದೆ.

ಆಟೋಜರ್ನಲ್ ಇಂಡಿಯಾ ಇನ್​​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಇದರ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಕರಿ ಬಣ್ಣದ ಬೊಲೆರೊ ಕಾರಿನ ಚಾಲಕ ರಸ್ತೆಯೇ ಕಾರಣದಿದ್ದರೂ ಸಾಗಿ ಹಲವರನ್ನು ರಕ್ಷಿಸಿಕೊಂಡು ಬಂದಿರುವುದನ್ನು ಕಾಣಬಹುದು.

ಕೇರಳದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದವರಿಗೆ ಆಪತ್ಬಾಂಧವ ಎನಿಕೊಂಡಿದ್ದ ಮಹೀಂದ್ರಾ ಬೊಲೆರೊ. ಲಕ್ಷಾಂತರ ಜನರನ್ನು ತಮ್ಮ ಗಮ್ಯಸ್ಥಾನಕ್ಕೆ ಸಾಗಿಸಿದ ಮಹೀಂದ್ರಾ ಬೊಲೆರೊ ಎಸ್​​ಯುವಿ ಈಗ ಕೇರಳದ ಮಲಪ್ಪುರಂನಲ್ಲಿ ಅತ್ಯಂತ ಪ್ರಭಾವಿ ಕೆಲಸ ಮಾಡುತ್ತಿದೆ. ಬೊಲೆರೊ ತನ್ನ ಜನರನ್ನು ಉಳಿಸಿದೆ ಮತ್ತು ಸುತ್ತಮುತ್ತಲಿನ ಕುಟುಂಬಗಳನ್ನು ರಕ್ಷಿಸಿದೆ, ಮಹೀಂದ್ರಾ ಬೊಲೆರೊದ ರಕ್ಷಣಾ ಕಾರ್ಯಾಚರಣೆಯನ್ನು ನೀವು ಇಷ್ಟಪಟ್ಟಿದ್ದೀರಾ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಪ್ರಾಣವನ್ನೇ ಒತ್ತೆ ಇಟ್ಟು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ

ದೇವರ ನಾಡು ಕೇರಳ ಈಗ ವರುಣನ (Kerala Floods) ಆರ್ಭಟಕ್ಕೆ ತತ್ತರಿಸಿ ಹೋಗಿದೆ. ವಯನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ (Wayanad Floods) ಉಂಟಾಗಿದ್ದು, ಸಾವಿನ ಸಂಖ್ಯೆ 300 ಸಮೀಪಿಸಿದೆ. 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನು, ವಯನಾಡು ಮಾತ್ರವಲ್ಲ, ಇಡುಕ್ಕಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು, ಇಡುಕ್ಕಿಯಲ್ಲಿ ವ್ಯಕ್ತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ಪ್ರಾಣವನ್ನೂ ಲೆಕ್ಕಿಸದೆ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

ಹೌದು, ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ.

ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲೇಬೇಕಾದ ಕಾರಣ ಅವರು ರಭಸವಾಗಿ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ, ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಸುರಕ್ಷಿತವಾಗಿ ಇಡುಕ್ಕಿ ಆಸ್ಪತ್ರೆ ತಲುಪಿದ್ದಾರೆ. ವ್ಯಕ್ತಿಯ ಪತ್ನಿ ಈಗ ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿಗಾಗಿ ಶೌರ್ಯತನ ಮೆರೆದ ಈತನೇ ನಿಜವಾದ ಪತಿ ಎಂದೆಲ್ಲ ಹೊಗಳಿದ್ದಾರೆ.

Continue Reading

ದೇಶ

Kerala Floods: ಕೇರಳದಲ್ಲಿ ಪ್ರವಾಹ; ಪ್ರಾಣವನ್ನೇ ಒತ್ತೆ ಇಟ್ಟು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ, Video ಇದೆ

Kerala Floods: ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ. ಆದರೂ, ಪ್ರವಾಹವನ್ನು ಲೆಕ್ಕಿಸದೆ ಅವರು ಕಾರು ಚಲಾಯಿಸಿ, ಪತ್ನಿಯನ್ನು ಸುರಕ್ಷಿತವಾಗಿ ಆಸ್ಪತ್ರೆ ಸೇರಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Kerala Floods
Koo

ತಿರುವನಂತಪುರಂ: ದೇವರ ನಾಡು ಕೇರಳ ಈಗ ವರುಣನ (Kerala Floods) ಆರ್ಭಟಕ್ಕೆ ತತ್ತರಿಸಿ ಹೋಗಿದೆ. ವಯನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ (Wayanad Floods) ಉಂಟಾಗಿದ್ದು, ಸಾವಿನ ಸಂಖ್ಯೆ 300 ಸಮೀಪಿಸಿದೆ. 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನು, ವಯನಾಡು ಮಾತ್ರವಲ್ಲ, ಇಡುಕ್ಕಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು, ಇಡುಕ್ಕಿಯಲ್ಲಿ ವ್ಯಕ್ತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ಪ್ರಾಣವನ್ನೂ ಲೆಕ್ಕಿಸದೆ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಹೌದು, ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ.

ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲೇಬೇಕಾದ ಕಾರಣ ಅವರು ರಭಸವಾಗಿ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ, ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಸುರಕ್ಷಿತವಾಗಿ ಇಡುಕ್ಕಿ ಆಸ್ಪತ್ರೆ ತಲುಪಿದ್ದಾರೆ. ವ್ಯಕ್ತಿಯ ಪತ್ನಿ ಈಗ ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿಗಾಗಿ ಶೌರ್ಯತನ ಮೆರೆದ ಈತನೇ ನಿಜವಾದ ಪತಿ ಎಂದೆಲ್ಲ ಹೊಗಳಿದ್ದಾರೆ.

ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ವಯನಾಡು ಜಿಲ್ಲೆಯ ಹಲವೆಡೆ ಸಂಚರಿಸಿದ ಬಳಿಕ ರಾಹುಲ್‌ ಗಾಂಧಿ ಅವರು ಮಾಧ್ಯಮಗಳ ಜತೆ ಮಾತನಾಡಿದರು. “ವಯನಾಡು ಜನರ ಸ್ಥಿತಿಯನ್ನು ನೋಡಿದಾಗ ನನ್ನ ತಂದೆ ಸಾವಿನ ದಿನ, ಆ ದುಃಖವೇ ಆಯಿತು. ಜನರು ತಂದೆ, ತಾಯಿ ಜತೆಗೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇಡೀ ದೇಶದ ಗಮನವೇ ಈಗ ವಯನಾಡು ಮೇಲಿದೆ. ನಾವೆಲ್ಲರೂ ವಯನಾಡು ಪರವಾಗಿ ನಿಲ್ಲೋಣ. ಇದು ಕೇವಲ ವಯನಾಡಿನ ದುರಂತ ಅಲ್ಲ, ರಾಜ್ಯ ಹಾಗೂ ದೇಶದ ದುರಂತವಾಗಿದೆ” ಎಂದು ಭಾವುಕರಾಗಿ ಹೇಳಿದರು.

ಪ್ರಿಯಾಂಕಾ ವಾದ್ರಾ ಅವರು ಪರಿಹಾರ ಕೇಂದ್ರಗಳಿಗೂ ತೆರಳಿ, ಸಂತ್ರಸ್ತರ ಜತೆ ಮಾತನಾಡಿದರು. ಇದಾದ ಬಳಿಕ ಮಾತನಾಡಿದ ಅವರು, “ನಾವು ಜನರಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೆರವಾಗಲು ಬಂದಿದ್ದೇವೆ. ಪರಿಸ್ಥಿತಿ ತುಂಬ ಭೀಕರವಾಗಿದೆ” ಎಂದು ಹೇಳಿದರು. ಭಾರಿ ಮಳೆಯ ಬಳಿಕ ವಯನಾಡಿನ ಸುಮಾರು 80 ಸಾವಿರ ಚದರ ಮೀಟರ್‌ ಭೂಮಿಯು ಕುಸಿದಿದ್ದು, ಸುಮಾರು 8 ಕಿಲೋಮೀಟರ್‌ವರೆಗೆ ಅವಶೇಷವು ಹರಿದುಕೊಂಡು ಹೋಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Continue Reading

Latest

Online Shopping Fraud: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

Online Shopping Fraud: ಅಮೆಜಾನ್ ಆ್ಯಪ್‌ನಲ್ಲಿ ಹೈ ಎಂಡ್ ಮೊಬೈಲ್ ಫೋನ್ ಆರ್ಡರ್ ಮಾಡಿದ ಮುಂಬೈ ವ್ಯಕ್ತಿಗೆ ಅದರ ಬದಲು ಅರ್ಧ ಡಜನ್ ಟೀ ಕಪ್ ಡೆಲಿವರಿ ಆಗಿದೆ. ಹೀಗಾಗಿ ಆ ವ್ಯಕ್ತಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಸ್ಥೆಯೊಂದರಲ್ಲಿ ಡೆಪ್ಯೂಟಿ ಎಂಜಿನಿಯರ್ ಆಗಿರುವ ಅಮರ್ ಚವಾಣ್ ಅವರು ಅಮೆಜಾನ್‌ನಿಂದ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿ ಜುಲೈ 13 ರಂದು ಆನ್ಲೈನ್‌ನಲ್ಲಿ 54,999 ರೂ.ಗಳನ್ನು ಪಾವತಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸೆಲ್ ಬಂದಿತು. ಆದರೆ ಅವರು ಅದನ್ನು ತೆರೆದಾಗ, ಆರು ಚಹಾ ಕಪ್‌ಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

VISTARANEWS.COM


on

Amazoan Fraud
Koo


ಮುಂಬೈ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮಗೆ ಬೇಕಾದ ವಸ್ತುಗಳನ್ನು ಮಾರುಕಟ್ಟೆಗೆ ಹೋಗಿ ಖರೀದಿಸುವ ಬದಲು ಆನ್‌ಲೈನ್ ಆ್ಯಪ್‌ಗಳಲ್ಲೇ ಆರ್ಡರ್ ಮಾಡಿ ಖರೀದಿಸುತ್ತಾರೆ. ಇದರಿಂದ ಅವರ ಕೆಲಸ ಸುಲಭವಾಗುತ್ತದೆ ನಿಜ ಆದರೆ ಅವರಿಗೆ ಇದರ ಮೋಸದ ಬಗ್ಗೆ ಅರಿವಿರುವುದಿಲ್ಲ. ಅದರಲ್ಲೂ ಅಮೆಜಾನ್ (Online Shopping Fraud) ಆನ್‌ಲೈನ್ ಡೆಲಿವರಿ ಆ್ಯಪ್ ಬಗ್ಗೆ ಈ ಹಿಂದೆ ಹಲವು ದೂರು ಕೇಳಿ ಬಂದಿತ್ತು. ಇದೀಗ ಅಮೆಜಾನ್ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ.

ಅಮೆಜಾನ್ ಆ್ಯಪ್‌ನಲ್ಲಿ ಹೈ ಎಂಡ್ ಮೊಬೈಲ್ ಫೋನ್ ಆರ್ಡರ್ ಮಾಡಿದ ಮುಂಬೈ ವ್ಯಕ್ತಿಗೆ ಅದರ ಬದಲು ಅರ್ಧ ಡಜನ್ ಟೀ ಕಪ್ ಡೆಲಿವರಿ ಆಗಿದೆ. ಹೀಗಾಗಿ ಆ ವ್ಯಕ್ತಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಸ್ಥೆಯೊಂದರಲ್ಲಿ ಡೆಪ್ಯೂಟಿ ಎಂಜಿನಿಯರ್ ಆಗಿರುವ ಅಮರ್ ಚವಾಣ್ ಅವರು ಅಮೆಜಾನ್‌ನಿಂದ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿ ಜುಲೈ 13ರಂದು ಆನ್‌ಲೈನ್‌ನಲ್ಲಿ 54,999 ರೂ.ಗಳನ್ನು ಪಾವತಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸೆಲ್ ಬಂದಿತು. ಆದರೆ ಅವರು ಅದನ್ನು ತೆರೆದಾಗ ಆರು ಚಹಾ ಕಪ್‌ಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ಈ ಬಗ್ಗೆ ಅವರು ಅಮೆಜಾನ್ ಮತ್ತು ಮಾರಾಟಗಾರ ಸಂಸ್ಥೆಯನ್ನು ಸಂಪರ್ಕಿಸಿದರು, ಆದರೆ ಯಾವುದೇ ತೃಪ್ತಿಕರ ಉತ್ತರ ಸಿಗಲಿಲ್ಲ. ಹಾಗಾಗಿ ಅವರು ವಂಚನೆ ಆರೋಪದ ಮೇಲೆ ಅಮೆಜಾನ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಮೆಜಾನ್‌ನಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.

ಆದರೆ, ಅಮೆಜಾನ್ ನಲ್ಲಿ ಇಂತಹ ಹಗರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊಬ್ಬ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ‘ವಿವೋ ವೈ20ಎ’ ಮೊಬೈಲ್‌ಗಾಗಿ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಆದ ವಸ್ತು ಕಂಡು ಶಾಕ್ ಆಗಿದ್ದಾನೆ. ಅದರಲ್ಲಿ ಮೊಬೈಲ್ ಬದಲು ಸಾಬೂನು ಸಿಕ್ಕಿದೆ. ತಕ್ಷಣ ಆನ್ಲೈನ್ ಅಪ್ಲಿಕೇಶನ್‌ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದಾರೆ. ಆದರೆ ಅವರಿಂದ ಯಾವುದೇ ಸಹಾಯ ಸಿಗದ ಕಾರಣ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಟ್ಟೆ ಹರಿದುಕೊಂಡು ಪುರುಷನ ಮೇಲೆ ಮುಗಿಬಿದ್ದ ಮಹಿಳೆ! ಅಬ್ಬಾ, ಎಂಥ ಜಗಳಗಂಟಿ ಎಂದ ನೆಟ್ಟಿಗರು!

ಅಲ್ಲದೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಮೆಜಾನ್ ಕಂಪನಿಯಿಂದ ಪ್ರತಿಕ್ರಿಯೆ ಬಂದಿತ್ತು ಹಣ ವಾಪಸ್ ಕೊಡಲಾಗಿದೆ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ಬೆಂಗಳೂರಿನ ದಂಪತಿ ಎಕ್ಸ್ ಬಾಕ್ಸ್ ಕಂಟ್ರೋಲರ್ ಎನ್ನುವ ಪ್ರಾಡಕ್ಟ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು. ಅಮೆಜಾನ್ ಸಂಸ್ಥೆ ಪಾರ್ಸಲ್ ಅನ್ನು ಡೆಲಿವರಿ ಮಾಡಿತ್ತು. ಆದರೆ ಪಾರ್ಸಲ್ ಓಪನ್ ಮಾಡಿದರೆ ಬಾಕ್ಸ್ ನಿಂದ ಜೀವಂತ ನಾಗರಹಾವು ಹೊರ ಬಂದಿದೆ.

Continue Reading

Latest

Viral Video: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

Viral Video: ಉತ್ತರ ಪ್ರದೇಶದ ಲಕ್ನೊದಲ್ಲಿ ಜಲಾವೃತ ರಸ್ತೆಯಲ್ಲಿ ಬೈಕ್‍ನಲ್ಲಿ ಪುರುಷನೊಂದಿಗೆ ಹಿಂಬದಿಯಲ್ಲಿ ಮಹಿಳೆ ಕುಳಿತು ಪ್ರಯಾಣಿಸುತ್ತಿರುವಾಗ ಆಕೆಗೆ ಪುಂಡರ ಗುಂಪು ಕಿರುಕುಳ ನೀಡಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿದೆ ಮತ್ತು ಟೀಕೆಗೆ ಗುರಿಯಾಗಿದೆ. ಉತ್ತರ ಪ್ರದೇಶದ ರಾಜಧಾನಿಯ ತಾಜ್ ಹೋಟೆಲ್ ಸೇತುವೆಯ ಕೆಳಗೆ ಈ ಘಟನೆ ನಡೆದಿದೆ. ಈ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.

VISTARANEWS.COM


on

Viral Video
Koo


ದೇಶದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿದೆ. ರಸ್ತೆಗಳಲ್ಲಿ, ಮನೆಯ ಸುತ್ತಮುತ್ತ, ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಪ್ರವಾಹದಿಂದ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವುದು ಮಾನವೀಯತೆ. ಆದರೆ ಇಲ್ಲೊಂದು ಪುರುಷರು ಗುಂಪು ಮೋಟಾರ್ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ಬುಧವಾರ ಲಕ್ನೋದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಉತ್ತರ ಪ್ರದೇಶದ ಲಕ್ನೊದಲ್ಲಿ ಜಲಾವೃತ ರಸ್ತೆಯಲ್ಲಿ ಬೈಕ್‍ನಲ್ಲಿ ಪುರುಷನೊಂದಿಗೆ ಹಿಂಬದಿಯಲ್ಲಿ ಮಹಿಳೆ ಕುಳಿತು ಪ್ರಯಾಣಿಸುತ್ತಿರುವಾಗ ಆಕೆಗೆ ಪುರುಷರ ಗುಂಪು ಕಿರುಕುಳ ನೀಡಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿದೆ ಮತ್ತು ಟೀಕೆಗೆ ಗುರಿಯಾಗಿದೆ.ಯುಪಿ ರಾಜಧಾನಿಯ ತಾಜ್ ಹೋಟೆಲ್ ಸೇತುವೆಯ ಕೆಳಗೆ ಬುಧವಾರ ಹಗಲಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೊದಲ್ಲಿ, ನೀರು ತುಂಬಿದ ರಸ್ತೆಯಲ್ಲಿ ಸೇತುವೆಯ ಕೆಳಗೆ ಜಮಾಯಿಸಿದ ಪುರುಷರ ಗುಂಪು ಮಹಿಳೆ ಮತ್ತು ಪುರುಷ ಸವಾರಿ ಮಾಡುತ್ತಿದ್ದ ಬೈಕ್ ಅನ್ನು ಸುತ್ತುವರಿದಿದ್ದಾರೆ. ಅವರು ಪ್ರವಾಹದ ರಸ್ತೆಯನ್ನು ದಾಟುತ್ತಿದ್ದಾಗ, ಆಗಲೇ ಅಲ್ಲಿದ್ದ ಪುರುಷರ ಗುಂಪು ಅವರ ಮೇಲೆ ನೀರನ್ನು ಚಿಮುಕಿಸಲು ಪ್ರಾರಂಭಿಸಿದರು. ಭಾರಿ ಮಳೆಯ ಸಮಯದಲ್ಲಿ ಪ್ರವಾಹದ ರಸ್ತೆಯಲ್ಲಿ, ಪುರುಷರ ಈ ಕೃತ್ಯದಿಂದ ಇವರಿಬ್ಬರಿಗೆ ರಸ್ತೆಯನ್ನು ದಾಟಲು ಕಷ್ಟವಾಯಿತು. ಅಲ್ಲದೇ ಕೆಲವು ಪುರುಷರು ಬೈಕ್ ಅನ್ನು ಹಿಂದಿನಿಂದ ಎಳೆಯಲು ಪ್ರಯತ್ನಿಸಿದರು, ಇದರಿಂದ ಅವರಿಬ್ಬರು ಬೈಕ್‍ನಿಂದ ಕೆಳಗೆ ಬಿದ್ದಿದ್ದಾರೆ. ಮಹಿಳೆ ಬೈಕಿನಿಂದ ಬಿದ್ದಾಗ, ಒಬ್ಬ ವ್ಯಕ್ತಿ ಅವಳಿಗೆ ಎದ್ದೇಳಲು ಸಹಾಯ ಮಾಡಿದನು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಸೇತುವೆಯ ಕೆಳಗೆ ಇದ್ದ ಜನಸಮೂಹವನ್ನು ಚದುರಿಸಿದರು.

ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್‌!

ಜಲಾವೃತ ರಸ್ತೆಯಲ್ಲಿ ಪುರುಷ ಮತ್ತು ಮಹಿಳೆಗೆ ಕಿರುಕುಳ ನೀಡಿದ ಪುರುಷರನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಪುರುಷರ ನಡವಳಿಕೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಘಟನೆಯನ್ನು ಟೀಕಿಸಿದಾರೆ.

Continue Reading
Advertisement
Kupwara Encounter
ದೇಶ8 mins ago

ಕಾಶ್ಮೀರದಲ್ಲಿ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ ಆಪ್ತನ ಹತ್ಯೆ; ಈತ ಪಾಕ್‌ ಕಮಾಂಡೋ ಕೂಡ ಹೌದು!

PV Sindhu
ಪ್ರಮುಖ ಸುದ್ದಿ19 mins ago

PV Sindhu : ಪಿವಿ ಸಿಂಧು ಹ್ಯಾಟ್ರಿಕ್​ ಒಲಿಂಪಿಕ್ಸ್​ ಪದಕದ ಕನಸು ಭಗ್ನ, 16ನೇ ಸುತ್ತಿನಲ್ಲಿ ಸೋಲು

Prajwal Revanna
ಕರ್ನಾಟಕ29 mins ago

Prajwal Revanna: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಅಸಲಿ; ಎಫ್‌ಎಸ್‌ಎಲ್‌ ವರದಿ ಬಹಿರಂಗ, ಎಸ್‌ಐಟಿ ತನಿಖೆಗೆ ಬಲ!

MS Dhoni
ಪ್ರಮುಖ ಸುದ್ದಿ37 mins ago

MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

Kabini dam not cracked no need to worry says DCM DK Shivakumar
ಕರ್ನಾಟಕ1 hour ago

Kabini Dam: ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿಲ್ಲ, ಆತಂಕ ಬೇಡ; ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Blood Cancer
ಆರೋಗ್ಯ2 hours ago

Blood Cancer: ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ರನ್ನು ಬಲಿ ಪಡೆದ ರಕ್ತದ ಕ್ಯಾನ್ಸರ್‌ಗೆ ಏನು ಕಾರಣ? ಇದರ ಲಕ್ಷಣಗಳೇನು?

Kerala Floods
ಪ್ರಮುಖ ಸುದ್ದಿ2 hours ago

Kerala Floods : ಬಾನೆಟ್​ ಎತ್ತರಕ್ಕೆ ತುಂಬಿದ್ದ ಪ್ರವಾಹದ ನೀರಿನಲ್ಲಿ ಸಾಗಿ ಕುಟುಂಬವೊಂದನ್ನು ರಕ್ಷಿಸಿದ ಮಹೀಂದ್ರಾ ಬೊಲೆರೊ! video ಇದೆ

DK Shivakumar
ಕರ್ನಾಟಕ2 hours ago

DK Shivakumar: ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್‌ ಪ್ರಶ್ನೆಗಳ ಸವಾಲು, ಹೆಜ್ಜೆಗೆ ಒಂದು ಪ್ರಶ್ನೆ ಎಂದ ಡಿಕೆಶಿ

Paris Olympics 202
ಪ್ರಮುಖ ಸುದ್ದಿ2 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 2ರಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಯ ವಿವರ ಇಲ್ಲಿದೆ

Former minister B Sriramulu alleged that the Congress government is not interested in the construction of the Kampli bridge
ಬಳ್ಳಾರಿ2 hours ago

Ballari News: ಕಂಪ್ಲಿ ಸೇತುವೆ ನಿರ್ಮಿಸಲು ಆಸಕ್ತಿ ವಹಿಸದ ಕಾಂಗ್ರೆಸ್ ಸರ್ಕಾರ; ಶ್ರೀರಾಮುಲು ಆರೋಪ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ10 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ11 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ11 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌