Celebrity Fashion | ಲೆಜೆಂಡರಿ ಫುಟ್‌ಬಾಲ್‌ ಐಕಾನ್‌ ಲಿಯೊನೆಲ್‌ ಮೆಸ್ಸಿ ಫ್ಯಾಷನ್‌ ಲೋಕ - Vistara News

ಫುಟ್‌ಬಾಲ್

Celebrity Fashion | ಲೆಜೆಂಡರಿ ಫುಟ್‌ಬಾಲ್‌ ಐಕಾನ್‌ ಲಿಯೊನೆಲ್‌ ಮೆಸ್ಸಿ ಫ್ಯಾಷನ್‌ ಲೋಕ

ಲೆಜೆಂಡರಿ ಫುಟ್‌ಬಾಲ್‌ ಐಕಾನ್‌ ಲಿಯೊನೆಲ್‌ ಮೆಸ್ಸಿ ಕೇವಲ ಖ್ಯಾತ ಫುಟ್‌ಬಾಲ್‌ ಆಟಗಾರ ಮಾತ್ರವಲ್ಲ, ಅವರು ತಮ್ಮದೇ ಆದ ಫ್ಯಾಷನ್‌ ಲೆಬೆಲ್‌ ಹೊಂದಿದ್ದಾರೆ. ಅವರ ಫ್ಯಾಷನ್‌ ಲವ್‌ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Celebrity Fashion
ಚಿತ್ರಗಳು : ಮೆಸ್ಸಿ, ಲೆಜೆಂಡರಿ ಫುಟ್‌ಬಾಲ್‌ ಐಕಾನ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಜಗತ್ತಿನ ಎಲ್ಲೆಡೆ ಭಾರಿ ಸುದ್ದಿಯಲ್ಲಿರುವ ಲೆಜೆಂಡರಿ ಫುಟ್‌ಬಾಲ್‌ ಐಕಾನ್‌ ಲಿಯೊನೆಲ್‌ ಮೆಸ್ಸಿ ಕೂಡ ಫ್ಯಾಷನ್‌ ಲವರ್‌ ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಹೌದು. ಮೆಸ್ಸಿ, ಕೇವಲ ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳನ್ನು ಧರಿಸಿ ಪ್ರಮೋಟ್‌ ಮಾಡುವುದು ಮಾತ್ರವಲ್ಲ, ಅವರು ತಮ್ಮದೇ ಆದ ಫ್ಯಾಷನ್‌ ಬ್ರಾಂಡ್‌ ಕೂಡ ಹೊಂದಿದ್ದಾರೆ. ತಮ್ಮ ಫ್ಯಾಷನಿಸ್ಟಾ ಪತ್ನಿಯ ಮಾರ್ಗದರ್ಶನದಲ್ಲಿ ಫ್ಯಾಷನ್‌ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ.

Celebrity Fashion

ಮೆಸ್ಸಿ ಸ್ಟೋರ್‌ ಫ್ಯಾಷನ್‌ ಲೆಬೆಲ್‌

ಮೆಸ್ಸಿ ತಮ್ಮದೇ ಆದ ದಿ ಮೆಸ್ಸಿ ಸ್ಟೋರ್‌ ಎಂಬ ಮೆನ್ಸ್‌ ಲೈಫ್‌ಸ್ಟೈಲ್‌ ಹಾಗೂ ಫ್ಯಾಷನ್‌ ಬ್ರಾಂಡ್‌ ಮಾಲೀಕತ್ವ ಹೊಂದಿದ್ದಾರೆ. ಸಹೋದರಿಯ ಟೀಮ್‌ ಇವೆಲ್ಲವನ್ನೂ ನೋಡಿಕೊಳ್ಳುತ್ತಿದೆ. ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳಾದ ಟಾಮಿ ಹೈಫಿಗೆರ್‌, ಫೈಲಾ ಸೇರಿದಂತೆ ಟಾಪ್‌ ಬ್ರಾಂಡ್‌ಗಳ ಕಲೆಕ್ಷನ್‌ ಲಭ್ಯವಿರುವ ರಿಟೇಲ್‌ ಸ್ಟೋರ್‌ ಇದಾಗಿದೆ. ಇನ್ನು ತಮ್ಮ ಈ ಸ್ಟೋರ್‌ಗೆ ಖುದ್ದು ಮೆಸ್ಸಿಯೇ ಬ್ರಾಂಡ್‌ ಅಂಬಾಸಡರ್‌. ಅಷ್ಟು ಮಾತ್ರವಲ್ಲ, ಆಗಾಗ ತಮ್ಮ ಬ್ರಾಂಡ್‌ ಪ್ರಮೋಷನನ್ನು ತಾವೇ ಮಾಡುತ್ತಾರೆ. ಆನ್‌ಲೈನ್‌ನಲ್ಲೂ ಇವರ ಲೆಬೆಲ್‌ನ ನಾನಾ ಬಗೆಯ ಫ್ಯಾಷನ್‌ವೇರ್‌ಗಳು ದೊರೆಯುತ್ತವೆ. ಇನ್ನು ಮೆಸ್ಸಿ ತಮ್ಮ ಡೈಲಿ ರುಟೀನ್‌ನಲ್ಲಿ ಧರಿಸುವ ಸಿಂಪಲ್‌ ಪೋಲೋ ಶರ್ಟ್‌ನಿಂದ ಹಿಡಿದು ಏರ್‌ಪೋರ್ಟ್ ಲುಕ್‌ವರೆಗೂ ತಮ್ಮ ಬ್ರಾಂಡ್‌ನಡಿ ಬರುವ ಎಲ್ಲಾ ಫ್ಯಾಷನ್‌ವೇರ್‌ಗಳ ಪ್ರಮೋಟ್‌ ಕೂಡ ಮಾಡುತ್ತಾರೆ. ಇದು ಅವರ ಫ್ಯಾಷನ್‌ ಪ್ರೇಮವನ್ನು ತೋರ್ಪಡಿಸುತ್ತದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ ವಿದ್ಯಾ.

Celebrity Fashion

ಮೆಸ್ಸಿ ಫ್ಯಾಷೆನಬಲ್‌ ಔಟ್‌ಫಿಟ್ಸ್‌

ಡೆನೀಮ್‌, ಪುಲ್‌ ಓವರ್ಸ್‌, ವೆಲ್ವೆಟ್‌ ಬ್ಲೇಝರ್‌ ಹಾಗೂ ಪೋಲ್ಕಾ ಜಾಕೆಟ್‌ ಸೇರಿದಂತೆ ನಾನಾ ಬಗೆಯ ಫ್ಯಾಷನಬಲ್‌ ಉಡುಪುಗಳನ್ನು ಧರಿಸಿ ಹಲವು ಬಾರಿ ಫ್ಯಾಷನ್‌ ಮಾಗಝೀನ್‌ಗಳ ಸುದ್ದಿಯಾಗಿದ್ದಾರೆ. ಇವೆಲ್ಲದರ ನಡುವೆ ಮೆಸ್ಸಿಯವರಿಗೆ ಕಂಫರ್ಟಬಲ್‌ ಕ್ಲಾತಿಂಗ್‌ಗಳೆಂದರೇ ಪ್ರಿಯವಂತೆ. ತಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಹೊಂದಿರುವ ಮೆಸ್ಸಿಯವರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಪತ್ನಿ ಆಂಟೆನೆಲಾ ಸದಾ ಗೈಡ್‌ ಮಾಡುತ್ತಾರಂತೆ. ಅಂದಹಾಗೆ, ಇವರು ಕೂಡ ಫ್ಯಾಷನಿಸ್ಟಾ. ಈಗಾಗಲೇ ಸಾಕಷ್ಟು ಫ್ಯಾಷನ್‌ ಬ್ರಾಂಡ್‌ಗಳಿಗೆ ಮಾಡೆಲ್‌ ಆಗಿ ಕಾಣಿಸಿಕೊಂಡಿರುವುದರೊಂದಿಗೆ ಹೈ ಪ್ರೊಫೈಲ್‌ ಫ್ಯಾಷನ್‌ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜತೆಗೆ ಪತಿಯ ಎಲ್ಲಾ ಫ್ಯಾಷನ್‌ ಹಾಗೂ ಸ್ಟೈಲ್‌ಗೆ ಸಂಬಂಧಿಸಿದ ಕಾರ್ಯಗಳನ್ನು ಇವರೇ ನೋಡಿಕೊಳ್ಳುತ್ತಾರಂತೆ.

Celebrity Fashion

ಮೆಸ್ಸಿ ಔಟ್‌ಫಿಟ್‌ ಸೆಲೆಕ್ಷನ್‌

ಹೂಡಿ, ಜೀನ್ಸ್‌ ಹಾಗೂ ಪೋಲೋ ಶರ್ಟ್ ಇವರ ವಾರ್ಡ್ರೋಬ್‌ನಲ್ಲಿ ಕಾಯಂ ಸ್ಥಾನ ಪಡೆದಿದೆಯಂತೆ.

ಸಾಕಷ್ಟು ಟ್ಯಾಟೂ ಹಾಕಿಸಿಕೊಂಡಿರುವ ಮೆಸ್ಸಿಗೆ ಟ್ಯಾಟೂಗಳೆಂದರೆ ಪ್ರಿಯವಂತೆ.

ಒಮ್ಮೆ ಹೇರ್‌ ಕಲರ್‌ ಬದಲಿಸಿ ಆಟದಿಂದ ಕೆಲಕಾಲ ಸಸ್ಪೆಂಡ್‌ ಆಗುವ ತನಕ ಕಾಂಟ್ರವರ್ಸಿಗೆ ಸಿಲುಕಿ ಹಾಕಿಕೊಂಡಿದ್ದರಂತೆ.

ಟ್ರಾವೆಲ್‌ ಟೈಮ್‌ನಲ್ಲಿ ಪಕ್ಕಾ ಹಾಲಿಡೇ ಔಟ್‌ಫಿಟ್‌ನಲ್ಲೆ ಕಾಣಿಸಿಕೊಳ್ಳುತ್ತಾರಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star travel Fashion | ಕೂಲ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಹಿತಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕ್ರೀಡೆ

UR Cristiano: ಯೂಟ್ಯೂಬ್​ ಚಾನೆಲ್ ಆರಂಭಿಸಿ ಕೆಲವೇ ಗಂಟೆಗಳಲ್ಲಿ ವಿಶ್ವ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

UR Cristiano: ಕ್ರಿಸ್ಟಿಯಾನೋ ರೊನಾಲ್ಡೊ ‘UR Cristiano’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

VISTARANEWS.COM


on

UR Cristiano
Koo

ದುಬೈ: ವಿಶ್ವಶ್ರೇಷ್ಠ ಫುಟ್ಬಾಲಿಗ, ಪೋರ್ಚುಗಲ್‌ ತಂಡದ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಇದೀಗ ಪುಟ್ಬಾಲ್​ನಿಂದ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ಒಂದನ್ನು ಆರಂಭಿಸಿದ್ದು, ಇದು ತೆರೆ ಕಂಡ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 15 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬ್​ಗಳನ್ನು (subscribers) ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ ‘UR Cristiano’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಟ್ವಿಟರ್​ ಎಕ್ಸ್​ನಲ್ಲಿ ರೊನಾಲ್ಡೊ ಇದನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ, 15 ಮಿಲಿಯನ್ ಅಭಿಮಾನಿಗಳು ಯೂಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಮಾಡಿದ್ದಾರೆ. ರೊನಾಲ್ಡೊ ಕಿರು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದು, ಗೆಳತಿ ಮತ್ತು ಮಕ್ಕಳೊಂದಿಗೆ ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದಾರೆ.

ಯೂಟ್ಯೂಬ್ ಚಾನೆಲ್​ ಆರಂಭಿಸಿದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮೊದಲ ಎರಡು ಗಂಟೆಗಳಲ್ಲೇ ರೊನಾಲ್ಡೊ ವಿಶ್ವ ದಾಖಲೆ ಬರೆದಿದ್ದು, ಯೂಟ್ಯೂಬ್​ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ್ದು ಮಾತ್ರವಲ್ಲ, 24 ಗಂಟೆಗಳಲ್ಲಿ ರೊನಾಲ್ಡೊ ಅವರ ಯೂಟ್ಯೂಬ್ ಖಾತೆಯ ಚಂದಾದಾರರ ಸಂಖ್ಯೆ 10 ಮಿಲಿಯನ್‌ಗೆ ತಲುಪಿದೆ, ಇದು ಮತ್ತೊಂದು ವಿಶ್ವ ದಾಖಲೆಯಾಗಿದೆ. ಎಲ್ಲ ಗೋಲ್ಡನ್​, ಡೇಮಂಡ್​ ಮತ್ತು ಸಿಲ್ವರ್​ ಬಟನ್​ಗಳನ್ನು ಕೆಲವೇ ಗಂಟೆಗಳಲ್ಲಿ ಪಡೆದುಕೊಂಡಿದ್ದಾರೆ.

ಯೂಟ್ಯೂಬ್‌ನಲ್ಲಿ ವೇಗವಾಗಿ 10 ಮಿಲಿಯನ್ ಚಂದಾದಾರರನ್ನು ಪಡೆದ ದಾಖಲೆಯನ್ನು ಈ ಹಿಂದೆ ಹ್ಯಾಮ್ಸ್ಟರ್ ಕಾಂಬ್ಯಾಟ್ ಹೊಂದಿತ್ತು. ಈ ಮೈಲಿಗಲ್ಲನ್ನು ತಲುಪಲು ಈ ಚಾನಲ್ 7 ದಿನಗಳನ್ನು ತೆಗೆದುಕೊಂಡಿತ್ತು. ಆದರೆ ರೊನಾಲ್ಡೊ ಅವರ ಚಾನಲ್ ಕೆಲವೇ ಗಂಟೆಗಳಲ್ಲಿ ಈ ದಾಖಲೆಯನ್ನು ಪುಟಿಗಡ್ಡಿದೆ.

ಇದನ್ನೂ ಓದಿ Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

ರೊನಾಲ್ಡೊ ಚಾನೆಲ್‌ ಆರಂಭಿಸಿದ ದಿನವೇ ಅವರ ಪಾರ್ಟ್ನರ್​ ಜಾರ್ಜಿನಾ ರೊಡ್ರಿಗಸ್ ಅವರೊಂದಿಗಿನ ರಸಪ್ರಶ್ನೆ ಗೇಮ್​ ಸೇರಿಂತೆ ಹಲವು ವೀಡಿಯೊಗಳನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋಗಳು ಕೂಡ ಮಿಲಿಯನ್ಸ್​ಗಟ್ಟಲೆ ವೀಕ್ಷಣೆ ಕಾಣುತ್ತಿವೆ. ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನೆಚ್ಚಿನ ಫುಟ್‌ಬಾಲ್ ಬಗ್ಗೆ ನಿರಂತರವಾಗಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರೊನಾಲ್ಡೊ ಅವರ ನೆಚ್ಚಿನ ವಿಷಯಗಳು, ಕುಟುಂಬ, ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆಯೂ ಮಾತನಾಡಲಿದ್ದಾರೆ ಎನ್ನಲಾಗಿದೆ.

Continue Reading

ಕ್ರೀಡೆ

Kylian Mbappe: ಬಾಲ್ಯದ ಕನಸಿನ ರಿಯಲ್‌ ಮ್ಯಾಡ್ರಿಡ್‌ ತಂಡ ಸೇರಿದ ಕೀಲಿಯನ್‌ ಎಂಬಾಪೆ

Kylian Mbappe: ಕಳೆದ ವರ್ಷ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ತನ್ನ ಕ್ಲಬ್​ ಪರ ಆಡಲು ಎಂಬಾಪೆಗೆ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿತ್ತು. ಆದರೆ, ಎಂಬಾಪೆ ಈ ಆಫರ್​ ತಿರಸ್ಕರಿಸಿದ್ದರು. 

VISTARANEWS.COM


on

Kylian Mbappe
Koo

ಮ್ಯಾಡ್ರಿಡ್‌: ಫ್ರಾನ್ಸ್‌ ತಂಡದ ಸ್ಟಾರ್ ಫುಟ್ಬಾಲ್​ ಆಟಗಾರ ಕೀಲಿಯನ್‌ ಎಂಬಾಪೆ(Kylian Mbappe) ತಮ್ಮ ಕನಸಿನ ರಿಯಲ್‌ ಮ್ಯಾಡ್ರಿಡ್‌(Real Madrid) ತಂಡವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮುಂದಿನ 5 ವರ್ಷಗಳ ಕಾಲ ಅವರು ಈ ಕ್ಲಬ್​ ಪರ ಆಡಲಿದ್ದಾರೆ. ಎಂಬಾಪೆಯನ್ನು ತಂಡಕ್ಕೆ ಸ್ವಾಗತಿಸಲು ದಾಖಲೆ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಕ್ಲಬ್‌ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್‌ 9ನೇ ನಂಬರ್ ಜೆರ್ಸಿ ನೀಡಿ ತಂಡಕ್ಕೆ ಸ್ವಾಗತಿಸಿದರು. ಎಂಬಾಪೆ ಜತೆ ತಂದೆ-ತಾಯಿ ಕೂಡ ಭಾಗಿಯಾಗಿದ್ದರು. ತಂಡ ಸೇರಿದ ಬಳಿಕ ಮಾತನಾಡಿದ ಎಂಬಾಪೆ ‘ನನ್ನ ಬಾಲ್ಯಕಾಲದ ಕನಸು ಇಂದು ನನಸಾಗಿದೆ. ನನ್ನ ಕುಟುಂಬಕ್ಕೆ ಸಂತಸವಾಗಿದೆ. ನನ್ನ ತಾಯಿ ಭಾವನೆಗಳನ್ನು ತಡೆಯಲಾಗದೇ ಅತ್ತಿದ್ದಾರೆ’ ಎಂದರು.

ಕಳೆದ ವರ್ಷ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ತನ್ನ ಕ್ಲಬ್​ ಪರ ಆಡಲು ಎಂಬಾಪೆಗೆ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿತ್ತು. ಆದರೆ, ಎಂಬಾಪೆ ಈ ಆಫರ್​ ತಿರಸ್ಕರಿಸಿದ್ದರು. 

ಎಂಬಾಪೆ ಮೈದಾನದಲ್ಲಿ ಇದ್ದರೆ ದಾಖಲೆಗಳು ನಿರ್ಮಾಣವಾಗುತ್ತವೆ. ಪಂದ್ಯಕ್ಕೊಂದು ಹೊಸ ತಿರುವು ಸಿಗುತ್ತದೆ. ಆತನ ಪಾದಗಳಲ್ಲಿ ಅಡಗಿರುವ ಮಾಂತ್ರಿಕ ಶಕ್ತಿ, ಮುಂದೊಂದು ದಿನ ಆತನನ್ನು ಫುಟ್ಬಾಲ್‌ ದಿಗ್ಗಜರ ಸಾಲಿಗೆ ಸೇರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇದನ್ನೂ ಓದಿ Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

ಯುಇಎಫ್‌ಎ ಚಾಂಪಿಯನ್‌ ಲೀಗ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ, ಡಿವಿಶನ್ 1ನಲ್ಲಿ 10 ಗೋಲು ದಾಖಲಿಸಿದ ಅತೀ ಕಿರಿಯ ಆಟಗಾರ, 2016–17ರ ಋತುವಿನಲ್ಲಿ 26 ಗೋಲು ಬಾರಿಸಿ ದಾಖಲೆ, ಚಾಂಪಿಯನ್‌ ಲೀಗ್‌ನಲ್ಲಿ 10 ಗೋಲು ಬಾರಿಸಿದ ಅತೀ ಕಿರಿಯ ಆಟಗಾರ, ಲೀಗ್‌ ಪ್ರಶಸ್ತಿ ಗೆದ್ದ ಅತೀ ಕಿರಿಯ ಆಟಗಾರ, ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತೀ ಕಿರಿಯ ಫ್ರೆಂಚ್ ಆಟಗಾರ..‌ ಹೀಗೆ ದಾಖಲೆಗಳನ್ನು ಹೊಂದಿರುವ ಎಂಬಾಪೆ ಇದೀಗ ಪ್ರತಿಷ್ಠಿತ ರಿಯಲ್‌ ಮ್ಯಾಡ್ರಿಡ್‌ ಕ್ಲಬ್​ ಪರ ಕೂಡ ಹಲವು ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

4ನೇ ಬಾರಿಗೆ ಯುರೋ ಕಪ್ ಗೆದ್ದ ಸ್ಪೇನ್​


ಬರ್ಲಿನ್: ಕಳೆದ ಭಾನುವಾರ ನಡೆದಿದ್ದ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್​ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್​ನಲ್ಲಿ ಮುಗ್ಗರಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

Continue Reading

ಕ್ರೀಡೆ

Copa America Final: ದಾಖಲೆಯ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ

Copa America Final: ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ ಅವರು ಪಂದ್ಯದ ವೇಳೆ ಗಾಯಗೊಂಡು ಪೂರ್ಣವಾಧಿ ಮುಗಿಯುವ ಮುನ್ನವೇ ಮೈದಾನ ತೊರೆದರೂ ಕೂಡ ಕೊಲಂಬಿಯಾಗೆ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ.

VISTARANEWS.COM


on

Copa America Final
Koo

ಫ್ಲೋರಿಡಾ: ಇಂದು (ಸೋಮವಾರ) ಬೆಳಗ್ಗೆ ನಡೆದ ಕೊಪಾ ಅಮೆರಿಕ(Copa America Final) ಫುಟ್‌ಬಾಲ್‌ ಪ್ರಶಸ್ತಿ ಸುತ್ತಿನ ಕದನದಲ್ಲಿ ಹಾಲಿ ಚಾಂಪಿಯನ್ಸ್‌ ಅರ್ಜೆಂಟೀನಾ ತಂಡ ಕೊಲಂಬಿಯ(Argentina vs Colombia) ವಿರುದ್ಧ 1-0 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟವನ್ನು ಉಳಿಸಿಕೊಂಡಿದೆ. ಜತೆಗೆ ಲಿಯೊನೆಲ್‌ ಮೆಸ್ಸಿ ಬಳಗವು ದಾಖಲೆಯ 16ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಇದಕ್ಕೂ ಮುನ್ನ ಉರುಗ್ವೆ ತಂಡದೊಂದಿಗೆ (15 ಪ್ರಶಸ್ತಿ) ಗರಿಷ್ಠ ಪ್ರಶಸ್ತಿ ಗೆದ್ದ ದಾಖಲೆಯನ್ನು ಹಂಚಿಕೊಂಡಿತ್ತು. ಇದೀಗ ಉರುಗ್ವೆ ದಾಖಲೆಯನ್ನು ಹಿಂದಿಕ್ಕಿದೆ.

ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ(Lionel Messi) ಅವರು ಪಂದ್ಯದ ವೇಳೆ ಗಾಯಗೊಂಡು ಪೂರ್ಣವಾಧಿ ಮುಗಿಯುವ ಮುನ್ನವೇ ಮೈದಾನ ತೊರೆದರೂ ಕೂಡ ಕೊಲಂಬಿಯಾಗೆ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ನಾಯಕ ಗಾಯದಿಂದ ಹೊರಗುಳಿದರೂ ಕೂಡ ಅರ್ಜೆಂಟೀನಾ ಆಟಗಾರರು ಯಾವುದೇ ಒತ್ತಡ ಮತ್ತು ವಿಚಲಿತರಾಗದೆ ಆಡುವ ಮೂಲಕ ಪಂದ್ಯವನ್ನು ಗೆದ್ದು ಬೀಗಿದರು. ಈ ಗೆಲುವಿನೊಂದಿಗೆ ಅರ್ಜೆಂಟೀನಾ ತಂಡ ಸತತ ಮೂರು ಪ್ರಶಸ್ತಿ ಗೆದ್ದ ದಾಖಲೆ ನಿರ್ಮಿಸಿತು.

ಪ್ರಮುಖ ಪಂದ್ಯದಲ್ಲಿ ಗಾಯಗೊಂಡು ಆಟಲು ಸಾಧ್ಯವಾಗದ ಬೇಸರದಲ್ಲಿ ಮೆಸ್ಸಿ ಡಗೌಟ್​ನಲ್ಲಿ ಕುಳಿತು ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು. ತಂಡದ ಸಹ ಆಟಗಾರರು, ಕೋಚ್​ ಎಷ್ಟೇ ಸಂತೈಸಿದರೂ ಕೂಡ ಮೆಸ್ಸಿಯ ಅಳು ನಿಲ್ಲುವಂತೆ ಕಾಣುತ್ತಿರಲಿಲ್ಲ. ಈ ವಿಡಿಯೊ ವೈರಲ್​ ಆಗಿದೆ.

ಎರಡನೇ ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಲೌಟಾರೊ ಮಾರ್ಟಿನೆಜ್‌ ಅವರು ಗೋಲು ಬಾರಿಸಿದರು. ಈ ಬಳಿಕ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮಾರ್ಟಿನೆಜ್‌ ಅವರ ಏಕೈಕ ಗೋಲು ಅರ್ಜೆಂಟೀನಾಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿತು. 23 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಆಡಲಿಳಿದಿದ್ದ ಕೊಲಂಬಿಯಾಗೆ ನಿರಾಸೆಯಾಯಿತು.

ಇದನ್ನೂ ಓದಿ ಹಾಲಿ ಚಾಂಪಿಯನ್​ ಬ್ರೆಝಿಲ್​ಗೆ ಸೋಲುಣಿಸಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಅರ್ಜೆಂಟೀನಾ

4ನೇ ಬಾರಿಗೆ ಯುರೋ ಕಪ್ ಗೆದ್ದ ಸ್ಪೇನ್​


ಬರ್ಲಿನ್: ಫುಟ್ಬಾಲ್​ ಅಭಿಮಾನಿಗಳ ನಿರೀಕ್ಷೆಯಂತೆ ಈ ಬಾರಿಯ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಫೈನಲ್​ ಪಂದ್ಯದಲ್ಲಿ ಮೊದಲಾರ್ಥದ ಆಟದ ಅವಧಿಯಲ್ಲಿ ಇತ್ತಂಡಗಳಿಂದಲೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ, 47ನೇ ನಿಮಿಷದಲ್ಲಿ ಸ್ಪೇನ್​ ಮೊದಲ ಯಶಸ್ಸು ಪಡೆಯಿತು. ಮೊರಾಟಾ ನೀಡಿದ ಅತ್ಯುತ್ತಮ ಪಾಸ್ ಅನ್ನು ನಿಕೋ ವಿಲಿಯಮ್ಸ್ ಗೋಲಾಗಿ ಪರಿವರ್ತಿಸಿದರು. ಇದಾದ ಬಳಿಕ 73ನೇ ನಿಮಿಷದಲ್ಲಿ ಇಂಗ್ಲೆಂಡ್​ ಆಟಗಾರ ಕೋಲ್ ಪಾಲ್ಮರ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.

1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್​ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್​ನಲ್ಲಿ ಮುಗ್ಗರಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

Continue Reading

ಕ್ರೀಡೆ

Euro 2024 final: 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್​

Euro 2024 final:ಆರು ವರ್ಷಗಳ ಬಳಿಕ ಇತ್ತಂಡಗಳು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಪಂದ್ಯ ಇದಾಗಿತ್ತು. 2008 ಹಾಗೂ 2012ರಲ್ಲಿ ಸತತ 2 ಯುರೋ ಕಪ್ ಜಯಿಸಿದ್ದ ಸ್ಪೇನ್, 2010ರಲ್ಲಿ ಫಿಫಾ ಚಾಂಪಿಯನ್ ಆಗಿತ್ತು.

VISTARANEWS.COM


on

Euro 2024 final
Koo

ಬರ್ಲಿನ್: ಫುಟ್ಬಾಲ್​ ಅಭಿಮಾನಿಗಳ ನಿರೀಕ್ಷೆಯಂತೆ ಈ ಬಾರಿಯ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್​ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್​ನಲ್ಲಿ ಮುಗ್ಗರಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

ಆರು ವರ್ಷಗಳ ಬಳಿಕ ಇತ್ತಂಡಗಳು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಪಂದ್ಯ ಇದಾಗಿತ್ತು. 2008 ಹಾಗೂ 2012ರಲ್ಲಿ ಸತತ 2 ಯುರೋ ಕಪ್ ಜಯಿಸಿದ್ದ ಸ್ಪೇನ್, 2010ರಲ್ಲಿ ಫಿಫಾ ಚಾಂಪಿಯನ್ ಆಗಿತ್ತು.

ಇದನ್ನೂ ಓದಿ T20 World Cup 2026: ಆತಿಥೇಯ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ​

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಫೈನಲ್​ ಪಂದ್ಯದಲ್ಲಿ ಮೊದಲಾರ್ಥದ ಆಟದ ಅವಧಿಯಲ್ಲಿ ಇತ್ತಂಡಗಳಿಂದಲೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ, 47ನೇ ನಿಮಿಷದಲ್ಲಿ ಸ್ಪೇನ್​ ಮೊದಲ ಯಶಸ್ಸು ಪಡೆಯಿತು. ಮೊರಾಟಾ ನೀಡಿದ ಅತ್ಯುತ್ತಮ ಪಾಸ್ ಅನ್ನು ನಿಕೋ ವಿಲಿಯಮ್ಸ್ ಗೋಲಾಗಿ ಪರಿವರ್ತಿಸಿದರು. ಇದಾದ ಬಳಿಕ 73ನೇ ನಿಮಿಷದಲ್ಲಿ ಇಂಗ್ಲೆಂಡ್​ ಆಟಗಾರ ಕೋಲ್ ಪಾಲ್ಮರ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.

ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತ್ತಿದ್ದಾಗ 86ನೇ ನಿಮಿಷದಲ್ಲಿ ಸ್ಪೇನ್​ ತಂಡದ ಮಿಡ್ ಫೀಲ್ಡರ್ ಆಟಗಾರ ಮೈಕೆಲ್ ಒಯರ್ಜಾಬಲ್ ಗೋಲು ಬಾರಿಸಿ ಮಿಂಚಿದರು. 2-1 ಗೋಲು ದಾಖಲಿಸಿದ ಸ್ಪೇನ್​ ಆ ಬಳಿಕ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟಿತು. ಇಂಗ್ಲೆಂಡ್​ಗೆ ಹಲವು ಗೋಲು ಬಾರಿಸುವ ಅವಕಾಶ ಲಭಿಸಿದರೂ ಕೂಡ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಅದರಲ್ಲೂ ಪಂದ್ಯದ 90ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ ಸುವರ್ಣ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಕೈ ಚೆಲ್ಲಿತು. ಒಂದೊಮ್ಮೆ ಈ ಗೋಲು ಬಾರಿಸಿದರೆ ಶೂಟೌಟ್​ನಲ್ಲಿ ಗೆಲ್ಲುವ ಅವಕಾಶ ಇರುತ್ತಿತ್ತು.

ಸೆಮಿಫೈನಲ್​ ಪಂದ್ಯದಲ್ಲಿ ಸ್ಪೇನ್ ತಂಡ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್​ಗೆ ಪ್ರವೇಶಿಸಿತ್ತು. ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್(Netherlands) ವಿರುದ್ಧ 2-1 ಗೋಲುಗಳ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌