5 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆಟವಾಡುತ್ತಿದ್ದ ಮಗುವನ್ನು ಕಾಮುಕ ಎತ್ತಿಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - Vistara News

ಕ್ರೈಂ

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆಟವಾಡುತ್ತಿದ್ದ ಮಗುವನ್ನು ಕಾಮುಕ ಎತ್ತಿಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರ ದೆಹಲಿಯ ಭಲ್ಸ್ವಾ ಡೇರಿ ಬಳಿ ಡಿಸೆಂಬರ್​ 21ರಂದು ಮಗು ಆಟವಾಡುತ್ತಿತ್ತು. ಅಂದು ಸಂಜೆ ಪಾಲಕರು ತಮ್ಮ ಮಗು ಕಾಣೆಯಾದ ಬಗ್ಗೆ ದೂರು ಕೊಟ್ಟಿದ್ದರು. ಮರುದಿನವೇ ಅದು ಪಾರ್ಕ್​ ಬಳಿ ಪತ್ತೆಯಾಗಿದೆ.

VISTARANEWS.COM


on

5 years old Girl Raped In Delhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಾಮುಕರಿಗೆ ‘ಹೆಣ್ಣು’ ಸಿಕ್ಕರಾಯಿತು. ಅದು ಮಗುವಾಗಿರಲಿ, ಯುವತಿ/ಮಹಿಳೆ, ಕೊನೆಗೆ ವೃದ್ಧೆಯನ್ನೂ ಅವರು ಬಿಡದೆ ಅತ್ಯಾಚಾರ ಮಾಡುತ್ತಾರೆ. ಈ ರಾಕ್ಷಸೀಕೃತ್ಯಕ್ಕೆ ಕಡಿವಾಣವೇ ಇಲ್ಲ ಎಂಬಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಈಗ ಮತ್ತೊಂದು ಅತ್ಯಾಚಾರ ಪ್ರಕರಣಕ್ಕೆ ಸಾಕ್ಷಿಯಾಗಿದೆ. 5 ವರ್ಷದ ಪುಟ್ಟ ಹುಡುಗಿಯನ್ನು ಅಪಹರಿಸಿ, ಅತ್ಯಾಚಾರ ಮಾಡಲಾಗಿದೆ.

ಉತ್ತರ ದೆಹಲಿಯ ಭಲ್ಸ್ವಾ ಡೇರಿ ಬಳಿ ಡಿಸೆಂಬರ್​ 21ರಂದು ಮಗು ಆಟವಾಡುತ್ತಿತ್ತು. ಕಾಮುಕನೊಬ್ಬ ಬಂದು ಅದನ್ನು ಎತ್ತಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ನಾಪತ್ತೆಯಾದ ಬಗ್ಗೆ ಬುಧವಾರವೇ ಅದರ ಪಾಲಕರು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮರುದಿನವೇ ಅಂದರೆ ಡಿ.22ರಂದು ಬೆಳಗ್ಗೆ ಈ ಮಗು ಅಲ್ಲಿಯೇ ಸಮೀಪದ ಪಾರ್ಕ್​​ ಬಳಿ, ಪೊಲೀಸ್​ ಕಂಟ್ರೋಲ್​ ರೂಮಿನ ವಾಹನದ ಸಿಬ್ಬಂದಿಗೆ ಸಿಕ್ಕಿದೆ. ಅದನ್ನು ಅವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಶೀಲನೆ ನಡೆಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ಆಗಿದ್ದನ್ನು ದೃಢಪಡಿಸಿದ್ದಾರೆ. ಅದರ ಖಾಸಗಿ ಅಂಗಕ್ಕೆ ಗಾಯವಾಗಿದೆ ಎಂದು ಹೇಳಿದ್ದಾರೆ.

ಈ ಬಾಲಕಿಯ ಅಪ್ಪ-ಅಮ್ಮ ಇಬ್ಬರೂ ದಿನಗೂಲಿ ಕಾರ್ಮಿಕರು. ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆಗೆ ಬರುತ್ತಾರೆ. ಮಗು ಅಲ್ಲೇ ಅಕ್ಕಪಕ್ಕದ ಮನೆಯ ಮಕ್ಕಳೊಟ್ಟಿಗೆ ಆಟವಾಡಿಕೊಂಡು ಇರುತ್ತದೆ. ಡಿ.21ರಂದು ಕೂಡ ದಂಪತಿ ಕೆಲಸಕ್ಕೆ ಹೋಗಿದ್ದರು. ಮಗು ಪಕ್ಕದ ಮನೆ ಮಕ್ಕಳೊಂದಿಗೆ ಅಲ್ಲಿ ಡೇರಿ ಸಮೀಪ ಆಟವಾಡುತ್ತಿತ್ತು. ಮಧ್ಯಾಹ್ನ 2 ಗಂಟೆಗೇ ಅದು ಆಡಲು ಹೋಗಿದ್ದು, ರಾತ್ರಿ 8.30 ಆದರೂ ವಾಪಸ್​ ಬಂದಿರಲಿಲ್ಲ. ಮೊದಲು ಅಕ್ಕ-ಪಕ್ಕದ ಮನೆಯವರನ್ನೆಲ್ಲ ಕೇಳಿದ ಪಾಲಕರು ನಂತರ ನಮಗೆ ದೂರು ಕೊಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೇವೇಶ್​ ಕುಮಾರ್​ ಮಹ್ಲಾ ತಿಳಿಸಿದ್ದಾರೆ. ಹಾಗೇ, ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಇನ್ನು ಕೇಸ್​​ಗೆ ಸಂಬಂಧಪಟ್ಟಂತೆ ವರದಿ ನೀಡುವಂತೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್​ ಕೊಟ್ಟಿದೆ. ಪ್ರಕರಣದ ತನಿಖೆ ಯಾವ ಗತಿಯಲ್ಲಿದೆ? ಯಾರನ್ನಾದರೂ ಬಂಧಿಸಲಾಗಿದೆಯೇ? ವಿಚಾರಣೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿ, ಉತ್ತರ ಕೇಳಿದೆ.

ಇದನ್ನೂ ಓದಿ: Sexual harassment | ಪೋಷಕರ ಆರೈಕೆಗಾಗಿ ಕರೆಸಿಕೊಂಡ ಯುವತಿಯ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ರೇವಣ್ಣ ಮೊಬೈಲ್‌ ಮಂಗಮಾಯ! ಏನಂತಾರೆ ಪ್ರಜ್ವಲ್ಲು?

Prajwal Revanna Case: ಪ್ರಜ್ವಲ್‌ ರೇವಣ್ಣ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ತಮ್ಮ ಮೊಬೈಲ್‌ ಕಳೆದುಹೋಗಿದೆ ಎಂದಿದ್ದಾರೆ. ತಮ್ಮ ಮೊಬೈಲ್‌ ಒಂದು ವರ್ಷದ ಹಿಂದೆಯೇ ಕಳೆದುಹೋಗಿದ್ದು, ಆ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿರುವುದಾಗಿಯೂ ಹೇಳಿದ್ದಾರೆ.

VISTARANEWS.COM


on

prajwal revanna case mobile
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ (physical abuse) ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna case) ನಿನ್ನೆ ಇಡೀ ಕೋರ್ಟ್‌ ಹಾಗೂ ವೈದ್ಯಕೀಯ ಪರೀಕ್ಷೆಗಳ (medical test) ನಡುವೆ ಸಮಯ ಕಳೆದರು. ಈ ನಡುವೆ ಎಸ್‌ಐಟಿ (SIT) ಹಲವಾರು ಪ್ರಶ್ನೆಗಳ ಮೂಲಕ ಗ್ರಿಲ್‌ ಮಾಡಿದ್ದು, ಅದರಲ್ಲಿ ಮುಖ್ಯವಾದುದು ಅವರು ಅಶ್ಲೀಲ ವಿಡಿಯೋಗಳನ್ನು (obscene video) ಚಿತ್ರೀಕರಿಸಿಕೊಂಡ ಮೊಬೈಲ್‌ ಎಲ್ಲಿದೆ ಎಂಬುದಾಗಿತ್ತು.

ಈ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ತಮ್ಮ ಮೊಬೈಲ್‌ ಕಳೆದುಹೋಗಿದೆ ಎಂದಿದ್ದಾರೆ. ತಮ್ಮ ಮೊಬೈಲ್‌ ಒಂದು ವರ್ಷದ ಹಿಂದೆಯೇ ಕಳೆದುಹೋಗಿದ್ದು, ಆ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿರುವುದಾಗಿಯೂ ಹೇಳಿದ್ದಾರೆ.

ಪ್ರಜ್ವಲ್‌ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ಅದರಲ್ಲಿ ಮೊಬೈಲ್‌ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದು ಹೋಗಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್‌ ಹೇಳಿದ್ದಾರೆ. ಈ ಹೇಳಿಕೆ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.

ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್‌ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ಈ ಉತ್ತರ ದೊರೆತಿದೆ. ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್‌ ತಳ್ಳಿ ಹಾಕಿದ್ದಾರೆ.

ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್‌ ಪ್ರಜ್ವಲ್‌ ವಿರುದ್ಧದ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯವಾಗಿದೆ. ಈ ಮೊಬೈಲ್‌ ಸಿಕ್ಕಿದರೆ, ಒಂದು ವೇಳೆ ವಿಡಿಯೋಗಳನ್ನು ಅಳಿಸಿದ್ದರೂ ಅದರಿಂದ ರಿಟ್ರೀವ್‌ ಮಾಡಬಹುದು. ಆದರೆ ಮೊಬೈಲ್‌ ಸಂಪೂರ್ಣ ನಾಶವಾಗಿದ್ದರೆ, ಯಾವುದೇ ಮೂಲ ರೆಕಾರ್ಡ್‌ಗಳು ಸಿಗಲಾರದು. ಅದರಿಂದ ಫಾರ್‌ವರ್ಡ್‌ ಆಗಿರುವ ವಿಡಿಯೋಗಳು ಸೆಕೆಂಡರಿ ಸಾಕ್ಷ್ಯಗಳೆನಿಸಿಕೊಳ್ಳುತ್ತವೆ. ಹೀಗಾಗಿ ಮೊಬೈಲ್‌ ಪಡೆಯಲು ಎಸ್‌ಐಟಿ ಪ್ರಯತ್ನ ನಡೆಸಬೇಕಿದೆ.

6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್

ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna back in India ) ಅವರನ್ನು 6 ದಿನಗಳ ಕಾಲ ಎಸ್​ಐಟಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಎಸಿಎಮ್​ಎಮ್​​ ನ್ಯಾಯಾಲಯದ ನ್ಯಾಯಧೀಶ ಎನ್​. ಶಿವಕುಮಾರ್​​ ಈ ಆದೇಶ ಹೊರಡಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್​ ರೇವಣ್ಣ ಅವರನ್ನು ಬಂಧಿಸಿದ್ದ ಎಸ್​ಐಟಿ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಗಂಭೀರ ಆರೋಪಗಳನ್ನು ಹೊತ್ತಿರುವ ಅವರ ತನಿಖೆಗಾಗಿ ಎಸ್​ಐಟಿ ತನ್ನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.

ಬೆಂಗಳೂರಿನ 42ನೇ ಎಸಿಎಮ್​ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು ಪ್ರಜ್ವಲ್ ಅವರಿಗೆ ಯಾವುದೇ ಕಿರಕುಗಳ ನೀಡಬಾರದು ಎಂದು ಎಸ್​ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ವೈದ್ಯಕೀಯ ಪರೀಕ್ಷೆ ಸೇರಿದಂತೆ ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವಂತೆ ಪ್ರಜ್ವಲ್ ರೇವಣ್ಣ ಅವರಿಗೂ ಸೂಚನೆ ನೀಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಶುಕ್ರವಾರ ಸೇರಿದಂತೆ ಒಟ್ಟು 15 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಪ್ರಜ್ವಲ್ ಪರ ವಕೀಲರು 1 ದಿನ ಸಾಕು ಎಂದು ವಾದಿಸಿದ್ದರು. ಆದರೆ, ನ್ಯಾಯಾಧೀಶರು 6 ದಿನಗಳನ್ನು ಮಾನ್ಯ ಮಾಡಿದ್ದಾರೆ.

ಗುರುವಾರ ರಾತ್ರಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ತನಕ ಎಸ್​ಐಟಿ ಕಚೇರಿಯಲ್ಲೇ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರು. ಬೆಳಗ್ಗೆ ಅವರ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಅವರಿಂದ ಅಗತ್ಯ ದಾಖಲೆಗಳಿಗೆ ಸಹಿ ಮಾಡಿಕೊಂಡರು. ಆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.‌

ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ಕಾರು ಚಾಲಕನನ್ನು ವಶಕ್ಕೆ ಪಡೆದ ಎಸ್‌ಐಟಿ

Continue Reading

ಚಿಕ್ಕಮಗಳೂರು

Prajwal Revanna Case: ಭವಾನಿ ರೇವಣ್ಣ ಕಾರು ಚಾಲಕನನ್ನು ವಶಕ್ಕೆ ಪಡೆದ ಎಸ್‌ಐಟಿ

Prajwal Revanna Case: ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ಭವಾನಿ ರೇವಣ್ಣ ಅವರ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಭವಾನಿ ರೇವಣ್ಣ ಅವರ ಬಗ್ಗೆ ಮಾಹಿತಿ ಕಲೆ ಹಾಕಲು ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

VISTARANEWS.COM


on

Prajwal revanna Case
Koo

ಚಿಕ್ಕಮಗಳೂರು: ಭವಾನಿ ರೇವಣ್ಣ ಅವರ ಕಾರು ಚಾಲಕನನ್ನು ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿ ವಶಕ್ಕೆ ಪಡೆದಿದ್ದು, ಆತನಿಂದ ಅಗತ್ಯ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ (Prajwal Revanna Case) ಅವರನ್ನು 6 ದಿನಗಳ ಕಾಲ ಎಸ್‌ಐಡಿ ಕಸ್ಟಡಿಗೆ ನೀಡಿದ ಬೆನ್ನಲ್ಲೇ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಚಾಲಕನನ್ನು ವಶಕ್ಕೆ ಪಡೆದು ಭವಾನಿ ರೇವಣ್ಣ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಜಿತ್ ವಶಕ್ಕೆ ಪಡೆದಿರುವ ಚಾಲಕ. ನಾಲ್ಕೈದು ದಿನದ ಹಿಂದೆ ಅತ್ತೆ ಮನೆಗೆ ಬಂದಿದ್ದ ಅಜಿತ್‌ನನ್ನು ಇಲ್ಲಿನ ಕಲ್ಯಾಣ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ಕೆ.ಆರ್‌.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಅವರ ಬಂಧನಕ್ಕಾಗಿ ಎಸ್‌ಐಟಿ ಮುಂದಾಗಿದೆ. ಹೀಗಾಗಿ ಭವಾನಿ ರೇವಣ್ಣ ಅವರ ಬಗ್ಗೆ ಮಾಹಿತಿ ಕಲೆ ಹಾಕಲು ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರಿನ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ಹಾಜರಿದ್ದರು. ಆ ನಂತರ ಮೇ 6 ರಂದು ಹೊಳೆನರಸೀಪುರದ ಮನೆಯಲ್ಲಿ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರನ್ನು ಭೇಟಿಯಾದ ನಂತರ ಹೊಳೆನರಸೀಪುರ ಮನೆಯಿಂದ ಹೋದವರು ಇದುವರೆಗೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಜ್ಞಾತದಲ್ಲಿರುವ ಅವರಿಗಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ.

ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ!

Bhavani Revanna

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ನಿರಾಕರಿಸಿ ಆರು ದಿನ ಎಸ್​​ಐಟಿ ವಶಕ್ಕೆ ನೀಡಿದ ಬೆನ್ನಲ್ಲೇ ಅವರ ತಾಯಿ ಭವಾನಿ ಅವರಿಗೆ ಆಘಾತ ಎದುರಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾಗೊಂಡಿರುವ ಕಾರಣ ಎಸ್​ಐಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಗಳಿವೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ಪೊಲೀಸರು ಭವಾನಿ ಅವರಿಗೆ ತನಿಖೆಗೆ ಹಾಜರಾಗುವಂತೆ 15 ದಿನಗಳ ಹಿಂದೆ ನೋಟಿಸ್​ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸದ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಏತನ್ಮಧ್ಯೆ ಶುಕ್ರವಾರ ಬೆಳಗ್ಗೆ ಎಸ್​ಐಟಿ ಅಧಿಕಾರಿಗಳೂ ಭವಾನಿ ಅವರಿಗೆ ಎರಡನೇ ನೋಟಿಸ್​ ನೀಡಿದ್ದರು. ಅವರು ಮನೆಯಲ್ಲಿ ಇಲ್ಲದ ಕಾರಣ ನೋಟಿಸ್ ಅಂಟಿಸಿ ಬಂದಿದ್ದರು. ಇದೀಗ ಕೋರ್ಟ್​​ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಮೇ 29ರಂದು ಈ ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರವರೆಗೆ ತೀರ್ಪು ಕಾಯ್ದಿರಿಸಿತ್ತು. ಹಾಗಾಗಿ, ಮೇ 31 ತಾಯಿ-ಮಗನಿಗೆ ಪ್ರಮುಖ ದಿನವಾಗಿದೆ. ಅತ್ತ, ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಎಚ್‌.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ವಿಚಾರಣೆ ವೇಳೆ ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, “ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು” ಎಂದರು.

ಎಸ್‌ಪಿಪಿ ವಾದವೇನಿತ್ತು?

ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ರೂಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣದ ಹಿಂದೆ ಇವರ ಕೈವಾಡವಿದೆ. ಸಂತ್ರಸ್ತ ಮಹಿಳೆಗೆ ಊಟ ನೀರು, ಸರಿಯಾಗಿ ಕೊಟ್ಟಿಲ್ಲ‌. ಆಕೆಗೆ ಬಟ್ಟೆ ಸೀರೆಯನ್ನು ಕೊಟ್ಟಿಲ್ಲ. ಆರೋಪಿ ಸತೀಶ್ ಬಾಬಣ್ಣ ಜತೆ ಭವಾನಿ ಮಾತನಾಡಿದ್ದಾರೆ. ಆರೋಪಿ ಸತೀಶ್ ಬಾಬಣ್ಣ ಕೇಳಿದಾಗ ಭವಾನಿಯವರು ಆಯ್ತು 150 ರೂಪಾಯಿ ಅಥವಾ 200 ರೂಪಾಯಿ ಸೀರೆ ಕೊಡ್ಸು ಎಂಬುದಾಗಿ ಸೂಚಿಸಿದ್ದಾರೆ” ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಕೊನೆಗೆ ನ್ಯಾಯಾಲಯವು ತೀರ್ಪನ್ನು ಮೇ 31ರವರೆಗೆ ಕಾಯ್ದಿರಿಸಿತ್ತು.

ಇದನ್ನೂ ಓದಿ: Prajwal Revanna : ನನ್ನ ತೇಜೋವಧೆಯಾಗಿದೆ; ಪ್ರತಿ ದೂರು ನೀಡಲು ಪ್ರಜ್ವಲ್ ರೇವಣ್ಣ ಸಿದ್ಧತೆ

ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್‌‘

ಪ್ರಜ್ವಲ್‌ ರೇವಣ್ಣ ಅವರು ಮೇ 31ರಂದು ಭಾರತಕ್ಕೆ ಆಗಮಿಸಲಿದ್ದು, ನಾಳೆ ಅಂದರೆ ಮೇ 30ರಂದೇ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ವಕೀಲ ಅರುಣ್‌ ಮನವಿ ಮಾಡಿದ್ದರು. ಆದರೆ, 39ರಂದೇ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್‌, ಈ ಕುರಿತು ಪ್ರತಿಕ್ರಿಯಿಸುವಂತೆ ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಿದೆ. ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಮೂರೂ ಪ್ರಕರಣಗಳಲ್ಲಿ ಎಸ್‌ಐಟಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು. ಹಾಗಾಗಿ, ಮೇ 31ರಂದು ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿತು.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನವೀನ್‌ ಗೌಡ, ಎಚ್.ಪಿ. ಪುಟ್ಟರಾಜು, ಕಾರ್ತಿಕ್‌ ಹಾಗೂ ಚೇತನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೂನ್ 3 ಕ್ಕೆ ಮುಂದೂಡಲಾಗಿದೆ.

Continue Reading

ಕರ್ನಾಟಕ

Anjali Murder Case: ಅಂಜಲಿ ಹಂತಕ ಗಿರೀಶ್‌ಗೆ ಜೂನ್ 16ರವರೆಗೆ‌ ನ್ಯಾಯಾಂಗ ಬಂಧನ

Anjali Murder Case: ಮೇ 23 ರಿಂದ ಎಂಟು ದಿನಗಳ ಕಾಲ ಗಿರೀಶನನ್ನು ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಆರೋಪಿಗೆ ಜೂನ್‌ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM


on

Anjali Murder Case
Koo

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ (Anjali Murder Case) ಆರೋಪಿ ಗಿರೀಶ್‌ಗೆ ಜೂನ್‌ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಹುಬ್ಬಳ್ಳಿಯ 3ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹೀಗಾಗಿ ಜೂನ್‌ 16ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಸೂಚಿಸಿದೆ.

ಮೇ 23 ರಿಂದ ಎಂಟು ದಿನಗಳ ಕಾಲ ಗಿರೀಶನನ್ನು ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗಿತ್ತು. ಕಳೆದ ಎಂಟು ದಿನಗಳಿಂದ ಸಿಐಡಿ‌ ಕಸ್ಟಡಿಯಲ್ಲಿದ್ದ ಹಂತಕ ಗಿರೀಶ, ವಿಚಾರಣೆ ವೇಳೆ ಸರಿಯಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಮತ್ತೆ ಕೆಲ ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಮನವಿ ಮಾಡಿತ್ತು. ಆದರೆ, ಕೋರ್ಟ್‌ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಈಗಾಗಲೇ ಹತ್ಯೆಗೆ ಬಳಸಲಾಗಿದ್ದ ಚಾಕುವನ್ನು ಸಿಐಡಿ‌ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಾವಣಗೆರೆಯ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಪತ್ತೆಯಾಗಿತ್ತು. ಅಂಜಲಿ ಅಂಬಿಗೇರ ಹತ್ಯೆಗೆ ಆರೋಪಿ ಗಿರೀಶ ಬಳಸಿದ್ದ ಚಾಕುವನ್ನು ದಾವಣಗೆರೆ ಬಳಿ ರೈಲಿನಲ್ಲಿ ಮಹಿಳೆಗೆ ಇರಿಯಲು ಕೂಡ ಬಳಸಿದ್ದ. ರೈಲ್ವೆ ಪೊಲೀಸರು, ರೈಲ್ವೆ ಕೀ ಮ್ಯಾನ್‌ಗಳ ಜತೆಗೂಡಿ ಹುಡುಕಾಟ ನಡೆಸಿದಾಗ ಚಾಕು ಪತ್ತೆಯಾಗಿತ್ತು. ಕಳೆದ ಏಳು ದಿನಗಳಿಂದ ಚಾಕುವಿಗಾಗಿ ಹುಡುಕಾಟ ಸಿಐಡಿ‌ ಟೀಂ ಹುಡುಕಾಟ ನಡೆಸಿತ್ತು. ಆದರೆ, ತನಿಖೆಯ ಹಾದಿ ತಪ್ಪಿಸಲು ಚಾಕು ಎಲ್ಲಿ ಎಸೆದಿದ್ದೇನೆಂದು ಅರೋಪಿ ಬಾಯಿ ಬಿಟ್ಟಿರಲಿಲ್ಲ.

ಏನಿದು ಪ್ರಕರಣ?

Anjali Murder Case

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಮೇ 15ರಂದು ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದ.

ಇದನ್ನೂ ಓದಿ | Drown in lake: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳ ಸಾವು

ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್‌ ಈ ಕೃತ್ಯ ಎಸಗಿದ್ದ. ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಕೊಲೆಪಾತಕಿ ಗಿರೀಶ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ. ಈ ಬಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

Continue Reading

ಕರ್ನಾಟಕ

Drown in lake: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳ ಸಾವು

Drown in lake: ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಈಜಾಡಲು ಹೋಗಿದ್ದ ಒಂದೇ ಮನೆಯ ಮೂವರು ಮಕ್ಕಳು ನೀರುಪಾಲಾಗಿದ್ದಾರೆ.

VISTARANEWS.COM


on

children drown in lake
Koo

ಹಾಸನ: ಕೆರೆಯಲ್ಲಿ ಈಜಾಡಲು ಹೋಗಿದ್ದ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ (Drown in lake) ಜಿಲ್ಲೆಯ ಬೇಲೂರು ತಾಲೂಕಿನ ನರಸಿಪುರ ಭೋವಿ ಕಾಲೋನಿಯಲ್ಲಿ ನಡೆದಿದೆ. ದೀಕ್ಷಾ(10), ನಿತ್ಯ(12), ಕುಸುಮ (8) ಮೃತರು. ಮೃತರೆಲ್ಲರೂ ಒಂದೇ ಮನೆಯ ಮಕ್ಕಳಾಗಿದ್ದಾರೆ.

ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ (Rooftop collapse) ಮೃತಪಟ್ಟಿದ್ದಾರೆ. ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು.

Rooftop collapse The roof of the house that collapsed Two children die after being trapped under mud

40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ.

ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.

 Rooftop collapse

ಇದನ್ನೂ ಓದಿ: Viral Video: ತನ್ನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಅಪಹರಣಕ್ಕೆ ಯತ್ನ; ಕತ್ತಿ ಝಳಪಿಸಿ ಕಿಡಿಗೇಡಿಯ ಅಟ್ಟಹಾಸ-ವಿಡಿಯೋ ಇದೆ

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದರು. ಬಾಗಲಕೋಟೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದ ಪಾದಯಾತ್ರಿ ಮೇಲೆ ಹರಿದ ಲಾರಿ; ಓರ್ವ ಸಾವು, ಮತ್ತೋರ್ವ ಗಂಭೀರ

ಕೊಪ್ಪಳ: ಹುಲಿಗೆಮ್ಮ ದೇವಿ ಜಾತ್ರೆ (Huligemma Temple) ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಲಾರಿಯೊಂದು (Lorry Hit) ಹರಿದಿದೆ. ಪಾದಯಾತ್ರೆ ಹೊರಟಿದ್ದವರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಕೊಪ್ಪಳ ತಾಲೂಕಿನ ಕೆರಳ್ಳಿ ಫ್ಲೈಓವರ್ ಬಳಿ ಘಟನೆ ನಡೆದಿದೆ. ಯಮನೂರಪ್ಪ ಸಣ್ಣಮನಿ (34) ಮೃತ ದುರ್ದೈವಿ. ಯಮನೂರಪ್ಪ ಬಾಗಲಕೋಟಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿ ಆಗಿದ್ದಾರೆ. ಯಮನೂರಪ್ಪ ಹಾಗೂ ಮಹಾಂತೇಶ್‌ ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಹೊರಟ್ಟಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಲಾರಿಯು ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಯಮನೂರಪ್ಪ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟರೆ, ಮಹಾಂತೇಶ್‌ ಫ್ಲೈಓವರ್‌ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಬಿದ್ದ ರಭಸಕ್ಕೆ ಅವರ ಕಾಲಿನ ಪಾದವೇ ತುಂಡಾಗಿ ಬಿದ್ದಿತ್ತು. ಸದ್ಯ ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವ ಗಾಯಾಳು ಮಹಾಂತೇಶ್‌ನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Kukke Subramanya: ಹೊಳೆ ಉಕ್ಕಿ ಹರಿದು ಕೊಚ್ಚಿ ಹೋದ ಪಿಕ್ಅಪ್ ವಾಹನ; ಚಾಲಕನ ರಕ್ಷಣೆ

ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Continue Reading
Advertisement
Exit Poll
Lok Sabha Election 20249 mins ago

Exit Poll: ಇಂದು ಸಂಜೆ 6.30ಕ್ಕೆ ಎಕ್ಸಿಟ್ ಪೋಲ್ ರಿಸಲ್ಟ್; ಮತಗಟ್ಟೆ ಸಮೀಕ್ಷೆ ಹೇಗೆ ನಡೆಸುತ್ತಾರೆ?

Kannada Cinema In OTT bad manners 02 Kannada Movie
ಸ್ಯಾಂಡಲ್ ವುಡ್14 mins ago

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

hum do humare barah
ಕರ್ನಾಟಕ16 mins ago

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Neeraj Chopra
ಕ್ರೀಡೆ33 mins ago

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Neha Gowda is pregnant the actress shared the good news
ಕಿರುತೆರೆ41 mins ago

Neha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೊಂಬೆ-ಚಂದನ್‌ ದಂಪತಿ

Vastu Tips
ಧಾರ್ಮಿಕ41 mins ago

Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

prajwal revanna case mobile
ಪ್ರಮುಖ ಸುದ್ದಿ43 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೊಬೈಲ್‌ ಮಂಗಮಾಯ! ಏನಂತಾರೆ ಪ್ರಜ್ವಲ್ಲು?

LPG Price Cut
ವಾಣಿಜ್ಯ50 mins ago

LPG Price Cut: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌; ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆ

Paris Olympics 2024
ಕ್ರೀಡೆ57 mins ago

Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

Dolly Dhananjay kotee distribution rights held by KRG Studios
ಸ್ಯಾಂಡಲ್ ವುಡ್1 hour ago

Dolly Dhananjay: ಕೆಆರ್​ಜಿ ಸ್ಟುಡಿಯೋಸ್ ಪಾಲಾದ ‘ಕೋಟಿ‌’ ವಿತರಣಾ ಹಕ್ಕು; ರಿಲೀಸ್‌ಗೆ ಕೌಂಟ್‌ ಡೌನ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌