ಪಠ್ಯಪುಸ್ತಕದ ಮತ್ತೊಂದು ಎಡವಟ್ಟು: ಮಕ್ಕಳಿಗೆ ಪಾಠ ಮಾಡುವ ರೀತಿ ಇದೇನ? - Vistara News

ರಾಜಕೀಯ

ಪಠ್ಯಪುಸ್ತಕದ ಮತ್ತೊಂದು ಎಡವಟ್ಟು: ಮಕ್ಕಳಿಗೆ ಪಾಠ ಮಾಡುವ ರೀತಿ ಇದೇನ?

ಇತ್ತೀಚಿನ ವರ್ಷಗಳಲ್ಲಿ ಶಾಲಾ ಪಠ್ಯಪುಸ್ತಕ ರಚನೆಗೆ ಮೂರು ಸಮಿತಿಗಳನ್ನು ರಚಿಸಲಾಗಿದೆ. ಆದರೂ ಆಗಿಂದಾಗ್ಗೆ ಪಠ್ಯಪುಸ್ತಕಗಳಲ್ಲಿ ದೋಷ ಇದ್ದೇ ಇದೆ. ಈಗಿನ ತಪ್ಪಿನ ಆರೋಪ ರೋಹಿತ್‌ ಚಕ್ರತೀರ್ಥ ಸಮಿತಿ ಮೇಲೆ ಬಂದಿದೆ.

VISTARANEWS.COM


on

rohit chakratirtha committee text book same text
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭವಿಷ್ಯದ ಪ್ರಜೆಗಳನ್ನು ರೂಪಿಸಲು ನಿರ್ಮಾಣವಾಗುವ ಶಾಲಾ ಪಠ್ಯಪುಸ್ತಕಗಳಲ್ಲಿ ಕಾಣುವ ಎಡವಟ್ಟುಗಳು ಒಂದೊಂದಾಗಿ ಹೊರಬರುತ್ತಿವೆ. ಇದೀಗ ಎರಡು ತರಗತಿಗಳಲ್ಲಿ ಒಬ್ಬರೇ ಲೇಖಕರ ಒಂದೇ ಪದ್ಯವನ್ನು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ತಪ್ಪಿನ ಆರೋಪ ರೋಹಿತ್‌ ಚಕ್ರತೀರ್ಥ ಸಮಿತಿ ಮೇಲೆ ಬಂದಿದೆ.

ಈ ಹಿಂದೆ ಪ್ರೊ. ಮುಡಂಬಡಿತ್ತಾಯ ಸಮಿತಿ, ನಂತರ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ, ಈಗ ರೋಹಿತ್‌ ಚಕ್ರತೀರ್ಥ ಸಮಿತಿಗಳನ್ನು ಸರ್ಕಾರಗಳು ರಚನೆ ಮಾಡಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದೇ ಮಾಡಿದ್ದು. ಒಂದು ತರಗತಿಯಲ್ಲಿದ್ದ ಪಾಠ ಇನ್ನೊಂದು ತರಗತಿಯಲ್ಲಿ ವಿಭಿನ್ನ ದೃಷ್ಟಿಕೋನದಲ್ಲಿ ಬಂದ ಅನೇಕ ಉದಾಹರಣೆಗಳಿದ್ದವು. ಈಗ ಬಾವಿಯಲ್ಲಿ ಚಂದ್ರ ಎಂಬ ಪದ್ಯ ಮೂರು ಹಾಗೂ ನಾಲ್ಕನೇ ತರಗತಿಯ ಪಠ್ಯದಲ್ಲಿ ಪುನರಾವರ್ತನೆ ಆಗಿರುವುದು ಬೆಳಕಿಗೆ ಬಂದಿದೆ.

ಬಿ.ಎಂ. ಶರ್ಮಾ ಅವರು ಬರೆದಿರುವ ಪದ್ಯ ಇದು. ಮೂರನೇ ತರಗತಿಯ ಪಾಠ 13ರಲ್ಲಿ ಈ ಪದ್ಯವನ್ನು ಬಳಕೆ ಮಾಡಲಾಗಿದೆ. ನಾಲ್ಕನೇ ತರಗತಿಯ ಒಂದನೇ ಪಠ್ಯವಾಗಿ ಇದೇ ಪದ್ಯವನ್ನು ಬಳಸಲಾಗಿದೆ. ಇದು ಪಠ್ಯಪುಸ್ತಕಗಳ ಕುರಿತು ವಿಭಿನ್ನ ಸಮಿತಿಗಳು ವಹಿಸಿರುವ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ.

ಈ ತಪ್ಪನ್ನು ರೋಹಿತ್‌ ಚಕ್ರತೀರ್ಥ ಸಮಿತಿಯೇ ಮಾಡಿದೆ ಎಂದು ಅನೇಕರು ಆರೋಪಿಸಿದ್ದಾರೆ. ಪಠ್ಯಪುಸ್ತಕಗಳಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ತಪ್ಪನ್ನು ಸರಿಪಡಿಸಲು ರಾಜ್ಯ ಸರ್ಕಾರ ರೋಹಿತ್‌ ಚಕ್ರತೀರ್ಥ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯ ಪರಿಷ್ಕಾರಗಳು ಅನೇಕ ದಿನಗಳು ವಿವಾದ, ಚರ್ಚೆ, ಸಾಹಿತಿಗಳ ಬಂಡಾಯ, ಧರ್ಮಗುರುಗಳ ಪ್ರವೇಶದ ನಂತರ, ಸಮಿತಿಯ ವಿಸರ್ಜನೆಯೊಂದಿಗೆ ಶುಕ್ರವಾರ ಮುಕ್ತಾಯ ಕಂಡಿತು. ಈಕುರಿತು ರೋಹಿತ್‌ ಚಕ್ರತೀರ್ಥ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

“3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ನಾವು ಸೇರಿಸಿಲ್ಲ. ನಮ್ಮ ಪಠ್ಯಪುಸ್ತಕದಲ್ಲಿ ಈ ರೀತಿಯ ಯಾವುದೇ ತಪ್ಪು ಮಾಡಿಲ್ಲ. ನಲಿಕಲಿ ಅಂತ ಬೇರೆ ಪಠ್ಯಗಳಿವೆ. ನಲಿಕಲಿ, ಪರಿಸರ ಅಧ್ಯಯನ ಪಠ್ಯಪುಸ್ತಕವನ್ನು ನಾವು ಪರಿಷ್ಕರಣೆ ಮಾಡಿಲ್ಲ. ನಾವು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯ ಪಠ್ಯವನ್ನಷ್ಟೆ ಪರಿಷ್ಕರಣೆ ಮಾಡಿದ್ದೇವೆ. ಕೆಲವರು ಉದ್ದೇಶಪೂರ್ವಕವಾಗಿ ಹೇಳುತ್ತಿದ್ದಾರೆ ಎಂದು ರೋಹಿತ್‌ ಚಕ್ರತೀರ್ಥ ತಿಳಿಸಿದ್ದಾರೆ.

ಇದನ್ನೂ ಓದಿ | ರೋಹಿತ್‌ ಚಕ್ರತೀರ್ಥ ಸಮಿತಿ ಮೇಲಿನ ಆರೋಪಕ್ಕೆ ಸಚಿವ ನಾಗೇಶ್‌ರವರ ಸಂಪೂರ್ಣ ವರದಿ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ರಾಹುಲ್‌ ಗಾಂಧಿ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ.

VISTARANEWS.COM


on

ರಾಹುಲ್‌ ಗಾಂಧಿ rahul gandhi ippb account 2
Koo

ವಿಶೇಷ ವರದಿ: ಅಭಿಷೇಕ್ ಬಿ.ವಿ, ವಿಸ್ತಾರ ನ್ಯೂಸ್

ಬೆಂಗಳೂರು: ಇಂಡಿಯಾ ಮೈತ್ರಿಕೂಟ (INDIA bloc) ಅಧಿಕಾರಕ್ಕೆ ಬಂದ ನಂತರದ ದಿನವೇ ಮಹಿಳೆಯರ (women) ಖಾತೆಗೆ ʼಟಕಾ ಟಕ್ ಹಣʼ ಜಮಾವಣೆ ಮಾಡಲಾಗುವುದು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಘೋಷಣೆ ಪರಿಣಾಮ, ಪೋಸ್ಟ್‌ ಆಫೀಸ್‌ಗಳಲ್ಲಿ (Post Office) ಖಾತೆ ತೆರೆಯಲು ಮುಸ್ಲಿಂ ಮಹಿಳೆಯರು (Muslim Women) ಮುಗಿಬಿದ್ದಿದ್ದಾರೆ.

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ಇಂಡಿಯಾ ಒಕ್ಕೂಟ, ಅಧಿಕಾರ ಬಂದ ಕೂಡಲೇ ಸರ್ಕಾರ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಪ್ರತಿ ತಿಂಗಳು 8500 ರೂ. ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಕಚೇರಿ ಮುಂದೆ ಮುಗಿಬೀಳುತ್ತಿರುವ ಸುತ್ತಮುತ್ತಲಿನ ಶಿವಾಜಿನಗರ, ವಸಂತನಗರ ಮುಂತಾದೆಡೆಗಳ ಮುಸ್ಲಿಂ ಮಹಿಳೆಯರು, ಅವರ ಜೊತೆಗೆ ಬರುತ್ತಿರುವ ಪುರುಷರು ಅಂಚೆ ಕಚೇರಿ ಆವರಣವನ್ನು ಅಕ್ಷರಶಃ ಸಂತೆಯಾಗಿಸಿದ್ದಾರೆ.

ಮಹಿಳೆಯರ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿ ಟೋಕ‌ನ್ ವಿತರಿಸಲು ಆರಂಭಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಟೋಕನ್ ವಿತರಣೆ ಆರಂಭವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಮಹಿಳೆಯರು ಟೋಕನ್ ಪಡೆಯುತ್ತಿದ್ದಾರೆ.

ಖಾತೆ ತೆರೆಯುತ್ತಿರುವ ಮಹಿಳೆಯರಿಗೂ ಹಣ ಬರುವ ಬಗ್ಗೆ ಖಚಿತ ಮಾಹಿತಿ ಇಲ್ಲ! “ಅಕೌಂಟ್‌ಗೆ ಹಣ ಬರುತ್ತೆ ಅಂತ ಅಕ್ಕಪಕ್ಕದವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹಣ ನೀಡುತ್ತಾರಂತೆ. ಮೋದಿ ಬಂದ್ರೆ 2 ಸಾವಿರ ನೀಡುತ್ತಾರಂತೆ. ಯಾರು ಬಂದ್ರೇನು ನಮಗೆ ಹಣ ಬರುತ್ತೆ ಅಂತ ಹೇಳಿದ್ರು. ಅದಕ್ಕೆ ಬಂದಿದ್ದೇವೆ. ಬೆಳಗ್ಗೆ 5 ಗಂಟೆಗೆ ಬಂದಿದ್ದೇವೆ. ಯಾವ ಅಧಿಕಾರಿಗಳೂ ಹೇಳಿಲ್ಲ, ನೆರೆಮನೆಯವರು, ಸ್ಥಳೀಯರು ಹೇಳಿದರು” ಎಂಬುದು ಖಾತೆಗಾಗಿ ಕ್ಯೂ ನಿಂತ ಮಹಿಳೆಯರ ಹೇಳಿಕೆ.

ಹೆಡ್‌ ಪೋಸ್ಟ್‌ ಮಾಸ್ಟರ್‌ ಹೇಳೋದೇನು?

“ನಮ್ಮಲ್ಲಿ ಮೊದಲಿನಿಂದಲೂ IPPB ಖಾತೆ ಮಾಡುತ್ತಿದ್ದೇವೆ. ಆದರೆ ಕೆಲ ದಿನಗಳಿಂದ ಜನರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಕೌಂಟ್‌ಗೆ ಹಣ ಹಾಕ್ತಾರೆ ಅಂತ ಜನ ಬರುತ್ತಿದ್ದಾರೆ. ಹಣ ಬರುವ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ. ಆದರೆ ವದಂತಿ ಹರಡಿ ಜನರು ಜಾಸ್ತಿ ಜಾಸ್ತಿ ಬರ್ತಿದ್ದಾರೆ” ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಹೇಳಿದ್ದಾರೆ.

“ಈ ಖಾತೆಯಿಂದ ಬೇರೆ ಬೇರೆ ಪ್ರಾಧಿಕಾರಗಳಿಗೆ ಹಣ ಕಟ್ಟಬಹುದು. 200 ರೂ. ಮಾತ್ರ ಜಮಾ ಮಾಡಿಸಿ ಖಾತೆ ತೆರೆಯುತ್ತಿದ್ದೇವೆ. ಜನರು ಹೆಚ್ಚಾಗಿದ್ದರಿಂದ ಈಗ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದೇವೆ. ನಿತ್ಯ 1 ಸಾವಿರ ಅಕೌಂಟ್ ಮಾಡಿ ಕೊಡ್ತಿದ್ದೇವೆ. ಜನರಿಗೆ ಮಾಹಿತಿ ಕೊರತೆ ಇರೋದರಿಂದ ಮುಗಿಬೀಳ್ತಿದ್ದಾರೆ. ಇದಕ್ಕೆ ಯಾವುದೇ ಕೊನೆ ದಿನಾಂಕ ಇಲ್ಲ. ಯಾವ ಅಂಚೆ ಕಚೇರಿಯಲ್ಲಾದರೂ ಅಕೌಂಟ್ ಮಾಡಿಸಬಹುದು” ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

Continue Reading

ದೇಶ

Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

Rahul Gandhi:ಉತ್ತರಪ್ರದೇಶದ ರುದ್ರಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ ವೇದಿಕೆಯಲ್ಲಿ ಮಾತನಾಡುತ್ತಾ ಅಲ್ಲೇ ಇದ್ದ ಬಾಟಲಿಯ ನೀರನ್ನು ತಲೆಗೆ ಸುರಿದುಕೊಂಡಿದ್ದಾರೆ. ಅಲ್ಲದೇ ಅಬ್ಬಾ ಎಂಥಾ ಸೆಖೆ ಎಂದು ಹೇಳಿದ್ದಾರೆ. ಇದು ವಿಡಿಯೋದಲ್ಲಿ ಸೆರೆ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಉತ್ತರಭಾರತದಲ್ಲಿ ಸಹಿಸಲಾಗದಂತಹ ಬಿಸಿಗಾಳಿ ಬೀಸುತ್ತಿದ್ದು, ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ.

VISTARANEWS.COM


on

Rahul Gandhi
Koo

ಉತ್ತರಪ್ರದೇಶ: ಉತ್ತರಭಾರತದಲ್ಲಿ ಬಿಸಿಲ ಬೇಗೆ ದಿನೇ ದಿನೇ ಹಚ್ಚಾಗುತ್ತಿದೆ. ಜನ ಅಂತೂ ಸೆಖೆಗೆ ಬಳಲಿ ಬೆಂಡಾಗಿದ್ದಾರೆ. ಇದೀಗ ಬಿಸಿಲಿನ ಶಾಖ ಕಾಂಗ್ರೆಸ್‌ ನಾಯಕ(Congress Leader) ರಾಹುಲ್‌ ಗಾಂಧಿ(Rahul Gandhi) ಅವರಿಗೂ ತಟ್ಟಿದೆ. ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ನಾಯಕ ಎಂದರೆ ಅದು ರಾಹುಲ್‌ ಗಾಂಧಿ. ಅವರು ಎಲ್ಲೇ ಹೋದರೂ ಚಿತ್ರ ವಿಚಿತ್ರ ಕೆಲಸ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ರುದ್ರಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ ವೇದಿಕೆಯಲ್ಲಿ ಮಾತನಾಡುತ್ತಾ ಅಲ್ಲೇ ಇದ್ದ ಬಾಟಲಿಯ ನೀರನ್ನು ತಲೆಗೆ ಸುರಿದುಕೊಂಡಿದ್ದಾರೆ. ಅಲ್ಲದೇ ಅಬ್ಬಾ ಎಂಥಾ ಸೆಖೆ ಎಂದು ಹೇಳಿದ್ದಾರೆ. ಇದು ವಿಡಿಯೋದಲ್ಲಿ ಸೆರೆ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಉತ್ತರಭಾರತದಲ್ಲಿ ಸಹಿಸಲಾಗದಂತಹ ಬಿಸಿಗಾಳಿ ಬೀಸುತ್ತಿದ್ದು, ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ.

ಎರಡು ದಿನಗಳ ಹಿಂದೆಯಷ್ಟೇ ರಾಹುಲ್‌ ಗಾಂಧಿ ಭಾಗಿಯಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಕುಸಿದ ಘಟನೆ ವರದಿಯಾಗಿತ್ತು. ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ (Bihar) ಚುನಾವಣೆ ಪ್ರಚಾರ ಕೈಗೊಂಡಿದ್ದರು. ರಾಹುಲ್‌ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳೆ ಅವರಿದ್ದ ವೇದಿಕೆ ಕುಸಿದಿದ್ದು, ಸ್ವಲ್ಪರದರಲ್ಲಿಯೇ ಅವರು ಪಾರಾಗಿದ್ದರು.

ಪಟನಾ ಹೊರವಲಯದಲ್ಲಿರುವ ಪಾಲಿಗಂಜ್‌ನಲ್ಲಿ ಚುನಾವಣೆ ಸಮಾವೇಶ ಆಯೋಜಿಸಲಾಗಿತ್ತು. ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಇಂಡಿಯಾ ಒಕ್ಕೂಟದ ಮಿತ್ರಪಕ್ಷ, ಆರ್‌ಜೆಡಿ ಅಭ್ಯರ್ಥಿ ಮೀಸಾ ಭಾರ್ತಿ ಪರವಾಗಿ ಮತಯಾಚಿಸಲು ರಾಹುಲ್‌ ಗಾಂಧಿ ಆಗಮಿಸಿದ್ದರು. ಇದೇ ವೇಳೆ, ರಾಹುಲ್‌ ಗಾಂಧಿ ಹಾಗೂ ಮೀಸಾ ಭಾರ್ತಿ ಸೇರಿ ಹಲವು ನಾಯಕರು ವೇದಿಕೆ ಮೇಲೆ ನಿಂತಿದ್ದರು. ಆಗ, ವೇದಿಕೆಯು ಕುಸಿದಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ:Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

ನಾಯಕರು ವೇದಿಕೆ ಮೇಲೆ ನಿಂತು, ಜನರತ್ತ ಕೈಬೀಸಿ ಬಲ ಪ್ರದರ್ಶನ ಮಾಡುವಾಗಲೇ ವೇದಿಕೆ ಕುಸಿದಿದೆ. ಕೆಲ ಸೆಕೆಂಡ್‌ಗಳವರೆಗೆ ಗಾಬರಿಯಾದ ರಾಹುಲ್‌ ಗಾಂಧಿ ಅವರು ಕೂಡಲೇ ಮೀಸಾ ಭಾರ್ತಿ ಅವರು ಸರಿಯಾಗಿ ನಿಲ್ಲಲು ನೆರವು ನೀಡಿದರು. ಇನ್ನೇನು ಸ್ಟೇಜ್‌ನಿಂದ ಹೊರಡಬೇಕು ಎನ್ನುವರಷ್ಟರಲ್ಲಿ ವೇದಿಕೆಯು ಮತ್ತಷ್ಟು ಕುಸಿಯಿತು. ಆಗ ರಾಹುಲ್‌ ಗಾಂಧಿ ಅವರು ನಗುತ್ತಲೇ ಜನರತ್ತ ಕೈಬೀಸಿದರು. ವೇದಿಕೆಯು ತುಂಬ ಎತ್ತರದಲ್ಲಿ ಇರದ ಕಾರಣ ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.


Continue Reading

ಪ್ರಮುಖ ಸುದ್ದಿ

DK Shivakumar: ಕುತೂಹಲ ಕೆರಳಿಸಿದ ಡಿಕೆಶಿ- ಉಪರಾಷ್ಟ್ರಪತಿ ಭೇಟಿ; ʼಬಿಜೆಪಿಗೆ ಸೇರ್ತೀರಾʼ ಎಂದ ನೆಟ್ಟಿಗರು!

DK Shivakumar: ಪಕ್ಷದ ವಿಧಾನ ಪರಿಷತ್‌ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಸರಣಿ ಸಭೆಗಳನ್ನು ನಡೆಸಲು ದಿಲ್ಲಿಗೆ ಆಗಮಿಸಿದ್ದಾರೆ. ಇಂದು ಮುಂಜಾನೆ ಉಪರಾಷ್ಟ್ರಪತಿಗಳಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬ್ರೇಕ್ ಫಾಸ್ಟ್‌ಗೆ ಆಹ್ವಾನ ಬಂದಿತ್ತು.

VISTARANEWS.COM


on

dk shivakumar jagdeep dhankar
Koo

ಹೊಸದಿಲ್ಲಿ: ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಅವರು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ (Vice President Jagdeep Dhankar) ಅವರನ್ನು ಕರ್ನಾಟಕ ಭವನದಲ್ಲಿ ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಭೇಟಿ ಇದೀಗ ಕುತೂಹಲ ಕೆರಳಿಸಿದೆ.

ಇಂದು ಮುಂಜಾನೆ ಉಪರಾಷ್ಟ್ರಪತಿಗಳಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬ್ರೇಕ್ ಫಾಸ್ಟ್‌ಗೆ ಆಹ್ವಾನ ಬಂದಿತ್ತು. ಉಪರಾಷ್ಟ್ರಪತಿಗಳನ್ನು ಭೇಟಿಯಾದ ಚಿತ್ರವನ್ನು ನಂತರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಡಿಕೆಶಿ, “ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್‌ ಧನಕರ್‌ ಅವರನ್ನು ಇಂದು ರಾಜಭವನದಲ್ಲಿ ಸೌಹಾರ್ದಯುತವಾಗಿ ಭೇಟಿಯಾದೆ. ಈ ವೇಳೆ ಪ್ರಾದೇಶಿಕ ಹಾಗೂ ರಾಷ್ಟ್ರೀಯ ವಿಚಾರಗಳ ಕುರಿತು ಪರಸ್ಪರ ಚರ್ಚಿಸಿದೆವು” ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ನೆಟ್ಟಿಗರಿಂದ ವಿಧವಿಧವಾದ ಪ್ರತಿಕ್ರಿಯೆಗಳು ಕಂಡುಬಂದವು. “ಶುಭವಾಗಲಿ ನಿಮಗೆ. ಆದಷ್ಟೂ ಶೀಘ್ರ ಬಿಜೆಪಿಗೆ ನೀವು ಬರುವಂತಾಗಲಿ. ನಂತರ, ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಆಶಿಸುತ್ತೇನೆ” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. “ಇದೆಲ್ಲ ಬೇಡ ನಮಗೆ ಸಿಎಂ ಆಗಬೇಕು” ಎಂದು ಮತ್ತೊಬ್ಬರು ಬರೆದಿದ್ದಾರೆ.

ಪಕ್ಷದ ವಿಧಾನ ಪರಿಷತ್‌ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಸರಣಿ ಸಭೆಗಳನ್ನು ನಡೆಸಲು ದಿಲ್ಲಿಗೆ ಆಗಮಿಸಿದ್ದಾರೆ. ದೆಹಲಿಗೆ ಬರುತ್ತಿದ್ದಂತೆ ರಣದೀಪ್‌ ಸುರ್ಜೆವಾಲಾ ಜೊತೆಗೆ ಸಭೆ ನಡೆಸಿದ್ದು, ಬಳಿಕ ಕರ್ನಾಟಕ ಭವನದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದರು. ರಾತ್ರಿ 10 ಗಂಟೆಗೆ ಕೆ.ಸಿ ವೇಣುಗೋಪಾಲ್ ಜೊತೆ ಸಭೆ ನಡೆಸಿ ಸಿಎಂ ಹಾಗೂ ಡಿಸಿಎಂ ನಾಳೆ ಬೆಳಿಗ್ಗೆ ಖರ್ಗೆ ಜೊತೆಗೆ ಅಂತಿಮ ಸಭೆ ನಡೆಸಲಿದ್ದಾರೆ. ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳ ಹೆಸರು ಪಟ್ಟಿಯಲ್ಲಿರುವುದರಿಂದ ಅಭ್ಯರ್ಥಿ ಆಯ್ಕೆ ಸಂಬಂಧ ಕಗ್ಗಂಟು ಬಗೆಹರಿಯದಾಗಿದೆ.

ಕೆಲವು ದಿನಗಳ ಹಿಂದೆ ಒಕ್ಕಲಿಗರ ಸಭೆಯಲ್ಲಿ ಮಾತನಾಡುತ್ತ ಡಿಕೆಶಿ, ತಾವು ಮುಂದಿನ ಸಿಎಂ (Next CM) ಆಗುವ ಬಗ್ಗೆ ಸುಳಿವನ್ನು ನೀಡಿದ್ದರು. “ಏನು ಆಗಬೇಕೆಂದಿದೆಯೋ ಅದು ದೆಹಲಿಯಲ್ಲಿ ತೀರ್ಮಾನ ಆಗಿದೆ. ಅಲ್ಲದೆ, ಸ್ವಲ್ಪ ದಿನ ಕಾಯಿರಿ” ಎಂದು ಹೇಳಿದ್ದರು. ಆ ಮೂಲಕ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Continue Reading

ದೇಶ

Mani Shankar Aiyar: ಮಣಿಶಂಕರ್‌ ಅಯ್ಯರ್ ಮತ್ತೊಂದು ವಿವಾದ;‌ ಪಾಕ್‌ ಬಳಿಕ ಚೀನಾ ಪರ ಬ್ಯಾಟಿಂಗ್‌!

Mani Shankar Aiyar: ʼ1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ ಆರೋಪವಿದೆʼ ಎಂದು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮಣಿಶಂಕರ್‌ ಅಯ್ಯರ್‌, ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

VISTARANEWS.COM


on

Mani Shankar Aiyar
Koo

ನವದೆಹಲಿ: ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ʼ1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ ಆರೋಪವಿದೆʼ ಎಂದು ಉಲ್ಲೇಖಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಂಗಳವಾರ ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಿಶಂಕರ್ ಅಯ್ಯರ್ ನೀಡಿದ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಅಗುತ್ತಿದ್ದಂತೆ ಕಾಂಗ್ರೆಸ್‌ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಲು ಮುಂದಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಬಗ್ಗೆ ಮಾತನಾಡಿ, ಮಣಿಶಂಕರ್‌ ಅಯ್ಯರ್‌ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ. ʼʼಮಣಿಶಂಕರ್ ಅಯ್ಯರ್ ಅವರು ʼಆಕ್ರಮಣದ ಆರೋಪʼ ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ ಮತ್ತು ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲʼʼ ಎಂದು ಹೇಳಿದ್ದಾರೆ.

ಜತೆಗೆ ಜೈರಾಮ್ ರಮೇಶ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2020ರ ಮೇಯಲ್ಲಿ ನಡೆದ ಚೀನೀಯರ ಅತಿಕ್ರಮಣಕ್ಕೆ ಸಂಬಂಧಿಸಿ ನರೇಂದ್ರ ಮೋದಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ “ಅಯ್ಯರ್ ಅವರು ವಯಸ್ಸಿನ ಕಾರಣದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆʼʼ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ‘Nehru’s First Recruits’ ಪುಸ್ತಕ ಬಿಡುಗಡೆ ಸಮಾರಂಭದ ವಿಡಿಯೊದಲ್ಲಿ ಮಣಿಶಂಕರ್ ಅಯ್ಯರ್ ʼʼ1962ರ ಅಕ್ಟೋಬರ್‌ನಲ್ಲಿ ಚೀನೀಯರು ಭಾರತದ ಮೇಲೆ ಆಕ್ರಮಣ ಮಾಡಿದ್ದರು ಎಂಬ ಆರೋಪವಿದೆʼʼ ಎಂದು ಹೇಳಿರುವುದು ಕಂಡು ಬಂದಿದೆ. ಬಳಿಕ ಅವರು ಈ ಬಗ್ಗೆ ಮಾತನಾಡಿ, “ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ‘ಚೀನಾದ ಆಕ್ರಮಣ’ಕ್ಕೆ ಮೊದಲು ‘ಆಪಾದಿತ’ ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ನಾನು ಮುಕ್ತವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಹೇಳಿದ್ದೇನು?

ಇನ್ನು ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದೆ. ಅಯ್ಯರ್ ಹೇಳಿಕೆಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಿರುಗೇಟು ನೀಡಿ, ‘ʼNehru’s First Recruits’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಮಣಿಶಂಕರ್‌ ಅಯ್ಯರ್‌ ಅವರು, 1962ರಲ್ಲಿ ನಡೆದ ಚೀನಾದ ಆಕ್ರಮಣವನ್ನು ‘ಆಪಾದಿತ’ ಎಂದು ಉಲ್ಲೇಖಿಸಿದ್ದಾರೆ. ಇದು ನಾಚಿಕೆಗೇಡಿನ ಹೇಳಿಕೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಯುಎನ್ಎಸ್‌ಸಿಯಲ್ಲಿನ ಶಾಶ್ವತ ಸ್ಥಾನದ ಮೇಲಿನ ಭಾರತದ ಹಕ್ಕನ್ನು ನೆಹರೂ ಚೀನೀಯರ ಪರವಾಗಿ ಬಿಟ್ಟುಕೊಟ್ಟದ್ದರು. ರಾಹುಲ್ ಗಾಂಧಿ ಚೀನಾ ಜತೆಗಿನ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ರಾಯಭಾರ ಕಚೇರಿಯಿಂದ ಹಣವನ್ನು ಸ್ವೀಕರಿಸಿದೆ ಮತ್ತು ಚೀನೀ ಕಂಪನಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ಶಿಫಾರಸು ಮಾಡುವ ವರದಿಗಳನ್ನು ಪ್ರಕಟಿಸಿದೆ. ಇದರ ಆಧಾರದ ಮೇಲೆ ಸೋನಿಯಾ ಗಾಂಧಿ ಅವರ ಯುಪಿಎ ಸರ್ಕಾರ ಚೀನಾದ ಸರಕುಗಳಿಗೆ ಭಾರತೀಯ ಮಾರುಕಟ್ಟೆಯನ್ನು ತೆರೆದಿತ್ತು. ಈಗ ಕಾಂಗ್ರೆಸ್ ನಾಯಕ ಅಯ್ಯರ್ ಚೀನಾದ ಆಕ್ರಮಣ ಕೇವಲ ಆರೋಪ ಎಂದು ಕರೆಯುತ್ತಿದ್ದಾರೆʼʼ ಎಂದು ಅಮಿತ್ ಮಾಳವೀಯ ದೂರಿದ್ದಾರೆ. ʼʼಕಾಂಗ್ರೆಸ್‌ಗೆ ಚೀನಾದ ಮೇಲೇಕೆ ಇಷ್ಟೊಂದು ಪ್ರೀತಿ?ʼʼ ಎಂದೂ ಪ್ರಶ್ನಿಸಿದ್ದಾರೆ.

ಇದಕ್ಕೆ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿ, “1962ರಲ್ಲಿ ನಿಜವಾಗಿಯೂ ಚಿನಾದಿಂದ ಆಕ್ರಮಣ ನಡೆದಿದೆ. ಇದು ಕೇವಲ ಆರೋಪವಲ್ಲ. 1962ರ ಅಕ್ಟೋಬರ್ 20ರಂದು ಭಾರತದ ಮೇಲೆ ಚೀನಾದ ಆಕ್ರಮಣ ಆರಂಭವಾಗಿತ್ತು. 2020ರ ಮೇ ಆರಂಭದಲ್ಲಿಯೂ ಲಡಾಖ್‌ನಲ್ಲಿ ಚೀನಾದ ಅತಿಕ್ರಮಣ ಮತ್ತೆ ನಡೆಯಿತು. ಇದರಲ್ಲಿ ನಮ್ಮ 40 ಸೈನಿಕರು ಹುತಾತ್ಮರಾಗಿದ್ದರು” ಎಂದು ರಮೇಶ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಮಣಿಶಂಕರ್‌ ಅಯ್ಯರ್‌, ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ʼʼಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕುʼʼ ಎಂದು ಹೇಳಿದ್ದರು.

ಇದನ್ನೂ ಓದಿ: Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

Continue Reading
Advertisement
Gold Rate Today
ಚಿನ್ನದ ದರ4 mins ago

Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಖರೀದಿಗೆ ಮುನ್ನ ದರ ಗಮನಿಸಿ

World Digestive Health Day
ಆರೋಗ್ಯ4 mins ago

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ರಾಹುಲ್‌ ಗಾಂಧಿ rahul gandhi ippb account 2
ಪ್ರಮುಖ ಸುದ್ದಿ13 mins ago

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

All Eyes on Rafah
ವಿದೇಶ20 mins ago

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

Sujay Hegde Manasare actor Engagement with Prerana
ಕಿರುತೆರೆ24 mins ago

Sujay Hegde: ನಿಶ್ಚಿತಾರ್ಥ ಮಾಡಿಕೊಂಡ ‘ಮನಸಾರೆ’ ಧಾರಾವಾಹಿಯ ನಟ ಸುಜಯ್ ಹೆಗಡೆ

Viral News
ವೈರಲ್ ನ್ಯೂಸ್55 mins ago

Viral News: ರೈಲಿನಲ್ಲಿ ಅಶ್ಲೀಲವಾಗಿ ಮೈ ಕುಣಿಸಿದ ಮಹಿಳೆ; ರೀಲ್ಸ್ ಮಾಡುವವರ ಕಾಟವಿಲ್ಲದ ಪ್ರಯಾಣ ಅಸಾಧ್ಯ ಎಂದ ನೆಟ್ಟಿಗರು

Rahul Gandhi
ದೇಶ57 mins ago

Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

dk shivakumar jagdeep dhankar
ಪ್ರಮುಖ ಸುದ್ದಿ60 mins ago

DK Shivakumar: ಕುತೂಹಲ ಕೆರಳಿಸಿದ ಡಿಕೆಶಿ- ಉಪರಾಷ್ಟ್ರಪತಿ ಭೇಟಿ; ʼಬಿಜೆಪಿಗೆ ಸೇರ್ತೀರಾʼ ಎಂದ ನೆಟ್ಟಿಗರು!

Pushpa 2 SOOSEKI Couple Song Lyrical Video out
ಟಾಲಿವುಡ್1 hour ago

Pushpa 2: ʼಪುಷ್ಪ 2ʼ ಸಿನಿಮಾದ ಎರಡನೇ ಹಾಡು ರಿಲೀಸ್‌: ಅಲ್ಲು ಜತೆ ಹೆಜ್ಜೆ ಹಾಕಿದ ರಶ್ಮಿಕಾ!

UPI Safety Tips
ವಾಣಿಜ್ಯ1 hour ago

UPI Safety Tips: ಈ ಟಿಪ್ಸ್ ಪಾಲಿಸಿ, ಮೊಬೈಲ್ ನಿಂದ ಹಣ ಪಾವತಿಸುವಾಗ ಆಗುವ ವಂಚನೆಯಿಂದ ಪಾರಾಗಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ18 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌