ವಿಸ್ತಾರ ವಿಶೇಷ ಸಂಪಾದಕೀಯ | ಜೀವನೋತ್ಸಾಹಿ, ಸ್ಫೂರ್ತಿಯ ಸೆಲೆಯಾಗಿದ್ದ ಹೀರಾ ಬೆನ್ - Vistara News

ಪ್ರಮುಖ ಸುದ್ದಿ

ವಿಸ್ತಾರ ವಿಶೇಷ ಸಂಪಾದಕೀಯ | ಜೀವನೋತ್ಸಾಹಿ, ಸ್ಫೂರ್ತಿಯ ಸೆಲೆಯಾಗಿದ್ದ ಹೀರಾ ಬೆನ್

ಪ್ರಧಾನಿ ಮೋದಿ ಅವರ ತಾಯಿ ಹೀರಾ ಬೆನ್ ಕೊನೆಯವರೆಗೂ ಸರಳವಾಗಿ ಬದುಕಿದರು. ಮಗ ಪ್ರಧಾನಿಯಾದ ಬಳಿಕ ಐಷಾರಾಮಿ ಜೀವನ ನಡೆಸುವ ಎಲ್ಲ ಅವಕಾಶ ಇದ್ದಾಗಲೂ ಅದರಿಂದ ದೂರವೇ ಉಳಿದರು. ಅವರೊಂದು ಮಾದರಿ ತಾಯಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಕೊನೆಯುಸಿರೆಳೆದಿದ್ದಾರೆ. ಆದರೆ ತ್ಯಾಗಮಯ ಜೀವನ, ಮಕ್ಕಳನ್ನು ಆದರ್ಶರನ್ನಾಗಿ ಬೆಳೆಸಿದ ರೀತಿ ಮತ್ತು ಸರಳತೆಯಿಂದಾಗಿ ಅವರು ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ.

ಹೀರಾ ಬೆನ್ ನಿಜಕ್ಕೂ ತ್ಯಾಗಮಯಿ. ಚಹಾ ಮಾರುವ ಬಡ ಕುಟುಂಬ ಅವರದು. ಆದರೆ ಕಡು ಬಡತನದಲ್ಲೂ ದಿಟ್ಟತನದಿಂದ ಸಾರ್ಥಕ ಬದುಕನ್ನು ಮುನ್ನಡೆಸಿದರು. ಪತಿಗೆ ಹೆಗಲೆಣೆಯಾಗಿ ನಿಂತರು. ಐವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನೊಳಗೊಂಡ ಆರು ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು. ಅವರನ್ನು ವಿದ್ಯಾವಂತರನ್ನಾಗಿ, ಸಂಸ್ಕಾರವಂತರಾಗಿ ಬೆಳೆಸಿದ ಮಹಾ ತಾಯಿ ಅವರಾಗಿದ್ದರು. ಅತಿ ಕಡಿಮೆ ಆದಾಯದಲ್ಲೂ ಸಂಸಾರವನ್ನು ಸರಾಗವಾಗಿ ನಿಭಾಯಿಸಿದರು.

ಹೀರಾಬೆನ್ ಜೀವನೋತ್ಸಾಹಿ ಆಗಿದ್ದರು. ಪ್ರಧಾನಿಯ ತಾಯಿಯಾಗಿದ್ದರೂ ಕೊನೆಯವರೆಗೂ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ನಡೆದ ಗುಜರಾತ್ ಚುನಾವಣೆಯಲ್ಲಿ ಅವರು ಮತಗಟ್ಟೆಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದರು.

ಜೀವನದ ಕೊನೆಯವರೆಗೂ ಸರಳ ಜೀವನ ನಡೆಸಿದರು. ಪ್ರಧಾನಿಯ ತಾಯಿಯಾದರೂ ಆಳುಕಾಳು, ಸೇವಕರ ಮೊರೆ ಹೋಗಲಿಲ್ಲ. ಮಗ ಪ್ರಧಾನಿಯಾದ ಬಳಿಕ ಐಷಾರಾಮಿ ಜೀವನ ನಡೆಸುವ ಎಲ್ಲ ಅವಕಾಶ ಇದ್ದಾಗಲೂ ಅದರಿಂದ ದೂರವೇ ಉಳಿದರು. ಆಟೊರಿಕ್ಷಾದಲ್ಲೇ ಸಂಚರಿಸುತ್ತಿದ್ದರು. ಪ್ರಧಾನಿ ಮೋದಿ ಅವರು ನೋಟು ನಿಷೇಧಿಸಿದಾಗ ಖುದ್ದು ಬ್ಯಾಂಕ್‌ಗೆ ತೆರಳಿ ಹಣ ಡ್ರಾ ಮಾಡುವ ಮೂಲಕ ಗಮನ ಸೆಳೆದಿದ್ದರು.

ಪ್ರಧಾನಿ ಮೋದಿ ಮೇಲೆ ತಾಯಿ ಹೀರಾಬೆನ್ ಅಪಾರ ಪ್ರಭಾವ ಬೀರಿದ್ದರು. ಇದನ್ನು ಮೋದಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಹೀರಾಬೆನ್, ಯಾವ ಕಾರಣಕ್ಕೂ ಯಾವ ಸಂದರ್ಭದಲ್ಲೂ ಒಂದೇ ಒಂದು ರೂಪಾಯಿಯನ್ನೂ ಯಾರಿಂದಲೂ ಪಡೆಯಬೇಡ ಎಂದು ಉಪದೇಶ ಮಾಡಿದ್ದರು. ಮೋದಿ ಇಂದು ಜಾಗತಿಕ ಪ್ರಬಲ ನಾಯಕರಾಗಿ ರೂಪುಗೊಳ್ಳುವಲ್ಲಿ ಅವರ ತಾಯಿಯ ಪಾತ್ರ-ಪ್ರಭಾವವೂ ಇದೆ. ಪ್ರಧಾನಿ ಆದ ಬಳಿಕವೂ ನರೇಂದ್ರ ಮೋದಿ ಅವರು ಆಗಾಗ ಅಹಮದಾಬಾದ್ ಗೆ ತೆರಳಿ ತಾಯಿಯನ್ನು ಭೇಟಿ ಮಾಡಿ ಬರುತ್ತಿದ್ದರು. ಊರಿಗೆ ಅರಸನಾದರೂ ತಾಯಿಗೆ ಮಗ ಎಂಬಂತೆ ಅವರಿಬ್ಬರ ಸಂಭಾಷಣೆ ಇರುತ್ತಿತ್ತು. ಆರಾಮ ಕುರ್ಚಿಯಲ್ಲಿ ಕೂತಿರುವ ತಾಯಿ ಹೀರಾಬೆನ್ ಮತ್ತು ನೆಲದ ಮೇಲೆ ಕೂತು ಅವರ ಕಾಲುಗಳ ಮೇಲೆ ತಮ್ಮ ಕೈಗಳನ್ನಿಟ್ಟು ಉಭಯ ಕುಶಲೋಪರಿ ನಡೆಸುವ ಮೋದಿಯವರ ಚಿತ್ರ ಮಾರ್ಮಿಕ ಮತ್ತು ಭಾವುಕ ಸಂದೇಶ ಸ್ಪುರಿಸುತ್ತಿತ್ತು.

ತಾಯಿಯಲ್ಲಿ ಯಾವಾಗಲೂ ತ್ರಿಮೂರ್ತಿಗಳನ್ನು ಕಾಣುತ್ತಿದ್ದೆ. ಅವರ ಬದುಕು ತಪೋಸದೃಶ, ನಿಸ್ವಾರ್ಥ ಕರ್ಮಯೋಗಿಯ ಬಾಳ್ವೆ. ಅವರು ಮೌಲ್ಯಗಳಿಗೆ ಬದ್ಧವಾಗಿದ್ದರು. ಅವರು ಯಾವಾಗಲೂ ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಬಾಳುವೆ ನಡೆಸಿ ಎಂದು ಹಿತವಚನ ಹೇಳುತ್ತಿದ್ದರು ಎಂಬ ಪ್ರಧಾನಿ ಮೋದಿಯವರ ಕಂಬನಿಯ ಸಾಲುಗಳು ಅವರ ತಾಯಿಯ ವಿಶಿಷ್ಟ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.

ಹೀಗೆ ಹೀರಾ ಬೆನ್ ಅವರು ನಿಜಕ್ಕೂ ಆದರ್ಶ ಮತ್ತು ಮಾದರಿ ಮಹಾತಾಯಿ. ಅವರೊಂದು ಸ್ಫೂರ್ತಿಯ ಸೆಲೆ.

ಇದನ್ನೂ ಓದಿ | Heeraben Modi | ಚಹಾ ಮಾರುವ ಕುಟುಂಬ, ಆರು ಮಕ್ಕಳು, ಸರಳ ಜೀವನ, ತ್ಯಾಗಮಯಿ ಈ ಹೀರಾಬೆನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಈ ರಾಶಿಯವರಿಗೆ ರಹಸ್ಯ ಕಾರ್ಯಗಳಿಂದಲೂ ಸಿಗುತ್ತೆ ಯಶಸ್ಸು

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ಭಾನುವಾರ ತುಲಾ ರಾಶಿಯಲ್ಲೆ ನೆಲಸಲಿದ್ದಾನೆ. ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ವೃಷಭ ರಾಶಿಯವರು ಒತ್ತಡವನ್ನು ನಿವಾರಿಸಲು ವ್ಯಸನಗಳಿಗೆ ಬಲಿಯಾಗುವುದು ಬೇಡ, ಅಧ್ಯಾತ್ಮದ ಹಾದಿ ಸಮಾಧಾನ ನೀಡುವುದು. ಕುಟುಂಬದ ಆಪ್ತರು ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ತುಲಾ ರಾಶಿಯವರು ಅತಿಯಾದ ಒತ್ತಡದಿಂದ ಮಾನಸಿಕ ಚಿಂತೆ ಕಾಡಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ವಿನಾಕಾರಣ ಅಪರಿಚಿತರೊಂದಿಗೆ ಕಲಹವಾಗುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (19-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಏಕಾದಶಿ 13:49 ವಾರ: ಭಾನುವಾರ
ನಕ್ಷತ್ರ: ಹಸ್ತಾ 27:15 ಯೋಗ: ವಜ್ರ 11:22
ಕರಣ: ವಿಷ್ಟಿ (ಭದ್ರ) 13:49 ಅಮೃತ ಕಾಲ: ಸಂಜೆ 04:16ರಿಂದ 06:04
ದಿನದ ವಿಶೇಷ: ತಲಕಾವೇರಿ ಜಾತ್ರೆ, ವರದರಾಜ ರಥೋತ್ಸವ ಸರ‍್ವೇಷಾಮೇಕಾದಶೀ

ಸೂರ್ಯೋದಯ : 05:54   ಸೂರ್ಯಾಸ್ತ : 06:39

ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಶ್ರಮದ ಜೀವಕೆ ವಿಶ್ರಾಂತಿಯು ಸಿಗುವುದು. ಈ ಹಿಂದೆ ಮಾಡಿದ ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಸಹಕಾರ ಸಿಗಲಿದೆ. ಸಭೆ- ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಒತ್ತಡವನ್ನು ನಿವಾರಿಸಲು ವ್ಯಸನಗಳಿಗೆ ಬಲಿಯಾಗುವುದು ಬೇಡ, ಅಧ್ಯಾತ್ಮದ ಹಾದಿ ಸಮಾಧಾನ ನೀಡುವುದು. ಕುಟುಂಬದ ಆಪ್ತರು ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ಮಿಥುನ:ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಇತರರನ್ನು ಆಕರ್ಷಿಸುತ್ತಿರಿ. ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಉತ್ಸಾಹ, ನೆಮ್ಮದಿ, ಸಂತೋಷ ಸಿಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬದುಕಿನ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಅನೇಕ ಒತ್ತಡಗಳಿಂದ ಮುಕ್ತರಾಗುವಿರಿ. ಸಾಲ ಮರುಪಾವತಿಯಾಗಿ ಆರ್ಥಿಕವಾಗಿ ಬಲಗೊಳ್ಳುವಿರಿ. ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಸಂಗಾತಿಯ ಮಧುರ ಮಾತುಗಳು ಕುಟುಂಬದಲ್ಲಿ ಭರವಸೆಯನ್ನು ಹೆಚ್ಚಿಸಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಕುಟುಂಬದ ಆಪ್ತರಿಂದ ಸಹಾಯ ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ನಿಮ್ಮನ್ನು ದ್ವೇಷಿಸುವ ಜನರೇ ನಿಮ್ಮ ಸ್ನೇಹಿತರಾಗಿ ಪರಿವರ್ತನೆ ಆಗಲಿದ್ದಾರೆ. ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಉತ್ಸಾಹದಿಂದ ಇರುವಿರಿ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಪರಸ್ಪರರ ಸಾಮರಸ್ಯ ಮೂಡಲಿದೆ‌. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದಿಂದ ಮಾನಸಿಕ ಚಿಂತೆ ಕಾಡಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ವಿನಾಕಾರಣ ಅಪರಿಚಿತರೊಂದಿಗೆ ಕಲಹವಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತವಿರಲಿ. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ಕಾರ್ಯಗಳು ಸಹ ಯಶಸ್ಸನ್ನು ನೀಡಲಿದೆ. ಮಾತುಗಳು ಮಥಿಸಿ ಕಲಹ ಸಂಬಂಧಿಗಳ ಮಧ್ಯೆ ಬಿರುಕು ಮೂಡುವ ಸಾಧ್ಯತೆ ಇದೆ. ಕೌಶಲ್ಯಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಆಪ್ತರ ಬೆಂಬಲ ಸಿಗಲಿದೆ. ಇತರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ದಿನದ ಕೊನೆಯಲ್ಲಿ ಯಾರೊಂದಿಗೂ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಹಿಂದೆ ಮಾಡಿರುವ ಧನ ಸಹಾಯ ಇಂದು ತಮಗೆ ಮರಳುವ ಸಾಧ್ಯತೆ ಇದೆ. ಅಲ್ಪ ಸಮಯದ ಕೋಪ ನಿಮ್ಮ ಮನಸ್ಥಿತಿ ಹಾಳುಮಾಡುವ ಸಾಧ್ಯತೆ ಇದೆ, ಆದರಿಂದ ಶಾಂತವಾಗಿರಿ. ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಮನೋರಂಜನೆಯಿಂದಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ಮನೆಯಲ್ಲಿ ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಮೌನವಾಗಿರುವುದು ಉತ್ತಮ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮೀನ: ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಂಗಾತಿಯಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಹಿಂದೆಂದೂ ಇಲ್ಲದಷ್ಟು ದುರ್ಬಲವಾದಂತೆ ಕಾಣುತ್ತಿದೆ.

VISTARANEWS.COM


on

Karnataka Police
Koo

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National crime records bureau- NCRB) ಇತ್ತೀಚೆಗಿನ ಅಪರಾಧಗಳ ಅಂಕಿ ಅಂಶವನ್ನು ಪ್ರಕಟಿಸಿದ್ದು, ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ (crimes) ಸಂಖ್ಯೆ ಮಿತಿ ಮೀರಿ ಹೆಚ್ಚಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ ಏರಿಕೆ ಪ್ರಮಾಣದಲ್ಲಿ ಕೊಲೆ (murder), ಅತ್ಯಾಚಾರ (physical abuse), ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು (Pocso) ನಡೆದಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ ಅಂದರೆ 4 ತಿಂಗಳಲ್ಲಿ ಸುಮಾರು 430 ಕೊಲೆಗಳು (Murder), 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 7421 ಸೈಬರ್ ಕ್ರೈಂ, 450 ರಾಬರಿಗಳು ಸಂಭವಿಸಿವೆ. ಲೈಂಗಿಕ ದೌರ್ಜನ್ಯ ಹಾಗೂ ಸೈಬರ್ ವಂಚನೆ (cyber crime) ಗಗನಕ್ಕೆ ಏರಿವೆ. ಹಲ್ಲೆ, ಮಾರಣಾಂತಿಕ ಹಲ್ಲೆ ಕೇಸ್‌ಗಳು ಅಧಿಕವಾಗುತ್ತಾ ಸಾಗುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ಎಂದಿನಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಈ ಅಸ್ತ್ರವನ್ನು ಹಿಡಿದುಕೊಂಡು ಸರ್ಕಾರದ ಮೇಲೆ ದಾಳಿಗೆ ಇಳಿದಿವೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡೊಂಬೊಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ. ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ?” ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಜನಸಾಮಾನ್ಯರ ಮನದಲ್ಲಿರುವ ಪ್ರಶ್ನೆಯನ್ನೇ ಅವರು ಕೇಳಿದ್ದಾರೆ ಎನ್ನಬೇಕು. ಈ ಪ್ರಶ್ನೆಯನ್ನು ಕೇಳಿ ಅರ್ಧದಲ್ಲೇ ಕೈಬಿಡಬಾರದು. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಪ್ರಯತ್ನಿಸಬೇಕು. ಗೃಹ ಸಚಿವರು, ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಬೇಕು.

ಆದರೆ ಗೃಹ ಸಚಿವರು ಇದನ್ನು ಒಂದು ವಿಷಯವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. “ಒಂದೊಂದು ಘಟನೆಗೂ ಒಂದೊಂದು ಕಾರಣ ಅಂತ ಇರುತ್ತದೆ. ಅವರ (ಪ್ರತಿಪಕ್ಷದ) ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತೆ ಹೇಳಿದರೆ ಯಾವ ಸರ್ಕಾರದಲ್ಲಿ ಸುರಕ್ಷತೆ ಇತ್ತು ಅನ್ನೋದು ತಿಳಿಯುತ್ತೆ” ಎಂದಿದ್ದಾರೆ. “ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡೋಕೆ ಆಗೊಲ್ಲ. ಏನು ಕ್ರಮ ಬೇಕಾದ್ರೂ ತಗೊಳ್ತೇವೆ” ಎಂದಿದ್ದಾರೆ. ಇದು ಒಬ್ಬರು ಇನ್ನೊಬ್ಬರ ಮೇಲೆ ದೂರು ಹಾಕಿ ಮುಗಿಸಬೇಕಾದ ಸಂಗತಿಯಲ್ಲ. ಯಾರೂ ಇಂಥ ವಿಚಾರಗಳಲ್ಲಿ ಸುಮ್ಮಸುಮ್ಮನೆ ಆರೋಪ ಮಾಡುವುದಿಲ್ಲ. ಮೇಲಾಗಿ, ಇದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿದ ಅಂಕಿಸಂಖ್ಯೆಗಳನ್ನು ಆಧರಿಸಿದೆ. ಹೀಗಾಗಿ ಆಳುವವರು ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದವನು ಅಂಜಲಿ ಕೊಲೆ ಮಾಡಿದವನು, ತಾನು ನೇಹಾ ಕೊಲೆ ಮಾದರಿಯಲ್ಲಿ ಕೊಲ್ಲುತ್ತೇನೆ ಎಂದು ಮೊದಲೇ ಹೇಳಿಯೇ ಇದನ್ನು ಮಾಡುತ್ತಾನೆ. ಇದನ್ನು ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಎಷ್ಟು ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಅಂದಾಜು ಸಿಗುತ್ತದೆ. ಬಡವರು ಅನ್ಯಾಯಕ್ಕೊಳಗಾದರೆ ಕೇಳುವವರೇ ಇಲ್ಲವೇ? ಇಲ್ಲಿ ಪ್ರಜ್ವಲ್‌ ರೇವಣ್ಣನಂಥ ಪ್ರಭಾವಿ ಅಪರಾಧಿಗಳನ್ನು ರಾಜಕೀಯ ಕಾರಣಗಳಿಗಾಗಿ ಬೆನ್ನು ಹತ್ತಲಾಗುತ್ತದೆ; ಆದರೆ ಶ್ರೀಸಾಮಾನ್ಯರಿಗೆ ಇಲ್ಲಿ ಯಾವ ರಕ್ಷಣೆಯೂ ಇಲ್ಲವೇ? ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನೂರಾರು ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿದೆ. ನೂರಾರು ಕುಟುಂಬಗಳನ್ನು ಛಿದ್ರಗೊಳಿಸುವಂತಹ ಇಂಥ ಅಪರಾಧಿಗಳ ಮೇಲೆ ಯಾವ ಕ್ರಮವೂ ಇಲ್ಲ! ಬದಲಾಗಿ ಅವರನ್ನು ರಕ್ಷಿಸಲಾಗುತ್ತಿದೆ.

ಇವೆಲ್ಲವೂ ಅಪಾಯಕಾರಿ ಬೆಳವಣಿಗೆ. “ಹೆಣ್ಣು ನಡುರಾತ್ರಿಯಲ್ಲಿ ಒಬ್ಬಳೇ ಓಡಾಡುವಂತಾದರೆ ದೇಶ ಸ್ವತಂತ್ರವಾದುದಕ್ಕೆ ಸಾರ್ಥಕ” ಎಂದು ಗಾಂಧೀಜಿ ಹೇಳಿದ್ದರಂತೆ. ನಡುರಾತ್ರಿಯಲ್ಲಿ ಬೇಡ, ನಡುಹಗಲಿನಲ್ಲಾದರೂ ಸುರಕ್ಷಿತವಾಗಿ ಓಡಾಡುವಂತಾದರೆ ಸಾಕು! ಕಾಲೇಜಿಗೆ ಹೋಗುವುದು, ಮನೆಯಲ್ಲಿರುವುದು ಮುಂತಾದ ಸರಳ ಕ್ರಿಯೆಗಳ ಸಂದರ್ಭದಲ್ಲಿ ಕೂಡ ಪಾತಕಿಗಳು ದಾಳಿ ನಡೆಸುತ್ತಾರೆ ಎಂದರೆ ಏನು ಹೇಳೋಣ? ಬೆಂಗಳೂರಿನ ಬೀದಿಗಳಲ್ಲಿ ರೌಡಿ ಶೀಟರ್‌ಗಳು ಯಾರ ಭಯವಿಲ್ಲದೆ ಗ್ಯಾಂಗ್‌ ಕಟ್ಟಿಕೊಂಡು ಹೊಡೆದಾಡುವುದು, ಸರ ಎಗರಿಸುವುದು, ಹಲ್ಲೆ, ಬೈಕ್‌ ವ್ಹೀಲಿಂಗ್‌ ನಡೆಸುತ್ತಿದ್ದಾರೆ. ಗೃಹ ಇಲಾಖೆ ದುರ್ಬಲವಾದಾಗ, ಪುಂಡರಿಗೆ ರಾಜಕಾರಣಿಗಳೇ ಕುಮ್ಮಕ್ಕು ನೀಡಿದಾಗ ಇಂಥ ಪ್ರವೃತ್ತಿ ಹೆಚ್ಚುತ್ತದೆ. ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳ ದುರ್ಭರವಾಗಲಿವೆ.

ಇದನ್ನೂ ಓದಿ: Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Continue Reading

ದೇಶ

Jammu Kashmir: ಕಾಶ್ಮೀರದ 2 ಕಡೆ ಉಗ್ರರ ದಾಳಿ; ಮಾಜಿ ಸರ್ಪಂಚ್‌ ಬಲಿ, ರಾಜಸ್ಥಾನದ ದಂಪತಿಗೆ ಗಾಯ

Jammu Kashmir: ಉಗ್ರರ ದಾಳಿಯ ಕುರಿತು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಶೋಪಿಯಾನ್‌ ಜಿಲ್ಲೆಯ ಹುರ್ಪುರ ಗ್ರಾಮದಲ್ಲಿ ಉಗ್ರರ ದಾಳಿಯಲ್ಲಿ ಮಾಜಿ ಸರ್ಪಂಚ್‌ ಐಜಾಜ್‌ ಅಹ್ಮದ್‌ ಶೇಖ್‌ ಎಂಬುವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Jammu Kashmir
Koo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಲೋಕಸಭೆ ಚುನಾವಣೆಯ (Lok Sabha Election) 5ನೇ ಹಂತದ ಮತದಾನಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಉಗ್ರರ ದಾಳಿ ನಡೆದಿದೆ. ಒಂದೇ ದಿನ ಎರಡು ಕಡೆ ಉಗ್ರರು ನಾಗರಿಕರು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಶೋಪಿಯಾನ್‌ (Shopian) ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾಜಿ ಸರ್ಪಂಚ್‌ ಒಬ್ಬರು ಹತರಾದರೆ, ಅನಂತನಾಗ್‌ ಜಿಲ್ಲೆಯಲ್ಲಿ ರಾಜಸ್ಥಾನದ ದಂಪತಿಯು ಗಾಯಗೊಂಡಿದ್ದಾರೆ.

ಉಗ್ರರ ದಾಳಿಯ ಕುರಿತು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಶೋಪಿಯಾನ್‌ ಜಿಲ್ಲೆಯ ಹುರ್ಪುರ ಗ್ರಾಮದಲ್ಲಿ ಉಗ್ರರ ದಾಳಿಯಲ್ಲಿ ಮಾಜಿ ಸರ್ಪಂಚ್‌ ಐಜಾಜ್‌ ಅಹ್ಮದ್‌ ಶೇಖ್‌ ಎಂಬುವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಅನಂತನಾಗ್‌ನಲ್ಲಿಯೂ ಉಗ್ರರ ದಾಳಿ ನಡೆದಿದ್ದು, ರಾಜಸ್ಥಾನದ ಪತಿ-ಪತ್ನಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಮೂಲ ನಿವಾಸಿಗಳು ಅಲ್ಲ ಎಂಬುದನ್ನು ಗುರುತಿಸಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಟೂರಿಸ್ಟ್‌ ಕ್ಯಾಂಪ್‌ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪರ್ಹಾ ಹಾಗೂ ಅವರ ಪತಿ ತಬ್ರೇಜ್‌ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಕಡೆ ದಾಳಿ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಉಗ್ರರು ದಾಳಿ ನಡೆಸಿದ ಕಾರಣ ಭದ್ರತಾ ಸಿಬ್ಬಂದಿಯು ಎರಡೂ ಜಿಲ್ಲೆಗಳಲ್ಲಿ ಉಗ್ರರು ನಡೆಸಿದ ದಾಳಿಯ ಪ್ರದೇಶಗಳ ಸುತ್ತ ಸುತ್ತುವರಿದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಜಾಸ್ತಿಯಾಗಿವೆ. ಕಳೆದ ಏಪ್ರಿಲ್‌ನಲ್ಲಿ ಶೋಪಿಯಾನ್‌ ಜಿಲ್ಲೆಯಲ್ಲಿ ಸ್ಥಳೀಯನಲ್ಲದ ಟೂರಿಸ್ಟ್‌ ಗೈಡ್‌ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಶ್ರೀನಗರದಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿದ್ದರು.

ಇದನ್ನೂ ಓದಿ: Terrorists Killed: ಸೇನೆಯ ಭರ್ಜರಿ ಬೇಟೆ; ಎಲೆಕ್ಷನ್‌ ಹಾಳುಗೆಡವಲು ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

Continue Reading

ಕ್ರೀಡೆ

RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

RCB vs CSK: ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು. ಆದರೆ ಈ ಮೊತ್ತವನ್ನು ಬಾರಿಸಲು ಅವಕಾಶ ಕೊಡದೆ ಪ್ಲೇ ಆಫ್​ಗೆ ಲಗ್ಗೆಯಿಟ್ಟಿತು.

VISTARANEWS.COM


on

RCB vs CSK
Koo

ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಆರಂಭಿಕ ಹಂತದಲ್ಲಿ ಸತತ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ(RCB vs CSK), ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟಿದೆ. ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈಗೆ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ನಾಯಕ ಋತುರಾಜ್​ ಗಾಯಕ್ವಾಡ್​​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈ ಡೇಂಜಸರ್​ ಬ್ಯಾಟರ್​ ಡೇರಿಯಲ್​ ಮಿಚೆಲ್(4)​ ಅವರ ವಿಕೆಟ್​ ಕೂಡ ಕಳೆದುಕೊಂಡಿತು. ಆರ್​ಸಿಬಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಸಾಗಲಿಲ್ಲ. ಮೂರನೇ ವಿಕೆಟ್​ಗೆ ರಹಾನೆ ಮತ್ತು ರಚಿನ್ ರವೀಂದ್ರ​ ಸೇರಿಕೊಂಡು ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ನಿಂದ ತಂಡಕ್ಕೆ 10 ಸರಾಸರಿಯಲ್ಲಿ ರನ್​ ಹರಿದುಬಂತು.

ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಫರ್ಗುಸನ್​ ಕೊನೆಗೂ ಬೇರ್ಪಡಿಸಿದರು. 33 ರನ್​ ಗಳಿಸಿದ ವೇಳೆ ರಹಾನೆ ವಿಕೆಟ್​ ಕಳೆದುಕೊಂಡರು. ರಹಾನೆ ಮತ್ತು ರಚಿನ್​ ಸೇರಿಕೊಂಡು ಮೂರನೇ ವಿಕೆಟ್​ಗೆ 66 ರನ್​ ಒಟ್ಟುಗೂಡಿಸಿದರು. ಕರ್ನಾಟಕ ಮೂಲದವರೇ ಆದ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಅರ್ಧಶತಕ ಬಾರಿಸುವ ಮೂಲಕ ಕನ್ನಡಿಗರಿಗೇ ಕಂಟಕವಾಗುವ ಸೂಚನೆ ನೀಡಿದರು. ಆದರೆ ಇವರ ಬ್ಯಾಟಿಂಗ್​ ಅಬ್ಬರಕ್ಕೆ ಸ್ವಪ್ನಿಲ್ ಸಿಂಗ್​ ಬ್ರೇಕ್​ ಹಾಕಿದರು. ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಜೀವದಾನ ಪಡೆದರೂ ಕೂಡ ಇದೇ ಓವರ್​ನಲ್ಲಿ ಇಲ್ಲದ ರನ್​ ಕದಿಯಲು ಹೋಗಿ ರನೌಟ್​ ಬಲೆಗೆ ಬಿದ್ದರು. ರಚಿನ್​ 37 ಎಸೆತಗಳಿಂದ 61 ರನ್(5 ಬೌಂಡರಿ, 3 ಸಿಕ್ಸರ್​) ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಶಿವಂ ದುಬೆ(7) ವಿಕೆಟ್​ ಕೂಡ ಬಿತ್ತು.

ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೂಡ ಇದು ಸಾಧ್ಯವಾಗಲಿಲ್ಲ. ಧೋನಿ ಕ್ರೀಸ್​ನಲ್ಲಿ ಇರುತ್ತಿದ್ದರೆ ಚೆನ್ನೈಗೆ ಗೆಲುವು ಖಚಿತವಾಗಿರುತ್ತಿತ್ತು. 6 ಎಸೆತಗಳಲ್ಲಿ 17 ರನ್​ ಬೇಕಿದ್ದಾಗ ಧೋನಿ ಯಶ್​ ದಯಾಳ್​ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್​ ಕಲೆಹಾಕಿದರು. ಈ ಸಿಕ್ಸರ್​ 110 ಮೀಟರ್​ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್​ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್​ ಚಚ್ಚಿದರು.

18ರ ಅದೃಷ್ಟ ಗೆದ್ದ ಆರ್​ಸಿಬಿ


ವಿಶೇಷವೆಂದರೆ ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್​ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ. ಮೇ 18ರಂದು ಆರ್​ಸಿಬಿ ವಿರುದ್ಧ ಚೆನ್ನೈ 3ನೇ ಸೋಲಿಗೆ ತುತ್ತಾಯಿತು.

ಕೊಹ್ಲಿ-ಡುಪ್ಲೆಸಿಸ್​ ಉತ್ತಮ ಜತೆಯಾಟ


ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಮೊದಲ ಓವರ್​ನಲ್ಲಿ ಕೇವಲ 2 ರನ್​ ಮಾತ್ರ ಗಳಿಸಿತು. ಆ ಬಳಿಕದ 2 ಓವರ್​ನಲ್ಲಿ ಸಿಡಿದು ನಿಂತ ಕೊಹ್ಲಿ ಮತ್ತು ಡುಪ್ಲೆಸಿಸ್​ 29 ರನ್​ ಬಾಚಿದರು. 3 ಓವರ್​ಗೆ 31 ರನ್​ ಹರಿದು ಬಂತು. ಇದೇ ವೇಳೆ ಮಳೆ ಕೂಡ ಸುರಿಯಿತು. ಕೆಲ ಕಾಲ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಮಳೆ ನಿಂತ ಮೇಲೆ ಪಿಚ್ ವರ್ತನೆ ಕೊಂಚ ಬದಲಾಯಿತು. ಸ್ಪಿನ್ನರ್​ಗಳು ನಿಯಂತ್ರ ಸಾಧಿಸಿದರು. ಇದರಿಂದ ಆರ್​ಸಿಬಿಯ ರನ್​ ಗಳಿಕೆಯೂ ಕೆಲ ಕಾಲ ನಿಧಾನಗತಿಯಿಂದ ಸಾಗಿತು.

ಪಿಚ್​ ವರ್ತನೆಯನ್ನು ಅರಿತುಕೊಂಡ ಬಳಿಕ ಕೊಹ್ಲಿ ಮತ್ತು ಡು ಪ್ಲೆಸಿಸ್​ ಮತ್ತೆ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಅನುಭವಿ ರವೀಂದ್ರ ಜಡೇಜಾಗೆ ಡು ಪ್ಲೆಸಿಸ್​ ಸತತವಾಗಿ 2 ಸಿಕ್ಸರ್​ ಚಚ್ಚಿದರು. ಉತ್ತಮವಾಗಿ ಆಡುತ್ತಿದ್ದ ವಿರಾಟ್​ ಕೊಹ್ಲಿ ಬೌಂಡರಿ ಲೈನ್​ನಲ್ಲಿ ಡ್ಯಾರಿಲ್​ ಮಿಚೆಲ್ ಹಿಡಿದ ಅಸಾಮಾನ್ಯ ಕ್ಯಾಚ್​ಗೆ ಬಲಿಯಾದರು. 47 ರನ್​ ಗಳಿಸಿ ಕೇವಲ 3 ರನ್​ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ ದಾಖಲಾಯಿತು. ಕೊಹ್ಲಿ 4 ಸಿಕ್ಸರ್​ ಬಾರಿಸುವ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು.​ ಕೊಹ್ಲಿ ಒಟ್ಟು 36 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ ನಿಕೋಲಸ್​​ ಪೂರನ್​ ಕೂಡ 36 ಸಿಕ್ಸರ್​ ಬಾರಿಸಿದ್ದಾರೆ. ಇದು ಮಾತ್ರವಲ್ಲದೆ ಕೊಹ್ಲಿ ಈ ಬಾರಿ 700 ರನ್​ಗಳ ಗಡಿ ದಾಟಿದರು.

ಇದನ್ನೂ ಓದಿ IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

ಕೊಹ್ಲಿ ವಿಕೆಟ್​ ಪತನದ ಬಳಿಕ ಆಡಲಿಳಿದ ರಜತ್​ ಪಾಟೀದಾರ್​ ಕೂಡ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತ ನೀಡಿದರು. ಆದರೆ ಸ್ಟ್ರೇಟ್​ ಡ್ರೈ ಮಾಡುವ ಯತ್ನದಲ್ಲಿ ನಾನ್​ ಸ್ಟ್ರೈಕರ್​ನಲ್ಲಿದ್ದ ಡು ಪ್ಲೆಸಿಸ್​ ಅವರನ್ನು ರನೌಟ್​ ಆಗುವಂತೆ ಮಾಡಿದರು. ಪಾಟಿದಾರ್​ ಹೊಡೆದ ಚೆಂಡು ಸ್ಯಾಂಟ್ನರ್​ ಅವರ ಕೈಗೆ ತಗುಲಿ ನೇರವಾಗಿ ವಿಕೆಟ್​ಗೆ ತಗುಲಿತು. ಕ್ರೀಸ್​ ಬಿಟ್ಟು ನಿಂತಿದ್ದ ಡು ಪ್ಲೆಸಿಸ್​ ರನೌಟ್​ ಸಂಕಟಕ್ಕೆ ಸಿಲುಕಿದರು. ಡು ಪ್ಲೆಸಿಸ್​ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ನೆರವಿನಿಂದ 54 ರನ್​ ಬಾರಿಸಿದರು.

ಜೀವದಾನ ಪಡೆದ ಗ್ರೀನ್​


ಮೂರನೇ ವಿಕೆಟ್​ಗೆ ಜತೆಯಾದ ಕ್ಯಾಮರೂನ್​ ಗ್ರೀನ್​ ಮತ್ತು ಪಾಟಿದಾರ್​ ಕೂಡ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದರು. ಇದೇ ವೇಳೆ ಗ್ರೀನ್​ ಅವರು ನಾಯಕ ಋತುರಾಜ್​ ಗಾಯಕ್ವಾಡ್​ ಅವರಿಂದ ಕ್ಯಾಚ್​ ಕೈ ಚೆಲ್ಲಿ ಜೀವದಾನವೊಂದನ್ನು ಪಡೆದರು. ಈ ವೇಳೆ ಗ್ರೀನ್​ 18 ರನ್​ ಗಳಿಸಿದ್ದರು. ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಗ್ರೀನ್​ ಅಜೇಯ 38 ರನ್​ ಬಾರಿಸಿ ಚೆನ್ನೈಗೆ ಕಂಟಕವಾದರು. ಪಾಟಿದಾರ್​ ಮತ್ತು ಗ್ರೀನ್​ 3ನೇ ವಿಕೆಟ್​ಗೆ ಅತ್ಯಮೂಲ್ಯ 71 ರನ್​ಗಳ ಜತೆಯಾಟ ನಿಭಾಯಿಸಿದರು. ಪಾಟಿದಾರ್​ ಕೂಡ ಕೊಹ್ಲಿಯಂತೆ ಮಿಚೆಲ್​ ಕ್ಯಾಚ್​ಗೆ ವಿಕೆಟ್​ ಕಳೆದುಕೊಂಡರು. 23 ಎಸೆತ ಎದುರಿಸಿ 41 ರನ್​ ಬಾರಿಸಿದರು. ಈ ವೇಳೆ 4 ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು. ಬಳಿಕ ಬಂದ ದಿನೇಶ್​ ಕಾರ್ತಿಕ್​(14) ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​(16) ರನ್​ ಬಾರಿಸಿ ವಿಕೆಟ್​ ಕಳೆದುಕೊಂಡರು. ಚೆನ್ನೈ ಪರ ಶಾರ್ದೂಲ್​ ಠಾಕೂರ್​ 2 ವಿಕೆಟ್​ ಪಡೆದರೂ ಕೂಡ 61 ರನ್​ ಬಿಟ್ಟು ಕೊಟ್ಟು ದುಬಾರಿಯಾದರು. ಅನುಭವಿ ರವೀಂದ್ರ ಜಡೇಜಾ ವಿಕೆಟ್​ ಲೆಸ್​ ಎನಿಸಿಕೊಂಡರು.

Continue Reading
Advertisement
Dina bhavishya
ಭವಿಷ್ಯ2 mins ago

Dina Bhavishya : ಈ ರಾಶಿಯವರಿಗೆ ರಹಸ್ಯ ಕಾರ್ಯಗಳಿಂದಲೂ ಸಿಗುತ್ತೆ ಯಶಸ್ಸು

Karnataka Police
ಸಂಪಾದಕೀಯ4 hours ago

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

Jammu Kashmir
ದೇಶ5 hours ago

Jammu Kashmir: ಕಾಶ್ಮೀರದ 2 ಕಡೆ ಉಗ್ರರ ದಾಳಿ; ಮಾಜಿ ಸರ್ಪಂಚ್‌ ಬಲಿ, ರಾಜಸ್ಥಾನದ ದಂಪತಿಗೆ ಗಾಯ

RCB vs CSK
ಕ್ರೀಡೆ5 hours ago

RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

Anjali Murder Case
ಕರ್ನಾಟಕ5 hours ago

Anjali Murder Case: ಅಂಜಲಿ ಹತ್ಯೆ ಪ್ರಕರಣ; ಹು-ಧಾ ಐಪಿಎಸ್ ಅಧಿಕಾರಿಯ ತಲೆದಂಡ

Narendra Modi
ದೇಶ6 hours ago

Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

RCB vs CSK
ಕರ್ನಾಟಕ6 hours ago

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುತ್ತೇನೆ ಎಂದಿದ್ದ ಯುವಕ ವಶಕ್ಕೆ

Bank of Bhagyalakshmi movie poster released
ಸಿನಿಮಾ6 hours ago

Kannada New Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಔಟ್‌; ಶೀಘ್ರದಲ್ಲೇ ತೆರೆಗೆ

Priyanka Vadra
ಪ್ರಮುಖ ಸುದ್ದಿ6 hours ago

ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

Kangana Ranaut
ದೇಶ8 hours ago

Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20245 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌