Union Budget 2023 | ನಿರ್ದಿಷ್ಟ ಮಿತಿಗಿಂತ ಕಡಿಮೆ ಹಣಕಾಸು ವರ್ಗಾವಣೆಗಳಿಗೆ ಪ್ಯಾನ್‌ ಕಾರ್ಡ್‌ ಅಗತ್ಯ ರದ್ದಾಗುವ ನಿರೀಕ್ಷೆ - Vistara News

ಪ್ರಮುಖ ಸುದ್ದಿ

Union Budget 2023 | ನಿರ್ದಿಷ್ಟ ಮಿತಿಗಿಂತ ಕಡಿಮೆ ಹಣಕಾಸು ವರ್ಗಾವಣೆಗಳಿಗೆ ಪ್ಯಾನ್‌ ಕಾರ್ಡ್‌ ಅಗತ್ಯ ರದ್ದಾಗುವ ನಿರೀಕ್ಷೆ

ಈಗಾಗಲೇ ಬಹುತೇಕ ಬ್ಯಾಂಕ್‌ ಖಾತೆಗಳು ಆಧಾರ್‌ ಜತೆ ಲಿಂಕ್‌ ಆಗಿರುವುದರಿಂದ ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ಹಣಕಾಸು ವರ್ಗಾವಣೆಗೆ ಪ್ಯಾನ್‌ ಕಾರ್ಡ್‌ ಅಗತ್ಯತೆಯನ್ನು ರದ್ದುಪಡಿಸಬಹುದು ಎಂದು ಬ್ಯಾಂಕ್‌ಗಳು ಹಣಕಾಸು ಸಚಿವಾಲಯಕ್ಕೆ (Union Budget 2023) ತಿಳಿಸಿವೆ.

VISTARANEWS.COM


on

pan aadhar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕೆಲವು ವಿಧದ ಹಣಕಾಸು ವರ್ಗಾವಣೆಗಳಿಗೆ ಪ್ಯಾನ್‌ ಕಾರ್ಡ್‌ ಅಗತ್ಯವನ್ನು ಮುಂಬರುವ 2023-24ರ ಬಜೆಟ್‌ನಲ್ಲಿ ರದ್ದುಪಡಿಸುವ ಸಾಧ್ಯತೆ ಇದೆ.

ಆಧಾರ್‌ ಆಧಾರಿತ ಕೆಲವು ಹಣಕಾಸು ವರ್ಗಾವಣೆಗಳಿಗೆ ( Aadhaar backed financial transactions) ಪ್ಯಾನ್‌ ಕಾರ್ಡ್‌ ಅಗತ್ಯ ರದ್ದಾಗುವ ನಿರೀಕ್ಷೆ ಇದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮನವಿಯ ಮೇರೆಗೆ ನಿಯಮಾವಳಿಗಳನ್ನು ಸರಳಗೊಳಿಸಲು ಹಣಕಾಸು ಸಚಿವಾಲಯ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 206ಎಎ ಪ್ರಕಾರ ಇಬ್ಬರು ತೆರಿಗೆದಾರರ ನಡುವೆ ಹಣಕಾಸು ವರ್ಗಾವಣೆಗಳ ಸಂದರ್ಭ ಟಿಡಿಎಸ್‌ ಕಡಿತ ಅನ್ವಯವಾಗುವಾಗ, ಪ್ಯಾನ್‌ ಕಾರ್ಡ್‌ ಒದಗಿಸದಿದ್ದರೆ 20% ಹೆಚ್ಚುವರಿ ಟಿಡಿಎಸ್‌ ಕಡಿತಗೊಳಿಸಲು ಅವಕಾಶ ಇದೆ. ಉದಾಹರಣೆಗೆ ಪೂಜಾ ಎನ್ನುವವರು ಸೋನಿಯಾ ಅವರಿಗೆ ವೃತ್ತಿಪರ ಶುಲ್ಕವಾಗಿ 1 ಲಕ್ಷ ರೂ. ನೀಡಬೇಕು ಎಂದಿಟ್ಟುಕೊಳ್ಳಿ. ಸೋನಿಯಾ ಅವರು 10% ಟಿಡಿಎಸ್‌ ಕಡಿತಕ್ಕಾಗಿ ಪೂಜಾ (Payer) ಅವರಿಗೆ ತಮ್ಮ ಪ್ಯಾನ್‌ ವಿವರ ಒದಗಿಸದಿದ್ದರೆ, ಅದಕ್ಕಾಗಿ ಹೆಚ್ಚುವರಿ 10% ಪಾವತಿಸಬೇಕಾಗುತ್ತದೆ. ಒಟ್ಟು 20% ಟಿಡಿಎಸ್‌ ಆಗುತ್ತದೆ. ಪೂಜಾ ಅವರು ನೀಡುವ 1 ಲಕ್ಷ ರೂ.ಗಳಲ್ಲಿ 20,000 ರೂ. ಟಿಡಿಎಸ್‌ ಆಗಿ ಕಡಿತವಾಗುತ್ತದೆ. ಹೀಗಾಗಿ ಪ್ಯಾನ್‌ ಕಾರ್ಡ್‌ ವಿವರ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಟಿಡಿಎಸ್‌ ಕಡಿತವಾಗುತ್ತದೆ. ಹೀಗಾಗಿ ಈ ಅತಾರ್ಕಿಕ ತೆರಿಗೆ ನಿಯಮವನ್ನು ರದ್ದುಪಡಿಸಬೇಕು ಎಂದು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮನವಿ ಮಾಡಿವೆ. ಇದಕ್ಕೆ ಮತ್ತೊಂದು ಕಾರಣವೂ ಇದೆ.

ಈಗ ಬಹುತೇಕ ಎಲ್ಲ ಬ್ಯಾಂಕ್‌ ಖಾತೆಗಳೂ ಆಧಾರ್‌ ಜತೆ ಲಿಂಕ್‌ ಆಗಿವೆ. ಕೆಲವು ಹಣಕಾಸು ವರ್ಗಾವಣೆಗಳಿಗೆ ಬಳಕೆದಾರರು ಪ್ಯಾನ್‌ ಕಾರ್ಡ್‌ ಬದಲಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಬಳಸಬಹುದು ಎಂದು ಬ್ಯಾಂಕ್‌ಗಳೂ ತಿಳಿಸಿವೆ. ಮಾತ್ರವಲ್ಲದೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 139 ಎ(5ಇ) ಪ್ರಕಾರವೂ ಕೆಲವು ವರ್ಗಾವಣೆಗೆಳಿಗೆ ಪ್ಯಾನ್‌ ಕಾರ್ಡ್‌ ಬದಲು ಆಧಾರ್‌ ಬಳಸಬಹುದು.

ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಿತಿಗಿಂತ ಕೆಳಗಿನ ಹಣಕಾಸು ವರ್ಗಾವಣೆಗೆ ಪ್ಯಾನ್‌ ಅನಗತ್ಯ ಎಂಬ ಸುಧಾರಿತ ನಿಯಮ ಬಜೆಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Arvind Kejriwal: 50 ದಿನಗಳ ವನವಾಸ ಅಂತ್ಯ; ತಿಹಾರ ಜೈಲಿನಿಂದ ಅರವಿಂದ್ ಕೇಜ್ರಿವಾಲ್‌ ಬಿಡುಗಡೆ

Arvind Kejriwal: ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್‌ 21ರಂದು ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು. ಹಲವು ಬಾರಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಆದರೆ, ಶುಕ್ರವಾರ (ಮೇ 10) ಸುಪ್ರೀಂ ಕೋರ್ಟ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಕಾರಣ ತಿಹಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ (Delhi Excise Policy Case) ಜಾರಿ ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕಳೆದ 50 ದಿನಗಳಿಂದ ಜೈಲಿನಲ್ಲೇ ಇದ್ದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಶುಕ್ರವಾರ (ಮೇ 10) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಜೂನ್‌ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಕಾರಣ ಶುಕ್ರವಾರ ಸಂಜೆ ತಿಹಾರ ಜೈಲಿನಿಂದ (Tihar Jail) ಅವರನ್ನು ಬಿಡುಗಡೆ ಮಾಡಲಾಯಿತು. ಕೇಜ್ರಿವಾಲ್‌ ಅವರು ಜೈಲಿನಿಂದ ಹೊರಬರುತ್ತಲೇ ಆಪ್‌ ಕಾರ್ಯಕರ್ತರು ಜೈಕಾರ ಕೂಗಿ ಅವರನ್ನು ಸ್ವಾಗತಿಸಿದರು.

ಯಾವುದೇ ಕಡತಗಳಿಗೆ ಸಹಿ ಹಾಕಬಾರದು ಎಂಬುದು ಸೇರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನ್ಯಾಯಾಲಯವು ಹಲವು ಷರತ್ತುಗಳನ್ನು ವಿಧಿಸಿದೆ. ಹಾಗೆಯೇ, ಜೂನ್‌ 2ರಂದು ಮತ್ತೆ ಶರಣಾಗಬೇಕು ಎಂಬುದಾಗಿ ಸೂಚಿಸಿದೆ. ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್‌ 21ರಂದು ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು. ಹಲವು ಬಾರಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಈಗ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಹೊರಬಂದಿದ್ದಾರೆ.

ಅಬಕಾರಿ ನೀತಿ ಪ್ರಕರಣವೇನು?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೊತೆಗೆ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

Continue Reading

Latest

Rahul Dravid : ವಿಶ್ವ ಕಪ್​ ಬಳಿಕ ದ್ರಾವಿಡ್​ ಭಾರತದ ಕೋಚ್ ಅಗಿರುವುದಿಲ್ಲ; ಮುಂದೆ ಯಾರು?

VISTARANEWS.COM


on

Rahul Dravid
Koo

ನವದೆಹಲಿ: ಭಾರತ ಕ್ರಿಕೆಟ್ ತಂಡದ ಹೆಡ್​ ಕೋಚ್​ ಹುದ್ದೆಗೆ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅರ್ಜಿ ಕರೆದು ಜಾಹೀರಾತು ನೀಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ. ರಾಹುಲ್​ ದ್ರಾವಿಡ್ (Rahul Dravid) ಅವರು ವಿಸ್ತರಿತ ಕೋಚಿಂಗ್​ ಗುತ್ತಿಗೆಯೊಂದಿಗೆ ಇದೀಗ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ಟಿ20 ವಿಶ್ವ ಕಪ್ (T20 World Cup 2024)​ ಬಳಿಕ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಈ ವರ್ಷದ ಜೂನ್ ನಲ್ಲಿ ಅವರು ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ. ಹೀಗಾಗಿ ಹೊಸ ಅರ್ಜಿಯನ್ನು ಕರೆಯಲು ಬಿಸಿಸಿಐ ಮುಂದಾಗಿದೆ. ಅಂದ ಹಾಗೆ ದ್ರಾವಿಡ್ ಅವರು ಟೀಮ್ ಇಂಡಿಯಾದ (Team India) ಹೆಡ್​ ಕೋಚ್ ಆಗಲು ಎರಡು ವರ್ಷಗಳ ಒಪ್ಪಂದವನ್ನು ಹೊಂದಿದ್ದರು. 2023ರ ವರ್ಷ ನವೆಂಬರ್​ನ ಏಕದಿನ ವಿಶ್ವಕಪ್ ಮುಗಿದ ನಂತರ ಅದು ಕೊನೆಗೊಂಡಿತು. ಬಳಿಕ ಬಿಸಿಸಿಐ ಅವರ ಸಹಾಯಕ ಸಿಬ್ಬಂದಿಯೊಂದಿಗೆ ವಿಸ್ತರಣೆಯನ್ನು ನೀಡಿತ್ತು.

“ಮುಂದಿನ ಕೆಲವೇ ದಿನಗಳಲ್ಲಿ ಕೋಚ್​ ಹುದ್ದೆಗಳಿಗೆ ನಾವು ಅರ್ಜಿಗಳನ್ನು ಕರೆಯಲಿದ್ದೇವೆ. ಯಾಕೆಂದರೆ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ದ್ರಾವಿಡ್ ಅವರು ಮುಂದುವರಿಯಲು ಬಯಸಿರೆ ಅವರು ಮತ್ತೆ ಅರ್ಜಿ ಸಲ್ಲಿಸಬೇಕು. ನಾವು ಮೂರು ವರ್ಷಗಳ ಕಾಲ ದೀರ್ಘಾವಧಿಯ ಸೇವೆ ಸಲ್ಲಿಸುವ ತರಬೇತುದಾರನನ್ನು ಹುಡುಕುತ್ತಿದ್ದೇವೆ” ಎಂದು ಬಿಸಿಸಿಐ ಕಾರ್ಯದರ್ಶಿ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ಗೆ ಸಹಾಯಕ ಕೋ ತಂಡವನ್ನು ಹೊಸ ತರಬೇತುದಾರರನ್ನು ನೇಮಿಸಿದ ನಂತರ ಹೆಡ್​ ಕೋಚ್ ಹುದ್ದೆಯನ್ನು ಅಂತಿಮಗೊಳಿಸಲಾಗುವುದು ಎಂಬುದಾಗಿಯೂ ಅವರು ಹೇಳಿದ್ದಾರೆ.

ಈ ಹುದ್ದೆಗೆ ಯಾರು ಇರಬೇಕು ಎಂಬುದನ್ನು ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ತೀರ್ಮಾನಿಸಲಿದೆ. ವಿದೇಶಿ ಅಥವಾ ಸ್ವದೇಶಿ ತರಬೇತುದಾರರಿಗೆ ಅವಕಾಶ ನೀಡುವ ವಿಚಾರವನ್ನೂ ಅವರು ತೀರ್ಮಾನಿಸಲಿದ್ದಾರೆ. ಆದರೆ ಎಲ್ಲಾ ಸ್ವರೂಪಗಳಿಗೆ ಒಬ್ಬರೇ ತರಬೇತುದಾರರು ಇರುತ್ತಾರೆ. ವೈಟ್-ಬಾಲ್ ಸ್ವರೂಪಗಳು ಮತ್ತು ಟೆಸ್ಟ್ ಕ್ರಿಕೆಟ್​ಗೆ ವಿಭಿನ್ನ ತರಬೇತುದಾರರು ಎಂಬ ಯೋಚನೆ ಇಲ್ಲ ಎಂದು ಶಾ ಹೇಳಿದರು.

“ಸಿಎಸಿ ವಿದೇಶಿ ಕೋಚ್ ಆಯ್ಕೆ ಮಾಡಿದರೆ ನಾವು ಆ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಆ ನಿರ್ಧಾರವನ್ನು ಬಿಸಿಸಿಯ ಒಪ್ಪಿಕೊಳ್ಳಲಿದೆ. ಭಾರತದಲ್ಲಿ ಸದ್ಯ ಪರಿಸ್ಥಿತಿಗೆ ಯಾವುದೇ ಪೂರ್ವನಿದರ್ಶನ ಇರುವುದಿಲ್ಲ ಎಂದು ಶಾ ಹೇಳಿದರು.

ಇದನ್ನೂ ಓದಿ: Brij Bhushan : ಡಬ್ಲ್ಯುಎಫ್​ಐ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಲು ಕೋರ್ಟ್​ ಆದೇಶ

ಖಾಲಿ ಇರುವ ಏಕೈಕ ರಾಷ್ಟ್ರೀಯ ಆಯ್ಕೆಗಾರ ಹುದ್ದೆಗೆ ಈಗಾಗಲೇ ಕೆಲವು ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಬಹಿರಂಗಪಡಿಸಿದರು. ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

“ಆಯ್ಕೆಗಾರರ ಹುದ್ದೆಗೆ ಈಗಾಗಲೇ ಕೆಲವು ಸಂದರ್ಶನಗಳು ನಡೆದಿವೆ. ನಾವು ಅದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ” ಎಂದು ಅವರು ಹೇಳಿದರು.

ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಗುರಿ

2027 ರಿಂದ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅನ್ನು ಬೇರೆ ಸ್ಥಳದಲ್ಲಿ ಆಯೋಜಿಸುವ ಸಾಮರ್ಥ್ಯದ ಬಗ್ಗೆ ಐಸಿಸಿಯೊಂದಿಗೆ ಚರ್ಚಿಸಲು ಬಿಸಿಸಿಐ ಯೋಜಿಸಿದೆ ಎಂದು ಶಾ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ವಿಶ್ವ ಕಪ್​ನ ಮೊದಲ ಎರಡು ಆವೃತ್ತಿಗಳಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದೆ.

“ನಾವು 2027ರ ಟೆಸ್ಟ್​ ಚಾಂಪಿಯನ್​ಷಿಪ್​ ಬಗ್ಗೆ ಐಸಿಸಿಯೊಂದಿಗೆ ಈ ಬಗ್ಗೆ ಮಾತನಾಡಿದ್ದೇವೆ. ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎಂಬ ಮೂರು ಪ್ರಮುಖ ಟೆಸ್ಟ್ ಕೇಂದ್ರಗಳಿವೆ. ಆ ವಿಂಡೋದಲ್ಲಿ ನೀವು ಅದನ್ನು ಆಸ್ಟ್ರೇಲಿಯಾದಲ್ಲಿ ಅಥವಾ ಭಾರತದಲ್ಲಿಯೂ ಹಿಡಿದಿಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲೂ ಆ ಸಮಯದಲ್ಲಿ ಮಳೆಯಾಗುತ್ತದೆ” ಎಂದು ಅವರು ಹೇಳಿದರು.

Continue Reading

ಕ್ರೈಂ

Prajwal Revanna Case: ಸೋಮವಾರ ರೇವಣ್ಣ ಜಾಮೀನು ಅರ್ಜಿ ವಿಚಾರಣೆ: SIT ವಾದ ಏನು? ವಕೀಲ ನಾಗೇಶ್‌ ಕೌಂಟರ್‌ ಏನು?

Prajwal Revanna Case: ಸಂತ್ರಸ್ತೆ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಬಂಧನವಾಗಿರುವ ಎಚ್‌.ಡಿ. ರೇವಣ್ಣ ಅವರಿಗೆ ಜಾಮೀನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸೋಮವಾರಕ್ಕೆ ಬರಲಿದೆ. ಗುರುವಾರ ನಡೆದಿದ್ದ ಕೋರ್ಟ್‌ ಕಲಾಪದ ವೇಳೆ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ತನಿಖೆಯ ಹಲವಾರು ಲೂಪ್‌ ಹೋಲ್ಸ್‌ಗಳನ್ನು ಕೋರ್ಟ್‌ ಮುಂದೆ ತೆರೆದಿಟ್ಟಿದ್ದಾರೆ. ಅಲ್ಲದೆ, ಎಸ್‌ಐಟಿ ನಡೆಯನ್ನು ಪ್ರಶ್ನೆ ಮಾಡಿದ್ದಾರೆ? ತನಿಖೆ ಹಾದಿ ಸರಿ ಇಲ್ಲ ಎಂದೂ ಹೇಳಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖ ಮಾಡಿದ್ದಾರೆ. ಇದಕ್ಕೆ ಎಸ್‌ಐಟಿ ಪರ ವಕೀಲ ಜಯ್ನಾ ಕೊಠಾರಿ, ಆಕ್ಷೇಪ ವ್ಯಕ್ತಪಡಿಸಿದ್ದು, ರೇವಣ್ಣಗೆ ಜಾಮೀನು ಕೊಟ್ಟರೆ ಸಾಕ್ಷಿ ನಾಶದ ಭಯ ಇದೆ, ಇನ್ನೂ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಸಿಕ್ಕಿಲ್ಲ. ಇವರೂ ತಪ್ಪಿಸಿಕೊಂಡರೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರದ ವಿಚಾರಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

Prajwal Revanna Case Revanna bail plea to be heard on Monday What is SIT argument
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna) ಅವರಿಗೂ ಗುರುವಾರ ಸಹ ಜಾಮೀನು ಸಿಕ್ಕಿಲ್ಲ. ಸಾಕಷ್ಟು ವಾದ – ಪ್ರತಿವಾದದ ಬಳಿಕ ಜನಪ್ರತಿನಿಧಿಗಳ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ಆದರೆ, ಕೋರ್ಟ್‌ ಕಲಾಪದ ವೇಳೆ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ತನಿಖೆಯ ಹಲವಾರು ಲೂಪ್‌ ಹೋಲ್ಸ್‌ಗಳನ್ನು ಕೋರ್ಟ್‌ ಮುಂದೆ ತೆರೆದಿಟ್ಟಿದ್ದಾರೆ. ಅಲ್ಲದೆ, ಎಸ್‌ಐಟಿ ನಡೆಯನ್ನು ಪ್ರಶ್ನೆ ಮಾಡಿದ್ದಾರೆ? ತನಿಖೆ ಹಾದಿ ಸರಿ ಇಲ್ಲ ಎಂದೂ ಹೇಳಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖ ಮಾಡಿದ್ದಾರೆ. ಇದಕ್ಕೆ ಎಸ್‌ಐಟಿ ಪರ ವಕೀಲ ಜಯ್ನಾ ಕೊಠಾರಿ, ಆಕ್ಷೇಪ ವ್ಯಕ್ತಪಡಿಸಿದ್ದು, ರೇವಣ್ಣಗೆ ಜಾಮೀನು ಕೊಟ್ಟರೆ ಸಾಕ್ಷಿ ನಾಶದ ಭಯ ಇದೆ, ಇನ್ನೂ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಸಿಕ್ಕಿಲ್ಲ. ಇವರೂ ತಪ್ಪಿಸಿಕೊಂಡರೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರದ ವಿಚಾರಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಗುರುವಾರ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ಏನೇನು ವಾದವಾಗಿದೆ? ರೇವಣ್ಣ ಪರ ವಕೀಲರ ವಾದ ಏನಿತ್ತು? ಎಸ್‌ಐಟಿ ಪರ ವಕೀಲರು ಹೇಳಿದ್ದೇನು? ಅವರು ಕೋರ್ಟ್‌ ಬಳಿ ಸಮಯಾವಕಾಶವನ್ನು ಕೇಳಿದ್ದು ಏಕೆ? ಎಂಬಿತ್ಯಾದಿ ಸಮಗ್ರ ವಿವರವನ್ನು ಇಲ್ಲಿ ಕೊಡಲಾಗಿದೆ.

ಎಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಸೋಮವಾರ ಬೆಳಗ್ಗೆ 11.30ಕ್ಕೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದೂಡಿದೆ. ಕೋರ್ಟ್‌ಗೆ ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಸೋಮವಾರ ಸಮಯ ವ್ಯರ್ಥ ಮಾಡದೆ ಮಾಹಿತಿ ನೀಡುತ್ತೇವೆ. ಸೋಮವಾರದವರೆಗೆ ವಿಚಾರಣೆ ಮುಂದೂಡಬೇಕೆಂದು ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ನೀಡಿದ್ದಾರೆ.

ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಮಾಡಿದ್ದು, ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್‌ ಮುಂದೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ
ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು. ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ‌ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ವಾದ ಮಂಡಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ. ಬೇಲ್ ಅರ್ಜಿ ಊರ್ಜಿತವಲ್ಲವೆಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. 2023ರ ತೀಸ್ತಾ ಸೆಟಲ್ ವಾಡ್‌ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ನಾಗೇಶ್‌, ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ನಿರಂಜನ್ ಸಿಂಗ್ ಕೇಸ್‌ನಲ್ಲಿಯೂ ಜಾಮೀನು ಉಲ್ಲೇಖವಿದೆ. 22 ತೀರ್ಪುಗಳಲ್ಲಿ ನಿರಂಜನ್ ಕೇಸ್‌ ಅನ್ನು ಅನುಸರಿಸಲಾಗಿದೆ. ಕಸ್ಟಡಿಯಲ್ಲಿದ್ದಾಗಲೂ ಜಾಮೀನು ನೀಡಿರುವ ಉಲ್ಲೇಖವಿದೆ. ಒಂದೊಂದು ದಿನ ಒಬ್ಬೊಬ್ಬರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗುತ್ತಿದೆ. ಮೊದಲು ಜಗದೀಶ್ ಇದ್ದರು, ಈಗ ಜಯ್ನಾ ಕೊಠಾರಿ ಇದ್ದಾರೆ. ಎಸ್‌ಪಿಪಿ ನೇಮಕಕ್ಕೂ ಕಾನೂನಿನಲ್ಲಿ ಕೆಲ ಕ್ರಮಗಳಿವೆ ಎಂದು ವಾದಿಸಿದರು.

ಈ ವೇಳೆ ವಾದ ಮಂಡನೆಗೆ ಜಯ್ನಾ ಕೊಠಾರಿ ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಡ್ಜ್‌, ಈಗಾಗಲೇ ಆಕ್ಷೇಪಣೆಗೆ 3 ಬಾರಿ ಸಮಯ ನೀಡಲಾಗಿದೆ. ಇನ್ನೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ

ಈ ವೇಳೆ ವಾದ ಮುಂದುವರಿಸಿದ ನಾಗೇಶ್‌, ಪ್ರಕರಣದಲ್ಲಿ ಹಾಕಿದ ಸೆಕ್ಷನ್‌ಗಳ ಬಗ್ಗೆ ಉಲ್ಲೇಖಿದರು. ಸಂತ್ರಸ್ತೆ ಎಲ್ಲಿದ್ದಾರೆ, ಸಂತ್ರಸ್ತೆಗೆ ಏನಾದರೂ ಗಾಯವಾಗಿದೆಯಾ? ಸಂತ್ರಸ್ತೆಯ ಪರಿಸ್ಥಿತಿಯ ಬಗ್ಗೆ ಎಸ್‌ಐಟಿ ಮಾತನಾಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾಗದ ಕಾರಣ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿತ್ತು. ಮಹಿಳೆಯ ಸುರಕ್ಷತೆ ಸಂಬಂಧ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಲಾಗಿತ್ತು. 364(a), 365 ಅಡಿ ಕೇಸ್ ದಾಖಲಿಸುವ ಅಗತ್ಯವೇ ಇರಲಿಲ್ಲ ಎಂದು ವಕೀಲರಾದ ನಾಗೇಶ್‌ ಅವರು ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಮಾನ ಹೈಜಾಕ್ ಪ್ರಕರಣದ ಉಲ್ಲೇಖ

ಈ ವೇಳೆ ವಿಮಾನ ಹೈಜಾಕ್ ಪ್ರಕರಣವನ್ನು ಉಲ್ಲೆಖಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಈ ಹಿಂದೆ ವಿಮಾನ ಹೈಜಾಕ್ ಮಾಡಿ ಉಗ್ರನ ಬಿಡುಗಡೆಗೆ ಕೋರಿದ್ದರು. ವಿಮಾನ ಹೈಜಾಕ್ ಸಮಯದಲ್ಲಿ ಜಸ್ವಂತ್ ಸಿಂಗ್ ಮಂತ್ರಿ ಆಗಿದ್ದರು. ಆಗ ಉಗ್ರರನ್ನು ಬಿಟ್ಟು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬಿಡಿಸಿದ್ದರು. ಇದಾದ ಬಳಿಕವೇ ಸೆಕ್ಷನ್ 364(a) ಸೇರಿಸಲಾಯಿತು. ಇಲ್ಲಿ ಇಂತಹ ಘಟನೆ ನಡೆದಿಲ್ಲವಾದರೂ ಸೆಕ್ಷನ್ 364(a) ಸೇರಿಸಲಾಗಿದೆ. ನಮ್ಮ ಕಕ್ಷಿದಾರ ರೇವಣ್ಣ ವಿರುದ್ಧ 364(a) ದಾಖಲು ಮಾಡಿದ್ದಾರೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ 21 ವರ್ಷದ ಮಗ ದೂರು ನೀಡಿದ್ದಾನೆ ಎಂದು ವಾದ ಮಂಡಿಸಿದರು.

ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ?

ಮಹಿಳೆಯನ್ನು ಅಪಹರಿಸಿ ವಿದೇಶಕ್ಕೆ ಕರೆದೊಯ್ದರೆ ಈ ಸೆಕ್ಷನ್‌ಗಳು ಅಪ್ಲೇ ಆಗುತ್ತವೆ. ಪ್ರಕರಣದಲ್ಲಿ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಸಾರಾಂಶ ಉಲ್ಲೇಖಿಸಿದ ನಾಗೇಶ್‌, ದೂರುದಾರ ಮಗನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾರೆಂದು ಹೇಳಿದ್ದಾರೆ. ದೂರುದಾರನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. ದೂರಿನಲ್ಲಿ ಇರುವ ಸತೀಶ್ ಬಾಬು ಹೇಳಿಕೆಯನ್ನು ಗಮನಿಸೋಣ. ಅದರಲ್ಲಿ “ನಿನ್ನ ತಾಯಿ ಮೇಲೆ ಪೊಲೀಸ್ ಕೇಸ್ ಆಗುತ್ತದೆ. ರೇವಣ್ಣ ಕರೆದಿದ್ದಾರೆಂದು ಹೇಳಿ ಕರೆದುಕೊಂಡು ಹೋದರು” ಎಂದು ಆರೋಪ ಮಾಡಲಾಗಿದೆ. ಹಾಗಾದರೆ, ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ? ರೇವಣ್ಣ ಸಾಹೇಬರು ಹೇಳಿದ್ದಾರೆ ಎಂದು ಕರೆದೊಯ್ದರೆ ಅದು ಅಪಹರಣವೇ? ಇದರಲ್ಲಿ ಮೋಸವಿದೆಯೇ? ಬಲ ಪ್ರಯೋಗವಿದೆಯೇ? ಹೀಗಾಗಿ ಇಲ್ಲಿ ಅಪಹರಣದ ಯಾವುದೇ ಅಂಶಗಳು ಅನ್ವಯವಾಗುವುದಿಲ್ಲ ಎಂದು ವಾದ ಮಂಡಿಸಿದರು.

ಪೊಲೀಸರು ಹಲ್ಲಿಲ್ಲದ ಹಾವುಗಳು

ಈ ಪ್ರಕರಣದಲ್ಲಿ ಅಪಹರಣಕ್ಕೊಳಗಾದವರೇ ಆಕ್ಷೇಪಣೆ ಸಲ್ಲಿಸಬೇಕು. ಬೇರೆ ಯಾರೂ ಆಕ್ಷೇಪಣೆ ಸಲ್ಲಿಸಲಾಗುವುದಿಲ್ಲ. 365 ಅಕ್ರಮ ಬಂಧನ‌ ಸೆಕ್ಷನ್ ಕೂಡ ಅನ್ವಯ ಆಗುವುದಿಲ್ಲ. ಇಲ್ಲಿ ಏನು ಡಿಮ್ಯಾಂಡ್ ಇದೆ? ಅಪಹರಣವೂ ಇಲ್ಲ,‌ ಅಕ್ರಮ ಬಂಧನವೂ ಇಲ್ಲ. ನಾಳೆ‌ ಯಾರಿಂದಲಾದರೂ ಹೇಳಿಕೆ ಪಡೆದು ಸಾಕ್ಷ್ಯ ಸೃಷ್ಟಿಸಬಹುದು. ಏಕೆಂದರೆ ಪೊಲೀಸರು ಹಲ್ಲಿಲ್ಲದ ಹಾವುಗಳು. ಪೊಲೀಸರಿಗೆ ಸೆಕ್ಷನ್ 161 ಹೇಳಿಕೆ ಎಂಬ ಅಸ್ತ್ರ ಇದೆ. ಇನ್ನು ಎಚ್.ಡಿ.ರೇವಣ್ಣ ರಾಜಕೀಯ ಪಕ್ಷದಲ್ಲಿದ್ದಾರೆ ಎಂದು ನಾಗೇಶ್‌ ವಾದಿಸಿದರು.

ಇದನ್ನೂ ಓದಿ: Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಪ್ರಚೋದನೆಯಿಂದ ಕೂಡಿದ ಕೇಸ್‌ ಇದು

ಏಪ್ರಿಲ್ 29ರಂದು ಕಿಡ್ನ್ಯಾಪ್ ಆಗುತ್ತೆ, 4 ದಿನ ಬಿಟ್ಟು ಎಫ್‌ಐಆರ್‌ ದಾಖಲು ಮಾಡಲಾಗುತ್ತದೆ. ಏ.29ಕ್ಕೆ ಘಟನೆ ನಡೆದಿದೆ ಎಂದು ಉಲ್ಲೇಖಿಸಿದ್ದು, ಮೇ 2ರಂದು ಕೇಸ್ ದಾಖಲು ಮಾಡಲಾಗಿದೆ. ಮೊದಲು ಹೊಳೆನರಸೀಪುರ ಠಾಣೆಯಲ್ಲಿ ‌ಕೇಸ್ ದಾಖಲಾಗಿತ್ತು. ಅಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಸೆಕ್ಷನ್‌ಗಳು ಇತ್ತು. ನಂತರ ಪೊಲೀಸರು 41A ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಮೇ 3ರಂದು ನೋಟಿಸ್ ನೀಡಿ ಮೇ 4ರಂದು ವಿಚಾರಣೆಗೆ ಬರಲು ಹೇಳಿದ್ದಾರೆ. ರೇವಣ್ಣ ವಿರುದ್ಧ ದಾಖಲಾದ ಕೇಸ್ ಪ್ರಚೋದನೆಯಿಂದ ಆಗಿದೆ. ಪ್ರಚೋದನೆಯಿಂದ ಕೇಸ್ ಹಾಕಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ರೇವಣ್ಣಗೆ ಜಾಮೀನು ನೀಡಬೇಕೆಂದು ಸಿ.ವಿ.ನಾಗೇಶ್ ಬಲವಾಗಿ ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ ಏನು ಹೇಳಿದೆ?

ತನಿಖೆಗೆ ಸಹಕರಿಸುತ್ತಿಲ್ಲ ಅಂತಾರೆ, ಯಾವ ರೀತಿ ಸಹಕರಿಸಬೇಕು. ಎಚ್.ಡಿ. ರೇವಣ್ಣ ಅವರ ತನಿಖೆ ಬಹುತೇಕ ಮುಗಿದಿದೆ. ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಆದೇಶವನ್ನು ನೀಡಿದೆ. ಕಸ್ಟಡಿಯಲ್ಲಿದ್ದಾಗ ತನಿಖೆ ಮುಗಿದಿದ್ದರೆ ಬೇಲ್ ನೀಡಬಹುದೆಂದು ಹೇಳಿದೆ. ರೇವಣ್ಣರನ್ನು ಕಸ್ಟಡಿಗೆ ತೆಗೆದುಕೊಂಡು ಹೇಳಿಕೆ ಪಡೆದಿದ್ದಾರೆ. ಎಸ್‌ಐಟಿ ಏನೆಲ್ಲ ಸಾಕ್ಷಿ ಸಂಗ್ರಹಿಸಿದೆ ಎಂದು ಹೇಳಬೇಕು.

ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದರು? ಯಾವುದನ್ನು ನಂಬಬೇಕು?

ಕಿಡ್ನ್ಯಾಪ್ ಸಂತ್ರಸ್ತೆಗೆ ಏನಾದರೂ ಗಾಯಗಳಾಗಿವೆಯಾ? ಕಿಡ್ನ್ಯಾಪ್ ಸಂತ್ರಸ್ತೆಗೆ ಯಾವುದೇ ಚಿಕಿತ್ಸೆಯನ್ನು ಕೊಡಿಸಿಲ್ಲ. ಸಂತ್ರಸ್ತೆಯನ್ನು ನ್ಯಾಯಾಧೀಶರ ಮುಂದೆಯೂ ಹಾಜರುಪಡಿಸಿಲ್ಲ. 164 ಅಡಿಯಲ್ಲಿ ಹೇಳಿಕೆಯೂ ದಾಖಲಿಸಿಲ್ಲ. ಇಷ್ಟು ದಿನವಾದ್ರು ಯಾಕೆ 164 ಸ್ಟೇಟ್ಮೆಂಟ್ ಮಾಡಿಸಿಲ್ಲ. ಎಸ್‌ಐಟಿಯವರು ಕಳೆದ 6 ದಿನಗಳಿಂದ ಏನ್ ಮಾಡುತ್ತಿದ್ದಾರೆ? ಸಂತ್ರಸ್ತೆ ಪತ್ತೆಯಾದ ಸ್ಥಳದ ಕಂದಾಯ ದಾಖಲೆ ಪಡೆಯಬೇಕಂತಾರೆ. ಮುಂದಿನ ತನಿಖೆ ನಡೆಸಲಾಗುವುದು ಎಂದು ಹೇಳುತ್ತಾರೆ, ಇದರರ್ಥವೇನು? ಸಂತ್ರಸ್ತೆ ಕೂಡಿಹಾಕಿದ್ದ ಸ್ಥಳ ಪರಿಶೀಲಿಸಬೇಕು ಎಂದು ಹೇಳುತ್ತಾರೆ. ಹಾಗಾದರೆ ಇವರು ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದರು? ಸಂತ್ರಸ್ತೆಯನ್ನು ಕರೆದೊಯ್ದ ವಾಹನ ಪತ್ತೆ ಹಚ್ಚಬೇಕು ಎಂದು ಹೇಳುತ್ತಾರೆ. ವಾಹನ ಸೀಜ್ ಮಾಡಬೇಕಿದೆ ಎಂದು ಕೂಡ ಹೇಳಿದ್ದಾರೆ. ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಗಾಡಿ ಸೀಜ್ ಬಗ್ಗೆ ತಿಳಿಸಿದ್ದಾರೆ. ಇವರು ಎಷ್ಟು ವಾಹನಗಳನ್ನು ಸೀಜ್ ಮಾಡಬೇಕು? ಆರೋಪಿ ಕೃತ್ಯಕ್ಕೆ ಬಳಸಿದ ಬೈಕ್, ಮೊಬೈಲ್ ಸೀಜ್ ಆಗಿದೆ ಎಂದು ಎಸ್‌ಐಟಿಯವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಒಂದು ಕಡೆ ಸೀಜ್ ಮಾಡಬೇಕು ಎಂದು ಹೇಳಿಕೆ ಕೊಡುತ್ತಾರೆ. ಮತ್ತೊಂದು ಕಡೆ ವಾಹನ ಸೀಜ್ ಮಾಡಿರುವುದಾಗಿ ಅವರು ಹೇಳುತ್ತಾರೆ. ಯಾವುದನ್ನು ನಂಬಬೇಕು ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.

ಈ ವಿಷಯದಲ್ಲಿ ರೇವಣ್ಣ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅನ್ಯಾಯಕ್ಕೂ ಒಂದು ಮಿತಿ ಇರಬೇಕು. ತನಿಖಾಧಿಕಾರಿಗಳು ನಾಲ್ಕು ದಿನಗಳಿಂದ ಏನು ಮಾಡುತ್ತಿದ್ದಾರೆ. ಎಸ್‌ಐಟಿಯವರು ಸ್ಥಳ ಮಹಜರು ಮಾಡಬೇಕು ಎಂದು ಹೇಳುತ್ತಾರೆ. ಆರೋಪಿ ಸತೀಶ್ ಬಾಬಣ್ಣ ಸಂತ್ರಸ್ತೆಯನ್ನು ಕರೆದೊಯ್ದ ಸ್ಥಳ, ಸಂತ್ರಸ್ತೆಯನ್ನ ಕೂಡಿಹಾಕಿದ ಸ್ಥಳ ಮಹಜರು ಮಾಡಬೇಕಂತಾರೆ. ಹಾಗಾದರೆ ಸ್ಥಳೀಯ ಪೊಲೀಸರು ಏನು ಮಾಡುತ್ತಾರೆ? ಸ್ಥಳೀಯ ಪೊಲೀಸರಿಂದ ಒಂದು ಸಲ ಸ್ಥಳ ಮಹಜರು, ಎಸ್‌ಐಟಿ ಒಂದು ಸಲ ಸ್ಥಳ ಮಹಜರು ಮಾಡಬೇಕಾ? ಎಸ್ಐಟಿ ಯಾವ ಕಾರಣಕ್ಕೆ ಪೊಲೀಸ್ ಕಸ್ಟಡಿಗೆ ಕೇಳಿತ್ತು ಎಂದು ರಿಮ್ಯಾಂಡ್ ಅರ್ಜಿಯನ್ನು ವಕೀಲ ಸಿ.ವಿ.ನಾಗೇಶ್ ಓದಿ ಹೇಳಿದರು. ಪೊಲೀಸರು ನೀಡಿದ್ದ ಕಾರಣಗಳನ್ನು ಇದೇ ವೇಳೆ ಪ್ರಶ್ನಿಸಿದರು.

ಸಂತ್ರಸ್ತೆಯಿಂದ‌ 164 ಹೇಳಿಕೆ‌ ದಾಖಲಿಸಬೇಕಿದೆ ಎಂದು ಎಸ್ಐಟಿ ಹೇಳಿದೆ. ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ ಇಷ್ಟು ದಿನ ಏನು ಮಾಡುತ್ತಲಿದೆ? ಎಂದು ನಾಗೇಶ್‌ ಪ್ರಶ್ನೆ ಮಾಡಿದರು.

ಇಡೀ ಪ್ರಕರಣದ ಟೈಂ ಲೈನ್‌ ಹೇಳಿದ ಜಯ್ನಾ ಕೊಠಾರಿ

ಆಗ ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿ, ಎಚ್‌.ಡಿ. ರೇವಣ್ಣಗೆ ಜಾಮೀನು ನೀಡಲು ಎಸ್‌ಪಿಪಿಯಿಂದ ಆಕ್ಷೇಪವಿದೆ. ಸಂತ್ರಸ್ತೆ ಪುತ್ರನಿಗೆ ಮೊದಲು ಸಂತ್ರಸ್ತೆ ವಿಡಿಯೊ ಬಗ್ಗೆ ತಿಳಿಯುತ್ತದೆ. ಸಾಕಷ್ಟು ಮಹಿಳೆಯರೊಂದಿಗಿರುವ ಅಶ್ಲೀಲ ವಿಡಿಯೊಗಳೂ ಕಾಣುತ್ತದೆ. ಅದಾದ ಬಳಿಕ ‌ಮಹಿಳಾ ‌ಆಯೋಗಕ್ಕೆ ದೂರು ನೀಡುತ್ತಾರೆ. ಹೊಳೆನರಸೀಪುರ ಠಾಣೆಯಲ್ಲಿ ಒಂದು ‌ಪ್ರಕರಣ ದಾಖಲಾಗುತ್ತದೆ. ಬಳಿಕ ಸರ್ಕಾರದಿಂದ ಎಸ್‌ಐಟಿ ರಚನೆಯಾಗಿದೆ ಎಂದು ಇಡೀ ಪ್ರಕರಣದ ಟೈಂ ಲೈನ್‌ ಅನ್ನು ಹೇಳಿದರು.

ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ

ಸಂತ್ರಸ್ತೆ ಆರೋಪಿ ಮನೆಯಲ್ಲಿ 6 ವರ್ಷದಿಂದ ಕೆಲಸ ಮಾಡುತ್ತಿದ್ದರು. ಏಪ್ರಿಲ್ 28ರ ರಾತ್ರಿ ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಅದಾದ ಬಳಿಕ ಆಕೆ ಪತ್ತೆಯಾಗಿರಲಿಲ್ಲ. ಸಂತ್ರಸ್ತೆ ಪುತ್ರ ಹಲವರಿಗೆ ಕರೆ ಮಾಡಿ ತಾಯಿ ಬಗ್ಗೆ ಮಾಹಿತಿ ಕೇಳಿದ್ದಾರೆ. ಬಳಿಕ‌ ತನ್ನ ತಾಯಿ‌ ‌ತೊಂದರೆಯಲ್ಲಿದ್ದಾಳೆಂದು ದೂರು ನೀಡಿದ್ದಾರೆ. ಅಶ್ಲೀಲ‌ ವಿಡಿಯೋಗಳಲ್ಲಿ ಸಂತ್ರಸ್ತೆ ಗುರುತು ಸಿಗುವಂತೆ ರೆಕಾರ್ಡ್ ಆಗಿದೆ. ಬಳಿಕ ತನಿಖೆ ಕೈಗೊಂಡ ಬಳಿಕ ಎಸ್‌ಐಟಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದೆ. ಸಂತ್ರಸ್ತೆಯನ್ನು ಅಪಹರಿಸಿ 40 ಕಿ.ಮೀ. ದೂರದಲ್ಲಿ ಕೂಡಿ ಹಾಕಲಾಗಿತ್ತು. ಸಂತ್ರಸ್ತೆಯನ್ನು ಕೂಡಿಹಾಕಿದ್ದ ಸ್ಥಳ ಆರೋಪಿ ಸಂಬಂಧಿಗೆ ಸೇರಿದ್ದಾಗಿದೆ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು

ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಗಳ ಹೇಳಿಕೆಯಲ್ಲೂ ರೇವಣ್ಣ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಕಿಡ್ನ್ಯಾಪ್, ಒತ್ತೆಯಾಳಾಗಿಟ್ಟುಕೊಂಡ ಪ್ರಕರಣವಾಗಿದೆ. ಸಂತ್ರಸ್ತೆಯ ಪುತ್ರ ನೀಡಿರುವ ದೂರಿನಲ್ಲಿ ಹೇಳಿರೋದು ಸತ್ಯ. ಎಚ್.ಡಿ.ರೇವಣ್ಣ ವಿರುದ್ಧ ಸೆಕ್ಷನ್ 364(a) ಅನ್ವಯವಾಗುತ್ತದೆ. 364(a) ಅಡಿಯಲ್ಲಿ ದಾಖಲಾಗಿರೋ ಕೆಲ‌ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಹೀಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ತೀವ್ರತೆಯೂ ಜಾಸ್ತಿ ಇದೆ. ಆರೋಪಿಯ ತಪ್ಪು ಕಂಡುಬಂದಾಗ ಬಹುತೇಕ ಈ ಸೆಕ್ಷನ್‌ಗಳನ್ನೇ ಹಾಕಲಾಗುತ್ತದೆ ಎಂದು ಜಯಾ ಕೊಠಾರಿ ಹೇಳಿದರು.

ರೇವಣ್ಣ ನಾಪತ್ತೆಯಾದರೆ? ಸಂತ್ರಸ್ತೆಯರ ಕಿಡ್ನ್ಯಾಪ್‌ ಮಾಡಿಸಿದರೆ?

ಆರೋಪಿಯ ಪುತ್ರ ಪ್ರಜ್ವಲ್‌ ರೇವಣ್ಣ ನಾಪತ್ತೆಯಾಗಿದ್ದಾರೆ. ಆರೋಪಿ ಪುತ್ರನ ಪತ್ತೆಗೆ ಬ್ಲೂಕಾರ್ನರ್ ನೋಟಿಸ್ ನೀಡಲಾಗಿದೆ. ಆದರೂ ಇಲ್ಲಿಯವರೆಗೆ ಆರೋಪಿ ಪುತ್ರ ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ. ಈವರೆಗೆ ವಾಪಸ್ ಕೂಡ ಬಂದಿಲ್ಲ. ಈ ಆರೋಪಿಯೂ ನಾಪತ್ತೆಯಾದರೆ ಏನು ಮಾಡುವುದು? ಅದಲ್ಲದೆ, ಆರೋಪಿ‌ ರೇವಣ್ಣ ತುಂಬಾನೇ ಪ್ರಭಾವಿಯಾಗಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದ್ರೆ ಸಾಕ್ಷ್ಯ ಹಾಳು‌ ಮಾಡುತ್ತಾರೆ. ಜಾಮೀನು‌ ನೀಡಿದರೆ ಸಂತ್ರಸ್ತೆ ಜೀವಕ್ಕೆ ಯಾರು ಗ್ಯಾರಂಟಿ ನೀಡ್ತಾರೆ? ಜಾಮೀನು ಪಡೆದು ಬೇರೆ ಮಹಿಳೆಯರನ್ನು ಕಿಡ್ನ್ಯಾಪ್‌ ಮಾಡಬಹುದು ಎಂದು ಜಯಾ ಕೊಠಾರಿ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ತನ್ನ ತಾಯಿಯನ್ನು ಕಾಪಾಡುವಂತೆ ಸಂತ್ರಸ್ತೆ ಮಗ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು. ಎಚ್.ಡಿ.ರೇವಣ್ಣ ವಿರುದ್ದ ಎರುಡು ಎಫ್ಐಆರ್ ದಾಖಲಾಗಿವೆ. ರೇವಣ್ಣ ವಿರುದ್ಧ ಲೈಂಗಿಕ‌ ದೌರ್ಜನ್ಯವೆಸಗಿರುವ ಆರೋಪವೂ ಇದೆ. ಲೈಂಗಿಕ‌ ದೌರ್ಜನ್ಯವೆಸಗುವ ಆರೋಪಿಗಳಿಗೆ ಸಂದೇಶ ರವಾನೆಯಾಗಬೇಕು. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು. ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಜಯಾ ಕೊಠಾರಿ ಮನವಿ ಮಾಡಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ವರದಿ ಸಲ್ಲಿಸಲು ಸೂಚಿಸಿದ್ದಲ್ಲದೆ, ಮತ್ತೆ ಸಮಯ ವ್ಯರ್ಥ ಮಾಡದಂತೆ ಸೂಚಿಸಿ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.

Continue Reading

ವಿದೇಶ

ಮನೆಗೆ ನುಗ್ಗಿ ತಮ್ಮದೇ ದೇಶದ ಕಪ್ಪುವರ್ಣೀಯ ಸೇನಾಧಿಕಾರಿಯನ್ನು ಕೊಂದ ಅಮೆರಿಕ ಪೊಲೀಸರು; Video ಇದೆ

ಮೇ 3ರಂದು ಪೊಲೀಸರಿಗೆ ಮಹಿಳೆಯೊಬ್ಬರು ಕರೆ ಮಾಡಿದ್ದಾರೆ. ಪಕ್ಕದ ಫ್ಲ್ಯಾಟ್‌ನಲ್ಲಿ ಗಂಡ-ಹೆಂಡತಿ ಜಗಳವಾಡುತ್ತಿದ್ದಾರೆ. ಇಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಅಕ್ಕ-ಪಕ್ಕದ ಫ್ಲ್ಯಾಟ್‌ನವರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಆದರೆ, ಪೊಲೀಸ್‌ ಅಧಿಕಾರಿಯು ಮಹಿಳೆ ಹೇಳಿದ ಅಪಾರ್ಟ್‌ಮೆಂಟ್‌ ಬದಲು, ಬೇರೊಂದು ಅಪಾರ್ಟ್‌ಮೆಂಟ್‌ಗೆ ತೆರಳಿದ್ದೇ ವಾಯುಪಡೆ ಅಧಿಕಾರಿಯ ದುರಂತ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

US Officer
Koo

ವಾಷಿಂಗ್ಟನ್:‌ ಯಾವುದೇ ದೇಶದ ಸೇನಾಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ಕೈಗೊಳ್ಳುವಾಗ, ಎನ್‌ಕೌಂಟರ್‌ ನಡೆಸುವಾಗ ತುಂಬ ಎಚ್ಚರಿಕೆಯಿಂದ ಇರುತ್ತಾರೆ. ಉಗ್ರರು, ದುಷ್ಕರ್ಮಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ಸಾರ್ವಜನಿಕರಿಗೆ, ಅಮಾಯಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಆದರೆ, ಅಮೆರಿಕದಲ್ಲಿ (America) ಪೊಲೀಸ್‌ ಅಧಿಕಾರಿಯು (US Cop) ದುಷ್ಕರ್ಮಿಗಳ ಅಪಾರ್ಟ್‌ಮೆಂಟ್‌ಗೆ ತೆರಳುವ ಬದಲು, ಅಮೆರಿಕ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರ (US Officer) ಫ್ಲ್ಯಾಟ್‌ಗೆ ನುಗ್ಗಿ, ಅವರನ್ನು ಹತ್ಯೆಗೈದಿದ್ದಾರೆ. ವಾಯುಪಡೆ ಅಧಿಕಾರಿಯು ಕಪ್ಪು ವರ್ಣದವರಾದ ಕಾರಣ, ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.

ಮೇ 3ರಂದು ಫ್ಲೊರಿಡಾದ ಫೋರ್ಟ್‌ ವ್ಯಾಲ್ಟನ್‌ ಬೀಚ್‌ನಲ್ಲಿರುವ ಶೆಜ್‌ ಎಲನ್‌ ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸ್‌ ಅಧಿಕಾರಿಯು ತಪ್ಪಾಗಿ ಭಾವಿಸಿ ಅಮೆರಿಕ ವಾಯುಪಡೆಯ ಅಧಿಕಾರಿ, ಕಪ್ಪು ವರ್ಣದವರಾದ ರೋಜರ್‌ ಫೋರ್ಟ್‌ಸನ್‌ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಯು ಬೇರೊಂದು ಅಪಾರ್ಟ್‌ಮೆಂಟ್‌ಗೆ ತೆರಳಿ, ಹಿಂದೆ-ಮುಂದೆ ನೋಡದೆ ಶೂಟ್‌ ಮಾಡಿದ ಕಾರಣ ಕಪ್ಪು ವರ್ಣೀಯ ಅಧಿಕಾರಿಯಾಗಿದ್ದಾರೆ. ಇದಕ್ಕೆ ಅಮೆರಿಕದಲ್ಲಿರುವ ಕಪ್ಪು ವರ್ಣದ ಸಮುದಾಯದವರು (ಆಫ್ರಿಕಾ ಮೂಲದ ಅಮೆರಿಕದವರು) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಅಧಿಕಾರಿ ದಾಳಿ ಮಾಡಿದ್ದೇಕೆ?

ಮೇ 3ರಂದು ಪೊಲೀಸರಿಗೆ ಮಹಿಳೆಯೊಬ್ಬರು ಕರೆ ಮಾಡಿದ್ದಾರೆ. ಪಕ್ಕದ ಫ್ಲ್ಯಾಟ್‌ನಲ್ಲಿ ಗಂಡ-ಹೆಂಡತಿ ಜಗಳವಾಡುತ್ತಿದ್ದಾರೆ. ಇಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಅಕ್ಕ-ಪಕ್ಕದ ಫ್ಲ್ಯಾಟ್‌ನವರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಇದಾದ ಬಳಿಕ, ಪೊಲೀಸ್‌ ಅಧಿಕಾರಿಯೂ ಕೂಡಲೇ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಆದರೆ, ಮಹಿಳೆ ಕರೆ ಮಾಡಿ ತಿಳಿಸಿದ್ದೇ ಬೇರೆ, ಪೊಲೀಸ್‌ ಅಧಿಕಾರಿ ತೆರಳಿದ ಅಪಾರ್ಟ್‌ಮೆಂಟೇ ಬೇರೆಯಾದ ಕಾರಣ ಅಚಾತುರ್ಯ ಸಂಭವಿಸಿದೆ. ಪೊಲೀಸ್‌ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಇಡೀ ಘಟನೆಯ ದೃಶ್ಯಗಳು ಸೆರೆಯಾಗಿದ್ದು, ವಾಯುಪಡೆ ಅಧಿಕಾರಿಯ ದುರಂತ ಸಾವಿನ ವಿಡಿಯೊ ವೈರಲ್‌ ಆಗಿದೆ.

ವಾಯುಪಡೆ ಅಧಿಕಾರಿ ಇದ್ದ ಫ್ಲ್ಯಾಟ್‌ಗೆ ನುಗ್ಗಿದ ಪೊಲೀಸ್‌ ಅಧಿಕಾರಿಯು ಪದೇಪದೆ ಬಾಗಿಲು ಬಡಿದಿದ್ದಾರೆ. ರೋಜರ್‌ ಫೋರ್ಟ್‌ಸನ್‌ ಅವರು ಬಾಗಿಲು ತೆಗೆಯುವುದು ತುಸು ವಿಳಂಬವಾಗಿದೆ. ಇದೇ ಕೋಪದಲ್ಲಿದ್ದ ಪೊಲೀಸ್‌ ಅಧಿಕಾರಿಯು, ಫೋರ್ಟ್‌ಸನ್‌ ಬಾಗಿಲು ತೆಗೆಯುತ್ತಲೇ ಹಿಂದೆ-ಮುಂದೆ ನೋಡದೆ ಗುಂಡಿನ ದಾಳಿ ನಡೆಸಿದ್ದಾರೆ. ಸತತ ಆರು ಗುಂಡು ಹಾರಿಸಿದ ಕಾರಣ ರೋಜರ್‌ ಫೋರ್ಟ್‌ಸನ್‌ ಅಲ್ಲಿಯೇ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ರೋಜರ್‌ ಫೋರ್ಟ್‌ಸನ್‌ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಪ್ಪು ವರ್ಣೀಯರ ಮೇಲೆ ಪೊಲೀಸರ ದೌರ್ಜನ್ಯದ ಕುರಿತು ತನಿಖೆಯಾಗಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

Continue Reading
Advertisement
Veg v/s Non Veg Thali
ಆರೋಗ್ಯ3 mins ago

Veg v/s Non Veg Thali: ಭಾರತದಲ್ಲಿ ನಾನ್‌ವೆಜ್‌ ಊಟಕ್ಕಿಂತ ವೆಜ್ ಊಟ ದುಬಾರಿ! ಏಕೆ ಗೊತ್ತಾ?

Maruti Suzuki
ಆಟೋಮೊಬೈಲ್5 mins ago

Maruti Suzuki: ಶೀಘ್ರ ರಸ್ತೆಗಿಳಿಯಲಿದೆ ಬರೋಬ್ಬರಿ 26 ಕಿ.ಮೀ ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್​; ಶುರುವಾಗಿದೆ ಬುಕಿಂಗ್​

Prajwal Revanna Case
ಕರ್ನಾಟಕ14 mins ago

Prajwal Revanna Case: ರೇವಣ್ಣ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಸ್ಥಳ ಮಹಜರು

Arvind Kejriwal
ದೇಶ15 mins ago

Arvind Kejriwal: 50 ದಿನಗಳ ವನವಾಸ ಅಂತ್ಯ; ತಿಹಾರ ಜೈಲಿನಿಂದ ಅರವಿಂದ್ ಕೇಜ್ರಿವಾಲ್‌ ಬಿಡುಗಡೆ

Xiaomi Smart Phone
ಗ್ಯಾಜೆಟ್ಸ್32 mins ago

Xiaomi Smart Phone: ವರ್ಷಾಂತ್ಯಕ್ಕೆ ಬರಲಿದೆ ಶಿಯೊಮಿಯ ಫೋಲ್ಡಿಂಗ್​ ಫೋನ್​ಗಳು; ಇಲ್ಲಿದೆ ಸಂಪೂರ್ಣ ವಿವರ

Rahul Dravid
Latest42 mins ago

Rahul Dravid : ವಿಶ್ವ ಕಪ್​ ಬಳಿಕ ದ್ರಾವಿಡ್​ ಭಾರತದ ಕೋಚ್ ಅಗಿರುವುದಿಲ್ಲ; ಮುಂದೆ ಯಾರು?

karnataka Weather Forecast
ಮಳೆ43 mins ago

Karnataka Weather : ಬಿರುಗಾಳಿ ಸಹಿತ ಭಾರಿ ಮಳೆ; ಸಿಡಿಲು ಬಡಿದು ಮಹಿಳೆ ಸೇರಿ ಶ್ವಾನ ಸಾವು‌, ಮತ್ತೊಬ್ಬ ಗಂಭೀರ

Mango Facepack
ಫ್ಯಾಷನ್45 mins ago

Mango Facepack: ಆಕರ್ಷಕ ತ್ವಚೆಗಾಗಿ ಸೀಸನ್‌ ಮ್ಯಾಂಗೋ ಫೇಸ್‌ಪ್ಯಾಕ್‌

Manisha Koirala
ಸಿನಿಮಾ46 mins ago

Manisha Koirala: ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದು ಹೇಗೆ? ಅನುಭವ ಹಂಚಿಕೊಂಡ ಮನೀಶಾ ಕೊಯಿರಾಲ

New Tata Ace EV 1000 launched by Tata Motors
ವಾಣಿಜ್ಯ53 mins ago

Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ5 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ6 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ8 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ14 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ21 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ23 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ23 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌