Eye care | ನಮ್ಮ ನಿತ್ಯದ ಅಭ್ಯಾಸಗಳೇ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆಯೇ?! - Vistara News

ಆರೋಗ್ಯ

Eye care | ನಮ್ಮ ನಿತ್ಯದ ಅಭ್ಯಾಸಗಳೇ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆಯೇ?!

ಬಹಳಷ್ಟು ಸಂದರ್ಭಗಳಲ್ಲಿ ಕಣ್ಣಿನ ತೊಂದರೆಗಳು ಅವಗಣನೆಯಾಗುವುದೇ ಹೆಚ್ಚು. ದೃಷ್ಠಿದೋಷ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಲು ಕಾರಣವೇನು ಹಾಗೂ ನಮ್ಮ ನಿತ್ಯದ ಯಾವ ಅಭ್ಯಾಸಗಳು ದೃಷ್ಠಿಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದನ್ನು ನೋಡೋಣ.

VISTARANEWS.COM


on

Eye care
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಯಸ್ಸಾಗುತ್ತಾ ಹೋದಂತೆ ದೃಷ್ಠಿದೋಷ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ದೃಷ್ಠಿದೋಷ ಸಾಮಾನ್ಯ ತೊಂದರೆಯಾಗಿ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ನಮ್ಮ ನಿತ್ಯದ ಅಭ್ಯಾಸಗಳೂ ಇದಕ್ಕೆ ಕಾರಣ. ವಿಶ್ವದ ಕಾಲು ಭಾಗದಷ್ಟು ಅಂಧರು ಭಾರತದಲ್ಲೇ ಇದ್ದಾರಂತೆ! ರಾಷ್ಟ್ರೀಯ ಅಂಧತ್ವ ನಿಗ್ರಹ ಯೋಜನೆ (ಎನ್‌ಪಿಸಿಬಿ)ಯ ಪ್ರಕಾರ, ದೇಶದಲ್ಲಿ ೧೨ ಮಿಲಿಯನ್‌ ಜನರು ದೃಷ್ಟಿದೋಷ ಹೊಂದಿದವರಿದ್ದಾರಂತೆ. ವಿಶ್ವದ ಒಟ್ಟು ಸಂಖ್ಯೆ ೩೯ ಮಿಲಿಯನ್‌ಗೆ ಹೋಲಿಸಿದರೆ ಇದು ದೊಡ್ಡ ಸಂಖ್ಯೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಕಣ್ಣಿನ ತೊಂದರೆಗಳು ಅವಗಣನೆಯಾಗುವುದೇ ಹೆಚ್ಚು. ದೃಷ್ಠಿದೋಷ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಲು ಕಾರಣವೇನು ಹಾಗೂ ನಮ್ಮ ನಿತ್ಯದ ಯಾವ ಅಭ್ಯಾಸಗಳು ದೃಷ್ಠಿಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದನ್ನು ನೋಡೋಣ.

೧. ಹೆಚ್ಚುತ್ತಿರುವ ಸ್ಕ್ರೀನ್‌ಟೈಂ: ಇತ್ತೀಚೆಗಿನ ದಶಕದಲ್ಲಿ ನಿತ್ಯದ ಸ್ಕ್ರೀನ್‌ಟೈಂ ಹೆಚ್ಚಾಗಿದೆ. ಟಿವಿ, ಮೊಬೈಲ್‌ ಫೋನ್‌, ಟಾಬ್ಲೆಟ್‌ಗಳು ಹೀಗೆ ನಮ್ಮ ನಿತ್ಯದ ಗ್ಯಾಜೆಟ್‌ ಬಳಕೆಯ ಹಸಿವು ದಿನೇ ದಿನೇ ಹೆಚ್ಚುತ್ತಿದೆ. ಕೆಲಸದ ನಿಮಿತ್ತ ಕಂಪ್ಯೂಟರ್‌ ಲ್ಯಾಪ್‌ಟಾಪ್‌ ಬಳಕೆ ಹೆಚ್ಚಾಇರುವುದುದ ನಿಜವೇ ಆದರೂ, ಇದರ ಹೊರತಾಗಿಯೂ ದಿನಕ್ಕೆ ಹಲವಾರು ಗಂಟೆಗಳ ಕಾಲ ನಾವು ಮೊಬೈಲ್‌ ಫೋನಿನಲ್ಲಿ ಕಳೆಯುತ್ತೇವೆ. ಇದರಿಂದ ಕಣ್ಣಿಗೆ ತೊಂದರೆಯಾಗುತ್ತದೆ. ಪುಟ್ಟ ಮಕ್ಕಳಲ್ಲೇ ದೃಷ್ಠಿದೋಷಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದರಿಂದ ಮಿದುಳು ಹೆಚ್ಚು ಹೊತ್ತು ಆಕ್ಟಿವ್‌ ಆಗಿ ಇರುತ್ತದಲ್ಲದೆ, ನಮಗೆ ಬೇಕಾದ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ.

೨. ಧೂಮಪಾನ: ಧೂಮಪಾನದಿಂದ ಕಣ್ಣಿಗೆ ತೊಂದರೆಯಿದೆ ಎಂದರೆ ನಂಬುತ್ತೀರಾ? ಹೌದು. ನಿಮ್ಮ ಶ್ವಾಸಕೋಶ, ಹೃದಯಕ್ಕಿರುವಷ್ಟೇ ತೊಂದರೆ ಧೂಮಪಾನದಿಂದ ನಿಮ್ಮ ಕಣ್ಣಿಗೂ ಇದೆ ಎಂದರೆ ನಂಬಲೇಬೇಕು. ವಯಸ್ಸಾಗುತ್ತಾ ಆಗುತ್ತಾ ಆಗುವ ಮಾಂಸಖಂಡಗಳ ಬಲಹೀನತೆ ಹಾಗೂ ನಷ್ಟ, ಕಣ್ಣಿನ ಪೊರೆ, ಕಣ್ಣು ಮಂದವಾಗುವುದು ಎಲ್ಲವೂ ಮುಂಚಿತವಾಗಿಯೇ ಆಗಬಹುದು. ಇದಲ್ಲದೆ ಧೂಮಪಾನದಿಂದ ಸಂಭವಿಸಬಹುದಾದ ಕ್ಯಾನ್ಸರ್‌ಗೂ ದೃಷ್ಠಿದೋಷಕ್ಕೂ ನೇರಾನೇರ ಸಂಬಂಧವಿದೆ.

೩. ಇತರ ಅನಾರೋಗ್ಯದ ಬಗೆಗೆ ನಿರ್ಲಕ್ಷ್ಯ: ಮಧುಮೇಹ, ಹೈಪರ್‌ಟೆನ್ಶನ್‌, ಬೊಜ್ಜು, ಥೈರಾಯ್ಡ್‌ ಮತ್ತಿತರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಕಣ್ಣಿನ ತೊಂದರೆಗಳೂ ಉಲ್ಬಣಿಸುವ ಸಂಭವವಿದೆ. ಅಧಿಕ ರಕ್ತದೊತ್ತಡದಿಂದ ಹೈಪರ್‌ಟೆನ್ಸಿವ್‌ ರೆಟಿನೋಪತಿ ಬರಬಹುದು. ಇದರಿಂದ ಹೃದಯದ ತೊಂದರೆಗಳೂ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ರಿಸ್ಕ್‌ ಇದೆ.

ಇದನ್ನೂ ಓದಿ | Face Care | ನೆನಪಿಡಿ: ಈ ಐದು ಸೌಂದರ್ಯ ಚಿಕಿತ್ಸೆಗಳು ಅತಿಯಾದರೆ ಒಳ್ಳೆಯದಲ್ಲ!

೪. ನಿದ್ರಾಹೀನತೆ ಹಾಗೂ ವ್ಯಾಯಾಮದ ಕೊರತೆ: ಪ್ರತಿನಿತ್ಯ ಬೇಕಾದಷ್ಟು ನಿದ್ದೆ ಮಾಡದಿರುವುದು ಕೂಡಾ ಕಣ್ಣಿನ ತೊಂದರೆಗೆ ನಾಂದಿ ಹಾಡುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣುರಿ, ಕಣ್ಣು ಒಣಗಿದಂತಾಗುವುದು, ಕೆಂಗಣ್ಣು, ಕಣ್ಣಿನ ಸುತ್ತ ಕಪ್ಪು ವರ್ತುಲ, ಅತಿ ಬೆಳಕಿಗೆ ಕಣ್ಣು ಬಿಡಲು ಕಷ್ಟವಾಗುವುದು ಇತ್ಯಾದಿ ಸಮಸ್ಯೆಗಳೂ ಕಾರಣವಾಗಬಹುದು. ನಿದ್ದೆ ಸರಿಯಾಗಿ ಮಾಡದಿರುವುದು ಹಾರ್ಮೋನು ವೈಪರೀತ್ಯ ಹಾಗೂ ದೈಹಿಕ ಬದಲಾವಣೆಗಳಿಗೆ ನೇರಾನೇರಾ ಸಂಬಂಧವಿದೆ. ಮನೆಯ ಒಳಗೇ ಹೆಚ್ಚು ಸಮಯ ಕಳೆಯುವುದರಿಂದ ಈಗಿನ ಮಕ್ಕಳಲ್ಲಿ ಸಮೀಪ ದೃಷ್ಠಿ ದೋಷ ಬರುವ ಸಂಭವವೂ ಹೆಚ್ಚಾಗುತ್ತಿದೆ.

೫. ಸರಿಯಾಗಿ ನೀರು ಕುಡಿಯದಿರುವುದು: ನೀರು ನಮ್ಮ ದೇಹದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ದೇಹದ ಪ್ರತಿಯೊಂದು ಅಂಗವೂ ಸರಿಯಾಗಿ ಕಾರ್ಯ ನಿರ್ವಹಿಸಲು ನೀರು ಬೇಕು. ಕಣ್ಣಿಗಳಿಗೂ ಸೇರಿದಂತೆ. ಧೂಳು, ವಾತಾವರಣದ ಕೊಳೆ ಎಲ್ಲವೂ ಕಣ್ಣಿಗೆ ನೇರವಾಗಿ ಸಂಪರ್ಕವಾಗುವುದರಿಂದ ಕಣ್ಣಿನಲ್ಲಿ ನೀರಿನಂಶ ಇರುವುದು ಬಹಳ ಮುಖ್ಯವಾಗುತ್ತದೆ. ನೀರಿನ ಕೊರತೆಯೇ ಕಣ್ಣುರಿ, ಕಣ್ಣು ಒಣಗಿದಂತಾಗುವುದು, ಕಣ್ಣು ಬಾತುಕೊಳ್ಳುವುದು ಇತ್ಯಾದಿ ಸಮಸ್ಯೆಗಳನ್ನು ತರುತ್ತವೆ. ಹಾಗಾಗಿ ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ. ನಿತ್ಯದ ಜೀವನದಲ್ಲಿ ಆರೋಗ್ಯಯುತ ಜೀವನಶೈಲಿ ಹಾಗೂ ಆಹಾರಾಭ್ಯಾಸಗಳಿಂದ ಕಣ್ಣಿನ ತೊಂದರೆಯೂ ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಹುಡುಕಿಕೊಂಡು ಬರುವುದನ್ನು ತಪ್ಪಿಸಬಹುದು.

ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

World Environment Day:ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿದ ‘ಕೇಳಚಂದ್ರ ಕಾಫಿ’

World Environment Day ನಾವು ವಾಸಿಸುವ ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆದರೆ ಈಗ ಎಲ್ಲೆಡೆ ಕಲುಷಿತ ವಾತಾವರಣದಿಂದ ಹೆಸರೇ ಕೇಳರಿಯದ ರೋಗಗಳು, ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ.ಪರಿಸರ ಸಂರಕ್ಷಣೆಯ ಕುರಿತು ಸಾಕಷ್ಟು ಜನರು ಎಚ್ಚೆತ್ತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಳಚಂದ್ರ ಕಾಫಿ ಸಂಸ್ಥೆಯೂ ಕೈ ಜೋಡಿಸಿದೆ. ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಂಡು ಪರಿಸರ ಎಷ್ಟು ಮುಖ್ಯ ಎಂಬ ಅರಿವು ಮೂಡಿಸುತ್ತಿದೆ.

VISTARANEWS.COM


on

World Environment Day
Koo

ಚಿಕ್ಕಮಗಳೂರು: ಜೂನ್ ತಿಂಗಳು ಬಂತೆಂದರೆ ಪರಿಸರ ಸಂರಕ್ಷಣೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ನಾವಿರುವ ಪರಿಸರ ಮೊದಲಿನ ಹಾಗೇ ಇಲ್ಲ ಎನ್ನುವ ನೋವು, ಕಾಳಜಿ ಎಲ್ಲರ ಮನದಲ್ಲಿಯೂ ಇದೆ. ಪರಿಸರ ಚೆನ್ನಾಗಿ ಇದ್ದರೆ ನಮ್ಮ ಆರೋಗ್ಯ, ಮನಸ್ಸು ಎರಡೂ ಚೆನ್ನಾಗಿರುತ್ತದೆ. ಈ ಕುರಿತು ಸಾಕಷ್ಟು ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಚಟುವಟಿಕೆಯಲ್ಲಿ ಕೈ ಜೋಡಿಸಿವೆ. ಕಾಫಿ (coffee) ಉತ್ಪನ್ನಗಳ ಉತ್ಕೃಷ್ಟ ಸಂಸ್ಥೆಯಾಗಿರುವ ಕೇಳಚಂದ್ರ ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ! ವಿಶ್ವ ಪರಿಸರ ದಿನಾಚರಣೆಯ (World Environment Day) ಆಚರಣೆಯ ಹಿನ್ನೆಲೆಯಲ್ಲಿ ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸರದ ಅತ್ಯುನ್ನತ ನಿರ್ವಹಣೆ ಮತ್ತು ಸ್ಥಿರವಾದ ಅಭ್ಯಾಸಗಳ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾರುತ್ತಿದೆ. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸುವ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ  ಪ್ರಾಮುಖ್ಯತೆಯ ಬಗ್ಗೆ ಎಸ್ಟೇಟ್​ ಸಿಬ್ಬಂದಿ, ಕಾರ್ಮಿಕರು ಮತ್ತು ಯುವ ಪೀಳಿಗೆಗೆ ಶಿಕ್ಷಣ ನೀಡುವ ಉದ್ದೇಶವನ್ನು ಈ ಉಪಕ್ರಮಗಳು ಹೊಂದಿವೆ.

ಕೇಳಚಂದ್ರ ಕಾಫಿ ಜನಪ್ರಿಯ ಪ್ರವಾಸಿ ತಾಣ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಯೆಲ್ಲೂರ್​ ಖಾನ್​ ಎಸ್ಟೇಟ್ ​ನಲ್ಲಿ ಎಲ್ಲ ಸಿಬ್ಬಂದಿ ಮತ್ತು ಕಾರ್ಮಿಕರಿಗಾಗಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.  ಪರಿಸರ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವಿಕೆ ಮತ್ತು ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಕಾರ್ಮಿಕರೆಲ್ಲರೂ ಅಗತ್ಯ ಮಾಹಿತಿಯನ್ನು ಪಡೆದರು.ಶೈಕ್ಷಣಿಕ ಗೋಷ್ಠಿಯ ನಂತರ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ 3 ಕಿ.ಮೀ ಉದ್ದದ ರಸ್ತೆಯುದ್ದಕ್ಕೂ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಅಭಿಯಾನದಲ್ಲಿ ಪಾಲ್ಗೊಂಡ ತಂಡವು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ, ಸರಿಯಾದ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರವಾಸಿಗರನ್ನು ಪ್ರೇರೇಪಿಸಿತು.

ಇನ್ನು ಕಮ್ಮರಗೋಡು ಕ್ಲಸ್ಟರ್​ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ಅರಿಯುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯದಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಯೂ ನಿರ್ಣಾಯಕ ಪಾತ್ರ ವಹಿಸಿತು. ನಮ್ಮ ಭೂಮಿಯ ಆರೋಗ್ಯ ಮತ್ತು ಸ್ಥಿರತೆ ಸುಧಾರಿಸುವಲ್ಲಿ ಮರಗಳು ವಹಿಸುವ ಉತ್ತಮ ಪಾತ್ರದ ಬಗ್ಗೆ ಮಕ್ಕಳಿಗೆ ಕಲಿಸಲಾಯಿತು.  

ಇದನ್ನೂ ಓದಿ:Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

ಪರಿಸರ ದಿನಾಚರಣೆ ಅಂಗವಾಗಿ ಆಯೋಜಸಿರುವ ಈ ಕಾರ್ಯಕ್ರಮಗಳು ಪರಿಸರ ಸ್ನೇಹಿ ಅಭ್ಯಾಸಗಳು, ಉತ್ತಮ ಭವಿಷ್ಯ ಮತ್ತು ಹೈಟೆಕ್ ಹಾಗೂ ಸ್ಮಾರ್ಟ್​​ ಕೃಷಿಗೆ ಕೇಳಚಂದ್ರ ಕಾಫಿಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಕಂಪನಿಯ ಈ ರೀತಿಯ ಕಾರ್ಯಕ್ರಮಗಳು 2030 ರ ವೇಳೆಗೆ ಜೀವವೈವಿಧ್ಯತೆಯ ನಷ್ಟವನ್ನು ಸರಿತೂಗಿಸುವ ವಿಶ್ವಸಂಸ್ಥೆಯ ಕರೆಗೆ ಅನುಗುಣವಾಗಿವೆ.  ಭೂಮಿಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಪುನರ್​​ ಸ್ಥಾಪನೆ ಮಾಡುವಲ್ಲಿ ಕೇಳಚಂದ್ರ ಕಾಫಿ ಸಂಪೂರ್ಣ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

Continue Reading

ಆರೋಗ್ಯ

World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇದ್ದರೂ, ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಂದು ವಿಶ್ವ ಆಹಾರ ಸುರಕ್ಷತಾ ದಿನ (World Food Safety Day).

VISTARANEWS.COM


on

World Food Safety Day
Koo

ಆಹಾರ ಸೇವನೆ ಬದುಕುಳಿಯುವುದಕ್ಕೆ ಮಾತ್ರವೇ ಅಗತ್ಯವಲ್ಲ; ನಮ್ಮ ಸ್ವಾಸ್ಥ್ಯದ ಸೋಪಾನವದು. ಒಳ್ಳೆಯ ಆಹಾರದಿಂದ ದೇಹಕ್ಕೆ ಸಾಕಷ್ಟು ಪೋಷಕಸತ್ವಗಳು ದೊರೆಯುವ ಹಾಗೆಯೇ, ತಿನ್ನುವ ಆಹಾರ ಸರಿಯಿಲ್ಲದಿದ್ದರೆ ಸಾಕಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಕೆಟ್ಟ ಆಹಾರ ತಿಂದರೂ, ಆಹಾರ ಕೆಟ್ಟ ಮೇಲೆ ತಿಂದರೂ ಅನಾರೋಗ್ಯ ತಪ್ಪಿದ್ದಲ್ಲ. ಹಾಗಾಗಿ ಸುರಕ್ಷತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜೂನ್‌ ತಿಂಗಳ 7ನೇ ದಿನವನ್ನು ಜಾಗತಿಕ ಆಹಾರ ಸುರಕ್ಷತಾ ದಿನವೆಂದು (World Food Safety Day) ಗುರುತಿಸಲಾಗಿದೆ.
ಆಹಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2018ರಲ್ಲಿ ಕೈಗೊಳ್ಳಲಾಗಿತ್ತು. ಆಹಾರದಿಂದ ಉಂಟಾಗುವ ಅನಾರೋಗ್ಯಗಳನ್ನು ತಡೆಯುವ, ನಿರ್ವಹಿಸುವ ಮತ್ತು ಪತ್ತೆ ಮಾಡುವ ಉದ್ದೇಶ ಇದರ ಹಿಂದಿದೆ. ವಿಶ್ವ ಸಂಸ್ಥೆಯ ಅಡಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ಹೊರಡಿಸಿರುವ ಘೋಷವಾಕ್ಯ- ಆಹಾರ ಸುರಕ್ಷತೆ: ಅನಿರೀಕ್ಷಿತಗಳಿಗೆ ಸಜ್ಜಾಗಿ. ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಆದರೆ ಅದಕ್ಕೂ ಮುನ್ನ, ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇರುತ್ತವೆ. ಅತಿಯಾದ ಕೀಟನಾಶಕಗಳ ಬಳಕೆ, ಕಳೆನಾಶಕಗಳನ್ನು ಸುರಿಯುವುದು, ಸಾವಯವ ಪದ್ಧತಿಗಳ ಅವನತಿ, ದಾಸ್ತಾನು ಮಾಡುವಾಗಲೂ ಬಳಕೆಯಾಗುವ ರಾಸಾಯನಿಕಗಳು, ಕಲಬೆರಕೆಗಳು- ಇವೆಲ್ಲ ಆಹಾರದ ಸುರಕ್ಷಾ ಗುಣಮಟ್ಟ ಕುಸಿಯುವಂತೆ ಮಾಡುತ್ತವೆ. ಆದಾಗ್ಯೂ ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಲ್ಲಿವೆ ಕೆಲವು ಸರಳ ಕ್ರಮಗಳು-

Food Cleaning Tips Kannada

ಸ್ವಚ್ಛತೆಗೆ ಆದ್ಯತೆ

ಹಣ್ಣು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಕೆಲಕಾಲ ನೆನೆಸಿ, ಸ್ವಚ್ಛವಾಗಿ ತೊಳೆಯಿರಿ. ಅಡುಗೆಮನೆಯ ನೈರ್ಮಲ್ಯ ಮತ್ತು ಬಳಸುವ ಉಪಕರಣಗಳ ಸ್ವಚ್ಛತೆಗೂ ಆದ್ಯತೆ ನೀಡಿ. ಆಹಾರ ಬೇಯಿಸುವ ಕೈಗಳು ಸಹ ಶುಚಿಯಾಗಿರಲಿ.

ಹಸಿ ಆಹಾರಗಳ ಬಗ್ಗೆ ಎಚ್ಚರ

ಮೊಟ್ಟೆ ಮತ್ತು ಮಾಂಸಾಹಾರಗಳನ್ನೂ ಎಂದಿಗೂ ಹಸಿಯಾಗಿ ಸೇವಿಸಬೇಡಿ. ಸಾದಾ ಹಾಲಿನ ಬದಲು ಪ್ಯಾಶ್ಚರೈಸ್‌ ಮಾಡಿದ ಹಾಲು ಬಳಕೆಗೆ ಹೆಚ್ಚು ಸುರಕ್ಷಿತ.

ಕೀಟಗಳು

ಅಡುಗೆ ಮನೆಯಲ್ಲಿ ಇಲಿ, ಜಿರಳೆ, ಕೀಟಗಳೆಲ್ಲ ಇದ್ದಷ್ಟೂ ಆಹಾರದ ಸುರಕ್ಷತೆ ನಿಭಾಯಿಸುವುದು ಕಷ್ಟ. ಹಾಗಾಗಿ ಇಂಥ ಪ್ರಾಣಿಗಳಿಂದ ಪಾಕಗೃಹವನ್ನು ಮುಕ್ತಗೊಳಿಸಿಕೊಳ್ಳಿ.

ICMR Dietary Guidelines

ತಾಜಾತನ

ಆಹಾರ ಬಿಸಿಯಾಗಿರುವಾಗಲೇ ಸೇವಿಸಿದರೆ ರುಚಿ, ಆರೋಗ್ಯ ಎರಡನ್ನೂ ಸಾಧಿಸಬಹುದು. ಇದಕ್ಕಾಗಿ ಮನೆಯ ಎಲ್ಲರೂ ಒಟ್ಟಿಗೆ ಊಟ ಮಾಡುವ ಅಭ್ಯಾಸ ಜಾರಿಗೆ ತನ್ನಿ. ಇದರಿಂದ ಮನೆಮಂದಿಯ ಬಾಂಧವ್ಯವೂ ಹೆಚ್ಚುತ್ತದೆ.

ಉಳಿಕೆ ಬಗ್ಗೆ ಜಾಗ್ರತೆ

ಉಳಿಕೆ ಆಹಾರವನ್ನು ಪ್ಲಾಸ್ಟಿಕ್‌ ಬದಲಿಗೆ ಲೋಹ ಅಥವಾ ಗಾಜಿನ ಪಾತ್ರೆಗಳಲ್ಲಿ ಶೀಥಲೀಕರಿಸಿ. ಉಳಿಕೆ ಆಹಾರವನ್ನು ಸೇವಿಸುವಾಗ, ಫ್ರಿಜ್‌ನಿಂದ ತೆಗೆದು ಚೆನ್ನಾಗಿ ಹಬೆಯಾಡುವಂತೆ ಬಿಸಿಮಾಡಿ. ಒಮ್ಮೆ ಬಿಸಿ ಮಾಡಿದ ಉಳಿಕೆ ಆಹಾರವನ್ನು ಮತ್ತೆ ಫ್ರಿಜ್‌ನಲ್ಲಿಟ್ಟು ಸೇವಿಸಬೇಡಿ, ಉಳಿದರೆ ಬಿಸಾಡಿ.

Drinking Water Before Meals

ನೀರು

ಕುಡಿಯುವ ನೀರನ್ನು ಕುದಿಸಿ ಕುಡಿಯಿರಿ ಅಥವಾ ಆಧುನಿಕ ಪ್ಯೂರಿಫೈಯರ್‌ ಬಳಸಿ. ನಿತ್ಯವೂ ನೀರಿನ ಬಾಟಲಿಗಳನ್ನು ಬಳಸುವ ಅಭ್ಯಾಸವಿದ್ದರೆ, ಅವುಗಳನ್ನು ಆಗಾಗ ತೊಳೆದು ಶುಚಿ ಮಾಡಿ.

Continue Reading

ಆರೋಗ್ಯ

Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

ತರಕಾರಿ, ಮಾಂಸ ಇತ್ಯಾದಿಗಳ ಅಡುಗೆ ಮಾಡಿದಾಗಲೂ ಬೇಕಾಗುವ ಆಹಾರ ಸಾಮಗ್ರಿಗಳ ಪೈಕಿ ಈ ಬೇಳೆಕಾಳುಗಳೂ (Pulses Benefits) ಇರುತ್ತವೆ. ನಮ್ಮ ಅಡುಗೆಯ ರುಚಿ ಹೆಚ್ಚಿಸಿ, ಪೋಷಕಾಂಶವನ್ನೂ ನಮ್ಮ ದೇಹಕ್ಕೆ ನೀಡುವ ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪೈಕಿ ಇವು ಪ್ರಮುಖವಾದವು. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯೂಟದವರೆಗೆ ಹಲವು ಬಗೆಯಲ್ಲಿ ಇಡೀ ದಿನ ಒಂದಲ್ಲ ಒಂದು ರೂಪದಲ್ಲಿ ಇವು ಹೊಟ್ಟೆಗಿಳಿಯುತ್ತವೆ. ಆದರೆ ಎಲ್ಲ ಪೋಷಕಾಂಶಗಳೂ ನಮ್ಮ ಹೊಟ್ಟೆ ಸೇರುತ್ತವೆಯೆ?

VISTARANEWS.COM


on

pulses benefits
Koo

ದಾಲ್‌ ಅಥವಾ ಬೇಳೆಕಾಳುಗಳು (Pulses Benefits) ನಮ್ಮ ನಿತ್ಯ ಬಳಕೆಯಲ್ಲಿ ಬಳಸಲ್ಪಡುವ ಆಹಾರಗಳು. ತರಕಾರಿ ಇಲ್ಲದಿದ್ದರೂ, ಬೇಳೆಕಾಳುಗಳಲ್ಲಿಯೇ ಏನಾದರೊಂದು ರುಚಿಕರ ಅಡುಗೆ ಮಾಡಿಕೊಂಡು ತಿನ್ನಲು ಸಾಧ್ಯವಿದೆ. ತರಕಾರಿ, ಮಾಂಸ ಇತ್ಯಾದಿಗಳ ಅಡುಗೆ ಮಾಡಿದಾಗಲೂ ಬೇಕಾಗುವ ಆಹಾರ ಸಾಮಗ್ರಿಗಳ ಪೈಕಿ ಈ ಬೇಳೆಕಾಳುಗಳೂ ಇರುತ್ತವೆ. ನಮ್ಮ ಅಡುಗೆಯ ರುಚಿ ಹೆಚ್ಚಿಸಿ, ಪೋಷಕಾಂಶವನ್ನೂ ನಮ್ಮ ದೇಹಕ್ಕೆ ನೀಡುವ ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪೈಕಿ ಇವು ಪ್ರಮುಖವಾದವು. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯೂಟದವರೆಗೆ ಹಲವು ಬಗೆಯಲ್ಲಿ ಇಡೀ ದಿನ ಒಂದಲ್ಲ ಒಂದು ರೂಪದಲ್ಲಿ ಇವು ಹೊಟ್ಟೆಗಿಳಿಯುತ್ತವೆ. ಐಸಿಎಂಆರ್‌ (ICMR) ವರದಿಯ ಪ್ರಕಾರ, ಈ ಬೇಳೆಕಾಳುಗಳನ್ನು ನಾವು ಅತಿಯಾಗಿ ಬೇಯಿಸುವ ಮೂಲಕ ಇದರಲ್ಲಿರುವ ಪೋಷಕಾಂಶಗಳನ್ನು ಬಹುತೇಕ ಮಂದಿ ನಷ್ಟ ಮಾಡುವುದೇ ಹೆಚ್ಚು ಎಂದಿದೆ. ಅಗತ್ಯಕ್ಕಿಂತ ಹೆಚ್ಚು ಕಾಲ ಬೇಳೆಯನ್ನು ಬೇಯಿಸುವುದರಿಂದ ಇದರಲ್ಲಿರುವ ಪೋಷಕಾಂಶಗಳ್ನು ನಷ್ಟಮಾಡುತ್ತದೆ. ಮುಖ್ಯವಾಗಿ ಲೈಸೀನ್‌ ಎಂಬ ಅಂಶ ನಷ್ಟವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರನ್ನು ಹಾಕಿ ಬೇಯಿಸುವುದೂ ಕೂಡಾ ಒಳ್ಲೆಯದಲ್ಲ. ಬನ್ನಿ, ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸುವುದರಿಂದಾಗುವ ಅಡ್ಡ ಪರಿಣಾಮಗಳೇನು ಎಂಬುದನ್ನು ನೋಡೋಣ.

Portrait of a Lentil Pulse

ಪ್ರೊಟೀನ್‌ ನಷ್ಟವಾಗುತ್ತವೆ

ಬೇಳೆಕಾಳುಗಳಲ್ಲಿ ಪ್ರೊಟೀನ್‌ಗಳು ಹೆಚ್ಚಿವೆ. ಇವು ನಮ್ಮ ದೇಹದಲ್ಲಿ ಬಿಲ್ಡಿಂಗ್‌ ಬ್ಲಾಕ್‌ನಂತೆ ಕೆಲಸ ಮಾಡುತ್ತವೆ. ಆದರೆ ಇದು ಸರಿಯಾಗಿ ಇದ್ದಾಗ, ಪೂರೈಕೆಯಾದಾಗ ಮಾತ್ರ ಹೀಗಾಗುತ್ತದೆ. ಇಲ್ಲವಾದರೆ, ಅತಿಯಾಗಿ ಬೇಳೆಗಳು ಬೆಂದಾಗ ಇದರಲ್ಲಿರುವ ಪ್ರೊಟೀನ್‌ನ ರಚನೆಯಲ್ಲೇ ವ್ಯತ್ಯಾಸವಾಗಿ ಇದರ ಪರಿಣಾಮದಲ್ಲೂ ವ್ಯತ್ಯಾಸವಾಗುತ್ತದೆ.

ವಿಟಮಿನ್‌ಗಳೂ ನಷ್ಟವಾಗುತ್ತವೆ

ಬೇಳೆಕಾಳುಗಳಲ್ಲಿ ವಿಟಮಿನ್‌ ಬಿ ಹಾಗೂ ಸಿ ಹೇರಳವಾಗಿ ಇದ್ದು, ಇವು ಉಷ್ಣತೆಗೆ ಒಳಪಟ್ಟರೆ ಅವುಗಳ ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ, ಒಂದು ಮಿತಿಗಿಂತ ಹೆಚ್ಚು ಬೇಯಿಸುವುದರಿಂದ ಇವುಗಳೂ ಕೂಡಾ ನಷ್ಟವೇ ಆಗುತ್ತವೆ. ಇವುಗಳ ನಿಜವಾದ ಲಾಭ ಸಿಗುವುದಿಲ್ಲ.

Husked Brown Gram Pulse

ರುಚಿಯ ಮೇಲೆ ಪರಿಣಾಮ ಬೀರುತ್ತವೆ

ಅತಿಯಾಗಿ ಬೇಳೆಕಾಳುಗಳ್ನು ಬೇಯಿಸಿದಾಗ ಅದು ಖಂಡಿತವಾಗಿ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಬೆಂದಾಗ ಅವು ಕರಿದಂತಾಗಿ ಬೇಳೆಯ ಸ್ವಾದ ಕೆಡುತ್ತದೆ.

ಫೈಟಿಕ್‌ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ

ಐಸಿಎಂಆರ್‌ ಮಾರ್ಗಸೂಚಿಯಲ್ಲಿ ವಿವರಿಸಿರುವಂತೆ ಬೇಳೆಕಾಳುಗಳನ್ನು ಸರಿಯಾದ ಹದದಲ್ಲಿ ಬೇಯಿಸಿದಾಗ ಅದರಲ್ಲಿರುವ ಫೈಟಿಕ್‌ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಬೆಂದರೆ, ಫೈಟಿಕ್‌ ಆಸಿಡ್‌ ಹೆಚ್ಚಾಗಿ ವಿರುದ್ಧ ಪರಿಣಾಮಗಳನ್ನು ನೀಡಬಹುದು. ಇದರಿಂದ ಕಬ್ಬಿಣಾಂಶ, ಝಿಂಕ್‌, ಮೆಗ್ನೀಶಿಯಂ ಹಾಗೂ ಕ್ಯಾಲ್ಶಿಯಂನ ಹೀರುವಿಕೆಯ ಶಕ್ತಿಯೂ ಕಡಿಮೆಯಾಗುತ್ತದೆ. ಹೆಚ್ಚಾದ ಫೈಟಿಕ್‌ ಆಸಿಡ್‌ನಿಂದ ಗ್ಯಾಸ್‌ ಹಾಗೂ ಹೊಟ್ಟೆಯುಬ್ಬರದ ಸಮಸ್ಯೆಗಳೂ ಬರಬಹುದು.

ಇದನ್ನೂ ಓದಿ: Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಬೇಯಿಸುವ ಸರಿಯಾದ ಕ್ರಮ

ಹಾಗಾದರೆ, ಬೇಳೆಕಾಳುಗಳನ್ನು ಬೇಯಿಸುವ ಸರಿಯಾದ ಕ್ರಮ ಯಾವುದು ಎಂದರೆ ಅದಕ್ಕೆ ಐಸಿಎಂಆರ್‌ ಹೀಗೆ ವಿವರಿಸುತ್ತದೆ. ಬೇಳೆಕಾಳುಗಳನ್ನು ಮೊದಲು ಸರಿಯಾಗಿ ಎರಡು ಮೂರು ಬಾರಿ ನೀರಿನಲ್ಲಿ ತೊಳೆಯಿರಿ. ತೊಳೆದ ನೀರು ಸ್ವಚ್ಛವಾಗಿ ಕಾಣುವಂತಾದರೆ, ಸರಿಯಾಗಿ ತೊಳೆದಿದ್ದೀರಿ ಎಂದರ್ಥ. ಈ ಬೇಳೆಕಾಳುಗಳನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆ ಹಾಕಿ. ಹೀಗೆ ನೆನೆ ಹಾಕುವುದರಿಂದ ಇದು ಸರಿಯಾಗಿ ಜೀರ್ಣವಾಗುತ್ತವೆ. ಜೊತೆಗೆ ಹೊಟ್ಟೆಯುಬ್ಬರ ಹಾಗೂ ಗ್ಯಾಸ್‌ ಆಗುವ ಸಮಸ್ಯೆಯೂ ತಪ್ಪುತ್ತದೆ. ಅಗತ್ಯವಿದ್ದಷ್ಟೇ ನೀರು ಹಾಕಿ ಬೇಯಿಸಿ. ಪ್ರೆಷರ್‌ ಕುಕ್ಕರ್‌ನಲ್ಲಿಯೂ ಬೇಯಿಸಬಹುದು. ಪಾತ್ರೆಯ ಮುಚ್ಚಳ ಮುಚ್ಚಿ ಬೇಯಿಸಿ. ಆಗ ಹೆಚ್ಚಾದ ನೀರನ್ನು ಚೆಲ್ಲುವ ಪ್ರಮೇಯ ಬರುವುದಿಲ್ಲ. ಬೇಯಿಸುವಾಗ ಒಂದೆರಡು ಹನಿ ಎಣ್ಣೆ ಹಾಕಿ. ಉಪ್ಪು ಹಾಕಬೇಡಿ. ಇದರಿಂದ ಬೇಳೆಕಾಳುಗಳಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೊರಬಂದು, ನಮ್ಮ ದೇಹಕ್ಕೆ ಸೇರಲು ತಯಾರಾಗುತ್ತದೆ.

Continue Reading

ಆರೋಗ್ಯ

Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್

Vijayanagara News: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Disciplinary action if cases of mother and child deaths recur DC Diwakar warns
Koo

ಹೊಸಪೇಟೆ: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ (Vijayanagara News) ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮತ್ತು ಶಿಶು ಮರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ

ತಾಯಿ ಮತ್ತು ಶಿಶು ಮರಣ ತಡೆಗೆ ವಿಶೇಷ ಗಮನ ಹರಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವ ದೂರು ಬಾರದ ಹಾಗೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ದಿನ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಶುಶ್ರೂಷಣಾ ಸಿಬ್ಬಂದಿ ರೋಗಿಗಳೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳಬೇಕು. ಚಿಕಿತ್ಸೆ ಕೊಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಬೇರೊಬ್ಬರನ್ನು ಹೊಣೆಯಾಗಿಸಬಾರದು. ಸಕಾಲದಲ್ಲಿ ಸಿಗಬೇಕಾಗಿದ್ದ ಆರೋಗ್ಯ ಸೇವೆ ಸಿಗದ ಕಾರಣಕ್ಕೆ ತಾಯಿ ಮರಣ, ಶಿಶುಮರಣ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವ ದೂರುಗಳು ಬಂದಲ್ಲಿ ಮತ್ತು ತಾಯಿ ಮತ್ತು ಶಿಶು ಮರಣ ಪ್ರಕರಣಗಳು ಮತ್ತೆ ಮರುಕಳಿಸಿದಲ್ಲಿ ಯಾವುದೇ ಮುಲಾಜಿಲ್ಲದೇ ತನಿಖೆಗೊಳಪಡಿಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಂತವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಸರ್ಕಾರಿ ಆಸ್ಪತ್ರೆಗಳಿಗೆ ಬಹುತೇಕ ಕೃಷಿ ಕಾರ್ಮಿಕರು, ಕಡು ಬಡವರೇ ಹೆಚ್ಚಾಗಿ ಬರುತ್ತಾರೆ. ವೈದ್ಯರೇ ದೇವರೆಂದು ಭಾವಿಸಿ ಅವರು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ವೈದ್ಯರು ಏನೇ ಹೇಳಿದರು ಅವರು ಅದಕ್ಕೆ ಸಮ್ಮತಿ ಸೂಚಿಸುತ್ತಾರೆ. ನನ್ನ ಮಗಳು ಆರಾಮಿರಬೇಕು. ಹೆರಿಗೆ ಸುಸೂತ್ರವಾಗಿ ನಡೆದು ಕೂಸು ಬದುಕಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿ ಪಾಲಕರ ಆಸೆ ಆಗಿರುತ್ತದೆ. ಆಸ್ಪತ್ರೆಗೆ ಯಾರೆ ಬರಲಿ ಅವರೊಂದಿಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು.

ಹೆರಿಗೆಯಂತಹ ಸಂದರ್ಭದಲ್ಲಿ ವಿಳಂಬಕ್ಕೆ ಆವಕಾಶ ಮಾಡಿಕೊಡದೇ ಸಕಾಲಕ್ಕೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದು ಗೊತ್ತಾದಾಗ ವಿಳಂಬ ಮಾಡದೇ ಮೇಲಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕೂಡಲೇ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Money Guide: ಈ ಯೋಜನೆಯಲ್ಲಿ ಪ್ರತಿ ತಿಂಗಳು 3,475 ರೂ. ಹೂಡಿಕೆ ಮಾಡಿ 1 ಲಕ್ಷ ರೂ. ಮಾಸಿಕ ಪಿಂಚಣಿ ಪಡೆಯಿರಿ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು, ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು, ಆಡಳಿತ ವ್ಯೆದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಹಾಜರಿದ್ದರು.

Continue Reading
Advertisement
T20 World Cup
ಪ್ರಮುಖ ಸುದ್ದಿ1 hour ago

T20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ

Narendra Modi
ದೇಶ1 hour ago

Narendra Modi: ಹಂಗಾಮಿ ಪ್ರಧಾನಿ ಮೋದಿಗೆ ಮೊಸರು-ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

Narendra Modi
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

T20 World Cup
ಪ್ರಮುಖ ಸುದ್ದಿ2 hours ago

T20 World Cup : ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

Naxals
ದೇಶ2 hours ago

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

Gas leak
ಪ್ರಮುಖ ಸುದ್ದಿ2 hours ago

Gas Leakage : ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

soraba BJP Mandala president prakash talakaalukoppa pressmeet
ಶಿವಮೊಗ್ಗ2 hours ago

Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

Chandrababu Naidu
ದೇಶ2 hours ago

Chandrababu Naidu: 5 ದಿನದಲ್ಲಿ 870 ಕೋಟಿ ರೂ. ಗಳಿಸಿದ ‘ಕಿಂಗ್‌ ಮೇಕರ್’‌ ಚಂದ್ರಬಾಬು ನಾಯ್ಡು; ಹೇಗಂತೀರಾ?

Shreyas Iyer
ಕ್ರೀಡೆ3 hours ago

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

assault case
ಕ್ರೈಂ3 hours ago

Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ6 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ8 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌