Astrology Answers | ನನ್ನ ಮಗ ದೆಹಲಿಯಲ್ಲಿ ಐಎಎಸ್‌ ಕೋಚಿಂಗ್‌ ಮಾಡುತ್ತಿದ್ದಾನೆ, ಅವನ ಭವಿಷ್ಯ ಹೇಗಿದೆ? - Vistara News

ಪ್ರಮುಖ ಸುದ್ದಿ

Astrology Answers | ನನ್ನ ಮಗ ದೆಹಲಿಯಲ್ಲಿ ಐಎಎಸ್‌ ಕೋಚಿಂಗ್‌ ಮಾಡುತ್ತಿದ್ದಾನೆ, ಅವನ ಭವಿಷ್ಯ ಹೇಗಿದೆ?

ಇದು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ನೀಡುವ ಅಂಕಣ (Astrology Answers). ಇಲ್ಲಿ ನಮ್ಮ ಓದುಗರು ಕೇಳುವ ಪ್ರಶ್ನೆಗಳಿಗೆ ರಾಜಗುರು ಬಿ. ಎಸ್‌. ದ್ವಾರಕನಾಥ್‌ ಅವರು ಉತ್ತರಿಸಲಿದ್ದಾರೆ, ಪರಿಹಾರ ಸೂಚಿಸಲಿದ್ದಾರೆ. ಇಲ್ಲಿ ನೀವೂ ಪ್ರಶ್ನೆ ಕೇಳಬಹುದು.

VISTARANEWS.COM


on

ಭವಿಷ್ಯ ಪ್ರಶ್ನೋತ್ತರ rajaguru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಶ್ನೆ: ನನ್ನ ಮಗ ಎಂಜಿನಿಯರಿಂಗ್‌ ಮುಗಿಸಿ, ದೆಹಲಿಯಲ್ಲಿ ಐಎಎಸ್‌ಗೆ ಕೋಚಿಂಗ್‌ ತೆಗೆದುಕೊಳ್ಳುತ್ತಿದ್ದಾನೆ. ಅವನ ಮುಂದಿನ ಭವಿಷ್ಯ ಹೇಗಿದೆ ನೋಡಿ ಹೇಳಿ ಗುರೂಜಿ.
ಜನ್ಮದಿನಾಂಕ : 18-02-1997 ನಕ್ಷತ್ರ: ಆರಿದ್ರಾ

ಪರಿಹಾರ: ಆರಿದ್ರಾ ನಕ್ಷತ್ರ ಮಿಥುನ ರಾಶಿಯವರಿಗೆ ಸದ್ಯ ಅಷ್ಟಮ ಶನಿ ನಡೆಯುತ್ತಿದೆ. ಜನವರಿ 17ಕ್ಕೆ ಶನಿಯು ಕುಂಭ ರಾಶಿಗೆ ಪ್ರವೇಶಿಸುವವರೆಗೂ ನಿಮ್ಮ ಮಗನಿಗೆ ಈ ಅಷ್ಟಮ ಶನಿ ಇರುತ್ತದೆ. ಶನಿಯು ಕುಂಭಕ್ಕೆ ಒಂಬತ್ತನೇ ಮನೆಗೆ ಬಂದಾಗ ಒಳ್ಳೆಯ ಫಲವನ್ನು ನೀಡುತ್ತಾನೆ. ಆದರೆ ಗುರುವು ಮಕರ ರಾಶಿಯಲ್ಲಿ ಅಂದರೆ ಶನಿಯ ಮನೆಯಲ್ಲಿಯೇ ಇರುವುದರಿಂದ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಧೈಯರ್ವಾಗಿ ಹಿಡಿದ ಕೆಲಸ ಸಾಧಿಸುವ ಮಹಾಸಂಕಲ್ಪವಿರಬೇಕು. ಶೃಂಗೇರಿ ಶಾರದೆಯನ್ನು ಅನನ್ಯವಾಗಿ ಪೂಜಿಸಬೇಕು. ಈಗ ಶುಕ್ರಭುಕ್ತಿ ನಡೆಯುತ್ತಿದ್ದು, ಶುಕ್ರಭುಕ್ತಿಯ ಅಧಿದೇವತೆ ಚಾಂಮುಂಡೇಶ್ವರಿಯ ಸ್ವರೂಪವೇ ಆದ ಶಾರದಾ ಮಾತೆ. ಶೃಂಗೇರಿಗೆ ಭೇಟಿ ನೀಡಿ, ಶಾರದೆಯನ್ನು, ಗುರುಗಳ ದರ್ಶನವನ್ನು ಮಾಡಿ ಬರಲಿ. ಎಲ್ಲವೂ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Finance Horoscope 2023 | ಜನವರಿಯಲ್ಲಿ ಯಾವೆಲ್ಲಾ ರಾಶಿಯವರಿಗೆ ಆರ್ಥಿಕವಾಗಿ ಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Viral Video ಜಾರ್ಖಂಡ್‌ನಲ್ಲಿ ಮೂರು ತಿಂಗಳಿನಿಂದ ಕಾಣೆಯಾದ ಬಾಲಕಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಹಾವಿನಂತೆ ತೆವಳುತ್ತಾ, ನಾಲಗೆ ಹೊರಗೆ ಚಾಚುತ್ತಾ ಇರುವ ವಿಡಿಯೊವೊಂದು ವೈರಲ್ ಆಗಿದೆ. ಗುಹೆಯಲ್ಲಿ ಕಂಡುಬರುವ ಈ ಹುಡುಗಿಯ ಈ ರೂಪವನ್ನು ನೋಡಲು ಗ್ರಾಮಸ್ಥರ ಗುಂಪು ಅಲ್ಲಿ ನೆರೆದಿದ್ದು, ಅವಳನ್ನು ಹುಡುಕುತ್ತಿದ್ದ ಆಕೆಯ ಕುಟುಂಬ ಸದಸ್ಯರು ಪೂಜೆ ಮಾಡಿ ಅಂತಿಮವಾಗಿ ಅವಳನ್ನು ಮನೆಗೆ ಕರೆತಂದರು ಎನ್ನಲಾಗಿದೆ.

VISTARANEWS.COM


on

Viral Video
Koo


ಜಾರ್ಖಂಡ್ : ಕೆಲವರು ದೇವರು ಮೈಮೇಲೆ ಬಂದಂತೆ ವರ್ತಿಸುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಅಂತವರಿಗೆ ದೇವರ ಅನುಗ್ರಹವಿದೆ. ಹಾಗಾಗಿ ದೇವರು ಅವರ ಮೇಲೆ ಆಹ್ವಾನವಾಗಿ ನಂಬಿದ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾನೆ ಎಂಬ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ. ಇದನ್ನು ನಾವು ಇಂದಿನ ಕಾಲದಲ್ಲಿಯೂ ಕೆಲವು ಕಡೆ ನೋಡಬಹುದು. ಹೆಚ್ಚಾಗಿ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಕೆಲವರು ದೇವರು ಮೈಮೇಲೆ ಬರುವಂತೆ ವರ್ತಿಸುವ ದೃಶ್ಯವನ್ನು ನೊಡಬಹುದು. ಅದೇರೀತಿ ಜಾರ್ಖಂಡ್‍ನಲ್ಲಿ ಕೂಡ ಇಂತಹದೊಂದು ಘಟನೆ ನಡೆದಿದೆ. ಕಾಣೆಯಾದ ಬಾಲಕಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಆದರೆ ಅವಳು ಹಾವಿನಂತೆ ವರ್ತಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವಿಡಿಯೊದಲ್ಲಿರುವ ಹುಡುಗಿ ಗುಹೆಯ ನೆಲದ ಮೇಲೆ ಹಾವಿನಂತೆ ತೆವಳುತ್ತಾ ತನ್ನ ನಾಲಿಗೆಯನ್ನು ಹಾವಿನಂತೆ ಹೊರಗೆ ಚಾಚುತ್ತಿದ್ದಾಳೆ. ಗುಹೆಯಲ್ಲಿ ಕಂಡುಬರುವ ಈ ಹುಡುಗಿಯ ಈ ರೂಪವನ್ನು ನೋಡಲು ಗ್ರಾಮಸ್ಥರ ಗುಂಪು ಅಲ್ಲಿ ನೆರೆದಿದ್ದು, ಮನೆಯವರು ಆಕೆಗೆ ಪೂಜೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬಾಲಕಿ ಕಾಣೆಯಾಗಿದ್ದಳು. ಆದರೆ ಇತ್ತೀಚೆಗೆ ಆಕೆ ರಾಣಿದಿಹ್ ಗುಪ್ತಾ ಧಾಮ್ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಅವಳು ಹಾವಿನಂತೆ ವರ್ತಿಸುತ್ತಿದ್ದಾಳೆ ಎನ್ನಲಾಗಿದೆ. ಆಕೆ ಹಾವಿನಂತೆ ವರ್ತಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇದನ್ನು ಕಂಡು ಜನರು ಆಶ್ಚರ್ಯ ಚಕಿತರಾಗಿದ್ದಾರೆ. ಈ ಘಟನೆ ದೊಡ್ಡ ಜನಸಮೂಹವನ್ನು ಸೆಳೆದಿದ್ದು, ಆಕೆಯ ಅಸಾಮಾನ್ಯ ನಡವಳಿಕೆಯನ್ನು ನೋಡಲು ಅನೇಕ ಜನರು ಆ ಗುಹೆಯ ಬಳಿ ಜಮಾಯಿಸಿದ್ದಾರೆ. ಅವಳನ್ನು ಹುಡುಕುತ್ತಿದ್ದ ಆಕೆಯ ಕುಟುಂಬ ಸದಸ್ಯರು ಪೂಜೆ ಮಾಡಿ ಅಂತಿಮವಾಗಿ ಅವಳನ್ನು ಮನೆಗೆ ಕರೆತಂದರು ಎನ್ನಲಾಗಿದೆ.

ರಾಣಿದಿಹ್ ಗುಪ್ತ ಧಾಮ್ ಗುಹೆಯಲ್ಲಿ ಬಹಳ ಹಿಂದಿನ ಕಾಲದಲ್ಲಿ ಭಗವಾನ್ ಶಿವನನ್ನು ಸ್ಥಾಪನೆ ಮಾಡಲಾಗಿತ್ತು. ಶಿವನ ಪೂಜೆ ಮಾಡಲು ದೂರದ ಸ್ಥಳಗಳಿಂದ ಭಕ್ತರ ಗುಂಪು ಇಲ್ಲಿಗೆ ಬಂದು ಸೇರುತ್ತಿದ್ದರು. ಪ್ರತಿ ವರ್ಷದಂತೆ, ಈ ಬಾರಿಯೂ ಜನರು ಇಲ್ಲಿಗೆ ಭೇಟಿ ನೀಡಲು ಬಂದಿದ್ದರು, ನಂತರ ಸೋಮವಾರ, ಈ ಹುಡುಗಿಯನ್ನು ಗುಹೆಯ ಮುಖ್ಯ ದ್ವಾರದಲ್ಲಿ ಸರ್ಪದ ರೂಪದಲ್ಲಿ ನೋಡಿದ ಕೂಡಲೇ ಇದು ಗ್ರಾಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬಾಲಕಿಯ ಕುಟುಂಬದ ಪ್ರಕಾರ, ಕಳೆದ ಮೂರು ತಿಂಗಳಿನಿಂದ ಅವಳು ಮನೆಯಿಂದ ಕಾಣೆಯಾಗಿದ್ದಳು.

ಇದನ್ನೂ ಓದಿ: ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

ಕುಟುಂಬವು ಅವಳನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿತು. ಆದರೆ ಅವಳು ಸಿಗಲಿಲ್ಲ. ಅಲ್ಲಿಯ ತನಕ ಆಕೆ ಎಲ್ಲಿದ್ದಳು, ಏನು ಮಾಡುತ್ತಿದ್ದಳು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಕುಟುಂಬವು ಹುಡುಗಿಯನ್ನು ಈ ರೂಪದಲ್ಲಿ ಕಂಡುಕೊಂಡಾಗ, ಅವರು ಮೊದಲು ಅವಳನ್ನು ಪೂಜಿಸಿದರು ಮತ್ತು ಹಾಡುಗಳೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.

Continue Reading

Latest

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Charminar Clock: ಐತಿಹಾಸಿಕ ಸ್ಥಳವಾದ ಹೈದರಾಬಾದ್ ಚಾರ್ ಮಿನಾರ್‌ನ ಪೂರ್ವ ಭಾಗದಲ್ಲಿರುವ 135 ವರ್ಷ ಹಳೆಯ ಗಡಿಯಾರ ಭಾಗಶಃ ಹಾನಿಯಾಗಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಪದರವನ್ನು ಹೊಂದಿರುವ ಗಡಿಯಾರದಲ್ಲಿ ಕಪ್ಪು ರಂಧ್ರಗಳು ಬಿದ್ದಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ 25 ನಿಮಿಷಗಳ ಗುರುತಿಸುವಲ್ಲಿ ರಂಧ್ರ ಇರುವುದನ್ನು ಗಮನಿಸಲಾಗಿದೆ. ಪಾರಿವಾಳಗಳು ಗಡಿಯಾರದಲ್ಲಿ ಯಾವಾಗಲೂ ಬೀಡುಬಿಟ್ಟಿರುತ್ತವೆ. ಹಾಗಾಗಿ ಪಾರಿವಾಳಗಳು ಗಡಿಯಾರವನ್ನು ಹಾನಿಗೊಳಿಸಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್ಐ) ಸಿಬ್ಬಂದಿ ಹೇಳಿದ್ದಾರೆ.

VISTARANEWS.COM


on

Charminar Clock
Koo


ಹೈದರಾಬಾದ್: ಐತಿಹಾಸಿಕ ಸ್ಥಳವಾದ ಹೈದರಾಬಾದ್ ಚಾರ್ ಮಿನಾರ್‌ನ ಪೂರ್ವ ಭಾಗದಲ್ಲಿರುವ 135 ವರ್ಷ ಹಳೆಯ ಗಡಿಯಾರ ಭಾಗಶಃ ಹಾನಿಯಾಗಿರುವುದು ಕಂಡುಬಂದಿದೆ. ಸೋಮವಾರ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಶಕರೊಬ್ಬರು ಗಡಿಯಾರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಗಡಿಯಾರದ ಹಾನಿಗೊಳಗಾದ ಭಾಗದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Charminar Clock)ಆಗಿದೆ.

ಬಿಳಿ ಬಣ್ಣದ ಪದರವನ್ನು ಹೊಂದಿರುವ ಗಡಿಯಾರದಲ್ಲಿ ಕಪ್ಪು ರಂಧ್ರಗಳು ಬಿದ್ದಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ 25 ನಿಮಿಷಗಳ ಗುರುತಿಸುವಲ್ಲಿ ರಂಧ್ರ ಇರುವುದನ್ನು ಗಮನಿಸಲಾಗಿದೆ. ಪಾರಿವಾಳಗಳು ಗಡಿಯಾರದಲ್ಲಿ ಯಾವಾಗಲೂ ಬೀಡುಬಿಟ್ಟಿರುತ್ತವೆ. ಹಾಗಾಗಿ ಪಾರಿವಾಳಗಳು ಗಡಿಯಾರವನ್ನು ಹಾನಿಗೊಳಿಸಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್ಐ) ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಗಡಿಯಾರವನ್ನು ಸ್ಥಾಪಿಸಿದ ವಾಹಿದ್ ವಾಚ್ ಕಂಪನಿಯ ಕುಟುಂಬ ಸದಸ್ಯರೊಂದಿಗೆ ಹಾನಿಯ ಬಗ್ಗೆ ತಿಳಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಚಾರ್‌ ಮಿನಾರ್ ಹೈದರಾಬಾದ್‍ನಲ್ಲಿರುವ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ರಾಜಧಾನಿಯನ್ನು ಗೋಲ್ಕೊಂಡದಿಂದ ಹೈದರಾಬಾದ್‍ಗೆ ಸ್ಥಳಾಂತರಿಸಿದ ನಂತರ, ಕುತುಬ್ ಶಾಹಿ ರಾಜವಂಶದ ಐದನೇ ರಾಜನು ಇದನ್ನು 1591 ರಲ್ಲಿ ನಿರ್ಮಿಸಿದನು. ಅದಕ್ಕೆ ನಾಲ್ಕು ಮಿನಾರ್‌ಗಳಿರುವ ಕಾರಣ , ಇದನ್ನು “ಚಾರ್ ಮಿನಾರ್” ಎಂದು ಹೆಸರಿಸಲಾಯಿತು. ತನ್ನ ನಗರವನ್ನು ಹಾಳುಗೆಡವುತ್ತಿದ್ದ ಪ್ಲೇಗ್ ರೋಗದ ಅಂತ್ಯಕ್ಕಾಗಿ ರಾಜನು ತನ್ನ ದೇವರನ್ನು ಪ್ರಾರ್ಥಿಸಿದ ಮತ್ತು ತಾನು ಪ್ರಾರ್ಥಿಸುತ್ತಿದ್ದ ಅದೇ ಸ್ಥಳದಲ್ಲಿಯೇ ಮಸ್ಜಿದ್ (ಇಸ್ಲಾಮಿನ ಮಸೀದಿ) ಒಂದನ್ನು ನಿರ್ಮಿಸುವುದಾಗಿ ಅವನು ಹರಸಿಕೊಂಡ ಎಂದು ಹೇಳಲಾಗುತ್ತದೆ. ಹಾಗಾಗಿ ಆ ಸ್ಥಳದಲ್ಲಿ 1591ರಲ್ಲಿ ಚಾರ್ ಮಿನಾರ್‌ಗೆ ಅಡಿಪಾಯವನ್ನು ಹಾಕಿದ್ದಾನೆ.

ಈ ಕಟ್ಟಡ ರಚನೆಯು ಗ್ರಾನೈಟ್, ಸುಣ್ಣ, ಗಾರೆಯಿಂದ ಮಾಡಲ್ಪಟ್ಟಿದೆ, ಮತ್ತು ಕೆಲವೊಬ್ಬರು ಹೇಳುವ ಪ್ರಕಾರ, ಪುಡಿಮಾಡಲ್ಪಟ್ಟ ಅಮೃತಶಿಲೆಯನ್ನೂ ಇದಕ್ಕೆ ಬಳಸಲಾಗಿದೆ ಎನ್ನಲಾಗಿದೆ. ಆಗ್ರಾದಲ್ಲಿನ ತಾಜ್‍ಮಹಲ್ ಮತ್ತು ಪ್ಯಾರಿಗಳಲ್ಲಿ ಐಫೆಲ್ ಟವರ್ ಗೆ ಸಮಾನವಾದ ಪ್ರಾಮುಖ್ಯತೆ ಚಾರ್ ಮಿನಾರ್ ಗೆ ಇದೆ ಎಂದು ಹೇಳಬಹುದು. ಭಾರತದ ಟಾಪ್ 10 ಐತಿಹಾಸಿಕ ಸ್ಥಳಗಳಲ್ಲಿ ಚಾರ್ಮಿನಾರ್ ಕೂಡ ಸೇರಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಪ್ರಸ್ತುತ, ಎಎಸ್ಐ ಈ ಐತಿಹಾಸಿಕ ಸ್ಮಾರಕವನ್ನು ನೋಡಿಕೊಳ್ಳುತ್ತಿದೆ. 2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ, ಸರ್ಕಾರವು ವಾರಂಗಲ್‌ನ ಕಾಕತೀಯ ಕಲಾ ತೋರಣಂ ಜೊತೆಗೆ ಈ ಸ್ಮಾರಕವನ್ನು ರಾಜ್ಯದ ಅಧಿಕೃತ ಲಾಂಛನದಲ್ಲಿ ಸೇರಿಸಿತು.

Continue Reading

ರಾಜಕೀಯ

Parliament Session: ಇಂದೂ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸುತ್ತ ಜಾತಿ ವಿವಾದ? ಅಧಿವೇಶನದ Live ಇಲ್ಲಿ ನೋಡಿ

Parliament Session: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿವಿಧ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಮಂಗಳವಾರ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ಅವರ ಜಾತಿಯ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಇಂದು ಪ್ರತಿಪಕ್ಷಗಳು ಧ್ವನಿ ಎತ್ತುವ ಸಾಧ್ಯತೆ ಇದೆ.

VISTARANEWS.COM


on

Parliament Session
Koo

ನವದೆಹಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ (Parliament Session) ನಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿವಿಧ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಜುಲೈ 23ರಂದು ಮಂಡಿಸಲಾದ 2024-25ರ ಕೇಂದ್ರ ಬಜೆಟ್ ಮತ್ತು ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಈ ಮಧ್ಯೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಮಂಗಳವಾರ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ಅವರ ಜಾತಿಯ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಇಂದು ಪ್ರತಿಪಕ್ಷಗಳು ಧ್ವನಿ ಎತ್ತುವ ಸಾಧ್ಯತೆ ಇದೆ.

ಏನಿದು ವಿವಾದ?

ಸಂಸತ್‌ನಲ್ಲಿ ಜಾತಿಗಣತಿ (Caste Census) ಕುರಿತು ರಾಹುಲ್‌ ಗಾಂಧಿ ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ನಾವು ಜಾತಿಗಣತಿ ಮಂಡಿಸುತ್ತೇವೆ ಎಂದಿದ್ದರು.  ಇದಕ್ಕೆ ಅನುರಾಗ್‌ ಠಾಕೂರ್‌ ತಿರುಗೇಟು ನೀಡಿ, “ತಮ್ಮ ಜಾತಿಯೇ ಯಾವುದೆಂದು ಗೊತ್ತಿರದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದರು. ಇದು ಪ್ರತಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿ, “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದು ವಾಗ್ದಾಳಿ ನಡೆಸಿದ್ದರು. “ಅನುರಾಗ್‌ ಠಾಕೂರ್‌ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಆದರೆ ನಾನು ಅವರು ಕ್ಷಮೆ ಕೇಳಿ ಎಂಬುದಾಗಿ ಆಗ್ರಹಿಸುವುದಿಲ್ಲ. ಎಷ್ಟು ಬೇಕಾದರೂ ಅವಮಾನ ಮಾಡಲಿ” ಎಂದು ಹೇಳಿದ್ದರು. ಹೀಗಾಗಿ ಈ ವಿಚಾರವಾಗಿ ಸಂತತ್ತಿನಲ್ಲಿ ಇಂದೂ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ.

18ನೇ ಲೋಕಸಭೆ ತನ್ನ ಮೊದಲ ಬಜೆಟ್ ಅಧಿವೇಶನವನ್ನು ಜುಲೈ 22ರಂದು ಪ್ರಾರಂಭಿಸಿದೆ. ಆಗಸ್ಟ್ 12ರವರೆಗೆ 16 ಅಧಿವೇಶನಗಳನ್ನು ನಿಗದಿಪಡಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಈ ಅವಧಿಯ ಎನ್‌ಡಿಎ ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಬಜೆಟ್ ಬಗ್ಗೆ ಪ್ರತಿಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯೇತರ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದೆ. ಬಜೆಟ್‌ನಲ್ಲಿ ಕೇವಲ ಬಿಹಾರ ಮತ್ತು ಆಂಧ್ರ ಪ್ರದೇಶವನ್ನು ಮಾತ್ರ ಉಲ್ಲೇಖಿಸಲಾಗಿದೆ ಕಾಂಗ್ರೆಸ್‌ ಹೇಳಿದೆ.

ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂಗಳವಾರ ರಾಜ್ಯಸಭೆಯಲ್ಲಿ ಬಜೆಟ್ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಂಡಿಸಲಾದ ಯಾವುದೇ ಬಜೆಟ್​ನಲ್ಲಿ ಎಲ್ಲ ರಾಜ್ಯಗಳ ಹೆಸರು ಎತ್ತಲಾಗಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಸಾಮಾಜಿಕ ವಲಯಕ್ಕೆ ಕಡಿಮೆ ಹಣ ಕೊಡಲಾಗಿದೆ ಎನ್ನುವ ಆರೋಪವನ್ನೂ ತಳ್ಳಿ ಹಾಕಿದ ಅವರು ಕೃಷಿ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ವಲಯಗಳಿಗೆ ಫಂಡಿಂಗ್ ಅನ್ನು ಈ ಬಜೆಟ್​ನಲ್ಲಿ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಇಂದು ಉಭಯ ಸದನಗಳಲ್ಲಿಯೂ ಕಾವೇರಿದ ಚರ್ಚೆ ನಡೆಯುವ ಎಲ್ಲ ಸಾಧ್ಯತೆಯೂ ದಟ್ಟವಾಗಿದೆ.

ಇದನ್ನೂ ಓದಿ: Anurag Thakur: ತಮ್ಮ ಜಾತಿಯೇ ಗೊತ್ತಿರದ ರಾಹುಲ್‌ ಗಾಂಧಿಯಿಂದ ಜಾತಿಗಣತಿ ಪ್ರಸ್ತಾಪ ಎಂದ ಅನುರಾಗ್‌ ಠಾಕೂರ್‌!

Continue Reading

ವೈರಲ್ ನ್ಯೂಸ್

Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Wayanad Landslide: ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ.

VISTARANEWS.COM


on

wayanad landslide cow rescues family
Koo

ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಸಂಭವಿಸಿದ ರುದ್ರಭಯಾನಕ ಭೂಕುಸಿತದಲ್ಲಿ (Wayanad landslide, Kerala Landslide) ಚಾಮರಾಜನಗರ ಮೂಲದ ಕುಟುಂಬವೊಂದನ್ನು ಅವರು ಸಾಕಿದ ಹಸು ವಿಚಿತ್ರ ರೀತಿಯಲ್ಲಿ ಪಾರು ಮಾಡಿದ ಘಟನೆ (Viral news) ನಡೆದಿದೆ.

ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ. ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೇಪ್ಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್‌ಮಲೆಯಲ್ಲಿದ್ದರು. ಚೂರಲ್‌ಮಲೆಗೂ ಮೇಪ್ಪಾಡಿಗೂ 6 ಕಿಮೀ ದೂರವಿದ್ದು, ಭೂಕುಸಿತ ಉಂಟಾಗುವ ಕೆಲವು ಸಮಯಕ್ಕೆ ಮುನ್ನ ಇವರು ಪಾರಾಗಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ.

ಅದು ಘಟಿಸಿದ್ದು ಹೀಗೆ. ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡಿದ್ದಾರೆ. ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡನೋಡುತ್ತಿದ್ದಂತೆ ಇವರು ಇದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೇಪ್ಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದಾರೆ. ಪ್ರವಿದಾ, ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.

ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತರರನ್ನು ರಕ್ಷಣಾ ಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಸಾಕಿದ್ದ ಹಸು ದೇವರಂತೆ ಅಪಾಯದ ಬಗ್ಗೆ ಕುಟುಂಬಕ್ಕೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರುಮಾಡಿದೆ. ಆದರೆ ಇವರನ್ನು ಕಾಪಾಡಿದ ಹಸು ಉಳಿದಿದೆಯೋ ಇಲ್ಲವೋ ತಿಳಿದುಬಂದಿಲ್ಲ.

ನಾಲ್ವರ ಶವ ಪತ್ತೆ, ಉಳಿದವರಿಗೆ ಶೋಧ ಮುಂದುವರಿಕೆ

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಇವರ ಶವಗಳು ದೊರೆತಿವೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ರಾಜೇಂದ್ರ, ರತ್ನಮ್ಮ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದವರು. ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ವೈನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಝಾನ್ಸಿ ಪುತ್ರ ನಿಹಾಲ್, ಅತ್ತೆ ಲೀಲಾವತಿ ನಾಪತ್ತೆಯಾಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಝಾನ್ಸಿರಾಣಿಯನ್ನು ಕುಟುಂಬ ಮದುವೆ ಮಾಡಿಕೊಟ್ಟಿತ್ತು. ಕೇರಳದ ಮುಂಡಕೈಯಲ್ಲಿ ಅನಿಲ್, ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಮುಂಡಕೈ ಗುಡ್ಡ ಕುಸಿತದಲ್ಲಿ ಅನಿಲ್ ತಾಯಿ ಲೀಲಾವತಿ(55), ಪುತ್ರ ನಿಹಾಲ್(2.5) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರನ್ನು ಕಾಣಲು ಝಾನ್ಸಿರಾಣಿ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Continue Reading
Advertisement
Sruthi Hariharan female friendship nangeallava shashwati chandrashekar
ಸ್ಯಾಂಡಲ್ ವುಡ್14 mins ago

Sruthi Hariharan: ʻನೀ ನಂಗೆ ಅಲ್ಲವಾʼ? ಎಂದು ಸ್ನೇಹಿತೆಯ ಜತೆ ಪೋಸ್‌ ಕೊಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್!

wayanad landslide mandya family
ಮಂಡ್ಯ22 mins ago

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Wayanad Landslide
ದೇಶ24 mins ago

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Vanitha Vijaykumar Set To Tie The Knot Again
ಟಾಲಿವುಡ್36 mins ago

Vanitha Vijaykumar: 43 ವರ್ಷದ ನಟಿ ವನಿತಾ ವಿಜಯಕುಮಾರ್ 4ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು?

Viral Video
Latest44 mins ago

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Charminar Clock
Latest56 mins ago

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Ram Pothineni Double iSmart Bachchan Director Breaks Silence On Clash
ಟಾಲಿವುಡ್59 mins ago

Ram Pothineni: ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ; ನಟನ ಅನ್​ಫಾಲೋ ಮಾಡಿದ ಖ್ಯಾತ ನಟಿ!

wayanad landslide car driver
ವೈರಲ್ ನ್ಯೂಸ್1 hour ago

Wayanad Landslide: ಒಂದು ಮೆಸೇಜ್‌ನಿಂದ ಉಳಿಯಿತು ಜೀವ! ವೈನಾಡಿನ ದುರಂತದ ನಡುವೆ ಪಾರಾದ ಕನ್ನಡಿಗ ಕಾರು ಚಾಲಕ

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್‌; 10 ಗ್ರಾಂಗೆ 800 ರೂ. ಹೆಚ್ಚಳ

anurag thakur
ದೇಶ1 hour ago

Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ18 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ23 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌