Suryakumar Yadav | ಕೊಹ್ಲಿಯ ಸಂದೇಶಕ್ಕೆ ಸೂರ್ಯಕುಮಾರ್​ ನೀಡಿದ ವಿಭಿನ್ನ ಶೈಲಿಯ ಪ್ರತಿಕ್ರಿಯೆ ಹೀಗಿತ್ತು - Vistara News

ಕ್ರಿಕೆಟ್

Suryakumar Yadav | ಕೊಹ್ಲಿಯ ಸಂದೇಶಕ್ಕೆ ಸೂರ್ಯಕುಮಾರ್​ ನೀಡಿದ ವಿಭಿನ್ನ ಶೈಲಿಯ ಪ್ರತಿಕ್ರಿಯೆ ಹೀಗಿತ್ತು

ಶತಕ ಬಾರಿಸಿದ ಸೂರ್ಯಕುಮಾರ್​ಗೆ ವಿರಾಟ್​ ಇನ್​ಸ್ಟಾಗ್ರಾಮ್​ ಮೂಲಕ ಶುಭಾಶಯ ಕೋರಿದ್ದರು. ಅದಕ್ಕೆ ಸೂರ್ಯ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

suryakumar yadav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್​ಕೋಟ್​ : ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್​ ಸ್ಟೇಡಿಯಮ್​ನಲ್ಲಿ ಶನಿವಾರ (ಜನವರಿ 7ರಂದು) ಭಾರತದ ಬ್ಯಾಟರ್​ ಸೂರ್ಯಕುಮಾರ್​ ಯಾದವ್ ಅಬ್ಬರಿಸಿದ್ದರು. ಗ್ರೌಂಡ್​ನ ಮೂಲೆಮೂಲೆಗೂ ಅವರು ಚೆಂಡನ್ನು ಕಳುಹಿಸಿದ್ದರು. ಅವರು ಕ್ರೀಸ್​ನಲ್ಲಿ ಇದ್ದಷ್ಟೂ ಹೊತ್ತು ಲಂಕಾ ಬೌಲರ್​ಗಳು ಎಲ್ಲಿಗೆ ಚೆಂಡೆಸೆಯುವುದು ಎಂಬ ಗೊಂದಲಕ್ಕೆ ಬಿದಿದ್ದರು. ಅವರ ಬ್ಯಾಟಿಂಗ್ ಅಬ್ಬರ ಆ ಮಟ್ಟಿಗೆ ಇತ್ತು ಹಾಗೂ ಟೀಮ್​ ಇಂಡಿಯಾದ ರನ್​ ಗ್ರಾಫ್​ ಏರುತ್ತಲೇ ಹೋಗಿತ್ತು.

ಸೂರ್ಯಕುಮಾರ್​ ಯಾದವ್​ ಒಟ್ಟು 51 ಎಸೆತಗಳನ್ನು ಎದುರಿಸಿ 112 ರನ್​ ಬಾರಿಸಿದ್ದರು. ಈ ಮೂಲಕ ಅವರು ಲಂಕಾ ವಿರುದ್ಧದ ಸರಣಿಯ ಗೆಲುವಿನ ರೂವಾರಿ ಎನಿಸಿಕೊಂಡರು. ಭಾರತ ತಂಡ ಈ ಪಂದ್ಯದಲ್ಲಿ 91 ರನ್​ಗಳ ಭರ್ಜರಿ ವಿಜಯ ಸಾಧಿಸಿದೆ. ಸೂರ್ಯನ ಈ ಅಬ್ಬರಕ್ಕೆ ಕ್ರಿಕೆಟ್​ ಜಗತ್ತೇ ಶಹಬ್ಬಾಸ್​ ಹೇಳುತ್ತಿದೆ. ಅಂತೆಯೇ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಕೂಡ ಇನ್​ಸ್ಟಾಗ್ರಾಮ್​ ಮೂಲಕ ಶುಭಾಶಯ ಹೇಳಿದ್ದರು. ಅದಕ್ಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ ರೀತಿ ವಿಭಿನ್ನವಾಗಿತ್ತು.

ಪಂದ್ಯದ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಮುಗಿದಿ ಕ್ಲಾಕ್​ ರೂಮ್​ಗೆ ನಿಧಾನವಾಗಿ ಬಂದು ಮೊಬೈಲ್​ ಓಪನ್ ಮಾಡಿ ಕೊಹ್ಲಿಗೆ ಪ್ರತಿಕ್ರಿಯೆಕೊಡುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

ಅಭಿಮಾನಿಗಳಿಗೆ ಕೈ ಕುಲುಕುತ್ತಾ ಡ್ರೆಸಿಂಗ್​ ರೂಮ್​ಗೆ ಕಾಲಿಟ್ಟ ಸೂರ್ಯಕುಮಾರ್ ಯಾದವ್​ ಮೊದಲು ಮೊಬೈಲ್​ ನೋಡುತ್ತಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿರಾಟ್​ ಕೊಹ್ಲಿ ಪ್ರಶಂಸೆಯ ಮೆಸೇಜ್​ ಅವರಿಗೆ ಕಾಣುತ್ತದೆ. ತಕ್ಷಣ ಅವರು ಬಹೂ, ಬಹುತ್ ಸಾರಾ ಪ್ಯಾರ್​ ಸೀ ಯು ಸೂನ್​ (ಸಹೋದರ ತುಂಬಾ ಪ್ರೀತಿ, ಬೇಗ ಸಿಗೋಣ) ಎಂದು ಬರೆಯುತ್ತಾರೆ.

ಇದನ್ನೂ ಓದಿ | Suryakumar Yadav | ಸೂರ್ಯಕುಮಾರ್​ ಯಾದವ್​ ಟಿ20 ಶತಕಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Virat Kohli: ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli: ಓವನ್​ ಒಳಗಡೆ ಹೋದ ಕಟ್ಲೆಟ್‌ ಹೊರಬಾರದೇ ಇದ್ದಾಗ ಕೊಹ್ಲಿ ಓವನ್​ ಒಳಗಡೆ ಕೈ ಕಾಕಿ ಕೊನೆಗೂ ಕಟ್ಲೆಟ್‌ ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Virat Kohli
Koo

ಬಾರ್ಬಡೋಸ್​: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಬಾರ್ಬಡೋಸ್​ನಲ್ಲಿ ತಾವು ತಂಗಿದ್ದ ಹೋಟೆಲ್​ನಲ್ಲಿ ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ(Kohli’s Breakfast Trouble) ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದೆ.

ಟಿ20 ವಿಶ್ವಕಪ್​ ಗೆಲುವಿನ ಬಳಿಕ ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿದ ಬೆರಿಲ್ ಚಂಡಮಾರುತದಿಂದಾಗಿ ಟೀಮ್​ ಇಂಡಿಯಾ ಆಟಗಾರರು 2 ದಿನಗಳ ಕಾಲ ಬಾರ್ಬಡೋಸ್​ನ ಹೋಟೆಲ್​ನಲ್ಲಿಯೇ ಉಳಿದುಕೊಂಡಿದ್ದರು. ಈ ವೇಳೆ ಕೊಹ್ಲಿ ಕಟ್ಲೆಟ್‌ ಅನ್ನು ಓವನ್​ನಲ್ಲಿ ಬಿಸಿ ಮಾಡಲು ಯತ್ನಿಸಿದ್ದಾರೆ. ಓವನ್​ ಒಳಗಡೆ ಹೋದ ಕಟ್ಲೆಟ್‌ ಹೊರಬಾರದೇ ಇದ್ದಾಗ ಕೊಹ್ಲಿ ಓವನ್​ ಒಳಗಡೆ ಕೈ ಕಾಕಿ ಕೊನೆಗೂ ಕಟ್ಲೆಟ್‌ ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಹೋಟೆಲ್​ನಲ್ಲಿ ತಿಂಡಿ ತಿನ್ನುತ್ತಿದ್ದವರು ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಸಹೋದರನಿಂದ ಭರ್ಜರಿ ಸ್ವಾಗತ


ಟಿ20 ವಿಶ್ವಕಪ್​ ಗೆದ್ದ ಭಾರತ ತಂಡ ಆಟಗಾರರು ಇಂದು(ಗುರುವಾರ) ನವದೆಹಲಿಗೆ ಆಗಮಿಸಿದರು. ಈ ವೇಳೆ ಕೊಹ್ಲಿಯ ಸಹೋದರ ವಿಕಾಸ್​ ಕೊಹ್ಲಿ ಮತ್ತು ಅವರ ಮಕ್ಕಳು ವಿಮಾನ ನಿಲ್ದಾಣದಲ್ಲಿ ಕೊಹ್ಲಿಯನ್ನು ಸ್ವಾಗತಿಸಿದ್ದಾರೆ. ಕೊಹ್ಲಿ ಗೆದ್ದ ಪದಕವನ್ನು ಕೊರಳಿಗೆ ಹಾಕಿ ಸಂಭ್ರಮಿಸಿದರು. ಈ ಫೋಟೊ ವೈರಲ್​ ಆಗಿದೆ.

ಇದನ್ನೂ ಓದಿ Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

ಚಂಡಮಾರುತದ ಅಬ್ಬರದ ದೃಶ್ಯವನ್ನು ವಿರಾಟ್​ ಕೊಹ್ಲಿ(virat kohli) ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಗೆ(Virat- Anushka) ವಿಡಿಯೊ ಕಾಲ್ ಮೂಲಕ ತೋರಿಸುತ್ತಿರುವ ವಿಡಿಯೊ ಇದೀಗ ವೈರಲ್​ ಆಗಿತ್ತು. ವಿರಾಟ್​ ಕೊಹ್ಲಿ ತಾವು ತಂಗಿರುವ ಹೊಟೇಲ್‌ ಕಿಟಕಿಯಿಂದ ಸಮುದ್ರದಲ್ಲಿ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳನ್ನು, ಮತ್ತು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಪತ್ನಿ ಅನುಷ್ಕಾಗೆ(anushka sharma) ವಿಡಿಯೊ ಕಾಲ್​ ಮೂಲಕ ತೋರಿಸಿದ್ದರು. ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಕೊಹ್ಲಿ ಯಾವುದೇ ಪಂದ್ಯ ಇರಲಿ ಇದು ಮುಕ್ತಾಯಗೊಂಡ ತಕ್ಷಣ ಪತ್ನಿಗೆ ವಿಡಿಯೊ ಕಾಲ್​ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಕ್ರಿಕೆಟ್​ ಸರಣಿ ಇದ್ದರೂ ಕೂಡ ಇದರಿಂದ ಹಿಂದೆ ಸರಿದು ಕುಟುಂಬದ ಜತೆ ಕಾಲ ಕಳೆಯುತ್ತಾರೆ.

ಟಿ20ಗೆ ವಿದಾಯ ಹೇಳಿದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಫೈನಲ್​ ಪಂದ್ಯದಲ್ಲಿ 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.

Continue Reading

ಕ್ರೀಡೆ

MS Dhoni: ಪತ್ನಿಗೆ ಕೇಕ್​ ತಿನ್ನಿಸಿ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ ಧೋನಿ; ವಿಡಿಯೊ ವೈರಲ್​

MS Dhoni: ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದರು. ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ. ಐಪಿಎಲ್​ ವೇಳೆ ಗ್ಯಾಲರಿಯಲ್ಲಿ ಕುಳಿತು ಅಪ್ಪನಿಗೆ ಚಿಯರ್​ ಅಪ್​ ಮಾಡುವ ದೃಶ್ಯಗಳು ಹಲವು ಬಾರಿ ವೈರಲ್​ ಆಗಿತ್ತು.

VISTARANEWS.COM


on

MS Dhoni
Koo

ರಾಂಚಿ​: ಟೀಮ್​ ಇಂಡಿಯಾದ ಮಾಜಿ ಆಟಗಾರ ಎಂ.ಎಸ್​ ಧೋನಿ ಮತ್ತು ಸಾಕ್ಷಿ ಸಿಂಗ್(Sakshi Dhoni)​ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 15 ವರ್ಷ ಕಳೆದಿದೆ. ಜುಲೈ 4, 2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್​ನಲ್ಲಿ ​ವಿವಾಹವಾಗಿದ್ದರು. ಇದೀಗ ದಂಪತಿ ಕೇಕ್​ ಕತ್ತರಿಸಿ(Wedding Anniversary MS Dhoni & Sakshi) ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

​ಸಾಮಾಜಿಕ ಜಾಲಾತಾಣದಿಂದ ದೂರ ಉಳಿದಿರುವ ಧೋನಿ, ತಮ್ಮ ಯಾವುದೇ ಶುಭ ಸಮಾಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೂ ಚೆನ್ನೈ ಸೂಪರ್ ಕಿಂಗ್ಸ್​ ಟ್ವಿಟರ್​​ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, “ನಮ್ಮ ರಾಜ ಮತ್ತು ರಾಣಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದಿದೆ. ಧೋನಿ ಅಭಿಮಾನಿ ಬಳಗದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಬಂದಿದೆ.

ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದರು. ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ. ಐಪಿಎಲ್​ ವೇಳೆ ಗ್ಯಾಲರಿಯಲ್ಲಿ ಕುಳಿತು ಅಪ್ಪನಿಗೆ ಚಿಯರ್​ ಅಪ್​ ಮಾಡುವ ದೃಶ್ಯಗಳು ಹಲವು ಬಾರಿ ವೈರಲ್​ ಆಗಿತ್ತು.

ಧೋನಿ ಆಗಸ್ಟ್​ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರ. ಸದ್ಯ ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿರುತ್ತಾರೆ.

ಇದನ್ನೂ ಓದಿ MS Dhoni Instagram Post: ಭಾರತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಚ್ಚರಿಯ ಪೋಸ್ಟ್ ಮಾಡಿದ ಧೋನಿ

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಐಪಿಎಲ್​ಗೂ ವಿದಾಯ ಹೇಳುವ ಮೂಲಕ ಎಲ್ಲ ಕ್ರಿಕೆಟ್​ಗೆ ಗುಡ್​ ಬೈ ಹೇಳಲಿದ್ದಾರೆ ಎನ್ನಲಾಗಿತ್ತು. ಚೆನ್ನೈ ತಂಡ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಧೋನಿ ಮಾತ್ರ ಐಪಿಎಲ್​ ವಿದಾಯ ಹೇಳಿಲ್ಲ. ಮುಂದಿನ ಆವೃತ್ತಿಯಲ್ಲಿಯೂ ಆಡುವ ನಿರೀಕ್ಷೆಯಲ್ಲಿದ್ದಾರೆ.

2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್​ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ 97 ರನ್​ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್​ ಸೊನ್ನೆಗೆ ಔಟಾಗಿದ್ದರೆ ಸಚಿನ್​​ ಕೊಡಗೆ 18 ರನ್​. ಆದರೆ, ಕೊನೇ ಹಂತದಲ್ಲಿ ಕ್ರೀಸ್​ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್​ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಲಂಕಾ ಬೌಲರ್​ ನುವಾನ್​ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್​ ಬಾರಿಸಿದ್ದರು. ಅದು ಭಾರತದ ವಿಜಯ ರನ್​ ಆಗಿತ್ತು. 

Continue Reading

ಕ್ರೀಡೆ

Team India Arrival: ಪ್ರಧಾನಿ ಮೋದಿ ಔತಣ ಕೂಟಕ್ಕೆ ತೆರಳಿದ ಟೀಮ್​ ಇಂಡಿಯಾ

Team India Arrival: ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡ ಬಳಿಕ ಮೋದಿ ಜತೆ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆ ನಡೆಸಿ ಬಳಿಕ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

VISTARANEWS.COM


on

Team India Arrival
Koo

ನವದೆಹಲಿ: ಟಿ20 ವಿಶ್ವಕಪ್​ ಟ್ರೋಫಿಯೊಂದಿಗೆ ತವರಿಗೆ ಮರಳಿದ ಟೀಮ್​ ಇಂಡಿಯಾ ಇದೀಗ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ(Team India Arrival) ಭೇಟಿ ನೀಡಿದೆ. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡ ಬಳಿಕ ಮೋದಿ ಜತೆ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆ ನಡೆಸಿ ಬಳಿಕ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ (Rohit Sharmaನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಭಾರತಕ್ಕೆ ಆಗಮಿಸಿದೆ. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ (Team India) ಆಟಗಾರರು ದೆಹಲಿಗೆ ಆಗಮಿಸಿದ್ದಾರೆ. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಬೆರಿಲ್ ಚಂಡಮಾರುತದಿಂದ ಉಂಟಾದ ವಿಳಂಬದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿತ್ತು. ಭಾರತೀಯ ಪತ್ರಕರ್ತರು, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ವಿಮಾನದಲ್ಲಿದ್ದರು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ವಿಮಾನ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ಜಯಘೋಷ ಕೂಗಿ ಸ್ವಾಗತಿಸಿದರು.

ಇದನ್ನೂ ಓದಿ Team India: ತವರಿಗೆ ಬಂದ ಖಷಿಯಲ್ಲಿ ಕುಣಿದು ಕುಪ್ಪಳಿಸಿದ ನಾಯಕ ರೋಹಿತ್​, ಹಾರ್ದಿಕ್​, ಪಂತ್; ವಿಡಿಯೊ ವೈರಲ್​​

ವಿಜಯಯಾತ್ರೆಗೆ ಸಕಲ ಸಿದ್ಧತೆ

ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್‌ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.

Continue Reading

ಕ್ರೀಡೆ

Team India: ತವರಿಗೆ ಬಂದ ಖಷಿಯಲ್ಲಿ ಕುಣಿದು ಕುಪ್ಪಳಿಸಿದ ನಾಯಕ ರೋಹಿತ್​, ಹಾರ್ದಿಕ್​, ಪಂತ್; ವಿಡಿಯೊ ವೈರಲ್​​

Team India: ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ ಗೆದ್ದಿರುವ ವಿಶ್ವಕಪ್‌ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ಹಸ್ತಾಂತರಿಸಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಯಲಿದೆ.

VISTARANEWS.COM


on

Team India
Koo

ನವದೆಹಲಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಚುಟುಕು ಕ್ರಿಕೆಟ್‌ನಲ್ಲಿ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಭಾರತ(Team India) ಕ್ರಿಕೆಟ್‌ ತಂಡ ಇಂದು (ಗುರುವಾರ) ಬೆಳಗ್ಗೆ ತವರಿಗೆ ಮರಳಲಿದೆ. ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಜನಸ್ತೋಮ ರೋಹಿತ್​ ಪಡೆಗೆ ಜೈಕಾರ, ಡೊಳ್ಳು, ತಮಟೆ ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ತಮಟೆ ಮತ್ತು ಡೊಳ್ಳಿನ ಸದ್ದಿಗೆ ರೋಹಿತ್​ ಶರ್ಮ(Rohit Sharma), ಹಾರ್ದಿಕ್​ ಪಾಂಡ್ಯ(Hardik Pandya), ರಿಷಭ್​ ಪಂತ್(Rishabh Pant)​ ವಿಶ್ವಕಪ್​ ಟ್ರೋಫಿಯನ್ನು ಕೈಯಲ್ಲಿ ಹಿಡಿದ ಮಸ್ತ್​ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ರೋಹಿತ್​ ಶರ್ಮ ವಿಶ್ವಕಪ್​ ಮೇಲೆತ್ತಿ ಪ್ರದರ್ಶಿಸಿದರು. ತಮಟೆ ಬಡಿಯುತ್ತಾ ಸ್ವಾಗತ ಕೋರುತ್ತಿದ್ದವ ಜತೆ ಒಂದೆಡರು ಹೆಜ್ಜೆ ಹಾಕಿ ಸಂಭ್ರಮಿಸಿದರು. ತಮಡೆ ಬಡಿಯುತ್ತಿರುವವರು ಕೂಡ ರೋಹಿತ್​ಗೆ ಸಾಥ್​ ನೀಡಿದರು. ನಾಯಕ ನೃತ್ಯ ಮಾಡುವುದನ್ನು ಕಂಡ ಉಪನಾಯಕ ಹಾರ್ದಿಕ್​ ಪಾಂಡ್ಯ, ವಿಕೆಟ್​ ಕೀಪರ್​ ರಿಷಭ್ ಪಂತ್​ ಕೂಡ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಕುಣಿದು ಕುಪ್ಪಳಿಸಿದರು.

ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಭಾರತಕ್ಕೆ ಬಂದಿಳಿದೆ. ವಿಮಾನ ನಿಲ್ದಾಣಕ್ಕೆ ತಂಡ ಆಗಮಿಸುತ್ತಿದ್ದಂತೆ ವಿಶ್ವಕಪ್​ ಟ್ರೋಫಿಯ ಆಕೃತಿಯ ಕೇಕ್​ ಕತ್ತರಿಸಲಾಯಿತು. ಇದೇ ವೇಳೆ ಕೊಹ್ಲಿಯ ಕುಟುಂಬಸ್ಥರು ಕೂಡ ಹಾಜರಾಗಿದ್ದರು.

ಭಾರತ ತಂಡದ ಆಟಗಾರರು 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೆಳಗ್ಗಿನ ತಿಂಡಿ ಸವಿಯಲಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿಯೇ ಭಾರತ ಕ್ರಿಕೆಟ್‌ ತಂಡದ ಆಟಗಾರರನ್ನು ಭೇಟಿಯಾಗಿ, ಅವರ ಜತೆ ತಿಂಡಿ ತಿನ್ನಲಿದ್ದಾರೆ. ಇದೇ ವೇಳೆ ಆಟಗಾರರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ಮೋದಿ ಭೇಟಿಯ ಬಳಿಕ ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಆಟಗಾರರು ಮುಂಬೈಗೆ ಆಗಮಿಸಿ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ ಗೆದ್ದಿರುವ ವಿಶ್ವಕಪ್‌ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ಹಸ್ತಾಂತರಿಸಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಯಲಿದೆ.

ಇದನ್ನೂ ಓದಿ Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬ ಸದಸ್ಯರು, ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ಭಾರತೀಯ ತಂಡದ ಆಟಗಾರರು ಗ್ರಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ವಿಶೇಷ ಚಾರ್ಟರ್ ವಿಮಾನ ಏರಿದ್ದರು. ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್‌ ಕಪ್‌ (Air India Champions 24 World Cup) ಎನ್ನುವ ಹೆಸರಿನ ವಿಮಾನವು ಬೆಳಿಗ್ಗೆ 6:20ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಇಂಟರ್​ನ್ಯಾಷನ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಬೆರಿಲ್ ಚಂಡಮಾರುತದಿಂದ ಉಂಟಾದ ವಿಳಂಬದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿತ್ತು.

ಜೂನ್‌ 29ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ 2024ರ ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಆ ಮೂಲಕ ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

Continue Reading
Advertisement
Electric shock
ಬೆಂಗಳೂರು ಗ್ರಾಮಾಂತರ17 mins ago

Electric shock : ಕತ್ತಲಲ್ಲಿ ಕೆಲಸಕ್ಕೆ ಹೋದವನಿಗೆ ಕರೆಂಟ್‌ ಶಾಕ್‌

Paris Olympics
ಕ್ರೀಡೆ21 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 9 ಅಥ್ಲೀಟ್​ಗಳು

Bigg Boss Telugu 8 Contestants List Leaked
ಬಿಗ್ ಬಾಸ್22 mins ago

Bigg Boss Telugu 8: ಶುರುವಾಗ್ತಿದೆ ಬಿಗ್​ಬಾಸ್ ತೆಲುಗು ಸೀಸನ್ 8; ಸ್ಪರ್ಧಿಗಳು ಯಾರೆಲ್ಲ?

Lonalva Tragedy
ದೇಶ34 mins ago

Lonavla Tragedy: ಲೋನಾವಲಾದಲ್ಲಿ ಇದುವರೆಗೆ 37 ದುರಂತ ಪ್ರಕರಣಗಳು; 47 ಮಂದಿ ದಾರುಣ ಸಾವು

Gold Rate Today
ಚಿನ್ನದ ದರ38 mins ago

Gold Rate Today: ಕೈ ಸುಡುತಿದೆ ಚಿನ್ನದ ದರ; ಆಭರಣ ಖರೀದಿಸುವ ಮುನ್ನ ಬೆಲೆ ಚೆಕ್‌ ಮಾಡಿ

Juhi Chawla mother-in-law uninvited nearly 2000 guests her wedding
ಬಾಲಿವುಡ್47 mins ago

Juhi Chawla: ಮದುವೆಗೆ 2000 ಜನಕ್ಕೆ ನೀಡಲಾಗಿತ್ತು ಆಮಂತ್ರಣ; ಆದರೆ ಅತ್ತೆ ಹಿಂಪಡೆದರು ಎಂದ ಜೂಹಿ ಚಾವ್ಲಾ!

Karnataka Rain
ಮಳೆ57 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

dengue fever mysore death
ಪ್ರಮುಖ ಸುದ್ದಿ1 hour ago

Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

Hathras Stampede
ದೇಶ1 hour ago

Hathras Stampede: ಹತ್ರಾಸ್‌ ಕಾಲ್ತುಳಿತಕ್ಕೆ ಸಮಾಜಘಾತುಕ ಶಕ್ತಿ ಕಾರಣ ಎಂದ ಭೋಲೇ ಬಾಬಾ

Virat Kohli
ಕ್ರೀಡೆ1 hour ago

Virat Kohli: ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ57 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ2 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ6 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

ಟ್ರೆಂಡಿಂಗ್‌