Motivational story | ಆ ವಿದ್ವಾಂಸನ ಅಹಂಕಾರ ನಡು ನೀರಲ್ಲಿ ಮುಳುಗಿತು! - Vistara News

ಪ್ರಮುಖ ಸುದ್ದಿ

Motivational story | ಆ ವಿದ್ವಾಂಸನ ಅಹಂಕಾರ ನಡು ನೀರಲ್ಲಿ ಮುಳುಗಿತು!

Motivational story | ಯಾವ ವೃತ್ತಿಯೂ ಸಣ್ಣದಲ್ಲ, ಅವಿದ್ಯಾವಂತನೂ ಕಡಿಮೆಯಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಘನತೆ ಇರುತ್ತದೆ ಎಂದು ನಡುನೀರಿನಲ್ಲಿ ಅರ್ಥವಾಯಿತು ಆ ವಿದ್ವಾಂಸರಿಗೆ.

VISTARANEWS.COM


on

Boat man
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- Motivational story
ಒಂದು ಸಾರಿ ಒಬ್ಬ ವಿದ್ವಾಂಸರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ದಾರಿಯಲ್ಲಿದ್ದರು. ಮಧ್ಯದಲ್ಲಿ ಒಂದು ನದಿ ಬಂತು. ನದಿಯ ದಡಕ್ಕೆ ಬಂದ ಅವರು ದೋಣಿಯವನನ್ನು ಕರೆದರು. ದೋಣಿಯವನು ಬಂದ. ಲೋಕಾಭಿರಾಮದ ಮಾತು ಶುರು ಮಾಡಿದ ವಿದ್ವಾಂಸರು ತನ್ನ ಜ್ಞಾನದ ಬಗ್ಗೆ ಹೇಳಿಕೊಂಡರು. ಕೊನೆಗೆ ಅಂಬಿಗನನ್ನು ಉದ್ದೇಶಿಸಿ ʻನೀನು ಏನೆಲ್ಲ ಓದಿಕೊಂಡಿದ್ದೀಯಾʼ ಎಂದು ಪ್ರಶ್ನಿಸಿದರು.

ಆಗ ದೋಣಿಗ: ಇಲ್ಲ ಸ್ವಾಮಿ.. ನಾನು ಹೆಚ್ಚು ಶಿಕ್ಷಣ ಪಡೆದವನಲ್ಲ. ನನ್ನ ಅಜ್ಜ, ಅಪ್ಪ, ಅಣ್ಣ ಎಲ್ಲರೂ ದೋಣಿ ನಡೆಸುವ ಕೆಲಸವನ್ನೇ ಪ್ರಮುಖವಾಗಿ ಮಾಡಿಕೊಂಡು ಬಂದವರು. ಹೀಗಾಗಿ ನಾನು ಈಜುವುದು, ದೋಣಿ ನಡೆಸುವುದು ಮೊದಲಾದ ಕೆಲಸವನ್ನಷ್ಟೇ ಕಲಿತೆ. ವಿದ್ಯೆಯ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ನನಗೆ ಅದರ ಅಗತ್ಯವೂ ಕಾಣಿಸಲಿಲ್ಲ.

ಆಗ ವಿದ್ವಾಂಸರು ಕೊಂಕು ಮಾತಿನಲ್ಲಿ ಹೇಳಿದರು: ಹೌದಾ? ನೀನು ಇಡೀ ಜೀವಮಾನವನ್ನು ವ್ಯರ್ಥ ಮಾಡಿಕೊಂಡುಬಿಟ್ಟೆ.. ಇರಲಿ ಬಿಡು.. ಹಣೆಬರಹ ನಿನ್ನದು. ಅದೆಲ್ಲ ಪಡೆದುಕೊಂಡು ಬಂದಿರಬೇಕು.

ವಿದ್ವಾಂಸರ ಮಾತಿನಿಂದ ದೋಣಿ ನಡೆಸುವವನಿಗೆ ಬೇಸರವಾಯಿತಾದರೂ ಆತ ಅದನ್ನು ತೋರಿಸಿಕೊಳ್ಳಲಿಲ್ಲ. ಬದಲಾಗಿ ತನ್ನ ಕಾಯಕದಂತೆ ಹುಟ್ಟುಹಾಕುತ್ತಾ ಮುಂದುವರಿಸಿದ. ಅದು ತುಂಬ ಅಗಲವಾದ ನದಿ. ಮಧ್ಯ ಭಾಗಕ್ಕೆ ಬರುತ್ತಿದ್ದಂತೆಯೇ ದೋಣಿ ಅಲ್ಲಾಡಲು ಶುರುವಾಯಿತು. ಅದು ಒಂದು ಸುಳಿಗೆ ಸಿಕ್ಕಿ ಹಾಕಿಕೊಂಡಿತ್ತು. ಒಮ್ಮಿಂದೊಮ್ಮೆಗೆ ನೀರಿನ ರಭಸವೂ ಹೆಚ್ಚಾಯಿತು. ದೋಣಿ ಸಂಕಷ್ಟದಲ್ಲಿ ಸಿಲುಕಿದ್ದು ಇಬ್ಬರಿಗೂ ಅರ್ಥವಾಯಿತು.

ಆಗ ದೋಣಿ ನಡೆಸುವವನು ಕೇಳಿದ: ವಿದ್ವಾಂಸರೇ ತಮಗೆ ಈಜಲು ಬರುತ್ತದೆಯೇ?
ವಿದ್ವಾಂಸರು ಮುಜುಗರದಿಂದ ನಡುಗುತ್ತಾ ಹೇಳಿದರು: ಇಲ್ಲ ನನಗೆ ಬರುವುದಿಲ್ಲ.

ಆಗ ದೋಣಿಗ ಹೇಳಿದ: ಓ ಹೌದಾ? ನಮ್ಮ ದೋಣಿ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ಬೋಟು ನೀರಿನಲ್ಲಿ ಮುಳುಗಲಿದೆ. ನಿಮ್ಮ ಎಲ್ಲ ಜ್ಞಾನವೂ ನೀರುಪಾಲಾಗಲಿದೆಯಲ್ವಾ?

ದೋಣಿಗ ಎಷ್ಟೇ ಪ್ರಯತ್ನಿಸಿದರೂ ಸುಳಿಯಿಂದ ಮೇಲೆ ಬರಲಿಲ್ಲ ದೋಣಿ. ದೋಣಿ ಮುಳುಗಿಯೇ ಬಿಟ್ಟಿತು. ವಿದ್ವಾಂಸರು ನೀರಿಗೆ ಬಿದ್ದರು. ಅವರ ಅಷ್ಟೂ ಜ್ಞಾನವೂ ನೀರಿನಲ್ಲಿ ನಡೆಯಲಿಲ್ಲ.

ವಿದ್ವಾಂಸರು ನೀರಿನಲ್ಲಿ ಮುಳುಗೇಳುತ್ತಾ ಸಹಾಯಕ್ಕಾಗಿ ಯಾಚಿಸತೊಡಗಿದರು. ದೋಣಿಗನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು, ಬೋಟನ್ನು ಉಳಿಸಿಕೊಳ್ಳಬೇಕು. ಅಷ್ಟಾದರೂ ಆತ ವಿದ್ವಾಂಸರನ್ನು ಹಿಡಿದುಕೊಂಡು ಹೋಗೋ ದಡ ಸೇರಿಸಿದ.

ವಿದ್ವಾಂಸರ ದುರಭಿಮಾನ ಅಲ್ಲಿ ನೀರುಪಾಲಾಗಿತ್ತು. ಇತರರು, ಯಾವುದೇ ವೃತ್ತಿಯವರಾಗಿರಬಹುದು, ಎಷ್ಟೇ ಅವಿದ್ಯಾವಂತರಾಗಿರಬಹುದು. ಯಾರನ್ನೂ ಅವಮಾನಿಸಬಾರದು ಎನ್ನುವುದು ನೀರಿನಲ್ಲಿ ಬಿದ್ದಾಗ ಅವರಿಗೆ ಅರಿವಾಯಿತು! ಹಾಗಂತ ದೋಣಿಗ ಏನನ್ನೂ ಹೇಳಲಿಲ್ಲ. ಹೇಳದೆಯೇ ಎಲ್ಲವನ್ನೂ ಅವನು ದಾಟಿಸಿ ಬಿಟ್ಟಿದ್ದ!

ಇದನ್ನೂ ಓದಿ | Motivational story | ನೆನಪಿರಲಿ ನಮ್ಮ ಮುಂದೆ ಯಾವತ್ತೂ ಒಬ್ಬ ಮಾಟಗಾತಿ ಇರ್ತಾಳೆ, ಅವಳು ಯಾವ ರೂಪದಲ್ಲಾದರೂ ಬರಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Bangalore North Lok Sabha Constituency : ಕ್ಷೇತ್ರ ಬದಲಾಯಿಸಿದ ಶೋಭಾ ಕರಂದ್ಲಾಜೆಗೆ ಒಲಿಯವುದೇ ಬೆಂಗಳೂರು ಉತ್ತರ

Bangalore North Lok Sabha Constituency:ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆದ್ದಿದ್ದಾರೆ. ಬಿಜೆಪಿಯಿಂದ ಪ್ರತಿಷ್ಠಿತ ಸ್ಥಾನವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ರಾಜ್ಯಸಭಾ ಸಂಸದ ರಾಜೀವ್ ಗೌಡ ಅವರನ್ನು ಕಣಕ್ಕಿಳಿಸಿದೆ.

VISTARANEWS.COM


on

Bangalore North Lok Sabha Constituency
Koo

ಬೆಂಗಳೂರು: 1962ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗುವ ಮೊದಲು ಬೆಂಗಳೂರು ಉತ್ತರ ಕ್ಷೇತ್ರ ಬೆಂಗಳೂರು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿದೆ. 1957 ರಿಂದ 1962ರವರೆಗೆ ಬೆಂಗಳೂರು ಉತ್ತರ ಬೆಂಗಳೂರು ನಗರ ಕ್ಷೇತ್ರದ ಭಾಗವಾಗಿತ್ತು. 1951ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೇಶವ್ ಲಿಂಗಾರ್ ಗೆದ್ದರು. ಅಂದಿನಿಂದ 1996 ರವರೆಗೆ 45 ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷ ಸತತವಾಗಿ ತನ್ನದಾಗಿಸಿಕೊಂಡಿತ್ತು. 1996ರಲ್ಲಿ ಜನತಾದಳದ ಸಿ. ನಾರಾಯಣಸ್ವಾಮಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ನಂತರ, ಬಿಜೆಪಿ ಇಲ್ಲಿ ಗೆಲ್ಲಲು ಪ್ರಾರಂಭಿಸಿತು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಈವರೆಗೆ ನಡೆದ 17 ಚುನಾವಣೆಗಳಲ್ಲಿ ಕಾಂಗ್ರೆಸ್ 12 ಬಾರಿ ಗೆಲುವು ಸಾಧಿಸಿದೆ. ಆದಾಗ್ಯೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಲ್ಲಿ ಬಿಜೆಪಿ ಪ್ರಭಾವ ಹೆಚ್ಚಿದೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ. ಈ ಸ್ಥಾನದಲ್ಲಿ ಜನತಾದಳ ಕೂಡ ಒಮ್ಮೆ ಗೆದ್ದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಈ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 1977-96 ರ ನಡುವೆ ಸತತ ಐದು ಗೆಲುವುಗಳು ಸೇರಿದಂತೆ ಏಳು ಬಾರಿ ಗೆದ್ದಿದ್ದರು. ಈ ಸ್ಥಾನವು ರಾಜ್ಯದ ಅತಿದೊಡ್ಡ ಮತ್ತು ದೇಶದ ಮೂರನೇ ಅತಿದೊಡ್ಡ ಲೋಕಸಭಾ ಸ್ಥಾನವಾಗಿದೆ.

ಕಣದಲ್ಲಿ ಇರುವವರು ಯಾರು?

ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆದ್ದು ಇ ಬಾರಿ ಇಲ್ಲಿಂದ ಟಿಕೆಟ್​ ಗಿಟ್ಟಿಸಿದ್ದಾರೆ. ಬಿಜೆಪಿಯಿಂದ ಈ ಪ್ರತಿಷ್ಠಿತ ಸ್ಥಾನವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ರಾಜ್ಯಸಭಾ ಸಂಸದ ರಾಜೀವ್ ಗೌಡ ಅವರನ್ನು ಕಣಕ್ಕಿಳಿಸಿದೆ.

ಭಾರತದ ಚುನಾವಣಾ ಆಯೋಗದ ಪ್ರಕಾರ 2019 ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 28,49,250. 2019ರಲ್ಲಿ ಶೇ.54.6ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರರಲ್ಲಿ ಸುಮಾರು 92% ರಷ್ಟಿದ್ದಾರೆ. ಕ್ಷೇತ್ರದ ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 78% ರಷ್ಟಿತ್ತು. ಎಸ್ಸಿ ಮತದಾರರು ಮತದಾರರಲ್ಲಿ ಸುಮಾರು 11% ರಷ್ಟಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿ 5 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 3 ಸ್ಥಾನಗಳನ್ನು ಹೊಂದಿದೆ.

ಹಿಂದಿನ ಚುನಾವಣಾ ಫಲಿತಾಂಶಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಭಾರತೀಯ ಜನತಾ ಪಾರ್ಟಿ ಪಕ್ಷದ ಕೃಷ್ಣ ಬೈರೇಗೌಡ ಅವರನ್ನು 1,47,518 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.52.84ರಷ್ಟು ಮತಗಳನ್ನು ಪಡೆದಿತ್ತು.

ಇದನ್ನೂ ಓದಿ: Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್​​ನ ಸಿ.ನಾರಾಯಣ ಸ್ವಾಮಿ ಅವರನ್ನು 2,29,764 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.52.95ರಷ್ಟು ಮತಗಳನ್ನು ಗಳಿಸಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಡಿ .ಬಿ.ಚಂದ್ರೇಗೌಡ ಅವರು ಕಾಂಗ್ರೆಸ್​​ನ ಸಿ.ಕೆ.ಜಾಫರ್ ಷರೀಫ್ ಅವರನ್ನು 59,665 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.45.21ರಷ್ಟು ಮತಗಳನ್ನು ಪಡೆದಿತ್ತು.

ಮತದಾನ ದಿನಾಂಕ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024 ರಂದು ಎರಡನೇ ಹಂತದ ಮತದಾನ ನಡೆಯಿತು. ಜೂನ್ 4, 2024 ರಂದು ಮತ ಎಣಿಕೆ ನಡೆಯಲಿದೆ.

Continue Reading

ರಾಯಚೂರು

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Raichur Lok Sabha Constituency: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ರಾಜಾ ಅಮರೇಶ್ವರ್‌ ನಾಯಕ್‌ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಅವರು ಖಾತೆ ತೆರೆಯುವ ಉತ್ಸಾಹದಲ್ಲಿದ್ದಾರೆ. ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮದ ಬಲ ಇದ್ದರೆ, ಕುಮಾರ್‌ ನಾಯಕ್‌ ಪರ ಯುವಕರ ಒಲವಿದೆ ಎನ್ನಲಾಗುತ್ತಿದೆ.

VISTARANEWS.COM


on

Raichur Lok Sabha Constituency
Koo

ರಾಯಚೂರು: ಭತ್ತದ ಜಿಲ್ಲೆಯಾದ ರಾಯಚೂರಿನಲ್ಲಿ ಲೋಕಸಭೆ ಚುನಾವಣೆ (Raichur Lok Sabha Constituency) ಸಮರವು ಮಹತ್ವ ಪಡೆದಿದ್ದು, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ (Raja Amareshwara Naik) ಹಾಗೂ ಕಾಂಗ್ರೆಸ್‌ನ ಜಿ. ಕುಮಾರ್‌ ನಾಯಕ್‌ (G Kumar Nayak) ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ರಾಜಾ ಅಮರೇಶ್ವರ್‌ ನಾಯಕ್‌ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಅವರು ಖಾತೆ ತೆರೆಯುವ ಉತ್ಸಾಹದಲ್ಲಿದ್ದಾರೆ.

ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮದ ಬಲವಿದೆ. ಹಲವು ಅಭಿವೃದ್ಧಿ ಕಾಮಗಾರಿಗಳ ಬಲ ಇದ್ದರೂ, ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ ಸಂಸದ ಹಿಂದೆ ಬಿದ್ದಂತೆ ಕಾಣಿಸುತ್ತಿದೆ. ರೈತರ ಆಕ್ರೋಶವೂ ಅವರ ವಿರುದ್ಧ ಇದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರರು ರಾಷ್ಟ್ರ ಮಟ್ಟದ ಚಿಂತನೆಯೊಂದಿಗೆ ವೋಟು ಹಾಕುವುದರಿಂದ ಅಮರೇಶ್ವರ ನಾಯಕ್‌ ಅವರಿಗೆ ವರದಾನವಾಗುವ ಸಾಧ್ಯತೆ ಇದೆ.

ರಾಜಾ ಅಮರೇಶ್ವರ ನಾಯಕ್

ಇನ್ನು, 1990ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಜಿ. ಕುಮಾರ್‌ ನಾಯಕ್‌ ಅವರು ನಿವೃತ್ತಿ ಹೊಂದಿದ್ದು, ಈಗ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸುವ ತವಕದಲ್ಲಿದ್ದಾರೆ. 1999ರಿಂದ 2002 ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್‌ ನಾಯಕ್‌ ಅವರಿಗೆ ಜಿಲ್ಲೆಯ ಜತೆ ಒಡನಾಟವಿದೆ. ಐಎಎಸ್‌ ಅಧಿಕಾರಿಯಾಗಿದ್ದರು ಎಂಬ ಸಾಫ್ಟ್‌ ಕಾರ್ನರ್‌, ಯುವಕರ ಬೆಂಬಲವು ಅವರ ಜತೆಗಿದೆ. ಹಾಗಾಗಿ, ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ್‌ ಹಾಗೂ ಕುಮಾರ್‌ ನಾಯಕ್‌ ಮಧ್ಯೆ ಪೈಪೋಟಿ ಅಂತೂ ಇದೆ. ‌

ಜಿ ಕುಮಾರ್‌ ನಾಯಕ್

2019, 2014ರಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜಾ ಅಮರೇಶ್ವರ್‌ ನಾಯಕ್‌ ಅವರು ಕಾಂಗ್ರೆಸ್‌ನ ಬಿ.ವಿ. ನಾಯಕ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ರಾಜಾ ಅಮರೇಶ್ವರ್‌ ನಾಯಕ್‌ ಅವರು 1.17 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ. ನಾಯಕ್‌ ಅವರು ಬಿಜೆಪಿಯ ಶಿವನಗೌಡ ನಾಯಕ್‌ ವಿರುದ್ಧ ಕೇವಲ 1,499 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2019ರಲ್ಲಿ ರಾಜಾ ಅಮರೇಶ್ವರ್‌ ನಾಯಕ್‌ ಅವರಿಗೆ ಮೋದಿ ಅಲೆಯು ವರದಾನವಾಗಿತ್ತು.

ಮತದಾರರ ಸಂಖ್ಯೆ

ಪುರುಷರು9.55 ಲಕ್ಷ
ಮಹಿಳೆಯರು9.71 ಲಕ್ಷ
ಲಿಂಗತ್ವ ಅಲ್ಪಸಂಖ್ಯಾತರು367
ಒಟ್ಟು19.28 ಲಕ್ಷ

1957ರಿಂದ 2019ರ ಅವಧಿಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ 17 ಬಾರಿ ಚುನಾವಣೆ ನಡೆದಿದೆ. 17ರಲ್ಲಿ 13 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಎರಡು ಬಾರಿ ಬಿಜೆಪಿ, ಒಮ್ಮೆ ಸ್ವತಂತ್ರ ಪಕ್ಷ ಹಾಗೂ ಒಮ್ಮೆ ಜೆಡಿಎಸ್‌ ಅಭ್ಯರ್ಥಿಯು ಗೆಲುವು ಸಾಧಿಸಿದ್ದಾರೆ.

ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿಯ ಮೂರು, ರಾಯಚೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಐದರಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವವೂ ಇರುವುದು ಮೈತ್ರಿ ಪಕ್ಷವಾದ ಬಿಜೆಪಿಗೆ ಹೆಚ್ಚಿನ ಅನುಕೂಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bidar Lok Sabha Constituency: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಹಳೇ ಬೇರು Vs ಹೊಸ ಚಿಗುರು; ಖೂಬಾ, ಖಂಡ್ರೆ ಕದನದಲ್ಲಿ ಜಯ ಯಾರಿಗೆ?

Continue Reading

ದೇಶ

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

Arvind Kejriwal: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಈ ಹಿಂದೆ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚುನಾವಣೆ ಪೂರ್ಣಗೊಂಡ ಮರುದಿನವೇ ಜೈಲಿಗೆ ಮರಳುವಂತೆ ಕೋರ್ಟ್‌ ಹೇಳಿತ್ತು. ಅದರಂತೆ ಅವರು 21 ದಿನಗಳ ಬಳಿಕ ಶರಣಾಗಿದ್ದಾರೆ.

ಕೇಜ್ರಿವಾಲ್‌ ಜೈಲಿಗೆ ತೆರಳುವ ಮುನ್ನ ರಾಜ್‌ ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಪತ್ನಿ ಸುನೀತಾ ಅವರೊಂದಿಗೆ ಹನುಮಾನ್‌ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಮ್‌ ಆದ್ಮಿ ಪಾರ್ಟಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಇನ್ನು ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ಜೂ. 5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ʼʼಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದ್ದರು. ಜತೆಗೆ ʼʼದೆಹಲಿಯ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆʼʼ ಎಂದು ಭರವಸೆ ನೀಡಿದ್ದರು.

ʼʼನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಜೈಲಿನಲ್ಲಿ ನಿಮ್ಮ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ನಡುವೆ ಇರುವುದಿಲ್ಲ, ಆದರೆ ನಿಮ್ಮ ಎಲ್ಲ ಕೆಲಸಗಳು ಮುಂದುವರಿಯುತ್ತವೆ. ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂ.ಗಳನ್ನು ನೀಡಲು ಪ್ರಾರಂಭಿಸುತ್ತೇನೆ” ಎಂದು ಕೇಜ್ರಿವಾಲ್‌ ಭಾವುಕರಾಗಿ ಹೇಳಿದ್ದರು.

ವೈದ್ಯಕೀಯ ಪರೀಕ್ಷೆಗಳಿಗಾಗಿ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸುವ ಮನವಿಯನ್ನು ತುರ್ತಾಗಿ ಪರಿಗಣಿಸಲು ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ ನಂತರ ಅವರು ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯುವ ಆಯ್ಕೆಯನ್ನು ಹೊಂದಿರುವುದರಿಂದ ಅವರ ಮನವಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೈಕೋರ್ಟ್​ ಹೇಳಿತ್ತು.

ಇದನ್ನೂ ಓದಿ: Arvind Kejriwal: ತಿಹಾರ್‌ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್‌ ಫಸ್ಟ್‌ ನೈಟ್‌ ಹೇಗಿತ್ತು?

ಹೆಚ್ಚಿನ ಕೀಟೋನ್ ಮಟ್ಟ ಹೆಚ್ಚಳದಿಂದಾಗಿ ತೂಕ ನಷ್ಟದಿಂದಾಗಿ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಕೇಜ್ರಿವಾಲ್ ತಮ್ಮ ಮಧ್ಯಂತರ ಜಾಮೀನು ವಿಸ್ತರಣೆ ಕೋರಿದ್ದರು. ಈ ರೋಗಲಕ್ಷಣಗಳು ಮೂತ್ರಪಿಂಡದ ಸಮಸ್ಯೆಗಳು, ಗಂಭೀರ ಹೃದಯದ ಪರಿಸ್ಥಿತಿಗಳು ಅಥವಾ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಆಪ್​ ವಕೀಲರು ವಾದಿಸಿದ್ದರು.

Continue Reading

ಪ್ರಮುಖ ಸುದ್ದಿ

Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

Bangalore Central Election : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024 ರಂದು ಎರಡನೇ ಹಂತದ ಮತದಾನ ನಡೆಯಿತು. ಜೂನ್ 4, 2024 ರಂದು ಮತ ಎಣಿಕೆ ನಡೆಯಲಿದೆ. 2009ರಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ.ಮೋಹನ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

VISTARANEWS.COM


on

Bangalore Central ElectionWill PC Mohan's unbeaten run continue in Bengaluru Central Lok Sabha constituency?
Koo

ಬೆಂಗಳೂರು: ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರವೂ (Bangalore Central Election ) ಒಂದು. ಬೆಂಗಳೂರು 2008 ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ದಕ್ಷಿಣ ಮತ್ತು ಬೆಂಗಳೂರು ಉತ್ತರದಿಂದ ಬೇರ್ಪಟ್ಟು ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು. ಈ ಕ್ಷೇತ್ರವು ಗಮನಾರ್ಹ ಅಲ್ಪಸಂಖ್ಯಾತ ಮತದಾರರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಸುಮಾರು 5.5 ಲಕ್ಷ ತಮಿಳರೇ ಇದ್ದಾರೆ. 4.5 ಲಕ್ಷ ಮುಸ್ಲಿಮರು ಮತ್ತು ಸುಮಾರು 2 ಲಕ್ಷ ಕ್ರಿಶ್ಚಿಯನ್ನರು ಕೂಡ ನೆಲೆಯಾಗಿದ್ದಾರೆ. ಮಾರ್ವಾಡಿಗಳು ಮತ್ತು ಗುಜರಾತ್​ನಿಂದ ಬಂದವರೂ ಇದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಅದರಲ್ಲಿ ಎರಡು ಮೀಸಲು ಕ್ಷೇತ್ರಗಳಾಗಿವೆ. ಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಆರಂಭದಲ್ಲೇ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 2019 ಬಳಿಕ ನಡೆದ ಮೂರು ಚುನಾವಣೆಗಗಲ್ಲಿ ಬಿಜೆಪಿಯೇ ಗೆದ್ದಿದೆ.

ಪ್ರಮುಖ ಅಭ್ಯರ್ಥಿಗಳು ಯಾರು?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024 ರಂದು ಎರಡನೇ ಹಂತದ ಮತದಾನ ನಡೆಯಿತು. ಜೂನ್ 4, 2024 ರಂದು ಮತ ಎಣಿಕೆ ನಡೆಯಲಿದೆ. 2009ರಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ.ಮೋಹನ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕರು. ಮೋಹನ್ ಪ್ರತಿ ಬಾರಿಯೂ ಬೆಂಗಳೂರು ಕೇಂದ್ರ ಲೋಕಸಭಾ ಸ್ಥಾನವನ್ನು ಆರಾಮದಾಯಕ ಅಂತರದಿಂದ ಗೆದ್ದಿದ್ದಾರೆ. ಈ ಬಾರಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಪಿ.ಸಿ.ಮೋಹನ್ ಅವರನ್ನು ಉಳಿಸಿಕೊಂಡಿದೆ ಮತ್ತು ಅವರು ಈ ಸ್ಥಾನದಿಂದ ನಾಲ್ಕನೇ ಬಾರಿಗೆ ಮರುಚುನಾವಣೆಯ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ನಿಂದ ಮನ್ಸೂರ್ ಅಲಿ ಖಾನ್ ಕಣದಲ್ಲಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಪಕ್ಷದ ಹಿರಿಯ ರೆಹಮಾನ್ ಖಾನ್ ಅವರ ಪುತ್ರ.

ಇದನ್ನೂ ಓದಿ: Lok Sabha Election 2024 : ಸೂರ್ಯನ ತೇಜಸ್ಸು ಕಡಿಮೆ ಮಾಡಲು ಸೌಮ್ಯ ಹೋರಾಟ ಸಾಲುವುದೇ?

2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ, ಸುಮಾರು 2106031 ನಗರ ಮತದಾರರು ಸುಮಾರು 95.5% ಮತದಾರರನ್ನು ಹೊಂದಿದ್ದಾರೆ. ಕ್ಷೇತ್ರದ ಸರಾಸರಿ ಸಾಕ್ಷರತಾ ಪ್ರಮಾಣವು 78.05% ಆಗಿತ್ತು. ಎಸ್ಸಿ ಮತದಾರರು ಸುಮಾರು 16% ರಷ್ಟಿದ್ದರೆ, ಮುಸ್ಲಿಂ ಮತದಾರರು 17.5% ರಷ್ಟಿದ್ದಾರೆ.

ಹಿಂದಿನ ಬಾರಿ ಗೆಲುವು

2019ರ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ಅವರು 6,02,853 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ 5,31,885 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ 28,906 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.

2014ರ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ಅವರು ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ (4.19 ಲಕ್ಷ) ಅವರನ್ನು 1.37 ಲಕ್ಷ ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಶೇ.55ರಷ್ಟು ಮತದಾನವಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ ಮೂರನೇ ಸ್ಥಾನದಲ್ಲಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿ.ಸಿ.ಮೋಹನ್ ಅವರು ಕಾಂಗ್ರೆಸ್​​ನ ಎಚ್.ಟಿ.ಸಾಂಗ್ಲಿಯಾನ ಅವರನ್ನು 35,218 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.40.16ರಷ್ಟು ಮತಗಳನ್ನು ಪಡೆದಿತ್ತು.

ಸುತ್ತಲಿನ ಕ್ಷೇತ್ರಗಳು ಯಾವುವು?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ತನ್ನ ಗಡಿಯನ್ನು ಇತರ ನಾಲ್ಕು ಲೋಕಸಭಾ ಕ್ಷೇತ್ರಗಳೊಂದಿಗೆ ಹಂಚಿಕೊಂಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ. ಈ ಕ್ಷೇತ್ರವು ಅಂತರರಾಜ್ಯ ಗಡಿಯನ್ನು ಹಂಚಿಕೊಂಡಿದೆ.

Continue Reading
Advertisement
Bangalore North Lok Sabha Constituency
ದೇಶ2 mins ago

Bangalore North Lok Sabha Constituency : ಕ್ಷೇತ್ರ ಬದಲಾಯಿಸಿದ ಶೋಭಾ ಕರಂದ್ಲಾಜೆಗೆ ಒಲಿಯವುದೇ ಬೆಂಗಳೂರು ಉತ್ತರ

Congress leader Celebration
ಕರ್ನಾಟಕ4 mins ago

Congress leader Celebration: ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಕಾಂಗ್ರೆಸ್‌ ಮುಖಂಡ; ವಿಡಿಯೊ ವೈರಲ್‌

Karnataka Weather Forecast
ಮಳೆ46 mins ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ48 mins ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು1 hour ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Accident Case
ಕ್ರೈಂ1 hour ago

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Lok Sabha Election 2024
ಕರ್ನಾಟಕ1 hour ago

Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Aam Panna Recipe
ಆಹಾರ/ಅಡುಗೆ2 hours ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Arvind Kejriwal
ದೇಶ2 hours ago

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

GST Collection
ವಾಣಿಜ್ಯ2 hours ago

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌