Virat Kohli | ನೀಮ್​ ಕರೋಲಿ ಬಾಬಾ ಕೃಪೆ; ಶತಕ ಬಾರಿಸಿ ಹಲವು ದಾಖಲೆ ಬರೆದ ವಿರಾಟ್​ ಕೊಹ್ಲಿ - Vistara News

ಕ್ರಿಕೆಟ್

Virat Kohli | ನೀಮ್​ ಕರೋಲಿ ಬಾಬಾ ಕೃಪೆ; ಶತಕ ಬಾರಿಸಿ ಹಲವು ದಾಖಲೆ ಬರೆದ ವಿರಾಟ್​ ಕೊಹ್ಲಿ

ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ (Virat Kohli) ಲಂಕಾ ವಿರುದ್ಧ ಶತಕ ಬಾರಿಸಲು ಉತ್ತರ ಪ್ರದೇಶದ ಕರೋಲಿ ಬಾಬಾ ಆಶೀರ್ವಾದವೇ ಕಾರಣ ಎಂದು ಹೇಳಲಾಗುತ್ತಿದೆ.

VISTARANEWS.COM


on

virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುವಾಹಟಿ : ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅವರು 87 ಎಸೆತಗಳಲ್ಲಿ 12 ಫೋರ್​ ಹಾಗೂ ಒಂದು ಸಿಕ್ಸರ್​ ನೆರವಿನಿಂದ 113 ರನ್​ ಬಾರಿಸಿದ್ದಾರೆ. ಅವರ ಶತಕ ನೆರವಿನಿಂದ ಭಾರತ ತಂಡದ ಲಂಕಾ ವಿರುದ್ಧ 373 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ. ಈ ಮೂಲಕ ಭಾರತದ ಸ್ಟಾರ್​ ಬ್ಯಾಟರ್ ಹೊಸ ವರ್ಷದಲ್ಲಿ ಶುಭಾರಂಭ ಮಾಡಿದ್ದಾರೆ. ವಿರಾಟ್​ ಕೊಹ್ಲಿಗೆ 2023ರಲ್ಲಿ ಮೊದಲ ಪಂದ್ಯವಾಗಿದ್ದು ಅದರಲ್ಲೇ ಶತಕ ಬಾರಿಸುವ ಮೂಲಕ ಮಿಂಚಿದ್ದಾರೆ. ಆದರೆ, ಕೊಹ್ಲಿಯ ಈ ಸಾಧನೆಗೆ ಉತ್ತರ ಪ್ರದೇಶದ ಕರೋಲಿ ಬಾಬಾ ಅವರ ಕೃಪೆ ಕಾರಣ ಎಂದು ಹೇಳಲಾಗುತ್ತಿದೆ.

ನೀಮ್​ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದ ವಿರಾಟ್​ ಕೊಹ್ಲಿ ದಂಪತಿಯ ಚಿತ್ರ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಅವಧಿಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಪತಿಯನ್ನು ನಾನಾ ತೀರ್ಥ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದರು. ಅದರಲ್ಲೊಂದು ಉತ್ತರ ಪ್ರದೇಶದ ನೀಮ್​ ಕರೋಲಿ ಬಾಬಾ ಮಂದಿರ. ಅಲ್ಲಿಗೆ ಪುತ್ರಿ ವಾಮಿಕಾ ಜತೆಗೆ ಭೇಟಿ ನೀಡಿದ್ದ ದಂಪತಿ ಹರಕೆ ಸಲ್ಲಿಕೆ ಮಾಡಿದ್ದರು. ಅಲ್ಲಿನ ಸಂತರು ಕೊಹ್ಲಿ ಹಾಗೂ ಅನುಷ್ಕಾ ದಂಪತಿಗೆ ಪ್ರಸಾದ ನೀಡಿ ಹರಸಿದ್ದರು. ಅದರ ಪರಿಣಾಮ ಮೊದಲ ಪಂದ್ಯದಲ್ಲೇ ಕೊಹ್ಲಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ವಿರಾಟ್​ ಕೊಹ್ಲಿ ದಂಪತಿ ಕರೊಲಿ ಬಾಬಾ ಅಲ್ಲದೆ, ಉತ್ತರಾಖಂಡದ ಹಲವು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ರಾಮ ಮತ್ತು ಸೀತಾ ಮಂದಿರಗಳಿಗೂ ಅವರು ಭೇಟಿ ನೀಡಿದ್ದರು. ಬ್ಯಾಟಿಂಗ್​ನಲ್ಲಿ ಫಾರ್ಮ್​ ಕಳೆದುಕೊಂಡು ಟೀಕೆಗಳನ್ನು ಎದುರಿಸಿದ್ದ ವಿರಾಟ್​ಗೆ ದೇವರ ದರ್ಶನದಿಂದ ಮಾನಸಿಕ ನೆಮ್ಮದಿ ಲಭಿಸಿತ್ತು. ಇದೀಗ ಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಲಂಕಾ ವಿರುದ್ಧದ ಶತಕ ವಿರಾಟ್​ ಕೊಹ್ಲಿಯ 73ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಇದರಲ್ಲಿ 45 ಏಕ ದಿನ ಮಾದರಿಯದ್ದಾದರೆ ಒಂದು ಟಿ20 ಮಾದರಿಯಲ್ಲಿನ ಶತಕ. ಟೆಸ್ಟ್​ ಕ್ರಿಕೆಟ್​ನಲ್ಲಿ 27 ಶತಕಗಳು ಸೇರಿಕೊಂಡಿವೆ. ಈ ಶತಕದೊಂದಿಗೆ ತವರು ನೆಲದಲ್ಲಿ 20 ಏಕ ದಿನ ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್​ ಸರಿಗಟ್ಟಿದ್ದಾರೆ. ಅಲ್ಲೇ ಲಂಕಾ ವಿರುದ್ಧ 9ನೇ ಶತಕ ಬಾರಿಸುವ ಮೂಲಕ ದ್ವೀಪ ರಾಷ್ಟ್ರದ ತಂಡದ ವಿರುದ್ಧ ಗರಿಷ್ಠ ಏಕ ದಿನ ಶತಕ ಬಾರಿಸಿದ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್​ ಕೊಹ್ಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Irfan Pathan : ಇರ್ಫಾನ್ ಪಠಾಣ್​ ಮೇಕಪ್ ಆರ್ಟಿಸ್ಟ್​​ ವೆಸ್ಟ್​ ಇಂಡೀಸ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿ ಶವವಾಗಿ ಪತ್ತೆ!

Irfan Pathan : ಐಸಿಸಿ ಟಿ 20 ವಿಶ್ವಕಪ್ 2024 ಪ್ರಸ್ತುತ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿದೆ. ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿವೆ. ಪಠಾಣ್ ವಿಂಡೀಸ್​ಗೆ ತೆರಳಿದ್ದು ಅನ್ಸಾರಿಯೂ ಹೋಗಿದ್ದಾರೆ. ಜೂನ್ 21 ರ ಶುಕ್ರವಾರ ಸಂಜೆ ಅನ್ಸಾರಿ ಹೋಟೆಲ್ ಈಜುಕೊಳದಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವೆಸ್ಟ್ ಇಂಡೀಸ್ ನಿಂದ ಮಾಹಿತಿ ಸಿಕ್ಕಿದೆ.

VISTARANEWS.COM


on

Irfan Pathan
Koo

ನವದೆಹಲಿ: ಟಿ 20 ವಿಶ್ವಕಪ್​​ನ ವೀಕ್ಷಕ ವಿವರಣೆ ತಂಡದ ಭಾಗವಾಗಿ ವೆಸ್ಟ್​ ಇಂಡೀಸ್​ಗೆ ಹೋಗಿದ್ದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಮೇಕಪ್​ ಆರ್ಟಿಸ್ಟ್​ ಫಯಾಜ್ ಅನ್ಸಾರಿ ಇಂಡೀಸ್​ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಫಯಾಜ್​ ಅವರು ವಿಶ್ವ ಕಪ್ ಹಿನ್ನೆಲೆಯಲ್ಲಿ ವೆಸ್ಟ್​ ಇಂಡೀಸ್​​ಗೆ ತೆರಳಿದ್ದರು. ಈ ದುರಂತ ಘಟನೆಯು ಅವರ ಕುಟುಂಬಕ್ಕೆ ಆಘಾತ ತಂದಿದೆ. ಫಯಾಜ್ ಅನ್ಸಾರಿ ಉತ್ತರ ಪ್ರದೇಶದ ಬಿಜ್ನೋರ್​​ ನಾಗಿನಾ ಮೂಲದವರು.

22 ವರ್ಷಗಳ ಹಿಂದೆ, ಬಿಜ್ನೋರ್​ನ ನಾಗಿನಾ ತಹಸಿಲ್​​ನ ಮೊಹಲ್ಲಾ ಖಾಜಿ ಸರಾಯ್ನ ಫಯಾಜ್ ಅನ್ಸಾರಿ ಮುಂಬೈಗೆ ತೆರಳಿ ತಮ್ಮದೇ ಆದ ಸಲೂನ್ ಪ್ರಾರಂಭಿಸಿದ್ದರು. ಈ ಸಮಯದಲ್ಲಿ, ಪಠಾಣ್ ಮೇಕಪ್​ಗಾಗಿ ಅವರ ಸಲೂನ್​ಗೆ ಭೇಟಿ ನೀಡಲು ಪ್ರಾರಂಭಿಸಿದರು. ತರುವಾಯ, ಮಾಜಿ ಆಲ್​ರೌಂಡರ್​ ಅನ್ಸಾರಿಯನ್ನು ತಮ್ಮ ವೈಯಕ್ತಿಕ ಮೇಕಪ್ ಕಲಾವಿದನನ್ನಾಗಿ ಇಟ್ಟುಕೊಂಡಿದ್ದರು. ಅವರನ್ನು ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಕರೆದೊಯ್ಯುತ್ತಿದ್ದರು.

ಐಸಿಸಿ ಟಿ 20 ವಿಶ್ವಕಪ್ 2024 ಪ್ರಸ್ತುತ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿದೆ. ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿವೆ. ಪಠಾಣ್ ವಿಂಡೀಸ್​ಗೆ ತೆರಳಿದ್ದು ಅನ್ಸಾರಿಯೂ ಹೋಗಿದ್ದಾರೆ. ಜೂನ್ 21 ರ ಶುಕ್ರವಾರ ಸಂಜೆ ಅನ್ಸಾರಿ ಹೋಟೆಲ್ ಈಜುಕೊಳದಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವೆಸ್ಟ್ ಇಂಡೀಸ್ ನಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ನತಾಶಾಗೆ ವಿಚ್ಛೇದನ ಕೊಡುವುದು ಖಾತರಿ ಎಂದ ಟೀಮ್​ ಇಂಡಿಯಾ ಆಟಗಾರ

ಅನ್ಸಾರಿ ಅವರ ಸೋದರಸಂಬಂಧಿ ಮೊಹಮ್ಮದ್ ಅಹ್ಮದ್ ಅವರ ಪ್ರಕಾರ, ಅವರು ಕೇವಲ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು. ಎಂಟು ದಿನಗಳ ಹಿಂದೆಯಷ್ಟೇ ಬಿಜ್ನೋರ್​ನ ನಾಗಿನಾದಿಂದ ಮುಂಬೈಗೆ ಹೋಗಿದ್ದರು. ಹಠಾತ್ ಅಪಘಾತವು ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ. ಅವರ ಪತ್ನಿ ಮತ್ತು ಸಂಬಂಧಿಕರು ದುಃಖಿತರಾಗಿದ್ದರು.

ಅನ್ಸಾರಿ ಅವರ ದೇಹವನ್ನು ಭಾರತಕ್ಕೆ ತರಲು ಇರ್ಫಾನ್ ಪಠಾಣ್ ಸ್ವತಃ ವೆಸ್ಟ್ ಇಂಡೀಸ್​ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಕುಟುಂಬವು ದೆಹಲಿಯಲ್ಲಿ ಶವವನ್ನು ಸ್ವೀಕರಿಸಲು ಯೋಜನೆ ರೂಪಿಸಿದೆ. ಇದು ಸುಮಾರು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ

Continue Reading

ಪ್ರಮುಖ ಸುದ್ದಿ

Hardik Pandya : ಹಾರ್ದಿಕ್ ಪಾಂಡ್ಯ ನತಾಶಾಗೆ ವಿಚ್ಛೇದನ ಕೊಡುವುದು ಖಾತರಿ ಎಂದ ಟೀಮ್​ ಇಂಡಿಯಾ ಆಟಗಾರ

Hardik Pandya : ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವರದಿಗಳೊಂದಿಗೆ ಅವರ ಜೀವನದಲ್ಲಿ ಭಾವನಾತ್ಮಕ ಪ್ರಕ್ಷುಬ್ಧತೆಗೆ ಕಾರಣವಾಯಿತು. ಇದೀಗ ಅವರ ಕುಟುಂಬದಲ್ಲಿ ಸಮಸ್ಯೆ ಆಗಿರುವುದು ಹೌದು ಎಂದು ಟೀಮ್ ಇಂಡಿಯಾ ಆಟಗಾರರೊಬ್ಬರು ಹೇಳಿದ್ದಾರೆ. ನತಾಶಾ ಜತೆಗೆ ಅವರ ಸಂಬಂಧ ಮುರಿದು ಬೀಳುವುದು ಬಹುತೇಕ ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

VISTARANEWS.COM


on

Hardik Pandya
Koo

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024) ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಪ್ರದರ್ಶನವು ಗಮನ ಸೆಳೆದಿದೆ. ಮುಂಬೈ ಇಂಡಿಯನ್ಸ್ ನಾಯಕರಾಗಿ ಅವರು ಐಪಿಎಲ್ 2024 ರ ಕಳಪೆ ಋತುವಿನ ನಂತರ ವಿಶ್ವ ಕಪ್​ಗೆ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಅವರು ಪ್ರದರ್ಶನದ ಬಗ್ಗೆ ಅನುಮಾನಗಳು ಇದ್ದವು. ಇದೀಗ ಎಲ್ಲ ಅನುಮಾನಗಳಿಗೆ ಪರಿಹಾರ ಕೊಟ್ಟಿದ್ದು, ಬ್ಯಾಟ್ ಮೂಲಕ ಮಿಂಚಿದ್ದಾರೆ.

ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ನಾಯಕನ ಸ್ಥಾನದಿಂದ ಇಳಿಸಿ ಹಾರ್ದಿಕ್​ಗೆ ಪಟ್ಟ ಕಟ್ಟಿದ್ದಕ್ಕಾಗಿ ಭಾರಿ ಟೀಕೆಗಳನ್ನು ಎದುರಿಸಿದ್ದರು. ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವರದಿಗಳೊಂದಿಗೆ ಅವರ ಜೀವನದಲ್ಲಿ ಭಾವನಾತ್ಮಕ ಪ್ರಕ್ಷುಬ್ಧತೆಗೆ ಕಾರಣವಾಯಿತು. ಇದೀಗ ಅವರ ಕುಟುಂಬದಲ್ಲಿ ಸಮಸ್ಯೆ ಆಗಿರುವುದು ಹೌದು ಎಂದು ಟೀಮ್ ಇಂಡಿಯಾ ಆಟಗಾರರೊಬ್ಬರು ಹೇಳಿದ್ದಾರೆ. ನತಾಶಾ ಜತೆಗೆ ಅವರ ಸಂಬಂಧ ಮುರಿದು ಬೀಳುವುದು ಬಹುತೇಕ ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

ನತಾಶಾ ಮತ್ತು ಹಾರ್ದಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬುದಾಗಿ ಐಪಿಎಲ್ ಮುಕ್ತಾಯಗೊಂಡ ತಕ್ಷಣ ಸುದ್ದಿಯಾಗಿತ್ತು. ಈ ಸುದ್ದಿಗೆ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡ ಕಾರಣ ಅದು ಚರ್ಚೆಯ ವಿಷಯವಾಯಿತು. ನತಾಶಾ ಸ್ಟಾಂಕೊವಿಕ್​ ಪತಿಯನ್ನು ತೊರೆದಿದ್ದಾರೆ ಎಂಬುದಾಗಿ ಸುದ್ದಿಯಾಯಿತು. ತನ್ನ ಇನ್​​ಸ್ಟಾಗ್ರಾಮ್​ ಬಯೊದಲ್ಲಿ ಪಾಂಡ್ಯ ಹೆಸರನ್ನು ತೆಗೆದಿರುವುದೇ ಅದಕ್ಕೆ ಕಾರಣ. ಕೊನೆಯಲ್ಲಿ ಅದಕ್ಕೆ ತೇಪೆ ಹಚ್ಚಲಾಯಿತು. ತಾವು ಜತೆಗೆ ಇದ್ದೇವೆ ಎಂಬ ಪರೋಕ್ಷ ಸಂದೇಶವನ್ನು ನತಾಶಾ ಕಳುಹಿಸಿದ್ದರು. ಆದರೆ ಅದು ಖಾತರಿಯಾಗಿರಲಿಲ್ಲ. ಇದೀಗ ಆ ಸುದ್ದಿಯನ್ನೂ ನಿರಾಕರಿಸಲಾಗಿದೆ.

ಟೀಕಾಕಾರರ ಬಾಯಿ ಮುಚ್ಚಿದ ಹಾರ್ದಿಕ್ ಪಾಂಡ್ಯ

ಐರ್ಲೆಂಡ್ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ, ಪಾಂಡ್ಯ ತಮ್ಮ ನಾಲ್ಕು ಓವರ್​​ಗಳಲ್ಲಿ 27 ರನ್​​ಗಳಿಗೆ ಮೂರು ವಿಕೆಟ್​​ಗಳನ್ನು ಪಡೆದಿದ್ದದರು. 2024 ರ ಟಿ 20 ವಿಶ್ವಕಪ್ ಅಭಿಯಾನದಲ್ಲಿ ತಮ್ಮ ತಂಡದ ಗೆಲುವಿನ ಪ್ರಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಪಾಂಡ್ಯ ಮತ್ತು ಟೀಮ್ ಇಂಡಿಯಾ ಇಬ್ಬರಿಗೂ ಗಮನಾರ್ಹ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಐಪಿಎಲ್ 2024 ಫಾರ್ಮ್ ಕಾರಣದಿಂದಾಗಿ ಟಿ 20 ವಿಶ್ವಕಪ್ 2024 ತಂಡದಲ್ಲಿ ಅವರನ್ನು ಸೇರಿಸುವ ಬಗ್ಗೆ ಆರಂಭಿಕ ಅನುಮಾನಗಳ ಹೊರತಾಗಿಯೂ, ಸ್ಟಾರ್ ಭಾರತೀಯ ಆಲ್ರೌಂಡರ್ ಪ್ರಸ್ತುತ ನಡೆಯುತ್ತಿರುವ ಮೆಗಾ ಐಸಿಸಿ ಈವೆಂಟ್​​ನ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ.

ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಸಮತೋಲನ ಒದಗಿಸುತ್ತಿದ್ದಾರೆ, ಪ್ಲೇಯಿಂಗ್ ಇಲೆವೆನ್​ ಸಂಯೋಜನೆಗಳಿಗೆ ಪೂರಕವಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ಪ್ರಗತಿಯಲ್ಲಿ, ಮೆನ್ ಇನ್ ಬ್ಲೂ ಪಂದ್ಯಾವಳಿಯಲ್ಲಿ ಪಾಂಡ್ಯ ಅವರ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ಇಲ್ಲಿಯವರೆಗೆ ಅವರ ಮೂರು ಇನ್ನಿಂಗ್ಸ್​ಗಳಲ್ಲಿ 7, 32, 50* ರನ್ ಬಾರಿಸಿದ್ದಾರೆ.

ಇದನ್ನೂ ಓದಿ: T20 World Cup 2024 : ದಕ್ಷಿಣ ಆಫ್ರಿಕಾ ತಂಡ ಸೆಮೀಸ್​ಗೆ, ಆತಿಥೇಯ ವಿಂಡೀಸ್ ಔಟ್​

ಬಾಂಗ್ಲಾದೇಶ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಹಾರ್ದಿಕ್ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಭಾರತದ ಸ್ಟಾರ್ ಆಲ್ರೌಂಡರ್ ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಲ್ಲಿಯವರೆಗೆ 8 ವಿಕೆಟ್​​ ಪಡೆಯುವ ಮೂಲಕ ಸ್ಥಿರವಾಗಿ ಬೌಲಿಂಗ್ ಮಾಡುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್​ಗೆ ಮೆಚ್ಚುಗೆ ತೋರಿದ ರಾಬಿನ್ ಉತ್ತಪ್ಪ

ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಪಾಂಡ್ಯ ಅವರ ಅಸಾಧಾರಣ ಪಾತ್ರವನ್ನು ಶ್ಲಾಘಿಸಿದ ಮಾಜಿ ಬ್ಯಾಟರ್​ ರಾಬಿನ್​ ಉತ್ತಪ್ಪ, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರ ಪ್ರಭಾವಶಾಲಿ ಪ್ರದರ್ಶನ ತಂಡಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅವರು ಎದುರಿಸಿದ ಸವಾಲುಗಳನ್ನು ಪರಿಗಣಿಸಿ ಪಾಂಡ್ಯ ಅವರ ಪ್ರಸ್ತುತ ಫಾರ್ಮ್ ಇನ್ನೂ ಗಮನಾರ್ಹ ಎಂದು ಹೇಳಿದರು.

Continue Reading

ಪ್ರಮುಖ ಸುದ್ದಿ

T20 World Cup 2024 : ದಕ್ಷಿಣ ಆಫ್ರಿಕಾ ತಂಡ ಸೆಮೀಸ್​ಗೆ, ಆತಿಥೇಯ ವಿಂಡೀಸ್ ಔಟ್​

T20 World Cup 2024 : ಸತತ ಏಳನೇ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಗ್ರೂಪ್ 2 ಅಂಕಪಟ್ಟಿಯಲ್ಲಿ ಸೂಪರ್ 8 ಸ್ಥಾನ ಗಳಿಸಿದೆ. ಮತ್ತೊಂದೆಡೆ, ಕೆರಿಬಿಯನ್ ತಂಡವು ತಮ್ಮ ಎಲ್ಲಾ ಗ್ರೂಪ್ ಸಿ ಪಂದ್ಯಗಳನ್ನು ಗೆದ್ದಿತು, ನಂತರ ಅವರು ಯುನೈಟೆಡ್ ಸ್ಟೇಟ್ಸ್ ಅನ್ನು 9 ವಿಕೆಟ್​​ಗಳಿಂದ ಸೋಲಿತ್ತು. ಆದರೆ ಕ್ವಾರ್ಟರ್ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಆ ತಂಡ ಹೊರಗುಳಿಯಲಿದೆ.

VISTARANEWS.COM


on

T20 World Cup 2024
Koo

ಬೆಂಗಳೂರು: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿದೆ. ಇದೇ ವೇಳೆ ಆತಿಥೇಯ ವೆಸ್ಟ್ ಇಂಡೀಸ್​ ಬಳಗ ಟೂರ್ನಿಯಿಂದ ಹೊರಕ್ಕೆ ಬಿದ್ದಿದೆ. ಬಿ ಗುಂಪಿನಿಂದ ಇಂಗ್ಲೆಂಡ್ ತಂಡವೂ ಸೆಮೀಸ್​ಗೆ ಎಂಟ್ರಿ ತೆಗೆದುಕೊಂಡಿದೆ ಆಂಟಿಗುವಾದ ನಾರ್ತ್ ಸೌಂಡ್​​ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಸಹ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 3 ವಿಕೆಟ್​​ಗಳಿಂದ (ಡಕ್​​ವರ್ತ್​ ಲೂಯಿಸ್​ ನಿಯಮದ ಪ್ರಕಾ ) ಸೋಲಿಸಿತು. ಮಳೆಯಿಂದ ಮೊಟಕುಗೊಂಡ ಪಂದ್ಯದಲ್ಲಿ ಏಡೆನ್ ಮಾರ್ಕ್ರಮ್ ಪಡೆ 5 ಎಸೆತಗಳು ಬಾಕಿ ಇರುವಾಗಲೇ 123 ರನ್​ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿತು. 2009 ಮತ್ತು 2014ರ ಬಳಿಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುತ್ತಿರುವುದು ಇದು ಮೂರನೇ ಬಾರಿ.

ಸತತ ಏಳನೇ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಗ್ರೂಪ್ 2 ಅಂಕಪಟ್ಟಿಯಲ್ಲಿ ಸೂಪರ್ 8 ಸ್ಥಾನ ಗಳಿಸಿದೆ. ಮತ್ತೊಂದೆಡೆ, ಕೆರಿಬಿಯನ್ ತಂಡವು ತಮ್ಮ ಎಲ್ಲಾ ಗ್ರೂಪ್ ಸಿ ಪಂದ್ಯಗಳನ್ನು ಗೆದ್ದಿತು, ನಂತರ ಅವರು ಯುನೈಟೆಡ್ ಸ್ಟೇಟ್ಸ್ ಅನ್ನು 9 ವಿಕೆಟ್​​ಗಳಿಂದ ಸೋಲಿತ್ತು. ಆದರೆ ಕ್ವಾರ್ಟರ್ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಆ ತಂಡ ಹೊರಗುಳಿಯಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ಮತ್ತು ನಿಕೋಲಸ್ ಪೂರನ್ 1.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ಜಾನ್ಸನ್ ಚಾರ್ಲ್ಸ್ ಬದಲಿಗೆ ಬಂದ ಕೈಲ್ ಮೇಯರ್ಸ್ ಮತ್ತು ರೋಸ್ಟನ್ ಚೇಸ್ 10.5 ಓವರ್​​ಗಳಲ್ಲಿ 81 ರನ್​​ಗಳ ಜೊತೆಯಾಟದೊಂದಿಗೆ ತಂಡವನ್ನು ಮುನ್ನಡೆಸಿದರು. ತಬ್ರೈಜ್ ಶಮ್ಸಿ ವಿಕೆಟ್ ಪಡೆಯುವ ಮೊದಲು ಮೇಯರ್ಸ್ ತಮ್ಮ 35 ರನ್ ಗಳಲ್ಲಿ ಭರವಸೆದಾಯಕವಾಗಿ ಕಾಣಿಸಿಕೊಂಡರು.

ಚೇಸ್ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ ಅವರು ಶಮ್ಸಿ ಎಸೆತಕ್ಕೆ ಔಟಾದರು. ನಾಯಕ ರೋವ್ಮನ್ ಪೊವೆಲ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಬ್ಯಾಟಿಂಗ್​ನಲ್ಲಿ ಎಡವಿದ್ದರಿಂದ ಕೆರಿಬಿಯನ್ ತಂಡವು ಸಂಕಷ್ಟಕ್ಕೆ ಸಿಲುಕಿತು. ಆಂಡ್ರೆ ರಸೆಲ್ ಮತ್ತು ಅಲ್ಜಾರಿ ಜೋಸೆಫ್ 15 ಮತ್ತು 11 ರನ್ ಗಳಿಸಿ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲು ನೆರವಾದರು.

ಒಟ್ನೀಲ್ ಬಾರ್ಟ್ಮನ್ ಬದಲಿಗೆ ಬದಲಿ ಆಟಗಾರನಾಗಿ ಕರೆತರಲ್ಪಟ್ಟ ಶಮ್ಸಿ, 4ಓವರ್​ಗಳಲ್ಲಿ 27 ರನ್​ ನೀಡಿ 3 ವಿಕೆಟ್​ ಉರುಳಿಸಿದರು. ಮಾರ್ಕೊ ಜಾನ್ಸೆನ್, ಐಡೆನ್ ಮಾರ್ಕ್ರಮ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರು. ರಬಾಡ ಅಕೆಲ್ ಹೊಸೈನ್ ವಿಕೆಟ್​ ಪಡೆದರು.

ಉತ್ತಮ ಆರಂಭ ಸಿಗಲಿಲ್ಲ

ರೀಜಾ ಹೆಂಡ್ರಿಕ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅಗ್ಗವಾಗಿ ಔಟಾಗಿದ್ದರಿಂದ ದಕ್ಷಿಣ ಆಫ್ರಿಕಾಕ್ಕೆ ಆಹ್ಲಾದಕರ ಆರಂಭ ಸಿಗಲಿಲ್ಲ. ಡಿ ಕಾಕ್ 3 ಬೌಂಡರಿಗಳೊಂದಿಗೆ ಪ್ರಾರಂಭಿಸಿದರು. ಆದರೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಬಳಿಕ ಸುರಿದ ಮಳೆ ಪಂದ್ಯವನ್ನು ಹಾಳುಮಾಡುವ ಬೆದರಿಕೆ ಹಾಕಿತು. ಆದರೆ ಕೇವಲ 3 ಓವರ್​​ ಮಾತ್ರ ಕಡಿಮೆ ಮಾಡಲಾಯಿತು.

ಇದನ್ನೂ ಓದಿ: IND vs AUS : ಭಾರತ – ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆ ಬಂದರೆ ಪಂದ್ಯದ ಗತಿಯೇನು?

18 ರನ್ ಗಳಿಗೆ ಮಾರ್ಕ್ರಮ್ ಔಟಾದರು. ಹೆನ್ರಿಕ್ ಕ್ಲಾಸೆನ್ 10 ಎಸೆತಗಳಲ್ಲಿ 22 ರನ್ ಗಳಿಸಿದರು. ಸ್ಟಬ್ಸ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡಿದರು. ಆದರೆ ಸ್ಟಬ್ಸ್ 29 ರನ್ ಗಳಿಗೆ ನಿರ್ಗಮಿಸಿದ ನಂತರ, ದಕ್ಷಿಣ ಆಫ್ರಿಕಾವು ನಡುಗಿತು. ಆದರೆ ಜಾನ್ಸೆನ್ 14 ಎಸೆತಗಳಲ್ಲಿ 21 ರನ್ ಗಳಿಸಿ ದಕ್ಷಿಣ ಆಫ್ರಿಕಾವನ್ನು 16.1 ಓವರ್​ಗಳಲ್ಲಿ ಗೆಲುವಿನ ದಡ ಸೇರಿಸಿದರು.

Continue Reading

ಕ್ರೀಡೆ

IND vs AUS : ಭಾರತ – ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆ ಬಂದರೆ ಪಂದ್ಯದ ಗತಿಯೇನು?

IND vs AUS : ಭಾರತವು ಪಂದ್ಯಾವಳಿಯಲ್ಲಿ ಐದು ಗೆಲುವುಗಳು ಮತ್ತು ಒಂದು ಫಲಿತಾಂಶವಿಲ್ಲದ ಪಂದ್ಯದೊಂದಿಗೆ ಅಜೇಯವಾಗಿ ಮುಂದುವರಿದಿದೆ. ಹೀಗಾಗಿ ಭಾರತ ವಿಶ್ವ ದರ್ಜೆಯ ತಂಡವಾಗಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನ ವಿರುದ್ಧದ ಹೃದಯ ವಿದ್ರಾವಕ ಸೋಲಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಆಟಕ್ಕೆ ಬಂದಿದೆ. ಇದು ಅವರ ಅರ್ಹತಾ ಭರವಸೆಗಳಿಗೆ ಆತಂಕ ತಂದಿದೆ.

VISTARANEWS.COM


on

IND vs AUS
Koo

ಸೇಂಟ್ ಲೂಸಿಯಾ: ಇಲ್ಲಿನ ಬ್ಯೂಸೆಜೌರ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಆಸ್ಟ್ರೇಲಿಯಾ ಮತ್ತು ಭಾರತ (IND vs AUS) ತಂಡಗಳು ವಿಶ್ವ ಕಪ್​ 2024ರ (T20 World Cup 2024) ಸೂಪರ್​ 8 ಹಂತದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಎರಡು ದೈತ್ಯ ತಂಡಗಳ ಆಟ ನಿಯೋಜನೆಯಾಗಿರುವ ಕಾರಣ ಎಲ್ಲರ ಕಣ್ಣುಗಳು ಪಂದ್ಯದತ್ತ ನೆಟ್ಟಿವೆ. ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್ ಮತ್ತು 2023 ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಭಾರತ ತಂಡ ಇಲ್ಲಿ ಸೇಡು ತೀರಿಸಿಕೊಳ್ಳುವುದೇ ಎಂದು ಕಾಯುತ್ತಿದ್ದಾರೆ. ಯಾಕೆಂದರೆ ಆಸ್ಟ್ರೇಲಿಯಾ ತಂಡ ಇಲ್ಲಿ ಸೋತರೆ ವಿಶ್ವ ಕಪ್​ನಲ್ಲಿ ಅವರ ಸೆಮಿ ಫೈನಲ್​ ಪ್ರವೇಶ ಕಷ್ಟವಾಗಲಿದೆ.

ಭಾರತವು ಪಂದ್ಯಾವಳಿಯಲ್ಲಿ ಐದು ಗೆಲುವುಗಳು ಮತ್ತು ಒಂದು ಫಲಿತಾಂಶವಿಲ್ಲದ ಪಂದ್ಯದೊಂದಿಗೆ ಅಜೇಯವಾಗಿ ಮುಂದುವರಿದಿದೆ. ಹೀಗಾಗಿ ಭಾರತ ವಿಶ್ವ ದರ್ಜೆಯ ತಂಡವಾಗಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನ ವಿರುದ್ಧದ ಹೃದಯ ವಿದ್ರಾವಕ ಸೋಲಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಆಟಕ್ಕೆ ಬಂದಿದೆ. ಇದು ಅವರ ಅರ್ಹತಾ ಭರವಸೆಗಳಿಗೆ ಆತಂಕ ತಂದಿದೆ.

ಆಸ್ಟ್ರೇಲಿಯಾ ಗೆದ್ದರೂ ಅದು ಪಂದ್ಯಾವಳಿಯ ಸೆಮಿಫೈನಲ್​ ಸ್ಥಾನವನ್ನು ತಕ್ಷಣಕ್ಕೆ ಸಿಗುವುದಿಲ್ಲ. ಎನ್​ಆರ್​ಆರ್​​​ ಆಧಾರದ ಮೇಲೆ ಅರ್ಹತೆ ಪಡೆಯಲು ಬಾಂಗ್ಲಾದೇಶವು ಅಫ್ಘಾನಿಸ್ತಾನವನ್ನು ಸಣ್ಣ ಅಂತರದಿಂದ ಸೋಲಿಸಬೇಕಾಗಿದೆ. ಆದರೆ ಭಾರತ ಖಂಡಿತವಾಗಿಯೂ ಅವರ ಅರ್ಹತಾ ಭರವಸೆಗಳ ಹಾದಿಯಲ್ಲಿದೆ. ಭಾರತ ವಿರುದ್ಧ ಗೆಲುವು ಸಾಧಿಸುವುದು ಮಿಚೆಲ್ ಮಾರ್ಷ್ ಬಳಗಕ್ಕೆ ಸುಲಭ ಕೆಲಸವಲ್ಲ.

ಇದನ್ನೂ ಓದಿ: R Ashwin : ಪಾಕಿಸ್ತಾನದ ಪತ್ರಕರ್ತನ ಜನ್ಮ ಜಾಲಾಡಿದ ಆರ್​. ಅಶ್ವಿನ್​

ಪಂದ್ಯದ ಮೇಲೆ ಮಳೆ ಪರಿಣಾಮ ಬೀರಲಿದೆಯೇ?

ಸಂಭಾವ್ಯ ಮಳೆಯು ಆಟದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು ಎಂಬ ವದಂತಿಗಳಿವೆ, ಆದ್ದರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ ಮೊದಲು ಹವಾಮಾನ ವರದಿಯನ್ನು ಗಮನಿಸಬೇಕಾಗಿದೆ. . ಸೇಂಟ್ ಲೂಸಿಯಾದ ಗ್ರೋಸ್ ಐಲೆಟ್​ನಲ್ಲಿ ಪಂದ್ಯ ನಡೆಯಲಿದ್ದು, ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಪಂದ್ಯ ಆರಂಭವಾಗಲಿದೆ. ಸೇಂಟ್ ಲೂಸಿಯಾದಲ್ಲಿ ಜೂನ್ 24, 2024 ರಂದು ಮಳೆಯಾಗುವ 15% ಅವಕಾಶವಿದೆ. ಆದರೆ ಪಂದ್ಯದ ಸಮಯದಲ್ಲಿ ಗುಡುಗು ಮತ್ತು ಮಳೆಯಾಗುವ ಸಾಧ್ಯತೆ ಕೇವಲ 5% ಮಾತ್ರ. ಸ್ಪರ್ಧೆಗೆ ಸ್ವಲ್ಪ ಸಮಯದವರೆಗೆ ಅಡ್ಡಿಯಾಗಬಹುದು ಆದರೆ ಪೂರ್ಣ ಪ್ರಮಾಣದಲ್ಲಿ ಹಾಳಾಗುವ ಸಾಧ್ಯತೆಗಳು ಇಲ್ಲ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವು ವಾಶ್ ಔಟ್ ಆಗಿದ್ದರೆ, ಅಫ್ಘಾನಿಸ್ತಾನಕ್ಕೆ ಟಿ 20 ವಿಶ್ವಕಪ್ 2024 ರ ಪ್ಲೇಆಫ್ಗೆ ಪ್ರವೇಶಿಸಲು ಸಣ್ಣ ಅಂತರದ ಗೆಲುವು ಸಾಕು. ಆದ್ದರಿಂದ, ಆಸ್ಟ್ರೇಲಿಯಾ ತಂಡವು ಪಂದ್ಯದ ಸಮಯದಲ್ಲಿ ಮಳೆ ಬರಬಾರದೆಂದು ಆಶಿಸಬಹುದು.

Continue Reading
Advertisement
Viral Video
Latest4 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ10 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ11 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್20 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್35 mins ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

tumkur Shoot out
ಕ್ರೈಂ43 mins ago

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

LKG UKG In Govt Schools
ಕರ್ನಾಟಕ48 mins ago

LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

Sex Doll
ದೇಶ56 mins ago

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

Job Alert
ಉದ್ಯೋಗ57 mins ago

Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

Unusual Story
Latest58 mins ago

Unusual Story: 15 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ! ಜೈಲು ಶಿಕ್ಷೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌