Sara Abubakar | ನುಡಿ ನಮನ; ಧರೆ ಕಡಿದು ದಾರಿ ಮಾಡಿದ ಸಾರಾ - Vistara News

ಕರ್ನಾಟಕ

Sara Abubakar | ನುಡಿ ನಮನ; ಧರೆ ಕಡಿದು ದಾರಿ ಮಾಡಿದ ಸಾರಾ

ತಡವಾಗಿ ಸಾಹಿತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಸಾರಾ ಅಬೂಬಕ್ಕರ್(Sara Abubakar) ಅವರ ಬರವಣಿಗೆ ವೈವಿಧ್ಯಮಯವಾಗಿದೆ. ಮುಸ್ಲಿಂ ಸ್ತ್ರೀಯರ ಒಳಜಗತ್ತನ್ನು ಹೊರಗೆ ಪರಿಚಯಿಸಿದ ಶ್ರೇಯಸ್ಸು ಅವರದು.

VISTARANEWS.COM


on

Sara Aboobacker
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಲಕಾ ಕೆ, ಮೈಸೂರು
ವ್ಯಕ್ತಿಯೊಬ್ಬರು ನಿರ್ಗಮಿಸಿದ ನಂತರ ಅವರ ಕಾಲವನ್ನು ಸೂಚಿಸುವ ಕ್ರಮ ಎಲ್ಲ ಕಡೆಯೂ ಇದೆ. ಕ್ರಿ.ಶ. ಇಷ್ಟನೆಯ ವರ್ಷದಿಂದ- ಇಂತಿಷ್ಟನೆಯ ವರ್ಷದವರೆಗೆ ಆ ವ್ಯಕ್ತಿ ಬದುಕಿದ್ದರು ಎಂಬುದಾಗಿ ಸೂಚಿಸುವ ಪದ್ಧತಿಯಿದು. ಆದರೆ ಕೆಲವು ಬದುಕುಗಳು ಆ ವ್ಯಕ್ತಿ ನಿರ್ಗಮಿಸಿದ ಕೂಡಲೇ ಅವರೊಂದಿಗೆ ಹೋಗಿ ಬಿಡುವುದಿಲ್ಲ. ಅವರ ಕೆಲಸದ ಮೂಲಕ, ನಿರ್ಮಿಸಿದ ದಾರಿಗಳ ಮೂಲಕ, ಹಾಕಿದ ಮೇಲ್ಪಂಕ್ತಿಗಳ ಮೂಲಕ, ಅನುಸರಣೀಯ ಬದುಕಿನ ಮೂಲಕ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತವೆ. ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜಕ್ಕೆ ಇಂಥ ಬದುಕುಗಳು ಇನ್ನಷ್ಟು ಬೇಕು ಎಂಬ ಪ್ರಜ್ಞೆಯನ್ನು ಪ್ರಚೋದಿಸಿ, ಜಾಗೃತಿಯನ್ನು ಮೂಡಿಸುತ್ತಲೇ ಇರುತ್ತವೆ. ಇಂದು ಬದುಕು ಮುಗಿಸಿದ ಕನ್ನಡದ ಮೇರು ಲೇಖಕಿ ಸಾರಾ ಅಬೂಬಕ್ಕರ್‌(Sara Abubakar), ಇನ್ನೀಗ ಅಮೂರ್ತವಾದರೂ ಈ ಎಲ್ಲಾ ಭಾವಗಳಿಗೆ ಜೀವ ತುಂಬಿದವರು.

ಅವರು ಜನಿಸಿದ್ದ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣವೇ ನಿಷಿದ್ಧ ಎಂಬ ಕಾಲದಲ್ಲಿ ಸಾರಾ ಸುಶಿಕ್ಷಿತೆಯಾದವರು. ಹೆಣ್ಣುಮಕ್ಕಳು ಹೊರಜಗತ್ತಿಗೆ ಬರಕೂಡದು ಎಂಬ ನಿಯಮಕ್ಕೆ ಪ್ರತಿಯಾಗಿ, ಮುಸ್ಲಿಂ ಸ್ತ್ರೀಯರ ಒಳಜಗತ್ತನ್ನು ಹೊರಗೆ ಪರಿಚಯಿಸಿದವರು. ಬದಲಾವಣೆಗಳು ನಮ್ಮಲ್ಲೇ ಮೊದಲಾಗಬೇಕು ಎಂಬ ಮಾತಿನಂತೆ, ತಮ್ಮದೇ ಕುಟುಂಬದ ಮಕ್ಕಳನ್ನು ಸುಧಾರಣೆಗೆ ಒಡ್ಡಿದವರು. ಶಿಕ್ಷಣದ ಮಹತ್ವವನ್ನು ಸಾರುವುದಕ್ಕಾಗಿ ಪ್ರವಾಹದ ವಿರುದ್ಧ ಈಜಿದವರು. ಶೋಷಣೆಯ ವಿರುದ್ಧದ ಮಾತು ಬರೀ ಘೋಷಣೆಯಾಗಬಾರದೆಂಬ ನೈಜ ಕಾಳಜಿಯಿಂದ, ಲೇಖಕಿಯಾಗಿ, ಪ್ರಕಾಶಕಿಯಾಗಿ, ಸಂಘಟಕಿಯಾಗಿ ಶ್ರಮಿಸಿದವರು. ಬದುಕಿನ ನಿತ್ಯದ ಸಮಸ್ಯೆಗಳು ಅರ್ಥವಾಗುವಂಥ ಸತ್ಯದ ಆವರಣಗಳನ್ನು ತಮ್ಮ ಕೃತಿಗಳಲ್ಲಿ ಸೃಷ್ಟಿಸಿದ ಸೃಜನಶೀಲರು ಇಂದು ಹೋಗಿಯೂ ಹೋಗದಂತೆ ನಮ್ಮೊಡನೆ ಉಳಿದಿದ್ದಾರೆ.


ಅಂದು ಖ್ಯಾತ ವಕೀಲರಾಗಿದ್ದ ಪಿ. ಅಹಮದ್‌ ಮತ್ತು ಜೈನಾಬಿಯವರ ದಾಂಪತ್ಯದಲ್ಲಿ ನಾಲ್ಕನೆಯ ಮಗುವಾಗಿ 30-6-1936ರಂದು ಕಾಸರಗೋಡಿನಲ್ಲಿ ಜನಿಸಿದವರು ಸಾರಾ. ಮೊದಲ ಮೂರೂ ಗಂಡಾದ್ದರಿಂದ, ನಾಲ್ಕನೆಯದು ಹೆಣ್ಣಾದರೆ ಪ್ರವಾದಿ ಇಬ್ರಾಹಿಂ ಅವರ ಪತ್ನಿಯ ಹೆಸರಿಡುವುದಾಗಿ ಸಾರಾ ಅವರ ಅಜ್ಜ ಹರಕೆ ಹೊತ್ತಿದ್ದಂತೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಬಯಸಿ ಹುಟ್ಟಿದ ಮಗು ಸಾರಾ ಮುದ್ದಿನಿಂದಲೇ ಬೆಳೆದಿದ್ದರು. ಆ ಕಾಲಕ್ಕೆ ಅಪೂರ್ವ ಎಂಬಂತೆ ಮುಕ್ತ, ಸುಧಾರಿತ ವಾತಾವರಣದಲ್ಲಿ ಹತ್ತನೇ ತರಗತಿಯವರೆಗೆ ಓದಿದವರು. ನಂತರ ಸರಕಾರಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದ ಎಂ. ಅಬೂಬಕ್ಕರ್‌ ಅವರೊಂದಿಗೆ ವಿವಾಹವಾಯಿತು. ಆದರೆ ಗಂಡನ ಮನೆಯ ವಾತಾವರಣ ಇವರ ತವರು ಮನೆಗಿಂತ ತೀರಾ ಭಿನ್ನವಾಗಿತ್ತು. ಎಲ್ಲ ರೀತಿಯ ಕಟ್ಟುಪಾಡುಗಳೂ ಅವರಿಗಿದ್ದವು. ದಿನಪತ್ರಿಕೆ ಓದುವುದಕ್ಕೂ ಅವಕಾಶವಿರಲಿಲ್ಲ. ಇದಕ್ಕೆ ಅಂಜದ ಆಕೆ, ಮನೆಮಂದಿಯ ಮನದಲ್ಲಿ ಕ್ರಮೇಣ ಬದಲಾವಣೆ ಮೂಡಿಸಿದರು. ಶಿಕ್ಷಣ ಎಂಬುದು ಎಂತಹ ಪ್ರಬಲ ಅಸ್ತ್ರ ಎಂಬುದನ್ನು ಅರ್ಥ ಮಾಡಿಸಿದರು. ಮನೆಯ ಮಹಿಳೆಯರು ಅವರವರ ಆಸಕ್ತಿಯ ಹೊಲಿಗೆ, ಕಸೂತಿಯಂಥ ಕಲೆಗಳಲ್ಲಿ ಪರಿಣಿತರಾಗುವಷ್ಟು ತರಬೇತಿ ಕೊಡಿಸಿದರು. ಇವರೇನು ಹೇಳುತ್ತಿದ್ದಾರೆ ಮತ್ತು ಅದನ್ನು ಯಾಕಾಗಿ ಹೇಳುತ್ತಿದ್ದಾರೆ ಎಂಬುದು ಮನೆಯ ಸದಸ್ಯರಿಗೂ ಅರಿವಾಗಿತ್ತು.

ಮಂಗಳೂರಿನಿಂದ ಬೆಂಗಳೂರಿಗೆ…
ಅವರ ಪತಿಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾದ ಮೇಲೆ ಸಾರಾ ಅವರ ಬದುಕು ಮತ್ತೊಮ್ಮೆ ಬದಲಾಯಿತು. ಮೊದಲಿನಂತೆ ದಿನಪತ್ರಿಕೆ ಮತ್ತು ಗ್ರಂಥಾಲಯದ ಹೊತ್ತಗೆಗಳು ಅವರ ಸಂಗಾತಿಯಾದವು. ಕೆಲವು ಕಥೆಗಳನ್ನು ಬರೆದರೂ ಅವು ಪ್ರಕಟವಾಗಲಿಲ್ಲ. ಲಂಕೇಶ್‌ ಪತ್ರಿಕೆಯ ಅಭಿಮಾನಿ ಓದುಗರಾಗಿದ್ದ “ನನ್ನ ಜನ ಒಂದಾಗಬೇಕು” ಎಂಬ ಲೇಖನಕ್ಕೆ ಸಾರಾ ಬರೆದಿದ್ದ ಪ್ರತಿಕ್ರಿಯೆಯನ್ನು ಲಂಕೇಶ್‌ ಮೊದಲಿಗೆ ಪ್ರಕಟಿಸಿದರು. ಮಾತ್ರವಲ್ಲ, ಅವರ ಬರವಣಿಗೆಯನ್ನು ಮುಂದೆಯೂ ಪ್ರೋತ್ಸಾಹಿಸಿದರು. ಲಂಕೇಶ್‌ ಪತ್ರಿಕೆಯಲ್ಲಿ ಸಾರಾ ಅವರ ಮೊದಲ ಕಾದಂಬರಿ ʻಚಂದ್ರಗಿರಿಯ ತೀರದಲ್ಲಿʼ ಧಾರಾವಾಹಿಯಾಗಿ ಪ್ರಕಟವಾದಾಗ, ಈವರೆಗೆ ಅರಿವಿಲ್ಲದ ಹೊಸ ಲೋಕವೊಂದು ಓದುಗರಿಗೆ ತೆರೆದುಕೊಂಡಿತ್ತು. ಸಮುದಾಯವೊಂದರ ಮಹಿಳೆಯರ ಒಳತೋಟಿಗಳು ಹೀಗೂ ಇರಬಹುದು ಎಂಬ ಬಗ್ಗೆ ಹೊರಜಗತ್ತಿಗೊಂದು ಬೆಳಕಿಂಡಿಯನ್ನು ಆಕೆ ಸೃಷ್ಟಿಸಿದ್ದರು. ಮುಸ್ಲಿಂ ಮಹಿಳೆಯರ ಬದುಕಿನ ನೋವು, ಧರ್ಮದ ಹೆಸರಿನಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದ ರೀತಿ, ನೋವಿನಲ್ಲೂ ಬದುಕು ಕಟ್ಟುವ ಅವರ ಹೋರಾಟ- ಇವೆಲ್ಲ ಕ್ರಮೇಣ ಸಾರಾ ಅವರ ಕೃತಿಗಳಲ್ಲಿ ಅನಾವರಣಗೊಳ್ಳತೊಡಗಿದವು. ಅವರ ಬಹುಪಾಲು ಕೃತಿಗಳಲ್ಲಿ ಮುಸ್ಲಿಂ ಸಮುದಾಯದ, ಅದರಲ್ಲೂ ಬಡ ಕುಟುಂಬಗಳ ಹೆಣ್ಣುಗಳ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಟ್ಟುಪಾಡುಗಳು, ಬದುಕಲಾರದ- ಆದರೆ ಸಾಯಲು ಸಿದ್ಧರಿಲ್ಲದ ಅವರ ಹೋರಾಟ ಮನಕಲಕುತ್ತದೆ.


ಅವರು ಸೃಷ್ಟಿಸಿದ ಕೆಲವು ಪಾತ್ರಗಳಂತೂ ಇಂದಿಗೂ ವಿಶಿಷ್ಟ. ʻಚಂದ್ರಗಿರಿಯ ತೀರದಲ್ಲಿʼ ಕೃತಿಯ ಮುಗ್ಧ ಹುಡುಗಿ, ಬದುಕಿನಲ್ಲಿ ಹಾದಿ ಕಾಣದೆ ದುರಂತಕ್ಕೆ ಒಳಗಾಗುವ ನಾದಿರಾ; ʻವಜ್ರಗಳುʼ ಕಾದಂಬರಿಯ ಅಸಹಾಯಕ ಮಹಿಳೆ ನಫೀಸಾ; ʻಸಹನಾʼ ಕಾದಂಬರಿಯ ದಿಟ್ಟ ಹೆಣ್ಣು ನಸೀಮಾ; ಕ್ಷೇತ್ರ-ಬೀಜ ನ್ಯಾಯದಿಂದ ಬೇಸತ್ತು ಧರ್ಮ ಜಿಜ್ಞಾಸೆಗೆ ತೊಡಗುವ ʻಅಂಕುರʼ ಕಥೆಯ ಶಕೀಲ- ಹೇಳುತ್ತಾ ಹೋದರೆ ಬಹಳಷ್ಟು ಪಾತ್ರಗಳಿವೆ. ಇಂಥ ಎಲ್ಲಾ ಪಾತ್ರಗಳು ಮತ್ತು ಕಥೆಗಳ ಮೂಲಕ- ಹೆಣ್ಣುಮಕ್ಕಳನ್ನು ಸಹಜೀವಿಯಾಗಿ ಕಾಣದ ಪಿತೃಪ್ರಧಾನ ವ್ಯವಸ್ಥೆಯ ಹಲವು ವಿನ್ಯಾಸಗಳನ್ನು ಸಾರಾ ಮತ್ತೆ ಮತ್ತೆ ನಿಕಷಕ್ಕೆ ಒಡ್ಡುತ್ತಾರೆ. ಪಿತೃಪ್ರಧಾನತೆಯನ್ನು ಹೇರುವಲ್ಲಿ ಯಾವ ಧರ್ಮಗಳೂ ಹಿಂದೆ ಬಿದ್ದಿಲ್ಲ ಎಂಬ ಭಾವನೆಯನ್ನು ಅವರು ʻಕದನ ವಿರಾಮʼ ಕಾದಂಬರಿಯಲ್ಲಿ ಕಾಣಬಹುದು. ಮಾತ್ರವಲ್ಲ, ತಮ್ಮ ದಿಟ್ಟ ನಿಲುವು, ಹೇಳಿಕೆಗಳಿಂದ ಸೃಷ್ಟಿಯಾದ ವಿವಾದಗಳಿಂದ ಅವರೆಂದೂ ಧೃತಿಗೆಡಲಿಲ್ಲ. ತಮ್ಮ ಮೇಲಿದ ಟೀಕೆ, ದಾಳಿಗಳಿಂದ ಅವರು ಇನ್ನಷ್ಟು ಕ್ರಿಯಾಶೀಲರಾದರೇ ಹೊರತು ವಿಮುಖರಾಗಲಿಲ್ಲ.

ತಡವಾಗಿ ಸಾಹಿತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಸಾರಾ ಅವರ ಬರವಣಿಗೆ ವೈವಿಧ್ಯಮಯವಾಗಿದೆ. ಐದು ಕಥಾ ಸಂಕಲನಗಳು, ನಾಟಕ, ಪ್ರವಾಸ ಕಥನ, ಪ್ರಬಂಧ ಸಂಕಲನಗಳು, ಹತ್ತು ಕಾದಂಬರಿಗಳು, ಎಂಟು ಅನುವಾದಗಳು (ಮಲಯಾಳಂನಿಂದ ಕನ್ನಡಕ್ಕೆ) ಅವರಿಂದ ರಚನೆಯಾಗಿವೆ. ʻಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದುʼ ಅವರ ಆತ್ಮಕಥೆ. ಅವರ ಚಂದ್ರಗಿರಿಯ ತೀರದಲ್ಲಿ ಕೃತಿಯು ಮಲಯಾಳಿಂ, ತೆಲುಗು, ಒರಿಯಾ, ಹಿಂದಿ, ಇಂಗ್ಲಿಷ್‌ ಸೇರಿದಂತೆ ಏಳು ಭಾಷೆಗಳಿಗೆ ಅನುವಾದಗೊಂಡಿದೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಅತ್ತಿಮಬ್ಬೆ ಪುರಸ್ಕಾರ, ಕೇಂದ್ರ ಸರಕಾರದ ʻಭಾಷಾಭಾರತಿ ಸಮ್ಮಾನʼ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಸೇರಿದಂತೆ ಹಲವಾರು ಸಮ್ಮಾನಗಳಿಗೆ ಅವರು ಭಾಜನರಾಗಿದ್ದಾರೆ.

ಸವೆದ ಹಾದಿಯಲ್ಲಿ ನಡೆಯುವುದು ಕಷ್ಟವಲ್ಲ. ಆದರೆ ದುರ್ಗಮ ಪ್ರದೇಶದಲ್ಲಿ ಹಾದಿ ನಿರ್ಮಿಸುವುದು ಸುಲಭವಲ್ಲ. ಹೀಗೆ ಧರೆ ಕಡಿದು ದಾರಿ ಮಾಡುವ ಸಾರಾ ಅವರಂಥ ಛಾತಿವಂತರ ಸಂತತಿ ಸಾವಿರವಾಗಲಿ.

ಇದನ್ನೂ ಓದಿ | ಮುಸ್ಲಿಂ ಹೆಣ್ಣು ಮಕ್ಕಳ ದನಿ, ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಇನ್ನಿಲ್ಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೀದರ್‌

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು!

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಖೇರ್ಡಾ(ಬಿ) ಗ್ರಾಮದಲ್ಲಿ ಜರುಗಿದೆ.

VISTARANEWS.COM


on

Drowned in Water boy who went swimming drowned and died
Koo

ಬಸವಕಲ್ಯಾಣ: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ (Drowned in Water) ಮೃತಪಟ್ಟಿರುವ ಘಟನೆ ತಾಲೂಕಿನ ಖೇರ್ಡಾ (ಬಿ) ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಸಸ್ತಾಪೂರ ಗ್ರಾಮದ ನಿವಾಸಿ ಮುಜಾಮೀಲ್ ಖಾಜಾಮಿಯ್ಯ (15) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕನಾಗಿದ್ದಾನೆ. ಮೂಲತಃ ಸಸ್ತಾಪೂರ ಗ್ರಾಮದವನಾಗಿರುವ ಈತ ಕಳೆದ ಕೆಲ ದಿನಗಳಿಂದ ತನ್ನ ತಾಯಿ ತವರು ಮನೆಯಾಗಿರುವ ತಡೋಳಾ ಗ್ರಾಮದಲ್ಲಿ ನೆಲೆಸಿದ್ದ. ಮಂಗಳವಾರ ಸಂಜೆ ತನ್ನ ಐವರು ಗೆಳೆಯರೊಂದಿಗೆ ತಾಲೂಕಿನ ಖೇರ್ಡಾ (ಬಿ) ಗ್ರಾಮದ ಬಳಿಯ ಮುಲ್ಲಾಮಾರಿ ಜಲಾಶಯದ ಹಿನ್ನೀರಿನಲ್ಲಿ ಈಜಾಡಲೆಂದು ತೆರಳಿದ್ದ. ಆದರೆ ನೀರಿನಾಳದಲ್ಲಿ ಮುಳುಗಿ ಮೇಲೆ ಬಾರಲಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ

ಘಟನೆ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದೊಂದಿಗೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಾಲಕನ ಶವ ಹೊರ ತಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿ ತಿಳಿದ ಪಿಎಸ್ಐ ರೇಣುಕಾ ಉಡಗಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿಯಲ್ಲಿ ತೆರೆದ ಗುಂಡಿಗೆ ಬಾಲಕ ಬಲಿ; ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದವನು ಮೃತ್ಯು

ಯಾದಗಿರಿ: ತೆರೆದ ಗುಂಡಿಯಲ್ಲಿ ಬಿದ್ದು ಬಾಲಕನೊರ್ವ ಮೃತಪಟ್ಟಿದ್ದಾನೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ನಿನ್ನೆ ಸೋಮವಾರ ಸಂಜೆ ಘಟನೆ ನಡೆದಿದೆ. ಮನೋಜಕುಮಾರ (8) ಮೃತ ದುರ್ದೈವಿ.

ಮನೋಜಕುಮಾರ ತೋಟದ ಮನೆಯಲ್ಲಿ ಆಟವಾಡುತ್ತಿದ್ದ. ಆಟವಾಡುವಾಗ ಕಾಲು ಜಾರಿದ್ದು ತೆರೆದ ಗುಂಡಿಯಲ್ಲಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಗೇರಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹತ್ತು ವರ್ಷದ ವಸಂತ್‌ ಮೃತದುರ್ದೈವಿ.

ಇದನ್ನೂ ಓದಿ: Vijayapura News: ಗುಂಡಿಗೆ ಬಿದ್ದು ಮೂವರ ಸಾವು; ಬಾಲಕಿಯನ್ನು ರಕ್ಷಿಸಲು ಹೋದವರೂ ನೀರುಪಾಲು

ವಸಂತ್‌ ನೀರು ಕುಡಿಯಲು ಕೃಷಿ ಹೊಂಡಕ್ಕೆ‌ ತೆರಳಿದ್ದ ಈ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಹೊಂಡದ ನೀರಿನ ಆಳದಲ್ಲಿ ಸಿಲುಕಿದ್ದ, ಇತ್ತ ಕೂಡಲೇ ಬಾಲಕನ ರಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದರು. ಆದರೆ ಉಸಿರುಗಟ್ಟಿ ಹೊಂಡದ ನೀರಲ್ಲಿ ವಸಂತ ಪ್ರಾಣ ಬಿಟ್ಟಿದ್ದಾನೆ. ಬಳ್ಳಾರಿಯ ಸಿರಗೇರಿ‌ ಪೊಲೀಸ್ ಠಾಣೆಯಲ್ಲಿ‌ ಈ ಸಂಬಂಧ ಪ್ರಕರಣ ದಾಖಲಾಗಿದೆ.

Continue Reading

ಕರ್ನಾಟಕ

Pralhad Joshi: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ ಸೂರ್ಯ ಘರ್: ಜೋಶಿ

Pralhad Joshi: ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನೆ ಸಭೆ ನಡೆಸಿದರು.

VISTARANEWS.COM


on

PM Surya Ghar Yojana Comprehensive Review Meeting by Union Minister Pralhad Joshi
Koo

ನವದೆಹಲಿ: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಪ್ರಧಾನಿ ಆಶಯವಾಗಿದ್ದು, ಸೂರ್ಯ ಘರ್ ಯೋಜನೆ ಇದಕ್ಕೆ ಪ್ರತೀಕವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು.

ನವದೆಹಲಿಯಲ್ಲಿ ಮಂಗಳವಾರ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನೆ ಸಭೆ ಉದ್ದೇಶಿಸಿ, ಅವರು ಮಾತನಾಡಿದರು.

ಇದನ್ನೂ ಓದಿ: Bengaluru Power Cut: ಜೂನ್‌ 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಇರಲ್ಲ

ಈ ನೂತನ ಸೂರ್ಯ ಘರ್ ಯೋಜನೆಯಡಿ ದೇಶಾದ್ಯಂತ 1 ಕೋಟಿ ಗ್ರಾಹಕರು 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ದೇಶದ ನಾನಾ ರಾಜ್ಯಗಳು, ವಿತರಕ ಘಟಕಗಳು ಮತ್ತು ನಾಗರಿಕರು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಈ ಮಹತ್ವದ ಸಭೆಯಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಮಾರ್ಗದರ್ಶನ ನೀಡಿದರು.

ಇದನ್ನೂ ಓದಿ: Fortis Hospital: 32 ವರ್ಷದ ಮಹಿಳೆಗೆ ಯಶಸ್ವಿ ಕಿಡ್ನಿ ಕಸಿ

ಸೂರ್ಯ ಘರ್ ಮೂಲಕ ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಸಾಧಿಸುವುದು ಭಾರತದ ಆಶಯವಾಗಿದ್ದು, ಇದು ಹಸಿರು ಹಾಗೂ ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ಸುಗಮ ದಾರಿಯಾಗಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

Continue Reading

ಕರ್ನಾಟಕ

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Shira News: ಶಿರಾ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಶಿರಾ ನಗರದ ಸಮೀಪ ಪ್ರಾರಂಭಿಸಲು ಜಮೀನು ಗುರುತಿಸಲಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

VISTARANEWS.COM


on

Construction of International Cricket Stadium at Shira MLA T B Jayachandra KSCA team inspection
Koo

ಶಿರಾ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಶಿರಾ (Shira News) ನಗರದ ಸಮೀಪ ಪ್ರಾರಂಭಿಸಲು ಜಮೀನು ಗುರುತಿಸಲಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು. ನಗರದ ಶಿವಾಜಿ ನಗರ ಬಡಾವಣೆ ಸಮೀಪದಲ್ಲಿ ಮಂಗಳವಾರ ಕೆ.ಎಸ್.ಸಿ.ಎ. ಪ್ರತಿನಿಧಿಗಳಿಗೆ ಕ್ರೀಡಾಂಗಣಕ್ಕಾಗಿ ಕಾಯ್ದಿರಿಸಿದ ಜಮೀನಿನ್ನು ಪರಿಶೀಲಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Fortis Hospital: 32 ವರ್ಷದ ಮಹಿಳೆಗೆ ಯಶಸ್ವಿ ಕಿಡ್ನಿ ಕಸಿ

ಖೇಲೋ ಭಾರತ್ ಯೋಜನೆಯಡಿ ಕ್ರೀಡಾ ಗ್ರಾಮ ನಿರ್ಮಾಣಕ್ಕಾಗಿ ಭುವನಹಳ್ಳಿ, ಕಲ್ಲುಕೋಟೆ ವಿವಿಧ ಸರ್ವೆ ನಂಬರ್‌ಗಳಲ್ಲಿ 100 ಎಕರೆ ಜಮೀನಿದ್ದು, ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಲುವಾಗಿ 20 ಎಕರೆ ನೀಡಲು ಉದ್ದೇಶಿಸಲಾಗಿದೆ. ಅಂತಯೇ ಈ ಕ್ರೀಡಾಂಗಣಕ್ಕೆ ಬರಲು 100 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಎಸ್.ಸಿ.ಎ ಪ್ರತಿನಿಧಿ ರಘುರಾಮ್ ಭಟ್ ಮಾತನಾಡಿ, ಕ್ರೀಡಾಂಗಣ ನಿರ್ಮಿಸಲು ಈ ಸ್ಥಳ ಸೂಕ್ತವಾಗಿದೆ. ಮುಂದಿನ ವಾರದಲ್ಲಿ ಕೆ.ಎಸ್‌.ಸಿ.ಎ. ಎಂಜಿನಿಯರ್‌ಗಳ ತಂಡ ಆಗಮಿಸಿ, ವರದಿ ನೀಡಿದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ

ಈ ಸಂದರ್ಭದಲ್ಲಿ ತಹಸೀಲ್ದಾರ್ ದತ್ತಾತ್ರೇಯ ಜೆ. ಗಾದ, ನಗರಸಭೆ ಅಯುಕ್ತ ರುದ್ರೇಶ್, ನಗರಸಭಾ ಸದಸ್ಯರಾದ ಬುರಾನ್ ಅಹಮದ್, ಬಿ.ಎಂ.ರಾಧಕೃಷ್ಣ, ಮುಖಂಡರಾದ ಸುಧಾಕರ್ ಗೌಡ ಸೇರಿದಂತೆ ಹಲವರು ಇದ್ದರು.

Continue Reading

ಕರ್ನಾಟಕ

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

Rachel Movie: ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಚಿತ್ರವು ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ. ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

VISTARANEWS.COM


on

Malayali actress Honey Rose starring Rachel movie Teaser release
Koo

ಬೆಂಗಳೂರು: ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಚಿತ್ರವು ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ.

ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಬಾಬು ರಾಜ್, ಕಲಾಭವನ್ ಶಾಜೋನ್, ರೋಷನ್ ಬಶೀರ್, ಚಂದು ಸಲೀಂಕುಮಾರ್, ರಾಧಿಕಾ ರಾಧಾಕೃಷ್ಣನ್, ಜಾಫರ್ ಇಡುಕ್ಕಿ, ವಿನೀತ್ ತಟ್ಟಿಲ್, ಜೋಜಿ, ದಿನೇಶ್ ಪ್ರಭಾಕರ್, ಪಾಲಿ ವಲ್ಸನ್, ವಂದಿತಾ ಮನೋಹರನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ? ಇಲ್ಲಿದೆ ಮಹತ್ವದ ಅಪ್‌ಡೇಟ್

ಈ ಚಿತ್ರವನ್ನು ಬಾದುಶಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಬಾದುಶಾ ಎನ್‌ಎಂ, ರಾಜನ್ ಚಿರಾಯಿಲ್ ಮತ್ತು ಎಬ್ರಿಡ್ ಶೈನ್ ನಿರ್ಮಿಸಿದ್ದಾರೆ. ಕಥೆಯನ್ನು ರಾಹುಲ್ ಮನಪ್ಪಟ್ಟು ಬರೆದಿದ್ದು, ಚಿತ್ರಕಥೆಯನ್ನು ರಾಹುಲ್ ಮನಪ್ಪಟ್ಟು ಮತ್ತು ಎಬ್ರಿಡ್ ಶೈನ್ ಮಾಡಿದ್ದಾರೆ. ಸಹ ನಿರ್ಮಾಪಕ – ಹನ್ನನ್ ಮರಮುತ್ತಮ್, ಛಾಯಾಗ್ರಹಣ – ಸ್ವರೂಪ್ ಫಿಲಿಪ್, ಸಂಗೀತ ಮತ್ತು ಬಿಜಿಎಂ – ಇಶಾನ್ ಛಾಬ್ರಾ, ಸಂಕಲನ – ಮನೋಜ್, ನಿರ್ಮಾಣ ವಿನ್ಯಾಸಕ – ಸುಜಿತ್ ರಾಘವ್, ಧ್ವನಿ ಮಿಶ್ರಣ – ರಾಜಕೃಷ್ಣನ್ ಎಂ ಆರ್, ಧ್ವನಿ ವಿನ್ಯಾಸ – ಶ್ರೀ ಶಂಕರ್, ಕಾರ್ಯನಿರ್ವಾಹಕ ನಿರ್ಮಾಪಕರು – ಮಂಜು ಬಾದುಷಾ, ಶೆಮಿ ಬಶೀರ್, ಶೈಮಾ ಮುಹಮ್ಮದ್ ಬಶೀರ್ ಅವರದ್ದು.

Continue Reading
Advertisement
Bomb threat
ದೇಶ4 hours ago

Bomb Threat: ಮುಂಬೈನ 50ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್‌ ದಾಳಿ ಬೆದರಿಕೆ; ಎಲ್ಲೆಡೆ ಕಟ್ಟೆಚ್ಚರ

Drowned in Water boy who went swimming drowned and died
ಬೀದರ್‌4 hours ago

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು!

Jagan Mohan Reddy
ದೇಶ4 hours ago

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

PM Surya Ghar Yojana Comprehensive Review Meeting by Union Minister Pralhad Joshi
ಕರ್ನಾಟಕ4 hours ago

Pralhad Joshi: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ ಸೂರ್ಯ ಘರ್: ಜೋಶಿ

Sonakshi Sinha
ಬಾಲಿವುಡ್5 hours ago

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Construction of International Cricket Stadium at Shira MLA T B Jayachandra KSCA team inspection
ಕರ್ನಾಟಕ6 hours ago

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Malayali actress Honey Rose starring Rachel movie Teaser release
ಕರ್ನಾಟಕ6 hours ago

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

IPS Officer
ದೇಶ6 hours ago

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

Sambhavami Yuge Yuge movie release on June 21
ಕರ್ನಾಟಕ6 hours ago

Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್‌

Kodi Mutt Swamiji
ಪ್ರಮುಖ ಸುದ್ದಿ6 hours ago

Kodi Mutt Swamiji: ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು, ರಾಜ್ಯದಲ್ಲಿ ಅತಿವೃಷ್ಟಿ: ಕೋಡಿಮಠ ಶ್ರೀ ಭವಿಷ್ಯ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌