India Open 2023 | ಇಂಡಿಯಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್​-ಚಿರಾಗ್​ ಜೋಡಿ! - Vistara News

ಕ್ರೀಡೆ

India Open 2023 | ಇಂಡಿಯಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್​-ಚಿರಾಗ್​ ಜೋಡಿ!

ಪ್ರಸಕ್ತ ನಡೆಯುತ್ತಿರುವ ಇಂಡಿಯಾ ಓಪನ್​ ಬ್ಯಾಡ್ಮಿಂಟನ್ ಟೂರ್ನಿಯಿಂದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಹಿಂದೆ ಸರಿದಿದ್ದಾರೆ.

VISTARANEWS.COM


on

Chirag Shetty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇಂಡಿಯಾ ಓಪನ್​ ಬ್ಯಾಡ್ಮಿಂಟನ್(India Open 2023)​ ಟೂರ್ನಿಯಿಂದ ಹಾಲಿ ಚಾಂಪಿಯನ್ಸ್‌ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಚಿರಾಗ್​ ಶೆಟ್ಟಿ ಖಚಿತಪಡಿಸಿದ್ದಾರೆ.

ಸಾತ್ವಿಕ್‌ಸಾಯಿರಾಜ್‌ ಅವರು ತೊಡೆಯ ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಇವರ ಜತೆಗಾರ ಚಿರಾಗ್​ ಶೆಟ್ಟಿ ಗುರುವಾರ ತಿಳಿಸಿದ್ದಾರೆ. ಈ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾದ ಲಿಯು ಯು ಚೆನ್‌ ಮತ್ತು ಕ್ಸುವಾನ್‌ ಲಿ ವಿರುದ್ಧ ಪೈಪೋಟಿ ನಡೆಸಬೇಕಿತ್ತು. ಆದರೆ ಗಾಯದ ಸಮಸ್ಯೆಯಿಂದ ಅಂತಿಮ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

2022 ರಲ್ಲಿ ಈ ಜೋಡಿ ಇಂಡಿಯಾ ಸೂಪರ್ ಸೀರಿಸ್‌ 500 ಮತ್ತು ಫ್ರೆಂಚ್‌ ಸೂಪರ್‌ ಸೀರಿಸ್‌ 750 ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿತ್ತು. ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಹಾಗೂ ವಿಶ್ವ ಚಾಂಪಿಯನ್‌ಶಿಪ್​​ನಲ್ಲಿ ಕಂಚು ಗೆದ್ದ ಸಾಧನೆ ಮಾಡಿತ್ತು.

ಇದೀಗ ಈ ಜೋಡಿಯ ನಿರ್ಗಮನದಿಂದ ಭಾರತಕ್ಕೆ ಹಿನ್ನಡೆಯಾಗಿದೆ. ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ತಾರಾ ಆಟಗಾರರು ಈ ಬಾರಿಯೂ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಇದಕ್ಕೆ ಗಾಯದ ಸಮಸ್ಯೆ ಅಡ್ಡಿಪಡಿಸಿತು. ಹೀಗಾಗಿ ಉಭಯ ಆಟಗಾರರು ಕೂಟದಿಂದ ಹಿಂದೆ ಸರಿದರು. ಇದು ಭಾರತದ ಪದಕ ​ಬೇಟೆಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ | India Open 2023 | ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌; ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಪಿ.ವಿ. ಸಿಂಧು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಸಂಘಟಿತ ಹೋರಾಟ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Banglore) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ದ 47 ರನ್​ಗಳ ಗೆಲುವು ದಾಖಲಿಸಿದೆ. ಇದು ಆರ್​ಸಿಬಿಗೆ ಹಾಲಿ ಆವೃತ್ತಿಯಲ್ಲಿ ದೊರಕಿದ ಸತತ ಐದನೇ ಹಾಗೂ ಒಟ್ಟು 6ನೇ ಗೆಲುವಾಗಿದೆ. ಈ ಮೂಲಕ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಫಾಫ್​ ಡು ಪ್ಲೆಸಿಸ್ ಬಳಗ ಪ್ಲೇಆಫ್ ಹಂತಕ್ಕೆ ಏರಬೇಕಾದರೆ ಇನ್ನೊಂದು ಕಡ್ಡಾಯ ಗೆಲುವು ಹಾಗೂ ಇನ್ನೊಂದಿಷ್ಟು ಉಳಿದ ತಂಡಗಳ ಪಂದ್ಯಗಳ ಲೆಕ್ಕಾಚಾರ ಅಗತ್ಯವಿದೆ. ಆದರೆ ಆರ್​ಸಿಬಿ ತಂಡ ಕಳೆದ ಕೆಲವು ಪಂದ್ಯಗಳಲ್ಲಿ ಆಡುತ್ತಿರುವ ರೀತಿ ಮಾತ್ರ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ. ಅದೇ ರೀತಿ ಆಟಗಾರರಿಗೆ ಅತಿ ಹೆಚ್ಚು ಉತ್ಸಾಹವನ್ನು ನೀಡಿದೆ. ಅಂತೆಯೇ ತವರಿನ ಮೈದಾನದಲ್ಲಿ ಗೆದ್ದಿರುವುದು ಗೆದ್ದಿರುವುದು ಇಡೀ ಆರ್​ಸಿಬಿ ಪಾಳೆಯದ ಖುಷಿ ಹೆಚ್ಚಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

ಇದನ್ನೂ ಓದಿ: Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

ಮೊದಲು ಬ್ಯಾಟ್ ಮಾಡಿದ ಆರ್​​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಫಾಫ್​​ ಡು ಪ್ಲೆಸಿಸ್ ಮತ್ತೆ 6 ರನ್​ಗೆ ಔಟಾದರು. ಅದೇ ರೀತಿ ಉತ್ತಮ ರೀತಿಯಲ್ಲಿ ಬ್ಯಾಟ್​ ಮಾಡುತ್ತಿದ್ದ ವಿರಾಟ್ ಕೊಹ್ಲಿ 27 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಜತ್​ ಪಾಟೀದಾರ್​ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಅವರು 32 ಎಸೆತಕ್ಕೆ 52 ರನ್​ ಬಾರಿಸಿದರು. ಅವರಿಗೆ ವಿಕ್​ ಜ್ಯಾಕ್ಸ್ ಉತ್ತಮ ಜತೆಯಾಟ ನೀಡಿ 29 ಎಸೆತಕ್ಕೆ 41 ರನ್ ಬಾರಿಸಿ 100 ರನ್ ಗಡಿ ದಾಟಲು ಸಹಾಯ ಮಾಡಿದರು. ಇವರಿಬ್ಬರು ಔಟಾದ ಬಳಿಕ ಆರ್​ಸಿಬಿ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕ್ಯಾಮೆರೂನ್ ಗ್ರೀನ್​ 32 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮಹಿಪಾಲ್​ ಲಾಮ್ರೋರ್​ 13 ರನ್ ಬಾರಿಸಿದರು.

ಡೆಲ್ಲಿಯ ಕುಸಿತ

ಅರ್​ಸಿಬಿ ತಂಡ ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿತು. ಜತೆಗೆ ಅದೃಷ್ಟವೂ ಆರ್​ಸಿಬಿಯ ಪರವಾಗಿತ್ತು. ಡೇವಿಡ್​ ವಾರ್ನರ್​ 1 ರನ್​ ಗೆ ಔಟಾರೆ ಜೇಕ್​ ಫ್ರೇಸರ್ ಮೆಗ್​ಕುರ್ಕ್​ 21 ರನ್ ಬಾರಿಸಿದ ಹೊರತಾಗಿಯೂ ದುರದೃಷ್ಟದ ರನ್​ಔಟ್​ಗೆ ಒಳಗಾಯಿತು. ಶಾಯ್​ ಹೋಪ್​ 29 ರನ್ ಗೆ ಔಟಾದರೆ ಅಭಿಷೇಕ್​ ಪೊರೆಲ್​ 1ರನ್​ ಗೆ ಸೀಮಿತಗೊಂಡರು. ವಿಕೆಟ್​ಗಳು ಉರುಳುತ್ತಿರುವ ನಡುವೆಯೂ ಹಂಗಾಮಿ ನಾಯಕ ಅಕ್ಷರ್​ ಪಟೇಲ್​ 39 ಎಸೆತಕ್ಕೆ 57 ರನ್ ಬಾರಿಸಿದರು. ಅವರು ಇನಿಂಗ್ಸ್ ಆರ್​ಸಿಬಿಗೆ ಭಯ ಉಂಟು ಮಾಡಿದರೂ ಒತ್ತಡದ ನಡುವೆ ಅವರು ಔಟಾದರು.

ಆರ್​ಸಿಬಿ ಪರ ಯಶ್​ ದಯಾಳ್​ 20 ರನ್​ಗೆ 3 ವಿಕೆಟ್​ ಪಡೆದರೆ ಲಾಕಿ ಫರ್ಗ್ಯೂಸನ್​ 23 ರನ್​ ಗೆ 2 ವಿಕೆಟ್​ ಪಡೆದರು.

Continue Reading

Latest

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Virar kohli: ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು.

VISTARANEWS.COM


on

Virat kohli
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2024 ರ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೋಪಗೊಂಡ ಪ್ರಸಂಗ ನಡೆಯಿತು. ವಿವಾದಾತ್ಮಕ ಅಂಪೈರ್ ನಿರ್ಧಾರದ ಬಗ್ಗೆ ಆನ್ ಫೀಲ್ಡ್ ಅಂಪೈರ್ ಜೊತೆ ಅವರು ತೀವ್ರ ವಾಗ್ವಾದ ನಡೆಸಿದರು. ಅಭಿಷೇಕ್ ಪೊರೆಲ್ ಅವರಿಗೆ ನೀಡಲಾದ ಎಲ್​ಬಿಡಬ್ಲ್ಯು ನಿರ್ಧಾರದ ವಿರುದ್ಧ ಕೊಹ್ಲಿ ಸಿಡಿದೆದ್ದರು. ಡಿಸಿ ರನ್ ಚೇಸ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಈ ಘಟನೆ ನಡೆದಿದೆ.

ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು. ಅವರು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜತೆ ಸೇರಿ ಅಂಪೈರ್ ಜತೆ ಜಗಳಕ್ಕೆ ನಿಂತರು. ವಿಷಯದ ಬಗ್ಗೆ ಅಂಪೈರ್​ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.

ಇದನ್ನೂ ಓದಿ: Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್​ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್​ ಯಶಸ್ವಿಯಾದರು. ಆರ್​​ಸಿಬಿ ಇನ್ನಿಂಗ್ಸ್​​ನ ನಿದಕ ಓವರ್​ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.

ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.


ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್​ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್​​ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್​ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.

Continue Reading

ಪ್ರಮುಖ ಸುದ್ದಿ

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

Sunil Narine: ಪವರ್​​ಪ್ಲೇನಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್ ಪಡೆದ ನಂತರ, ಸ್ಪಿನ್ನರ್ ಐಪಿಎಲ್ ಇತಿಹಾಸದಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತ ಋತುವಿನಲ್ಲಿ ನರೈನ್ 461 ರನ್ ಮತ್ತು 15 ವಿಕೆಟ್ ಪಡೆದಿದ್ದಾರೆ.

VISTARANEWS.COM


on

Sunil Narine
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್​ರೌಂಡರ್​ ಸುನಿಲ್ ನರೈನ್ (Sunil Narine) ಶೇನ್ ವ್ಯಾಟ್ಸನ್ ಮತ್ತು ಜಾಕ್ ಕಾಲಿಸ್ ನಂತರ ಒಂದೇ ಋತುವಿನಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಡನ್ ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ಶನಿವಾರ ನಡೆದ ಐಪಿಎಲ್ 2024 ರ ಮುಖಾಮುಖಿಯಲ್ಲಿ ಕೆಕೆಆರ್ ಸ್ಪಿನ್ನರ್​​​ಗಳು ಅದ್ಭುತ ಪ್ರಯತ್ನ ನಡೆಸಿದರು ಈ ವೇಳೆ ಸುನೀಲ್​ ನರೈನ್ ಅಮೋಘ ಸಾಧನೆ ಮಾಡಿದರು.

ಮುಂಬೈ ಇಂಡಿಯನ್ಸ್ 158 ರನ್​​ಗಳ ರನ್ ಚೇಸ್ ಮಾಡಲು ಮುಂದಾದಾಗ ನರೈನ್ ಸೇರದಂತೆ ಸ್ಪಿನ್ನರ್​ಗಳು ಹಳಿ ತಪ್ಪಿಸಿದರು. ಅವರನ್ನು 16 ಓವರ್ಗಳಲ್ಲಿ 139/8 ಕ್ಕೆ ಸೀಮಿತಗೊಳಿಸಿದರು. ಮತ್ತು ಎರಡು ಬಾರಿಯ ಚಾಂಪಿಯನ್ಸ್ ಕೆಕೆಆರ್​ ಪ್ಲೇಆಫ್ ತಲುಪಿದ ಮೊದಲ ತಂಡವಾಯಿತು.

ಈ ಮೊದಲು ಮಳೆಯಿಂದ ಪಂದ್ಯವನ್ನು 16 ಓವರ್​ಗಳ ಪಂದ್ಯವನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ ನರೈನ್ ತಮ್ಮ ಮೂರು ಓವರ್​ಗಳಲ್ಲಿ ಒಂದು ವಿಕೆಟ್ ಪಡೆದರು. ಪವರ್​​ಪ್ಲೇನಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್ ಪಡೆದ ನಂತರ, ಸ್ಪಿನ್ನರ್ ಐಪಿಎಲ್ ಇತಿಹಾಸದಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತ ಋತುವಿನಲ್ಲಿ ನರೈನ್ 461 ರನ್ ಮತ್ತು 15 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವಾಟ್ಸನ್ (472 ರನ್, 17 ವಿಕೆಟ್) ಹಾಗೂ 2012ರ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಕಾಲಿಸ್ (409 ರನ್, 15 ವಿಕೆಟ್) ಈ ಸಾಧನೆ ಮಾಡಿದ್ದಾರೆ.

IPL 2024 : ಕೆಕೆಆರ್ ತಂಡದ ಇನ್ನೊಬ್ಬ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

ಇಲ್ಲಿನ ಈಡನ್ ಗಾರ್ಡನ್ಸ್​ನಲ್ಲಿ ಮೇ 11 ರಂದು ನಡೆದ ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 18 ರನ್​ಗಳ ಗೆಲುವು ಸಾಧಿಸಿದ ಸಂದರ್ಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್ಮನ್ ರಮಣ್​ದೀಪ್​ ಸಿಂಗ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಪ್ರಕಾರ ರಮಣ್​​ದೀಪ್​ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ ಎಂದು ಸಾಬೀತಾಗಿದೆ. ಈ ಅಪರಾಧಕ್ಕಾಗಿ ಕೆಕೆಆರ್ ಬ್ಯಾಟರ್​ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.

27 ವರ್ಷದ ಆಟಗಾರ ಅಪರಾಧ ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ತೆಗೆದುಕೊಂಡ ನಿರ್ಧಾರಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.

Continue Reading

ಪ್ರಮುಖ ಸುದ್ದಿ

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Virat kohli: ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.

VISTARANEWS.COM


on

Virat Kohli
Koo

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್​ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್​ ಯಶಸ್ವಿಯಾದರು. ಆರ್​​ಸಿಬಿ ಇನ್ನಿಂಗ್ಸ್​​ನ ನಿದಕ ಓವರ್​ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.

ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.

ಇದನ್ನೂ ಓದಿ: Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್​ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್​​ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್​ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.

ಇಶಾಂತ್ ಶರ್ಮಾ ಈ ವಿಕೆಟ್​​ನಿಂದ ಸಂತೋಷಪಟ್ಟರು. ಅದರ ಬಗ್ಗೆ ಕೊಹ್ಲಿಗೆ ತಿಳಿಸಲು ನಿರ್ಧರಿಸಿದರು. ಕೊಹ್ಲಿ ನಿರ್ಗಮಿಸುವ ಮೊದಲು ಇಬ್ಬರೂ ಆಟಗಾರರು ನಗುವನ್ನು ಹಂಚಿಕೊಂಡರು. ಕೊಹ್ಲಿ 13 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 27 ರನ್ ಗಳಿಸಿ ನಿರ್ಗಮಿಸಿದರು. ರಜತ್ ಪಾಟಿದಾರ್ ಹಾಗೂ ವಿಲ್ ಜಾಕ್ಸ್ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ 9 ವಿಕೆಟ್​ಗೆ 187 ರನ್ ಗಳಿಸಿದೆ.

ಐಪಿಎಲ್ 2024 ರಲ್ಲಿ ಕೊಹ್ಲಿಯ ಅಭಿಯಾನದ ಬಗ್ಗೆ ಮಾತನಾಡುತ್ತಾ, ಅವರು ಅದ್ಭುತ ರನ್ ಗಳಿಸಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಡಿರುವ 13 ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 661 ರನ್ ಗಳಿಸಿದ್ದಾರೆ.

Continue Reading
Advertisement
shivamogga triple murder case
ಕ್ರೈಂ4 mins ago

Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

Turbo Trailer Out mammoottys raj b shetty looks menacing
ಮಾಲಿವುಡ್9 mins ago

Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

prajwal revanna case
ಪ್ರಮುಖ ಸುದ್ದಿ48 mins ago

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

Health Tips Kannada Stay away from these foods to get rid of acne
ಆಹಾರ/ಅಡುಗೆ49 mins ago

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

Kannada New Movie meghashri starrer kuntebille goes on floor
ಸ್ಯಾಂಡಲ್ ವುಡ್1 hour ago

Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

Brinda Acharya Saavira Gungali Video Song Out
ಸ್ಯಾಂಡಲ್ ವುಡ್1 hour ago

Brinda Acharya: ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ-ಭರತ್ ಬೋಪಣ್ಣ!

pm narendra Modi Varanasi road show
Lok Sabha Election 20242 hours ago

PM Nanrendra Modi: ನಾಳೆ ವಾರಾಣಸಿಯಲ್ಲಿ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ, ಇಂದು ವೈಭವದ ರೋಡ್‌ ಶೋ

Food Tips Kannada adulterated food effect health
ಲೈಫ್‌ಸ್ಟೈಲ್2 hours ago

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Jyoti Rai seeks divine blessings at tirupathi
ಕಿರುತೆರೆ2 hours ago

Jyoti Rai: ವೈರಲ್ ವಿಡಿಯೊ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್‌ ರನ್‌!

Kochi Tour
ಪ್ರವಾಸ2 hours ago

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather forecast karnataka rains
ಮಳೆ4 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ5 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ16 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ16 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ17 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ20 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ22 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

ಟ್ರೆಂಡಿಂಗ್‌