3 ವರ್ಷದ ಮಗುವನ್ನು ಕೊಂದು ಚಲಿಸುತ್ತಿದ್ದ ರೈಲಿನಿಂದ ಎಸೆದ ತಾಯಿ; ಹಳಿ ಮೇಲೆ ಶವ ಬಿದ್ದು ಪೊಲೀಸರ ಬಳಿ ಸಿಕ್ಕಿಬಿದ್ದಳು - Vistara News

ಕ್ರೈಂ

3 ವರ್ಷದ ಮಗುವನ್ನು ಕೊಂದು ಚಲಿಸುತ್ತಿದ್ದ ರೈಲಿನಿಂದ ಎಸೆದ ತಾಯಿ; ಹಳಿ ಮೇಲೆ ಶವ ಬಿದ್ದು ಪೊಲೀಸರ ಬಳಿ ಸಿಕ್ಕಿಬಿದ್ದಳು

ಮಗುವಿನ ತಾಯಿ ಮತ್ತು ಆಕೆಗೆ ಸಹಾಯ ಮಾಡಿದ ಅವಳ ಪ್ರಿಯಕರ ಇಬ್ಬರನ್ನೂ ರಾಜಸ್ಥಾನ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.

VISTARANEWS.COM


on

Woman Kills Daughter In Rajasthan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಹೆಣ್ಣು ಮಗುವನ್ನೇ ಕೊಂದು, ಅದರ ಶವವನ್ನು ರೈಲಿನಿಂದ ಎಸೆದಿದ್ದಾಳೆ. ಈ ಕೃತ್ಯಕ್ಕೆ ಆಕೆಗೆ ಅವಳ ಪ್ರಿಯಕರ ಸಹಾಯ ಮಾಡಿದ್ದಾನೆ. ಸದ್ಯ ಇಬ್ಬರೂ ಬಂಧಿತರಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇಂಥದ್ದೊಂದು ಘಟನೆ ನಡೆದಿದ್ದು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ. ಆರೋಪಿಗಳು ಸುನೀತಾ ಮತ್ತು ಆಕೆಯ ಪ್ರಿಯಕರ ಸನ್ನಿ ಅಲಿಯಾಸ್​ ಮಾಲ್ತಾ. ಈ ಸುನೀತಾಗೆ ಈಗಾಗಲೇ ಮದುವೆಯಾಗಿ ಐವರು ಮಕ್ಕಳು ಇದ್ದಾರೆ. ಆದರೆ ಪತಿಯಿಂದ ದೂರವಾಗಿ, ಸನ್ನಿ ಜತೆ ಇದ್ದಳು. ಇಬ್ಬರು ಮಕ್ಕಳು ಸುನೀತಾ ಜತೆ ಮತ್ತು ಮೂವರು ಮಕ್ಕಳು ಆಕೆಯ ಪತಿ ಜತೆ ವಾಸವಾಗಿದ್ದರು. ಇಬ್ಬರು ಹೆಣ್ಣುಮಕ್ಕಳಲ್ಲಿ ಕೊನೇ ಮಗುವನ್ನು ಸುನೀತಾ ಕೊಂದಿದ್ದಾಳೆ.
ಸನ್ನಿ ಸಹಾಯದಿಂದ ಮನೆಯಲ್ಲೇ ಮಗುವನ್ನು ಕೊಂದ ಸುನೀತಾ ಅದನ್ನು ಒಂದು ಬೆಡ್​​ಶೀಟ್​​ನಲ್ಲಿ ಸುತ್ತಿಕೊಂಡು ಮುಂಜಾನೆಯೇ ಶ್ರೀಗಂಗಾನಗರ ರೈಲ್ವೆ ಸ್ಟೇಶನ್​​ಗೆ ಆಗಮಿಸಿದ್ದಳು. ಜತೆಗೆ ಸನ್ನಿಯೂ ಇದ್ದ. ಇವರಿಬ್ಬರೂ ಸೋಮವಾರ ಬೆಳಗ್ಗೆ 6.10ಕ್ಕೆ ಸ್ಟೇಶನ್​​ನಿಂದ ಹೊರಡುವ ರೈಲನ್ನು ಹತ್ತಿದ್ದಾರೆ. ಆ ರೈಲು ಸ್ವಲ್ಪ ದೂರ ಚಲಿಸಿ ಕಾಲುವೆಯ ಸೇತುವೆ ಬಳಿ ಬಂದಾಗ ಸುನೀತಾ ಮಗುವನ್ನು ಎಸೆದಿದ್ದಾಳೆ. ಆ ಮಗುವನ್ನು ಕಾಲುವೆಗೆ ಎಸೆಯುವುದು ಸುನೀತಾ-ಸನ್ನಿ ಉಪಾಯವಾಗಿತ್ತು. ಆದರೆ ಅದು ತಪ್ಪಿ ರೈಲ್ವೆ ಹಳಿ ಮೇಲೆಯೇ ಬಿದ್ದಿತ್ತು ಮತ್ತು ಮರುದಿನ ಆ ಶವ ಸಿಕ್ಕಿ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.

ಅಂತಿಮವಾಗಿ ಆ ಮಗು ಸುನೀತಾಳದ್ದೇ ಎಂದು ಗೊತ್ತಾದಾಗ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ಸನ್ನಿಯನ್ನೂ ಬಂಧಿಸಿದ್ದಾರೆ. ತಾನೇ ಮಗುವನ್ನು ಹತ್ಯೆಗೈದಿದ್ದೇನೆ ಎಂದು ಸುನೀತಾ ಒಪ್ಪಿಕೊಂಡಿದ್ದಾಳೆ. ಈ ಕೇಸ್​​ನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Road Accident: ಮುಂಬಯಿ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ; 4 ವರ್ಷದ ಮಗು ಸೇರಿ 9 ಜನ ಸ್ಥಳದಲ್ಲೇ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Reels Obsession : ಶೋಕಿಲಾಲನ ವಿರುದ್ಧ ಚಿತ್ರದುರ್ಗದಲ್ಲೂ ಕೇಸ್‌; ಡಮ್ಮಿ ಗನ್‌ ಕೊಟ್ಟ ಸ್ಯಾಂಡಲ್‌ವುಡ್‌ ಟೆಕ್ನಿಷಿಯನ್‌ಗೆ ಸಂಕಷ್ಟ

Reels Obsession: ಮೊನ್ನೆಯಷ್ಟೇ ರೀಲ್ಸ್‌ಗಾಗಿ ಡಮ್ಮಿ ಗನ್‌ ಹಿಡಿದು ಶೋಕಿ ಮಾಡಿದ ಕಾರಣಕ್ಕೆ ರೀಲ್ಸ್‌ ಸ್ಟಾರ್‌ ಅರೆಸ್ಟ್‌ ಆಗಿದ್ದ. ಆದರೆ ಈತನ ವಿರುದ್ಧ ಚಿತ್ರದುರ್ಗದಲ್ಲೂ ಕೇಸ್‌ ದಾಖಲಾಗಿದ್ದು, ಡಮ್ಮಿ ಗನ್‌ ಕೊಟ್ಟ ಸ್ಯಾಂಡಲ್‌ವುಡ್‌ ಟೆಕ್ನಿಷಿಯನ್‌ಗೆ ಸಂಕಷ್ಟ ಎದುರಾಗಿದೆ.

VISTARANEWS.COM


on

By

Reels Obsession who gave dummy gun To Reels Obsession Sandalwood technician now trouble
ಸಿನಿಮಾ ಟೆಕ್ನಿಷಿಯನ್ ಸಾಹಿಲ್‌ಗೆ ಪೊಲೀಸರಿಂದ ನೋಟಿಸ್‌.. ಡಮ್ಮಿ ಗನ್‌ ಹಿಡಿದು ಶೋಕಿ ಮಾಡಿದ ಅರುಣ್‌ ಕಟಾರೆ
Koo

ಚಿತ್ರದುರ್ಗ/ಬೆಂಗಳೂರು: ರೀಲ್ಸ್‌ಗಾಗಿ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು ಶೋಕಿ (Reels Obsession) ಮಾಡಿದ ಅರುಣ್‌ ಕಟಾರೆ ಎಂಬಾತನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆದರೆ ಕಳೆದ ವರ್ಷವೇ ಚಿತ್ರದುರ್ಗದಲ್ಲಿ ಅರುಣ್‌ ವಿರುದ್ಧ ಪ್ರತ್ಯೇಕ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

ಶೋಕಿಲಾಲ ಅರುಣ್‌ ಕಟಾರೆ ವಿರುದ್ಧ ಕಳೆದ 2023ರ ಏಪ್ರಿಲ್ ಹಾಗೂ ಜುಲೈನಲ್ಲಿ ಬ್ಲ್ಯಾಕ್‌ಮೇಲ್‌ ಹಾಗೂ ಚೀಟಿಂಗ್‌ ಮಾಡಿರುವ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಬಾಲಕನಿಗೆ ಮದ್ಯ ಕುಡಿಸಿ, ಸಿಗರೇಟ್ ಸೇದಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಬೆದರಿಸುತ್ತಿದ್ದ. ಮನೆಯಿಂದ ಒಡವೆ ತರುವಂತೆ ಬಾಲಕನಿಗೆ ಅರುಣ್ ಕಟಾರೆ ಬೆದರಿಸುತ್ತಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕನ ತಂದೆ ಬಾಲಾಜಿ ಎಂ.ಕೆ ಎಂಬುವವರಿಂದ ದೂರು ದಾಖಲಿಸಿದ್ದರು.

ಹಣ ಡಬಲ್‌ ಮಾಡುವುದಾಗಿ ವಂಚನೆ

ಮತ್ತೊಬ್ಬರಿಗೆ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಸುಮಾರು 3,68,000 ಹಣ ಪಡೆದು ಅರುಣ್ ಕಟಾರೆ ವಂಚಿಸಿದ್ದಾನೆ. ಡ್ಯೂಯೆಟ್ ಪಬ್‌ನಲ್ಲಿ ಬಂಡವಾಳ ಹಾಕಿ ಡಬಲ್ ಮಾಡುವುದಾಗಿ ಹೇಳಿದ್ದ. ವಂಚನೆಗೆ ಒಳಗಾದ ರವಿತೇಜ ಎಲ್.ಯು ಎಂಬುವುವರಿಂದ ದೂರು ದಾಖಲಾಗಿದೆ. ರವಿತೇಜನಿಂದ ಹಣ ಪಡೆದ ಬಳಿಕ ಫೋನ್ ಸ್ವಿಚ್ ಮಾಡಿಕೊಂಡು ಅರುಣ್‌ ಕಟಾರೆ ಪರಾರಿ ಆಗಿದ್ದ.

ಸ್ಯಾಂಡಲ್‌ವುಡ್‌ ಟೆಕ್ನಿಷಿಯನ್‌ಗೆ ಸಂಕಷ್ಟ

ಅರುಣ್‌ ಕಟಾರೆ ರೀಲ್ಸ್ ಶೋಕಿಯಿಂದಾಗಿ ಸ್ಯಾಂಡಲವುಡ್‌ನ ಟೆಕ್ನಿಷಿಯನ್‌ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್‌ಗೆ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್‌ಗಳ ಸಿನಿಮಾಗಳಿಗೆ ಸಾಹಿಲ್ ಟೆಕ್ನಿಷಿಯನ್ ಆಗಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಬ್ಜ, ಭೈರತಿ ರಣಗಲ್, ಮಪ್ತಿ ಸಿನಿಮಾಗಳಿಗೆ ಟೆಕ್ನಿಷಿಯನ್ ಸಾಹಿಲ್ ಡಮ್ಮಿ ಗನ್ ಒದಗಿಸಿದ್ದರು. ಇದೇ ಸಾಹಿಲ್ ಬಳಿ ಅರುಣ್ ಕಟಾರೆ ಡಮ್ಮಿ ಗನ್ ಬಾಡಿಗೆ ಪಡೆದಿದ್ದರು. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಡಮ್ಮಿ ಗನ್‌ ಅನ್ನು ಅರುಣ್ ಕಟಾರೆ ಬಳಸಿದ್ದ. ಸದ್ಯ ಕೊತ್ತನೂರು ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಅರುಣ್ ಕಾಟೇರ, ಸಾಹಿಲ್ ಬಳಿ ಶಾರ್ಟ್ ಮೂವಿಗೆ ಎಂದು ಡಮ್ಮಿ ಗನ್ ಬಾಡಿಗೆ ತೆಗೆದುಕೊಂಡಿದ್ದ. ಈಗ ಕೊತ್ತನೂರು ಪೊಲೀಸರು ಸಾಹಿಲ್‌ಗೆ ನೊಟೀಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!

ಏನಿದು ಪ್ರಕರಣ?

ಬೆಂಗಳೂರು: ರೀಲ್ಸ್‌ಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದರು. ಈತ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್‌ ಕಂಡು ಜನ ಆತಂಕಕ್ಕೊಳಗಾಗಿದ್ದರು.

ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದರು. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದರು.

ಈತ ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು. ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿತ್ತು. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Dhruva Sarja: ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಹಲ್ಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!

Dhruva Sarja: ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಆ ಬಳಿಕ ಪ್ರಶಾಂತ್ ಪೂಜಾರಿಗೆ ಹಲ್ಲೆ ಮಾಡಿದ್ದರು. ಸದ್ಯ ಬಂಧನ ಭೀತಿಯಿಂದ ಆರೋಪಿಗಳು ಜಾಮೀನು ಪಡೆದಿದ್ದಾರೆ. ಈಗ ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿಯಿಂದಲೂ ಪೊಲೀಸರಿಗೆ ಸಹಕಾರ ಸಿಗುತ್ತಿಲ್ಲ . ಹಲ್ಲೆಯಾದಾಗಲು ಪ್ರಶಾಂತ್ ಪೂಜಾರಿ ದೂರು ನೀಡಲು ಹಿಂದೇಟಾಕಿದ್ದರು. ಈಗ ಧ್ರುವ ಸರ್ಜಾರಿಂದಲೂ ಪೊಲೀಸರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇನ್ನು ತಮ್ಮವರೇ ಎಂದು ನಟ ಧ್ರುವ ಸರ್ಜಾ ಸುಮ್ಮನಾಗಿದ್ದಾರೆ.

VISTARANEWS.COM


on

Dhruva Sarja Gym Trainer Prashanth poojari twist
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದಂತಾಗಿದೆ. ಧ್ರುವ ಸರ್ಜಾ ಜತೆ ಹತ್ತಿರವಾಗಬೇಕು ಎಂದು ಅಟ್ಯಾಕ್‌ ನಡೆದಿತ್ತು ಎಂದು ತಿಳಿದು ಬಂದಿದೆ. ಈ ವಿಚಾರ ಗೊತ್ತಿಲ್ಲದೇ ದಕ್ಷಿಣ ವಿಭಾಗ ಡಿಸಿಪಿಗೆ ಧ್ರುವ ಸರ್ಜಾ ಕರೆ ಮಾಡಿದ್ದರು.

ಈ ಬಗ್ಗೆ ತನಿಖೆಗೆ ಇಳಿದ ಬನಶಂಕರಿ ಪೊಲೀಸರಿಂದ ಅಸಲಿ ಸತ್ಯ ಬಯಲಾಗಿದೆ. ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದು ಹರ್ಷ ಮತ್ತು ಸುಭಾಷ್. ಆದರೆ ಹಲ್ಲೆ ಮಾಡಿಸಿದ್ದು ಮಾತ್ರ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಮಾತ್ರವಲ್ಲ ನಾಗೇಂದ್ರ ಧ್ರುವ ಸರ್ಜಾಗೆ ಚಾಲಕನಾಗಿಯು ಕೆಲಸ ಮಾಡುತ್ತಿದ್ದ. ಪ್ರಶಾಂತ್ ಪೂಜಾರಿ ಇತ್ತೀಚೆಗೆ ಧ್ರುವ ಸರ್ಜಾಗೆ ಆಪ್ತನಾಗ್ತಿದ್ದ. ಇದು ನಾಗೇಂದ್ರನಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ ತಾನು ಹಲ್ಲೆ ಮಾಡಿದರೆ ಎಲ್ಲಿ ಹೊರಗೆ ಬರತ್ತೋ ಎಂದು ಹರ್ಷ ಮತ್ತು ಸುಭಾಷ್‌ಗೆ ಹಲ್ಲೆ ಮಾಡಲು ಹೇಳಿದ್ದ.

ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಆ ಬಳಿಕ ಪ್ರಶಾಂತ್ ಪೂಜಾರಿಗೆ ಹಲ್ಲೆ ಮಾಡಿದ್ದರು. ಸದ್ಯ ಬಂಧನ ಭೀತಿಯಿಂದ ಆರೋಪಿಗಳು ಜಾಮೀನು ಪಡೆದಿದ್ದಾರೆ. ಈಗ ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿಯಿಂದಲೂ ಪೊಲೀಸರಿಗೆ ಸಹಕಾರ ಸಿಗುತ್ತಿಲ್ಲ . ಹಲ್ಲೆಯಾದಾಗಲು ಪ್ರಶಾಂತ್ ಪೂಜಾರಿ ದೂರು ನೀಡಲು ಹಿಂದೇಟಾಕಿದ್ದರು. ಈಗ ಧ್ರುವ ಸರ್ಜಾರಿಂದಲೂ ಪೊಲೀಸರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇನ್ನು ತಮ್ಮವರೇ ಎಂದು ನಟ ಧ್ರುವ ಸರ್ಜಾ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ಕಳೆದ ಮೇ 26 ರಂದು ರಾತ್ರಿ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆಯಾಗಿತ್ತು. ಧ್ರುವಾ ಸರ್ಜಾ ಮನೆಯಿಂದ ತೆರಳುತ್ತಿದ್ದ ವೇಳೆ ಪ್ರಶಾಂತ್ ಪೂಜಾರಿಗೆ ಹಲ್ಲೆಯಾಗಿತ್ತು. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

Continue Reading

Latest

Robbery Video: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

Robbery Video: ಬೆಂಗಳೂರಿನ ಸಿಲ್ಕ್ ಬೋರ್ಡ್‌ನಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಚೀಲವನ್ನು ಹಿಡಿದು ನಿಂತಿದ್ದು, ಹಿಂದಿನಿಂದ ಬಂದ ಕಳ್ಳ ಅದನ್ನು ಕಸಿದುಕೊಂಡು ಓಡಿದ್ದಾನೆ. ಹಾಡಹಗಲಿನಲ್ಲಿ ಜನಸಂದಣಿ ಇರುವ ಕಡೆಯಲ್ಲೇ ಈತ ಕಳ್ಳತನ ಮಾಡಿದ್ದನ್ನು ಕಂಡು ಜನರು ಭಯಗೊಂಡಿದ್ದಾರೆ. ಈ ವಿಡಿಯೊ ಈಗ ವಿಡಿಯೊ ವೈರಲ್ ಆಗಿದೆ. ಬೆಂಗಳೂರು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಜನ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

VISTARANEWS.COM


on

Robbery Video
Koo

ಬೆಂಗಳೂರು: ಕಳ್ಳತನದ ಪ್ರಕರಣ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಕೇಳಿ ಬರುತ್ತಿದೆ. ಜನರಿಗೆ ದುಡಿಮೆ ಬಗ್ಗೆ ಆಸಕ್ತಿ ಕಡಿಮೆಯಾಗಿ ಸುಲಭವಾಗಿ ಹಣ ಸಂಪಾದಿಸಲು ಕಳ್ಳತನದ ಮಾರ್ಗವನ್ನು ಕಂಡುಕೊಳ್ಲುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವವೂ ಹೋಗಿದೆ. ಹಾಗಾಗಿ (Robbery Video) ಇಂತಹ ಕಳ್ಳತನ(Robbery Case )ವನ್ನು ಮಟ್ಟ ಹಾಕಲೇಬೇಕು. ಇದೀಗ ಬೆಂಗಳೂರಿನಲ್ಲಿ ಹಾಡಹಗಲಿನಲ್ಲೇ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಧ್ಯವಯಸ್ಕರೊಬ್ಬರ ಬ್ಯಾಗನ್ನು ಕಿತ್ತುಕೊಂಡು ಓಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್‍ನಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಚೀಲವನ್ನು ಹಿಡಿದು ನಿಂತಿದ್ದು, ಹಿಂದಿನಿಂದ ಬಂದ ಕಳ್ಳ ಅದನ್ನು ಕಸಿದುಕೊಂಡು ಓಡಿದ್ದಾನೆ. ಹಾಡಹಗಲಿನಲ್ಲಿ ಜನಸಂದಣಿ ಇರುವ ಕಡೆಯಲ್ಲಿ ಈತ ಕಳ್ಳತನ ಮಾಡಿದ್ದನ್ನು ಕಂಡು ಜನರು ಭಯಗೊಂಡಿದ್ದಾರೆ. ವೀಡಿಯೊದಲ್ಲಿ, ಯುವಕನೊಬ್ಬ ಜನಸಂದಣಿ ಇರುವ ಬಸ್ ನಿಲ್ದಾಣದಲ್ಲಿ ಮಧ್ಯವಯಸ್ಕ ವ್ಯಕ್ತಿಯನ್ನು ಗಮನಿಸುತ್ತಾ ಅವರ ಹಿಂದಿನಿಂದ ಬಂದು ಚೀಲವನ್ನು ಹಿಡಿದು ಕಸಿದುಕೊಂಡು ಪೇರಿ ಕಿತ್ತಿದ್ದಾನೆ. ಕಳ್ಳನು ಕೈಯಲ್ಲಿ ಚೀಲದೊಂದಿಗೆ ಓಡಿಹೋಗುತ್ತಿರುವುದು ಕಂಡು ಮಧ್ಯವಯಸ್ಕ ವ್ಯಕ್ತಿ ಸಹಾಯಕ್ಕಾಗಿ ಕೂಗಿದ್ದಾರೆ.

ಸಿಟಿಜನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ಎಂಬ ಕಮ್ಯುನಿಟಿ ಎಕ್ಸ್ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಹಾಡಹಗಲೇ ಬ್ಯಾಗ್ ಸ್ನ್ಯಾಚಿಂಗ್ ಮಾಡಲಾಗುತ್ತಿದೆ. ಈ ಜನರಿಗೆ ಧೈರ್ಯ ಎಲ್ಲಿಂದ ಬರುತ್ತಿದೆ. ದಯವಿಟ್ಟು ನಿಮ್ಮ ಜಾಗರೂಕತೆಯನ್ನು ಕಳೆದುಕೊಳ್ಳಬೇಡಿ!” ಎಂದು ಬರೆದಿದ್ದಾರೆ.

ಈ ವಿಡಿಯೊ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದೆ. ಹೊಸೂರು ರಸ್ತೆಯಲ್ಲಿ ಹಾಡಹಗಲೇ ಸರಗಳ್ಳತನ ಸಾಮಾನ್ಯವಾಗಿದೆ. ಬೆಂಗಳೂರು ಸಿಟಿ ಪೊಲೀಸರು ದಯವಿಟ್ಟು ಪ್ರಕರಣದ ಪರಿಸ್ಥಿತಿಯನ್ನು ಪರಿಶೀಲಿಸಿ. ಪ್ರತಿದಿನ ಕಾರುಗಳ ಮೂಲಕ ಬ್ಯಾಗ ಕಳ್ಳತನ ಮಾಡಲಾಗುತ್ತಿದೆ. ಇದರ ಹಿಂದೆ ಮಾಫಿಯಾ ಇದೆ. ನಾಗರಿಕರೇ, ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಎಲ್ಲರಿಗೂ ಕಾಣುವಂತೆ ತೋರಿಸಬೇಡಿ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

ಇನ್ನೊಬ್ಬ ಬಳಕೆದಾರರು “ಈ ಕೃತ್ಯದಲ್ಲಿ ಕೆಲವು ಪೊಲೀಸರು, ಬಿಎಂಟಿಸಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಹಾಗಾಗಿ ದರೋಡೆಕೋರರು ಸರಳವಾಗಿ ಈ ಕೆಲಸ ಮಾಡುತ್ತಿದ್ದಾರೆ. ಇಲ್ಲವಾದರೆ ಇಂತಹ ಘಟನೆ ಪ್ರತಿದಿನ ನಡೆಯುವುದಿಲ್ಲ” ಎಂಬುದಾಗಿ ತಿಳಿಸಿದ್ದಾರೆ. ಇಂತಹ ಪ್ರಕರಣದಿಂದ ಬೆಂಗಳೂರು ಜನರ ಜೀವನ ನರಕವಾಗಿದೆ ಎಂದು ನೆಟ್ಟಿಜನ್ ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

ಚಿಕ್ಕಬಳ್ಳಾಪುರ

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

Chikkaballapura News : ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ಒಂದು ವರ್ಷದ ಮಗುವನ್ನ ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್ ಆಗಿದ್ದಾಳೆ. ಮಗುವನ್ನು ತೊಟ್ಟಿಲಲ್ಲಿ ಹಾಕಿ ಬಿಟ್ಟೋಗ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Chikkaballapura News
Koo

ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಹೆತ್ತ ಮಗುವನ್ನು ಆಸ್ಪತ್ರೆಯಲ್ಲಿ (Chikkaballapura News) ಬಿಟ್ಟು ಓಡಿ ಹೋಗಿದ್ದಾಳೆ. ಒಂದು ವರ್ಷದ ಮಗುವನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ನಡೆದಿದೆ.

ಮಗುವನ್ನು ತೊಟ್ಟಿಲಲ್ಲಿ ಹಾಕಿ ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಕೆ ಮಗು ಬಿಟ್ಟು ಕ್ಷಣಾರ್ಧದಲ್ಲೇ ಮಾಯವಾಗಿದ್ದಾಳೆ.

ಮಗು ಅಳುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ತಾಯಿಗಾಗಿ ಹುಡುಕಾಟ ನಡೆಸಿ, ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ತರಾತುರಿಯಲ್ಲಿ ಬರುವ ಮಹಿಳೆ ಅತ್ತಿಂದಿತ್ತ ಕಣ್ಣಾಡಿಸಿ ಏಕಾಏಕಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಕಾಲ್ಕಿತ್ತಿದ್ದಾರೆ.

ಸದ್ಯ ಆಸ್ಪತ್ರೆ ಸಿಬ್ಬಂದಿ ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಮಗುವಿನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮಹಿಳೆ ಯಾಕಾಗಿ ಮಗುವನ್ನು ಬಿಟ್ಟು ಹೋಗಿದ್ದಾಳೆ? ಆ ಮಗು ಆಕೆಯದ್ದಾ ಅಥವಾ ಬೇರೆಯವರದ್ದಾ? ಹೀಗೆ ಎಲ್ಲ ಆಯಾಮದಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.

ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಈ ವೇಳೆ ದಯಾನಂದ್‌ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Mukesh Ambani
ದೇಶ38 mins ago

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

India's open-bus parade
ಪ್ರಮುಖ ಸುದ್ದಿ42 mins ago

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

Team India
ಪ್ರಮುಖ ಸುದ್ದಿ1 hour ago

Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

BS Yediyurappa
ಕರ್ನಾಟಕ1 hour ago

BS Yediyurappa: ಪೋಕ್ಸೊ ಕೇಸ್;‌ ಜುಲೈ 17ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಸ್‌ವೈಗೆ ಕೋರ್ಟ್‌ ಸಮನ್ಸ್!

Hatras Stampede
ದೇಶ2 hours ago

Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

PF Interest
ದೇಶ2 hours ago

PF Interest: ನೌಕರರಿಗೆ ಗುಡ್‌ ನ್ಯೂಸ್;‌ ಪಿಎಫ್‌ ಬಡ್ಡಿದರ ಘೋಷಿಸಿದ ಕೇಂದ್ರ ಸರ್ಕಾರ, ಎಷ್ಟಿದೆ ನೋಡಿ

Hardik Pandya
ಪ್ರಮುಖ ಸುದ್ದಿ2 hours ago

Hardik Pandya : ಅವಮಾನ ಮಾಡಿದ ಪ್ರೇಕ್ಷಕರಿಂದಲೇ ಜೈಕಾರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ!

Heavy rain in Uttara Kannada district district NDRF team for rescue says DC Gangubai Manakar
ಉತ್ತರ ಕನ್ನಡ2 hours ago

Uttara Kannada News: ಉ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

Central Govt approves quadrilateral road in Shira at a cost of Rs 1000 rs crore says TB Jayachandra
ತುಮಕೂರು2 hours ago

Shira News: ಶಿರಾದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಗೆ ಕೇಂದ್ರದಿಂದ ಅನುಮೋದನೆ: ಟಿ.ಬಿ ಜಯಚಂದ್ರ

Viral Video
Latest2 hours ago

Viral Video: ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ; ಜೀವ ಉಳಿಸಿದ ಹುಡುಗ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ6 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ7 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ9 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ9 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ10 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ11 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌