ಮೆಟ್ರೋ ಸಂಪರ್ಕಕ್ಕಾಗಿ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌ - Vistara News

ಬೆಂಗಳೂರು

ಮೆಟ್ರೋ ಸಂಪರ್ಕಕ್ಕಾಗಿ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌

ಇನ್ನು ಮುಂದೆ ಜೆಪಿ ನಗರ 3ನೇ ಹಂತದಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌ ಸಂಚರಿಸಲಿದೆ

VISTARANEWS.COM


on

Demand for implementation of 6th Pay Commission Transport employees call for protest from March 1
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೆ.ಪಿ.ನಗರ 3 ನೇ ಹಂತದಿಂದ ಮೈಸೂರು ರಸ್ತೆ ಮೆಟ್ರೋ ರೈಲು ನಿಲ್ದಾಣದವರೆಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ.

ಈ ಭಾಗದ ʼನಮ್ಮ ಮೆಟ್ರೋʼ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ‌ ಇನ್ನು ಮುಂದೆ ಬಸ್‌ ಸೇವೆ ಒದಗಿಸಲಿದೆ. ಇದು ಸಂಪೂರ್ಣ ಹೊಸ (ಎಂಎಫ್‌-20) ಮಾರ್ಗವಾಗಿದೆ.

ಜೆ.ಪಿ.ನಗರ 3 ನೇ ಹಂತದಿಂದ ಮೈಸೂರು ರಸ್ತೆ ಮೆಟ್ರೋ ರೈಲು ನಿಲ್ದಾಣದವರೆಗೆ ಈ ಸಂಚಾರ ನಡೆಯಲಿದ್ದು, ಈ ಬಸ್‌ ಡೆಲ್ಮೀಯಾ ಸರ್ಕಲ್ , ಜೆ.ಪಿ.ನಗರ 6 ನೇ ಹಂತ , ಕದಿರೇನಹಳ್ಳಿ ಕ್ರಾಸ್ , ಕತ್ರಿಗುಪ್ಪೆ , ಪಿಇಎಸ್ ಕಾಲೇಜು ಮಾರ್ಗವಾಗಿ ಮೈಸೂರು ರಸ್ತೆ ತಲುಪಲಿದೆ.

ಎಂಎಫ್ -20 ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳ ವೇಳಾಪಟ್ಟಿ ಇಂತಿದೆ;

ಜೆ.ಪಿ.ನಗರ 3 ನೇ ಹಂತಮೈಸೂರು ರಸ್ತೆ ಮೆಟ್ರೋ ರೈಲು ನಿಲ್ದಾಣ
05:35 , 06:00 , 06:20 , 06:45 , 07:05 , 07:30 , 07:50 , 08:15 , 08:35 , 09:00 , 09: 45 , 10:10 , 10:30 , 10:55 , 11:15 , 11:40 , 13:55 , 14:20 , 14:40 , 15:05 , 15:50 , 16:15 , 16:35 , 17:00 , 17:20 , 17:45 , 18:05 , 18:30 , 18:50 , 19:15 , 19:35 , 20:00 20:20 , 20:45 , 21:30 , 21:55 .05:35 , 06:00 , 06:20 , 06:45 , 07:05 , 07:30 , 07:50 , 08:15 , 08:35 , 09:00 , 09:45 , 10 :10 , 10:30 , 10:55 , 11:15 , 11:40 , 12:00 , 12:25 , 14:40 , 15:05 , 15:50 , 16:15 , 16:35 , 17:00 , 17:20 , 17:45 , 18:05 , 18:30 , 18:50 , 19:15 , 19:35 , 20:00 , 20:20 , 20:45 , 21:30 , 21:55 .

ಇದನ್ನೂ ಓದಿ: ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದಿಂದ 5 ಮಾರ್ಗದಲ್ಲಿ ಹೊಸ ಬಿಎಂಟಿಸಿ ಬಸ್‌ ಸೇವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

Book Release: ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಉದಯ ಪ್ರಕಾಶನದ ಸಹಯೋಗದಲ್ಲಿ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ಇದೇ ಜೂ. 6 ರಂದು ಬುಧವಾರ ಸಂಜೆ 5.30ಕ್ಕೆ ಜ್ಞಾನಸಿಂಧು ಚಿದಾನಂದಾವಧೂತರ ವೇದಾಂತ ಕಾವ್ಯ (ಸಂ. ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ) ಗ್ರಂಥ ಲೋಕಾರ್ಪಣೆ ಮತ್ತು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Grantha Lokarpane and award ceremony on June 5 in Bengaluru
Koo

ಬೆಂಗಳೂರು: ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಉದಯ ಪ್ರಕಾಶನದ ಸಹಯೋಗದಲ್ಲಿ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ಇದೇ ಜೂ. 5ರಂದು ಬುಧವಾರ ಸಂಜೆ 5.30ಕ್ಕೆ ಜ್ಞಾನಸಿಂಧು ಚಿದಾನಂದಾವಧೂತರ ವೇದಾಂತ ಕಾವ್ಯ (ಸಂ.: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ) ಗ್ರಂಥ ಲೋಕಾರ್ಪಣೆ (Book Release) ಮತ್ತು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಧಾರವಾಡದ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಮತ್ತು ಗ್ರಂಥ ಲೋಕಾರ್ಪಣೆ ಮಾಡುವರು. ಬೆಂಗಳೂರಿನ ಕರ್ನಾಟಕ ಗಾಂಧಿಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡುವರು. ಹುಬ್ಬಳ್ಳಿ ಸಿದ್ಧಾರೂಢ ಆಶ್ರಮದ ಟ್ರಸ್ಟಿ ಶಾಮಾನಂದ ಪೂಜೇರಿ ಗ್ರಂಥ ಪರಿಚಯ ಮಾಡುವರು.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

ಬೆಂಗಳೂರಿನ ಕೃಷ್ಣರಾಜಪುರದಲ್ಲಿರುವ ಸಿಲಿಕಾನ್‌ ಸಿಟಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಎಚ್‌.ಎಸ್‌. ಗೋವರ್ಧನ ಅವರು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಸ್ವೀಕರಿಸುವರು. ಬೆಂಗಳೂರಿನ ವರ್ತೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಚಂದ್ರಪ್ಪ, ಪ್ರೊ. ಮಲ್ಲೇಪುರಂ ಪುಸ್ತಕ ಬಹುಮಾನ (ದಿ. ಬಸಲಿಂಗಪ್ಪ ಮಲ್ಕಪ್ಪ ಕಟ್ಟಿ ಸ್ಮರಣಾರ್ಥ) ಸ್ವೀಕರಿಸುವರು.

ಇದನ್ನೂ ಓದಿ: Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ ಪಾಲ್ಗೊಳ್ಳುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಗ್ರಂಥ ಸಂಪಾದಕರ ನುಡಿಗಳನ್ನಾಡಲಿದ್ದಾರೆ.

Continue Reading

ಕರ್ನಾಟಕ

Valmiki Corporation Scam: ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಿಎಂ ಸಿದ್ದರಾಮಯಯ್ಯ ನೇರ ಹೊಣೆ ಎಂದ ಎಚ್‌ಡಿಕೆ

Valmiki Corporation Scam: ವಾಲ್ಮೀಕಿ ನಿಗಮದ ಹಗರಣದ ತನಿಖೆ ಆಮೆ ವೇಗದಲ್ಲಿದೆ. ಆದರೆ ಹಣ ವರ್ಗಾವಣೆ ಮಾತ್ರ ರಾಕೆಟ್ ವೇಗದಲ್ಲಿ ನಡೆದಿದೆ. ಎಲ್ಲಾ ನಿಗಮ ಮಂಡಳಿ ಹಣ ವ್ಯವಹಾರದ ಬಗ್ಗೆ ತನಿಖೆ ಆಗಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation Scam) ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಹೊರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎಲ್ಲವನ್ನೂ ಸಚಿವ ನಾಗೇಂದ್ರ ಅವರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಅಕ್ರಮದಲ್ಲಿ ಸರ್ಕಾರದ ಇಡೀ ಸಂಪುಟವೇ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಎಲ್ಲಾ ನಿಗಮ ಮಂಡಳಿಗಳಲ್ಲಿ ಇರುವ ಹಣದ ಬಗ್ಗೆ ಜನರ ಮುಂದೆ ಲೆಕ್ಕ ಇಡಬೇಕು ಎಂದು ಒತ್ತಾಯ ಮಾಡಿದರು.

ನಿಗಮದ ಹಣ ಹಲವಾರು ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಬಗ್ಗೆ ದಾಖಲೆಗಳೇ ಬಹಿರಂಗ ಆಗಿವೆ. ಕೇವಲ ತೆಲಂಗಾಣಕ್ಕೆ ಮಾತ್ರ ಈ ಹಣ ಯಾಕೆ ಹೋಯಿತು? ಯಾರು ವರ್ಗಾವಣೆ ಮಾಡಿಸಿದರು? ಇಲ್ಲಿ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಅದ ಕೆಲ ಹೊತ್ತಿನಲ್ಲಿ ನಕಲಿ ಬ್ಯಾಂಕ್ ಖಾತೆಗಳಿಂದ ರಾಕೆಟ್ ವೇಗದಲ್ಲಿ ಅಷ್ಟೂ ದೊಡ್ಡ ಮೊತ್ತ ಹಣವನ್ನು ಡ್ರಾ ಮಾಡಲಾಗಿದೆ. ಇದು ಬಹುದೊಡ್ಡ ಅಕ್ರಮ. ಸಿಎಂ ಸೇರಿದಂತೆ ಇಡೀ ಸಂಪುಟವೇ ಶಾಮೀಲಾಗಿದೆ ಎಂದು ಅವರು ನೇರ ಆರೋಪ ಮಾಡಿದರು.

ಇದನ್ನೂ ಓದಿ | PM Narendra Modi: ವಿಕಸಿತ ಭಾರತಕ್ಕೆ ಭದ್ರ ಅಡಿಪಾಯ; ದೇಶದ ಜನತೆಗೆ ಮೋದಿ ಭಾವುಕ ಪತ್ರ

ಕೇವಲ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಮಾತ್ರ ಹಣ ವರ್ಗಾವಣೆ ಆಗಿರಲು ಸಾಧ್ಯವಿಲ್ಲ. ಬೇರೆ ಬೇರೆ ಇಲಾಖೆಗಳ ನಿಗಮ ಮಂಡಳಿಗಳ ಖಾತೆಗಳಿಂದ ಹಣ ವರ್ಗ ಆಗಿರುವ ಸಾಧ್ಯತೆ ಇದೆ. ತೆಲಂಗಾಣ ಚುನಾವಣೆಗೆ ರಾಜ್ಯದಿಂದ ಯಾರೆಲ್ಲ ಉಸ್ತುವಾರಿಗಳು ಇದ್ದರು? ಅದನ್ನೆಲ್ಲ ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಎಲ್ಲಾ ನಿಗಮ ಮಂಡಳಿ ಹಣ ವ್ಯವಹಾರದ ಬಗ್ಗೆ ತನಿಖೆ ಆಗಲಿ

ಈ ಹಗರಣಕ್ಕೆ ಸಂಬಂಧಿಸಿ 14 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆ ಖಾತೆಗಳನ್ನು ತೆರೆದವರು ಯಾರು? ಯಾವೆಲ್ಲ ಕಾಣದ ಕೈಗಳು ಇವುಗಳ ಹಿಂದೆ ಇವೆ? ಎಲ್ಲಾ ಹೊರಗೆ ಬರಬೇಕು ಅಲ್ಲವೇ? ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಎನ್ನುವುದು ಇದೆಯಾ? ಎಲ್ಲಾ ನಿಗಮ ಮಂಡಳಿಗಳ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆದರೆ ಇನ್ನೆಷ್ಟು ಅಕ್ರಮಗಳು ಹೊರಗೆ ಬರುತ್ತವೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು.

ಹಣಕಾಸಿನ ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರೇ ಇದಕ್ಕೆಲ್ಲ ನೇರ ಜವಾಬ್ದಾರಿ ಹೊರಬೇಕು. ಹಗರಣದ ತನಿಖೆ ಬಗ್ಗೆ ಆಮೆ ವೇಗ! ಆದರೆ ಹಣ ವರ್ಗಾವಣೆ ಮಾಡಿಕೊಳ್ಳಲು ರಾಕೆಟ್ ವೇಗ!, ಇದು ಇವರ ಕಾರ್ಯವೈಖರಿ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಇಷ್ಟು ಮೊತ್ತದ ಹಣವನ್ನು ಯಾರ ನಿರ್ದೇಶನದ ಮೇರೆಗೆ ಮಾಡಿದ್ದರು. ನಿಗಮ ಆಡಳಿತ ಮಂಡಳಿ ಸಭೆಯಲ್ಲಿ ಇದೆಲ್ಲಾ ಚರ್ಚೆ ನಡೆದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಜನರ ತೆರಿಗೆ ಹಣ, ಅವರ ಬೆವರಿನ ಹಣ. ಜನರ ದುಡ್ಡನ್ನು ಇಷ್ಟು ಸ್ವೇಚ್ಛಾಚಾರವಾಗಿ ಬಳಕೆ ಮಾಡಿಕೊಂಡಿದ್ದಾರೆ. ನಿಮಗೆ ಯಾವ ನೈತಿಕತೆ ಇದೆ ಸಿದ್ದರಾಮಯ್ಯನವರೇ? ಬಡವರ ದುಡ್ಡನ್ನೇ ಕೊಳ್ಳೆ ಹೊಡೆಯೋದು, ಅವರನ್ನು ಉದ್ಧಾರ ಮಾಡುತ್ತಿದ್ದೇವೆ ಎಂದು ನಾಟಕ ಆಡೋದು. ಇದು ಯಾವ ಸೀಮೆ ಅಭಿವೃದ್ಧಿ? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದರು.

ಪ್ರಿಯಾಂಕ್ ಖರ್ಗೆ ಏನು ಹೇಳುತ್ತಾರೆ?

ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಹಳ ಮಾತನಾಡುತ್ತಾರೆ. ಪ್ರತಿಯೊಂದಕ್ಕೂ ಮುಂದೆ ಬಂದು ಹೇಳಿಕೆ ಕೊಡುತ್ತಾರೆ. ಇದಕ್ಕೂ ಅವರು ಉತ್ತರ ಕೊಡಲಿ. ಯಾರಪ್ಪನ ಮನೆಯ ದುಡ್ಡು ಇದು? ಕೇಂದ್ರ ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದು ಹೇಳುತ್ತೀರಿ, ಇನ್ನೊಂದು ಕಡೆ ಇರುವ ಹಣವನ್ನು ಹೀಗೆ ಲೂಟಿ ಮಾಡುತ್ತೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. KRDL ಖರ್ಗೆ ಅವರ ಇಲಾಖೆಗೆ ಸೇರಿದ್ದು. ಅಲ್ಲಿಯೂ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಪ್ರಿಯಾಂಕ್ ಮಾತಾಡ್ತಾರಾ? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಹೈ ಕಮಾಂಡ್ ಮಾಡಿಸಿದೆ

ದೆಹಲಿ ಕಾಂಗ್ರೆಸ್ ಹೈಕಮಾಂಡ್ ಮೂಗಿನ ನೇರದಲ್ಲೇ ಈ ಅಕ್ರಮ ಹಣದ ವರ್ಗಾವಣೆ ನಡೆದಿದೆ. ಹೈಕಮಾಂಡ್ ಸೂಚನೆ ಮೇರೆಗೆ ಹಣ ವರ್ಗಾವಣೆ ಆಗಿದೆ. 200 ಪರ್ಸೆಂಟ್ ಕಾಂಗ್ರೆಸ್‌ನ ಹೈಕಮಾಂಡ್ ಗಮನಕ್ಕೆ ಬಂದೇ ಇದೆಲ್ಲಾ ನಡೆದಿದೆ. ವಿವಿಧ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷ ರಾಜ್ಯದಿಂದಲೇ ಹಣ ಪೂರೈಕೆ ಮಾಡಿದೆ ಎನ್ನುವುದಕ್ಕೆ ಇದೇ ಸಾಕ್ಷ್ಯ ಎಂದು ಅವರು ಕಾಂಗ್ರೆಸ್ ಹೈ ಕಮಾಂಡ್ ಮೇಲೆಯೇ ನೇರ ಆರೋಪ ಮಾಡಿದರು.

ಈಗ ಎಸ್‌ಐಟಿ ರಚನೆ ಮಾಡಿ ಯಾರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಇವರು? ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಮರಣಪತ್ರದಲ್ಲಿ ಸಚಿವ ನಾಗೇಂದ್ರ ಹೆಸರನ್ನೂ ಬರೆದಿಲ್ಲ. 36 ಜನ ಸಚಿವರಿದ್ದಾರೆ, ನಾವು ಯಾರೂ ಅಂತ ಅಂದುಕೊಳ್ಳಬೇಕು ಹಲವಾರು ನಿಗಮ ಮಂಡಳಿಗಳಲ್ಲಿ ಹೀಗೆ ಆಗುತ್ತಿದೆ. ಎಲ್ಲವೂ ತನಿಖೆ ಆಗಬೇಕು ಎಂದು ಅವರು ಒತ್ತಾಯ ಮಾಡಿದರು.

ಇದನ್ನೂ ಓದಿ | Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

ಎಸ್‌ಐಟಿಯಿಂದ ಸಾಕ್ಷ್ಯ ನಾಶ

ಹಗರಣದಲ್ಲಿ ಯೂನಿಯನ್ ಬ್ಯಾಂಕ್ ಇರುವುದರಿಂದ ಸಿಬಿಐ ತನಿಖೆ ಆಗಿಯೇ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ಆದರೆ ದಾಖಲೆ ನಾಶ ಮಾಡಬಹುದು, ಕಡತಗಳನ್ನು ಸುಟ್ಟು ಹಾಕಬಹುದು. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಅವರ ಮನೆಯಿಂದ ಪೆನ್‌ಡ್ರೈವ್ ತೆಗೆದುಕೊಂಡು ತೆಗೆದುಕೊಂಡು ಬಂದರಲ್ಲ, ಆ ಪೆನ್ ಡ್ರೈವ್ ಎಲ್ಲಿದೆ ಈಗ? ಯಾಕೋ.. ಈ ಬಾರಿ ಪೆನ್ ಡ್ರೈವ್‌ ಹೆಚ್ಚು ಸದ್ದು ಮಾಡುತ್ತಿದೆ ಎಂದು ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಟಾಂಗ್ ಕೊಟ್ಟರು.

Continue Reading

ಮಳೆ

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Rain News : ಹಲವೆಡೆ ಮಳೆಯು ಅಬ್ಬರಿಸುತ್ತಿದೆ. ಸೋಮವಾರ ಪುತ್ತೂರಿನಲ್ಲಿ ಸುರಿದ ಅರ್ಧ ಗಂಟೆ ಮಳೆಗೆ (Karnataka Weather Forecast) ನದಿಯಂತಾಗಿತ್ತು. ಬೆಳಗಾವಿಯಲ್ಲೂ ನಿರಂತರ ಮಳೆಯಾಗಿದ್ದು, ಕೊಡಗಿಗೆ ಎನ್‍ಡಿಆರ್‍ಎಫ್ ತಂಡ ಭೇಟಿ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ (Heavy Rain ) ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka weather Forecast Putur rain
ಪುತ್ತೂರಿನಲ್ಲಿ ಮಳೆ ಅಬ್ಬರಕ್ಕೆ ನದಿಯಂತಾದ ರಸ್ತೆಗಳು
Koo

ಮಂಗಳೂರು/ಬೆಂಗಳೂರು: ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭಾರಿ (Heavy Rain) ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಜೂ.4ರಂದು ಗುಡುಗು ಸಹಿತ ಭಾರೀ ಮಳೆಯೊಂದಿಗೆ (Karnataka Weather forecast) ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ನದಿಯಂತಾದ ಪುತ್ತೂರಿನ ರಸ್ತೆಗಳು

ಸೋಮವಾರ ಸಂಜೆ ಪುತ್ತೂರಿನಲ್ಲಿ ಗುಡುಗು ಸಿಡಿಲಿನ ಭಾರೀ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಪುತ್ತೂರಿನ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿತ್ತು. ಪುತ್ತೂರಿನ ದರ್ಬೆಯ ಅಂಗಡಿ ಹಾಗೂ ಕೋರ್ಟ್ ರೋಡ್ ಬಳಿಯ ಜ್ಯುವೆಲ್ಲರಿ ಅಂಗಡಿಗಳು ಜಲಾವೃತಗೊಂಡಿತ್ತು. ಭಾರೀ ಮಳೆಗೆ ಪುತ್ತೂರಿನ ರಸ್ತೆಗಳು ನದಿಯಂತಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದೆ ಈ ಅವಾಂತರಕ್ಕೆ ಕಾರಣ ಎಂದು ಕಿಡಿಕಾರಿದರು.

karnataka weather Forecast

ಬೆಳಗಾವಿಯಲ್ಲೂ ಧಾರಾಕಾರ ಮಳೆ

ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಬೆಳಗಾವಿ ನಗರ ಸೇರಿ ಜಿಲ್ಲೆಯ ಹಲವಡೆ ಭಾರಿ ಮಳೆಗೆ ಬೀದಿ ಬದಿ ವ್ಯಾಪಾರಸ್ಥರು ಹೈರಾಣಾದರಿ. ಕಳೆದ ಹಲವು ದಿನಗಳಿಂದ ಬಿಸಿಲಿಗೆ ತತ್ತರಿಸಿದ ಜನಕ್ಕೆ ವರುಣ ತಂಪೆರೆದಿದ್ದಾನೆ.

ಇದನ್ನೂ ಓದಿ: Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

ಕೊಡಗಿಗೆ ಎನ್‍ಡಿಆರ್‍ಎಫ್ ತಂಡ ಭೇಟಿ

ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸುವ ಸಂಬಂಧ ಈಗಾಗಲೇ ಎನ್‍ಡಿಆರ್‍ಎಫ್ ತಂಡ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ತಂಡವು ಸೋಮವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಭೇಟಿ ಆಗಿದೆ. ಈ ವೇಳೆ ಎನ್‍ಡಿಆರ್‍ಎಫ್‍ನ ಅಜಯ್ ಕುಮಾರ್ ನೇತೃತ್ವದ ತಂಡವು ಜಿಲ್ಲಾಧಿಕಾರಿ ಜತೆಗೆ ಮಳೆಗಾಲದಲ್ಲಿ ಅನುಸರಿಸಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಿದರು.

karnataka weather Forecast

ಬಳಿಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಮಳೆ ಸಂಬಂಧ ಹವಾಮಾನ ಇಲಾಖೆಯಿಂದ ಕಾಲಕಾಲಕ್ಕೆ ಬಿಡುಗಡೆ ಆಗುವ ಮಾಹಿತಿಯನ್ನು ಅಪ್‍ಡೇಟ್ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರವಹಿಸಿ, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು. ಇದೇ ವೇಳೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವ, ಎನ್‍ಡಿಆರ್‍ಎಫ್ ತಂಡ ಪ್ರಮುಖರು ಇದ್ದರು. ಎನ್‍ಡಿಆರ್‍ಎಫ್ ತಂಡವು ಬೆಂಗಳೂರಿನ ಆರ್‍ಆರ್‍ಸಿ ವಿಭಾಗದಿಂದ ಆಗಮಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Bangalore Rain: ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಮಳೆ ಹಾನಿ ನಿರ್ವಹಣೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

VISTARANEWS.COM


on

Bangalore Rain
Koo

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಅವಾಂತರ (Bangalore Rain) ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಒಗ್ಗೂಡಿ ಮಳೆ ಹಾನಿ ನಿರ್ವಹಣೆ ಮಾಡಬೇಕು. ರಾಜಕಾಲುವೆ ಸರ್ಕಾರದ ಜಾಗ, ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಬೆಂಗಳೂರಿನಲ್ಲಿ 133 ವರ್ಷದ ನಂತರ ಭಾರಿ ಮಳೆಯಾಗಿದೆ. 261 ವಿದ್ಯುತ್ ಕಂಬಗಳು ಉರುಳಿದ್ದು, ಮೂವರಿಗೆ ಗಾಯಗಳಾಗಿವೆ. ನೆಲಕ್ಕುರುಳಿದ 96 ಮರಗಳನ್ನು ತೆರವು ಮಾಡಿದ್ದು, ನಾನೇ ಖುದ್ದು ಪರಿಶೀಲನೆ ಮಾಡಿದ್ದೇನೆ. ಮಳೆ ಹಾನಿ ಬಗ್ಗೆ 695 ದೂರುಗಳು ಬಂದಿವೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಎಲ್ಲರೂ ಒಟ್ಟಾಗಿ ಮಳೆ ಹಾನಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ. ರಾಜಕಾಲುವೆ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಲು ಅಧಿಕಾರಿಗಳಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ಹಳೆಯ ಕಟ್ಟಡಗಳು ಬೀಳದಂತೆ ನೋಡಿಕೊಳ್ಳಬೇಕು. ಶಿಥಿಲಾವಸ್ಥೆ ಇರುವ ಕಟ್ಟಡಗಳನ್ನು ತೆರವು ಮಾಡಬೇಕು. ಒಣಗಿರುವ ಮರಗಳನ್ನು ಸಹ ಗುರುತಿಸಿ ತೆಗೆದು ಹಾಕಬೇಕು. ಪ್ರತಿ ವಾರ್ಟ್‌ನಲ್ಲಿ ಮೋಟಾರ್ ಪಂಪ್‌ ಇಟ್ಟುಕೊಂಡು ನೀರು ತೆರವು ಮಾಡಬೇಕು. ಇದಕ್ಕೆ ದೊಡ್ಡ ಟೀಂ ಮಾಡಿ ಅಂತ ಹೇಳಿದ್ದೇನೆ. ವಿಶೇಷವಾಗಿ ಮಹದೇವಪುರ ವ್ಯಾಪ್ತಿಯಲ್ಲಿ ಸಮಸ್ಯೆ ಇದೆ. ಎನ್‌ಡಿಆರ್‌ಎಫ್‌ ಟೀಂ ಜತೆ ಟಚ್‌ನಲ್ಲಿ ಇರಬೇಕು. ಇನ್ನು ಮುಂದಿನ 24 ಗಂಟೆಗಳಲ್ಲಿ ದೊಡ್ಡ ಮಟ್ಟದ ಮಳೆ ಆಗುವ ಸಂಭವ ಇದೆ ಹೀಗಾಗಿ ಎಲ್ಲರೂ 24/7 ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಕಾರಣಕ್ಕೂ ಆಸ್ತಿ ಪಾಸ್ತಿ ಹಾನಿ, ಪ್ರಾಣಾಪಾಯ ಆಗಬಾರದು. ಮೆಟ್ರೋ ಹಳಿ ಮೇಲೆ ಮರ ಬಿದ್ದು ಹೋಗಿತ್ತು, ಈಗ ಸರಿಯಾಗಿದೆ. ಹೀಗಾಗಿ 1533 ಸಂಖ್ಯೆಗೆ ಕರೆ ಮಾಡಿ ಜನರು ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಿಳಿಸಿದರು.

ಇದನ್ನೂ ಓದಿ | Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

‌ಬಿಬಿಎಂಪಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಪೊರೇಟರ್ ಏನು ಕೆಲಸ ಮಾಡುತ್ತಾರೆ. ಜನ ಸೇವೆ ಅಂದಾಗ ಎಲ್ಲರೂ ಕೆಲಸ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೂ ಜನಪ್ರತಿನಿಧಿ ಬೇಕು. ಪಾರ್ಲಿಮೆಂಟ್ ಚುನಾವಣೆ ಮುಗಿಯಲಿ, ಎಲ್ಲ ರೆಡಿ‌ ಮಾಡೋಣ, ಚುನಾವಣೆಗೆ ಶುಭ ಮುಹೂರ್ತ ಫಿಕ್ಸ್ ಮಾಡೋಣ ಎಂದು ಹೇಳಿದರು.

ಮಳೆ ಹಾನಿ ಬಗ್ಗೆ ಬೆಸ್ಕಾಂಗೆ ದೂರುಗಳ ಸುರಿಮಳೆ; 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ನೆನ್ನೆಯ ಮಳೆ!

Bangalore Rain

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯು (Bangalore Rain) ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹೀಗಾಗಿ ಬೆಸ್ಕಾಂ ಹೆಲ್ಪ್ ಲೈನ್‌ 1912ಗೆ ದೂರುಗಳ ಸುರಿಮಳೆಯೇ ಬಂದಿದ್ದು, ವಿದ್ಯುತ್‌ ಕಂಬಗಳು ಉರುಳಿರುವುದು, ಮರಗಳು ಬಿದ್ದಿರುವುದು, ವಿದ್ಯುತ್‌ ಕಡಿತ ಸೇರಿ ಹಲವು ಸಮಸ್ಯೆಗಳ ಬಗ್ಗೆ ಬರೋಬ್ಬರಿ 8745 ದೂರುಗಳು ದಾಖಲಾಗಿವೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಭಾನುವಾರ (ಜೂ.2) ಸುರಿದ ಮಳೆಯು (Heavy Rain) 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿರುವುದು ಕಂಡುಬಂದಿದೆ.

ಧಾರಕಾರ ಮಳೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ದೂರುಗಳು ಬಂದಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರೆಗುರುಳಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನು 9 ಟ್ರಾನ್ಸ್‌ಫಾರ್ಮರ್‌ಗಳಿಗೆ ಮಳೆಯಿಂದ ಹಾನಿಯಾಗಿದೆ. ಭಾರಿ ಮಳೆಗೆ ಬೆಸ್ಕಾಂ ತತ್ತರಿಸಿದ್ದು, ತಡರಾತ್ರಿ ಸುರಿದ ಮಳೆಯಿಂದ ಬೆಸ್ಕಾಂಗೆ ಕೋಟ್ಯಂತರ ರೂ. ನಷ್ಟವಾಗಿದೆ.

ಬೆಂಗಳೂರಿನಲ್ಲಿ ಭಾನುವಾರ 111.2 ಮಿ.ಮೀ ಮಳೆ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯು 133 ವರ್ಷಗಳ ದಾಖಲೆಯನ್ನು ಮುರಿದಿದೆ. ರಾಜಧಾನಿಯಲ್ಲಿ ಮೇ 2ರಂದು 111.2 ಮಿ.ಮೀ ಮಳೆ ಸುರಿದಿದ್ದು, ಜೂನ್ ತಿಂಗಳಲ್ಲಿ ಆದ ದಾಖಲೆಯ ಮಳೆ ಇದಾಗಿದೆ. 1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. ಆದರೆ, ನೆನ್ನೆ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ ಮುರಿದಿದೆ ಎಂದು ವಿಸ್ತಾರನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. 2013 ಜೂನ್ 1 ರಂದು 100 ಮಿ.ಮೀ ಮಳೆ ಹಾಗೂ 2009 ಜೂನ್ 11 ರಂದು 89.6 ಮಿ.ಮೀ ಮಳೆಯಾಗಿತ್ತು.

Continue Reading
Advertisement
Lok Sabha Election Result 2024 Live
ದೇಶ23 mins ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಪ್ರತಿಕ್ಷಣದ ಮಾಹಿತಿ

Job Alert
ಉದ್ಯೋಗ31 mins ago

Job Alert: ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ; ದ್ವಿತೀಯ ಪಿಯು ಪಾಸಾದವರೂ ಅರ್ಜಿ ಸಲ್ಲಿಸಿ

Viral News
ವೈರಲ್ ನ್ಯೂಸ್32 mins ago

Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

Grantha Lokarpane and award ceremony on June 5 in Bengaluru
ಬೆಂಗಳೂರು35 mins ago

Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

Valmiki Corporation Scam
ಕರ್ನಾಟಕ47 mins ago

Valmiki Corporation Scam: ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಿಎಂ ಸಿದ್ದರಾಮಯಯ್ಯ ನೇರ ಹೊಣೆ ಎಂದ ಎಚ್‌ಡಿಕೆ

T20 World Cup 2024 Prize Money
ಕ್ರೀಡೆ1 hour ago

T20 World Cup 2024 Prize Money: ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

Bagalkot Lok Sabha Constituency
ಪ್ರಮುಖ ಸುದ್ದಿ1 hour ago

Bagalkot Lok Sabha Constituency: ಬಿಜೆಪಿಯ ಭದ್ರಕೋಟೆ ಭೇದಿಸುವರೇ ಸಂಯುಕ್ತಾ ಪಾಟೀಲ್?

karnataka weather Forecast Putur rain
ಮಳೆ2 hours ago

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

IND vs PAK
ಕ್ರಿಕೆಟ್2 hours ago

IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

Bangalore Rain
ಪ್ರಮುಖ ಸುದ್ದಿ2 hours ago

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌