Mann Ki Baat : Aland Bhutai: ಕಲಬುರಗಿಯ ತಡಕಲ್‌ನ ಆಳಂದ ಭೂತಾಯಿ ರೈತರ ಕಂಪನಿಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ - Vistara News

ಕಲಬುರಗಿ

Mann Ki Baat : Aland Bhutai: ಕಲಬುರಗಿಯ ತಡಕಲ್‌ನ ಆಳಂದ ಭೂತಾಯಿ ರೈತರ ಕಂಪನಿಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ

ಕಲಬುರಗಿಯ ತಡಕಲ್‌ನಲ್ಲಿ ಕಳೆದ ಕಿರುಧಾನ್ಯಗಳಿಂತ ತಯಾರಿಸಿದ ಲಡ್ಡು, ಕುರುಕಲು ತಿಂಡಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ, ರೈತರ ಆದಾಯ ವೃದ್ಧಿಗೆ ನೆರವಾಗಿರುವ ಆಳಂದ ಭೂತಾಯಿ ರೈತರ ಕಂಪನಿಯನ್ನು (Mann Ki Baat : Aland Bhutai) ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ಶ್ಲಾಘಿಸಿದರು.

VISTARANEWS.COM


on

Modi mentioned Aland Organic Grain Company in Mann Ki Baat
ಆಳಂದ ಭೂತಾಯಿ ಕಿರುಧಾನ್ಯ ರೈತ ಉತ್ಪಾದಕ ಕಂಪನಿಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನಾನು ನಿಮ್ಮಲ್ಲೊಂದು ಸಂಗತಿಯನ್ನು ಕೇಳುವೆ. ನೀವು ಎಂಟ್ರೆಪ್ರೆನ್ಯೂರ್ (Entrepreneurs) ಎಂಬುದನ್ನು ಕೇಳಿರಬಹುದು. ಆದರೆ ಮಿಲೆಟ್‌ಪ್ರೆನ್ಯೂರ್‌ (Milletpreneur) ಬಗ್ಗೆ ಕೇಳಿದ್ದೀರಾ? ಒಡಿಶಾ, ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇವತ್ತು ಮಿಲೆಟ್‌ಪ್ರೆನ್ಯೂರ್‌ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 97ನೇ ಮನ್‌ ಕಿ ಬಾತ್‌ (Mann Ki Baat) ಬಾನುಲಿ ಕಾರ್ಯಕ್ರಮದಲ್ಲಿ ತಿಳಿಸಿದರು. ಹಾಗೂ ಉದಾಹರಣೆಯಾಗಿ ಕರ್ನಾಟಕದ ಕಲಬುರಗಿಯ ತಡಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಳಂದ ಭೂತಾಯಿ (Aland Bhutai millets farmers producer company limited) ಕಿರುಧಾನ್ಯ ರೈತರ ಉತ್ಪಾದಕ ಕಂಪನಿಯನ್ನು ಪ್ರಸ್ತಾಪಿಸಿದರು. ಈ ಸಂಸ್ಥೆಯು ಕಿರುಧಾನ್ಯಗಳಿಂದ ಲಡ್ಡು, ಬಿಸ್ಕತ್‌, ಕುರುಕುಲು ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಜನಪ್ರಿಯತೆ ಗಳಿಸುತ್ತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಿರುಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುವ ರೈತರ ಕಂಪನಿ

Modi mentioned Aland Organic Grain Company in Mann Ki Baat

ಆಳಂದ ಭೂತಾಯಿ ಕಿರುಧಾನ್ಯ ರೈತ ಉತ್ಪಾದಕ ಕಂಪನಿಯು ಕಳೆದ ವರ್ಷದಿಂದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಿಲೆಟ್ಸ್‌ ರಿಸರ್ಚ್‌ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿಯ ತಡಕಲ್‌ನಲ್ಲಿರುವ ಆಳಂದ ಭೂತಾಯಿ ಮಿಲ್ಲೆಟ್ಸ್‌ ಫಾರ್ಮರ್ಸ್‌ ಪ್ರೊಡ್ಯೂಸರ್ಸ್‌ ಕಂಪನಿಯು ಸಿರಿಧಾನ್ಯಗಳಿಂದ ಲಡ್ಡು, ಕುರುಕಲು ತಿಂಡಿಗಳನ್ನು ತಯಾರಿಸಿ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಮಾರಾಟ ಮಾಡುತ್ತದೆ. 500 ಜನ ಷೇರುದಾರರು ಕಂಪನಿಯಲ್ಲಿ ಇದ್ದಾರೆ. ಸಿರಿ ಧಾನ್ಯದ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ನೇರವಾಗಿ ಸಿರಿ ಧಾನ್ಯ ಮಾರಾಟ ಮಾಡಿದಾಗ ಕ್ವಿಂಟಾಲ್‌ಗೆ 2-2.5 ಸಾವಿರ ರೂ. ಆದಾಯ ಸಿಗಬಹುದು. ಆದರೆ ಒಂದು ಕ್ವಿಂಟಾಲ್‌ ಸಿರಿ ಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಿಂದ 10 ಸಾವಿರ ರೂ. ಆದಾಯ ಗಳಿಸಬಹುದು ಎಂದು ವಿಸ್ತಾರನ್ಯೂಸ್‌ಗೆ ಸಂಸ್ಥೆಯ ಸಿಇಒ ರಕ್ಷಿತಾ ತಿಳಿಸಿದ್ದಾರೆ.

Mann_ki_Baat

ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದಕ್ಕೆ ಸಂತಸ: ಪ್ರಧಾನಿ ನರೇಂದ್ರ ಮೋದಿಯವರು ಮನ್‌ ಕಿ ಬಾತ್‌ನಲ್ಲಿ ನಮ್ಮ ಆಳಂದ ಭೂತಾಯಿ ರೈತರ ಕಂಪನಿ ಬಗ್ಗೆ ಪ್ರಸ್ತಾಪ ಮಾಡಿ ಪ್ರೋತ್ಸಾಹಿಸಿರುವುದನ್ನು ಕೇಳಿ ತುಂಬ ಸಂತಸವಾಯಿತು. ನಮಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ಸಿಇಒ ರಕ್ಷಿತಾ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Dr.Nagareddy Patil: ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ (79) ನಿಧನ ಹೊಂದಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಅವರು ಹೃದಯಾಘಾತದಿಂದ ನಿಧನರಾದರು. ಶಿಕ್ಷಣ ಪ್ರೇಮಿ, ಹಿರಿಯ ಮುತ್ಸದ್ದಿ ಎನಿಸಿಕೊಂಡಿರುವ ಡಾ.ನಾಗರೆಡ್ಡಿ ಪಾಟೀಲ್‌ ಎರಡು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದರು.

VISTARANEWS.COM


on

Dr.Nagareddy Patil
Koo

ಕಲಬುರಗಿ: ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ (79) ನಿಧನ ಹೊಂದಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಅವರು ಹೃದಯಾಘಾತದಿಂದ ನಿಧನರಾದರು. ಶಿಕ್ಷಣ ಪ್ರೇಮಿ, ಹಿರಿಯ ಮುತ್ಸದ್ದಿ ಎನಿಸಿಕೊಂಡಿರುವ ಡಾ.ನಾಗರೆಡ್ಡಿ ಪಾಟೀಲ್‌ (Dr.Nagareddy Patil) ಎರಡು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದರು.

ನಾಗರೆಡ್ಡಿ ಅವರ ಪುತ್ರ ಶಿವಶರಣರೆಡ್ಡಿ ಪಾಟೀಲ್‌ ಸದ್ಯ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ನಾಗರೆಡ್ಡಿ ಅವರು ಸಹೋದರ ಮತ್ತು ಸಹೋದರಿಯರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಇಂದು (ಮೇ 6) ಅಪರಾಹ್ನ 3.30ಕ್ಕೆ ಸೇಡಂ ಪಟ್ಟಣದ ಆಶ್ರಯ ಕಾಲೋನಿ ಪಕ್ಕದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

1983-85ರ ಅವಧಿಯಲ್ಲಿ ಬಿಜೆಪಿ ಶಾಸಕರಾಗಿದ್ದ ಡಾ.ನಾಗರೆಡ್ಡಿ ಬಳಿಕ ಜನತಾದಳ ಸೇಪರ್ಡೆಯಾಗಿದ್ದರು. ಬಳಿಕ ಕಾಂಗ್ರೆಸ್‌ ಸೇರಿದ್ದ ಅವರು ಸುಮಾರು ಎರಡು ದಶಕಗಳಿಂದ ಕಾಂಗ್ರೆಸನಲ್ಲೇ ಇದ್ದರು.

ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ವಾರದ ಹಿಂದೆ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನ ಹೊಂದಿದ್ದರು.

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು. 

ಇದನ್ನೂ ಓದಿ: A Devendra Gowda: ಎಂ. ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರ ಗೌಡ ನಿಧನ

Continue Reading

ಮಳೆ

Karnataka Weather : ಇಂದು ಮಳೆ ಬರುತ್ತಾ? ಯಾವ ಜಿಲ್ಲೆಗಳಲ್ಲಿದೆ ಹೀಟ್‌ ವೇವ್‌?

ರಾಜ್ಯಾದ್ಯಂತ ಹಲವೆಡೆ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಟ್ಟಿಗೆ ಮೇ. 8ರವರೆಗೆ ಹೀಟ್‌ ವೇವ್‌ (Heat Wave) ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ ಇದ್ದರೂ ಕೆಲವೆಡೆ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಸೋಮವಾರದಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯೊಂದಿಗೆ ಗುಡುಗು ಸಾಥ್‌ (Karnataka Weather Forecast) ನೀಡಲಿದೆ.

ಈ ಜಿಲ್ಲೆಗಳಲ್ಲಿ ಬಿಸಿ ಬಿಸಿ ವಾತಾವರಣ

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 3 ದಿನಗಳವರೆಗೆ ಕರಾವಳಿಯಲ್ಲಿ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 39 ಮತ್ತು 24 ಡಿ.ಸೆ ಇರಲಿದೆ.

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

ದೇಹದ ಪ್ರತಿರೋಧಕ ಶಕ್ತಿಯನ್ನು ಕುಂದಿಸುವಂಥ ಹವಾಮಾನ ಯಾವುದೇ ದಿನಗಳಲ್ಲೂ ಎದುರಾಗಬಹುದು. ಅದಕ್ಕೇನು ಮಳೆಯೇ ಬೇಕು. ಚಳಿಯೇ ಇರಬೇಕು ಎಂದಿಲ್ಲ. ಈ ಬಿರು ಬೇಸಿಗೆಯಲ್ಲೂ ಕಾಟ ಕೊಡುವ ವೈರಸ್‌ಗಳು ತಪ್ಪುವುದಿಲ್ಲ. ಇದಕ್ಕಾಗಿ ಭದ್ರವಾದ ಪ್ರತಿರೋಧಕ ವ್ಯವಸ್ಥೆಯನ್ನ ನಮ್ಮ ದೇಹ ಹೊಂದಬೇಕಾಗುತ್ತದೆ. ಅದಿಲ್ಲದಿದ್ದರೆ ಬಿಸಿಲಾಘಾತ, ನಿರ್ಜಲೀಕರಣದಿಂದಲೂ ತಪ್ಪಿಸಿಕೊಳ್ಳುವುದಕ್ಕೆ ದೇಹ ಸೋಲುತ್ತದೆ. ಇಂಥ ದಿನಗಳಲ್ಲಿ ನಮ್ಮ ನೆರವಿಗೆ ಬರುವುದು ಹುಳಿ-ಸಿಹಿಯ ಬೆಟ್ಟದ ನೆಲ್ಲಿಕಾಯಿ. ವಿಟಮಿನ್‌ ಸಿ ಅಂಶವನ್ನು ಹೇರಳವಾಗಿ ತುಂಬಿಕೊಂಡಿರುವ ಈ ಪುಟ್ಟ ಕಾಯಿಗಳನ್ನು ಹಲವು ರೀತಿಯಲ್ಲಿ ಸೇವಿಸುವುದರಿಂದ ಬಿಸಿಲ ದಿನಗಳಲ್ಲಿ ದೇಹ ನಿತ್ರಾಣಗೊಳ್ಳದಂತೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತವಾಗದಂತೆ (summer Health Tips) ಕಾಪಾಡಿಕೊಳ್ಳಬಹುದು. ಬಿಸಿಲಿನ ದಿನಗಳಿಗೆ ಪೂರಕವಾಗುವಂತೆ ನೆಲ್ಲಿಕಾಯಿಯನ್ನು ಬಳಸುವುದು ಹೇಗೆ?

pudina gooseberry juice

ಪುದೀನಾ-ನೆಲ್ಲಿ ಪಾನಕ

ವಿಟಮಿನ್‌ ಸಿ, ಇ ಮತ್ತು ಎ, ನಾರು ಹಾಗೂ ವಿಟಮಿನ್‌ ಬಿ1 ಸತ್ವಗಳನ್ನು ಈ ಪಾನಕ ಭರಪೂರ ತುಂಬಿಕೊಂಡಿರುತ್ತದೆ. ಬೇಸಿಗೆಯಲ್ಲಿ ಕಾಡುವ ಜೀರ್ಣಾಂಗಗಳ ಸಮಸ್ಯೆಯಿಂದ ಮುಕ್ತಿ ನೀಡುವಂಥ ಪೇಯವಿದು. ಬೆಟ್ಟದ ನೆಲ್ಲಿಕಾಯಿಗೆ ಚಿಟಿಕೆ ಉಪ್ಪು ಮತ್ತು ಪುದೀನಾ ಎಲೆಗಳನ್ನು ಸೇರಿಸಿ ರುಬ್ಬಿ, ರಸ ತೆಗೆಯಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಅಥವಾ ಹಾಗೆಯೇ ಕುಡಿಯುವವರು ಅಂತೆಯೇ ಕುಡಿಯಬಹುದು.

ನೆಲ್ಲಿ ಸ್ಮೂದಿ

ಇದಕ್ಕಾಗಿ ಮೊಸರು, ಬಾಳೆಹಣ್ಣು, ಕೊಂಚ ಪಾಲಕ್‌ ಎಲೆಗಳು ಮತ್ತು ನೆಲ್ಲಿಕಾಯಿಯನ್ನು ಬ್ಲೆಂಡರ್‌ಗೆ ಹಾಕಿ ತಿರುಗಿಸಿ. ಇದರನ್ನು ಸೋಸಬಾರದು. ಎಲ್ಲ ನಾರಿನಂಶ ಇರುವಂತೆಯೇ ಸೇವಿಸಬೇಕು. ಇದರಿಂದ ಬಾಳೆಹಣ್ಣಿನಲ್ಲಿರುವ ಶರ್ಕರಪಿಷ್ಟಗಳು, ಮೊಸರಿನಲ್ಲಿರುವ ಕೊಬ್ಬು ಮತ್ತು ಪ್ರೊಬಯಾಟಿಕ್‌ ಅಂಶಗಳು, ಪಾಲಕ್‌ನಲ್ಲಿರುವ ಖನಿಜಗಳು ಎಲ್ಲವೂ ನೆಲ್ಲಿ ಕಾಯಿಯ ಜೊತೆಗೆ ಹೊಟ್ಟೆ ಸೇರುತ್ತವೆ. ತೂಕ ಇಳಿಸುವವರು ಇದನ್ನು ಬೆಳಗಿನ ಉಪಹಾರವಾಗಿಯೂ ಸೇವಿಸಬಹುದು.

ನೆಲ್ಲಿ ಸಲಾಡ್‌

ಬೇಸಿಗೆಯಲ್ಲಿ ತಂಪಾದ ಸಲಾಡ್‌ಗಳು ಎಲ್ಲರಿಗೂ ಇಷ್ಟವಾಗುವಂಥವು. ಅದರಲ್ಲೂ ಹುಳಿ-ಸಿಹಿ ರುಚಿಯ ಸಲಾಡ್‌ಗಳು ಮತ್ತೂ ಇಷ್ಟವಾಗುತ್ತವೆ. ಇದಕ್ಕಾಗಿ ನೆಲ್ಲಿಕಾಯಿಯ ಜೊತೆ ಸೌತೇಕಾಯಿ, ದಾಳಿಂಬೆ, ಸೇಬು ಮತ್ತು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತೆಗೆದುಕೊಳ್ಳಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಕೊಂಚ ಕಾಳುಮೆಣಸಿನ ಪುಡಿ ಸೇರಿಸಿ. ನಿಮ್ಮ ರುಚಿಕರ ಸಲಾಡ್‌ ಸಿದ್ಧ.

Image Of Gooseberry Benefits

ನೆಲ್ಲಿ ಪಾಪ್ಸಿಕಲ್‌

ತಂಪಾದ ಏನನ್ನು ಕೊಟ್ಟರೂ ಕೈಯೊಡ್ಡುವಂಥ ಸ್ಥಿತಿ ಈ ಬೇಸಿಗೆಯಲ್ಲಿ. ಅದರಲ್ಲೂ ಫ್ರೋಜನ್‌ ತಿಂಡಿಗಳು ಮತ್ತೂ ಇಷ್ಟವಾಗುತ್ತವೆ. ಪಾಪ್ಸಿಕಲ್‌ ರೂಪದಲ್ಲಿ ನಮಗೆ ಪ್ರಿಯವಾದ್ದನ್ನು ಸವಿಯುವುದು ಬೇರೆಯದೇ ಸೊಗಸನ್ನು ನೀಡುತ್ತದೆ. ನೆಲ್ಲಿಕಾಯನ್ನು ರುಬ್ಬಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನುತುಪ್ಪ ಮತ್ತು ಸಿಹಿ ಮೊಸರು ಬೆರೆಸಿ. ಈ ಮಿಶ್ರಣವನ್ನು ಪಾಪ್ಸಿಕಲ್‌ ಅಚ್ಚಿಗೆ ಸುರಿಯಿರಿ. ಫ್ರೀಜ್‌ ಮಾಡಿ ತೆಗೆದು ಬಾಯಿ ಚಪ್ಪರಿಸಿದರಾಯಿತು.

ಡಿಟಾಕ್ಸ್‌ ನೀರು

ಬರೀ ನೀರು ಕುಡಿಯುವುದಕ್ಕೆ ಸಾಧ್ಯವಿಲ್ಲ ಎನಿಸಿದರೆ, ಐದು ಲೀ ಪಾತ್ರೆಯಲ್ಲಿ ಹತ್ತಿಪ್ಪತ್ತು ಪುದೀನಾ ಎಲೆಗಳು, ಸೌತೆಕಾಯಿ ಗಾಲಿಗಳು ಮತ್ತು ನೆಲ್ಲಿಯ ತುಂಡುಗಳನ್ನು ಧಾರಾಳವಾಗಿ ಸೇರಿಸಿ. ಒಂದೆರಡು ತಾಸು ಹಾಗೆಯೇ ಬಿಡಿ. ನಂತರ ದಿನವಿಡೀ ಈ ನೀರು ಕುಡಿದು ಸಂತೃಪ್ತಿಯಿಂದಿರಿ. ಇದರಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ.

indian gooseberry

ನೆಲ್ಲಿ ಐಸ್‌ ಟೀ

ಆರೆಂಟು ಪುದೀನಾ ಚಿಗುರುಗಳ ಜೊತೆಗೆ ನೆಲ್ಲಿ ಕಾಯಿಯ ತುಣುಕುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದು ಆರಿದ ಮೇಲೆ ಕೊಂಚ ಜೇನುತುಪ್ಪ ಸೇರಿಸಿ, ಫ್ರಿಜ್‌ನಲ್ಲಿಡಿ. ಬೇಕಾದಾಗ ಈ ಈ ಪೇಯವನ್ನು ತೆಗೆದು, ಕುಡಿದು ಸಂಭ್ರಮಿಸಿ. ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸುವುದೂ ಸಮಸ್ಯೆಗಳನ್ನು ತರಬಹುದು. ಈಗಾಗಲೇ ತೂಕ ಕಡಿಮೆ ಇರುವವರು ಇನ್ನೂ ತೂಕ ಇಳಿದ ನಿದಾರ್ಶನಗಳಿವೆ. ಹಾಗಾಗಿ ತೂಕ ಇಳಿಸುವವರು ಇದನ್ನು ಸೇವಿಸಿದಷ್ಟು, ಕಡಿಮೆ ತೂಕದವರಿಗೆ ಬೇಕಾಗುವುದಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather :ಮಳೆಯ ಕಣ್ಣಾ ಮುಚ್ಚಾಲೆ ಆಟ; ವರುಣ ದೇವನ ತಲೆ ಮೇಲೆ ಹೊತ್ತು ತಿರುಗಿದ ಗ್ರಾ.ಪಂ ಪಿಡಿಒ

Karnataka Weather Forecast : ರಾಜ್ಯದಲ್ಲಿ ಆಗಾಗ ಮಳೆಯು (Rain News) ದರ್ಶನ ಕೊಡುತ್ತಿದ್ದರೂ, ಸೂರ್ಯನ ಶಾಖಕ್ಕೆ ಭೂಮಿ ಕಾದ ಕೆಂಡವಾಗುತ್ತಿದೆ. ಬಿಸಿಲ ಧಗೆಯು ಹೆಚ್ಚಾಗುತ್ತಲೇ ಇದ್ದು, ಮಳೆಗಾಗಿ ತಾವರೆಕೆರೆ ಗ್ರಾ.ಪಂ ಪಿಡಿಓ ವರುಣ ದೇವನನ್ನು ಪ್ರತಿಷ್ಠಾಪಿಸಿ ತಲೆ ಮೇಲೆ ಹೊತ್ತು ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

By

Karnataka Weather Forecast
ದೇವರ ಮೊರೆ ಹೋದ ತಾವರೆಕೆರೆ ಗ್ರಾ.ಪಂ ಪಿಡಿಒ
Koo

ತುಮಕೂರು/ಬೆಂಗಳೂರು: ಬಿಸಿಲ ಬೇಗೆಗೆ ಬೇಸತ್ತ ಜನರು ಮಳೆಗಾಗಿ (Rain News) ದೇವರ ಮೊರೆ ಹೋಗುತ್ತಿದ್ದಾರೆ. ಮಳೆರಾಯನ (Karnataka Weather Forecast) ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಳೆಗಾಗಿ ಪೂಜೆ ನಡೆದಿದೆ.

ತಾವರೆಕೆರೆ ಗ್ರಾ.ಪಂ ಪಿಡಿಒ ನಾಗರಾಜ್ ಅವರು ಸ್ವತಃ ಮಳೆರಾಯನ ಹೊತ್ತು ಜಲಾಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು. ವರುಣ ದೇವನನ್ನು ಪ್ರತಿಷ್ಠಾಪಿಸಿ ನಂತರ ತಲೆ ಮೇಲೆ ಹೊತ್ತು ಮನೆ ಮನೆಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ಇನ್ನೂ‌ ಶನಿವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರದ ಎಂ.ಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 44.7 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: Heat Wave: ಬಿಸಿಲಿನ ಬೇಗೆಗೆ ಹೈರಾಣಾದ ದೇಶ; ಹಲವು ಭಾಗಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ದಾಖಲು

ಮತ್ತಷ್ಟು ದಿನ ಬಿಸಿಲ ತಾಪ

ರಣಬಿಸಿಲು, ಉಷ್ಣಗಾಳಿ ಹೊಡೆತಕ್ಕೆ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಮತ್ತಷ್ಟು ದಿನ ಬಿಸಿಲ ತಾಪ ಹೆಚ್ಚಾಗಲಿದ್ದು, ಆರೋಗ್ಯದ ಕಾಳಜಿ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉಷ್ಣತೆಯು ಇದ್ದಕ್ಕಿದ್ದಂತೆ ತೀಕ್ಷ್ಣವಾಗಿ ಮೇಲೇರಿ, ತನ್ನ ಸಾಮಾನ್ಯ ಮಟ್ಟವನ್ನು ಮೀರುವುದನ್ನು ಶಾಖದ ಅಲೆಗಳು ಅಥವಾ ಹೀಟ್‌ವೇವ್‌ ಎನ್ನಲಾಗುತ್ತದೆ. ಸದ್ಯ ಸಾಮಾನ್ಯ ಮಟ್ಟವನ್ನು ಮೀರಿ, ಉಷ್ಣತೆ ಮೇಲೇರುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಸುಸ್ತು, ಆಯಾಸ, ಎಚ್ಚರ ತಪ್ಪುವುದು ಆಗಲಿದೆ. ಹೀಗಾಗಿ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.

ಮೇ.8ರವೆರೆಗೆ ಹೀಟ್‌ ವೇವ್‌ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಲಿದೆ.

ಮಳೆ ಸೂಚನೆ ಇದ್ಯಾ?

ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇದರ ಹೊರತಾಗಿಯೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಲ್ಲಿ ಮತ್ತೆ ತಾಪಮಾನ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನಿರ್ಮಲ ಆಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶವು 39ರ ಗಡಿ ದಾಟಲಿದೆ.‌ ಜತೆಗೆ ಆಗಾಗ ಗಾಳಿ ವೇಗವು ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು; ಉಳಿದೆಡೆ ಗುಡುಗು ಸಹಿತ ಮಳೆ

Karnataka Weather Forecast : ಗಂಟೆಗಳ ಕಾಲ ಮಳೆ ಸುರಿದರೂ ವಾತಾವರಣ ಮಾತ್ರ ಕಾದ ಕೆಂಡವಾಗಿಯೇ ಇದೆ. ರಾಜ್ಯಾದ್ಯಂತ ಕೆಲವೆಡೆ ಮಳೆ ಸೂಚನೆ (Rain News) ಇದ್ದರೂ, ಮುಕ್ಕಾಲು ಭಾಗದಲ್ಲಿ ತಾಪಮಾನ ಏರಿಕೆ ಮುಂದುವರಿಯಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದ ಹಲವೆಡೆ ಗುಡುಗು ಸಹಿತ (Rain News) ಮಳೆಯಾಗಲಿದ್ದು, ಹವಾಮಾನ ಇಲಾಖೆ (Karnataka Weather Forecast) ಯೆಲ್ಲೋ ಅಲರ್ಟ್ (Yellow alert) ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನೊಂದೆಡೆ ತುಮಕೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ಯಾದಗಿರಿ, ರಾಯಚೂರು,ಕೊಪ್ಪಳ, ಕಲಬುರಗಿ ಹಾಗೂ ಹಾವೇರಿ, ಬೆಳಗಾವಿ, ಬೀದರ್, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗಲಿದೆ. ಹೀಗಾಗಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.

ಇನ್ನೂ ರಾಜಧಾನಿ ಬೆಂಗಳೂರಲ್ಲಿ ಮಳೆ ಇದ್ದರೂ ಬಿಸಿಲ ಧಗೆ ಕಡಿಮೆ ಆಗುವುದಿಲ್ಲ. ಹೀಗಾಗಿ ಬೆಂಗಳೂರು ನಗರವು ಸೇರಿ ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.

ತಾಪಮಾನ ಮುನ್ಸೂಚನೆ

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ರಾತ್ರಿಯಂದು ವಾತಾವರಣ ಬೆಚ್ಚಗೆ ಇರಲಿದ್ದು, ಬಿಸಿಗಾಳಿ ಬೀಸಲಿದೆ. ಶಾಖ ತರಂಗ ಎಚ್ಚರಿಕೆಯನ್ನು ನೀಡಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ, ಹಾಸನ ಮತ್ತು ಮೈಸೂರಿನಲ್ಲಿ ಹೀಟ್‌ ವೇವ್‌ ಇರಲಿದೆ.

ಇದನ್ನೂ ಓದಿ: Physical Abuse : ಮೊಬೈಲ್ ಕೊಡಿಸುವುದಾಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸೋದರ ಮಾವ

ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಪ್ರವಾಸಗಳನ್ನು ಇಷ್ಟಪಡುವ ಮಂದಿಯಲ್ಲಿ ಎರಡು ಬಗೆಯ ಮಂದಿಯಿರುತ್ತಾರೆ. ಒಂದು ಬಗೆಯವರಿಗೆ ಪ್ರವಾಸವನ್ನು ಎಂಜಾಯ್‌ ಮಾಡಿ, ತಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷವಾಗಿ ಕಾಲ ಕಳೆದು, ಐಷಾರಾಮಿ ಹೊಟೇಲುಗಳಲ್ಲಿ ಇದ್ದು, ರಿಲ್ಯಾಕ್ಸ್‌ ಆಗಿ ಸಮಯ ಕಳೆದುಕೊಂಡು ಮಜಾ ಮಾಡಿಕೊಂಡು ಬರುವವರಾದರೆ, ಇನ್ನೊಂದು ವರ್ಗ, ಜನಜಂಗುಳಿಯಿಂದ ದೂರವಿದ್ದು, ಶಾಂತವಾದ ನದೀತೀರದಲ್ಲೋ, ಬೆಟ್ಟದ ತಪ್ಪಲಲ್ಲೋ, ಪರ್ವತದ ಮೇಲಿನ ಒಂದು ಹಳ್ಳಿಯಲ್ಲೋ, ಒಂದಿಷ್ಟು ಸಮಾನ ಮನಸ್ಕರೊಂದಿಗೆ ಚಾರಣ ಮಾಡಿಯೋ ಸಮಯ ಕಳೆಯಲು ಇಷ್ಟ ಪಡುವ ಮಂದಿ. ಈ ಎರಡನೇ ವರ್ಗದ ಪ್ರವಾಸ ಪ್ರಿಯರಿಗೆ ಶಾಂತವಾಗಿ ಸಮಯ ಕಳೆಯಲು ಭಾರತದಲ್ಲಿ ಬೇಕಾದಷ್ಟು ಸ್ಥಳಗಳಿವೆ. ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ.

Sikkim

ಝುಲುಕ್, ಸಿಕ್ಕಿಂ

ಪೂರ್ವ ಸಿಕ್ಕಿಂನ ಝುಲುಕ್‌ ಎಂಬ ಹಳ್ಳಿ ಭಾರತದ ಅತ್ಯಂತ ಪುರಾತನವಾದ ಸಿಲ್ಕ್‌ ರೂಟ್‌ ಹಾದಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದು. ಮೇ ತಿಂಗಳಲ್ಲಿ ಆಗಸವೂ ತಿಳಿಯಾಗಿದ್ದು, ಹಿತವಾದ ಚಳಿಯೂ ಆವರಿಸಿರುವ, ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸಮಯ. ಸಾಲು ಸಾಲು ಹಿಮಬೆಟ್ಟಗಳಿಂದ ಆವೃತವಾದ ಹಿಮಾಲಯದ ಮನಮೋಹಕ ದೃಶ್ಯಗಳನ್ನು ಈ ಹಳ್ಳಿಯಲ್ಲಿದ್ದುಕೊಂಡು ಆಸ್ವಾದಿಸುತ್ತಾ ಸಮಯ ಕಳೆಯಬಹುದು.

Chitkool, Himachal Pradesh

ಚಿತ್ಕೂಲ್‌, ಹಿಮಾಚಲ ಪ್ರದೇಶ

ಭಾರತ ಚೀನಾ ಗಡಿಯಲ್ಲಿರುವ ಜನರ ವಸತಿಯಿರುವ ಕೊನೆಯ ಹಳ್ಳಿ ಚಿತ್ಕೂಲ್‌. ಕಿನೌರ್‌ ಜಿಲ್ಲೆಯ ಅತ್ಯಂತ ಸುಂದರವಾದ ಹಿಮಾಲಯದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗವಿದು. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು, ಅಲ್ಲಿನ ಜನಜೀವನ, ಆಹಾರ ಇತ್ಯಾದಿಗಳೆಲ್ಲವುಗಳ ಪರಿಚಯ ಮಾಡಿಕೊಂಡು, ಅದ್ಭುತ ದೃಶ್ಯಗಳನ್ನೂ ಕಂಡು ಆನಂದಿಸಬಹುದು.

Naggar, Himachal Pradesh

ನಗ್ಗರ್‌, ಹಿಮಾಚಲ ಪ್ರದೇಶ

ಹಳೆಯ ದೇವಸ್ಥಾನಗಳು, ಅರಮನೆಗಳು, ಕಟ್ಟಡಗಳು ಇತ್ಯಾದಿಗಳಿರುವ ನಗ್ಗರ್‌ ಎಂಬ ಹಳ್ಳಿ ಮನಾಲಿಯಂತಹ ಕಿಕ್ಕಿರಿದು ತುಂಬಿರುವ ಪ್ರವಾಸಿಗಳಿಂದ ಮುಕ್ತವಾಗಿದೆ. ಜೊತೆಗೆ ಇಲ್ಲಿಂದ ಕಾಣುವ ಹಿಮಾಲಯದ ಪರ್ವತಶ್ರೇಣಿಗಳ ಸುಂದರ ದೃಶ್ಯ ನೆಮ್ಮದಿಯನ್ನು ಅರಸಿ ಬರುವ ಮಂದಿಗೆ ಹೇಳಿ ಮಾಡಿಸಿದ್ದು.

Pelling, Sikkim

ಪೆಲ್ಲಿಂಗ್‌, ಸಿಕ್ಕಿಂ

ಕಾಂಚನಜುಂಗಾದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೆಲ್ಲಿಂಗ್‌ ಎಂಬ ಸಿಕ್ಕಿಂನ ಪುಟ್ಟ ಊರು ಒಳ್ಳೆಯ ತಾಣ. ಶಾಂತಿಯುತವಾದ ಜಾಗವನ್ನರಸಿ ಬರುವ ಮಂದಿಗೆ ಪೆಲ್ಲಿಂಗ್‌ ಬಹಳ ಇಷ್ಟವಾಗಬಹುದು.

Malana, Himachal Pradesh

ಮಲಾನಾ, ಹಿಮಾಚಲ ಪ್ರದೇಶ

ಮಲಾನಾ ಎಂಬ ಪುಟ್ಟ ಹಳ್ಳಿ ಹಿಮಾಚಲ ಪ್ರದೇಶದ ಕಸೋಲ್‌ ಸಮೀಪದಲ್ಲಿರುವ ಹಳ್ಳಿ. ಇದು ತನ್ನ ವಿಶಿಷ್ಟ ಸಂಸೃತಿ ಹಾಗೂ ಆಚರಣೆಯ ವಿಶೇಷತೆಗಳನ್ನು ಹೊಂದಿರುವ ಸುಂದರ ತಾಣ. ಪಾರ್ವತಿ ಕಣಿವೆಯ ಮನಮೋಹಕ ಹಿಮಾಲಯದ ಸೌಂದರ್ಯವನ್ನು ಇದು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.

Zero, Arunachal Pradesh

ಝೀರೋ, ಅರುಣಾಚಲ ಪ್ರದೇಶ

ಅತ್ಯದ್ಭುತ ಪ್ರಕೃತಿ ಸೌಂದರ್ಯ, ಭತ್ತದ ಗದ್ದೆಗಳು, ಹಳೆಯ ಮರದ ಮನೆಗಳು ಇತ್ಯಾದಿಗಳಿಂದ ಮನಮೋಹಕವಾಗಿ ಕಾಣುವ ಝೀರೋ ಎಂಬ ಅರುಣಾಚಲ ಪ್ರದೇಶದ ಹಳ್ಳಿ ಪರಿಸರ ಪ್ರಿಯರು ಖಂಡಿತ ಇಷ್ಟಪಡಬಹುದಾದ ಹಾಗಿದೆ.

Mawlynnong, Meghalaya

ಮಾವ್ಲಿನಾಂಗ್‌, ಮೇಘಾಲಯ

ಪೂರ್ವ ಖಾಸಿ ಬೆಟ್ಟ ಪ್ರದೇಶಗಳಲ್ಲಿರುವ ಮೇಘಾಲಯದ ಈ ಪುಟ್ಟ ಹಳ್ಳಿಯ ಅಪರೂಪದ ಸಂಸ್ಕೃತಿ, ಶಿಸ್ತುಬದ್ಧ ಜೀವನ, ಸ್ವಚ್ಛತೆ ಎಲ್ಲವನ್ನೂ ನೋಡಲೇಬೇಕು. ನಗರದ ಮಂದಿ ಖಂಡಿತವಾಗಿಯೂ ಈ ಹಳ್ಳಿಯ ಜನರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಬೇರಿನಿಂದ ಮಾಡಲ್ಪಟ್ಟ ಸೇತುವೆಗಳು ಇಲ್ಲಿನ ವಿಶೇಷತೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Cauvery Theatre bengaluru another single screen close
ಸಿನಿಮಾ4 mins ago

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Bomb Threat
ದೇಶ8 mins ago

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Lok Sabha Elections-2024
Lok Sabha Election 202415 mins ago

Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ICC Women’s T20 World Cup 2024
ಕ್ರೀಡೆ16 mins ago

ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

Road Accident
ಕ್ರೈಂ18 mins ago

Road Accident : ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತ್ಯು; 30ಕ್ಕೂ ಹೆಚ್ಚು ಮಂದಿಗೆ ಗಾಯ

Prajwal Revanna Case HD Revanna asks NO to sign voluntary statement in kidnapping case
ಕ್ರೈಂ20 mins ago

Prajwal Revanna Case: ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

Crude Bomb
ದೇಶ29 mins ago

Crude Bomb: ಚೆಂಡೆಂದು ಭಾವಿಸಿ ಬಾಂಬ್‌ ಜೊತೆ ಮಕ್ಕಳ ಆಟ; ಪಶ್ಚಿಮ ಬಂಗಾಳದಲ್ಲಿ ಭಾರೀ ಸ್ಫೋಟ

Shine Shetty follows diet and fitness
ಕಿರುತೆರೆ39 mins ago

Shine Shetty: ಸಖತ್‌ ಫಿಟ್‌ ಆದ ‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ!

Rohit Sharma
ಕ್ರೀಡೆ54 mins ago

Rohit Sharma: ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ ರೋಹಿತ್​ ಶರ್ಮ!

Karan Johar upset with Kettan Singh's poor mimicry of him
ಸಿನಿಮಾ60 mins ago

Karan Johar: ‘ಕಳಪೆ’ ಮಿಮಿಕ್ರಿ ಕಂಡು ಕರಣ್ ಜೋಹರ್ ಗರಂ; ಕ್ಷಮೆಯಾಚಿಸಿದ ಹಾಸ್ಯನಟ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ17 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ19 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ19 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌