ಕಲಬುರಗಿ
Mann Ki Baat : Aland Bhutai: ಕಲಬುರಗಿಯ ತಡಕಲ್‌ನ ಆಳಂದ ಭೂತಾಯಿ ರೈತರ ಕಂಪನಿಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ
ಕಲಬುರಗಿಯ ತಡಕಲ್‌ನಲ್ಲಿ ಕಳೆದ ಕಿರುಧಾನ್ಯಗಳಿಂತ ತಯಾರಿಸಿದ ಲಡ್ಡು, ಕುರುಕಲು ತಿಂಡಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ, ರೈತರ ಆದಾಯ ವೃದ್ಧಿಗೆ ನೆರವಾಗಿರುವ ಆಳಂದ ಭೂತಾಯಿ ರೈತರ ಕಂಪನಿಯನ್ನು (Mann Ki Baat : Aland Bhutai) ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ಶ್ಲಾಘಿಸಿದರು.
ನವ ದೆಹಲಿ: ನಾನು ನಿಮ್ಮಲ್ಲೊಂದು ಸಂಗತಿಯನ್ನು ಕೇಳುವೆ. ನೀವು ಎಂಟ್ರೆಪ್ರೆನ್ಯೂರ್ (Entrepreneurs) ಎಂಬುದನ್ನು ಕೇಳಿರಬಹುದು. ಆದರೆ ಮಿಲೆಟ್‌ಪ್ರೆನ್ಯೂರ್ (Milletpreneur) ಬಗ್ಗೆ ಕೇಳಿದ್ದೀರಾ? ಒಡಿಶಾ, ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇವತ್ತು ಮಿಲೆಟ್‌ಪ್ರೆನ್ಯೂರ್‌ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 97ನೇ ಮನ್ ಕಿ ಬಾತ್ (Mann Ki Baat) ಬಾನುಲಿ ಕಾರ್ಯಕ್ರಮದಲ್ಲಿ ತಿಳಿಸಿದರು. ಹಾಗೂ ಉದಾಹರಣೆಯಾಗಿ ಕರ್ನಾಟಕದ ಕಲಬುರಗಿಯ ತಡಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಳಂದ ಭೂತಾಯಿ (Aland Bhutai millets farmers producer company limited) ಕಿರುಧಾನ್ಯ ರೈತರ ಉತ್ಪಾದಕ ಕಂಪನಿಯನ್ನು ಪ್ರಸ್ತಾಪಿಸಿದರು. ಈ ಸಂಸ್ಥೆಯು ಕಿರುಧಾನ್ಯಗಳಿಂದ ಲಡ್ಡು, ಬಿಸ್ಕತ್, ಕುರುಕುಲು ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಜನಪ್ರಿಯತೆ ಗಳಿಸುತ್ತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿರುಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುವ ರೈತರ ಕಂಪನಿ
ಆಳಂದ ಭೂತಾಯಿ ಕಿರುಧಾನ್ಯ ರೈತ ಉತ್ಪಾದಕ ಕಂಪನಿಯು ಕಳೆದ ವರ್ಷದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿಯ ತಡಕಲ್‌ನಲ್ಲಿರುವ ಆಳಂದ ಭೂತಾಯಿ ಮಿಲ್ಲೆಟ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿಯು ಸಿರಿಧಾನ್ಯಗಳಿಂದ ಲಡ್ಡು, ಕುರುಕಲು ತಿಂಡಿಗಳನ್ನು ತಯಾರಿಸಿ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಮಾರಾಟ ಮಾಡುತ್ತದೆ. 500 ಜನ ಷೇರುದಾರರು ಕಂಪನಿಯಲ್ಲಿ ಇದ್ದಾರೆ. ಸಿರಿ ಧಾನ್ಯದ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ನೇರವಾಗಿ ಸಿರಿ ಧಾನ್ಯ ಮಾರಾಟ ಮಾಡಿದಾಗ ಕ್ವಿಂಟಾಲ್‌ಗೆ 2-2.5 ಸಾವಿರ ರೂ. ಆದಾಯ ಸಿಗಬಹುದು. ಆದರೆ ಒಂದು ಕ್ವಿಂಟಾಲ್ ಸಿರಿ ಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಿಂದ 10 ಸಾವಿರ ರೂ. ಆದಾಯ ಗಳಿಸಬಹುದು ಎಂದು ವಿಸ್ತಾರನ್ಯೂಸ್‌ಗೆ ಸಂಸ್ಥೆಯ ಸಿಇಒ ರಕ್ಷಿತಾ ತಿಳಿಸಿದ್ದಾರೆ.
ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದಕ್ಕೆ ಸಂತಸ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್‌ನಲ್ಲಿ ನಮ್ಮ ಆಳಂದ ಭೂತಾಯಿ ರೈತರ ಕಂಪನಿ ಬಗ್ಗೆ ಪ್ರಸ್ತಾಪ ಮಾಡಿ ಪ್ರೋತ್ಸಾಹಿಸಿರುವುದನ್ನು ಕೇಳಿ ತುಂಬ ಸಂತಸವಾಯಿತು. ನಮಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ಸಿಇಒ ರಕ್ಷಿತಾ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದರು.
ಕರ್ನಾಟಕ
Karnataka Elections : ಚಿಂಚನಸೂರು ಸಹಿತ 16 ಎಡಗೈ, ಐವರು ಬಲಗೈ ಸಮುದಾಯದ ನಾಯಕರು ಇಂದು ಕಾಂಗ್ರೆಸ್ ಸೇರ್ಪಡೆ
ಬಿಜೆಪಿಯಲ್ಲಿದ್ದ ಬಾಬು ರಾವ್ ಚಿಂಚನಸೂರು ಅವರು ಬುಧವಾರವೇ ಕಾಂಗ್ರೆಸ್ (Karnataka Elections) ಸೇರಲಿದ್ದಾರೆ. ಮಾರ್ಚ್ 25ರಂದು ಯಾದಗಿರಿಯಲ್ಲಿ ಅದ್ಧೂರಿ ಸಮಾವೇಶ ಆಯೋಜನೆ ಮಾಡಲಾಗಿದೆ.
ಬೆಂಗಳೂರು: ಬಿಜೆಪಿ ಮತ್ತು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಗುರುಮಠಕಲ್‌ನ ಮಾಜಿ ಶಾಸಕ ಬಾಬುರಾವ್ ಚಿಂಚನಸೂರು ಅವರು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷವನ್ನು (Karnataka Elections) ಸೇರಲಿದ್ದಾರೆ. ಇವರೊಂದಿಗೆ 16 ಜನ ಎಡಗೈ ಸಮುದಾಯದ ನಾಯಕರು ಹಾಗೂ ಐವರು ಬಲಗೈ ಸಮುದಾಯದ ಮುಖಂಡರು ಕಾಂಗ್ರೆಸ್ ಸೇರ್ಪಡೆಗೆ ಕಾರ್ಯಕ್ರಮ ಆಯೋಜನೆಯಾಗಿದೆ.
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್. ಆಂಜನೇಯ ಮೊದಲಾದ ಪರಿಶಿಷ್ಟ ಜಾತಿಯ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇವರ ಜತೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್ ಅವರು ಕೂಡಾ ಇರುತ್ತಾರೆ.
ಬೆಂಗಳೂರಿನಲ್ಲಿ ಅಧಿಕೃತವಾಗಿ ಪಕ್ಷ ಸೇರಿದ ಬಳಿಕ ಬಾಬುರಾವ್ ಚಿಂಚನಸೂರು ಅವರು ಯಾದಗಿರಿಯಲ್ಲಿ ಮಾರ್ಚ್ 25ರಂದು ಬೃಹತ್ ಸಮಾವೇಶ ನಡೆಸಲಿದ್ದಾರೆ. ಅಲ್ಲಿ ಶಕ್ತಿ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬದ್ಧ ವಿರೋಧಿಯಾಗಿದ್ದಲ್ಲದೆ, ಖರ್ಗೆ ಸೋಲಿಗೂ ಕಾರಣವಾಗಿದ್ದ ಚಿಂಚನಸೂರು ಅವರು ಈಗ ಮೈಮನಸ್ಸು ಮರೆತಿದ್ದಾಗಿ ಸಂದೇಶ ರವಾನಿಸಿದ್ದಾರೆ.
ಟಿಕೆಟ್ ಕೊಡದ ಕಾರಣಕ್ಕೆ ಕಾಂಗ್ರೆಸ್‌ಗೆ
2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಾಬು ರಾವ್ ಚಿಂಚನಸೂರು ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ತೀವ್ರ ವಿರೋಧಕ್ಕೆ ಗುರಿಯಾಗಿದ್ದರು. ಈ ನಡುವೆ ಬಿಜೆಪಿ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿತ್ತು.
ಚಿಂಚನಸೂರು ಅವರು ಈ ಬಾರಿಯ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದರು. ಆದರೆ, ಎಂಎಲ್‌ಸಿ ಆಗಿರುವ ಕಾರಣ ಎಂಎಲ್‌ಎ ಟಿಕೆಟ್ ಅನ್ನು ಬಿಜೆಪಿ ವರಿಷ್ಠರು ನಿರಾಕರಿಸಿದ್ದರು. ಇದೀಗ ಕಾಂಗ್ರೆಸ್ ಅವರಿಗೆ ಗುರುಮಠಕಲ್ ಟಿಕೆಟ್ ನೀಡಬೇಕಾಗಿದೆ. ಈ ಒಪ್ಪಂದದ ಬಳಿಕವೇ ಅವರು ಕಾಂಗ್ರೆಸ್‌ಗೆ ಮರಳಿರುವ ಸಾಧ್ಯತೆ ಇದೆ.
ಕೆಲ ತಿಂಗಳ ಹಿಂದೆಯೇ ಬಿಜೆಪಿ ಬಿಡಲು ಚಿಂಚನಸೂರ್ ಅವರು ಯೋಚಿಸಿದ್ದರು. ಫೆ.13 ರಂದು ಚಿಂಚನಸೂರ್ ಜತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತುಕತೆ ನಡೆಸಿ ಪಕ್ಷದಲ್ಲೇ ಇರುವಂತೆ ಮನವೊಲಿಸಿದ್ದರು. ಬಳಿಕ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯನ್ನು ಸೋಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಚಿಂಚನಸೂರ್ ತೊಡೆ ತಟ್ಟಿದ್ದರು. ಇದೀಗ ಮತ್ತೆ ತಮ್ಮ ಮಾತನ್ನು ಹಿಂದಕ್ಕೆ ಪಡೆದಿದ್ದು ಖರ್ಗೆ ಕುಟುಂಬದ ಜತೆ ಹೊಂದಾಣಿಕೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : Karnataka Election: ಬಿಜೆಪಿಗೆ ಚಿಂಚನಸೂರ್ ಶಾಕ್, ಕೋಲಿ ಸಮಾಜದ ಮತಗಳು ಕಾಂಗ್ರೆಸ್‌ಗೆ?
ಕರ್ನಾಟಕ
Book Release: ಮಾ.25ರಂದು ಕಲಬುರಗಿಯಲ್ಲಿ ಏಕಕಾಲಕ್ಕೆ 115 ಪುಸ್ತಕಗಳ ಲೋಕಾರ್ಪಣೆ
Book Release: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 46ನೇ ವಾರ್ಷಿಕೋತ್ಸವದಲ್ಲಿ 115 ಪುಸ್ತಕಗನ್ನು ಬಿಡುಗಡೆ ಮಾಡಲಾಗುತ್ತದೆ.
ಕಲಬುರಗಿ: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಶ್ರೀ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಂಭ್ರಮವನ್ನು (Book Release) ಮಾರ್ಚ್ 25ರಂದು ಬೆಳಗ್ಗೆ 10.30ಕ್ಕೆ ನಗರದ ಸೂಪರ್ ಮಾರ್ಕೆಟ್‌ನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಡಬಾಳ ತೇರಿನಮಠದ ಶ್ರೀ ಷ.ಬ್ರ.ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದು, ಕಡಗಂಚಿ-ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧಾರವಾಡದ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ 115 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ | Vice Chancellor: ರಾಜ್ಯದ 7 ನೂತನ ವಿವಿಗಳಿಗೆ ಕುಲಪತಿಗಳ ನೇಮಕ: ಸಚಿವ ಅಶ್ವತ್ಥನಾರಾಯಣ ಮಾಹಿತಿ
ಕಲಬುರಗಿ ದಕ್ಷಿಣ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಸಚಿವ ಬಿ. ಶರಣಪ್ಪ ಭಾಗವಹಿಸಲಿದ್ದಾರೆ. ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥಾಪಕ ಬಸವರಾಜ ಜಿ.ಕೊನೇಕ ಉಪಸ್ಥಿತರಿರಲಿದ್ದಾರೆ.
ಕರ್ನಾಟಕ
Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಪೇದೆ ಸಾವು; ಮರಳು ಟ್ರ್ಯಾಕ್ಟರ್ ಪಲ್ಟಿ ಹೊಡೆದು ಚಾಲಕ ಮೃತ್ಯು
Road Accident: ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸ್ಥಳಕ್ಕೆ ಎಸ್‌ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ/ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ-ಡಿಗ್ಗಿ ತಾಂಡದಲ್ಲಿ (Road Accident) ನಡೆದಿದೆ. ವಾಡಿ ಪೊಲೀಸ್ ಠಾಣೆ ಪೇದೆ ಕರಿಯಪ್ಪ (37) ಮೃತ ದುರ್ದೈವಿ ಆಗಿದ್ದಾರೆ.
ಪೇದೆ ಕರಿಯಪ್ಪ ಭಾನುವಾರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದರು. ಮನೆಯಲ್ಲಿ ಊಟ ಮುಗಿಸಿ, ಬೈಕ್‌ನಲ್ಲಿ ನಾಲವಾರ್ ಚೆಕ್‌ಪೋಸ್ಟ್ ಕಡೆಗೆ ಹೋಗುವಾಗ ಅಪರಿಚಿತ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಕರಿಯಪ್ಪ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಲಬುರಗಿ ಎಸ್‌ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ, ಚಾಲಕ ಸ್ಥಳದಲ್ಲಿ ಸಾವು
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಸರಟ್ಟಿ ಕ್ರಾಸ್ ಬಳಿ ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಆಗಿ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮಹೇಶ ತಳವಾರ (22) ಮೃತಪಟ್ಟಿರುವ ದುರ್ದೈವಿ ಆಗಿದ್ದಾರೆ.
ಅಂಬಳನೂರ ಬಳಿಯ ಡೋಣಿ ನದಿಯಿಂದ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಮಹೇಶ ಕೆಳಗೆ ಬಿದ್ದಿದ್ದು, ಆತನ ಮೇಲೆ ಮರಳು ತುಂಬಿದ ಟ್ರೇಲರ್ ಬಿದ್ದಿದೆ. ಪರಿಣಾಮ ಮಹೇಶ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲೋ ಬಿಪಿಯಿಂದಾಗಿ ಎಎಸ್‌ಐ ಮೃತ್ಯು; ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಉರುಳಿಬಿದ್ದರು
ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಎಎಸ್‌ಐ (ASI Death) ಒಬ್ಬರು ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈ ಶ್ರೀನಿವಾಸ್ (59) ಮೃತ ದುರ್ದೈವಿ.
ಶ್ರೀನಿವಾಸ್ ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರದ ಹಿಂದೆ ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲೋ ಬಿಪಿ ಸಮಸ್ಯೆ ಉಂಟಾಗಿ ಅವರು ಬೈಕ್‌ನಿಂದ ಬಿದ್ದಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತ ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ. ಹೆಚ್ಚಿನ ಮಂದಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ಅಧ್ಯಯನವೊಂದು ತಿಳಿಸಿತ್ತು.
ತೆಂಗಿನ ಮರ ಉರುಳಿಬಿದ್ದು ರೈತ ಸಾವು
ಕೆಲವೊಂದು ಆಕಸ್ಮಿಕಗಳು ಹೇಗೆ ಸಂಭವಿಸುತ್ತವೆ (Accidental death) ಎಂದು ಹೇಳುವುದಕ್ಕೇ ಸಾಧ್ಯವಿಲ್ಲ. ಜಮೀನಿನಲ್ಲಿ ನಡೆದುಕೊಂಡು ಹೋಗುವಾಗ ತೆಂಗಿನಮರವೊಂದು ಉರುಳಿಬಿದ್ದು ಅದರ ಅಡಿಗೆ ಸಿಲುಕಿ ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರದ ಚನ್ನಪಟ್ಟಣ ತಾಲೂಕಿನ ಗಿಜಗದಾಸನದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪುಟ್ಟಸ್ವಾಮಿಗೌಡ (56) ಮೃತಪಟ್ಟ ದುರ್ದೈವಿ.
ಇದನ್ನೂ ಓದಿ: Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ
ಇವರು ತೆಂಗಿನ ತೋಟದಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಮರ ಉರುಳಿಬಿದ್ದಿದೆ. ಕೊನೆಯ ಕ್ಷಣದಲ್ಲಿ ಮರ ಉರುಳುವುದು ಗೊತ್ತಾದರೂ ತಪ್ಪಿಸಿಕೊಳ್ಳುವಷ್ಟು ಸಮಯಾವಕಾಶವೇ ಸಿಗಲಿಲ್ಲ. ಹೀಗಾಗಿ ನೇರವಾಗಿ ಅವರ ಮೇಲೆಯೇ ಮರ ಉರುಳಿ ಬಿದ್ದಿದೆ. ಮರದಡಿ ಸಿಲುಕಿದ ಅವರು ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಕೂರು ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ನಡೆಯುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕಲಬುರಗಿ
Murder Case: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಬರ್ಬರ ಹತ್ಯೆ
ಜಮೀನಿನಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ಮೈಮೇಲಿನ ಚಿನ್ನಾಭರಣ ದೋಚಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಕಲಬುರಗಿ: ಹೊಲದಲ್ಲಿ ಮಹಿಳೆಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಡ್ರಾಮಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಹರನಾಳ (ಬಿ) ಗ್ರಾಮದಲ್ಲಿ ಈ ಅಕೃತ್ಯ ಘಟಿಸಿದೆ. ಅನುಸೂಯ ಬಾಯಿ (40) ಕೊಲೆಯಾದ ಮಹಿಳೆ. ಜಮೀನಿನಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ಮೈಮೇಲಿನ ಚಿನ್ನಾಭರಣ ದೋಚಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಯಡ್ರಾಮಿ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಜಮೀನಿನಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಭಯ ಸೃಷ್ಟಿಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: 100ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆ; ಕಳೆದ ತಿಂಗಳಷ್ಟೇ ಮದುವೆಯಾಗಿದ್ದವನ ಶವ ಸಿಕ್ಕಿದ್ದು ಪೊದೆಯಲ್ಲಿ
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್7 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ11 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು