Suryakumar Yadav | ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ಸೂರ್ಯಕುಮಾರ್​ ಯಾದವ್​ - Vistara News

ಕ್ರಿಕೆಟ್

Suryakumar Yadav | ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ಸೂರ್ಯಕುಮಾರ್​ ಯಾದವ್​

ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ (Suryakumar Yadav) ಚರ್ಚೆ ನಡೆಸಿದರು.

VISTARANEWS.COM


on

yogi- adityanath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ : ಭಾರತ ತಂಡದ ಸ್ಟಾರ್​ ಬ್ಯಾಟರ್​​ ಸೂರ್ಯಕುಮಾರ್ ಯಾದವ್​ ಅವರು ಸೋಮವಾರ (ಜನವರಿ 30) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಭಾನುವಾರ ಸಂಜೆ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್​ಗಳ ವಿಜಯ ಸಾಧಿಸಿದೆ. ಹೀಗಾಗಿ ಭಾರತ ತಂಡದ ಆಟಗಾರರು ಸೋಮವಾರ ಲಖನೌನಲ್ಲೇ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್​​ ಅವರ ಗೃಹ ಕಚೇರಿಗೆ ಭೇಟಿ ನೀಡಿದ ಸೂರ್ಯಕುಮಾರ್​ ಮಾತುಕತೆ ನಡೆಸಿದರು.

ಸೂರ್ಯಕುಮಾರ್ ಅವರು ತಮ್ಮನ್ನು ಭೇಟಿ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯುವ ಹಾಗೂ ಸ್ಫೂರ್ತಿಯುತ ಆಟಗಾರ ಸ್ಕೈ,(SKY) ನಮ್ಮ ಅಧಿಕೃತ ನಿವಾಸಕ್ಕೆ ಬಂದಿದ್ದಾರೆ ಎಂದು ಟ್ವೀಟ್​ ಮಾಡಲಾಗಿದೆ. ಅವರಿಬ್ಬರು ಯಾವ ವಿಚಾರದ ಬಗ್ಗೆ ಮಾತುಕತೆ ನಡೆಸಿದರು ಎಂಬ ಬಗ್ಗೆ ಮಾಹಿತಿ ಇಲ್ಲ. ಭಾನುವಾರ ಇಲ್ಲಿನ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆದಾಗಲೂ ಯೋಗಿ ಆದಿತ್ಯ ನಾಥ್​ ಅವರು ಅಲ್ಲಿಗೆ ಭೇಟಿ ನೀಡಿ ಪಂದ್ಯ ವೀಕ್ಷಿಸಿದ್ದರು. ಅಲ್ಲದೆ, ಭಾರತ ತಂಡದ ನಾಯಕ ಹಾರ್ದಿಕ್​ ಪಾಂಡ್ಯಗೆ ಪುಷ್ಪಗುಚ್ಛ ನೀಡಿದ್ದರು.

ಇದನ್ನೂ ಓದಿ : INDvsNZ T20 : ಪಿಚ್ ತಯಾರಿಸಿದ ಕ್ಯುರೇಟರ್​ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಾಯಕ ಹಾರ್ದಿಕ್​ ಪಾಂಡ್ಯ

ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ಬಳಗವನ್ನು 6 ವಿಕೆಟ್​ಗಳಿಂದ ಮಣಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಮುಂದಿನ ಪಂದ್ಯ ಗುಜರಾತ್​ನ ಅಹಮದಾಬಾದ್​ನಲ್ಲಿ ಫೆಬ್ರವರಿ 1ರಂದು ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs CSK: ಗೆದ್ದರೂ ಆರ್​ಸಿಬಿಗೆ ಪ್ಲೇ ಆಫ್​ ಖಚಿತವಲ್ಲ; ಹೀಗಿದೆ ರನ್​ರೇಟ್​ ಲೆಕ್ಕಾಚಾರ!

RCB vs CSK:ಹೌದು ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ.

VISTARANEWS.COM


on

RCB vs CSK:
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನ(IPL 2024) ಹೈವೋಲ್ಟೇಜ್​ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ಧವಾಗಿ ನಿಂತಿದೆ. ಆರ್​ಸಿಬಿ ಮತ್ತು ಚೆನ್ನೈ(RCB vs CSK) ತಂಡಗಳು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯ ಕಣ್ತುಂಬಿಕೊಳ್ಳಲು ಈಗಾಗಲೇ ಅಭಿಮಾನಿಗಳು ಸ್ಟೇಡಿಯಂ ಸುತ್ತ ಕಿಕ್ಕಿರಿದು ಸೇರಿದ್ದಾರೆ. ಪ್ಲೇ ಆಫ್​ ಪ್ರವೇಶಕ್ಕೆ ಆರ್​ಸಿಬಿಗೆ ಗೆಲ್ಲಲೇ ಬೇಕಾದ ಪಂದ್ಯ ಇದಾಗಿದೆ. ಕೇವಲ ಗೆಲುವು ಮಾತ್ರ ಸಾಲದು. ಇಲ್ಲಿಯೂ ಕೂಡ ಕೆಲ ಲೆಕ್ಕಾಚಾರವಿದೆ.

ಕೇವಲ ಗೆಲುವು ಸಾಲದು


ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ. ಒಂದೊಮ್ಮೆ ಮಳೆ ಬಂದರೂ ಕೂಡ ಚೆನ್ನೈಗೆ ಯಾವುದೇ ಚಿಂತೆಯಿಲ್ಲ. ಒಂದು ಅಂಕದ ಲಾಭದಿಂದ ನೇರವಾಗಿ ಪ್ಲೇ ಆಫ್​ ಟಿಕೆಟ್​ ಪಡೆಯಲಿದೆ. ಆದರೆ ಆರ್​ಸಿಬಿಗೆ ಗೆಲುವಿನ ಜತೆಗೆ ರನ್​ರೇಟ್​ ಕೂಡ ಬಹುಮುಖ್ಯ.

ಹೌದು ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್​ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ.

ಇದನ್ನೂ ಓದಿ IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

ಆರ್​ಸಿಬಿಗೆ ಮೇ 18ರ ನಂಬಿಕೆ


ವಿಶೇಷವೆಂದರೆ ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿದೆ. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಸ್ವಾರಸ್ಯವೆಂದರೆ ಚೆನ್ನೈ ವಿರುದ್ಧವೇ 2 ಗೆಲುವು ಸಾಧಿಸಿದೆ. ಹೀಗಾಗಿ ಇಂದು ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ದಾಖಲೆ


ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನು ಆಡಿವೆ. ಈ ಪೈಕಿ ಚೆನ್ನೈ ಐದರಲ್ಲಿ ಗೆದ್ದರೆ, ಆರ್​ಸಿಬಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠ ಎನ್ನಲಡ್ಡಿಯಿಲ್ಲ. ಇಲ್ಲಿ ನಡೆದ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆಲುವು ಸಾಧಿಸಿದೆ. ಈ ಆವೃತ್ತಿಯ 6 ಪಂದ್ಯಗಳ ಪೈಕಿ ಸಮಾನಾಗಿ 3 ಬಾರಿ ಚೇಸಿಂಗ್​ ಮತ್ತು ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳು ಜಯಿಸಿದೆ.

ಸಬ್‌ ಏರ್‌ ಸಿಸ್ಟಮ್‌


ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy)ವಿದೆ. ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ. ಒಂದೊಮ್ಮೆ ಮಳೆಯ ಆರ್ಭಟ ನಿಲ್ಲದೇ ಹೋದಲ್ಲಿ, ಆಗ ಎಷ್ಟೇ ದೊಡ್ಡ ತಂತ್ರಜ್ಞಾನವಿದ್ದರೂ ಇದು ಉಪಯೋಗಕ್ಕೆ ಬಾರದು. ಹೀಗಾಗಿ ಪಂದ್ಯದ ಅಳಿವು ಉಳಿವಿನ ಭವಿಷ್ಯ ಮಳೆಯ ಕೈಯಲ್ಲಿದೆ.

Continue Reading

ಕ್ರೀಡೆ

T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

T20 World Cup 2024:ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.

VISTARANEWS.COM


on

T20 World Cup 2024
Koo

ಬಾರ್ಬಡಾಸ್​: ಇದೇ ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್​ ಪಂದ್ಯಾವಳಿಗೆ(T20 World Cup 2024) ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಉಗ್ರರಿಂದ ದಾಳಿಯ ಬೆದರಿಕೆಯೊಂದು(Terror Threat to T20 World Cup) ಬಂದಿತ್ತು. ಇದೀಗ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಭದ್ರತಾ ಸಿಬ್ಬಂದಿಗಳು ಕೆನ್ಸಿಂಗ್ಟನ್ ಓವಲ್(Kensington Oval Cricket Ground) ಕ್ರಿಕೆಟ್ ಮೈದಾನ, ಬಾರ್ಬಡೋಸ್​ನಲ್ಲಿ(Barbados) ಅಣುಕು ಪ್ರದರ್ಶನ ಮಾಡುತ್ತಿರುವ ಫೋಟೊ ವೈರಲ್​ ಆಗಿದೆ.

ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್)ನಿಂದ ಭದ್ರತಾ ಬೆದರಿಕೆ ಬಂದಿತ್ತು. ಇದೇ ವಿಚಾರವಾಗಿ ಅಂದು ಮಾತನಾಡಿದ್ದ ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ಸ್, ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪ್ರತಿಯೊಬ್ಬರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ನಾವು ಸಮಗ್ರ ಮತ್ತು ದೃಢವಾದ ಭದ್ರತಾ ಯೋಜನೆಯನ್ನು ಹೊಂದಿದ್ದೇವೆ ಎಂದು ನಾವು ಎಲ್ಲ ಪಾಲುದಾರರಿಗೆ ಭರವಸೆ ನೀಡಲು ಬಯಸುತ್ತೇವೆ ಎಂದು ಹೇಳಿದ್ದರು. ಈ ಮಾತಿಗೆ ತಕ್ಕಂತೆ ಇದೀಗ ವಿಶ್ವಕಪ್​ ಪಂದ್ಯಾವಳಿಗಳು ನಡೆಯುವ ಸ್ಟೇಡಿಯಂಗಳಲ್ಲಿ ಭಾರೀ ಭದ್ರತೆ ಮಾಡಲಾಗಿದೆ.

ವೆಸ್ಟ್ ಇಂಡೀಸ್‌ನಲ್ಲಿ ಆಂಟಿಗುವಾ ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ ಸೇರಿದಂತೆ ಆರು ಸ್ಥಳಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಆಯೋಜನೆಗೊಂಡಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಟಿ20 ವಿಶ್ವಕಪ್​ಗಾಗಿ(T20 World Cup 2024) ಟೀಮ್​ ಇಂಡಿಯಾದ(team india) ಮೊದಲ ಬ್ಯಾಚ್​ ಮೇ 25ರಂದು ನ್ಯೂಯಾರ್ಕ್(New York)​ಗೆ ಪ್ರಯಾಣಿಸಲಿದೆ. ಈ ಬ್ಯಾಚ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma), ಉಪನಾಯಕ ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಸೇರಿ ಐಪಿಎಲ್​ ಪ್ಲೇ ಆಫ್​ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್​ ಫೈನಲ್​ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್​ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.

Continue Reading

ಕ್ರೀಡೆ

T20 World Cup 2024: ಮೇ 25ಕ್ಕೆ ನ್ಯೂಯಾರ್ಕ್​ಗೆ ತೆರಳಲಿದೆ ಟೀಮ್ ಇಂಡಿಯಾದ ಮೊದಲ ಬ್ಯಾಚ್​

T20 World Cup 2024: ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗಾಗಿ(T20 World Cup 2024) ಟೀಮ್​ ಇಂಡಿಯಾದ(team india) ಮೊದಲ ಬ್ಯಾಚ್​ ಮೇ 25ರಂದು ನ್ಯೂಯಾರ್ಕ್(New York)​ಗೆ ಪ್ರಯಾಣಿಸಲಿದೆ. ಈ ಬ್ಯಾಚ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma), ಉಪನಾಯಕ ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಸೇರಿ ಐಪಿಎಲ್​ ಪ್ಲೇ ಆಫ್​ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್​ ಫೈನಲ್​ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್​ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.

ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ತಂಡದ ಆಟಗಾರರು ಮೇ 21ರಂದು ನ್ಯೂಯಾರ್ಕ್​ಗೆ ತೆರಳಬೇಕಿತ್ತು. ಆದರೆ ಐಪಿಎಲ್​ ಟೂರ್ನಿಯಿಂದಾಗಿ ಇದು ಸಾಧ್ಯವಾಗಲಿಲ್ಲ. ಇದು ಮಾತ್ರವಲ್ಲದೆ ಭಾರತ ಏಕೈಕ ಅಭ್ಯಾಸ ಪಂದ್ಯ ಮಾತ್ರ ಆಡಲಿದೆ. ಭಾರತೀಯ ಆಟಗಾರರು ವ್ಯಾಪಕ ಪ್ರಯಾಣ ಮತ್ತು ಐಪಿಎಲ್​ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದ್ದಾರೆ. ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಈ ಪಂದ್ಯವನ್ನು ಆಡಲಿದೆ. ಅಭ್ಯಾಸ ಪಂದ್ಯಗಳು ಮೇ 27ರಿಂದ ಜೂನ್ 1ರವರೆಗೆ ನಡೆಯಲಿದೆ.

ಇದನ್ನೂ ಓದಿ T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ

Continue Reading

ಕ್ರೀಡೆ

RCB vs CSK: 11 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದರೆ ಆರ್​ಸಿಬಿಗೆ ಇಂದು ಗೆಲುವು ಖಚಿತ

RCB vs CSK: ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.

VISTARANEWS.COM


on

RCB vs CSK
Koo

ಬೆಂಗಳೂರು: ಸಾಂಪ್ರದಾಯಿಕ ಬದ್ಧವೈರಿಗಳಾದ ಆರ್‌ಸಿಬಿ(RCB vs CSK) ಹಾಗೂ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ನಿರ್ಣಾಯಕ ಹಣಾಹಣಿ ಇನ್ನೇಮು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಇತ್ತಂಡಗಳ ನಡುವಣ ಈ ಕಾದಾಟಕ್ಕೆ ನಗರದ ಚಿನ್ನಸ್ವಾಮಿ(Chinnaswamy) ಕ್ರೀಡಾಂಗಣ ಸಜ್ಜಾಗಿ ನಿಂತಿದೆ. ಆದರೆ ಮತ್ತೊಂದೆಡೆ ಭಾರೀ ಮೋಡ ಕವಿದ ವಾತಾವರಣ ಕಂಡು ಬಂದಿದ್ದು ಮಳೆ ಭೀತಿಯೂ(RCB vs CSK rain prediction) ಎದುರಾಗಿದೆ. 11 ವರ್ಷಗಳ ಹಿಂದೆಯೂ ಉಭಯ ತಂಡಗಳ ನಡುವಣ ಪಂದ್ಯಕ್ಕೂ ಮಳೆ ಎದುರಾಗಿತ್ತು. ಕಾಕತಾಳೀಯವೆಂದರೆ ಆ ಪಂದ್ಯ ಕೂಡ ಮೇ 18, ಶನಿವಾರ ನಡೆದಿತ್ತು.

ಹೌದು, ಆರ್​ಸಿಬಿ ಮತ್ತು ಚೆನ್ನೈ 2013ರಲ್ಲಿ(2013 IPL) ತನ್ನ ಕೊನೆಯ ಲೀಗ್​ ಪಂದ್ಯವನ್ನು ಮೇ 18ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಡಿತ್ತು. ಈ ಪಂದ್ಯ ಕೂಡ ಶನಿವಾರವೇ ಆಗಿತ್ತು. ಅಲ್ಲದೆ ಪಂದ್ಯಕ್ಕೆ ಮಳೆಯ ಭೀತಿಯೂ ಎದುರಾಗಿತ್ತು. ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಪಂದ್ಯಕ್ಕೆ ಮಳೆ ಕೂಡ ಅಡ್ಡಿಪಡಿಸಿತ್ತು. ಬಳಿಕ ಡಕ್​ವರ್ತ್ ಲೂಯಿಸ್​ ನಿಯಮದ ಅನುಸಾರ ಈ ಪಂದ್ಯವನ್ನು 8 ಓವರ್​ಗೆ ಸೀಮಿತಗೊಳಿಸಿ ಆಡಿಸಲಾಗಿತ್ತು.

ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 8 ಓವರ್​ಗೆ ಕೇವಲ 2 ವಿಕೆಟ್​ ಕಳೆದುಕೊಂಡು 106 ರನ್​ ಪೇರಿಸಿತ್ತು. ಕಿಂಗ್​ ವಿರಾಟ್​ ಕೊಹ್ಲಿ ಅಜೇಯ 56 ರನ್​ ಬಾರಿಸಿದರೆ, ಕ್ರಿಸ್​ ಗೇಲ್​ 28 ರನ್​ ಬಾರಿಸಿದ್ದರು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ 6 ವಿಕೆಟ್​ ಕಳೆದುಕೊಂಡು 82 ರನ್​ಗಳಿಸಲಷ್ಟೇ ಶಕ್ತವಾಗಿ 24 ರನ್​ಗಳ ಸೋಲು ಕಂಡಿತ್ತು.

ಇದೀಗ ಇಂದು ನಡೆಯುವ ಪಂದ್ಯವೂ ಕೂಡ ಮೇ 18 ಶನಿವಾರವಾಗಿದೆ. ಜತೆಗೆ ಪಂದ್ಯಕ್ಕೆ ಮಳೆಯ ಭೀತಿ ಕೂಡ ಇದೆ. ಅಂಕಿ ಸಂಖ್ಯೆಗಳ ಚಮತ್ಕಾರ ತಾಳೆಯಾಗುತ್ತಿದ್ದು ಈ ಆಧಾರದಲ್ಲಿ ಆರ್​ಸಿಬಿ ಇಂದು ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಪಂದ್ಯಕ್ಕೂ ಮುನ್ನವೇ ಭವಿಷ್ಯ ನುಡಿಯಲಾರಂಭಿಸಿದ್ದಾರೆ.

ಇದನ್ನೂ ಓದಿ IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy)ವಿದೆ. ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ. ಒಂದೊಮ್ಮೆ ಮಳೆಯ ಆರ್ಭಟ ನಿಲ್ಲದೇ ಹೋದಲ್ಲಿ, ಆಗ ಎಷ್ಟೇ ದೊಡ್ಡ ತಂತ್ರಜ್ಞಾನವಿದ್ದರೂ ಇದು ಉಪಯೋಗಕ್ಕೆ ಬಾರದು. ಹೀಗಾಗಿ ಪಂದ್ಯದ ಅಳಿವು ಉಳಿವಿನ ಭವಿಷ್ಯ ಮಳೆಯ ಕೈಯಲ್ಲಿದೆ.

ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.

Continue Reading
Advertisement
Girish's mother
ಕರ್ನಾಟಕ14 mins ago

Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

HD Deve Gowda
ಕರ್ನಾಟಕ19 mins ago

ಮೋದಿಯವರೇ, 3ನೇ ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿ; ಜನುಮ ದಿನದ ಶುಭಾಶಯ ಕೋರಿದ ಪ್ರಧಾನಿಗೆ ದೇವೇಗೌಡರ ಕೃತಜ್ಞತೆ

Viral Video
ದೇಶ22 mins ago

Viral Video: ಐಸ್ ಕ್ರೀಮ್‌ನಲ್ಲಿ ಚಿನ್ನದ ಉಂಗುರ ಅಡಗಿಸಿಕೊಟ್ಟ ಪ್ರಿಯತಮ! ಮುಂದೇನಾಯ್ತು?

Prajwal Revanna Case obscene video goes viral Advocate Devarajegowda SIT custody extended by 2 days
ಹಾಸನ22 mins ago

Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ

RCB vs CSK:
ಕ್ರೀಡೆ28 mins ago

RCB vs CSK: ಗೆದ್ದರೂ ಆರ್​ಸಿಬಿಗೆ ಪ್ಲೇ ಆಫ್​ ಖಚಿತವಲ್ಲ; ಹೀಗಿದೆ ರನ್​ರೇಟ್​ ಲೆಕ್ಕಾಚಾರ!

Karnataka Weather Forecast Rain alert
ಮಳೆ34 mins ago

Karnataka Weather : ಮಲೆನಾಡಿನಲ್ಲಿ ಮಳೆ ಮೋಡಿ; ಭಾನುವಾರವೂ ಅಬ್ಬರ ಇರಲಿದೆ ನೋಡಿ

Koppal tragedy
ಕೊಪ್ಪಳ1 hour ago

Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

Prajwal Revanna case Devaraje Gowda should be given mental treatment says Congress
ರಾಜಕೀಯ1 hour ago

Prajwal Revanna Case: ದೇವರಾಜೇಗೌಡರಿಗೆ ಮೆಂಟಲ್‌ ಟ್ರೀಟ್ಮೆಂಟ್‌ ಕೊಡಿಸಬೇಕಿದೆ: ಕಾಂಗ್ರೆಸ್‌ ವ್ಯಂಗ್ಯ

Health Tips in Kannada tomato juice is good for health
ಆರೋಗ್ಯ1 hour ago

Health Tips in Kannada: ಟೊಮ್ಯಾಟೊ ಜ್ಯೂಸ್‌ ಆರೋಗ್ಯಕ್ಕೇಕೆ ಒಳ್ಳೆಯದು ಗೊತ್ತೆ?

T20 World Cup 2024
ಕ್ರೀಡೆ1 hour ago

T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ22 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌