ನಿಕ್​ ಜೋನಸ್​ ಮತ್ತು ಸೋದರರಿಗೆ ಹಾಲಿವುಡ್​ ವಾಕ್ ಆಫ್ ಫೇಮ್​ ಗೌರವ; ಅಪ್ಪನ ಸಂಭ್ರಮಕ್ಕೆ ಸಾಕ್ಷಿಯಾದ ಮಗಳು ಮಾಲತಿ - Vistara News

ಬಾಲಿವುಡ್

ನಿಕ್​ ಜೋನಸ್​ ಮತ್ತು ಸೋದರರಿಗೆ ಹಾಲಿವುಡ್​ ವಾಕ್ ಆಫ್ ಫೇಮ್​ ಗೌರವ; ಅಪ್ಪನ ಸಂಭ್ರಮಕ್ಕೆ ಸಾಕ್ಷಿಯಾದ ಮಗಳು ಮಾಲತಿ

ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಪ್ಯಾಂಟ್​ಶರ್ಟ್​ನಲ್ಲಿ ಮಿಂಚಿದರೆ, ನಿಕ್ ಜೋನಸ್​ ಅವರು ಕ್ರೀಮ್​ ಬಣ್ಣದ ಸೂಟ್​ ಧರಿಸಿದ್ದರು. ಹಾಗೇ, ಮಗಳು ಮಾಲತಿ ಕೂಡ ಅದೇ ಬಣ್ಣದ ಡ್ರೆಸ್​​ನಲ್ಲಿ ಸಖತ್ ಕ್ಯೂಟ್​ ಆಗಿ ಕಾಣಿಸುತ್ತಿದ್ದಳು.

VISTARANEWS.COM


on

Nick Jonas and his Brothers get a star on Hollywood Walk of Fame
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನರಂಜನಾ ಕ್ಷೇತ್ರದ ಸಾಧಕರಿಗಾಗಿ ಹಾಲಿವುಡ್​ ವಾಕ್​ ಆಫ್​ ಫೇಮ್​​​ನಿಂದ ನೀಡಲಾಗುವ ‘ಸ್ಟಾರ್​’ ಗೌರವಕ್ಕೆ ಸೋಮವಾರ ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಸ್​ ಮತ್ತು ಅವರ ಸಹೋದರರಾದ ಕೆವಿನ್​, ಜೋ ಪಾತ್ರರಾಗಿದ್ದಾರೆ. ಜನವರಿ 30ರಂದು ಹಾಲಿವುಡ್​ ವಾಕ್​ ಆಫ್​ ಫೇಮ್​​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಖ್ಯಾತ ಸಂಗೀತಗಾರರಾದ ನಿಕ್​ ಜೋನಸ್​, ಕೆವಿನ್​ ಜೋನಸ್​ ಮತ್ತು ಜೋ ಜೋನಸ್​ ತಮ್ಮ ಕುಟುಂಬ ಸಮೇತ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿಯೇ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಪುತ್ರಿ ಮಾಲತಿ ಮೇರಿ ಮುಖವೂ ಕಾಣಿಸಿದೆ. ಇಂದು ಬೆಳಗ್ಗೆಯಿಂದಲೂ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಪ್ಯಾಂಟ್​ಶರ್ಟ್​ನಲ್ಲಿ ಮಿಂಚಿದರೆ, ನಿಕ್ ಜೋನಸ್​ ಅವರು ಕ್ರೀಮ್​ ಬಣ್ಣದ ಸೂಟ್​ ಧರಿಸಿದ್ದರು. ಹಾಗೇ, ಮಗಳು ಮಾಲತಿ ಕೂಡ ಅದೇ ಬಣ್ಣದ ಡ್ರೆಸ್​​ನಲ್ಲಿ ಸಖತ್ ಕ್ಯೂಟ್​ ಆಗಿ ಕಾಣಿಸುತ್ತಿದ್ದಳು. ಕಳೆದ ವರ್ಷ ಜನವರಿ ತಿಂಗಳಲ್ಲಿ ಜನಿಸಿದ ಮಾಲತಿ ಮೇರಿ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇದುವರೆಗೆ ಬಹಿರಂಗ ಮಾಡಿರಲಿಲ್ಲ. ಈಗಾಗಲೇ ಹಲವು ಬಾರಿ ಸೋಷಿಯಲ್​ ಮೀಡಿಯಾಗಳಲ್ಲಿ ಮಗಳು ಜತೆಗೇ ಇರುವ ಫೋಟೋ ಹಾಕಿದ್ದರೂ, ಪುತ್ರಿಯ ಮುಖಕ್ಕೆ ಇಮೋಜಿ ಹಾಕುತ್ತಿದ್ದರು. ಆಕೆಯನ್ನು ಸಾರ್ವಜನಿಕ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆದರೆ ಈ ಬಾರಿ ಪ್ರಿಯಾಂಕಾ ಮಗುವಿನ ಮುಖವನ್ನು ರಿವೀಲ್​ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Disha Patani: ಕಡಲಲ್ಲಿ ಮಿಂದೆದ್ದ ದಿಶಾ ಪಟಾನಿ; ಬಿಕಿನಿಯಲ್ಲಿ ಬಿಸಿ ಹೆಚ್ಚಿಸಿದ ಹಾಟ್‌ ಬೆಡಗಿ!

Disha Patani: ಕೆಲವು ದಿನಗಳ ಹಿಂದೆಯಷ್ಟೇ ದಿಶಾ ತಮ್ಮ ಸ್ನೇಹಿತರಿಗೆ ಅಲೆಕ್ಸಾಂಡರ್​ನ ಪರಿಚಯ ಮಾಡಿಸಿದ್ದರು. ಇವರು ನನ್ನ ಬಾಯ್​ಫ್ರೆಂಡ್’ ಎಂದು ಹೇಳಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು. ಇದಕ್ಕೂ ಮುಂಚೆ ದಿಶಾ ಮತ್ತು ಟೈಗರ್ ಶ್ರಾಫ್ ಪ್ರೀತಿಸುತ್ತಿದ್ದರು. ಇವರಿಬ್ಬರ​ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ.

VISTARANEWS.COM


on

Disha Patani Slips Into a Bikini For a Dip in the Ocean
Koo

ಬೆಂಗಳೂರು: ದಿಶಾ ಪಟಾನಿ (Disha Patani ) ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನಟಿ ಸಮುದ್ರದಲ್ಲಿ ಹಾಟ್‌ ಆಗಿ ಸ್ನಾನ ಮಾಡುತ್ತಿರುವ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕಡಲ ತೀರದಲ್ಲಿ ಸೂರ್ಯಾಸ್ತ ಸಮಯದಲ್ಲಿ ಬಿಕಿನಿ ಧರಿಸಿ ದಿಶಾ ಪೋಸ್‌ ಕೊಟ್ಟಿದ್ದಾರೆ. ದಿಶಾ ಪೋಸ್ಟ್‌ಗೆ ಲೈಕ್ ಕೊಡಲು ಫ್ಯಾನ್ಸ್ ಮುನ್ನುಗ್ಗಿ ಬರುತ್ತಿದ್ದಾರೆ.

ಶೀರ್ಷಿಕೆಯಲ್ಲಿ ಸೂರ್ಯನ ಎಮೋಜಿಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಲವಾರು ಅಭಿಮಾನಿಗಳು ʻʻಹಾಟ್‌ʼಎಂಂದು ಕಮೆಂಟ್‌ ಮಾಡಿದ್ದಾರೆ. “ಜಾಗತಿಕ ತಾಪಮಾನ ಹೆಚ್ಚಾಗಲಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಬಿಕಿನಿಯ ಮೂರು ಫೋಟೋಗಳು ಅಪ್ಲೋಡ್ ಮಾಡಿದ ಜಸ್ಟ್ 1 ಗಂಟೆಯಲ್ಲಿಯೇ ಸಾವಿರಾರು ಕಮೆಂಟ್ ಗಳು ಬಂದಿವೆ. ಫೋಟೋ ನೋಡಿದ ಅಭಿಮಾನಿಗಳು ನಟ ಟೈಗರ್ ಶ್ರಾಫ್‌ಗೆ ಟ್ಯಾಗ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ದಿಶಾ ತಮ್ಮ ಸ್ನೇಹಿತರಿಗೆ ಅಲೆಕ್ಸಾಂಡರ್​ನ ಪರಿಚಯ ಮಾಡಿಸಿದ್ದರು. ಇವರು ನನ್ನ ಬಾಯ್​ಫ್ರೆಂಡ್’ ಎಂದು ಹೇಳಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು. ಇದಕ್ಕೂ ಮುಂಚೆ ದಿಶಾ ಮತ್ತು ಟೈಗರ್ ಶ್ರಾಫ್ ಪ್ರೀತಿಸುತ್ತಿದ್ದರು. ಇವರಿಬ್ಬರ​ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ. ಟೈಗರ್ ಮತ್ತು ದಿಶಾ ‘ಬಾಘಿ 2’ ಚಿತ್ರದಲ್ಲಿ ಮತ್ತು ‘ಬೇಫಿಕ್ರಾ’ ಸಿಂಗಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಟೈಗರ್‌ನ ‘ಬಾಘಿ 3’ ಚಿತ್ರದಲ್ಲಿ ದಿಶಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ನಟಿ, ‘ಯೋಧ’, ‘ಕಂಗುವಾ’, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳ​​ ಜತೆ ದಕ್ಷಿಣ ಭಾರತದ ಸಿನಿಮಾದಲ್ಲೂ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಸೂರ್ಯ ಜೊತೆಯಲ್ಲಿ ಕಂಗುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ದಿಶಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಸಂಜಯ್ ದತ್, ಸುನೀಲ್ ಶೆಟ್ಟಿ, ಅರ್ಷದ್ ವಾರ್ಸಿ, ಪರೇಶ್ ರಾವಲ್, ಜಾನಿ ಲಿವರ್, ರಾಜಪಾಲ್ ಯಾದವ್, ತುಷಾರ್ ಕಪೂರ್, ಶ್ರೇಯಸ್ ತಲ್ಪಡೆ, ಕೃಷ್ಣಾ ಅಭಿಷೇಕ್, ಕಿಕು ಶಾರದಾ, ದಲೇರ್ ಮೆಹಂದಿ, ಮಿಕಾ ಸಿಂಗ್, ರಾಹುಲ್ ದೇವ್, ಮುಖೇಶ್ ತಿವಾರಿ, ಶರೀಬ್ ತಿವಾರಿ ಮುಂತಾದವರು ಇದ್ದಾರೆ.

Continue Reading

ಬಾಲಿವುಡ್

Taapsee Pannu: ಸೆಲ್ಫಿಗೆ ಪೋಸ್‌ ಕೋಡೋಕೆ ಆಗಲ್ವಾ? ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಕೆಂಡ!

Taapsee Pannu: ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಮೆಂಟ್ ಮಾಡಿದ್ದಾರೆ.

VISTARANEWS.COM


on

Taapsee Pannu Denying Selfie, Netizens Defend Actress
Koo

ಬೆಂಗಳೂರು: ತಾಪ್ಸಿ ಪನ್ನು (Taapsee Pannu) ಟಾಲಿವುಡ್‌ನಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ಜತೆಗೆ ಆಗಾಗ ವಿವಾದಕ್ಕೂ ಗುರಿಯಾಗುತ್ತ ಇರುತ್ತಾರೆ. ಇದೀಗ ನಟಿ ʻಖೇಲ್ ಖೇಲ್ ಮೇʼ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಮೆಂಟ್ ಮಾಡಿದ್ದಾರೆ.

ಅನನ್ಯಾ ವೈರಲ್ ವೀಡಿಯೊದಲ್ಲಿ ಈ ಬಗ್ಗೆ ಕಮೆಂಟ್‌ ಮಾಡಿದ್ದು ಹೀಗೆ. ʻʻಹಲವಾರು ಕ್ಯಾಮೆರಾಗಳಿಗೆ ಪೋಸ್‌ ನೀಡುತ್ತಿರುವಾಗ,ಸೆಲ್ಫಿಯನ್ನು ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಪ್ರಭಾವಿಗಳನ್ನು ಕರೆದ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು! ಆಕೆಗೆ ನಿಜವಾಗಿಯೂ ಉತ್ತಮ PR ತರಬೇತಿಯ ಅಗತ್ಯವಿದೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

Tapsee strikes again! Swipe for more
byu/Away-Enthusiasm8771 inBollyBlindsNGossip

ವೀಡಿಯೊ ರೆಡ್ಡಿಟ್‌ನಲ್ಲಿಯೂ ಕಾಣಿಸಿಕೊಂಡಿದೆ ಮತ್ತು ನೆಟಿಜನ್‌ಗಳು ಈ ಬಗ್ಗೆ ಕಮೆಂಟ್‌ ಮಾಡಿದ್ದಾರೆ. ʻʻನಟಿಯದ್ದು ಯಾವುದೇ ತಪ್ಪು ಇಲ್ಲ. ಸೆಲ್ಫಿ ಕೊಡುವ ಅಗತ್ಯ ಇಲ್ಲʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಬಾಲಿವುಡ್‌ನ ಅಭಿಮಾನಿ ಅಥವಾ ಫಾಲೋವರ್‌ ನಾನು ಅಲ್ಲ. ಆದರೆ ನಾನು ಎರಡೂ ದೃಷ್ಟಿಕೋನಗಳಿಂದ ವಿಷಯಗಳನ್ನು ನೋಡಲು ಪ್ರಯತ್ನಿಸುತ್ತೇನೆ. ಬಹುಶಃ ಆಕೆಯ ಮೇಕ್ಅಪ್ ಅಥವಾ ಕೂದಲಿಗೆ ಟಚ್‌ಅಪ್ ಅಗತ್ಯವಿದೆ ಎಂದು ಅವರು ಭಾವಿಸಿರಬಹುದುʼʼಎಂದು ಕಮೆಂಟ್‌ ಮಾಡಿದ್ದಾರೆ.

ʻʻನಟಿ ಎಂಬ ಕಾರಣಕ್ಕೆ ಪ್ರತಿ ಸೆಲ್ಫಿಗೂ ಹೌದು ಎಂದು ಹೇಳಬೇಕಿಲ್ಲ. ಬಹುಶಃ ಅವರು ಸೆಲ್ಫಿಗಳನ್ನು ಇಷ್ಟಪಡುವುದಿಲ್ಲ, ವೃತ್ತಿಪರ ಕ್ಯಾಮೆರಾಗಳು ಇವೆʼʼ ಎಂದು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಕ್ಷಯ್ ಕುಮಾರ್, ತಾಪ್ಸಿ ಪನ್ನು ಮತ್ತು ಫರ್ದೀನ್ ಖಾನ್ ಅಭಿನಯದ ʻಖೇಲ್ ಖೇಲ್ ಮೇʼ ಚಿತ್ರದ ಹೊಸ ಮೋಷನ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ವಾಣಿ ಕಪೂರ್, ಆಮಿ ವಿರ್ಕ್, ಆದಿತ್ಯ ಸೀಲ್ ಮತ್ತು ಪ್ರಜ್ಞಾ ಜೈಸ್ವಾಲ್ ಕೂಡ ನಟಿಸಿದ್ದಾರೆ. ಈ ವರ್ಷ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ”ಫಿರ್ ಆಯಿ ಹಸೀನ್ ದಿಲ್‌ ರುಬಾ” ಚಿತ್ರದಲ್ಲಿ ಕೂಡ ತಾಪ್ಸಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 09ರಂದು ಈ ಚಿತ್ರ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

Continue Reading

ಸಿನಿಮಾ

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Aishwarya Rai Bachchan: ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿʼ ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ. ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ.

VISTARANEWS.COM


on

Aishwarya Rai Bachchan
Koo

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Actress Aishwarya Rai Bachchan) ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೇ ತಮ್ಮ ವಿಶೇಷ ಫ್ಯಾಷನ್ ಶೈಲಿ ಮತ್ತು ಸೌಂದರ್ಯದಿಂದ ಕೂಡ ಅನೇಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ನಿಮಗೂ ಐಶ್ವರ್ಯಾ ಅವರ ಫ್ಯಾಷನ್ ಶೈಲಿಯನ್ನು ಅನುಸರಿಸುವ ಆಸಕ್ತಿ ಇದ್ದರೆ, ನಟಿ ತಮ್ಮ ಬಲಗೈಗೆ ಧರಿಸಿದ ವಿ-ಆಕಾರದ ವಜ್ರದ ಉಂಗುರದ ಬಗ್ಗೆ ತಿಳಿದುಕೊಳ್ಳಿ! ನಟಿ ಈ ಉಂಗುರವನ್ನು ಧರಿಸದೆ ಎಂದಿಗೂ ಹೊರಗೆ ಹೋಗುವುದಿಲ್ಲ. ಹಾಗಾದ್ರೆ ನಟಿ ಧರಿಸಿದ ಈ ಉಂಗುರದ ವಿಶೇಷತೆ ಏನು ಎಂಬುದನ್ನು ತಿಳಿಯಿರಿ. ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿ” ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ಹಾಗಾಗಿ ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ ಮತ್ತು ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ. ಅವರ ಸಂಪ್ರದಾಯದಲ್ಲಿ ಮದುವೆಯ ನಂತರ ಮಂಗಳಸೂತ್ರವನ್ನು ಧರಿಸುವ ಹಾಗೇ ಈ ಉಂಗುರವನ್ನು ಧರಿಸಬೇಕಾಗುತ್ತದೆ.

Aishwarya Rai Bachchan V shape dimond ring

ಬಂಟ ಸಮುದಾಯದ ಸಂಪ್ರದಾಯ

ಈ ಉಂಗುರವು ಹೆಚ್ಚಾಗಿ ಮಂಗಳೂರಿನ ಬಂಟ ಸಮುದಾಯದವರು ಧರಿಸುತ್ತಾರೆ. ಈ ಉಂಗುರವು ವಿವಾಹಿತ ಮಹಿಳೆಯರು ಮತ್ತು ನವ ವಧುವನ್ನು ಕೆಟ್ಟ ಸಂದರ್ಭಗಳಿಂದ ರಕ್ಷಿಸುತ್ತದೆ ಎಂಬುದು ಬಂಟ ಸಮುದಾಯದ ನಂಬಿಕೆಯಾಗಿದೆ. ಬಂಟ ಸಮುದಾಯಕ್ಕೆ ಸೇರಿದ ನಟಿ ಐಶ್ವರ್ಯ ರೈ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ತಮ್ಮ ಸಮುದಾಯದ ಸಂಪ್ರದಾಯದಂತೆ ಯಾವಾಗಲೂ ತನ್ನ ಕೈಯಲ್ಲಿ ವಂಕಿ ಉಂಗುರವನ್ನು ಧರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಉಂಗುರವನ್ನು ಬಂಟ ಸಮುದಾಯ ಮಾತ್ರವಲ್ಲದೇ ದಕ್ಷಿಣ ಭಾರತದ ಸಮುದಾಯದ ಅನೇಕ ವಿವಾಹಿತ ಮಹಿಳೆಯರು ಧರಿಸುತ್ತಾರೆ.

ಇದನ್ನೂ ಓದಿ: Bollywood Cinema: ಜೀವನ ಪ್ರೀತಿಯ ತೀವ್ರತೆ ಸಾರಿದ 5 ಬಾಲಿವುಡ್ ಚಿತ್ರಗಳಿವು

ಹಲವಾರು ವಿನ್ಯಾಸಗಳಲ್ಲಿ ಲಭ್ಯ:
ಈ ವಂಕಿ ಉಂಗುರವು ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ, ಉದಾಹರಣೆಗೆ ವಿ-ಆಕಾರದ ತೆಳುವಾದ ಚಿನ್ನದ ಬ್ಯಾಂಡ್ ಅಥವಾ ನಟಿ ಐಶ್ವರ್ಯ ರೈ ಧರಿಸಿದಂತೆ ವಜ್ರದ ಬ್ಯಾಂಡ್ ನಲ್ಲಿ ಸಿಗುತ್ತದೆ. ಈ ಉಂಗುರವನ್ನು ಮಂಗಳೂರಿನ ವಿವಾಹಿತ ಮಹಿಳೆಯರು ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸುತ್ತಾರೆ. ಇದರಿಂದ ಅವರು ವಿವಾಹಿತರು ಎಂದು ಹೇಳುತ್ತಾರೆ. ಅಲ್ಲದೇ ಈ ಉಂಗುರವು ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಉದಾಹರಣೆಗೆ ದುಷ್ಟ ಶಕ್ತಿಗಳಿಂದ ಅವರನ್ನು ರಕ್ಷಿಸುತ್ತದೆ ಮತ್ತು ಅವರಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅವರ ವೈವಾಹಿಕ ಜೀವನ ಸಂತೋಷ ಮತ್ತು ಪ್ರೀತಿಯಿಂದ ತುಂಬಿರುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ ಈ ಉಂಗುರ ವಿಶೇಷವಾಗಿ ಗಮನ ಸೆಳೆದಿದೆ.

Continue Reading

ಕರ್ನಾಟಕ

Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

Ghuspaithia Hindi movie: ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರʼ, ‘ನಾತಿಚರಾಮಿʼ, ‘ಪಡ್ಡೆಹುಲಿʼ, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.

VISTARANEWS.COM


on

Ghuspaithia Hindi movie release on August 9
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ‘ಉಪ್ಪು ಹುಳಿ ಖಾರʼ, ‘ನಾತಿಚರಾಮಿʼ, ‘ಪಡ್ಡೆಹುಲಿʼ, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಿಸಿರುವ ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.

ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympic: ರೋಯಿಂಗ್​ನಲ್ಲಿ ಶುಭ ಸುದ್ದಿ; ಶೂಟಿಂಗ್​ನಲ್ಲಿ ನಿರಾಸೆ ಮೂಡಿಸಿದ ಮಿಶ್ರ ತಂಡ

ಆಗಸ್ಟ್ 9ರಂದು AA ಫಿಲಂಸ್ ಮೂಲಕ ಬಿಡುಗಡೆಯಾಗಲಿರುವ ಈ ಚಿತ್ರದ ತಾರಾಬಳಗದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲ, ಅಕ್ಷಯ್ ಒಬೆರಾಯ್ ಮುಂತಾದವರಿದ್ದಾರೆ.

Continue Reading
Advertisement
karnataka Rain
ಮಳೆ1 min ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

Anant Ambani Marriage
Latest5 mins ago

Anant Ambani Marriage: ಅನಂತ್ ಅಂಬಾನಿ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್; ಕುಣಿದು ಕುಪ್ಪಳಿಸಿದ ಹಾರ್ದಿಕ್ ,ರಣವೀರ್ ಸಿಂಗ್!

Sexual Harassment
ಪ್ರಮುಖ ಸುದ್ದಿ11 mins ago

Sexual Harassment : ರಿಕ್ಷಾದಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಾಲಕ

Viral Video
ವೈರಲ್ ನ್ಯೂಸ್16 mins ago

Viral Video: ಶೇ. 100ರಷ್ಟು ಆದಾಯ ತೆರಿಗೆಯನ್ನು ಹೀಗೂ ಉಳಿಸಬಹುದಂತೆ ನೋಡಿ!

Union Budget 2024
ಕರ್ನಾಟಕ21 mins ago

Union Budget 2024: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್

Paris Olympics Badminton
ಕ್ರೀಡೆ21 mins ago

Paris Olympics Badminton: ಗೆಲುವಿನ ಶುಭಾರಂಭ ಮಾಡಿದ ಪಿ.ವಿ. ಸಿಂಧು

Health Tips
ಪ್ರಮುಖ ಸುದ್ದಿ22 mins ago

Health Tips : ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ 5 ವಿಧದ ಸೂಪ್ ಸೇವಿಸಿ

Naveen Sajju debuts movie titled first look out
ಸಿನಿಮಾ34 mins ago

Naveen Sajju: ಗುಡ್‌ ನ್ಯೂಸ್‌ ಕೊಟ್ಟ ʻಚುಕ್ಕಿತಾರೆ ಸೀರಿಯಲ್‌ʼ ನಟ ನವೀನ್‌ ಸಜ್ಜು: ಶುಭ ಕೋರಿದ ಫ್ಯಾನ್ಸ್‌!

Assault case
ಚಿಕ್ಕೋಡಿ42 mins ago

Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!

Mann Ki Baat
ದೇಶ45 mins ago

Mann Ki Baat: ಪ್ಯಾರಿಸ್ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್​ ಕಿ ಬಾತ್​ʼನಲ್ಲಿ ಮೋದಿ ಕರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 min ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 hour ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ19 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

ಟ್ರೆಂಡಿಂಗ್‌