ಜಾರಕಿಹೊಳಿ‌ ಸಿಡಿ ಪ್ರಕರಣ; ಮಾನ ಇದ್ರೆ ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಲಿ, ಇಲ್ದಿದ್ರೆ ಕೆಪಿಸಿಸಿಗೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ - Vistara News

ಕರ್ನಾಟಕ

ಜಾರಕಿಹೊಳಿ‌ ಸಿಡಿ ಪ್ರಕರಣ; ಮಾನ ಇದ್ರೆ ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಲಿ, ಇಲ್ದಿದ್ರೆ ಕೆಪಿಸಿಸಿಗೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹ ಮಾಡಿದ್ದರೂ ಕಾಂಗ್ರೆಸ್‌ನವರು ಏಕೆ ಆ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

KS Eshwarappa statement about BJP ticket in Shimoga Assembly Constituency
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ: ತಮ್ಮ ವಿರುದ್ಧದ ಸಿಡಿ ಬಿಡುಗಡೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ನೇರ ಕೈವಾಡ ಇದೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಅವರು ನೇರವಾಗಿ ಆರೋಪ ಮಾಡಿದ್ದಾರೆ. ಪ್ರತಿಯೊಂದಕ್ಕೂ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡುವ ಕಾಂಗ್ರೆಸ್‌ನವರು ಮಾನ ಮರ್ಯಾದೆ ಇದ್ದರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಲಿ, ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್‌ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದ ಬಗ್ಗೆ ಈಗ ಏಕೆ ಕಾಂಗ್ರೆಸ್ ನಾಯಕರು ಬಾಯಿ ಬಿಡುತ್ತಿಲ್ಲ? ಪ್ರತಿಯೊಂದಕ್ಕೂ ಮೋದಿ, ಬೊಮ್ಮಾಯಿ ವಿರುದ್ಧ ಡಿಕೆಶಿ, ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾರೆ. ಈಗ ಏಕೆ ಸುಮ್ಮಿನಿದ್ದಾರೆ? ಮುಂದೆ ನೋಡಿ, ಯಾರ್ಯಾರು ಯಾವ ಜೈಲಿನಲ್ಲಿ ಇರಲಿದ್ದಾರೆ. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಅವರ ದುಷ್ಕೃತ್ಯ ಹೊರಬರಬೇಕು ಎಂದು ಹೇಳಿದರು.

ಇದನ್ನೂ ಓದಿ: Union budget 2023 : ಕರ್ನಾಟಕಕ್ಕೆ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5200 ಕೋಟಿ ರೂ.

ಗುತ್ತಿಗೆದಾರ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ದಾಖಲೆ ನೀಡುವಂತೆ ಪೊಲೀಸರಿಗೆ ಕೇಳಿದೆ. ಪೊಲೀಸರು ದಾಖಲೆಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ರಾಜಕಾರಣ ಮಾಡಿ ಯಶಸ್ಸು ಸಾಧಿಸಲು ಹೊರಟ ಕಾಂಗ್ರೆಸ್‌ನವರಿಗೆ ಸಾಧ್ಯವಾಗುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಐದಾರು ಬಾರಿ ಗೆಲ್ಲಿಸಿದ ಚಾಮುಂಡಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ. ಸೋಲುವ ಕಾರಣದಿಂದ ಕಳೆದ ಬಾರಿ ಬಾದಾಮಿಗೆ ಹೋಗಿ ಸ್ಪರ್ಧೆ ಮಾಡಿದರು. ಈಗ ಬಾದಾಮಿಯಲ್ಲಿ ಸೋಲುವುದು ಗೊತ್ತಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ. ಜಾತಿ ಮೇಲೆ ಚುನಾವಣೆ ಮಾಡಿದರೆ ತಾತ್ಕಾಲಿಕ ಯಶಸ್ಸು ಸಿಗಬಹುದು. ಜಾತಿವಾದಿಗಳು ದೇಶದಲ್ಲಿ ಹಾಳಾಗಿ ಹೋಗುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: KPCC : ಕಾಂಗ್ರೆಸ್‌ನಲ್ಲಿ ಬಂಡಾಯದ ಆತಂಕ: ನಾಲ್ಕು ತಿಂಗಳು ತಡವಾದರೂ ಆಗಲಿಲ್ಲ ಟಿಕೆಟ್‌ ಘೋಷಣೆ

ದೇಶದಲ್ಲಿ ಈಗ ನಡೆಯುತ್ತಿರುವುದು ಹಿಂದುತ್ವದ ರಾಷ್ಟ್ರೀಯತೆ ವಿಚಾರವಾಗಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜನರು ಹಿಂದುತ್ವವನ್ನು ಮೆಚ್ಚಿದ್ದಾರೆ. ಈಗ ಕಾಂಗ್ರೆಸ್ ನಾಯಕರು ನಾವು ಕೂಡ ಹಿಂದು ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Teach For India : ಟೀಚ್ ಫಾರ್ ಇಂಡಿಯಾದಿಂದ 2025ರ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳ ಆಹ್ವಾನ

Teach for India: ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಎರಡು ವರ್ಷದ, ಪೂರ್ಣಕಾಲಿಕ ಫೆಲೋಶಿಪ್ ಕಾರ್ಯಕ್ರಮವಾಗಿದ್ದು ಶೈಕ್ಷಣಿಕ ವಲಯದಲ್ಲಿ ಆಸಕ್ತಿಯುಳ್ಳ ಮತ್ತು ಬದಲಾವಣೆಯ ನಾಯಕರಾಗಲು ಬಯಸುವವರಿಗೆ ಸಬಲೀಕರಿಸುವ ಉದ್ದೇಶ ಹೊಂದಿದೆ. 640ಕ್ಕೂ ಹೆಚ್ಚು ಫೆಲೋಗಳು 2024 ಸಮೂಹ ಸೇರಿದ್ದು ಈ ಕಾರ್ಯಕ್ರಮದ ಬೆಳೆಯುತ್ತಿರುವ ಪ್ರಭಾವಕ್ಕೆ ಮತ್ತು ಶಿಕ್ಷಣ- ಸಮಾನತೆಯ ಚಳವಳಿಯ ಪರಿಣಾಮದ ಸದೃಢ ಸಾಕ್ಷಿಯಾಗಿದೆ.

VISTARANEWS.COM


on

Teach for India
Koo

ಬೆಂಗಳೂರು: ಮಕ್ಕಳಿಗೆ ಶೈಕ್ಷಣಿಕ ಸಮಾನತೆ ತರಲು ಶ್ರಮಿಸುತ್ತಿರುವ ಟೀಚ್ ಫಾರ್ ಇಂಡಿಯಾ (Teach for India) ತನ್ನ 2025ರ ಫೆಲೋಶಿಪ್ ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 1, 2024. ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಎರಡು ವರ್ಷದ, ಪೂರ್ಣಕಾಲಿಕ ಫೆಲೋಶಿಪ್ ಕಾರ್ಯಕ್ರಮವಾಗಿದ್ದು ಶೈಕ್ಷಣಿಕ ವಲಯದಲ್ಲಿ ಆಸಕ್ತಿಯುಳ್ಳ ಮತ್ತು ಬದಲಾವಣೆಯ ನಾಯಕರಾಗಲು ಬಯಸುವವರಿಗೆ ಸಬಲೀಕರಿಸುವ ಉದ್ದೇಶ ಹೊಂದಿದೆ. 640ಕ್ಕೂ ಹೆಚ್ಚು ಫೆಲೋಗಳು 2024 ಸಮೂಹ ಸೇರಿದ್ದು ಈ ಕಾರ್ಯಕ್ರಮದ ಬೆಳೆಯುತ್ತಿರುವ ಪ್ರಭಾವಕ್ಕೆ ಮತ್ತು ಶಿಕ್ಷಣ- ಸಮಾನತೆಯ ಚಳವಳಿಯ ಪರಿಣಾಮದ ಸದೃಢ ಸಾಕ್ಷಿಯಾಗಿದೆ.

ಈ ಫೆಲೋಶಿಪ್ ಅರ್ಜಿ ಪ್ರಕ್ರಿಯೆ ಅತ್ಯಂತ ಎಚ್ಚರದಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಭಾರತದ ಅತ್ಯಂತ ಉಜ್ವಲ ಮತ್ತು ಭರವಸೆಯ ವ್ಯಕ್ತಿಗಳ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆಯ್ದ ಫೆಲೋಗಳು ಕಠಿಣ ತರಬೇತಿ ಕಾರ್ಯಕ್ರಮ ಪಡೆಯುತ್ತಾರೆ ಅದರಲ್ಲಿ ಅವರು ಶಿಕ್ಷಣ ವ್ಯವಸ್ಥೆಯನ್ನು ಅದರ ಬೇರುಮಟ್ಟದಿಂದ ಅರ್ಥ ಮಾಡಿಕೊಳ್ಳಲು ಪ್ರೇರಣೆ ನೀಡಲಾಗುತ್ತದೆ.

ಇದನ್ನೂ ಓದಿ : Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ನ ವಿಶಿಷ್ಟ ಆಯಾಮವೆಂದರೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿವರ್ತನೀಯ ಬದಲಾವಣೆ ತರುವ ಅವಕಾಶ. ಇದು ಅವರಿಗೆ ನಾಯಕತ್ವ, ಸಮಸ್ಯೆ ಪರಿಹರಿಸುವುದು ಮತ್ತು ನಿಜ ಜೀವನದ ಸವಾಲುಗಳನ್ನು ಎದುರಿಸುವ ಹಲವು ಆಯಾಮಗಳ ಕುರಿತು ಒಳನೋಟಗಳನ್ನು ನೀಡುತ್ತದೆ ಅದು ಅವರ ಒಟ್ಟಾರೆ ವೃತ್ತಿಯ ಪ್ರಗತಿಗೆ ಮಹತ್ತರ ಬದಲಾವಣೆ ತರುತ್ತದೆ.

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಕುರಿತು ಹೆಚ್ಚು ತಿಳಿಯಲು ಮತ್ತು ಆಯ್ಕೆ ಪ್ರಕ್ರಿಯೆಗೆ ಈ ಕೆಳಕಂಡ ಲಿಂಕ್ ಗಳಿಗೆ ಭೇಟಿ ನೀಡಿ:

Continue Reading

ಶಿವಮೊಗ್ಗ

Shivamogga News: ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ರಾಜು ಹಿರಿಯಾವಲಿ

Shivamogga News: ಸೊರಬ ತಾಲೂಕಿನ ಕುಂದಗಸವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಮಲೆನಾಡ ಸಿರಿ ಸೇವಾ ಬಳಗದ ರಾಜು ಹಿರಿಯಾವಲಿ ಅವರು, ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದರು.

VISTARANEWS.COM


on

Shivamogga News Give top priority to cleanliness says Raju Hiriyawali
Koo

ಸೊರಬ: ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು ಸ್ವಚ್ಛತೆಯತ್ತ ಹೆಚ್ಚು ಹೆಚ್ಚು ಗಮನ ಕೊಡಬೇಕು ಎಂದು ಮಲೆನಾಡ ಸಿರಿ ಸೇವಾ ಬಳಗದ ರಾಜು ಹಿರಿಯಾವಲಿ (Shivamogga News) ತಿಳಿಸಿದರು.

ತಾಲೂಕಿನ ಕುಂದಗಸವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿ, ಬಳಿಕ ಅವರು ಮಾತನಾಡಿದರು.

ಮಕ್ಕಳಿಗೆ ಮೂಲಭೂತ ಸೌಕರ್ಯಗಳಲ್ಲಿ ಶುದ್ಧ ಕುಡಿಯುವ ನೀರು ಸಹ ಒಂದಾಗಿದೆ. ಶುದ್ಧ ನೀರು ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ತಾಲೂಕಿನ ಸುಮಾರು 50 ಶಾಲೆಗಳಿಗೆ ವಾಟರ್ ಫಿಲ್ಟರ್ ಒದಗಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Uttara Kannada News: ರೈತ ಯುವಕರು, ವಿಕಲಚೇತನರ ವಿವಾಹಕ್ಕೆ ಉ.ಕ ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ!

ಮಕ್ಕಳು ಮತ್ತು ಶಿಕ್ಷಕರು ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ಇನ್ನಿತರೆ ಪೊಟರೆಗಳಲ್ಲಿ ಸಂಗ್ರಹವಾಗದಂತೆ ನೋಡಿಕೊಂಡಲ್ಲಿ ಮಳೆಗಾಲದಂತಹ ಈ ದಿನಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಶೈಕ್ಷಣಿಕ ಪ್ರಜ್ಞೆ ಬೆಳೆಸಿದಲ್ಲಿ ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಎಲ್. ನೋಪಿ ಶಂಕರ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಇದನ್ನೂ ಓದಿ: HDFC Life: ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವೈ. ಗೌರಮ್ಮ, ಸಹ ಶಿಕ್ಷಕ ಅಶೋಕ್, ಪ್ರಮುಖರಾದ ಎಂ.ಎಚ್‌. ಗಣೇಶ್, ಸಂತೋಷ್, ಶ್ರೀಕಾಂತ್, ಸೃಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

MUDA site scandal: ಸಿಎಂ ಸಿದ್ದರಾಮಯ್ಯ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಿ: ಲೆಹರ್‌ ಸಿಂಗ್‌ ಆಗ್ರಹ

MUDA site scandal: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಅವರ ನೇತೃತ್ವದ ಸರ್ಕಾರದಿಂದ 62 ಕೋಟಿ ರೂ. ಮೊತ್ತದ ಭಾರಿ ಪರಿಹಾರವನ್ನು ಅವರೇ ಕೇಳಿರುವುದು ಬೇಸರದ ಸಂಗತಿ ಮಾತ್ರವಲ್ಲ, ಲಜ್ಜೆಗೆಟ್ಟ ವರ್ತನೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್ ಸಿರೋಯಾ ಟೀಕಿಸಿದ್ದಾರೆ.

VISTARANEWS.COM


on

Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನೇತೃತ್ವದ ಸರ್ಕಾರದಿಂದಲೇ 62 ಕೋಟಿ ರೂ.ಗಳ ಭಾರೀ ಪರಿಹಾರವನ್ನು ಏಕೆ ಕೇಳುತ್ತಿದ್ದಾರೆ? ತಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರು ಮುಡಾ ಪ್ರಕರಣವನ್ನು (MUDA site scandal) ಸಿಬಿಐ ಅಥವಾ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ಒಪ್ಪಿಸಲು ಹೆದರಬಾರದು. ಹಾಗೆಯೇ ಜಾಣತನದಿಂದ ತಮಗೆ ನಿಕಟರಾಗಿರುವ ನಿವೃತ್ತ ನ್ಯಾಯಾಧೀಶರನ್ನು ಕರೆತಂದು ತನಿಖೆ ನಡೆಸಲು ಮುಖ್ಯಮಂತ್ರಿಗಳು ಮುಂದಾಗಬಾರದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್ ಸಿರೋಯಾ ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಆರೋಪದ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಪಾತ್ರವಿದೆ ಎನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಕುರಿತಂತೆ ಇಂದಿನ ಪತ್ರಿಕೆಗಳಲ್ಲಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ಇಡೀ ದೇಶದಲ್ಲಿ ಬಹುಶಃ ಹಿಂದಿನ ಅಥವಾ ಇಂದಿನ ಯಾವ ಮುಖ್ಯಮಂತ್ರಿಯೂ ತಮ್ಮ ನೇತೃತ್ವದ ಸರ್ಕಾರದ ವಿರುದ್ಧವೇ ಹೀಗೆ ಬ್ಲ್ಯಾಕ್‌ಮೇಲ್ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಅವರ ನೇತೃತ್ವದ ಸರ್ಕಾರದಿಂದ 62 ಕೋಟಿ ರೂ. ಮೊತ್ತದ ಭಾರಿ ಪರಿಹಾರವನ್ನು ಅವರೇ ಕೇಳಿರುವುದು ಬೇಸರದ ಸಂಗತಿ ಮಾತ್ರವಲ್ಲ, ಲಜ್ಜೆಗೆಟ್ಟ ವರ್ತನೆಯೂ ಹೌದು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | BJP Karnataka: ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ತಾವು ಸದಾ ಪಾರದರ್ಶಕವಾಗಿದ್ದು, ತಾವೊಬ್ಬ ಲೋಹಿಯಾ-ಸಮಾಜವಾದಿ ಹೇಳಿಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳದ ಮುಖ್ಯಮಂತ್ರಿಗಳ ಮನಸ್ಥಿತಿಯನ್ನು ಇದು ಬಯಲು ಮಾಡಿದೆ. ಮುಡಾ ಮಾರುಕಟ್ಟೆ ಮೌಲ್ಯದ ಪರಿಹಾರ ನೀಡಿದರೆ ಅನುಮಾನಾಸ್ಪದವಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ಮರಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದು ನಂಬಲಾಗದ ಮತ್ತು ಆಘಾತಕಾರಿ ಸಂಗತಿ. ಹಾಗೆಯೇ, ಮುಖ್ಯಮಂತ್ರಿಗಳು ಏಕೆ ಧಾವಂತದಲ್ಲಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಹೆಚ್ಚಿನ ಪರಿಹಾರವನ್ನು ಕೇಳುವ ಮೊದಲು ನಿವೇಶನಗಳ ಹಂಚಿಕೆ ಕಾನೂನುಬದ್ಧವಾಗಿ ನಡೆದಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕಲ್ಲವೇ? ಸರ್ಕಾರ ಯಾವುದೇ ಪಕ್ಷದ್ದಿರಲಿ, ಒಬ್ಬ ಶ್ರೀಸಾಮಾನ್ಯನಿಗೆ ಹೋಲಿಸಿದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ಯಾವ ರೀತಿಯ ಅನುಕೂಲ ಕಲ್ಪಿಸಲಾಗಿದೆ ಎನ್ನುವುದನ್ನು ಮೊದಲು ತನಿಖೆ ಮಾಡಬೇಕಲ್ಲವೇ? ಸಿದ್ದರಾಮಯ್ಯನವರು ಅಧಿಕಾರದಲ್ಲಿರಲಿ ಅಥವಾ ಪ್ರತಿಪಕ್ಷದಲ್ಲಿರಲಿ, ಅನೇಕ ದಶಕಗಳಿಂದ ರಾಜ್ಯದಲ್ಲಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿರುವುದಂತೂ ನಿಜ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಮ್ಮ ಆಸ್ತಿಯನ್ನು ಸಾರ್ವಜನಿಕ ಒಳಿತಿಗಾಗಿ ಬಿಟ್ಟುಕೊಡುತ್ತಾರೆ. ಆದರೆ ಇಲ್ಲಿ ಒಬ್ಬ ಮುಖ್ಯಮಂತ್ರಿಗಳು ಅತ್ಯಧಿಕ ಪರಿಹಾರ ಪಡೆದುಕೊಂಡದ್ದು ಮಾತ್ರವಲ್ಲ, ಇನ್ನೂ ಹೆಚ್ಚು ಕಬಳಿಸಲು ಆಸೆ ಪಡುತ್ತಿದ್ದಾರೆ. ನೆಹರೂ-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಸಿಎಂ ಸಿದ್ದರಾಮಯ್ಯನವರ, ಆ ಹಿರಿಯರ ʼತ್ಯಾಗʼದ ಮಾದರಿಯನ್ನೂ ಅನುಸರಿಸಬೇಕು. ಆ ಕುಟುಂಬ ಅನೇಕ ವರ್ಷಗಳ ಹಿಂದೆ ಪ್ರಯಾಗರಾಜ್‌ನಲ್ಲಿರುವ ಪೂರ್ವಜರ ಮನೆಯನ್ನು ಬಿಟ್ಟುಕೊಟ್ಟಿತ್ತು. ಆದರೆ ನಂತರ ಇಡೀ ದೇಶವನ್ನು ಆಕ್ರಮಿಸಿಕೊಂಡರು ಎನ್ನುವುದು ಬೇರೆಯೇ ಕಥೆ. ಆದರೂ ತಾಂತ್ರಿಕವಾಗಿಯಾದರೂ ಅವರು ಏನೋ ಒಂದನ್ನು ತ್ಯಾಗ ಮಾಡಿದರಲ್ಲ, ಅದರಲ್ಲಿಯೂ ಒಂದು ಪಾಠ ಕಲಿಯಲಿಕ್ಕಿದೆ ಎಂದು ತಿಳಿಸಿದ್ದಾರೆ.

ತಾವು ಯಾವುದಕ್ಕೂ ಹೆದರುವುದಿಲ್ಲ ಮತ್ತು ಹಿರಿಯ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಸಿಬಿಐ ಅಥವಾ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ಮುಡಾ ಪ್ರಕರಣವನ್ನು ತನಿಖೆಗೆ ಕೊಡಲು ಹಿಂಜರಿಯಬಾರದು. ಈ ಪ್ರಕರಣದ ತನಿಖೆಗೆ ತಮಗೆ ಆಪ್ತರಾದ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವ ಬಗ್ಗೆಯೂ ಕೂಡ ಅವರು ಯೋಚಿಸಬಾರದು. ಈ ಬೃಹತ್ ಹಗರಣ ಸ್ವತಂತ್ರವಾಗಿ ತನಿಖೆಯಾಗಬೇಕಿದೆ. ಅವರು ಮುಖ್ಯಮಂತ್ರಿಯಾಗಿರುವುದರಿಂದ, ತಾವೇ ಫಿರ್ಯಾದಿ ಮತ್ತು ತಾವೇ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕೆಂದು ನಮ್ಮ ಪಕ್ಷದ ಕೆಲವು ಹಿರಿಯ ನಾಯಕರು ಸಲಹೆ ನೀಡಿದ್ದಾರೆ. ಬಹುಶಃ ಅವರು ಅದನ್ನು ಪರಿಗಣಿಸಿದರೆ ಒಳ್ಳೆಯದೇನೋ ಎಂದು ಹೇಳಿದ್ದಾರೆ.

ಇದನ್ನೂ ಓದಿ | CM Siddaramaiah: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕರುಗಳನ್ನು ತೆಗಳಲು, ನಿಂದಿಸಲು ಸದಾ ಮುಗಿಬೀಳುವ ಸಿದ್ದರಾಮಯ್ಯನವರ ಬೆಂಬಲಿಗ ಪಡೆಯ ಉದಾರವಾದಿಗಳು ಮತ್ತು ನಗರ ನಕ್ಸಲರು, ಈ ವಿಷಯದಲ್ಲಿ ಹೇಗೆ ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಾರೆ ಎನ್ನುವ ಕುತೂಹಲ ನನಗೂ ಇದೆ. ಅವರು ಪ್ರತಿಭಟಿಸಲು ಬಯಸುವುದಾದರೆ ಅಗತ್ಯ ವ್ಯವಸ್ಥೆಗಳನ್ನು ನಾವೇ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

Continue Reading

ಯಾದಗಿರಿ

Yadgiri News: ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಉಪಯುಕ್ತ : ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Yadgiri News: ಯಾದಗಿರಿ ನಗರದ ಶಾಸಕರ ಕಚೇರಿ ಆವರಣದಲ್ಲಿ ತಾಲೂಕಾ ಆಡಳಿತ, ಶಿಶು ಅಭಿವೃದ್ಧಿ ಯೋಜನೆಯ, ಪೋಷಣ್ ಅಭಿಯಾನ ಯೋಜನೆಯಡಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಮಾಡಿದರು.

VISTARANEWS.COM


on

Anganwadi workers should make good use of mobile phones says MLA Channareddy Patil Thunnur
Koo

ಯಾದಗಿರಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್‌ ಅಭಿಯಾನದಡಿ ಸ್ಮಾರ್ಟ್ ಫೋನ್‌ಗಳನ್ನು ವಿತರಣೆ ಮಾಡುತ್ತಿದ್ದು, ಕಾರ್ಯಕರ್ತೆಯರು ಮೊಬೈಲ್ ಸದುಪಯೋಗ ಪಡಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಒದಗಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Yadgiri News) ತಿಳಿಸಿದರು.

ನಗರದ ಶಾಸಕರ ಕಚೇರಿ ಆವರಣದಲ್ಲಿ ತಾಲೂಕಾ ಆಡಳಿತ, ಶಿಶು ಅಭಿವೃದ್ಧಿ ಯೋಜನೆಯ, ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಕಾರ್ಯಕ್ರಮದಲ್ಲಿ ಮೊಬೈಲ್ ವಿತರಣೆ ಮಾಡಿ ಅವರು ಮಾತನಾಡಿದರು.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ಡಿಜಿಟಲ್ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಬೆರಳು ತುದಿಯಡಿ ಎಲ್ಲಾ ಮಾಹಿತಿ ಪಡೆಯಲು ಮೊಬೈಲ್‌ಗಳ ಸಹಾಯವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳಿಗೆ, ಬಾಣಂತಿ ಹಾಗೂ ಗರ್ಭಿಣಿಯರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕರ್ತರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೊಬೈಲ್‌ನಿಂದ ಮಕ್ಕಳ ಹಾಜರಾತಿ, ಆಹಾರ ವಿತರಣೆ, ಮಕ್ಕಳ ಬೆಳವಣಿಗೆ ಮಾಹಿತಿ, ಫಲಾನುಭವಿಗಳ ಮನೆ ಭೇಟಿ ವಿವರ, ಅಂಗನವಾಡಿ ಕೇಂದ್ರದ ದೈನಂದಿನ ಚಟುವಟಿಕೆ, ಲಸಿಕೆ ಹಾಗೂ ಇತರೆ ಕಾರ್ಯಕ್ರಮ ಬಗ್ಗೆ ಶೀಘ್ರವಾಗಿ ಮಾಹಿತಿ ಪಡೆಯಬಹುದಾಗಿದೆ ಎಂದರು.

ಇದನ್ನೂ ಓದಿ: Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ವನಜಾಕ್ಷಿ, ಮಲ್ಲಿಕಾರ್ಜುನ ಈಟೆ, ಉಷಾ ಬಳಗಾನೋರ್, ಮಲ್ಲಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

Continue Reading
Advertisement
Kerala govt
ದೇಶ23 mins ago

Kerala Govt: ಕೇರಳ ಸರ್ಕಾರಿ ನೌಕರರ ಪೈಕಿ ಮೂರರಲ್ಲಿ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್

Teach for India
ಬೆಂಗಳೂರು27 mins ago

Teach For India : ಟೀಚ್ ಫಾರ್ ಇಂಡಿಯಾದಿಂದ 2025ರ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳ ಆಹ್ವಾನ

Bridge Collapse
ದೇಶ29 mins ago

Bridge Collapse: 17 ದಿನದಲ್ಲಿ 10 ಸೇತುವೆ ಕುಸಿತ; ಬಿಹಾರದಲ್ಲಿ 15 ಎಂಜಿನಿಯರ್‌ಗಳ ಅಮಾನತು!

Shivamogga News Give top priority to cleanliness says Raju Hiriyawali
ಶಿವಮೊಗ್ಗ34 mins ago

Shivamogga News: ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ರಾಜು ಹಿರಿಯಾವಲಿ

Stampede Tips and Tricks
ದೇಶ37 mins ago

Stampede Tips and Tricks: ಕಾಲ್ತುಳಿತ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಈ ವಿಡಿಯೋ ನೋಡಿ

ಕರ್ನಾಟಕ38 mins ago

MUDA site scandal: ಸಿಎಂ ಸಿದ್ದರಾಮಯ್ಯ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಿ: ಲೆಹರ್‌ ಸಿಂಗ್‌ ಆಗ್ರಹ

Deadly Attack
ದೇಶ58 mins ago

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Viral Video
Latest1 hour ago

Viral Video: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

Anganwadi workers should make good use of mobile phones says MLA Channareddy Patil Thunnur
ಯಾದಗಿರಿ1 hour ago

Yadgiri News: ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಉಪಯುಕ್ತ : ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

congratulation ceremony for Dr. Jinadatta Hadagali on 7th July in Dharwad
ಧಾರವಾಡ1 hour ago

Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ4 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ5 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ7 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ8 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು9 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು10 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ14 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌