Crime news: ಸಹೋದ್ಯೋಗಿ ಪತ್ನಿಗೆ ವಿಡಿಯೋ ಕಾಲ್‌ ಮಾಡಬೇಕೆಂದ, ನಿರಾಕರಿಸಿದಾಗ ಎದೆಗೆ ಕತ್ತರಿಯಿಂದ ಇರಿದ! - Vistara News

ಕ್ರೈಂ

Crime news: ಸಹೋದ್ಯೋಗಿ ಪತ್ನಿಗೆ ವಿಡಿಯೋ ಕಾಲ್‌ ಮಾಡಬೇಕೆಂದ, ನಿರಾಕರಿಸಿದಾಗ ಎದೆಗೆ ಕತ್ತರಿಯಿಂದ ಇರಿದ!

ಸಹೋದ್ಯೋಗಿ ತನ್ನ ಪತ್ನಿಯ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ವಿಡಿಯೋ ಕಾಲ್‌ ಮಾಡುವಂತೆ ಬೇಡಿಕೆಯಿಟ್ಟ, ಆತ ನಿರಾಕರಿಸಿದಾಗ ಅವನ ಎದೆಗೇ ಕತ್ತರಿಯಿಂದ ಇರಿದ ಘಟನೆ ನಡೆದಿದೆ.

VISTARANEWS.COM


on

suresh crime
ಆರೋಪಿ ಸುರೇಶ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಹೋದ್ಯೋಗಿ ತನ್ನ ಪತ್ನಿಯ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ವಿಡಿಯೋ ಕಾಲ್‌ ಮಾಡುವಂತೆ ಬೇಡಿಕೆಯಿಟ್ಟ, ಆತ ನಿರಾಕರಿಸಿದಾಗ ಅವನ ಎದೆಗೇ ಕತ್ತರಿಯಿಂದ ಇರಿದ ಘಟನೆ ನಡೆದಿದೆ.

ಹೆಚ್ಎಸ್ಆರ್ ಲೇಔಟ್‌ನ ಲೆನಿನ್ ಶೋ ರೂಂನಲ್ಲಿ ಈ ಘಟನೆ ನಡೆದಿದೆ. ರಾಜೇಶ್ ಮಿಶ್ರಾ ಎಂಬವರಿಗೆ ಸುರೇಶ್‌ ಎಂಬಾತ ಕತ್ತರಿಯಿಂದ ಇರಿದಿದ್ದಾನೆ. ರಾಜೇಶ್ ಹಾಗೂ ಸುರೇಶ್ ಇಬ್ಬರೂ ಲೆನಿನ್ ಶೋರೂಂನಲ್ಲಿ ಕೆಲಸಗಾರರು. ರಾಜೇಶ್ ಮಿಶ್ರಾ ತನ್ನ ಪತ್ನಿಯ ಜೊತೆ ಫೋನ್‌ನಲ್ಲಿ ಮಾತಾನಾಡುತ್ತಿದ್ದ. ಆ ವೇಳೆ ನೀನು ವಿಡಿಯೋ ಕಾಲ್ ಮಾಡು, ನಾನು ಮಾತನಾಡುತ್ತೇನೆ ಎಂದು ಸುರೇಶ್ ಡಿಮ್ಯಾಂಡ್ ಮಾಡಿದ್ದ.

ಇದರಿಂ ಕೋಪಕ್ಕೊಳಗಾದ ರಾಜೇಶ್ ಮಿಶ್ರ, ನನ್ನ ಪತ್ನಿ ಜೊತೆ ಮಾತಾಡೋದಕ್ಕೆ ನೀನ್ಯಾರೆಂದು ಪ್ರಶ್ನಿಸಿದ್ದಾನೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಅಂಗಡಿಯಲ್ಲಿದ್ದ ಕತ್ತರಿ ತೆಗೆದು ರಾಜೇಶ್ ಮಿಶ್ರಾ ಎದೆಗೆ ಸುರೇಶ್‌ ಇರಿದಿದ್ದಾನೆ. ರಾಜೇಶ್ ಮಿಶ್ರಾ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೆಚ್‌ಎಸ್‌ಆರ್‌ ಲೇಔಟ್ ಠಾಣೆ ಪೊಲೀಸರು ಸುರೇಶ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Crime news: ನಗರದಲ್ಲಿ ಮತ್ತೆ ಪುಂಡರ ಹಾವಳಿ, ಬೀದಿಯಲ್ಲಿ ಥಳಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ನಲ್ಲಿ ವಿದ್ಯಾರ್ಥಿಗಳ ಸಾವಿನ ಪ್ರಕರಣ; 7 ಮಂದಿಯ ಬಂಧನ

Rajendra Nagar Tragedy: ಶನಿವಾರ ಭೀಕರ ಮಳೆಗೆ ದೆಹಲಿಯ ರಾಜೇಂದ್ರ ನಗರದಲ್ಲಿರುವ ರಾವ್ಸ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಸಿದಂತೆ ಇದುವರೆಗೆ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ. ರಾವ್ಸ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ ಕಟ್ಟಡದ ಮಾಲೀಕ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಟ್ಟಡದ ಗೇಟ್‌ ಧ್ವಂಸ ಮಾಡಲು ಯತ್ನಿಸಿದವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Rajendra Nagar Tragedy
Koo

ನವದೆಹಲಿ: ಭೀಕರ ಮಳೆಗೆ ದೆಹಲಿ (Delhi Floods) ತತ್ತರಿಸಿದ್ದು, ಶನಿವಾರ ರಾಜೇಂದ್ರ ನಗರದಲ್ಲಿರುವ ರಾವ್ಸ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ (Rau’s IAS Coaching Institute)ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಸಿದಂತೆ ಇದುವರೆಗೆ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Rajendra Nagar Tragedy).

ರಾವ್ಸ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ ಕಟ್ಟಡದ ಮಾಲೀಕ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಟ್ಟಡದ ಗೇಟ್‌ ಧ್ವಂಸ ಮಾಡಲು ಯತ್ನಿಸಿದವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಭಾನುವಾರ ಐಎಎಸ್ ಕೋಚಿಂಗ್ ಸೆಂಟರ್‌ನ ಮಾಲೀಕ ಮತ್ತು ಸಂಯೋಜಕರನ್ನು ಬಂಧಿಸಿದ್ದರು. ಉಳಿದವರನ್ನು ಇಂದು ವಶಕ್ಕೆ ಪಡೆಯಲಾಗಿದೆ. ʼʼಈ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಸುಮ್ಮನೆ ಬಿಡುವುದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಮತ್ತು ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ” ಎಂದು ಡಿಸಿಪಿ ಎಂ. ಹರ್ಷವರ್ಧನ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

“ನೆಲಮಾಳಿಗೆಯಲ್ಲಿರುವ ಗ್ರಂಥಾಲಯವು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬಯೋಮೆಟ್ರಿಕ್ ಸಕ್ರಿಯಗೊಳಿಸಿದ್ದ ಕಾರಣ ವಿದ್ಯಾರ್ಥಿಗಳಿಗೆ ತಕ್ಷಣ ಹೊರ ಬರಲು ಸಾಧ್ಯವಾಗಲಿಲ್ಲ. ಅಲ್ಲದೆ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ದ್ವಾರ ಇರುವುದು ಕೂಡ ದುರಂತಕ್ಕೆ ಕಾರಣವಾಗಿದೆ. ಹೀಗಾಗಿ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಸ್ಥೆಯ ಮಾಲೀಕರು ವಿಫಲರಾಗಿದ್ದಾರೆ” ಎಂದು ಮುನ್ಸಿಪಾಲ್‌ ಕಾರ್ಪೋರೇಷನ್‌ ಆಫ್‌ ದಿಲ್ಲಿ (MCD)ಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈಗಾಗಲೇ 13 ಅಕ್ರಮ ತರಬೇತಿ ಕೇಂದ್ರಗಳಿಗೆ ಬೀಗ ಹಾಕಲಾಗಿದೆ.

ಘಟನೆ ವಿವರ

ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರ ನಗರದಲ್ಲಿ ಭಾರಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಇಲ್ಲಿನ ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ನೀರು ನುಗ್ಗಿ ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಮೃತಪಟ್ಟಿದ್ದರು.

ಇದನ್ನೂ ಓದಿ: Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

ಬೇಸ್‌ಮೆಂಟ್‌ನಲ್ಲಿ ಸಂಸ್ಥೆಯ ಲೈಬ್ರರಿ ಇದ್ದು, ಇಲ್ಲಿ ಸುಮಾರು 150-180 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿದೆ. ಲೈಬ್ರರಿಯಲ್ಲಿ ಕುಳಿತು ಓದುತ್ತಿರುವಾಗ ಚರಂಡಿ ಮೋರಿಯ ತಡೆಗೋಡೆ ಒಡೆದು ಮಳೆ ನೀರು ನುಗ್ಗಿದ ಹಿನ್ನಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಮುನ್ಸಿಪಾಲ್‌ ಕಾರ್ಪೋರೇಷನ್‌ ಆಫ್‌ ದಿಲ್ಲಿಯನ್ನು ನಿಯಂತ್ರಿಸುವ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ಮೇಲೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. “ಇದು ಸರ್ಕಾರ ಮತ್ತು ಪುರಸಭೆಯ ವೈಫಲ್ಯ. ಇದು ಈ ದೇಶದ ಅತ್ಯಂತ ಸಂವೇದನಾರಹಿತ ಸರ್ಕಾರ. ಇದು ವಿದ್ಯಾರ್ಥಿಗಳ ಸಾವಲ್ಲ, ಕೊಲೆ” ಎಂದು ಆರೋಪಿಸಿದೆ. ಜತೆಗೆ ವಿದ್ಯಾರ್ಥಿಗಳು ಆಹೋರಾತ್ರಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Continue Reading

ಬಾಗಲಕೋಟೆ

Drowned In River : ಆಟವಾಡುವಾಗ ಕೃಷ್ಣಾ ನದಿ ಹಿನ್ನೀರಿಗೆ ಬಿದ್ದ ಬಾಲಕಿ ಸಾವು; ಅಂಗಾಂಗ ದಾನ ಮಾಡಿ 6 ಜೀವ ಉಳಿಸಿದ ಬಾಲೆ

Drowned In River : ಆಟವಾಡುತ್ತಾ ಕೃಷ್ಣಾ ನದಿ ಹಿನ್ನೀರಿ ಬಳಿ ಹೋದ ಬಾಲಕಿ ನೀರುಪಾಲಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Drowned in river
Koo

ಬಾಗಲಕೋಟೆ: ಆಟವಾಡಲು ಹೋದ ಬಾಲಕಿಯೊಬ್ಬಳು ಕೃಷ್ಣಾ ನದಿ (Drowned In River) ಪಾಲಾಗಿದ್ದಾಳೆ. ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿ ಬಾಲಕಿ ಮೃತಪಟ್ಟಿದ್ದಾಳೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಘಟನೆ ನಡೆದಿದೆ.

ಸಮೃದ್ಧಿ ಉರ್ಫ್ ಬಂದವ್ವ ತಿಮ್ಮಪ್ಪನವರ (5) ಮೃತ ದುರ್ದೈವಿ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಿನ್ನೆ ಭಾನುವಾರ ಸಂಜೆ ಘಟನೆ ನಡೆದಿದೆ.

ತಹಶೀಲ್ದಾರ ಸದಾಶಿವ ಮುಕ್ಕೋಜಿ, ಜಮಖಂಡಿ ಗ್ರಾಮೀಣ ಠಾಣೆಯ ಪಿಎಸ್‌ಐ ಎಚ್.ಎಮ್ ಹೊಸಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿ ಕೃಷ್ಣಾ ನದಿ ಹಿನ್ನೀರಿನ ಕಡೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾ ನದಿಯ ಹಿನ್ನೀರಿನಲ್ಲಿ ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

Drowned in river
Drowned in river

ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿ ಹಿನ್ನೀರಿನಿಂದ ಬಾಲಕಿ ಶವ ಹೊರತೆಗೆದಿದ್ದಾರೆ.

ಇದನ್ನೂ ಓದಿ: Road Accident : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬೈಕ್‌; ಚೆಲ್ಲಾಪಿಲ್ಲಿಯಾಗಿ ಬಿದ್ದ ಇಬ್ಬರು ಸಾವು

ಮಗಳ ಸಾವಿನ ನೋವಿನಲ್ಲೂ ಸಾರ್ಥಕತೆ ಮರೆದ ಪೋಷಕರು

ಮಗಳ ಸಾವಿನ ನೋವಿನಲ್ಲೂ ಪೋಷಕರು ಸಾರ್ಥಕತೆ ಮರೆದಿದ್ದಾರೆ. ಜು.23 ರಂದು ಸ್ಕೂಲ್ ಮುಗಿಸಿ ವಾಪಸ್ ಬರುವಾಗ ತುಮಕೂರಿನ ತಿಪಟೂರಿನಲ್ಲಿ ಅಪಘಾತ ಸಂಭವಿಸಿತ್ತು. ಚಂದನಾ ತುಮಕೂರು ಜಿಲ್ಲೆಯ ತಿಪಟೂರಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಳು. ತಿಪಟೂರು ನಗರದ ಹಳೇಪಾಳ್ಯದ ನಿವಾಸಿ ಚಂದನಾ (12) ರಸ್ತೆ ದಾಟುವಾಗ ಲಾರಿಯೊಂದು ಡಿಕ್ಕಿ ಹೊಡೆದಿತ್ತು.

ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಳು. ಆದರೆ ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಮಗಳ ಅಗಲಿಕೆಯ ನೋವಿನಲ್ಲೂ ಚಂದನಾ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಪೋಷಕರ ನಿರ್ಧಾರಕ್ಕೆ ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದ್ದು, ಚಂದನಾಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಿದ್ದಾರೆ. ಸೋಮವಾರ ಸಂಜೆ ಚಂದನಾಳ ಅಂತ್ಯಸಂಸ್ಕಾರವನ್ನು ತಿಪಟೂರಿನ ಹಳೆಪಾಳ್ಯದಲ್ಲಿ ನೆರವೇರಿಸಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬೆನ್ನಲ್ಲೇ ಸಂಧಾನಕ್ಕೆ ಹೋಗಿದ್ದಲ್ಲ ಎಂದ ವಿನೋದ್‌ ರಾಜ್‌ !

Actor Darshan: ಜುಲೈ 26ರಂದು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ರಾಜಿ ಸಂಧಾನಕ್ಕಾಗಿ ಹೋಗಿದ್ದರು ಎಂಬಂತೆ ಬಿಂಬಿತವಾಗಿದೆ ಎಂದು ಇದೀಗ ವಿನೋದ್‌ ರಾಜ್‌ ಬೇಸರ ಹೊರ ಹಾಕಿದ್ದಾರೆ.

VISTARANEWS.COM


on

Actor Darshan case Vinod Raj said that he did not go to negotiations Renukaswamy family
Koo

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‌ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ವಿನೋದ್‌ ರಾಜ್‌ ಆಗಮಿಸಿದ್ದರು. ದರ್ಶನ್‌ ಅವರನ್ನ ಕಂಡು ವಿನೋದ್ ರಾಜ್‌ ಭಾವುಕರಾಗಿದ್ದರು. ದರ್ಶನ್‌ ಅವರನ್ನ ಮೀಟ್ ಮಾಡಿದ್ಮೇಲೆ ಕಣ್ಣೀರು ಹಾಕುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಜುಲೈ 26ರಂದು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ರಾಜಿ ಸಂಧಾನಕ್ಕಾಗಿ ಹೋಗಿದ್ದರು ಎಂಬಂತೆ ಬಿಂಬಿತವಾಗಿದೆ ಎಂದು ಇದೀಗ ವಿನೋದ್‌ ರಾಜ್‌ ಬೇಸರ ಹೊರ ಹಾಕಿದ್ದಾರೆ.

ಈ ಬಗ್ಗೆ ವಿನೋದ್‌ ರಾಜ್‌ ವಿಡಿಯೊ ಮೂಲಕ ಮಾತನಾಡಿ ʻʻದರ್ಶನ್ ಅವರನ್ನ ಒಬ್ಬ ಕಲಾವಿದ ಎನ್ನುವ ಕಾರಣಕ್ಕೆ ಭೇಟಿ ಮಾಡಿ ಬಂದೆ. ಮೊನ್ನೆ ನಾನು ದರ್ಶನ್‌ ಅವರನ್ನು ನೋಡೋಕೆ ಹೋಗಿದ್ದೆ. ಬಳಿಕ ರೇಣುಕಾ ಸ್ವಾಮಿ ಮನೆಗೆ ಹೋಗಿ ಬಂದೆ. ವಾಹಿನಿಗಳ ಮೂಲಕ ನನಗೆ ಅರ್ಥವಾಗಿದ್ದು ಏನೆಂದರೆ ರಾಜಿ ಸಂಧಾನಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಅಲ್ಲಿ ಹೋಗಿದ್ದೆ ಎಂದು ಸುದ್ದಿಗಳು ವೈರಲ್‌ ಆಯ್ತು. ಖಂಡತ ಅದು ಅಲ್ವೇ ಅಲ್ಲ. ಕಲಾವಿದರು ಎನ್ನುವ ದೃಷ್ಟಿಯಿಂದ ನಾನು ಹೋಗಿದ್ದೆ. ರೇಣುಕಾ ಸ್ವಾಮಿ ಅವರ ಶ್ರೀಮಿತಿ ಅವರು ಗರ್ಭಿಣಿ. ಹುಟ್ಟುವ ಮಗುಗೆ ಒಳ್ಳಯದ್ದೇನಾದರೂ ಮಾಡಲಿಕ್ಕೆ ಆಗುತ್ತಾ ಎನ್ನುವ ದೃಷ್ಟಿಯಿಂದ ನಾನು ಸಹಾಯ ಮಾಡಿ ಬಂದೆ. ನಮ್ಮಿಂದ ಆದ ಸಣ್ಣ ಕಾಣಿಕೆ ಅದು. ಯಾವುದೇ ರಾಜಿ ಸಂಧಾನ ಅಲ್ಲ. ಆ ತರ ಕೆಲಸ ಕೂಡ ನಾವು ಮಾಡಲ್ಲʼʼಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್ ಮಾತನಾಡಿ, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರುತ್ತಿದೆ. ಜೀವನದಲ್ಲಿ ಮನುಷ್ಯ ಹೇಗೆ ಬಾಳಬೇಕು, ಹೇಗೆ ನಡೆದುಕೊಳ್ಳಬೇಕು, ಯಾವ ದಿಕ್ಕಿನಲ್ಲಿ ಮಾನವೀಯತೆ, ಮನುಷತ್ವ ಸಾಗುತ್ತಿದೆ, ಮನುಷ್ಯತ್ವ ಇದೆಯಾ ಎನ್ನುವುದು ನಮ್ಮನ್ನೇ ಮುಟ್ಟಿಕೊಂಡು ನೋಡುವಂತಹ ಕಾಲ ಬಂದಿದೆ. ಜೀವನ ಇಡೀ ಸಂಪದಾನೆ, ಹೆಸರು ಮಾಡುವುದು ಅಲ್ಲವೇ ಅಲ್ಲ. ಜೀವನ ಇಡಿ ಜೀವಗಳ ಬಗ್ಗೆ ಕಾಳಜಿ ತೆಗೆದುಕೊಂಡು ಬದುಕಬೇಕು. ಪ್ರತಿಯೊಬ್ಬರ ಜೀವನದಲ್ಲೂ ಜೀವಗಳಿವೆ. ಜೀವರಾಶಿಗಳನ್ನ ಭಗವಂತ ತಂದೆ ತಾಯಿ ರೂಪದಲ್ಲಿ ಸೃಷ್ಟಿ ಮಾಡಿರುತ್ತಾನೆ. ಅವರೂ ಕೂಡ ಚೆನ್ನಾಗಿ ಇರಬೇಕು ಎಂದು ಬೆಳೆಸುತ್ತಾರೆ. ಎಲ್ಲೋ ಒಂದು ಅತಾಚುರ್ಯ, ಕೆಟ್ಟದ್ದು ನಡೆಯುತ್ತೆ. ಕೆಟ್ಟದ್ದು ಜಾಸ್ತಿ ಆದಾಗ ಇಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಹೆಚ್ಚಾಗಬಾರದು. ಸಮಾಜದಲ್ಲಿ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ‌ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್​ಕುಮಾರ್ ಹೇಳಿದ್ದರು.

ರೇಣುಕಾ ಸ್ವಾಮಿ ಕುಟುಂಬದವರನ್ನು ಸಂತೈಸಿದ ವಿನೋದ್ ರಾಜ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು.

ಈ ಹಿಂದೆ ದರ್ಶನ್‌ ಅವರನ್ನು ಭೇಟಿಯಾದ ವಿನೋದ್‌ ರಾಜ್‌ ಮಾತನಾಡಿ ʻʻನಾವು 5 ಜನ ಹೋಗಿದ್ವಿ. ಹೆಚ್ಚೇನೂ ಮಾತಾಡೋಕೆ ಆಗಲಿಲ್ಲ. ಕಷ್ಟ – ಸುಖ ಮಾತನಾಡಿದ್ವಿ ಅಷ್ಟೇ. ವಿಜಯಲಕ್ಷ್ಮೀ ಅವರಿಗೂ ಏನೂ ಗೊತ್ತಾಗುತ್ತಿಲ್ಲ. ವಕೀಲರು ಮಾತನಾಡಿದರು ಅಷ್ಟೇ. ಜೈಲಿನ ನಿಯಮಗಳು ಕಟ್ಟುನಿಟ್ಟಾಗಿವೆ. ಇಷ್ಟು ಕಹಿಯಾಗಿ, ಅವರನ್ನ ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ ಅನಿಸ್ತಾಯಿದೆ. ನನ್ನ ಕಣ್ಣುಗಳನ್ನೇ ನಾನು ನಂಬೋಕೆ ಆಗಲಿಲ್ಲ. ಆದರೂ ನಂಬಬೇಕಾದ ಅನಿವಾರ್ಯತೆ ಆಗೋಯ್ತು. ಕಣ್ಣೀರು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಸಂಸಾರ ಹಾಗೂ ಅಭಿಮಾನಿಗಳ ಜೊತೆಗೆ ಸೇರಿಕೊಳ್ಳಲಿ. ತಲೆಯೆತ್ತಿ ನಡೆಯುವಂತಹ ದರ್ಶನ್ ಆಗಲಿ. ಎಲ್ಲರಿಗೂ ದರ್ಶನ ಕೊಡಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ’’ ಎಂದಿದ್ದರು.

Continue Reading

ಕಲಬುರಗಿ

Road Accident : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬೈಕ್‌; ಚೆಲ್ಲಾಪಿಲ್ಲಿಯಾಗಿ ಬಿದ್ದ ಇಬ್ಬರು ಸಾವು

Road Accident : ಕಲಬುರಗಿಯಲ್ಲಿ ಬಸ್‌ಗೆ ಬೈಕ್‌ವೊಂದು ಡಿಕ್ಕಿ ಹೊಡೆದು ಬಳಿಕ ಹೊತ್ತಿ ಉರಿದಿದೆ. ಅಪಘಾತದಲ್ಲಿ ಬೈಕ್‌ ಸವಾರ ಸೇರಿ ಇನ್ನೊಬ್ಬ ವ್ಯಕ್ತಿಯು ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

VISTARANEWS.COM


on

By

Road Accident
Koo

ಕಲಬುರಗಿ: ಕಲಬುರಗಿಯಲ್ಲಿ (kalaburagi News) ಭೀಕರ ರಸ್ತೆ ಅಪಘಾತಕ್ಕೆ (Road Accident) ಇಬ್ಬರು ಬಲಿಯಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಕಲಬುರಗಿಯ ನಂದಿ‌ಕೂರ್ ಬಸ್ ನಿಲ್ದಾಣ ಹತ್ತಿರದ ಪೇಟ್ರೊಲ್ ಪಂಪ್ ಬಳಿ ಅಪಘಾತ ಸಂಭವಿಸಿದೆ. ತನೋಜ್(18) ,ಅಭಿಷೇಕ್(19)ಮೃತ ದುರ್ದೈವಿಗಳು.

ಬಸ್‌ಗೆ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸವಾರ ಹಾರಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಸೇರಿ ಇಬ್ಬರು ಮೃತಪಟ್ಟರೆ, ಓರ್ವ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೈಕ್ ಡಿಕ್ಕಿ‌ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟುಕರಕಲಾಗಿದೆ. ಬಸ್‌ ಜೇವರ್ಗಿಯಿಂದ ಕಲಬುರಗಿ ಹೊರಟಿದ್ದರೆ, ಬೈಕ್‌ ಕಲಬುರಗಿಯಿಂದ ಜೇವರ್ಗಿಗೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಜೇವರ್ಗಿ ತಾಲೂಕಿನ ಶಾಖಾಪುರ ಗ್ರಾಮದ ನಿವಾಸಿಗಳಾದ ತನೋಜ್(18) ,ಅಭಿಷೇಕ್(19) ಕಾಶಿಯಿಂದ ಬಂದಿದ್ದ ಸ್ನೇಹಿತನನ್ನು ಕರೆಯಲು ಕಲಬುರಗಿಗೆ ಬಂದಿದ್ದರು. ಯಶ್ ಪಾಲ್ ರೆಡ್ಡಿ ಎಂಬಾತನನ್ನು
ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಸಂಚಾರಿ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಕಸದ ಲಾರಿ (BBMP Lorry) ಮತ್ತೆರಡು ಬಲಿ (Road Accident) ಪಡೆದುಕೊಂಡಿದೆ. ನಗರದ ಹೃದಯ ಭಾಗದ ಕೆಆರ್ ಸರ್ಕಲ್ (KR Circle) ಬಳಿ ಈ ದುರ್ಘಟನೆ ನಡೆದಿದೆ. ಮೃತರಿಬ್ಬರೂ ಟೆಕ್ಕಿಗಳಾಗಿದ್ದು, ಟಿಸಿಎಸ್‌ನಲ್ಲಿ (TCS) ಕೆಲಸ ಮಾಡುತ್ತಿದ್ದರು.

ರಾತ್ರಿ 8.45ರ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ. ಪ್ರಶಾಂತ್ (25), ಬಯನ್ನಗಾರಿ ಶಿಲ್ಪ (27) ಮೃತ ದುರ್ದೈವಿಗಳು. ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿಯ ಯುವಕ. ಶಿಲ್ಪ ಆಂಧ್ರ ಮೂಲದವಳು. ಪ್ರಶಾಂತ್ ಮತ್ತು ಯುವತಿ ಇಬ್ಬರು ಸಹೋದ್ಯೋಗಿಗಳಾಗಿದ್ದು, ಐಟಿಪಿಎಲ್ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ ಮಾಡುತ್ತಿದ್ದ ಯುವತಿ ಶಿಲ್ಪ, ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತವಾಗಿದೆ.

ಮೆಜೆಸ್ಟಿಕ್‌ದ ಕೆಆರ್ ಸರ್ಕಲ್ ಮಾರ್ಗವಾಗಿ ಇವರಿಬ್ಬರೂ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆಆರ್ ಸರ್ಕಲ್ ಕಡೆ ಕಸದ ಲಾರಿ ತೀವ್ರ ವೇಗದಿಂದ ಬಂದಿದೆ. ತಿರುವು ಇದ್ದ ಮಾರ್ಗದಲ್ಲಿ ಲಾರಿ ವೇಗವಾಗಿ ಬಂದ ಕಾರಣ ಕಸದ ಲಾರಿಯ ವೇಗದಿಂದ ತಪ್ಪಿಸಿಕೊಳ್ಳಲಾಗದೇ ಬೈಕ್‌ ಲಾರಿ ಕೆಳಗೆ ಸಿಲುಕಿಕೊಂಡಿದೆ.

ಮೃತರ ಮೇಲೆ ಹರಿದ ಕಸದ ಲಾರಿ ಸುಮಾರು 10 ಮೀಟರ್‌ನಷ್ಟು ದೂರ ದೇಹಗಳನ್ನು ಎಳೆದೊಯ್ದಿದೆ. ರಸ್ತೆ ಮೇಲೆ ರಕ್ತ ಚೆಲ್ಲಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಘಾತದ ಬಳಿಕ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗದಲ್ಲಿಯೇ ಇಬ್ಬರೂ ಮೃತ ಪಟ್ಟರು. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ.

ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು ಹಾಕಿದ್ದು, ಆಸ್ಪತ್ರೆಯಲ್ಲಿ ಪ್ರಶಾಂತ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. “ಬಿಬಿಎಂಪಿ ವಾಹನ ಅಪಘಾತ ಆಗಿದೆ. ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ. ಮೊದಲು ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಕೂಡ ಮಾಡಿಲ್ಲ. ನಮಗೆ ನ್ಯಾಯ ಬೇಕಾಗಿದೆ. ಅಪಘಾತ ಮಾಡಿದ ಚಾಲಕನ ಬಂಧನ ಆಗಬೇಕು. ನ್ಯಾಯ ಸಿಗದಿದ್ದರೆ ನಾನು ನನ್ನ ಪತ್ನಿ ಮತ್ತು ಮಗಳು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ತೇವೆ. ನನ್ನ ಮಗ ಮಾರ್ಥಾಸ್ ಆಸ್ಪತ್ರೆಯಲ್ಲಿಯೇ ಜನಿಸಿದ್ದ. ಇದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ” ಎಂದು ಮೃತ ಪ್ರಶಾಂತ್ ತಂದೆ ಲೋಕೇಶ್ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
OBC Reservation
ದೇಶ12 seconds ago

OBC Reservation: ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ತಡೆ; ನಿತೀಶ್‌ ಕುಮಾರ್‌ಗೆ ಮುಖಭಂಗ!

Rajendra Nagar Tragedy
ದೇಶ2 mins ago

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ನಲ್ಲಿ ವಿದ್ಯಾರ್ಥಿಗಳ ಸಾವಿನ ಪ್ರಕರಣ; 7 ಮಂದಿಯ ಬಂಧನ

cm siddaramaiah mallikarjun kharge dk shivakumar
ಪ್ರಮುಖ ಸುದ್ದಿ14 mins ago

CM Siddaramaiah: ನಾಳೆ ದಿಲ್ಲಿಗೆ ಸಿಎಂ- ಡಿಸಿಎಂ ದೌಡು; ಸಚಿವ ಸಂಪುಟದಲ್ಲಿ ಬದಲಾವಣೆ ಫಿಕ್ಸ್?

Carrie Fisher Iconic Golden Bikini Rs 1.46 Crore
ಸಿನಿಮಾ18 mins ago

Carrie Fisher: ಹಾಲಿವುಡ್‌ ಖ್ಯಾತ ನಟಿ ಧರಿಸಿದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜು!

Drowned in river
ಬಾಗಲಕೋಟೆ20 mins ago

Drowned In River : ಆಟವಾಡುವಾಗ ಕೃಷ್ಣಾ ನದಿ ಹಿನ್ನೀರಿಗೆ ಬಿದ್ದ ಬಾಲಕಿ ಸಾವು; ಅಂಗಾಂಗ ದಾನ ಮಾಡಿ 6 ಜೀವ ಉಳಿಸಿದ ಬಾಲೆ

Gold Rate Today
ಚಿನ್ನದ ದರ46 mins ago

Gold Rate Today: ಮತ್ತೆ ಏರಿಕೆಯಾದ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

Arvind Kejriwal
ದೇಶ54 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

Dhruva Sarja``KD'' Sanjay Dutt First Look Out of
ಸ್ಯಾಂಡಲ್ ವುಡ್55 mins ago

Dhruva Sarja: ʻಕೆಡಿʼ ಚಿತ್ರದಿಂದ ಹೊರ ಬಿತ್ತು ಸಂಜಯ್ ದತ್ ಫಸ್ಟ್ ಲುಕ್; ಫ್ಯಾನ್ಸ್‌ ಫಿದಾ!

Actor Darshan case Vinod Raj said that he did not go to negotiations Renukaswamy family
ಕ್ರೈಂ1 hour ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬೆನ್ನಲ್ಲೇ ಸಂಧಾನಕ್ಕೆ ಹೋಗಿದ್ದಲ್ಲ ಎಂದ ವಿನೋದ್‌ ರಾಜ್‌ !

Road Accident
ಕಲಬುರಗಿ1 hour ago

Road Accident : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬೈಕ್‌; ಚೆಲ್ಲಾಪಿಲ್ಲಿಯಾಗಿ ಬಿದ್ದ ಇಬ್ಬರು ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ18 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ20 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ22 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ23 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌