ಬೇಹುಗಾರಿಕೆಗಾಗಿ ಅಮೆರಿಕಕ್ಕೆ ಬಲೂನ್​ ಬಿಟ್ಟ ಚೀನಾ; ಹೊಡೆದುರುಳಿಸಲು ಹಿಂದೇಟು ಹಾಕುತ್ತಿರುವ ಪೆಂಟಗನ್​! - Vistara News

ವಿದೇಶ

ಬೇಹುಗಾರಿಕೆಗಾಗಿ ಅಮೆರಿಕಕ್ಕೆ ಬಲೂನ್​ ಬಿಟ್ಟ ಚೀನಾ; ಹೊಡೆದುರುಳಿಸಲು ಹಿಂದೇಟು ಹಾಕುತ್ತಿರುವ ಪೆಂಟಗನ್​!

ಕುತಂತ್ರಿ ಚೀನಾದ ಬೇಹುಗಾರಿಕಾ ಬಲೂನ್​​ವೊಂದು ಅಮೆರಿಕದ ಅಣ್ವಸ್ತ್ರ ಕ್ಷಿಪಣಿ ಉಡಾವಣಾ ನೆಲೆಯ ಬಳಿ ವಾಯುಪ್ರದೇಶದಲ್ಲಿ ಹಾರಾಡುತ್ತಿದೆ. ಅಮೆರಿಕ ಆ ಬಲೂನ್​ನ್ನು ಟ್ರ್ಯಾಕ್​ ಮಾಡುತ್ತಿದೆ.

VISTARANEWS.COM


on

Chinese spy balloon Flying In America
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮೆರಿಕ-ಚೀನಾದ ಆಂತರಿಕ ಕಲಹ ನಿನ್ನೆಮೊನ್ನೆಯದಲ್ಲ. ಎರಡೂ ರಾಷ್ಟ್ರಗಳು ಪರಸ್ಪರರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇರುತ್ತವೆ. ಅದರಲ್ಲೂ ಕುತಂತ್ರಕ್ಕೇ ಹೆಸರಾದ ಚೀನಾ ಬರೀ ಅಮೆರಿಕ ಎಂದಲ್ಲ, ತನ್ನ ಮಿತ್ರರಾಷ್ಟ್ರಗಳನ್ನು ಹೊರತುಪಡಿಸಿ, ಉಳಿದೆಲ್ಲ ದೇಶಗಳ ಮೇಲೆ ತನ್ನ ಕೊಂಕು ಕಣ್ಣನ್ನು ಸದಾ ನೆಟ್ಟಿಯೇ ಇರುತ್ತದೆ. ಈಗ ಚೀನಾದ ಬೇಹುಗಾರಿಕಾ ಬಲೂನ್​ವೊಂದು ಅಮೆರಿಕದ ವಾಯುಪ್ರದೇಶದಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಆಕಾಶದಲ್ಲಿ ಹಾರಾಡುತ್ತಿರುವ ಈ ಪತ್ತೇದಾರಿ ಬಲೂನ್​​ ಗುರುವಾರದಿಂದಲೂ ಕಾಣಿಸಿಕೊಳ್ಳುತ್ತಿದ್ದು, ಅದನ್ನು ಶೂಟ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅಮೆರಿಕದ ರಕ್ಷಣಾ ವಿಭಾಗವಾದ ಪೆಂಟಗನ್ ಹೇಳಿದೆ.

ಈ ಬಲೂನ್​ ಚೀನಾದಿಂದ ಕಳುಹಿಸಲ್ಪಟ್ಟಿದ್ದೇ ಆಗಿದೆ. ಯುಎಸ್​​ನ ಅಣ್ವಸ್ತ್ರ ಕ್ಷಿಪಣಿ ಉಡಾವಣೆ ನೆಲೆಯಾದ, ಮೊಂಟಾನಾದಲ್ಲಿರುವ ಮಾಲ್ಮ್​ಸ್ಟ್ರೋಮ್​ ಏರ್​ಫೋರ್ಸ್​​ ಬೇಸ್​​​ನ ಮೇಲ್ಭಾಗದಲ್ಲಿ ಈ ಪತ್ತೆದಾರಿ ಬಲೂನ್​ ಹಾರಾಡುತ್ತಿದೆ. ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ಅಮೆರಿಕದ ಪೆಂಟಗನ್ ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಈ ಬೇಹುಗಾರಿಕಾ ಬಲೂನ್​ ಮೇಲೆ ಅಮೆರಿಕ ಕಣ್ಣಿಟ್ಟಿದೆ. ಅದನ್ನು ಟ್ರ್ಯಾಕ್​ ಮಾಡುತ್ತಿರುವುದಾಗಿಯೂ ಪೆಂಟಗನ್​ ಹೇಳಿಕೊಂಡಿದೆ. ಹಾಗೇ, ಈ ಬಗ್ಗೆ ಸಂಪೂರ್ಣ ವರದಿ ಪಡೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರು ಬಲೂನ್​ ಹೊಡೆದುರುಳಿಸುವಂತೆ ರಕ್ಷಣಾ ಕಾರ್ಯಾಲಯದ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್​ಗೆ ಹೇಳಿದ್ದಾರೆ. ಆದರೆ ಬಲೂನ್​​ನಲ್ಲಿ ಏನಾದರೂ ಸ್ಫೋಟಕವಿದ್ದರೆ ಕಷ್ಟ. ಅದು ಕೆಳಗೆ ಬಿದ್ದಾಗ ಬೀಳುವ ಸ್ಥಳದಲ್ಲಿರುವವರಿಗೆ ಅಪಾಯ ಉಂಟಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಮಿಲಿಟರಿ ಹಿರಿಯ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಯುಎಸ್​ನ ವಾಯುನೆಲೆ ಮೇಲೆ ಹಾರಾಡುತ್ತಿರುವ ಬಲೂನ್​​ನಿಂದ ಗಂಭೀರ ಸ್ವರೂಪದ ಬೆದರಿಕೆ ಇದ್ದಂತೆ ಅನ್ನಿಸುತ್ತಿಲ್ಲ ಎಂದೂ ಪೆಂಟಗನ್​ ಹೇಳಿದೆ.

ಇದನ್ನೂ ಓದಿ: US- china relation: ಅಮೆರಿಕದ ʼಚೀನಾ ಪ್ರಭಾವ ತಡೆ ಸಮಿತಿʼಗೆ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಸದಸ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Pakistan Begger: ಪಾಕಿಸ್ತಾನವೇ ಒಂದು ಭಿಕ್ಷುಕ ದೇಶ! ಆದರೆ ಅಲ್ಲಿಯ ಈ ಭಿಕ್ಷುಕ ಎಷ್ಟು ಶ್ರೀಮಂತ ನೋಡಿ!

Pakistan Begger ಪಾಕಿಸ್ತಾನದಲ್ಲಿ ಒಬ್ಬ ಶ್ರೀಮಂತ ಭಿಕ್ಷುಕನಿದ್ದು, ಆತನನ್ನು ಪಾಕಿಸ್ತಾನದ ಅಂಬಾನಿ ಎಂದು ಕರೆಯುತ್ತಾರಂತೆ. ಆತನ ಆಸ್ತಿ ಕೋಟಿಗಟ್ಟಲೆ ಇದೆಯಂತೆ. ಆತ ತನ್ನ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸುವುದರ ಜೊತೆಗೆ ಒಟ್ಟು ಒಂದು ಕೋಟಿ ರೂ. ವಿಮೆಯನ್ನು ಮಾಡಿಸಿದ್ದಾನಂತೆ. ಶ್ರೀಮಂತ ಭೀಕ್ಷುಕನ ಹೆಸರು ಶೌಕತ್ ಬಿಹಾರಿ. ಅವನು ಪಾಕಿಸ್ತಾನದ ಮುಲ್ತಾನ್ ನಗರದ ಪಂಜಾಬ್ ಪ್ರಾಂತ್ಯದಲ್ಲಿ ನೆಲೆಸಿದ್ದಾನಂತೆ. ಫೆಡರಲ್ ಬೋರ್ಡ್ ಆಫ್ ರೆವಿನ್ಯೂ, ಪಾಕಿಸ್ತಾನದ ಉನ್ನತ ತೆರಿಗೆ ಸಂಗ್ರಹಣಾ ಸಂಸ್ಥೆ, ಅಕ್ಟೋಬರ್ 2021ರಲ್ಲಿ ಶೌಕತ್ ನ ಬ್ಯಾಂಕ್ ಖಾತೆಯಲ್ಲಿ 1.7 ಮಿಲಿಯನ್ ಇತ್ತು ಎಂದು ವರದಿ ಮಾಡಿದೆ. ಆತ ಪ್ರತಿದಿನ 1000ರೂ. ಭಿಕ್ಷೆ ಬೇಡುತ್ತಾನೆ ಎಂಬುದಾಗಿ ತಿಳಿದುಬಂದಿದೆ.

VISTARANEWS.COM


on

Pakistan Begger
Koo

ಪಾಕಿಸ್ತಾನ : ಭಿಕ್ಷುಕರು ಎಂದಾಗ ಅವರ ಬಳಿ ಏನೂ ಇಲ್ಲ ಎಂಬ ಭಾವನೆ ಹಲವರಲ್ಲಿ ಮೂಡುವುದು ಸಹಜ. ಯಾಕೆಂದರೆ ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪ್ರತಿದಿನ ಮನೆ ಮನೆಯಲ್ಲಿ ಭಿಕ್ಷೆ ಬೇಡುತ್ತಾರೆ. ಅದರಿಂದ ಬಂದ ಹಣದಿಂದ ಅವರ ಆ ದಿನದ ಹೊಟ್ಟೆ ಕೂಡ ತುಂಬುವುದಿಲ್ಲ. ಹಾಗಾಗಿ ಭಿಕ್ಷುಕರಲ್ಲಿ ಶ್ರೀಮಂತ ವ್ಯಕ್ತಿ ಇದ್ದಾನೆ ಎಂದರೆ ಯಾರೂ ಕೂಡ ನಂಬುವುದಿಲ್ಲ. ಆದರೆ ಪಾಕಿಸ್ತಾನ (Pakistan Begger) ದಲ್ಲಿ ಒಬ್ಬ ಶ್ರೀಮಂತ ಭಿಕ್ಷುಕ ಸಿಕ್ಕಿದ್ದಾನೆ. ಅವನ ಆಸ್ತಿ, ಅವನು ಮಾಡಿರುವ ಇನ್ಸೂರೆನ್ಸ್‌ ಬಗ್ಗೆ ಕೇಳಿದರೆ ನೀವು ಶಾಕ್ ಆಗುತ್ತೀರಿ.

ಪಾಕಿಸ್ತಾನದ ಆರ್ಥಿಕತೆ ಬಹಳ ಹದಗೆಟ್ಟಿದೆ. ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗುತ್ತಿದೆ. ಪಾಕಿಸ್ತಾನ ಸರ್ಕಾರ ತಮ್ಮ ಅಗತ್ಯಗಳಿಗಾಗಿ ನೆರೆಹೊರೆಯ ದೇಶಗಳಿಂದ ಸಾಲ ಪಡೆಯುತ್ತಿದೆ. ಇಂತಹ ಬಡ ದೇಶದಲ್ಲಿ ಶ್ರೀಮಂತ ಭಿಕ್ಷುಕನಿದ್ದಾನೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗುದಂತೂ ಸಹಜ. ಆತನ ಬಗ್ಗೆ ತಿಳಿಯಿರಿ.

ಪಾಕಿಸ್ತಾನದಲ್ಲಿ ಒಬ್ಬ ಶ್ರೀಮಂತ ಭಿಕ್ಷುಕನಿದ್ದು, ಆತನನ್ನು ʼಪಾಕಿಸ್ತಾನದ ಅಂಬಾನಿʼ ಎಂದು ಕರೆಯುತ್ತಾರಂತೆ. ಆತನ ಆಸ್ತಿ ಕೋಟಿಗಟ್ಟಲೆ ಇದೆಯಂತೆ. ಆತ ತನ್ನ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸುವುದರ ಜೊತೆಗೆ ಒಟ್ಟು ಒಂದು ಕೋಟಿ ರೂ. ವಿಮೆಯನ್ನು ಮಾಡಿಸಿದ್ದಾನಂತೆ!

ಪಾಕಿಸ್ತಾನದ ಎಆರ್ ವೈ ಸುದ್ದಿ ಕೇಂದ್ರದ ಪ್ರಕಾರ ಪಾಕಿಸ್ತಾನದ ಶ್ರೀಮಂತ ಭೀಕ್ಷುಕನ ಹೆಸರು ಶೌಕತ್ ಬಿಹಾರಿ. ಅವನು ಪಾಕಿಸ್ತಾನದ ಮುಲ್ತಾನ್ ನಗರದ ಪಂಜಾಬ್ ಪ್ರಾಂತ್ಯದಲ್ಲಿ ನೆಲೆಸಿದ್ದಾನೆ. ಫೆಡರಲ್ ಬೋರ್ಡ್ ಆಫ್ ರೆವಿನ್ಯೂ, ಪಾಕಿಸ್ತಾನದ ಉನ್ನತ ತೆರಿಗೆ ಸಂಗ್ರಹಣಾ ಸಂಸ್ಥೆ, ಅಕ್ಟೋಬರ್ 2021ರಲ್ಲಿ ಶೌಕತ್‌ನ ಬ್ಯಾಂಕ್ ಖಾತೆಯಲ್ಲಿ 1.7 ಮಿಲಿಯನ್ (17 ಲಕ್ಷ ರೂ.) ಇತ್ತು ಎಂದು ವರದಿ ಮಾಡಿದೆ. ಇತರ ಹಲವು ಕಡೆಯೂ ಆತ ಹಣ ಹೂಡಿಕೆ ಮಾಡಿದ್ದಾನಂತೆ. ಆತ ಪ್ರತಿದಿನ ಕನಿಷ್ಠ 1000 ರೂ. ಭಿಕ್ಷೆ ಬೇಡುತ್ತಾನೆ ಎಂಬುದಾಗಿ ತಿಳಿದುಬಂದಿದೆ. ಹಾಗೆಯೇ, ಆತ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನೂ ಹಾಕುತ್ತಾನಂತೆ.

ಇದನ್ನೂ ಓದಿ: 20 ತಿಂಗಳ ಮಗುವಿಗೆ ಸಿಗರೇಟ್ ಸೇದಿಸಲು, ಮದ್ಯ ಕುಡಿಸಲು ಯತ್ನಿಸಿದ ತಾಯಿ!

ಪಾಕಿಸ್ತಾನದಂತೆ ಭಾರತದಲ್ಲಿಯೂ ಕೂಡ ಶ್ರೀಮಂತ ಭಿಕ್ಷುಕರಿದ್ದಾರೆ. ಬಾಲ್ಯದಿಂದಲೂ ಮುಂಬೈನಲ್ಲಿ ಭಿಕ್ಷೆ ಬೇಡುತ್ತಿರುವ ಭರತ್ ಜೈನ್ ಎಂಬಾತ 40 ವರ್ಷಗಳಿಂದ ಭಿಕ್ಷೆ ಬೇಡಿ 7 ಕೋಟಿ ರೂ. ಮೌಲ್ಯ ಆಸ್ತಿ ಮಾಡಿದ್ದಾನಂತೆ!

Continue Reading

ವಿದೇಶ

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್‌ ಮೂಲದ, 19 ವರ್ಷದ ಗೌರವ್‌ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್‌ ಕೌರ್‌ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್‌ ಕೌರ್‌ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಮಾಡಲೆಂದೇ ಆತನು ಅಮೆರಿಕಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ.

VISTARANEWS.COM


on

Indian Women
ಜಸ್ವೀನ್‌ ಕೌರ್‌ ಹಾಗೂ ಗಗನ್‌ದೀಪ್‌ ಕೌರ್.‌
Koo

ವಾಷಿಂಗ್ಟನ್‌: ಇತ್ತೀಚಿನ ಯುವಕ-ಯುವತಿಯರಲ್ಲಿ ಸೇಡಿನ ಕೃತ್ಯಗಳು, ಲವ್‌ ಬ್ರೇಕಪ್‌ (Love Breakup) ಆದ ಕೂಡಲೇ ಪ್ರೇಯಸಿಯನ್ನು ಕೊಲ್ಲುವುದು, ಆಸಿಡ್‌ ದಾಳಿ ಮಾಡುವುದು ಸೇರಿ ಹಲವು ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಇನ್ನು ಪಂಜಾಬ್‌ ಯುವಕನೊಬ್ಬ ಭಾರತದಿಂದ ಅಮೆರಿಕಕ್ಕೆ (America) ತೆರಳಿ, ಅಲ್ಲಿ 29 ವರ್ಷದ ಮಹಿಳೆಯ ಮೇಲೆ 7 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಭೀಕರ ಹತ್ಯೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್‌ ಮೂಲದ, 19 ವರ್ಷದ ಗೌರವ್‌ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್‌ ಕೌರ್‌ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್‌ ಕೌರ್‌ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದಿಂದ ಅಮೆರಿಕಕ್ಕೆ ತೆರಳಿ, ಅಲ್ಲಿ ಯುವತಿಯನ್ನು ಹುಡುಕಿ, ಅವರ ಮನೆಗೇ ತೆರಳಿ ಗುಂಡಿನ ದಾಳಿ ಮಾಡಲು ನಿಖರ ಕಾರಣ ತಿಳಿದುಬಂದಿಲ್ಲ. ಕೃತ್ಯದ ಬಳಿಕ ಪೊಲೀಸರು ಗೌರವ್‌ ಗಿಲ್‌ನನ್ನು ಬಂಧಿಸಿದ್ದಾರೆ.

ಪಂಜಾಬ್‌ನ ಗೌರವ್‌ ಗಿಲ್‌ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದು, ವಾಷಿಂಗ್ಟನ್‌ ಜಿಲ್ಲೆಯ ಕೆಂಟ್‌ ಪಟ್ಟಣದಲ್ಲಿ ವಾಸಿಸುತ್ತಿದ್ದ. ನ್ಯೂಜೆರ್ಸಿಯ ಕಾರ್ಟರೆಟ್‌ನಲ್ಲಿ ಘಟನೆ ನಡೆದಿದೆ. ಗೌರವ್‌ ಗಿಲ್‌ ಹಾಗೂ ಗಗನ್‌ದೀಪ್‌ ಕೌರ್‌ ಅವರು ಪಂಜಾಬ್‌ನ ನಾಕೋದರ್‌ನಲ್ಲಿ ಕೋಚಿಂಗ್‌ ಸೆಂಟರ್‌ನಲ್ಲಿ ಅಧ್ಯಯನ ಮಾಡುವಾಗ ಪರಸ್ಪರ ಪರಿಚಯವಾಗಿದ್ದರು ಎಂದು ತಿಳಿದುಬಂದಿದೆ. ಜಸ್ವೀರ್‌ ಅವರು ಗಗನ್‌ದೀಪ್‌ ಕಸಿನ್‌ ಆಗಿದ್ದು, ಗಗನ್‌ದೀಪ್‌ ಅವರು ಜಸ್ವೀರ್‌ ಮನೆಗೆ ಹೋಗಿದ್ದರು. ಆಗ ಗೌರವ್‌ ಗಿಲ್‌ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಜಸ್ವೀರ್‌ ಕೌರ್‌ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅಮೆಜಾನ್‌ ಫೆಸಿಲಿಟಿಯಲ್ಲಿ ಇದಕ್ಕೂ ಮೊದಲು ಕೆಲಸ ಮಾಡುತ್ತಿದ್ದರು. ಜಸ್ವೀರ್‌ ಕೌರ್‌ ಅವರ ಪತಿಯು ವಾಹನ ಚಾಲಕರಾಗಿದ್ದು, ಘಟನೆ ನಡೆದಾಗ ಅವರು ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಜಸ್ವೀರ್‌ ಅವರು ಐದು ವರ್ಷದ ಹಿಂದೆಯೇ ಅಮೆರಿಕಕ್ಕೆ ತೆರಳಿದ್ದಾರೆ. ಇನ್ನು ಗಗನ್‌ದೀಪ್‌ ಅವರು ಅಧ್ಯಯನ ವೀಸಾ ಪಡೆದು ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದರು ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ಗೌರವ್‌ ಗಿಲ್‌ ಹಾಗೂ ಗಗನ್‌ದೀಪ್‌ ಕೌರ್‌ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ಬ್ರೇಕಪ್‌ ಆಗಿತ್ತು. ಇದರಿಂದ ಕುಪಿತಗೊಂಡ ಗೌರವ್‌ ಗಿಲ್‌, ಗಗನ್‌ದೀಪ್‌ ಕೌರ್‌ ಅವರನ್ನು ಕೊಲೆ ಮಾಡಲು ಗುಂಡು ಹಾರಿಸಿದ್ದಾನೆ. ಆಗ ಜಸ್ವೀರ್‌ ಕೌರ್‌ಗೆ ಗುಂಡು ತಗುಲಿ, ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಸ್ವೀರ್‌ ತಂದೆ ಹೇಳುವುದೇನು?

“ನನ್ನ ಪುತ್ರಿ ಜಸ್ವೀರ್‌ ಕೌರ್‌ ಮನೆಯಲ್ಲಿ ಗಗನ್‌ದೀಪ್‌ ಕೌರ್‌ ಇದ್ದಳು. ಘಟನೆ ನಡೆಯುವಾಗ ಜಸ್ವೀರ್‌ ಕೌರ್‌ ಮಲಗಿದ್ದಳು. ಮನೆಯ ಹೊರಗೆ ಗಗನ್‌ದೀಪ್‌ ಕೌರ್‌ ಹಾಗೂ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಮಧ್ಯೆ ವಾಗ್ವಾದ ನಡೆದಿದೆ. ಆಗ ಸಹಾಯಕ್ಕಾಗಿ ಗಗನ್‌ದೀಪ್‌ ಕೌರ್‌ ನನ್ನ ಮಗಳನ್ನು ಕರೆದಿದ್ದಾಳೆ. ಆಗ ಜಸ್ವೀರ್‌ ಕೌರ್‌ ಜಗಳ ಬಿಡಿಸಲು ಹೋಗಿದ್ದು, ಆರೋಪಿಯು ನನ್ನ ಮಗಳ ಮುಖಕ್ಕೆ ಏಳು ಗುಂಡು ಹಾರಿಸಿ ಕೊಂದಿದ್ದಾನೆ” ಎಂದು ಜಸ್ವೀರ್‌ ಕೌರ್‌ ತಂದೆ ಕೇವಾಲ್‌ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Continue Reading

ದೇಶ

Nuclear Weapon: ಭಾರತದಲ್ಲಿದೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರ; ಹೀಗಿದೆ ಹೊಸ ಅಂಕಿ-ಅಂಶ

Nuclear Weapon: ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಒಂಬತ್ತು ಪರಮಾಣು ಸಶಸ್ತ್ರ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುವುದನ್ನು ಮುಂದುವರಿಸಿವೆ ಎಂದು ವರದಿಯೊಂದು ತಿಳಿಸಿದೆ. ಜತೆಗೆ ಭಾರತ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಂಖ್ಯೆಯ ಪರಮಾಣು ಶಸ್ತ್ರಾಸ್ತ್ರ ಹೊಂದಿದೆ ಎಂದೂ ವಿವರಿಸಲಾಗಿದೆ.

VISTARANEWS.COM


on

Nuclear Weapon
Koo

ನವದೆಹಲಿ: ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಒಂಬತ್ತು ಪರಮಾಣು ಸಶಸ್ತ್ರ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಸ್ತ್ರ (Nuclear Weapon)ಗಳನ್ನು ಆಧುನೀಕರಿಸುವುದನ್ನು ಮುಂದುವರಿಸಿವೆ ಎಂದು ಸ್ವೀಡನ್ ಚಿಂತಕರ ಚಾವಡಿ ಥಿಂಕ್‌-ಟ್ಯಾಂಕ್‌ (Swedish think-tank) ಸೋಮವಾರ ತಿಳಿಸಿದೆ. ಜತೆಗೆ ಭಾರತ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಂಖ್ಯೆಯ ಪರಮಾಣು ಶಸ್ತ್ರಾಸ್ತ್ರ ಹೊಂದಿದೆ ಎಂದು ವರದಿ ಹೇಳಿದೆ.

ಜಾಗತಿಕವಾಗಿ ಆವರಿಸಿರುವ ಯುದ್ಧದ ಭೀತಿಯ ನಡುವೆ, ಚೀನಾದ ಪರಮಾಣು ಶಸ್ತ್ರಾಸ್ತ್ರದ ಪ್ರಮಾಣ ಒಂದು ವರ್ಷದಲ್ಲಿ 90ರಷ್ಟು ಏರಿಕೆಯಾಗಿದೆ. 2023ರ ಜನವರಿಯಲ್ಲಿ ಚೀನಾದಲ್ಲಿ 410 ಸಿಡಿತಲೆ (Warheads) ಇದ್ದರೆ 2024ರ ಜನವರಿಯಲ್ಲಿ ಅದರ ಸಂಖ್ಯೆ 500ಕ್ಕೆ ಏರಿದೆ. ಜತೆಗೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಅಲ್ಲದೆ ಚೀನಾ ಕೆಲವು ಸಿಡಿತಲೆಗಳನ್ನು ಸರ್ವ ಸನ್ನದ್ಧ ರೀತಿಯಲ್ಲಿ ಇರಿಸಿಕೊಂಡಿದೆ ಎಂದೂ ಮೂಲಗಳು ತಿಳಿಸಿವೆ.

ಆಧುನೀಕರಣಕ್ಕೆ ಒತ್ತು

ಅಮೆರಿಕ, ರಷ್ಯಾ, ಇಂಗ್ಲೆಂಡ್‌, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ – ಈ ಒಂಬತ್ತು ಪರಮಾಣು ಸಶಸ್ತ್ರ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುವುದನ್ನು ಮುಂದುವರಿಸಿವೆ ಎಂದು ಸ್ಟಾಕ್ಹೋಮ್ ಇಂಟರ್‌ನ್ಯಾಷನಲ್‌ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ (SIPRI) ವರದಿ ಮಾಡಿದೆ.

2024ರ ಜನವರಿಯಿಂದ ಜಾಗತಿಕವಾಗಿ 12,121 ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಸುಮಾರು 9,585ರಷ್ಟು ಸಂಭಾವ್ಯ ಬಳಕೆಗಾಗಿ ಮಿಲಿಟರಿ ದಾಸ್ತಾನುಗಳಲ್ಲಿವೆ. ಈ ಪೈಕಿ ಸುಮಾರು 3,904 ಸಿಡಿತಲೆಗಳನ್ನು ಕ್ಷಿಪಣಿಗಳು ಮತ್ತು ವಿಮಾನಗಳೊಂದಿಗೆ ಸಜ್ಜುಗೊಳಿಸಲಾಗಿದೆ ಎನ್ನುವ ಆಘಾತಕಾರಿ ಮಾಹಿತಿಯೂ ಬಹಿರಂಗಗೊಂಡಿದೆ.

ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಅನೇಕ ಸಿಡಿತಲೆಗಳನ್ನು ನಿಯೋಜಿಸುವ ಸಾಮರ್ಥ್ಯವನ್ನು ಈಗಾಗಲೇ ರಷ್ಯಾ, ಫ್ರಾನ್ಸ್, ಇಂಗ್ಲೆಂಡ್‌, ಅಮೆರಿಕ ಮತ್ತು ಚೀನಾ ಹೊಂದಿದ್ದು, ಇದನ್ನು ಅಭಿವೃದ್ಧಿ ಪಡಿಸಲು ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾಗಳು ಮುಂದಾಗಿವೆ. ಇದು ನಿಯೋಜಿತ ಸಿಡಿತಲೆಗಳುಗೆ ಮನ್ನಷ್ಟು ಶಕ್ತಿ ತುಂಬುತ್ತದೆ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಎಂದು ಥಿಂಕ್‌-ಟ್ಯಾಂಕ್‌ ಹೇಳಿದೆ. ಜಾಗತಿಕವಾಗಿ ಕಂಡು ಬಂದಿರುವ ಪರಮಾಣು ಶಸ್ತ್ರಾಸ್ತ್ರಗಳ ಪೈಕಿ ರಷ್ಯಾ ಮತ್ತು ಅಮೆರಿಕದಲ್ಲಿ ಸಿಂಹಪಾಲಿದೆ. ಅಂದೆ ಒಟ್ಟು ಶೇ. 90ರಷ್ಟು ಈ ಎರಡು ದೇಶಗಳಲ್ಲಿವೆ.

ಭಾರತ, ಪಾಕಿಸ್ತಾನದಲ್ಲಿ ಎಷ್ಟಿದೆ?

ಈ ವರ್ಷದ ಜನವರಿಯಲ್ಲಿ ಭಾರತದ ‘ಸಂಗ್ರಹಿತ’ ಪರಮಾಣು ಸಿಡಿತಲೆಗಳ ಸಂಖ್ಯೆ 172ರಷ್ಟಿದ್ದರೆ, ಪಾಕಿಸ್ತಾನದ ಸಂಖ್ಯೆ 170 ಎಂದು ವರದಿ ಹೇಳಿದೆ. “ಪಾಕಿಸ್ತಾನವು ಭಾರತದ ಮುಖ್ಯ ಕೇಂದ್ರಬಿಂದುವಾಗಿದ್ದರೂ, ಚೀನಾದಾದ್ಯಂತ ಗುರಿಗಳನ್ನು ತಲುಪುವ ಸಾಮರ್ಥ್ಯ ಸೇರಿದಂತೆ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳಿಗೆ ಒತ್ತು ನೀಡುತ್ತಿದೆ” ಎಂದು ಮೂಲಗಳು ತಿಳಿಸಿದೆ. ಇನ್ನು ರಷ್ಯಾ ಮತ್ತು ಅಮೆರಿಕಕ್ಕೆ ಹೋಲಿಸಿದರೆ ಚೀನಾದಲ್ಲಿ ಸಿಡಿತಲೆಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಚೀನಾ ತನ್ನ ಪರಮಾಣು ಶಸ್ತ್ರಾಗಾರವನ್ನು ಇತರ ದೇಶಗಳಿಗಿಂತ ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Mission Divyastra: ʼದಿವ್ಯಾಸ್ತ್ರʼಕ್ಕೆ ಜೀವ ತುಂಬಿದ ʼದಿವ್ಯ ಪುತ್ರಿ! ಯಾರಿವರು?

Continue Reading

ಪ್ರಮುಖ ಸುದ್ದಿ

Narendra Modi: ಅಮೆರಿಕ ಭದ್ರತಾ ಸಲಹೆಗಾರ-ನರೇಂದ್ರ ಮೋದಿ ಭೇಟಿ; ಯಾವೆಲ್ಲ ವಿಷಯ ಚರ್ಚೆ?

Narendra Modi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲಿವನ್‌ ಅವರನ್ನು ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದರು. ಜೇಕ್‌ ಸುಲಿವನ್‌ ಅವರ ಜತೆಗಿನ ಭೇಟಿಯ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರೇ ಮಾಹಿತಿ ನೀಡಿದ್ದಾರೆ. ಇಬ್ಬರೂ ರಕ್ಷಣೆ, ಭದ್ರತೆ ಸೇರಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Narendra Modi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯಲ್ಲಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ (US NSA) ಜೇಕ್‌ ಸುಲಿವನ್‌ (Jake Sullivan) ಅವರನ್ನು ಭೇಟಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಎರಡು ದಿನಗಳ ಭೇಟಿಗಾಗಿ ಭಾರತ ಪ್ರವಾಸ ಕೈಗೊಂಡಿರುವ ಜೇಕ್‌ ಸುಲಿವನ್‌ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರಕ್ಷಣೆ, ಭದ್ರತೆ, ದ್ವಿಪಕ್ಷೀಯ ಸಂಬಂಧ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಜೇಕ್‌ ಸುಲಿವನ್‌ ಅವರನ್ನು ಭೇಟಿಯಾದ ಬಳಿಕ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ. “ಅಮೆರಿಕ ಎನ್‌ಎಸ್‌ಎ ಜೇಕ್‌ ಸುಲಿವನ್‌ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದೆ. ಜಾಗತಿಕ ಸ್ಥಿರತೆ ಹಾಗೂ ಅಭಿವೃದ್ಧಿಗಾಗಿ ಅಮೆರಿಕದ ಜತೆ ಭಾರತವು ವ್ಯೂಹಾತ್ಮಕ ಪಾಲುದಾರಿಕೆಯನ್ನು ಮುಂದುವರಿಸಲು ಬದ್ಧವಾಗಿದೆ” ಎಂಬುದಾಗಿ ಬರೆದುಕೊಂಡಿದ್ದಾರೆ. ಜೂನ್‌ 18ರಂದು ಕೂಡ ಜೇಕ್‌ ಸುಲಿವನ್‌ ಅವರು ಭಾರತದಲ್ಲಿಯೇ ಇರಲಿದ್ದಾರೆ.

ಇಟಲಿಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ಜಿ-7 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಭಾರತ ಹಾಗೂ ಅಮೆರಿಕ ಸಂಬಂಧ, ಪರಸ್ಪರ ಸಹಕಾರ, ನೆರವು, ಒಪ್ಪಂದ, ರಕ್ಷಣೆ ಸೇರಿ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಅವರು ಜೋ ಬೈಡೆನ್‌ ಅವರೊಂದಿಗೆ ಚರ್ಚಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಜೇಕ್‌ ಸುಲಿವನ್‌ ಅವರು ಭಾರತಕ್ಕೆ ಆಗಮಿಸಿರುವುದು ಮಹತ್ವದ ಸಂಗತಿ ಎಂದೇ ಹೇಳಲಾಗುತ್ತಿದೆ.

ದೋವಲ್-ಜೇಕ್‌ ಭೇಟಿ

ಜೇಕ್‌ ಸುಲಿವನ್‌ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿಯಾದರು. ರಕ್ಷಣಾ ಒಪ್ಪಂದಗಳು ಹಾಗೂ ಪ್ರಾದೇಶಿಕ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸುವ ಭಾರತ-ಅಮೆರಿಕ ನಡುವಿನ ಇನಿಶಿಯೇಟಿವ್‌ ಆನ್‌ ಕ್ರಿಟಿಕಲ್‌ ಆ್ಯಂಡ್‌ ಎಮರ್ಜಿಂಗ್‌ ಟೆಕ್ನಾಲಜೀಸ್‌ (iCET) ಯೋಜನೆ ಜಾರಿ ಕುರಿತು ಇಬ್ಬರೂ ಎನ್‌ಎಸ್‌ಗಳು ಚರ್ಚಿಸಿದರು ಎಂಬುದಾಗಿ ಮೂಲಗಳು ತಿಳಿಸಿವೆ. ಇಂಡಿಯಾ-ಮಿಡಲ್‌ ಈಸ್ಟ್-ಯುರೋಪ್‌ ಎಕನಾಮಿಕ್‌ ಕಾರಿಡಾರ್‌ (IMEC) ಕುರಿತು ಕೂಡ ಚರ್ಚೆ ನಡೆಸಿದರು ಎನ್ನಲಾಗಿದೆ.

ಇದನ್ನೂ ಓದಿ: Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Continue Reading
Advertisement
Bomb threat
ದೇಶ3 hours ago

Bomb Threat: ಮುಂಬೈನ 50ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್‌ ದಾಳಿ ಬೆದರಿಕೆ; ಎಲ್ಲೆಡೆ ಕಟ್ಟೆಚ್ಚರ

Drowned in Water boy who went swimming drowned and died
ಬೀದರ್‌3 hours ago

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು!

Jagan Mohan Reddy
ದೇಶ3 hours ago

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

PM Surya Ghar Yojana Comprehensive Review Meeting by Union Minister Pralhad Joshi
ಕರ್ನಾಟಕ3 hours ago

Pralhad Joshi: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ ಸೂರ್ಯ ಘರ್: ಜೋಶಿ

Sonakshi Sinha
ಬಾಲಿವುಡ್4 hours ago

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Construction of International Cricket Stadium at Shira MLA T B Jayachandra KSCA team inspection
ಕರ್ನಾಟಕ5 hours ago

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Malayali actress Honey Rose starring Rachel movie Teaser release
ಕರ್ನಾಟಕ5 hours ago

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

IPS Officer
ದೇಶ5 hours ago

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

Sambhavami Yuge Yuge movie release on June 21
ಕರ್ನಾಟಕ5 hours ago

Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್‌

Kodi Mutt Swamiji
ಪ್ರಮುಖ ಸುದ್ದಿ5 hours ago

Kodi Mutt Swamiji: ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು, ರಾಜ್ಯದಲ್ಲಿ ಅತಿವೃಷ್ಟಿ: ಕೋಡಿಮಠ ಶ್ರೀ ಭವಿಷ್ಯ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌