ನಾಡದೇವಿ ಚಿತ್ರ ಈಗ ಅಧಿಕೃತ; ಶಾಲೆ-ಕಾಲೇಜು-ಕಚೇರಿಯಲ್ಲಿ ಅಳವಡಿಕೆ ಕಡ್ಡಾಯ: ಮುಖದಲ್ಲಿ ಬದಲಾವಣೆ ಮಾಡಿ ಸರ್ಕಾರದ ಆದೇಶ - Vistara News

ಕಲೆ/ಸಾಹಿತ್ಯ

ನಾಡದೇವಿ ಚಿತ್ರ ಈಗ ಅಧಿಕೃತ; ಶಾಲೆ-ಕಾಲೇಜು-ಕಚೇರಿಯಲ್ಲಿ ಅಳವಡಿಕೆ ಕಡ್ಡಾಯ: ಮುಖದಲ್ಲಿ ಬದಲಾವಣೆ ಮಾಡಿ ಸರ್ಕಾರದ ಆದೇಶ

ಕರ್ನಾಟಕ ಸರ್ಕಾರದ ಕಚೇರಿಗಳು, ಅಧಿಕೃತ ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ನಾಡದೇವಿಯ ಈ ಚಿತ್ರವನ್ನು ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

VISTARANEWS.COM


on

Karnataka Govt ordered karnataka mathe official painting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಸರ್ಕಾರದ ಕಚೇರಿಗಳಲ್ಲಿ ಅಳವಡಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದ್ದ ನಾಡದೇವಿಯ ಭಾವಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಿದೆ. ಆದರೆ 2022ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದ ನಾಡದೇವಿಯ ಭಾವಚಿತ್ರದಲ್ಲಿನ ಮುಖ ಹಾಗೂ ಒಟ್ಟಾರೆ ಚಿತ್ರದ ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ವಿಭಿನ್ನ ರೀತಿಯಲ್ಲಿ ಕರ್ನಾಟಕ ಮಾತೆಯ (ನಾಡದೇವಿಯ) ಚಿತ್ರಗಳಿರುವುದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಡದೇವಿಯ ಹೊಸ ಚಿತ್ರವನ್ನು ಅಧಿಕೃತಗೊಳಿಸಲು ನವೆಂಬರ್‌ನಲ್ಲಿ ಒಪ್ಪಿತ್ತು

ಚಿತ್ರವನ್ನು ರಚಿಸುವ ಸಲುವಾಗಿ ಅಂದಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿಯಲ್ಲಿ ಡಾ. ಚೂಡಾಮಣಿ ನಂದಗೋಪಾಲ್, ಎಚ್.ಎಚ್.‌ಮ್ಯಾದರ್, ಬಾಬು ನಡೋಣಿ, ವಿ.ಎಸ್. ಕಡೇಮನಿ ಸದಸ್ಯರಾಗಿದ್ದರು. ಕಲಾವಿದ ಕೆ. ಸೋಮಶೇಖರ್‌(ಚಿತ್ರ ಸೋಮು) ಅವರಿಂದ ರಚಿತವಾದ ಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಒಪ್ಪಿ, ಅಂತಿಮ ಆದೇಶಕ್ಕೆ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು.

ಸರ್ಕಾರ ಅಧಿಕೃತಗೊಳಿಸಿರುವ ಚಿತ್ರ

karnataka-maathe-full
ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಚಿತ್ರ

ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಜನವರಿ 21ರಂದೇ ಈ ಕುರಿತು ಆದೇಶ ಹೊರಡಿಸಲಾಗಿದೆ. ಅಧಿಕೃತ ಭಾವಚಿತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

  • ನಾಡದೇವತೆಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇರುತ್ತದೆ.
  • ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವವಿದೆ
  • ದ್ವಿಭುಜ ಅಂದರೆ ಎರಡು ಕೈಗಳು ವಾಸ್ತವಿಕತೆಗೆ ಹತ್ತಿರವಾಗಿದೆ.
  • ಬಲಗೈಯಲ್ಲಿ ಅಭಯ ಮುದ್ರೆ ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿಯನ್ನು ಪ್ರವಹಿಸುವ ನಿಟ್ಟನ್ನು ಸೂಚಿಸುತ್ತಿದೆ.
  • ನಾಡದೇವತೆಯು ಕುಳಿತಿರುವ ಭಂಗಿಯು ಭವ್ಯತೆಯನ್ನು ಹಾಗೂ ಸಾಕ್ಷ್ಯತೆಯನ್ನು ಪ್ರತಿಬಿಂಬಿಸುತ್ತಿದೆ.
  • ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದೆ.
  • ಹಸಿರು ಸೀರೆಯು ಸಿರಿ ಸಂಪದ ಸಮೃದ್ಧಿಯನ್ನು ಸೂಚಿಸುತ್ತಿದೆ.
  • ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು ನಮ್ಮ ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವವನ್ನು ಸಾರುತ್ತಿವೆ.
  • ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ – ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿದೆ. ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕಗಳಾಗಿವೆ. ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಒಂದು ರೀತಿಯ ಮೆರಗು ನೀಡಿದೆ. ಕೆಳಗೆ ಸುಂದರ ಸದೃಢ ತಾವರೆ ಹೂವು(ಕಮಲ) ದೇವಿಯ ಮೃದುವಾದ ಕಾಲುಗಳಿಗೆ ಆಸರೆ ನೀಡಿದೆ.
  • ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ, ಸಸ್ಯಕಾಶಿಯ ಸೊಬಗನ್ನು ಚಿತ್ರಿಸಲಾಗಿದೆ.

ಮುಖದಲ್ಲಿ ಬದಲಾವಣೆ

ಈ ಹಿಂದೆ ಬಿಡುಗಡೆ ಮಾಡಿದ್ದ ಚಿತ್ರಕ್ಕೂ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿರುವ ಚಿತ್ರಕ್ಕೂ ಕೆಲ ವ್ಯತ್ಯಾಸವಿದೆ. ನಾಡದೇವಿಯ ಮುಖಭಾವ ಹಾಗೂ ಕಣ್ಣಿನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಬಣ್ಣವನ್ನು ಸ್ವಲ್ಪ ಗಾಢವಾಗಿಸಲಾಗಿದೆ. ನಾಡಿನ ವಿವಿಧೆಡೆಯಿಂದ ಈ ಕುರಿತು ಲಭಿಸಿದ ಸಲಹೆ ಮೇರೆಗೆ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Nita Ambani : ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ ‘ದಶಾವತಾರ’ದ ಚಿತ್ರಣ; ವಿಡಿಯೊ ನೋಡಿ

Nita Ambani: ಬನಾರಸ್ ಹಿನ್ನೆಲೆಯನ್ನು ಹೊಂದಿರುವ ‘ದಶಾವತಾರ’ ಹಿಂದೂ ಸಂಪ್ರದಾಯದ ಆಳವಾದ ಅನ್ವೇಷಣೆಯನ್ನು ನೀಡುತ್ತದೆ. ಇದನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ಅಂಬಾನಿ ಅವರ ವಿವಾಹ ಆಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಕಲೆ ಮತ್ತು ಕಲಾವಿದರ ತವರೂರಾದ ಎನ್ಎಂಎಸಿಸಿ ಈ ಸಾಂಸ್ಕೃತಿಕ ವೈಭವವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡುವ ಮೂಲಕ ಈ ಬದ್ಧತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

VISTARANEWS.COM


on

Nita Ambani
Koo


ಮುಂಬೈ : ಅಂಬಾನಿ ಕುಟುಂಬದವರು ದೇವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಈ ವಿಚಾರ ಈ ಹಿಂದೆ ಅನಂತ್ ಅಂಬಾನಿಯವರ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿದಾಗ ತಿಳಿಯುತ್ತದೆ. ಇದೀಗ ಸಾಂಸ್ಕೃತಿಕ ಕೇಂದ್ರ ಎನ್ಎಂಎಸಿಸಿಯ ಸ್ಥಾಪಕಿ ಮತ್ತು ಅಧ್ಯಕ್ಷೆಯಾದ ನೀತಾ ಅಂಬಾನಿ (Nita Ambani )ಅವರು ವಿಷ್ಣುವಿನ ಹತ್ತು ಅವತಾರಗಳನ್ನು ಪ್ರದರ್ಶಿಸುವ ‘ದಶಾವತಾರ’ ಎಂಬ ಅದ್ಭುತ ಆಡಿಯೊ-ವಿಶುವಲ್ ಅನುಭವವನ್ನು ಪ್ರಸ್ತುತಪಡಿಸಲಿದ್ದಾರೆ.

ಬನಾರಸ್ ಹಿನ್ನೆಲೆಯನ್ನು ಹೊಂದಿರುವ ‘ದಶಾವತಾರ’ ಹಿಂದೂ ಸಂಪ್ರದಾಯದ ಆಳವಾದ ಅನ್ವೇಷಣೆಯನ್ನು ನೀಡುತ್ತದೆ. ಇದನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ಅಂಬಾನಿ ಅವರ ವಿವಾಹ ಆಚರಣೆಗಾಗಿ ವಿಶೇಷವಾಗಿ ಆಯೋಜಿಸಲಾಗಿದೆ. ಇದನ್ನು ಈಗ ಸಾರ್ವಜನಿಕರು ನೋಡಬಹುದಾಗಿದೆ. ಕಲೆ ಮತ್ತು ಕಲಾವಿದರ ತವರೂರಾದ ಎನ್ಎಂಎಸಿಸಿ ಈ ಸಾಂಸ್ಕೃತಿಕ ವೈಭವವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡುವ ಮೂಲಕ ಈ ಬದ್ಧತೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದಿದೆ.

‘ದಶಾವತಾರ’ ಹಿಂದೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸುಂದರವಾಗಿ ಸಾಕಾರಗೊಳಿಸುತ್ತದೆ ಮತ್ತು ಅದರ ಭವ್ಯತೆಗೆ ಸಾಕ್ಷಿಯಾಗಲು ಎಲ್ಲರಿಗೂ ಆಹ್ವಾನವನ್ನು ನೀಡಲಾಗುತ್ತಿದೆ. ಹಾಗಾಗಿ ಪವಿತ್ರ ನಗರವಾದ ಕಾಶಿಯಿಂದ ಸ್ಫೂರ್ತಿ ಪಡೆದ ದೃಶ್ಯಗಳು ಮತ್ತು ಶಬ್ದಗಳ ಈ ಅದ್ಭುತ ಪ್ರದರ್ಶನವನ್ನು ವೀಕ್ಷಿಸಲು ತಯಾರಾಗಿ.

ನೀತಾ ಮುಖೇಶ್ ಅಂಬಾನಿ ಅವರ ಸಾಂಸ್ಕೃತಿಕ ಕೇಂದ್ರ (ಎನ್ಎಂಎಸಿಸಿ) ಕಲೆಗಳಿಗೆ ಮೀಸಲಾಗಿರುವ ಅದ್ಭುತ, ಬಹು-ಶಿಸ್ತಿನ ಸಾಂಸ್ಕೃತಿಕ ಕೇಂದ್ರವಾಗಿದೆ. ವೈವಿಧ್ಯಮಯ ಕಲಾತ್ಮಕ ಅಭಿವ್ಯಕ್ತಿಗಳ ಮೂಲಕ ಭಾರತದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು ನೀತಾ ಅಂಬಾನಿ ಅವರ ಉದ್ದೇಶವಾಗಿದೆ. ‘ದಶಾವತಾರ’ ಗ್ರೌಂಡ್ ಲೆವೆಲ್ ಎನ್ಎಂಎಸಿಸಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಲಭ್ಯವಿರುತ್ತದೆ.

ಇದನ್ನೂ ಓದಿ: ಅನಂತ್‌-ರಾಧಿಕಾಗೆ ಗುಜರಾತ್‌ ಜನತೆಯಿಂದ ಅದ್ಧೂರಿ ಸ್ವಾಗತ; ವಿಡಿಯೊ ನೋಡಿ

ಮುಂಬೈ ನಿವಾಸಿಗಳು ಈಗ nmacc.com ಮತ್ತು bookmyshow.com ನಲ್ಲಿ ತಮ್ಮ ಟಿಕೆಟ್‍ಗಳನ್ನು ಬುಕಿಂಗ್‍ ಮಾಡಬಹುದು. ಮುಂಬಯಿಯ ಬಾಂದ್ರಾದ ಕುರ್ಲಾದಲ್ಲಿರುವ ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿ ಈ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜುಲೈ 20ರಿಂದ 28ರವರೆಗೆ ಈ ಪ್ರದರ್ಶನ ಲಭ್ಯ. ಇದರ ಅವಧಿ 10 ನಿಮಿಷ ಮಾತ್ರ. ಟಿಕೆಟ್‌ ದರ 199 ರೂಪಾಯಿ. ಬೆಳಗ್ಗೆ 11ರಿಂದ ರಾತ್ರಿ 7.40ರವರೆಗೆ ಹಲವು ಶೋಗಳು ಇರುತ್ತವೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಗ್ಯಾಲರಿ ಜಿ ಯಿಂದ ‘ಮೊಸಾಯಿಕ್ ಆಫ್ ಮಾಡರ್ನಿಟಿ’ ಕಲಾ ಪ್ರದರ್ಶನ

Bengaluru News: ಬೆಂಗಳೂರಿನ ಗ್ಯಾಲರಿ ಜಿ, ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಸಹಯೋಗದಲ್ಲಿ ನಗರದ ಗ್ಯಾಲರಿ ಜಿ ಯಲ್ಲಿ ‘ಮೊಸಾಯಿಕ್ ಆಫ್ ಮಾಡರ್ನಿಟಿ ಎಕ್ಸ್‌ಪ್ಲೋರಿಂಗ್‌ ಡೈವರ್ಸಿಟಿ ಇನ್ ಆರ್ಟ್’ ಎಂಬ ಕಲಾಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

VISTARANEWS.COM


on

Mosaic of Modernity art exhibition by Gallery G in Bengaluru
Koo

ಬೆಂಗಳೂರು: ಗ್ಯಾಲರಿ ಜಿ, ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಸಹಯೋಗದಲ್ಲಿ ನಗರದ ಗ್ಯಾಲರಿ ಜಿ ಯಲ್ಲಿ ‘ಮೊಸಾಯಿಕ್ ಆಫ್ ಮಾಡರ್ನಿಟಿ ಎಕ್ಸ್‌ಪ್ಲೋರಿಂಗ್‌ ಡೈವರ್ಸಿಟಿ ಇನ್ ಆರ್ಟ್’ ಎಂಬ ಕಲಾಪ್ರದರ್ಶನಕ್ಕೆ ಸೋಮವಾರ ಚಾಲನೆ (Bengaluru News) ನೀಡಲಾಯಿತು.

ಈ ವಿಶಿಷ್ಟ ಗುಂಪು ಕಲಾ ಪ್ರದರ್ಶನದಲ್ಲಿ ಭಾರತದಾದ್ಯಂತದ ಎಂಟು ಪ್ರತಿಭಾವಂತ ಕಲಾವಿದರ ಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಪ್ರತಿಯೊಬ್ಬರೂ ತಮ್ಮ ವಿಶಿಷ್ಟ ಪ್ರಕಾರ ಮತ್ತು ಕಲಾ ಮಾಧ್ಯಮವನ್ನು ಗ್ಯಾಲರಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಈ ಪ್ರದರ್ಶನವು ಆಗಸ್ಟ್ 15ರವರೆಗೆ ನಡೆಯಲಿದೆ.

ಇದನ್ನೂ ಓದಿ: Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

ಈ ಪ್ರದರ್ಶನವು ವೀಕ್ಷಕ್ಷರಿಗೆ ಸ್ಪೂರ್ತಿದಾಯಕ ಮತ್ತು ಸೃಜನಶೀಲ ಜಾಗೃತಿಯ ಭರವಸೆ ಕೊಡುತ್ತದೆ. ಈ ಪ್ರದರ್ಶನದಲ್ಲಿ ಕಾಣಿಸಿಕೊಂಡ ಕಲಾವಿದರ ಮಾಹಿತಿ ಇಲ್ಲಿದೆ.

ಜೈ ಖನ್ನಾ: ಬಣ್ಣ ಮತ್ತು ಸಂಕೀರ್ಣ ವಿವರಗಳ ರೋಮಾಂಚಕ ಬಳಕೆಗೆ ಹೆಸರುವಾಸಿಯಾದ ಜೈ ಖನ್ನಾ ಅವರ ಕೆಲಸವು ಹೆಚ್ಚಾಗಿ ಪುರಾಣ ಮತ್ತು ಆಧ್ಯಾತ್ಮಿಕತೆಯ ವಿಷಯಗಳಿಗೆ ಸಂಬಂಧಿಸಿದ್ದು. ಅವರ ವರ್ಣಚಿತ್ರಗಳು ದೃಶ್ಯ ಕಾವ್ಯದಂತೆ ಇದ್ದು. ಸಾಂಪ್ರದಾಯಿಕ ಭಾರತೀಯ ಕಲಾಪ್ರಕಾರಗಳಲ್ಲದೆ ಸಮಕಾಲೀನ ಸೌಂದರ್ಯಶಾಸ್ತ್ರದೊಂದಿಗೆ ಸಮ್ಮಿಲನಗೊಂಡಿದೆ.

ದಿನೇಶ್ ಮಗರ್: ದಿನೇಶ್ ಮಗರ್ ಅವರ ಕಲಾಕೃತಿಗಳು ಅವುಗಳ ದಿಟ್ಟ ಸಂಯೋಜನೆಗಳು ಮತ್ತು ಕ್ರಿಯಾತ್ಮಕ ಶಕ್ತಿಗಾಗಿ ಖ್ಯಾತಿ ಪಡೆದಿದೆ. ಅವರ ಕೆಲಸವು ಹೆಚ್ಚಾಗಿ ದೈವಾಂಶ ಮತ್ತು ಪ್ರಕೃತಿಯೊಂದಿಗಿನ ಅವರ ಆಳವಾದ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ, ಶಾಂತಿ ಮತ್ತು ಆಧ್ಯಾತ್ಮಿಕತೆಯ ಪ್ರಜ್ಞೆಯನ್ನು ಪ್ರಚೋದಿಸಲು ರೂಪಗಳು ಮತ್ತು ವಿನ್ಯಾಸಗಳನ್ನು ಬಳಸಲಾಗಿದೆ.

ಆರೋಹಿ ಸಿಂಗ್: ಆರೋಹಿ ಸಿಂಗ್ ಒಬ್ಬ ಬಹುಮುಖ ಪ್ರತಿಭೆಯ ಕಲಾವಿದೆಯಾಗಿದ್ದು, ಅವರ ಸಂಗ್ರಹಗಳು ಜಾನಪದ ಕಲೆಯಿಂದ ಹಿಡಿದು ಆಧುನಿಕ ಶೈಲಿ ಸೇರಿದಂತೆ ಎಲ್ಲವನ್ನೂ ಒಳಗೊಂಡಿದೆ. ಅವರ ಕೃತಿಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯಿಂದ ಪಡೆಯಲಾದ ಶ್ರೀಮಂತ ನಿರೂಪಣೆಗಳು ಮತ್ತು ರೋಮಾಂಚಕ ಸಂಗತಿಗಳಿಂದ ನಿರೂಪಿಸಲ್ಪಟ್ಟಿದೆ.

ದಾಮೋದರ್ ಅವಾರೆ: ಅಬ್ಸ್ಟ್ರಾಕ್ ಕಲೆಯಲ್ಲಿ ನೈಪುಣ್ಯ ಹೊಂದಿರುವ ದಾಮೋದರ್ ಅವಾರೆ ಅವರ ವರ್ಣಚಿತ್ರಗಳು ಅವುಗಳ ಪ್ರಶಾಂತ ಮತ್ತು ಚಿಂತನಶೀಲ ಗುಣಗಳಿಂದ ಕೂಡಿದ್ದು ಭಿನ್ನವೆನಿಸುತ್ತದೆ. ಅವರ ಕೃತಿಗಳು ಆಗಾಗ್ಗೆ ಲ್ಯಾಂಡ್ಸ್ಕೇಪ್ ಮತ್ತು ಪಾಕೃತಿಕ ವಿಷಯಗಳನ್ನು ಆಧರಿಸಿದೆ. ಅವುಗಳ ಚಿಂತನಶೀಲ ಸೌಂದರ್ಯವನ್ನು ತನ್ನ ಕ್ಯಾನ್ವಾಸ್ನಲ್ಲಿ ಮೂಡಿಸುತ್ತಾರೆ.

ತುಷಾರ್ ಶಿಂಧೆ: ತುಷಾರ್ ಶಿಂಧೆ ಅವರ ಕಲೆಯು ಬಣ್ಣ ಮತ್ತು ರೂಪಗಳ ಆಚರಣೆಯಾಗಿದೆ. ಅವರ ವರ್ಣಚಿತ್ರಗಳು ತಮ್ಮ ಅಭಿವ್ಯಕ್ತಿಶೀಲ ಗೆರೆಗಳು ಮತ್ತು ದಿಟ್ಟ ಮಾದರಿಗಳಿಗೆ ಹೆಸರುವಾಸಿಯಾಗಿವೆ, ಹೆಚ್ಚಾಗಿ ನಗರ ಜೀವನ ಮತ್ತು ನಗರ ಪ್ರದೇಶಗಳ ಗದ್ದಲದ ಕುರಿತ ಪ್ರತಿಬಿಂಬವಾಗಿದೆ. ಅವರ ಕೃತಿಗಳು ಆಯಾಮ ಮತ್ತು ರೂಪದ ದಿಟ್ಟ ಪ್ರಯೋಗಗಳಾಗಿವೆ.

ರೂನಾ ಬಿಸ್ವಾಸ್: ರೂನಾ ಬಿಸ್ವಾಸ್ ಅವರ ಕೆಲಸವು ಹೆಗ್ಗುರುತು ಮತ್ತು ಸ್ಮರಣೆಯ ವಿಷಯಗಳನ್ನು ಒಳಗೊಂಡಿವೆ.. ಅವರ ಮಿಶ್ರ ಮಾಧ್ಯಮ ರಚನೆಗಳು ಆಳ ಮತ್ತು ವೈಯಕ್ತಿಕ, ಪದರಗಳು, ಆತ್ಮಾವಲೋಕನದ ತುಣುಕುಗಳನ್ನು ರಚಿಸಲು ಕೊಲಾಜ್ ಮತ್ತು ಪಠ್ಯಗಳನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ.

ಅನಾಮಿಕ ಕುಚ್ಚನ್: ಅನಾಮಿಕ ಕುಚ್ಚನ್ ಅವರ ಕಲಾ ಪ್ರಕಾರವು ಸಾಂಪ್ರದಾಯಿಕ ಮತ್ತು ಆಧುನಿಕತೆಯ ಮಿಶ್ರಣವಾಗಿದೆ. ಅವರ ಕೃತಿಗಳು ಅತಿ ಸೂಕ್ಷ್ಮ ಕುಂಚ ಮತ್ತು ಸೂಕ್ಷ್ಮ ಬಣ್ಣಗಳನ್ನು ಒಳಗೊಂಡಿವೆ, ಪ್ರಕೃತಿ ಮತ್ತು ಜೀವನದ ವಿಷಯಗಳನ್ನು ಅದರಲ್ಲಿ ಚಿತ್ರಿಸಲಾಗಿದೆ.

ತ್ರಿದಿಬ್ ಬೇರಾ: ತ್ರಿದಿಬ್ ಬೆರಾ ಅವರ ವಿಶಿಷ್ಟ ಶೈಲಿಯು ಗಾಢವಾದ ಗೆರೆಗಳು ಮತ್ತು ವಿಶೇಷ ಕಾಂಟ್ರಾಸ್ಟ್ಗಳಿಂದ ತುಂಬಿದೆ. ಅವರ ಕಲೆಗಳು ಆಗಾಗ್ಗೆ ಮಾನವ ಭಾವನೆಗಳು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬೊಟ್ಟು ಮಾಡುತ್ತವೆ, ಆಲೋಚನೆ ಮತ್ತು ಸಂವಾದ ಪ್ರಕ್ರಿಯೆಯನ್ನು ಪ್ರಚೋದಿಸಲು ಶಕ್ತಿಯುತ ದೃಶ್ಯ ಭಾಷೆಯನ್ನು ಬಳಸುತ್ತಾರೆ.

ಇದನ್ನೂ ಓದಿ: Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕಲಾವಿದ ವಿಶಿಷ್ಟ ದೃಷ್ಟಿಕೋನ ಮತ್ತು ವಿಷಯಾಧಾರಿತ ಸಿದ್ಧಾಂತವನ್ನು ಹೊಂದಿದ್ದಾರೆ. ಎಲ್ಲಾ ಕಲಾ ಉತ್ಸಾಹಿಗಳಿಗೆ ವೈವಿಧ್ಯಮಯ ಮತ್ತು ಸಮೃದ್ಧ ಅನುಭವವನ್ನು ಸೃಷ್ಟಿಸಿಕೊಟ್ಟಿದ್ದಾರೆ. ಈ ಪ್ರದರ್ಶನವು ವೈವಿಧ್ಯಮಯ ಕಲಾತ್ಮಕ ಅಭಿವ್ಯಕ್ತಿಗಳನ್ನು ಬೆರೆಸುವ ಗುರಿ ಹೊಂದಿದೆ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಚಿತ್ರಣವನ್ನು ಬಿಂಬಿಸಲಿದೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ.

VISTARANEWS.COM


on

goa ನನ್ನ ದೇಶ ನನ್ನ ದನಿ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ದೇಶದ ಗತ-ಇತಿಹಾಸವೇ (History of India) ಹಾಗೆ. ನಂಬಲು ಅಸಾಧ್ಯವಾದ ಸಂಗತಿಗಳೇ ಅಧಿಕಾಧಿಕ. ಗೋವಾ (Goa) ಎಂದರೆ ಭೂಮಿಯ ಮೇಲಿನ ಸ್ವರ್ಗ ಎಂಬ ಅಪವ್ಯಾಖ್ಯಾನವಿದೆ. ಮದ್ಯಪಾನ (Liquor consuming) ಇತ್ಯಾದಿಗಳನ್ನು ವೈಭವೀಕರಿಸಿ, ಪ್ರವಾಸಿಗರನ್ನು (Tourists) ಆಕರ್ಷಿಸುವ ದೋಚುವ ಹುನ್ನಾರ ನಡೆದೇ ಇದೆ. ತತ್ಸಂಬಂಧೀ ಆದಾಯವೇ ಪ್ರಮುಖವಾಗಿ ಹೋಗಿ ಆ ರಾಜ್ಯಕ್ಕೆ ಮುಕ್ತಿಯೇ ಇಲ್ಲವಾಗಿದೆ. ಹಿಂದಿನ ಗೋಮಾಂತಕದ (Gomanthaka) ದೇವಾಲಯಗಳ (Temples) ಬಗೆಗೆ, ವಿಭಿನ್ನ-ವಿಶಿಷ್ಟ ಸಂಸ್ಕೃತಿಯ ಬಗೆಗೆ ಕೇಳುವವರೇ ಇಲ್ಲ. ಮತಾಂತರೀ ಕ್ರೈಸ್ತರ (Conversion) ಭಯಂಕರ ಹಿಂಸಾಪರ್ವಕ್ಕೆ (Violence) ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುತ್ತಾದವರು ಗೋವಾದ ಹಿಂದೂಗಳು.

ಆದರೂ, ಸೇಂಟ್ (ಖಂಡಿತಾ ಆತ ಸಂತನೂ ಅಲ್ಲ, ಸಜ್ಜನನೂ ಅಲ್ಲ) ಫ್ರಾನ್ಸಿಸ್ ಕ್ಸಾವಿಯರ್ (ಸಾಮಾನ್ಯ ಯುಗದ 16ನೆಯ ಶತಮಾನ)ನನ್ನೇ ಸಾಲಾಗಿ ನಿಂತು ನಮಸ್ಕರಿಸಿ ಬರುವ ಮೂರ್ಖ ಹಿಂದೂಗಳು ನಾವಾಗಿದ್ದೇವೆ. ಈತ ತನ್ನ ಕಿಂಗ್-ಗೆ ಪತ್ರ ಬರೆದು ಗೋವಾದಲ್ಲಿ Inquisition ಅತ್ಯಂತ ಆವಶ್ಯಕ ಎಂದು ಒತ್ತಾಯಿಸಿದ್ದ. ಈ ಹಿಂಸೆಗೆ ಬಲಿಯಾದವರ ಅಧಿಕೃತ ಸಂಖ್ಯೆಯೇ 16202. ಇದರಲ್ಲಿ 4012 ಮಂದಿ ಮಹಿಳೆಯರೇ ಇದ್ದರು. ಪೋರ್ತುಗೀಸರ ಎಲ್ಲ ವಸಾಹತುಗಳಲ್ಲಿಯೂ ಯಾತನಾ ಶಿಬಿರಗಳಿದ್ದವು (Concentration Camps). ಹಿಂದೂಗಳ ಮೇಲೆ ಇವರದ್ದು “ಅಚ್ಚುಕಟ್ಟಾದ ಹಿಂಸಾವಿಧಾನ”. ಜರ್ಮನಿಯ ನಾಜಿಗಳನ್ನು ನೆನಪಿಸುವಂತಹುದು. ವಿಚಾರಣೆಯ ಅವಧಿಯಲ್ಲಿ ದುರದೃಷ್ಟಶಾಲಿ ಹಿಂದೂಗಳು ಮಾಡುವ ಚೀತ್ಕಾರ, ವಿಸರ್ಜನೆಗಳ ಬಗೆಗೆ ಗುಮಾಸ್ತರು ವಿವರವಾಗಿ ಬರೆದಿಡುತ್ತಿದ್ದರು. ಕಾಲಿಗೆ ಭಾರ ಕಟ್ಟಿ ಹಿಂಭಾಗದಿಂದ ಕೈಗಳಿಗೆ ಹಗ್ಗ ಕಟ್ಟಿ ಆಪಾದಿತನನ್ನು ಮೇಲೆಳೆಯುತ್ತಿದ್ದರು. ಹೆಬ್ಬೆರಳಿನ ಉಗುರಿನ ಕಣ್ಣುಗಳಿಗೆ ಸೂಜಿಗಳಿಂದ ಚುಚ್ಚುತ್ತಿದ್ದರು. ಬಿಸಿ ಎಣ್ಣೆ, ಸುಣ್ಣದ ನೀರು, ಉರಿಯುವ ಗಂಧಕ ಇವೆಲ್ಲವನ್ನೂ ಹಿಂಸೆಗೆ ಧಾರಾಳವಾಗಿ ಬಳಸುತ್ತಿದ್ದರು. ಉರಿಯುವ ಕೊಳ್ಳಿಗಳಿಂದ ಕಂಕುಳಿಗೆ ತಿವಿಯುತ್ತಿದ್ದರು. ದೊಡ್ಡ ರಾಟೆಯ ಮೇಲೆ ಆಪಾದಿತರನ್ನು ಹಿಗ್ಗಿಸಿ ಸಾಯಿಸುತ್ತಿದ್ದರು. ಹಿಂದೂ ಸಂಪ್ರದಾಯ, ಆಚರಣೆಗಳನ್ನು ಅನುಸರಿಸಿಕೊಂಡು ಬಂದುದೇ ಇವರ ಅಪರಾಧ!

ಪೋರ್ತುಗೀಸರ ದುರಾಡಳಿತದ ಗೋವಾದ್ದು ಭಯಂಕರ ಇತಿಹಾಸ. ಇವರ ಅಮಾನುಷ ಹಿಂಸಾಚಾರದ ಘಟನಾವಳಿ ಬಹಳ ದೊಡ್ಡದೇ ಇದೆ. ಕೆಲವಂತೂ ತೀರ ವಿಚಿತ್ರ ಎನ್ನಿಸುವಂತಿವೆ. ಇಸ್ಲಾಮೀ ಆಕ್ರಮಣಕಾರಿಗಳ ದುರಾಡಳಿತ ಕಾಲದ “ಜಿಜಿಯಾ” ತೆರಿಗೆಯನ್ನು ಹೋಲುವ ಈ ಪೋರ್ತುಗೀಸ್ ಕ್ರೂರಿಗಳ ಅನೇಕ ತೆರಿಗೆಗಳು ಮಾನವ ಸಮಾಜವೇ ತಲೆ ತಗ್ಗಿಸುವಂತಹುವು. ಅದರಲ್ಲೊಂದು ಈ ಜುಟ್ಟಿನ ತೆರಿಗೆ. ಹೀಗೊಂದು ತೆರಿಗೆಯಿತ್ತೆಂಬುದೇ ನಮ್ಮಲ್ಲಿ ಬಹಳ ಜನರಿಗೆ ತಿಳಿಯದು.

ಸಾಮಾನ್ಯ ಯುಗದ 17ನೆಯ ಶತಮಾನದ ಆದ್ಯಂತ ಗೋವಾದ ಪೋರ್ತುಗೀಸ್ ಆಳರಸರಿಗೆ ಹಣದ ಅಭಾವವಿತ್ತು, ಭ್ರಷ್ಟಾಚಾರ ಮಿತಿ ಮೀರಿತ್ತು. ಹೇಗೆಲ್ಲಾ ಜನರ ತಲೆ ಒಡೆದು ಹಣ – ತೆರಿಗೆ ದೋಚಬಹುದು, ಎಂದೇ ಯೋಚಿಸುತ್ತಿದ್ದರು. ಚರ್ಚಿನ ದಂಡಾಧಿಕಾರದ ಮತ್ತು ಪರಮತ ಹಿಂಸೆಯ ಉದ್ದೇಶದ (Inquisition) ವಿಕೃತ ಶಿಕ್ಷಾವಿಧಾನಗಳು ಅಲ್ಲಿದ್ದ ಹಿಂದುಗಳಲ್ಲಿ ಅಸುರಕ್ಷತೆಯನ್ನು ಹುಟ್ಟುಹಾಕಿದ್ದವು. ವ್ಯಾಪಾರ, ವ್ಯವಹಾರ, ಕೃಷಿ ಇತ್ಯಾದಿಗಳು ಅತಂತ್ರವಾಗಿದ್ದವು. 1704ರ ಅಕ್ಟೋಬರ್ ತಿಂಗಳ 12ರಂದು ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಸಭೆಯಲ್ಲಿ ಹೇಗೆಲ್ಲಾ ಗೋವಾದ ಹಿಂದುಗಳನ್ನು ದೋಚಬಹುದು, ತೆರಿಗೆ ಹೆಸರಿನಲ್ಲಿ ಲೂಟಿ ಮಾಡಬಹುದು ಎಂದು ಸಮಾಲೋಚಿಸಲಾಯಿತು. ಪಕ್ಕದಲ್ಲಿದ್ದ ಬಿಜಾಪುರದ ಆದಿಲ್ ಶಾಹೀ ಮತ್ತು ಮೊಘಲರ ಆಡಳಿತದ ಜಿಜಿಯಾ ರೀತಿಯ ತೆರಿಗೆಯನ್ನು ಯಾವ ರೀತಿ ವಿಧಿಸಬಹುದು, ಎಂಬ ಚರ್ಚೆಯೂ ಆಯಿತು.

ಪಣಜಿಯಲ್ಲಿ 1972ರಲ್ಲಿ ಪ್ರಕಟವಾದ ವಿ.ಟಿ.ಗುಣೆ ಅವರ “a Detailed Subject-Index and a Table of Contents in Brief” ಕೃತಿಯು ವಿಶದಪಡಿಸುವಂತೆ, ಬಹುಪಾಲು ಹಿಂದೂಗಳು ಜುಟ್ಟು ಬಿಡುವುದರಿಂದ ಈ “ಜುಟ್ಟಿನ ತೆರಿಗೆ” ವಿಧಿಸಲು ತೀರ್ಮಾನಿಸಲಾಯಿತು. ಕ್ರೈಸ್ತೇತರರು ಮಾತ್ರ ಈ ತೆರಿಗೆಯನ್ನು ತೆರಬೇಕಾಗಿತ್ತು. ಸಣ್ಣ ವ್ಯಾಪಾರಿಗಳು, ಅಕ್ಕಸಾಲಿಗರು ಮೂರು ಕ್ಸೆರಾಫಿನ್ (ಗೋವಾ ಪೋರ್ತುಗೀಸರ ನಾಣ್ಯ) ತೆರಬೇಕು; ಸಗಟು ವ್ಯಾಪಾರಿಗಳು ಐದು ಕ್ಸೆರಾಫಿನ್ ಮತ್ತು ಉಳಿದವರು ಎರಡು ಕ್ಸೆರಾಫಿನ್ ತೆರಿಗೆ ಕಟ್ಟಬೇಕು, ಎಂದು ತೀರ್ಮಾನಿಸಲಾಯಿತು. ಈ ಜುಟ್ಟಿನ ತೆರಿಗೆ ದೋಚಲು ನಿಗದಿತವಾದ ಪಡೆಯು, ತೆರಿಗೆದಾರರ ಪಟ್ಟಿ ಸಿದ್ಧಪಡಿಸಿಕೊಂಡು ಗೋವಾದ ಹಿಂದೂಗಳ ಭರ್ತ್ಸನೆಯಲ್ಲಿ ಹಿಂಸೆಯಲ್ಲಿ ನಿರತವಾಯಿತು. ಅಕ್ಷರಶಃ ನಿಯಂತ್ರಣವೇ ಇರಲಿಲ್ಲ. ಕೆಲವೆಡೆ ಐವತ್ತು, ನೂರು ಕ್ಸೆರಾಫಿನ್ ಗಳಷ್ಟು ಹಣ ಕಿತ್ತುಕೊಂಡ ಉದಾಹರಣೆಗಳೂ ಇದ್ದವು.

goa ನನ್ನ ದೇಶ ನನ್ನ ದನಿ

ತುಂಬಾ ಹಿಂದೆ ಅಂದರೆ, 1567ರಲ್ಲಿಯೇ ಗೋವಾದಲ್ಲಿ ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಮೊದಲ ಸಭೆಯಲ್ಲಿ ಹಿಂದೂಗಳ ವಿಗ್ರಹಾರಾಧನೆ, ಸಂಪ್ರದಾಯಗಳು, ಪೂಜೆಗಳು, ಆಚಾರ ವಿಚಾರಗಳು, ಮೈಮೇಲೆ ಗಂಧವನ್ನು ಲೇಪಿಸಿಕೊಳ್ಳುವುದು, ತುಳಸೀ ಪೂಜೆ ಮಾಡುವುದು ಇತ್ಯಾದಿ ಎಲ್ಲವನ್ನೂ ಟೀಕಿಸಲಾಯಿತು, ನಿಷೇಧಿಸಲಾಯಿತು. ಜನಿವಾರ ಹಾಕುವ ಸಮುದಾಯಗಳು ಜನಿವಾರವನ್ನು ಅಡಗಿಸಿಕೊಳ್ಳಬೇಕಿತ್ತು. ಜುಟ್ಟು ಬಿಟ್ಟವರ ಮೇಲೆಯೂ ದಾಳಿ ಹೆಚ್ಚಾಗುತ್ತಹೋಯಿತು. 1868ರಲ್ಲಿ ಲಿಸ್ಬೋವಾದಲ್ಲಿ ಪ್ರಕಟವಾದ ಪೋರ್ತುಗೀಸ್ ಭಾಷೆಯ “Subsidios para a Historia da India Portuguesa” (ಲೇಖಕ: ಆರ್.ಜೆ.ಡೇ ಲಿಮಾ ಫೆಲ್ನರ್ : ಪುಟಗಳು 58, 62 ಇತ್ಯಾದಿ) ಗ್ರಂಥದಲ್ಲಿ ಗೋವಾ ಹಿಂದೂಗಳ ಮೇಲಾಗುತ್ತಿದ್ದ ಬೀಭತ್ಸ ಹಿಂಸೆಯ ವಿವರಗಳಿವೆ.

ಎಸ್.ಜೆ.ಸೆಬಾಸ್ಟಿಯೋ ಫರ್ನಾಂಡಿಸ್ ಎಂಬವನು ಬರೆದ ಪತ್ರವೊಂದರಲ್ಲಿ ಕೆಲವು ಭಯಾನಕ ವಿವರಗಳಿವೆ: “ಹಿಂಸೆ ತಾಳಲಾರದೆ ಹಿಂದೂವೊಬ್ಬ ಕೊನೆಗೊಮ್ಮೆ ಬಲವಂತದ ಮತಾಂತರಕ್ಕೆ ಒಪ್ಪಿದರೆ, ಬ್ಯಾಪ್ಟೈಸಾಗಲು ಸಿದ್ಧನಾದರೆ ಜೆಸ್ಯೂಟ್ ಬ್ರದರ್ ಒಬ್ಬ ತಕ್ಷಣವೇ ಅವನ ಜುಟ್ಟು ಕತ್ತರಿಸುತ್ತಾನೆ. ಮರವೊಂದಕ್ಕೆ ಆ ಜುಟ್ಟನ್ನು ನೇತುಹಾಕಲಾಗುತ್ತದೆ. ಅಲ್ಲಿ ಸೇರಿದ ಕ್ರೈಸ್ತ ಯುವಕರೆಲ್ಲಾ ಆ ಜುಟ್ಟಿಗೆ ಉಗಿಯುತ್ತಾರೆ, ಆ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾರೆ, ಕುಣಿದು ಸಂಭ್ರಮಿಸುತ್ತಾರೆ. ಎಲ್ಲ ಸೇರಿ ಹಿಂದೂ ದೇವತೆಗಳಿಗೆ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾರೆ, ಬೈಯುತ್ತಾರೆ. ಮುಗ್ಧರಾದ ನಾವು ಇಂತಹುದನ್ನು ನಂಬುವುದು ಕಷ್ಟ. ಪೋರ್ತುಗಲ್ ನ ಕಿಂಗ್-ಗೆ, ಅಂದಿನ ಗೋವಾದ ಚೀಫ್ ರೆವಿನ್ಯೂ ಕಮ್ ಟ್ರೋಲರ್ (Comptroller) ಆಗಿದ್ದ ಸಿಮಾವ್ ಬೊಟೆಲ್ಹೋ ಬರೆದ ಪತ್ರದಲ್ಲಿಯೂ ಇಂತಹ ಅಮಾನುಷ ರಾಕ್ಷಸೀ ವ್ಯವಹಾರಗಳ ಚಿತ್ರಣವಿದೆ. “ಅವಹೇಳನ, ಶಿಕ್ಷೆ, ಹಿಂಸೆಗಳಿಗೆ ಸಾಕಾಗಿಹೋದ ಹಿಂದೂಗಳು ಬ್ಯಾಪ್ಟೈಸಾಗಲು ಒಪ್ಪಿದ ಕೂಡಲೇ, ಅವರೆಲ್ಲರ ತಲೆಯನ್ನು ಬೋಳಿಸಲಾಗುತ್ತದೆ. ವಿಗ್ರಹಾರಾಧನೆಯ ಅಪರಾಧಕ್ಕೆ ಆ ಎಲ್ಲ ಹಿಂದೂಗಳಿಗೆ ಗೋಮಾಂಸವನ್ನು ಒತ್ತಾಯಪೂರ್ವಕವಾಗಿ ತಿನ್ನಿಸಲಾಗುತ್ತದೆ” ಎಂಬ ವಿವರಗಳು ಈ ಪತ್ರದಲ್ಲಿವೆ.

ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ. ಹೀಗಿದ್ದೂ ನಮ್ಮಲ್ಲಿ ಎಂತಹ ದೇಶದ್ರೋಹಿಗಳು, ವಂಚಕರು, ಸಮಯಸಾಧಕರು ಇದ್ದಾರೆ ಎಂದರೆ, 1998ರಲ್ಲಿ ಈ ವಾಸ್ಕೋ ಡ ಗಾಮಾನ ಭಾರತ ಭೇಟಿಯ 500 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿತ್ತು. ಜನರು ಥೂ ಎಂದು ಹೀನಾಮಾನವಾಗಿ ಉಗಿದ ಮೇಲೆ, ಈ “ಆಚರಣೆ” ರದ್ದಾಯಿತು. ನಾವು ಸ್ವಾಭಿಮಾನ ಶೂನ್ಯರಾದರೆ, ನಮ್ಮ ಅಸ್ಮಿತೆಯನ್ನೇ ಮರೆತರೆ, ಶತ್ರುಗಳನ್ನು – ಆಕ್ರಮಣಕಾರಿ ರಿಲಿಜನ್ನಿನವರನ್ನೇ ಆರಾಧಿಸಲು ತೊಡಗಿದರೆ, ಭಾರತ-ಶತ್ರುಗಳನ್ನು ಅರ್ಥ ಮಾಡಿಕೊಳ್ಳದೇಹೋದರೆ, ಮತ್ತೆ ಪರಾಕ್ರಾಂತರಾಗುತ್ತೇವೆ. ಎಚ್ಚೆತ್ತುಕೊಳ್ಳದೇ ಹೋದರೆ ಈ ಬಾರಿ ಹೇಳಹೆಸರಿಲ್ಲದಂತಾಗುತ್ತೇವೆ.

ಎಚ್ಚರ, ಜಾಗೃತಿ, ಸ್ವರಕ್ಷಣೆಗಳು ನಮ್ಮ ಕಣ್ಣು ತೆರೆಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

Continue Reading

ಸಿನಿಮಾ

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Bhavana Ramanna: ಈಗ 2024ರ ಆಗಸ್ಟ್ ತಿಂಗಳ 7 ಮತ್ತು 8 ತಾರೀಖಿನಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ವರ್ಣ ಸ್ಪರ್ಧೆ” ಎಂಬ ಶೀರ್ಷಿಕೆ ಅಡಿಯಲ್ಲಿ ಏರ್ಪಡಿಸಲಾಗಿದೆ.

VISTARANEWS.COM


on

Bhavana Ramanna hoovu foundation Varna Spardhe Bharathanatya Competition
Koo

ಭಾವನ ರಾಮಣ್ಣ ಅವರ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆಯು ಹಲವಾರು ವರ್ಷಗಳಿಂದ ಕಲೆ ಮತ್ತು ಕಲಾವಿಧರುಗಳ ಏಳಿಗೆ ಮತ್ತು ಪ್ರಗತಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈಗ 2024ರ ಆಗಸ್ಟ್ ತಿಂಗಳ 7 ಮತ್ತು 8 ತಾರೀಖಿನಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ವರ್ಣ ಸ್ಪರ್ಧೆ” ಎಂಬ ಶೀರ್ಷಿಕೆ ಅಡಿಯಲ್ಲಿ ಏರ್ಪಡಿಸಲಾಗಿದೆ.

ಭರತನಾಟ್ಯದ ಪಠ್ಯದಲ್ಲಿರುವಂತಹ ವರ್ಣ ನೃತ್ಯವನ್ನು ಮಾತ್ರ ಈ ಸ್ಪರ್ಧೆ ಯಲ್ಲಿ ಅಂಗೀಕರಿಸಲಾಗಿದ್ದು ಮೊದಲನೇ ಬಹುಮಾನ ಒಂದು ಲಕ್ಷ ರೂಪಾಯಿಗಳು, ಎರಡನೇ ಬಹುಮಾನ 50,000 ರೂ, ಮೂರನೇ ಬಹುಮಾನ 30,000 ರೂ. ಬಹುಮಾನ ವಾಗಿ ವಿಜೇತರು ಪಡೆಯಲಿದ್ದಾರೆ. ಅರ್ಜಿದಾರರು ನೇರವಾಗಿ hoovufoundation.com ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಶ್ರೀಮತಿ ಚಾರುಮತಿ 9901305155 ಮತ್ತು ಪ್ರೇಮ್ ಕುಮಾರ್ 7483490143 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

ದರ್ಶನ್‌ ವಿಚಾರವಾಗಿ ಸುದ್ದಿಯಾಗಿದ್ದ ಭಾವನ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಜೈಲು ಸೇರಿದ್ದಾರೆ‌. ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾ ಖ್ಯಾತಿಯ ಭಾವನಾ ರಾಮಣ್ಣ ಅವರು ದರ್ಶನ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದರು.

”ನನಗೆ ದರ್ಶನ್ ಏನು ಅನ್ನೋದು ಗೊತ್ತು. ಆದರೆ ದರ್ಶನ್ ಮಾಡಿರೋ ತಪ್ಪಿನ ಬಗ್ಗೆ ನೋಡಲು ಕಾನೂನು ಇದೆ. ದರ್ಶನ್ ತಪ್ಪು‌ ಮಾಡಿದ್ದಾರೋ? ಇಲ್ಲವೋ? ಎಂದು ತೀರ್ಮಾನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ದರ್ಶನ್ ಹೀರೋ ಆಗುವುದಕ್ಕಿಂತ ಮಂಚೆಯೇ ನನಗೆ ಗೊತ್ತು. ನಾನು ನೋಡಿರುವ ಹಾಗೇ ಅವರು ನಾಚಿಕೆ ಸ್ವಭಾವದ ವ್ಯಕ್ತಿ. ಸಂತೋಷದಲ್ಲಿ ಜೊತೆಗಿದ್ದು, ಕಷ್ಟದಲ್ಲಿದ್ದಾಗ ಅವರ ಜೊತೆಗಿಲ್ಲ ಅಂದ್ರೆ ಹೇಗೆ?. ಒಂದು ಕುಟುಂಬ ಎಂದು ಬಂದಾಗ ಎಲ್ಲರ‌‌ ಮನೆ ದೋಸೆ ತೂತು” ಎಂದು ತಿಳಿಸಿದದ್ದರು.

ʻʻಹೆಣ್ಮು ಮಕ್ಕಳಿಗೆ ಕೆಟ್ಟ ಸಂದೇಶ ರವಾನೆ ಆಗಿ, ಬಹಳ ಸಮಸ್ಯೆ ಆಗುತ್ತದೆ. ಆದರೆ ರೇಣುಕಾಸ್ವಾಮಿ ಘಟನೆ ತುಂಬಾ ನೋವಾಗಿದೆ. ಕೃತ್ಯ ನಡೆದಿದೆ ನಿಜ, ಅದು ಕಾನೂನಿನ ಅಡಿಯಲ್ಲಿ ತನಿಖೆ ಆಗುತ್ತಿದೆ. ಪವಿತ್ರಾ ಗೌಡ ಅವರಿಗೆ ಯಾವ ರೀತಿ ಅಶ್ಲೀಲ ಮೆಸೇಜ್ ಬಂದಿದೆಯೆಂಬುದು ನನಗೆ ಗೊತ್ತು. ಕೆಟ್ಟ ಮೆಸೇಜ್ ಮಾಡಲು ಅವರ್ಯಾರು?ಕೆಲ ಸೋಷಿಯಲ್ ಮೀಡಿಯಾ ಮೆಸೇಜ್ ನೋಡಿದ್ರೆ, ಕೆಲ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನು ಇಗ್ನೋರ್ ಮಾಡಲು ಆಗಲ್ಲ. ರೇಣುಕಾಸ್ವಾಮಿ ಯಾರು ಎಂಬುದು ನಮಗೂ ನಿಮಗೂ ಯಾರಿಗೂ ಗೊತ್ತಿಲ್ಲ. ಈ ಪ್ರಕರಣದಿಂದ ಚಿತ್ರರಂಗ ಮಂಕಾಗಿದೆ ಎಂದು ಭಾವನಾ ತಿಳಿಸಿದ್ದರು.

Continue Reading
Advertisement
kiccha sudeep‌ Fans
ಸಿನಿಮಾ8 mins ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ16 mins ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

GT World Mall
ಪ್ರಮುಖ ಸುದ್ದಿ25 mins ago

GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Viral Video
Latest27 mins ago

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Dog Attacks
Latest40 mins ago

Dog Attacks: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

Kashmir Encounter
ದೇಶ47 mins ago

Kashmir Encounter: ಕಾಶ್ಮೀರದಲ್ಲಿ ಮತ್ತೆ ಎನ್‌ಕೌಂಟರ್‌; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Monsoon star fashion Actress Mokshita Pai
ಫ್ಯಾಷನ್54 mins ago

Monsoon star fashion: ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಮೋಕ್ಷಿತಾ ಪೈ

KL Rahul
ಪ್ರಮುಖ ಸುದ್ದಿ58 mins ago

KL Rahul : ಕೊರಗಜ್ಜನ ಆದಿ ಸ್ಥಾನಕ್ಕೆಭೇಟಿ ನೀಡಿದ ಕೆ. ಎಲ್​ ರಾಹುಲ್​, ಅಥಿಯಾ ಶೆಟ್ಟಿ ದಂಪತಿ, ವಿಡಿಯೊ ವೈರಲ್

CT Ravi
ಪ್ರಮುಖ ಸುದ್ದಿ1 hour ago

Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

World's Largest Tribe
ವಿದೇಶ1 hour ago

Mashco Piro Tribe: ಮೊದಲ ಬಾರಿ ಹೊರ ಜಗತ್ತಿಗೆ ಕಾಣಿಸಿಕೊಂಡ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌