Viral News: ಜಗತ್ತಿನ ಅತ್ಯಂತ ಕಡಿಮೆ ಸಮಯದ ವಿಮಾನ ಪ್ರಯಾಣವಿದು; ಇಷ್ಟೇ ಪ್ರಯಾಣಕ್ಕೆ ಅಷ್ಟೊಂದು ಶುಲ್ಕವೇಕೆ? - Vistara News

ವೈರಲ್ ನ್ಯೂಸ್

Viral News: ಜಗತ್ತಿನ ಅತ್ಯಂತ ಕಡಿಮೆ ಸಮಯದ ವಿಮಾನ ಪ್ರಯಾಣವಿದು; ಇಷ್ಟೇ ಪ್ರಯಾಣಕ್ಕೆ ಅಷ್ಟೊಂದು ಶುಲ್ಕವೇಕೆ?

ಪ್ರಪಂಚದ ಅತ್ಯಂತ ಕಡಿಮೆ ಅವಧಿಯ ವಿಮಾನ ಪ್ರಯಾಣವೆಂದರೆ (Viral News) ಅದು ಉತ್ತರ ಸ್ಕಾಟ್ಲೆಂಡ್‌ನಲ್ಲಿರುವ ವೆಸ್ಟ್ರೇ ಮತ್ತು ಪಾಪಾ ವೆಸ್ಟ್ರೇ ದ್ವೀಪಗಳ ನಡುವಿನ ಹಾರಾಟವಾಗಿದೆ. ಇಲ್ಲಿನ ವಿಮಾನ ಪ್ರಯಾಣದ ಅವಧಿ ಕೇವಲ 53 ಸೆಕೆಂಡುಗಳು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಮಾನಗಳು ಬಂದ ನಂತರ ಪ್ರಯಾಣದ ಸಮಯ ಕಡಿಮೆಯಾಗಿದೆ. ದೂರದ ದೇಶಗಳಿಗೂ ಗಂಟೆಗಳಲ್ಲಿ ಹೋಗಿಬಿಡಬಹುದಾಗಿದೆ. ಆದರೂ ಅಮೆರಿಕದಂತಹ ದೂರದ ರಾಷ್ಟ್ರಗಳಿಗೆ ತೆರಳುವುದಕ್ಕೆ ನಮ್ಮ ಭಾರತೀಯರಿಗೆ 20 ಗಂಟೆಗಳಷ್ಟು ಸಮಯ ಬೇಕು. ಹಾಗಾದರೆ ಅತ್ಯಂತ ಕಡಿಮೆ ಸಮಯದ ವಿಮಾನ ಹಾರಾಟ ಯಾವುದು ಎನ್ನುವುದರ ಬಗ್ಗೆ (Viral News) ಎಂದಾದರೂ ಯೋಚಿಸಿದ್ದೀರಾ?

ಇದನ್ನೂ ಓದಿ: Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ
ಜಗತ್ತಿನಲ್ಲಿ ಅತ್ಯಂತ ಕಡಿಮೆ ಸಮಯದ ವಿಮಾನ ಪ್ರಯಾಣ ನಿಮಿಷಗಳಲ್ಲಿ ಇರಬಹುದು ಎಂದು ನೀವು ಅಂದಾಜಿಸಿದ್ದರೆ ಅದು ತಪ್ಪು. ಏಕೆಂದರೆ ದಾಖಲೆ ಬರೆದಿರುವ ಕಡಿಮೆ ಸಮಯದ ವಿಮಾನದ ಪ್ರಯಾಣ ಸೆಕೆಂಡುಗಳಲ್ಲಿದೆ. ಕೇವಲ 53 ಸೆಕೆಂಡುಗಳ ವಿಮಾನ ಪ್ರಯಾಣ ಅದಾಗಿದೆ.

ಉತ್ತರ ಸ್ಕಾಟ್ಲೆಂಡ್‌ನಲ್ಲಿರುವ ವೆಸ್ಟ್ರೇ ಮತ್ತು ಪಾಪಾ ವೆಸ್ಟ್ರೇ ದ್ವೀಪಗಳ ನಡುವಿನ ಹಾರಾಟದ ಅವಧಿ ಕೇವಲ 53 ಸೆಕೆಂಡು. ಈ ಎರಡು ದ್ವೀಪಗಳ ನಡುವೆ 2.7 ಕಿ.ಮೀ. ಅಂತರವಿದೆ. ಇವುಗಳ ನಡುವೆ ಸೇತುವೆಯಿಲ್ಲವಾದ್ದರಿಂದ ಜನರು ದೋಣಿಗಳನ್ನು ಮತ್ತು ವಿಮಾನಗಳನ್ನು ಮಾತ್ರವೇ ಸಂಚಾರಕ್ಕೆ ಬಳಸಬೇಕಾಗಿದೆ. ಇಲ್ಲಿನ ವಿಮಾನ ಸಂಚಾರವನ್ನು ಲೋಗನೈರ್‌ ಏರ್‌ಲೈನ್‌ ಸಂಸ್ಥೆ ನಿರ್ವಹಿಸುತ್ತದೆ. ಇಲ್ಲಿ ಸೆಕೆಂಡುಗಳಲ್ಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರಬಹುದಾದರೂ ವಿಮಾನ ನಿರ್ವಹಣೆಯ ಅವಶ್ಯಕತೆಯಿಂದಾಗಿ ಪ್ರಯಾಣವನ್ನು ಒಂದೂವರೆ ನಿಮಿಷಕ್ಕೆ ಹೆಚ್ಚಿಸಿಕೊಳ್ಳಲಾಗಿದೆ.

ವೆಸ್ಟ್ರೇ ದ್ವೀಪದಿಂದ ಸ್ಕಾಟ್ಲೆಂಡ್‌ನ ಪ್ರಮುಖ ನಗರವಾದ ಕಿರ್ಕ್‌ವಾಲ್‌ಗೆ ಕನೆಕ್ಟಿಂಗ್‌ ವಿಮಾನ ಇರುವುದರಿಂದಾಗಿ ಈ ಎರಡೂ ದ್ವೀಪಗಳ ನಡುವಿನ ಪ್ರಯಾಣ ಮುಖ್ಯವಾಗಿದೆ. 1967ರಿಂದಲೂ ಲೊಗನೈರ್‌ ಸಂಸ್ಥೆಯು ಇಲ್ಲಿ ವಿಮಾನಗಳ ಹಾರಾಟವನ್ನು ನಡೆಸಿಕೊಂಡು ಬಂದಿದೆ.

ಇದನ್ನೂ ಓದಿ: Viral Video : ಯುವಕರೂ ನಾಚುವಂತೆ ನೀರಿಗೆ ಡೈವ್ ಹೊಡೆದ ಅಜ್ಜಿ; ವೈರಲ್‌ ಆಯ್ತು ವಿಡಿಯೊ
ಇಷ್ಟೊಂದು ಕಡಿಮೆ ಅವಧಿಯ ಪ್ರಯಾಣಕ್ಕೆ ಕಡಿಮೆ ಹಣದ ಟಿಕೆಟ್‌ ಇರುತ್ತದೆ ಎಂದು ಭಾವಿಸಬೇಡಿ. ಇಲ್ಲಿನ ಟಿಕೆಟ್‌ ಮೊತ್ತ ಬರೋಬ್ಬರಿ 1,387.77 ರೂ. ಈ ಎರಡೂ ದ್ವೀಪಗಳ ನಡುವೆ ಇರುವ ಅತ್ಯಂತ ಪ್ರಮುಖ ಸಂಚಾರಿ ವಾಹನ ವಿಮಾನವೇ ಆಗಿರುವುದರಿಂದಾಗಿ ಅದರ ಬೆಲೆಯೂ ಹೆಚ್ಚಿರುವುದಾಗಿ ಹೇಳಲಾಗಿದೆ. ಈ ಎರಡು ದ್ವೀಪಗಳ ಪೈಕಿ ಒಂದರಲ್ಲಿ 600 ಜನರಿದ್ದರೆ, ಇನ್ನೊಂದರಲ್ಲಿ 90 ಜನರಿದ್ದಾರೆ. ಇವುಗಳ ನಡುವೆ ಸೇತುವೆ ನಿರ್ಮಿಸಬೇಕು ಎನ್ನುವ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಇಂದಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ನ್ಯಾಯ ಕೊಡಿಸಿ ಎಂದು ಠಾಣೆ ಎದುರೇ ಎಸ್‌ಐ ಪತ್ನಿ ಅಹೋರಾತ್ರಿ ಧರಣಿ; ಏನಿದು ಕೇಸ್‌?

Viral News:ಕರೀಂ ನಗರ ನಿವಾಸಿಯಾಗಿರುವ ಎಸ್‌ಐ ನಾಗರಾಜು ವಿರುದ್ಧ ಆತನ ಪತ್ನಿ ಮಾನಸ ಠಾಣೆಗೆ ದೂರು ನೀಡಿದ್ದು, ನ್ಯಾಯ ಸಿಗುವವರೆಗೆ ಠಾಣೆ ಎದುರೇ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಅಹೋರಾತ್ರಿ ರಾಣೆ ಎದುರು ಧರಣಿ ನಡೆಸಿದ ಮಾನಸ ರಾಜ್ಯದ ಗಮನ ಸೆಳೆದಿದ್ದಾಳೆ. ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಗಂಡನ ವಿರುದ್ಧ ಆರೋಪ ಮಾಡಿರುವ ಮಾನಸ, ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ ಎಂದಿದ್ದಾಳೆ.

VISTARANEWS.COM


on

Viral News
Koo

ತೆಲಂಗಾಣ: ಜನರಿಗೆ ಅನ್ಯಾಯ ಆಗಾದ ಮೊದಲು ಓಡಿ ಹೋಗುವುದು ಪೊಲೀಸರ ಬಳಿಗೆ. ಹಾಗಿರುವಾಗ ಅಂತಹ ಪೊಲೀಸರಿಗೆ ಅನ್ಯಾಯ ಮಾಡಿದರೆ? ಅಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ(Viral News). ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಾಗಿದ್ದ ಪೊಲೀಸ್‌ ಅಧಿಕಾರಿಯೇ ಕಟ್ಟಿಕೊಂಡ ಹೆಂಡತಿಗೆ ಅನ್ಯಾಯ ಮಾಡಿದ್ದು, ನ್ಯಾಯ ಒದಗಿಸುವಂತೆ ಪತ್ನಿ ಠಾಣೆ ಎದುರೇ ಧರಣಿ(Protest) ಮಾಡಿದ್ದಾಳೆ. ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿ ಪೊಲೀಸ್ ಠಾಣೆಯ ಎದುರು ಸಬ್​ ಇನ್ಸ್​ಪೆಕ್ಟರ್(Sub inspector)​ ಪತ್ನಿ ಧರಣಿ ಕುಳಿತಿರುವುದು ತೆಲುಂಗಾಣದಲ್ಲಿ ಭಾರಿ ಸುದ್ದಿಯಾಗಿದೆ.

ಕರೀಂ ನಗರ ನಿವಾಸಿಯಾಗಿರುವ ಎಸ್‌ಐ ನಾಗರಾಜು ವಿರುದ್ಧ ಆತನ ಪತ್ನಿ ಮಾನಸ ಠಾಣೆಗೆ ದೂರು ನೀಡಿದ್ದು, ನ್ಯಾಯ ಸಿಗುವವರೆಗೆ ಠಾಣೆ ಎದುರೇ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಅಹೋರಾತ್ರಿ ರಾಣೆ ಎದುರು ಧರಣಿ ನಡೆಸಿದ ಮಾನಸ ರಾಜ್ಯದ ಗಮನ ಸೆಳೆದಿದ್ದಾಳೆ. ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಗಂಡನ ವಿರುದ್ಧ ಆರೋಪ ಮಾಡಿರುವ ಮಾನಸ, ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ ಎಂದಿದ್ದಾಳೆ. ಸಾಲದೆನ್ನುವಂತೆ ನಾಗರಾಜ್‌ ಬೇರೊಬ್ಬ ಮಹಿಳೆಯನ್ನೂ ಮದುವೆ ಆಗಿದ್ದಾರೆ ಎಂದು ಗಂಡನ ವಿರುದ್ಧ ಮಾನಸ ಆರೋಪ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಠಾಣೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.

ಮಾನಸ ಮತ್ತು ನಾಗರಾಜು ಇಬ್ಬರು ಕರೀಂನಗರ ಜಿಲ್ಲೆಗೆ ಸೇರಿದವರು. ಹತ್ತು ವರ್ಷಗಳ ಹಿಂದೆಯೇ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಎಸ್‌ಐ ನಾಗರಾಜು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಮಾನಸಗೆ ಕಿರುಕುಳ ನೀಡುತ್ತಿದ್ದ.
ಮೇಲಾಗಿ ವಿಚ್ಛೇದನ ನೀಡುವಂತೆ ಕಿರುಕುಳ ನೀಡುತ್ತಿರುವುದರಿಂದ ಆತ್ಮಹತ್ಯೆಯೊಂದೇ ದಾರಿ ಎಂದು ಮಾನಸ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸಿದ್ದಿಪೇಟೆ ಸಿಪಿ, ಚೆರ್ಯಾಲ ಸಿಐ ಹಾಗೂ ಕರೀಂನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾರೂ ಗಮನ ಹರಿಸುತ್ತಿಲ್ಲ. ಎಸ್‌ಐ ನಾಗರಾಜು ಮತ್ತು ಎರಡನೇ ಪತ್ನಿಯಿಂದಾಗಿ ಇಬ್ಬರು ಮಕ್ಕಳು ಅಪಾಯದಲ್ಲಿದ್ದಾರೆ. ಮಕ್ಕಳಿಗೆ ನ್ಯಾಯ ಕೊಡಿಸುವಂತೆ ಕೋಮುರವಳ್ಳಿ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಎಸ್‌ಐ ನಾಗರಾಜು ರಜೆಯಲ್ಲಿರುವುದಾಗಿ ಠಾಣೆ ಸಿಬ್ಬಂದಿ ಇದೇ ಸಂದರ್ಭದಲ್ಲಿ ತಿಳಿಸಿದರು. ಆದರೂ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಮಾಸನ ಹೇಳಿದ್ದಾರೆ. ನಾಗರಾಜು ಎರಡನೇ ಮದುವೆ ಆಗುವುದರಲ್ಲಿ ಆತನ ಕುಟುಂಬಸ್ಥರ ಕೈವಾಡವೂ ಇದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

ಇಂತಹದ್ದೇ ಒಂದು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿತ್ತು. ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪಿಎಸ್‌ಐ ವಿರುದ್ಧ ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸೂಲಿಬೆಲೆ ಪೊಲೀಸ್ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ವಿರುದ್ದ ಆತನ ಪತ್ನಿ ದೌರ್ಜನ್ಯ ಆರೋಪ ಮಾಡಿದ್ದು, ಅಪರಿಚಿತರನ್ನು ತಂದೆ, ತಾಯಿ ಎಂದು ಪರಿಚಯಿಸಿ 2021ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾದ ನಂತರ ಪಿಎಸ್‌ಐ ತಂದೆ ತನ್ನ ಮೇಲೆ ಹಲ್ಲೆ ನಡೆಸಿದ್ದು, ಮಾಂಗಲ್ಯ ಕಿತ್ತು ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ನೊಂದ ಮಹಿಳೆ ಆರೋಪ ಮಾಡಿದ್ದಾರೆ. ಇವಿಷ್ಟೇ ಅಲ್ಲದೇ, ಜ್ವರ ಬಂದಾಗ ಯಾವುದೋ ಟ್ಯಾಬ್ಲೇಟ್ ನೀಡಿ ಮನೆಯಲ್ಲಿ‌ ಬಲವಂತವಾಗಿ‌ ಕೂಡಿ ಹಾಕಿ ಗರ್ಭಪಾತ ಮಾಡಿಸಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳು ಸಾಮಾನ್ಯ, ಅಂತೆಯೇ ಜಗಳಗಳು. ಇದು ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುವುದಿದೆ. ಇದನ್ನು ತಪ್ಪಿಸಲು ಬೆಂಗಳೂರು ಪೊಲೀಸರು ಕೆಲವೊಂದು ಸಲಹೆಗಳನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (Viral Video) ಭಾರೀ ವೈರಲ್ ಆಗಿದೆ.

VISTARANEWS.COM


on

By

Viral Video
Koo

ಸಣ್ಣಪುಟ್ಟ ಘಟನೆಗಳು ರಸ್ತೆಯಲ್ಲಿ (road) ಕೆಲವೊಮ್ಮೆ ವಾಹನ (vehicle) ಸವಾರರ ನಡುವೆ ಜಗಳಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಇಂತಹ ಮಾತಿನ ಚಕಮಕಿಯ ಘಟನೆಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ ಇಂತಹ ಘಟನೆಗಳು ಮಾರಾಮಾರಿಗೂ (physical fights) ಕಾರಣವಾಗಿ, ವಾಹನಗಳಿಗೆ ಹಾನಿ, ವ್ಯಕ್ತಿಗಳಿಗೆ ಗಾಯವನ್ನು ಉಂಟು ಮಾಡುತ್ತದೆ. ಕೊಲೆ ನಡೆದಿದ್ದೂ ಇದೆ.

ಹೆಚ್ಚುತ್ತಿರುವ ಇಂತಹ ಪ್ರಕರಣಗಳ ನಡುವೆ ಬೆಂಗಳೂರು ಪೊಲೀಸರು (bengaluru police) ಈ ರೀತಿಯ ಘಟನೆಗಳನ್ನು ಹೇಗೆ ಎದುರಿಸಬೇಕು ಎಂದು ಸಾಮಾಜಿಕ ಜಾಲತಾಣದ (Viral Video) ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಸಲಹೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸ್ ಇಲಾಖೆ ಜಾಗೃತಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ರೀತಿಯ ಸಂದರ್ಭಗಳನ್ನು ಎದುರಿಸುವಾಗ ನಾವು ಶಾಂತವಾಗಿರುವುದು ಬಹಳ ಮುಖ್ಯ ಎಂದಿದ್ದಾರೆ. ಈ ವಿಡಿಯೋ ಕ್ಲಿಪ್ ಪ್ರಯಾಣಿಕರ ನಡುವಿನ ಜಗಳದಿಂದ ಪ್ರಾರಂಭವಾಗುತ್ತದೆ. ಇದು ಹಲವಾರು ಅಂಶಗಳನ್ನು ಒಳಗೊಂಡಿದೆ. ಇದೇ ರೀತಿಯ ಸಂದರ್ಭಗಳು ಬಂದರೆ ಪ್ರಯಾಣಿಕರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ನೀಡುತ್ತದೆ.

ರಸ್ತೆಯಲ್ಲಿ ವಾಹನ ಓಡಿಸುವಾಗ ಸುರಕ್ಷತೆ ಮೊದಲನೆಯದು. ಕೆಲವೊಂದು ಘಟನೆಗಳು ನಮಗೆ ಸಿಟ್ಟು ತರಿಸಬಹುದು. ಆದರೆ ಪರಿಸ್ಥಿತಿಗಳನ್ನು ಹೇಗೆ ಸುರಕ್ಷಿತವಾಗಿ ನಿರ್ವಹಿಸುವುದು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳಿಗಾಗಿ ನಮ್ಮ ಇತ್ತೀಚಿನ ವಿಡಿಯೋವನ್ನು ಪರಿಶೀಲಿಸಿ. ಮಾಹಿತಿಯಲ್ಲಿರಿ, ಸುರಕ್ಷಿತವಾಗಿರಿ ಎಂದು ವಿಡಿಯೋವನ್ನು ಹಂಚಿಕೊಳ್ಳುವಾಗ ಬೆಂಗಳೂರು ಪೊಲೀಸರು ಬರೆದಿದ್ದಾರೆ.

ಶಾಂತವಾಗಿರಿ ಜಗಳ ತಪ್ಪಿಸಿ

ಪ್ರಯಾಣಿಕರೇ ಶಾಂತವಾಗಿರಿ, ಇತರ ವ್ಯಕ್ತಿಗಳೊಂದಿಗೆ ಜಗಳವಾಡುವುದನ್ನು ತಪ್ಪಿಸಿ, ಅದನ್ನು ನೀವೇ ಪರಿಹರಿಸಲು ಪ್ರಯತ್ನಿಸಬೇಡಿ. ವಾಹನದ ವಿವರಗಳನ್ನು ಗಮನಿಸಿ, ತುರ್ತು ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮತ್ತು ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಿ ಎಂದು ಬೆಂಗಳೂರು ಪೊಲೀಸ್ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಮತ್ತು ಘಟನೆ ಅಥವಾ ವಾಹನದ ಫೋಟೋಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ವೀಕ್ಷಕರಿಗೆ ಹೇಳಿದ್ದಾರೆ. ಪೊಲೀಸರು ಬಂದಾಗ ಏನಾಯಿತು ಎಂಬುದರ ಕುರಿತು ನಿಮ್ಮ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಮತ್ತು ಇತರ ವ್ಯಕ್ತಿಗಳಿಗೆ ಅವರ ಅನಿಸಿಕೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಕೊನೆಯದಾಗಿ ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಿ ಎಂದು ಹೇಳಿದ್ದಾರೆ.

4 ಲಕ್ಷಕ್ಕೂ ಹೆಚ್ಚು ವೀಕ್ಷಣೆ

ಬೆಂಗಳೂರು ಪೊಲೀಸರು ಕೆಲವೇ ಗಂಟೆಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಪೋಸ್ಟ್ ಇನ್ ಸ್ಟಾಗ್ರಾಮ್ ನಲ್ಲಿ 4,05,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಕ್ಲಿಪ್ ಅನ್ನು ಎಕ್ಸ್ ನಲ್ಲೂ ಹಂಚಿಕೊಳ್ಳಲಾಗಿದೆ. ಹಲವಾರು ಬಳಕೆದಾರರು ಈ ಜಾಗೃತಿ ವಿಡಿಯೋ ಗೆ ಪೊಲೀಸರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ ಇಂತಹ ಘಟನೆಗಳು ಸಂಭವಿಸಿದಾಗ ಇಲಾಖೆಯು ಏನನ್ನೂ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದರು.

ಇದನ್ನೂ ಓದಿ: IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

ರಸ್ತೆ ಸುರಕ್ಷತೆಯ ಕುರಿತು ಬೆಂಗಳೂರು ಪೊಲೀಸರು ನೀಡಿರುವ ಸಾರ್ವಜನಿಕರಿಗೆ ಶಿಕ್ಷಣವನ್ನು ನಾನು ಇಷ್ಟಪಟ್ಟಿದ್ದೇನೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದೊಬ್ಬರು ತಮ್ಮ ಅನಿಸಿಕೆ ಬರೆದಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Viral News: ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ವೈರಲ್‌ ಆಗಿದೆ. ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.

VISTARANEWS.COM


on

Viral News
Koo

ನವದೆಹಲಿ: ಪ್ರಾಣಿಗಳ ಪ್ರಪಂಚ ಸದಾ ಕುತೂಹಲಕಾರಿಯಾಗಿರುತ್ತದೆ. ಕೌತುಕ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಪ್ರಾಣಿಗಳ ಚಲನವಲನ, ಬುದ್ಧಿವಂತಿಕೆ, ಬೇಟೆಯಾಡುವ ರೀತಿ ಇತ್ಯಾದಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ಇದಾಗಿದ್ದು, ನೆಟ್ಟಿಗರು ನೋಡಿ ರೋಮಾಂಚನಗೊಂಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಗಾದೆಯನ್ನು ಉದ್ಘರಿಸಿದ್ದಾರೆ (Viral News).

ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಹುಲ್ಲುಗಾವಲಿನಲ್ಲಿ ಕಾಡುಕೋಣವೊಂದು ಮೇಯುತ್ತಿರುತ್ತದೆ. ಆಗ ಅಲ್ಲಿಗೆ ಏಳೆಂಟು ಸಿಂಹಗಳ ಗುಂಪು ಲಗ್ಗೆ ಇಡುತ್ತದೆ. ಇಂದು ಭರ್ಜರಿ ಬೇಟೆ ಎಂದು ಲೆಕ್ಕ ಹಾಕುವ ಸಿಂಹಗಳ ಗುಂಪು ಕಾಡುಕೋಣವನ್ನು ಸುತ್ತುವರಿಯುತ್ತದೆ. ಕಾಡುಕೋಣ ಕಡಿಮೆ ಆಸಾಮಿಯೇನಲ್ಲ. ತನ್ನ ಬಳಿಗೆ ಬರುವ ಸಿಂಹಗಳನ್ನು ಬೆದರಿಸುತ್ತದೆ. ಅಲ್ಲಿಂದ ಓಡಿಸಲು ಯತ್ನಿಸುತ್ತದೆ.

ದೈತ್ಯದೇಹಿ ಕಾಡುಕೋಣವನ್ನು ಸುಲಭದಲ್ಲಿ ಸಿಂಹಗಳಿಗೆ ಮಣಿಸಲು ಸಾಧ್ಯವಾಗುವುದಿಲ್ಲ. ಅದು ಗುಟುರು ಹಾಕಿ ಒಂದು ಹೆಜ್ಜೆ ಮುಂದಿಟ್ಟಾಗ ಸಿಂಹಗಳು ಭಯದಿಂದ ಎರಡು ಹೆಜ್ಜೆ ಹಿಂದಿಡುತ್ತವೆ. ಕೊನೆ ಹೊಂಚು ಹಾಕಿ ಸಿಂಹವೊಂದು ಹಿಂದಿನಿಂದ ದಾಳಿ ನಡೆಸುತ್ತದೆ. ತನ್ನ ಮೇಲೆ ಎರಗಿದ ಶತ್ರುವನ್ನು ಕಾಡುಕೋಣ ಕೆಡವಲು ಯತ್ನಿಸುತ್ತದೆ. ಬಳಿಕ ಮೂರು ನಾಲ್ಕು ಸಿಂಹಗಳು ಒಮ್ಮೆಲೆ ದಾಳಿ ನಡೆಸಿದಾಗ ಕಾಡುಕೋಣ ತನ್ನ ಹಿಂಡಿನತ್ತ ಓಡುತ್ತದೆ. ಅಲ್ಲಿ ನೂರಾರು ಸಂಖ್ಯೆಯ ಕಾಡುಕೋಣಗಳು ಮೇಯುತ್ತಿರುತ್ತವೆ. ತಮ್ಮವನೊಬ್ಬ ಸಂಕಷ್ಟಕ್ಕೆ ಸಿಲುಕಿರುವುದನ್ನು ನೋಡಿ ಅವು ಓಡೋಡಿ ಬರುತ್ತವೆ.

ಕಾಡುಕೋಣಗಳ ಹಿಂಡನ್ನು ನೋಡಿ ಸಿಂಹದಂತಹ ಸಿಂಹಗಳಿಗೆ ನಡುಕ ಶುರುವಾಗುತ್ತದೆ. ಭರ್ಜರಿ ಬೇಟೆಯ ನಿರೀಕ್ಷೆಯಲ್ಲಿದ್ದ ಅವುಗಳು ಈಗ ಕಾಡುಕೋಣಗಳ ಸೈನ್ಯವನ್ನು ಕಂಡು ಭಯದಿಂದ ಒಂದೊಂದೆ ಹೆಜ್ಜೆ ಹಿಂದಿಡಲು ಆರಂಭಿಸುತ್ತವೆ. ಬಳಿಕ ಕಾಡುಕೋಣಗಳ ಗುಂಪು ಸಿಂಹಗಳನ್ನು ಅಟ್ಟಿಸಿಕೊಂಡು ಬರುತ್ತವೆ. ಬದುಕಿದ್ದರೆ ಬೇಡಿಯಾದರೂ ತಿನ್ನಬಹುದು ಎನ್ನುವಂತೆ ಜೀವ ಉಳಿಸಿಕೊಳ್ಳಲು ಸಿಂಹಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ನೆಟ್ಟಿಗರಿಂದ ಶಷಬ್ಬಾಸ್‌ಗಿರಿ

ವಿಡಿಯೊ ನೋಡಿದವರೆಲ್ಲ ಕಾಡುಕೋಣಗಳ ಒಗ್ಗಟ್ಟನ್ನು ಕೊಂಡಾಡುತ್ತಿದ್ದಾರೆ. ಈ ಮೂಕ ಪ್ರಾಣಿಗಳಿಂದ ನಾವು ನೋಡಿ ಕಲಿಯಬೇಕಾದದ್ದು ಬೇಕಾದಷ್ಟಿದೆ ಎಂದು ಕಮೆಂಟ್‌ ಮಾಡಿದ್ದಾರೆ. ʼʼಇಂತಹ ಒಗ್ಗಟ್ಟು ಮನುಷ್ಯರಲ್ಲಿ ಯಾಕಿಲ್ಲ?ʼʼ ಎಂದು ಒಬ್ಬರು ಕೇಳಿದ್ದಾರೆ.

ʼʼಅದೃಷ್ಟವಶಾತ್‌ ದಾಳಿಗೊಳಗಾದ ಈ ಎಳೆಯ ಕೋಣ ಹಿಂಡಿನಿಂದ ತುಂಬ ದೂರ ಹೋಗಿರಲಿಲ್ಲ. ಇಲ್ಲದಿದ್ದರೆ ಅದು ಸಿಂಹಗಳಿಗೆ ಆಹಾರವಾಗುತ್ತಿತ್ತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. “ಸಾವು ಬದುಕಿನ ನಿರ್ಧರಿಸುವ ಈ ನಿರ್ಣಾಯಕ ಘಟ್ಟದಲ್ಲಿ ಕಾಡುಕೋಣ ಉತ್ತಮ ನಡೆ ತೋರಿದೆ. ತನ್ನವರ ಬಳಿಗೆ ಸಾರಿ ಜೀವ ಉಳಿಸಿಕೊಂಡಿದೆʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಮೂಕ ಪ್ರಾಣಿಗಳ ಸಹಬಾಳ್ವೆ ಹಲವರಲ್ಲಿ ಸಕಾರಾತ್ಮಕ ಭಾವನೆ ಹುಟ್ಟುಹಾಕಿದ್ದಂತೂ ನಿಜ.

ಇದನ್ನೂ ಓದಿ: Viral Video: ಹುಲಿ ಬೆಕ್ಕಿನ ಹಿರಿಯಣ್ಣ ಎನ್ನುವುದು ಇದಕ್ಕೆ; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

Continue Reading

ವೈರಲ್ ನ್ಯೂಸ್

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

CP Yogeshwara: ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

VISTARANEWS.COM


on

nisha cp yogeshwara
Koo

ರಾಮನಗರ: ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್‌ (CP Yogeshwara) ಪುತ್ರಿ ನಿಶಾ (Nisha Yogeshwara) ಅವರು ತಮ್ಮ ತಂದೆಯ ವಿರುದ್ಧ ರೊಚ್ಚಿಗೆದ್ದಿದ್ದು, ಹಲವಾರು ವಿಡಿಯೋಗಳ ಮೂಲಕ ಇನ್‌ಸ್ಟಗ್ರಾಂನಲ್ಲಿ (Social media) ಸಾರ್ವಜನಿಕವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಂದೆ ತಮ್ಮ ಮೇಲೆ ಹಲ್ಲೆ (Assault) ಮಾಡುತ್ತಾರೆ, ತಮ್ಮ ಕುಟುಂಬವನ್ನು, ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ನಿಶಾ (ಈ ಪೋಸ್ಟ್‌ಗಳಲ್ಲಿ ಆರೋಪಿಸಿದ್ದಾರೆ. ಅವರ ಈ ಪೋಸ್ಟ್‌ಗಳು ವೈರಲ್‌ (viral video) ಆಗಿವೆ.

ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಯೋಗೇಶ್ವರ್ ಮಕ್ಕಳಾದ ತಮ್ಮನ್ನು ದೂರ ಮಾಡಿದ್ದಾರೆ. ಮನೆಗೆ ಹೋದರೆ ತಮ್ಮ ಮೇಲೆ ಹಲ್ಲೆ ಮಾಡ್ತಾರೆ. ಅವರನ್ನು ಮಾತನಾಡಿಸಲು ಹೋದರೆ ರಪರಪ ಎಂದು ಹೊಡೆಯುತ್ತಾರೆ. ಏನಾರೂ ಕೇಳಿದರೆ, ನಮ್ಮ ಬಳಿ ಬರಬೇಡ, ಬೇಕಾದರೆ ಭಿಕ್ಷೆ ಮಾಡಿಕೊಂಡು ಜೀವನ ಮಾಡು ಎನ್ನುತ್ತಾರೆ. ನಮಗೆ ತಂದೆಯ ಪ್ರೀತಿ ಸಿಗಲಿಲ್ಲ, ಅವರು ಆದರ್ಶ ಅಪ್ಪನಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ರಾಮಾಯಣದ ಕಥೆ ಹೇಳಿ, ಕುಟುಂಬದಲ್ಲಿರುವ ಜಗಳವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ʼನಿಶಾ ಯೋಗೇಶ್ವರ್‌ʼ ಎಂದು ಬಳಸುತ್ತಿರುವ ತನ್ನ ಹೆಸರಿನಲ್ಲಿ ʼಯೋಗೇಶ್ವರ್ʼ ಹೆಸರು ಬಳಸದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧಮಕಿ ಹಾಕುತ್ತಿದ್ದಾರೆ. ತನ್ನ ತಾಯಿ ಯೋಗೇಶ್ವರ್‌ ಅವರ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ಆದರೆ ತಂದೆ, ತಾಯಿಗೆ ಕಪಾಳಮೋಕ್ಷ ಮಾಡಿದರು. ತನ್ನ ತಮ್ಮನಿಗೂ ಥಳಿಸಿದ್ದಾರೆ. ಮೊದಲ ಪತ್ನಿ ಹಾಗೂ ಮಕ್ಕಳನ್ನು ಯೋಗೇಶ್ವರ್‌ ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಅಳಲು ತೋಡಿಕೊಂಡಿದ್ದಾಎ.

20 ವರ್ಷ ಹಿಂದೆ ನಮಗೆ ಹೇಳದೆ ಕೇಳದೆ ತಂದೆ ಬೇರೆ ಸಂಸಾರ ಕಟ್ಟಿಕೊಂಡರು. ಆದರ್ಶ ಮಗಳಾಗು ಎಂದು ನನಗೆ ಹೇಳುತ್ತಾರೆ. ಅವರು ಆದರ್ಶ ತಂದೆಯಾಗಬೇಕಲ್ಲವೇ? ಮೊದಲನೇ ಮದುವೆಯ ಮಕ್ಕಳನ್ನು ಬೆಳೆಸಬೇಕಲ್ಲವೇ? ಇಂಥ ತಂದೆಯ ಜೊತೆಗೆ ಹೇಗಿರಲಿ? ಎಂದು ಯೋಗೇಶ್ವರ್ ಎರಡನೇ ಪತ್ನಿ, ಮಕ್ಕಳ ಬಗ್ಗೆ ಪ್ರಸ್ತಾಪ ಮಾಡಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Continue Reading
Advertisement
IPL 2024
ಕ್ರೀಡೆ2 hours ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Harish Poonja
ಕರ್ನಾಟಕ3 hours ago

Harish Poonja: ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಶಾಸಕ ಹರೀಶ್‌ ಪೂಂಜಾ

IPL 2024
ಕ್ರೀಡೆ3 hours ago

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

Mother Dies
ಕರ್ನಾಟಕ4 hours ago

Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

young womans lover was stabbed in the neck by an ex lover
ಉತ್ತರ ಕನ್ನಡ4 hours ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ4 hours ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ5 hours ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ5 hours ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ20 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌