Khelo India: ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದ ನಟ ಮಾಧವನ್ ಪುತ್ರ ವೇದಾಂತ್ - Vistara News

ಕ್ರೀಡೆ

Khelo India: ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದ ನಟ ಮಾಧವನ್ ಪುತ್ರ ವೇದಾಂತ್

ಬಹುಭಾಷಾ ನಟ ಆರ್ ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಖೇಲೋ ಇಂಡಿಯಾ(Khelo India) ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

VISTARANEWS.COM


on

vedaant madhavan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್(ಮಧ್ಯಪ್ರದೇಶ): ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ(Khelo India) ಯೂತ್ ಗೇಮ್ಸ್‌ನಲ್ಲಿ ನಟ ಆರ್ ಮಾಧವನ್(R. Madhavan) ಅವರ ಪುತ್ರ ವೇದಾಂತ್ ಮಾಧವನ್(vedaant madhavan) ಚಿನ್ನದ ಪದಕ್ಕೆ ಕೊರಳೊಡ್ಡಿದ್ದಾರೆ. 200 ಮೀಟರ್​ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ವೇದಾಂತ್ ಮಾಧವನ್, ‘ಖೇಲೋ ಇಂಡಿಯಾ ನನ್ನ ಮೆಚ್ಚಿನ ಸ್ಪರ್ಧೆಗಳಲ್ಲಿ ಒಂದಾಗಿದೆ. ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಡಬೇಕು ಎಂಬುದು ನನ್ನ ಕನಸು. ಇದಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದರು.

2022ರಲ್ಲಿ ಡೆನ್ಮಾರ್ಕ್‌ನ ಕೋಪನ್‌ ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್ ಈಜುಕೂಟದಲ್ಲಿ 800 ಮೀಟರ್ಸ್‌ ಹಾಗೂ 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇದಾಂತ್‌ ಮಾಧವನ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು. 800 ಮೀಟರ್ಸ್ ಗುರಿಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ತಲುಪಿ ವಿಶೇಷ ದಾಖಲೆ ಬರೆದಿದ್ದರು.

ಇದನ್ನೂ ಓದಿ Sania Mirza: ಅಬುಧಾಬಿ ಓಪನ್‌; ಮೊದಲ ಸುತ್ತಿನಲ್ಲೇ ಸೋಲು ಕಂಡ ಸಾನಿಯಾ ಮಿರ್ಜಾ ಜೋಡಿ

ಕಳೆದ ವರ್ಷ ಒಡಿಶಾದಲ್ಲಿ ನಡೆದಿದ್ದ 48ನೇ ಜೂನಿಯರ್​ ರಾಷ್ಟ್ರೀಯ ಅಕ್ವಾಟಿಕ್​ ಚಾಂಪಿಯನ್​ಶಿಪ್​​ನಲ್ಲಿ 1500 ಮೀಟರ್​ ಫ್ರೀಸ್ಟೈಲ್​​​​ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆಯುವುದರ jತೆಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಕೇವಲ 16:01.73 ಸೆಕೆಂಡ್​​​ನಲ್ಲಿ ಗುರಿ ತಲುಪಿ ಇತಿಹಾಸ ಸೃಷ್ಟಿಸಿದ್ದರು. ಸದ್ಯ ಈಜಿನಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಅವರು ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದರೂ ಅಚ್ಚರಿಯಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Manu Bhaker : ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Manu Bhaker
Koo

ನವದೆಹಲಿ: 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಮೆಡಲ್​ಗಳ ಖಾತೆ ತೆರೆದ ಹರಿಯಾಣದ ಮನು ಭಾಕರ್ (Manu Bhaker) ಅವರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಅವರಾಗಿದ್ದಾರೆ.

ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಹರಿಯಾಣದ ಮಗಳಿಂದ ಇಡೀ ದೇಶ ನಿರೀಕ್ಷಿಸುತ್ತಿದ್ದ ಪದಕದ ಭರವಸೆ ಈಡೇರಿದೆ ಎಂದು ಹೇಳಿದ್ದಾರೆ.

ದೇಶದ ಹೆಮ್ಮೆಯ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್​ನಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ ಎಂದು ಸೈನಿ ಪೋಸ್ಟ್ ಮಾಡಿದ್ದಾರೆ.

ಇಂದು, 22 ವರ್ಷದ ಮನು ಭಾಕರ್ ಇಡೀ ದೇಶ ಮತ್ತು ಹರಿಯಾಣ ರಾಜ್ಯವು ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಬ್ಬ ಹರ್ಯಾಣ ಜನ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಎಕ್ಸ್ ಗೆ ತೆರಳಿ ಮಹಿಳಾ ಅಥ್ಲೀಟ್ ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

“ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೂಟಿಂಗ್​​ನಲ್ಲಿ 12 ವರ್ಷಗಳ ಪದಕಗಳ ಬರವನ್ನು ಕೊನೆಗೊಳಿಸಿದ್ದಾರೆ. ಈ ಸಾಧನೆಯೊಂದಿಗೆ ಮನು ಭಾಕರ್​ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ ಮತ್ತು “ಭಾರತಕ್ಕೆ ಮೊದಲ ಪದಕ ಪಡೆದ ಮನು ಭಾಕರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Continue Reading

ಕ್ರೀಡೆ

Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

Paris Olympics Boxing: ನಿಖತ್ ಅವರು 16ರ ಘಟ್ಟದ ಪಂದ್ಯದಲ್ಲಿ ಚೀನಿ ಬಾಕ್ಸರ್ ಸವಾಲು ಮೆಟ್ಟಿ ನಿಂತರೆ ಕ್ವಾರ್ಟರ್-ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಬಹುದು.

VISTARANEWS.COM


on

Paris Olympics boxing
Koo

ಪ್ಯಾರಿಸ್​: ಎರಡು ಬಾರಿಯ ವಿಶ್ವ ಚಾಂಪಿಯನ್, ಬಾಕ್ಸರ್​ ನಿಖತ್ ಜರೀನ್(Nikhat Zareen) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಶುಭಾರಂಭ ಕಂಡಿದ್ದಾರೆ. ಮಹಿಳೆಯರ 50 ಕೆಜಿ ಬಾಕ್ಸಿಂಗ್​(Paris Olympics boxing) ವಿಭಾಗದ 32ರ ಘಟ್ಟದ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು 5-0 ಅಂತರದಿಂದ ಮಣಿಸಿ ಅಂತಿಮ 16ರ ಸುತ್ತಿಗೇರಿದ್ದಾರೆ. ಆದರೆ ಈ ಸುತ್ತಿನಲ್ಲಿ ಅವರಿಗೆ ಅಗ್ರ ಶ್ರೇಯಾಂಕದ, ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು( Chinese Wu Yu) ಅವರ ಕಠಿಣ ಸವಾಲು ಎದುರಾಗಿದೆ. ಈ ಪಂದ್ಯ ಗುರುವಾರ ನಡೆಯಲಿದೆ.

ನಿಖತ್ ಅವರು 16ರ ಘಟ್ಟದ ಪಂದ್ಯದಲ್ಲಿ ಚೀನಿ ಬಾಕ್ಸರ್ ಸವಾಲು ಮೆಟ್ಟಿ ನಿಂತರೆ ಕ್ವಾರ್ಟರ್-ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಬಹುದು. ಇಂದು ನಡೆದ 32ರ ಘಟ್ಟದ ಪಂದ್ಯದಲ್ಲಿ ನಿಖರ್​ ಅವರ ಆಕ್ರಮಣಕಾರಿ ಹೋರಾಟ ಮತ್ತು ಅಚಲವಾದ ಆತ್ಮವಿಶ್ವಾಸವನ್ನು ನೋಡುವಾಗ ಅವರು ಮುಂದಿನ ಪಂದ್ಯದಲ್ಲಿಯೂ ಗೆಲ್ಲುವ ಸೂಚನೆ ಲಭಿಸಿದೆ.

ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಪ್ರೀತಿ ಕೂಡ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) ವಿರುದ್ಧ 5-0 ಅಂತರದ ಗೆಲುವು ಸಾಧಿಸಿದ್ದರು.

ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್​ ಗೇಮ್ಸ್‌ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್‌ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ. ಒಲಿಂಪಿಕ್ಸ್​ ಕ್ರೀಡಾಕೂಟಕ್ಕೂ ಮುನ್ನ ಪ್ರೀತಿ ಅನಾರೋಗ್ಯಕ್ಕೊಳಗಾಗಿದ್ದರು. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದರೂ ಕೂಡ ಮೊದಲ ಸುತ್ತಿನಲ್ಲಿ ಅವರು ನಡೆಸಿದ ಹೋರಾಟ ಮತ್ತು ಅಸಾಧಾರಣ ಧೈರ್ಯವನ್ನು ಮೆಚ್ಚಲೇ ಬೇಕು. ಎದುರಾಳಿಗೆ ಒಂದಕ್ಕವನ್ನು ಕೂಡ ಬಿಟ್ಟುಕೊಡದೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಅಧಿಕಾರಯುತ ಗೆಲುವು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ Paris Olympics Shooting: ಭಾರತಕ್ಕೆ​ ಒಲಿಯಿತು ಮೊದಲ ಪದಕ; ಕಂಚು ಗೆದ್ದ ಶೂಟರ್​ ಮನು ಭಾಕರ್

ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಲರಾಜ್


ಭಾನುವಾರ ಬೆಳಗ್ಗೆ ನಡೆದಿದ್ದ ರೋಯಿಂಗ್​ ಸ್ಪರ್ಧೆಯಲ್ಲಿ(Paris Olympics 2024) ಭಾರತದ ಏಕೈಕ ಭರವಸೆ ಎನಿಸಿಕೊಂಡಿರುವ ಬಾಲರಾಜ್​ ಪನ್ವರ್(Rower Balraj Panwar)​ ಇಂದು ನಡೆದ ಪುರುಷರ ಸಿಂಗಲ್ಸ್​ ಸ್ಕಲ್ಸ್​ ವಿಭಾಗದ ರಿಪಿಚೇಜ್‌ ಸುತ್ತಿನಲ್ಲಿ 7 ನಿಮಿಷ 12.41 ಸೆಂಕಡ್​ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ಪದಕದಾಸೆಯನ್ನು ಜೀವಂತವಿರಿಸಿದ್ದಾರೆ. ರಿಪಿಚೇಜ್‌ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆದ ಆಟಗಾರರಿಗೆ ಕ್ವಾರ್ಟರ್​ ಫೈನಲ್​ ಅರ್ಹತೆ ಲಭಿಸುತ್ತದೆ.

7 ನಿಮಿಷ 10 ಸೆಂಕಡ್​ನಲ್ಲಿ ಗುರಿ ಮುಟ್ಟಿದ ಮೊನಕೊ ದೇಶದ ಕ್ವೆಂಟಿನ್ ಆಂಟೊಗ್ನೆಲ್ಲಿ ಮೊದಲ ಸ್ಥಾನ ಪಡೆದರು. ಕೇವಲ 2 ಸೆಂಕಡ್​ಗಳ ಅಂತರದಲ್ಲಿ ಭಾರತದ ನಾವಿಕ ಬಾಲರಾಜ್ ಮೊದಲ ಸ್ಥಾನದಿಂದ ವಂಚಿತರದಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.

Continue Reading

ಕ್ರಿಕೆಟ್

IPT 12: ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ʻIPT 12ʼ ಕ್ರಿಕೆಟ್ ಟ್ರೋಫಿ, ಜೆರ್ಸಿ ಅನಾವರಣ

IPT 12: ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ಕೊಟ್ಟಿದ್ದಾರೆ.

VISTARANEWS.COM


on

Unveiling of IPT 12 Cricket Trophy, Jersey by N1 Cricket Academy
Koo

ಬೆಂಗಳೂರು: ಕಿರುತೆರೆ ಕಲಾವಿದರಿಗಾಗಿ TPL-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ‘ಎನ್ 1’ ಕ್ರಿಕೆಟ್ ಅಕಾಡೆಮಿಯು ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ಕೊಟ್ಟಿದ್ದಾರೆ.

ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಫ್ಯಾಷನ್ ಡಿಸೈನರ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಇದಾಗಿದೆ. ಈ ಪಂದ್ಯಾವಳಿಯ ಟ್ರೋಫಿ ಹಾಗೂ ಜೆರ್ಸಿ ಬಿಡುಗಡೆ ಮಾಡಲಾಯಿತು,. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರಣಮ್ ದೇವರಾಜ್, ಶರಣ್ಯ ಶೆಟ್ಟಿ ಸೇರಿದಂತೆ ಚಿತ್ರರಂಗದ ಕಲಾವಿದರು, ಎಲ್ಲಾ ತಂಡದ ನಾಯಕರು ಮತ್ತು ಬ್ರ್ಯಾಂಡ್ ಅಂಬಾಸಿಡರ್ ಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಬಳಿಕ ಮಾತನಾಡಿದ ನಟ ಪ್ರಣಂ ದೇವರಾಜ್ ಮಾತನಾಡಿ, ʻʻಸುನಿಲ್ ಅವರು ಪ್ರತಿ ವರ್ಷ ಈ ರೀತಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ನಾವು ಮಾಧ್ಯಮದರು ಒಟ್ಟಿಗೆ ಕ್ರಿಕೆಟ್ ಆಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಕಷ್ಟು ತಂಡಗಳು ಆಡುತ್ತಿದ್ದಾರೆ. ನಮ್ಮ ದೇಶದಲ್ಲಿ ಜನರನ್ನು ಒಂದು ಮಾಡಲು ಕ್ರಿಕೆಟ್ ಹಾಗು ಸಿನಿಮಾದಿಂದ ಮಾತ್ರ ಸಾಧ್ಯ. ಕ್ರಿಕೆಟ್ ನಿಂದ ಸುನಿಲ್ ನಮ್ಮನ್ನೆಲ್ಲಾ ಒಂದು ಮಾಡುತ್ತಿದ್ದಾರೆʼ ಎಂದು ತಿಳಿಸಿದರು.

ಇದನ್ನೂ ಓದಿ: ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ಎನ್ 1 ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕ ಸುನಿಲ್ ಕುಮಾರ್ ಬಿ ಆರ್ , ಎಲ್ಲಾ ತಂಡಗಳಿಗೂ ಆಲ್ ದಿ ಬೆಸ್ಟ್ ತಿಳಿಸಿದರು.

ಯಾವ ಯಾವ ತಂಡಗಳಿವೆ?
1.GLR ವಾರಿಯರ್ಸ್
ಲೂಸ್ ಮಾದ ಯೋಗಿ -ನಾಯಕ
ರಾಜೇಶ್.ಎಲ್-ಮಾಲೀಕರು

  1. ಅಶ್ವಸೂರ್ಯ ರೈಡರ್ಸ್
    ಹರ್ಷ ಸಿಎಂ ಗೌಡ – ನಾಯಕ
    ರಂಜಿತ್ ಕುಮಾರ್ ಎಸ್ – ಮಾಲೀಕರು

3.ದಿ ಬುಲ್ ಸ್ಕ್ವಾಡ್
ಶರತ್ ಪದ್ಮನಾಭ್- ನಾಯಕ
ಮೋನಿಶ್- ಮಾಲೀಕರು

4.ಬಯೋಟಾಪ್ ಲೈಫ್ ಸೆವಿಯರ್ಸ್
ಅಬ್ರಾರ್ ಮೊಹಮ್ಮದ್-ನಾಯಕ
ಪ್ರಸನ್ನ ವಿ, ಡಾ.ವಿಶ್ವನಾಥ್,
ವಿನು ಜೋಸ್ -ಮಾಲೀಕರು

5.ಶ್ರೀಲಂಕಾ ಲಾಯರ್ಸ್ ಕ್ರಿಕೆಟ್
ಕುಸನ್-ನಾಯಕ
ಮನೀಶ್ ಅಧ್ಯಕ್ಷರು
ಬುವನೇಕ ಉಪಾಧ್ಯಕ್ಷ

  1. S/ o ಮುತ್ತಣ್ಣ ಮಿಡಿಯಾ ಟೀಮ್
    ಸದಾಶಿವ ಶೆಣೈ-ನಾಯಕ
    ಪುರಾತನ‌‌ ಫಿಲ್ಮಂಸ್-ಮಾಲೀಕರು
  2. ಭಾರತೀಯ ವಕೀಲರ ತಂಡ
    ಅರವಿಂದ್ ವೆಂಕಟೇಶ್ ರೆಡ್ಡಿ-ನಾಯಕ
    ಶಿಲೇಶ್ ಕುಮಾರ್ -ಮಾಲೀಕರು

8.ಫ್ಯಾಶನ್ ಮೇವರಿಕ್ಸ್
ಫಹೀಮ್ ರಾಜ-ನಾಯಕ
ಪ್ರಶಾಂತ್ ಕೆ ಎಂ-ಮಾಲೀಕರು

ಎವಿಆರ್ ಗ್ರೂಪ್ಸ್ ವತಿಯಿಂದ ಎಚ್ ವೆಂಕಟೇಶ್ ರೆಡ್ಡಿರವರು IPT12 ಕ್ರಿಕೆಟ್ ಟೂರ್ನಮೆಂಟ್ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಸದ್ಯ ಜೆರ್ಸಿ ಹಾಗೂ ಟ್ರೋಫಿ ಅನಾವರಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಪ್ರಾಕ್ಟಿಸ್ ಗಾಗಿ ತಂಡಗಳು ಬ್ಯಾಟ್ ಬಾಲು ಹಿಡಿದು ಅಖಾಡಕ್ಕೆ ಇಳಿಯಲಿವೆ.

Continue Reading

ಕ್ರೀಡೆ

Paris Olympics Shooting: ಭಾರತಕ್ಕೆ​ ಒಲಿಯಿತು ಮೊದಲ ಪದಕ; ಕಂಚು ಗೆದ್ದ ಶೂಟರ್​ ಮನು ಭಾಕರ್

Paris Olympics Shooting: 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು. ಆದರೆ ಅವರಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

VISTARANEWS.COM


on

Paris Olympics Shooting
Koo

ಪ್ಯಾರಿಸ್​: ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪಿಸ್ತೂಲ್​ ದೋಷದಿಂದ ಹಿನ್ನಡೆ ಅನುಭವಿಸಿದ್ದ ಶೂಟರ್​ ಮನು ಭಾಕರ್(Manu Bhaker)​ ಇದೀಗ ಪ್ಯಾರಿಸ್(Paris Olympics Shooting)​ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಪದಕವೊಂದನ್ನು ಗೆದ್ದು ಸಂಭ್ರಮಿಸಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್​ ಪಂದ್ಯದಲ್ಲಿ 221.7 ಅಂಕ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ. ಕೊರಿಯಾದ ಶೂಟರ್​ಗಳಾದ ಓಹ್ ಯೇ ಜಿನ್(243.2), ಕಿಮ್​ ಯೆಜಿ(241.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು. ಆದರೆ ಅವರಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮನು ಭಾಕರ್​ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶೂಟಿಂಗ್​ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಶೂಟರ್​ ಎನ್ನುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು.

ಅಂದು ನಿರಾಸೆ… ಇಂದು ಖುಷಿ

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್​ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್​ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈಗ ಪ್ಯಾರಿಸ್​ನಲ್ಲಿ ಪದಕ ಗೆಲ್ಲುವ ಮೂಲಕ ನೀಗಿಸಿಕೊಂಡರು.

ನಿರೀಕ್ಷೆಯಂತೆ ಪದಕ ಗೆದ್ದ ಮನು


ಹರಿಯಾಣದ 22 ವರ್ಷದ ಮನು ಭಾಕರ್​ ಕಳೆದ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಅಂಕ ಕಲೆ ಹಾಕಿ 3ನೇ ಸ್ಥಾನದೊಂದಿಗೆ ಫೈನಲ್​ಗೆ ಪ್ರವೇಶಿಸಿದ್ದರು. ಈ ಬಾರಿಯ ಒಲಿಂಪಿಕ್ಸ್​ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್​ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

Continue Reading
Advertisement
Decline of Vultures
ಆರೋಗ್ಯ9 mins ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ15 mins ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sugar Vs Jaggery In Tea
ಆರೋಗ್ಯ35 mins ago

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Manu Bhaker
ಪ್ರಮುಖ ಸುದ್ದಿ45 mins ago

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

theft case
ಚಿತ್ರದುರ್ಗ52 mins ago

Theft Case : ಹಂದಿ ಕಳವು ವೇಳೆ ಪೊಲೀಸರಿಗೆ ಕಲ್ಲು ತೂರಿ ಎಸ್ಕೇಪ್‌ ಆಗಿದ್ದ ಆಂಧ್ರ ಗ್ಯಾಂಗ್‌ನ ಸದಸ್ಯ ಅರೆಸ್ಟ್‌

Paris Olympics boxing
ಕ್ರೀಡೆ1 hour ago

Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

Unveiling of IPT 12 Cricket Trophy, Jersey by N1 Cricket Academy
ಕ್ರಿಕೆಟ್1 hour ago

IPT 12: ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ʻIPT 12ʼ ಕ್ರಿಕೆಟ್ ಟ್ರೋಫಿ, ಜೆರ್ಸಿ ಅನಾವರಣ

Bengaluru South District
ಕರ್ನಾಟಕ1 hour ago

Bengaluru South District: ರಾಮನಗರ ಮರು ನಾಮಕರಣಕ್ಕೆ ಹಿಂದು ಜನಜಾಗೃತಿ ಸಮಿತಿ ತೀವ್ರ ವಿರೋಧ; ಉಗ್ರ ಪ್ರತಿಭಟನೆ ಎಚ್ಚರಿಕೆ

ಪ್ರಮುಖ ಸುದ್ದಿ1 hour ago

UPSC Coaching : ನೈತಿಕತೆಯ ಪಾಲನೆ ವಿಚಾರದಲ್ಲಿ ಶ್ರೀರಾಮನಿಗಿಂತ ಅಕ್ಬರನೇ ಶ್ರೇಷ್ಠ ಎಂದ ಯುಪಿಎಸ್​ಸಿ ಬೋಧಕಿ ಶುಭ್ರಾ ರಂಜನ್; ಕೇಸ್​ ದಾಖಲಾದ ಬಳಿಕ ಕ್ಷಮೆ ಕೋರಿಕೆ

Murder case
ಕಲಬುರಗಿ1 hour ago

Murder case : ಊಟ ಕೊಡಿಸುವ ನೆಪದಲ್ಲಿ ಕರೆದೊಯ್ದು ಮಹಿಳೆಯನ್ನು ಕೊಂದು, ಸುಟ್ಟು ಹಾಕಿದ ಕಿರಾತಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant attack
ಮಳೆ2 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ5 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ23 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

ಟ್ರೆಂಡಿಂಗ್‌