ವಾರದ ವ್ಯಕ್ತಿಚಿತ್ರ: ಮದ್ರಾಸ್ ಹೈಕೋರ್ಟ್‌ ಜಡ್ಜ್ ಗೌರಿ; ಹೋರಾಟವೇ ಇವರ ಹಾದಿ - Vistara News

ಅಂಕಣ

ವಾರದ ವ್ಯಕ್ತಿಚಿತ್ರ: ಮದ್ರಾಸ್ ಹೈಕೋರ್ಟ್‌ ಜಡ್ಜ್ ಗೌರಿ; ಹೋರಾಟವೇ ಇವರ ಹಾದಿ

ವಾರದ ವ್ಯಕ್ತಿಚಿತ್ರ: ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಿಕ್ಟೋರಿಯಾ ಗೌರಿ ಅವರು ನೇಮಕಗೊಂಡಿದ್ದಾರೆ. ಆದರೆ, ನೇಮಕಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ನೇಮಕ, ವಿವಾದ, ನ್ಯಾ. ವಿಕ್ಟೋರಿಯಾ ಗೌರಿ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Justice Victoria Gowri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಬಿ. ಸೋಮಶೇಖರ್‌, ಬೆಂಗಳೂರು

ಜೋರು ಧ್ವನಿ, ಕಾನೂನು ಪಾಂಡಿತ್ಯ, ಸಾರ್ವಜನಿಕವಾಗಿ ನಿರರ್ಗಳವಾದ ಭಾಷಣ, ಅಲ್ಲಲ್ಲಿ ಸ್ವಲ್ಪ ವಿವಾದ, ಬಿಜೆಪಿ ಜತೆಗಿನ ನಂಟು… ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅರ್ಥಾತ್‌ ಎಲ್. ವಿಕ್ಟೋರಿಯಾ ಗೌರಿ ಅವರು ಫೆಬ್ರವರಿ ೭ರಂದು ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ತಮಿಳುನಾಡಿನ ಜನರ ಹೊರತಾಗಿ ಬೇರೆಡೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ, ನ್ಯಾ. ವಿಕ್ಟೋರಿಯಾ ಗೌರಿ ಅವರ ಹೆಸರು ಈಗ ದೇಶದೆಲ್ಲೆಡೆ ಪಸರಿಸಿದೆ. ಬಿಜೆಪಿ ಜತೆಗೆ ನಂಟು ಹೊಂದಿದ್ದ, ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿದ್ದ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ಜಡ್ಜ್‌ ಆಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಹಾಗಾಗಿ, ವಿಕ್ಟೋರಿಯಾ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ವಿಕ್ಟೋರಿಯಾ ಗೌರಿ ಅವರ ನೇಮಕ ವಿವಾದ ಉಂಟಾಗಿದ್ದು ಏಕೆ? ಅವರ ವಿರುದ್ಧ ಅರ್ಜಿ ಸಲ್ಲಿಕೆಯಾಗಿದ್ದು ಏಕೆ? ಅಷ್ಟಕ್ಕೂ, ಇವರು ಯಾರು ಎಂಬುದರ ಮಾಹಿತಿ ಇಲ್ಲಿದೆ.

ಯಾರಿವರು ವಿಕ್ಟೋರಿಯಾ ಗೌರಿ?

ಕನ್ಯಾಕುಮಾರಿ ಜಿಲ್ಲೆಯ ಕುಗ್ರಾಮವೊಂದರಲ್ಲಿ ೧೯೭೩ರ ಮೇ ೨೧ರಂದು ಜನಿಸಿದ ವಿಕ್ಟೋರಿಯಾ ಗೌರಿ ಅವರದ್ದು ಹೋರಾಟದ ಹಾದಿ. ಮದುರೈ ಕಾನೂನು ಕಾಲೇಜ್‌ನಲ್ಲಿ ಓದಿ, ೧೯೯೫ರಲ್ಲಿ ನ್ಯಾಯವಾದಿಯಾಗಿ ನೋಂದಣಿ ಮಾಡಿಕೊಂಡ ಅವರು ಸಿವಿಲ್‌, ಕ್ರಿಮಿನಲ್‌, ತೆರಿಗೆ ಹಾಗೂ ಕಾರ್ಮಿಕರ ಪ್ರಕರಣಗಳ ಕುರಿತು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ವಕೀಲಿಕೆಯಲ್ಲಿ ೨೧ ವರ್ಷ ಅನುಭವ ಹೊಂದಿರುವ ೪೯ ವರ್ಷದ ವಿಕ್ಟೋರಿಯಾ ಗೌರಿ ಅವರೀಗ ಉನ್ನತ ಹುದ್ದೆಗೆ ಏರಿದ್ದಾರೆ. ಇವರು ತುಳಸಿ ಮುತ್ತುರಾಮ್‌ ಎಂಬುವರನ್ನು ಮದುವೆಯಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ ಸ್ವೀಕರಿಸಿದರು.

ಸ್ವಂತ ಕಚೇರಿ ಹೊಂದಿದ ಮೊದಲ ವಕೀಲೆ

ಬಡ ಕುಟುಂಬದಲ್ಲಿ ಜನಿಸಿ, ಶಿಕ್ಷಣವೊಂದನ್ನೇ ಆಧಾರವನ್ನಾಗಿಸಿಕೊಂಡ ವಿಕ್ಟೋರಿಯಾ ಗೌರಿ ಅವರು ಕನ್ಯಾಕುಮಾರಿಯಲ್ಲಿ ಸ್ವಂತ ಕಚೇರಿ ಹೊಂದಿದ ಮೊದಲ ವಕೀಲೆ ಎಂಬ ಖ್ಯಾತಿ ಗಳಿಸಿದ್ದಾರೆ. ಲಿಟಲ್‌ ಫ್ಲವರ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ, ಮದುರೈ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಎಲ್‌ಎಲ್‌ಬಿ, ಕೊಡೈಕೆನಲ್‌ನಲ್ಲಿರುವ ಮದರ್‌ ಥೆರೆಸಾ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದರು. ಕಾನೂನಿನಲ್ಲಿ ಹೆಚ್ಚು ಆಸಕ್ತಿಯಿದ್ದ ಕಾರಣ ಮೊದಲಿಗೆ ಕರೂರ್‌ನಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದರು. ಇದಾದ ಬಳಿಕ ಕನ್ಯಾಕುಮಾರಿ ಜಿಲ್ಲಾ ನ್ಯಾಯಾಲಯದ ವಕೀಲೆಯಾಗಿ ಕಾರ್ಯಾರಂಭ ಮಾಡಿದರು. ಅಲ್ಲದೆ, ೨೦೦೬ರಲ್ಲಿ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಇವರು ವಕೀಲಿಕೆ ಆರಂಭಿಸಿದರು.

ಸಮಾಜ ಸೇವೆಯಲ್ಲೂ ಆಸಕ್ತಿ

ಅಧ್ಯಾತ್ಮ ಗುರು ಮಾತಾ ಅಮೃತಾನಂದಮಯಿ ಅವರ ಅನುಯಾಯಿಯಾಗಿರುವ ವಿಕ್ಟೋರಿಯಾ ಗೌರಿ ಅವರು ಸಮಾಜ ಸೇವೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಹಾಗಾಗಿಯೇ, ಅವರು ಮಾಂಗಯಾರ್‌ ಮಂಗಳಂ ಎನ್‌ಜಿಒದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಕನ್ಯಾಕುಮಾರಿ ಜಿಲ್ಲೆಯ ಅತ್ಯುತ್ತಮ ಸಮಾಜ ಸೇವಕಿ ಎಂಬ ಪ್ರಶಸ್ತಿಯೂ ಲಭಿಸಿದೆ.

ಬಿಜೆಪಿ ಜತೆಗೆ ನಂಟು, ರಾಜಕೀಯವಾಗಿಯೂ ಏಳಿಗೆ

ಭಾಷಣ, ಪ್ರಖರ ವಾದ ಮಂಡನೆ, ನಂಬಿದ ವಿಚಾರಗಳನ್ನು ಸ್ಫುಟವಾಗಿ ಮಂಡಿಸುವ ವಿಕ್ಟೋರಿಯಾ ಗೌರಿ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಅಲ್ಲದೆ, ತಮ್ಮ ಕೌಶಲಗಳನ್ನೇ ಏಣಿಯಾಗಿ ಮಾಡಿಕೊಂಡ ಅವರು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲ, ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ತಮಿಳುನಾಡು ಟಿವಿ ಚಾನೆಲ್‌ವೊಂದರಲ್ಲಿ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯು ತಮಿಳುನಾಡು ಜನರಿಗೆ ಏಕೆ ಎಂಬುದನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಜಡ್ಜ್‌ ಆಗಿ ನೇಮಕಗೊಂಡಿದ್ದಕ್ಕೆ ವಿರೋಧವೇಕೆ?

ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಿಕ್ಟೋರಿಯಾ ಗೌರಿ ಅವರು ಪ್ರಮಾಣವಚನ ಸ್ವೀಕರಿಸುತ್ತಲೇ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿದೆ. “ವಿಕ್ಟೋರಿಯಾ ಗೌರಿ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಜತೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಅವರು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ಹಾಗೂ ಲೇಖನಗಳನ್ನು ಬರೆದಿದ್ದಾರೆ. ಕ್ರಿಶ್ಚಿಯನ್ನರದ್ದು ‘ಬಿಳಿ ಭಯೋತ್ಪಾದನೆ’ ಎಂದು ಕರೆದಿದ್ದಾರೆ. ಹಾಗಾಗಿ, ಅವರ ನೇಮಕವನ್ನು ರದ್ದುಗೊಳಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ವಕೀಲರ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಎಂಡಿಎಂಕೆ ಪಕ್ಷವೂ ನೇಮಕಕ್ಕೆ ತಡೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು.

ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ: ಅದಾನಿ ಷೇರು ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್‌ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಯಾರು?

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ವಿಕ್ಟೋರಿಯಾ ಗೌರಿ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. “ವಿಕ್ಟೋರಿಯಾ ಗೌರಿ ಅವರು ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಅನುಭವ, ವೃತ್ತಿ ಚಾಣಾಕ್ಷತನ ಸೇರಿ ಕೊಲಿಜಿಯಂ ಮಾನದಂಡಗಳನ್ನು ಆಧರಿಸಿ ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ. ‘ಅರ್ಹತೆ’ ಮಾನದಂಡದ ಮೇಲೆ ನೇಮಕವಾದ ಬಳಿಕ ಅವರ ‘ಮಾನ್ಯತೆ’ ಕುರಿತು ತೀರ್ಮಾನಿಸಲು ಆಗುವುದಿಲ್ಲ. ಹಾಗಾಗಿ, ನೇಮಕ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ದೇಶದ ಏಕತೆ ಎತ್ತಿಹಿಡಿಯುವ ಪ್ರತಿಜ್ಞೆ

ವಿಕ್ಟೋರಿಯಾ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ “ದೇಶದ ಏಕತೆಯನ್ನು ಎತ್ತಿಹಿಡಿಯುತ್ತೇನೆ” ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರನ್ನೂ ಸ್ಮರಿಸಿದ ಅವರು, “ಜಡ್ಜ್‌ ಆಗಿ ನನ್ನ ಮಹೋನ್ನತ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ದೇಶದ ವೈವಿಧ್ಯತೆಯನ್ನು ಎತ್ತಿಹಿಡಿದು, ಏಕತೆಯನ್ನು ಮೆರೆಯುತ್ತೇನೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ. ಮಾನವೀಯತೆಯ ನೆಲೆಗಟ್ಟಿನಲ್ಲಿ, ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯಭಾರ ನಿಭಾಯಿಸುತ್ತೇನೆ” ಎಂದು ಪ್ರತಿಜ್ಞೆಗೈದು ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

ರಾಜಮಾರ್ಗ ಅಂಕಣ: ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ವಿಶ್ವಕಪ್‌ ಟಿ20 ಪಂದ್ಯಾಟಗಳಿಗೆ ಆರಿಸಿದ ಭಾರತ ಕ್ರಿಕೆಟ್ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.‌ ಆದರೆ ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

VISTARANEWS.COM


on

rajamarga column t20 world cup team
Koo

ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಮಿಸ್ ಆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಲ್ ದ ಬೆಸ್ಟ್ ಟೀಮ್ ಇಂಡಿಯಾ!

ಐಪಿಎಲ್ (IPL) ಕಾರಣಕ್ಕೆ ಭಾರತದಲ್ಲಿ ನೂರಾರು ಕ್ರಿಕೆಟ್ (Cricket) ಪ್ರತಿಭೆಗಳು ಪ್ರಕಾಶನಕ್ಕೆ ಬಂದಿವೆ. ಹತ್ತು ಕ್ರಿಕೆಟ್ ಟೀಮ್ ರಚಿಸಲು ಸಾಧ್ಯ ಇರುವಷ್ಟು ಆಟಗಾರರು ಈಗ ಭಾರತದಲ್ಲಿ ಇದ್ದಾರೆ! ಅದರಿಂದಾಗಿ ಈ ಬಾರಿ ಕ್ರಿಕೆಟ್ ಆಯ್ಕೆ ಮಂಡಳಿಯು ಸಾಕಷ್ಟು ಅಳೆದು ತೂಗಿ ಒಂದು ಬಲಿಷ್ಠವಾದ ಟಿ 20 (T20) ತಂಡವನ್ನು ವಿಶ್ವಕಪ್‌ಗೆ (World Cup) ಆಯ್ಕೆ ಮಾಡಿದೆ. ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

ಆದರೆ ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ಆರಿಸಿದ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.

ರೋಹಿತ್ ಶರ್ಮ – ಉತ್ತಮ ಕ್ಯಾಪ್ಟನ್

ರೋಹಿತ್ ಶರ್ಮ (Rohit Sharama) ಸದ್ಯಕ್ಕೆ ಭಾರತದ ಯಶಸ್ವೀ ಕ್ಯಾಪ್ಟನ್. ಐದು ಬಾರಿ ಐಪಿಲ್ ಟ್ರೋಫಿ ಎತ್ತಿದ ಸಾಧನೆ ಆತನದ್ದು. ಹಾಗೆಯೇ ಮೊನ್ನೆ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅದ್ಭುತವಾಗಿ ಆಡಿ ಫೈನಲ್ ತನಕ ಬಂದ ಸಾಧನೆಯು ಸಣ್ಣದಲ್ಲ. ಆರಂಭಿಕ ಆಟಗಾರನಾಗಿ ಸಲೀಸಾಗಿ ಬೌಂಡರಿ, ಸಿಕ್ಸರ್ ಎತ್ತುವ ಛಾತಿ ಆತನಿಗೆ ಇದೆ. ಆದ್ದರಿಂದ ರೋಹಿತ್ ಶರ್ಮಾ ಆಯ್ಕೆಯು ನಿರ್ವಿವಾದ.

ಉಪನಾಯಕನಾಗಿ ಸಂಜು ಸ್ಯಾಮ್ಸನ್ ಅಥವಾ ರಿಷಭ್ ಪಂತ್ ಅವರಿಗೆ ಹೊಣೆ ನೀಡುವ ನಿರೀಕ್ಷೆ ಇತ್ತು. ಆದರೆ ಆಯ್ಕೆ ಮಂಡಳಿ ರಿಸ್ಕ್ ತೆಗೆದುಕೊಳ್ಳಲು ಹೋಗದೆ ಪಾಂಡ್ಯ ಅವರನ್ನೇ ಮುಂದುವರೆಸಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆತನ ನಾಯಕತ್ವದ ಹೆಚ್ಚಿನ ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಆದರೆ ಪಾಂಡ್ಯ ಒಬ್ಬ ಆಲರೌಂಡರ್ ಮತ್ತು ಹೋರಾಟಗಾರ ಎಂಬ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ದೊರೆತಿದೆ ಎನ್ನುತ್ತದೆ ಆಯ್ಕೆ ಮಂಡಳಿ. ಆತನ ಬದಲಿಗೆ ತಿಲಕ್ ವರ್ಮ, ಸಾಯಿ ಸುದರ್ಶನ್ ಅಥವಾ ರುಥುರಾಜ್ ಗಾಯಕವಾಡ್ ಆಯ್ಕೆ ಆಗಿದ್ದರೆ ಚೆನ್ನಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಗಟ್ಟಿಯಾಗಿ ಹೇಳುತ್ತಿದ್ದಾರೆ. ಒಬ್ಬ ಬೌಲಿಂಗ್ ಆಲ್ರೌಂಡರ್ ಎಂಬ ದೃಷ್ಟಿಯಿಂದ ಹಾರ್ದಿಕ್ ಆಯ್ಕೆ ಆಗಿರಬಹುದು.

rajamarga column t20 world cup team

ಯಶಸ್ವೀ ಜೈಸ್ವಾಲ್ ಆಯ್ಕೆಯಲ್ಲಿ ಯಾರಿಗೂ ಅಚ್ಚರಿ ಆಗಲು ಸಾಧ್ಯವೇ ಇಲ್ಲ. ಕ್ರಿಕೆಟಿನ ಮೂರೂ ಫಾರ್ಮಾಟಗಳಲ್ಲಿ ಆತನ ನಿರ್ವಹಣೆಯು ತುಂಬಾ ಚೆನ್ನಾಗಿದೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆತ ವಿಫಲನಾದರೂ ಈಗ ನಿಧಾನಕ್ಕೆ ಫಾರ್ಮ್ ಕಂಡು ಕೊಂಡಿದ್ದಾರೆ. ಆತನ ಆಕ್ರಮಣಶೀಲತೆ ಮತ್ತು ಹೊಡೆತಗಳ ಆಯ್ಕೆ ಚೆನ್ನಾಗಿರುವ ಕಾರಣ ಆತನ ಮೇಲೆ ಆಯ್ಕೆ ಮಂಡಳಿ ಭರವಸೆ ಇಟ್ಟ ಹಾಗಿದೆ.

ಕೊಹ್ಲಿ ಆಯ್ಕೆಯು ನಿರೀಕ್ಷಿತ

ವಿಶ್ವ ಕ್ರಿಕೆಟಿನ ಅತ್ಯದ್ಭುತ ಆಟಗಾರ ವಿರಾಟ್ ಕೊಹ್ಲಿ ಆಯ್ಕೆ ನಿರೀಕ್ಷಿತ. ಅದರೆ ಈ ಬಾರಿಯ ಐಪಿಲ್ ಪಂದ್ಯಗಳಲ್ಲಿ ಆತನ ಆಕ್ರಮಣಶೀಲತೆಯು ಕಡಿಮೆ ಆಗಿದೆ(?) ಎಂಬಂತೆ ಕಾಣುತ್ತಿರುವ ಕಾರಣ ಆತನನ್ನು ನಂಬರ್ 3 ಸ್ಥಾನಕ್ಕೆ ಆಡಿಸಬಹುದು ಅಥವಾ ನಂಬರ್ 3 ಸ್ಥಾನಕ್ಕೆ ಸಂಜು ಸಾಮ್ಸನ್ ಆಯ್ಕೆ ಪಡೆಯಬಹುದು. ಆದರೂ 90% ಭಾರತದ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಆಸೆ ಪಡುತ್ತಾರೆ.

ಸೂರ್ಯಕುಮಾರ್ ಯಾದವ್ ಟಿ 20 ಫಾರ್ಮಾಟಿಗೆ ಹೇಳಿ ಮಾಡಿಸಿದ ಆಟಗಾರ. ಒಮ್ಮೆ ಕುದುರಿಕೊಂಡರೆ ಸರಾಸರಿಯನ್ನು ಸಲೀಸಾಗಿ 200 ದಾಟಿಸುವ ಶಕ್ತಿ ಇದೆ. ಆದರೆ ದೀರ್ಘ ಅವಧಿಗೆ ಗಾಯಾಳು ಆಗಿ ಹೊರಗೆ ಕೂತ ಕಾರಣ ಆತನ ತಲೆಯ ಮೇಲೆ ತೂಗುಕತ್ತಿ ಇದ್ದೇ ಇತ್ತು. ಆದರೆ ಆಯ್ಕೆ ಮಂಡಳಿ ಆತನ ಹಿಂದಿನ ಸಾಧನೆಯ ಮೇಲೆ ಭರವಸೆ ಇಟ್ಟ ಹಾಗಿದೆ. ನಂಬರ್ 3 ಸ್ಥಾನಕ್ಕೆ ಆಯ್ಕೆಗಳು ಹೆಚ್ಚಿದ್ದ ಕಾರಣ ಸಹಜವಾಗಿ ಕೆ ಎಲ್ ರಾಹುಲ್ ಹೊರಗೆ ಕೂರಬೇಕಾಯಿತು ಅಷ್ಟೇ.

rajamarga column t20 world cup team

ಸಂಜು ಸ್ಯಾಮ್ಸನ್ ದಶಕಗಳಿಂದ ಐಪಿಲ್ ಆಡುತ್ತಾ ಇದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಆತನ ಸರಾಸರಿ ಮತ್ತು ಕನ್ಸಿಸ್ಟೇನ್ಸಿಗಳು ತುಂಬಾ ಚೆನ್ನಾಗಿ ಇದ್ದ ಕಾರಣ ಅವರ ಆಯ್ಕೆ ಸಲೀಸಾಯ್ತು. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಚೆನ್ನಾಗಿದ್ದರೂ ಡ್ರಾಪ್ ಆದರು. ಈ ನೋವು ಕನ್ನಡಿಗರನ್ನು ಕಾಡದೇ ಇರದು. ಸಂಜು ಸ್ಯಾಮ್ಸನ್ ಅವರಿಗೊಂದು ಅವಕಾಶ ಕೊಡಲೇಬೇಕು ಎಂದು ದೀರ್ಘಕಾಲದಿಂದ ಭಾರತ ಆಸೆ ಪಡುತ್ತಿತ್ತು.

ಬಲಿಷ್ಠ ಮಿಡಲ್ ಆರ್ಡರ್

ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಲಿಷ್ಠ ಮಿಡಲ್ ಆರ್ಡರ್ ಈ ಬಾರಿ ನಿಸ್ಸಂಶಯವಾಗಿಯೂ ದೊರೆತಿದೆ. ರಿಶಭ್ ಪಂತ್ ಮತ್ತು ಶಿವಂ ದುಬೆ ಅಲ್ಲಿ ಮಿಂಚು ಹರಿಸುವುದು ಖಂಡಿತ. ಇನ್ನಷ್ಟು ಬಲಿಷ್ಠ ಮಾಡಲು ರವೀಂದ್ರ ಜಡೇಜಾ ಇದ್ದೇ ಇರುತ್ತಾರೆ.

ಇಡೀ ಐಪಿಲ್ ಪಂದ್ಯಾಟದಲ್ಲಿ ಮಿಂಚಿದ ತಿಲಕ್ ವರ್ಮ, ರಥುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರಿಯಾನ್ ಪರಾಗ್ ಯಾಕೆ ಮಿಸ್ ಆದರು?ಎಂಬ ಪ್ರಶ್ನೆಯು ನಿಮ್ಮ ಮನಸಿಗೆ ಕೂಡ ಬಂದಿರಬಹುದು. ಅವರು ಮುಂದಿನ ವಿಶ್ವಕಪ್ ತನಕ ಕಾಯಲೇಬೇಕು ಅನ್ನುವುದು ವಾಸ್ತವ.

rajamarga column t20 world cup team

ಬೌಲಿಂಗ್ ವಿಭಾಗ ಅಚ್ಚರಿ ಇಲ್ಲ

ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಅಸ್ತ್ರಗಳು. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಅವರು ಮೀಸಲು ಆಟಗಾರರಾಗಿ ಇರುವ ಕಾರಣ ಇಲ್ಲಿ ಅಚ್ಚರಿಯ ಮುಖಗಳು ಇಲ್ಲ. ಹಾರ್ದಿಕ ಪಾಂಡ್ಯ ಕೂಡ ಮಿದು ವೇಗದ ಬೌಲಿಂಗ್ ಮಾಡಬಲ್ಲರು. ದಾಖಲೆ ವೇಗದಲ್ಲಿ ಎಸೆಯಬಲ್ಲ ಮಯಾಂಕ್ ಯಾದವ್ ಫಿಟ್ನೆಸ್ ಕಾರಣಕ್ಕೆ ಡ್ರಾಪ್ ಆದ ಕಾರಣ ಸಿರಾಜ್ ಆಯ್ಕೆ ಸುಲಭ ಆಯ್ತು. ಸ್ಪಿನ್ ವಿಭಾಗದಲ್ಲಿ ಐಪಿಎಲನ ಗರಿಷ್ಠ ವಿಕೆಟ್ ಕಿತ್ತಿರುವ ಯಜುವೇಂದ್ರ ಚಹಲ್, ಯಾವ ಮೈದಾನದಲ್ಲಿಯೂ ಬಾಲ್ ಸ್ಪಿನ್ ಮಾಡುವ ಶಕ್ತಿ ಇರುವ ಕುಲದೀಪ್ ಯಾದವ್, ಆಕ್ಷರ್ ಪಟೇಲ್ ಇರುತ್ತಾರೆ. ರವಿ ಬಿಷ್ಣೊಯಿ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ಭಾರತವು ಮೂರು ವೇಗ ಪ್ಲಸ್ ಎರಡು ಸ್ಪಿನ್ ಸಂಯೋಜನೆಯ ಜೊತೆಗೆ ಆಡಲು ಇಳಿಯಬಹುದು. ಇನ್ನು ಫಿನಿಶರ್ ಸ್ಥಾನಕ್ಕೆ ಶಿವಂ ದುಬೆ, ರಿಶಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಘ್ (ಮೀಸಲು) ಇರುವ ಕಾರಣ ದಿನೇಶ್ ಕಾರ್ತಿಕ್ ಡ್ರಾಪ್ ಆದರು ಅನ್ನಿಸುತ್ತದೆ. ಆತನ ಪ್ರಾಯ ಕೂಡ ಇಲ್ಲಿ ನಿರ್ಣಾಯಕ ಆಗಿರಬಹುದು.

2024ರ ವಿಶ್ವಕಪ್‌ಗೆ ಇದು ಡ್ರೀಮ್ ಟೀಮ್

ಧೋನಿ ನಾಯಕತ್ವದಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದ ಭಾರತ ಈ ಬಾರಿ ಇನ್ನೂ ಬಲಿಷ್ಠ ತಂಡದ ಜೊತೆಗೆ ಆಡಲು ಇಳಿಯುತ್ತಿದೆ. ಈ ತಂಡದಲ್ಲಿ ಆಕ್ರಮಣ, ಅನುಭವ, ಪರಿಣತಿ, ವೇಗ, ತಂತ್ರಗಾರಿಕೆ… ಎಲ್ಲವೂ ಇದೆ. ಉತ್ತಮ ಆಲ್ರೌಂಡರ್ ಆಟಗಾರರೂ ಇದ್ದಾರೆ. ಒತ್ತಡ ತಡೆಕೊಳ್ಳುವ ಶಕ್ತಿ ಇದ್ದವರು ಮಾತ್ರ ವಿಶ್ವಕಪ್ ಗೆಲ್ಲುತ್ತಾರೆ.

ಆದರೆ ಐಪಿಎಲ್ 2024ರಲ್ಲಿ ಸಖತ್ ಮಿಂಚುತ್ತಿರುವ ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ವಿಲ್ ಜಾಕ್ಸ್, ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಹೆನ್ರಿ ಕ್ಲಾಸೆನ್, ಜೋಸ್ ಬಟ್ಲರ್ ……ಮೊದಲಾದವರು ಬ್ಯಾಟ್ ಬೀಸುವ ವೇಗವನ್ನು ನೋಡುವಾಗ ಭಾರತೀಯರ ಎದೆಬಡಿತವು ಸ್ವಲ್ಪ ಹೆಚ್ಚಾಗಬಹುದು. ಏನಿದ್ದರೂ ಭಾರತಕ್ಕೆ ‘ಆಲ್ ದ ಬೆಸ್ಟ್’ ಹೇಳೋದಕ್ಕೆ ನಾವು ಖಂಡಿತ ಕಂಜೂಸ್ ಮಾಡುವುದಿಲ್ಲ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading

ಅಂಕಣ

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ರಾಜಮಾರ್ಗ ಅಂಕಣ: ಆಕ್ರಮಣಕಾರಿ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ. ಆದರೆ ಈಗ, ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

VISTARANEWS.COM


on

Rishabh Pant
Koo

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading
Advertisement
Prajwal Revanna Case Prajwal arrives in Dubai from Germany
ಕ್ರೈಂ55 seconds ago

Prajwal Revanna Case: ಜರ್ಮನಿಯಿಂದ ದುಬೈಗೆ ಹಾರಿದ ಪ್ರಜ್ವಲ್‌ ರೇವಣ್ಣ! ತನಿಖೆ ದಿಕ್ಕು ತಪ್ಪಿಸಿ, ದಿನ ದೂಡಲು ತಂತ್ರ?

Karnataka Weather Forecast
ಮಳೆ10 mins ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ

Chandrayaan 3
ದೇಶ22 mins ago

Chandrayaan 3: ಇತಿಹಾಸ ಸೃಷ್ಟಿಸಿ ಚಂದ್ರನ ಮಡಿಲಲ್ಲಿ ಮಲಗಿದ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್; ಇಲ್ಲಿವೆ Photos

Amitabh Bachchan vanity van ambition was to pee by Vidhu Vinod Chopra
ಬಾಲಿವುಡ್22 mins ago

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Prajwal Revanna Case Minister Zameer Ahmed close aide makes Prajwal obscene video pen drive viral
ರಾಜಕೀಯ27 mins ago

Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

T20 World Cup
ಕ್ರೀಡೆ32 mins ago

T20 World Cup: ರೋಹಿತ್​, ಅಗರ್ಕರ್​ ಜಂಟಿ ಸುದ್ದಿಗೋಷ್ಠಿಗೆ ಕ್ಷಣಗಣನೆ

Deepak Chahar
ಪ್ರಮುಖ ಸುದ್ದಿ33 mins ago

Deepak Chahar : ಸಹೋದರನನ್ನು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ದೀಪಕ್ ಚಾಹರ್​ ಸಹೋದರಿ!

Viral video
ವೈರಲ್ ನ್ಯೂಸ್36 mins ago

Viral Video:ಶಾಕಿಂಗ್‌ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ

assault case in Bengaluru
ಬೆಂಗಳೂರು44 mins ago

Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Vote Jihad
ದೇಶ56 mins ago

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌