Thailand tour: ಕಡಿಮೆ ವೆಚ್ಚದ ಪ್ರವಾಸಕ್ಕೆ ಹೇಳಿ ಮಾಡಿಸಿದ ವಿದೇಶ ಥಾಯ್ಲೆಂಡ್‌! - Vistara News

ಪ್ರವಾಸ

Thailand tour: ಕಡಿಮೆ ವೆಚ್ಚದ ಪ್ರವಾಸಕ್ಕೆ ಹೇಳಿ ಮಾಡಿಸಿದ ವಿದೇಶ ಥಾಯ್ಲೆಂಡ್‌!

ಥಾಯ್ಲೆಂಡಿಗೆ ಹೋಗಲಿಚ್ಛಿಸುವ ಮಂದಿ ಮೊದಲು ಬಜೆಟ್‌ ಎಷ್ಟು ಅದಕ್ಕಾಗಿ ತೆಗೆದಿರಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕುವುದು ಒಳ್ಳೆಯದು. ನಮ್ಮ ಬಜೆಟ್‌ಗೆ ಅನುಸಾರವಾಗಿ ಪ್ಲಾನ್‌ ಮಾಡಬಹುದಾದ ದೇಶವಿದು. ಸೋಲೋ ಮಂದಿಗೂ, ಕುಟುಂಬ ಸಮೇತರಾಗಿ ಪ್ರವಾಸ ಮಾಡುವವರಿಗೂ ಅಥವಾ ಜೋಡಿಗಳಿಗೂ ಇದು ಉತ್ತಮ ತಾಣ.

VISTARANEWS.COM


on

thailand tour
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದೇಶಕ್ಕೆ ಪ್ರವಾಸ ಮಾಡಲಿಚ್ಛಿಸುವ ಬಜೆಟ್‌ ಪ್ರವಾಸಿಗರಿಗೆ ಅಂದರೆ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಯಸುವ ಎಲ್ಲರಿಗೂ ಸಿಗುವ ಮೊದಲ ಆಯ್ಕೆ ಥಾಯ್ಲೆಂಡ್‌. ಪಿಕ್ಚರ್‌ ಪರ್ಫೆಕ್ಟ್‌ ಪೋಸ್ಟ್‌ಕಾರ್ಡ್‌ನ ದೃಶ್ಯಗಳಂತೆ ಕಣ್ಮನ ತಣಿಸುವ ಸುಂದರ ದೃಶ್ಯಗಳಿಂದ ಹಿಡಿದು, ಝಗಮಗಿಸುವ ನೈಟ್‌ಲೈಫ್‌ವರೆಗೆ, ಮನಮೋಹಕ ಬೀಚ್‌ನಿಂದ ಸಮುದ್ರತೀರಗಳಿಂದ ಹಿಡಿದು ಪುರಾತನ ದೇವಾಲಯಗಳವರೆಗೆ ಎಲ್ಲವನ್ನೂ ತನ್ನೊಳಗೆ ಬಚ್ಚಿಟ್ಟಿರುವ ಥಾಯ್ಲೆಂಡ್‌ ಎಂಬ ಪುಟ್ಟ ದೇಶಕ್ಕೆ ಎಲ್ಲ ಬಗೆಯ ಪ್ರವಾಸಿಗರನ್ನೂ ಸೆಳೆಯುವಂಥ ಮೋಹಕ ಶಕ್ತಿಯಿದೆ. ʻಲ್ಯಾಂಡ್‌ ಆಫ್‌ ಸ್ಮೈಲ್ಸ್‌ʼ ಎಂದೇ ಕರೆಸಿಕೊಳ್ಳುವ ಇದು ಪ್ರವಾಸಿಗರಿಗೆ ಬಗೆಬಗೆಯ ಸಂಸ್ಕೃತಿಯನ್ನು ಪರಿಚಯಿಸುವ ಶಾಂತಿಯ ತಾಣ.

ಇಂಥ ಥಾಯ್ಲೆಂಡಿಗೆ ಕಡಿಮೆ ವೆಚ್ಚದಲ್ಲಿ ಹೋಗಬಯಸುವ ಪ್ರವಾಸೀ ಪ್ರಿಯರು ಹೋಗುವ ಮೊದಲು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು.

ಥಾಯ್ಲೆಂಡಿಗೆ ಹೋಗಲಿಚ್ಛಿಸುವ ಮಂದಿ ಮೊದಲು ಬಜೆಟ್‌ ಎಷ್ಟು ಅದಕ್ಕಾಗಿ ತೆಗೆದಿರಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕುವುದು ಒಳ್ಳೆಯದು. ನಮ್ಮ ಬಜೆಟ್‌ಗೆ ಅನುಸಾರವಾಗಿ ಪ್ಲಾನ್‌ ಮಾಡಬಹುದಾದ ದೇಶವಿದು. ಸೋಲೋ ಮಂದಿಗೂ, ಕುಟುಂಬ ಸಮೇತರಾಗಿ ಪ್ರವಾಸ ಮಾಡುವವರಿಗೂ ಅಥವಾ ಜೋಡಿಗಳಿಗೂ ಇದು ಉತ್ತಮ ತಾಣ. ಥಾಯ್ಲೆಂಡಿನಲ್ಲಿ ಒಂದು ದಿನಕ್ಕೆ ಕಡಿಮೆ ಎಂದರೆ ಸುಮಾರು ೧,೬೫೦ ರೂಪಾಯಿಗಳಿಂದ ಹಿಡಿದು ೩೩,೦೦೦ ರೂಪಾಯಿಗಳವರೆಗೂ ಖರ್ಚು ಮಾಡಬಹುದು. ವಿಮಾನ ಆಯ್ಕೆಯ ವೇಳೆ ಕಡಿಮೆ ವೆಚ್ಚದಲ್ಲಿ ಮುಗಿಯಬೇಕಿದ್ದರೆ, ಮುಖ್ಯ ವಿಮಾನ ನಿಲ್ದಾಣಕ್ಕೇ ಬುಕ್‌ ಮಾಡಿಕೊಂಡು ಅಲ್ಲಿಂದ ರಸ್ತೆಯ ಮೂಲಕ ಬೇಕಾದೆಡೆಗಳಿಗೆ ಪಯಣಿಸಬಹುದು.

thailand tour

ಆಹಾರಪ್ರಿಯರಿಗೆ ಥಾಯ್ಲೆಂಡ್‌ ಹಬ್ಬದೂಟವನ್ನೇ ನೀಡುತ್ತದೆ. ಯಾಕೆಂದರೆ ಇಲ್ಲಿ ಎಲ್ಲ ಬಗೆಯ ಪ್ರವಾಸಿಗರೂ ಬರುವುದರಿಂದ ಈ ದೇಶದಲ್ಲಿ ಎಲ್ಲ ಬಗೆಯ ಕಾಂಟಿನೆಂಟಲ್‌ ಆಹಾರದ ಆಯ್ಕೆಯಿದೆ.

ಇನ್ನು ಉಳಿದುಕೊಳ್ಳುವ ವಿಚಾರಕ್ಕೆ ಬಂದರೆ ಕಡಿಮೆ ಎಂದರೆ ೫೦೦ ರೂಪಾಯಿಗಳಿಂದ ಹಿಡಿದು ೮೦,೦೦೦ ರೂಪಾಯಿಗಳವರೆಗೆ ಪ್ರತಿ ರಾತ್ರಿಗೆ ಖರ್ಚು ಮಾಡಲು ನೀವು ರೆಡಿಯಿದ್ದರೆ ಬೇಕಾದ ಆಯ್ಕೆಯ ಹೊಟೇಲುಗಳು ಇಲ್ಲಿ ಲಭ್ಯವಿವೆ.

ಥಾಯ್ಲೆಂಡಿನಲ್ಲಿ ತಿರುಗಾಡಲು ಟ್ಯಾಕ್ಸಿಗಳು ಸುಲಭವಾಗಿ ಕಡಿಮೆ ದರದಲ್ಲಿ ಸಿಗುತ್ತದೆ. ರೈಲು ಸೇವೆ, ಬಸ್‌ ವ್ಯವಸ್ಥೆ ಎಲ್ಲವೂ ಇವೆ. ಸಾರ್ವಜನಿಕ ಸಂಚಾರವನ್ನು ಬಳಸಿದರೆ ಬಜೆಟ್‌ ಪ್ರವಾಸಿಗರು ಕಡಿಮೆ ವೆಚ್ಚದಲ್ಲಿ ತಿರುಗಾಡಬಹುದು. ಕಡಿಮೆ ಎಂದರೆ ದಿನಕ್ಕೆ ವ್ಯಕ್ತಿಯೊಬ್ಬರಿಗೆ ೮೦ ರೂಪಾಯಿಗಳಿಂದ ೨೦೦ ರೂಪಾಯಿಗಳವರೆಗೆ ಖರ್ಚು ತಗಲಬಹುದು.‌

ಇದನ್ನೂ ಓದಿ: Astro tourism: ರಾಜಸ್ಥಾನಕ್ಕೆ ಪ್ರವಾಸ ಮಾಡಿ: ರಾತ್ರಿಗಳಲ್ಲಿ ನಕ್ಷತ್ರ ಪುಂಜ ಕಣ್ತುಂಬಿಕೊಳ್ಳಿ!

ಥಾಯ್ಲೆಂಡ್‌ ಪ್ರವಾಸಕ್ಕೆ ಸೂಕ್ತ ಸಮಯ ನವೆಂಬರ್‌ ತಿಂಗಳಿಂದ ಏಪ್ರಿಲ್‌ ತಿಂಗಳವರೆಗೆ. ಆಗ ಥಾಯ್ಲೆಂಡ್‌ ಬಹಳ ಸುಂದರವಾಗಿ ಕಾಣುತ್ತದೆ. ಸ್ವಚ್ಛ ಶುಭ್ರ ಆಕಾಶ, ನೀಲಿ ಹಸಿರು ಸಮುದ್ರಗಳು, ಹೆಚ್ಚು ಬಿಸಿಲೂ ಇಲ್ಲದೆ, ಮಳೆಯೂ ಇಲ್ಲದೆ ಆರಾಮವಾಗಿ ತಿರುಗಾಡಬಹುದಾದ ವಾತಾವರಣ ಈ ಸಮಯದಲ್ಲಿ ಸಿಗುತ್ತದೆ. ಆದರೆ, ಈ ಕಾಲ ಪ್ರವಾಸಿಗರಿಂದ ತುಂಬಿ ಹೋಗುವುದರಿಂದ ವೆಚ್ಚ ಅಧಿಕವಾಗಬಹುದು. ಹೊಟೇಲ್‌ ದರ, ಪ್ರಯಾಣ ವೆಚ್ಚ ಎಲ್ಲವೂ ಸ್ವಲ್ಪ ಹೆಚ್ಚೇ ಖರ್ಚಾಗುತ್ತದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವವರಿಗೆ ಜುಲೈ ತಿಂಗಳಿಂದ ಸೆಪ್ಟೆಂಬರ್‌ ತಿಂಗಳವರೆಗಿನ ಕಾಲ ಅತ್ಯಂತ ಸೂಕ್ತ. ಈ ಸಮಯದಲ್ಲಿ ಯಾವ ಪ್ರವಾಸಿಗ ಗಿಜಿಗಿಜಿಯೂ ಇಲ್ಲದೆ, ಸಾವಕಾಶವಾಗಿ, ಡಿಸ್ಕೌಂಟ್‌ನಲ್ಲಿ ಸಿಗುವ ಚಂದನೆಯ ಹೊಟೇಲುಗಳಲ್ಲಿ ಉಳಿದುಕೊಂಡು ಥಾಯ್ಲೆಂಡಿನ ಸೌಂದರ್ಯ ಆಸ್ವಾದಿಸಿ ಬರಬಹುದು.

thailand tour

ಥಾಯ್ಲೆಂಡಿಗೆ ಭಾರತೀಯರಿಗೆ ವೀಸಾ ಆನ್‌ ಅರೈವಲ್‌ ಮಾದರಿಯಲ್ಲಿ ಸಿಗುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಅಂದಾಜು ಸುಮಾರು ೪,೪೬೦ ರೂಪಾಯಿಗಳನ್ನು ಅಂದರೆ ಸುಮಾರು ೨೦೦೦ ಟಿಎಚ್‌ಬಿ ಹಣ ತೆರಬೇಕಾಗುತ್ತದೆ. ಇ-ವಿಸಾ ಆನ್‌ ಅರೈವಲ್‌ ಕೂಡಾ ಲಭ್ಯವಿರುವಿರುವಿದರಿಂದ ಇದು ಸುಲಭವಾಗಿ ಆಗುತ್ತದೆ. ಒಂದು ಟ್ರಾವೆಲ್‌ ಇನ್ಶೂರೆನ್ಸ್‌, ಆರೋಗ್ಯ ತಪಾಸಣೆಗಳು ಇತ್ಯಾದಿಗಳನ್ನು ಮೊದಲೇ ಮಾಡಿಕೊಳ್ಳುವುದು ಒಳ್ಳೆಯದು.

ಇನ್ನು ಥಾಯ್ಲೆಂಡಿನಲ್ಲಿ ನೋಡಬೇಕಾದ ಸ್ಥಳಗಳು ಎಂದು ಪಟ್ಟಿಮಾಡ ಹೊರಟರೆ ಎಲ್ಲವೂ ಅದ್ಭುತ ಸ್ಥಳಗಳೇ. ಅದಕ್ಕಾಗಿ ಅವರವರ ಆಸಕ್ತಿಗೆ ಅನುಗುಣವಾಗಿ ಮೊದಲೇ ಕೊಂಚ ಗೂಗಲ್‌ ಸರ್ಚ್‌ ಮಾಡಿಟ್ಟುಕೊಂಡು ರೆಡಿಯಾದರೆ ಉತ್ತಮ. ಕಡಿಮೆ ಎಂದರೂ ಒಂದು ವಾರವಾದರೂ ಇದ್ದು ಬಂದರೆ ಹೋದದ್ದಕ್ಕೂ ಸಾರ್ಥಕ!

ಇದನ್ನೂ ಓದಿ: New York Times List Of Places | ನ್ಯೂಯಾರ್ಕ್‌ ಟೈಮ್ಸ್‌ 52 ಪ್ರವಾಸಿ ತಾಣಗಳ ಪೈಕಿ ಭಾರತದ ಒಂದೇ ರಾಜ್ಯಕ್ಕೆ ಸ್ಥಾನ, ಯಾವುದದು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

ಆಧ್ಯಾತ್ಮಿಕತೆ, ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಅನುಭವಗಳ ಪರಿಪೂರ್ಣ ಮಿಶ್ರಣವನ್ನು ನೀಡುವ ಉಡುಪಿ ಸ್ಮರಣೀಯ ಪ್ರವಾಸಕ್ಕೆ (Udupi Tour) ಸೂಕ್ತವಾದ ತಾಣವಾಗಿದೆ. ಸಾಹಸ, ವಿಶ್ರಾಂತಿ ಅಥವಾ ಆಧ್ಯಾತ್ಮಿಕತೆಯ ಅನುಭವದಲ್ಲಿ ಮಿಂದೇಳಲು ಬಯಸಿದರೆ ಇಲ್ಲಿಗೊಮ್ಮೆ ಭೇಟಿ ನೀಡಲು ಮರೆಯದಿರಿ.

VISTARANEWS.COM


on

By

Udupi Tour
Koo

ಕೃಷ್ಣನ ನಾಡು ಉಡುಪಿಯಲ್ಲಿ ಪ್ರವಾಸಿಗರನ್ನು (Udupi Tour) ಸೆಳೆಯುವ ಹಲವಾರು ತಾಣಗಳಿವೆ. ಸ್ನೇಹಿತರು, ಬಂಧುಗಳೊಂದಿಗೆ ಉಡುಪಿಗೆ ಭೇಟಿ ನೀಡಿದಾಗ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಪಾಕಶಾಲೆಯ ಸವಿರುಚಿ, ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.

ಕರ್ನಾಟಕದ (karnataka) ಕರಾವಳಿ ಪ್ರದೇಶದಲ್ಲಿ ( coastal region) ನೆಲೆಸಿರುವ ಉಡುಪಿಯು ಹಲವಾರು ಸುಂದರ ಅನುಭವಗಳನ್ನು ನೀಡುತ್ತದೆ. ಸ್ಮರಣೀಯ ಪ್ರವಾಸಕ್ಕೆ ಇದೊಂದು ಸೂಕ್ತ ತಾಣವಾಗಿದೆ. ಪ್ರಾಚೀನ ದೇವಾಲಯಗಳಿಂದ (temples) ಹಿಡಿದು ಸುಂದರ ಕಡಲತೀರಗಳವರೆಗೆ (beach).. ಉಡುಪಿಯಲ್ಲಿ ಭೇಟಿ ನೀಡಬಹುದಾದ ಕೆಲವು ಅತ್ಯುತ್ತಮ ತಾಣಗಳಿವೆ.


ಶ್ರೀ ಕೃಷ್ಣ ದೇವಾಲಯ

ಉಡುಪಿಯ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ದೇವಸ್ಥಾನದಿಂದ ಪ್ರವಾಸವನ್ನು ಆರಂಭಿಸಬಹುದು. ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಾಲಯವು ವಿಶಿಷ್ಟವಾದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಹಲವು ಆಚರಣೆಗಳು ಯಾತ್ರಿಕರನ್ನು ಸಮ್ಮೋಹನಗೊಳಿಸುವುದು.


ಮಲ್ಪೆ ಬೀಚ್

ವಿಶ್ರಾಂತಿ ಬಯಸಿದರೆ ಮಲ್ಪೆ ಬೀಚ್‌ ಗಿಂತ ಉತ್ತಮ ತಾಣ ಬೇರೆ ಇಲ್ಲ. ಚಿನ್ನದ ಮರಳು ಮತ್ತು ಆಕಾಶ ನೀಲಿ ನೀರಿನ ಸುಂದರವಾದ ದೃಶ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಬಿಸಿಲಿನಲ್ಲಿ ಬೇಯುತ್ತಿರಲಿ, ದಡದಲ್ಲಿ ಆರಾಮವಾಗಿ ಅಡ್ಡಾಡುತ್ತಿರಲಿ ಅಥವಾ ಪ್ಯಾರಾಸೈಲಿಂಗ್ ಮತ್ತು ಜೆಟ್-ಸ್ಕೀಯಿಂಗ್‌ನಂತಹ ರೋಮಾಂಚಕ ಜಲ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.


ಸೇಂಟ್ ಮೇರಿಸ್ ದ್ವೀಪ

ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಚಿಕ್ಕದಾದ ದೋಣಿ ವಿಹಾರವನ್ನು ನಡೆಸಬಹುದು. ಇದು ವಿಶಿಷ್ಟವಾದ ಕಲ್ಲಿನ ರಚನೆಗಳು ಮತ್ತು ಪ್ರಾಚೀನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.


ಮಣಿಪಾಲ

ಶೈಕ್ಷಣಿಕ ಸಂಸ್ಥೆಗಳು, ಉತ್ಸಾಹಭರಿತ ಕೆಫೆಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಗೆ ನೆಲೆಯಾಗಿರುವ ಮಣಿಪಾಲದ ರೋಮಾಂಚಕ ಪಟ್ಟಣವನ್ನು ಸುತ್ತಾಡಬಹುದು. ಇಲ್ಲಿನ ಮಣಿಪಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್, ಹೆರಿಟೇಜ್ ವಿಲೇಜ್, ತಾರಾಲಯ ಸೇರಿದಂತೆ ಪ್ರವಾಸಿಗರು ಇಷ್ಟಪಡುವ ಇನ್ನೂ ಅನೇಕ ತಾಣಗಳು ಇಲ್ಲಿವೆ. ಸ್ಥಳೀಯ ತಿನಿಸುಗಳಲ್ಲಿ ರುಚಿಕರವಾದ ಬೀದಿ ಆಹಾರವನ್ನು ಇಲ್ಲಿ ಸವಿಯಬಹುದು.


ಪಡುಕೆರೆ ಬೀಚ್

ಪಡುಕೆರೆ ಬೀಚ್‌ನಲ್ಲಿ ನಗರದ ಜೀವನದ ಜಂಜಾಟದಿಂದ ದೂರವಾಗಿ ಪ್ರಶಾಂತ ಸಮುದ್ರ ತೀರದಲ್ಲಿ ಸುತ್ತಾಡಬಹುದು. ಕಡಲ ತೀರವಾಸಿಗಳ ಜನ ಜೀವನವನ್ನು ಕಾಣಬಹುದು. ಶಾಂತವಾದ ವಾತಾವರಣ ಮತ್ತು ವಿಹಂಗಮ ನೋಟಗಳಿಗೆ ಹೆಸರುವಾಸಿಯಾದ ಪ್ರಶಾಂತ ಕರಾವಳಿ ಇದನ್ನು ಸ್ವರ್ಗ ಮಾಡಿದೆ.


ಆನೆಗುಡ್ಡೆ ವಿನಾಯಕ ದೇವಸ್ಥಾನ

ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ. ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೆಲೆಸಿರುವ ಈ ಪವಿತ್ರ ಕ್ಷೇತ್ರದಲ್ಲಿ ದೇವಾಲಯದ ಸಂಕೀರ್ಣ ವಾಸ್ತುಶೈಲಿಯನ್ನು ಗಮನಿಸಿ. ಹತ್ತಿರದಲ್ಲೇ ಇರುವ ನೀರಿನ ನಡುವೆ ನೆಲೆಯಾಗಿರುವ ಈಶ್ವರ ದೇವಾಲಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಕೂಡ್ಲು ಜಲಪಾತ

ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಗುಪ್ತ ರತ್ನವಾದ ಕೂಡ್ಲು ಜಲಪಾತವನ್ನು ತಲುಪಲು ಹಸಿರು ಕಾಡುಗಳ ಮೂಲಕ ರಮಣೀಯವಾದ ಚಾರಣವನ್ನು ಪ್ರಾರಂಭಿಸಿ. ಹಸಿರು ಎಲೆಗಳು ಮತ್ತು ಚಿಲಿಪಿಲಿ ಹಕ್ಕಿಗಳಿಂದ ಸುತ್ತುವರೆದಿರುವ ನೀರಿನ ಸೌಂದರ್ಯ ನಿಮ್ಮ ತನುಮನವನ್ನು ತಣಿಸುವ ಅನುಭವ ಕೊಡುವುದು.


ಕಾಪು ಬೀಚ್

ಕಾಪು ಬೀಚ್‌ನ ಪ್ರಶಾಂತ ತೀರದಲ್ಲಿ ಪ್ರಾಚೀನ ಮರಳುಗಳು ಅರೇಬಿಯನ್ ಸಮುದ್ರದ ಶಾಂತ ಅಲೆಗಳನ್ನು ಸಂಧಿಸುತ್ತವೆ. ಸ್ನೇಹಿತರೊಂದಿಗೆ ವಿರಾಮದ ಪಿಕ್ನಿಕ್ ಅನ್ನು ಇಲ್ಲಿ ಆನಂದಿಸಬಹುದು. ಕಡಲತೀರದ ಮೇಲೆ ಮರಳು ಕೋಟೆಗಳನ್ನು ನಿರ್ಮಿಸಿ ಮತ್ತು ಕರಾವಳಿಯ ಉದ್ದಕ್ಕೂ ಇರುವ ಸ್ಥಳೀಯ ತಿನಿಸುಗಳಲ್ಲಿ ತಾಜಾ ಸಮುದ್ರಾಹಾರ ಭಕ್ಷ್ಯಗಳನ್ನು ಸವಿಯಬಹುದು.


ಅಂಬಲಪಾಡಿ ಮಹಾಕಾಳಿ ದೇವಸ್ಥಾನ

ದೈವಿಕ ಸೆಳವು ಕೊಡುವ ಅಂಬಲಪಾಡಿ ಮಹಾಕಾಳಿ ದೇವಾಲಯ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು. ದೇವಾಲಯದ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ಉತ್ಸವಗಳು ರೋಮಾಂಚನ ಉಂಟು ಮಾಡುತ್ತದೆ.


ಇದನ್ನೂ ಓದಿ: Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

ಉಡುಪಿ ಪಾರಂಪರಿಕ ಗ್ರಾಮ

ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಎನ್‌ಕ್ಲೇವ್ ಉಡುಪಿ ಹೆರಿಟೇಜ್ ವಿಲೇಜ್‌ ಗೆ ಭೇಟಿ ನೀಡಲು ಸಮಯ ಮೀಸಲಿಡಿ. ಪಾರಂಪರಿಕ ಮನೆಗಳಿಂದ ಕೂಡಿದ ವಿಲಕ್ಷಣ ಬೀದಿಗಳಲ್ಲಿ ಸ್ಥಳೀಯ ಕುಶಲಕರ್ಮಿಗಳ ಕಾರ್ಯಾಗಾರಗಳನ್ನು ಕಾಣಬಹುದು.

Continue Reading

ಪ್ರವಾಸ

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಮಂದಿರವೂ ವಿಶ್ವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ (Jagannath Puri Temple) ಒಂದಾಗಿದೆ. ಇಲ್ಲಿನ ಏಳು ವಿಚಾರಗಳು ಇವತ್ತಿಗೂ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಏಳು ಅಚ್ಚರಿಗಳೇನು ಎಂಬ ವಿವರಣೆ ಇಲ್ಲಿದೆ.

VISTARANEWS.COM


on

By

Jagannath Puri Temple
Koo

ವಿಶ್ವ ಪ್ರಸಿದ್ಧ ದೇವಾಲಯಗಳಲ್ಲಿ ಭಾರತದ (india) ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥ ಮಂದಿರವೂ (Jagannath Pur Temple) ಒಂದಾಗಿದೆ. ಭಗವಾನ್ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿರುವ ಈ ಜಗನ್ನಾಥ ದೇವಾಲಯವು ಲಕ್ಷಾಂತರ ಹಿಂದೂಗಳಿಗೆ ಪ್ರಮುಖ ಯಾತ್ರಾ (tourist place) ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ರಥಯಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.

ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಾಲಯವು ಅನೇಕ ರಹಸ್ಯಗಳನ್ನು ಹೊಂದಿದೆ. ಜಗನ್ನಾಥ ಪುರಿ ದೇವಸ್ಥಾನದ ಬಗ್ಗೆ ಹೆಚ್ಚಿನವರು ತಿಳಿಯದೇ ಇರುವಂತ ಏಳು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ನೆರಳು ಬೀಳುವುದಿಲ್ಲ!

ಜಗನ್ನಾಥ ಪುರಿ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಇದು ನಿಖರವಾದ ವಾಸ್ತುಶಿಲ್ಪದ ಯೋಜನೆಯ ಪರಿಣಾಮವೇ ಅಥವಾ ಜಗನ್ನಾಥನ ಪವಾಡವೇ ಎಂಬುದನ್ನು ಈವರೆಗೆ ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಈ ದೇವಾಲಯವು ‘ನೆರಳು ರಹಿತ’ ಎಂದು ಹೇಳಲಾಗುತ್ತದೆ.


2. ಗಾಳಿಗೆ ವಿರುದ್ಧವಾಗಿ ಧ್ವಜ ಹಾರುತ್ತದೆ!

ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿಗೆ ವಿರುದ್ಧವಾಗಿ ಯಾಕೆ ಹಾರುತ್ತದೆ ಎಂಬುದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ದೇವಾಲಯದಲ್ಲಿ ಧಾರ್ಮಿಕ ಶಕ್ತಿಯ ಭವ್ಯವಾದ ಅದ್ಭುತವನ್ನು ಪ್ರದರ್ಶಿಸುವ ಮೂಲಕ ಪ್ರವಾಸಿಗರು ಅಚ್ಚರಿ ಪಡುವಂತೆ ಮಾಡುತ್ತದೆ.


3. ಮೇಲ್ಭಾಗದಲ್ಲಿ ಸುದರ್ಶನ ಚಕ್ರ!

ಮೇಲ್ಭಾಗದಲ್ಲಿ ಇರಿಸಲಾಗಿರುವ ಸುದರ್ಶನ ಚಕ್ರವು ಎರಡು ರಹಸ್ಯಗಳನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣದ ಸಮಯದ ತಂತ್ರಜ್ಞಾನದ ಸ್ಥಿತಿಯನ್ನು ಗಮನಿಸಿದರೆ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ಕಾರ್ಮಿಕರು ಅಂತಹ ತೂಕದ ಚಕ್ರವನ್ನು ಹೇಗೆ ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು. ಇನ್ನೊಂದು ಇದು ಎಲ್ಲಾ ಕೋನಗಳಿಂದಲೂ ಒಂದೇ ರೀತಿ ಹೇಗೆ ಕಾಣುತ್ತದೆ ಎಂಬುದು. ಈ ಸುದರ್ಶನ ಚಕ್ರದ ಪರಿಪೂರ್ಣ ಗಣಿತ ಲೆಕ್ಕಾಚಾರ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


4. ಅಡುಗೆಮನೆ ಕುತೂಹಲ

ದೇವಾಲಯದೊಳಗಿರುವ ಆಹಾರವನ್ನು ಒಂದರ ಮೇಲೊಂದರಂತೆ ಜೋಡಿಸಲಾದ ಮಡಕೆಗಳಲ್ಲಿ ಬೇಯಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಮೇಲ್ಭಾಗದಲ್ಲಿರುವ ಮಡಕೆಗಳ ಆಹಾರ ಮೊದಲು ಬೇಯುತ್ತದೆ! ಇದು ಪ್ರವಾಸಿಗರು ಮತ್ತು ಸಂಶೋಧಕರಿಗೆ ಇನ್ನೂ ಸವಾಲಾಗಿದೆ.


5. ಮರದ ದೇವತೆಗಳ ಆಚರಣೆ

ನಬಕಾಲೇಬಾರ ಎಂಬ ಆಚರಣೆಯು ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ಹಿಂದೂ ದೇವತೆಗಳ ಮರದ ಪ್ರತಿಮೆಗಳ ಪುನರ್ ನಿರ್ಮಾಣವನ್ನು ಸಾರುವ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಇದು ಆಕರ್ಷಣೆಯ ವಿಷಯವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ.


6. ಶಾಂತವಾಗುವ ನೀರು!

ಸಂಜೆ ಸಮಯದಲ್ಲಿ ಸಾಗರದ ನೀರು ದೇವಾಲಯ ತಲುಪಿದಾಗ ಶಾಂತವಾಗುತ್ತದೆ. ಇದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದೇವಾಲಯದೊಳಗಿನ ಶಬ್ದವು ಮಾಂತ್ರಿಕವಾಗಿ ನೀರನ್ನು ಹಿಂದಿರುಗುವಂತೆ ಮಾಡುತ್ತದೆ! ದೇವತೆಗಳು ದೇವಾಲಯದೊಳಗೆ ಶಾಂತಿಯನ್ನು ಬಯಸುತ್ತಾರೆ ಮತ್ತು ಆದ್ದರಿಂದ ಪ್ರಕೃತಿ ಶಾಂತವಾಗುತ್ತದೆ ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ.


7. ಹಿಮ್ಮುಖ ಗಾಳಿ

ದೇವಾಲಯದ ಗಾಳಿಯು ಹಗಲಿನಲ್ಲಿ ಭೂಮಿಯಿಂದ ಸಮುದ್ರದತ್ತ ಹೋಗುತ್ತದೆ ಮತ್ತು ರಾತ್ರಿಯಲ್ಲಿ ಹರಿವನ್ನು ಹಿಮ್ಮುಖಗೊಳಿಸುತ್ತದೆ. ಇದು ಇನ್ನೂ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಪ್ರಕೃತಿ ವಿಸ್ಮಯ ಅನೇಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.

Continue Reading

ಪ್ರವಾಸ

Chardham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡಲು ಬಯಸಿದ್ದೀರಾ? ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

ದ್ವಾದಶ ಜ್ಯೋತಿರ್ಲಿಂಗಗಳ (chardham yatra 2024) ಪೈಕಿ ಒಂದಾದ ಕೇದಾರನ ದರ್ಶನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಕನಸು ಕೋಟಿಕೋಟಿ ಭಾರತೀಯರದ್ದು. ಮೇ 10ರಂದು ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ. ಇನ್ನು ಈ ವರ್ಷದ ನವೆಂಬರ್‌ 20ರವರೆಗೂ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕೇದಾರನ ಜೊತೆಜೊತೆಗೆ ಬದ್ರಿನಾಥ, ಗಂಗೋತ್ರಿ, ಯಮುನೋತ್ರಿಗಳೆಲ್ಲವೂ ಚಳಿಗಾಲದ ರಜೆಯನ್ನು ಮುಗಿಸಿಕೊಂಡು ಭಕ್ತರಿಗೆ ತೆರೆದಿವೆ.

VISTARANEWS.COM


on

Chardham Yatra
Koo

ಹಿಮಾಲಯ ಶ್ರೇಣಿಗಳ ನಡುವೆ (chardham yatra 2024) ವಿರಾಜಮಾನನಾಗಿರುವ ಶಿವನ ದರ್ಶನ ಭಾಗ್ಯವೆಂಬುದು ಹಿಂದೂಗಳ ಪಾಲಿಗೆ ಜನ್ಮದ ಸೌಭಾಗ್ಯಗಳಲ್ಲಿ ಒಂದು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕೇದಾರನ ದರ್ಶನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಕನಸು ಕೋಟಿಕೋಟಿ ಭಾರತೀಯರದ್ದು. ಮೇ 10ರಂದು ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ. ಇನ್ನು ಈ ವರ್ಷದ ನವೆಂಬರ್‌ 20ರವರೆಗೂ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕೇದಾರನ ಜೊತೆಜೊತೆಗೆ ಬದ್ರಿನಾಥ, ಗಂಗೋತ್ರಿ, ಯಮುನೋತ್ರಿಗಳೆಲ್ಲವೂ ಚಳಿಗಾಲದ ರಜೆಯನ್ನು ಮುಗಿಸಿಕೊಂಡು ಭಕ್ತರಿಗೆ ತೆರೆದಿವೆ.
ವಿಶೇಷವೆಂದರೆ ಈ ಬಾರಿ ಎಂದೂ ಕಾಣದ ಜನಜಂಗುಳಿ ಎಲ್ಲೆಡೆ ಕಾಣುತ್ತಿದೆ. ಕೇದಾರನಾಥ ಧಾಮ ತೆರೆದ ಮೊದಲ ಮೂರೇ ದಿನಗಳಲ್ಲಿ 75,135 ಭಕ್ತರು ಕೇದಾರನ ದರ್ಶನ ಮಾಡಿದ್ದಾರೆ. ಇದು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು. ದಿನೇದಿನೇ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿ ನಿತ್ಯವೂ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದರ್ಶನ ಭಾಗ್ಯ ಪಡೆದು ಪುನೀತರಾದ ಧನ್ಯತೆ ಅನುಭವಿಸುತ್ತಿದ್ದಾರೆ. ಕೇದಾರನಾಥನ ಹಾದಿಗಳೆಲ್ಲವೂ ವಾಹನಗಳಿಂದ ತುಂಬಿಹೋಗಿದೆ. ಎಲ್ಲೆಡೆಯೂ ಟ್ರಾಫಿಕ್‌ ಜಾಮ್, ನೂಕುನುಗ್ಗಲು ಇತ್ಯಾದಿಗಳ ಸುದ್ದಿಗಳೇ ಕೇಳಿ ಬರುತ್ತಿವೆ. ಇದರಿಂದ ಇನ್ನು ಹೋಗಬೇಕೆಂದುಕೊಳ್ಳುವ ಆಸಕ್ತ ಭಕ್ತಾದಿಗಳ ಮನದಲ್ಲಿ ಒಂದು ಸಣ್ಣ ಗೊಂದಲವೂ ಎದ್ದಿವೆ. ಹಾಗಾದರೆ ಕೇದಾರನ ದರ್ಶನಕ್ಕೆ ಯಾವಾಗ, ಹೇಗೆ ಹೋಗಬೇಕು ಇತ್ಯಾದಿ ಇತ್ಯಾದಿ. ಈ ನಿಮ್ಮ ಗೊಂದಲಗಳಿಗೆ ಇಲ್ಲಿ ಪರಿಹಾರ ದೊರಕೀತು.

Kedarnath in India

ಜನಜಂಗುಳಿಯ ಗಮನ ಇರಲಿ

ಚಾರ್‌ಧಾಮ್‌ ಯಾತ್ರೆ ಆರಂಭವಾದ ತಕ್ಷಣ ಅನೇಕರು ದರ್ಶನಕ್ಕೆ ಹೊರಟುಬಿಡುತ್ತಾರೆ. ಆದರೆ, ಈ ಸಂದರ್ಭ ಶಾಲಾ ಕಾಲೇಜುಗಳಿಗೂ ರಜೆ ಇರುವುದರಿಂದ ಪ್ರವಾಸೀ ಸ್ಥಳಗಳಲ್ಲಿ, ಯಾತ್ರಾ ಸ್ಥಳಗಳಲ್ಲಿ ಸಹಜವಾಗಿಯೇ ಜನಜಂಗುಳಿ ಹೆಚ್ಚು. ಹಾಗಾಗಿ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಯಾತ್ರೆ ಸುಖಕರವಾಗಿ ಆಗದು. ನಿಮಗೆ ಬೇರೆ ಸಮಯದಲ್ಲಿ ರಜೆ ಸಿಕ್ಕೀತು ಎಂಬ ಧೈರ್ಯವಿದ್ದರೆ ಈಗ ಜನಜಂಗುಳಿಯಿರುವ ಮೇ ತಿಂಗಳಲ್ಲಿ ಹೋಗದೆ ಇರುವುದೇ ಒಳಿತು. ಜೂನ್‌, ಜುಲೈ ತಿಂಗಳಲ್ಲಿಯೂ ಉತ್ತರಾಖಂಡದ ವಾತಾವರಣದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲವಾದ್ದರಿಂದ ಈ ಎರಡು ತಿಂಗಳನ್ನೂ ನೀವು ಪರಿಗಣಿಸದೇ ಇರುವುದೇ ಒಳ್ಳೆಯದು. ಚಾರ್‌ಧಾಮ್‌ ಯಾತ್ರೆಯನ್ನು ನೆಮ್ಮದಿಯಿಂದ, ಕಡಿಮೆ ಜನರಿರುವ ಸಮಯದಲ್ಲಿ ಮಾಡಬೇಕೆನ್ನುವ ಆಸೆಯಿದ್ದರೆ, ನೀವು ಆಗಸ್ಟ್‌ನಿಂದ ಅಕ್ಟೋಬರ್‌ ಒಳಗೆ ಮಾಡುವುದು ಒಳಿತು. ಆ ಸಮಯದಲ್ಲಿ ವಾತಾವರಣವೂ ಅನುಕೂಲಕರವಾಗಿರುತ್ತದೆ. ಚಳಿ ತಡೆಯಬಲ್ಲಿರಾದರೆ ಅಕ್ಟೋಬರ್‌ ಪ್ರಶಸ್ತ.

ಹಿಮಾಲಯ ಪರ್ವತ ಪ್ರದೇಶದಲ್ಲಿ ಈ ಧಾಮಗಳಿರುವುದರಿಂದ ಖಂಡಿತವಾಗಿಯೂ ನೀವು ಅಂದುಕೊಂಡಂತೆ ಹವಾಮಾನ ಇರದು. ಅಲ್ಲಿ ಹೀಗೆಯೇ ಇದ್ದೀತೆಂದು ಊಹಿಸುವುದೂ ಕಷ್ಟ. ಇದ್ದಕ್ಕಿದ್ದಂತೆ ಮಳೆ ಬರಬಹುದು. ಬಿಸಿಲೂ ಇರಬಹುದು. ಭಾರೀ ಮಳೆಗೆ ರಸ್ತೆ ಕುಸಿದು ಬೀಳಬಹುದು. ಹಾಗಾಗಿ ಮಾನಸಿಕವಾಗಿ ಇಂತಹ ಅಡೆತಡೆಗಳಿಗೆ ಸಿದ್ಧವಾಗಿಯೇ ಹೋಗಿ. ಆದರೂ ನೀವು ಹೊರಡುವ ಮುನ್ನ ಹವಾಮಾನ ಮುನ್ಸೂಚನೆಯನ್ನೂ ಮೊದಲೇ ಪರೀಕ್ಷಿಸಿಕೊಳ್ಳಿ.

Kedarnath mountions

ಚಾರ್‌ಧಾಮ್‌ ಯಾತ್ರೆ ಮಾಡಲು ಯಾವುದೇ ಏಜೆನ್ಸಿಗಳ ಸಹಾಯ ಬೇಕಾಗಿಲ್ಲ. ನೀವು ಸರಿಯಾಗಿ ಈ ಬಗ್ಗೆ ಭೌಗೋಳಿಕವಾಗಿ ಕೊಂಚ ಓದಿ ತಿಳಿದುಕೊಂಡರೆ, ನಿಮ್ಮ ಪಾಡಿಗೆ ಸ್ವತಂತ್ರವಾಗಿ ಬುಕ್‌ ಮಾಡಿಕೊಳ್ಳಬಹುದು. ಇದು ಕಷ್ಟವೇನಲ್ಲ. ಆದರೆ ಇದು ನಿಮ್ಮಿಂದ ಸಾಧ್ಯವಿಲ್ಲ, ತಿಳಿಯದು ಎಂದಾದಲ್ಲಿ ಏಜೆನ್ಸಿ ಸಹಾಯ ಪಡೆಯಿರಿ. ನೀವೇ ನಿಮ್ಮಷ್ಟಕ್ಕೆ ಒಂದು ಸಣ್ಣ ಸಮಾನ ಆಸಕ್ತರ ಗುಂಪಿನ ಜೊತೆಗೆ ಹೋಗುವುದು ಅತ್ಯಂತ ಸೂಕ್ತ. ಆಗ ನಿಮ್ಮ ಆಯ್ಕೆಯ ದಿನಗಳಲ್ಲಿ, ನೀವಂದುಕೊಂಡ ಜಾಗಗಳಿಗೆ ಹೋಗಿ ಅಲ್ಲಿ ಅಂದಿಕೊಂಡದ್ದಕ್ಕಿಂತ ಹೆಚ್ಚು ತಂಗಬೇಕೆಂಬ ಬಯಕೆಯಾದಲ್ಲಿ ಅದನ್ನೂ ಮಾಡಬಹುದು. ಜೆನ್ಸಿಗಳ ಸಹಾಯವಿಲ್ಲದೆ ನಿಮ್ಮಷ್ಟಕ್ಕೆ ಹೋದರೆ ಇವೆಲ್ಲ ಆಯ್ಕೆಗಳು ನಿಮ್ಮ ಕೈಯಲ್ಲೇ ಇರುತ್ತವೆ ಎಂಬುದು ನೆನಪಿಡಿ.

ಹೇಗೆ ಹೋಗಬೇಕು?

ನವದೆಹಲಿ ಅಥವಾ ಡೆಹ್ರಾಡೂನ್‌ವರೆಗೆ ವಿಮಾನ ಪ್ರಯಾಣ ಮಾಡಿ ಅಲ್ಲಿಂದ ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ದಾಟಿಕೊಂಡು ಗೌರಿಕುಂಡ ಎಂಬಲ್ಲಿಗೆ ಸಾಗಬೇಕು.ಹರಿದ್ವಾರದಿಂದ ಗೌರಿಕುಂಡಕ್ಕೆ 123 ಕಿಮೀ ಆದರೂ, ಹಿಮಾಲಯದ ಕಡಿದಾದ ರಸ್ತೆಯಾಗಿರುವುದರಿಂದ ಈ ದಾರಿಯನ್ನು ಕ್ರಮಿಸಲು ಹೆಚ್ಚು ಸಮಯ ಬೇಕು ಎಂಬುದನ್ನು ನೆನಪಿಡಿ. ಗೌರಿಕುಂಡದಿಂದ ಕೇದಾರನವರೆಗೆ 18 ಕಿಮೀಗಳ ಚಾರಣ. ಈ ಹಾದಿಯನ್ನು ಕ್ರಮಿಸಲು ನಡೆಯಬಹುದು. ನಡೆಯಲು ಸಾಧ್ಯವಿಲ್ಲವೆಂದರೆ ಕುದುರೆ/ಪೋನಿ ಅಥವಾ ಹೊತ್ತುಕೊಂಡು ಹೋಗುವ ಮಂದಿಯ ಸಹಾಯವನ್ನು ಪಡೆಯಬಹುದು. ಹೆಲಿಕಾಪ್ಟರ್‌ ಸೇವೆಯನ್ನೂ ಪಡೆಯಬಹುದು.

ಹೆಲಿಕಾಪ್ಟರ್‌ ಸೇವೆ

ಕೇದಾರನಾಥಕ್ಕೆ ಹೋಗಲು ಹೆಲಿಕಾಪ್ಟರ್‌ ಸೌಲಭ್ಯವೂ ಇದೆ. ಈಗಾಗಲೇ ಬುಕ್ಕಿಂಗ್‌ ವ್ಯವಸ್ಥೆ ತೆರೆದಿದ್ದು, ಮೇ 10ರಿಂದ ಜೂನ್‌ 20 ಹಾಗೂ ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 31ರವರೆಗೆ ಹೆಲಿಕಾಪ್ಟರ್‌ ಸೇವೆ ಲಭ್ಯ ಇದೆ. IRCTC ಹೆಲಿಕಾಪ್ಟರ್‌ ಯಾತ್ರೆ ವೆಬ್‌ಸೈಟ್‌ (www.heliyatra.irctc.co.in) ತೆರೆದು ಅಲ್ಲಿ ಸೈನ್‌ ಅಪ್‌ ಮಾಡಿ ನಿಮ್ಮ ವಿವರಗಳನ್ನು ದಾಖಲು ಮಾಡಬೇಕು. ನಂತರ ಚಾರ್‌ಧಾಮ್‌ ಯಾತ್ರೆ ವಿವರಗಳ ಮೇಲೆ ಕ್ಲಿಕ್‌ ಮಾಡಿ ನಿಮಗೆ ಬೇಕಾದ ದಿನಾಂಕಕ್ಕೆ ಲಭ್ಯವಿರುವ ಹೆಲಿಕಾಪ್ಟರ್‌ ಸೇವೆಯನ್ನು ಹುಡುಕಿ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಟಿಕೆಟ್‌ ಕನ್‌ಫರ್ಮ್‌ ಆದ ಮೇಲೆ ಅದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ರಿಜಿಸ್ಟರ್‌ ಮಾಡಿ

ಇಷ್ಟೇ ಅಲ್ಲ, ಪ್ರತಿ ಕೇದಾರನಾಥ ಯಾತ್ರಿಯೂ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ಗೆ (https://registrationandtouristcare.uk.gov.in/signin.php) ಹೋಗಿ ಅಲ್ಲಿ ನಿಮ್ಮ ಕೇದಾರನಾಥ ಭೇಟಿಯ ವಿವರಗಳನ್ನು ಮೊದಲೇ ರಿಜಿಸ್ಟರ್‌ ಮಾಡಿಕೊಳ್ಳಬೇಕು. ನಕಲಿ ಟಿಕೆಟ್‌ ಜಾಲವೂ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಇಂತಹ ಮೋಸಕ್ಕೆ ಬಲಿಯಾಗಬೇಡಿ.

Continue Reading

ಪ್ರವಾಸ

Hampi Tour: ಹಂಪಿ ಪ್ರವಾಸದ ವೇಳೆ ಈ 10 ಸ್ಥಳಗಳಲ್ಲಿ ರಾಮಾಯಣದ ಕುರುಹುಗಳನ್ನು ಹುಡುಕಿ!

ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಹಂಪಿಯ (Hampi Tour) ಕಣಕಣದಲ್ಲೂ ಅದರ ಸೌಂದರ್ಯ ಅಡಗಿದೆ. ಪ್ರತಿಯೊಂದು ಹಾದಿಯೂ ತನ್ನದೇ ಆದ ಕಥೆಯನ್ನು ಹೇಳುತ್ತದೆ. ನಾವು ಶೋಧಿಸುತ್ತಾ ಹೋದಂತೆ ಮತ್ತಷ್ಟು ಹೊಸಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ.

VISTARANEWS.COM


on

By

Hampi Tour
Koo

ಧುಮ್ಮಿಕ್ಕುವ ತುಂಗಭದ್ರೆಯ (Tungabhadra) ಪಕ್ಕದಲ್ಲಿ ಗ್ರಾನೈಟ್ ಬಂಡೆಗಳ ಕಣಿವೆಗಳ ನಡುವೆ ಸುತ್ತುವರೆದಿರುವ ಹಂಪಿಯ (Hampi Tour) ಅವಶೇಷಗಳು ಇಂದಿಗೂ ಶ್ರೀಮಂತ ವಿಜಯನಗರ (vijayanagar) ಪರಂಪರೆಯನ್ನು ಪ್ರದರ್ಶಿಸುತ್ತಿವೆ. ವಿಠ್ಠಲ ದೇವಾಲಯ ಮತ್ತು ಪುರಾತನ ಕಲ್ಲಿನ ರಥದಂತಹ ಸಾಂಪ್ರದಾಯಿಕ ಆಕರ್ಷಣೆಗಳು ದೀರ್ಘಕಾಲಿಕ ಪ್ರವಾಸಿಗರನ್ನು ಸೆಳೆದರೂ ಇಲ್ಲಿ ಹಲವಾರು ಗುಪ್ತ ರತ್ನಗಳಿದ್ದು ಸಂಶೋಧಕ ಮನವುಳ್ಳವರನ್ನು ಬರ ಸೆಳೆಯುವುದು.

ಹಸಿರು ತೋಪುಗಳು, ಅಸ್ಪಷ್ಟವಾದ ಹಳ್ಳಿಯ ಗೂಡುಗಳು ಮತ್ತು ರಮಣೀಯ ಜಲಮೂಲಗಳು ಭವ್ಯವಾದ ಸಂಪತ್ತು ಇಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಹಲವಾರು ಕಲ್ಲಿನ ಗುಹೆಗಳಿಂದ ಹಿಡಿದು ಪಾಕಶಾಲೆಯ ರಹಸ್ಯಗಳು ಇನ್ನೂ ಇಲ್ಲಿ ಜೀವಂತವಾಗಿವೆ. ಹಂಪಿಯ ಆಕರ್ಷಣೆಯನ್ನು ಹೆಚ್ಚಿಸುವ ಇಲ್ಲಿ ಹಲವು ತಾಣಗಳಿದ್ದು, ಅವುಗಳಲ್ಲಿ ಹತ್ತು ಹೆಚ್ಚು ಸಂತೋಷವನ್ನು ಕೊಡುತ್ತದೆ.


ಅಂಜನಾದ್ರಿ ಬೆಟ್ಟ

ತುಂಗಭದ್ರಾ ನದಿಗೆ ಅಡ್ಡಲಾಗಿ ನೆಲೆಗೊಂಡಿರುವ ಅಂಜನಾದ್ರಿಯು ಒಂದು ಪವಿತ್ರ ಯಾತ್ರಾಸ್ಥಳ. ಇದು ಒಂದು ತುಲನಾತ್ಮಕವಾಗಿ ಅನಿಯಂತ್ರಿತ ಆಕರ್ಷಣೆಯನ್ನು ಶಾಶ್ವತವಾದ ಸಿದ್ಧಾಂತದೊಂದಿಗೆ ವಿಲೀನಗೊಳಿಸುವ ಪ್ರಕೃತಿಯ ಸೌಂದರ್ಯವನ್ನು ವಿವರಿಸುತ್ತದೆ. ರಾಮಾಯಣದ ಪ್ರಕಾರ ಇದು ಶಿವ- ವಾಯುವಿನ ಶಕ್ತಿ ರೂಪವಾದ ಹನುಮಂತನು ಅಂಜನಿ ದೇವಿಯ ಗರ್ಭದಿಂದ ಜನಿಸಿದ ಕ್ಷೇತ್ರವಿದು. ಸೀತಾ ದೇವಿ ಇಲ್ಲಿಗೆ ಬಂದ ಬಳಿಕ ಈ ಕ್ಷೇತ್ರ ಹೆಚ್ಚು ಪ್ರಸಿದ್ಧವಾಯಿತು ಎನ್ನಲಾಗುತ್ತದೆ. ಇದು ಇನ್ನೂ ಇಲ್ಲಿ ಗುಪ್ತವಾಗಿಯೇ ಉಳಿದಿದೆ. ಕೇವಲ ಹತ್ತು ನಿಮಿಷಗಳ ಮೋಟಾರು ದೋಣಿಯ ಮೂಲಕ ನೀರಿನಲ್ಲಿ ಸಂಚರಿಸಿ ಈ ಬೆಟ್ಟವನ್ನು ಕಾಣಬಹುದು.


ಪುರಂದರ ದಾಸ ಗುಹಾ ದೇವಾಲಯ

ಪುರಂದರ ದಾಸ ಗದ್ದಿಯಲ್ಲಿರುವ ಅಸ್ಪಷ್ಟವಾದ ಗುಹೆ ದೇವಾಲಯವು ಪಾರಂಪರಿಕ ಸಂಗೀತ ಸ್ಮಾರಕವಾಗಿದೆ. ಇದು ಸಂತ ಪುರಂದರ ದಾಸರು ಇಲ್ಲಿ ಧ್ಯಾನ ಮಗ್ನರಾಗಿರುತ್ತಿದ್ದರು ಎಂದು ನಂಬಲಾಗಿದೆ. 15ನೇ ಶತಮಾನದ ಈ ತಾಣವು ನೈಸರ್ಗಿಕವಾಗಿ ರೂಪುಗೊಂಡ ಗ್ರಾನೈಟ್ ಗುಹೆಗಳನ್ನು ಜೊತೆಗೆ ಪ್ರಾಚೀನ ಲಿಂಗದ ಅವಶೇಷಗಳನ್ನು ಹೊಂದಿದೆ. ಸಾಧುಗಳು ಮತ್ತು ಸಂಗೀತಗಾರರು ಆಗಾಗ್ಗೆ ಇಲ್ಲಿಗೆ ಭೇಟಿ ಮಾಡುತ್ತಾರೆ.


ಅಚ್ಯುತರಾಯ ದೇವಸ್ಥಾನ

ಅಚ್ಯುತರಾಯ ದೇವಾಲಯದ ಸಂಕೀರ್ಣದ ಕಥೆಯು ನಿರಂತರ ರಾಜವಂಶದ ಭಕ್ತಿಯ ಸುತ್ತ ಸುತ್ತುತ್ತದೆ. ತುಂಗಭದ್ರಾ ನದಿಯಿಂದ ಸುತ್ತುವರಿದಿರುವ 16ನೇ ಶತಮಾನದ ಸಂಕೀರ್ಣವಾದ ಇದು ಸಹೋದರ ಲಕ್ಷ್ಮಣನ ಜೊತೆಯಲ್ಲಿ ಭಗವಾನ್ ರಾಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಅನನ್ಯವಾದ ಅವಳಿ ಗರ್ಭಗುಡಿಯ ದೇವಾಲಯವಾಗಿದೆ. ಧರ್ಮನಿಷ್ಠ ವಿಜಯನಗರ ಚಕ್ರವರ್ತಿ ಅಚ್ಯುತದೇವ ರಾಯರಿಂದ ಸ್ಥಾಪಿಸಲ್ಪಟ್ಟಿದೆ. ವಿಟ್ಲ ದೇವಸ್ಥಾನದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಲ್ಲಿ ಈ ದೇವಾಲಯವನ್ನು ತಲುಪಬಹುದು.


ಸಣಾಪುರ ಸರೋವರ

ಹೆಚ್ಚಿನ ನಗರ ಪ್ರದೇಶಗಳು ಕಾಂಕ್ರೀಟ್ ಉದ್ಯಾನಗಳ ಮೂಲಕ ಪ್ರಕೃತಿಯ ಆನಂದವನ್ನು ಮಿತಿಗೊಳಿಸುತ್ತವೆ. ಆದರೆ ಗಮನಾರ್ಹವಾಗಿ ರಾಜಮನೆತನದ ಹಂಪಿ ಅರಮನೆಯ ಒಳ ನೋಟಗಳು ಹಳ್ಳಿಗಾಡಿನ ವಿಹಾರದ ಆನಂದವನ್ನು ಒದಗಿಸುತ್ತದೆ. ಸಣಾಪುರವು ವಿಟ್ಲ ದೇವಸ್ಥಾನದ ಹಿಂದೆ ಕೇವಲ ಎರಡು ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಈ ಪಾದಯಾತ್ರೆಯ ಹಾದಿ ಮರದ ಏರಿಳಿತಗಳೊಂದಿಗೆ ಭಾಗಶಃ ಸಂತೋಷಕರ ಪಿಕ್ನಿಕ್ ವಲಯವಾಗಿ ಮಾರ್ಪಡಿಸಲಾಗಿದೆ. ಸ್ಥಳೀಯ ಇತಿಹಾಸ, ಪುರಾತನ ಜಲಮೂಲ ಇಲ್ಲಿ ಪ್ರವಾಸಕ್ಕೆ ಮತ್ತಷ್ಟು ಸಂತೋಷವನ್ನು ತುಂಬಿಕೊಡುತ್ತದೆ. ಗ್ರೋವ್ ಹೂವುಗಳ ಸುವಾಸನೆ ತಂಗಾಳಿಯಲ್ಲಿ ದೋಣಿ ಸವಾರಿ, ಹಠಾತ್ತನೆ ಕಾಣಿಸುವ ಬೆಳ್ಳಕ್ಕಿಗಳು ಆಕರ್ಷಕ ಚಿತ್ರವನ್ನು ಮನದಲ್ಲಿ ಕೆತ್ತಿಸುತ್ತದೆ. ಮಾನವ ನಿರ್ಮಿತ ಆಕ್ವಾ ವಾಸ್ತುಶಿಲ್ಪಗಳ ಸೌಂದರ್ಯವನ್ನು ಇಲ್ಲಿ ಕಾಣಬಹುದು.


ಮಾತಂಗ ಬೆಟ್ಟಗಳು

ರಾಯಲ್ ಸೆಂಟರ್‌ನ ಪೂರ್ವದ ಮಾತಂಗ ಬೆಟ್ಟ ನೈಸರ್ಗಿಕ ಗ್ರಾನೈಟ್ ಬಂಡೆಗಳಲ್ಲಿ ಸುತ್ತುವರಿಯಲ್ಪಟ್ಟಿದೆ. ಪೌರಾಣಿಕ ಋಷಿ ಮಾತಂಗನ ಹೆಸರನ್ನು ಈ ಸ್ಥಳ ನೆನಪಿಸುತ್ತದೆ. ಪಕ್ಷಿಗಳು ಮತ್ತು ಲಾಂಗೂರ್ ಕೋತಿಗಳ ಗುಂಪುಗಳು ಗಮನ ಸೆಳೆಯುತ್ತವೆ. ಚಾರಣಪ್ರಿಯರು ಇಷ್ಟಪಡುವ ತಾಣವಿದು. ಕೆಲವು ಗಂಟೆಗಳಲ್ಲಿ ಹತ್ತಿ ಇಳಿಯಬಹುದು.


ಕಮಲಾಪುರ ಗ್ರಾಮ

ಮಾರುಕಟ್ಟೆ ಬೀದಿಗಳ ಆಚೆಗೆ ಇರುವ ಈ ಹಳ್ಳಿ ಇನ್ನೂ ಪುರಾತನ ದಿನಗಳನ್ನು ನೆನಪಿಸುತ್ತದೆ. ಮುಖ್ಯ ಪಟ್ಟಣದಿಂದ 14 ಕಿಲೋಮೀಟರ್ ದೂರದಲ್ಲಿರುವ ಕಮಲಾಪುರ ಕೃಷಿ ವಸಾಹತು, ಮಧ್ಯಕಾಲೀನ ಯುಗದ ಮಾಂತ್ರಿಕ ದೇವಾಲಯದ ಗೋಪುರಗಳನ್ನು ಹೊಂದಿದೆ. ಪಚ್ಚೆ ಹೊಲಗಳ ನಡುವೆ ವಾರ್ಷಿಕ ಜಾತ್ರೆಗಳು ಇಲ್ಲಿ ಸೌಂದರ್ಯವನ್ನು ಸಾರುತ್ತದೆ. ಇಲ್ಲಿನ ಹಿರಿಯರು ಸುಮಾರು ಒಂದು ಶತಮಾನದ ಹಿಂದೆ ತಮ್ಮ ಬಾಲ್ಯದಿಂದಲೂ ಹಾಳಾದ ಕೋಟೆಗಳ ಬಗ್ಗೆ ಆಸಕ್ತಿದಾಯಕ ಕಥೆಗಳನ್ನು ವಿವರಿಸುತ್ತಿದ್ದರೆ ಕೇಳುವುದೇ ಚಂದ. ಹಳ್ಳಿಯ ಪಾಕಪದ್ಧತಿಯು ಇಲ್ಲಿ ಎಲ್ಲರ ತನುಮನವನ್ನು ಸಂತೃಪ್ತಗೊಳಿಸುವುದು.


ರಘುನಾಥಸ್ವಾಮಿ ದೇವಾಲಯ

ಗತಕಾಲದ ವಾಸ್ತುಶೈಲಿ ಇನ್ನೂ ಅಖಂಡವಾಗಿರುವ ದೇವಾಲಯವಿದು. ರಘುನಾಥಸ್ವಾಮಿ ದೇವಾಲಯವು ಅಚ್ಚರಿಯ ವಾಸ್ತುಶಿಲ್ಪದೊಂದಿಗೆ ಇತಿಹಾಸ ಹಿನ್ನೋಟವನ್ನು ಅದ್ಭುತವನ್ನು ವಿವರಿಸುತ್ತದೆ. ಸುಂದರವಾದ ಬಂಡೆಗಳಿಂದ ಸುತ್ತುವರಿದಿರುವ 16ನೇ ಶತಮಾನದ ಈ ಸ್ಥಳ ಅದ್ಭುತವಾಗಿದೆ. ಸಾಂಪ್ರದಾಯಿಕ ದೀಪದ ಕಲ್ಲಿನ ಕಂಬಗಳು, ರಾಮ-ಸೀತೆಯ ಕಪ್ಪು ಗ್ರಾನೈಟ್ ವಿಗ್ರಹಗಳು ಸೊಗಸಾಗಿವೆ. ವಿಠಲ ದೇವಸ್ಥಾನದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಲ್ಲಿ ಈ ದೇವಾಲಯವನ್ನು ತಲುಪಬಹುದು.


ಹಂಪಿ ಬಜಾರ್

ಹಳ್ಳಿಗಾಡಿನ ಮೋಜು ಮಸ್ತಿಗಳು ಜೀವಂತವಾಗಿರುವುದನ್ನು ಕಾಣಬೇಕಾದರೆ ಹಂಪಿ ಬಜಾರ್‌ಗೆ ಭೇಟಿ ನೀಡಬೇಕು. ಪ್ರಾದೇಶಿಕ ಜನಾಂಗೀಯ ವೈವಿಧ್ಯತೆಯನ್ನು ವೈಭವಯುತವಾಗಿ ವ್ಯಕ್ತಪಡಿಸುವ ಹಂಪಿ ಬಜಾರ್ ಜನವರಿಯ ಪೊಂಗಲ್ ಹಬ್ಬಗಳ ಸಮಯದಲ್ಲಿ ಸಂದರ್ಶಕರನ್ನು ಆಕರ್ಷಿಸುತ್ತದೆ. ಭಾವಪೂರ್ಣವಾದ ಜಾನಪದ ನೃತ್ಯಗಳು, ಜಾನುವಾರು ಓಟಗಳು ಮತ್ತು ವರ್ಣರಂಜಿತ ರಂಗೋಲಿ ಸ್ಪರ್ಧೆಗಳು ಬಯಲು ರಂಗದಲ್ಲಿ ನಡೆಯುತ್ತವೆ. ಬಿದಿರು ಚಿಗುರು ಪುಲಾವ್ ಅಥವಾ ತೆಂಗಿನಕಾಯಿ-ಬೆಲ್ಲದ ಲಡ್ಡೂಗಳಂತಹ ರುಚಿಕರವಾದ ಪ್ರಾದೇಶಿಕ ಖಾದ್ಯಗಳನ್ನು ಇಲ್ಲಿ ಸವಿಯಬಹುದು.


ವಿರೂಪಾಕ್ಷ ಗುಹೆ

ಇಲ್ಲಿಯ ವಿರೂಪಾಕ್ಷನ ಗುಹೆ ಪುರಾತನ ಕಥೆಗಳನ್ನು ವರ್ಣಿಸುತ್ತದೆ. ಶಿಲಾಯುಗದ ರಾಕ್ ಕಲೆಯೊಂದಿಗೆ ನವಶಿಲಾಯುಗದ ಅವಶೇಷಗಳೊಂದಿಗೆ ಸಮಾಧಿ ಕೋಣೆಗಳು, ಬಾಗಿದ ಗುಹೆಯ ಗೋಡೆಗಳು ಅಥವಾ ಗ್ರಾನೈಟ್ ಬಂಡೆಯ ಮೇಲ್ಮೈಗಳಾದ್ಯಂತ ಪ್ರಾಣಿಗಳು, ಬುಡಕಟ್ಟು ಆಚರಣೆಗಳು ಗಮನ ಸೆಳೆಯುತ್ತವೆ. ಆಧುನಿಕ ಹಂಪಿ ಬಳಿ ನದಿ ಕಣಿವೆಯ ಉದ್ದಕ್ಕೂ ವಿಭಿನ್ನ ಸಂಸ್ಕೃತಿಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಪ್ಯಾಲಿಯೊಲಿಥಿಕ್ ವಸಾಹತು ವಲಯ ಎದ್ದು ಕಾಣುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?


ಆನೆಗುಂದಿ

ನದಿಯ ದಡದ ಆನೆಗುಂದಿಯ ಸುಂದರವಾದ ಪ್ರದೇಶ ಇಲ್ಲಿಯ ಮತ್ತೊಂದು ಆಕರ್ಷಣೆ. ಇದು ರಾಮಾಯಣ ಕಾಲದಲ್ಲಿ ಸುಗ್ರೀವ ವಾಸವಾಗಿದ್ದ ಪವಿತ್ರ ಸ್ಥಳವೆಂದು ನಂಬಲಾಗಿದೆ. ವಿಜಯನಗರ ಶೈಲಿಯು ಗುಪ್ತ ಪ್ರಾಂಗಣಗಳು ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಹಂಪಿಯ ಆಕರ್ಷಣೆ ಅಲ್ಲಿನ ಪ್ರತಿಯೊಂದು ಕಣಕಣದಲ್ಲೂ ಇದೆ.

Continue Reading
Advertisement
karnataka weather Forecast
ಮಳೆ40 mins ago

Karnataka Weather : ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!‌

COMEDK UGET 2024
ಪ್ರಮುಖ ಸುದ್ದಿ2 hours ago

COMEDK UGET 2024 : ಇಂದು ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ; ರಿಸಲ್ಟ್​ ನೋಡೋದು, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

Tips On Tea
ಆರೋಗ್ಯ2 hours ago

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

Dina Bhavishya
ಭವಿಷ್ಯ2 hours ago

Dina Bhavishya : ಆತುರದಲ್ಲಿ ಈ ರಾಶಿಯವರು ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ

Narendra Modi
ದೇಶ7 hours ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ8 hours ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ8 hours ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Naxals
ದೇಶ8 hours ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ9 hours ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌