Prasidh Krishna : ಕನ್ನಡಿಗ ಪ್ರಸಿದ್ಧ್​ ಕೃಷ್ಣ ವಿಶ್ವ ಕಪ್​ಗೂ ಡೌಟ್​, ಇನ್ನೂ ಸುಧಾರಿಸಿಕೊಳ್ಳದ ವೇಗದ ಬೌಲರ್​ - Vistara News

ಕ್ರಿಕೆಟ್

Prasidh Krishna : ಕನ್ನಡಿಗ ಪ್ರಸಿದ್ಧ್​ ಕೃಷ್ಣ ವಿಶ್ವ ಕಪ್​ಗೂ ಡೌಟ್​, ಇನ್ನೂ ಸುಧಾರಿಸಿಕೊಳ್ಳದ ವೇಗದ ಬೌಲರ್​

ಪ್ರಸಿದ್ಧ್​ ಕೃಷ್ಣ (Prasidh Krishna) ಅವರಿಗೆ ಆಗಿರುವ ಬೆನ್ನು ನೋವಿನ ಸಮಸ್ಯೆಯಿಂದ ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಆರು ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.

VISTARANEWS.COM


on

prasiddh krishna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂಬರುವ ಏಷ್ಯಾ ಕಪ್​ ಹಾಗೂ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್​ಗೆ (Prasidh Krishna) ಸದೃಢ ತಂಡವನ್ನು ರಚಿಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಆದರೆ, ಇಬ್ಬರು ಯುವ ಕ್ರಿಕೆಟಿಗರ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ ಎನ್ನಲಾಗುತ್ತಿದೆ. ಅವರೇ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್​ ಹಾಗೂ ಕನ್ನಡಿಗ ಪ್ರಸಿದ್ಧ್​ ಕೃಷ್ಣ. ಅದರಲ್ಲೂ ಪ್ರಸಿದ್ಧ್​ ಕೃಷ್ಣ ಅವರು ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಆರು ತಿಂಗಳು ಬೇಕು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಅಲಭ್ಯತೆ ಅನುಮಾನ ಎನ್ನಲಾಗಿದೆ.

ಪ್ರಸಿದ್ಧ್​ ಕೃಷ್ಣ ಕಳೆದ ಆರು ತಿಂಗಳಿಂದ ಟೀಮ್​ ಇಂಡಿಯಾದ ಪರವಾಗಿ ಆಡುತ್ತಿಲ್ಲ. ಅವರು ಬೆನ್ನು ಒತ್ತಡ ಗಾಯದ ಸಮಸ್ಯೆಯಿಂದಾಗಿ ಅವರು ಆಡುತ್ತಿಲ್ಲ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಆದರೆ ವರದಿಯ ಪ್ರಕಾರ ಇನ್ನೂ ಆರು ತಿಂಗಳು ಅವರು ಆಡುವುದಕ್ಕೆ ಸಾಧ್ಯವಿಲ್ಲ. ಇನ್ನಷ್ಟು ದಿನಗಳ ಕಾಲ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ.

ಪ್ರಸಿದ್ಧ್​ ಕೃಷ್ಣ 2022ರಲ್ಲಿ ಜಿಂಬಾಬ್ವೆ ವಿರುದ್ಧ ಏಕ ದಿನ ಸರಣಿಯಲ್ಲಿ ಆಡಿದ್ದರು. ಅಲ್ಲಿಯವರೆಗೆ 14 ಪಂದ್ಯಗಳಲ್ಲಿ 25 ವಿಕೆಟ್​ಗಳನ್ನು ಕಬಳಿಸಿದ್ದಾರೆ. 5.32 ಎಕಾನಮಿ ರೇಟ್​ ಹಾಗೂ 23.92 ಸರಾಸರಿ ಹೊಂದಿದ್ದಾರೆ.

ಇದನ್ನೂ ಓದಿ : Indian Cricket Team | ರಾಹುಲ್​ಗೆ ಒಡಿಐ ವಿಶ್ವ ಕಪ್​ನಲ್ಲಿ ಅವಕಾಶ ಸಿಗದು ಎಂದು ಭವಿಷ್ಯ ನುಡಿದ ಮಾಜಿ ಕೋಚ್​

ಪ್ರಸಿದ್ಧ್​ ಕೃಷ್ಣಗೆ ಅಗಿರುವ ಒತ್ತಡ ಗಾಯದ ಸಮಸ್ಯೆಯಿಂದ ಹೊರ ಬರಲು ಎಷ್ಟು ದಿನ ಬೇಕಾಗಬಹುದು ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬ ಆಟಗಾರನೂ ವಿಭಿನ್ನ ದೇಹ ಲಕ್ಷಣ ಹೊಂದಿರುತ್ತಾರೆ. ಗಾಯದಿಂದ ಗುಣಮುಖರಾಗುವ ಸಮಯವೂ ಭಿನ್ನವಾಗಿರುತ್ತದೆ. ಪ್ರಸಿದ್ಧ್​ ಕೃಷ್ಣ ಇನ್ನೂ ಫಿಟ್​ ಆಗಿಲ್ಲ ಹಾಗೂ ಇನ್ನೂ ಆರು ತಿಂಗಳು ಬೇಕಾಗಬಹುದು ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SL : ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ಪಡೆ

IND vs SL :ಭಾರತ ತಂಡ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳು ಮುಗಿಯುವ ವೇಳೆ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಲಂಕಾ 1 ರನ್ ಬಾರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಮ್ಮ ಅವಕಾಶವನ್ನು ಕೊನೆಗೊಳಿಸಿತು. ಭಾರತ ಪರ ಸೂರ್ಯಕುಮಾರ್ ಮೊದಲ ಎಸೆತಕ್ಕೆ ಫೋರ್ ಬಾರಿಸಿ ಜಯ ತಂದುಕೊಟ್ಟರು.

VISTARANEWS.COM


on

IND vs SL
Koo

ಪಲ್ಲೆಕೆಲೆ: ಮೂರು ಪಂದ್ಯಗಳ ಟಿ20 ಸರಣಿಯ (IND vs SL) ಕೊನೇ ಪಂದ್ಯದಲ್ಲೂ ಭಾರತ ತಂಡ ಶ್ರೀಲಂಕಾ ವಿರುದ್ಧ ಗೆದ್ದಿದೆ. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಸೂಪರ್​ ಓವರ್​ ಮೂಲಕ ಭಾರತ ಜಯ ಕಂಡಿದೆ. ನಿಗದಿತ ಓವರ್​ಗಳ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಭಾರತ ಅತ್ಯಂತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಅಲ್ಲದೆ, ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಸರಣಿಯ ಮೂಲಕ ನಾಯಕ ಸೂರ್ಯಕುಮಾರ್ ಯಾದವ್​ ಮೊದಲ ಸರಣಿಯಲ್ಲೇ ಯಶಸ್ಸು ಕಂಡರೆ, ಕೋಚ್​ ಗೌತಮ್ ಗಂಭೀರ್​ಗೂ ಶುಭಾರಂಭದ ಸಿಹಿ ದೊರೆಯಿತು.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳು ಮುಗಿಯುವ ವೇಳೆ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಲಂಕಾ 1 ರನ್ ಬಾರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಮ್ಮ ಅವಕಾಶವನ್ನು ಕೊನೆಗೊಳಿಸಿತು. ಭಾರತ ಪರ ಸೂರ್ಯಕುಮಾರ್ ಮೊದಲ ಎಸೆತಕ್ಕೆ ಫೋರ್ ಬಾರಿಸಿ ಜಯ ತಂದುಕೊಟ್ಟರು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಉತ್ತಮ ಆರಂಭ ದೊರಕಿತು. ಮೊದಲ ವಿಕೆಟ್​ಗೆ 58 ರನ್ ಬಾರಿಸಿತು. ಪಾಥುಮ್ ನಿಸ್ಸಾಂಕ 26 ರನ್ ಬಾರಿಸಿದರೆ ಕುಸಾಲ್ ಮೆಂಡಿಸ್​ 43 ರನ್ ಬಾರಿಸಿದರು. ಇವರಿಬ್ಬರ ಆಟದಿಂದಾಗಿ ಲಂಕಾಗೆ ಉತ್ತಮ ಲಾಭ ದೊರಕಿತು. ಬಳಿಕ ಕುಸಾಲ್ ಪೆರೆರಾ 34 ಎಸೆತಕ್ಕೆ 44 ರನ್ ಬಾರಿಸಿ ಗುರಿಯ ಸಮೀಪಕ್ಕೆ ರನ್ ತಂದಿಟ್ಟರು. ವಾನಿಂದು ಹಸರಂಗ 3 ರನ್ ಗೆ ಔಟಾದರೆ ಚರಿತ್ ಅಸಲಂಕಾ ಶೂನ್ಯಕ್ಕೆ ಔಟಾದರು. ಅಲ್ಲಿಂದ ಲಂಕಾ ತಂಡದ ಪತನ ಶುರುವಾಯಿತು.110 ರನ್​ಗೆ 2 ವಿಕೆಟ್ ನಷ್ಟ ಮಾಡಿಕೊಂಡಿದ್ದ ಲಂಕಾ ಮುಂದಿನ 22 ರನ್ ಮಾಡುವಷ್ಟರಲ್ಲಿ 6 ವಿಕೆಟ್ ನಷ್ಟ ಮಾಡಿಕೊಂಡಿತು. ರಿಂಕ ಸಿಂಗ್​, ಸೂರ್ಯಕುಮಾರ್ ಯಾದವ್​, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು. ಸೂಪರ್ ಓವರ್​ನಲ್ಲೂ ಬಿಷ್ಣೋಯಿ 2 ವಿಕೆಟ್ ಪಡೆದು ಭಾರತದ ಗೆಲುವನ್ನು ಸುಲಭವಾಗಿಸಿದರು.

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತ ತಂಡ ಬ್ಯಾಟಿಂಗ್​ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.. 11 ರನ್​ಗೆ ಮೊದಲ ವಿಕೆಟ್​ ನಷ್ಟ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್​ 10 ರನ್​ಗೆ ಸೀಮಿತಗೊಂಡರು. ಶುಭ್​ಮನ್ ಗಿಲ್​ 39 ರನ್ ಬಾರಿಸಿ ಚೈತನ್ಯ ತಂದರೂ ಅವರಿಗೆ ಹೆಚ್ಚು ಹೊತ್ತು ಇನಿಂಗ್ಸ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರು ಔಟಾದ ಬಳಿಕ ಭಾರತ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್​ ಮತ್ತೊಂದು ಬಾರಿ ಶೂನ್ಯಕ್ಕೆ ಔಟಾದರು. ಅವರು ಎರಡನೇ ಪಂದ್ಯದಲ್ಲೂ ಡಕ್​ಔಟ್ ಆಗಿದ್ದರು. ಈ ಮೂಲಕ ಅಭಿಮಾನಿಗಳ ಕೋಪಕ್ಕೆ ಕಾರಣರಾದರು.

ಇದನ್ನೂ ಓದಿ: ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡ ರಿಂಕು ಸಿಂಗ್ ನಿರಾಸೆ ಮೂಡಿಸಿ ಒಂದು ರನ್​ಗೆ ಔಟಾದರು. ಬಳಿಕ ಬಂದ ನಾಯಕ ಸೂರ್ಯಕುಮಾರ್​ ಯಾದವ್ ಕೂಡ 8 ರನ್​ಗೆ ಸೀಮಿತಗೊಂಡರು. ಈ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದ ಶಿವಂ ದುಬೆ 13 ರನ್ ಬಾರಿಸಿ ನಿರ್ಗಮಿಸಿದರು. ಬಳಿಕ ರಿಯಾನ್ ಪರಾಗ್​ 26 ರನ್ ಹಾಗೂ ವಾಷಿಂಗ್ಟನ್ ಸುಂದರ್​ 25 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

Continue Reading

ಪ್ರಮುಖ ಸುದ್ದಿ

Rashid Khan : ಟಿ20 ಕ್ರಿಕೆಟ್​ನಲ್ಲಿ ವಿಕೆಟ್​ಗಳ ಹೊಸ ಮೈಲುಗಲ್ಲು ಸೃಷ್ಟಿಸಿದ ಅಫಘಾನಿಸ್ತಾನ ಬೌಲರ್ ರಶೀದ್ ಖಾನ್​

Rashid Khan : ಬೌಲರ್ ಡಾಟ್ ಬಾಲ್ ಸೇರಿದಂತೆ 20 ಎಸೆತಗಳಲ್ಲಿ ಕೇವಲ 24 ರನ್​ಗಳನ್ನು ಬಿಟ್ಟುಕೊಟ್ಟರು. ಅದೇ ರೀತಿ ಅವರು 9 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 15 ರನ್ ಸಿಡಿಸಿ ಔಟಾದರು. ಮ್ಯಾಂಚೆಸ್ಟರ್​ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಕೆಟ್ಸ್ ತಂಡ 145 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ರಾಕೆಟ್ಸ್ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.

VISTARANEWS.COM


on

Rashid Khan
Koo

ಬೆಂಗಳೂರು: ಪುರುಷರ ಹಂಡ್ರೆಡ್ ಕ್ರಿಕೆಟ್​ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್ ನಡುವಿನ ಪಂದ್ಯದ ಸಮಯದಲ್ಲಿ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಹೊಸ ದಾಖಲೆ ಮಾಡಿದ್ದಾರೆ, ವೆಸ್ಟ್ ಇಂಡೀಸ್​ನ ಡ್ವೇನ್ ಬ್ರಾವೋ ನಂತರ ಕ್ರಿಕೆಟ್​​ನಲ್ಲಿ 600 ವಿಕೆಟ್ ಪಡೆದ ಮೊದಲ ಸ್ಪಿನ್ನರ್​​ ಮತ್ತು ಒಟ್ಟಾರೆ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ರಶೀದ್ ಖಾನ್ ಪಾತ್ರರಾಗಿದ್ದಾರೆ.

ರಶೀದ್ ಖಾನ್ ಇತ್ತೀಚಿನ ವರ್ಷಗಳಲ್ಲಿ ವಿವಿಧ ಜಾಗತಿಕ ಲೀಗ್​​ಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ (ಎಂಎಸ್​​ಸಿ) 2024 ಋತುವಿನಲ್ಲಿ ಎಂಐ ನ್ಯೂಯಾರ್ಕ್ ಪರ ಆಡಿದ ನಂತರ ಅಫ್ಘಾನಿಸ್ತಾನದ ನಾಯಕ ಟ್ರೆಂಟ್ ರಾಕೆಟ್ಸ್​​ ಸೇರಿ್ದರು. ಈ ವರ್ಷದ ಪುರುಷರ ಹಂಡ್ರೆಡ್​​ನಲ್ಲಿ ತಮ್ಮ ಮೊದಲ ಪ್ರದರ್ಶನದಲ್ಲಿ ಅವರು ಎರಡು ವಿಕೆಟ್​ಗಳನ್ನು ಪಡೆದಿದ್ದಾರೆ.

ಬೌಲರ್ ಡಾಟ್ ಬಾಲ್ ಸೇರಿದಂತೆ 20 ಎಸೆತಗಳಲ್ಲಿ ಕೇವಲ 24 ರನ್​ಗಳನ್ನು ಬಿಟ್ಟುಕೊಟ್ಟರು. ಅದೇ ರೀತಿ ಅವರು 9 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 15 ರನ್ ಸಿಡಿಸಿ ಔಟಾದರು. ಮ್ಯಾಂಚೆಸ್ಟರ್​ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಕೆಟ್ಸ್ ತಂಡ 145 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ರಾಕೆಟ್ಸ್ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.

600 ವಿಕೆಟ್ ಪೂರೈಸಿದ ರಶೀದ್ ಖಾನ್

ಟಿ20 ಕ್ರಿಕೆಟ್​​ನಲ್ಲಿ 600 ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ರಶೀದ್ ಖಾನ್ ಪಾತ್ರರಾಗಿದ್ದಾರೆ. ಅವರು ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ಕಿರಿಯ ಮತ್ತು ವೇಗದ ಕ್ರಿಕೆಟಿಗ. ಅವರು ಕೇವಲ 438 ಇನ್ನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಅವರು 18.25 ಸರಾಸರಿ ಮತ್ತು 6.47 ಎಕಾನಮಿ ರೇಟ್​ನಲ್ಲ 600 ವಿಕೆಟ್​ಗಳನ್ನು ಪಡೆದಿದ್ದಾರೆ. 2015 ರಲ್ಲಿ ಟಿ20 ಐ ಗೆ ಪಾದಾರ್ಪಣೆ ಮಾಡಿದಾಗಿನಿಂದ ಅವರು ಸುಮಾರು 20 ತಂಡಗಳಿಗಾಗಿ ಆಡಿದ್ದಾರೆ.

ಡ್ವೇನ್ ಬ್ರಾವೋ 543 ಟಿ20 ಇನ್ನಿಂಗ್ಸ್​​ನಲ್ಲಿ 630 ವಿಕೆಟ್​ಗಳೊಂದಿಗೆ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸುನಿಲ್ ನರೈನ್ 519 ಪಂದ್ಯಗಳಲ್ಲಿ 6.12 ಎಕಾನಮಿ ರೇಟ್​ನಲ್ಲಿ 557 ವಿಕೆಟ್ ಉರುಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಅನುಭವಿ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 405 ಪಂದ್ಯಗಳಲ್ಲಿ 502 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 444 ಪಂದ್ಯಗಳಲ್ಲಿ 492 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

ರಶೀದ್ ಖಾನ್ 93 ಅಂತಾರಾಷ್ಟ್ರೀಯ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 14.14 ಸರಾಸರಿ ಮತ್ತು 6.08 ಎಕಾನಮಿ ರೇಟ್ನಲ್ಲಿ 152 ವಿಕೆಟ್​ಗಳನ್ನು ಪಡೆದಿದ್ದಾರೆ. ಐಪಿಎಲ್​​ನಲ್ಲಿ 121 ಪಂದ್ಯಗಳಲ್ಲಿ 21.82ರ ಸರಾಸರಿಯಲ್ಲಿ 149 ವಿಕೆಟ್ ಪಡೆದಿದ್ದಾರೆ. ರಶೀದ್ 2017 ರಿಂದ 2021 ರವರೆಗೆ ಸನ್ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ಪರ ಆಡಿದ್ದರು. ನಂತರ ಗುಜರಾತ್​ ಟೈಟನ್ಸ್ ಸೇರಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

ICC T20 ranking : ಇಂಗ್ಲೆಂಡ್​​ನ ಸೋಫಿ ಎಕ್ಲೆಸ್ಟೋನ್ (772) ಮತ್ತು ಸಾರಾ ಗ್ಲೆನ್ (760) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮಾ (755) ಮೂರನೇ ಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಸಾದಿಯಾ ಇಕ್ಬಾಲ್ (743) ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಷ್ಯಾಕಪ್ನಲ್ಲಿ 6 ವಿಕೆಟ್ ಪಡೆದ ರಾಧಾ ಯಾದವ್ 5ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಏಳು ಸ್ಥಾನಗಳನ್ನು ಏರಿದ ನಂತರ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ.

VISTARANEWS.COM


on

ICC T20 ranking
Koo

ಬೆಂಗಳೂರು: ಮಂಗಳವಾರ ಬಿಡುಗಡೆಯಾದ ಐಸಿಸಿ ಟಿ 20 ಐ ಶ್ರೇಯಾಂಕದ (ICC T20 ranking) ಪ್ರಕಾರ ವೇಗಿ ರೇಣುಕಾ ಸಿಂಗ್ ಠಾಕೂರ್ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ವೇಳೆ ಭಾರತದ ಬ್ಯಾಟರ್ಸ್ಮೃ ತಿ ಮಂದಾನ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಮಹಿಳಾ ಟಿ 20 ಏಷ್ಯಾ ಕಪ್ ಫೈನಲ್​​ನಲ್ಲಿ ಶ್ರೀಲಂಕಾ ವಿರುದ್ಧ ನಿರ್ಣಾಯಕ 60 ರನ್ ಗಳಿಸಿದ ನಂತರ ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಮಂದಾನ 743 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಈ ಟೂರ್ನಿಯಲ್ಲಿ ಏಳು ವಿಕೆಟ್ ಪಡೆದ ಬೌಲರ್ ರೇಣುಕಾ ಈಗ 722 ರೇಟಿಂಗ್ ಅಂಕಗಳೊಂದಿಗೆ ಬೌಲರ್​ಗಳ ಪೈಕಿ ಐದನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್​​ನ ಸೋಫಿ ಎಕ್ಲೆಸ್ಟೋನ್ (772) ಮತ್ತು ಸಾರಾ ಗ್ಲೆನ್ (760) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮಾ (755) ಮೂರನೇ ಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಸಾದಿಯಾ ಇಕ್ಬಾಲ್ (743) ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಷ್ಯಾಕಪ್ನಲ್ಲಿ 6 ವಿಕೆಟ್ ಪಡೆದ ರಾಧಾ ಯಾದವ್ 5ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಏಳು ಸ್ಥಾನಗಳನ್ನು ಏರಿದ ನಂತರ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಬೆತ್ ಮೂನಿ (769) ಮತ್ತು ತಹ್ಲಿಯಾ ಮೆಕ್​ಗ್ರಾತ್​ (762) ಅಗ್ರ ಎರಡು ವೆಸ್ಟ್ ಇಂಡೀಸ್​​ನ ಹೇಲಿ ಮ್ಯಾಥ್ಯೂಸ್ (746) ಮೂರನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಆರನೇ ಸ್ಥಾನದಲ್ಲಿದ್ದಾರೆ.

ಏಷ್ಯಾಕಪ್ ಫೈನಲ್​​ನಲ್ಲಿ ಭಾರತ ವಿರುದ್ಧ 61 ರನ್ ಗಳಿಸಿದ ಶ್ರೀಲಂಕಾದ ನಾಯಕಿ ಚಾಮರಿ ಅಟ್ಟಪಟ್ಟು ಮೂರು ಸ್ಥಾನ ಮೇಲಕ್ಕೇರಿ 705 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Asian Cricket Council : ಜಯ್​ ಶಾ ಹೊಂದಿರುವ ಉನ್ನತ ಸ್ಥಾನದ ಮೇಲೆ ಕಣ್ನಿಟ್ಟಿರುವ ಪಾಕಿಸ್ತಾನ ಮೊಹ್ಸಿನ್ ನಖ್ವಿ

“ಸ್ಪೂರ್ತಿದಾಯಕ ಆಟಗಾರ್ತಿ ಚಾಮರಿ ಅವರು ಏಷ್ಯಾ ಕಪ್​ನಲ್ಲಿ 100 ರ ಸರಾಸರಿಯಲ್ಲಿ 304 ರನ್​ಗಳನ್ನು ಒಳಗೊಂಡ ಪಂದ್ಯಾವಳಿಯ ವೀರೋಚಿತ ಪ್ರದರ್ಶನ ನೀಡಿದ್ದರು. ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅನ್ನು ಹೊಂದುವ ಮೂಲಕ ಅದೇ ಪಟ್ಟಿಯಲ್ಲಿ ಮೂರು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ಏಷ್ಯಾಕಪ್ ಮುಕ್ತಾಯದ ನಂತರ, ಪಾಕಿಸ್ತಾನದ ಮುನೀಬಾ ಅಲಿ ಟಿ 20 ಐ ಬ್ಯಾಟರ್​ಗಳ ಪಟ್ಟಿಯಲ್ಲಿ ಆರು ಸ್ಥಾನ ಮೇಲಕ್ಕೇರಿ 35 ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ನಾಯಕ ನಿಗರ್ ಸುಲ್ತಾನಾ ಮೂರು ಸ್ಥಾನ ಮೇಲಕ್ಕೇರಿ 14 ನೇ ಸ್ಥಾನದಲ್ಲಿದ್ದಾರೆ. ಫೈನಲ್​​ನಲ್ಲಿ ಅಜೇಯ 69 ರನ್ ಗಳಿಸಿದ ಶ್ರೀಲಂಕಾದ ಹರ್ಷಿತಾ ಸಮರವಿಕ್ರಮ ಗರಿಷ್ಠ ಸ್ಕೋರ್ ಗಳಿಸಿದ ನಂತರ 20 ನೇ ಸ್ಥಾನ ತಲುಪಿದ್ದಾರೆ.

Continue Reading

ಪ್ರಮುಖ ಸುದ್ದಿ

Asian Cricket Council : ಜಯ್​ ಶಾ ಹೊಂದಿರುವ ಉನ್ನತ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ಮೊಹ್ಸಿನ್ ನಖ್ವಿ

Asian Cricket Council : 2021 ರಲ್ಲಿ ಎಹ್ಸಾನ್ ಮಣಿ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದವರು ತಮ್ಮ ಪೂರ್ಣ ಅವಧಿಯನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕೇವಲ 15 ತಿಂಗಳು ಸೇವೆ ಸಲ್ಲಿಸಿದರೆ, ನಜಾಮ್ ಸೇಥಿ ಮತ್ತು ಝಕಾ ಅಶ್ರಫ್ ತಲಾ ಒಂದು ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿದರು. ಮೊಹ್ಸಿನ್ ನಖ್ವಿ ಕೂಡ ಈ ಸ್ಥಾನವನ್ನು ಹೊಂದಿದ್ದಾರೆ

VISTARANEWS.COM


on

Asian Cricket Council
Koo

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್​​ನ (Asian Cricket Council) ಹೊಸ ಪಾತ್ರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಪಾಕಿಸ್ತಾನದ ಮಾಧ್ಯಮಗಳ ಇತ್ತೀಚಿನ ಸುದ್ದಿ ವರದಿಗಳ ಪ್ರಕಾರ, ಪ್ರಸ್ತುತ ಅಧ್ಯಕ್ಷ ಜಯ್ ಶಾ ಹೊಂದಿರುವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್​​ನ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ.

ಈ ವರ್ಷದ ಆರಂಭದಲ್ಲಿ ಮೊಹ್ಸಿನ್ ನಖ್ವಿ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನಖ್ವಿ ಅವರನ್ನು ಪಿಸಿಬಿ ಮುಖ್ಯಸ್ಥರಾಗಿ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅವರ ಅಧಿಕಾರಾವಧಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡವು ಜೂನ್​​ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2024ರಿಂದ ಗುಂಪು ಹಂತದ ನಿರ್ಗಮನದೊಂದಿಗೆ ಮುಖಭಂಗ ಅನುಭವಿಸಿತು.

2021 ರಲ್ಲಿ ಎಹ್ಸಾನ್ ಮಣಿ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದವರು ತಮ್ಮ ಪೂರ್ಣ ಅವಧಿಯನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕೇವಲ 15 ತಿಂಗಳು ಸೇವೆ ಸಲ್ಲಿಸಿದರೆ, ನಜಾಮ್ ಸೇಥಿ ಮತ್ತು ಝಕಾ ಅಶ್ರಫ್ ತಲಾ ಒಂದು ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿದರು. ಮೊಹ್ಸಿನ್ ನಖ್ವಿ ಕೂಡ ಈ ಸ್ಥಾನವನ್ನು ಹೊಂದಿದ್ದಾರೆ

ಜಯ್ ಶಾ ಉತ್ತರಾಧಿಕಾರಿ ಮೊಹ್ಸಿನ್ ನಖ್ವಿ

ಪಾಕಿಸ್ತಾನದ ಇತ್ತೀಚಿನ ವರದಿಗಳ ಪ್ರಕಾರ, ಮೊಹ್ಸಿನ್ ನಖ್ವಿ 2025 ರ ಜನವರಿಯಲ್ಲಿ ಎಸಿಸಿ ಅಧ್ಯಕ್ಷರಾಗಿ ತಮ್ಮ ಎರಡು ವರ್ಷಗಳ ಅವಧಿ ಪ್ರಾರಂಭಿಸಲಿದ್ದಾರೆ. ಪ್ರಾದೇಶಿಕ ಕ್ರಿಕೆಟ್ ಆಡಳಿತದಲ್ಲಿ ಪಾಕಿಸ್ತಾನದ ಪ್ರಭಾವ ಹೆಚ್ಚಿಸುವ ಗುರಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡ ಹೊಂದಿದೆ.

ಇದನ್ನೂ ಓದಿ: Paris Olympics 2024 : ಆರ್ಚರಿಯಲ್ಲಿ ಕ್ವಾರ್ಟರ್​ ಫೈನಲ್​ಗೇರಿದ 18 ವರ್ಷದ ಭಜನ್ ಕೌರ್​

ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಸಭೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಹೊಸ ಅಧ್ಯಕ್ಷರಾಗಿ ಮೊಹ್ಸಿನ್ ನಖ್ವಿ ಅವರನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಎಸಿಸಿ ಅಧ್ಯಕ್ಷರನ್ನು ಅದರ ಸದಸ್ಯ ರಾಷ್ಟ್ರಗಳ ನಡುವೆ ರೊಟೇಶನ್ ವ್ಯವಸ್ಥೆಯ ಮೂಲಕ ನೇಮಕ ಮಾಡಲಾಗುತ್ತದೆ. ಪ್ರಸ್ತುತ ಭಾರತೀಯ ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಜಯ್ ಶಾ ಅವರ ಅಧಿಕಾರಾವಧಿ ಜನವರಿಯಲ್ಲಿ ಒಂದು ವರ್ಷ ವಿಸ್ತರಿಸಲಾಗಿತ್ತು. ಅಮಿತ್ ಶಾ ಅವರ ಅಧಿಕಾರಾವಧಿ 2025 ರ ಜನವರಿಯಲ್ಲಿ ಕೊನೆಗೊಂಡ ನಂತರ ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಜ್ಮುಲ್ ಹಸನ್ ಅವರು 2021ರ ಜನವರಿವರೆಗೆ ಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 2022 ರ ಟಿ 20 ಏಷ್ಯಾ ಕಪ್ ಮತ್ತು 2023 ರ ಏಕದಿನ ಏಷ್ಯಾ ಕಪ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಯಶಸ್ವಿಯಾಗಿ ಆಯೋಜಿಸಿದೆ

Continue Reading
Advertisement
Sruthi Hariharan female friendship nangeallava shashwati chandrashekar
ಸ್ಯಾಂಡಲ್ ವುಡ್12 mins ago

Sruthi Hariharan: ʻನೀ ನಂಗೆ ಅಲ್ಲವಾʼ? ಎಂದು ಸ್ನೇಹಿತೆಯ ಜತೆ ಪೋಸ್‌ ಕೊಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್!

wayanad landslide mandya family
ಮಂಡ್ಯ19 mins ago

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Wayanad Landslide
ದೇಶ22 mins ago

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Vanitha Vijaykumar Set To Tie The Knot Again
ಟಾಲಿವುಡ್33 mins ago

Vanitha Vijaykumar: 43 ವರ್ಷದ ನಟಿ ವನಿತಾ ವಿಜಯಕುಮಾರ್ 4ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು?

Viral Video
Latest42 mins ago

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Charminar Clock
Latest54 mins ago

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Ram Pothineni Double iSmart Bachchan Director Breaks Silence On Clash
ಟಾಲಿವುಡ್57 mins ago

Ram Pothineni: ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ; ನಟನ ಅನ್​ಫಾಲೋ ಮಾಡಿದ ಖ್ಯಾತ ನಟಿ!

wayanad landslide car driver
ವೈರಲ್ ನ್ಯೂಸ್1 hour ago

Wayanad Landslide: ಒಂದು ಮೆಸೇಜ್‌ನಿಂದ ಉಳಿಯಿತು ಜೀವ! ವೈನಾಡಿನ ದುರಂತದ ನಡುವೆ ಪಾರಾದ ಕನ್ನಡಿಗ ಕಾರು ಚಾಲಕ

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್‌; 10 ಗ್ರಾಂಗೆ 800 ರೂ. ಹೆಚ್ಚಳ

anurag thakur
ದೇಶ1 hour ago

Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ18 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ23 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌