Tulsidas Balram Passes Away : ಒಲಿಂಪಿಯನ್​ ಫುಟ್ಬಾಲ್​ ಆಟಗಾರ ತುಳಸಿದಾಸ್​ ಬಲರಾಮ್​ ನಿಧನ - Vistara News

ಕ್ರೀಡೆ

Tulsidas Balram Passes Away : ಒಲಿಂಪಿಯನ್​ ಫುಟ್ಬಾಲ್​ ಆಟಗಾರ ತುಳಸಿದಾಸ್​ ಬಲರಾಮ್​ ನಿಧನ

ಬಲರಾಮ್​ ಅವರು 1950ರಿಂದ 60ರವರೆಗೆ ಭಾರತ ಫುಟ್ಬಾಲ್​ ತಂಡವನ್ನು ಪ್ರತಿನಿಧಿಸಿದ್ದರು.

VISTARANEWS.COM


on

Tulsidas
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತಾ : ಏಷ್ಯನ್​ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಒಲಿಂಪಿಯನ್​ ಫುಟ್ಬಾಲ್​ ಆಟಗಾರ ತುಳಸಿದಾಸ್ ಬಲರಾಮ್​ (87 ವರ್ಷ) ಅವರು ನಿಧನ ಹೊಂದಿದ್ದಾರೆ. ದೀರ್ಘ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಲರಾಮ್​ ಅವರು ಪಶ್ಚಿಮ ಬಂಗಾಳದ ಉತ್ತರಪಾರ ಫ್ಲ್ಯಾಟ್​ ಒಂದರಲ್ಲಿ ವಾಸವಾಗಿದ್ದರು.

ತುಳಸಿದಾಸ್​ ಅವರು ಕಳೆದ ಡಿಸೆಂಬರ್​ನಲ್ಲಿ ಮೂತ್ರಕೋಶದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಫೆಬ್ರವರಿ16ರಂದು) ಮೃತಪಟ್ಟಿದ್ದಾರೆ ಎಂಬುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : Arne Espeel: ಪೆನಾಲ್ಟಿ ಗೋಲ್​ ತಡೆದ ಬಳಿಕ ಕೊನೆಯುಸಿರೆಳೆದ ಫುಟ್ಬಾಲ್​ ಆಟಗಾರ

ತಮಿಳುನಾಡು ಮೂಲದ ತುಳಸಿದಾಸ್​ ಅವರು 1936ರ ಅಕ್ಟೋಬರ್ 4ರಂದು ಜನಿಸಿದ್ದರು. 1950ರಿಂದ 60ರವರೆಗೆ ಭಾರತ ಫುಟ್ಬಾಲ್​ ತಂಡದ ಸದಸ್ಯರಾಗಿದ್ದರು. ಅವರು 1960ರ ರೋಮ್​ ಒಲಿಂಪಿಕ್ಸ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದೇ ವೇಳೆ ಜಕಾರ್ತಾ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿಯೂ ಇದ್ದರು. ಸ್ಪರ್ಧಾತ್ಮಕ ಫುಟ್ಬಾಲ್​ನಲ್ಲಿ ಅವರು ಒಟ್ಟಾರೆ 131 ಗೋಲ್​ಗಳನ್ನು ಬಾರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

IND vs SA: ಟೂರ್ನಿಯಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನವನ್ನು ಹೀನಾಯವಾಗಿ ಮಣಿಸಿತ್ತು. ಗಯಾನಾದಲ್ಲಿ ನಡೆದ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ 56 ರನ್​ಗಳಿಗೆ ಆಲೌಟ್ ಆಗಿದ್ದರೆ, ಭಾರತ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿ ಗೆದ್ದಿತು.

VISTARANEWS.COM


on

IND vs SA
Koo

ಬೆಂಗಳೂರು: ಬಾರ್ಬಡೋಸ್​​ನಲ್ಲಿ ಶನಿವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ 20 ವಿಶ್ವಕಪ್ ಫೈನಲ್ ಪಂದ್ಯವು ಕ್ರಿಕೆಟ್​ ಜಗತ್ತಿನ ಗಮನ ಸೆಳೆದಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಯಲ್ಲಿ ಗೆಲ್ಲುವ ಸಾಧ್ಯತೆ ಯಾರಿಗೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ, ಈ ಪಂದ್ಯದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಪ್ರಬಲ ಬೌಲಿಂಗ್​ ಘಟಕವು ಭಾರತಕ್ಕೆ ಲೆಕ್ಕಕ್ಕೇ ಇಲ್ಲ ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನವನ್ನು ಹೀನಾಯವಾಗಿ ಮಣಿಸಿತ್ತು. ಗಯಾನಾದಲ್ಲಿ ನಡೆದ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ 56 ರನ್​ಗಳಿಗೆ ಆಲೌಟ್ ಆಗಿದ್ದರೆ, ಭಾರತ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿ ಗೆದ್ದಿತು.

ಟಿ 20 ವಿಶ್ವಕಪ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಇಲ್ಲಿಯವರೆಗೆ ಅಜೇಯವಾಗಿವೆ. ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳನ್ನು ಗೆದ್ದಿದ್ದರೆ, ಮೆನ್ ಇನ್ ಬ್ಲೂ ಏಳು ಪಂದ್ಯಗಳನ್ನು ಗೆದ್ದಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ತಂಡ ತನ್ನ ಪ್ರಬಲ ಬೌಲಿಂಗ್ ವಿಭಾಗದ ನೆರವಿನಿಂದೇ ಗೆದ್ದಿದೆ. ಈ ಬಗ್ಗೆ ಮಾತನಾಡಿದ ಮಂಜ್ರೇಕರ್, ಭಾರತೀಯ ಬ್ಯಾಟರ್​ಗಳು ದಕ್ಷಿಣ ಆಫ್ರಿಕಾದ ಬೌಲರ್​ಗಳ ನಡುವಿನ ಪಂದ್ಯ ಇದು ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯು ಗಮನ ಸೆಳೆದಿದೆ. ಆ್ಯನ್ರಿಚ್ ನೋರ್ಜೆ 13, ಕಗಿಸೊ ರಬಾಡ 12, ತಬ್ರೈಜ್ ಶಮ್ಸಿ 10 ಮತ್ತು ಕೇಶವ್ ಮಹಾರಾಜ್ 9 ವಿಕೆಟ್ ಪಡೆದಿದ್ದಾರೆ. ಭಾರತದಲ್ಲಿ ಅರ್ಶ್​​ದೀಪ್​ ಸಿಂಗ್ 15, ಜಸ್ಪ್ರೀತ್ ಬುಮ್ರಾ 13, ಕುಲದೀಪ್ ಯಾದವ್ 10, ಹಾರ್ದಿಕ್ ಪಾಂಡ್ಯ 7 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯನ್ನು ಭಾರತ ಹಿಮ್ಮೆಟ್ಟಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಮಂಜ್ರೇಕರ್, “ಆಸ್ಟ್ರೇಲಿಯಾ ತುಂಬಾ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್ ಬಹುಶಃ ಅಷ್ಟೊಂದು ಆಗಿರಲಿಲ್ಲ. ದಕ್ಷಿಣ ಆಫ್ರಿಕಾವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಆದರೆ, ಭಾರತೀಯ ಬ್ಯಾಟಿಂಗ್​ ಕೂಡ ಉತ್ತಮವಾಗಿದೆ. ಏಕೆಂದರೆ ತಂಡಕ್ಕೆ ಸವಾಲನ್ನು ಮೀರಲು ಹಲವು ಆಟಗಾರರು ನೆರವಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತವು ವಿಭಿನ್ನ ಪಂದ್ಯಗಳಲ್ಲಿ ವಿಭಿನ್ನ ಮ್ಯಾಚ್ ವಿನ್ನರ್​ಗಳನ್ನು ಕಂಡುಕೊಂಡಿದೆ ಎಂದು ಮಂಜ್ರೇಕರ್ ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ವೈಫಲ್ಯದ ಹೊರತಾಗಿಯೂ. ರೋಹಿತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ತಂಡಕ್ಕೆ ನೆರವಾಗಿದ್ದಾರೆ. ರೋಹಿತ್ ಶರ್ಮಾ 248, ರಿಷಭ್ ಪಂತ್ 171 ರನ್ ಗಳಿಸಿದ್ದಾರೆ. ಪಾಂಡ್ಯ ಕೂಡ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವ ಬೀರಿದ್ದಾರೆ. ಯಾರದರೂ ಒಬ್ಬರು ಪರಿಸ್ಥಿತಿ ನಿಭಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಸ್ಪಿನ್ನರ್​ಗಳು ಕಾಡುತ್ತಾರೆ

ವ್ಯತಿರಿಕ್ತವಾಗಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬಲವನ್ನು ಭಾರತೀಯ ಸ್ಪಿನ್ನರ್​ಗಳು ಕುಗ್ಗಿಸಲಿದ್ದಾರೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟರು. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರು ಇಂಗ್ಲೆಂಡ್ ಬ್ಯಾಟರ್​ಗಳಿಗೆ ಮಾರಕವಾಗಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್​ಗಳಿಗೆ ಅದೇ ಸವಾಲು ಇದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪಂದ್ಯದ ಹಣೆಬರಹ ಮತ್ತು ಉಭಯ ತಂಡಗಳ ನಡುವಿನ ವ್ಯತ್ಯಾಸ ನಿರ್ಧರಿಸುವ ಪ್ರಮುಖ ವಿಷಯ ಎಂದು ಮಂಜ್ರೇಕರ್ ಹೇಳಿದರು.

Continue Reading

ಪ್ರಮುಖ ಸುದ್ದಿ

Rahul Dravid : ವಿಶ್ವ ಕಪ್​ ಗೆದ್ದು ಬನ್ನಿ ಅಭಿಯಾನದ ವಿರುದ್ಧ ಸಿಟ್ಟಿಗೆದ್ದ ರಾಹುಲ್ ದ್ರಾವಿಡ್​

Rahul Dravid: ಮೆನ್ ಇನ್ ಬ್ಲೂ ಈ ವಿಶ್ವ ಕಪ್​ನ ಇದುವರೆಗಿನ ಪಂದ್ಯಗಳಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಫಾರ್ಮ್ ನಲ್ಲಿತ್ತು. ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತಹ ದೊಡ್ಡ ತಂಡಗಳನ್ನು ಸೋಲಿಸಿದೆ. ಹೀಗಾಗಿ ಫೈನಲ್ ಗೆ ಮುಂಚಿತವಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಕೂಡ ಹಿಂದೆ ಬಿದ್ದಿಲ್ಲ. ದಕ್ಷಿಣ ಆಫ್ರಿಕಾ ಅದ್ಭುತ ಸ್ಥಿರತೆ ತೋರಿಸಿದೆ.

VISTARANEWS.COM


on

Rahyl Dravid
Koo

ಬೆಂಗಳೂರು: 2024ರ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಗೆಲ್ಲಲಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್ 29 ರಂದು ಬಾರ್ಬಡೋಸ್​​ನ ಬ್ರಿಜ್​ಟೌನ್​ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆಯಲಿರುವ ಫೈನಲ್​ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯವನ್ನು ಭಾರತ ಗೆದ್ದು 13 ವರ್ಷಗಳ ಬಳಿಕ ಟ್ರೋಫಿ ಗೆಲ್ಲಲಿದೆ ಎಂಬುದಾಗಿ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೆನ್ ಇನ್ ಬ್ಲೂ ಈ ವಿಶ್ವ ಕಪ್​ನ ಇದುವರೆಗಿನ ಪಂದ್ಯಗಳಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಫಾರ್ಮ್ ನಲ್ಲಿತ್ತು. ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತಹ ದೊಡ್ಡ ತಂಡಗಳನ್ನು ಸೋಲಿಸಿದೆ. ಹೀಗಾಗಿ ಫೈನಲ್ ಗೆ ಮುಂಚಿತವಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಕೂಡ ಹಿಂದೆ ಬಿದ್ದಿಲ್ಲ. ದಕ್ಷಿಣ ಆಫ್ರಿಕಾ ಅದ್ಭುತ ಸ್ಥಿರತೆ ತೋರಿಸಿದೆ. ಇಲ್ಲಿಯವರೆಗೆ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದಿದೆ. ಅವರು ಈ ಪಂದ್ಯಾವಳಿಯಲ್ಲಿ ಒಂಬತ್ತನೇ ಗೆಲುವಿನ ಗುರಿ ಹೊಂದಿದ್ದಾರೆ. ಇದು ಐಸಿಸಿ ಟ್ರೋಫಿಗಾಗಿ ಅವರ ಬರವನ್ನು ಕೊನೆಗೊಳಿಸಬಹುದು.

2024ರ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ ಅವರು ಕ್ರಿಕೆಟಿಗರಾಗಿ ಮತ್ತು ತರಬೇತುದಾರರಾಗಿ ಭಾರತೀಯ ಕ್ರಿಕೆಟ್​ಗೆ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ದುರದೃಷ್ಟವಶಾತ್, ಅವರಿಗೆ ಖುಷಿ ಪಡಲು ಯಾವುದೇ ಐಸಿಸಿ ಟ್ರೋಫಿಗಳು ಇಲ್ಲ. ಕಳೆದ ವರ್ಷ ಭಾರತವು ಏಕದಿನ ವಿಶ್ವಕಪ್ 2023 ಫೈನಲ್ ತಲುಪಿದಾಗ ಅವರು ಒಂದು ಐಸಿಸಿ ಟ್ರೋಫಿಯನ್ನು ಗೆಲ್ಲುವ ಆಸೆ ಹುಟ್ಟಿತ್ತು. ಆದರೆ ಮೆನ್ ಇನ್ ಬ್ಲೂ ಫೈನಲ್ ಗೆಲ್ಲಲು ಸಾಧ್ಯವಾಗಲಿಲ್ಲ ಮತ್ತು ದ್ರಾವಿಡ್ ಮತ್ತೆ ನಿರಾಶೆಗೊಂಡಿದ್ದರು.

ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಕೊನೆಯ ಟೂರ್ನಿಯಾಗಿದೆ. ಹೀಗಾಗಿ #DoItForDravid ಎಂಬ ಅಭಿಯಾನ ನಡೆಯುತ್ತಿದೆ. ಟೂರ್ನಿಯ ಪ್ರಸಾರಕ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್​​ ಅದನ್ನು ಮಾಡಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಈ ಅಭಿಯಾನದ ಮೂಲಕ ಅಭಿಮಾನಿಗಳು ಭಾರತೀಯ ದಂತಕಥೆಗೆ ಐಸಿಸಿ ಟ್ರೋಫಿ ತಂದುಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಅಭಿಯಾನದ ಬಗ್ಗೆ ದ್ರಾವಿಡ್ ಬೇಸರಗೊಂಡಿದ್ದಾರೆ. ತಕ್ಷಣ ಅದನ್ನು ನಿಲ್ಲಿಸುವಂತೆ ಕೋರಿದ್ದಾರೆ. ಇಂಥ ಅಭಿಯಾನಗಳು ನನ್ನ ನಂಬಿಕೆಗೆ ವಿರುದ್ಧ ಎಂಬುದಾಗಿಯೂ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಅದನ್ನು ಮಾಡಲು ಬಯಸುತ್ತೇನೆ. ಏಕೆಂದರೆ ವಿಶ್ವ ಕಪ್​ ನಡೆದೇ ನಡೆಯುತ್ತದೆ ಎಂದು ಹೇಳಿದ್ದಾರೆ.

ಇನ್ನೊಬ್ಬರಿಗಾಗಿ ಗೆಲ್ಲುವುದನ್ನು ನಾನು ನಿಜವಾಗಿಯೂ ನಂಬುವುದಿಲ್ಲ. ‘ನೀವು ಮೌಂಟ್ ಎವರೆಸ್ಟ್ ಅನ್ನು ಏಕೆ ಏರಲು ಬಯಸುತ್ತೀರಿ?’ ಎಂಬು ಅನಾಮಿಕರೊಬ್ಬರ ಪ್ರಶ್ನೆಗೆ ನೀಡುವ ಉತ್ತರ ಇಲ್ಲಿಗೂ ಹೊಂದಿಕೆಯಾಗುತ್ತದೆ. ‘ನಾನು ಮೌಂಟ್ ಎವರೆಸ್ಟ್ ಅನ್ನು ಏರಲು ಬಯಸುತ್ತೇನೆ ಏಕೆಂದರೆ ಅದು ಅಲ್ಲಿಯೇ ಇದೆ’. ಅಂತೆಯೇ ವಿಶ್ವ ಕಪ್ ನಡೆಯುತ್ತದೆ. ಹೀಗಾಗಿ ಟ್ರೋಫಿ ಗೆಲ್ಲಬೇಕು. ಇನ್ಯಾರಿಗಾಗಿಯೋ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

“ನಾನು ಈ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ ಏಕೆಂದರೆ ಅದು ನಡೆಯುತ್ತದೆ. ಇದು ಯಾರಿಗಾಗಿಯೂ ಅಲ್ಲ. ಗೆಲ್ಲುವ ಅವಕಾಶ ಮಾತ್ರ ಇದೆ. ನಾನು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇನೆ. ಯಾರಿಗಾದರೂ ಅದನ್ನು ಮಾಡುವುದು ಅಲ್ಲ. ಒಬ್ಬ ವ್ಯಕ್ತಿಯಾಗಿ ನಾನು ನಂಬುಚುದಕ್ಕೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ. ನಾನು ಅದರ ಬಗ್ಗೆ ಮಾತನಾಡಲು ಮತ್ತು ಚರ್ಚಿಸಲು ಬಯಸುವುದಿಲ್ಲ “ಎಂದು ಭಾರತದ ಮುಖ್ಯ ಕೋಚ್ ಹೇಳಿದರು.

ಭಾರತಕ್ಕೆ 3ನೇ ಟಿ20 ವಿಶ್ವಕಪ್ ಫೈನಲ್

ಭಾರತವು ಟಿ 20 ವಿಶ್ವಕಪ್ ಪ್ರಶಸ್ತಿಯ ಉದ್ಘಾಟನಾ ಚಾಂಪಿಯನ್. ಅಂದಿನಿಂದ ಟ್ರೋಫಿಯನ್ನು ಎತ್ತಲು ಸಾಧ್ಯವಾಗಿಲ್ಲ. ಇದು ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಅವರ ಮೂರನೇ ಪ್ರವೇಶ. ಎರಡು ಪ್ರದರ್ಶನಗಳಲ್ಲಿ, ಮೆನ್ ಇನ್ ಬ್ಲೂ 2007 ರಲ್ಲಿ ವಿಜೇತರಾಗಿ ಮತ್ತು 2014 ರಲ್ಲಿ ರನ್ನರ್ ಅಪ್ ಆಗಿ ಕೊನೆಗೊಂಡಿತು. 2013 ರಿಂದ ಐಸಿಸಿ ಟ್ರೋಫಿಯ ಬರವನ್ನು ಅವರು ಕೊನೆಗೊಳಿಸಿದ್ದಾರೆ.

ಇದು ಪಂದ್ಯಾವಳಿಯ ಎರಡು ಅತ್ಯುತ್ತಮ ತಂಡಗಳ ನಡುವಿನ ರೋಮಾಂಚಕ ಫೈನಲ್ ಎಂದು ನಿರೀಕ್ಷಿಸಲಾಗಿದೆ. ಎರಡೂ ತಂಡಗಳು ಬಲವಾಗಿದೆ. ಫೈನಲ್ ನ ಒತ್ತಡವನ್ನು ನಿಭಾಯಿಸಬಲ್ಲ ತಂಡವು ಅಗ್ರಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ.

Continue Reading

ಪ್ರಮುಖ ಸುದ್ದಿ

Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

Team India :

VISTARANEWS.COM


on

Team India
Koo

ಬೆಂಗಳೂರು: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಮಹಿಳೆಯರ ತಂಡ ದಾಖಲೆ ಬರೆದಿದೆ. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್​ಗೆ 525 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದೆ. ಇದು ಟೆಸ್ಟ್​ ಪಂದ್ಯವೊಂದರಲ್ಲಿ ಮಹಿಳೆಯರ ತಂಡ ದಿನವೊಂದರಲ್ಲಿ ಬಾರಿಸಿದ ಗರಿಷ್ಠ ಸ್ಕೋರ್ ಆಗಿದೆ.

ಪಂದ್ಯದಲ್ಲಿ ಟಾಸ್​ ಗೆದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು . ಮೊದಲ ದಿನ ಭಾರತವು 98 ಓವರ್ ಆಡಿ ಬೃಹತ್ ಮೊತ್ತ ಪೇರಿಸಿತು. ಈ ಮೂಲಕ ನಾಯಕಿಯ ನಿರ್ಧಾರವು ಸಂಪೂರ್ಣವಾಗಿ ಸಮರ್ಥನೀಯವಾಗಿತ್ತು. ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ದ್ವಿಶತಕ ಬಾರಿಸಿದರೆ, ಸ್ಮೃತಿ ಮಂಧಾನಾ ಶತಕ ಬಾರಿಸಿದರು.

ಬಲಗೈ ಬ್ಯಾಟರ್​ ಶಫಾಲಿ ಮಹಿಳೆಯರ ಟೆಸ್ಟ್​​ನಲ್ಲಿ ವೇಗವಾಗಿ ದ್ವಿಶತಕ ದಾಖಲಿಸಿದ ಸಾಧನೆಯೂ ಮಾಡಿದ್ದಾರೆ. ಅವರು ಕೇವಲ 198 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ದ್ವಿಶತಕವನ್ನು ಗಳಿಸಿದರು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ಸ್ 248 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಇದುವರೆಗೆ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದರು.

ಮಿಥಾಲಿ ರಾಜ್ ನಂತರ ಮಹಿಳಾ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವರ್ಮಾ 197 ಎಸೆತಗಳಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್ ಗಳ ಸಹಾಯದಿಂದ 205 ರನ್ ಗಳಿಸಿದ್ದಾರೆ. ವರ್ಮಾ ಅವರಲ್ಲದೆ, ಅವರ ಆರಂಭಿಕ ಪಾಲುದಾರೆ ಸ್ಮೃತಿ ಮಂದಾನ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ . 52ನೇ ಓವರ್​​ನಲ್ಲಿ ಡೆಲ್ಮಿ ಟಕರ್ ಅವರನ್ನು ಔಟ್ ಮಾಡುವ ಮೊದಲು 149 ರನ್ ಗಳಿಸಿದ್ದರು. ಔಟಾಗುವ ಮೊದಲು, ಮಂದಾನಾ ಮೊದಲ ವಿಕೆಟ್​ಗೆ ವರ್ಮಾ ಅವರೊಂದಿಗೆ ರನ್​ಗಳ ದಾಖಲೆಯ ಜೊತೆಯಾಟ ಹಂಚಿಕೊಂಡಿದ್ದರು.. ಜೆಮಿಮಾ ರೋಡ್ರಿಗಸ್ ಕೂಡ ಅರ್ಧಶತಕ ಗಳಿಸಿ 55 ರನ್ ಗಳಿಸಿದ ನಂತರ ನಿರ್ಗಮಿಸಿದರು. ಕೌರ್ 42 ಮತ್ತು ರಿಚಾ ಘೋಷ್ 43 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

ಭಾರತಕ್ಕೆ ದಾಖಲೆಯ ದಿನ

ಅದ್ಭುತ ಬ್ಯಾಟಿಂಗ್ ಪ್ರದರ್ಶನವು ಭಾರತಕ್ಕೆ ಹಲವಾರು ಸ್ಮರಣೀಯ ದಾಖಲೆಗಳನ್ನು ಮುರಿಯಲು ಸಹಾಯ ಮಾಡಿತು. ಪುರುಷರ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡದ ದಾಖಲೆ ಅವರು ಮುರಿದಿದ್ದಾರೆ. 2002ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 509 ರನ್ ಗಳಿಸಿತ್ತು.

ಇದನ್ನೂ ಓದಿ: GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

ಮಹಿಳಾ ಕ್ರಿಕೆಟ್​ನಲ್ಲಿ ಒಂದು ದಿನದಲ್ಲಿ 500 ರನ್ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 431 ರನ್ ಗಳಿಸಿದ್ದು ಮಹಿಳಾ ಕ್ರಿಕೆಟ್​​ನಲ್ಲಿ ತಂಡವೊಂದರ ಗರಿಷ್ಠ ಒಂದು ದಿನ ಸ್ಕೋರ್ ಆಗಿದೆ. ಈ ವರ್ಷ ಭಾರತ ಒಂದೇ ದಿನದಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿರುವುದು ಇದು ಎರಡನೇ ಬಾರಿ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು.

ಮಹಿಳಾ ಟೆಸ್ಟ್ ನಲ್ಲಿ ಒಂದು ದಿನದ ಆಟದಲ್ಲಿ ಅತಿ ಹೆಚ್ಚು ರನ್ ಗಳು

  • 525 ರನ್​ : ಭಾರತ ಮಹಿಳಾ (98 ಓವರ್​ಗಳಲ್ಲಿ 525/4) ದಕ್ಷಿಣ ಆಫ್ರಿಕಾ, ವಿರುದ್ಧ 2024 – ಚೆನ್ನೈ
  • 475 ರನ್​: ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ, 1935 – ಕ್ರೈಸ್ಟ್ಚರ್ಚ್
  • 449 ರನ್​ : ಇಂಗ್ಲೆಂಡ್ ಮಹಿಳಾ (245-9), ಆಸ್ಟ್ರೇಲಿಯಾ ವಿರುದ್ಧ, 2022 – ಕ್ಯಾನ್ಬೆರಾ
  • 410 ರನ್​: ಭಾರತ ತಂಡ, ಇಂಗ್ಲೆಂಡ್ ವಿರುದ್ಧ , 2023 – ನವೀ ಮುಂಬೈ
Continue Reading

ಪ್ರಮುಖ ಸುದ್ದಿ

GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

GR vishwanath : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಜೂನ್ 29 ಶನಿವಾರ ಬೆಳಿಗ್ಗೆ 11.30 ಕ್ಕೆ ನಗರದ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ. ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ.

VISTARANEWS.COM


on

GR Vishwnath
Koo

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವದಲ್ಲಿ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್ ರಿಗೆ (GR vishwanath) ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ ಎಂದು ಕುಲಪತಿ ಲಿಂಗರಾಜ ಗಾಂಧಿ ತಿಳಿಸಿದರು. ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಂಭಾಂಗಣದ ಬೋರ್ಡ್ ರೂಮ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವ ಜೂನ್ 29 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಇಬ್ಬರಿಗೆ ನೀಡಲಾಗುತ್ತಿದೆ. ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಾಧನೆ ಮಾಡಿರುವ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಜಯರಾಮ್ ಒಬ್ಬರಾದರೆ ಮತ್ತೊಬ್ಬರು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಜಿ.ಆರ್. ವಿಶ್ವನಾಥ್ ಆಗಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಜೂನ್ 29 ಶನಿವಾರ ಬೆಳಿಗ್ಗೆ 11.30 ಕ್ಕೆ ನಗರದ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ. ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿ ಡಾ. ಎಂ. ಸಿ. ಸುಧಾಕರ್ ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್​ ಎಜುಕೇಶನ್ ಅಧ್ಯಕ್ಷ ಪ್ರೊ. ಟಿ. ಜಿ. ಸೀತಾರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯುನಿಫೈಡ್ ಯೂನಿವರ್ಸಿಟಿ ಕಾಲೇಜು ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶದ ಪ್ರಕಾರ ಸ್ನಾತಕ ಹಾಗೂ ಸ್ಟಾಂಡ್ ಅಲೋನ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಹಾಗೂ ಪರೀಕ್ಷಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡುತ್ತಿರುವ ರಾಜ್ಯ ಪ್ರಥಮ ವಿಶ್ವವಿದ್ಯಾನಿಲಯ ನಮ್ಮದಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

63 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಈ ಘಟಿಕೋತ್ಸವದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಪ್ರಥಮ ರಾಂಕ್ ಪ್ರಮಾಣ ಪತ್ರಗಳನ್ನು, ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ. ಈ ರ್ಯಾಂಕ್​ ವಿಜೇತರಲ್ಲಿ 40 ವಿದ್ಯಾರ್ಥಿಗಳು ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಸ್ಥಾಪಿತ ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಸ್ವೀಕರಿಸಲಿದ್ದಾರೆ. ವಿವಿಧ ದಾನಿಗಳು ಸ್ಥಾಪಿಸಿರುವ ಒಟ್ಟು 15 ಚಿನ್ನದ ಪದಕಗಳನ್ನು ಸಹ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ವೀಕರಿಸಲಿದ್ದಾರೆ. ಬಿ.ಎ. ಮ್ಯೂಸಿಕ್, ಟೂರಿಸಂ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಅರ್ಹ ವಿದ್ಯಾರ್ಥಿಗಳು ಇಲ್ಲದ ಕಾರಣ ಈ ವರ್ಷ ಎರಡು ಚಿನ್ನದ ಪದಕ ವಿತರಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​​ ಸ್ಮರಣೆಗಾಗಿ ಜೆಎಸ್​ಡಬ್ಲ್ಯುನಿಂದ ಪ್ಯಾರಿಸ್​ನಲ್ಲಿ ವಿಶೇಷ ಪ್ರದರ್ಶನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ಥಾಪಿಸಿದ 35 ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿ.ಬಿ.ಎ. ಬಿ.ಇಡಿ., ಕೋರ್ಸುಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನೀಡಲಾಗುವುದು ಎಂದು ಲಿಂಗರಾಜ ಗಾಂಧಿ ಹೇಳಿದರು.

Continue Reading
Advertisement
Tulu language
ತಂತ್ರಜ್ಞಾನ12 mins ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ18 mins ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ25 mins ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Rain News
ಕರ್ನಾಟಕ31 mins ago

Rain News: ಕಾರವಾರದಲ್ಲಿ ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು

Maharashtra Budget
ದೇಶ31 mins ago

ಮಹಿಳೆಯರಿಗೆ ಬಂಪರ್‌; ಮಾಸಿಕ 1,500 ರೂ. ಜಮೆ, 3 ಅಡುಗೆ ಅನಿಲ ಸಿಲಿಂಡರ್‌ ಫ್ರೀ ಘೋಷಣೆ

Rahyl Dravid
ಪ್ರಮುಖ ಸುದ್ದಿ56 mins ago

Rahul Dravid : ವಿಶ್ವ ಕಪ್​ ಗೆದ್ದು ಬನ್ನಿ ಅಭಿಯಾನದ ವಿರುದ್ಧ ಸಿಟ್ಟಿಗೆದ್ದ ರಾಹುಲ್ ದ್ರಾವಿಡ್​

Run4Research programme on June 30 in Bengaluru
ಕರ್ನಾಟಕ1 hour ago

Run4Research: ಬೆಂಗಳೂರಿನಲ್ಲಿ ಜೂ.30ರಂದು ʼರನ್4ರೀಸರ್ಚ್ʼ ಓಟ

MLA Dr N T Srinivas drives for crop insurance Awareness jatha in Kudligi
ವಿಜಯನಗರ1 hour ago

Vijayanagara News: ಕೂಡ್ಲಿಗಿಯಲ್ಲಿ ಬೆಳೆ ವಿಮೆ ಜಾಗೃತಿ ಜಾಥಾಕ್ಕೆ ಶಾಸಕ ಶ್ರೀನಿವಾಸ್ ಚಾಲನೆ

physical Abuse
ಕ್ರೈಂ1 hour ago

Physical Abuse: ಕಲಬುರಗಿಯಲ್ಲಿ 13 ವರ್ಷದ ಬಾಲಕಿ ಲೈಂಗಿಕ ದೌರ್ಜನ್ಯ, ತೀವ್ರ ರಕ್ತಸ್ರಾವವಾಗಿ ಸಾವು!

Viral Video
Latest1 hour ago

Viral Video: ಈ ಆರು ಯೂಟ್ಯೂಬರ್‌ಗಳು ಜೈಲು ಪಾಲಾಗಲು ಶಾರುಖ್‌ ಖಾನ್‌ ಕಾರಣವಂತೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌