Karachi Attack: ಉಗ್ರ ಪೋಷಣೆಗೆ ಬೆಲೆ ತೆತ್ತ ಪಾಕ್‌, ಬಾಂಬ್‌ ದಾಳಿ ಮಾಡಿದ್ದು ತಾಲಿಬಾನ್‌ ಅಲ್ಲ, ಸ್ಥಳೀಯ ಟಿಟಿಪಿ ಉಗ್ರರು - Vistara News

ಪ್ರಮುಖ ಸುದ್ದಿ

Karachi Attack: ಉಗ್ರ ಪೋಷಣೆಗೆ ಬೆಲೆ ತೆತ್ತ ಪಾಕ್‌, ಬಾಂಬ್‌ ದಾಳಿ ಮಾಡಿದ್ದು ತಾಲಿಬಾನ್‌ ಅಲ್ಲ, ಸ್ಥಳೀಯ ಟಿಟಿಪಿ ಉಗ್ರರು

Karachi Attack: ನಿರಂತರವಾಗಿ ಉಗ್ರ ಪೋಷಣೆಯಲ್ಲಿ ತೊಡಗಿರುವ ಪಾಕಿಸ್ತಾನಕ್ಕೆ ಈಗ ತನ್ನದೇ ರಾಷ್ಟ್ರದ ಉಗ್ರರು ಮುಳುವಾಗಿದ್ದಾರೆ. ಇತ್ತೀಚೆಗೆ ಕರಾಚಿ ಪೊಲೀಸ್‌ ಕಚೇರಿ ಮೇಲೆ ದಾಳಿ ಮಾಡಿದವರು ಸ್ಥಳೀಯ ಉಗ್ರರೇ ಎಂದು ತಿಳಿದುಬಂದಿದೆ.

VISTARANEWS.COM


on

Pakistan police identifies TTP terrorists who attacked Karachi police chief's office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್‌: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ, ವಿಶ್ವಸಂಸ್ಥೆಯಿಂದ ಹಣ ಪಡೆದು, ಆ ಹಣವನ್ನು ಅಭಿವೃದ್ಧಿಗೆ ಬಳಸದೆ ಶಸ್ತ್ರಾಸ್ತ್ರ ಸಂಗ್ರಹ, ಉಗ್ರ ಸಂಘಟನೆಗಳ ಪೋಷಣೆಗೆ ಬಳಸುತ್ತಿದ್ದ ಪಾಕಿಸ್ತಾನವೀಗ ತಕ್ಕ ಬೆಲೆ ತೆರುತ್ತಿದೆ. ಇತ್ತೀಚೆಗೆ ಪಾಕಿಸ್ತಾನದ ಕರಾಚಿ ಪೊಲೀಸ್‌ ಮುಖ್ಯಸ್ಥರ ಕಚೇರಿಯಲ್ಲಿ ಬಾಂಬ್‌ ದಾಳಿ (Karachi Attack) ನಡೆಸಿದ ಉಗ್ರರು ತಾಲಿಬಾನಿಗಳಲ್ಲ, ಸ್ಥಳೀಯ ಉಗ್ರರು ಎಂದು ಪಾಕ್‌ ಪೊಲೀಸರೇ ತಿಳಿಸಿದ್ದಾರೆ. ಸ್ಥಳೀಯ ತೆಹ್ರೀಕ್‌-ಎ-ತಾಲಿಬಾನ್‌ ಪಾಕಿಸ್ತಾನ (Tehreek-e-Taliban Pakistan-TTP) ಉಗ್ರರೇ ದಾಳಿ ನಡೆಸಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ ೧೭ರಂದು ಕರಾಚಿ ಪೊಲೀಸ್‌ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು ೮ ಕೆಜಿ ಸ್ಫೋಟಕ ಸ್ಫೋಟಿಸಿದ್ದರು. ಇದರಿಂದ ಮೂವರು ಭದ್ರತಾ ಸಿಬ್ಬಂದಿ ಸೇರಿ ಏಳು ಜನ ಮೃತಪಟ್ಟಿದ್ದರು. ೧೮ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದವು. ಇದಾದ ಬಳಿಕ ಪಾಕಿಸ್ತಾನದ ಪೊಲೀಸರು ತನಿಖೆ ನಡೆಸಿದ್ದು, ಇವರು ಟಿಟಿಪಿ ಉಗ್ರರೇ ಎಂದು ತಿಳಿದುಬಂದಿದೆ. ಇದಾದ ಬಳಿಕ ಟಿಟಿಪಿಯ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ದಾಳಿ ನಡೆಸಿದ ಐವರು ಉಗ್ರರಲ್ಲಿ ಇಬ್ಬರು ರೌಡಿ ಶೀಟರ್‌ಗಳು ಎಂಬುದಾಗಿ ತಿಳಿದುಬಂದಿದೆ. ಜಲಾ ನೂರ್‌ ಹಾಗೂ ಕೈಫಾಯತುಲ್ಲಾ ಅವರು ದಾಳಿಯ ಪ್ರಮುಖ ರೂವಾರಿಗಳಾಗಿದ್ದು, ಇವರು ದಾಳಿಗೂ ಮುನ್ನ ಇಡೀ ಪೊಲೀಸ್‌ ಕಚೇರಿಯ ಮಾಹಿತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Israeli Missile Strikes: ಸಿರಿಯಾ ವಸತಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ; 15 ಮಂದಿ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಕಣಕ್ಕೆ ಇಳಿಯಲಿರುವ ಭಾರತದ ಸ್ಪರ್ಧಿಗಳು ಯಾರ್ಯಾರು? ಇಲ್ಲಿದೆ ಎಲ್ಲ ವಿವರ

Paris Olympics 2024 : ಸ್ವಪ್ನಿಲ್ ಕುಸಾಲೆ 2024 ರ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಪದಕ ಗೆಲ್ಲುವ ಮೂಲಕ ದಿನದ ಅತ್ಯುತ್ತಮ ಆರಂಭ ನೀಡಿದರು. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್​ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದರು. ಅಥ್ಲೆಟಿಕ್ಸ್, ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ರೋಮಾಂಚಕಾರಿ ಆಟ ಉಳಿದಿರುವುದರಿಂದ ಭಾರತೀಯ ತಂಡವು ನಿರಾಶೆಯನ್ನು ಮರೆಯಬಹುದು.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024 ) ಗುರುವಾರ ಭಾರತಕ್ಕೆ ನಿರಾಶಾದಾಯಕ ದಿನವಾಗಿತ್ತು. ರಾತ್ರಿ ನಡೆದ ಬ್ಯಾಡ್ಮಿಂಟನ್​ ಮಹಿಳೆಯರ ಸಿಂಗಲ್ಸ್​ನಲ್ಲಿ ಪಿವಿ ಸಿಂಧೂ ಸೋಲುವ ಮೂಲಕ ದೊಡ್ಡ ಆಘಾತವಾಗಿದ್ದರೆ, ಪದಕ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದ ಹಲವು ಸ್ಪರ್ಧಿಗಳು ಆರಂಭಿಕ ಹಂತದಲ್ಲೇ ಸೋಲನ್ನು ಅನುಭವಿಸಿದರು. ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ತಂದುಕೊಟ್ಟರು. ಬಾಕ್ಸಿಂಗ್ಸ್​​ನಲ್ಲಿ ನಿಖತ್ ಝರೀನ್ ಮತ್ತು ಶೂಟಿಂಗ್​​ನಲ್ಲಿ ಸಿಫ್ಟ್ ಕೌರ್ ಸಮ್ರಾ ಬರಿಗೈಯಲ್ಲಿ ಬಂದಿರುವುದು ಬೇಸರದ ವಿಷಯವಾಗಿದೆ. ಬ್ಯಾಡ್ಮಿಂಟನ್​ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್​ ಫೈನಲ್ಸ್​​ನಿಂದ ಅಚ್ಚರಿಯ ನಿರ್ಗಮನ ಕಂಡರು.

ಸ್ವಪ್ನಿಲ್ ಕುಸಾಲೆ 2024 ರ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಪದಕ ಗೆಲ್ಲುವ ಮೂಲಕ ದಿನದ ಅತ್ಯುತ್ತಮ ಆರಂಭ ನೀಡಿದರು. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್​ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದರು. ಅಥ್ಲೆಟಿಕ್ಸ್, ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ರೋಮಾಂಚಕಾರಿ ಆಟ ಉಳಿದಿರುವುದರಿಂದ ಭಾರತೀಯ ತಂಡವು ನಿರಾಶೆಯನ್ನು ಮರೆಯಬಹುದು. ಏಷ್ಯನ್ ಪದಕ ವಿಜೇತರಾದ ತಜಿಂದರ್ ಪಾಲ್ ಸಿಂಗ್ ತೂರ್ ಮತ್ತು ಪಾರುಲ್ ಚೌಧರಿ ನಾಳೆ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಹೀಗೆ ಆಗಸ್ಟ್ 2ರಂದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ.

ಆರ್ಚರಿ

ಆರ್ಚರಿ ಮಿಶ್ರ ತಂಡ ಆರ್ 16 : ಭಾರತ ವಿರುದ್ಧ ಇಂಡೋನೇಷ್ಯಾ – ಮಧ್ಯಾಹ್ನ 1:19ಕ್ಕೆ
ಮಿಶ್ರ ತಂಡ ಕ್ವಾರ್ಟರ್ ಫೈನಲ್ : ಸಂಜೆ 5:45ಕ್ಕೆ
ಮಿಶ್ರ ತಂಡ ಸೆಮಿಫೈನಲ್ – ಸಂಜೆ 7:00ಕ್ಕೆ
ಮಿಶ್ರ ತಂಡ ಪದಕ ಪಂದ್ಯಗಳು – 7:54ಕ್ಕೆ

ಅಥ್ಲೆಟಿಕ್ಸ್

ಮಹಿಳೆಯರ 5000 ಓಟ: ಮೀಟರ್ ರೌಂಡ್ -1 – ಪಾರುಲ್ ಚೌಧರಿ, ಅಂಕಿತಾ ಧ್ಯಾನಿ – ರಾತ್ರಿ 9:40
ಪುರುಷರ ಶಾಟ್ ಪುಟ್ ಅರ್ಹತಾ ಸುತ್ತು: ತಜಿಂದರ್ ಪಾಲ್ ಸಿಂಗ್ ತೂರ್ – 11:40 PM

ಬ್ಯಾಡ್ಮಿಂಟನ್

ಪುರುಷರ ಸಿಂಗಲ್ಸ್ : ಲಕ್ಷ್ಯ ಸೇನ್​, 11 :40ಕ್ಕೆ

ಗಾಲ್ಫ್​

ಗಾಲ್ಫ್ ಪುರುಷರ ವೈಯಕ್ತಿಕ ಸುತ್ತು 2 : ಮಧ್ಯಾಹ್ನ 12:30
ಹಾಕಿ
ಭಾರತೀಯ ಪುರುಷರ ತಂಡದ ವಿರುದ್ಧ ಆಸ್ಟ್ರೇಲಿಯಾ. ಸಂಜೆ 4:45

ಜೂಡೋ

ಮಹಿಳೆಯರ 78+ ಕೆ.ಜಿ ವಿಭಾಗದ 32ನೇ ಸುತ್ತು; ತುಲಿಕಾ ಮಾನ್ ವಿರುದ್ಧ ಇಡಾಲಿಸ್ ಒರ್ಟಿಜ್

ರೋಯಿಂಗ್

ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್ – ಮಧ್ಯಾಹ್ನ 1:48
ಸೇಲಿಂಗ್ ಮಹಿಳಾ ಡಿಂಗಿ ರೇಸ್ (3,4) – ಮಧ್ಯಾಹ್ನ 3:45ಕ್ಕೆ
ಮಧ್ಯಾಹ್ನ ಪುರುಷರ ಡಿಂಗಿ ರೇಸ್ (3,4) – 7:05 ಸಂಜೆ ಕ್ಕೆ

ಶೂಟಿಂಗ್

ಮಹಿಳೆಯರ 25 ಮೀಟರ್ ಪಿಸ್ತೂಲ್ ಮಹಿಳಾ ಅರ್ಹತಾ ಸುತ್ತು : ಮಧ್ಯಾಹ್ನ 12:30
ಪುರುಷರ ಸ್ಕೀಟ್ ಅರ್ಹತಾ ದಿನ 1 – ಮಧ್ಯಾಹ್ನ 1:00 ಗಂಟೆಗೆ
ಮಹಿಳೆಯರ 25 ಮೀಟರ್ ಪಿಸ್ತೂಲ್, ಅರ್ಹತಾ; ಮಧ್ಯಾಹ್ನ 3:30ಕ್ಕೆ

Continue Reading

ಭವಿಷ್ಯ

Dina Bhavishya : ಈ ರಾಶಿಯವರು ದಿನ ಕೊನೆಯಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶುಕ್ರವಾರವೂ ಕರ್ಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯವನ್ನು ಕೋರುವಿರಿ. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ವೃಷಭ ರಾಶಿಯವರು ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡುವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (02-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.
ತಿಥಿ: ತ್ರಯೋದಶಿ 15:26 ವಾರ: ಶುಕ್ರವಾರ
ನಕ್ಷತ್ರ: ಆರಿದ್ರಾ 10:57 ಯೋಗ: ಹರ್ಷಣ 11:43
ಕರಣ: ವಣಿಜ 15:26 ದಿನದ ವಿಶೇಷ: ಆಡಿ ಶುಕ್ರವಾರ, ಮಾಸ ಶಿವರಾತ್ರಿ

ಸೂರ್ಯೋದಯ : 06:05   ಸೂರ್ಯಾಸ್ತ : 06:46

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಬೆಳಗ್ಗೆ 06:00 ರಿಂದ 07:30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯವನ್ನು ಕೋರುವಿರಿ. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡುವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದ್ದು, ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮವಾಗಿರಲಿದೆ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗಿಗದ ಸ್ಥಳದಲ್ಲಿ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಸಿಂಹ:ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ, ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ಇರಲಿದೆ.
ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು, ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ ಇದೆ, ಆದಷ್ಟು ಆಹಾರ ಕ್ರಮದಲ್ಲಿ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್‌ ಪ್ರಯಾಣ ಬೆಳಸಬೇಕಾಗಬಹುದು. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ದೇಶ

Rahul Gandhi: ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗೆ 10 ಲಕ್ಷ ರೂ. ಆಫರ್;‌ ಆದರೂ ಮಾರದ ಚಮ್ಮಾರ!

Rahul Gandhi: ರಾಹುಲ್‌ ಗಾಂಧಿ ಅವರು ಜುಲೈ 26ರಂದು ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರ ಕೋರ್ಟ್‌ಗೆ ಹಾಜರಾಗಿದ್ದರು. ಇದಾದ ಬಳಿಕ ಅವರು ಲಖನೌಗೆ ತೆರಳುವ ಮಾರ್ಗದ ಮಧ್ಯೆ ಸುಲ್ತಾನ್‌ಪುರದಲ್ಲಿರುವ ರಾಮ್‌ ಚೇಟ್‌ ಅಂಗಡಿಗೆ ತೆರಳಿದ್ದರು. ಈಗ ರಾಮ್‌ ಚೇಟ್‌ ಅವರ ಜೀವನವೇ ಬದಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅವರು ಸೆಲೆಬ್ರಿಟಿ ಆಗಿದ್ದಾರೆ.

VISTARANEWS.COM


on

Rahul Gandhi
Koo

ಲಖನೌ: ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಜುಲೈ 26ರಂದು ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಚಪ್ಪಲಿ ಹೊಲಿಯುವ ರಾಮ್‌ ಚೇಟ್‌ (Ram Chet) ಎಂಬುವರ ಅಂಗಡಿಗೆ ಭೇಟಿ ನೀಡಿದ್ದರು. ಸುಲ್ತಾನ್‌ಪುರದಲ್ಲಿರುವ ಚಪ್ಪಲಿ ಅಂಗಡಿಗೆ (UP Cobbler) ರಾಹುಲ್‌ ಗಾಂಧಿ ಅವರು ಭೇಟಿ ನೀಡಿದ ಬಳಿಕ ರಾಮ್‌ ಚೇಟ್‌ ಅವರ ದಿಸೆಯೇ ಬದಲಾಗಿದೆ. ಜನ ಅವರ ಅಂಗಡಿಗೆ ಬಂದು ಚಪ್ಪಲಿ ಹೊಲಿಸಿಕೊಳ್ಳುವುದು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು ಮಾಡುತ್ತಿದ್ದಾರೆ. ಇನ್ನು, ರಾಹುಲ್‌ ಗಾಂಧಿ ಅವರು ಭೇಟಿ ವೇಳೆ ಹೊಲಿದ ಚಪ್ಪಲಿಗೆ ಈಗ ಭಾರಿ ಬೇಡಿಕೆ ಉಂಟಾಗಿದೆ. ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗೆ ಉದ್ಯಮಿಯೊಬ್ಬರು 10 ಲಕ್ಷ ರೂ. ಆಫರ್‌ ನೀಡಿದ್ದಾರೆ. ಇಷ್ಟಾದರೂ ರಾಮ್‌ ಚೇಟ್‌ ಅವರು ಮಾರಾಟ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಮಾಧ್ಯಮಗಳೊಂದಿಗೆ ರಾಮ್‌ ಚೇಟ್‌ ಮಾತನಾಡಿದ್ದು, “ರಾಹುಲ್‌ ಗಾಂಧಿ ಅವರು ನನ್ನ ಅಂಗಡಿಗೆ ಬಂದು ಹೋದ ಬಳಿಕ ನನ್ನ ಬದುಕೇ ಬದಲಾಗಿದೆ. ಕಾರು, ಬೈಕುಗಳಲ್ಲಿ ಬರುವ ಜನ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇನ್ನು ರಾಹುಲ್‌ ಗಾಂಧಿ ಅವರು ಹೊಲಿದ ಚಪ್ಪಲಿಗೆ ಭಾರಿ ಬೇಡಿಕೆ ಉಂಟಾಗಿದೆ. 5 ಲಕ್ಷ ರೂ. ಕೊಡುತ್ತೇವೆ, 10 ಲಕ್ಷ ರೂ. ಕೊಡುತ್ತೇವೆ ಆ ಚಪ್ಪಲಿ ಕೊಡು ಎನ್ನುತ್ತಿದ್ದಾರೆ. ನಾನು ಆ ಚಪ್ಪಲಿ ಹೊಲಿಯಲು ಬಿಟ್ಟು ಹೋದ ಗ್ರಾಹಕನಿಗೂ ಕೊಡುವುದಿಲ್ಲ. ಚಪ್ಪಲಿಯ ಮೊತ್ತವನ್ನು ಗ್ರಾಹಕನಿಗೆ ನೀಡುತ್ತೇನೆ. ಇದನ್ನು ಮಾರಾಟ ಮಾಡುವುದಿಲ್ಲ” ಎಂದು ಹೇಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೊಲಿಗೆ ಯಂತ್ರ ಕೊಡಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಮ್‌ ಚೇಟ್‌ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲ, ಅವರಿಗೆ ಚಪ್ಪಲಿ, ಬೂಟುಗಳನ್ನು ಹೊಲಿಯುವ ಯಂತ್ರವನ್ನು ಕೊಡಿಸಿದ್ದಾರೆ. ರಾಹುಲ್‌ ಗಾಂಧಿ ಭೇಟಿ ನೀಡಿದ ಮರುದಿನ ಅಂದರೆ ಜುಲೈ 27ರಂದು ರಾಮ್‌ ಚೇಟ್‌ ಅವರಿಗೆ ಹೊಲಿಗೆ ಯಂತ್ರ ತಲುಪಿದೆ. ಇದರಿಂದ ಅವರು ಸುಲಭವಾಗಿ ಚಪ್ಪಲಿ ಹಾಗೂ ಶೂಗಳನ್ನು ಹೊಲಿಯಲು ಸಾಧ್ಯವಾಗುತ್ತಿದೆ. ರಾಹುಲ್‌ ಗಾಂಧಿ ಭೇಟಿ ಬಳಿಕ ಅವರ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿದೆ.

ರಾಹುಲ್‌ ಗಾಂಧಿ ಅವರು ಜುಲೈ 26ರಂದು ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರ ಕೋರ್ಟ್‌ಗೆ ಹಾಜರಾಗಿದ್ದರು. ಇದಾದ ಬಳಿಕ ಅವರು ಲಖನೌಗೆ ತೆರಳುವ ಮಾರ್ಗದ ಮಧ್ಯೆ ಸುಲ್ತಾನ್‌ಪುರದಲ್ಲಿರುವ ರಾಮ್‌ ಚೇಟ್‌ ಅಂಗಡಿಗೆ ತೆರಳಿದ್ದರು. ರಾಮ್‌ ಚೇಟ್‌ ಅವರ ಅಂಗಡಿ ವ್ಯಾಪಾರ ಸೇರಿ ಹಲವು ವಿಷಯಗಳ ಕುರಿತು ಕಾಂಗ್ರೆಸ್‌ ನಾಯಕ ಮಾತನಾಡಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಚಪ್ಪಲಿ ಹೊಲಿದಿದ್ದರು. ಈ ಫೋಟೊ ಹಾಗೂ ವಿಡಿಯೊ ವೈರಲ್‌ ಆಗಿದ್ದವು.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Continue Reading

ದೇಶ

ಕಾಶ್ಮೀರದಲ್ಲಿ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ ಆಪ್ತನ ಹತ್ಯೆ; ಈತ ಪಾಕ್‌ ಕಮಾಂಡೋ ಕೂಡ ಹೌದು!

Kupwara Encounter: ಹಫೀಜ್‌ ಸಯೀದ್‌ ಆಪ್ತ, ಪಾಕಿಸ್ತಾನದ ಸೇನೆಯ ಸ್ಪೆಷಲ್‌ ಸರ್ವಿಸ್‌ ಗ್ರೂಪ್‌ (SSG) ಕಮಾಂಡೋ ಕೂಡ ಆಗಿರುವ ನೊಮಾನ್‌ ಜಿಯಾವುಲ್ಲಾನನ್ನು ಭಾರತದ ಯೋಧರು ಹತ್ಯೆಗೈದಿದ್ದಾರೆ. ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದ ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ನೊಮಾನ್‌ ಜಿಯಾವುಲ್ಲಾ ಪ್ರಯತ್ನಿಸುತ್ತಿದ್ದ. ಆಗ ಭಾರತದ ಯೋಧರು ಗುಂಡಿನ ದಾಳಿ ಮೂಲಕ ಈತನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Kupwara Encounter
Koo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರ ಚಟುವಟಿಕೆಗಳು ಹೆಜ್ಜಾಗಿದ್ದು, ಸೈನಿಕರು ಹಾಗೂ ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಜಾಸ್ತಿಯಾಗಿವೆ. ಭಾರತೀಯ ಸೇನೆಯೂ ಉಗ್ರರನ್ನು ಮಟ್ಟ ಹಾಕಲು ಸತತ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಇದರ ಮಧ್ಯೆಯೇ, ಭಾರತೀಯ ಸೇನೆಯು (Indian Army) ಭಾರಿ ಮುನ್ನಡೆ ಸಾಧಿಸಿದೆ. ಮುಂಬೈ ದಾಳಿ ರೂವಾರಿ, ಜಾಗತಿಕ ಉಗ್ರ ಹಫೀಜ್‌ ಸಯೀದ್‌ ಆಪ್ತನನ್ನು ಭಾರತದ ಯೋಧರು ಕುಪ್ವಾರದಲ್ಲಿ (Kupwara Encounter) ಹೊಡೆದುರುಳಿಸಿದ್ದಾರೆ.

ಹೌದು, ಕುಪ್ವಾರದಲ್ಲಿ ಹಫೀಜ್‌ ಸಯೀದ್‌ ಆಪ್ತ, ಪಾಕಿಸ್ತಾನದ ಸೇನೆಯ ಸ್ಪೆಷಲ್‌ ಸರ್ವಿಸ್‌ ಗ್ರೂಪ್‌ (SSG) ಕಮಾಂಡೋ ಕೂಡ ಆಗಿರುವ ನೊಮಾನ್‌ ಜಿಯಾವುಲ್ಲಾನನ್ನು ಭಾರತದ ಯೋಧರು ಹತ್ಯೆಗೈದಿದ್ದಾರೆ. ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದ ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ನೊಮಾನ್‌ ಜಿಯಾವುಲ್ಲಾ ಪ್ರಯತ್ನಿಸುತ್ತಿದ್ದ. ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತದ ಯೋಧರು, ನೊಮಾನ್‌ ಜಿಯಾವುಲ್ಲಾನನ್ನು ಎನ್‌ಕೌಂಟರ್‌ ಮಾಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜುಲೈ 27ರಂದೇ ನೊಮಾನ್‌ ಜಿಯಾವುಲ್ಲಾ ಭಾರತದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ್ದ. ಅದೇ ದಿನ ಸೈನಿಕರು ಹತ್ಯೆ ಮಾಡಿದ್ದಾರೆ. ನೊಮಾನ್‌ ಜಿಯಾವುಲ್ಲಾನು ಪಾಕಿಸ್ತಾನದ ಎಸ್‌ಎಸ್‌ಜಿ ಕಮಾಂಡೋಗಳು ಧರಿಸುವ ಜಾಕೆಟ್‌ಗಳನ್ನು ಧರಿಸಿ ತೆಗೆಸಿಕೊಂಡ ಫೋಟೊಗಳು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈತನು ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವುದಲ್ಲದೆ, ಎಸ್‌ಎಸ್‌ಜಿ ಕಮಾಂಡೋ ಕೂಡ ಆಗಿದ್ದ ಎಂದು ತಿಳಿದುಬಂದಿದೆ. ಈತನ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ನ 600 ಕಮಾಂಡೋಗಳ ಪ್ರವೇಶ?

ಪಾಕಿಸ್ತಾನದ 600 ಕಮಾಂಡೋಗಳು ಅಕ್ರಮವಾಗಿ ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದಾಗಿ ಪಾಕ್‌ ಆಕ್ರಮಿತ ಕಾಶ್ಮೀರದ (PoK) ಹೋರಾಟಗಾರ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. “ಪಾಕಿಸ್ತಾನದ ಎಸ್‌ಎಸ್‌ಜಿ ಜನರಲ್‌ ಆಫಿಸರ್‌ ಕಮಾಂಡಿಂಗ್‌ (ಜಿಒಸಿ) ಮೇಜರ್‌ ಜನರಲ್‌ ಆದಿಲ್‌ ರೆಹಮಾನಿಯು ಜಮ್ಮು ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದಾನೆ. ಪಾಕಿಸ್ತಾನದ 600 ಕಮಾಂಡೋಗಳು ಭಾರತಕ್ಕೆ ನುಗ್ಗಿದ್ದು, ಕುಪ್ವಾರದಲ್ಲಿ ಆಶ್ರಯ ಪಡೆದಿದ್ದಾರೆ” ಎಂಬುದಾಗಿ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಕಣಿವೆಯಲ್ಲಿ ಪಾಕ್‌ ಕಮಾಂಡೋನನ್ನು ಹೊಡೆದುರುಳಿಸಿರುವುದು ಹಲವು ಅನುಮಾನ ಮೂಡಲು ಕಾರಣವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

Continue Reading
Advertisement
Paris Olympics 2024
ಪ್ರಮುಖ ಸುದ್ದಿ14 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಕಣಕ್ಕೆ ಇಳಿಯಲಿರುವ ಭಾರತದ ಸ್ಪರ್ಧಿಗಳು ಯಾರ್ಯಾರು? ಇಲ್ಲಿದೆ ಎಲ್ಲ ವಿವರ

karnataka Rain
ಮಳೆ14 mins ago

Karnataka Weather : 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ತಜ್ಞರು

Dina Bhavishya
ಭವಿಷ್ಯ44 mins ago

Dina Bhavishya : ಈ ರಾಶಿಯವರು ದಿನ ಕೊನೆಯಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವಿರಿ

Rahul Gandhi
ದೇಶ6 hours ago

Rahul Gandhi: ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗೆ 10 ಲಕ್ಷ ರೂ. ಆಫರ್;‌ ಆದರೂ ಮಾರದ ಚಮ್ಮಾರ!

Kupwara Encounter
ದೇಶ6 hours ago

ಕಾಶ್ಮೀರದಲ್ಲಿ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ ಆಪ್ತನ ಹತ್ಯೆ; ಈತ ಪಾಕ್‌ ಕಮಾಂಡೋ ಕೂಡ ಹೌದು!

PV Sindhu
ಪ್ರಮುಖ ಸುದ್ದಿ6 hours ago

PV Sindhu : ಪಿವಿ ಸಿಂಧು ಹ್ಯಾಟ್ರಿಕ್​ ಒಲಿಂಪಿಕ್ಸ್​ ಪದಕದ ಕನಸು ಭಗ್ನ, 16ನೇ ಸುತ್ತಿನಲ್ಲಿ ಸೋಲು

Prajwal Revanna
ಕರ್ನಾಟಕ6 hours ago

Prajwal Revanna: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಅಸಲಿ; ಎಫ್‌ಎಸ್‌ಎಲ್‌ ವರದಿ ಬಹಿರಂಗ, ಎಸ್‌ಐಟಿ ತನಿಖೆಗೆ ಬಲ!

MS Dhoni
ಪ್ರಮುಖ ಸುದ್ದಿ6 hours ago

MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

Kabini dam not cracked no need to worry says DCM DK Shivakumar
ಕರ್ನಾಟಕ7 hours ago

Kabini Dam: ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿಲ್ಲ, ಆತಂಕ ಬೇಡ; ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Blood Cancer
ಆರೋಗ್ಯ7 hours ago

Blood Cancer: ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ರನ್ನು ಬಲಿ ಪಡೆದ ರಕ್ತದ ಕ್ಯಾನ್ಸರ್‌ಗೆ ಏನು ಕಾರಣ? ಇದರ ಲಕ್ಷಣಗಳೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ17 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ17 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌