SK Bhagavan : ಆತ್ಮಕತೆ ಬರೆಯುತ್ತಿದ್ದ ಭಗವಾನ್‌; ಪ್ರಕಟಣೆಗೆ ಮುನ್ನವೇ ಇನ್ನಿಲ್ಲವಾದರು - Vistara News

ಕಲೆ/ಸಾಹಿತ್ಯ

SK Bhagavan : ಆತ್ಮಕತೆ ಬರೆಯುತ್ತಿದ್ದ ಭಗವಾನ್‌; ಪ್ರಕಟಣೆಗೆ ಮುನ್ನವೇ ಇನ್ನಿಲ್ಲವಾದರು

ಸೋಮವಾರ ನಿಧನರಾದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್‌.ಕೆ. ಭಗವಾನ್‌ (SK Bhagavan) ತಮ್ಮ ಕೊನೆಯ ದಿನಗಳಲ್ಲಿ ಆತ್ಮಕತೆ ಬರೆಯುತ್ತಿದ್ದರು. ಅದು ಪ್ರಕಟವಾಗುವ ಮೊದಲೇ ಇನ್ನಿಲ್ಲವಾಗಿದ್ದಾರೆ.

VISTARANEWS.COM


on

popular kannada director sk bhagavan biography
ಭಗವಾನ್‌ ಅವರ ಆತ್ಮಕತೆಗಾಗಿ ರೂಪಿಸಿದ್ದ ಮುಖಪುಟ ಮತ್ತು ಅವರ ಕೈ ಬರಹ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್‌.ಕೆ. ಭಗವಾನ್‌ (SK Bhagavan) ತಮ್ಮ ಜೀವನದ ಕೊನೆಯ ದಿನಗಳಲ್ಲಿ ಆತ್ಮಕತೆ ಬರೆಯುತ್ತಿದ್ದರು. ಅದು ಪ್ರಕಟವಾಗುವ ಮೊದಲೇ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ʻರಾಜ್‌ ಕಂಡ ನಾನ್‌-ಭಗವಾನ್‌ʼ ಎಂದು ಈ ಆತ್ಮಕತೆಗೆ ಹೆಸರಿಡುವ ಕುರಿತು ಚರ್ಚೆ ನಡೆಯುತ್ತಿತ್ತು. ಇದನ್ನು ಭಗವಾನ್‌ ಇನ್ನೂ ಅಂತಿಮಗೊಳಿಸಿರಲಿಲ್ಲ. ʻʻಅವರು ತಮ್ಮ ಜೀವನದ ಕುರಿತು ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿದ್ದು, ಇದನ್ನು ನಾಗ ಹುಬ್ಬಳ್ಳಿ ಎನ್ನುವವರು ಅಕ್ಷರ ರೂಪಕ್ಕಿಳಿಸಿದ್ದರು. ಆದರೆ ಭಗವಾನ್‌ ಅದನ್ನು ಸಂಪೂರ್ಣವಾಗಿ ತಾವೇ ಕುಳಿತು ತಿದ್ದಿ ಬರೆಯುತ್ತಿದ್ದರು. ಈಗಾಗಲೇ ʻಕಸ್ತೂರಿ ನಿವಾಸ’ ಸಿನಿಮಾದವರೆಗೆ ಅವರು ತಿದ್ದಿ ನನಗೆ ಕೊಟ್ಟಿದ್ದರು. ಇನ್ನೊಂದಿಷ್ಟು ಕೆಲಸವನ್ನು ಅವರು ಪೂರ್ಣಗೊಳಿಸಿದ್ದು, ಅದನ್ನು ನನಗೆ ಕಳಿಸುವ ಮೊದಲೇ ನಮ್ಮನಗಲಿದ್ದಾರೆʼʼ ಎಂದು ಈ ಕೃತಿಯನ್ನು ಪ್ರಕಟಿಸುತ್ತಿರುವ ವಿಕ್ರಂ ಪ್ರಕಾಶನದ ಹರಿಪ್ರಸಾದ್‌ ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

s k bhagavan
ಭಗವಾನ್‌ ಅವರ ಕೈ ಬರಹ

ಈಗಾಗಲೇ ಪುಸ್ತಕವನ್ನು ಯಾರಿಗೆ ಅರ್ಪಿಸಬೇಕು, ಮುನ್ನುಡಿ ಏನಿರಬೇಕು ಎಂಬುದನ್ನು ಅವರೇ ಕೈಯಲ್ಲಿ ಬರೆದು ಕಳಿಸಿದ್ದರು. ಅವರ ಕೈ ಬರಹ ಎಲ್ಲರನ್ನೂ ಆಕರ್ಷಿಸುವಂತಿದೆ. ಈ ವಯಸ್ಸಿನಲ್ಲಿಯೂ ಅವರು ಉತ್ಸಾಹ ಕಳೆದುಕೊಂಡಿರಲಿಲ್ಲ. ಹಬ್ಬ ಹರಿದಿನಗಳಲ್ಲಿ ತಮ್ಮ ಪರಿಚಿತರೆಲ್ಲರಿಗೂ ತಾವೇ ಕರೆಮಾಡಿ ಶುಭಾಶಯ ಹೇಳುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಹೃದಯ ತೊಂದರೆಯಿಂದಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಆಸ್ಪತ್ರೆಯಿಂದ ಬಂದ ಮೇಲೆ ಪಟ್ಟಾಗಿ ಕುಳಿತು ಆತ್ಮಕತೆಯನ್ನು ಪೂರ್ಣಗೊಳಿಸಿದ್ದರು. ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿದ್ದ ಅವರ ಆತ್ಮಕಥೆಗೆ 70-80 ಪುಟಗಳನ್ನು ಹೊಸದಾಗಿ ಸೇರಿಸಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ʻʻಭಗವಾನ್‌ ಅವರ ಆತ್ಮಕತೆ ಹೊರಬರುವ ಮುನ್ನವೇ ಅವರಿಲ್ಲವಾಗಿದ್ದಾರೆ. ಆದರೆ ಆದಷ್ಟು ಬೇಗ ಅದನ್ನು ಪ್ರಕಟಿಸಲಾಗುವುದು. ಇದಕ್ಕೆ ಅವರ ಕುಟುಂಬದವರು ಕೂಡ ಈಗಾಗಲೇ ಅನುಮತಿ ನೀಡಿದ್ದಾರೆʼʼ ಎಂದು ವಿಕ್ರಂ ಪ್ರಕಾಶನದ ಹರಿಪ್ರಸಾದ್‌ ತಿಳಿಸಿದ್ದಾರೆ.

1993ರಲ್ಲಿ ದೊರೈರಾಜ್ ನಿಧನದ ನಂತರ ಚಿತ್ರನಿರ್ದೇಶನಕ್ಕೆ ಭಗವಾನ್‌ ವಿದಾಯ ಹೇಳಿದ್ದರು. ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷವಾಗಿದೆ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ಆತ್ಮಕತೆಯಲ್ಲಿ ಡಾ. ರಾಜ್‌ಕುಮಾರ್‌ ಅಭಿನಯ, ವೈಕ್ತಿತ್ವದ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ : SK Bhagavan: ಭಗವಾನ್‌ ನಿಧನಕ್ಕೆ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರಿಂದ ಸಂತಾಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

ನನ್ನ ದೇಶ ನನ್ನ ದನಿ ಅಂಕಣ:
ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ hindu oppression
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಬಳಿ ಯಾರಾದರೂ ಬಂದು, “ಸನಾತನ ಧರ್ಮ (Sanatan Dharma) ಮತ್ತು ಹಿಂದೂ ಸಮಾಜಗಳು (Hindu community) ಅಪಾಯದಲ್ಲಿವೆ. ವಿಶ್ವದಾದ್ಯಂತ ಇರುವ ಕಮ್ಯೂನಿಸ್ಟರು (Communists), ಇಸ್ಲಾಂ (Islam) ಮತ್ತು ಕ್ರೈಸ್ತ (Christian) ಮತೀಯ ಶಕ್ತಿಗಳು ಭಾರತವನ್ನು (India) ಸಂಪೂರ್ಣವಾಗಿ ನಾಶ ಮಾಡಲು ಪಣ ತೊಟ್ಟಿವೆ. ಕನಿಷ್ಠ ಒಂದು ಶತಮಾನದಿಂದ ಇಂತಹ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಸಮಾಜದ ಬೇರೆ ಬೇರೆ ಜಾತಿಗಳ ನಡುವೆ ಅಂತಃಕಲಹ, ವೈಮನಸ್ಯ, ದ್ವೇಷಗಳನ್ನು ಹುಟ್ಟುಹಾಕಲಾಗುತ್ತಿದೆ, ಲಿಂಗಾಯತರನ್ನು – ಸಿಖ್ಖರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲಾಗುತ್ತಿದೆ. ಅಮೆರಿಕಾ, ಇಂಗ್ಲೆಂಡ್, ಯೂರೋಪಿನ ಕೆಲವು ದೇಶಗಳು, ಇಸ್ಲಾಮೀ (Islamic) ದೇಶಗಳು ಈ ಗುರಿಯ ಬೆನ್ನುಹತ್ತಿ, ದೆಹಲಿ-ಕೇಂದ್ರಿತ ಲುಟ್ಯೆನ್ಸ್ ನೊಂದಿಗೆ ಷಾಮೀಲಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದ ನೆರೆಹೊರೆಯ ಎಲ್ಲ ದೇಶಗಳನ್ನು, ಭಾರತದ ವಿರುದ್ಧವೇ ಎತ್ತಿಕಟ್ಟಲು ಚೀನಾ – ಪಾಕಿಸ್ತಾನಗಳು ಕೆಲಸ ಮಾಡುತ್ತಲೇ ಇವೆ. ಭಾರತದ ವಿರೋಧ ಪಕ್ಷಗಳಿಗೆ ಬೇರೆ ಬೇರೆ ದೇಶಗಳಿಂದ ವಿವಿಧ ಬಗೆಯಲ್ಲಿ ಹಣ ಬರುತ್ತಿದೆ ಮತ್ತು ಚುನಾವಣೆಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲಾಗುತ್ತಿದೆ. ಜಾರ್ಜ್ ಸೋರೋಸ್ ಮೊದಲಾದವರು ಬಹಳ ಬಹಳ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಭಾರತವನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಕಮ್ಯೂನಿಸ್ಟರ ನಿಯಂತ್ರಣದ “ನ್ಯೂಯಾರ್ಕ್ ಟೈಮ್ಸ್”, “ವಾಷಿಂಗ್ಟನ್ ಪೋಸ್ಟ್”, ಬಿಬಿಸಿ ಮುಂತಾದ ಮಾಧ್ಯಮ ಲೋಕದ ದುಃಶಕ್ತಿಗಳು ಮತ್ತು ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳೂ ಈ ಮಾಫಿಯಾದ ಭಾಗವಾಗಿವೆ. ಅಂತರಜಾಲದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯವಸ್ಥಿತವಾಗಿ ಈ ದುಷ್ಕಾರ್ಯ ನಡೆಯುತ್ತಿದೆ……”

ಎಂದರೆ, ನಾವು ಶತಕೋಟಿ ಭಾರತೀಯರೂ ಗಹಗಹಿಸಿ ನಗುತ್ತೇವೆ. “ಅಯ್ಯಾ, ಇದೇ ರೀತಿಯ ಇನ್ನೊಂದಿಷ್ಟು ಜೋಕುಗಳನ್ನು ಹೇಳು” ಎಂದು ಸಹ ದುಂಬಾಲು ಬೀಳುತ್ತೇವೆ.

ಆದರೆ, ವಾಸ್ತವದಲ್ಲಿ, ನಮಗೆ ಅಂದರೆ ಭಾರತೀಯರಿಗೆ ಮೇಲ್ನೋಟಕ್ಕೆ ಹಾಸ್ಯ ಎನ್ನಿಸುವ ಈ ಎಲ್ಲ ಸಂಗತಿಗಳೂ, ಈ ಎಲ್ಲ ಸಾಲುಗಳೂ ನಿಜ; ಅಕ್ಷರಶಃ ಶತಪ್ರತಿಶತ ಸತ್ಯ.

ನೋಡಿ, ಪಾಕಿಸ್ತಾನವಿದೆ, ಬಾಂಗ್ಲಾದೇಶವಿದೆ. ಎಂಟು ದಶಕಗಳ ಹಿಂದೆ, ಅವು ನಮ್ಮ ದೇಶದ ಭಾಗಗಳೇ ಆಗಿದ್ದವು. ಇಸ್ಲಾಮೀ “ರಿಲಿಜನ್” (“ಧರ್ಮ” ಸೂಕ್ತವಾದ ಪದ ಅಲ್ಲ. ಧರ್ಮದ ವ್ಯಾಖ್ಯೆಯೇ ಬೇರೆ) ಹೆಸರಿನಲ್ಲಿ ಬೇರೆಯೇ ದೇಶ ಬೇಕು ಎಂಬಂತಹ ಹಕ್ಕೊತ್ತಾಯ ಬಂದ ಕ್ಷಣದಿಂದ ಮತ್ತು ಹೊಸ ದೇಶ 1947ರಲ್ಲಿ ಹುಟ್ಟಿಕೊಂಡ ದಿನದಿಂದ, ಅವ್ಯಾಹತವಾಗಿ ಹಿಂದೂಗಳ – ಸಿಖ್ಖರ ಹತ್ಯೆ, ಅತ್ಯಾಚಾರ, ಬಲವಂತದ ಮತಾಂತರ ಆಗುತ್ತಲೇ ಇದೆ. ಭಾರತದ ಹಣ, ಭಾರತದ ಸಹಕಾರ, ಭಾರತದ ಸೈನಿಕರ ರಕ್ತದಿಂದಲೇ ಹುಟ್ಟಿಕೊಂಡ ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಹತ್ಯಾಕಾಂಡ ಇಂದಿಗೂ ನಡೆಯುತ್ತಲೇ ಇದೆ. ಪಶ್ಚಿಮ ಪಾಕಿಸ್ತಾನದಲ್ಲಂತೂ, 1947ರಲ್ಲಿ 20% ಇದ್ದ ಹಿಂದೂಗಳ ಶೇಕಡಾವಾರು, ಈಗ 2ಕ್ಕಿಂತ ಕಡಿಮೆಯಾಗಿದೆ! ಕಳೆದ ಐವತ್ತು ವರ್ಷಗಳಲ್ಲಿ ಭಾರತವು ಅದೆಷ್ಟು ಸಹಾಯ ಹಸ್ತ ಚಾಚಿದರೂ, ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಎರಡೂ ದೇಶಗಳಲ್ಲಿ, ಅಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಆಗುತ್ತಿರುವ ಹಿಂದೂಗಳ – ಸಿಖ್ಖರ – ಬೌದ್ಧರ ಹತ್ಯಾಕಾಂಡಗಳ ಬಗೆಗೆ ವರದಿಗಳೂ, ಚಿತ್ರಗಳೂ, ವೀಡಿಯೋಗಳೂ ಬರುತ್ತಲೇ ಇವೆ.

ಅದೇ ನೋಡಿ, ಭಾರತದಲ್ಲಿರುವ ಮುಸ್ಲಿಮರ ಒಟ್ಟು ಜನಸಂಖ್ಯೆಯಲ್ಲಿ ಮತ್ತು ಶೇಕಡಾವಾರಿನಲ್ಲಿ (Percentage) ಏರಿಕೆ ಆಗುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಈಗ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 25 ಕೋಟಿ ಇರಬಹುದು. ಕಳೆದ ಏಳೆಂಟು ದಶಕಗಳಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ತುಂಬ ತುಂಬ ಸೌಲಭ್ಯಗಳು, ಮೀಸಲಾತಿ, ಅನುಕೂಲಗಳು, ಸಾಲ – ಸಹಾಯಧನಗಳು ಸಹಾ ಅವರಿಗೆ ದೊರೆಯುತ್ತಿವೆ.

ಆದರೆ, ಜಗತ್ತಿನ ಮಾಧ್ಯಮಗಳಲ್ಲಿ (ಕೇವಲ ಭಾರತದ ಮಾಧ್ಯಮಗಳಲ್ಲಿ ಮಾತ್ರವಲ್ಲ) ಮತ್ತು ಅಂತರಜಾಲದ ಅನೇಕ ಮಾಹಿತಿ-ವಿವರಗಳಲ್ಲಿ ಬೇರೆಯೇ ಚಿತ್ರ ಕಂಡುಬರುತ್ತದೆ. ಜಗತ್ತಿನಾದ್ಯಂತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹತ್ಯಾಕಾಂಡ ನಡೆಸುತ್ತಿದ್ದಾರೆ, ಕಿರುಕುಳ ಕೊಡುತ್ತಿದ್ದಾರೆ, ಅತ್ಯಾಚಾರ ಎಸಗುತ್ತಿದ್ದಾರೆ ಎಂಬಂತಹ ಸತ್ಯಸಂಗತಿಗಳಿವೆ. ವಿಶೇಷವಾಗಿ ಬಹುತೇಕ ಇಸ್ಲಾಮೀ ದೇಶಗಳಲ್ಲಿ ಕಾಫಿರರಿಗೆ ಕನಿಷ್ಠ ಸ್ವಾತಂತ್ರ್ಯವೂ ಇಲ್ಲ, ಕಾಫಿರರಿಗೆ ಅಲ್ಲಿ ಮನೆಯೊಳಗೂ ತಮ್ಮ ಸ್ವಂತದ ಮತಧರ್ಮಗಳ ಆಚರಣೆಗಳಿಗೂ ಅವಕಾಶವಿಲ್ಲ. ಆದರೆ, ಹಿಂದೂ ಬಹುಸಂಖ್ಯಾತರಿರುವ ಭಾರತದಲ್ಲಿ so called ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ತುಂಬ ಚೆನ್ನಾಗಿದ್ದಾರೆ ಮತ್ತು ಅವರಿಗೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ; ಹಕ್ಕುಗಳೂ, ಸೌಲಭ್ಯಗಳೂ ಧಂಡಿಯಾಗಿ ಇವೆ.

ವಸ್ತುಸ್ಥಿತಿ ಹೀಗಿದ್ದೂ ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

“ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಒಂದು ಡಿಜಿಟಲ್ ರಿಸೋರ್ಸ್ ಅಂದರೆ ಅಂಕೀಯ ದತ್ತಾಂಶ ಮಾಹಿತಿಕೋಶ. ಈ ಜಾಲತಾಣದ ಅಭಿಲೇಖಾಗಾರದಲ್ಲಿ (Archives) ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲಾವಧಿಯ ಸುದ್ದಿಗಳ ದತ್ತಾಂಶವು ಸಂಗ್ರಹವಾಗಿದೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ ಖಂಡ, ಆಸ್ಟ್ರೇಲಿಯಾ ಇತ್ಯಾದಿಗಳ ಧ್ವನಿ ಕಡತಗಳು, ವೀಡಿಯೋಗಳು, ಜಾಲತಾಣಗಳು, ಬ್ಲಾಗ್ ಗಳು, ಪಾಡ್ ಕ್ಯಾಸ್ಟ್ ಗಳು, ಗ್ರಂಥಗಳು, ಸಮ್ಮೇಳನಗಳ ನಿರ್ಣಯಗಳು, ವಿಶ್ವಕೋಶಗಳು, ಆಧಾರ ಗ್ರಂಥಗಳು, ನಿಯತಕಾಲಿಕಗಳು, ವೃತ್ತಪತ್ರಿಕೆಗಳು, ಸುದ್ದಿ-ಜಾಲತಾಣಗಳು ಇತ್ಯಾದಿಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ (2020, 2021 ಮತ್ತು 2022) ಪ್ರಕಟವಾದ ಮತ್ತು ದಾಖಲಾದ ಮಾಹಿತಿಯನ್ನು ವಿಶೇಷವಾಗಿ ಬಹುಸಂಖ್ಯಾತ-ವಾದ (Majoritarianism) ಕುರಿತ ದತ್ತಾಂಶಗಳನ್ನು ಆಳವಾಗಿ ಅಭ್ಯಾಸ ಮಾಡಿದಾಗ ಮತ್ತು ವಿಶ್ಲೇಷಿಸಿದಾಗ ದೊರೆಯುವ ಉಪಲಬ್ಧಿಗಳು ಅತ್ಯಂತ ಆಘಾತಕಾರಿಯಾಗಿವೆ. ಜಗತ್ತಿನ ಆರನೆಯ ಒಂದು ಭಾಗದಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಹೆಸರಿಗೆ ಬಹುಸಂಖ್ಯಾತರಾಗಿರುವ ಹಿಂದೂಗಳು so called ಅಲ್ಪಸಂಖ್ಯಾತರ ಮೇಲೆ ಮತ, ಭಾಷೆ ಮತ್ತು ಜನಾಂಗದ ಆಧಾರದ ಮೇಲೆ ದೌರ್ಜನ್ಯ ಮೆರೆದಿದ್ದಾರೆ ಎನ್ನುತ್ತವೆ ಈ ದತ್ತಾಂಶಗಳು. ಇನ್ನೂ ಭಯಂಕರವಾದ ಸಂಗತಿಯೆಂದರೆ, ಇಡೀ ಜಗತ್ತಿನ ಇಂತಹ ದತ್ತಾಂಶದಲ್ಲಿ 80% (ಹೌದು ಪ್ರತಿಶತ ಎಂಬತ್ತು) ಹಿಂದೂಗಳ ದೌರ್ಜನ್ಯದ ಮಾಹಿತಿಯೇ ಇಲ್ಲಿ ಪ್ರಧಾನವಾಗಿ ಲಭ್ಯವಾಗುತ್ತದೆ. ಅಂದರೆ, ಜಗತ್ತಿನಲ್ಲಿ ಭಾರತದ ಹಿಂದೂಗಳ ಬಗೆಗೆ, ಹಿಂದೂ-ವಿರೋಧೀ ಮಾಫಿಯಾ ಅದೆಂತಹ ದತ್ತಾಂಶವನ್ನು ದಾಖಲಿಸಿದೆ, ಎಂಬ ಈ ವಿವರಗಳು ನಿಜಕ್ಕೂ ಗಾಬರಿ ತರಿಸುತ್ತವೆ. ಹಿಂದುಗಳನ್ನು ರಾಕ್ಷಸರೆಂಬಂತೆ ಚಿತ್ರಿಸಲಾಗಿದೆ. ಆದರೆ, ಮುಸ್ಲಿಮರನ್ನು – ಕ್ರೈಸ್ತರನ್ನು ದುರುದ್ದೇಶಪೂರ್ವಕವಾಗಿ underplay ಮಾಡಿ, ದಮನಕಾರಿಗಳನ್ನೇ ದಮನಿತರೆಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲ ನಿಂದನೀಯ ದುಷ್ಕಾರ್ಯಗಳಲ್ಲಿ ಹಣ ಸಹ ದೊಡ್ಡ ಪಾತ್ರವನ್ನು ನಿರ್ವಹಿಸಿದೆ.

ಅದೇ ನೋಡಿ, ಕಾಫಿರರ ಮೇಲಿನ ಪಾಕಿಸ್ತಾನಿ ಮುಸ್ಲಿಮರ ದೌರ್ಜನ್ಯಗಳು, ಈ ದತ್ತಾಂಶದ ಪ್ರಕಾರ ಕೇವಲ 1.8% ಮಾತ್ರ! ಕನಿಷ್ಠ ಮಾಹಿತಿ, ಕನಿಷ್ಠ ಪ್ರಜ್ಞೆ ಇರುವ ಯಾರಿಗೇ ಆದರೂ, ಇದು ಸುಳ್ಳು ಎಂಬುದು ತಿಳಿಯುತ್ತದೆ. ಆದರೆ, ಇಂಥ ದಾಖಲೆಗಳ – ಸಾಕ್ಷ್ಯಾಧಾರಗಳ ಶಕ್ತಿಯೇ ಶಕ್ತಿ. ನ್ಯಾಯಾಲಯಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ವರದಿಗಳು, ವಿಶ್ವಕೋಶಗಳು ಇಂತಹ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶನ್ನೇ ಆಧರಿಸಿ ತಮ್ಮ ಷರಾ ಬರೆಯುತ್ತವೆ, ತೀರ್ಮಾನಗಳನ್ನು ಮಾಡುತ್ತವೆ. ಈ ಪರಿಪ್ರೇಕ್ಷ್ಯದಲ್ಲಿ ಭಾರತ-ವಿರೋಧೀ ದುಃಶಕ್ತಿಗಳು ಹೇಗೆಲ್ಲಾ ಕೆಲಸ ಮಾಡುತ್ತಿವೆ, ಹೇಗೆಲ್ಲಾ ವಂಚನೆಯಿಂದ ಸಾಕ್ಷ್ಯಾಧಾರಗಳನ್ನು ದಾಖಲಿಸುತ್ತವೆ ಎಂಬುದನ್ನು ಗಮನಿಸುವಾಗ ಆತಂಕವಾಗುತ್ತದೆ.

ಈ ದತ್ತಾಂಶದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ ದೌರ್ಜನ್ಯಕ್ಕೆ ಸಿಲುಕಿದ ಲಕ್ಷಾವಧಿ ಹಿಂದೂಗಳಿಗೆ ಸಂಬಂಧಿಸಿದಂತೆ; ಅವರ ಹತ್ಯೆ, ಅವರ ಮೇಲಾದ ಅವರ್ಣನೀಯ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ 1,802 ವರದಿಗಳು ದಾಖಲಾಗಿದ್ದರೆ, ಗುಜರಾತಿನಲ್ಲಾದ 2002ರ ಗಲಭೆಗಳಿಗೆ ಸಂಬಂಧಿಸಿದಂತೆ 29,092 (ಹದಿನಾರು ಪಟ್ಟು) ವರದಿಗಳು ದಾಖಲಾಗಿವೆ. ಗುಜರಾತಿನಲ್ಲಿ ಆಗ ಹತ್ಯೆಯಾದವರ ಸಂಖ್ಯೆ ಅಧಿಕೃತವಾಗಿ 254 ಹಿಂದೂಗಳು ಮತ್ತು 790 ಮುಸ್ಲಿಮರು ಎನ್ನುವುದನ್ನು ಸಹ ಸಾಂದರ್ಭಿಕವಾಗಿ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಇನ್ನೂ ಒಂದು ಉದಾಹರಣೆ ನೋಡಿ. 1984ರಲ್ಲಿ ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಆಗ ಪ್ರತೀಕಾರ ರೂಪದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ (ಅಧಿಕೃತವಾಗಿ) ಸತ್ತವರು 3,350 ಮಂದಿ. ಆದರೆ, ಈ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶದಲ್ಲಿ 10,977 (ಕಾಶ್ಮೀರದ ಅಂಕಿ ಅಂಶಗಳ ಐದು ಪಟ್ಟು) ವರದಿಗಳು ದಾಖಲಾಗಿವೆ.

ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು – ಜಿಹಾದಿಗಳು ಸೇರಿ ಭಾರತದ ಇತಿಹಾಸವನ್ನೇ ವಿಕೃತವನ್ನಾಗಿ – ವಿಷಪೂರಿತವನ್ನಾಗಿ ಮಾಡಿದ್ದಾರೆ, ಎಂಬುದನ್ನು ಇಲ್ಲಿ ಸ್ಮರಿಸಿದರೆ, ಜಾಗತಿಕ ದಾಖಲೆಗಳ ದತ್ತಾಂಶದ ವಿಷಯದಲ್ಲಿಯೂ ಏನೆಲ್ಲಾ ನಡೆಯುತ್ತಿದೆ ಎಂಬುದು ಗಾಬರಿ ಉಂಟುಮಾಡುತ್ತದೆ. ಶಾಲಾ-ಕಾಲೇಜುಗಳ ಪಠ್ಯಗಳಲ್ಲಿರುವ ಸುಳ್ಳು – ಇತಿಹಾಸದ ದುಷ್ಪರಿಣಾಮದಿಂದ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಜಾಗತಿಕ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶಗಳ ಈ ಆಯಾಮವು ಶತಕೋಟಿ ಭಾರತೀಯರಿಗೆ ಎಚ್ಚರಿಕೆಯ ಘಂಟೆಯಾಗಿದೆ.

ಜಗತ್ತೇ ವಿಚಿತ್ರ!

ಒಳಗಿನ ಶತ್ರುಗಳಂತೆಯೇ, ಹೊರಗಿನ ಕಟುಸತ್ಯಗಳು – ಭಾರತವಿರೋಧೀ ದುಃಶಕ್ತಿಗಳು ಸಹ ಅದೆಷ್ಟು ಘೋರ, ಅದೆಷ್ಟು ಭಯಾನಕ! ಅನೇಕ ದಶಕಗಳಿಂದ ಈ ಬಹುಸಂಖ್ಯಾತ-ವಾದ (Majoritarianism) ಎನ್ನುವುದೇ ಭಾರತೀಯ ಹಿಂದುಗಳನ್ನು ಹಣಿಯುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಮ್ಯೂನಿಸ್ಟ್ ನೇತೃತ್ವದ ಮಾಫಿಯಾದ ಹುನ್ನಾರವಾಗಿದೆ. ನಮ್ಮಲ್ಲೇ ತುಂಬ ತುಂಬ ಉದಾಹರಣೆಗಳಿವೆ. ಪಾಕಿಸ್ತಾನ್ ಮೂಲದ ಭಯೋತ್ಪಾದಕ ಅಜ್ಮಲ್ ಕಸಬ್ ಮೊದಲಾದವರ ತಂಡವು, ಹಿಂದೂಗಳ ವೇಷದಲ್ಲಿಯೇ ದಾಳಿ ನಡೆಸಿತ್ತು ಮತ್ತು ಮುಂಬಯಿ ಮೇಲಿನ ಈ 2008ರ ಕುಖ್ಯಾತ ದಾಳಿಯ ಹಿಂದೆ ಬಹಳ ದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಕಸಬ್ ಅಕಸ್ಮಾತ್ತಾಗಿ ಸೆರೆ ಸಿಕ್ಕು ಬಹಳಷ್ಟು ರಹಸ್ಯಗಳು ಬಯಲಾದವು. ಕೆಲವರಂತೂ ಹಿಂದೂ ರಾಷ್ಟ್ರೀಯ ಸಂಘಟನೆಗಳನ್ನೇ ಗುರಿ ಮಾಡಿ ಪುಸ್ತಕಗಳನ್ನೂ ಬರೆಸಿ, ಹಿಂದೂ-ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಭಾರತೀಯ ಸಮಾಜವು ಸಾವಿರ ಸಾವಿರ ವರ್ಷಗಳ ಯಾತನೆ, ಹಿಂಸೆ, ಹತ್ಯಾಕಾಂಡಗಳನ್ನು ಅನುಭವಿಸಿದ್ದು ಸಾಕು. ಇನ್ನಾದರೂ ಅರಿವಿನ ಬೆಳಕು ನಮ್ಮಲ್ಲಿ ಎಚ್ಚರ, ಜಾಗೃತಿಗಳನ್ನು ಉದ್ದೀಪಿಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Continue Reading

ಪ್ರಮುಖ ಸುದ್ದಿ

ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಘೋಷಣೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ. ಒಟ್ಟು 23 ಸಾಹಿತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಕರ್ನಾಟಕದ ಇಬ್ಬರಿಗೂ ಪ್ರಶಸ್ತಿ ದೊರೆತಿದೆ.

VISTARANEWS.COM


on

Kendra Sahitya Akademi Award
Koo

ನವದೆಹಲಿ/ಬೆಂಗಳೂರು: ದೇಶದ 23 ಲೇಖಕರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು (Kendra Sahitya Akademi Award) ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶ್ರುತಿ ಬಿ.ಆರ್.‌ (Shruti BR) ಅವರಿಗೆ ಯುವ ಪುರಸ್ಕಾರ ಘೋಷಿಸಿದ್ದರೆ, ಕೃಷ್ಣಮೂರ್ತಿ ಬಿಳಿಗೆರೆ (Krishnamurthy Biligere) ಅವರಿಗೆ ಬಾಲ ಪುರಸ್ಕಾರ ಘೋಷಣೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಶ್ರುತಿ ಬಿ.ಆರ್.‌ ಅವರು ಚಿಕ್ಕಮಗಳೂರಿನ ತರೀಕೆರೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಕೆಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನವಾದ ‘ಜೀರೋ ಬ್ಯಾಲೆನ್ಸ್’‌ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಐದು ಚಿನ್ನದ ಪದಕಗಳೊಂದಿಗೆ ಪಡೆದಿದ್ದು, ಪಿಎಚ್‌.ಡಿಯನ್ನೂ ಪಡೆದಿದ್ದಾರೆ. ಇವರ ಲೇಖನಗಳು, ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿಳಿಗೆರೆ ಅವರು ಇದೇ ಜಿಲ್ಲೆಯ ಹುಳಿಯಾರಿನ ಬಿಎಂಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಯವ ಕೃಷಿ, ಬೀಜ ನಾಟಿ, ನೀರು ಸಂಗ್ರಹ ಸೇರಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿರುವ ಇವರು, ಸಾಹಿತ್ಯ ಕೃಷಿಯಲ್ಲೂ ನಾಡಿನಾದ್ಯಂತ ಹೆಸರು ಗಳಿಸಿದ್ದಾರೆ. ಕಾವ್ಯ, ಕತೆ, ನಾಟಕಗಳ ರಚನೆ ಮೂಲಕ ಇವರು ನಾಡಿನ ಮನೆಮಾತಾಗಿದ್ದಾರೆ. ಇವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನೂ ಒಳಗೊಂಡ ತೀರ್ಪುಗಾರರ ಸಮಿತಿ ಮಾಡಿದ ಶಿಫಾರಸಿನಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.

ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.

ಇದನ್ನೂ ಓದಿ: Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Continue Reading

ಪ್ರಮುಖ ಸುದ್ದಿ

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Kendra Sahitya Akademi Award: ಮಾನಸ್‌ ರಂಜನ್‌ ಸಮಾಲ್‌ ಅವರು ರಚಿಸಿದ ಸಣ್ಣ ಕತೆಗಳ ಸಂಕಲನವಾದ ‘ಗಾಪ ಕಲಿಕಾ’ ಕೃತಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ, ಸಂಜಯ್‌ ಕುಮಾರ್‌ ಪಾಂಡಾ ಅವರ ‘ಹು ಬೈಯಾ’ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದು ಕೂಡ ಸಣ್ಣ ಕತೆಗಳ ಸಂಕಲನವಾಗಿದೆ. ಇಬ್ಬರ ಕೃತಿಗಳಿಗೂ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ಘೋಷಿಸಿದೆ/

VISTARANEWS.COM


on

Kendra Sahitya Akademi Award
Koo

ನವದೆಹಲಿ: ಒಡಿಶಾದ ಇಬ್ಬರು ಲೇಖಕರಿಗೆ 2024ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು (Kendra Sahitya Akademi Award 2024) ಅವರಿಗೆ ಘೋಷಣೆ ಮಾಡಲಾಗಿದೆ. ಒಡಿಶಾ ಲೇಖಕರಾದ ಮಾನಸ್‌ ರಂಜನ್‌ ಸಮಾಲ್‌ (Manas Ranjan Samal) ಹಾಗೂ ಸಂಜಯ್‌ ಕುಮಾರ್‌ ಪಾಂಡಾ (Sanjay Kumar Panda) ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶ್ರುತಿ ಬಿ.ಆರ್.‌ (Shruti BR) ಅವರಿಗೆ ಯುವ ಪುರಸ್ಕಾರ ಘೋಷಿಸಿದ್ದರೆ, ಕೃಷ್ಣಮೂರ್ತಿ ಬಿಳಿಗೆರೆ (Krishnamurthy Biligere) ಅವರಿಗೆ ಬಾಲ ಪುರಸ್ಕಾರ ಘೋಷಣೆ ಮಾಡಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಾನಸ್‌ ರಂಜನ್‌ ಸಮಾಲ್‌ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಂಜಯ್‌ ಕುಮಾರ್‌ ಪಾಂಡಾ ಅವರಿಗೆ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಘೋಷಿಸಲಾಗಿದೆ. ಮಾನಸ್‌ ರಂಜನ್‌ ಸಮಾಲ್‌ ಅವರು ರಚಿಸಿದ ಸಣ್ಣ ಕತೆಗಳ ಸಂಕಲನವಾದ ‘ಗಾಪ ಕಲಿಕಾ’ (Gapa Kalika) ಕೃತಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ, ಸಂಜಯ್‌ ಕುಮಾರ್‌ ಪಾಂಡಾ ಅವರ ‘ಹು ಬೈಯಾ’ (Hu Baia) ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದು ಕೂಡ ಸಣ್ಣ ಕತೆಗಳ ಸಂಕಲನವಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನೂ ಒಳಗೊಂಡ ತೀರ್ಪುಗಾರರ ಸಮಿತಿ ಮಾಡಿದ ಶಿಫಾರಸಿನಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.

ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.

ಭಗವದ್ಗೀತೆಯ ಕುರಿತಾದ ‘ಮಹಾಯುದ್ದಕ್ಕೆ ಮುನ್ನ’ ಅವರ ಮೊದಲ ಪ್ರಕಟಿತ ಕೃತಿಯಾಗಿದೆ. ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಭವ ತಲ್ಲಣ’ ಅವರ ಇತರ ಕೃತಿಗಳಾಗಿವೆ. ಜತೆಗೆ, ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕವಾಗುತ್ತಲೇ ಇರುತ್ತವೆ.

ಇದನ್ನೂ ಓದಿ: All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

Bengaluru News: ಮೀಡಿಯಾ ವಿಷನ್‌, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್‌ (ಬಿ.ಎಂ.ವಿ.), ಬಸವ ಪರಿಷತ್‌, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್‌ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Nari Samman 2024 award ceremony on June 15 in Bengaluru
Koo

ಬೆಂಗಳೂರು: ಮೀಡಿಯಾ ವಿಷನ್‌, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್‌ (ಬಿ.ಎಂ.ವಿ.), ಬಸವ ಪರಿಷತ್‌, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ, ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್‌ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (Bengaluru News) ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಂಬೆ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾ. ಮಂಜುಳಾ ಚೆಲ್ಲೂರು, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ಖ್ಯಾತ ಚಲನಚಿತ್ರ ನಟ ಶ್ರೀನಾಥ್‌, ಬೆಂಗಳೂರಿನ ಬಸವ ಪರಿಷತ್‌ ಅಧ್ಯಕ್ಷೆ ಎಂ.ಪಿ. ಉಮಾದೇವಿ, ಮಾಜಿ ಸಚಿವೆ ರಾಣಿ ಸತೀಶ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಇಸ್ರೋ ಸಂಸ್ಥೆ ವಿಜ್ಞಾನಿ ಬಿ.ಎಚ್‌.ಎಂ. ದಾರುಕೇಶ್‌, ಡಾ. ಎಚ್‌.ಆರ್‌. ಶಾಂತರಾಜಣ್ಣ, ಚಲನಚಿತ್ರ ನಟ ಸುಚೇಂದ್ರ ಪ್ರಸಾದ್‌, ಚಲನಚಿತ್ರ ನಟಿ ಭಾವನಾ, ಡಾ. ಮಂಜುಳಾ ಎ. ಪಾಟೀಲ್‌ ಪಾಲ್ಗೊಳ್ಳುವರು.

ಇದನ್ನೂ ಓದಿ: Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಕಿರುತೆರೆ ನಿರೂಪಕಿ ಅನುಶ್ರೀ, ಚಲನಚಿತ್ರ ನಟಿ ಸೋನಾಲ್‌ ಮಂಥೇರೋ, ಉದ್ಯಮಿ ಪಲ್ಲವಿ ರವಿ, ಡಾ. ಮಮತಾ ಎಸ್‌.ಎಚ್‌., ಉಮಾಬಾಯಿ ಖರೆ, ಜ್ಯೋತಿ ಟೋಸೂರ, ಡಾ. ರತ್ನಮ್ಮ ಆರ್‌., ಹಿರಿಯ ನಿರೂಪಕಿ ನವಿತ ಜೈನ್‌, ಸುಜಾತ ಬಯ್ಯಾಪುರ, ಮಧುರ ಅಶೋಕ್‌ ಕುಮಾರ, ಡಾ. ಸುಮಾ ಬಿರಾದಾರ, ಸುಮಿತ್ರಾ ಎಂ.ಪಿ.ರೇಣುಖಾಚಾರ್ಯ, ಡಾ. ಸಂದರ್ಶಿನಿ ನರೇಂದ್ರಕುಮಾರ್‌, ಡಾ. ಪುಲಿಗೆರೆ ಸಂಪದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

ನಾಟ್ಯ ಸಂಪದ ನೃತ್ಯ ಶಾಲೆ ಸಂಸ್ಥಾಪಕಿ ಡಾ. ಮಾನಸ ಕಂಠಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

Continue Reading
Advertisement
Hooch Tragedy
ದೇಶ36 mins ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ45 mins ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು47 mins ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ59 mins ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ3 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ3 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್3 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌