Wedding Fashion Sarees: ಮದುವೆ ಸೀಸನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಶೇಡ್‌ ಸೀರೆಗಳು - Vistara News

ಫ್ಯಾಷನ್

Wedding Fashion Sarees: ಮದುವೆ ಸೀಸನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಶೇಡ್‌ ಸೀರೆಗಳು

ಈ ಮದುವೆ ಸೀಸನ್‌ ಫ್ಯಾಷನ್‌ನಲ್ಲಿ ಗ್ರ್ಯಾಂಡ್‌ ಲುಕ್‌ ನೀಡುವ ಗೋಲ್ಡನ್‌ ಸೀರೆಗಳು ಟ್ರೆಂಡಿಯಾಗಿವೆ. ಸೆಲೆಬ್ರೆಟಿ ಲುಕ್‌ ನೀಡುವ ಈ ಸೀರೆಗಳು ಇದೀಗ ಮದುಮಗಳು ಮಾತ್ರವಲ್ಲ, ಎಲ್ಲರ ಅಚ್ಚುಮೆಚ್ಚಿನ ಸೀರೆಗಳಾಗಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Wedding Fashion Sarees
ಸಾಂದರ್ಭಿಕ ಚಿತ್ರಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ. ಬೆಂಗಳೂರು

ಗೋಲ್ಡನ್‌ ಶೇಡ್‌ ಸೀರೆಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಸೀರೆಗಳು ಕೇವಲ ಮದುವೆಯಾಗುವ ವಧುವಲ್ಲ, ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಹೆಣ್ಣುಮಕ್ಕಳ ಫೇವರೇಟ್‌ ಸೀರೆಯಾಗಿದೆ. ಪರಿಣಾಮ, ಈ ಸೀಸನ್‌ನ ಸೀರೆ ಫ್ಯಾಷನ್‌ನಲ್ಲಿ ಮೊದಲ ಸ್ಥಾನದಲ್ಲಿವೆ.

Wedding Fashion Sarees
ಪೂಜಾ ಹೆಗ್ಡೆ, ನಟಿ

ಯಾವ್ಯಾವ ಫ್ಯಾಬ್ರಿಕ್‌ನಲ್ಲಿ ಲಭ್ಯ

ಬನಾರಸಿ, ಸಿಲ್ಕ್‌, ಕಾಂಚಿವರಂ, ಧರ್ಮಾವರಂ ರೇಷ್ಮೆಸೀರೆಗಳು, ಕಾಟನ್‌, ಸೆಮಿ ಕಾಟನ್‌, ಕಾಟನ್‌ ಸಿಲಕ್‌, ಟಿಶ್ಶೂ, ಜಮದಾನಿ, ಇಳಕಲ್‌ ಸೇರಿದಂತೆ ಎಲ್ಲಾ ಬಗೆಯ ಬ್ರಾಂಡ್‌ಗಳಲ್ಲೂ ಈ ಶೇಡ್‌ನವು ನಾನಾ ಬ್ರಾಂಡ್‌ನ ಫ್ಯಾಬ್ರಿಕ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ರಾಯಲ್‌ ಲುಕ್‌ ನೀಡುವ ಇವು ಇಡೀ ಲುಕ್ಕನ್ನು ಬದಲಿಸುತ್ತವೆ. ಜೊತೆಗೆ ಸೆಲೆಬ್ರಿಟಿ ಲುಕ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Wedding Fashion Sarees
ತ್ರಿಶಾ, ನಟಿ

ಗೋಲ್ಡನ್‌ ಸೀರೆಗೂ ಡಿಸೈನ್ಸ್‌

ಇನ್ನು ಗೋಲ್ಡನ್‌ ವರ್ಣದ ಸೀರೆಗಳಲ್ಲೂ ಡಿಸೈನ್‌ನವು ಚಾಲ್ತಿಯಲ್ಲಿವೆ. ಅವುಗಳಲ್ಲಿ ವೈವಿಧ್ಯಮಯ ಶೇಡ್ಸ್‌ನ ಜರತಾರಿ ಬಾರ್ಡರ್‌, ಕುಂದನ್‌-ಕಲಾಂಕಾರಿಯ ಕುಸುರಿ, ಹ್ಯಾಂಡ್‌ ಎಂಬ್ರಾಯ್ಡರಿ ಕೂಡ ಈ ವೆಡ್ಡಿಂಗ್‌ ಸೀಸನ್‌ನ ಗ್ರ್ಯಾಂಡ್‌ ಲುಕ್‌ ಟ್ರೆಂಡ್‌ನಲ್ಲಿ ಬಂದಿವೆ.

Wedding Fashion Sarees

ರಾಯಲ್‌ ಲುಕ್‌ ಗ್ಯಾರಂಟಿ

ಗೋಲ್ಡನ್‌ ಬಣ್ಣದ ಸೀರೆಗಳು ರಾಯಲ್‌ ಲುಕ್‌ ನೀಡುತ್ತವೆ. ಸಾಮಾನ್ಯ ಹುಡುಗಿಯು ಸೆಲೆಬ್ರೆಟಿಯಂತೆ ಕಂಗೊಳಿಸುತ್ತಾಳೆ. ಇದು ಮುಖದ ಬಣ್ಣವನ್ನು ರಿಫ್ಲೆಕ್ಟ್ ಮಾಡುತ್ತದೆ ಮಾತ್ರವಲ್ಲ, ಕಾಂತಿ ಹೆಚ್ಚುವಂತೆ ಮಾಡುತ್ತದೆ ಎನ್ನುತ್ತಾರೆ ಮಾಡೆಲ್‌ ದೀಪ್ತಿ, ಇನ್ನು ಫ್ಯಾಷನ್‌ಲೋಕದಲ್ಲಿ ಗೋಲ್ಡ್‌ ಅತ್ಯುತ್ತಮ ಶೇಡ್ಸ್‌. ಇದರಲ್ಲೆನೂರಾರು ಶೆಡ್ಸ್‌ ಲಭ್ಯ. ಅದರಲ್ಲೂ ಬ್ರೈಟ್‌ ಹಾಗೂ ಲೈಟ್‌ ಗೋಲ್ಡನ್‌, ರೋಸ್‌ ಗೋಲ್ಡ್‌ ವರ್ಣದ ಸೀರೆಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಡಿಸೈನರ್ಸ್‌. ಮೊದಲೆಲ್ಲಾಗೋಲ್ಡನ್‌ ಬಣ್ಣ ಎಂದಾಕ್ಷಣ ಅದು ಸೀಮಿತ ವರ್ಗಕ್ಕೆ ಎಂಬುದಾಗಿ ತಿಳಿಯಲಾಗುತ್ತಿತ್ತು. ರಾಜ ಮನೆತನದವರು ಮಾತ್ರ ಬಳಸುವ ಶೇಡ್‌ ಗಳು ಎನ್ನಲಾಗುತ್ತಿತ್ತು. ಬರಬರುತ್ತಾ ಸೆಲೆಬ್ರೆಟಿಗಳು, ನಂತರ ಮದುವೆ ಮನೆಯ ಕುಟುಂಬದವರು ಉಡಲಾರಂಭಿಸಿದರು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Wedding Fashion Sarees

ಗೋಲ್ಡನ್‌ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ಗಾಗಿ ಹೀಗೆ ಮಾಡಿ

ಸ್ಕಿನ್‌ ಟೋನ್‌ಗೆ ಹೊಂದುವಂತೆ ಶೇಡ್ಸ್‌ನ ಸೀರೆ ಸೆಲೆಕ್ಟ್ ಮಾಡಬೇಕು

ರಾಯಲ್‌ ಲುಕ್‌ ಗ್ಯಾರಂಟಿ.

ಫಂಕಿ ಆಕ್ಸೆಸರೀಸ್‌ ಸೂಟ್‌ ಆಗದು.

ಮೇಕಪ್‌ ಕೂಡ ಮ್ಯಾಚ್‌ ಆಗಬೇಕು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: New York Fashion Week: ಬೆರಗು ಮೂಡಿಸಿದ ನ್ಯೂಯಾರ್ಕ್ ಫ್ಯಾಷನ್‌ ವೀಕ್‌ 2023

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Street Fashion: ಬೆಂಗಳೂರಿನ ರಸ್ತೆಯಲ್ಲಿ ಕಾಂತಾರ ಬೆಡಗಿಯ ಹೈ ಸ್ಟ್ರೀಟ್‌ ಫ್ಯಾಷನ್‌!

ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಬೆಂಗಳೂರಿನ ರಸ್ತೆಗಳಲ್ಲಿ ಹೈ ಸ್ಟ್ರೀಟ್‌ ಫ್ಯಾಷನ್‌ (Star Street Fashion) ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಮಿನಿ ಸ್ಲಿಟ್‌ ಸ್ಕರ್ಟ್– ಕಾಲರ್‌ ಬಟನ್‌ ಜಾಕೆಟ್‌ ಈಗಾಗಲೇ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

VISTARANEWS.COM


on

Star Street Fashion
ಚಿತ್ರಗಳು: ಸಪ್ತಮಿ ಗೌಡ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಸಪ್ತಮಿ ಗೌಡರ ಹೈ ಸ್ಟ್ರೀಟ್‌ ಫ್ಯಾಷನ್‌ಗೆ (Star Street Fashion) ಅಭಿಮಾನಿಗಳು ಫಿದಾ ಆಗಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ, ನೆವಿ ಬ್ಲ್ಯೂ ಶೇಡ್‌ನ ಮಿನಿ ಸ್ಕರ್ಟ್, ಕಾಲರ್‌ ಬಟನ್‌ ಜಾಕೆಟ್‌ ಧರಿಸಿ, ಹೈ ಸ್ಟ್ರೀಟ್‌ ಫ್ಯಾಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರ ಈ ಸ್ಟೈಲಿಂಗ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

ಮೂಗುತಿ ತೆಗೆದ ಕಾಂತಾರ ಸುಂದರಿ

ʼಕಾಂತಾರʼ ಚಿತ್ರದಲ್ಲಿ ಟ್ರೆಡಿಷನಲ್‌ ಲುಕ್‌ನಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಸಪ್ತಮಿ ಗೌಡ, ಕೆಲಕಾಲ ಸಿಂಪಲ್‌ ಲುಕ್‌ನಿಂದಲೇ ಎಲ್ಲರನ್ನೂ ಬರ ಸೆಳೆದುಕೊಂಡಿದ್ದರು. ಎಲ್ಲಿಗೆ ಹೋದರೂ ʼಕಾಂತಾರʼ ಸಿನಿಮಾದ ಮೂಗುತಿ ಸುಂದರಿ ಎಂದೇ ಅಭಿಮಾನಿಗಳು ಗುರುತಿಸುತ್ತಿದ್ದರು. ನಂತರದ ಸಿನಿಮಾಗಳಲ್ಲಿ ಮೂಗುತಿ ಇಲ್ಲದೆಯೇ ಕಾಣಿಸಿಕೊಂಡರು. ʼಕಾಂತಾರʼ ಇಮೇಜಿನಿಂದ ಹೊರ ಬಂದು ನಾನಾ ಬಗೆಯ ಹೊಸ ಲುಕ್‌ನಲ್ಲಿಯೂ ಕಾಣಿಸಿಕೊಂಡರು. ಒಂದಿಷ್ಟು ಜಾಹೀರಾತುಗಳಲ್ಲಿ, ಫ್ಯಾಷನ್‌ ಶೋಗಳಲ್ಲೂ ಕಾಣಿಸಿಕೊಂಡರು. ಕೇವಲ ಟ್ರೆಡಿಷನಲ್‌ ಲುಕ್‌ ಮಾತ್ರವಲ್ಲ, ತಾವು ವೆಸ್ಟರ್ನ್ ಲುಕ್‌ನಲ್ಲೂ ಆಕರ್ಷಕವಾಗಿ ಕಾಣಿಸುತ್ತೆನೆಂಬುದನ್ನು ಪ್ರೂವ್‌ ಮಾಡಿದರು. ಮೂಗುತಿ ತೆಗೆದ ನಂತರವೂ ಅವರ ಸೌಂದರ್ಯಕ್ಕೆನೂ ಧಕ್ಕೆಯಾಗಲಿಲ್ಲ! ಎಲ್ಲಾ ಪಾತ್ರಗಳಿಗೂ ಸೈ ಎಂಬಂತೆ, ಅವರು ಮತ್ತಷ್ಟು ಅಂದವಾಗಿ ಕಾಣಿಸಲಾರಂಭಿಸಿದರು. ಮೊದಲು ಹಾಗೂ ಮೂಗುತಿ ತೆಗೆದ ನಂತರ ಡಿಫರೆಂಟ್‌ ಇಮೇಜ್‌ಗಳಲ್ಲಿ ಕಾಣಿಸಿಕೊಂಡರು. ಇದು ಅವರಿಗಿರುವ ಫ್ಯಾಷನ್‌ ಸೆನ್ಸ್‌ ಅನ್ನು ಹೈಲೈಟ್‌ ಮಾಡಿದೆ. ಅವರು ಕೂಡ ಆಯಾ ಇಮೇಜ್‌ಗೆ ತಕ್ಕಂತೆ ಬದಲಾಗಬಲ್ಲರು ಎಂಬುದನ್ನು ತೋರ್ಪಡಿಸಿದೆ ಎಂದು ರಿವ್ಯೂ ಮಾಡಿರುವ ಫ್ಯಾಷನ್‌ ವಿಮರ್ಶಕಿ ನಿಶಾ ಪ್ರಕಾರ, ಮಾಡರ್ನ್ ಲುಕ್‌ ಸಪ್ತಮಿ ಅವರ ಪರ್ಸನಾಲಿಟಿಗೆ ಪರ್ಫೆಕ್ಟಾಗಿ ಹೊಂದುತ್ತದೆ ಎಂದಿದ್ದಾರೆ.

ಸಪ್ತಮಿ ಗೌಡರ ಹೈ ಸ್ಟ್ರೀಟ್‌ ಫ್ಯಾಷನ್‌

ಅಂದಹಾಗೆ, ಸಪ್ತಮಿ ಗೌಡರ ಈ ಹೈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ ಅವರು ಧರಿಸಿರುವ ಮಿನಿ ಸ್ಲಿಟ್‌ ಸ್ಕರ್ಟ್, ಕಾಲರ್‌ ಬಟನ್‌ ಜಾಕೆಟ್‌ ಹಾಗೂ ವೈಟ್‌ ಟಾಪ್‌ ಕಾಂಬಿನೇಷನ್‌ ಕಾಲೇಜು ಹುಡುಗಿಯರ ಲಕ್ಷುರಿ ಸ್ಟ್ರೀಟ್‌ ಫ್ಯಾಷನ್‌ ನೆನಪಿಸಿದೆ. ಅವರ ಎತ್ತರಕ್ಕೆ ಈ ಸ್ಟೈಲಿಂಗ್‌ ಪರ್ಫೆಕ್ಟ್ ಮ್ಯಾಚ್‌ ಆಗಿದೆ. ಇನ್ನು, ಮೇಕಪ್‌ ಇಲ್ಲದ ಅವರ ವಧನ ನ್ಯಾಚುರಲ್‌ ಲುಕ್‌ ನೀಡಿದೆ. ಲಿಪ್‌ಸ್ಟಿಕ್‌ ಇಲ್ಲದ ತುಟಿಗಳು ಸಿಂಪಲ್‌ ಲುಕ್‌ ನೀಡಿವೆ. ಫ್ರೀ ಹೇರ್‌ಸ್ಟೈಲ್‌ ಕಾಲೇಜು ಹುಡುಗಿಯರ ಬಿಂದಾಸ್‌ ಲುಕ್‌ನಂತೆ ಪ್ರತಿಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಮಶರ್ಕರು. ಟ್ರೆಡಿಷನಲ್‌ ಲುಕ್‌ಗೂ ಸೈ, ವೆಸ್ಟರ್ನ್ ಲುಕ್‌ಗೂ ಸೈ ಎಂಬಂತಿದ್ದಾರೆ ನಟಿ ಸಪ್ತಮಿ ಗೌಡ ಎಂಬುದು ಫ್ಯಾಷನಿಸ್ಟ್‌ಗಳ ಒಟ್ಟಾರೆ ಅಭಿಪ್ರಾಯವಾಗಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: World Environment Day: ಪರಿಸರಕ್ಕೆ ಕೊಡುಗೆ ನೀಡಲು ಫ್ಯಾಷನ್‌ ಪ್ರಿಯರಿಗೆ ಇಲ್ಲಿದೆ ಸಲಹೆ

Continue Reading

ಫ್ಯಾಷನ್

World Environment Day: ಪರಿಸರಕ್ಕೆ ಕೊಡುಗೆ ನೀಡಲು ಫ್ಯಾಷನ್‌ ಪ್ರಿಯರಿಗೆ ಇಲ್ಲಿದೆ ಸಲಹೆ

ಪರಿಸರಪ್ರೇಮಿ ಫ್ಯಾಷನ್‌ ಪ್ರಿಯರು ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎನ್ನುತ್ತಲೇ ಪರಿಸರಕ್ಕೆ ತಮ್ಮದೇ ಆದ ಚಿಕ್ಕ ಕೊಡುಗೆ ನೀಡಬಹುದು. ಅದು ಹೇಗೆ ಅಂತಿರಾ! ಫ್ಯಾಷನಿಸ್ಟ್‌ಗಳು ಈ ಕುರಿತಂತೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದರೊಂದಿಗೆ ಒಂದಿಷ್ಟು ಸಿಂಪಲ್‌ ಐಡಿಯಾ ಕೂಡ ನೀಡಿದ್ದಾರೆ. ಈ ಕುರಿತ (World Environment Day) ವಿವರ ಇಲ್ಲಿದೆ.

VISTARANEWS.COM


on

World Environment Day
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರಿಸರ ದಿನಾಚಾರಣೆಯಂದು (World Environment Day) ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎನ್ನಿ! ಹಾಗೆನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಇಂದು ವಿಶ್ವ ಪರಿಸರ ದಿನಾಚಾರಣೆ. ಅರರೆ! ಫ್ಯಾಷನ್‌ಗೂ ಪರಿಸರ ದಿನಾಚರಣೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ! ಹೌದು, ಸಸ್ಟೈನಬಲ್‌ ಫ್ಯಾಷನ್‌ ಅಳವಡಿಸಿಕೊಳ್ಳುವುದರ ಮೂಲಕ ಫ್ಯಾಷನ್‌ ಪ್ರಿಯರು ಕೂಡ ತಮ್ಮದೇ ಆದ ರೀತಿಯಲ್ಲಿ, ಪರಿಸರಕ್ಕೆ ಚಿಕ್ಕ ಕೊಡುಗೆ ಸಲ್ಲಿಸಬಹುದು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌.

World Environment Day

ಫ್ಯಾಷನಿಸ್ಟ್‌ಗಳ ಸಸ್ಟೈನಬಲ್‌ ಫ್ಯಾಷನ್‌ ಟಾಕ್‌

“ಉಡುಗೆಗಳ ಮರು ಬಳಕೆ, ಮರು ವಿನ್ಯಾಸದಿಂದ ಹಾಗೂ ಹಳೆಯ ಫ್ಯಾಷನ್‌ವೇರ್‌ಗಳ ಮರುಬಳಕೆಯಿಂದ, ಫ್ಯಾಷನ್‌ ಲೋಕದಲ್ಲಿ ಹೊಸ ಉತ್ಪಾದನೆಗೆ ತಗುಲುವ ಖರ್ಚು –ವೆಚ್ಚ, ಸಿಂಥೆಟಿಕ್‌ ಫ್ಯಾಬ್ರಿಕ್‌ ಹಾಗೂ ಆಕ್ಸೆಸರೀಸ್‌ಗಳ ಡಂಪಿಂಗ್‌ನಿಂದ ಪರಿಸರಕ್ಕೆ ಉಂಟಾಗುವ ಚಿಕ್ಕ ಪ್ರಮಾಣದ ಹಾನಿ ತಡೆಯಬಹುದು. ಪ್ರತಿಯೊಬ್ಬರು ಇದೇ ರೀತಿ ಯೋಚಿಸಿದಲ್ಲಿ , ಪರಿಸರ ಸ್ನೇಹಿ ಫ್ಯಾಷನ್‌ ನಿರ್ಮಾಣವಾಗುವುದು. ಇದರಿಂದ ಪ್ರಕೃತಿಗೆ ಫ್ಯಾಷನ್‌ ಪ್ರಿಯರ ಕಡೆಯಿಂದ ಕಿರು ಕಾಣಿಕೆ ಸಲ್ಲಿಸಿದಂತಾಗುವುದು” ಎನ್ನುತ್ತಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ. ಇನ್ನು ಫ್ಯಾಷನಿಸ್ಟ್‌ ರಾಜ್‌ ಶ್ರಾಫ್‌ ಹೇಳುವಂತೆ, ಇದೀಗ ದೊಡ್ಡ ದೊಡ್ಡ ಬ್ರಾಂಡ್‌ಗಳು ಕೂಡ ಪರಿಸರ ಸ್ನೇಹಿ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಅಲ್ಲದೇ, ರಿಸೈಕಲ್‌ ಆಗಿ ಮರು ನಿರ್ಮಾಣಗೊಂಡ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇದು ಪ್ರಶಂಸನೀಯ ಎನ್ನುತ್ತಾರೆ. ಅದೇ ರೀತಿ, ಸ್ಟೈಲಿಸ್ಟ್ ಜಗನ್‌ ಹೇಳುವಂತೆ, ಆನ್‌ಲೈನ್‌ನಲ್ಲೂ ಸಾಕಷ್ಟು ಸಸ್ಟೈನಬಲ್‌ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ. ಇದು ಫ್ಯಾಷನ್‌ ಪ್ರಿಯರಿಗೆ ಸಹಕಾರಿಯಾಗಿವೆ ಎನ್ನುತ್ತಾರೆ.

ಸಸ್ಟೈನಬಲ್‌ ಫ್ಯಾಷನ್‌ಗೆ 7 ಸಿಂಪಲ್‌ ಐಡಿಯಾಗಳು

  1. ನಿಮ್ಮ ಬಳಿಯಿರುವ ಉಡುಗೆಗಳಿಗೆ ಹೊಸ ರೂಪ ನೀಡಿ, ಮರುಬಳಕೆ ಮಾಡಬಹುದು. ಮೇಕೋವರ್‌ನಿಂದ ಡಿಫರೆಂಟ್‌ ಲುಕ್‌ ನೀಡಬಹುದು.
  2. ಹಳೆಯ ಸೀರೆಗಳಿಗೆ ಹೊಸ ರೂಪ ನೀಡಬಹುದು. ಉದಾಹರಣೆಗೆ., ಹಳೆಯ ರೇಷ್ಮೆ ಸೀರೆಯನ್ನು ಲೆಹೆಂಗಾ ಅಥವಾ ದಾವಣಿ-ಲಂಗವಾಗಿ ಪರಿವರ್ತಿಸಬಹುದು. ಬಾರ್ಡರ್‌ ಸೀರೆಗಳನ್ನು ಎಥ್ನಿಕ್‌ ಗೌನ್‌ಗಳಾಗಿಸಬಹುದು. ತಾಯಿ-ಮಗಳಿಗೆ ಟ್ವಿನ್ನಿಂಗ್‌ ಡ್ರೆಸ್ ಮಾಡಬಹುದು.
  3. ಹಳೆ ಫ್ಯಾಬ್ರಿಕ್‌ನಿಂದ ಕ್ಲಾತ್‌ ಆಕ್ಸೆಸರೀಸ್‌ಗಳನ್ನು ಸಿದ್ಧಗೊಳಿಸಬಹುದು. ಮ್ಯಾಚಿಂಗ್‌ ಕಮರ್‌ಬಾಂದ್‌ ರೆಡಿ ಮಾಡಬಹುದು.
  4. ಕಾಟನ್‌ ದುಪಟ್ಟಾಗಳಿಂದ ವೆಸ್ಟರ್ನ್ ಲುಕ್‌ ನೀಡುವ ಟಾಪ್‌ ಅಥವಾ ಫ್ರಾಕ್‌ಗಳನ್ನು ವಿನ್ಯಾಸಗೊಳಿಸಿ ಧರಿಸಬಹುದು.
  5. ಸಸ್ಟೈನಬಲ್‌ ಫ್ಯಾಷನ್‌ಗೆ ಸಾಥ್‌ ನೀಡುವಂತಹ ಬ್ರಾಂಡ್‌ಗಳ ಡಿಸೈನರ್‌ವೇರ್‌ಗಳನ್ನು ಆಯ್ಕೆ ಮಾಡಬೇಕು.
  6. ಹಳೆಯ ಜೀನ್ಸ್ ಅಥವಾ ಡೆನಿಮ್‌ ಪ್ಯಾಂಟ್‌ಗಳಿದ್ದಲ್ಲಿ , ಅವುಗಳನ್ನು ಬಳಸಿ ಹೊಸ ಡಿಸೈನರ್‌ವೇರ್‌ ತಯಾರಿಸಿ, ಧರಿಸಬಹುದು. ಉದಾಹರಣೆ., ಕ್ರಾಪ್‌ ಟಾಪ್‌, ಟೊರ್ನ್ ಶಾರ್ಟ್ಸ್ ಇತ್ಯಾದಿ.
  7. ( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Jumka Bangles Fashion: ಡಿಸೈನರ್‌ ಬಳೆಗಳಿಗೆ ಜುಮ್ಕಾ ಅಲಂಕಾರ!

Continue Reading

ಫ್ಯಾಷನ್

Jumka Bangles Fashion: ಡಿಸೈನರ್‌ ಬಳೆಗಳಿಗೆ ಜುಮ್ಕಾ ಅಲಂಕಾರ!

ಮದುವೆಯ ಸೀಸನ್‌ನಲ್ಲಿ ನಾನಾ ಬಗೆಯ ಡಿಸೈನರ್‌ ಜುಮ್ಕಾ ಬಳೆಗಳು (Jumka Bangles Fashion) ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಆಕ್ಸೆಸರೀಸ್‌ ಸ್ಪೆಷಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Jumka Bangles Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ, ಶೆಟ್ಟಿ, ಬೆಂಗಳೂರು
ಡಿಸೈನರ್‌ ಜುಮ್ಕಾ ಬಳೆಗಳು (Jumka Bangles Fashion) ಟ್ರೆಂಡಿಯಾಗಿವೆ. ಬಳೆ ಪ್ರಿಯ ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ. ಜುಮ್ಕಾ ಬಳೆಗಳು ಸದಾ ವೆಡ್ಡಿಂಗ್‌ ಸೀಸನ್‌ನಲ್ಲಿ ಹೆಚ್ಚು ಚಾಲ್ತಿಗೆ ಬರುತ್ತವೆ. ಇದೀಗ ಟ್ರೆಡಿಷನಲ್‌ ಮದುವೆ ಸಮಾರಂಭಗಳು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಇವನ್ನು ಧರಿಸುವ ಮಹಿಳೆಯರು ಹೆಚ್ಚಾದಂತೆ, ನಾನಾ ಡಿಸೈನ್‌ಗಳು ಬಿಡುಗಡೆಗೊಳ್ಳುತ್ತಿವೆ.

Jumka Bangles Fashion

ಏನಿದು ಜುಮ್ಕಾ /ಜುಮಕಿ ಬಳೆಗಳು

ಅಂದಹಾಗೆ, ಕಿವಿಗೆ ಧರಿಸುವ ವೆರೈಟಿ ಡಿಸೈನ್‌ನ ಜುಮ್ಕಾಗಳು ಇದೀಗ ಬಳೆಗಳಲ್ಲಿ ನೇತಾಡುತ್ತಿವೆ. ಬಳೆಗಳಿಗೆ ಅಟ್ಯಾಚ್‌ ಆದಂತೆ ಅವನ್ನು ಡಿಸೈನ್‌ ಮಾಡಲಾಗಿರುತ್ತದೆ. ಕಡಗ, ಬಳೆಗಳ ಸೈಝಿಗೆ ತಕ್ಕಂತೆ ಜುಮ್ಕಾಗಳನ್ನು ಚೈನ್‌ ಮುಖಾಂತರ ಅಥವಾ ನೇರವಾಗಿ ಅಟ್ಯಾಚ್‌ ಮಾಡಲಾಗಿರುತ್ತದೆ. ಅವನ್ನೇ ಜುಮ್ಕಾ ಬಳೆಗಳೆನ್ನಲಾಗುತ್ತದೆ.

Jumka Bangles Fashion

ಟ್ರೆಂಡಿಯಾಗಿರುವ ಜುಮ್ಕಾ ಬಳೆಗಳು

ಈ ಸೀಸನ್‌ನಲ್ಲಿ ಜುಮ್ಕಾ ಬಳೆಗಳು, ಕೇವಲ ಗೋಲ್ಡ್ ಪ್ಲೇಟೆಡ್‌ನಲ್ಲಿ ಮಾತ್ರವಲ್ಲ, ವೈಟ್‌ ಹಾಗೂ ಬ್ಲ್ಯಾಕ್‌ ಮೆಟಲ್‌ನಲ್ಲೂ ದೊರೆಯುತ್ತಿವೆ. ಇನ್ನು ಹೆಚ್ಚು ಬೆಲೆಯಾದರೂ ಪರವಾಗಿಲ್ಲ, ನೋಡಲು ಮಾತ್ರ ಚೆನ್ನಾಗಿ ಕಾಣಿಸಬೇಕು ಎನ್ನುವವರು ಸಿಲ್ವರ್‌ ಜ್ಯುವೆಲರಿ ಹಾಗೂ ಆಕ್ಸಿಡೈಸ್ಡ್ ಜ್ಯುವೆಲರಿಗಳಲ್ಲಿ ಲಭ್ಯವಿರುವ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೈಗೆಟುಕುವ ಬೆಲೆಯಿಂದಿಡಿದು ಸಾವಿರಾರು ರೂ.ಗಳಲ್ಲೂ ಈ ಜುಮ್ಕಾ ಬಳೆಗಳು ದೊರೆಯುತ್ತಿವೆ.

Jumka Bangles Fashion

ಗೋಲ್ಡ್ ಪ್ಲೇಟೆಡ್ ಜುಮ್ಕಾಗಳಿಗೆ ಬೇಡಿಕೆ

ಸೆಟ್‌ ಬ್ಯಾಂಗಲ್ಸ್, ಸಿಂಗಲ್‌ ಕಡ ಅಥವಾ ಕಡಗ, ಸೈಡ್‌ ಬ್ಯಾಂಗಲ್ಸ್, ಸೆಂಟರ್‌ ಬ್ಯಾಂಗಲ್‌ಗಳಲ್ಲೂ ಜುಮ್ಕಾ ಡಿಸೈನರ್‌ ಬಳೆಗಳು ಬಂದಿವೆ. ಫ್ಯಾನ್ಸಿ ಶಾಪ್‌ಗಳಲ್ಲಿ ನಾನಾ ಡಿಸೈನ್‌ನಲ್ಲಿ ದೊರೆಯುತ್ತಿರುವ ಇವು, ಇದೀಗ ಆನ್‌ಲೈನ್‌ನಲ್ಲೂ ದೊರೆಯುತ್ತಿವೆ. ಹಾಗಾಗಿ ಸಾಕಷ್ಟು ಡಿಸೈನ್‌ನವನ್ನು ಕಾಣಬಹುದು ಎನ್ನುತ್ತಾರೆ ಮಾರಾಟಗಾರರಾದ ಶೇಖರ್‌. ಅವರ ಪ್ರಕಾರ, ಜುಮ್ಕಾ ಬಳೆಗಳು ಟ್ರೆಡಿಷನಲ್‌ ಲುಕ್‌ಗೆ ಆಕರ್ಷಕವಾಗಿ ಕಾಣುವುದರಿಂದ ಅತಿ ಹೆಚ್ಚಾಗಿ ಗೋಲ್ಡ್ ಪ್ಲೇಟೆಡ್‌ ಜುಮ್ಕಾ ಬಳೆಗಳನ್ನು ಖರೀದಿಸುವುದು ಹೆಚ್ಚಂತೆ.

ಇದನ್ನೂ ಓದಿ: Dress Fashion: ಲೇಸರ್‌ ಕಟ್‌ವರ್ಕ್ ಡ್ರೆಸ್‌ಗಳಿಗೂ ಸಿಕ್ತು ಗ್ಲಾಮರಸ್ ಟಚ್‌!

ಜುಮ್ಕಾ ಬಳೆ ಪ್ರಿಯರಿಗೆ ಒಂದಿಷ್ಟು ಸಲಹೆ

  • ಫಿನಿಶಿಂಗ್‌ ಇರುವಂತಹ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ಮೈ ಕೈಗೆ ಚುಚ್ಚಬಹುದು. ಧರಿಸುವ ಸೀರೆ ಹಾಗೂ ಔಟ್‌ಫಿಟ್‌ಗಳು ಕಿತ್ತುಹೋಗಬಹುದು.
  • ಕಡದಂತ ಜುಮ್ಕಾ ಬ್ಯಾಂಗಲ್‌ ಆದಲ್ಲಿ ಯಾವುದೇ ಟ್ರೆಡಿಷನಲ್‌ ಉಡುಪಿಗೂ ಧರಿಸಬಹುದು.
  • ಜುಮಕಿಗಳನ್ನು ಧರಿಸಿದಾಗ ಇವನ್ನು ಮ್ಯಾಚ್‌ ಮಾಡಬಹುದು.
  • ಆಕ್ಸಿಡೈಸ್ಡ್ ಹಾಗೂ ಸಿಲ್ವರ್‌ನವನ್ನು ವೆಸ್ಟರ್ನ್ ಔಟ್‌ಫಿಟ್‌ಗೂ ಧರಿಸಬಹುದು.
  • ಆದಷ್ಟೂ ತೀರಾ ಉದ್ದವಿರದ ಜುಮ್ಕಾ ಬ್ಯಾಂಗಲ್ಸ್ ಆಯ್ಕೆ ಮಾಡಿ.
  • ಪರ್ಲ್, ಕುಂದನ್‌, ಸ್ಟೋನ್‌ನವು ಕೂಡ ಟ್ರೆಂಡಿಯಾಗಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Dress Fashion: ಲೇಸರ್‌ ಕಟ್‌ವರ್ಕ್ ಡ್ರೆಸ್‌ಗಳಿಗೂ ಸಿಕ್ತು ಗ್ಲಾಮರಸ್ ಟಚ್‌!

ಈ ಸೀಸನ್‌ನಲ್ಲಿ ನಾನಾ ಬಗೆಯ ಲೇಸರ್‌ ಕಟ್‌ ಡ್ರೆಸ್‌ಗಳು ಕಾಲಿಟ್ಟಿದ್ದು, ಅವುಗಳಲ್ಲಿ ಗ್ಲಾಮರಸ್‌ ಲುಕ್‌ ನೀಡುವಂತಹ ಸಾಕಷ್ಟು ಬಗೆಯವು ಸೆಲೆಬ್ರೆಟಿಗಳ ಹಾಗೂ ಮಾಡೆಲ್‌ಗಳನ್ನು ಸವಾರಿ ಮಾಡುತ್ತಿವೆ. ಅವು ಯಾವುವು? ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ (Dress Fashion) ಇಲ್ಲಿದೆ ವಿವರ.

VISTARANEWS.COM


on

Dress Fashion
ಚಿತ್ರಗಳು: ಶಿಫಾಲಿ ಝರಿವಾಲ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೇಸರ್‌ ಕಟ್‌ ಡ್ರೆಸ್‌ ಫ್ಯಾಷನ್‌ (Dress Fashion) ಇದೀಗ ಗ್ಲಾಮರಸ್‌ ಟಚ್‌ ಪಡೆದಿದೆ. ಕೇವಲ ಡ್ರೆಸ್‌ನ ಒಂದು ಭಾಗವಾಗಿದ್ದ ಈ ಲೇಸರ್‌ ಕಟ್‌ ವಿನ್ಯಾಸ ಇದೀಗ ಇಡೀ ಡ್ರೆಸ್‌ಗಳನ್ನು ಆವರಿಸಿಕೊಂಡಿದ್ದು, ತನ್ನದೇ ಆದ ಹೊಸ ರೂಪ ಪಡೆದುಕೊಂಡಿವೆ.

Dress Fashion

ಏನಿದು ಲೇಸರ್‌ ಕಟ್‌ವರ್ಕ್ ಡ್ರೆಸ್

ಸಿಂಪಲ್‌ ಆಗಿ ಹೇಳುವುದಾದಲ್ಲಿ, ಒಂದು ಡ್ರೆಸ್‌ನ ನಿರ್ಧಿಷ್ಟ ಭಾಗವನ್ನು ಲೇಸರ್‌ ಮೂಖಾಂತರ ಸಾಕಷ್ಟು ಕಡೆ ಪಕ್ಕ ಪಕ್ಕದಲ್ಲೆ ತೂತು ಮಾಡುವ ಮೂಲಕ ವಿನ್ಯಾಸಗೊಳಿಸುವ ಒಂದು ಡಿಸೈನಿಂಗ್‌ ಕ್ರಮವಿದು. ಇದನ್ನು ಲೇಸರ್‌ ಕಟ್‌ವರ್ಕ್ ವಿನ್ಯಾಸವೆಂದು ಹೇಳಲಾಗುತ್ತದೆ. ನೋಡಲು ಕೀ ಹೋಲ್‌ ಡ್ರೆಸ್‌ನಂತೆ ಯೂ ಇವು ಕಾಣುತ್ತವೆ. ಆದರೆ, ಇವು ಆವಲ್ಲ!

Dress Fashion

ಲೇಸರ್‌ ಕಟ್‌ ವರ್ಕ್‌ನ ನಾನಾ ವಿನ್ಯಾಸ

ಈ ಸೀಸನ್‌ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ನಾನಾ ಬಗೆಯ ಲೇಸರ್‌ ಕಟ್‌ ಡ್ರೆಸ್‌ಗಳು ಕಾಲಿಟ್ಟಿದ್ದವು. ಸಲ್ವಾರ್‌ ಸೂಟ್‌ನಿಂದಿಡಿದು ಸೀರೆಯ ಹಾಗೂ ಲೆಹೆಂಗಾ ಬ್ಲೌಸ್‌ಗಳು ಕೂಡ ಲೇಸರ್‌ ಕಟ್‌ ಡಿಸೈನ್‌ ಹೊಂದಿದ್ದವು. ನಂತರ ಉಡುಪಿನ ಸ್ಲೀವ್‌, ಆಂಕೆಲ್‌ ಪ್ಯಾಂಟ್‌ನ ತುದಿ, ನೆಕ್‌ಲೈನ್‌, ವೇಸ್ಟ್‌ಕಲೈನ್‌ ಹೀಗೆ ನಾನಾ ಕಡೆ ಆಯಾ ಡ್ರೆಸ್‌ ಡಿಸೈನರ್‌ನ ಅಭಿಲಾಷೆಗೆ ತಕ್ಕಂತೆ ವ್ಯಾಪ್ತಿ ವಿಸ್ತರಿಸಿಕೊಂಡವು. ಒಂದಿಷ್ಟು ದಿನ ಔಟ್‌ಫಿಟ್‌ಗಳ ಒಂದು ಭಾಗವಾಗಿದ್ದ ಈ ಡಿಸೈನ್ಸ್ ಇದೀಗ ಇಡೀ ಡ್ರೆಸ್‌ಗಳನ್ನು ಆವರಿಸಿಕೊಂಡವು. ಪರಿಣಾಮ, ಇವು ಲೇಸರ್‌ ಕಟ್‌ ಡ್ರೆಸ್‌ಗಳೆಂದು ನಾಮಕರಣಗೊಂಡವು ಎನ್ನುತ್ತಾರೆ ಡಿಸೈನರ್‌ ಲಿಯಾ. ಅವುಗಳಲ್ಲಿ ಕೆಲವಂತೂ ಗ್ಲಾಮರಸ್‌ ಟಚ್‌ ಪಡೆದು ಬೀಚ್‌ವೇರ್‌ನೊಳಗೂ ಸೇರಿಕೊಂಡಿವೆ. ಇನ್ನು, ಕೆಲವು ಸಾಮಾನ್ಯ ಡ್ರೆಸ್‌ನೊಳಗೂ ನುಸುಳಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧವನ್‌. ಅಷ್ಟು ಮಾತ್ರವಲ್ಲದೇ, ಬಾಲಿವುಡ್‌ ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ.

Dress Fashion

ಗಾಳಿಯಾಡುವ ವಿನ್ಯಾಸ

ಅರರೆ, ಇದೇನಿದು? ಎಂದು ಯೋಚಿಸುತ್ತಿದ್ದೀರಾ! ಈ ಲೇಸರ್‌ ಕಟ್‌ ವಿನ್ಯಾಸ ಡ್ರೆಸ್‌ಗಳನ್ನು ಗಾಳಿಯಾಡುವಂತೆ ಮಾಡುತ್ತವೆ. ಇದನ್ನೇ ಪ್ರಮುಖ ಅಂಶವಾಗಿರಿಸಿಕೊಂಡ ಡಿಸೈನರ್‌ಗಳು ಕಳೆದ ಸಮ್ಮರ್‌ನಲ್ಲಿ ನಾನಾ ವಿನ್ಯಾಸದ ಲೇಸರ್‌ ಕಟ್‌ ವರ್ಕ್ ಡಿಸೈನ್‌ನ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆ ಮಾಡಿದ್ದರು. ಕೊನೆಗೆ ಇಡೀ ಡ್ರೆಸ್‌ನನ್ನೇ ಲೇಸರ್‌ ಕಟ್‌ ವಿನ್ಯಾಸದಲ್ಲಿ ಡಿಸೈನ್‌ ಮಾಡಿದ್ದರು. ಒಳಗೆ ಇನ್ನರ್‌ವೇರ್‌ ಅಥವಾ ಸ್ವೀಮ್‌ ವೇರ್‌ ಇಲ್ಲವೇ ಶಾರ್ಟ್ಸ್ ಧರಿಸಿದ ಮಾಡೆಲ್‌ಗಳು ಇವನ್ನು ಧರಿಸಿ ಟ್ರೆಂಡಿಯಾಗಿಸಿದರು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

  • ಸೀಸನ್‌ ಎಂಡ್‌ನಲ್ಲಿ ಶ್ವೇತ ವರ್ಣದವು ಟ್ರೆಂಡಿಯಾಗಿವೆ.
  • ಮುಂದಿನ ಸೀಸನ್‌ಗೆ ಮುಂದುವರಿಸಲು ಸೂಕ್ತವಲ್ಲ!
  • ಸೆಲೆಬ್ರೆಟಿಗಳ ಡ್ರೆಸ್‌ಕೋಡ್‌ ಇದು ಎಂದರೂ ತಪ್ಪಿಲ್ಲ!

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

Continue Reading
Advertisement
Dr C N Manjunath
ಕರ್ನಾಟಕ12 mins ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ25 mins ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ29 mins ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

500 Rs deposit in the name of new admission children by old students of Government Kannada School Lingasugur
ಕರ್ನಾಟಕ31 mins ago

Raichur News: ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ!

Koti Movie
ಸಿನಿಮಾ43 mins ago

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Belagavi Election Result 2024
ಬೆಳಗಾವಿ1 hour ago

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

French Open 2024
ಕ್ರೀಡೆ1 hour ago

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

Minister Of Parliament
Latest2 hours ago

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

Uttarakhand Trekking Tragedy
ಪ್ರಮುಖ ಸುದ್ದಿ2 hours ago

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

India Bloc Meeting
ದೇಶ2 hours ago

India Bloc Meeting: ಆಡಳಿತದ ಆಸೆ ಕೈಬಿಟ್ಟ ಇಂಡಿಯಾ ಒಕ್ಕೂಟ; ಒಗ್ಗಟ್ಟಿಗಾಗಿ ಸಭೆ, ಬಲಿಷ್ಠ ಪ್ರತಿಪಕ್ಷದ ಗುರಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌