Bengaluru Open: ಸುಮಿತ್​ ನಗಲ್​ಗೆ ಸೋಲು; ಅನಿರುದ್ಧ್ -ಪ್ರಶಾಂತ್‌ ಜೋಡಿ ಸೆಮಿಗೆ ಲಗ್ಗೆ - Vistara News

ಕ್ರೀಡೆ

Bengaluru Open: ಸುಮಿತ್​ ನಗಲ್​ಗೆ ಸೋಲು; ಅನಿರುದ್ಧ್ -ಪ್ರಶಾಂತ್‌ ಜೋಡಿ ಸೆಮಿಗೆ ಲಗ್ಗೆ

ಬೆಂಗಳೂರು ಓಪನ್‌ ಟೆನಿಸ್‌ ಕೂಟದ(Bengaluru Open) ಪ್ರಿ-ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸುಮಿತ್‌ ನಗಲ್‌ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

VISTARANEWS.COM


on

Bengaluru Open: Defeat to Sumit Nagal; Anirudh-Prashanth pair advance to semis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್‌ ಕೂಟದ(Bengaluru Open) ಪ್ರಿ-ಕ್ವಾರ್ಟರ್‌ಫೈನಲ್‌ನ ಹೋರಾಟದಲ್ಲಿ ಆಸ್ಟ್ರೇಲಿಯದ ಮ್ಯಾಕ್ಸ್‌ ಪುರ್ಸೆಲ್‌ ವಿರುದ್ಧ ಭಾರತದ ಸುಮಿತ್‌ ನಗಲ್‌ ಸೋಲು ಕಂಡಿದ್ದಾರೆ. ಆದರೆ ಡಬಲ್ಸ್‌ ವಿಭಾಗದಲ್ಲಿ ಅನಿರುದ್ಧ್ ಚಂದ್ರಶೇಖರ್‌ ಮತ್ತು ಎನ್‌. ಪ್ರಶಾಂತ್‌ ಜೋಡಿ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಲಗ್ಗೆ ಇರಿಸಿದ್ದಾರೆ.

ನಗಲ್‌ ಅವರ ಸೋಲಿನೊಂದಿಗೆ ಸಿಂಗಲ್ಸ್​ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಗುರುವಾರ ನಡೆದ ಈ ಪಂದ್ಯದಲ್ಲಿ ನಗಲ್​ ಅವರು ವಿಂಬಲ್ಡನ್‌ ಡಬಲ್ಸ್‌ ಚಾಂಪಿಯನ್‌ ಮ್ಯಾಕ್ಸ್‌ ಪುರ್ಸೆಲ್‌ ವಿರುದ್ಧ 4-6, 6-3, 6-3 ಅಂತರದಿಂದ ಶರಣಾಗಿ ಹೊರಬಿದ್ದರು. ನಗಲ್‌ ಮೊದಲ ಸೆಟ್‌ ಗೆಲ್ಲುವ ಮೂಲಕ ಎದುರಾಳಿಗೆ ಪ್ರಬಲ ಹೊಡೆತ ನೀಡಿದ್ದರು. ಆದರೆ ಮುಂದಿನ ಸೆಟ್​ನಲ್ಲಿ ಇದೇ ಆಟವನ್ನು ಮುಂದುವರಿಸುವಲ್ಲಿ ಎಡವಿದ ಅವರು ಅಂತಿಮವಾಗಿ ಸೋಲು ಕಾಣುವಂತಾಯಿತು.

ಇದನ್ನೂ ಓದಿ Bengaluru Open: ಸಿಎಂ ಬೊಮ್ಮಾಯಿ ತಡವಾಗಿ ಬಂದ ಕಾರಣಕ್ಕೆ ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌

ಡಬಲ್ಸ್‌ ವಿಭಾಗದಲ್ಲಿ ಭಾರತದ ಅನಿರುದ್ಧ್ ಮತ್ತು ಪ್ರಶಾಂತ್‌ ಅವರು ಜಿಂಬಾಬ್ವೆಯ ಬೆಂಜಮಿನ್‌ ಲಾಕ್‌ ಮತ್ತು ಆಸ್ಟ್ರೇ ಲಿಯದ ಅಕಿರ ಸ್ಯಾಂಟಿಲನ್‌ ಅವರನ್ನು 3-6, 6-4, 12-10 ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ ಹಂತಕ್ಕೇರಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

VISTARANEWS.COM


on

Jos Butler
Koo

ಬೆಂಗಳೂರು: ಬಲಗೈ ಬ್ಯಾಟರ್​ ಜೋಸ್ ಬಟ್ಲರ್ ಆಧುನಿಕ ಪೀಳಿಗೆಯ ಅತ್ಯುತ್ತಮ ವೈಟ್-ಬಾಲ್ ಬ್ಯಾಟರ್​ಗಳಲ್ಲಿ ಒಬ್ಬರು. ಅವರು ಜೂನ್ 2 ರಿಂದ ಪ್ರಾರಂಭವಾಗಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ವಿಶ್ವ ಕಪ್​ ಟ್ರೋಫಿಯನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸಲಿದೆ. ಹಿಂದಿನ ಬಾರಿ ಬೆನ್​ಸ್ಟೋಕ್ಸ್ ನೇತೃತ್ವದಲ್ಲಿ ಇಂಗ್ಲೆಂಡ್​ ತಂಡ ಹಿಂದಿನ ಆವೃತ್ತಿಯಲ್ಲಿ ಕಪ್​ ಗೆದ್ದಿತ್ತು. ಅವರೀಗ ಟಿ20ಐನಲ್ಲಿ 3000 ರನ್ ಗಡಿ ದಾಟಿದ ಇಂಗ್ಲೆಂಡ್​ನ ಮೊದಲ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 2 ನೇ ಟಿ 20 ಪಂದ್ಯದಲ್ಲಿ ಜೋಸ್ ಬಟ್ಲರ್ ಕೇವಲ 51 ಎಸೆತಗಳಲ್ಲಿ 84 ರನ್ ಗಳಿಸಿ ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ ಈಗ ಟಿ 20 ಪಂದ್ಯಗಳಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 106 ಇನ್ನಿಂಗ್ಸ್​ಗಳಲ್ಲಿ 35.42 ಸರಾಸರಿ ಮತ್ತು 145.10 ಸ್ಟ್ರೈಕ್ ರೇಟ್​ಪ್ರಕಾರ 3011 ರನ್ ಗಳಿಸಿದ್ದಾರೆ.

ಬಟ್ಲರ್ ಟಿ 20 ಪಂದ್ಯಗಳಲ್ಲಿ ತಮ್ಮ ಹೆಸರಿನಲ್ಲಿ ಒಂದು ಶತಕದ ದಾಖಲೆಯನ್ನೂ ಹೊಂದಿದ್ದಾರೆ. ಈ ಬಾರಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರುವ ಕಾರಣ ಅವಕಾಶ ಹೆಚ್ಚಿದೆ.

ಇದನ್ನೂ ಓದಿ: Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

ಐಪಿಎಲ್ಗೂ ಮುನ್ನ ಬಟ್ಲರ್ ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅಲ್ಲಿ ಅವರು ಎರಡು ಶತಕಗಳನ್ನು ಬಾರಿಸಿದ್ದರು. ಲೀಡ್ಸ್​​ನಲ್ಲಿ ನಡೆದ ಮೊದಲ ಪಂದ್ಯ ರದ್ದಾದ ನಂತರ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟಿ 20 ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಕಾರ್ಡಿಫ್​​ನಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ನಾಯಕ ತನ್ನ ಬ್ಯಾಟಿಂಗ್ ಪ್ರದರ್ಶನ ಹೇಗೆ ನೀಡುತ್ತಾರೆ ಎಂದು ಕಾದು ನೋಡಬೇಕಷ್ಟೆ.

ಐಪಿಎಲ್​ ನಡುವೆಯೇ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್​

ಮುಂಬಯಿ: ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ತಪ್ಪು ಹೆಸರನ್ನು ಕರೆದ ಬಳಿಕ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಕ್ಕೆ ನಿರ್ಧರಿಸಿಕೊಂಡರು. ಇಂಗ್ಲೆಂಡ್ ಪರ 57 ಟೆಸ್ಟ್, 181 ಏಕದಿನ ಹಾಗೂ 114 ಟಿ20 ಪಂದ್ಯಗಳನ್ನು ಆಡಿದ್ದಾರೆ ಜೋಸ್ ಬಟ್ಲರ್​. ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರೀಗ ಏಕಾಏಕಿ ಹೆಸರನ್ನು ಬದಲಿಸಿಕೊಂಡಿದ್ದಾರೆ.

ನಾನು ಇಂಗ್ಲೆಂಡ್ ತಂಡದ ವೈಟ್ ಬಾಲ್ ನಾಯಕ. ಇಲ್ಲಿಯವರೆಗೆ ನನ್ನನ್ನು ತಪ್ಪು ಹೆಸರಿನೊಂದಿಗೆ ಕರೆಯಲಾಗುತ್ತಿತ್ತು . ನನ್ನ ಹುಟ್ಟುಹಬ್ಬದ ಕಾರ್ಡ್ ನಲ್ಲಿ ಬೀದಿಯಲ್ಲಿರುವ ಜನರಿಂದ ಹಿಡಿದು ನನ್ನ ತಾಯಿಯವರೆಗೆ. ಪ್ರಿಯ ಜೋಶ್ ಎಂದು ಕರೆಯಬೇಕು. ಇಂಗ್ಲೆಂಡ್ ಪರ 13 ವರ್ಷಗಳ ಕಾಲ ಆಡಿದ ನಂತರ ಮತ್ತು ಎರಡು ವಿಶ್ವಕಪ್ ಪಂದ್ಯಗಳನ್ನು ಗೆದ್ದ ನಂತರ, ನಾನು ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದೇನೆ. ನಾನು ಅಧಿಕೃತವಾಗಿ ಜೋಶ್ ಬಟ್ಲರ್​ ಎಂದು ಹೇಳಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

Virat kohli : ಆರ್​ಸಿಬಿ ಬ್ಯಾಟ್ಸ್ಮನ್ ಕೊಹ್ಲಿ ಐಪಿಎಲ್ 2024ರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳೊಂದಿಗೆ 741 ರನ್​ ಬಾರಿಸಿದ್ದರು ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 15 ಪಂದ್ಯವಾಡಿರುವ ಅವರು ಟಿ20 ಮೋಡ್​ನಲ್ಲಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯ ತಪ್ಪಿಸಲು ಉದ್ದೇಶಿಸಿದ್ದಾರೆ.

VISTARANEWS.COM


on

Virat kohli
Koo

ಬೆಂಗಳೂರು: ವೆಸ್ಟ್​​ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024 ಕ್ಕೆ (T20 World Cupl 2024) ಮುಂಚಿತವಾಗಿ ಭಾರತ ತಂಡಕ್ಕೆ ಏಕೈಕ ಅಭ್ಯಾಸ ಪಂದ್ಯ ದೊರಕಿದೆ. ಆದರೆ ಆ ಹಣಾಹಣಿಯಿಂದ ವಿರಾಟ್​ ಕೊಹ್ಲಿ(Virat kohli) ಹೊರಕ್ಕೆ ಉಳಿಯುವ ಸಾಧ್ಯತೆಗಳಿವೆ. ಐಪಿಎಲ್ ಮುಗಿದ ಬಳಿಕ ಅವರು ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ. ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಅಭ್ಯಾಸ ಪಂದ್ಯದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಕೊಹ್ಲಿ ಜೊತೆಗೆ, ಸಂಜು ಸ್ಯಾಮ್ಸನ್ ಕೂಡ ನಿಗದಿತ ಸಮಯದಲ್ಲಿ ಹೊರಡುವುದಿಲ್ಲ ಎಂದು ಹೇಳಲಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತಂಡ ಸೇರಿಲ್ಲ. ನಾನಾ ಗಾಸಿಪ್​ಗಳ ನಡುವೆ ಅವರೂ ಪ್ರವಾಸಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಭಾರತ ತಂಡದ ಮೊದಲ ಬ್ಯಾಚ್ ಆಟಗಾರರು ಶನಿವಾರ ತೆರಳಿದರೆ, ಎರಡನೇ ಬ್ಯಾಚ್ ಸೋಮವಾರ ಹೊರಡಲಿದೆ ಈ ಆಟಗಾರರು ಅಲ್ಲಿ ಆಡಲಿದ್ದಾರೆ.

ಆರ್​ಸಿಬಿ ಬ್ಯಾಟ್ಸ್ಮನ್ ಕೊಹ್ಲಿ ಐಪಿಎಲ್ 2024ರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳೊಂದಿಗೆ 741 ರನ್​ ಬಾರಿಸಿದ್ದರು ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 15 ಪಂದ್ಯವಾಡಿರುವ ಅವರು ಟಿ20 ಮೋಡ್​ನಲ್ಲಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯ ತಪ್ಪಿಸಲು ಉದ್ದೇಶಿಸಿದ್ದಾರೆ. ಇನ್ನು ದುಬೈಗೆ ವೈಯಕ್ತಿಕ ಕೆಲಸಕ್ಕಾಗಿ ತೆರಳಿರುವ ಸಂಜು ಸ್ಯಾಮ್ಸನ್ ಸ್ವಲ್ಪ ದಿನ ಬಿಟ್ಟು ಹೊರಡು ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ.

“ಕೊಹ್ಲಿ ಅವರು ತಡವಾಗಿ ತಂಡವನ್ನು ಸೇರಲಿದ್ದಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು/ ಅದಕ್ಕಾಗಿಯೇ ಬಿಸಿಸಿಐ ಅವರ ವೀಸಾ ಅವಧಿಯನ್ನು ನಂತರದ ದಿನಾಂಕಕ್ಕೆ ಮುಂದೂಡಿದೆ. ಅವರು ಮೇ 30ರ ಮುಂಜಾನೆ ನ್ಯೂಯಾರ್ಕ್ ಗೆ ಹಾರುವ ನಿರೀಕ್ಷೆಯಿದೆ. ಅವರ ಮನವಿಯನ್ನು ಬಿಸಿಸಿಐ ಒಪ್ಪಿಕೊಂಡಿದೆ, “ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶಿವಂ ದುಬೆ, ಕುಲದೀಪ್ ಯಾದವ್, ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಸಹಾಯಕ ಸಿಬ್ಬಂದಿ ಶನಿವಾರ ರಾತ್ರಿ ಮುಂಬೈನಿಂದ ಹೊರಟರು. ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಐಪಿಎಲ್ 2024 ಅನ್ನು ಪ್ರಾರಂಭಿಸಲಿದ್ದು, ನಂತರ ಜೂನ್ 9 ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ಇದನ್ನೂ ಓದಿ: Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Continue Reading

ಕ್ರೀಡೆ

Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Rohit Sharma: ಬಾಲಿವುಡ್ ಮತ್ತು ಕ್ರಿಕೆಟ್ ಭಾರತದಲ್ಲಿ ಮನರಂಜನೆಯ ಪ್ರಮುಖ ಮೂಲಗಳು. ಎರಡೂ ಕಡೆ ಭರ್ಜರಿ ಮನರಂಜನೆ ಸಿಗುತತದೆ. ಕಾಲ್ಪನಿಕ ಹಾಗೂ ನೈಜ ಪ್ರಪಂಚಲದಲ್ಲಿ ಇದು ಹೆಚ್ಚು ಹತ್ತಿರ ಹಾಗೂ ಅಭಿಮಾನಿಗಳ ಪಾಲಿಗೆ ಹೆಚ್ಚು ಖುಷಿ ಪಡುವಂಥ ಸಂಗತಿ. ಹೀಗಾಗಿ ಕ್ರಿಕೆಟ್​ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಅದೇ ರೀತಿ ಇದೀಗ ಹೊಸ ಸಿನಿಮಾವೊಂದು ಸೆಟ್ಟೇರಿದ್ದು ಅದರಲ್ಲಿ ಕೆಲವು ಕ್ರಿಕೆಟಿಗರ ಉಪಸ್ಥಿತಿಯನ್ನು ನಿರೀಕ್ಷೆ ಮಾಡಲಾಗಿದೆ.

VISTARANEWS.COM


on

Rohit Sharma
Koo

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕ್ರಿಕೆಟ್​ ಸಾಧನೆ ಜತೆಗೆ ವಿಭಿನ್ನ ಮನೋಭಾವದ ಮೂಲಕ ಜನಪ್ರಿಯ. ಜನಪ್ರಿಯ ಕ್ರಿಕೆಟಿಗನಾಗಿರುವ ಅವರು ಹಲವಾರು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಎಲ್ಲ ಕಂಪನಿಗಳ ಜಾಹೀರಾತುಗಳಿಗಾಗಿ ನಟಿಸುತ್ತಿದ್ದಾಎ. ಇದೀಗ ಅವರು ಬಾಲಿವುಡ್​ ಕಡೆಗೂ ಎಂಟ್ರಿ ಪಡೆದಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವರು ಕ್ರೀಡೆಯನ್ನು ಆಧಾರಿಸಿ ಮಾಡಿರು ಸಿನಿಮಾ “ಮಿಸ್ಟರ್ & ಮಿಸೆಸ್ ಮಹಿ” ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೆ ಮುಂಚಿತವಾಗಿ ಚಲನಚಿತ್ರವನ್ನು ಪ್ರಚಾರ ಮಾಡುವ ಸಲುವಾಗಿ ಈ ಚಿತ್ರವು ಕ್ರೀಡೆಯ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರನ್ನು ಒಳಗೊಂಡ ಮೂಲಕ ವಿಶಿಷ್ಟ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲಿ ರೋಹಿತ್ ಹೆಸರು ಕಾಣಿಸುತ್ತಿದೆ.

ಬಾಲಿವುಡ್ ಮತ್ತು ಕ್ರಿಕೆಟ್ ಭಾರತದಲ್ಲಿ ಮನರಂಜನೆಯ ಪ್ರಮುಖ ಮೂಲಗಳು. ಎರಡೂ ಕಡೆ ಭರ್ಜರಿ ಮನರಂಜನೆ ಸಿಗುತತದೆ. ಕಾಲ್ಪನಿಕ ಹಾಗೂ ನೈಜ ಪ್ರಪಂಚಲದಲ್ಲಿ ಇದು ಹೆಚ್ಚು ಹತ್ತಿರ ಹಾಗೂ ಅಭಿಮಾನಿಗಳ ಪಾಲಿಗೆ ಹೆಚ್ಚು ಖುಷಿ ಪಡುವಂಥ ಸಂಗತಿ. ಹೀಗಾಗಿ ಕ್ರಿಕೆಟ್​ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಅದೇ ರೀತಿ ಇದೀಗ ಹೊಸ ಸಿನಿಮಾವೊಂದು ಸೆಟ್ಟೇರಿದ್ದು ಅದರಲ್ಲಿ ಕೆಲವು ಕ್ರಿಕೆಟಿಗರ ಉಪಸ್ಥಿತಿಯನ್ನು ನಿರೀಕ್ಷೆ ಮಾಡಲಾಗಿದೆ.

‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಎಂಬ ಸಿನಿಮಾ ಬಾಲಿವುಡ್ ಮತ್ತೊಂದು ಕ್ರಿಕೆಟ್ ಆಧಾರಿತ ಡ್ರಾಮಾ ಸಿನಿಮಾಗಿದೆ. ಇದು ಈ ವಾರದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಭಾರಿ ನಿರೀಕ್ಷೆ ಮುಟ್ಟಿಸಿದೆ. ಪ್ರತಿಭಾವಂತ ನಟ ರಾಜ್ ಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಲ್ಪನಿಕ ಚಿತ್ರವು ಕ್ರಿಕೆಟ್ ಬಗ್ಗೆ ಉತ್ಸಾಹ ಹೊಂದಿರುವ ದಂಪತಿ ಜೀವನದ ಕುರಿತಾಗಿದೆ.

ಇದನ್ನೂ ಓದಿ: Shreyanka Patil: ನಟ ಸಮರ್ಜಿತ್ ಲಂಕೇಶ್ ಜತೆ ಮಸ್ತ್​ ಸ್ಟೆಪ್ಸ್ ಹಾಕಿದ ಆರ್​ಸಿಬಿ ಆಟಗಾರ್ತಿ ಶ್ರೇಯಾಂಕಾ; ವಿಡಿಯೊ ವೈರಲ್​

ಈ ಚಲನಚಿತ್ರವು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಹಲವಾರು ಏರಿಳಿತಗಳನ್ನು ಬಿಂಬಿಸುತ್ತದೆ. ಮಹಿಳಾ ಕ್ರೀಡಾಪಟುಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಖ್ಯಾತಿಯನ್ನು ಇದು ಬೊಟ್ಟು ಮಾಡಿದೆ. ಇದಲ್ಲದೆ, ಕ್ರಿಕೆಟ್ ಕಥಾಹಂದರದ ಅವಿಭಾಜ್ಯ ಅಂಗವಾಗಿರುವುದರಿಂದ, ಚಿತ್ರದ ಆಕರ್ಷಣೆ ಮತ್ತು ವಾಸ್ತವಿಕತೆಯನ್ನು ಹೆಚ್ಚಿಸಲು ರೋಹಿತ್ ಶರ್ಮಾ ಅವರಂತಹ ಕ್ರಿಕೆಟ್ ಸೂಪಸ್ಟಾರ್​ಗಳನ್ನು ಚಿತ್ರ ತಂಡ ಸೇರಿಸಿಕೊಂಡಿದ್ದಾರೆ. ಅವರಲ್ಲಿ ರೋಹಿತ್ ಕೂಡ ಒಬ್ಬರು.

ಚಿತ್ರ ಬಿಡುಗಡೆಗೆ ಕೆಲವು ದಿನಗಳ ಮೊದಲು, ‘ಅಗರ್ ತುಮ್ ಹೋ’ ಎಂಬ ಹಾಡನ್ನು ಯೂಟ್ಯೂಟ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಕೂಡ ಇದ್ದರು. ರಾಜ್​ಕುಮಾರ್​ ಮತ್ತು ಜಾನ್ವಿ ರೋಹಿತ್ ಅವರ ಶತಕವನ್ನು ಊಟದ ಮೇಜಿನ ಬಳಿ ಸಂಭ್ರಮಿಸುತ್ತಿರುವುದು ಹಾಡಿನಲ್ಲಿ ಕಂಡುಬಂದಿದೆ. ಕ್ರಿಕೆಟ್ ಪ್ರೇಮಿಗಳಾಗಿ ತಮ್ಮ ಉತ್ಸಾಹ ತೋರುವುದು ಕಾಣಿಸುತ್ತಿದೆ.

ಈ ಹಾಡಿನಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ಉಪಸ್ಥಿತಿಯು ಕ್ರಿಕೆಟ್ ಅಭಿಮಾನಿಗಳನ್ನು ಚಲನಚಿತ್ರದ ಕಡೆಗೆ ಸೆಳೆಯುವ ಸಾಧ್ಯತೆಯಿದೆ. ಮೇ 31 ರ ಬಿಡುಗಡೆಗೆ ಮುಂಚಿತವಾಗಿ ಅದರ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ವಿಶೇಷವೆಂದರೆ, ಚಿತ್ರದ ಪ್ರಮುಖ ನಟಿ ಜಾನ್ವಿ ಕಪೂರ್ ಕೂಡ ಈ ತಿಂಗಳ ಆರಂಭದಲ್ಲಿ ಚಿತ್ರದ ಪ್ರಚಾರಕ್ಕಾಗಿ ಐಪಿಎಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

Continue Reading

ಕ್ರೀಡೆ

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

MS Dhoni : ಹೊಸ ಪ್ರಕಟಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಹೇಂದ್ರ ಸಿಂಗ್ ಧೋನಿ, ” ಆಟೋಮೊಬೈಲ್ ಉತ್ಸಾಹಿಯಾಗಿರುವ ನಾನು ಹೊಸತನ ಮತ್ತು ಎಂಜಿನಿಯರಿಂಗ್ ಅದ್ಭುತಗಳಿಗೆ ಖ್ಯಾತಿ ಪಡೆದಿರುವ ಫ್ರೆಂಚ್ ಬ್ರಾಂಡ್ ಸಿಟ್ರೊಯೆನ್ ಜತೆ ಕೈಜೋಡಿಸಲು ನಾನು ಸಂತೋಷಪಡುತ್ತೇನೆ” ಎಂದು ಹೇಳಿದ್ದಾರೆ.

VISTARANEWS.COM


on

MS Dhoni
Koo

ಬೆಂಗಳೂರು: ಫ್ರೆಂಚ್ ಮೂಲದ ಭಾರತೀಯ ಕಾರು ತಯಾರಕ ಕಂಪನಿ ಸಿಟ್ರೊಯೆನ್ (Citroen) ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಎಂಎಸ್ ಧೋನಿ ಭಾರತದಲ್ಲಿ ಕಂಪನಿಯ ಕಾರುಗಳ ರಾಯಭಾರಿಯಾಗಿರುವ ಕಾರಣ ಮುಂಬರುವ ಪ್ರಚಾರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಕಂಪನಿಯು ಭಾರತದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಧೋನಿ ಅವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಇನ್ನಷ್ಟು ಚೈತನ್ಯ ಪಡೆದುಕೊಳ್ಳಲಿದೆ.

ಹೊಸ ಪ್ರಕಟಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಹೇಂದ್ರ ಸಿಂಗ್ ಧೋನಿ, ” ಆಟೋಮೊಬೈಲ್ ಉತ್ಸಾಹಿಯಾಗಿರುವ ನಾನು ಹೊಸತನ ಮತ್ತು ಎಂಜಿನಿಯರಿಂಗ್ ಅದ್ಭುತಗಳಿಗೆ ಖ್ಯಾತಿ ಪಡೆದಿರುವ ಫ್ರೆಂಚ್ ಬ್ರಾಂಡ್ ಸಿಟ್ರೊಯೆನ್ ಜತೆ ಕೈಜೋಡಿಸಲು ನಾನು ಸಂತೋಷಪಡುತ್ತೇನೆ” ಎಂದು ಹೇಳಿದ್ದಾರೆ.

ಸಿಟ್ರೋಯೆನ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಶಿಶಿರ್ ಮಿಶ್ರಾ ಈ ಕುರಿತು ಮಾಹಿತಿ ನೀಡಿ ,”ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿ ಅವರೊಂದಿಗಿನ ಸಹಭಾಗಿತ್ವವು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮನ್ನು ಬಲಪಡಿಸಲಿದೆ, ಸಮರ್ಪಣೆ ನಮ್ಮ ಬ್ರಾಂಡ್​​ನ ಸಿದ್ಧಾಂತವಾಗಿದ್ದು ಧೋನಿ ಸಂಪೂರ್ಣವಾಗಿ ಹೊಂದಿಕೆಯಾಗುತ್ತಾರೆ ಎಂದು ನುಡಿದರು.

ಕಾರು ಪ್ರೇಮಿ ಧೋನಿ

ಎಂ.ಎಸ್. ಧೋನಿ ದೊಡ್ಡ ಕಾರು ಮತ್ತು ಬೈಕ್ ಪ್ರೇಮಿ. ಅವರು ತಮ್ಮ ಗ್ಯಾರೇಜ್ ನಲ್ಲಿ ಬೈಕುಗಳು ಮತ್ತು ಕಾರುಗಳ ದೊಡ್ಡ ಸಂಗ್ರಹವಿದೆ. ವಾಸ್ತವವಾಗಿ, ಅವರು ಕ್ಲಾಸಿಕ್ ಮತ್ತು ವಿಂಟೇಜ್ ಕಾರುಗಳು ಮತ್ತು ಬೈಕುಗಳ ದೊಡ್ಡ ಅಭಿಮಾನಿಯಾಗಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಕನಿಷ್ಠ 60ರಿಂದ 70 ಬೈಕುಗಳಿವೆ. ಅವರು ರಾಂಚಿಯ ತಮ್ಮ ತೋಟದ ಮನೆಯಲ್ಲಿ ಬಹುಮಹಡಿ ಗ್ಯಾರೇಜ್ ಅನ್ನು ನಿರ್ಮಿಸಿದ್ದಾರೆ. ಅಲ್ಲಿ ಅವರು ತಮ್ಮ ಎಲ್ಲಾ ಬೈಕುಗಳು ಮತ್ತು ಕಾರುಗಳನ್ನು ಇಟ್ಟಿದ್ದಾರೆ.

ಅವರು ಆಗಾಗ್ಗೆ ಈ ಬೈಕುಗಳು ಮತ್ತು ಕಾರುಗಳನ್ನು ರಸ್ತೆಯಲ್ಲಿ ಓಡಿಸುವುದನ್ನು ಕಾಣಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಆಫ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತ ನಂತರ ಅವರು ತವರಿಗೆ ಮರಳಿದ್ದಾರೆ. ಈ ವೇಳೆ ಅವರು ಆರ್ಡಿ 350 ಬೈಕ್​ನಲ್ಲಿ ಸವಾರಿ ಮಾಡಿದದ ಸುದ್ದಿ ಬಂದಿತ್ತು.

ಇದನ್ನೂ ಓದಿ: Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

ಸಿಟ್ರೊಯೆನ್ ಕಾರುಗಳು ಯಾವುವು?

ಸಿಟ್ರೋಯೆನ್ ಇಂಡಿಯಾ ಪ್ರಸ್ತುತ ಸಿ 3, ಇಸಿ 3, ಸಿ 3 ಏರ್ ಕ್ರಾಸ್ ಮತ್ತು ಫ್ಲ್ಯಾಗ್ ಶಿಪ್ ಸಿ 5 ಏರ್ ಕ್ರಾಸ್ ಎಸ್ ಯುವಿಯಂತಹ ಕಾರುಗಳನ್ನು ಹೊಂದಿದೆ. ಫ್ರೆಂಚ್ ಮೂಲಕದ ಕಂಪನಿ ತಮ್ಮ ವಾಹನಗಳಲ್ಲಿ ರೈಡಿಂಗ್ ಗುಣಮಟ್ಟದ ಮೂಲಕ ಹೆಸರುವಾಸಿಯಾಗಿದ್ದಾರೆ. ತಯಾರಕರು ಈಗ ಭಾರತದಲ್ಲಿ ತಮ್ಮ ಉತ್ಪನ್ನ ರೇಂಜ್​ಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದಾರೆ. ಸಿಟ್ರೊಯೆನ್ ನಿಂದ ಮುಂಬರುವ ಕಾರೆಂದರೆ ಬಸಾಲ್ಟ್

ತಯಾರಕರು ಅಧಿಕೃತವಾಗಿ ಹೊಸ ಮಾಡೆಲ್​ ಅನಾವರಣಗೊಳಿಸಿದ್ದಾರೆ. ಅದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಇದು ವಾಸ್ತವವಾಗಿ ಸಿ 3 ಮತ್ತು ಸಿ 3 ಏರ್ ಕ್ರಾಸ್ ನಂತೆಯೇ ಸಿಎಂಪಿ ಪ್ಲಾಟ್ ಫಾರ್ಮ್ ಮೇಲಿದೆ. ಬಸಾಲ್ಟ್ ಬಗ್ಗೆ ಸಾಕಷ್ಟು ಗಮನ ಸೆಳೆದ ಒಂದು ವಿಷಯವೆಂದರೆ ಅದರ ವಿನ್ಯಾಸ. ಸಿಟ್ರೊಯೆನ್ ಕಾರು ಅಥವಾ ಎಸ್ ಯುವಿಗೆ ಕೂಪೆ ತರಹದ ಡಿಸೈನ್ ಹೊಂದಿದೆ.

ಕೂಪೆ ಡಿಸೈನ್​ಗೆ ಹೆಚ್ಚಿದ ಬೇಡಿಕೆ

ಟಾಟಾ ಮತ್ತು ಮಹೀಂದ್ರಾದಂತಹ ಕಂಪನಿಗಳು ಕೂಪೆ-ಐಶ್ ಎಸ್ ಯುವಿ ಡಿಸೈನ್​ಗಳ ಕಾರಿನ ಬಿಡುಗಡೆಗಾಗಿಕೆಲಸ ಮಾಡುತ್ತಿದೆ. ಅದೇ ರೀತಿ ಸಿಟ್ರೊಯೆನ್​ ಕೂಡ ಆರಂಭಿಸಿದೆ. ಬಸಾಲಸ್ಟ್​​ ಮುಂಭಾಗವು ಸಿ 3 ಏರ್ ಕ್ರಾಸ್ ಮತ್ತು ಸಿಟ್ರೊಯೆನ್ ರೀತಿಯೇ ಕಾಣುತ್ತದೆ. ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಸಿಟ್ರೊಯೆನ್ ಕಾರುಗಳಲ್ಲಿ ಫೀಚರ್​ಗಳ ಕೊರತೆಯಿದೆ. ಮುಂಬರುವ ಬಸಾಲ್ಟ್ ಸಿ 3 ಏರ್ ಕ್ರಾಸ್ ಮತ್ತು ಸಿ 3 ಹ್ಯಾಚ್ ಬ್ಯಾಕ್ ಗಿಂತ ಹೆಚ್ಚಿನ ಫೀಚರ್​ಗಳನ್ನು ಕೊಡುಗೆ ಖಾತರಿ ನೀಡಿದೆ.

ಎಂಜಿನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಬಸಾಲ್ಟ್ ಅನ್ನು 1.2-ಲೀಟರ್, ಮೂರು ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರಲಿದೆ. ಇದು 110 ಪಿಎಸ್ ಮತ್ತು 205 ಎನ್ಎಂ ಪೀಕ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದೇ ಎಂಜಿನ್ ಅನ್ನು ಸಿ3 ಏರ್ ಕ್ರಾಸ್ ನಲ್ಲಿ ಅಳವಡಿಸಲಾಗಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುತ್ತದೆ.

Continue Reading
Advertisement
Rain News
ಕರ್ನಾಟಕ14 mins ago

Rain News: ಚಿತ್ತಾಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ; ಹೊತ್ತಿ ಉರಿದ ತೆಂಗಿನ ಮರ

Jos Butler
ಪ್ರಮುಖ ಸುದ್ದಿ15 mins ago

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

Wagah Border
ದೇಶ33 mins ago

Wagah Border: ಕಾಂಗ್ರೆಸ್‌ ಗೆದ್ದರೆ ಭಾರತ-ಪಾಕ್ ಗಡಿ ಓಪನ್‌ ಎಂದ ಪಂಜಾಬ್‌ ಮಾಜಿ ಸಿಎಂ ಚನ್ನಿ; Video ವೈರಲ್

Virat kohli
ಪ್ರಮುಖ ಸುದ್ದಿ42 mins ago

Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

FSSAI Warning
ಆರೋಗ್ಯ1 hour ago

FSSAI Warning: ಎದೆಹಾಲು ಮಾರಾಟ ಮಾಡುವಂತಿಲ್ಲ: ಎಫ್‌ಎಸ್‌ಎಸ್‌ಎಐ ಖಡಕ್ ಎಚ್ಚರಿಕೆ

fraud case
ಕರ್ನಾಟಕ1 hour ago

Fraud Case: ಷೇರು ಮಾರ್ಕೆಟ್‌ನಲ್ಲಿ ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿ ದಂಪತಿ ಪರಾರಿ!

Constables
ದೇಶ2 hours ago

Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Rohit Sharma
ಕ್ರೀಡೆ2 hours ago

Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Karnataka Rain
ಮಳೆ2 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ2 hours ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌