Banavasi Chariot: ಬನವಾಸಿ ಮಧುಕೇಶ್ವರ ದೇಗುಲಕ್ಕೆ ಫೆ. 25ರಂದು ಬರಲಿದೆ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ʼಮಹಾಸ್ಯಂದನʼ ರಥ - Vistara News

ಉತ್ತರ ಕನ್ನಡ

Banavasi Chariot: ಬನವಾಸಿ ಮಧುಕೇಶ್ವರ ದೇಗುಲಕ್ಕೆ ಫೆ. 25ರಂದು ಬರಲಿದೆ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ʼಮಹಾಸ್ಯಂದನʼ ರಥ

Banavasi Chariot: ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ 415 ವರ್ಷಗಳ ಹಳೆಯ ರಥ ಶಿಥಿಲವಾದ ಹಿನ್ನೆಲೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ʼಮಹಾಸ್ಯಂದನʼ ನೂತನ ರಥ ನಿರ್ಮಾಣ ಮಾಡಲಾಗಿದೆ.

VISTARANEWS.COM


on

New chariot to arrive at Banavasi Sri Madhukeshwara Temple on Feb 25
ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದ ನೂತನ ರಥ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಭಾಸ್ಕರ್ ಆರ್. ಗೆಂಡ್ಲ, ಶಿರಸಿ

ದೇಶದಲ್ಲೇ ಪ್ರಸಿದ್ಧಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದ ನೂತನ ರಥದ (Banavasi Chariot) ಆಗಮನಕ್ಕೆ ಬನವಾಸಿ ಪಟ್ಟಣ ಶೃಂಗಾರಗೊಳ್ಳುತ್ತಿದೆ. ಮಧುಕೇಶ್ವರ ದೇವರ ಈ ಹಿಂದಿನ ರಥ 415 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದ್ದರಿಂದ ನೂತನ ರಥ ನಿರ್ಮಾಣಕ್ಕೆ ಕಳೆದ ವರ್ಷ ತೀರ್ಮಾನಿಸಲಾಗಿತ್ತು. ಅದರಂತೆ ಶ್ರೀ ಮಧುಕೇಶ್ವರ ನೂತನ ಮಹಾರಥ ನಿರ್ಮಾಣವಾಗಿದ್ದು‌ ಫೆ.೨೫ಕ್ಕೆ ಬನವಾಸಿ ತಲುಪಲಿದೆ.

1608ರಲ್ಲಿ ಐತಿಹಾಸಿಕ ಬನವಾಸಿ‌ ಮಧುಕೇಶ್ವರ ದೇವಸ್ಥಾನಕ್ಕೆ ಸೋಂದಾ ರಾಮಚಂದ್ರ ನಾಯಕ ಅವರು ʼಮಹಾಸ್ಯಂದನʼ ರಥವನ್ನು ಸಿದ್ಧಪಡಿಸಿ ನೀಡಿದ್ದರು. 415 ವರ್ಷಗಳಷ್ಟು ಹಳೆಯದಾದ ರಥದಲ್ಲಿಯೇ ಪ್ರತಿ ವರ್ಷ ತೇರು ಉತ್ಸವ ನಡೆಸುತ್ತಾ ಬರಲಾಗಿತ್ತು. ಈ ರಥ ನೂರಾರು ವರ್ಷಗಳ ಹಳೆಯದಾಗಿದ್ದರಿಂದ ಇದರ ಬದಲಿಗೆ ನವ ರಥ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ | Karwar News: ನರೇಗಾ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಫೆ. 28ರೊಳಗೆ ಪೂರ್ಣಗೊಳಿಸಲು ತಾಪಂ ಆಡಳಿತಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯ ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಮಗ ರಾಜಗೋಪಾಲ ಆಚಾರ್ಯ ಅವರ ಒಂದು ವರ್ಷದ ಕಠಿಣ ಪರಿಶ್ರಮದಿಂದ ನೂತನ ರಥ ನಿರ್ಮಾಣಗೊಂಡು ಕದಂಬ ರಾಜಧಾನಿ ಬನವಾಸಿಗೆ ಬರಲು ಸಜ್ಜಾಗಿದೆ.

ಫೆ.23ರಂದು ರಥ ನಿರ್ಮಾಣ ಸ್ಥಳ ಧಾರ್ಮಿಕ ಪೂಜಾ ವಿಧಿ ವಿಧಾನ ನಡೆದ ನಂತರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ನೂತನ ರಥ ನಿರ್ಮಾಣ ಸಮಿತಿ ರಥವನ್ನು ತರಲು ತಯಾರಿ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕುಂಭಾಶಿಯಿಂದ ಹೊರಟು ಕುಂದಾಪುರ, ಶಿರಾಲಿ, ಭಟ್ಕಳ, ಹೊನ್ನಾವರ, ಕರ್ಕಿ, ಕುಮಟಾ, ಅಂಕೋಲ, ಬಾಳೆಗುಳಿ, ಅರೇಬೈಲ್, ಯಲ್ಲಾಪುರ, ಶಿರಸಿ ಮಾರ್ಗವಾಗಿ ಬನವಾಸಿಗೆ ತಲುಪಲಿದೆ. ಫೆ.25ರಂದು ರಥದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ.

ʼಮಹಾಸ್ಯಂದನʼ ನೂತನ ರಥದ ಪುರಪ್ರವೇಶ ಹಾಗೂ ಭವ್ಯ ಮೆರವಣಿಗೆಗೆ ಪಟ್ಟಣ ಸರ್ವಸನ್ನದ್ಧಗೊಂಡಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. 415 ವರ್ಷಗಳ ಹಿಂದೆ ರಾಜ ಮಹಾರಾಜರು ರಥ ನಿರ್ಮಾಣ ಮಾಡಿದ್ದರು. ಈಗ ಪ್ರಜೆಗಳೇ ಮಹಾ ರಥ ನಿರ್ಮಾಣ ಮಾಡಿ ಇತಿಹಾಸ ಮರುಕಳಿಸುವಂತೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.

ರಥ ನಿರ್ಮಾಣದ ಅಗತ್ಯ ನಾಟಾಗಳನ್ನು‌ ಸ್ಥಳೀಯರು ತಮ್ಮ ಹೊಲ, ಭೂಮಿಯಲ್ಲಿ ಬೆಳೆದದ್ದನ್ನೇ ನೀಡಿದ್ದು, ಕರಿಮತ್ತಿ, ರಂಜ, ಸಾಗುವಾನಿ, ಹೊನ್ನೆ, ಹೆಬ್ಬಲಸು, ಮಾವು ಮುಂತಾದ ಜಾತಿಯ ಮರಗಳನ್ನು ಭಕ್ತರು ಒದಗಿಸಿದ್ದರು. ರಥದ ಮೂರ್ತಿಗಳು ಮತ್ತು ಮಧ್ಯ ಭಾಗದ ಕೆತ್ತನೆಗಳಿಗಾಗಿ ಸಾಗುವಾನಿ ಹಾಗೂ ದೇವರನ್ನು ಕೂರಿಸುವ ಪೀಠ ನಿರ್ಮಾಣಕ್ಕೆ ಹಲಸಿನ ಮರ ಬಳಕೆ ಮಾಡಲಾಗಿದೆ‌. ಹಳೆಯ ರಥದಂತೆ ನೂತನ ರಥವೂ ಅದ್ಭುತವಾಗಿ ಮೂಡಿಬಂದಿದೆ.

ʼಮಹಾಸ್ಯಂದನʼ ನೂತನ ರಥಕ್ಕೆ 3 ಕೋಟಿ ರೂಪಾಯಿ ವೆಚ್ಚ

ಅಂದಹಾಗೆ, ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆಂದು ನಿರ್ಮಾಣವಾಗುತ್ತಿರುವ ನೂತನ ರಥ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚವಾಗಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಮುತುವರ್ಜಿ ವಹಿಸಿ ರಥ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಅವಕಾಶ ಇಲ್ಲದಿದ್ದರೂ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಪ್ರಯತ್ನಿಸಿ ಸರ್ಕಾರದಿಂದ 3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಇದರ ಜತೆಗೆ ಸಾರ್ವಜನಿಕರೂ ಉದಾರವಾಗಿ ನೀಡಿದ ಹಣ 95 ಲಕ್ಷ ರೂ.ನಷ್ಟು ಸಂಗ್ರಹವಾಗಿತ್ತು. ಈ ಎಲ್ಲಾ ಹಣವನ್ನು ಬಳಕೆ ಮಾಡಿಕೊಂಡು ಇದೇ ಫೆ. ೨೭ರ ಕದಂಭೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಉದ್ಘಾಟನೆ ಮಾಡಿಸಲು ಭಕ್ತರು ಹಾಗೂ ದೇವಳದ ರಥ‌ ನಿರ್ಮಾಣ ಸಮಿತಿಯವರು ನಿರ್ಧರಿಸಿದ್ದಾರೆ.

ಇದನ್ನೂ ಓದಿ | Shivamogga Airport: ವಿಮಾನ ನಿಲ್ದಾಣ ಉದ್ಘಾಟನೆ; ಫೆ. 25ರಂದು ಮುಗಿಲೆತ್ತರಕ್ಕೆ ಮಲೆನಾಡು ಕಾರ್ಯಕ್ರಮ ಆಯೋಜನೆ

ಇದರ ಜತೆ 415 ವರ್ಷಗಳ ಹಿಂದಿನ ರಥವನ್ನೂ ಸ್ವಚ್ಛಗೊಳಿಸುವ ಕೆಲಸವೂ ನಡೆಯುತ್ತಿದ್ದು, ನವರಥ ನಿರ್ಮಾಣವಾದ ನಂತರ ಹಳೇಯ ರಥವನ್ನು ಪ್ರವಾಸಿಗರ ಆಕರ್ಷಣೆಯಾಗಿ ಇಡುವ ಯೋಚನೆ ಆಡಳಿತ ಮಂಡಳಿಯದ್ದಾಗಿದೆ.

ಒಟ್ಟಿನಲ್ಲಿ ಬನವಾಸಿ ಮಧುಕೇಶ್ವರ ದೇವಾಲಯದಲ್ಲಿ ಶ್ರೀ ಮಧುಕೇಶ್ವರನಿಗಾಗಿ ನೂತನ ರಥ ನಿರ್ಮಾಣಗೊಂಡಿದ್ದು, ಅದರ ಆಗಮನಕ್ಕೆ ಜ‌ನರು ಸಾಕಷ್ಟು ಸಂತೋಷದಲ್ಲಿದ್ದಾರೆ. ಅಲ್ಲದೇ, ಇತಿಹಾಸ ಪ್ರಸಿದ್ಧ ರಥವೂ ಇನ್ನು ಮುಂದೆ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಸಂರಕ್ಷಿಸಲ್ಪಡಲಿರುವುದರಿಂದ ರಾಜರ ಕಾಲದ ಗತ ವೈಭವಗಳ ಕಥೆಯನ್ನು ಈ ರಥ ಸಾರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Karnataka Rain : ಭಾನುವಾರ ಉತ್ತರ ಒಳನಾಡಿನಲ್ಲಿ ಮಳೆಯು (Rain News) ಅಬ್ಬರಿಸುತ್ತಿದ್ದು, ವಿಜಯನಗರ ಹಾಗೂ ರಾಯಚೂರಿನಲ್ಲಿ ಸಿಡಿಲು ಬಡಿದು ತಲಾ 1 ಎಮ್ಮೆ ಮೃತಪಟ್ಟಿವೆ. ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಗುರುಮಠಕಲ್‌ (karnataka weather Forecast) ಕೆರೆಯಂತಾಗಿದೆ.

VISTARANEWS.COM


on

By

Karnataka Rain
Koo

ವಿಜಯನಗರ/ರಾಯಚೂರು/ಯಾದಗಿರಿ: ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ವರುಣ ಶಾಕ್‌ (Karnataka Rain) ಕೊಟ್ಟಿದ್ದಾನೆ. ರಾಜ್ಯ ಹಲವೆಡೆ ಬಿರುಗಾಳಿ ಸಹಿತ (Karnataka weather Forecast) ಮಳೆಯಾಗುತ್ತಿದ್ದು, ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ಕಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಮೃತಪಟ್ಟಿವೆ.

ವಿಜಯನಗರದ ಹೂವಿನಹಡಗಲಿ ತಾಲೂಕಿನ ಎಂ.ಕಲ್ಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಕೆಂಚನಗೌಡ್ರ ಬಸವರಾಜ ಎಂಬ ರೈತ ಎಮ್ಮೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಮಳೆಯೊಂದಿಗೆ ಗುಡುಗು, ಸಿಡಿಲು ಬಡಿದ ಪರಿಣಾಮ ಎಮ್ಮೆ ಮೃತಪಟ್ಟಿದೆ.

ಇನ್ನೂ ರಾಯಚೂರಿನ ಲಿಂಗಸುಗೂರಿನ ಕರೆಮರಡಿ ತಾಂಡದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಮೃತಪಟ್ಟಿದೆ. ಲಕ್ಷಣ್ಣ ಗುಂಡಪ್ಪ ರಾಠೋಡ ಎಂಬುವವರ ಎಮ್ಮೆಯನ್ನು ಮನೆ ಪಕ್ಕದಲ್ಲಿರುವ ಮರಕ್ಕೆ ಕಟ್ಟಿಹಾಕಿದ್ದರು. ಗುಡುಗು ಮಿಂಚು ಸಹಿತ ಸುರಿದ ಮಳೆ ವೇಳೆ ಸಿಡಿಲು ಬಡಿದ್ದರಿಂದ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಮುದಗಲ್ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ನಾಗಲಾಪೂರು ಪಶು ಆಸ್ಪತ್ರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರುಣನ ಅಬ್ಬರಕ್ಕೆ ಕೆರೆಯಂತಾದ ಗುರುಮಠಕಲ್‌

ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಗುರುಮಠಕಲ್ ಹಾಗೂ ಯಾದಗಿರಿ ನಗರದಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದ. ಭಾರಿ ಮಳೆಗೆ ಗುರುಮಠಕಲ್ ರಸ್ತೆ ಮೇಲೆ ನೀರು ಹರಿದು ಕೆರೆಯಂತಾಗಿತ್ತು. ಇತ್ತ ಬಿರುಗಾಳಿ ಸಹಿತ ಭಾರಿ ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ಯಾದಗಿರಿ ತಾಲೂಕಿನ ಗಣಾಪುರ ಸಮೀಪದ ಯಾದಗಿರಿ-ಗುರುಮಠಕಲ್ ರಸ್ತೆ ಮಾರ್ಗದಲ್ಲಿ ಮರಗಳು ಧರೆಗುರುಳಿತ್ತು.

ಯಾದಗಿರಿಯ ಗಣಾಪುರ ಸಮೀಪದ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಮರಗಳು ಬಿದ್ದಿತ್ತು. ಗುರುಮಠಕಲ್-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದಿತ್ತು. ಹೀಗಾಗಿ ಸ್ಥಳೀಯರು ಹಾಗೂ ಸವಾರರಿಂದಲೇ ರಸ್ತೆ ಮೇಲೆ ಬಿದ್ದಿದ್ದ ಮರಗಳ ತೆರವು ಮಾಡಲಾಯಿತು. ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಂಡರು. ರಸ್ತೆ ಮೇಲೆ ಮರಗಳು ಬಿದ್ದ ಕಾರಣದಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: Basavanagudi News : ಪೂಜಾ ಸಾಮಾಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

ಬೆಂಗಳೂರು: ಮೇ 31ರಂದು ಪ್ರಸಕ್ತ ಸಾಲಿನ ಮುಂಗಾರು ಮಳೆಯು (Monsoon 2024) ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವ ಮಳೆಯಾಗಿದ್ದರಿಂದ ರೈತರಲ್ಲಿ ಸಹಜವಾಗಿಯೇ ಸಮಾಧಾನ ತಂದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಜೂನ್‌ ಮೊದಲ ವಾರ ನೈರುತ್ಯ ಮುಂಗಾರು ಮಳೆ ಕರ್ನಾಟಕವನ್ನು ಪ್ರವೇಶ (Karnataka Monsoon 2024) ಮಾಡಲಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೊಂದಿದೆ.

ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡ ವಾಸ್ತವ್ಯ

ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರಕ್ಕೆ ಕೊಡಗು ಜಿಲ್ಲೆಗೆ ಮುಂಗಾರು ಎಂಟ್ರಿಯಾಗಲಿದೆ. ಕಳೆದ ಬಾರಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆಯು ಕೊಡಗು ಜಿಲ್ಲಾಡಳಿತಕ್ಕೆ‌ ಮಾಹಿತಿ ರವಾನಿಸಿದೆ. ಈ ಬಾರಿಯ ಮಳೆಗಾಲಕ್ಕೆ ಕೊಡಗು ಜಿಲ್ಲಾಡಳಿತ ಕೂಡ ತಯಾರಿ ನಡೆಸಿಕೊಳ್ಳುತ್ತಿದೆ. ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಎನ್.ಡಿ.ಆರ್ ಎಫ್ ತಂಡ ಆಗಮಿಸಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. 26 ಮಂದಿಯನ್ನು ಒಳಗೊಂಡ ಎನ್.ಡಿ.ಆರ್ ಎಫ್ ಟೀಮ್ ಈ ಬಾರಿ ಆಗಮಿಸಲಿದೆ. ಕಳೆದ ಬಾರಿ ಜಿಲ್ಲೆಗೆ ಬಂದಿದ್ದ ಎನ್.ಡಿ.ಆರ್.ಎಫ್‌ಗೆ ಬೆಟಾಲಿಯನ್ ಕಳುಹಿಸುವಂತೆ ಜಿಲ್ಲಾಡಳಿತ ಮ‌ನವಿ‌ ಮಾಡಿದೆ. ಕಳೆದ ಬಾರಿ ಬಂದ ತಂಡವೆ ಈ ಸಲವು ಆಗಮಿಸಲಿದೆ. ಕೊಡಗಿನಲ್ಲಿ ಮಳೆಗಾಲ ಮುಗಿಯುವವರೆಗೂ ವಿಪತ್ತು ನಿರ್ವಹಣಾ ತಂಡ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Road Accident : ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

Road Accident : ವೇಗವಾಗಿ ಬಂದ ಸ್ಕೂಟರ್‌ವೊಂದು ಎದುರಿಗೆ ಬಂದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

VISTARANEWS.COM


on

By

Road Accident
Koo

ಕಾರವಾರ: ಬಸ್‌ಗೆ ಸ್ಕೂಟರ್‌ ಡಿಕ್ಕಿಯಾಗಿದ್ದು, ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಗ್ರಾಮದ ಬಳಿ ಘಟನೆ (Road Accident) ನಡದಿದೆ. ಸವಾರ ಶಂಕರ ಹೆಗಡೆ (50) ಮೃತ ದುರ್ದೈವಿ.

ಕೆಎಸ್‌ಆರ್‌ಟಿಸಿ ಬಸ್‌ ಭಟ್ಕಳ ಭಾಗದಿಂದ ಕುಮಟಾದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್‌ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಶಂಕರ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬಸ್‌ ಮುಂಭಾಗ ಹಾನಿಯಾಗಿದ್ದು, ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಹಾಸನ: ಹಾಸನ ಹೊರವಲಯದ ಈಚನಹಳ್ಳಿ (Ichanahalli Village) ಬಳಿ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ (ಮೇ.26) ಸಂಭವಿಸಿದ್ದು, ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜು (Five died on the spot) ಆಗಿದೆ. ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು (Hassan Accident Terrible accident) ಹರಸಾಹಸ ಪಟ್ಟಿದ್ದಾರೆ.

ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Hassan Accident:

ಇಬ್ಬರು ಮಹಿಳೆ, ಮೂವರು ಪುರುಷರು, ಒಂದು ಮಗು ಕೂಡ ಮೃತಪಟ್ಟಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಕುಟುಂಬ ತೆರಳಿತ್ತು. ವಾಪಸ್ ಊರಿಗೆ ಮರಳುವಾಗ ನಿದ್ರೆ ಮಂಪರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮೃತರು ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಬಾಲಕ ಚೇತನ್ , ಡ್ರೈವರ್‌ ರಾಕೇಶ್ ಮೃತರು ಎಂದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Monsoon 2024: ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

Monsoon 2024: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯು ಅಬ್ಬರಿಸುತ್ತಿದ್ದು, ಮುಂಗಾರು ಮಳೆಯ ದರ್ಬಾರ್‌ಗೆ ದಿನಗಣನೆ‌ ಶುರುವಾಗಿದೆ. ಈ ಬಾರಿ ಮುಂಗಾರು ಮಳೆಯು ಉತ್ತಮವಾಗಿರಲಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ನಿಟ್ಟುಸಿರು ಬಿಡುವಂತಾಗಿದೆ. ಜನ-ಜಾನುವಾರುಗಳಿಗೆ ನೀರು ಸಿಗುವಂತಾಗಿದೆ.

VISTARANEWS.COM


on

By

Monsoon 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮೇ 31ರಂದು ಪ್ರಸಕ್ತ ಸಾಲಿನ ಮುಂಗಾರು ಮಳೆಯು (Monsoon 2024) ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವ ಮಳೆಯಾಗಿದ್ದರಿಂದ ರೈತರಲ್ಲಿ ಸಹಜವಾಗಿಯೇ ಸಮಾಧಾನ ತಂದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಜೂನ್‌ ಮೊದಲ ವಾರ ನೈರುತ್ಯ ಮುಂಗಾರು ಮಳೆ ಕರ್ನಾಟಕವನ್ನು ಪ್ರವೇಶ (Karnataka Monsoon 2024) ಮಾಡಲಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೊಂದಿದೆ.

ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡ ವಾಸ್ತವ್ಯ

ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರಕ್ಕೆ ಕೊಡಗು ಜಿಲ್ಲೆಗೆ ಮುಂಗಾರು ಎಂಟ್ರಿಯಾಗಲಿದೆ. ಕಳೆದ ಬಾರಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆಯು ಕೊಡಗು ಜಿಲ್ಲಾಡಳಿತಕ್ಕೆ‌ ಮಾಹಿತಿ ರವಾನಿಸಿದೆ. ಈ ಬಾರಿಯ ಮಳೆಗಾಲಕ್ಕೆ ಕೊಡಗು ಜಿಲ್ಲಾಡಳಿತ ಕೂಡ ತಯಾರಿ ನಡೆಸಿಕೊಳ್ಳುತ್ತಿದೆ. ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಎನ್.ಡಿ.ಆರ್ ಎಫ್ ತಂಡ ಆಗಮಿಸಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. 26 ಮಂದಿಯನ್ನು ಒಳಗೊಂಡ ಎನ್.ಡಿ.ಆರ್ ಎಫ್ ಟೀಮ್ ಈ ಬಾರಿ ಆಗಮಿಸಲಿದೆ. ಕಳೆದ ಬಾರಿ ಜಿಲ್ಲೆಗೆ ಬಂದಿದ್ದ ಎನ್.ಡಿ.ಆರ್.ಎಫ್‌ಗೆ ಬೆಟಾಲಿಯನ್ ಕಳುಹಿಸುವಂತೆ ಜಿಲ್ಲಾಡಳಿತ ಮ‌ನವಿ‌ ಮಾಡಿದೆ. ಕಳೆದ ಬಾರಿ ಬಂದ ತಂಡವೆ ಈ ಸಲವು ಆಗಮಿಸಲಿದೆ. ಕೊಡಗಿನಲ್ಲಿ ಮಳೆಗಾಲ ಮುಗಿಯುವವರೆಗೂ ವಿಪತ್ತು ನಿರ್ವಹಣಾ ತಂಡ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಲಿದೆ.

ಇದನ್ನೂ ಓದಿ: Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

ಭಾರಿ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್‌ ಘೋಷಣೆ

ಮೇ 26ರಂದು ರಾಜ್ಯಾದ್ಯಂತ ಹಗುರವಾದ ಮಳೆಯಾಗುವ (Rain News) ಸಾಧ್ಯತೆ ಇದ್ದು, ವಿವಿಧೆಡೆ ಗುಡುಗು ಸಹಿತ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ ಬದಲಿಗೆ ಒಣ ಹವೆ ಇರುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ದಕ್ಷಿಣ ಒಳನಾಡಲ್ಲಿ ಮಳೆ ಸೈಲೆಂಟ್‌; ಕರಾವಳಿ, ಉತ್ತರ ಒಳನಾಡಿನಲ್ಲಿ ಸಿಕ್ಕಾಪಟ್ಟೆ ವೈಲೆಂಟ್

Karnataka Weather Forecast : ದಕ್ಷಿಣ ಒಳನಾಡಿನ ಕೆಲವಡೆ ಮಳೆಯು ಹಿಂದೆ ಸರಿದಿದ್ದು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ವೈಲೆಂಟ್‌ ಆಗಿರಲಿದ್ದು, ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕೆಲವಡೆ ಗುಡುಗು ಸಹಿತ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Karnataka weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಹಗುರವಾದ ಮಳೆಯಾಗುವ (Rain News) ಸಾಧ್ಯತೆ ಇದ್ದು, ವಿವಿಧೆಡೆ ಗುಡುಗು ಸಹಿತ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ ಬದಲಿಗೆ ಒಣ ಹವೆ ಇರುವ ಸಾಧ್ಯತೆ ಇದೆ.

ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

ಚಾರಣ ಪ್ರಿಯರಿಗೆ ಮಳೆಗಾಲ ಹತ್ತಿರ ಬರುತ್ತಿದ್ದಂತೆ ಸುಗ್ಗಿ. ಒಂದೆರಡು ಮಳೆ ಬರುತ್ತಿದ್ದಂತೆ ಚಿಗುರುವ ಬೆಟ್ಟಗಳು ಹಸಿರಾಗಿ ನಳನಳಿಸಲು ಆರಂಭಿಸುತ್ತವೆ. ಹಸಿರ ಸ್ವರ್ಗದಲ್ಲಿ ನಡೆಯುತ್ತಾ ನೆಲಕ್ಕೆ ಮುತ್ತಿಕ್ಕುವ ಮಂಜಿನ ಹನಿಗಳು, ಮೋಡಗಳ ಜೊತೆ ಹೆಜ್ಜೆ ಹಾಕುತ್ತಾ ಸಾಗುವುದು ಪ್ರಕೃತಿ ಪ್ರಿಯರಿಗೆ ದೈವಿಕ ಅನುಭೂತಿ ನೀಡುವ ಕ್ಷಣಗಳಲ್ಲಿ ಒಂದು. ಅದಕ್ಕಾಗಿಯೇ, ಮಳೆಗಾಲ ಹತ್ತಿರ ಬರುತ್ತಿದ್ದಂತೆ ಈ ಚಾರಣಿಗರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಒಂದಲ್ಲ ಒಂದು ಚಾರಣಕ್ಕೆ ತಯಾರಾಗುತ್ತಾರೆ. ಹಿಮಾಲಯದ ಚಾರಣ ಕನಸಾದರೂ, ಹತ್ತಿರದಲ್ಲೇ ಸಿಗುವ ಕಡಿಮೆ ಅವಧಿಯಲ್ಲಿ ಮಾಡಿ ಬರಬಹುದಾದ ಚಾರಣಗಳು ಇಂತಹ ಸಂದರ್ಭ ನೆಮ್ಮದಿಯ ಅನುಭವ ನೀಡುತ್ತವೆ. ಬನ್ನಿ, ದಕ್ಷಿಣ ಭಾರತದಲ್ಲಿ ಮಳೆಗಾಲ ಸಮೀಪಿಸುತ್ತಿದ್ದಂತೆ ಮಾಡಬಹುದಾದ ಚಾರಣಗಳು (South Indian monsoon destinations) ಇಲ್ಲಿವೆ.

Meesapulimala trek, Kerala

ಮೀಸಪುಲಿಮಲ ಚಾರಣ, ಕೇರಳ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಈ ಚಾರಣ ಅತ್ಯಂತ ಸುಂದರ ಚಾರಣಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿ ರೋಡೋಡೆಂಡ್ರಾನ್‌ ಅರಳಿರುವುದನ್ನು ನೋಡಬೇಕಾದರೆ ಈ ಚಾರಣ ಮಾಡಬೇಕು. ಅಣ್ಣಾಮಲೈ ಹಾಗೂ ಪಳನಿ ಪರ್ವತ ಪ್ರದೇಶಗಳ ನಡುವೆ ಇರುವ ಈ ಪ್ರದೇಶದಲ್ಲಿ ಮೋಡಗಳನ್ನು ನೀವು ಮುಟ್ಟಬಹುದು. ಅತ್ಯಂತ ಚಂದದ ಹುಲ್ಲುಗಾವಲ ಮಧ್ಯದಲ್ಲಿ ಮಾಡುವ ಈ ಚಾರಣ ಸುಮಾರು ೧೮ ಕಿಮೀಗಳ ಅತ್ಯಂತ ಸುಮಧುರ ಅನುಭವ ನೀಡಬಹುದಾದದ್ದೇ ಆಗಿದೆ.

kudremukh

ಕುದುರೆಮುಖ ಚಾರಣ

ಕುದುರೇಮುಖ ಬೆಟ್ಟಗಳ ಚಾರಣಕ್ಕೆ ಇಂಥದ್ದೇ ಎಂಬ ಸಮಯ ಇಲ್ಲದಿದ್ದರೂ ಮಳೆಗಾಲ ಅತ್ಯಂತ ಸೂಕ್ತ. ಮಳೆಗಾಲದಲ್ಲಿ ಈ ಬೆಟ್ಟದ ಸಾಲುಗಳು ಈಗಷ್ಟೇ ಮಿಂದೆದ್ದು ಹಸಿರು ಸೀರೆಯುಟ್ಟ ನವತರುಣಿಯಂತೆ ಶೋಭಿಸುತ್ತದೆ. ಸುಮಾರು ೨೦ ಕಿಮೀ ಅಂತರದ ಈ ಚಾರಣ ಶೋಲಾ ಕಾಡುಗಳ ಮದ್ಯದಿಂದ ಹಾದುಹೋಗಬೇಕಾಗುತ್ತದೆ. ಮಂಜು ಕವಿದ, ಮೋಡಗಳು ದಿನವಿಡೀ ಬೆಟ್ಟ ಚುಂಬಿಸುವ ಈ ಚಾರಣದ ಹಾದಿಯೇ ಒಂದು ಸುಮಧುರ ಅನುಭೂತಿ. ಚಾಋಣ ಪ್ರಿಯರಾರೂ ಈ ಚಾರಣವನ್ನು ಮಿಸ್‌ ಮಾಡಲು ಬಯಸುವುದಿಲ್ಲ.

Nagalapuram trek, Andhra Pradesh

ನಾಗಲಾಪುರಂ ಚಾರಣ, ಆಂಧ್ರಪ್ರದೇಶ

ಚಿತ್ತೂರು ಜಿಲ್ಲೆಯಲ್ಲಿರುವ ನಾಗಲಾಪುರಂ ಅತ್ಯಂತ ಸುಂದರ ತಾಣ. ಈ ಜಾಗ ಜಲಪಾತಗಳದದ್ದೇ ಕಾರುಬಾರು. ಚಾರಣದುದ್ದಕ್ಕೂ ಸಿಗುವ ಬಗೆಬಗೆಯ ಜಲಪಾತಗಳು ಚಾರಣಿಗರ ಮನೋಲ್ಲಾಸ ಹೆಚ್ಚಿಸುತ್ತದೆ. ದಣಿವು ಆರಿಸುತ್ತದೆ. 12 ಕಿಮೀ ದೂರದ ಈ ಚಾರಣ ಮಳೆಗಾಲದಲ್ಲಷ್ಟೇ ಅತ್ಯಂತ ಸೊಗಸಾದ ಅನುಭವ ನೀಡುತ್ತದೆ.

Kodachadri trek

ಕೊಡಚಾದ್ರಿ ಚಾರಣ

ಚಾರಣದ ಹುಚ್ಚು ಹತ್ತಿಸಿಕೊಂಡ ಮಂದಿ ಆರಂಭದ ದಿನಗಳಲ್ಲಿ ಮಾಡಬಹುದಾದ, ಮತ್ತಷ್ಟು ಚಾರಣದ ಹುಚ್ಚನ್ನು ಹತ್ತಿಸಿಕೊಳ್ಳಬಹುದಾದ ಎಲ್ಲ ಲಕ್ಷಣಗಳ್ನೂ ಹೊಂದಿದ ತಾಣ. ಮಳೆಗಾಲದಲ್ಲಿ ಈ ಜಾಗದ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು. ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಿಂದ ಮಾಡಬಹುದಾದ ಈ ಚಾರಣ ಮೂಕಾಂಬಿಕಾ ರಕ್ಷಿತಾರಣ್ಯದ ಒಳಗೆಯೇ ಇದೆ. ಆದಿ ಶಂಕರರು ಧ್ಯಾನ ಮಾಡಿದ ಸ್ಥಳದವರೆಗೆ ಚಾರಣ ಮಾಡಿ ಧ್ಯಾನವನ್ನೂ ಮಾಡಿ, ಮೋಡಗಳನ್ನು ಬೊಗಸೆ ತುಂಬಾ ಹಿಡಿದು ಮರಳಬಹುದು.

Chembara Peak Trek, Wayanad

ಚೆಂಬಾರ ಪೀಕ್‌ ಚಾರಣ, ವಯನಾಡು

ವಯನಾಡಿನ ಚೆಂಬಾರ ಪೀಕ್‌ ಚಾರಣ ಕೂಡಾ ಮಳೆಗಾಲದ ಅದ್ಭುತಗಳಲ್ಲಿ ಒಂದು. ದಟ್ಟಾರಣ್ಯದ ಮಧ್ಯದಲ್ಲಿರುವ ಈ ಚಾರಣಕ್ಕೆ ಅರಣ್ಯಾಧಿಕಾರಿಗಳ ಅನುಮತಿ ಬೇಕು. ಸರಳವಾದ, ಆದರೆ ಮನಮೋಹಕ ದೃಶ್ಯಗಳನ್ನು ಅನುಭವಗಳನ್ನು ಕಣ್ತುಂಬಿಕೊಳ್ಳಬಹುದಾದ ನಾಲ್ಕೈದು ಗಂಟೆಗಳಲ್ಲಿ ಮುಗಿಸಬಹುದಾದ ಚಾರಣವಿದು. ಆರಂಭಿಕ ಚಾರಣಿಗರಿಗೆ ಬೆಸ್ಟ್‌.

Ombattu gudda trek

ಒಂಭತ್ತು ಗುಡ್ಡ ಚಾರಣ

ಏಳೆಂಟು ಗಂಟೆಗಳ ಈ ಚಾರಣ ಸ್ವಲ್ಪ ಸವಾಲೇ ಆದರೂ, ಅತ್ಯಂತ ಸುಂದರ ಚಾರಣಗಳಲ್ಲಿ ಒಂದು. ಹಾಸನ ಹಾಗೂ ಚಿಕ್ಕಮಗಳೂರಿನ ಸರಹದ್ದಿನಲ್ಲಿ ಬರುವ ಈ ಸ್ಥಳದಲ್ಲಿ ಬಗೆಬಗೆಯ ಸಸ್ಯವೈವಿಧ್ಯವನ್ನೂ ಕಣ್ತುಂಬಿಕೊಳ್ಳಬಹುದು. ರೋಮಾಂಚಕ ಹಾಗೂ ನಿಗೂಢವಾದ ಅನುಭವಗಳನ್ನು ನೀಡಬಲ್ಲ ಈ ಚಾರಣದಲ್ಲಿ ಈ ಅನುಭವಗಳನ್ನು ಪಡೆಯಲು ಮಳೆಗಾಲದಲ್ಲೇ ಚಾರಣ ಮಾಡಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka Rain
ಮಳೆ3 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ7 mins ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Karnataka Council Election
ಕರ್ನಾಟಕ20 mins ago

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Krishna Water Dispute
ಕರ್ನಾಟಕ29 mins ago

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Latest41 mins ago

Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

Actor Darshan fans against forest officials Construction of Arjuna tomb
ಸ್ಯಾಂಡಲ್ ವುಡ್42 mins ago

Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Mango Nail Art
ಫ್ಯಾಷನ್44 mins ago

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Viral News
ವೈರಲ್ ನ್ಯೂಸ್45 mins ago

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

Basavanagudi News
ಬೆಂಗಳೂರು58 mins ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Road Accident
ಕರ್ನಾಟಕ1 hour ago

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು58 mins ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌