Skin Care: ಋತುಬಂಧದ ನಂತರ ಚರ್ಮದ ಆರೈಕೆ ಹೇಗಿರಬೇಕು? - Vistara News

ಆರೋಗ್ಯ

Skin Care: ಋತುಬಂಧದ ನಂತರ ಚರ್ಮದ ಆರೈಕೆ ಹೇಗಿರಬೇಕು?

ಋತುಚಕ್ರ ನಿಲ್ಲುವಿಕೆಯು ದೈಹಿಕವಾಗಿ ಬಹಳಷ್ಟು ಬದಲಾವಣೆಗಳನ್ನು ತರುವ ಹಂತ. ದೇಹದ ಪ್ರತಿಯೊಂದು ಭಾಗಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಚರ್ಮ (Skin Care) ರಕ್ಷಣೆ ಹೇಗೆ?

VISTARANEWS.COM


on

What should skin care look like after menopause
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಹಿಳೆಯರ ಬದುಕಿನ ಮಹತ್ವದ ಘಟ್ಟಗಳಲ್ಲಿ ಋತುಬಂಧವೂ (ಮುಟ್ಟು ನಿಲ್ಲುವಿಕೆ) ಒಂದು. ದೈಹಿಕವಾಗಿ ಬಹಳಷ್ಟು ಬದಲಾವಣೆಗಳನ್ನು ತರುವ ಈ ಹಂತ, ದೇಹದ ಪ್ರತಿಯೊಂದು ಭಾಗಗಳ ಮೇಲೂ ಪರಿಣಾಮ ಬೀರುತ್ತದೆ- ಚರ್ಮವೂ (Skin Care) ಸೇರಿದ ಹಾಗೆ. ಋತುಬಂಧದ ಸಮಯದಲ್ಲಿ ಮತ್ತು ನಂತರ ಚರ್ಮದ ಆರೈಕೆಗೆ ಮಹಿಳೆಯರು ಅನುಸರಿಬೇಕಾದ ಕ್ರಮಗಳ ಬಗ್ಗೆ ಕೆಲವು ಸಲಹೆಗಳಿವು.

ತ್ವಚೆಯೆಲ್ಲ ಶುಷ್ಕವಾಗಿ, ಕಣ್ಣಿನ ಕೆಳಗೆ, ತುಟಿಯ ಪಕ್ಕದಲ್ಲಿ ಒಂದೊಂದು ನೆರಿಗೆಗಳು ಆರಂಭವಾಗುವ ಸಮಯವಿದು. ಋತುಬಂಧವಾದ ಮುಂದಿನ ನಾಲ್ಕೈದು ವರ್ಷಗಳಲ್ಲಿ ತಾರುಣ್ಯ ಮಾಸಿ, ವಯಸ್ಸಾದ ಕುರುಹುಗಳು ಸ್ಪಷ್ಟ ಕಾಣಲಾರಂಭಿಸುತ್ತವೆ. ಇದೆಲ್ಲದಕ್ಕೂ ಮೂಲ ಕಾರಣ ದೇಹದಲ್ಲಿ ಕ್ಷೀಣಿಸುವ ಈಸ್ಟ್ರೋಜನ್‌ ಚೋದಕದ ಮಟ್ಟ. ಇದರಿಂದಾಗಿ ಕೊಲಾಜಿನ್‌, ಸೆರಮೈಡ್‌ ಮತ್ತು ಹ್ಯಲುರೋನಿಕ್‌ ಆಮ್ಲದ ಮಟ್ಟವೂ ಕಡಿಮೆಯಾಗಿ, ಚರ್ಮದಲ್ಲಿ ವೃದ್ಧಿಯಾಗುವ ಕೋಶಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಚರ್ಮದಲ್ಲಿನ ಕೊಲಾಜಿನ್‌ ಕಡಿಮೆಯಾದಂತೆ, ನೆರಿಗೆ, ಸುಕ್ಕುಗಳು ಆರಂಭವಾಗುತ್ತವೆ. ಚರ್ಮ ಒಣಗಿದಂತಾಗಿ, ತುರಿಕೆಯೂ ಬರಬಹುದು. ಹಾಗಾಗಿ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗುತ್ತದೆ.

ತೈಲದಂಶ ಅಗತ್ಯ

ದಿನವೂ ನಿಯಮಿತವಾಗಿ ಮಾಯಿಶ್ಚರೈಸರ್‌ ಚರ್ಮಕ್ಕೆ ಬೇಕೇಬೇಕು. ಇಲ್ಲದಿದ್ದರೆ ಶುಷ್ಕತೆ ಹೋಗದೆ, ಬೇರೆ ಸಮಸ್ಯೆಗಳೂ ಆರಂಭವಾಗಬಹುದು. ಇದನ್ನು ಖರೀದಿಸುವಾಗ ಅಲ್ಕೋಹಾಲ್‌ ಇರುವಂಥ ಅಥವಾ ಫ್ಯಾನ್ಸಿ ಪರಿಮಳಗಳು ಇರುವಂಥ ಕ್ರೀಮ್‌/ಲೋಶನ್‌ಗಳು ಅಗತ್ಯವಿಲ್ಲ ಎಂಬುದನ್ನು ಗಮನಿಸಬೇಕು. ಇಂಥವುಗಳಿಂದ ಚರ್ಮದ ಕಿರಿಕಿರಿ ಹೆಚ್ಚಾಗಬಹುದು. ಚರ್ಮಕ್ಕೆ ಹೊಂದುವಂಥ ಕ್ರೀಮ್‌ಗಳನ್ನು ದಿನಕ್ಕೆರಡು ಬಾರಿ ಬಳಸುವುದು ಒಳ್ಳೆಯದು.

ಇದನ್ನೂ ಓದಿ: Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

Skin Care
Skin Care

ರೆಟಿನೋಲ್‌

ಚರ್ಮದ ತಾರುಣ್ಯ ಮಾಸದಂತೆ ಮಾಡುವ ವಿಟಮಿನ್‌ ಎ ಜೀವಸತ್ವದ ಸಾಂದ್ರಿತ ವಸ್ತು ರೆಟಿನೋಲ್.‌ ಇದು ಕ್ರೀಮ್‌, ಲೋಶನ್‌, ಸೀರಂ ಮುಂತಾದ ಸ್ವರೂಪದಲ್ಲಿ ಮಾತುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಚರ್ಮದ ಮೇಲೆ ಬಳಸುವುದರಿಂದ ಚರ್ಮದ ಕೊಲಾಜಿನ್‌ ವೃದ್ಧಿಯಾಗಿ, ಮೊಡವೆ, ಸುಕ್ಕು, ನೆರಿಗೆಗಳು ಕ್ರಮೇಣ ಕ್ಷೀಣಿಸುತ್ತವೆ. ಆದರೆ ಇಂಥ ಯಾವುದೇ ಉತ್ಪನ್ನಗಳು ನಮ್ಮ ಚರ್ಮಕ್ಕೆ ಸೂಕ್ತವೇ ಎಂಬುದನ್ನು ಪರಿಶೀಲಿಸಿಕೊಂಡೇ ಬಳಸುವುದು ಜಾಣತನ. ಈ ನಿಟ್ಟಿನಲ್ಲಿ ತಜ್ಞರ ನೆರವು ಬೇಕಾಗಬಹುದು.

ನಿದ್ದೆ ಮತ್ತು ಆಹಾರ

ಇವೆರಡೂ ಅತ್ಯಂತ ಮುಖ್ಯವಾದವು. ಸಮತೋಲಿತ ಆಹಾರವಿಲ್ಲದಿದ್ದರೆ ಎಂಥಾ ಕ್ರೀಮುಗಳೂ ಚರ್ಮಕ್ಕೆ ಹೊಳಪು ನೀಡುವುದಿಲ್ಲ. ಹಣ್ಣು, ತರಕಾರಿ, ಇಡೀ ಧಾನ್ಯಗಳು, ಡೈರಿ ಉತ್ಪನ್ನಗಳು, ಸಾಕಷ್ಟು ಪ್ರೊಟೀನ್‌ಭರಿತ ಆಹಾರಗಳು ನಮ್ಮ ದೈನಂದಿನ ಭಾಗವಾಗಿದ್ದರೆ ಋತುಬಂಧದ ಸಮಯದಲ್ಲಿ ಕಾಡುವ ಸಮಸ್ಯೆಗಳನ್ನು ನಿಭಾಯಿಸಲು ದೇಹಕ್ಕೆ ಸಾಧ್ಯ. ದಿನಕ್ಕೆ ಏಳೆಂಟು ತಾಸುಗಳಿಗಿಂತಲೂ ಕಡಿಮೆ ನಿದ್ದೆಯಾದರೆ ಸುಸ್ತು, ಆಯಾಸದ ಜೊತೆಗೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣಿಸುತ್ತವೆ. ಇದಕ್ಕೆಲ್ಲಾ ಪೌಷ್ಟಿಕ ಅಹಾರ, ವಿಶ್ರಾಂತಿ, ನಿದ್ದೆಯೇ ಮದ್ದು ಹೊರತು ಯಾವ ಮಾಯಾ ಕ್ರೀಮುಗಳೂ ಏನೂ ಮಾಡಲಾಗುವುದಿಲ್ಲ.

Skin Care
Skin Care

ಸ್ವಚ್ಛತೆ

ಚರ್ಮಕ್ಕೆ ಹೆಚ್ಚು ಒಣಗುತ್ತಿದ್ದಂತೆ ತೆಳುವಾದ ಹೊಟ್ಟಿನಂಥ ಪದರ ಚರ್ಮದ ಮೇಲಿರುತ್ತದೆ. ಇದನ್ನು ನಿಯಮಿತವಾಗಿ ಸ್ವಚ್ಛ ಮಾಡದ ಹೊರತು ಚರ್ಮ ಮಾಸಿದಂತೆ ಕಾಣುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿದಿನವೂ ಚರ್ಮವನ್ನು ಬೆಚ್ಚಗಿನ ನೀರಿನಿಂದ, ಹೆಚ್ಚು ಸೋಪಿಲ್ಲದಂಥ ಕ್ಲೆನ್ಸರ್‌ನಿಂದ ತೊಳೆಯುವುದು ಅಗತ್ಯ. ಇದರಿಂದ ಸೂಕ್ಷ್ಮ ರಂಧ್ರಗಳು ಸಹ ತೆರೆದುಕೊಳ್ಳುತ್ತವೆ.

ಇದನ್ನೂ ಓದಿ: Winter skin care: ಚಳಿಗಾಲದ ಒಣ ತ್ವಚೆಯ ಮಂದಿಗೆ ಇಲ್ಲಿವೆ ಸುಲಭ ಪರಿಹಾರ!

ಸನ್‌ಸ್ಕ್ರೀನ್

ಬಿಸಿಲಿಗೆ ಒಡ್ಡಿಕೊಳ್ಳುವಾಗ ಅಥವಾ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಬೇಕಾಗುತ್ತದೆ. ಚರ್ಮಕ್ಕೆ ಹೊಂದಿಕೊಳ್ಳುವಂಥದ್ದು ಯಾವುದಾದರೂ ಸರಿ. ಇದರಿಂದ ಶುಷ್ಕತೆ, ಸುಕ್ಕುಗಳನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ, ಋತುಬಂಧದ ನಂತರ ಕಾಡಬಹುದಾದ ಚರ್ಮದ ಕ್ಯಾನ್ಸರ್‌ನಂಥವುಗಳಿಂದ ರಕ್ಷಣೆಗೆ ಬಿಸಿಲಿನ ಪ್ರಕೋಪ ಅಡ್ಡಿಯಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Health Tips : ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ 5 ವಿಧದ ಸೂಪ್ ಸೇವಿಸಿ

Health Tips: ನೀವು ಮಳೆಗಾಲದಲ್ಲಿ ಆರೋಗ್ಯವಾಗಿರಲು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮಳೆಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಂದು ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ಆಹಾರದಲ್ಲಿ ಆರೋಗ್ಯಕರವಾದ ಸೂಪ್‌ಗಳನ್ನು ಸೇರಿಸಿಕೊಳ್ಳುವುದು. ಹಾಗಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ 5 ವಿಧದ ಸೂಪ್ ಸೇವಿಸಿ.

VISTARANEWS.COM


on

Health Tips
Koo

ಬೆಂಗಳೂರು : ಮಳೆಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವ ಕಾರಣ ಜನರು ಹಲವು ಕಾಯಿಲೆಗಳಿಗೆ ಒಳಗಾಗುತ್ತಾರೆ.  ಈ ಸಮಯದಲ್ಲಿ ಶೀತ, ಜ್ವರ ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನೀವು ಮಳೆಗಾಲದಲ್ಲಿ ಆರೋಗ್ಯವಾಗಿರಲು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮಳೆಗಾಲದಲ್ಲಿ  ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಂದು ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ಆಹಾರದಲ್ಲಿ(Health Tips) ಆರೋಗ್ಯಕರವಾದ ಸೂಪ್‍ಗಳನ್ನು ಸೇರಿಸಿಕೊಳ್ಳುವುದು. ಹಾಗಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ 5 ವಿಧದ ಸೂಪ್ ಸೇವಿಸಿ.

Health Tips
Health Tips

1. ಶುಂಠಿ ಕ್ಯಾರೆಟ್ ಸೂಪ್ :  ಶುಂಠಿ ಕ್ಯಾರೆಟ್ ಸೂಪ್ ಪೋಷಕಾಂಶಗಳಿಂದ ತುಂಬಿರುವ ಸೂಪ್ ಆಗಿದೆ. ಶುಂಠಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.  ಇದು  ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗಂಟಲು ನೋವನ್ನು ಶಮನಗೊಳಿಸುತ್ತದೆ. ಕ್ಯಾರೆಟ್ ದೇಹವು ವಿಟಮಿನ್ ಎ ಆಗಿ ಪರಿವರ್ತಿಸುವ ಬೀಟಾ-ಕ್ಯಾರೋಟಿನ್ ಗಳಿಂದ  ಸಮೃದ್ಧವಾಗಿದೆ. ಕ್ಯಾರೆಟ್ ಚರ್ಮವನ್ನು ಆರೋಗ್ಯವಾಗಿರಲು  ಸಹಾಯ ಮಾಡುತ್ತದೆ, ಇದು ರೋಗಗಳ ವಿರುದ್ಧ ದೇಹ ಹೋರಾಡಲು ಸಹಾಯ ಮಾಡುತ್ತದೆ.

Health Tips
Health Tips

2. ಅರಿಶಿನ ಬೇಳೆ ಸೂಪ್ : ಅರಿಶಿನ ಕರ್ಕ್ಯುಮಿನ್ ಎಂಬ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಸಂಯುಕ್ತವನ್ನು ಹೊಂದಿರುತ್ತದೆ. ಅರಿಶಿನವು ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಇದನ್ನು ಬಹಳ ಹಿಂದಿನ ಕಾಲದಿಂದಲೂ ಔಷಧದಲ್ಲಿ ಬಳಸುತ್ತಿದ್ದರು. ಬೇಳೆಕಾಳುಗಳು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಹೊಂದಿರುತ್ತವೆ. ಇದು  ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಮತ್ತು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತವೆ.

Health Tips
Health Tips

3. ಚಿಕನ್ ಸೂಪ್ : ಚಿಕನ್ ಸೂಪ್ ಅನ್ನು ಹೆಚ್ಚಾಗಿ ಶೀತ ಮತ್ತು ಜ್ವರಕ್ಕೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಚಿಕನ್ ಪ್ರೋಟೀನ್ ನ ಉತ್ತಮ ಮೂಲವಾಗಿದೆ. ಇದು ದೇಹದ ಅಂಗಾಂಶಗಳ ದುರಸ್ತಿ ಮತ್ತು ಬೆಳವಣಿಗೆಗೆ ಅವಶ್ಯಕವಾಗಿದೆ. ಇದು ಸಿಸ್ಟೈನ್ ನಂತಹ ಅಮೈನೋ ಆಮ್ಲಗಳನ್ನು ಸಹ ಹೊಂದಿರುತ್ತದೆ, ಇದು ಶ್ವಾಸಕೋಶದಲ್ಲಿ ಉತ್ಪತ್ತಿಯಾಗುವ ಲೋಳೆಯನ್ನು ಹೊರಹಾಕಲು ಸಹಾಯಮಾಡುತ್ತದೆ. ತರಕಾರಿಗಳನ್ನು ಹೆಚ್ಚಾಗಿ ಚಿಕನ್ ಸೂಪ್‌ನಲ್ಲಿ ಸೇರಿಸಲಾಗುತ್ತದೆ, ಈರುಳ್ಳಿ, ಕ್ಯಾರೆಟ್ ಮತ್ತು ಸೆಲರಿಯಂತಹ ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ  ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ.

Health Tips
Health Tips

4. ಟೊಮೆಟೊ ತುಳಸಿ ಸೂಪ್ : ಟೊಮೆಟೊ ತುಳಸಿ ಸೂಪ್ ರುಚಿಕರ ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಶಕ್ತಿಯುತ ಸೂಪ್ ಆಗಿದೆ. ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತುಳಸಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Health Tips
Health Tips

5. ಮಶ್ರೂಮ್ ಸೂಪ್ : ಮಶ್ರೂಮ್ ಸೂಪ್, ವಿಶೇಷವಾಗಿ ಶಿಟೇಕ್ ಅಥವಾ ಮೈಟೇಕ್ ಅಣಬೆಗಳೊಂದಿಗೆ ತಯಾರಿಸಲಾಗಿದ್ದು, ಇದು  ರೋಗನಿರೋಧಕ ಶಕ್ತಿಗೆ  ಅತ್ಯುತ್ತಮವಾಗಿದೆ. ಅಣಬೆಗಳಲ್ಲಿ ಬೀಟಾ-ಗ್ಲುಕಾನ್ ಗಳು ಸಮೃದ್ಧವಾಗಿವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯ ಚಟುವಟಿಕೆಯನ್ನು ಹೆಚ್ಚಿಸುವ ಸಂಯುಕ್ತಗಳಾಗಿವೆ. ಅವು ವಿಟಮಿನ್ ಬಿ ಮತ್ತು ಡಿ ಅನ್ನು ಸಹ ಹೊಂದಿರುತ್ತವೆ, ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಬೆಳ್ಳುಳ್ಳಿಯನ್ನು ಹೆಚ್ಚಾಗಿ ಅಣಬೆ ಸೂಪ್‌ನಲ್ಲಿ ಬಳಸಲಾಗುತ್ತದೆ.  ಬೆಳ್ಳುಳ್ಳಿಯಲ್ಲಿ ಆಂಟಿಮೈಕ್ರೊಬಿಯಲ್ ಗುಣಗಳಿವೆ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಶೀತ ಮತ್ತು ಸೋಂಕುಗಳನ್ನು ನಿವಾರಿಸುತ್ತದೆ.

ಇವುಗಳಲ್ಲದೇ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಾಜಾ ತರಕಾರಿಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬೆರೆಸಿದ ಸೂಪ್‍ಗಳನ್ನು ಕುಡಿಯಬಹುದು. ಅಲ್ಲದೇ  ಮೂಳೆಗಳನ್ನು ಬಳಸಿ ಸೂಪ್ ತಯಾರಿಸಬಹುದು. ಇದರಲ್ಲಿ ಖನಿಜಗಳು ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ನಿಮ್ಮ ಸೂಪ್‌ಗಳನ್ನು ಆರೋಗ್ಯಕರವಾಗಿಸಲು ನೈಸರ್ಗಿಕ ರುಚಿಗಳನ್ನು ಆರಿಸಿ ಮತ್ತು ಹೆಚ್ಚುವರಿ ಉಪ್ಪನ್ನು ಬಳಸಬೇಡಿ.

ಇದನ್ನೂ ಓದಿ:  34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ನೀವು ಮಳೆಗಾಲದಲ್ಲಿ ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪ್‍ಗಳನ್ನು ಸೇರಿಸುವುದರಿಂದ ಸಾಮಾನ್ಯ ಕಾಲೋಚಿತ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Weight Lose: ಏನೇ ಸರ್ಕಸ್‌ ಮಾಡಿದರೂ ತೂಕ ಇಳಿಯದೇ? ಹಾಗಿದ್ದರೆ ಕಾರಣ ಇದಾಗಿರಬಹುದು!

Weight Lose: ಅನೇಕರು ತಮ್ಮ ತೂಕ ಇಳಿಕೆಯ ಬದಲಾಗಿ ಬಳ್ಳಿಯಂತಾದ ದೇಹವನ್ನು ಬಳುಕಿಸುತ್ತಾ ರೀಲ್ಸ್‌ ಮಾಡಿ ತಮ್ಮ ರಹಸ್ಯಗಳನ್ನು ಹೇಳುತ್ತಿದ್ದರೆ, ಏನೇ ಮಾಡಿದರೂ ತೂಕ ಇಳಿಯದ ಹಠಮಾರಿ ದೇಹ ಕೆಲವರದ್ದು. ನಾನ್ಯಾಕೆ ಏನು ಮಾಡಿದರೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಕೆಲವರನ್ನು ಕಾಡಿರಬಹುದು. ಈ ಕುರಿತು ಇಲ್ಲಿದೆ ಉತ್ತರ.

VISTARANEWS.COM


on

Weight lose
Koo

ಬಹುತೇಕರ ಜೀವನದಲ್ಲಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ ಎಂದರೆ ತೂಕ ಇಳಿಸುವುದು ಹೇಗೆ ಎಂಬುದು. ಯಾಕೆಂದರೆ, ಅನೇಕರು, ತಮ್ಮ ತೂಕ ಇಳಿಕೆಯ, ಬದಲಾಗಿ ಬಳುಕುವ ಬಳ್ಳಿಯಂತಾದ ದೇಹವನ್ನು ಬಳುಕಿಸುತ್ತಾ ರೀಲ್ಸ್‌ ಮಾಡಿ ತಮ್ಮ ರಹಸ್ಯಗಳನ್ನು ಹೇಳುತ್ತಿದ್ದರೆ, ಏನೇ ಮಾಡಿದರೂ ತೂಕ ಇಳಿಯದ ಹಠಮಾರಿ ದೇಹ ಕೆಲವರದ್ದು. ನಾನ್ಯಾಕೆ ಏನು ಮಾಡಿದರೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಕೆಲವರನ್ನು ಕಾಡಿರಬಹುದು. ಯಾಕೆಂದರೆ, ತೂಕ ಇಳಿಸುವುದು ಸುಲಭದ ಕೆಲಸವಲ್ಲ. ಅದಕ್ಕೊಂದು ಶ್ರದ್ಧೆ, ಶಿಸ್ತು ಬೇಕು. ಇವಿಷ್ಟಿದ್ದರೂ, ಅನೇಕರಿಗೆ ತೂಕ ಇಳಿಯದು. ದೇಹದ ಒಂದಿಂಚೂ ಕದಲದು. ಹೀಗಿರುವಾಗ ಯಾಕಿದು ಎಂಬ ಪ್ರಶ್ನೆ ಅವರನ್ನು ಕಾಡುವುದು ಸಹಜವೇ. ಬನ್ನಿ, ಏನೇ ಸರ್ಕಸ್ಸು ಮಾಡಿದರೂ ತೂಕ ಇಳಿಯದೆ ಇರುವ ಮಂದಿ ನೀವಾಗಿದ್ದರೆ, ನಿಮ್ಮ ತೂಕ ಇಳಿಕೆ ಆಗದೆ ಎರುವುದಕ್ಕೆ ಇದೂ ಒಂದು ಕಾರಣವಿರಬಹುದು (Weight Lose) ಎಂಬುದನ್ನು ನೆನಪಿಡಿ.

Sad Curvy Woman Pinching Her Belly on the Bed

ಪೋಷಕಾಂಶಗಳ ಕೊರತೆ

ಪೋಷಕಾಂಶಗಳ ಕೊರತೆಯಾಗಿರಬಹುದು. ಹೌದು. ಪೋಷಕಾಂಶಗಳ ವಿಚಾರದಲ್ಲಿ ನಿಮ್ಮ ದೇಹ ಯಾವುದೇ ಕೊರತೆಯನ್ನು ಅನುಭವಿಸುತ್ತಿದ್ದರೂ ಕೂಡಾ ಅದು ನಿಮ್ಮ ತೂಕ ಇಳಿಕೆಯ ವಿಚಾರದಲ್ಲಿ ಪರಿಣಾಮ ಬೀರುತ್ತದೆ. ವಿಟಮಿನ್‌, ಖನಿಜಾಂಶಗಳು ಅಥವಾ ಯಾವುದೇ ಬಗೆಯ ಪೋಷಕಾಂಶದಲ್ಲಿ ಕೊರತೆ ಇದ್ದರೂ ದೇಹ ಅದನ್ನು ಆ ಜಾಗಕ್ಕೆ ಪಡೆಯಲು ರಕ್ಷಣಾತ್ಮಕವಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಹಾಗಾಗಿ ಮೊದಲು, ಯಾವುದರ ಕೊರತೆಯಿದೆಯೋ ಅದರ ಮೇಲೆ ಗಮನ ಹರಿಸಿ. ನಂತರ ತೂಕ ಇಳಿಸುವ ಕ್ರಮಗಳನ್ನು ಶಿಸ್ತಾಗಿ ಪಾಲಿಸಿ.

ಡಯಟ್‌ ಮುಖ್ಯ

ಯಾವಾಗಲೂ, ವ್ಯಾಯಾಮಕ್ಕಿಂತಲೂ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಡಯಟ್‌. ನೀವೇನು ತಿನ್ನುತ್ತೀರಿ ಎಂಬುದು ಅತ್ಯಂತ ಹೆಚ್ಚು ಮುಖ್ಯವಾಗುತ್ತದೆ. ತೂಕ ಇಳಿಸಲು ನಿಮ್ಮ ಡಯಟ್‌ ಶೇ.80ರಷ್ಟು ಪಾತ್ರ ವಹಿಸಿದರೆ, ವ್ಯಾಯಾಮದ ಪಾತ್ರ ಶೇ.20 ಮಾತ್ರ. ಹಾಗಾಗಿ, ನಿಮ್ಮ ದೇಹ ಯಾವ ಬಗೆಯದ್ದು ಎಂಬುದರ ಮೇಲೆ ನಿಮ್ಮ ಎಲ್ಲವೂ ಅವಲಂಬಿತವಾಗಿರಲಿ. ಆಯುರ್ವೇದದ ಪ್ರಕಾರ, ವಾತ, ಪಿತ್ತ ಹಾಗೂ ಕಫ ಪ್ರಕೃತಿಯೆಂಬ ತ್ರಿದೋಷದ ಆಧಾರದಲ್ಲಿ ನಿಮ್ಮ ದೇಹ ಯಾವ ಪ್ರಕೃತಿಯದ್ದು ಎಂಬುದು ನಿಮಗೆ ಗೊತ್ತಿರಲಿ. ಅದಕ್ಕೆ ಸೂಕ್ತವಾದ ಆಹಾರಕ್ರಮವಿರಲಿ. ಅಷ್ಟೇ ಅಲ್ಲ, ಸಿಹಿ, ಕುರುಕಲು ತಿನಿಸು, ಹೆಚ್ಚು ಉಪ್ಪಿನ ಪ್ಯಾಕೇಜ್ಡ್‌ ಆಹಾರಗಳಿಂದ ದೂರವಿರಿ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಜೀರ್ಣವ್ಯವಸ್ಥೆಯ ಮೇಲೆ ಗಮನ ಕೊಡಿ

ಜೀರ್ಣವ್ಯವಸ್ಥೆಯ ಮೇಲೆ ಗಮನ ಕೊಡಿ. ನೀವೆಷ್ಟೇ ಪ್ರಯತ್ನಪಟ್ಟರೂ ತೂಕ ಇಳಿಯುತ್ತಿಲ್ಲ ಎಂದರೆ, ಇದೂ ಒಂದು ಕಾರಣವಾಗಬಹುದು. ನಮ್ಮ ದೇಹವು ಬೆವರು, ಮೂತ್ರ ಹಾಗೂ ಮಲದ ಮೂಲಕ ದೇಹದಲ್ಲಿ ಬೇಡವಾದ ಕಶ್ಮಲಗಳನ್ನು ಹೊರಕ್ಕೆ ಕಳುಹಿಸುತ್ತದೆ. ನಿತ್ಯವೂ ಇವೆಲ್ಲ ಸರಿಯಾಗಿ ಆಗುತ್ತಿದ್ದರೆ ಆರೋಗ್ಯ ಸರಿಯಾಗಿರುತ್ತದೆ. ಆದರೆ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಅಥವಾ, ಕರುಳು ಬ್ಲಾಕ್‌ ಆಗಿದ್ದರೆ, ಈ ಕಶ್ಮಲಗಳೆಲ್ಲ ದೇಹದೊಳಗೇ ಅಲ್ಲಲ್ಲಿ ಉಳಿದುಬಿಟ್ಟು ದೇಹದ ಇಡಿಯ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ಇದರಿಂದ ತೂಕ ಇಳಿಕೆಯ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ನೀವು ಅಂದುಕೊಂಡ ಹಾಗೆ ತೂಕ ಇಳಿಸಲು ಸಾಧ್ಯವಾಗುವುದಿಲ್ಲ.

Continue Reading

ಆರೋಗ್ಯ

World Hepatitis Day: ಏನಿದು ಹೆಪಟೈಟಿಸ್‌? ಇದು ಏಕೆ ಅಪಾಯಕಾರಿ?

World Hepatitis Day: ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್‌ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಘೋಷವಾಕ್ಯ “ಕ್ರಿಯಾಶೀಲರಾಗುವ ಹೊತ್ತಿದು”. ಈ ರೋಗದ ಕುರಿತು ಜಾಗೃತಿ ಹೆಚ್ಚಿಸಿ, ಈ ಕುರಿತಾದ ತಪಾಸಣೆ ಮತ್ತು ತಡೆಯನ್ನು ವ್ಯಾಪಕಗೊಳಿಸುವುದು ಇದರ ಉದ್ದೇಶ. ಈ ಕುರಿತ ಲೇಖನ ಇಲ್ಲಿದೆ.

VISTARANEWS.COM


on

World Hepatitis Day
Koo

ವೈರಲ್‌ ಹೆಪಟೈಟಿಸ್‌ ರೋಗವನ್ನು (World Hepatitis Day) ಇಂದಿಗೂ ʻಸೈಲೆಂಟ್‌ ಕಿಲ್ಲರ್‌ʼ ಎಂದೇ ಕರೆಯಲಾಗುತ್ತದೆ. ಈ ರೋಗದ ಕುರಿತು ಜಾಗೃತಿ ಹೆಚ್ಚಿಸಿ, ಈ ಕುರಿತಾದ ತಪಾಸಣೆ ಮತ್ತು ತಡೆಯನ್ನು ವ್ಯಾಪಕಗೊಳಿಸುವ ಉದ್ದೇಶದಿಂದ, ಜುಲೈ ತಿಂಗಳ 28ನೇ ದಿನವನ್ನು ವಿಶ್ವ ಹೆಪಟೈಟಿಸ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದೇ ಈ ದಿನವನ್ನು ಗುರುತಿಸುವುದಕ್ಕೂ ಕಾರಣವಿದೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಬರೂಕ್‌ ಬ್ಯೂಮ್‌ಬರ್ಗ್‌ ಅವರ ಜನ್ಮದಿನ. ಹೆಪಟೈಟಿಸ್‌ ಬಿ ವೈರಸ್‌ ಪತ್ತೆ ಮಾಡಿ, ಈ ವೈರಸ್‌ಗೆ ಲಸಿಕೆಯನ್ನು ತಯಾರಿಸಿದವರಾತ.

World Hepatitis Day

ಏನಿದು ಹೆಪಟೈಟಿಸ್‌?

ಹೀಗೆಂದರೆ ಯಕೃತ್ತಿನ ಉರಿಯೂತ. ಇದರಿಂದಾಗಿ ತನ್ನ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಯಕೃತ್ತಿಗೆ ಸಾಧ್ಯವಾಗುವುದಿಲ್ಲ. ಸರಿಯಾದ ಸಮಯದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೂ ಆಪತ್ತು ಬರುತ್ತದೆ. ಮಾತ್ರವಲ್ಲ, ಯಕೃತ್ತಿನ ವೈಫಲ್ಯ ಅಥವಾ ಯಕೃತ್‌ ಕ್ಯಾನ್ಸರ್‌ಗೂ ಕಾರಣವಾಗಬಹುದು. ಯಕೃತ್ತಿನ ಸ್ಥಿತಿ ಹೀಗಾಗುವುದಕ್ಕೆ ಹಲವಾರು ಕಾರಣಗಳಿವೆ. ವೈರಸ್‌ ಸೋಂಕು, ಮದ್ಯಪಾನ, ಕೆಲವು ಔಷಧಿಗಳು, ವಿಷಕಾರಿ ರಾಸಾಯನಿಕಗಳು, ಆಟೋಇಮ್ಯೂನ್‌ ರೋಗ, ಕಲುಷಿತ ಆಹಾರದಂಥ ಯಾವುದೇ ಕಾರಣಗಳಿಂದ ಹೆಪಟೈಟಿಸ್‌ ಉಂಟಾಗಬಹುದು. ಆದರೆ ವೈರಸ್‌ಗಳಿಂದ ಹೆಪಟೈಟಿಸ್‌ಗಳು ಬರುವ ಸಾಧ್ಯತೆ ದಟ್ಟವಾಗಿದೆ.

ಲಕ್ಷಣಗಳೇನು?

ಆಯಾಸ, ಸುಸ್ತು, ಚರ್ಮ ಮತ್ತು ಕಣ್ಣು ಹಳದಿಯಾಗುವುದು (ಕಾಮಾಲೆ), ಕಿಬ್ಬೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವುದು ಮತ್ತು ವಾಂತಿ, ಹಸಿವಿಲ್ಲದಿರುವುದು, ತೂಕ ಇಳಿಯುವುದು, ಗಾಢ ಬಣ್ಣದ ಮೂತ್ರ, ಕೀಲುಗಳಲ್ಲಿ ನೋವು ಮತ್ತು ಜ್ವರ ಸಾಮಾನ್ಯವಾಗಿ ಕಂಡುಬರುತ್ತವೆ. ವೈದ್ಯರ ತಪಾಸಣೆಗಳು ಮತ್ತು ರಕ್ತಮಾದರಿಯ ಪರೀಕ್ಷೆಯಿಂದ ಈ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಆದರೆ ಸಮಸ್ಯೆ ತೀವ್ರವಾಗಿದ್ದಲ್ಲಿ, ಯಕೃತ್ತಿನ ಬಯಾಪ್ಸಿಯನ್ನು ಮಾಡಬೇಕಾಗಬಹುದು. ವೈರಲ್‌ ಹೆಪಟೈಟಿಸ್‌ನಲ್ಲೂ ಹಲವಾರು ರೀತಿಯಿದೆ. ಹೆಪಟೈಟಿಸ್‌ ಎ, ಬಿ, ಸಿ, ಡಿ, ಇ ಎಂದು ಅವುಗಳನ್ನು ಗುರುತಿಸಲಾಗಿದ್ದು, ಒಂದೊಂದೂ ಭಿನ್ನ ರೀತಿಯಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಆದರೆ ಲಕ್ಷಣಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ಹೆಪಟೈಟಿಸ್‌ ಬಿ ಮತ್ತು ಸಿ ನಲ್ಲಿ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚಿನ ಲಕ್ಷಣಗಳೇನೂ ಗೋಚರಿಸುವುದಿಲ್ಲ. ಆದರೆ ಮುಂದುವರಿದ ಹಂತಗಳಲ್ಲಿ ಚಿಕಿತ್ಸೆ ಸಫಲವಾಗದಿದ್ದರೆ, ಪ್ರಾಣಾಪಾಯಕ್ಕೆ ದಾರಿಯಾಗುತ್ತದೆ.

What is hepatitis

ಮುನ್ನೆಚ್ಚರಿಕೆ

ಮಳೆಗಾಲದ ದಿನಗಳಲ್ಲಿ ಹೊರಗಿನ ಮಲಿನ ಆಹಾರಗಳು ಇಂಥ ರೋಗಗಳಿಗೆ ರಹದಾರಿ ನೀಡುತ್ತವೆ. ಅದರಲ್ಲೂ ಮುಖ್ಯವಾಗಿ, ನೀರು ಮತ್ತು ಆಹಾರದ ಶುದ್ಧತೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಅಸುರಕ್ಷಿತ ಲೈಂಗಿಕ ಸಂಪರ್ಕ ಎಂದರೆ ಅಪಾಯಕ್ಕೆ ಆಹ್ವಾನವಿತ್ತಂತೆ. ಕ್ಷೌರದಂಗಡಿಗಳಲ್ಲಿ ಖಾಸಗಿ ವಸ್ತುಗಳನ್ನು ಬಳಸಿಕೊಳ್ಳಿ, ಅಂಗಡಿಯ ಸಾರ್ವಜನಿಕ ವಸ್ತುಗಳು ಬೇಡ. ಸೂಜಿ, ಸಿರಿಂಜ್‌ ಮುಂತಾದ ವೈದ್ಯಕೀಯ ವಸ್ತುಗಳನ್ನು ಸಂಪೂರ್ಣ ಸ್ಟೆರಿಲೈಜ್‌ ಮಾಡಿ ಅಥವಾ ಹೊಸದನ್ನೇ ಬಳಸಿ. ರಕ್ತದಾನ ಪಡೆಯಬೇಕಾದರೆ ನೋಂದಾಯಿತ ರಕ್ತನಿಧಿಗಳನ್ನೇ ಸಂಪರ್ಕಿಸಿ. ಯಾವುದೇ ವೈದ್ಯಕೀಯ ಪ್ರಕ್ರಿಯೆಗಳಿಗೆ ಒಳಗಾಗಬೇಕಾದರೆ ನೋಂದಾಯಿತ ವೈದ್ಯರು ಮತ್ತು ಆಸ್ಪತ್ರೆಗಳಿಗೇ ಭೇಟಿ ನೀಡಿ. ಆಲ್ಕೋಹಾಲ್‌ ಸೇವನೆಯ ಮೇಲೆ ನಿಯಂತ್ರಣ ಅತೀ ಅಗತ್ಯ. ಇಲ್ಲದಿದ್ದರೆ ಯಕೃತ್ತಿನ ಆರೋಗ್ಯಕ್ಕೆ ಕೊಡಲಿಯೇಟು ನಿಶ್ಚಿತ. ಯಾವ ಹೆಪಟೈಟಿಸ್‌ಗಳು ಹೇಗೆ ಹರಡುತ್ತವೆ ಎಂಬುದನ್ನು ನೋಡೋಣ.

ಹೆಪಟೈಟಿಸ್‌ ಎ

ಇದು ಸಾಮಾನ್ಯವಾಗಿ ಬರುವುದು ಕಲುಷಿತ ನೀರು ಮತ್ತು ಆಹಾರದಿಂದ. ಜಾಂಡೀಸ್‌ ಹೆಸರಿನಲ್ಲಿ ಈ ಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ, ಆಹಾರ ಮತ್ತು ವಿಶ್ರಾಂತಿಯಿಂದ ಇದನ್ನು ಸಂಪೂರ್ಣ ಗುಣಪಡಿಸಿಕೊಳ್ಳಬಹುದು. ಇದಕ್ಕೆ ಲಸಿಕೆಯಿದೆ.

hepatitis c

ಹೆಪಟೈಟಿಸ್‌ ಬಿ

ಇದು ಸಾಮಾನ್ಯವಾಗಿ ರಕ್ತ, ಎಂಜಲು, ವೀರ್ಯಗಳಂಥ ದೇಹದ ದ್ರವಗಳಿಂದ ಹರಡುವಂಥದ್ದು. ತೀವ್ರ ಉರಿಯೂತ ಉಂಟುಮಾಡುವ ಈ ರೋಗದ ವಿರುದ್ಧ ನವಜಾತ ಶಿಶುಗಳಿಗೆ ಲಸಿಕೆ ನೀಡಲಾಗುತ್ತದೆ.

ಹೆಪಟೈಟಿಸ್‌ ಸಿ

ವೈದ್ಯಕೀಯ ಬಳಕೆಯ ವಸ್ತುಗಳನ್ನು (ಸೂಜಿ, ಸಿರಿಂಜ್‌ ಇತ್ಯಾದಿ) ಸರಿಯಾಗಿ ಶುಚಿ ಮಾಡದಿದ್ದಾಗ, ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತಪೂರಣದ ಸಂದರ್ಭದಲ್ಲಿ, ತಾಯಿಯಿಂದ ನವಜಾತ ಶಿಶುವಿಗೆ ಈ ವೈರಸ್‌ ವರ್ಗಾವಣೆಯಾಗುತ್ತದೆ.

hepatitis d

ಹೆಪಟೈಟಿಸ್‌ ಡಿ

ಈಗಾಗಲೇ ಹೆಪಟೈಟಿಸ್‌ ಬಿ ಸೋಂಕಿನಿಂದ ಬಳಲುತ್ತಿರುವವರಿಗೆ ಹೆಪಟೈಟಿಸ್‌ ಡಿ ಬಾಧೆ ಬರಬಹುದು. ಇದೂ ಸಹ ದೇಹದ ದ್ರವಗಳಿಂದಲೇ ಹರಡುವಂಥದ್ದು. ಇದಕ್ಕೆಂದೇ ಪ್ರತ್ಯೇಕ ಲಸಿಕೆ ಅಥವಾ ಚಿಕಿತ್ಸಾ ವಿಧಾನವಿಲ್ಲ. ಆದರೆ ದೀರ್ಘ ಕಾಲದವರೆಗೆ ಲಕ್ಷಣಾಧಾರಿತ ಚಿಕಿತ್ಸೆಯನ್ನು ವೈದ್ಯರು ನೀಡಬಹುದು.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಹೆಪಟೈಟಿಸ್‌ ಇ

ಇದಕ್ಕೂ ಪ್ರತ್ಯೇಕ ಲಸಿಕೆಯಿಲ್ಲ. ಕಲುಷಿತ ಆಹಾರ ಮತ್ತು ನೀರಿನಿಂದಲೇ ಈ ವೈರಸ್‌ ಹರಡುತ್ತದೆ. ಇದಕ್ಕೆ ಆಂಟಿವೈರಲ್‌ ಔಷಧಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಾರೆ.

Continue Reading

ಆರೋಗ್ಯ

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Ways to Prevent Gray Hair: ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಇದ್ಕಕೇನು ಪರಿಹಾರ? ಈ ಲೇಖನ ಓದಿ.

VISTARANEWS.COM


on

The woman shows gray hair on her head. Hair with fragments of gray hair, hair roots requiring dyeing
Koo

ಸದ್ಯದ ಯುವಜನರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಹಣ್ಣಾಗುವುದು. ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಬಣ್ಣಗಳ ಸಹಾಯದಿಂದ ಕಾಲಕ್ಕೆ ತಕ್ಕಂತೆ ಕೂದಲ ಶೃಂಗಾರ ಮಾಡಿಸಿಕೊಂಡರೂ, ಕೃತಕ ರಸಾಯನಿಕಗಳನ್ನು ಪದೇ ಪದೇ ಕೂದಲಿಗೆ ಸೋಕಿಸಿಕೊಳ್ಲೂವ ಕಾರಣದಿಂದಲೋ, ಆಗಾಗ ಪಾರ್ಲರಿಗೆ ಎಡತಾಕಿ ಕೂದಲ ಮೇಲೆ ವಿಪರೀತ ರಾಸಾಯನಿಕಗಳ ಬಳಕೆಯಿಂದಲೋ, ಕೂದಲು (Ways to Prevent Gray Hair) ಇನ್ನಷ್ಟು ಹದಗೆಡುತ್ತದೆ. ಸಮಸ್ಯೆ ವಿಕೋಪಕ್ಕೆ ಹೋಗುತ್ತದೆ.

Ways to Prevent Gray Hair

ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ

ಪ್ರಕೃತಿಯಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ಅವನ್ನು ನಿಯಮಿತವಾಗಿ ಬಳಸುವ ತಾಳ್ಮೆ ನಮಗೆ ಇರಬೇಕು ಅಷ್ಟೇ. ಜೊತೆಗೆ ಪ್ರಕೃತಿಗೆ ವಿರುದ್ಧವಾಗಿ ಹೋಗದೆ, ಪ್ರಕೃತಿದತ್ತ ವಿಧಾನಗಳನ್ನು ಅಪ್ಪಿಕೊಂಡರೆ ಸಮಸ್ಯೆಗಳು, ಅಡ್ಡ ಪರಿಣಾಮಗಳು ಇರದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದರಿಂದ ಪಾರಾಗಬಹುದು ಎಂಬುದನ್ನು ನೋಡೋಣ.

The vitamin C content in it strengthens the immune system Gooseberry Benefits

ನೆಲ್ಲಿಕಾಯಿ

ನೆಲ್ಲಿಕಾಯಿಯ ಆರೋಗ್ಯದ ಲಾಭಗಳು ನಮಗೆಲ್ಲರಿಗೂ ಗೊತ್ತು. ಹೆಚ್ಚು ಸಿ ವಿಟಮಿನ್‌ ಇರುವ ಆಹಾರಗಳ ಪೈಕಿ ನೆಲ್ಲಿಕಾಯಿಗೆ ಅಗ್ರಸ್ಥಾನ. ನೆಲ್ಲಿಕಾಯಿಯ ಸೇವನೆಯಿಂದ ನಮ್ಮ ಕೂದಲ ಆರೋಗ್ಯಕ್ಕೂ ಲಾಭಗಳಿವೆ. ಕೂದಲ ನೈಸರ್ಗಿಕ ಪಿಗ್‌ಮೆಂಟ್‌ಗಳನ್ನು ಹಾಗೆಯೇ ಇರಿಸಲು ಸಹಾಯ ಮಾಡುವ ಆಹಾರವಿದು. ಬೆಳಗ್ಗೆ ನಿತ್ಯವೂ 15 ಎಂಎಲ್‌ನಷ್ಟು ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದ ಕೂದಲ ಆರೋಗ್ಯದಲ್ಲಿ ಗಣನೀಯ ಲಾಭ ಕಾಣಬಹುದು.

ಕಾಲೊಂಜಿ ಬೀಜಗಳು

ಕಪ್ಪನೆಯ ಕಾಲೊಂಜಿ ಬೀಜಗಳಿಂದ ಕೂದಲ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಇದು ಕೂದಲ ಬುಡದಲ್ಲಿ ರಕ್ತ ಪರಿಚಲನೆಯನ್ನು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಬೆಳ್ಳಗಾಗುವುದನ್ನೂ ಮುಂದೂಡುತ್ತದೆ. ವಾರಕ್ಕೆರಡು ಬಾರಿ ಕಾಲೊಂಜಿ ಬೀಜಗಳ ಮಾಸ್ಕ್‌ ಮಾಡಿ ಕೂದಲಿಗೆ ಹಚ್ಚುವ ಮೂಲಕ ಉತ್ತಮ ಲಾಭ ಪಡೆಯಬಹುದು.

Neem Leaves Medicinal Leaves

ಕರಿಬೇವು

ಕರಿಬೇವು ಕೂದಲಲ್ಲಿ ಮೆಲನಿನ್‌ ಉತ್ಪಾದನೆಯನ್ನು ಪ್ರಚೋದಿಸುವ ಕಾರಣ ಕೂದಲು ಕಪ್ಪಾಗಿಡುವಲ್ಲಿ ಸಹಾಯ ಮಾಡುತ್ತದೆ. ಬಾಲನೆರೆಯಂತಹ ಸಮಸ್ಯೆಯಿದ್ದರೆ ಖಂಡಿತವಾಗಿಯೂ ಕರಿಬೇವು ರಾಮಬಾಣ. ಇದು ಬಹುಬೇಗನೆ ಕೂದಲು ಬೆಳ್ಳಗಾಗುವುದನ್ನೂ ತಡೆಯುತ್ತದೆ. ಇದರ ಸೇವನೆ, ಕರಿಬೇವಿನ ಎಣ್ಣೆಯಿಂದಲೂ ಲಾಭ ಪಡೆಯಬಹುದು. ನಿತ್ಯವೂ ಮೂರ್ನಾಲ್ಕು ಕರಿಬೇವನ್ನು ಹಾಗೆಯೇ ಸೇಔಇಸುವ ಮೂಲಕವೂ ಲಾಭ ಪಡೆಯಬಹುದು.

ಗೋಧಿಹುಲ್ಲು

ಕೂದಲಿಗೆ ಗೋಧಿ ಹುಲ್ಲೂ ಅತ್ಯಂತ ಒಳ್ಳೆಯದು. ಇದು ಕೂದಲ ಬುಡಕ್ಕೆ ಪೋಷಣೆ ನೀಡುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಬೆಳಗ್ಗೆದ್ದ ಕೂಡಲೇ ಗೋಧಿಹುಲ್ಲಿನ ಜ್ಯೂಸ್‌ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

Black Sesame Seeds Black Foods

ಕರಿಎಳ್ಳು

ಕೂದಲ ಆರೋಗ್ಯಕ್ಕೆ ಕರಿಎಳ್ಳು ಉತ್ತಮ ಆಹಾರ. ಎಳ್ಳಿನ ಸೇವನೆಯಿಂದ ಕೂದಲು ಬೆಳ್ಳಾಗುಗುವುದು ನಿಧಾನವಾಗುತ್ತದೆ. ನಿತ್ಯವೂ ಒಂದು ಚಮಚ ಕರಿಎಳ್ಳು ಸೇವನೆ ಮಾಡುವುದರಿಂದ ಹಾಗೂ ಆಗಾಗ ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡುವ ಮೂಲಕ ಇದರ ಲಾಭ ಪಡೆಯಬಹುದು.

Continue Reading
Advertisement
Viral Video
ಪ್ರಮುಖ ಸುದ್ದಿ40 seconds ago

Viral Video: ಚಲಿಸುತ್ತಿದ್ದ ರೈಲಿನ ಹೊರಗೆ ಜೋಷ್‌‌ನಿಂದ ನೇತಾಡಿದ ಯುವಕ; ಏನಾಯಿತು ನೋಡಿ

Elephant attack
ಮಳೆ6 mins ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

Indo-Pak Romance
ವೈರಲ್ ನ್ಯೂಸ್12 mins ago

ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Dog Meat Controversy
ಕರ್ನಾಟಕ17 mins ago

Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

Actor Dhanush new poster from Kubera unveiled on his birthday
ಟಾಲಿವುಡ್26 mins ago

Actor Dhanush: ಧನುಷ್‌ ಬರ್ತ್‌ಡೇ ಸ್ಪೆಷಲ್‌; ‘ಕುಬೇರ’ ಸಿನಿಮಾದಿಂದ ಲುಕ್‌ ಪೋಸ್ಟರ್‌ ಔಟ್‌!

theft case
ಮೈಸೂರು42 mins ago

Theft case : ಪೊಲೀಸ್‌ ಮನೆಯಲ್ಲಿ ಕಳ್ಳರ ಕಳ್ಳಾಟ; ಚಿನ್ನಾಭರಣ ಕದ್ದು ಎಸ್ಕೇಪ್‌

CH Vijayashankar2
ಪ್ರಮುಖ ಸುದ್ದಿ46 mins ago

CH Vijayashankar: ಬಯಸದೇ ಬಂದ ಭಾಗ್ಯ: ಮೇಘಾಲಯ ನೂತನ ರಾಜ್ಯಪಾಲ ಸಿಎಚ್‌ ವಿಜಯಶಂಕರ್

Paris 2024 Shooting
ಕ್ರೀಡೆ57 mins ago

Paris 2024 Shooting: ಶೂಟಿಂಗ್​ನಲ್ಲಿ ಫೈನಲ್​ ಪ್ರವೇಶಿಸಿದ ರಮಿತಾ ಜಿಂದಾಲ್; ಭಾರತಕ್ಕೆ 2 ಪದಕ ನಿರೀಕ್ಷೆ

Ranveer Singh up for new film directed by Aditya Dhar
ಬಾಲಿವುಡ್58 mins ago

Ranveer Singh:‌ ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್; ರಣವೀರ್ ಸಿಂಗ್ ಹೊಸ ಸಿನಿಮಾ ಅನೌನ್ಸ್!

DK Shivakumar
ಕರ್ನಾಟಕ1 hour ago

DK Shivakumar: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಡಿಸಿಎಂ ಡಿಕೆಶಿ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant attack
ಮಳೆ6 mins ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ21 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

ಟ್ರೆಂಡಿಂಗ್‌