Medical education: ನೀಟ್‌ ಕೇಸ್‌ಗಳ ಸಂಖ್ಯೆ ಹೆಚ್ಚಳವು ವೈದ್ಯಕೀಯ ಶಿಕ್ಷಣ ಸುಧಾರಣೆ ಅಗತ್ಯ ಬಿಂಬಿಸಿದೆ: ಸಿಜೆಐ ಚಂದ್ರಚೂಡ್ - Vistara News

ಆರೋಗ್ಯ

Medical education: ನೀಟ್‌ ಕೇಸ್‌ಗಳ ಸಂಖ್ಯೆ ಹೆಚ್ಚಳವು ವೈದ್ಯಕೀಯ ಶಿಕ್ಷಣ ಸುಧಾರಣೆ ಅಗತ್ಯ ಬಿಂಬಿಸಿದೆ: ಸಿಜೆಐ ಚಂದ್ರಚೂಡ್

ನೀಟ್‌ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಸುಪ್ರೀಂಕೊರ್ಟ್‌ನಲ್ಲಿ ಕೇಸ್‌ಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಿಜೆಐ ಚಂದ್ರಚೂಡ್‌, ಕ್ಷೇತ್ರದ ಸುಧಾರಣೆಯ ಅಗತ್ಯವನ್ನು ಇದು ಬಿಂಬಿಸಿದೆ (Medical education) ಎಂದು ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

CJI Chandrachood
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ವೈದ್ಯಕೀಯ ಶಿಕ್ಷಣ ಬಯಸುವವರಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಾಗಿರುವ ನೀಟ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಕೇಸ್‌ಗಳ ಸಂಖ್ಯೆ ಸುಪ್ರೀಂಕೋರ್ಟ್‌ನಲ್ಲಿ ಹೆಚ್ಚಳವಾಗಿದ್ದು, ಈ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕಿರುವುದನ್ನು ಬಿಂಬಿಸಿದೆ ಎಂದು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ( CJI DY Chandrachud) ಹೇಳಿದ್ದಾರೆ.

19ನೇ ಗಂಗಾ ರಾಮ್‌ ಉಪನ್ಯಾಸ ಮಾಲಿಕೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನ್ಯಾಯ ಮತ್ತು ಸಮಾನತೆ ವಿಷಯವಾಗಿ ಮಾತನಾಡಿದ ಸಿಜೆಐ ಡಿವೈ ಚಂದ್ರಚೂಡ್‌ ಅವರು, ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರಗಳನ್ನು ಪ್ರಶ್ನಿಸಿ ಹಲವಾರು ಕೇಸ್‌ಗಳು ಸುಪ್ರೀಂಕೋರ್ಟ್‌ ಅಂಗಳದಲ್ಲಿವೆ. ಕೋರ್ಟ್‌ಗಳು ನೀತಿ ನಿರೂಪಣೆಯ ವಲಯವನ್ನು ಪ್ರವೇಶಿಸಲಾರವು. ವಿದ್ಯಾರ್ಥಿಗಳ ಪ್ರತಿನಿಧಿಗಳು ಸಲ್ಲಿಸುವ ಅಹವಾಲುಗಳನ್ನು ಸರ್ಕಾರ ಆಲಿಸಬೇಕಾಗುತ್ತದೆ. ಹೀಗಿದ್ದರೂ ಅನ್ಯಾಯ ಸಂಭವಿಸಿದ್ದರೆ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗುತ್ತದೆ. ಹೆಚ್ಚುತ್ತಿರುವ ನೀಟ್‌ ಕೇಸ್‌ಗಳು ವಿದ್ಯಾರ್ಥಿ (education news) ಸಮುದಾಯದ ನಿರೀಕ್ಷೆಗಳ ಹರವನ್ನೂ ಬಿಂಬಿಸಿದೆ. ಇಲ್ಲಿ ತಕರಾರುಗಳು ಸಾಂಕೇತಿಕವಾಗಿದ್ದು, ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಸುಧಾರಣೆಯ ಅಗತ್ಯವನ್ನು ಬಿಂಬಿಸಿದೆ ಎಂದು ವಿವರಿಸಿದರು.

ಸಮಾಜದದಲ್ಲಿ ದುರ್ಬಲ ಮತ್ತು ಹಿಂದುಳಿದ ವರ್ಗದ ಜನತೆಗೆ ಆರೋಗ್ಯ ಸೇವೆಗಳು ಸಕಾಲದಲ್ಲಿ ಸಿಗಬೇಕು. ಜಾತಿ, ವರ್ಗ, ಪ್ರಾದೇಶಿಕ ಅಸಮಾನತೆಯನ್ನು ಮೀರಿ ಎಲ್ಲರಿಗೂ ಆರೋಗ್ಯ ಸೇವೆಗಳು ದೊರೆಯಬೇಕು ಎಂದು ಅವರು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

ಹಲ್ಲಿಗೆ ಬ್ರೇಸ್‌ (Dental braces) ಹಾಕಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಈಗೇಕೆ ಹೆಚ್ಚಿದೆ? ಮೊದಲನೇದಾಗಿ ಹೆಚ್ಚಿದ ಸೌಂದರ್ಯ ಪ್ರಜ್ಞೆ. ನಗು ಸುಂದರವಾಗಿರಬೇಕೆಂದು ಹಂಬಲಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಬದಲಾಗಿರುವ ನಮ್ಮ ಆಹಾರ ಶೈಲಿ. ಬ್ರೇಸ್‌ ಹಾಕುವ ಪ್ರಕ್ರಿಯೆ ಸುಲಭವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ವರ್ಷಗಟ್ಟಲೆ ಸಮಯ ಹಿಡಿಯುವ ಚಿಕಿತ್ಸೆಯಿದು. ಬ್ರೇಸ್‌ ಹಾಕಿಕೊಳ್ಳುವ ಯೋಚನೆ ಇರುವಂಥವರು ಈ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

VISTARANEWS.COM


on

Dental Braces
Koo

ನೋಡುವುದಕ್ಕೆ ಒಂದೇ ಸಾಲಿನಲ್ಲಿ ಮುತ್ತು ಪೋಣಿಸಿದಂತೆ ಕಾಣುವ ಹಲ್ಲುಗಳು ಯಾರಿಗೆ ಬೇಡ? ಹಾಗಾಗಿ ಹಲ್ಲುಗಳಿಗೆ ಬ್ರೇಸಸ್‌ (Dental braces) ಹಾಕಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ದಂತಗಳ ವಕ್ರತೆ, ಬೈಟ್‌ ಸರಿಯಿಲ್ಲದಿರುವುದು, ಒಂದರಮೇಲೊಂದು ಹಲ್ಲುಗಳು ಬೆಳೆಯುವುದು- ಇಂಥ ನಾನಾ ಸಮಸ್ಯೆಗಳಿಗೆ ಹಲ್ಲುಗಳಿಗೆ ಬ್ರೇಸ್‌ ಹಾಕುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಬ್ರೇಸ್‌ ಹಾಕುವ ಪ್ರಕ್ರಿಯೆ ಸುಲಭವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ವರ್ಷಗಟ್ಟಲೆ ಸಮಯ ಹಿಡಿಯುವ ಚಿಕಿತ್ಸೆಯಿದು. ಬ್ರೇಸ್‌ ಹಾಕಿಕೊಳ್ಳುವ ಯೋಚನೆ ಇರುವಂಥವರು ಈ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

Young Woman Pointing at Her Braces

ಏಕೆ ಹೆಚ್ಚಿವೆ?

ಬ್ರೇಸ್‌ ಹಾಕಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಈಗೇಕೆ ಹೆಚ್ಚಿದೆ? ಮೊದಲನೇದಾಗಿ ಹೆಚ್ಚಿದ ಸೌಂದರ್ಯ ಪ್ರಜ್ಞೆ. ನಗು ಸುಂದರವಾಗಿರಬೇಕೆಂದು ಹಂಬಲಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಬದಲಾಗಿರುವ ನಮ್ಮ ಆಹಾರ ಶೈಲಿ. ಮೊದಲಿನವರಂತೆ ಕಬ್ಬು ಕಚ್ಚಿಕೊಂಡು ತಿನ್ನುವವರು, ಅಡಿಕೆಯಂಥ ಗಟ್ಟಿ ವಸ್ತುಗಳನ್ನು ಜಗಿಯುವವರ, ಪೇರಲೆ ಹಣ್ಣು ಕಚ್ಚಿ ತಿನ್ನುವವರ ಸಂಖ್ಯೆಯೇ ಕಡಿಮೆಯಾಗಿದೆ. ತಿನ್ನುವುದೆಲ್ಲವೂ ಮೆದುವಾದ, ಜಂಕ್‌ ಆಹಾರಗಳೇ. ಇದರಿಂದ ಒಡಸುಗಳು ಸಾಕಷ್ಟು ವಿಕಾಸವಾಗದೆ, ಬಿದ್ದು-ಹುಟ್ಟುವ ಹಲ್ಲುಗಳಿಗೆ ಜಾಗವೇ ಇರುವುದಿಲ್ಲ. ಇದರಿಂದ ಮಕ್ಕಳ ಬಾಯಲ್ಲಿ ಒಂದರಮೇಲೊಂದು ಹಲ್ಲು ಹುಟ್ಟುವುದು, ಸಾಲು ತಪ್ಪುವುದು, ವಕ್ರವಾಗುವುದು ಸಾಮಾನ್ಯ ಎನಿಸಿದೆ.

ಯಾವ ರೀತಿಯದು?

ಹೌದು, ಇದರಲ್ಲೂ ಹಲವಾರು ರೀತಿಯದ್ದು ಲಭ್ಯವಿದೆ. ಸಾಂಪ್ರದಾಯಕ ರೀತಿಯ ಲೋಹದ ಬ್ರೇಸ್‌, ಸೆರಾಮಿಕ್ ಬ್ರೇಸ್‌, ಲಿಂಗ್ವಲ್‌ ಬ್ರೇಸ್‌ ಮತ್ತು ಪಾರದರ್ಶಕ ಅಲೈನರ್‌ಗಳು ಎಂದು ಇವನ್ನು ವಿಂಗಡಿಸಬಹುದು. ಲೋಹದ ಬ್ರೇಸ್‌ಗಳು ಸಾಮಾನ್ಯವಾಗಿ ಹೆಚ್ಚಿನ ಜನರ ಹಲ್ಲುಗಳ ಮೇಲೆ ಕಾಣುವಂಥವು. ಪ್ರತಿಯೊಂದು ಹಲ್ಲಿಗೂ ಒಂದು ಬ್ರೇಸ್‌ ಅಂಟಿಸಿ, ಅದಕ್ಕೆ ತಂತಿಯ ಜಾಲದಿಂದ ಬಿಗಿಯಲಾಗುತ್ತದೆ. ಬಾಯಿ ತೆಗೆಯುತ್ತಿದ್ದಂತೆ ಎದ್ದು ಕಾಣುವಂಥ ಬ್ರೇಸ್‌ಗಳಿವು. ಸಿರಾಮಿಕ್‌ ಸಹ ಇದೇ ರೀತಿಯಲ್ಲಿ ಬಳಕೆಯಾಗುವುದಾದರೂ, ಪ್ರತೀ ಹಲ್ಲಿಗೂ ಅಂಟಿಸುವ ಲೋಹದ ಬ್ರೇಸ್‌ ಬದಲು, ಹಲ್ಲಿನ ಬಣ್ಣದ್ದೇ ಸಿರಾಮಿಕ್‌ ಬಳಕೆಯಾಗುತ್ತದಷ್ಟೇ. ಇದರಿಂದ ಬ್ರೇಸ್ ತೀರಾ ಎದ್ದು ಕಾಣುವುದಿಲ್ಲ. ಲಿಂಗ್ವಲ್‌ ಬ್ರೇಸ್‌ಗಳನ್ನು ಬಾಯೊಳಗೆ, ಅಂದರೆ ಹಲ್ಲಿನ ಹಿಂಬದಿಯಲ್ಲಿ ಹಾಕಲಾಗುತ್ತದೆ. ಇದು ಒಂದಿನಿತೂ ಹೊರಗೆ ಕಾಣುವುದಿಲ್ಲ. ಕ್ಲಿಯರ್‌ ಅಲೈನರ್‌ಗಳು ಸಂಪೂರ್ಣ ಪಾರದರ್ಶಕ. ಆಯಾ ಹಲ್ಲುಗಳ ಅಳತೆಗೆ ಹೊಂದಿಸಿ ಇವುಗಳನ್ನು ಮಾಡಿ ಕೂರಿಸಲಾಗುತ್ತದೆ. ಬ್ರೇಸ್‌ ಹಾಕಿದ್ದು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ.

Beautiful Woman Pointing at Dental Braces on Red Background

ಎಷ್ಟು ದಿನ ಬೇಕು?

ಹಲ್ಲುಗಳ ಸಮಸ್ಯೆ ಏನು ಮತ್ತು ಎಷ್ಟು ತೀವ್ರ ಎನ್ನುವುದರ ಮೇಲೆ, ಚಿಕಿತ್ಸೆ ಪೂರ್ಣಗೊಳ್ಳುವುದಕ್ಕೆ ಎಷ್ಟು ಸಮಯ ಬೇಕು ಎಂಬುದು ನಿರ್ಧಾರವಾಗುತ್ತದೆ. ಕೆಲವೊಮ್ಮೆ ಆಯ್ಕೆ ಮಾಡಿಕೊಂಡ ಬ್ರೇಸ್‌ ಮೇಲೂ ಇದು ಅವಲಂಬಿತ ಆಗಿರುತ್ತದೆ. ಲೋಹದ ಬ್ರೇಸ್‌ಗಳು 18ರಿಂದ 24 ತಿಂಗಳುಗಳವರೆಗೆ ಸಮಯ ಬೇಡಿದರೆ, ಪಾರದರ್ಶಕ ಅಲೈನರ್‌ಗಳ ಸಮಯ 6ರಿಂದ 18 ತಿಂಗಳವರೆಗೂ ವ್ಯಾಪಿಸಬಹುದು.

ನೋವು ಮತ್ತು ಕಿರಿಕಿರಿ

ಯಾವುದೇ ರೀತಿಯ ಬ್ರೇಸ್‌ ಹಾಕಿದರೂ ಒಂದಿಷ್ಟು ನೋವು ಮತ್ತು ಕಿರಿಕಿರಿ ತಪ್ಪಿದ್ದಲ್ಲ. ಅದರಲ್ಲೂ ಮೊದಲಿಗೆ ಹಾಕಿದಾಗ, ಅದು ಒಗ್ಗುವುದಕ್ಕೆ ವಾರಗಟ್ಟಲೆ ಬೇಕಾಗುತ್ತದೆ. ಆವರೆಗೆ ಬಾಯಿ, ದಂತ, ಒಸಡು ಎಲ್ಲೆಲ್ಲೂ ನೋವು. ನಂತರ ತಿಂಗಳಿಗೊಮ್ಮೆ ಅದನ್ನು ಹೊಂದಿಸಿಕೊಳ್ಳಲು, ಚಿಕಿತ್ಸೆ ಎಷ್ಟು ಸರಿಯಾಗಿದೆ ನೋಡಲು ತಜ್ಞರಲ್ಲಿ ಹೋಗಲೇಬೇಕು. ಆಗಲೂ ಒಂದೆರಡು ದಿನ ನೋವು ಮತ್ತು ಕಿರಿಕಿರಿ ಕಟ್ಟಿಟ್ಟಿದ್ದು.

ಊಟದ ಪಥ್ಯ

ವರ್ಷಗಟ್ಟಲೆ ಪಾಲಿಸಬೇಕಾದ ಕ್ರಮಗಳಲ್ಲಿ ಇದೂ ಒಂದು. ತಿಂದರೆ ಆರೋಗ್ಯಕ್ಕೆ ಸಮಸ್ಯೆ ಎಂದಲ್ಲ, ತಿನ್ನುವುದಕ್ಕೆ ಕಷ್ಟ ಎನ್ನುವ ಕಾರಣಕ್ಕೆ ಪಾಲಿಸಬೇಕಾದ ಪಥ್ಯವಿದು. ಉದಾ, ಚಕ್ಕುಲಿ, ನಿಪ್ಪಟ್ಟು ಮುಂತಾದ ಗಟ್ಟಿ ತಿನಿಸುಗಳಿಂದ ಬ್ರೇಸ್‌ ಮುರಿಯುತ್ತದೆ. ಹೀಗೇ ಪದೇಪದೆ ಮುರಿಯುತ್ತಿದ್ದರೆ ಚಿಕಿತ್ಸೆಯ ಅವಧಿ ಇನ್ನಷ್ಟು ದೀರ್ಘವಾಗಬಹುದು. ಅಂಟಾದ ತಿನಿಸುಗಳು, ಸಕ್ಕರೆಭರಿತ ತಿಂಡಿಗಳು, ಗಮ್‌ ಅಥವಾ ಕ್ಯಾರಮಲ್‌ ಇರುವ ಚಾಕಲೇಟ್‌ ಇತ್ಯಾದಿಗಳು ಈ ಚಿಕಿತ್ಸೆ ಮುಗಿಯುವವರೆಗೆ ಮುಟ್ಟುವಂತಿಲ್ಲ.

Dental Braces clean

ಬಾಯಿಯ ಸ್ವಚ್ಛತೆ

ಇದಂತೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾದ್ದು. ಬಾಯಿ ತುಂಬಾ ಹರಿದಾಡುವ ತಂತಿ-ಬೇಲಿಯಂಥ ವಸ್ತುಗಳಿಂದಾಗಿ ಆಹಾರದ ತುಣುಕುಗಳು ಎಲ್ಲೆಂದರಲ್ಲಿ ಅಡಗಿ ಕೂರುತ್ತವೆ. ಪ್ರತಿ ಬಾರಿ ಊಟ-ತಿಂಡಿಯ ನಂತರ ಹಲ್ಲುಜ್ಜಲೇಬೇಕು. ಹಲ್ಲುಗಳ ನಡುವಿನ ಶುಚಿತ್ವಕ್ಕೆ ಸಣ್ಣ ಇಂಟ್ರಾಡೆಂಟಲ್‌ ಬ್ರಷ್‌ಗಳನ್ನು ಬಳಸಲೇಬೇಕು. ದಿನಕ್ಕೆ ಒಂದಿಷ್ಟು ಹೊತ್ತು ಬಾಯಿಯ ಸ್ವಚ್ಛತೆಗೆಂದೇ ಸಮಯ ಮೀಸಲಿಡಬೇಕಾಗುತ್ತದೆ. ಈ ಬಗ್ಗೆ ಉದಾಸೀನ ಮಾಡಿದಲ್ಲಿ ಹಲ್ಲುಗಳು ಎರ್ರಾಬಿರ್ರಿ ಹುಳುಕಾಗುವುದು ನಿಶ್ಚಿತ.

ದುಬಾರಿಯೇ?

ಎಲ್ಲವೂ ಅಲ್ಲ! ಕೆಲವು ಬ್ರೇಸ್‌ಗಳು ಅಷ್ಟೇನೂ ತುಟ್ಟಿಯಲ್ಲ. ಸಾಮಾನ್ಯವಾದ ಲೋಹದ ಬ್ರೇಸ್‌ಗಳು ಕೈಗೆಟುಕುವ ಬೆಲೆಯೇ ಆಗಿರುತ್ತವೆ. ಪಾರದರ್ಶಕ ಅಲೈನರ್‌ಗಳು ದುಬಾರಿ ಬೆಲೆಯವು. ದಂತ ವಿಮೆಯಲ್ಲಿ ಬ್ರೇಸ್‌ಗಳು ಸಾಮಾನ್ಯವಾಗಿ ಸೇರಿರುತ್ತವೆ. ಅದಿಲ್ಲದಿದ್ದರೆ, ವೈದ್ಯರಲ್ಲೇ ಕಂತುಗಳಲ್ಲಿ ಪಾವತಿಸುವ ಆಯ್ಕೆಯೂ ಇರುತ್ತದೆ. ಈ ಎಲ್ಲವನ್ನೂ ಮೊದಲೇ ತಿಳಿದುಕೊಂಡು, ಚಿಕಿತ್ಸೆಗೆ ಕೈ ಹಾಕುವುದು ಜಾಣತನ.

dental braces checkup

ತೆಗೆದ ಮೇಲೆ?

ಇಲ್ಲಪ್ಪಾ, ಮುಗಿಯುವುದಿಲ್ಲ! ಬ್ರೇಸ್‌ನಿಂದ ಮುಕ್ತಿ ಪಡೆದ ನಂತರವೂ ಹಲವಾರು ತಿಂಗಳುಗಳವರೆಗೆ ರಿಟೈನರ್‌ಗಳನ್ನು ಧರಿಸಬೇಕಾಗುತ್ತದೆ. ತಮ್ಮ ಹೊಸ ಸ್ಥಾನದಲ್ಲಿ ಹಲ್ಲುಗಳು ನಿಲ್ಲಬೇಕು ಎಂದರೆ ಇವು ಬೇಕು. ಹಲ್ಲುಗಳ ಸಮಸ್ಯೆ ಮತ್ತು ಚಿಕಿತ್ಸೆಯ ಆಧಾರದ ಮೇಲೆ ಎಷ್ಟು ಸಮಯದವರೆಗೆ ರಿಟೈನರ್‌ ಧರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇವುಗಳು ಬೇಕಾದಾಗ ತೆಗೆಯಬಲ್ಲ ಕ್ಲಿಪ್‌ಗಳಂತೆ ಇರುತ್ತವೆ. ಹಲ್ಲಿಗೆ ತೀರಾ ತೊಂದರೆಯನ್ನೇನೂ ನೀಡುವುದಿಲ್ಲ.

ಇದನ್ನೂ ಓದಿ: Weight Loss Tips: ಇದ್ದಕ್ಕಿದ್ದಂತೆ ದೇಹದ ತೂಕ ಇಳಿಸಲು ಹೋದರೆ ಏನಾಗುತ್ತದೆ ನೋಡಿ!

Continue Reading

ಆರೋಗ್ಯ

Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಪ್ರತಿ ಸಣ್ಣ ವಿಷಯಕ್ಕೂ ಡಿಜಿಟಲ್‌ ತಂತ್ರಜ್ಞಾನವನ್ನು ನೆಚ್ಚಿಕೊಂಡಿರುವ ನಮಗೆ ಪರದೆಯನ್ನು ನೋಡದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ! ಇದರ ಫಲವೋ ಎಂಬಂತೆ ಕಣ್ಣುಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ದೃಷ್ಟಿ ದೋಷಗಳು ಎಲ್ಲಾ ವಯೋಮಾನದವರಿಗೂ ಅಮರಿಕೊಳ್ಳುತ್ತಿವೆ. ನಮ್ಮ ನೇತ್ರಗಳ ಸುರಕ್ಷತೆಯನ್ನು (Eye protection in Digital world) ಖಾತ್ರಿ ಮಾಡಿಕೊಳ್ಳುವುದು ಹೇಗೆ?

VISTARANEWS.COM


on

Eye Protection
Koo

ಇತ್ತೀಚಿನ ವರ್ಷಗಳ ಸ್ಕ್ರೀನ್‌ ಬಳಕೆಯನ್ನು ಅನಿವಾರ್ಯ ವ್ಯಸನ ಎಂದು ಕರೆಯಬಹುದೇನೋ. ಕಾರಣಗಳು ಏನೇ ಇದ್ದರೂ, ಮೊಬೈಲ್‌ ಮತ್ತು ಕಂಪ್ಯೂಟರ್‌ ಬಳಕೆ ಎದ್ವಾತದ್ವಾ ಹೆಚ್ಚಿದೆ. ಎಳನೀರಿನಾತನಿಗೆ ಹಣ ಕೊಡುವುದರಿಂದ ಹಿಡಿದು, ನಿತ್ಯದ ಉದ್ಯೋಗದವರೆಗೆ ಎಲ್ಲವೂ ಡಿಜಿಟಲ್‌ ಮಯ. ಇವು ಕಂಪ್ಯೂಟರ್‌, ಟ್ಯಾಬ್‌, ಮೊಬೈಲ್‌ ಪರದೆಗೆ ಕಣ್ಣು ಕೀಲಿಸಿಕೊಂಡಿರುವ ಅನಿವಾರ್ಯತೆಯನ್ನು ತಂದೊಡ್ಡುತ್ತಿವೆ. ಇದರಿಂದ ಸಹಜವಾಗಿ ದೊಡ್ಡವರು ಚಿಕ್ಕವರೆನ್ನದೆ ಬಹಳಷ್ಟು ಮಂದಿಯಲ್ಲಿ ಕಣ್ಣಿನ ಸಮಸ್ಯೆ ಕಾಣಿಸುತ್ತಿದೆ. ಇದರಿಂದಾಗಿ ಕಣ್ಣುರಿ, ಕಣ್ಣುಗಳಲ್ಲಿ ಆಯಾಸ, ಕಣ್ಣು ಒಣಗಿದಂತಾಗುವುದು, ತಲೆನೋವು ಮುಂತಾದ ಹಲವಾರು ಸಮಸ್ಯೆಗಳನ್ನು (Eye protection in Digital world) ಕಾಣಿಸಿಕೊಳ್ಳುತ್ತಿವೆ.

Closeup of woman eye with visual effects

ಏಕೆ ಹೀಗೆ?

ಸಾಮಾನ್ಯವಾಗಿ ನಿಮಿಷಕ್ಕೆ 15-20 ಬಾರಿ ಕಣ್ಣು ಮಿಟುಕಿಸುತ್ತೇವೆ ನಾವು. ಅಂದರೆ, ನೀರಿನ ಕಣಗಳು ಕಣ್ಣನ್ನು ಪದೇಪದೆ ಶುಚಿಗೊಳಿಸಿ, ಕಣ್ಣುರಿ ಮತ್ತು ನೇತ್ರಗಳು ಒಣಗುವುದನ್ನು ತಪ್ಪಿಸುತ್ತವೆ. ಆದರೆ ಓದುವಾಗ, ಆಡುವಾಗ ಮತ್ತು ಕಂಪ್ಯೂಟರ್‌ ಪರದೆ ನೋಡುವಾಗ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತದೆ. ಪರದೆಯನ್ನು ನೋಡುವುದು, ಪುಸ್ತಕ ಓದಿದಷ್ಟು ಸರಳವಲ್ಲವಲ್ಲ. ಹಲವಾರು ಬಣ್ಣಗಳು, ಥಟ್ಟೆಂದು ಚಲಿಸುವ ಅಕ್ಷರ ಅಥವಾ ಚಿತ್ರಗಳು, ಹೊಳೆಯುವ ಮೇಲ್ಮೈ, ಬೆಳಕು ಬೀರುವ ಪರದೆ- ಇವೆಲ್ಲಾ ಸೇರಿ ಕಣ್ಣಿನ ಶ್ರಮವನ್ನು ಹೆಚ್ಚು ಮಾಡುತ್ತವೆ. ಇದರಿಂದ ಹೆಚ್ಚುವ ಡಿಜಿಟಲ್‌ ಆಯಾಸವನ್ನು ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಎನ್ನಲಾಗುತ್ತದೆ.

ಏನು ಮಾಡಬಹುದು?

ನೇತ್ರಗಳ ರಕ್ಷಣೆಗೆ ಉಪಾಯವಿಲ್ಲವೆಂದಲ್ಲ. ಪರದೆ ನೋಡುವುದರಿಂದ ಆಗಾಗ ಬ್ರೇಕ್‌ ತೆಗೆದುಕೊಳ್ಳಿ. 20-20-20 ನಿಮಯವನ್ನು ಕಡ್ಡಾಯವಾಗಿ ಪಾಲಿಸಿ. ಅಂದರೆ, ಪ್ರತಿ 20 ನಿಮಿಷಗಳಿಗೆ ಒಮ್ಮೆ ಕನಿಷ್ಟ 20 ಅಡಿ ದೂರದ ವಸ್ತುವನ್ನು ಕನಿಷ್ಟ 20 ಸೆಕೆಂಡ್‌ಗಳ ಕಾಲ ವೀಕ್ಷಿಸಿ. ಪ್ರತಿ ಎರಡು ತಾಸುಗಳಿಗೊಮ್ಮೆ 15 ನಿಮಿಷದ ವಿರಾಮ ಅಗತ್ಯ. ಯಾವ ಕೋಣೆಯಲ್ಲಿ ಕಂಪ್ಯೂಟರ್‌ ಬಳಕೆ ಮಾಡುತ್ತೀರೋ, ಅಲ್ಲಿ ಆಗಾಗ ಹ್ಯುಮಿಡಿಫಯರ್‌ ಬಳಕೆ ಮಾಡಿ. ಇದರಿಂದ ಆ ಜಾಗದಲ್ಲಿ ಒಣಹವೆ ಇರುವುದಿಲ್ಲ. ಕಣ್ಣುಗಳು ಒಣಗುವುದೂ ಕಡಿಮೆಯಾಗುತ್ತದೆ.

sunbathing

ಸೂರ್ಯಸ್ನಾನ

ಏನೋ ವಿಪರೀತ ಚಿಕಿತ್ಸೆಯಲ್ಲ ಇದು. ಬೆಳಗಿನ ಎಳೆ ಬಿಸಿಲಿನಲ್ಲಿ ಕಣ್ಣು ಮುಚ್ಚಿಕೊಂಡು, ಕಣ್ಣಿಗೆ ಬಿಸಿಲು ತಾಗುವಂತೆ ಕೆಲವು ನಿಮಿಷ ನಿಲ್ಲುವುದಷ್ಟೆ. ಹೀಗೆ ನಿಲ್ಲುವಾಗ ಕನ್ನಡಕ, ಲೆನ್ಸ್‌ಗಳನ್ನು ತೆಗೆದಿರಿಸಬೇಕು. ಆದರೆ ಯಾವುದೇ ಕಾರಣಕ್ಕೂ ನೇರವಾಗಿ ಸೂರ್ಯನನ್ನು ದಿಟ್ಟಿಸುವಂತಿಲ್ಲ. ಕಣ್ಣು ಮುಚ್ಚಿ ನಿಂತಾಗ, ರೆಪ್ಪೆ ಬಿಸಿಯಾದರೆ ಸಾಕು. ಮಕ್ಕಳಿಗೂ ಈ ಕ್ರಮ ಉಪಯುಕ್ತ. ಹೀಗೆ ಮಾಡುವುದರಿಂದ ರೆಟಿನಾದಿಂದ ಬಿಡುಗಡೆಯಾಗುವ ಡೋಪಮಿನ್‌ ಚೋದಕಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ.

ಬೆಚ್ಚಗಿನ ಮಸಾಜ್‌

ದೀರ್ಘ ಕಾಲ ಕಂಪ್ಯೂಟರ್‌ ನೋಡುವ ಅನಿವಾರ್ಯತೆಯಿದ್ದರೆ, ಬೆಚ್ಚಗಿನ ನೀರಲ್ಲಿ ಮೃದು ಮತ್ತು ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಅದ್ದಿ, ಹಿಂಡಿ. ಅದು ಬೆಚ್ಚಗಿರುವವರೆಗೆ ಕಣ್ಣಿಗೆ ಇರಿಸಿಕೊಳ್ಳಿ. ಒಂದೊಂದು ಕಣ್ಣಿಗೂ ಕನಿಷ್ಟ ಮೂರು ಬಾರಿ ಮಾಡಿ. ಇದರಿಂದ ಕಣ್ಣಿನ ಆಯಾಸ ಕಡಿಮೆ ಮಾಡಬಹುದು. ಮಾತ್ರವಲ್ಲ, ಕೈ ಶುದ್ಧಗೊಳಿಸಿಕೊಳ್ಳಿ. ಕಣ್ಣಿನ ಸುತ್ತಲೂ ಮೃದುವಾಗಿ ಮಸಾಜ್‌ ಮಾಡಿ. ಅಗತ್ಯವಿದ್ದರೆ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಮಸಾಜ್‌ಗೆ ಉಪಯೋಗಿಸಬಹುದು. ಇದರಿಂದ ಈ ಭಾಗದಲ್ಲಿ ರಕ್ತ ಸಂಚಾರ ವೃದ್ಧಿಸಿ. ಆಯಾಸ ಕಡಿಮೆಯಾಗುತ್ತದೆ. ಕಣ್ಣಿನ ಸುತ್ತಲೂ ಉಬ್ಬಿದಂತಾಗಿದ್ದರೆ, ಅಲೊವೇರಾ ಜೆಲ್‌ ಹಾಕಿಯೂ ಮಸಾಜ್‌ ಮಾಡಬಹುದು. ಆದರೆ ಇವೆಲ್ಲಾ ಕಣ್ಣಿನ ಹೊರಭಾಗಕ್ಕೇ ಸೀಮಿತಗೊಳಿಸಬೇಕು. ವೈದ್ಯರು ಕೊಟ್ಟ ಡ್ರಾಪ್ಸ್‌ ಬಿಟ್ಟರೆ, ಇನ್ನೇನ್ನೇನ್ನೂ ಕಣ್ಣೊಳಗೆ ಹಾಕುವಂತಿಲ್ಲ.

Close-up human eye, lens, cornea and brown iris.

ದೂರವಿರಲಿ

ಈ ಪರದೆಗಳನ್ನು ಅತ್ಯಂತ ಹತ್ತಿರದಿಂದ ನೋಡುವ ಅಗತ್ಯವಿಲ್ಲ. ಕಣ್ಣಿನಿಂದ ಇವು ಕನಿಷ್ಟ 25 ಇಂಚಾದರೂ ದೂರವಿರಬೇಕು. ಅಂದಾಜಿಗೆ ಹೇಳುವುದಾದರೆ ಒಂದು ತೋಳಿನಷ್ಟು ದೂರವಿರಬೇಕು. ಕಂಪ್ಯೂಟರ್‌ ಪರದೆಯ ನಡುವಿನ ಭಾಗವು ಕಣ್ಣಿನ ಮಟ್ಟಕ್ಕಿಂದ 10 ಡಿಗ್ರಿಯಷ್ಟು ಕೆಳಗಿದ್ದರೆ ಸೂಕ್ತ. ಪರದೆಯ ಹೊಳಪನ್ನು ಕಡಿಮೆ ಮಾಡಲು ಸ್ಕ್ರೀನ್‌ ಫಿಲ್ಟರ್‌ ಬಳಸುವುದು ಒಳ್ಳೆಯದು. ಮಾತ್ರವಲ್ಲ, ಸುತ್ತಲಿನ ಬೆಳಕಿಗಿಂತ ಪರದೆಯ ಬೆಳಕು ಕಡಿಮೆಯೇ ಇರಬೇಕು. ನಿಯಮಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಂಡರೆ, ಮುಂದಾಗುವ ತೊಂದರೆಗಳನ್ನು ತಪ್ಪಿಸುವುದಕ್ಕೆ ಅನುಕೂಲ. ಜೊತೆಗೆ, ಕಂಪ್ಯೂಟರ್‌ ಬಳಕೆಗೆ ಸರಿಹೊಂದುವಂಥ ಕನ್ನಡಕ ಧರಿಸುವ ಬಗ್ಗೆ ವೈದ್ಯರಲ್ಲಿ ಚರ್ಚಿಸಬಹುದು. ಡಿಜಿಟಲ್‌ ಜಗತ್ತಿನಲ್ಲಿ ಕಣ್ಣುಗಳ ರಕ್ಷಣೆ ಮಾಡಿಕೊಳ್ಳುವುದು ನಂನಮ್ಮ ಹೊಣೆ.

ಇದನ್ನೂ ಓದಿ: Eye protection in Digital world: ಪರದೆಗಳಿಂದ ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Continue Reading

ಬೆಂಗಳೂರು

Glanders Disease: ಬೆಂಗಳೂರಿನ ಕುದುರೆಯಲ್ಲಿ ಮಾರಕ ಗ್ಲಾಂಡರ್ಸ್ ರೋಗ ಪತ್ತೆ; ಡಿಜಿ ಹಳ್ಳಿ ನಿಷೇಧಿತ ವಲಯ, ಮನುಷ್ಯರಿಗೂ ಬರಬಹುದು!

Glanders Disease: ರೋಗದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಇಲ್ಲಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕುದುರೆ ಹಾಗೂ ಕತ್ತೆಗಳಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ಈ ನಿರ್ಬಂಧ ಹಾಕಲಾಗಿದೆ.

VISTARANEWS.COM


on

glanders disease bangalore horse
ಪ್ರಾತಿನಿಧಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿರುವ (DG Halli) ಕುದುರೆಯೊಂದರಲ್ಲಿ (Horse) ಮಾರಕ ಗ್ಲಾಂಡರ್ಸ್‌ ರೋಗ (Glanders Disease) ಪತ್ತೆಯಾಗಿದೆ. ಇದೊಂದು ಸೋಂಕು (infectious) ರೋಗವಾಗಿರುವುದರಿಂದ, ಡಿ.ಜೆ.ಹಳ್ಳಿ ಸುತ್ತಮುತ್ತ `ರೋಗಪೀಡಿತ ವಲಯ’ ಎಂದು ಘೋಷಣೆ ಮಾಡಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಖಲೀದ್ ಷರೀಫ್ ಬಿನ್ ಎ.ಜೆ ಷರೀಫ್ ಎಂಬವರ ಕುದುರೆಯಲ್ಲಿ ಈ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಲಾಗಿದೆ. 5ರಿಂದ 25 ಕಿ.ಮೀ. ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ.

ರೋಗದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಇಲ್ಲಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕುದುರೆ ಹಾಗೂ ಕತ್ತೆಗಳಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ಈ ನಿರ್ಬಂಧ ಹಾಕಲಾಗಿದೆ.

ಏನಿದು ಗ್ಲಾಂಡರ್ಸ್ ರೋಗ?

ಗ್ಲಾಂಡರ್ಸ್ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆ. ಇದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳಿಗೆ ಬರುತ್ತದೆ. ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ. ಇದು ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಗಂಟುಗಳು ಮತ್ತು ಹುಣ್ಣುಗಳನ್ನು ಉಂಟುಮಾಡುತ್ತದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಕೂಡ ಸಂಭವಿಸುತ್ತದೆ.

ಈ ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸೋಂಕು ಪೀಡಿತ ಪ್ರಾಣಿಯ ಸಂಪರ್ಕಕ್ಕೆ ಬರುವ ಪ್ರಾಣಿ ನಿರ್ವಾಹಕರು ಅಥವಾ ಇತರರು ಸೋಂಕಿಗೆ ತುತ್ತಾಗುವ ಅಪಾಯವಿದೆ. ನಿಯಮಿತ ತಪಾಸಣೆಯ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾಣಿ ನಿರ್ವಾಹಕರ ಕಡ್ಡಾಯ ತಪಾಸಣೆ

ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆಯಾದ ಹಿನ್ನಲೆಯಲ್ಲಿ ಜನರು ಯಾವುದೇ ರೋಗಲಕ್ಷಣಗಳನ್ನು ತೋರಿಸಿದರೆ ಮಾತ್ರ ಪರೀಕ್ಷೆಗೆ ಒಳಪಡಬೇಕು ಎಂದು ಸಚಿವಾಲಯ ಆದೇಶಿಸಿದೆ. ಆದರೂ ನಾವು ಎಲ್ಲಾ ಪ್ರಾಣಿ ಹ್ಯಾಂಡ್ಲರ್‌ಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುತ್ತೇವೆ. ಈ ಸೋಂಕು ತಗುಲಿದರೆ ಇದು ಅವರ ಅಂಗಗಳ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು. ಬೆಂಗಳೂರಿನಲ್ಲಿ 1,200 ಕುದುರೆಗಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೇಸ್‌ ಕುದುರೆಗಳ ಪರೀಕ್ಷೆಯ ವರದಿಯನ್ನು ಕೇಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: CCB Raid : ರೇಸ್‌ ಕುದುರೆಗಳ ಹಿಂದೆ ಬಿದ್ದ ಸಿಸಿಬಿ; ಟರ್ಫ್ ಕ್ಲಬ್‌ ರೇಸ್‌ ಕೋರ್ಸ್‌ ಬೇಟೆಯಲ್ಲಿ ಸಿಕ್ಕಿದ್ದು ಎಷ್ಟು?

Continue Reading

ಆರೋಗ್ಯ

Sugarcane Milk Benefits: ಬಿಸಿಲಲ್ಲೂ ತಾಜಾತನ ನೀಡುವ ಕಬ್ಬಿನಹಾಲು ದೇವರು ಕೊಟ್ಟ ಅಮೃತ!

ಸಕ್ಕರೆ ಹಾಕದೆಯೇ ಸಿಹಿಯಾಗಿರುವ, ಕುಡಿದರೆ, ತಂಪಾದ ಅನುಭವ ನೀಡುವ ಪಾನೀಯಗಳ ಪೈಕಿ ಕಬ್ಬಿನ ಹಾಲೂ ಒಂದು. ರುಚಿಯಾದ ಕಬ್ಬಿನ ಹಾಲು (sugarcane milk benefits) ಸಾಮಾನ್ಯವಾಗಿ ಎಲ್ಲ ಜಾಗಗಳಲ್ಲೂ ಸುಲಭವಾಗಿ ಸಿಗುತ್ತದೆ. ಜೊತೆಗೆ ನಿಂಬೆ, ಶುಂಠಿ, ಪುದಿನ ಮತ್ತಿತರ ನೈಸರ್ಗಿಕ ಫ್ಲೇವರ್‌ಗಳಲ್ಲೂ ಇದು ಸಿಗುವುದರಿಂದ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭಗಳೂ ಇವೆ.

VISTARANEWS.COM


on

Sugarcane Milk
Koo

“ಬಿಸಿಲೋ ಬಿಸಿಲು.” ಎಲ್ಲೇ ಹೋಗಲಿ, ಈ ಮಾತು ನಿತ್ಯವೂ ಮಂತ್ರದಂತೆ ನಿಮ್ಮ ಕಿವಿಗೆ ಕೇಳುತ್ತಲೇ ಇರುತ್ತದೆ. ನೀವೂ ನಿತ್ಯವೂ ಹೇಳುತ್ತಲೇ ಇರುತ್ತೀರಿ. ಬೇಸಿಗೆಯಲ್ಲಿ ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು, ದೇಹವನ್ನು ತಂಪಾಗಿಡಲು, ನೀರಿನ ಜೊತೆಗೆ, ಏನೇನೋ ಪಾನಕಗಳು, ಎಳನೀರು, ಜ್ಯೂಸ್‌ಗಳು, ಹಣ್ಣುಗಳು, ಐಸ್‌ಕ್ರೀಂಗಳನ್ನು ತಿಂದು ಕುಡಿದು ಮಾಡುತ್ತಿರುತ್ತೇವೆ. ಇವುಗಳಲ್ಲಿ ಕೆಲವು ಬಾಯಿಗೆ ಮಾತ್ರ ತಂಪಾದರೆ, ಇನ್ನೂ ಕೆಲವು ದೇಹಕ್ಕೂ ತಂಪು. ದೇಹಕ್ಕೆ ತಂಪಾಗಿರುವ ನೈಸರ್ಗಿಕವಾದ ತಂಪು ಪಾನೀಯಗಳು ಯಾವಾಗಲೂ ಆರೋಗ್ಯಕ್ಕೆ ಹಿತ. ಇಂಥವುಗಳ ಪೈಕಿ, ಸಕ್ಕರೆ ಹಾಕದೆಯೇ ಸಿಹಿಯಾಗಿರುವ, ಕುಡಿದರೆ, ತಂಪಾದ ಅನುಭವ ನೀಡುವ ಪಾನೀಯಗಳ ಪೈಕಿ ಕಬ್ಬಿನ ಹಾಲೂ ಒಂದು. ರುಚಿಯಾದ ಕಬ್ಬಿನ ಹಾಲು ಸಾಮಾನ್ಯವಾಗಿ ಎಲ್ಲ ಜಾಗಗಳಲ್ಲೂ ಸುಲಭವಾಗಿ ಸಿಗುತ್ತದೆ. ಜೊತೆಗೆ ನಿಂಬೆ, ಶುಂಠಿ, ಪುದಿನ ಮತ್ತಿತರ ನೈಸರ್ಗಿಕ ಫ್ಲೇವರ್‌ಗಳಲ್ಲೂ ಇದು ಸಿಗುವುದರಿಂದ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭಗಳೂ ಇವೆ. ಬನ್ನಿ, ಕಬ್ಬಿನ ಹಾಲನ್ನು ಬೇಸಿಗೆಯಲ್ಲಿ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ (sugarcane milk benefits) ಎಂಬುದನ್ನು ನೋಡೋಣ.


fresh Sugarcane Milk
  • ಬಿಸಿಲಿಗೆ ಸುಸ್ತಾಗಿದ್ದೀರಾ? ನಿಮ್ಮ ಶಕ್ತಿಯನ್ನು ಒಡನೆಯೇ ಚಿಮ್ಮುವಂತೆ ಮಾಡಲು ನೀವೊಂದು ಲೋಟ ಕಬ್ಬಿನ ಹಾಲು ಕುಡಿಯಿರಿ. ಆಸ್ಪತ್ರೆಯಲ್ಲಿ ಒಂದು ಬಾಟಲಿ ಗ್ಲುಕೋಸ್‌ ಹಾಕಿಸಿಕೊಂಡ ಹಾಗೆ ನಿಮಗೆ ದಿಢೀರ್‌ ಚೈತನ್ಯ, ಉಲ್ಲಾಸ ಬರುತ್ತದೆ. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಗ್ಲುಕೋಸ್‌ ಹಾಗೂ ಎಲೆಕ್ಟ್ರೋಲೈಟ್‌ಗಳು ಇರುವುದರಿಂದ ಇದು ದಿಢೀರ್‌ ಶಕ್ತಿವರ್ಧನೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ತಂಪು ಮಾಡುವ ಶಕ್ತಿ ಇದಕ್ಕಿದೆ.
Woman having hot flashes and sweats
  • ಚರ್ಮದ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದೆಯೇ? ಹಾಗಿದ್ದರೆ ನೀವು ಕಬ್ಬಿನ ಹಾಲು ಸೇವಿಸಿ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು, ಮೆಗ್ನೀಶಿಯಂ, ಕಬ್ಬಿಣಾಂಶ ಹಾಗೂ ಬಗೆಬಗೆಯ ಎಲೆಕ್ಟ್ರೋಲೈಟ್‌ಗಳು ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ದೇಹದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ. ಚರ್ಮ ಸುಕ್ಕಾಗುವುದನ್ನೂ ತಡೆಯುತ್ತದೆ.
  • ಕಬ್ಬಿನಹಾಲಿಗೆ ನಮ್ಮ ದೇಹದಿಂದ ಬೇಡವಾದ ಉಪ್ಪಿನಂಶ ಹಾಗೂ ನೀರನ್ನು ಹೊರಗೆ ಕಳಿಸುವ ತಾಕತ್ತಿದೆ. ಇದರಿಂದ ಕಿಡ್ನಿಯ ಆರೋಗ್ಯ ಹೆಚ್ಚಾಗುತ್ತದೆ. ಮೂತ್ರನಾಳದಲ್ಲಿ ಇನ್‌ಫೆಕ್ಷನ್‌ ಆದಾಗಲೂ ಕಬ್ಬಿನಹಾಲು ಕುಡಿಯುವುದರಿಂದ ಸಮಸ್ಯೆ ಹತೋಟಿಗೆ ಬರುತ್ತದೆ.
Piece of Sugarcane Juice
  • ಕಬ್ಬಿನಹಾಲಿನಲ್ಲಿರುವ ಫ್ಲೇವನ್‌ಗಳು ಕ್ಯಾನ್ಸರ್‌ ವಿರುದ್ಧ ಹೋರಾಡಬಲ್ಲ ತಾಕತ್ತನ್ನು ಹೊಂದಿವೆ ಎಂಬುದನ್ನಾ ಸಾಕಷ್ಟು ಸಂಶೋಧನೆಗಳು ಬಹಿರಂಗಪಡಿಸಿವೆ. ಇವು ಕ್ಯಾನ್ಸರ್‌ ಅಂಗಾಂಶ ಬೆಳೆಯುವುದನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ದೇಹದ ಇತರ ಭಾಗಗಳಿಗೆ ಹರಡುವುದನ್ನು ತಪ್ಪಿಸುತ್ತದೆ.
  • ಕಬ್ಬಿನಹಾಲಿನಲ್ಲಿ ಸಾಕಷ್ಟು ಪೊಟಾಶಿಯಂ ಇರುವುದರಿಂದ ಇದು ಜೀರ್ಣಕ್ರಿಯೆಗೆ ಸಾಕಷ್ಟು ಸಹಾಯ ಮಾಡುತ್ತದೆ. ದೇಹದ ಪಿಎಚ್‌ ಮಟ್ಟವನ್ನು ಸರಿದೂಗಿಸಿ, ಹೊಟ್ಟೆಯನ್ನು ಇನ್‌ಫೆಕ್ಷನ್‌ ಆಗದಂತೆ ಕಾಪಾಡುತ್ತದೆ.

ಇದನ್ನೂ ಓದಿ: Oil Pulling: ಆಯಿಲ್‌ ಪುಲ್ಲಿಂಗ್‌; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!

Continue Reading
Advertisement
Raj Kundra Shilpa Shetty
ಕ್ರೈಂ7 mins ago

Raj Kundra: ಬಿಟ್‌ಕಾಯಿನ್‌ ಪೋಂಜಿ ಸ್ಕೀಮ್‌; ಇಡಿಯಿಂದ ರಾಜ್‌ ಕುಂದ್ರಾ ₹97 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Jai Shree Ram slogan Rahul Gandhi instigated anti Hindu activities says Pralhad Joshi
ರಾಜಕೀಯ22 mins ago

Jai Shree Ram slogan: ಹಿಂದೂ ವಿರೋಧಿ ಕೃತ್ಯಗಳಿಗೆ ರಾಹುಲ್ ಗಾಂಧಿ ಕುಮ್ಮಕ್ಕು: ಜೋಶಿ ಕಿಡಿ

Road Accident
ಕ್ರೈಂ23 mins ago

Road Accident : ಸೈಕಲ್‌ಗೆ ಗುದ್ದಿದ ಕಾರು, ನರಳಾಡಿ ವ್ಯಕ್ತಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ಬೈಕ್‌ ಸವಾರ ಬಲಿ

Abhradeep Saha
ಸಿನಿಮಾ35 mins ago

Abhradeep Saha: ʻಕೆಜಿಎಫ್ʼ ಸಿನಿಮಾವನ್ನು ಕಿರುಚಾಡುತ್ತಲೇ ಹಾಡಿ ಹೊಗಳಿದ್ದ ಯೂಟ್ಯೂಬರ್ ನಿಧನ

Aamir Khan Deepfake video promoting a political party viral
ಬಾಲಿವುಡ್37 mins ago

Aamir Khan: ಕಾಂಗ್ರೆಸ್‌ಗೆ ಮತ ನೀಡಿ ಎಂದು ಆಮೀರ್ ಖಾನ್ ಮನವಿ ಮಾಡಿದರೆ? ಎಫ್‌ಐಆರ್‌ ಏಕೆ?

VVPAT Verification
ದೇಶ48 mins ago

VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

Jai Shree Ram slogan Siddaramaiah and DK Shivakumar are nurturing terrorists in Bengaluru accuses Ashok
ಕರ್ನಾಟಕ50 mins ago

Jai Shree Ram slogan: ಬೆಂಗಳೂರಿನಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿರುವ ಸಿದ್ದರಾಮಯ್ಯ, ಡಿಕೆಶಿ: ಅಶೋಕ್‌ ಆರೋಪ

IPL 2024
ಕ್ರಿಕೆಟ್54 mins ago

IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

Self Harming In chitradurga
ಚಿತ್ರದುರ್ಗ1 hour ago

Self Harming : ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

Saffron Row
ದೇಶ1 hour ago

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌