Bangalore Pagent News: ಯಶಸ್ವಿಯಾದ ಮಿಸೆಸ್ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ 2023 ಪೇಜೆಂಟ್‌ - Vistara News

ಫ್ಯಾಷನ್

Bangalore Pagent News: ಯಶಸ್ವಿಯಾದ ಮಿಸೆಸ್ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ 2023 ಪೇಜೆಂಟ್‌

ಮಹಿಳಾ ದಿನಾಚಾರಣೆಗೆ ತುಸು ಮುನ್ನವೇ ನಡೆದ ಮಿಸೆಸ್‌ ಇಂಟರ್‌ನ್ಯಾಷನ್‌ ಸೂಪರ್‌ ಕ್ವೀನ್‌ ಪೇಜೆಂಟ್‌ನಲ್ಲಿ ಹೋಮ್‌ ಮೇಕರ್‌ ರಾಧಿಕಾ ಕಿರೀಟ ಮುಡಿಗೇರಿಸಿಕೊಂಡರೆ, ಕ್ಲಾಸಿಕ್‌ ವಿಭಾಗದಲ್ಲಿ ರಶ್ಮಿ ಟೈಟಲ್‌ ವಿಜೇತರಾದರು. ಈ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Bangalore Pagent news
ಚಿತ್ರಗಳು: ಮಿಸೆಸ್‌ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ 2023 ಚಿತ್ರಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಹಿಳಾ ದಿನಾಚಾರಣೆಗೆ ಮುನ್ನವೇ ನಡೆದ ಮಿಸೆಸ್‌ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ 2023ರ ಪೇಜೆಂಟ್‌ನಲ್ಲಿ ಹೋಮ್‌ ಮೇಕರ್‌ ರಾಧಿಕಾ ವಿಜೇತರಾಗಿ ಕಿರೀಟ ಮುಡಿಗೇರಿಸಿಕೊಂಡರು. ಮಾಡೆಲ್‌ ನಂದಿತಾ ಸಂದೀಪ್‌ ನಂತರದ ಸ್ಥಾನ ಪಡೆದರು. ಕ್ಲಾಸಿಕ್‌ ವಿಭಾಗದಲ್ಲಿ ರಶ್ಮಿ ಕಿರೀಟವನ್ನು ತನ್ನದಾಗಿಸಿಕೊಂಡರೇ, ಫೋಟೋಜೆನಿಕ್‌ ವಿಭಾಗದಲ್ಲಿ ಪತ್ರಕರ್ತೆ ವ್ಯುಮಾ ಶರ್ಮಾ ಭಾಗವಹಿಸಿ ಸಬ್‌ಟೈಟಲ್‌ ಪಡೆದರು. ಮಿಸೆಸ್‌ ಕಾಂಜಿನಿಯಾಲಿಟಿ ಸಬ್‌ಟೈಟಲ್‌ ಸ್ಟೈಲಿಸ್ಟ್‌ ನೈನಾ ಅವರದ್ದಾಯಿತು. ಇದರೊಂದಿಗೆ ನಾನಾ ಸಬ್‌ಟೈಟಲ್‌ಗಳನ್ನು ಆಯ್ಕೆಯಾದವರಿಗೆ ನೀಡಲಾಯಿತು.

Bangalore Pagent news

ಜ್ಯೂರಿ ಪ್ಯಾನೆಲ್‌ನಲ್ಲಿ ವೀಣಾ ಜೈನ್‌ ಜೊತೆ ಪ್ರಿಯಾಂಕಾ ಉಪೇಂದ್ರ

ಮಿಸೆಸ್ ಇಂಡಿಯಾ ಗ್ಲೋಬ್‌ ವೀಣಾ ಜೈನ್‌ ಈ ಪೇಜೆಂಟ್‌ ನ್ಯಾಷನಲ್‌ ಡೈರೆಕ್ಟರ್‌ ಆಗಿದ್ದು, ಇವರ ಜೊತೆಗೆ ಜ್ಯೂರಿ ಪ್ಯಾನೆಲ್‌ನಲ್ಲಿ ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿ, ಸ್ಯಾಂಡಲ್‌ವುಡ್‌ ತಾರೆ ಪ್ರಿಯಾಂಕಾ ಉಪೇಂದ್ರ ಹಾಗೂ ನಾಥ್‌ ಭಾಗವಹಿಸಿದ್ದರು.

Bangalore Pagent news

ಮಿಸೆಸ್‌ ಗ್ಲೋಬಲ್‌ ಇಂಡಿಯಾ ವೀಣಾ ಜೈನ್‌ ಫ್ಯಾಷನ್‌ ಮಾತು

ಸಾಮಾನ್ಯ ಮಹಿಳೆಯರು ಕೂಡ ಪೇಜೆಂಟ್‌ನಲ್ಲಿ ಭಾಗವಹಿಸಬಹುದು. ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಸ್ವಾವಲಂಬಿಯಾಗಬಹುದು ಎಂದು ಮಿಸೆಸ್‌ ಗ್ಲೋಬ್‌ ಇಂಡಿಯಾ ವೀಣಾ ಜೈನ್‌ ಅಭಿಪ್ರಾಯಪಟ್ಟರು.

ಈ ಬಾರಿಯ ನ್ಯಾಷನಲ್‌ ಲೆವೆಲ್‌ನ ಮಿಸೆಸ್‌ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ ಆಗಿರುವ ಸಂಧ್ಯಾ ಶರ್ಮಾ ಇನ್ನುಳಿದ ವಿಜೇತರಿಗೆ ಸ್ಯಾಶ್‌ ಹಾಗೂ ಕಿರೀಟ ತೊಡಿಸಿ, ಅಭಿನಂದಿಸಿದರು.

Bangalore Pagent news

ಫ್ಯಾಷನ್‌ ಲೋಕದ ಅಭಿವೃದ್ಧಿ ಬಗ್ಗೆ ಮಾತನಾಡಿದ ರಾಜೇಶ್‌ ಶೆಟ್ಟಿ

ಫ್ಯಾಷನ್‌ ಶೋ ಡೈರೆಕ್ಟರ್‌, ಕೊರಿಯಗ್ರಾಫರ್‌, ಡಿಸೈನರ್‌, ಸ್ಟೈಲಿಸ್ಟ್‌ ಆಲ್‌ರೌಂಡರ್‌ ರಾಜೇಶ್‌ ಶೆಟ್ಟಿ ಅವರು ಮಾತನಾಡಿ, ಇಂದು ಬೆಂಗಳೂರು ಫ್ಯಾಷನ್‌ ಲೋಕ ಅಭಿವೃದ್ಧಿಗೊಳ್ಳುತ್ತಿದೆ. ಇದು ಸಂತಸದ ವಿಚಾರ ಎಂದು ತಿಳಿಸಿದರು.

Bangalore Pagent news

ನಟಿ ಪ್ರಿಯಾಂಕಾ ಉಪೇಂದ್ರ ಮಾತು

ನಟಿ ಪ್ರಿಯಾಂಕಾ ಉಪೇಂದ್ರ ವಿಜೇತರಿಗೆ ಸ್ಯಾಶ್‌ ಹಾಗೂ ಕಿರೀಟ ತೊಡಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತಾವು ಪೇಜೆಂಟ್‌ ಮೂಲಕವೇ ನಟನೆಗೆ ಆಗಮಿಸಿದ್ದಾಗಿ ತಿಳಿಸಿದರು. ನೆರೆದಿದ್ದ ಮಾಡೆಲ್‌ಗಳನ್ನು ಹುರಿದುಂಬಿಸಿದರು.

Bangalore Pagent news

ಮಾಡೆಲ್‌ಗಳ ಫ್ಯಾಷನ್‌ ಶೋ

ಈ ಪೇಜೆಂಟ್‌ ಜೊತೆಜೊತೆಯೇ ರಾಜೇಶ್‌ ಶೆಟ್ಟಿ ನೇತೃತ್ವದಲ್ಲಿ ಮಾಡೆಲ್‌ಗಳ ಫ್ಯಾಷನ್‌ ಶೋ ಕೂಡ ನಡೆಯಿತು. ಆಕರ್ಷಕ ಗೋಲ್ಡನ್‌ ಗೌನ್‌ನಲ್ಲಿದ್ದ ಮಾಡೆಲ್‌ಗಳ ಹೇರ್‌ ಸ್ಟೈಲಿಂಗ್‌ ನೋಡುಗರ ಗಮನ ಸೆಳೆಯಿತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Floral Dress Fashion: ಸೀಸನ್‌ನಲ್ಲಿ ಟ್ರೆಂಡಿಯಾದ ಆಕರ್ಷಕ ಫ್ಲೋರಲ್‌ ಡ್ರೆಸ್‌ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

Water for Health: ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ?

VISTARANEWS.COM


on

drink water
Koo

ನೀರಿನ ವಿಷಯ ಪ್ರಸ್ತಾಪ (Water for Health) ಆಗುತ್ತಿದ್ದಂತೆ, ದಿನಕ್ಕೆಂಟು ಗ್ಲಾಸ್‌ ನೀರು ಕುಡಿಯಿರಿ ಎಂಬ ಸಲಹೆ ಎಲ್ಲೆಡೆಯಿಂದ ಹರಿದು ಬರುತ್ತದೆ. ಎಲ್ಲರ ದೇಹವೂ ಒಂದೇ ತೆರನಾಗಿ ಇರುವುದಿಲ್ಲ ಎಂದಾದರೆ, ಎಲ್ಲರಿಗೂ ಅಷ್ಟೇ ಪ್ರಮಾಣದಲ್ಲಿ ನೀರು ಕುಡಿಯುವುದು ಸಾಕಾದೀತೇ ಅಥವಾ ಬೇಕಾದೀತೆ? ನಮ್ಮ ದೇಹಕ್ಕೆಷ್ಟು ನೀರು ಅಗತ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆ? ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ? ನಮಗೆಷ್ಟು ನೀರು ಬೇಕು ಮತ್ತು ಸಾಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಲ್ಲಿದೆ ಉಪಯುಕ್ತ ಮಾಹಿತಿ.

Pure water Rules of Drinking Water for a Healthier You

ಪರಿಣಾಮ ಬೀರುವುದು ಯಾವುದು?

ನಮ್ಮ ದೈನಂದಿನ ನೀರಿನ ಅಗತ್ಯವೆಷ್ಟು ಎನ್ನುವುದು ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಎತ್ತರದ ಪ್ರದೇಶದಲ್ಲಿ ಇರುವವರು, ದೈಹಿಕವಾಗಿ ಕಠಿಣ ಕೆಲಸಗಳನ್ನು ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದಲ್ಲದೆ, ದೇಹದಲ್ಲಿ ದೊಡ್ಡದಾಗಿರುವವರು, ಸ್ನಾಯುಗಳನ್ನು ಹೆಚ್ಚು ಬೆಳೆಸಿಕೊಂಡವರಿಗೆ ಅಧಿಕ ನೀರು ಬೇಕು. ಫಿಟ್‌ನೆಟ್‌ ತರಬೇತಿಯಲ್ಲಿ ಇದ್ದರೆ, ಉಷ್ಣತೆ ಮತ್ತು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿದ್ದರೆ ನೀರಿನ ಆವಶ್ಯಕತೆ ಹೆಚ್ಚಿರುತ್ತದೆ. ಎತ್ತರದ ಪ್ರದೇಶದಲ್ಲಿ ಉಸಿರಾಟ ತೀವ್ರವಾಗಿದ್ದು, ಮೂತ್ರದ ಉತ್ಪಾದನೆಯೂ ಹೆಚ್ಚಾಗಿರುತ್ತದೆ. ಹಾಗಾಗಿ ನೀರು ಹೆಚ್ಚು ಬೇಕು. ಜ್ವರ, ವಾಂತಿ, ಅತಿಸಾರದಂಥ ಆರೋಗ್ಯ ಏರುಪೇರಿನಲ್ಲಿ ನೀರು ಕುಡಿದಷ್ಟಕ್ಕೂ ಬೇಕು. ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ತಿಂದಿದ್ದರೆ, ಅಧಿಕ ಪ್ರೊಟೀನ್‌ ತಿಂದರೆ ಹೆಚ್ಚು ನೀರನ್ನು ದೇಹಕ್ಕೆ ಒದಗಿಸಲೇಬೇಕು. ಗರ್ಭಿಣಿಯರು ತಮ್ಮ ಮತ್ತು ಶಿಶುವಿನ ಆರೋಗ್ಯಕ್ಕಾಗಿ ಹೆಚ್ಚಿನ ನೀರು ಕುಡಿಯುವುದು ಮುಖ್ಯ. ಹಾಲುಣಿಸುವ ತಾಯಂದಿರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು.
ಯಾರಿಗೆ ಮತ್ತು ಎಂಥ ಹವಾಮಾನಗಳಲ್ಲಿ ಹೆಚ್ಚಿನ ನೀರು ಬೇಕು ಎಂಬುದನ್ನು ತಿಳಿದಾಗಿದೆ. ಈ ಹೆಚ್ಚಿನ ನೀರು ಎಂದರೇನು? ದಿನಕ್ಕೆ ಎಂಟು ಗ್ಲಾಸ್‌ಗಳ ದ್ರವಾಹಾರಕ್ಕೆ ಮೇಲ್ಪಟ್ಟವನ್ನು ಹೀಗೆಂದು ಕರೆಯಬಹುದು. ಅದರಲ್ಲಿ ನೀರು, ಹಾಲು, ಮಜ್ಜಿಗೆ, ಎಳನೀರು, ಕಾಫಿ, ಚಹಾ, ಸೂಪ್‌, ಹಣ್ಣಿನ ರಸ, ನಿಂಬೆ ಚಹಾ ಅಥವಾ ಕಷಾಯದಂಥವು ಮತ್ತು ಸಕ್ಕರೆ ರಹಿತವಾದ ಯಾವುದೇ ಆರೋಗ್ಯಕರ ಪೇಯಗಳನ್ನು ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕೆ ಸೇರಿಸಬಹುದು. ಹಾಗಾಗಿ ದಿನಕ್ಕೆ ಅದಷ್ಟು ದ್ರವಾಹಾರವನ್ನು ತೆಗೆದುಕೊಳ್ಳುವುದು ಖಂಡಿತ ಕಷ್ಟವಲ್ಲ. ಈಗ ಹೆಚ್ಚಿನ ನೀರು ಎಂದರೆ, ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕಿಂತ ಅಧಿಕ. ಅತಿ ಕಡಿಮೆ ದೈಹಿಕ ಚಟುವಟಿಕೆಯಿದ್ದು, ವಾತಾವರಣವೂ ಹದವಾಗಿದ್ದಾಗ, ಹೆಚ್ಚು ಹಣ್ಣು, ಪಾನಕ, ಮಜ್ಜಿಗೆಯಂಥವನ್ನು ಕುಡಿಯುತ್ತಿದ್ದಾಗ ನೀರು ಕೊಂಚ ಕಡಿಮೆಯೇ ಸಾಕು ದೇಹಕ್ಕೆ. ದಿನದ ಲೆಕ್ಕಕ್ಕೆ ಹೇಳುವುದಾದರೂ, ನಿತ್ಯವೂ 3 ಲೀ. ನೀರನ್ನೇ ಕುಡಿಯಬೇಕಾದ ಅಗತ್ಯವಿಲ್ಲ. ತಿನ್ನುವ ಆಹಾರಗಳು ರಸಭರಿತವಾಗಿದ್ದರೆ, ಮಜ್ಜಿಗೆ, ಎಳನೀರು, ಸ್ಮೂದಿ ಮುಂತಾದ ಆರೋಗ್ಯಕರ ಪೇಯಗಳನ್ನು ಸಾಕಷ್ಟು ಸೇವಿಸುವವರು ನೀವಾದರೆ- 1.5ರಿಂದ 1.8 ಲೀ. ನಷ್ಟು ನೀರು ಕುಡಿಯುವುದು ಸಾಕಾಗುತ್ತದೆ. ಉಳಿದಷ್ಟು ಆಹಾರದಿಂದಲೇ ಒದಗುತ್ತದೆ. ನೀರು ಕುಡಿಯುವುದನ್ನು ಮರೆಯಂತೆ ಮಾಡುವುದು ಹೇಗೆ?

Image Of Rules of Drinking Water for a Healthier You

ಬಾಟಲಿ ಇರಿಸಿಕೊಳ್ಳಿ

ಚೆಂದದ ನೀರಿನ ಬಾಟಲಿಯೊಂದನ್ನು ಇದಕ್ಕಾಗಿ ಇರಿಸಿಕೊಳ್ಳಿ. ಅದರಲ್ಲೂ ತಾಮ್ರದ, ಗಾಜಿನ, ಪಿಂಗಾಣಿಯಂಥ ನೀರಿನ ಬಾಟಲಿ/ ಪಾತ್ರೆಗಳು ಹೆಚ್ಚಿನ ಉತ್ಸಾಹವನ್ನು ತುಂಬುತ್ತವೆ. ಈ ಬಾಟಲಿಗಳ ಅಳತೆ ತಿಳಿಯುವುದರಿಂದ ದಿನಕ್ಕೆ ಎಷ್ಟು ಬಾರಿ ಅದನ್ನು ಮರುಪೂರಣ ಮಾಡಿದ್ದೀರಿ ಎನ್ನುವುದರ ಮೇಲೆ ಕುಡಿದ ನೀರಿದ ಪ್ರಮಾಣವನ್ನು ಸುಲಭದಲ್ಲಿ ಲೆಕ್ಕ ಹಾಕಬಹುದು.

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!ಇದನ್ನೂ ಓದಿ:

ಅಲರಾಂ

ನಿತ್ಯದ ಜಂಜಾಟದಲ್ಲಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದೂ ಕೆಲಸ ಮಾಡುವುದಿಲ್ಲ ಎಂದಾದರೆ ತಾಸಿಗೊಮ್ಮೆ ನೀರು ಕುಡಿಯುವ ಅಲರಾಂ ಇಟ್ಟುಕೊಳ್ಳಿ. ಅದು ಕಿರುಚುವ ಹೊತ್ತಿಗೆ ನೀರು ಗುಟುಕರಿಸಬೇಕು ಎನ್ನುವುದು ನಿಶ್ಚಿತವಾಗಿ ನೆನಪಾಗುತ್ತದೆ.

Continue Reading

ಫ್ಯಾಷನ್

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌

Friendshipday Fashion: ಪ್ರತಿ ವರ್ಷವೂ ಅಗಸ್ಟ್ ಮೊದಲ ಭಾನುವಾರ ಸೆಲೆಬ್ರೇಟ್‌ ಮಾಡುವ ಫ್ರೆಂಡ್‌ ಶಿಪ್‌ ಡೇಯಂದು ಒಮ್ಮೆ ಕಾಣಿಸಿಕೊಂಡ ಫ್ಯಾಷನ್‌ ಮತ್ತೊಮ್ಮೆ ಕಾಣಿಸುವುದಿಲ್ಲ! ಬದಲಾಗುತ್ತಿರುತ್ತದೆ. ಹಾಗಾದಲ್ಲಿ, ಈ ಬಾರಿ ಯಾವ ರೀತಿಯ ಫ್ಯಾಷನ್‌ ಜಾರಿ ಬರುತ್ತಿದೆ. ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಫ್ರೆಂಡ್‌ಶಿಪ್‌ ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

friendshipday fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಫ್ಯಾಷನ್‌ (Friendshipday Fashion) ಥೀಮ್‌ ಟ್ರೆಂಡಿಯಾಗಿದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಅಗಸ್ಟ್ ನ ಮೊದಲ ಭಾನುವಾರ ಸೆಲೆಬ್ರೇಟ್‌ ಫ್ರೆಂಡ್‌ ಶಿಪ್‌ ಡೇ ಫ್ಯಾಷನ್‌ನ ಕಾನ್ಸೆಪ್ಟ್ ಒಂದೇ ಎಂದೆನಿಸಿದರೂ ಥೀಮ್‌ ಹಾಗೂ ಸ್ಟೈಲಿಂಗ್‌ ಪ್ರತಿ ವರ್ಷ ಬದಲಾಗುತ್ತದೆ. ಫ್ರೆಂಡ್ಸ್ ಗ್ರೂಪ್‌ನಲ್ಲಿ ಒಮ್ಮೆ ಕಾಣಿಸಿಕೊಂಡ ಫ್ಯಾಷನ್‌ ಮುಂಬರುವ ವರ್ಷ ಕಾಣಿಸುವುದಿಲ್ಲ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹಾಗಾದಲ್ಲಿ ಈ ಬಾರಿಯ ಫ್ರೆಂಡ್‌ಶಿಪ್‌ ಡೇ ಫ್ಯಾಷನ್‌ ಏನು? ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಮಾನ್ಸೂನ್‌ ಫ್ರೆಂಡ್‌ಶಿಪ್‌ ಡೇ ಲುಕ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

Friendshipday Fashion

ಫ್ರೆಂಡ್‌ಶಿಪ್‌ ಡೇಗೂ ಬಂತು ಫ್ಯಾಷನ್‌ ಥೀಮ್‌

ಫ್ರೆಂಡ್‌ಶಿಪ್‌ ಡೇ ಆಚರಿಸುವ ಸ್ನೇಹಿತರು ಹಾಗೂ ಅವರ ಗ್ರೂಪ್‌ಗಳು, ತಮ್ಮದೇ ಆದ ಥೀಮ್‌ ಫ್ಯಾಷನ್‌ ಫಾಲೋ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌-ಶಾಪ್‌ಗಳಲ್ಲಿ ಬಲ್ಕ್‌ ಆರ್ಡರ್ನಲ್ಲಿ ಫ್ಯಾಷನ್‌ವೇರ್‌ಗಳೂ ದೊರೆಯುತ್ತಿವೆ. ಕಾರ್ಪೋರೇಟ್‌ ಕಚೇರಿಯ ಉದ್ಯೋಗಿಗಳಾಗಿರಬಹುದು ಅಥವಾ ಕಾಲೇಜು ಹುಡುಗ-ಹುಡುಗಿಯರಾಗಿರಬಹುದು. ಅವರವರ ಗ್ರೂಪ್‌ನ ಅಭಿರುಚಿಗೆ ತಕ್ಕಂತೆ ಫ್ಯಾಷನ್‌ ಥೀಮ್‌ಗಳನ್ನು ರೂಪಿಸಿಕೊಂಡು ಫ್ಯಾಷನ್‌ವೇರ್‌ಗಳನ್ನು ಧರಿಸುವುದು ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು, ಥೀಮ್‌ ಎಂದಾಕ್ಷಣಾ ಗುಂಪಿನ ಎಲ್ಲರ ಔಟ್‌ಫಿಟ್‌ಗಳು ಒಂದೇ ಆಗಿರಬೇಕೆಂದಿಲ್ಲ! ಒಟ್ಟಿನಲ್ಲಿ ಅವರೆಲ್ಲರೂ ಧರಿಸುವ ಯಾವುದೇ ಉಡುಪು ಅಥವಾ ಆಕ್ಸೆಸರೀಸ್‌ ಇಲ್ಲವೇ ಸ್ಟೈಲಿಂಗ್‌ ಒಂದೇ ಬಗೆಯದ್ದಾಗಿರಬಹುದು. ಅದು ಔಟಿಂಗ್‌ನದ್ದಾಗಿರಬಹುದು, ಪಾರ್ಟಿವೇರ್‌ನದ್ದಾಗಿರಬಹುದು ಅಥವಾ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುವಂತದ್ದಾಗಿರಬಹುದು. ಆಯಾ ಗ್ರೂಪ್‌ನ ಐಡೆಂಟಿಟಿಗೆ ತಕ್ಕಂತೆ ಥೀಮ್‌ ಫ್ಯಾಷನ್‌ ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಡಿಸೈನರ್‌ ರಿಯಾಜ್‌ ಹಾಗೂ ರಕ್ಷ್.

Friendshipday Fashion

ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಸ್ಟೈಲಿಂಗ್‌

ಸ್ನೇಹಿತರ ಗ್ರೂಪ್‌ಗಳು ಕೇವಲ ಜೆನ್‌ ಜಿ, ಮಿಲೆನಿಯಲ್‌ ಜನರಿಂದ ಕೂಡಿರಬೇಕೆಂದಿಲ್ಲ, ಗ್ರೂಪ್‌ಗಳು ವಯಸ್ಸಾಗಿರುವ ಹಿರಿಯರದ್ದು ಆಗಿರಬಹುದು ಅಥವಾ ಸಮಾನ ಮನಸ್ಕರ ವಿಭಿನ್ನ ಗ್ರೂಪ್‌ಗಳಾಗಬಹುದು. ಆಯಾ ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಡ್ರೆಸ್ಸಿಂಗ್‌ ಹಾಗೂ ಸ್ಟೈಲಿಂಗ್‌ ಬದಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Friendship Band Trend: ಹೊಸ ಜನರೇಷನ್‌‌ಗೆ ಪ್ರಿಯವಾದ 4 ವಿನ್ಯಾಸದ ಫ್ರೆಂಡ್‌ ಶಿಪ್‌ ಬ್ಯಾಂಡ್‌‌ಗಳಿವು

ಫ್ರೆಂಡ್‌ಶಿಪ್‌ ಡೇ ಸ್ಟೈಲಿಂಗ್‌ಗೆ ಸಿಂಪಲ್‌ ಟಿಪ್ಸ್

  • ಫ್ರೆಂಡ್ಸ್ ಗ್ರೂಪ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ.
  • ಎಥ್ನಿಕ್‌, ವೆಸ್ಟರ್ನ್‌, ಸೆಮಿ ಎಥ್ನಿಕ್‌, ಬಿಂದಾಸ್‌ ಯಾವುದಾದರೂ ಸರಿಯೇ ಕಂಫರ್ಟಬಲ್‌ ಸ್ಟೈಲಿಂಗ್‌ ಚೂಸ್‌ ಮಾಡಿ.
  • ಔಟಿಂಗ್‌ ಆದಲ್ಲಿ ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ.
  • ಆದಷ್ಟೂ ಯಂಗ್‌ ಲುಕ್‌ ನೀಡುವ ಸ್ಟೈಲಿಂಗ್‌ ಅಳವಡಿಸಿಕೊಳ್ಳಿ

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Friendship Band Trend: ಹೊಸ ಜನರೇಷನ್‌‌ಗೆ ಪ್ರಿಯವಾದ 4 ವಿನ್ಯಾಸದ ಫ್ರೆಂಡ್‌ ಶಿಪ್‌ ಬ್ಯಾಂಡ್‌‌ಗಳಿವು

Friendship Band Trend: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೊಸ ಬಗೆಯ ಫ್ರೆಂಡ್‌ ಶಿಪ್‌ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 4 ಬಗೆಯವು ಜೆನ್‌ ಜಿ ಜನರೇಷನ್‌ ಹುಡುಗ-ಹುಡುಗಿಯರಿಗೆ ಹೆಚ್ಚು ಪ್ರಿಯವಾಗಿವೆ. ಹಾಗಾದಲ್ಲಿ, ಅವು ಯಾವುವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Friendship Band Trend
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್‌ ಜಿ ಜನರೇಷನ್‌ನ ಹುಡುಗ-ಹುಡುಗಿಯರಿಗೆ ಪ್ರಿಯವಾಗುವಂತಹ ಬಗೆಬಗೆಯ ಡಿಸೈನ್‌ನ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು (Friendship Band Trend) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 4 ಬಗೆಯವು ಹೆಚ್ಚು ಟ್ರೆಂಡಿಯಾಗಿವೆ. ಹೌದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲೆಕ್ಕವಿಲ್ಲದಷ್ಟು ನಾನಾ ಬಗೆಯ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಅವುಗಳಲ್ಲಿ ನಾಲ್ಕು ಬಗೆಯವು ಮಾತ್ರ ಜೆನ್‌ ಜಿ ಜನರೇಷನ್‌ನ ಹುಡುಗ-ಹುಡುಗಿಯರನ್ನು ಆಕರ್ಷಿಸಿವೆ. ಹಾಗಾದಲ್ಲಿ, ಅವು ಯಾವುವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

Friendship Band Trend

ಬ್ರೆಸ್‌ಲೆಟ್‌ ಬ್ಯಾಂಡ್‌

ನೋಡಲು ಥೇಟ್‌ ಬ್ರೇಸ್‌ಲೆಟ್‌ನಂತೆಯೇ ಕಾಣುವ ಇವು ವೈಟ್‌ ಹಾಗೂ ಬ್ಲಾಕ್‌ ಇಲ್ಲವೇ ಅಕ್ಸಿಡೈಸ್ಡ್ ಮೆಟಲ್‌ನಿಂದ ಸಿದ್ಧಗೊಂಡಿರುತ್ತವೆ. ಹರಿದು ಹೋಗದ ಫಂಕಿ ಹಾಗೂ ಜಂಕ್‌ ಬ್ರೆಸ್‌ಲೆಟ್‌ಗಳಿವು. ಈ ಜನರೇಷನ್‌ನ ಅಭಿರುಚಿಗೆ ತಕ್ಕಂತೆ ಚಿತ್ರ-ವಿಚಿತ್ರ ಡಿಸೈನ್‌ನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

Friendship Band Trend

ಇವಿಲ್‌ ಐ ಫ್ರೆಂಡ್‌ಶಿಪ್‌ ಬ್ಯಾಂಡ್‌

ಇವಿಲ್‌ ಐ ಡಿಸೈನ್‌ ಹೊಂದಿದ ಈ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಹುಡುಗ ಹುಡುಗಿಯರು ಎನ್ನುವ ಭೇದ-ಭಾವವಿಲ್ಲದೇ ಡಿಮ್ಯಾಂಡ್‌ ಹೆಚ್ಚಿಸಿಕೊಂಡಿವೆ. ಹಾಗೆಂದು ಈ ಬ್ಯಾಂಡ್‌ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ! ಈ ಬಾರಿ ಫ್ರೆಂಡ್ಸ್ ನಡುವೆ ಬಾಂಧವ್ಯ ಹೆಚ್ಚಿಸಲು ಬ್ಯಾಂಡ್‌ ರೂಪದಲ್ಲಿ ಎಂಟ್ರಿ ನೀಡಿವೆ.

ಉಲ್ಲನ್‌ ಥ್ರೆಡ್‌ ಫ್ರೆಂಡ್‌ಶಿಪ್‌ ಬ್ಯಾಂಡ್‌

ಉಲ್ಲನ್‌ ದಾರವನ್ನು ಬಳಸಿ ಕೈಗಳಿಂದ ಹೆಣೆದಿರುವಂತಹ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳಿವು. ಹೆಸರು, ಅಕ್ಷರ ಅಥವಾ ಯಾವುದೇ ಪುಟ್ಟ ಚಿತ್ರವನ್ನು ಮಧ್ಯೆ ಹೆಣೆದು ಬ್ಯಾಂಡ್‌ ಮಾಡಲಾಗಿರುತ್ತದೆ. ಕೈಗೆ ಬೇಕಾದಾಗ ಸುಲಭವಾಗಿ ಕಟ್ಟಿಕೊಂಡು ಎತ್ತಿಡಬಹುದಾಗಿದೆ. ಕಡಿಮೆ ಬೆಲೆಗೆ ದೊರಕುವ ಇವು ಕೂಡ ಇಂದಿಗೂ ಟ್ರೆಂಡ್‌ನಲ್ಲಿವೆ.

ಇದನ್ನೂ ಓದಿ: Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

ಕ್ರಿಸ್ಟಲ್‌ ಬೀಡ್ಸ್ ಫ್ರೆಂಡ್‌ಶಿಪ್‌ ಬ್ಯಾಂಡ್‌

ನಾನಾ ಬಣ್ಣದಲ್ಲಿ ಲಭ್ಯವಿರುವ ಈ ಕ್ರಿಸ್ಟಲ್‌ ಬೀಡ್ಸ್ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಕಸ್ಟಮೈಸ್ಡ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ಇವು ಕೂಡ ಹೆಸರು, ಇನಿಶಿಯಲ್‌ನಿಂದ ಸಿದ್ಧಪಡಿಸಬಹುದು. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಡಾರ್ಕ್‌ ಶೇಡ್‌ನವನ್ನು ಹುಡುಗರು ಇಷ್ಟಪಟ್ಟರೇ, ಹುಡುಗಿಯರು ಲೈಟ್‌ ಶೇಡ್‌ನವನ್ನು ಆಯ್ಕೆ ಮಾಡುತ್ತಿದ್ದಾರೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Fashion Workshop: ಬೆಂಗಳೂರಲ್ಲಿ ಜಪಾನಿನ ಖ್ಯಾತ ಡಿಸೈನರ್‌ ಶಿಂಗೊ ಸಾಟೊ ಫ್ಯಾಷನ್‌ ಕ್ಲಾಸ್‌!

Fashion workshop: ಫ್ಯಾಷನ್‌ ಕ್ಷೇತ್ರದ ಹೊಸ ಎಜುಕೇಷನ್ ಪಾಲಿಸಿಗೆ ಸಂಬಂಧಿಸಿದಂತೆ ಸರಕಾರ ಜಾರಿ ತಂದಿರುವ ಹೊಸ ನಿಯಮಗಳಿಗೆ ಅನ್ವಯವಾಗುವಂತೆ ಉದ್ಯಾನನಗರಿಯ ವಿದ್ಯಾ ಫ್ಯಾಷನ್‌ ಅಕಾಡೆಮಿ ನಡೆಸಿದ ಫ್ಯಾಷನ್‌ ಕಾರ್ಯಾಗಾರದಲ್ಲಿ ಜಪಾನ್‌ನ ಖ್ಯಾತ ಫ್ಯಾಷನ್‌ ಡಿಸೈನರ್‌ ಶಿಂಗೋಸಾಟೊ ಭಾಗವಹಿಸಿ, ಫ್ಯಾಷನ್‌ನ ಮಾಸ್ಟರ್‌ ಕ್ಲಾಸ್‌ ಕಾರ್ಯಾಗಾರ ನಡೆಸಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion workshop
ಚಿತ್ರಗಳು: ವಿದ್ಯಾ ಫ್ಯಾಷನ್‌ ಅಕಾಡೆಮಿಯಲ್ಲಿ ನಡೆದ ಫ್ಯಾಷನ್‌ ಕಾರ್ಯಾಗಾರದ ಚಿತ್ರಗಳು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಗೆ ಆಗಮಿಸಿದ್ದ (Fashion workshop) ಜಪಾನ್‌ನ ಖ್ಯಾತ ವಿನ್ಯಾಸಕ ಶಿಂಗೊ ಸಾಟೊ, ಭಾವಿ ಫ್ಯಾಷನ್‌ ಡಿಸೈನರ್‌ಗಳಿಗೆ ತ್ರಿ ಡಿ ಕಟ್ಟಿಂಗ್‌ ಫ್ಯಾಷನ್‌ ಕುರಿತಂತೆ ಮಾಸ್ಟರ್‌ ಕ್ಲಾಸ್‌ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಭಾರತದಲ್ಲಿ ಫ್ಯಾಷನ್‌ ಕ್ಷೇತ್ರದ ಹೊಸ ಎಜುಕೇಷನ್ ಪಾಲಿಸಿಗೆ ಸಂಬಂಧಿಸಿದಂತೆ, ಈ ಸಾಲಿನಲ್ಲಿ ಕೇಂದ್ರ ಸರಕಾರ ಜಾರಿ ತಂದಿರುವ ಹೊಸ ನಿಯಮಗಳಿಗೆ ಅನ್ವಯವಾಗುವಂತೆ ಸಹಕಾರಿಯಾಗುವ ಫ್ಯಾಷನ್‌ ಮಾಸ್ಟರ್‌ ಕ್ಲಾಸನ್ನು ಉದ್ಯಾನನಗರಿಯ ವಿದ್ಯಾ ಫ್ಯಾಷನ್‌ ಅಕಾಡೆಮಿಯು ಜಪಾನಿನ ಖ್ಯಾತ ತ್ರಿ ಡಿ ಕಟ್ಟಿಂಗ್‌ ಡಿಸೈನರ್‌ ಶಿಂಗೊಸಾಟೋ ಅವರ ಸಹಯೋಗದೊಂದಿಗೆ ನಡೆಸಿತು. 3 ದಿನಗಳ ಕಾಲ ನಡೆದ ಈ ಫ್ಯಾಷನ್‌ ಕಾರ್ಯಗಾರದಲ್ಲಿ ವಿದ್ಯಾ ಫ್ಯಾಷನ್‌ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ ವಿದ್ಯಾ ವಿವೇಕ್‌ ಭಾಗವಹಿಸಿದ್ದರು. ಅಲ್ಲದೇ, ಫ್ಯಾಷನ್‌ ಡಿಸೈನರ್‌ಗಳು ಹಾಗೂ ಆಸಕ್ತ ಮಹಿಳೆಯರು ಪಾಲ್ಗೊಂಡಿದ್ದರು.

ವಿದ್ಯಾ ವಿವೇಕ್‌ ಪ್ರಾಯೋಗಿಕ ಕಾರ್ಯಾಗಾರ

ಇಂದು ಕಂಪ್ಯೂಟರೈಸ್ಡ್ ಡಿಸೈನಿಂಗ್‌ ಕೋರ್ಸ್‌ಗಳು ಬಂದ ನಂತರ ವಿದ್ಯಾರ್ಥಿಗಳ ಕಲಿಯುವ ಹಾಗೂ ಯೋಚಿಸಿ ಡಿಸೈನ್‌ ಮಾಡುವ ಸ್ಕಿಲ್‌ ಕಡಿಮೆಯಾಗುತ್ತಿದೆ. ಡಿಸೈನಿಂಗ್‌ ಹಾಗೂ ಸ್ಕೆಚ್ಚಿಂಗ್‌ಗಷ್ಟೇ ಭಾವಿ ಡಿಸೈನರ್‌ಗಳು ಸೀಮಿತವಾಗುತ್ತಿದ್ದಾರೆ. ಇದನ್ನು ಮನಗೊಂಡ ಅಪರೆಲ್‌ ಕ್ಷೇತ್ರದ ಎಕ್ಸ್‌ಪರ್ಟ್‌ಗಳು ಪ್ರಾಯೋಗಿಕವಾಗಿ ತ್ರಿಡಿ ಕಟ್ಟಿಂಗ್‌ ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಇತ್ತೀಚಿನ ಉತ್ತಮ ಬೆಳವಣಿಗೆ. ಪರಿಣಾಮ, ಫ್ಯಾಷನ್‌ ಕೋರ್ಸ್‌ಗಳಲ್ಲಿ ತ್ರಿ ಡಿ ಕಟ್ಟಿಂಗ್‌ ಕುರಿತ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಅಕಾಡೆಮಿಯ ಸಂಸ್ಥಾಪಕಿ ವಿದ್ಯಾ ವಿವೇಕ್‌.

Fashion workshop

ಯಾರಿದು ಶಿಂಗೊ ಸಾಟೊ

ಶಿಂಗೊ ಸಾಟೊ ತ್ರಿ ಡಿ ವಿನ್ಯಾಸದ ಸಂಶೋಧಕ ಹಾಗೂ ವಿನ್ಯಾಸಕರಾಗಿದ್ದು, ಸುಮಾರು 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ.

ಏನಿದು ತ್ರಿ ಡಿ ಕಟ್ಟಿಂಗ್‌ ಕಾರ್ಯಾಗಾರ

ಡಿಸೈನ್‌ ಮಾಡುವ ಬಟ್ಟೆಯನ್ನು ಹೆಚ್ಚು ಕಟ್ಟಿಂಗ್‌ ಮಾಡದೇ, ವಿನ್ಯಾಸ ಗೊಳಿಸುವ ಟೆಕ್ನಿಕ್‌ ಅನ್ನು ತ್ರಿ ಡಿ ಕಟ್ಟಿಂಗ್‌ ಎನ್ನಲಾಗುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಿಂಗೊ ಸಾಟೊ ಪ್ರಪಂಚದಲ್ಲೆ ಮೊದಲ ಬಾರಿ ಇದಕ್ಕಾಗಿಯೇ ಶಾಲೆಯನ್ನು ತೆರೆದಿದ್ದಾರೆ. ಫ್ಯಾಷನ್‌ ಹಬ್‌ ಮಿಲಾನ್‌ನಲ್ಲಿ ತರಗತಿಗಳನ್ನು ನಡೆಸುತ್ತಾರೆ. ಭಾರತೀಯರು ಅಲ್ಲಿಗೆ ಹೋಗಿ ಕಲಿಯಲಾಗದ ಕಾರಣ, ಸುಮಾರು 11 ವರ್ಷಗಳಿಂದ ಬೆಂಗಳೂರಿಗೆ ಬಂದು ವಿದ್ಯಾ ಅಕಾಡೆಮಿಯ ಸಹಯೋಗದೊಂದಿಗೆ ಹೇಳಿಕೊಡುತ್ತಿದ್ದಾರೆ.
ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!
(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
rameshwaram cafe blast scene
ಕ್ರೈಂ11 mins ago

Rameshwaram Cafe Blast: ಬಾಂಬ್‌ ಇರಿಸಿದ ಉಗ್ರನನ್ನು ರಾಮೇಶ್ವರಂ ಕೆಫೆಗೆ ಕರೆತಂದು ಸೀನ್‌ ರಿಕ್ರಿಯೇಟ್‌ ಮಾಡಿದ ಎನ್‌ಐಎ

Electrocution
ದೇಶ24 mins ago

Electrocution: ಡಿಜೆ ವಾಹನಕ್ಕೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಆಘಾತ; 8 ಮಂದಿ ಭಕ್ತರ ಸಾವು

Vishwa Kundapura Kannada Dina 2024 in banglore celebrate
ಬೆಂಗಳೂರು31 mins ago

Vishwa Kundapura Kannada Dina: ಬೆಂಗಳೂರಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಗಮ್ಮತ್ತು ಹೀಗಿತ್ತು!

court verdict
ಪ್ರಮುಖ ಸುದ್ದಿ47 mins ago

Court Verdict: 31 ವರ್ಷ ಲೈಂಗಿಕ ಸಂಬಂಧ, ನಂತರ ಪುರುಷನ ಮೇಲೆ ರೇಪ್ ಕೇಸ್! ನ್ಯಾಯಾಲಯ ಹೇಳಿದ್ದೇನು ನೋಡಿ

Actor Darshan Fans troll ACP Chandan kumar
ಸ್ಯಾಂಡಲ್ ವುಡ್50 mins ago

Actor Darshan: ಹುಲಿ ಅಂತೆ ಹುಲಿ, ʻಡಿಬಾಸ್ʼ ರಿಲೀಸ್‌ ಆಗುವಾಗ ಇವನೇ ಸೆಕ್ಯೂರಿಟಿ ಎಂದು ಎಸಿಪಿ ಚಂದನ್‌ರನ್ನು ಟ್ರೋಲ್‌ ಮಾಡಿದ ಫ್ಯಾನ್ಸ್‌!

drink water
ಫ್ಯಾಷನ್53 mins ago

Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

Bangladesh Protests
ವಿದೇಶ1 hour ago

Bangladesh Protests: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ಮೃತರ ಸಂಖ್ಯೆ 98ಕ್ಕೆ ಏರಿಕೆ: ಭಾರತೀಯರಿಗೆ ಮುನ್ನೆಚ್ಚರಿಕೆ

Arjun Rampal Says He Knows A Lot Of People Who Need Another Woman
ಬಾಲಿವುಡ್1 hour ago

Arjun Rampal: ಅಕ್ರಮ ಸಂಬಂಧ ಕೆಲವರಿಗೆ ಚಟ, ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದ ಖ್ಯಾತ ಬಾಲಿವುಡ್‌ ನಟ!

Independence Day 2024
ಕ್ರೀಡೆ2 hours ago

Independence Day 2024: ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಎದುರು ಸೋಲುವ ಭಯ; ಹಾಕಿ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿರಲಿಲ್ಲ ಗ್ರೇಟ್‌ ಬ್ರಿಟನ್‌!

bagalakote soldier death
ಬಾಗಲಕೋಟೆ2 hours ago

Soldier Death: ಉಸಿರಾಟದ ತೊಂದರೆಯಿಂದ ಯೋಧ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ20 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌