GST ದರ ಪರಿಷ್ಕರಣೆ ಕುರಿತ, ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಸಭೆ ಜೂನ್‌ 17ಕ್ಕೆ - Vistara News

ಪ್ರಮುಖ ಸುದ್ದಿ

GST ದರ ಪರಿಷ್ಕರಣೆ ಕುರಿತ, ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಸಭೆ ಜೂನ್‌ 17ಕ್ಕೆ

ಜಿಎಸ್‌ಟಿ ದರಗಳ ಶ್ರೇಣಿಯಲ್ಲಿ ಬದಲಾವಣೆಗೆ ಸಂಬಂಧಿಸಿ ಸಚಿವರುಗಳ ಮಟ್ಟದ ಸಮಿತಿ ಸಭೆ ಜೂನ್‌ 17ಕ್ಕೆ ನಡೆಯಲಿದೆ. ಆದರೆ ಹಣದುಬ್ಬರ ಹೆಚ್ಚಿರುವ ಸಂದರ್ಭ ಪರಿಷ್ಕರಣೆಗೆ ಅವಕಾಶ ಕಡಿಮೆ ಎನ್ನಲಾಗಿದೆ.

VISTARANEWS.COM


on

CM basavaraja bommai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಜಿಎಸ್‌ಟಿ ದರಗಳ ಪರಿಷ್ಕರಣೆಗೆ ಸಂಬಂಧಿಸಿದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಚಿವರುಗಳ ಸಮಿತಿ ಸಭೆ ಜೂನ್‌ 17ರಂದು ನಡೆಯಲಿದೆ.

ಜಿಎಸ್‌ಟಿ ದರಗಳಲ್ಲಿ ಸಂಭವನೀಯ ಬದಲಾವಣೆಗಳ ಬಗ್ಗೆ ಸಮಿತಿ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿಯ ಅಂತಿಮ ವರದಿಗೆ ಇನ್ನೂ ಕಾಲಾವಕಾಶ ನಿರೀಕ್ಷಿಸಲಾಗಿದೆ. ಕೇಂದ್ರ ಹಾಗೂ ರಾಜ್ಯಗಳ ಹಣಕಾಸು ಸಚಿವರುಗಳನ್ನು ಒಳಗೊಂಡ ೭ ಮಂದಿ ಸದಸ್ಯರನ್ನು ಹೊಂದಿದೆ. ಈ ಹಿಂದೆ 2021ರ ನವೆಂಬರ್‌ನಲ್ಲಿ ಸಮಿತಿ ಸಭೆ ಸೇರಿತ್ತು.

ಜಿಎಸ್‌ಟಿ ಅಡಿಯಲ್ಲಿ ೫%, 12%, 18% ಮತ್ತು 28% ಎಂಬ ನಾಲ್ಕು ದರಗಳ ಶ್ರೇಣಿ ಇದೆ. ಸಗಟು ಹಣದುಬ್ಬರ 15.88%ಕ್ಕೆ ಏರಿಕೆಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಜಿಎಸ್‌ಟಿ ತೆರಿಗೆ ಶ್ರೇಣಿಗಳ ಬದಲಾವಣೆಗೆ ಅವಕಾಶಗಳು ಉಂಟಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.

ಈ ನಡುವೆ ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯಗಳಿಗೆ ನೀಡುತ್ತಿರುವ ನಷ್ಟ ಪರಿಹಾರವನ್ನು ಇನ್ನೂ 3-5 ವರ್ಷ ವಿಸ್ತರಿಸಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಅಮಿತ್‌ ಮಿತ್ರಾ ಒತ್ತಾಯಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

Artificial Colours Ban: ಈ ಹಿಂದೆ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಕೆಯನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿತ್ತು. ಇದೀಗ ಕಬಾಬ್‌ಗೂ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಎಚ್ಚರಿಕೆ ನೀಡಲಾಗಿದೆ.

VISTARANEWS.COM


on

Artificial Colours Ban
Koo

ಬೆಂಗಳೂರು: ಗೋಬಿ ಬಳಿಕ ಇದೀಗ ಕಬಾಬ್‌ಗೂ ಕೃತಕ ಬಣ್ಣ (Artificial Colours Ban) ಬಳಕೆಗೂ ರಾಜ್ಯ ಸರ್ಕಾರ ನಿಷೇಧ ಹೇರಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಬಾಬ್‌ (chicken, fish kebab) ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿದೆ.

ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ, ಬಾಂಬೆ ಮಿಠಾಯಿಗೆ ಕಲರ್‌ ಹಾಕುವುದನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಕಬಾಬ್‌ ಸರದಿಯಾಗಿದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗೆ (artificial colours in Kebab) ಬೆರಸುವ ಕೃತಕ ಬಣ್ಣ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿತ್ತು.

ರಾಜ್ಯಾದ್ಯಂತ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದಾಗ, ಅದರಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ – 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿಗಳಲ್ಲಿ ಕಂಡುಬಂದಿದೆ. ಹೀಗಾಗಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತವೆ. ಈ ಹಿನ್ನೆಲೆಯಲ್ಲಿ ಕಬಾಬ್‌ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ. ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶಿಸಿದೆ. ಒಂದು ವೇಳೆ ಕೃತಕ ಬಣ್ಣಗಳನ್ನು ಬಳಸಿರುವುದು ಕಂಡುಬಂದಲ್ಲಿ ತಯಾರಿಸುವವರ ಮೇಲೆ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

Continue Reading

ದೇಶ

Divorce: ತೂಕ ಇಳಿಸಿಕೊಳ್ಳಲು ನೆರವಾಗದ ‘ಜಿಮ್‌ ಟ್ರೇನರ್‌’ ಗಂಡನಿಗೆ ಮಹಿಳೆ ಡಿವೋರ್ಸ್‌!

Divorce: ಮಹಿಳೆ ಹಾಗೂ ಜಿಮ್‌ ಟ್ರೇನರ್‌ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೆಂಡತಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಜಿಮ್‌ ಟ್ರೇನರ್‌ ಹರಸಾಹಸ ಪಟ್ಟಿದ್ದಾರೆ. ಪತ್ನಿಯನ್ನು ಜಿಮ್‌ಗೆ ಕರೆಸಿಕೊಂಡು ಟ್ರೇನಿಂಗ್‌ ಕೊಟ್ಟಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸಿದರೂ ಮಹಿಳೆಯ ತೂಕವು 75 ಕೆ.ಜಿಯೇ ಇದೆ. ಮಾತು ಉಳಿಸಿಕೊಳ್ಳಲು ಆಗದ ಪತಿಯ ಜತೆ ಸಂಸಾರ ಮಾಡಬಾರದು, ಆತನಿಂದ ದೂರವಾಗಬೇಕು ಎಂಬುದಾಗಿ ಮಹಿಳೆ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Divorce
ಸಾಂದರ್ಭಿಕ ಚಿತ್ರ.
Koo

ಲಖನೌ: ಭಾರತ ಸೇರಿ ಜಗತ್ತಿನಾದ್ಯಂತ ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಗಳಿಗೆ ಭಿನ್ನಾಭಿಪ್ರಾಯ ಉಂಟಾಗಿ, ವಿಚ್ಛೇದನ (Divorce) ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳಲು ನೆರವಾಗಲಿಲ್ಲ, ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಜಿಮ್‌ ಟ್ರೇನರ್‌ ಆಗಿರುವ ಪತಿಯಿಂದ ವಿಚ್ಛೇದನ ಬಯಸಿದ್ದಾರೆ. ವಿಚ್ಛೇದನ ಬಯಸಿ ಅವರು ಆಗ್ರಾದಲ್ಲಿರುವ ಕೌಟುಂಬಿಕ ಸಮಾಲೋಚನಾ ಕೇಂದ್ರಕ್ಕೆ (Family Counselling Centre) ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆಯು ಸ್ವಲ್ಪ ದಪ್ಪಗಿದ್ದು, ಅವರು ಜಿಮ್‌ ಟ್ರೇನರ್‌ನನ್ನೇ ಮದುವೆಯಾಗಿದ್ದರು. ಜಿಮ್‌ ಟ್ರೇನರ್‌ ಕಟ್ಟುಮಸ್ತಾದ ದೇಹಕ್ಕೆ ಮರುಳಾಗಿ ಅವರು ಮದುವೆಯಾಗಿದ್ದರು. ಮದುವೆಯಾಗುವ ವೇಳೆ ಜಿಮ್‌ ಟ್ರೇನರ್‌ಗೆ ಅವರು ಒಂದು ಕಂಡಿಷನ್‌ ಹಾಕಿದ್ದರು. ಮದುವೆಯಾದ ಬಳಿಕ ನಾನು ತೆಳ್ಳಗಾಗಲು ಸಹಕರಿಸಬೇಕು, ಜಿಮ್‌ನಲ್ಲಿ ತರಬೇತಿ ನೀಡಬೇಕು ಎಂಬುದಾಗಿ ಅವರು ಷರತ್ತು ಹಾಕಿದ್ದರು. ಮದುವೆಗೂ ಮುನ್ನ ಜಿಮ್‌ ಟ್ರೇನರ್‌ ಇದೇನ್‌ ಮಹಾ ಎಂದು ಒಪ್ಪಿಕೊಂಡಿದ್ದರು. ಆದರೆ, ಮದುವೆಯಾದ ಬಳಿಕ ತೂಕ ಇಳಿಸಿಕೊಳ್ಳಲು ಪತಿ ನೆರವು ನೀಡುತ್ತಿಲ್ಲ ಎಂಬುದು ಮಹಿಳೆಯ ಆರೋಪವಾಗಿದೆ.‌

Lawyer Got Divorce In Gujarat

ಮದುವೆ ಬಳಿಕ ನಡೆದಿದ್ದೇನು?

ಮಹಿಳೆ ಹಾಗೂ ಜಿಮ್‌ ಟ್ರೇನರ್‌ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೆಂಡತಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಜಿಮ್‌ ಟ್ರೇನರ್‌ ಹರಸಾಹಸ ಪಟ್ಟಿದ್ದಾರೆ. ಪತ್ನಿಯನ್ನು ಜಿಮ್‌ಗೆ ಕರೆಸಿಕೊಂಡು ಟ್ರೇನಿಂಗ್‌ ಕೊಟ್ಟಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸಿದರೂ ಮಹಿಳೆಯ ತೂಕವು 75 ಕೆ.ಜಿಯೇ ಇದೆ. ಮದುವೆಗೆ ಮುನ್ನ ಎಷ್ಟು ಕೆ.ಜಿ ಇದ್ದರೋ, ಈಗಲೂ ಅಷ್ಟೇ ಇದ್ದಾರೆ. ಇದರಿಂದ ಕುಪಿತಗೊಂಡ ಅವರು ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ನನ್ನ ಆಸೆಯನ್ನು ಈಡೇರಿಸುವಲ್ಲಿ, ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಪತಿ ವಿಫಲನಾಗಿದ್ದಾನೆ. ಹಾಗಾಗಿ ನನಗೆ ವಿಚ್ಛೇದನ ಬೇಕಾಗಿದೆ ಎಂಬುದಾಗಿ ಅವರು ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಹೇಳಿಕೆ ನೀಡಿದ್ದಾರೆ.

“ಇದೇನು ದೊಡ್ಡ ವಿಷಯವಲ್ಲ. ಮಾತನಾಡಿ ಬಗೆಹರಿಸಿಕೊಳ್ಳಿ” ಎಂಬುದಾಗಿ ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಸಮಾಲೋಚಕರು ಸಲಹೆ ನೀಡಿದರೂ ಮಹಿಳೆಯು ಅದಕ್ಕೆ ಒಪ್ಪಿಲ್ಲ. “ನನಗೆ ಕೊಟ್ಟ ಮಾತನ್ನು ಗಂಡ ಉಳಿಸಿಕೊಂಡಿಲ್ಲ. ಇಂತಹ ಮನಸ್ಥಿತಿ ಇರುವ ಪತಿಯ ಜತೆ ಸಂಸಾರ ಮಾಡಲು ನನಗೆ ಇಷ್ಟವಿಲ್ಲ” ಎಂಬುದಾಗಿ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಇನ್ನು. ಆಕೆಯ ಪತಿಯು, “ನಾನು ಪತ್ನಿಯ ಜತೆ ಸಂಸಾರ ಮಾಡಲು ಯಾವುದೇ ತೊಂದರೆ ಇಲ್ಲ. ವಿಚ್ಛೇದನ ಕೊಡಲು ಮನಸ್ಸಿಲ್ಲ” ಎಂದಿದ್ದಾರೆ. ಇನ್ನೊಂದು ಸಲ ಸಮಾಲೋಚನೆ ನಡೆಸಲು ಸಮಾಲೋಚಕರು ಮತ್ತೊಂದು ದಿನ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆಗಲಾದರೂ ಪತ್ನಿಯು ಮನಸ್ಸು ಬದಲಿಸಬಹುದೇನೋ ಎಂಬ ನಿರೀಕ್ಷೆಯಲ್ಲಿ ಜಿಮ್‌ ಟ್ರೇನರ್‌ ಇದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Niveditha Gowda: ಡಿವೋರ್ಸ್‌ ಬಳಿಕ ಹೊಸ ರೀಲ್ಸ್‌ ಹಂಚಿಕೊಂಡ ನಿವೇದಿತಾ: ಲೈಕ್ಸ್‌ ಸುರಿಮಳೆ!

Continue Reading

ಕರ್ನಾಟಕ

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

Renuka Swamy Murder: ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರವಿ‌ಶಂಕರ್, ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್‌ನನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

VISTARANEWS.COM


on

Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಆದೇಶ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರವಿ‌ಶಂಕರ್, ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್‌ನನ್ನು ಸ್ಥಳಾಂತರ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಆರೋಪಿಗಳ ವರ್ಗಾವಣೆ ಯಾಕೆ ಅಗತ್ಯ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಿವರಿಸಿದ್ದಾರೆ. ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಕಾರ್ತಿಕ್‌, ಕೇಶವ್ ಮತ್ತು ನಿಖಿಲ್ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು. ಇದರಿಂದ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿತ್ತು.

ಒಂದೇ ಜೈಲಿನಲ್ಲಿದ್ದರೇ ಅವರವರೇ ಹೊಡೆದಾಡಿಕೊಳ್ಳುವ ಸಾಧ್ಯತೆ ಇದ್ದು, ನಾಲ್ವರು ಆರೋಪಿಗಳ ಜೀವಕ್ಕೆ ಅಪಾಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಜೈಲಿಗೆ ಶಿಫ್ಟ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ | R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

ಪತ್ನಿ, ಮಗ ನೋಡುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್; ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ʻದಾಸʼ!

Actor Darshan crying In Jail while seeing wife and son

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Actor Darshan) ಬಂಧನವಾಗಿರುವ ನಟ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಸೋಮವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಇವರಷ್ಟೇ ಅಲ್ಲದೇ ದರ್ಶನ್‌ ಆಪ್ತ ವಿನೋದ್‌ ಪ್ರಭಾಕರ್‌ ಕೂಡ ಸ್ನೇಹಿತರ ಜತೆ ಆಗಮಿಸಿ ಭೇಟಿ ಮಾಡಿದರು. ಈ ವೇಳೆ ದರ್ಶನ್‌ ಅವರು ಮಗನನ್ನು ನೋಡಿ ಕಣ್ಣೀರಿಟ್ಟರು. ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ದರ್ಶನ್ ಭಾವುಕರಾದರು.

ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್‌ ಕಣ್ಣೀರಿಟ್ಟರು. ಪತ್ನಿ ಬಳಿ ನಡೆದ ಘಟನೆಯ ಬಗ್ಗೆ ದರ್ಶನ್‌ ಕೆಲ ಮಾತುಗಳನ್ನಾಡಿದರು. ಕಾನೂನು ಹೋರಾಟದ ಬಗ್ಗೆ ಪತ್ನಿ ದರ್ಶನ್‌ಗೆ ಮಾಹಿತಿ ನೀಡಿದರು. ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ ಧೈರ್ಯ ತುಂಬಿದರು. . ಮಗ ವಿನೀಶ್ ನನ್ನು ತಬ್ಬಿಕೊಂಡೇ ಅಳುತ್ತಾ ಮಾತನಾಡಿದ್ದಾರೆ. ಅರ್ಧ ಘಂಟೆಯ ಭೇಟಿಯಲ್ಲಿ ದರ್ಶನ್ ಭಾವುಕದಿಂದಲೇ ಮಾತನಾಡಿದರು. ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯವನ್ನು ಮಗನ ಜೊತೆಗೆ ಕಳೆದರು.

ಇದನ್ನೂ ಓದಿ: Actor Darshan: ಜೈಲಿನಲ್ಲಿ ನಟ ದರ್ಶನ್‌ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್‌

ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ಬೇರೊಂದು ಕಾರಿನಲ್ಲಿ ಜೈಲಿನ ಬಳಿ ಬಂದರು. ಆಗ ಮಾಧ್ಯಮಗಳ ಕಣ್ತಪ್ಪಿಸಿ ಜೈಲಿನ ಒಳಗೆ ದರ್ಶನ್‌ ಪತ್ನಿ, ಪುತ್ರನನ್ನು ಪೊಲೀಸರು ಕರೆದೊಯ್ದರು.

ಇದನ್ನೂ ಓದಿ | Actor Darshan: ಇನ್ಮುಂದೆ ದರ್ಶನ್‌ ಕೈದಿ ನಂಬರ್‌ ನನ್ನ ಗಾಡಿ ಮೇಲೆ ಇರತ್ತೆ ಎಂದು ಗಳಗಳನೇ ಅತ್ತ ಅಭಿಮಾನಿ!

ಇನ್ನು ಜೈಲಿನಲ್ಲಿದ್ದರೂ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾಗಿದೆ. ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಬಂದರೆ ನೂರೊಂದು ಕಂಡಿಷನ್ಸ್‌ ವಿಧಿಸುವ ಪೊಲೀಸರು, ಸೆಲೆಬ್ರಿಟಿ, ರಾಜಕಾರಣಿಗಳು, ಬಲಾಢ್ಯರಿಗೆ ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

Continue Reading

Latest

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

Viral Video: ಮೊನ್ನೆಯಷ್ಟೇ ಮುಂಬೈಯಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಹುಡುಗಿಯೊಬ್ಬಳು ರೀಲ್ಸ್ ಮಾಡಿದ್ದಳು, ಅದಕ್ಕೂ ಮೊದಲು ಪುಣೆಯಲ್ಲಿ ಪಾಳುಬಿದ್ದ ಕಟ್ಟಡದ ಮೇಲಿಂದ ರೀಲ್ಸ್ ಮಾಡಿದ ಹುಡುಗಿ ಆರೆಸ್ಟ್ ಆಗಿದ್ದಳು. ದಿನ ಈ ಸುದ್ದಿ ನೋಡುತ್ತಿದ್ದರೂ, ಮತ್ತು ಅದೇ ತಪ್ಪುಗಳನ್ನು ಈಗಿನ ಯುವಪೀಳಿಗೆ ಮಾಡುತ್ತಿದೆ. ರೀಲ್ಸ್ ಮಾಡುವುದು ತಪ್ಪಲ್ಲ, ಆದರೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವಂತಹ ರೀಲ್ಸ್ ಮಾಡುವುದಿಂದ ಮನೆಯವರನ್ನು ಆಪತ್ತಿಗೆ ದೂಡಿದ ಹಾಗೇ ಆಗುವುಂತೂ ಗ್ಯಾರಂಟಿ. ಬೆಂಗಳೂರಿನ ಈ ವಿದ್ಯಾರ್ಥಿನಿಯು ನಟ್ಟನಡುವಿನ ರಸ್ತೆಯಲ್ಲಿ ರೀಲ್ಸ್ ಮಾಡಲು ಹೋಗಿ ಹೀನಾಯ ಪರಿಸ್ಥಿತಿಯನ್ನು ತಂದುಕೊಂಡಿದ್ದಾಳೆ.

VISTARANEWS.COM


on

Viral Video
Koo

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ರೀಲ್ಸ್‌ನಿಂದ ಫಾಲೋವರ್ಸ್ ಹೆಚ್ಚಿಸಿಕೊಂಡು ಫೇಮಸ್ ಆಗಲು ಯುವಕ, ಯುವತಿಯರು ಮಾತ್ರವಲ್ಲ ಕಾಲೇಜು ವಿದ್ಯಾರ್ಥಿಗಳು ಕೂಡ ಹಲವು ವಿಧದ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದಾರೆ. ಆದರೆ ಬೇರೆಯವರನ್ನು ಮೆಚ್ಚಿಸಲು ಹೋಗಿ ಅವರ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳು ರೀಲ್ಸ್ ಗಾಗಿ ಸ್ಟಂಟ್ ಮಾಡಲು ಹೋಗಿ ಆಪತ್ತು ತಂದುಕೊಂಡಿದ್ದಾಳೆ. ಈ ವಿಡಿಯೊ ಎಲ್ಲೆಡೆ ವೈರಲ್‌ (Viral Video) ಆಗಿದೆ.

ಶಾಲಾ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿನಿಯರಿಬ್ಬರು ಸೋಶಿಯಲ್ ಮೀಡಿಯಾದ ರೀಲ್ಸ್ ಗಾಗಿ ರಸ್ತೆಯಲ್ಲಿ ಸ್ಟಂಟ್ ಮಾಡಲು ಹೋಗಿದ್ದಾರೆ. ರೀಲ್ಸ್ ಮತ್ತಷ್ಟು ವೈರಲ್ ಆಗಲಿ ಎಂದು ಅಪಾಯಕಾರಿ ಸ್ಟಂಟ್ ಮಾಡಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರಕ್ಕೆ ಹಾರಿದ ಹುಡುಗಿ ನೆಲದ ಮೇಲೆ ಇಳಿಯುವಾಗ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿ ದೊಪ್ಪೆಂದು ಕೆಳಕ್ಕೆ ಬಿದ್ದಿದ್ದಾಳೆ. ಇದರಿಂದ ಅವಳ ಬೆನ್ನುಮೂಳೆ ಮುರಿತಕ್ಕೊಳಗಾಗಿದೆ. ಹಾಗಾಗಿ ಆಕೆಗೆ ಮೇಲೆಳಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ವಿದ್ಯಾರ್ಥಿನಿ ಆಕೆಯನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸಿದರೂ ಆಕೆಗೆ ನಿಲ್ಲಲು ಆಗಲಿಲ್ಲ. ಇಂತಹ ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಓದಿ ವಿದ್ಯಾವಂತೆ ಆಗಬೇಕಿದ್ದ ವಿದ್ಯಾರ್ಥಿನಿ ತನ್ನ ಜೀವನವನ್ನೇ ಕತ್ತಲೆಗೆ ತಳ್ಳಿದ್ದಾಳೆ. ಅವಳ ಕಾಲು ಸ್ವಾಧೀನ ಕಳೆದುಕೊಂಡ ಪರಿಣಾಮ ಆಕೆಗೆ ನಿಲ್ಲಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಆಕೆ ಎದ್ದೇಳದಂತೆ, ನಡೆಯದಂತೆ ಮಲಗಿಕೊಂಡೇ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಪೋಸ್ಟ್ ಆಗಿದ್ದು, ಇದಕ್ಕೆ 17 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ ಮತ್ತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ನಿಮ್ಮ ಜೀವಕ್ಕೆ ಕುತ್ತು ತರುವಂತಹ ಈ ರೀತಿಯ ಸ್ಟಂಟ್ ಮಾಡಬೇಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಈ ರೀಲ್ಸ್ ನಿಂದ ಫೇಮಸ್ ಆದವರಿಗಿಂತ ಅಪಾಯಕ್ಕೆ ಒಳಗಾಗಿ ಜೀವ ಕಳೆದುಕೊಂಡವರೇ ಹೆಚ್ಚು. ಆದರೂ ಈ ಯುವಜನರಿಗೆ ರೀಲ್ಸ್ ಹುಚ್ಚು ಯಾವಾಗ ಬಿಟ್ಟು ಹೋಗುತ್ತದೆಯೋ ತಿಳಿಯದು. ಒಟ್ಟಾರೆ ಸೋಶಿಯಲ್ ಮೀಡಿಯಾದ ರೀಲ್ಸ್‌ಗಾಗಿ ಯುವ ಜನರು ಪ್ರತಿದಿನ ಯಾವ ಸಂಕಷ್ಟಕ್ಕೆ ತಂದುಕೊಳ್ಳುತ್ತಾರೋ ಎಂಬುದು ತಿಳಿಯುತ್ತಿಲ್ಲ.

ಇದನ್ನೂ ಓದಿ: Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

ಇಂತಹ ಘಟನೆಗಳು ಪ್ರತಿದಿನ ಒಂದಲ್ಲ ಒಂದು ನಡೆಯುತ್ತಿರುತ್ತದೆ. ಈ ಹಿಂದೆ ಪುಣೆಯಲ್ಲಿ ಹುಡುಗಿಯೊಬ್ಬಳು ಸ್ನೇಹಿತನ ಕೈ ಹಿಡಿದುಕೊಂಡು ಪಾಳುಬಿದ್ದ ಕಟ್ಟಡದಿಂದ ಇಳಿದು ನೇತಾಡುತ್ತಾ ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಅಲ್ಲದೇ ಮುಂಬೈ ಹುಡುಗಿಯೊಬ್ಬಳು ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ಡ್ಯಾನ್ಸ್ ಮಾಡಿ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದ್ದಳು.

Continue Reading
Advertisement
Artificial Colours Ban
ಪ್ರಮುಖ ಸುದ್ದಿ3 mins ago

Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

Divorce
ದೇಶ32 mins ago

Divorce: ತೂಕ ಇಳಿಸಿಕೊಳ್ಳಲು ನೆರವಾಗದ ‘ಜಿಮ್‌ ಟ್ರೇನರ್‌’ ಗಂಡನಿಗೆ ಮಹಿಳೆ ಡಿವೋರ್ಸ್‌!

Crush Saree Fashion
ಫ್ಯಾಷನ್37 mins ago

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

ಕರ್ನಾಟಕ41 mins ago

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

union Minister Pralhad Joshi took oath in the name of God in his mother tongue
ಕರ್ನಾಟಕ50 mins ago

Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Divisional Level Progress Review Meeting of Revenue Department by Minister Krishna Byregowda
ಕಲಬುರಗಿ56 mins ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Hardeep Singh Nijjar
ದೇಶ1 hour ago

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Sleep After Lunch
ಲೈಫ್‌ಸ್ಟೈಲ್1 hour ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ1 hour ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest1 hour ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌