Bowling selection by the captain of RBC team who won the toss Test Ranking : ಎಂಟು ಸ್ಥಾನ ಬಡ್ತಿ ಪಡೆದ ವಿರಾಟ್ ಕೊಹ್ಲಿ, ಆರ್​ ಅಶ್ವಿನ್​ಗೆ ಮೊದಲ ರ್ಯಾಂಕ್​ - Vistara News

ಕ್ರಿಕೆಟ್

Test Ranking : ಎಂಟು ಸ್ಥಾನ ಬಡ್ತಿ ಪಡೆದ ವಿರಾಟ್ ಕೊಹ್ಲಿ, ಆರ್​ ಅಶ್ವಿನ್​ಗೆ ಮೊದಲ ರ್ಯಾಂಕ್​

ಆರ್ ಅಶ್ವಿನ್​ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 25 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿದ್ದರು.

VISTARANEWS.COM


on

Bowling selection by the captain of RBC team who won the toss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್​ ರ್ಯಾಂಕಿಂಗ್ (Test Ranking) ಪಟ್ಟಿಯಲ್ಲಿ ಭಾರತದ ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿ ಎಂಟು ಸ್ಥಾನಗಳನ್ನು ಬಡ್ತಿ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಕೊನೇ ಪಂದ್ಯದಲ್ಲಿ ಅವರು 186 ರನ್​ ಬಾರಿಸುವುದರೊಂದಿಗೆ ಅಂಕಗಳನ್ನು ಹೆಚ್ಚಿಸಿಕೊಂಡು ಎಂಟು ಆಟಗಾರರನ್ನು ಹಿಂದಿಕ್ಕಿ 13ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಹಲವಾರು ಸಮಯಗಳಿಂದ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಲು ವಿಫಲಗೊಂಡಿದ್ದ ವಿರಾಟ್​ ಕೊಹ್ಲಿ ಅಂತಿಮವಾಗಿ ಭರ್ಜರಿಯಾಗಿ ಬ್ಯಾಟ್​ ಬೀಸಿದ್ದರು. ಈ ಮೂಲಕ ಅವರು ಟೆಸ್ಟ್​ ಮಾದರಿಯಲ್ಲಿ ಸಂಪೂರ್ಣ ಚೈತನ್ಯ ಪಡೆದುಕೊಂಡಿದ್ದಾರೆ.

ಟೀಮ್​ ಇಂಡಿಯಾದ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಕೆಲವು ದಿನಗಳಿಂದ ಆಡುತ್ತಿಲ್ಲ. ಹೀಗಾಗಿ ಒಂದು ಸ್ಥಾನ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : IND VS AUS: ಪೂಜಾರ ಬೌಲಿಂಗ್​ ಕಂಡು ಕೆಲಸ ಬಿಡಬೇಕೆ ಎಂದ ಆರ್​. ಅಶ್ವಿನ್; ಪೂಜಾರ ನೀಡಿದ ಪ್ರತಿಕ್ರಿಯೆ ಏನು?

ಅಶ್ವಿನ್​ಗೆ ಮೊದಲ ಸ್ಥಾನ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಟ್ಟು 25 ವಿಕೆಟ್​​ಗಳನ್ನು ಕಬಳಿಸಿರುವ ಸ್ಪಿನ್ನರ್ ಆರ್​ ಅಶ್ವಿನ್​ ರ್ಯಾಂಕ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಒಟ್ಟು 869 ಅಂಕಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್​ನ ಜೇಮ್ಸ್ ಆ್ಯಂಡರ್ಸನ್​ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಜಸ್​ಪ್ರಿತ್ ಬುಮ್ರಾ ಒಂದು ಸ್ಥಾನ ಹಿಂಬಡ್ತಿ ಪಡದುಕೊಂಡಿರುವ ಹೊರತಾಗಿಯೂ ಏಳನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 9ನೇ ರ್ಯಾಂಕ್​ ಪಡೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Virat Kohli: ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

VISTARANEWS.COM


on

Virat Kohli
Koo

ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಸ್ಟಾರ್​ ಆಟಗಾರ, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ದಾಖಲೆಯೊಂದನ್ನು ಬರೆದಿದ್ದಾರೆ. 6 ರನ್​ ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೋಹಿತ್​ ಶರ್ಮ ಎಸೆದ ಇನಿಂಗ್ಸ್​ನ ಮೊದಲ ಓವರ್​ನ ದ್ವಿತೀಯ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟುವ ಮೂಲಕ ​ ವಿರಾಟ್​ ಕೊಹ್ಲಿ ರನ್​ ಖಾತೆ ತೆರೆದರು. ಜತೆಗೆ ಈ ರನ್​ ಮೂಲಕ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12536* ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 370 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 134.00 ಸ್ಟ್ರೈಕ್​ ರೇಟ್​ನಲ್ಲಿ 12536* ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 95 ಅರ್ಧಶತಕಗಳನ್ನು ಸಿಡಿಸಿದ್ದಾರೆ. 1122 ಬೌಂಡರಿ ಮತ್ತು 395 ಸಿಕ್ಸರ್​ಗಳು ಇವರ ಬ್ಯಾಟ್​ನಿಂದ ಹೊರಹೊಮ್ಮಿದೆ.

ಇದನ್ನೂ ಓದಿ IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

​ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

Continue Reading

ಕ್ರೀಡೆ

IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

IPL 2024: ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಯುದ್ದ ಮುಗಿದ ಬಳಿಕ ಕೋಟೆಯ ಬಾಗಿಲು ಮುಚ್ಚಿದಂತಾಗಿದೆ ಆರ್​ಸಿಬಿಯ(Royal Challengers Bengaluru) ಸದ್ಯದ ಸ್ಥಿತಿ. ಹೌದು, ಆರಂಭಿಕ ಹಂತದಲ್ಲಿ ಸತತವಾಗಿ ಸೋಲು ಕಂಡು ಪ್ಲೇ ಆಫ್​ನ ಕ್ಷೀಣ ಅವಕಾಶ ಇರುವಾಗ ಇದೀಗ ಸತತವಾಗಿ ಗೆಲುವು ಸಾಧಿಸುತ್ತಿದೆ. ಇದುವರೆಗೂ ಕೊನೆಯ(IPL 2024) ಸ್ಥಾನಿಯಾಗಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಇದೀಗ 7ನೇ ಸ್ಥಾನಕ್ಕೇರಿದೆ. ಸದ್ಯಕ್ಕೆ ಆರ್​ಸಿಬಿಯ ಪ್ಲೇ ಆಫ್​ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್​ಸಿಬಿಗೆ ಅವಕಾಶವಿದೆ. ತಂಡದ ಪ್ಲೇ ಆಫ್​ ಲೆಕ್ಕಾಚಾರ(RCB Playoffs calculation) ಹೇಗಿದೆ ಎಂಬ ಮಾಹಿತಿ ಇಂತಿದೆ.

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್​ಸಿಬಿಗೆ ಪ್ಲೇ ಆಫ್​ ಟಿಕೆಟ್ ಖಚಿತವಾಗಿ​ ಸಿಗಲಿದೆ. ಈಗಾಗಲೇ 11 ಪಂದ್ಯ ಆಡಿದ್ದು, 4 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 8 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದೆ. ಆರ್​ಸಿಬಿಗೆ ಇನ್ನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಉಳಿದಿರುವ ಈ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 14 ಅಂಕ ಲಭಿಸಲಿದೆ. ಆದರೂ ಕೂಡ ಪ್ಲೇ ಆಫ್ ಟಿಕೆಟ್​ ಖಚಿತಗೊಳ್ಳುವುದಿಲ್ಲ. ಇದು ಖಚಿತಗೊಳ್ಳಬೇಕಿದ್ದರೆ, ಆರ್​ಸಿಬಿಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ. ಉಳಿದ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಆರ್​ಸಿಬಿ ತವರಿನಲ್ಲಿ ಆಡಲಿದೆ. ಇದು ಹಾಲಿ ಚಾಂಪಿಯನ್​ ಚೆನ್ನೈ ವಿರುದ್ಧ.

16 ಅಂಕ ಗಳಿಸಿರುವ ರಾಜಸ್ಥಾನ್​ ತಂಡಕ್ಕೆ ಪ್ಲೇ ಆಫ್​ ಸ್ಥಾನ ಬಹುತೇಕ ಖಚಿತಗೊಂಡಂತಿದೆ. ಅದಲ್ಲದೆ ರಾಜಸ್ಥಾನ್​ಗೆ ಇನ್ನೂ ಕೂಡ 4 ಪಂದ್ಯಗಳು ಬಾಕಿ ಇದೆ. ಇದರಲ್ಲಿ 1 ಪಂದ್ಯ ಗೆದ್ದರೂ ಸಾಕು. ಉಳಿದಿರುವ ಮೂರು ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಕೆಕೆಆರ್​ 14 ಅಂಕ ಪಡೆದು 2ನೇ ಸ್ಥಾನಿಯಾಗಿದೆ. ಕೆಕೆಆರ್​ಗೂ ಇನ್ನು 4 ಪಂದ್ಯ ಬಾಕಿ ಉಳಿದಿವೆ. ಲಕ್ನೋ 12 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಕೆಕೆಆರ್​ ಮತ್ತು ಲಕ್ನೋ ಮುಖಾಮುಖಿಯಾಗಲಿವೆ. ಇಲ್ಲಿ ಒಂದು ತಂಡಕ್ಕೆ ಸೋಲು ಖಚಿತ. ಲಕ್ನೋ ಗೆದ್ದರೆ ಆರ್​ಸಿಬಿಗೆ ನಷ್ಟವಾಗಲಿದೆ. ಇನ್ನೊಂದು ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಆಡಲಿವೆ. ಇಲ್ಲಿ ಚೆನ್ನೈ ಗೆದ್ದರೆ 12 ಅಂಕ ಆಗಲಿವೆ. ಹೈದರಾಬಾದ್​ 12 ಅಂಕದೊಂದಿಗೆ ಸದ್ಯ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಈ ಎಲ್ಲ 5 ತಂಡಗಳ ಪೈಕಿ ಕನಿಷ್ಠ ಮೂರು ತಂಡಗಳು ಉಳಿದ ಲೀಗ್​ ಪಂದ್ಯಗಳಲ್ಲಿ ಸೋಲು ಕಂಡರೆ, 14 ಅಂಕದ ಗಡಿ ದಾಟಲು ವಿಫಲರಾದರೆ ಆಗ ಆರ್​ಸಿಬಿಗೆ ಪ್ಲೇ ಆಫ್​ ಅವಕಾಶ ಸಿಗಲಿದೆ. ಒಟ್ಟಾರೆ ಆರ್​ಸಿಬಿಗೆ ಗೆಲುವಿನ ಜತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕಿದೆ.

ಇದನ್ನೂ ಓದಿ IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

Continue Reading

ಕ್ರಿಕೆಟ್

IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

IPL 2024 Points Table: ಇಂದು ನಡೆಯುವ ಡಬಲ್​ ಹೆಡರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಕೆಕೆಆರ್​ ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ.

VISTARANEWS.COM


on

IPL 2024 Points Table
Koo

ಬೆಂಗಳೂರು: ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 52ನೇ ಪಂದ್ಯದಲ್ಲಿ ತವರು ತಂಡವಾದ ಆರ್​ಸಿಬಿ(Royal Challengers Bengaluru) 4 ವಿಕೆಟ್​ಗಳಿಂದ ಗುಜರಾತ್ ಟೈಟಾನ್ಸ್​ಗೆ(Gujarat Titans) ಸೋಲಿನ ರುಚಿ ತೋರಿಸಿತು. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2024 Points Table) ಭಾರೀ ಪ್ರಗತಿ ಸಾಧಿಸಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. 5 ಬಾರಿಯ ಚಾಂಪಿಯನ್​ ಮುಂಬೈ ಕೊನೆಯ ಸ್ಥಾನಕ್ಕೆ ಕುಸಿದಿದೆ.

​ಇಂದು ನಡೆಯುವ ಡಬಲ್​ ಹೆಡರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಕೆಕೆಆರ್​ ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​107314 (+1.098)
ಲಕ್ನೋ​​106412 (+0.094)
ಹೈದರಾಬಾದ್​106512 (+0.072)
ಚೆನ್ನೈ​105510 (+0.627)
ಡೆಲ್ಲಿ115610 (-0.442)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಗುಜರಾತ್​11478 (-1.320)
ಮುಂಬೈ11386 (-0.356)

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

ಇದನ್ನೂ ಓದಿ IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

ಸಾಧಾರಣ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಫಾಫ್​ ಡು ಪ್ಲೆಸಿಸ್​ 23 ಎಸೆತಕ್ಕೆ 63 ರನ್ ಬಾರಿಸಿದರು. ಕೇವಲ 3.1 ಓವರ್​ಗಳಲ್ಲಿ 50 ರನ್ ಗಡಿ ದಾಟಿಸಿದ ಕೊಹ್ಲಿ ಮತ್ತು ಫಾಪ್​ ಗೆಲುವು ಸುಲಭ ಎಂದು ಅಂದುಕೊಳ್ಳುವಂತೆ ಮಾಡಿದರು. ಈ ಜೋಡಿ ಮೊದಲ ವಿಕೆಟ್​ಗೆ 5.5 ಓವರ್​ಗಳಲ್ಲಿ 92 ರನ್ ಬಾರಿಸಿತು. ಆದರೆ ಈ ವೇಳೆ ನಾಟಕೀಯ ಕುಸಿತ ಕಂಡು 17 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡ ಆರ್​ಸಿಬಿ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿಯು. ಆದರೆ, ಕೊನೆಯಲ್ಲಿ ಪಿನಿಶರ್ ದಿನೇಶ್ ಕಾರ್ತಿಕ್​ 21 ರನ್ ಹಾಗೂ ಸ್ವಪ್ನಿಲ್​ ಸಿಂಗ್ 15 ರನ್ ಬಾರಿಸಿ ಗೆಲುವು ತಂದುಕೊಟ್ಟರು.

Continue Reading

ಪ್ರಮುಖ ಸುದ್ದಿ

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024: ಪಂದ್ಯದ ನಂತರ ಟೀಕಾಕಾರರ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತೆಯೇ ಶನಿವಾರ ನಡೆದ ಆರ್​ಸಿಬಿ ಮತ್ತು ಜಿಟಿ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿಯ ಪ್ರತಿಕ್ರಿಯೆಗಳ ಬಗ್ಗೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದರು. ಕೊಹ್ಲಿ 118 ಸ್ಟ್ರೈಕ್ ರೇಟ್ ನಲ್ಲಿ ಆಡಿ ನಂತರ 14 ಅಥವಾ 15 ನೇ ಓವರ್​ಗಳಲ್ಲಿ ನಿಧಾನಗೊಳಿಸುವುದನ್ನು ವೀಕ್ಷಕ ವಿವರಣೆಗಾರರು ಪ್ರಶ್ನಿಸಿದ್ದಾರೆ ಅಷ್ಟೆ. ಅದರಲ್ಲಿ ಏನು ತಪ್ಪು ಎಂದು ಎಂದು ಭಾರತೀಯ ದಂತಕಥೆ ಪ್ರಶ್ನಸಿದ್ದಾರೆ.

VISTARANEWS.COM


on

Virat kohli
Koo

ನವದೆಹಲಿ: ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿರುವುದಕ್ಕೆ ತಿರುಗೇಟು ಕೊಟ್ಟಿರುವ ಕೊಹ್ಲಿಯ ಬಗ್ಗೆ ಕ್ರಿಕೆಟ್ ದಂತಕತೆ ಸುನಿಲ್​ ಗವಾಸ್ಕರ್​ ಮತ್ತೆ ಕೋಪ ವ್ಯಕ್ತಪಡಿಸಿದ್ದಾರೆ. ಐಪಿಎಲ್​ (IPL 2024) ಪಂದ್ಯಗಳ ಸಮಯದಲ್ಲಿ ವೀಕ್ಷಕ ವಿವರಣೆಗಾರರು ತಮ್ಮ ಮುಂದೆ ನಡೆಯುತ್ತಿರುವುದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗೆಂದು ಅವರಿಗೆ ಯಾವುದೇ ದುರುದ್ದೇಶ ಇರುವುದಿಲ್ಲ ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ. ಕೊಹ್ಲಿಯ ಸ್ಟ್ರೈಕ್ ರೇಟ್ ಇತ್ತೀಚೆಗೆ ಚರ್ಚೆಯ ವಿಷಯವಾಗಿತ್ತು. ಪವರ್​ಪ್ಲೇ ಓವರ್ಗಳ ನಂತರ ಅವರು ನಿಧಾನವಾಗಿ ಅಡುತ್ತಾರೆ ಎಂದು ಅನೇಕರು ಟೀಕಿಸಿದ್ದಾರೆ. ಏಪ್ರಿಲ್ 28 ರಂದು ಜಿಟಿ ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 70 ರನ್ ಗಳಿಸಿದ್ದು ಅದರಲ್ಲೊಂದು .

ಪಂದ್ಯದ ನಂತರ ಟೀಕಾಕಾರರ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತೆಯೇ ಶನಿವಾರ ನಡೆದ ಆರ್​ಸಿಬಿ ಮತ್ತು ಜಿಟಿ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿಯ ಪ್ರತಿಕ್ರಿಯೆಗಳ ಬಗ್ಗೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದರು. ಕೊಹ್ಲಿ 118 ಸ್ಟ್ರೈಕ್ ರೇಟ್ ನಲ್ಲಿ ಆಡಿ ನಂತರ 14 ಅಥವಾ 15 ನೇ ಓವರ್​ಗಳಲ್ಲಿ ನಿಧಾನಗೊಳಿಸುವುದನ್ನು ವೀಕ್ಷಕ ವಿವರಣೆಗಾರರು ಪ್ರಶ್ನಿಸಿದ್ದಾರೆ ಅಷ್ಟೆ. ಅದರಲ್ಲಿ ಏನು ತಪ್ಪು ಎಂದು ಎಂದು ಭಾರತೀಯ ದಂತಕಥೆ ಪ್ರಶ್ನಸಿದ್ದಾರೆ.

ಸ್ಟ್ರೈಕ್ ರೇಟ್ 118 ಇದ್ದಾಗ ಮಾತ್ರ ವೀಕ್ಷಕ ವಿವರಣೆಗಾರರು ಪ್ರಶ್ನಿಸಿದ್ದರು. ನನಗೆ ಹೆಚ್ಚು ಖಚಿತವಿಲ್ಲ. ನಾನು ಹೆಚ್ಚು ಪಂದ್ಯಗಳನ್ನು ನೋಡುವುದಿಲ್ಲ. ಆದ್ದರಿಂದ ಇತರ ವೀಕ್ಷಕ ವಿವರಣೆಗಾರರು ಬೇರೆ ರೀತಿಯಲ್ಲಿ ಏನು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ನೀವು 118 ಸ್ಟ್ರೈಕ್ ಹೊಂದಿದ್ದರೆ ಮತ್ತು ನಂತರ 118 ಸ್ಟ್ರೈಕ್ ರೇಟ್ನೊಂದಿಗೆ ಔಟ್ ಆಗಿದ್ದರೆ ಸರಿಯಲ್ಲ. ನನ್ನ ಪ್ರಕಾರ ನಿಮ್ಮದು ಚಪ್ಪಾಳೆಗಾಗಿ ಪ್ರಯತ್ನ ಎಂದು ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

ಹೊರಗಿನ ಮಾತುಗಳಿಗೆ ನೀವು ಏಕೆ ಪ್ರತಿಕ್ರಿಯಿಸುತ್ತಿದ್ದೀರಿ?

ಗವಾಸ್ಕರ್ ಅವರು ಕೊಹ್ಲಿಯನ್ನು ಸತತವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊರಗಿನ ಗದ್ದಲ ಹಾಗೂ ವಿಶ್ಲೇಷಣೆಗೆ ಗಮನ ಹರಿಸುವುದನ್ನೂ ಪ್ರಶ್ನಿಸಿದ್ದಾರೆ. ವೀಕ್ಷಕ ವಿವರಣೆಗಾರರಿಗೆ ಯಾರ ವಿರುದ್ಧವೂ ಯಾವುದೇ ಕಾರ್ಯಸೂಚಿಗಳಿಲ್ಲ ಮತ್ತು ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ದಂತಕಥೆ ಹೇಳಿದರು.

“ನೀವು ಯಾವುದೇ ಹೊರಗಿನ ಮಾತುಗಳಿಗೆ ಏಕೆ ಉತ್ತರಿಸುತ್ತಿದ್ದೀರಿ. ನಾವೆಲ್ಲರೂ ಸ್ವಲ್ಪ ಕ್ರಿಕೆಟ್ ಆಡಿದ್ದೇವೆ. ಸಾಕಷ್ಟು ಕ್ರಿಕೆಟ್ ಅಲ್ಲ. ಆದರೆ ನಮಗೆ ಯಾವುದೇ ಕಾರ್ಯಸೂಚಿಗಳಿಲ್ಲ. ನಾವು ಏನನ್ನು ನೋಡುತ್ತೇವೆಯೋ ಅದರ ಬಗ್ಗೆ ಮಾತನಾಡುತ್ತೇವೆ. ನಮಗೆ ಯಾವುದೇ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಇರಬೇಕಾಗಿಲ್ಲ. ನಮಗೆ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಇದ್ದರೂ ಉಪಯೋಗವಿಲ್ಲ ಎಂದು ಗವಾಸ್ಕರ್ ಹೇಳಿದರು.

Continue Reading
Advertisement
Kangana Ranaut
ರಾಜಕೀಯ7 mins ago

Kangana Ranaut: ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾನೆ ಎಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್! ವಿಡಿಯೊ ನೋಡಿ

Virat Kohli
ಕ್ರೀಡೆ11 mins ago

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

HD Revanna
ಕರ್ನಾಟಕ17 mins ago

HD Revanna: ಅಶ್ಲೀಲ ವಿಡಿಯೊ ಪ್ರಕರಣ: ದೂರು ನೀಡಲು ಮುಂದೆ ಬಂದ ಮೂವರು ಸಂತ್ರಸ್ತೆಯರು; ರೇವಣ್ಣ, ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ?

Annamalai Biopic Will Be Made In Kollywood Annamalai Biopic Will Be Made In Kollywood Annamalai Biopic Will Be Made In Kollywood
ಕಾಲಿವುಡ್36 mins ago

Annamalai Biopic: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಯೋಪಿಕ್‌ಗೆ ತಮಿಳು ಖ್ಯಾತ ನಟ ನಟನೆ!

IPL 2024
ಕ್ರೀಡೆ45 mins ago

IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

HD Revanna
ಕರ್ನಾಟಕ1 hour ago

HD Revanna: ಎಚ್‌.ಡಿ.ರೇವಣ್ಣ ಮುಂದಿನ ಕಾನೂನು ಹೋರಾಟ ಯಾವ ರೀತಿ ಇರಲಿದೆ? ಇಲ್ಲಿದೆ ಮಾಹಿತಿ

Shreyas Talpade hints his heart attack side effect of Covid vaccine
ಬಾಲಿವುಡ್1 hour ago

Shreyas Talpade: ಶ್ರೇಯಸ್‌ ತಲ್ಪಾಡೆ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್‌ ಕಾರಣವಂತೆ! ನಟ ಹೇಳಿದ್ದೇನು?

IPL 2024 Points Table
ಕ್ರಿಕೆಟ್1 hour ago

IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

Blood Pressure
ಆರೋಗ್ಯ1 hour ago

Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

Prajwal Revanna Case
ಕರ್ನಾಟಕ1 hour ago

Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌