Fire Tragedy: ಟಿಶ್ಯೂ ಪೇಪರ್ ಕಂಪನಿ ಗೋದಾಮು ಸಂಪೂರ್ಣ ಭಸ್ಮ - Vistara News

ಬೆಂಗಳೂರು

Fire Tragedy: ಟಿಶ್ಯೂ ಪೇಪರ್ ಕಂಪನಿ ಗೋದಾಮು ಸಂಪೂರ್ಣ ಭಸ್ಮ

ಬೆಂಗಳೂರಿನ‌ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಸಮೀಪದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿರುವ ಭಾರಿ ಅಗ್ನಿ ಅನಾಹುತದಲ್ಲಿ ಗಾಮಿ ಕೇರ್ ಐಜಿನ್ ಕಂಪನಿ ಎಂಬ ಟಿಶ್ಯೂ ಪೇಪರ್ ಮ್ಯಾನುಫ್ಯಾಕ್ಚರ್ ಕಂಪನಿಗೆ‌‌‌ ಸೇರಿದ ಗೋಡೌನ್ ಪೂರ್ತಿ ಸುಟ್ಟುಹೋಗಿದೆ.

VISTARANEWS.COM


on

tissue paper godown
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಟಿಶ್ಯೂ ಪೇಪರ್‌ ಕಂಪನಿಯ ಗೋಡೌನ್‌ ಸಂಪೂರ್ಣ ಭಸ್ಮವಾಗಿದೆ.

ಬೆಂಗಳೂರಿನ‌ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಸಮೀಪದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿರುವ ಭಾರಿ ಅಗ್ನಿ ಅನಾಹುತದಲ್ಲಿ ಗಾಮಿ ಕೇರ್ ಐಜಿನ್ ಕಂಪನಿ ಎಂಬ ಟಿಶ್ಯೂ ಪೇಪರ್ ಮ್ಯಾನುಫ್ಯಾಕ್ಚರ್ ಕಂಪನಿಗೆ‌‌‌ ಸೇರಿದ ಗೋಡೌನ್ ಪೂರ್ತಿ ಸುಟ್ಟುಹೋಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಕೆಲಸ‌ ಮಾಡುತ್ತಿದ್ದ ಸಿಬ್ಬಂದಿ ಊಟಕ್ಕೆಂದು ಹೊರ ಹೋಗಿದ್ದ ವೇಳೆ ಗೋದಾಮಿನೊಳಗೆ ಬೆಂಕಿ‌ ಕಾಣಿಸಿಕೊಂಡಿದೆ.‌ ಸಣ್ಣ ಪ್ರಮಾಣದಲ್ಲಿ‌ ಕಾಣಿಸಿಕೊಂಡ ಬೆಂಕಿ ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಗೋದಾಮನ್ನು ಆವರಿಸಿದೆ.

9 ವಾಹನಗಳಲ್ಲಿ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿ‌ಶಾಮಕ‌ ಸಿಬ್ಬಂದಿ‌ ಬೆಂಕಿ‌ ನಂದಿಸುವ ಕಾರ್ಯ ಮಾಡಿದ್ದಾರೆ. ಸತತ ಏಳೆಂಟು ಗಂಟೆಗಳ ಕಾರ್ಯಾಚರಣೆ ಬಳಿಕ‌ ಬೆಂಕಿ‌ ನಂದಿಸುವಲ್ಲಿ ಅಗ್ನಿಶಾಮಕ‌ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಚೇರಿ, ತಯಾರಿಕ ಘಟಕದಲ್ಲಿದ್ದ ಕಂಪ್ಯೂಟರ್ಸ್, ಯಂತ್ರೋಪಕರಣಗಳು, ಕೆಮಿಕಲ್ಸ್, ಕಚ್ಚಾ ವಸ್ತುಗಳು ಸೇರಿದಂತೆ ಕೋಟ್ಯಾಂತರ ರೂಪಾಯಿ‌ ಮೌಲ್ಯದ ಸ್ವತ್ತು ಬೆಂಕಿಯಲ್ಲಿ ಬೆಂದು ಬೂದಿಯಾಗಿವೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Fire Accident: ಜೆ.ಸಿ. ನಗರದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಪ್ರಾಣಾಪಾಯದಿಂದ ಚಾಲಕ ಪಾರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

MLC Election: ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದ್ರೆ ಐತಿಹಾಸಿಕ ಫಲಿತಾಂಶ: ಎಚ್‌ಡಿಕೆ

MLC Election: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಹಣದ ಹೊಳೆ ಹರಿಸುತ್ತಿದ್ದಾರೆ. ಅವರಂತೆ ನಮ್ಮ ಅಭ್ಯರ್ಥಿಗಳು ಖರ್ಚು ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಒಗ್ಗಾಟ್ಟಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ-ಜೆಡಿಎಸ್‌ ನಾಯಕರ ಸಮನ್ವಯ ಸಭೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

VISTARANEWS.COM


on

MLC Election
Koo

ಬೆಂಗಳೂರು: ನಗರದ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಸಮನ್ವಯ ಸಭೆ ಭಾನುವಾರ ನಡೆಯಿತು. ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ, ಮೈತ್ರಿ ಸಹಕಾರ ಹಾಗೂ ಪ್ರಸಕ್ತ ರಾಜಕೀಯ ವಿಚಾರಗಳ ಕುರಿತು ದೋಸ್ತಿ ನಾಯಕರು ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು, ಈಗಾಗಲೇ ನಮ್ಮ ನಾಯಕರು ಹಲವಾರು ವಿಚಾರ ಮಾತನಾಡಿದ್ದಾರೆ. ಹಾಗಾಗಿ ಅದೇ ವಿಚಾರಗಳನ್ನು ನಾನು ಮಾತನಾಡಲ್ಲ. ಅ.ದೇವೇಗೌಡರು ನಮ್ಮ ಜನತಾದಳಲ್ಲೇ ಬೆಳೆದವರು. 1996ರಲ್ಲಿ ನನ್ನ ಚುನಾವಣೆಗೂ ಅ.ದೇವೇಗೌಡರು ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನವರು ಈಗಾಗಲೇ ಹಣದ ಹೊಳೆ ಹರಿಸುತ್ತಿದ್ದಾರೆ. ಅವರಂತೆ ನಮ್ಮ ಅಭ್ಯರ್ಥಿ ದೇವೇಗೌಡ ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇಲ್ಲಿ ಬಿಜೆಪಿ ಶಾಸಕ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಮತಗಳು ಸೇರಿ ಸುಮಾರು 72 ಸಾವಿರ ಮತ ಇದೆ. ಅಶೋಕ್ ಹೇಳಿದಂತೆ ನಿಮ್ಮ ಜತೆಗೆ ಒಂದಷ್ಟು ಜನರನ್ನು ಕರೆದುಕೊಂಡು ಬಂದು ಹಾಕಿಸಿ. ಮನೆ ಮನೆಗೆ ತೆರಳಿ ಎರಡು ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಬೇಕು. ಕಾಂಗ್ರೆಸ್‌ನವರು ಏನಾದರೂ ಆಮಿಷ ತೋರಿಸಲಿ. ಅವರು ಹಣವನ್ನು ಹೆಚ್ಚಾಗಿ ಖರ್ಚು ಮಾಡುತ್ತಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದ್ದಿರಂದ ಐತಿಹಾಸಿಕ ಫಲಿತಾಂಶ ಬರುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್‌. ಮಂಜುನಾಥ್ ಗೆಲ್ಲುತ್ತಾರೆ ಎಂಬ ಭರವಸೆ ಇದೆ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

ಬ್ರ್ಯಾಂಡ್ ಬೆಂಗಳೂರು ಅಲ್ಲ ಲೂಟಿ ಬೆಂಗಳೂರು

ಯಾವ ಬ್ರ್ಯಾಂಡ್ ಬೆಂಗಳೂರು ಮಾಡಿರೋದು ಇವರು? ಅದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು. ಎರಡು ಮೂರು ಮಳೆಗೇ ಬೆಂಗಳೂರಿನಲ್ಲಿ ಮನೆಗಳಿಗೆ ನೀರು ತುಂಬಿಕೊಂಡಿದೆ. ಬಿಡಿಎನಲ್ಲಿ ಮೊನ್ನೆ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರಂತೆ. ಬಹಳ ರಹಸ್ಯವಾಗಿ ಸಭೆ ಮಾಡಿದ್ದಾರಂತೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿಗೆ ಇವರ ಕೊಡುಗೆ ಏನು? ಈ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಒಂದೂ ಹೊಸ ಅಭಿವೃದ್ಧಿ ಆಗಿಲ್ಲ. ಅಕ್ಕಿ ಕೊಡೋ ಯೋಗ್ಯತೆ ಇಲ್ಲ. ಐದು ಕೆ.ಜಿ. ಅಕ್ಕಿ ಬದಲಿಗೆ 170 ರೂ. ಮೂರು ತಿಂಗಳಿಂದ ಕೊಟ್ಟಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಟ್ಟಿಲ್ಲ. ಬಿತ್ತನೆ ಬೀಜದ ಬೆಲೆ 70% ಏರಿಕೆ ಮಾಡಿದ್ದಾರೆ, ಗೊಬ್ಬರ ಸಿಕ್ತಿಲ್ಲ. ರೈತರು ಹಲವು ಸಮಸ್ಯೆ ಎದುರಿಸತ್ತಿದ್ದಾರೆ. ಒಪಿಎಸ್ ಮರು ಜಾರಿ ಬಗ್ಗೆ ಸದ್ದು ಗದ್ದಲ ಇಲ್ಲ, ಈಗ ಸಮಿತಿ ಮಾಡಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಎಲ್ಲ ಅಭಿವೃದ್ಧಿ ಸ್ಥಗಿತ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರದ ನಡವಳಿಕೆ ಬಗ್ಗೆ ಜನರು ಗಮನಿಸಬೇಕು. ರಾಜ್ಯದ ಅಭಿವೃದ್ಧಿಗೆ ಇವರು ನಯಾ ಪೈಸೆ ಕೊಟ್ಟಿಲ್ಲ. ರಾಜ್ಯದಲ್ಲಿ 2,75,000 ಹುದ್ದೆಗಳು ಖಾಲಿ ಇವೆ. ಏನು ಕ್ರಮ ಕೈಗೊಂಡಿದ್ದಾರೆ ಎಂದ ಅವರು, ಮುಂದೆ ಒಳ್ಳೆಯ ದಿನಗಳ ಪ್ರಾರಂಭಬಾಗಲು ಪರಿಷತ್‌ ಚುನಾವಣೆ ಗೆಲ್ಲಬೇಕು ಎಂದು ಹೇಳಿದರು.

ಇದನ್ನೂ ಓದಿ | Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!

ಸಭೆಯಲ್ಲಿ ವಿಪಕ್ಷ ನಾಯಕ ‌ಆರ್. ಅಶೋಕ್ ‌ಮಾಜಿ ಸಚಿವರಾದ ಅಶ್ವತ್ಥ್ ನಾರಾಯಣ್‌, ಮುನಿರತ್ನ, ಗೋಪಾಲಯ್ಯ, ಎಂಎಲ್‌ಸಿ ತಿಪ್ಪೇಸ್ವಾಮಿ, ಟಿ.ಎ. ಶರವಣ, ಬೆಂಗಳೂರು ‌ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಅ.ದೇವೇಗೌಡ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ್ ಮೂರ್ತಿ , ಜೆಡಿಎಸ್ ಮಹಿಳಾ ಅಧ್ಯಕ್ಷ ರಶ್ಮಿ ರಮೇಗೌಡ ಸೇರಿದಂತೆ ಉಭಯ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಿದ್ದರು.

Continue Reading

ಕರ್ನಾಟಕ

Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!

Congress Karnataka: ಈ ಹಿಂದೆ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಹೇಳಿಕೆ ಕೊಟ್ಟಿದ್ದ ಸಚಿವ ಕೆ.ಎನ್‌. ರಾಜಣ್ಣ ಅವರು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂದು ಪರೋಕ್ಷವಾಗಿ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

VISTARANEWS.COM


on

Congress Karnataka
Koo

ಬೆಂಗಳೂರು: ಇನ್ನೂ ಎಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇರುತ್ತೇನೋ, ಇಲ್ಲವೋ ಎನ್ನುವುದು ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲು ನಾನು ರೆಡಿ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿರುವುದು ರಾಜಕಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷರು ಬದಲಾಗುತ್ತಾರೆ ಎಂಬ ಚರ್ಚೆಗೆ ಸಚಿವ ಕೆ.ಎನ್ ರಾಜಣ್ಣ ಸಾಥ್‌ ನೀಡಿದ್ದು, ಅಧ್ಯಕ್ಷರನ್ನು ಬದಲಾವಣೆ ಮಾಡೋದು ಹೈಕಮಾಂಡ್. ಮೂರು ವರ್ಷಗಳಿಗೆ ಒಬ್ಬರು ಬದಲಾವಣೆ ಆಗಬೇಕು. ಬದಲಾದರೆ ನಾನು ಸಹ ಆಕಾಂಕ್ಷಿ. ಅಧ್ಯಕ್ಷ ಸ್ಥಾನಕ್ಕಾಗಿ ಬೇಕಿದ್ದರೆ ಸಚಿವ ಸ್ಥಾನ ತ್ಯಾಗ ಮಾಡುತ್ತೀನಿ ಎಂದು ಹೇಳಿದ್ದಾರೆ.

ಈ ಹಿಂದೆ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಹೇಳಿಕೆ ಕೊಟ್ಟಿದ್ದ ಸಚಿವ ಕೆ.ಎನ್‌. ರಾಜಣ್ಣ ಅವರು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂದು ಪರೋಕ್ಷವಾಗಿ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಬಾರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಭಾರಿ ಸದ್ದು ಮಾಡಿತ್ತು, ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ರಾಜಣ್ಣ ಹೇಳಿಕೆ ನೀಡಿದ್ದಾರೆ.

Minister KN Rajanna

ಇದನ್ನೂ ಓದಿ | Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

ಡಿಕೆಶಿಗೆ ಚೆಕ್‌ಮೇಟ್ ಕೊಡುತ್ತಿದೆಯಾ ಸಿದ್ದರಾಮಯ್ಯ ಟೀಮ್

ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಸಚಿವ ಕೆ.ಎನ್ ರಾಜಣ್ಣ ಅವರು ಗುರುತಿಸಿಕೊಂಡಿದ್ದಾರೆ. ಇವರ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯನ್ನು ಮುನ್ನೆಲೆಗೆ ಬರುವಂತೆ ಸಿದ್ದರಾಮಯ್ಯ ಟೀಮ್ ಮಾಡಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ಬದಲಾವಣೆಗೆ ಒಳಗೊಳಗೆ ಸಿದ್ದರಾಮಯ್ಯ ಟೀಮ್ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಡಿಕೆಶಿ ಹೇಳಿಕೆ ಬೆನ್ನಲ್ಲೇ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಗ್ಗೆ ಕುತೂಹಲ ಮೂಡಿದೆ.

ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ; ಡಿಕೆಶಿ ಹೀಗೆ ಹೇಳಿದ್ಯಾಕೆ?

DK Shivakumar speaks about KPCC president post

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಪೂರೈಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ಘಟಕದಿಂದ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ತಮ್ಮ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ್ದರು. ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಆದರೆ, ಈ ಸ್ಥಾನದಲ್ಲಿ ಇನ್ನೆಷ್ಟು ದಿನ ಇರುತ್ತೇನೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ ಕಾಂಗ್ರೆಸ್‌ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ಹಿಂದೆ ಏನಾದರೂ ಉದ್ದೇಶ ಇದೆಯಾ? ಅವರು ಹೀಗೆ ಹೇಳಿದ್ದು ಯಾಕೆ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ.

ಅಷ್ಟಕ್ಕೂ ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಹೇಳಿದ್ದೇನೆಂದರೆ, “ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನೂ ಎಷ್ಟು ದಿನ ಈ ಸ್ಥಾನದಲ್ಲಿ ಇರುತ್ತೇನೋ, ಇಲ್ಲವೋ ಅನ್ನುವುದು ಗೊತ್ತಿಲ್ಲ. ನಮ್ಮ ಪಕ್ಷದ ನಾಯಕತ್ವ ಬುನಾದಿ ಗಟ್ಟಿ ಮಾಡಬೇಕು. ಬೂತ್ ಮಟ್ಟದಲ್ಲಿ ಗಟ್ಟಿ ಮಾಡಬೇಕು” ಎಂದು ಕಿವಿಮಾತು ಹೇಳಿದ್ದರು.

ನಾನು ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ. ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ, ಅದು ಮುಖ್ಯ ಎಂಬ ಮಾತನ್ನೂ ಇದೇ ವೇಳೆ ಹೇಳಿದ್ದರು. ಅಂದರೆ, ಅವರಿಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತುಗಳನ್ನು ಆಡಿದ್ದರು. ತಾವು ಪಕ್ಷಕ್ಕಾಗಿ ಗಟ್ಟಿಯಾಗಿ ನಿಂತಿದ್ದರಿಂದ ಪಕ್ಷವು ಅಧಿಕಾರಕ್ಕೆ ಬಂದಿದೆ. ಅದೇ ರೀತಿಯಾಗಿ ಪಕ್ಷದ ನಾಯಕತ್ವವನ್ನು, ಉನ್ನತ ಹುದ್ದೆಯನ್ನು ಕೇಳುವವರು ಕೆಲಸ ಮಾಡಿ ತೋರಿಸಬೇಕು ಎಂಬ ನೇರ ಸಂದೇಶವನ್ನು ಡಿ.ಕೆ. ಶಿವಕುಮಾರ್‌ ರವಾನೆ ಮಾಡಿದ್ದರು.

ಹೊಸ ನಾಯಕತ್ವ ಬೆಳೆಸುವ ಎಚ್ಚರಿಕೆ!

ನಾಲ್ಕು ವೋಟ್ ಹಾಕಿಸದೇ ಬಂದು ಇಲ್ಲಿ ಸ್ಥಾನಮಾನ ಕೇಳುತ್ತೀರಾ? ಮೊದಲು ನಿಮ್ಮ ಬೂತ್‌ನಲ್ಲಿ ಸಂಘಟನೆ ಮಾಡಿ. ಬೂತ್ ಲೀಡ್ ಕೊಡಿಸಿ ಬಂದು ನಾಯಕತ್ವ ಕೇಳಿ. ಇಲ್ಲದೆ ಹೋದರೆ ನಾಯಕತ್ವ ಕೊಡಲ್ಲ ಎಂದು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್‌ ಚಾಟಿ ಬೀಸಿದ್ದರು.

ಇದನ್ನೂ ಓದಿ | D‌rinking Water: ಅಧಿಕಾರಿಗಳೇ ಹುಷಾರ್! ನೀರಿನಿಂದ ಆರೋಗ್ಯ ಕೈಕೊಟ್ರೆ ಶಿಸ್ತು ಕ್ರಮ: ಡಿಕೆಶಿ ವಾರ್ನಿಂಗ್

ನಾಲ್ಕು ವೋಟ್ ಹಾಕಿಸದೇ ಬಂದು ಇಲ್ಲಿ ಸ್ಥಾನಮಾನ ಕೇಳಿದರೆ ಹೇಗೆ? ಬಿಳಿ‌ ಜುಬ್ಬಾ, ಬಿಳಿ‌ ಕಾರು ತೆಗೆದುಕೊಂಡು ಬಂದು ಸ್ಥಾನಗಳನ್ನು ಕೇಳುವುದಲ್ಲ. ಮೊದಲು ಸಂಘಟನೆ ‌ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ. ನಾವು ಹೊಸ ‌ನಾಯಕತ್ವವನ್ನು ಬೆಳೆಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಬೂತ್‌ ಮಟ್ಟದಲ್ಲಿ ಪಕ್ಷ ಬಲಗೊಳ್ಳದಿದ್ದರೆ ದೂರದೃಷ್ಟಿಯಲ್ಲಿ ಪಕ್ಷವು ಉಳಿದುಕೊಳ್ಳುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಮುಖಂಡರಿಗೆ ಬಿಸಿ ಮುಟ್ಟಿಸುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್‌ ಮಾಡಿದ್ದಾರೆನ್ನಲಾಗಿದೆ.

Continue Reading

ಬೆಂಗಳೂರು

Theft case : ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

Theft Case : ಬೆಂಗಳೂರಲ್ಲಿ ಇಬ್ಬರು ಸುಲಿಗೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಕೂಟರ್‌ನಲ್ಲಿ ಬರುವ ಈ ಖದೀಮರು ಕ್ಷಣಾರ್ಧದಲ್ಲೇ ಮೊಬೈಲ್‌ ಕಸಿದು ಪರಾರಿ ಆಗುತ್ತಿದ್ದರು.

VISTARANEWS.COM


on

By

theft Case
Koo

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

ಬೆಂಗಳೂರಲ್ಲಿ ಶುರುವಾಗಿದೆ ನಕಲಿ ಪೊಲೀಸರ ಹಾವಳಿ

ರಾಜಧಾನಿ ಬೆಂಗಳೂರಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ನಕಲಿ ಐಡಿ ತೋರಿಸಿ ಕೇಸ್ ರಿಜಿಸ್ಟರ್ ಆಗಿದೆ ಎಂದು ಬ್ಲಾಕ್‌ ಮೇಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಮಹಿಳೆಯೊಬ್ಬರಿಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಕರೆ ಮಾಡಿದ್ದ ನಕಲಿ ಪೊಲೀಸ್‌ವೊಬ್ಬ ಹಂತ ಹಂತವಾಗಿ ಹಣ ದೋಚಿದ್ದಾನೆ.

ಮುಂಬೈ ಮತ್ತು ಬೆಂಗಳೂರು ಪೋಲಿಸರ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ನಾವು ಲೋಕಲ್ ಪೊಲೀಸರು, ಮುಂಬೈನಲ್ಲಿ ನಿಮ್ಮ ಮೇಲೆ ಕೇಸ್ ರಿಜಿಸ್ಟರ್ ಆಗಿದೆ ಎಂದು ಫೋನ್‌ ಮಾಡುತ್ತಾರೆ. ಅವರು ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ ಎಂದೇಳಿ ಬೆದರಿಸಿ ದಂಡ ಕಟ್ಟಿ ಎಂದು ಹಂತ ಹಂತವಾಗಿ ಹಣ ದೋಚಿದ್ದಾರೆ. ಸದ್ಯ ಇಂದ್ರನಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬೆನ್ನಹತ್ತಿದ್ದಾರೆ.

ಕುಖ್ಯಾತ ಡ್ರಗ್ ಪೆಡ್ಲರ್ ಬಂಧನ

ಬೆಂಗಳೂರಿನ ಚೆನ್ನಮ್ಮನ ಕೆರೆ ಪೊಲೀಸರು ಕುಖ್ಯಾತ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ. ಕೋಲಾರ ಮೂಲದ ರೂಪೇಶ್ ಬಂಧಿತ ಡ್ರಗ್ ಪೆಡ್ಲರ್. ನೈಜೀರಿಯಾ ಹಾಗೂ ಕೇರಳದಿಂದ ಡ್ರಗ್ ಆಮದು ಮಾಡಿಕೊಂಡು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಈತ ಪ್ರತಿಷ್ಠಿತ ಕಾಲೇಜುಗಳಿರುವ ‌ಏರಿಯಾಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ.

ಸದ್ಯ ಬಂಧಿತನಿಂದ 120 ಗ್ರಾಂ ಸಿಂಥೆಟಿಕ್ ಡ್ರಗ್, ಎಂಡಿಎಂಎ ಹಾಗೂ ಒಂದೂವರೆ ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈತ ಚೆನ್ನಮ್ಮನಕೆರೆ, ಗಿರಿನಗರ, ಟಿಸಿ ಪಾಳ್ಯ ಪ್ರದೇಶದಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ. ರೇವ್ ಪಾರ್ಟಿಗೂ ಮಾದಕ ವಸ್ತು ಸಪ್ಲೈ ಮಾಡುತ್ತಿದ್ದ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

Road Accident : ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಮಹಿಳೆಯೊಬ್ಬರು ಕಾರು ಕಲಿಯಲು ಹೋಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

VISTARANEWS.COM


on

By

Road Accident in Bengaluru
Koo

ಬೆಂಗಳೂರು: ಮಹಿಳೆಯೊಬ್ಬರು ಕಾರು ಕಲಿಯುವಾಗ (Car Driving) ನಿಯಂತ್ರಣ ತಪ್ಪಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಗುದ್ದಿದೆ. ಪರಿಣಾಮ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕಿಗೆ (Road Accident) ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಅಪಘಾತ ನಡೆದಿದೆ.

ಕಗ್ಗಲೀಪುರದ ನಿವಾಸಿಗಳಾದ ವೆಂಕಟೇಶ್‌ ಮತ್ತು ಲಕ್ಷ್ಮೀ ದಂಪತಿಯ ಮಗಳು ನಾಗಲಕ್ಷ್ಮೀ (7) ಮೃತ ದುರ್ದೈವಿ. ಪಕ್ಕದ ಮನೆಯ ಮಹಿಳೆಯೊಬ್ಬರು ಕಾರು ಕಲಿಯಲು ಮುಂದಾಗಿದ್ದರು. ಇದೇ ವೇಳೆ ನಾಗಲಕ್ಷ್ಮೀ ಮನೆ ಮುಂದೆ ಆಟವಾಡುತ್ತಿದ್ದಳು. ಕಾರು ಓಡಿಸುವಾಗ ನಿಯಂತ್ರಣ ತಪ್ಪಿದ್ದು ಏಕಾಏಕಿ ವೇಗವಾಗಿ ಬಂದು ನಾಗಲಕ್ಷ್ಮಿಗೆ ಗುದ್ದಿ, ಮನೆಯೊಂದರ ತಡೆಗೋಡೆ ಡಿಕ್ಕಿ ಹೊಡೆದು ನಿಂತಿದೆ. ನಾಗಲಕ್ಷ್ಮೀ ತಲೆಗೆ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

Road Accident

ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಅಪಘಾತ ಮಾಡಿದ ಮಹಿಳೆಯನ್ನು ವಶಕ್ಕೆ ಪಡೆದು ಕಾರನ್ನು ಸೀಜ್‌ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ

ಮಗು ಆಟವಾಡುತ್ತಿರುವಾಗ ಕಾರು ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹ ಹಿಡಿದು ರಸ್ತೆ ತಡೆದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕನಕಪುರ ರಸ್ತೆಯಲ್ಲಿ ಪ್ರತಿಭಟಿಸಿದ ಮೃತ ಕುಟುಂಬಸ್ಥರು ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು. ದಿಢೀರ್‌ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಆದ ಕಾರಣ ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.

ಚಿಕ್ಕೋಡಿಯಲ್ಲಿ ಸರಣಿ ಅಪಘಾತ; ಮೂವರ ಸ್ಥಿತಿ ಗಂಭೀರ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಹೊರವಲಯದ ಮಾಹಲಿಂಗಪುರ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೃಹತ್ ಲಾರಿ- ಕಾರು ಹಾಗೂ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಅಪಘಾತ ತೀವ್ರತೆಗೆ ಮೂವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಇದನ್ನೂ ಓದಿ: Hassan Accident: ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

ಕಾರವಾರ: ಬಸ್‌ಗೆ ಸ್ಕೂಟರ್‌ ಡಿಕ್ಕಿಯಾಗಿದ್ದು, ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಗ್ರಾಮದ ಬಳಿ ಘಟನೆ (Road Accident) ನಡದಿದೆ. ಸವಾರ ಶಂಕರ ಹೆಗಡೆ (50) ಮೃತ ದುರ್ದೈವಿ.

ಕೆಎಸ್‌ಆರ್‌ಟಿಸಿ ಬಸ್‌ ಭಟ್ಕಳ ಭಾಗದಿಂದ ಕುಮಟಾದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್‌ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಶಂಕರ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬಸ್‌ ಮುಂಭಾಗ ಹಾನಿಯಾಗಿದ್ದು, ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
MLC Election
ಕರ್ನಾಟಕ37 seconds ago

MLC Election: ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದ್ರೆ ಐತಿಹಾಸಿಕ ಫಲಿತಾಂಶ: ಎಚ್‌ಡಿಕೆ

Iran-Israel Conflict
ವಿದೇಶ9 mins ago

Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್‌

Congress Karnataka
ಕರ್ನಾಟಕ1 hour ago

Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!

Malaysia Masters Final
ಕ್ರೀಡೆ1 hour ago

Malaysia Masters Final: ಮಲೇಷ್ಯಾ ಮಾಸ್ಟರ್ಸ್ ಫೈನಲ್​ನಲ್ಲಿ ಸೋಲು ಕಂಡ ಪಿ.ವಿ.ಸಿಂಧು

Priyanka Upendra Red Rock Studio in collaboration with Comer Film Factory
ಸ್ಯಾಂಡಲ್ ವುಡ್1 hour ago

Priyanka Upendra: ’ಕಮರ್ ಫಿಲಂ ಫ್ಯಾಕ್ಟರಿ’ ಸಹಯೋಗದಲ್ಲಿ ‘ರೆಡ್ ರಾಕ್ ಸ್ಟುಡಿಯೊ’ ಶುಭಾರಂಭ: ಪ್ರಿಯಾಂಕ ಉಪೇಂದ್ರ ಸಾಥ್‌!

Mob Attacks
ವಿದೇಶ1 hour ago

Mob Attacks: ಕುರಾನ್ ಅಪವಿತ್ರ ನೆಪ; ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರ ಮೇಲೆ ಮುಸ್ಲಿಮರ ದಾಳಿ

theft Case
ಚಿಕ್ಕಬಳ್ಳಾಪುರ1 hour ago

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

Flight Emergency Landing
ದೇಶ2 hours ago

Flight Emergency Landing: ತಪ್ಪಿದ ಮತ್ತೊಂದು ಭಾರೀ ಅವಘಡ; ಸ್ಪೈಸ್‌ ಜೆಟ್‌ ವಿಮಾನ ತುರ್ತು ಭೂಸ್ಪರ್ಶ

Lockup Death
ಪ್ರಮುಖ ಸುದ್ದಿ2 hours ago

Lockup Death: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್; 23 ಕಿಡಿಗೇಡಿಗಳ ಸೆರೆ

theft Case
ಬೆಂಗಳೂರು2 hours ago

Theft case : ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 week ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 week ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌