UBS-Credit Suisse merger : ಯುಬಿಎಸ್‌- ಕ್ರೆಡಿಟ್‌ ಸ್ವೀಸ್‌ ವಿಲೀನ, ಭಾರತದಲ್ಲೂ ಸಾವಿರಾರು ಉದ್ಯೋಗ ಕಡಿತ ಸಂಭವ - Vistara News

ಪ್ರಮುಖ ಸುದ್ದಿ

UBS-Credit Suisse merger : ಯುಬಿಎಸ್‌- ಕ್ರೆಡಿಟ್‌ ಸ್ವೀಸ್‌ ವಿಲೀನ, ಭಾರತದಲ್ಲೂ ಸಾವಿರಾರು ಉದ್ಯೋಗ ಕಡಿತ ಸಂಭವ

ಸ್ವಿಸ್‌ ಬ್ಯಾಂಕಿಂಗ್‌ ದಿಗ್ಗಜ ಯುಬಿಎಸ್‌ ಜತೆ ಕ್ರೆಡಿಟ್‌ ಸ್ವೀಸ್‌ ವಿಲೀನದ ಪರಿಣಾಮ ಭಾರತದ ಟೆಕ್‌ ಸೆಂಟರ್‌ಗಳಲ್ಲಿ (UBS-Credit Suisse merger) ಸಾವಿರಾರು ಉದ್ಯೋಗ ಕಡಿತದ ಭೀತಿ ಉಂಟಾಗಿದೆ. ವಿವರ ಇಲ್ಲಿದೆ.

VISTARANEWS.COM


on

UBS
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸ್ವಿಸ್‌ ಬ್ಯಾಂಕಿಂಗ್‌ ದಿಗ್ಗಜ ಯುಬಿಎಸ್‌, ದಿವಾಳಿಯಂಚಿನಲ್ಲಿರುವ ಕ್ರೆಡಿಟ್‌ ಸ್ವೀಸ್‌ ಅನ್ನು ಖರೀದಿಸಿದೆ. (UBS-Credit Suisse merger) ಇದರ ಪರಿಣಾಮ ಭಾರತದಲ್ಲೂ ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಅಪಾಯವೂ ಇದೆ. ಯುಬಿಎಸ್‌ ಮತ್ತು ಕ್ರೆಡಿಟ್‌ ಸ್ವೀಸ್‌ ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಬ್ಯಾಕ್‌ ಆಫೀಸ್‌ಗಳನ್ನು ಹೊಂದಿದ್ದು, ಈ ಕಚೇರಿಗಳಲ್ಲಿ 7,000ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಯುಬಿಎಸ್‌ನಲ್ಲಿ ಕ್ರೆಡಿಟ್‌ ಸ್ವೀಸ್‌ ವಿಲೀನವಾಗುತ್ತಿರುವುದರಿಂದ ವೆಚ್ಚ ನಿಯಂತ್ರಣದ ಭಾಗವಾಗಿ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.

ಯುಬಿಎಸ್‌ ಮತ್ತು ಕ್ರೆಡಿಟ್‌ ಸ್ವೀಸ್‌ ತಮ್ಮ ತಂತ್ರಜ್ಞಾನ ಕೇಂದ್ರಗಳಲ್ಲಿ 14,000 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 7,000 ಮಂದಿ ಭಾರತದ ನಾನಾ ನಗರಗಳಲ್ಲಿನ ಟೆಕ್‌ ಸೆಂಟರ್‌ಗಳಲ್ಲಿ (Global in-house centre) ಇದ್ದಾರೆ.‌

ಸ್ವಿಜರ್ಲೆಂಡ್‌ನ ಬ್ಯಾಂಕಿಂಗ್‌ ದಿಗ್ಗಜ ಯುಬಿಎಸ್‌ (UBS) ದಿವಾಳಿಯಾಗುವ ಅಪಾಯದಲ್ಲಿರುವ ಮತ್ತೊಂದು ಸ್ವಿಸ್‌ ಬ್ಯಾಂಕ್‌ ಕ್ರೆಡಿಟ್‌ ಸ್ವೀಸ್‌ ಅನ್ನು 26,800 ಕೋಟಿ ರೂ.ಗಳ ಮೆಗಾ ಡೀಲ್‌ನಲ್ಲಿ (3.25 ಶತಕೋಟಿ ಡಾಲರ್) ಇತ್ತೀಚೆಗೆ ಖರೀದಿಸಿದೆ. (UBS Credit Suisse deal) ಒಂದು ವೇಳೆ ಕ್ರೆಡಿಟ್‌ ಸ್ವೀಸ್‌ ದಿವಾಳಿಯಾದರೆ ಜಾಗತಿಕ ಆರ್ಥಿಕತೆಗೆ, ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳ ಬ್ಯಾಂಕಿಂಗ್‌ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಸ್ವಿಸ್‌ ಅಧಿಕಾರಿಗಳು ಇದೀಗ ಮೆಗಾ ಡೀಲ್‌ ಕುದುರಿಸಿದ್ದಾರೆ.

ಈ ಸ್ವಿಸ್‌ ಡೀಲ್‌ ಬಳಿಕ ವಿಶ್ವದ ಸೆಂಟ್ರಲ್‌ ಬ್ಯಾಂಕ್‌ಗಳು ಮುಂಬರುವ ವಾರಗಳಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಸಂಘಟಿತ ಕ್ರಮವನ್ನು ಕೈಗೊಳ್ಳಲು ಮುಂದಾಗಿವೆ. ಪ್ರತಿ ದಿನ ಬ್ಯಾಂಕ್‌ಗಳಿಗೆ ಅಗತ್ಯ ಇದ್ದರೆ ಡಾಲರ್‌ ಸಾಲ ನೀಡಲು ವ್ಯವಸ್ಥೆ ಕಲ್ಪಿಸಲಿವೆ. 2008ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬ್ಯಾಂಕಿಂಗ್‌ ದಿಗ್ಗಜ ಲೆಹ್ಮನ್‌ ಬ್ರದರ್ಸ್‌ ದಿವಾಳಿಯಾಗಿ ಆರ್ಥಿಕ ಹಿಂಜರಿತ ಸಂಭವಿಸಿದಾಗ ಈ ರೀತಿ ಮಾಡಲಾಗಿತ್ತು. ಆಗ ಬ್ಯಾಂಕ್‌ಗಳು ಸೆಂಟ್ರಲ್‌ ಬ್ಯಾಂಕ್‌ಗಳಿಂದ 580 ಶತಕೋಟಿ ಡಾಲರ್‌ (47 ಲಕ್ಷ ಕೋಟಿ ರೂ.)‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಡ್ರೈವರ್‌ ಮೊಬೈಲ್‌ಗೆ ಲೀಕ್‌ ಆಗಿದ್ದು ಹೀಗೆ!

Prajwal Revanna Case: ಪ್ರಜ್ವಲ್‌ ರೇವಣ್ಣ ನಡೆಸಿದ ಪ್ರತಿಯೊಂದು ಲೈಂಗಿಕ ಸಾಹಸವನ್ನೂ ಮೊಬೈಲ್‌ನಲ್ಲಿ ಸೆಲ್ಫ್‌ ವಿಡಿಯೋ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಎಲ್ಲೂ ಹಂಚಿಕೊಂಡಿರಲಿಲ್ಲ. ಇವು ಪ್ರಜ್ವಲ್ ಮೊಬೈಲ್‌ನಿಂದ ಲೀಕ್ ಆಗಿದ್ದೇ ರೋಚಕ ಎಪಿಸೋಡ್.‌ ಪ್ರಜ್ವಲ್‌ಗೂ ಗೊತ್ತಾಗದಂತೆ ಅವರ ಮೊಬೈಲ್‌ನಿಂದ ವಿಡಿಯೋಗಳನ್ನು ಕಾರ್ತಿಕ್ ಎಗರಿಸಿದ್ದ.

VISTARANEWS.COM


on

prajawal revanna case driver karthik phone
Koo

ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ (Prajwal Revanna Case) ಅಶ್ಲೀಲ ವೀಡಿಯೋ (Obscene video) ಹೊಂದಿದ ಪೆನ್‌ಡ್ರೈವ್ (pendrive) ವೈರಲ್ (viral video) ಆಗಿರುವ ಪ್ರಕರಣದಲ್ಲಿ, ಖತರ್‌ನಾಕ್‌ ಡ್ರೈವರ್‌ ಕಾರ್ತಿಕ್‌ ಬಗ್ಗೆ ಇನ್ನಷ್ಟು ವಿವರಗಳು ಹೊರಬೀಳುತ್ತಿವೆ. ಪ್ರಜ್ವಲ್‌ ರೇವಣ್ಣ ಮಾಡಿಕೊಂಡಿದ್ದ ಅಶ್ಲೀಲ ವಿಡಿಯೋಗಳು ಡ್ರೈವರ್‌ ಕಾರ್ತಿಕ್‌ ಮೊಬೈಲ್‌ಗೆ ದಾಟಿಕೊಂಡದ್ದು ಹೇಗೆ ಅನ್ನುವುದೇ ರೋಚಕವಾದ ಸಂಗತಿಯಾಗಿದೆ.

ಪ್ರಜ್ವಲ್‌ ರೇವಣ್ಣ ನಡೆಸಿದ ಪ್ರತಿಯೊಂದು ಲೈಂಗಿಕ ಸಾಹಸವನ್ನೂ ಮೊಬೈಲ್‌ನಲ್ಲಿ ಸೆಲ್ಫ್‌ ವಿಡಿಯೋ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಎಲ್ಲೂ ಹಂಚಿಕೊಂಡಿರಲಿಲ್ಲ. ಇವು ಪ್ರಜ್ವಲ್ ಮೊಬೈಲ್‌ನಿಂದ ಲೀಕ್ ಆಗಿದ್ದೇ ರೋಚಕ ಎಪಿಸೋಡ್.‌ ಪ್ರಜ್ವಲ್‌ಗೂ ಗೊತ್ತಾಗದಂತೆ ಅವರ ಮೊಬೈಲ್‌ನಿಂದ ವಿಡಿಯೋಗಳನ್ನು ಕಾರ್ತಿಕ್ ಎಗರಿಸಿದ್ದ.

ಕಾರ್ತಿಕ್ ಮತ್ತು ಪ್ರಜ್ವಲ್ ಸ್ನೇಹಿತರ ರೀತಿ ಇದ್ದರು. ಪ್ರಜ್ವಲ್ ಮೊಬೈಲ್‌ನಲ್ಲಿ ಈ ಅಶ್ಲೀಲ ವಿಡಿಯೋಗಳು ಇರುವುದು ಕಾರ್ತಿಕ್‌ಗೆ ಗೊತ್ತಿತ್ತು. ಇವನ್ನು ಕದಿಯಲು ಕಾರ್ತಿಕ್‌ ಖತರ್‌ನಾಕ್‌ ಪ್ಲಾನ್‌ ಮಾಡಿಕೊಂಡಿದ್ದ. ಅದಕ್ಕಾಗಿಯೇ ಹೊಸ ಮೊಬೈಲ್ ಖರೀದಿ ಮಾಡಿದ್ದ. 1.45 ಲಕ್ಷ ರೂ. ಕೊಟ್ಟು ಆಪಲ್ ಮೊಬೈಲ್ ಖರೀದಿಸಿ ಏರ್ ಡ್ರಾಪ್ ಮೂಲಕ ಸೆಂಡ್ ಮಾಡಿಕೊಂಡಿದ್ದ.

ನಂತರ ಪ್ರಜ್ವಲ್ ಮೊಬೈಲ್ ಪಾಸ್‌ವರ್ಡ್ ತಿಳಿದುಕೊಂಡಿದ್ದ. ʼBOSS’ ಎಂಬುದನ್ನು ಹೋಲುವ 8055 ಕೊನೆಯ ನಂಬರ್ ಇಟ್ಟುಕೊಂಡಿದ್ದ ಪ್ರಜ್ವಲ್ ರೇವಣ್ಣ ತಮ್ಮ ಮೊಬೈಲ್‌ ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಕಾರಿನಲ್ಲಿಯೇ ನಿದ್ರೆಗೆ ಜಾರಿದಾಗ ಅದರಿಂದ ವಿಡಿಯೋಗಳನ್ನು ತನ್ನ ಹೊಸ ಮೊಬೈಲ್‌ಗೆ ಕಾರ್ತಿಕ್‌ ಬ್ಲೂಟೂತ್‌ ಮೂಲಕ ಸೆಂಡ್ ಮಾಡಿಕೊಂಡಿದ್ದ ಎಂದು ಗೊತ್ತಾಗಿದೆ.

ಎಲ್ಲಿದ್ದಾನೆ ಕಾರ್ತಿಕ್?‌

ಈ ನಡುವೆ ವೈರಲ್ ವೀಡಿಯೋದ ಮೂಲ ವ್ಯಕ್ತಿ, ಡ್ರೈವರ್ ಕಾರ್ತಿಕ್ ನಾಪತ್ತೆಯಾಗಿದ್ದಾನೆ. ಪ್ರಜ್ವಲ್ ರೇವಣ್ಣ ಸಂಸದ ಆಗುವ ಮೊದಲಿನಿಂದಲೂ ಸುಮಾರು 13 ವರ್ಷ ಈತ ಅವರ ಕಾರು ಚಾಲಕನಾಗಿದ್ದ. ಹೊಳೆನರಸೀಪುರ ತಾಲ್ಲೂಕಿನ ಕಡುವಿನಕೋಟೆ‌ ಗ್ರಾಮದ ಕಾರ್ತಿಕ್, ಎರಡು ದಿನಗಳ ಹಿಂದೆಯೇ ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿರುವ ವೀಡಿಯೋ ಬಿಡುಗಡೆ ಮಾಡಿದ್ದ. ಹೀಗಾಗಿ ಎಸ್‌ಐಟಿ ಕೂಡ ಆತನನ್ನು ಟ್ರೇಸ್‌ ಮಾಡಲು ಮುಂದಾಗಿರಲಿಲ್ಲ.

ತಾನೇ ಖುದ್ದು ಎಸ್ಐಟಿ ಮುಂದೆ ಹಾಜರಾಗುವ ಹೇಳಿಕೆ ನೀಡಿದ ಬಳಿಕ ಕಾರ್ತಿಕ್‌ ನಾಪತ್ತೆಯಾಗಿದ್ದಾನೆ. ವೀಡಿಯೋ ಇದ್ದ ಪೆನ್ ಡ್ರೈವ್ ವಕೀಲ ದೇವರಾಜೇ ಗೌಡಗೆ ಕೊಟ್ಟಿದ್ದು ನಾನೇ ಎಂದಿದ್ದ ಕಾರ್ತಿಕ್. ವೀಡಿಯೋಗಳ ಮೂಲ ವ್ಯಕ್ತಿ ನಾನೇ ಅಂದರೂ ಇನ್ನು ಆತನನ್ನು ವಿಚಾರಣೆಗೆ ಒಳಪಡಿಸಿಲ್ಲ. ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ಗೆ ನೊಟೀಸ್ ಅನ್ನೂ ಎಸ್ಐಟಿ ನೀಡಿರಲಿಲ್ಲ.

ಇದೀಗ ಕಾರ್ತಿಕ್ ಮಲೇಷ್ಯಾಗೆ ತೆರಳಿದ್ದಾನೆ; ಈತನ ನಾಪತ್ತೆ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರು ʼರಾಮನಗರ ಬ್ರದರ್ಸ್‌ʼ ಕಡೆ ಕೈತೋರಿಸಿದ್ದಾರೆ. ಎರಡನೇ ಹಂತದ ಚುನಾವಣೆ ಮುಗಿಯುವವರೆಗೂ ಪ್ರಕರಣದ ಬಿಸಿಯನ್ನು ಚಾಲ್ತಿಯಲ್ಲಿಡಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ. ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿ ಎಸ್ಕೇಪ್ ಆಗಿರುವ ಬಗ್ಗೆ ಹಲವು ಅನುಮಾನ ಮೂಡಿದ್ದು, ಕಾರ್ತಿಕ್‌ ಇವರೆಲ್ಲರ ದಾರಿ ತಪ್ಪಿಸಿದನೇ ಅಥವಾ ಇದರ ಹಿಂದಿನ ಮಾಸ್ಟರ್‌ ಮೈಂಡ್‌ಗಳು ಬೇರೆ ಯಾರಾದರೂ ಇದ್ದಾರಾ ಎಂದು ಅನುಮಾನ ಮೂಡಿದೆ.

ಈ ನಡುವೆ ಎಸ್ಐಟಿ ತನಿಖೆ ಚುರುಕುಗೊಳಿಸಿದೆ ಎಂದು ಹೇಳಲಾಗಿದ್ದು, ದೂರುದಾರ ಸಂತ್ರಸ್ತ ಮಹಿಳೆಯರು ಹಾಗೂ ವಿಡಿಯೋಗಳಲ್ಲಿ ಇರುವ ಸಂತ್ರಸ್ತ ಮಹಿಳೆಯರ ವಿಚಾರಣೆ ಮುಂದುವರಿದಿದೆ. ಆದರೆ ದೂರುದಾರೆ ಹೊರತುಪಡಿಸಿ ಇತರ ಮಹಿಳೆಯರು, ತಮ್ಮನ್ನು ತನಿಖೆಗೆ ಬಲವಂತಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಗುರುತು ಪರಿಚಯ ಬಹಿರಂಗಪಡಿಸಿದರೆ ತಮ್ಮ ಕುಟುಂಬಕ್ಕೆ ಸಮಸ್ಯೆಯಾಗಲಿದ್ದು, ಹೀಗಾಗಿ ತನಿಖೆಗೆ ಬರುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಟ್ಟ ಕಾರ್ತಿಕ್‌ನನ್ನು ಮಲೇಷ್ಯಾಕ್ಕೆ ಕಳಿಸಿದವರು ಯಾರು?

Continue Reading

ಪ್ರಮುಖ ಸುದ್ದಿ

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣ-ಹೊಸ ಭಕ್ಷ್ಯ ನೀತಿ ಜಾರಿ

New Food Rules: ಪಾಕಿಸ್ತಾನದಲ್ಲಂತೂ ಹಣದುಬ್ಬರ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ 1 ಕೆಜಿ ಗೋಧಿ ಹಿಟ್ಟಿನ ಬೆಲೆ 800 PKR ಆಗಿದೆ. ಹೀಗಾಗಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಪಾಕಿಸ್ತಾನದ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

VISTARANEWS.COM


on

New Food Rules
Koo

ಪಾಕಿಸ್ತಾನ: ಮದುವೆ ಎಂದ ತಕ್ಷಣ ತಲೆಯಲ್ಲಿ ಒಳ್ಳೆಯ ಊಟದ ಕಲ್ಪನೆ ಬರುವುದು ಸಹಜ. ವಿವಿಧ ರೀತಿಯ ಭಕ್ಷ್ಯ ಭೋಜನಗಳನ್ನು ತಯಾರಿಸುತ್ತಾರೆ. ಆ ವೇಳೆ ಜನರು ತಮಗೆ ಬೇಕಾದಷ್ಟು ಆಹಾರವನ್ನು ಬಡಿಸಿಕೊಂಡು ನಂತರ ಅದನ್ನು ತಿನ್ನದೇ ವ್ಯರ್ಥ ಮಾಡುತ್ತಿರುವುದು ನಾವು ಹಲವು ಮದುವೆ, ಸಮಾರಂಭಗಳಲ್ಲಿ ನೋಡುತ್ತಿರುತ್ತೇವೆ. ಇನ್ನು ಪಾಕಿಸ್ತಾನ(Pakistan)ದಲ್ಲಂತೂ ಹಣದುಬ್ಬರ(Bankruptcy) ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ 1 ಕೆಜಿ ಗೋಧಿ ಹಿಟ್ಟಿನ ಬೆಲೆ 800 PKR ಆಗಿದೆ. ಹೀಗಾಗಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಪಾಕಿಸ್ತಾನದ ಸರ್ಕಾರ ಹೊಸ ನಿಯಮವನ್ನು ಜಾರಿಗೆ(New Food Rules)ತಂದಿದೆ.

ಪಾಕಿಸ್ತಾನ ಭಾರತದ ನೆರೆಯ ರಾಷ್ಟ್ರ. ಆಗಾಗ ಇತರ ದೇಶಗಳ ಮೇಲೆ ದಂಡೆತ್ತಿ ಬರುವ
ಈ ದೇಶ ಈಗ ಆಹಾರದ ಮುಗ್ಗಟ್ಟು ಮತ್ತು ಹಣದುಬ್ಬರ ಸಮಸ್ಯೆಯಿಂದ ಒದ್ದಾಡುತ್ತಿದೆ. ಹಾಗಾಗಿ ತಮ್ಮ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದೆ. ಅದರಂತೆ ಇದೀಗ ಆಹಾರ ಮುಗ್ಗಟ್ಟನ್ನು ನಿವಾರಿಸಲು ಮದುವೆ ಮತ್ತು ಸಮಾರಂಭಗಳಲ್ಲಿ ನೀಡುವ ಊಟದ ಮೇಲೆ ತನ್ನ ಕಣ್ಣಿಟ್ಟಿದೆ. ಆಹಾರ ವ್ಯರ್ಥವಾಗುವುದನ್ನು ತಡೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದೆಯಂತೆ.

ಪಂಜಾಬ್ ಪ್ರಾಂತ್ಯದ ಸಿಎಂ ಮರ್ಯಮ್ ನವಾಜ್ ಅವರು ‘ಒಂದು ಭಕ್ಷ್ಯ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದ್ದಾರೆ. ಈ ನೀತಿಯ ಪ್ರಕಾರ ಮದುವೆಯ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಅನುಮತಿಸಲಾಗುವುದಿಲ್ಲ. ಅಂದರೆ ಊಟದ ಮೆನುವಿನಲ್ಲಿ ಕೇವಲ ಒಂದು ತರಕಾರಿ, ಅನ್ನ, ರೊಟ್ಟಿ, ದಾಲ್, ಸಲಾಡ್, ತಂಪು ಪಾನೀಯ ಮತ್ತು ಒಂದು ಸಿಹಿತಿಂಡಿ ನೀಡಲು ಅನುಮತಿಸಲಾಗಿದೆ.

ಬಹು ಖಾದ್ಯಗಳನ್ನು ತಯಾರಿಸುವುದರಿಂದ ಅದು ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೇ ಈ ನೀತಿಯನ್ನು 2016ರಲ್ಲಿ ಮೊದಲು ಜಾರಿಗೆ ತರಲಾಯಿತು. ಆದರೆ ಜನರು ಅದನ್ನು ಅನುಸರಿಸಲಿಲ್ಲ. ಇದೀಗ ಈ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ಕ್ರಮವನ್ನು ಪಾಲಿಸದಿರುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

ಪಾಕಿಸ್ತಾನವು ಪ್ರಸ್ತುತ ದಿನಗಳಲ್ಲಿ ಹಣಕಾಸಿನ ಸಮಸ್ಯೆಯನ್ನು ಹೆಚ್ಚಿನ ಮಟ್ಟದಲ್ಲಿ ಅನುಭವಿಸುತ್ತಿದೆ. ಹಾಗಾಗಿ ಇತ್ತೀಚೆಗೆ ಪ್ರಧಾನಿ ಮಂತ್ರಿ ಶೆಹಬಾಜ್ ಷರೀಫ್ ವಿತ್ತೀಯ ಸಹಾಯವನ್ನು ಪಡೆಯಲು ಸೌದಿ ಅರೇಬಿಯಾಕ್ಕೆ ಹೋದರು. ಆದರೆ ಆ ಕಾರ್ಯ ಯಶಸ್ವಿಯಾಗಲಿಲ್ಲ. ಪಾಕಿಸ್ತಾನದಲ್ಲಿ ಹಣದುಬ್ಬರ ಎಷ್ಟಿದೆಯೆಂದರೆ ಸಾಮಾನ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಉದಾಹರಣೆಗೆ ಒಂದು ಕಿಲೋ ಗೋಧಿ ಹಿಟ್ಟಿನ ಬೆಲೆ ಈಗ 800 PKR (ಪಾಕಿಸ್ತಾನ ಕರೆನ್ಸಿ)ಆಗಿದೆ. ಒಂದು ರೊಟ್ಟಿ ಬೆಲೆ 25 PKRಆಗಿದೆ. ಬಾಳೆಹಣ್ಣಿನ ಬೆಲೆ 150-200 PKR ಆಗಿದೆಯಂತೆ.

Continue Reading

ಪ್ರವಾಸ

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Jammu Tour: ಸೆಕೆಯ ತಾಪದಿಂದ ಒಂದೊಂದು ದಿನಕಳೆಯುವುದು ಕಷ್ಟ ಎನ್ನುವವರು ಜುಮ್ಮುವಿನ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮ ಕಣ್ಮನ ಸೆಳೆಯುವುದಂತೂ ಗ್ಯಾರಂಟಿ. ಈ ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Jammu Tour
Koo

ಬೆಂಗಳೂರು: ಎತ್ತರದ ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು ತುಂಬಾ ಚಳಿಯಿಂದ ಕೂಡಿದ ಪ್ರದೇಶವಾಗಿದೆ. ಹಾಗಾಗಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಬೆಂದು ಹೋದವರು ಎಸಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಈ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮನ್ನು ಮೋಡಿ ಮಾಡುವುದಂತು ಸತ್ಯ. ಹಾಗಾಗಿ ಜಮ್ಮುವಿಗೆ ಪ್ರಯಾಣ (Jammu Tour) ಬೆಳೆಸುವವರು ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ಈ ವಿಚಾರಗಳನ್ನು ತಿಳಿದುಕೊಂಡಿರಿ.

ಆಧ್ಯಾತ್ಮಿಕ ಸಾರ

ಅನೇಕ ಧರ್ಮಗುರುಗಳ ತವರೂರಾದ ಜಮ್ಮು ತನ್ನ ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ಇಸ್ಲಾಮಿಕ್ ದರ್ಗಾಗಳು ಮತ್ತು ಸಿಖ್ ಗುರುದ್ವಾರಗಳ ಜೊತೆಗೆ ಪ್ರಸಿದ್ಧ ಹಿಂದೂ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ರಘುನಾಥ ದೇವಾಲಯದ ಸಂಕೀರ್ಣವು ಉತ್ತರ ಭಾರತದ ಅತಿದೊಡ್ಡ ದೇವಾಲಯದ ಸಂಕೀರ್ಣಗಳಲ್ಲಿ ಒಂದಾಗಿದೆ. ಇದು ಎತ್ತರದ ಗೋಪುರಗಳನ್ನು ಹೊಂದಿದೆ. ಅಲ್ಲದೇ ಇಲ್ಲಿನ ಬಾವೆ ವಾಲಿ ಮಾತಾ ದೇವಸ್ಥಾನ ಮತ್ತು ಪೀರ್ ಬಾಬಾ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ.

Vaishno Devi Yatra Jammu

ದೈವಿಕ ವೈಷ್ಣೋದೇವಿ ಯಾತ್ರೆ

ತ್ರಿಕೂಟ ಬೆಟ್ಟ ಗಳಲ್ಲಿರುವ ಮಾತಾ ವೈಷ್ಣೋದೇವಿಯ ಪವಿತ್ರ ಗುಹೆಯ ದೇಗುಲಕ್ಕೆ ಚಾರಣ ಮಾಡುವುದು ಭಾರತದ ಅತ್ಯಂತ ಪೂಜ್ಯ ತೀರ್ಥಯಾತ್ರೆಗಳಲ್ಲಿ ಒಂದು ಎನ್ನಬಹುದು. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಬಂದು ತಮ್ಮ ದೀರ್ಘ ಪ್ರಯಾಣದ ಮೂಲಕ ಭಕ್ತಿಯನ್ನ ಸಾರುತ್ತಾರೆ. ತೀರ್ಥಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗುವುದನ್ನು ತಡೆಯಲು ಅಧಿಕಾರಿಗಳನ್ನು ನೀಮಿಸಲಾಗುತ್ತದೆ. ಅವರು ಭದ್ರತಾ ಕ್ರಮಗಳನ್ನು ನೋಡಿಕೊಳ್ಳುತ್ತಾರೆ.

Jammu navaratri

ಸಂಸ್ಕೃತಿ ಮತ್ತು ಹಬ್ಬಗಳು

9 ದಿನಗಳ ನವರಾತ್ರಿ ಉತ್ಸವವನ್ನು ಜಮ್ಮುವಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮೇಳಗಳನ್ನು ನಡೆಸಲಾಗುತ್ತದೆ. ಸ್ಥಳೀಯ ನೃತ್ಯಗಳು, ಸಂಗೀತ ಮತ್ತು ಕರಕುಶಲ ವಸ್ತುಗಳ ಪ್ರದರ್ಶನೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನವೆಂಬರ್ ನಲ್ಲಿ ಕಲಾಕೇಂದ್ರವು ವಾರ್ಷಿಕ ಜಮ್ಮು ಉತ್ಸವವನ್ನು ಆಯೋಜಿಸುತ್ತದೆ.

Kesar Fenni

ಫ್ಯೂಷನ್ ಆಹಾರ

ಜಮ್ಮುವಿನ ಪಾಕಪದ್ಧತಿಯು ಪಂಜಾಬ್, ಕಾಶ್ಮೀರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳ ರುಚಿಗಳನ್ನು ಹೊಂದಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದರೆ ರಾಜ್ಮಾ-ಅಕ್ಕಿ, ಚೋಲೆ-ಪುರಿಮತ್ತು ಕುಲ್ಚಾದಂತಹ ವಿಶೇಷ ತಿಂಡಿಗಳ ರುಚಿ ಸವಿಯುವುದನ್ನು ಮರೆಯಬೇಡಿ. ಇದಲ್ಲದೇ ಫಿರ್ನಿ(ಅಕ್ಕಿ ಕಡುಬು), ಗುಡ್ ಪಾಪ್ಡಿ ಮತ್ತು ಕಳಾರಿಯಂತಹ ಭಕ್ಷ್ಯಗಳನ್ನು ಕೇಸರ್ ಗುಲ್ಶನ್‌ನ ಪ್ರಸಿದ್ಧ ಕೇಸರಿ ಚಹಾ ಅಥವಾ ಕಾಶ್ಮೀರಿ ಕಹ್ವಾದೊಂದಿಗೆ ಸವಿಯಿರಿ.

ಪ್ರಕೃತಿಯ ಅದ್ಭುತ

ಜಮ್ಮುವಿನ ಸಮೀಪದಲ್ಲಿರುವ ಪಟ್ನಿಟಾಪ್ ಗಿರಿಧಾಮವು ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಪ್ರವಾಸಿಗರಿಗೆ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೀಯಿಂಗ್ ನಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಇಲ್ಲಿನ ಸನ್ಸಾರ್ ಮತ್ತು ಮನ್ಸಾರ್ ಸರೋವರದಲ್ಲಿ ನೀವು ಕ್ಯಾಂಪಿಂಗ್ ಮತ್ತು ಬೋಟಿಂಗ್ ಮಾಡಬಹುದು.

Badamwari Garden in Srinagar, Jammu and Kashmir

ಐತಿಹಾಸಿಕ ತಾಣಗಳು

ತಾವಿ ನದಿಯ ಮೇಲಿರುವ ಬಹು ಕೋಟೆಯು ಜಮ್ಮುವಿನ ವಿಶೇಷವಾದ ಐತಿಹಾಸಿಕ ತಾಣವಾಗಿದೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳಿವೆ. ಜೊತೆಗೆ ಸ್ಮಾರಕ, ಆಹಾರ ಪದಾರ್ಥಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವಂತಹ ಅಂಗಡಿಗಳನ್ನ ಹೊಂದಿದೆ. ಇಲ್ಲಿ ಪಾಳು ಬಿದ್ದಿರುವ ಸಿಮ್ಥಾನ್ ಶಿಖರವನ್ನು ಏರಿದರೆ ಜಲಚರಗಳು ಮತ್ತು ಕಲ್ಲಿನ ಕಟ್ಟಡಗಳನ್ನು ನೋಡಬಹುದು.

Jammu

ಟ್ರಾವೆಲ್ ಪಾಯಿಂಟರ್ಸ್

ಜಮ್ಮುವಿಗೆ ಪ್ರಯಾಣಿಸಲು ಬಯಸುವವರು ದೆಹಲಿ , ಶ್ರೀನಗರ, ಮುಂಬೈ ಮತ್ತು ಅಮೃತಸರದಂತಹ ಪ್ರಮುಖ ನಗರಗಳಿಂದ ನೇರ ವಿಮಾನಗಳ ವ್ಯವಸ್ಥೆಯಿದೆ. ಹಾಗೇ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರವಾಣಿಸುವವರಿಗೆ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದ್ದು, ಇವು ಹಿಮಾಚಲ ಪ್ರದೇಶದ ಹತ್ತಿರದ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

ಜಮ್ಮುವಿಗೆ ಪ್ರಯಾಣಿಸುವವರು ನೆನಪಿಡಬೇಕಾದ ವಿಷಯಗಳು

ನೀವು ಜಮ್ಮುವಿಗೆ ಪ್ರಯಾಣ ಬೆಳೆಸುವಾಗ ನಿಮ್ಮ ಐಡಿ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ. ಹಾಗೇ ರಾತ್ರಿಯ ಸಮಯದಲ್ಲಿ ಪ್ರಯಾಣಿಸುವವರು ನಿರ್ಜನ ಪ್ರದೇಶದಲ್ಲಿ ಮತ್ತು ಮಂದ ಬೆಳಕಿರುವ ಕಾಲುದಾರಿಗಳಲ್ಲಿ ಸಾಗುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ಸಾಧಾರಣ ಉಡುಪುಗಳನ್ನು ಧರಿಸಿ. ಇಲ್ಲಿನ ಪವಿತ್ರ ಸ್ಥಳಗಳಿಗೆ ಪ್ರವೇಶಿಸುವಾಗ ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಚ್ಚಿಡಿ. ಹಾಗೇ ಯಾವುದೇ ಸ್ಥಳೀಯ ಅಥವಾ ಅಧಿಕೃತ /ಮಿಲಿಟರಿ ಸಂಸ್ಥೆಗಳ ಫೋಟೊಗಳನ್ನು ಕ್ಲಿಕ್ಕಿಸುವ ಮುನ್ನ ಅನುಮತಿ ಪಡೆಯಿರಿ.

Continue Reading

ಪ್ರಮುಖ ಸುದ್ದಿ

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Rahul Gandhi: ಕಾಂಗ್ರೆಸ್‌ನ ಚುನಾವಣೆ ಪ್ರಚಾರ ಸಭೆಗಳಲ್ಲಿ ಈಗ ಪ್ರಜ್ವಲ್ ಲೈಂಗಿಕ ಹಗರಣ ಹಾಟ್ ಟಾಪಿಕ್ ಆಗಿದೆ. ಪ್ರಜ್ವಲ್ ವಿಚಾರವನ್ನೆ ಬಹುದೊಡ್ಡ ಅಸ್ತ್ರವಾಗಿ ಎಐಸಿಸಿ ಪ್ರಯೋಗಿಸುತ್ತಿದೆ. ರಾಹುಲ್ ಗಾಂಧಿ ಇಂದಿನ ಭಾಷಣದಲ್ಲಿಯೂ ಪ್ರಜ್ವಲ್ ದೌರ್ಜನ್ಯ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕಳೆದ ಸೋಮವಾರವಷ್ಟೇ ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಿಯಾಂಕಾ ಗಾಂಧಿ ಪ್ರಸ್ತಾಪ ಮಾಡಿದ್ದರು.

VISTARANEWS.COM


on

Rahul Gandhi
Koo

ಶಿವಮೊಗ್ಗ: ಶಿವಮೊಗ್ಗ (Shivamogga) ನಗರಕ್ಕೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಿ ಲೋಕಸಭೆ ಚುನಾವಣೆ (Lok sabha Election 2024) ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಿವಮೊಗ್ಗದ ಕೈ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರ (Prajwal revanna case) ಹಗರಣದ ವಿಚಾರವನ್ನು ನಿನ್ನೆ ಸೋಶಿಯಲ್‌ ಮೀಡಿಯಾದಲ್ಲಿ ಎತ್ತಿರುವ ರಾಹುಲ್‌ ಗಾಂಧಿ, ಇಂದು ಸಾರ್ವಜನಿಕ ಭಾಷಣದಲ್ಲಿಯೂ ಪ್ರಸ್ತಾಪಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ (congress candidate) ಗೀತಾ ಶಿವರಾಜ್ ಕುಮಾರ್ (Geetha Shiv rajkumar) ಪರ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು, ಅವರ ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಭಾಗವಹಿಸಲಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಕ್ಷೇತ್ರ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕುಟುಂಬದ ಮಗಳನ್ನು ಕಣಕ್ಕಿಳಿಸಿದ್ದು, ಪ್ರಚಾರಕ್ಕೆ ಜನಪ್ರಿಯ ಸ್ಟಾರ್‌ ಶಿವರಾಜ್‌ಕುಮಾರ್‌ ಕೂಡ ಆಗಮಿಸಿ ಪತ್ನಿಯ ಪರ ಬಿರುಗಾಳಿಯಂತೆ ಪ್ರಚಾರ ನಡೆಸುತ್ತಿದ್ದಾರೆ. ಸ್ವತಃ ಸಚಿವ ಮಧು ಬಂಗಾರಪ್ಪ, ತಮ್ಮ ಸೋದರಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತುಬಿಟ್ಟಿದ್ದಾರೆ. ಇನ್ನೊಂದು ಕಡೆ ಬಿಜೆಪಿಯ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಈಶ್ವರಪ್ಪನವರ ಬಂಡಾಯದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮತ್ತೊಂದು ಕಡೆ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದಿಂದಾಗಿ ಬಿಜೆಪಿ ಹಾಗೂ ಜೆಡಿಎಸ್‌ ಮುಜುಗರ ಅನುಭವಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹೋದಲ್ಲಿ ಬಂದಲ್ಲಿ ಈ ವಿಚಾರ ಎತ್ತಿ ಅಣಕಿಸುತ್ತಿದ್ದಾರೆ. ರಾಹುಲ್ ರಾಜ್ಯಕ್ಕೆ ಬಂದಾಗ ಪ್ರಚಾರದ ಕಣದಲ್ಲಿ ಈ ವಿಚಾರವನ್ನು ಎತ್ತಿ ಟೀಕಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್‌ನ ಚುನಾವಣೆ ಪ್ರಚಾರ ಸಭೆಗಳಲ್ಲಿ ಈಗ ಪ್ರಜ್ವಲ್ ಲೈಂಗಿಕ ಹಗರಣ ಹಾಟ್ ಟಾಪಿಕ್ ಆಗಿದೆ. ಪ್ರಜ್ವಲ್ ವಿಚಾರವನ್ನೆ ಬಹುದೊಡ್ಡ ಅಸ್ತ್ರವಾಗಿ ಎಐಸಿಸಿ ಪ್ರಯೋಗಿಸುತ್ತಿದೆ. ರಾಹುಲ್ ಗಾಂಧಿ ಇಂದಿನ ಭಾಷಣದಲ್ಲಿಯೂ ಪ್ರಜ್ವಲ್ ದೌರ್ಜನ್ಯ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕಳೆದ ಸೋಮವಾರವಷ್ಟೇ ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಿಯಾಂಕಾ ಗಾಂಧಿ ಪ್ರಸ್ತಾಪ ಮಾಡಿದ್ದರು. ಪ್ರಜ್ವಲ್ ಪ್ರಕರಣ ಪ್ರಸ್ತಾಪ ‌ಮಾಡುವ ಮೂಲಕ ಪಿಎಂ ಮೋದಿಗೆ ಕುಟುಕಿದ್ದರು.

ಅಲ್ಲದೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮೋದಿಯವರನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. “ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರಧಾನಿ ಉತ್ತರಿಸಬೇಕು. ಎಲ್ಲ ಗೊತ್ತಿದ್ದರೂ ಕೇವಲ ಮತಕ್ಕಾಗಿ ನೂರಾರು ಹೆಣ್ಣು ಮಕ್ಕಳನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ, ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಹೇಗೆ ಸುಲಭವಾಗಿ ಹೇಗೆ ತಪ್ಪಿಸಿಕೊಂಡ? ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ, ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣು ಮಕ್ಕಳ ಪೀಡಕರಿಗೆ ಬೆಂಬಲ ನೀಡಲಾಗುತ್ತಿದೆ. ಪ್ರಧಾನಿ ಮೌನ ಬೆಂಬಲ ನೀಡುತ್ತಿರುವುದು ದೇಶಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬಿದಂತಾಗುತ್ತಿದೆ. ಮೋದಿಯವರ ʼರಾಜಕೀಯ ಕುಟುಂಬದ’ ಭಾಗವಾಗುವುದು ಅಪರಾಧಿಗಳಿಗೆ ʼಭದ್ರತೆಯ ಖಾತರಿ’ ಆಗಿದೆಯೇ?” ಎಂದು ರಾಗಾ ಪ್ರಶ್ನಿಸಿದ್ದರು.

ಇಂದು ನಗರದ ಪ್ರೀಡಂ ಪಾರ್ಕ್‌ನ ಅಲ್ಲಮಪ್ರಭು ಮೈದಾನದಲ್ಲಿ ಕಾಂಗ್ರೆಸ್‌ನ ಬೃಹತ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಸಚಿವ ಮಧು ಬಂಗಾರಪ್ಪ ಉಸ್ತುವಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಶಿವಮೊಗ್ಗ ನಗರದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ. ಗೀತಾರನ್ನು ಗೆಲ್ಲಿಸಲು ಪಣ ತೊಟ್ಟಿರುವ ನಟ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಕ್ಷೇತ್ರದ ತುಂಬಾ ಓಡಾಡಿ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇಂದು ರಾಹುಲ್‌ ಗಾಂಧಿ ಭಾಗವಹಿಸಲಿರುವ ಪ್ರಜಾ ಧ್ವನಿ ಯಾತ್ರೆ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಬೆಳಿಗ್ಗೆ 11:30ರಿಂದ ಶುರುವಾಗಲಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೃಹತ್ ವೇದಿಕೆ ನಿರ್ಮಾಣ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Continue Reading
Advertisement
Gangster Goldy Brar
ವಿದೇಶ4 mins ago

Gangster Goldy Brar:”ಶೂಟೌಟ್‌ನಲ್ಲಿ ಸತ್ತಿದ್ದು ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಅಲ್ಲ”…ವದಂತಿಗೆ ತೆರೆ

prajawal revanna case driver karthik phone
ಕ್ರೈಂ7 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಡ್ರೈವರ್‌ ಮೊಬೈಲ್‌ಗೆ ಲೀಕ್‌ ಆಗಿದ್ದು ಹೀಗೆ!

Ilaiyaraaja Issues Legal Notice to Rajinikanth Coolie
ಕಾಲಿವುಡ್7 mins ago

Ilaiyaraaja Issues Legal Notice: ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ!

Road Accident in anekal
ಬೆಂಗಳೂರು ಗ್ರಾಮಾಂತರ22 mins ago

Road Accident : ಚಲಿಸುತ್ತಿರುವಾಗಲೇ ಬಸ್‌ನಿಂದ ಕಳಚಿಕೊಂಡ ಚಕ್ರಗಳು; ಗಲಿಬಿಲಿಗೊಂಡ ಪ್ರಯಾಣಿಕರು

Puttakkana Makkalu Serial puttakka daughter Sahana left home
ಕಿರುತೆರೆ47 mins ago

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Mosquito controle
ಲೈಫ್‌ಸ್ಟೈಲ್56 mins ago

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Health Plan
ಮನಿ-ಗೈಡ್57 mins ago

Money Guide: ಕಾರ್ಪೊರೇಟ್- ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸ ತಿಳಿದಿರಲಿ

New Food Rules
ಪ್ರಮುಖ ಸುದ್ದಿ1 hour ago

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣ-ಹೊಸ ಭಕ್ಷ್ಯ ನೀತಿ ಜಾರಿ

MS Dhoni
ಕ್ರೀಡೆ1 hour ago

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

Google Layoff
ವಿದೇಶ1 hour ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌