Youth Conference: ಮತದಾರರಿಗೆ ತಲೆ ಇದೆ ಎಂಬುದನ್ನು ರಾಜಕೀಯ ಪಕ್ಷಗಳು ಯೋಚಿಸಬೇಕು: ಶಾಂತರಾಮ ಸಿದ್ದಿ - Vistara News

ಉತ್ತರ ಕನ್ನಡ

Youth Conference: ಮತದಾರರಿಗೆ ತಲೆ ಇದೆ ಎಂಬುದನ್ನು ರಾಜಕೀಯ ಪಕ್ಷಗಳು ಯೋಚಿಸಬೇಕು: ಶಾಂತರಾಮ ಸಿದ್ದಿ

Youth Conference: ಜನಪ್ರತಿನಿಧಿಗಳು ಅಭಿವೃದ್ಧಿ ಜತೆಗೆ ಬೌದ್ಧಿಕ ಅಭಿವೃದ್ಧಿ ಕುರಿತು ಚಿಂತನೆ ನಡೆಸಿದರೆ ಮಾತ್ರ ಸಮಾಜದ ಉನ್ನತಿಯಾಗಲಿದೆ ಎಂದು ಶಾಂತರಾಮ ಸಿದ್ದಿ ಹೇಳಿದ್ದಾರೆ.

VISTARANEWS.COM

on

Youth Conference honnavar
ಜಿಲ್ಲಾ ಮಟ್ಟದ ಯುವ ಸಮಾವೇಶ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಉದ್ಘಾಟಿಸಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊನ್ನಾವರ: “ಮತದಾರರಿಗೆ ಕೇವಲ ಹೊಟ್ಟೆ, ಬಾಯಿ ಇದೆ ಎಂದು ಯೋಚಿಸುವುದನ್ನು ಬಿಟ್ಟು, ಅವರಿಗೂ ಒಂದು ತಲೆ ಇದೆ ಎನ್ನುವುದನ್ನು ರಾಜಕೀಯ ಪಕ್ಷಗಳು (Political Parties) ಯೋಚಿಸಬೇಕಿದೆ” ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.

ತಾಲೂಕಿನ ಮಂಕಿ ಆಸ್ಪತ್ರೆ ಸಮೀಪದ ಗುರುಮಠದ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಕೆಲವು ಪಕ್ಷಗಳು ಜನರಿಗೆ ಹೊಟ್ಟೆ ತುಂಬಿಸುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಉಚಿತವಾಗಿ ಕೊಡುವುದೇ ರಾಜಕೀಯ ಪಕ್ಷಗಳಿಗೆ ದೊಡ್ಡ ಗುರಿಯಾಗಬಾರದು. ಯುವಕರಿಗೆ ಶಿಕ್ಷಣ ಉದ್ಯೋಗ ಕೊಡಲು ಮುಂದಾಗಬೇಕು. ಜನಪ್ರತಿನಿಧಿಗಳು ಅಭಿವೃದ್ಧಿ ಜೊತೆಗೆ ಬೌದ್ಧಿಕ ಅಭಿವೃದ್ಧಿ ಕುರಿತು ಚಿಂತನೆ ನಡೆಸಿದರೆ ಮಾತ್ರ ಸಮಾಜದ ಉನ್ನತಿಯಾಗಲಿದೆ” ಎಂದರು.

ಇದನ್ನೂ ಓದಿ: IPL 2023 : ಐಪಿಎಲ್​ ಫ್ರಾಂಚೈಸಿಗಳಿಗೆ ಗಾಯದ ಗೋಳು ​; ಇದುವರೆಗೆ 10 ಆಟಗಾರರು ಔಟ್​!

ಶಾಸಕ ಸುನಿಲ್‌ ನಾಯ್ಕ ಮಾತನಾಡಿ, “ಭಟ್ಕಳ ಭಾರತೀಯ ಜನತಾ ಪಾರ್ಟಿ ಭದ್ರಕೋಟೆಯಾಗಿದೆ. ಕಾರ್ಯಕರ್ತರ ಮಧ್ಯೆ ನಿಂತು ಶಾಸಕನಾಗಿ ಐದು ವರ್ಷಗಳ ಕಾಲ‌ ಆಡಳಿತ ನಡೆಸಿದ್ದೇನೆ. ಅಧಿಕಾರದ ದರ್ಪ ತೋರಿಲ್ಲ. ಶಾಸಕ ಪದವಿ ಶಾಶ್ವತವಲ್ಲ. ಜನರ ಪ್ರೀತಿ ವಿಶ್ವಾಸ ಶಾಶ್ವತವಾಗಿದೆ. ಮುಂದಿನ ಚುನಾವಣೆ ಕೇವಲ ಭಾರತೀಯ ಜನತಾ ಪಾರ್ಟಿ ಚುನಾವಣೆಯಲ್ಲ. ಟಿಪ್ಪು ಮತ್ತು ಸಾವರ್ಕರ್ ನಡುವಿನ ಚುನಾವಣೆ ಎಂದರು.

ಶಿವಮೊಗ್ಗ ವಿಭಾಗದ ಪ್ರಭಾರಿ ಗಿರೀಶ ಪಾಟೀಲ್, ಪ್ರಸನ್ನ ಕೆರಕೈ, ನಾಗರಾಜ ನಾಯಕ, ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿದರು. ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಬಿಜೆಪಿ ಮುಖಂಡರಾದ ಶಿವಮೊಗ್ಗ ವಿಭಾಗದ ಪ್ರಭಾರಿ ಗಿರೀಶ ಪಾಟೀಲ್, ಪಶ್ಚಿಮ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಎನ್.ಎಸ್.ಹೆಗಡೆ, ಪ್ರಸನ್ನ ಕೆರೆಕೈ, ಅಜಿತ್ ಹೆಗಡೆ, ಚಂದ್ರು ಎಸಳೆ, ಉಷಾ ಹೆಗಡೆ, ಗುರುಪ್ರಸಾದ ಹೆಗಡೆ, ಕಿಶೋರ ಕುಮಾರ, ಎಂ.ಜಿ.ಭಟ್, ನಾಗರಾಜ ನಾಯಕ, ಶಿವಾನಿ ಶಾಂತರಾಮ ನಾಗರಾಜ ನಾಯಕ ತೊರ್ಕೆ ಮತ್ತಿತರರು ಉಪಸ್ಥಿತರಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ ಸ್ವಾಗತಿಸಿದರೆ, ತಾಲೂಕು ಅಧ್ಯಕ್ಷ ಸಚಿನ್‌ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಇಡಗುಂಜಿ ಕ್ರಾಸ್ ಮೂಲಕ ಮಂಕಿ ಪ.ಪಂ. ವಿವಿಧಡೆ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ, ಆಟೋ ಮೂಲಕ ರ‍್ಯಾಲಿ ಜರುಗಿತು.

ಇದನ್ನೂ ಓದಿ: Pratap Simha: ಮುಸ್ಲಿಮರಲ್ಲೂ ದೇಶಪ್ರೇಮಿಗಳಿದ್ದಾರೆ; ಅವರಿಗೆ ಕಾಂಗ್ರೆಸ್‌ ಗನ್‌ ಕೊಟ್ಟರೆ, ಮೋದಿ ಧ್ವಜ ಕೊಟ್ಟರು: ಪ್ರತಾಪ್‌ ಸಿಂಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Drowned In water : ತಾಯಿ- ಮಗಳು ಸೇರಿ ನಾಲ್ವರು ನೀರುಪಾಲು

Drowned In water : ರಾಯಚೂರಿನಲ್ಲಿ ಬಟ್ಟೆ ತೊಳೆಯಲು ಕಾಲುವೆಗೆ ಇಳಿದ ಯುವಕರಿಬ್ಬರು ನೀರುಪಾಲಾದರೆ, ಕಾರವಾರದಲ್ಲಿ ಕಪ್ಪೆಚಿಪ್ಪು ತೆಗೆಯುವ ವೇಳೆ ತಾಯಿ-ಮಗಳು ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.

VISTARANEWS.COM

on

By

Drowned in water in raichur and karwar
Koo

ರಾಯಚೂರು/ ಕಾರವಾರ: ಪ್ರತ್ಯೇಕ ಕಡೆಗಳಲ್ಲಿ ನೀರಲ್ಲಿ ಮುಳುಗಿ ನಾಲ್ವರು ಮೃತಪಟ್ಟಿರುವ (Drowned In water) ದಾರುಣ ಘಟನೆ ನಡೆದಿದೆ. ಜಾತ್ರೆ ನಿಮಿತ್ತ ಪಾಲಕರೊಂದಿಗೆ ಬಟ್ಟೆ ತೊಳೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಸವಸಾಗರ ಜಲಾಶಯದ ಕಾಲುವೆಯಲ್ಲಿ ಘಟನೆ ನಡೆದಿದೆ.

ಲಕ್ಕಣ್ಣ (22), ಬಸವಂತ (25) ಮೃತ ದುರ್ದೈವಿಗಳು. ಲಿಂಗಸ್ಗೂರು ತಾ. ಬೆಂಡೋಣಿ ಗ್ರಾಮದ ನಿವಾಸಿಗಳಾದ ಇವರಿಬ್ಬರು, ಬಟ್ಟೆ ತೊಳೆಯಲು ಹೋಗಿದ್ದಾರೆ. ಮೊದಲು ಓರ್ವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಈ ವೇಳೆ ಆತನ ಕಾಪಾಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದಾನೆ. ಆದರೆ ಈಜು ಬಾರದೆ ಕಾಲುವೆಯಲ್ಲೇ ಯುವಕರಿಬ್ಬರು ದುರ್ಮರಣ ಹೊಂದಿದ್ದಾರೆ.

Drowned in water in Raichur and Karwar
ಮೃತ ದುರ್ದೈವಿ ಯುವಕರು

ಇನ್ನು ಅಲ್ಲೆ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾದರೂ ಆದರೆ ಅಷ್ಟರಲ್ಲಿ ಯುವಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಕಾಲುವೆಯಲ್ಲಿದ್ದ ಯುವಕರಿಬ್ಬರ ಮೃತದೇಹಗಳನ್ನು ಸ್ಥಳೀಯರೇ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Medical Negligence : ಸಕಾಲಕ್ಕೆ ಸಿಗದ ಚಿಕಿತ್ಸೆ; ಹೆರಿಗೆಗೂ ಮೊದಲೇ ತಾಯಿ-ಮಗು ಸಾವು

ನದಿಯಲ್ಲಿ ಮುಳುಗಿ ತಾಯಿ-ಮಗಳು ಸಾವು

ನದಿಯಲ್ಲಿ ಮುಳುಗಿ ತಾಯಿ‌- ಮಗಳು ಇಬ್ಬರೂ ಮೃತಪಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ್‌ನಲ್ಲಿ ಘಟನೆ ನಡೆದಿದೆ. ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಾಗ ನೀರಿನಲ್ಲಿ ಮುಳುಗಿ ರೇಣುಕಾ ಹಾಗೂ ಸುಜಾತ ಎಂಬುವವರು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೃತದೇಹಗಳನ್ನು ದಡಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾರವಾರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Honnavar News: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ರಾಮಕ್ಷತ್ರಿಯ ಸಂಘದಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

VISTARANEWS.COM

on

Honnavar News
Koo

ಹೊನ್ನಾವರ: ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆತಾಗ, ಆ ಮಗು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಹಾಗೆಯೇ ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಅದೇ ರೀತಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ, ಸಂಸ್ಕಾರಯುತ ಸಮಾಜ ನಿರ್ಮಾಣದ ಜವಾಬ್ದಾರಿ ಕೂಡ ಪಾಲಕರ ಮೇಲಿದೆ ಎನ್ನುವುದನ್ನು ಅರಿಯಬೇಕಾಗಿದೆ ಎಂದು ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದಲ್ಲಿ ಹೊನ್ನಾವರದ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ಅಡಕಾರದ ರಾಮಕ್ಷತ್ರಿಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ, ರಾಮರಕ್ಷಾ ಸ್ತೋತ್ರ ಮತ್ತು ರಾಮ ತಾರಕ ಮಂತ್ರಗಳ ಪಠಣ ಮಾಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ರೂಢಿಸಿದಾಗ ಮಕ್ಕಳಲ್ಲಿ ಆಧ್ಯಾತ್ಮಿಕ ಒಲವು ಮೂಡಲು ಸಾಧ್ಯ. ಈ ಆಧ್ಯಾತ್ಮಿಕ ಒಲವು ಸಂಸ್ಕಾರಯುತ ಮನುಷ್ಯನನ್ನು ನಿರ್ಮಾಣ ಮಾಡುತ್ತದೆ ಎಂದರು. ಇದೇ ವೇಳೆ ಪ್ರತಿವರ್ಷ ದಂಪತಿಗಳ ಶಿಬಿರ, ಯೋಗ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ರಾಮಕ್ಷತ್ರಿಯ ಪರಿಷದ್‌ನ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮಾತನಾಡಿ, ಸ್ವರ್ಣವಲ್ಲೀ ಮಠಾಧೀಶರ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಪರಿಷದ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳ ಮೂಲಕ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಸಮಾಜದ 33 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಪ್ರಾರಂಭದಲ್ಲಿ ಸೀತಾರಾಮ ನಾಯ್ಕ ಹಳದಿಪೂರ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಮೋದ ನಾಯ್ಕ ಸ್ವಾಗತಿಸಿದರು. ಅಡಕಾರ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ರಾಮದಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ಐದು ವರ್ಷಗಳ ವರದಿ ವಾಚಿಸಿದರು. ರವಿ ನಾಯ್ಕ ನಿರೂಪಿಸಿದರು. ಮಹೇಶ ನಾಯ್ಕ ವಂದಿಸಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ವೇದಿಕೆಯಲ್ಲಿ ಪರಿಷದ್‌ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಮುಂಬಯಿ ಇವರಿಗೆ ಅಡಕಾರ ಸಂಘದಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಿಲ್ಕ್ಸ್ ಇದರ ಮಾಲಿಕರಾದ ರತ್ನಾಕರ ನಾಯ್ಕರವರು 33 ವಟುಗಳಿಗೆ ವಿಶೇಷ ಉಡುಗೊರೆಯೊಂದಿಗೆ ಗೌರವಿಸಿದರು.

Continue Reading

Lok Sabha Election 2024

PM Narendra Modi: ಬಾಂಬರ್‌ಗಳಿಗೆ ಕಾಂಗ್ರೆಸ್ ಕುಮ್ಮಕ್ಕು; ನಾವು NIA ಮೂಲಕ ದೇಶದ್ರೋಹಿಗಳನ್ನು ಬಗ್ಗುಬಡಿಯುತ್ತಿದ್ದೇವೆ ಎಂದ ಮೋದಿ

PM Narendra Modi: ಬರೀ ವೋಟಿನ ರಾಜಕಾರಣ ಮಾಡುವ ಕಾಂಗ್ರೆಸ್‌ನಿಂದ ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿವೆ ಕೆಲವು ಮತಾಂಧ ಸಂಘಟನೆಗಳನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ಆದರೆ, ಬಿಜೆಪಿ ನಾಯಕರು ಯಾವತ್ತೂ ಈ ರೀತಿ ಆತಂಕಕಾರಿ ರಾಜಕಾರಣ ಮಾಡಲ್ಲ. ಹಿಂದೂಸ್ಥಾನ ಅಂದರೆ, ಭಯೋತ್ಪಾದನೆಯ ಮಾತು ಬಂದರೆ, ಅಂಥವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

VISTARANEWS.COM

on

Congress instigates bombers We are crushing traitors through NIA PM Narendra Modi
Koo

ಶಿರಸಿ (ಉತ್ತರ ಕನ್ನಡ): ಕಾಂಗ್ರೆಸ್‌ ಬಾಂಬರ್‌ಗಳಿಗೆ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ರಾಮೇಶ್ವರಂ ಕೆಫೆ ಸ್ಫೋಟವನ್ನು (Rameswaram cafe blast) ಮೊದಲು ಸಿಲಿಂಡರ್ ಸ್ಫೋಟವೆಂದು ಕಾಂಗ್ರೆಸ್ ಸರ್ಕಾರದವರು ಹೇಳಿದ್ದರು. ಆದರೆ, ಎನ್ಐಎ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಘಟನೆ ಬಗ್ಗೆ ಗರಂ ಆಗಿ ಮಾತನಾಡಿದರು.

ಬರೀ ವೋಟಿನ ರಾಜಕಾರಣ ಮಾಡುವ ಕಾಂಗ್ರೆಸ್‌ನಿಂದ ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿವೆ ಕೆಲವು ಮತಾಂಧ ಸಂಘಟನೆಗಳನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ಆದರೆ, ಬಿಜೆಪಿ ನಾಯಕರು ಯಾವತ್ತೂ ಈ ರೀತಿ ಆತಂಕಕಾರಿ ರಾಜಕಾರಣ ಮಾಡಲ್ಲ. ಹಿಂದೂಸ್ಥಾನ ಅಂದರೆ, ಭಯೋತ್ಪಾದನೆಯ ಮಾತು ಬಂದರೆ, ಅಂಥವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಈ ಹಿಂದೆ ಮಂಗಳೂರಲ್ಲಿ ಸ್ಫೋಟ, ಬೆಂಗಳೂರಲ್ಲಿ ಸ್ಫೋಟ, ದೆಹಲಿಯಲ್ಲಿ ಸ್ಫೋಟ, ಸೂರತ್‌ನಲ್ಲಿ ಸ್ಫೋಟ ಹೀಗೆ ದೇಶದ ಎಲ್ಲ ಕಡೆ ಸ್ಫೋಟ.. ಸ್ಫೋಟವೆಂದು ನ್ಯೂಸ್ ಬರುತ್ತಿತ್ತು. ಆದರೆ, ಈಗ ಅಂದ್ರೆ 2014ರ ನಂತರ ಬಾಂಬ್‌ ಸ್ಫೋಟದ ಪ್ರಕರಣಗಳು ಆಗುತ್ತಾ ಇದೆಯಾ? ಕಾಂಗ್ರೆಸ್‌ ಪಕ್ಷದಿಂದ ಆ್ಯಂಟಿ ಸೋಷಿಯಲ್ ಹಾಗೂ ಆ್ಯಂಟಿ ನ್ಯಾಷನಲ್ ಕಾರ್ಯ ನಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಎಕ್ಸ್‌ರೇ ಮಾಡುತ್ತಾರಂತೆ. ನಿಮ್ಮ ಆಸ್ತಿ, ನಿಮ್ಮ ಜಮೀನು, ನಿಮ್ಮ ಚಿನ್ನವನ್ನು ಸರ್ವೆ ಮಾಡ್ತಾರಂತೆ. ಮಹಿಳೆಯರ ಮಂಗಳ ಸೂತ್ರವನ್ನು ಸರ್ವೆ ಮಾಡುತ್ತಾರಂತೆ. ಕಾಂಗ್ರೆಸ್ ಪಕ್ಷದವರು ಹಾಗೆ ಸರ್ವೆ ಮಾಡ್ತೀನಿ ಅಂತಾ ಹೋದರೆ ಸುಮ್ಮನೆ ಬಿಡುತ್ತೇನಾ? ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ವೆ, ಎಕ್ಸ್‌ರೇ ಕಾರ್ಯವನ್ನು ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮ್ಮ ಸೇವೆ ಮಾಡುವುದಕ್ಕಾಗಿಯೇ ಪರಮಾತ್ಮ ನರೇಂದ್ರ ಮೋದಿಯನ್ನು ಕಳುಹಿಸಿದ್ದಾನೆ. ನಿಮ್ಮ ಕನಸೇ ಮೋದಿ ಸಂಕಲ್ಪ ಅಂತಾ ಇಡೀ ಜನಸಮೂಹಕ್ಕೆ ಭರವಸೆ ನೀಡುತ್ತೇನೆ. ನನ್ನ ಪ್ರತಿ ಕ್ಷಣವನ್ನೂ ದೇಶಕ್ಕಾಗಿ, ದೇಶದ ಜನರಿಗಾಗಿ ಮೀಸಲಿಟ್ಟು ಶ್ರಮಿಸುತ್ತೇನೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಾ 2047ರ ವಿಕಸಿತ ಭಾರತಕ್ಕಾಗಿ ನನ್ನ ಸೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಮುಸ್ಲಿಂ ದೊರೆಗಳ ದೌರ್ಜನ್ಯ ಹಾಗೂ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್ ಸೊಲ್ಲಿಲ್ಲ. ವೋಟ್‌ ಬ್ಯಾಂಕ್ ಹಾಗೂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ರಾಜಕಾರಣ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕದಂಬ ವಂಶಸ್ಥರು ಆಡಳಿತ ನಡೆಸಿ ಅಪಾರ ಕೊಡುಗೆ ನೀಡಿದ್ದಾರೆ. ಕದಂಬ ವಂಶಸ್ಥರು ಕನ್ನಡ ಅಭಿವೃದ್ಧಿಗೆ ನೀಡಿದ ಒತ್ತನ್ನು ಯಾರೂ ಮರೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಅಡಿಕೆ (Arecanut), ಸಿರಿಧಾನ್ಯ (Millet) ಹಾಗೂ ಮೀನುಗಾರಿಕೆ (Fishing) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಿಮ್ಮ ಅಡಿಕೆ ಬೆಳೆಗೆ ಜಿಐ ಟ್ಯಾಗ್‌ (GI Tag) ಅನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದು ನಮ್ಮ ಎನ್‌ಡಿಎ ಸರ್ಕಾರವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕರ್ನಾಟಕದಲ್ಲಿ ಸಿರಿ ಧಾನ್ಯಗಳಿಗೆ ಬೇಡಿಕೆ ಹಾಗೂ ಹೂಡಿಕೆ ಹೆಚ್ಚುವಂತೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪ್ರಸ್ತಾಪ ಮಾಡಿದರು.

ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೀನುಗಾರರಿಗೂ ಮೊದಲ ಬಾರಿಗೆ ಕಿಸಾನ್ ಕಾರ್ಡ್‌ ಕೊಡಿಸುದ್ದು ನಮ್ಮ ಸರ್ಕಾರವಾಗಿದೆ. 20 ಸಾವಿರ ಕೋಟಿ ರೂಪಾಯಿ ಕೊಟ್ಟು ಮತ್ಸ್ಯ ಸಂಪದ ಯೋಜನೆಯನ್ನು ರೂಪಿಸಿ ಎಲ್ಲ ರೀತಿ ಪ್ರೋತ್ಸಾಹವನ್ನು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಕಾಂಗ್ರೆಸ್‌ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಈ ರಾಮಮಂದಿರವನ್ನು ಸರ್ಕಾರದ ಖಜಾನೆಯಿಂದ ನಿರ್ಮಾಣ ಮಾಡಿದ್ದಲ್ಲ, ದೇಶದ ನಾಗರಿಕರ ತೆರಿಗೆ ಹಣದಿಂದ ಕಟ್ಟಿದ್ದಲ್ಲ. ಇದು ಹಿಂದುಸ್ತಾನದ ಪ್ರತಿಯೊಬ್ಬ ರಾಮ ಭಕ್ತ ನೀಡಿದ ದೇಣಿಗೆಯಿಂದ ಕಟ್ಟಲಾಗಿದೆ. ಇದಕ್ಕಾಗಿ ಕೆಲವರು 5 ರೂ., 100 ರೂ, ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ ಆದರೆ, ಕಾಂಗ್ರೆಸ್‌ ಪಕ್ಷ ಹಾಗೂ ಅವರ ಮಿತ್ರ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. 70 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಆದರೆ, ರಾಮಮಂದಿರ ಟ್ರಸ್ಟಿಗಳು ಅವರ ಈ ಎಲ್ಲ ಪಾಪಗಳನ್ನು ಕ್ಷಮಿಸಿ, ಅವರ ಮನೆಗಳಿಗೆ ಹೋಗಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಬನ್ನಿ ಎಂದು ಆಹ್ವಾನವನ್ನು ಕೊಟ್ಟರು. ಆದರೆ, ಅವರು ಮಾಡಿದ್ದೇನು? ಕಾರ್ಯಕ್ರಮಕ್ಕೆ ಬರಲು ನಿರಾಕರಣೆ ಮಾಡಿದರು ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಶಿರಸಿಯ ಮೋದಿ ಸಮಾವೇಶದ ಲೈವ್‌ ವಿಡಿಯೊ ಇಲ್ಲಿದೆ

ವಿಕಸಿತ ಕರ್ನಾಟಕ ಹಾಗೂ ವಿಕಸಿತ ಭಾರತಕ್ಕೋಸ್ಕರ ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಬಂದಿದ್ದೇನೆ. ನನಗೆ ಇಲ್ಲಿ ಬಂದ ಮೇಲೆ ಇಷ್ಟು ಪ್ರಮಾಣದಲ್ಲಿ ಮಾತೆಯರು ಸೇರಿರುವುದನ್ನು ನೋಡಿದರೆ ನನಗೆ ತಿಳಿಯುತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಅವಶ್ಯವಾಗಿ ಇದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ಸಂಪುಟದ ಸದಸ್ಯರಾದ ಪ್ರಲ್ಹಾದ್‌ ಜೋಶಿ ಅವರನ್ನು ಭಾರಿ ಅಂತರದಿಂದ ನೀವು ಗೆಲ್ಲಿಸಲಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮಗೆ ಮನೆ, ವಿದ್ಯುತ್‌, ನೀರಿನ ಸಂಪರ್ಕ ಕೊಡಲು ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಧಾರವಾಡದಲ್ಲಿ ಐಐಟಿ ಮಾಡಿದ್ದೇವೆ, ಬಹುದೊಡ್ಡ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ಮಾಡಲಾಗಿದೆ. ಅಮೆರಿಕದಲ್ಲಿ ಸಹ ಭಾರತಕ್ಕೆ ಜೈಕಾರ ಸಿಗುತ್ತಿದೆ. ಯುರೋಪ್‌ನಲ್ಲಿ ಸಹ ಭಾರತಕ್ಕೆ ಗೌರವ ಸಿಗುತ್ತಿದೆ. ಹಿಂದುಸ್ತಾನದ ಯಾರು ವಿದೇಶದ ಯಾವುದೇ ಮೂಲೆಗೆ ಹೋದರೂ ಭಾರತವನ್ನು ಗುರುತಿಸುತ್ತಾರೋ ಇಲ್ಲವೋ? ಇದೆಲ್ಲ ಆಗಿದ್ದು ಯಾರಿಂದ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಈ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಇದನ್ನು ನಿಮ್ಮ ಪ್ರತಿ ಮತವು ಮಾಡಿದೆ. ಕಳೆದ 10 ವರ್ಷದಲ್ಲಿ ನೀವು ನೀಡಿದ ಮತಗಳು ಇದೆಲ್ಲವನ್ನೂ ಮಾಡಿವೆ. ನಿಮ್ಮ ಏಕೈಕ ಮತಗಳ ಶಕ್ತಿಯಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಯಿತು. 140 ಕೋಟಿ ಭಾರತೀಯರು ನನ್ನ ಹಿಂದೆ ನಿಂತಿದ್ದೇ ಹೌದಾದರೆ ನಾವು ಏನನ್ನಾದರೂ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೇಹಾ ಕೊಲೆ ಪ್ರಕರಣ ಉಲ್ಲೇಖ

ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ಕೊಲೆ ಪ್ರಕರಣ ನಡೆದಿದೆ. ಹೆಣ್ಣು ಮಕ್ಕಳಿಗೆ ಈ ರಾಜ್ಯದಲ್ಲಿ ಈಗ ರಕ್ಷಣೆಯೇ ಇಲ್ಲವೇ? ಕರ್ನಾಟಕದಲ್ಲಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಹೆಣ್ಣು ಮಗಳ ರಕ್ಷಣೆಯ ಭಯ ಕಾಡುತ್ತಿದೆ. ಈ ಕಾಂಗ್ರೆಸ್‌ನಿಂದ ನಿಮ್ಮ ಮಗಳನ್ನು ರಕ್ಷಣೆ ಮಾಡಲು ಆಗುವುದಿಲ್ಲವೇ? ಕರ್ನಾಟಕದಲ್ಲಿ ಈ ಸರ್ಕಾರದಿಂದ ಮಹಿಳೆಯರ ರಕ್ಷಣೆ ಗಂಭೀರ ಸವಾಲಾಗಿದೆ. ಕೆಟ್ಟ ಸರ್ಕಾರದ ಸಲುವಾಗಿ ಈ ರೀತಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಬಾಂಬ್‌ ಸ್ಫೋಟ!

2014ರ ನಂತರ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಗಾಂಧಿನಗರದಲ್ಲಿ, ಸೂರತ್‌ನಲ್ಲಿ, ಮುಂಬೈ ರೇಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ ಆಯಿತು ಎಂಬ ಸುದ್ದಿಯನ್ನು ನೀವು ಕೇಳಿದ್ದೀರಾ? ಆದರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಯಿತು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಯಿತು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಬಾಂಬರ್‌ಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲ ಕಡೆ ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Continue Reading

Lok Sabha Election 2024

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi: ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

VISTARANEWS.COM

on

PM Narendra Modi proposing arecanut millets and fisheries
Koo

ಶಿರಸಿ (ಉತ್ತರ ಕನ್ನಡ): ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಪ್ರಚಾರ ಕಾರ್ಯವನ್ನು ಆರಂಭ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದ ಅಡಿಕೆ (Arecanut), ಸಿರಿಧಾನ್ಯ (Millet) ಹಾಗೂ ಮೀನುಗಾರಿಕೆ (Fishing) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಿಮ್ಮ ಅಡಿಕೆ ಬೆಳೆಗೆ ಜಿಐ ಟ್ಯಾಗ್‌ (GI Tag) ಅನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದು ನಮ್ಮ ಎನ್‌ಡಿಎ ಸರ್ಕಾರವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕರ್ನಾಟಕದಲ್ಲಿ ಸಿರಿ ಧಾನ್ಯಗಳಿಗೆ ಬೇಡಿಕೆ ಹಾಗೂ ಹೂಡಿಕೆ ಹೆಚ್ಚುವಂತೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪ್ರಸ್ತಾಪ ಮಾಡಿದರು.

ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೀನುಗಾರರಿಗೂ ಮೊದಲ ಬಾರಿಗೆ ಕಿಸಾನ್ ಕಾರ್ಡ್‌ ಕೊಡಿಸುದ್ದು ನಮ್ಮ ಸರ್ಕಾರವಾಗಿದೆ. 20 ಸಾವಿರ ಕೋಟಿ ರೂಪಾಯಿ ಕೊಟ್ಟು ಮತ್ಸ್ಯ ಸಂಪದ ಯೋಜನೆಯನ್ನು ರೂಪಿಸಿ ಎಲ್ಲ ರೀತಿ ಪ್ರೋತ್ಸಾಹವನ್ನು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಕಾಂಗ್ರೆಸ್‌ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಈ ರಾಮಮಂದಿರವನ್ನು ಸರ್ಕಾರದ ಖಜಾನೆಯಿಂದ ನಿರ್ಮಾಣ ಮಾಡಿದ್ದಲ್ಲ, ದೇಶದ ನಾಗರಿಕರ ತೆರಿಗೆ ಹಣದಿಂದ ಕಟ್ಟಿದ್ದಲ್ಲ. ಇದು ಹಿಂದುಸ್ತಾನದ ಪ್ರತಿಯೊಬ್ಬ ರಾಮ ಭಕ್ತ ನೀಡಿದ ದೇಣಿಗೆಯಿಂದ ಕಟ್ಟಲಾಗಿದೆ. ಇದಕ್ಕಾಗಿ ಕೆಲವರು 5 ರೂ., 100 ರೂ, ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ ಆದರೆ, ಕಾಂಗ್ರೆಸ್‌ ಪಕ್ಷ ಹಾಗೂ ಅವರ ಮಿತ್ರ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. 70 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಆದರೆ, ರಾಮಮಂದಿರ ಟ್ರಸ್ಟಿಗಳು ಅವರ ಈ ಎಲ್ಲ ಪಾಪಗಳನ್ನು ಕ್ಷಮಿಸಿ, ಅವರ ಮನೆಗಳಿಗೆ ಹೋಗಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಬನ್ನಿ ಎಂದು ಆಹ್ವಾನವನ್ನು ಕೊಟ್ಟರು. ಆದರೆ, ಅವರು ಮಾಡಿದ್ದೇನು? ಕಾರ್ಯಕ್ರಮಕ್ಕೆ ಬರಲು ನಿರಾಕರಣೆ ಮಾಡಿದರು ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಶಿರಸಿಯ ಮೋದಿ ಸಮಾವೇಶದ ಲೈವ್‌ ವಿಡಿಯೊ ಇಲ್ಲಿದೆ

ವಿಕಸಿತ ಕರ್ನಾಟಕ ಹಾಗೂ ವಿಕಸಿತ ಭಾರತಕ್ಕೋಸ್ಕರ ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಬಂದಿದ್ದೇನೆ. ನನಗೆ ಇಲ್ಲಿ ಬಂದ ಮೇಲೆ ಇಷ್ಟು ಪ್ರಮಾಣದಲ್ಲಿ ಮಾತೆಯರು ಸೇರಿರುವುದನ್ನು ನೋಡಿದರೆ ನನಗೆ ತಿಳಿಯುತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಅವಶ್ಯವಾಗಿ ಇದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ಸಂಪುಟದ ಸದಸ್ಯರಾದ ಪ್ರಲ್ಹಾದ್‌ ಜೋಶಿ ಅವರನ್ನು ಭಾರಿ ಅಂತರದಿಂದ ನೀವು ಗೆಲ್ಲಿಸಲಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮಗೆ ಮನೆ, ವಿದ್ಯುತ್‌, ನೀರಿನ ಸಂಪರ್ಕ ಕೊಡಲು ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಧಾರವಾಡದಲ್ಲಿ ಐಐಟಿ ಮಾಡಿದ್ದೇವೆ, ಬಹುದೊಡ್ಡ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ಮಾಡಲಾಗಿದೆ. ಅಮೆರಿಕದಲ್ಲಿ ಸಹ ಭಾರತಕ್ಕೆ ಜೈಕಾರ ಸಿಗುತ್ತಿದೆ. ಯುರೋಪ್‌ನಲ್ಲಿ ಸಹ ಭಾರತಕ್ಕೆ ಗೌರವ ಸಿಗುತ್ತಿದೆ. ಹಿಂದುಸ್ತಾನದ ಯಾರು ವಿದೇಶದ ಯಾವುದೇ ಮೂಲೆಗೆ ಹೋದರೂ ಭಾರತವನ್ನು ಗುರುತಿಸುತ್ತಾರೋ ಇಲ್ಲವೋ? ಇದೆಲ್ಲ ಆಗಿದ್ದು ಯಾರಿಂದ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಈ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಇದನ್ನು ನಿಮ್ಮ ಪ್ರತಿ ಮತವು ಮಾಡಿದೆ. ಕಳೆದ 10 ವರ್ಷದಲ್ಲಿ ನೀವು ನೀಡಿದ ಮತಗಳು ಇದೆಲ್ಲವನ್ನೂ ಮಾಡಿವೆ. ನಿಮ್ಮ ಏಕೈಕ ಮತಗಳ ಶಕ್ತಿಯಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಯಿತು. 140 ಕೋಟಿ ಭಾರತೀಯರು ನನ್ನ ಹಿಂದೆ ನಿಂತಿದ್ದೇ ಹೌದಾದರೆ ನಾವು ಏನನ್ನಾದರೂ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೇಹಾ ಕೊಲೆ ಪ್ರಕರಣ ಉಲ್ಲೇಖ

ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ಕೊಲೆ ಪ್ರಕರಣ ನಡೆದಿದೆ. ಹೆಣ್ಣು ಮಕ್ಕಳಿಗೆ ಈ ರಾಜ್ಯದಲ್ಲಿ ಈಗ ರಕ್ಷಣೆಯೇ ಇಲ್ಲವೇ? ಕರ್ನಾಟಕದಲ್ಲಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಹೆಣ್ಣು ಮಗಳ ರಕ್ಷಣೆಯ ಭಯ ಕಾಡುತ್ತಿದೆ. ಈ ಕಾಂಗ್ರೆಸ್‌ನಿಂದ ನಿಮ್ಮ ಮಗಳನ್ನು ರಕ್ಷಣೆ ಮಾಡಲು ಆಗುವುದಿಲ್ಲವೇ? ಕರ್ನಾಟಕದಲ್ಲಿ ಈ ಸರ್ಕಾರದಿಂದ ಮಹಿಳೆಯರ ರಕ್ಷಣೆ ಗಂಭೀರ ಸವಾಲಾಗಿದೆ. ಕೆಟ್ಟ ಸರ್ಕಾರದ ಸಲುವಾಗಿ ಈ ರೀತಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಬಾಂಬ್‌ ಸ್ಫೋಟ!

2014ರ ನಂತರ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಗಾಂಧಿನಗರದಲ್ಲಿ, ಸೂರತ್‌ನಲ್ಲಿ, ಮುಂಬೈ ರೇಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ ಆಯಿತು ಎಂಬ ಸುದ್ದಿಯನ್ನು ನೀವು ಕೇಳಿದ್ದೀರಾ? ಆದರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಯಿತು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಯಿತು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಬಾಂಬರ್‌ಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲ ಕಡೆ ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Continue Reading
Advertisement
Bathroom Cleaning Tips
ಲೈಫ್‌ಸ್ಟೈಲ್3 mins ago

Bathroom Cleaning Tips: ಬಾತ್‌ರೂಮ್‌ ಕನ್ನಡಿ ಕೊಳಕಾಗಿದೆಯೇ? ಚಿಂತೆ ಬಿಡಿ, ಈ ಟಿಪ್ಸ್ ಬಳಸಿ

Kalamma Devi Pooja Mahotsava in Kampli
ಧಾರ್ಮಿಕ7 mins ago

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Union Minister Pralhad Joshi election campaign in Sattur
ಕರ್ನಾಟಕ18 mins ago

Lok Sabha Election: 60 ವರ್ಷ ದೇಶವಾಳಿದ ನಕಲಿ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಗೆ ಬರ: ಜೋಶಿ ಲೇವಡಿ

IPL 2024
ಕ್ರೀಡೆ21 mins ago

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

Salman Khan
ಸಿನಿಮಾ29 mins ago

Salman Khan: ಸಲ್ಮಾನ್‌ ಖಾನ್‌ ಮನೆ ಮೇಲೆ ಫೈರಿಂಗ್‌ ಕೇಸ್‌; ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ

Hassan Pen Drive Case HDK behind Prajwal Pen Drive release DK Brothers allegations
ಹಾಸನ31 mins ago

Hassan Pen Drive Case: ಪ್ರಜ್ವಲ್‌ ಪೆನ್‌ಡ್ರೈವ್‌ ರಿಲೀಸ್‌ ಹಿಂದೆ ಎಚ್‌ಡಿಕೆ? ಡಿಕೆ ಬ್ರದರ್ಸ್‌ ಹೇಳಿದ ಸ್ಫೋಟಕ ಮಾಹಿತಿ ಏನು?

SMART Missile
ಪ್ರಮುಖ ಸುದ್ದಿ33 mins ago

SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Covishield vaccine supreme court
ಪ್ರಮುಖ ಸುದ್ದಿ44 mins ago

Covishield Vaccine: ಭಾರತದಲ್ಲೂ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Kantara Movie Massive Set Constructed In Kundapura
ಸ್ಯಾಂಡಲ್ ವುಡ್47 mins ago

Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Drowned in water in raichur and karwar
ಕ್ರೈಂ53 mins ago

Drowned In water : ತಾಯಿ- ಮಗಳು ಸೇರಿ ನಾಲ್ವರು ನೀರುಪಾಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌